ವಿಷಯಕ್ಕೆ ಹೋಗು

ಪೆನ್ನಾರ್ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೆನ್ನಾರ್
ಉತ್ತರ ಪಿನಾಕಿನಿ
పెన్నా (Pennar)
Penna, Penneru
River
[[Image:| 256px|none
]]
Kintra ಭಾರತ
States ಕರ್ನಾಟಕ, ಆಂಧ್ರ ಪ್ರದೇಶ
Region ದಕ್ಷಿಣ ಭಾರತ
Tributaries
 - left Jayamangali, Kunderu, Sagileru
 - right Chitravati, Papagni, Cheyyeru
Ceety ನೆಲ್ಲೂರು
Soorce ನಂದಿ ಬೆಟ್ಟಗಳು
 - location ಕರ್ನಾಟಕ, ಚಿಕ್ಕಬಳ್ಳಾಪುರ ಜಿಲ್ಲೆ, ದಕ್ಷಿಣ ಭಾರತ, ಕರ್ನಾಟಕ, ಭಾರತ
Mooth
 - location Utukuru into Bay of Bengal, Nellore, ಆಂಧ್ರ ಪ್ರದೇಶ, India
 - elevation ೦ m (೦ ft)
Lenth ೫೯೭ km (೩೭೧ mi)
Basin ೫೫,೨೧೩ km² (೨೧,೩೧೮ sq mi)
Discharge for Nellore (1965–1979 average), max (1991)
 - average ೨೦೦.೪ /s (೭,೦೭೭ cu ft/s) []
 - max ೧,೮೭೬ /s (೬೬,೨೫೦ cu ft/s)
 - min ೦ /s (೦ cu ft/s)

ಪೆನ್ನಾರ್ ನದಿ ದಕ್ಷಿಣ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ದೊಡ್ಡಬಳ್ಳಾಪುರ ( ಬೆಂಗಳೂರು ಗ್ರಾಮಾಂತರ ) ಜಿಲ್ಲೆಯ ಚನ್ನಾಪುರದ ಚನ್ನಕೇಶವ ಬೆಟ್ಟದ ಸಾಲು (ನಂದಿಬೆಟ್ಟ) ಗಳಲ್ಲಿ ಉಗಮಿಸುವ ಇದು ಆಂಧ್ರ ಪ್ರದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.ಕರ್ನಾಟಕದಲ್ಲಿ ಇದನ್ನು ಉತ್ತರ ಪಿನಾಕಿನಿ ಎಂದು ಕರೆಯುತ್ತಾರೆ.

ಆಂಧ್ರ ಪ್ರದೇಶದಲ್ಲಿ ಪೆನ್ನಾರ್ ನದಿಯ ಒಂದು ನೋಟ

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಚನ್ನಕೇಶವ ಬೆಟ್ಟದಲ್ಲಿ ಹುಟ್ಟುವ ಒಂದು ನದಿ ಉದ್ದ 597 ಕಿಮೀ ಅದರಲ್ಲಿ 61 ಕಿಮೀ ದೂರ ಕರ್ನಾಟಕದಲ್ಲಿ ಹರಿಯುತ್ತದೆ. ವಾಯವ್ಯದಲ್ಲಿರುವ ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ 48 ಕಿಮೀ ದೂರ ಹರಿದು ಅನಂತರ ಆಂಧ್ರ ಪ್ರದೇಶವನ್ನು ಪ್ರವೇಶಿಸುತ್ತದೆ. ಅಲ್ಲಿ ಹಿಂದುಪುರ ಮತ್ತು ಪಾವಗಡ ತಾಲ್ಲೂಕಿನಲ್ಲಿ ಹರಿದು ನೆಲ್ಲೂರು ಜಿಲ್ಲೆಯಲ್ಲಿ ಬಂಗಾಲಕೊಲ್ಲಿಯನ್ನು ಸೇರುತ್ತದೆ. ಜಯಮಂಗಲಿ, ಚಿತ್ರಾವತಿ ಮತ್ತು ಪಾಪಾಗ್ನಿ ಎಂಬುವವು ಇದರ ಉಪನದಿಗಳು. ಕೋಲಾರ ಜಿಲ್ಲೆಯ ಎರಡು ಪಟ್ಟಣಗಳಾದ ಮಂಚೇನಹಳ್ಳಿ ಮತ್ತು ಗೌರಿಬಿದನೂರು ಈ ನದಿಯ ದಡದ ಮೇಲಿವೆ. ಇದು ಧನುಸ್ಸಿನಾಕಾರದಲ್ಲಿರುವುದರಿಂದ ಇದಕ್ಕೆ ಪಿನಾಕಿನಿ ಎಂಬ ಹೆಸರು ಬಂದಿರಬಹುದು. ಇದನ್ನು ಉತ್ತರ ಪೆನ್ನಾರ್ ಎಂದು ