ಪ್ರಫುಲ್ಲ ದಹನುಕರ್
ಪ್ರಫುಲ್ಲ ದಹನುಕರ್ | |
---|---|
ಜನನ | ಜನವರಿ ೧ ೧೯೩೪ ಗೋವಾ |
ವೃತ್ತಿ | ಭಾರತೀಯ ವರ್ಣಚಿತ್ರಗಾರ್ತಿ |
ಸಕ್ರಿಯ ವರ್ಷಗಳು | ೮೦ |
ಮಕ್ಕಳು | ೨ |
ಪ್ರಫುಲ್ಲ ದಹನುಕರ್ ಅವರು ಭಾರತೀಯ ಚಿತ್ರಗಾರ್ತಿ, ಅಲ್ಲದೆ ಇವರು ಒಬ್ಬ ಉತ್ತಮ ಆಧುನಿಕ ಭಾರತೀಯ ಕಲೆಯ ನಾಯಕಿ ಮತ್ತು ಇವರಿಂದ ಅನೇಕ ಯುವ ಕಲಾವಿದರು ಪ್ರಭಾವಿತರಾಗಿದ್ದಾರೆ[೧][೨].
ಜನನ
[ಬದಲಾಯಿಸಿ]ಇವರು ಜನವರಿ ೧ ೧೯೩೪ ರಂದು ಗೋವಾದಲ್ಲಿ ಜನಿಸಿದರು.
ವಿದ್ಯಾಭ್ಯಾಸ
[ಬದಲಾಯಿಸಿ]ಸರ್ ಜಮ್ಸೆಟ್ಜಿ ಜೋಜೆಭಾಯ್ ಸ್ಕೂಲ್ ಆಫ಼್ ಆರ್ಟ್ ಅಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು.
ಮಕ್ಕಳು
[ಬದಲಾಯಿಸಿ]ಗೌರಿ ಮೆಹ್ತಾ ಮತ್ತು ಗೋಪಿಕಾ ಕಾರ್ತಿಕೇಯಮ್ ಇಬ್ಬರು ಇವರ ಮಕ್ಕಳು.
ಹೆಸರುವಾಸಿ
[ಬದಲಾಯಿಸಿ]ಇವರು ದೃಶ್ಯ ಕಲೆಗಳು, ವರ್ಣಚಿತ್ರಗಳು,ಚಿತ್ರಕಲೆಗಳಲ್ಲಿ ಹೆಸರುವಾಸಿಯಾಗಿದ್ದಾರೆ.
ಜೀವನಚರಿತ್ರೆ
[ಬದಲಾಯಿಸಿ]ಪ್ರಫುಲ್ಲ ದಹನುಕರ್ ಅವರು ಒಬ್ಬ ಕಲಾಗಾರ್ತಿ. ಇವರು ಗೋವಾದಲ್ಲಿ ಜನಿಸಿ ಮುಂಬೈಯಲ್ಲಿ ಬೆಳೆದರು. ಅವರು ಮುಂಬೈನ ಜೆ.ಜೆ.ಸ್ಕೂಲ್ ಆಫ಼್ ಆರ್ಟ್ ಅಲ್ಲಿ ೧೯೫೫ರಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದರು[೩]. ಅವರು ಮುಂಬೈನ ಬುಲಭಾಯ್ ದೇಸಾಯಿ ಇನ್ಸ್ಟಿಟ್ಯೂಟ್ನಲ್ಲಿ ಸ್ಟುಡಿಯೋವನ್ನು ಹೊಂದಿದ್ದರು ಮತ್ತು ಅದನ್ನು ವಿ.ಎಸ್. ಅವರೊಂದಿಗೆ ಹಂಚಿಕೊಂಡರು. ೧೯೫೬-೧೯೬೦ರವರೆಗೆ ಭಾರತೀಯ ಪ್ರಗತಿಪರ ಗುಂಪು ಅಥವಾ ಕಲಾವಿದರನ್ನು ಸೇರಿಕೊಂಡರು. ಭಾರತದಲ್ಲಿ ಕಲೆ ಮತ್ತು ಸಂಸ್ಕೃತಿ ದೃಶ್ಯವನ್ನು ಪರಿವರ್ತಿಸಿದ ಲುಮೀನಿಯಸ್ನಿಂದ ಈ ಸಂಸ್ಥೆ ತುಂಬಿತ್ತು. ಪ್ಯಾರಿಸ್ ನಲ್ಲಿ ಲಲಿತಕಲೆ ಅಧ್ಯಯನ ಮಾಡಲು ಫ಼್ರಾನ್ಸ್ ಸರ್ಕಾರ ೧೯೬೧ ರಲ್ಲಿ ಅವರಿಗೆ ವಿದ್ಯಾರ್ಥಿವೇತನವನ್ನು ನೀಡಿತು.ಪ್ರಫುಲ್ಲ ದಹನುಕರ್ ಅವರು ಸಂಗೀತ ಕಲಾ ಕೇಂದ್ರದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ದಿವಂಗತ ಶ್ರೀ ಆದಿತ್ಯ ಬಿರ್ಲಾ, ೩ ವರ್ಷಗಳ ಕಾಲ ಅದರ ಅಧ್ಯಕ್ಷರಾಗಿದ್ದರು ಮತ್ತು ಸಂಗೀತ ವೇದಿಕೆಯ ಸಮೀತಿಯ ಸದಸ್ಯರಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ಅವರು ಕಳೆದ ೪ ವರ್ಷಗಳಿಂದ ಭಾರತೀಯ ರಾಷ್ಟ್ರೀಯ ರಂಗಮಂದಿರದ ಟ್ರಸ್ಟೀ ಮಂಡಳಿಯಲ್ಲಿದ್ದಾರೆ. ಕಲಾವಿದರು ಕೆಲಸದ ಜೊತೆಗೆ,ಲೋನಾವುಲದಲ್ಲಿ ಬಾಲ್ ಆನಂದ್ ಗ್ರಾಮ್ ಎಂಬ ಅನಾಥಾಶ್ರಮದಲ್ಲಿ ೩೦ ವರ್ಷಗಳ ಕಾಲ ಅವರು ಮುಖ್ಯ ಟ್ರಸ್ಟೀಯಾಗಿ ತೊಡಗಿಸಿಕೊಂದಿದ್ದಾರೆ.
ಕಾರ್ಯಗಳು
[ಬದಲಾಯಿಸಿ]ಪ್ರಫುಲ್ಲ ದಹನುಕರ್ ಅಮೂರ್ತ ಭೂದೃಶ್ಯವನ್ನು ಸಾಮಾನ್ಯವಾಗಿ ಎದ್ದು ಕಾಣುವ ಮತ್ತು ಪ್ರಾಬಲ್ಯದ ಬಣ್ಣದಲ್ಲಿ ಚಿತ್ರಿಸಿದ್ದಾರೆ. ಅಸಂಖ್ಯಾತ ಮತ್ತು ಸೂಕ್ಷ್ಮತೆಯಿಂದ ಸ್ಥಳವು ಅಂತ್ಯವಿಲ್ಲ ಮತ್ತು ನಾಶವಾಗುದಿಲ್ಲ ಎಂದು ಅವರು ನಂಬಿದ್ದರಿಂದ ಅವರು ವರ್ಣಚಿತ್ರಗಳನ್ನು "ಬಾಹ್ಯ ಸ್ಥಳ" ಎಂದು ಕರೆದರು.
ಪ್ರದರ್ಶನ ಮತ್ತು ವಸ್ತು ಸಂಗ್ರಹಣೆ
[ಬದಲಾಯಿಸಿ]ಪ್ರಫುಲ್ಲ ದಹನುಕರ್ ಭಾರತೀಯ ವರ್ಣಚಿತ್ರಕಾರರಾಗಿದ್ದರು, ಆಧುನಿಕ ಭಾರತೀಯ ಕಲೆಯ ನಾಯಕರಾದ್ದರು ಮತ್ತು ಅವರು ಭಾರತದ ಅನೇಕ ಯುವ ಕಲಾವಿದರಿಗೆ ಸಹಾಯ ಮಾಡಿದರು ಮತ್ತು ಪ್ರಭಾವ ಬೀರಿದರು. ಪ್ರಫ಼ುಲ್ಲಾ ದಹನುಕರ್ ಆರ್ಟ್ ಫ಼ೌಂಡೇಶನ್ ಅನ್ನು ದಿಲಿಪ್ ದಹನುಕರ್ ಅವರು ಅವರ ಪತ್ನಿಯ ನೆನಪಿಗಾಗಿ ಪ್ರಾರಂಭಿಸಿದರು. ಪಿಡಿಎಫ಼್ ಎ ಒಂದು ವಿಶಿಷ್ಟ ಕಲಾ ಅಡಿಪಾಯವಾಗಿದ್ದು, ಆರಂಭದಲ್ಲಿ ಭಾರತದಲ್ ಪ್ರಮುಖ ಕಲಾವಿದರು ಪ್ರಫ಼ುಲ್ಲಾ ಅವರ ನೆನಪಿಗಾಗಿ ಪ್ರತಿ ವರ್ಣ ಚಿತ್ರವನ್ನು ಕಳುಹಿಸಿದ್ದಾರೆ. ಈ ವರ್ಣಚಿತ್ರಗಳ ಪ್ರಮಾಣದ ಹಣದಿಂದ ಈ ಲಾಭರಹಿತ ಸಂಸ್ಥೆಯನ್ನು ಪ್ರಾರಂಭಿಸುತದೆ, ಇದನ್ನು ಕಲಾವಿದರಿಗಾಗಿ ಕಲಾವಿದರು ರಚಿಸಿದ್ದಾರೆ. ಪಿಡಿಎಫ಼್ ಎ ಭಾರತದಾದ್ಯಂತ ಉದಯೋನ್ಮುಖ ಕಲಾವಿದರಿಗಾಗಿ ಪೆಲೋಶಿಪ್ ನೀಡುವ ಅತಿದೊಡ್ಡ ಪ್ರಶಸ್ತಿಗಳಲ್ಲಿ ಒಂದಾಗಿದೆ. ಫ಼ೌಂಡೇಶನ್ ಬೆಂಬಲಿಸಲು ಕೆಲಸ ಮಾಡುತ್ತಿದೆ ಮತ್ತು ಕಲಾವಿದರ ಸಮುದಾಯಕ್ಕೆ ಒಂದು ವೇದಿಕೆಯನ್ನು ಒದಗಿಸಿದೆ ಇದರಿಂದಾಗಿ ಹೊಸ ಯುವ ಕಲಾವಿದರು ತಮ್ಮ ಕಲೆಗೆ ಗೋಚರತೆ ಮತ್ತು ಪ್ರೋತ್ಸಾಹವನ್ನು ಪಡೆಯುತ್ತಾರೆ ಮತ್ತು ಹಿರಿಯ ಕಲಾವಿದರು ತಮ್ಮ ಆರಂಭಿಕ ಅವಕಾಶ ನೀಡಬಹುದು.
ಪ್ರಶಸ್ತಿಗಳು
[ಬದಲಾಯಿಸಿ]೧೯೫೫ರಲ್ಲಿ ಬಾಂಬೆ[ಶಾಶ್ವತವಾಗಿ ಮಡಿದ ಕೊಂಡಿ] ಆರ್ಟ್ ಸೊಸೈಟಿಯ ವಾರ್ಷಿಕ ಪ್ರದರ್ಶನದಲ್ಲಿ ಅವರ ವರ್ಣಚಿತ್ರಗಳಿಗೆ ಬೆಳ್ಳಿ ಪದಕ ದೊರೆತಿದೆ.
ಮರಣ
[ಬದಲಾಯಿಸಿ]ಇವರು ಮಾರ್ಚ್ ೧ ೨೦೧೪ರಂದು ಮರಣ ಹೊಂದಿದರು.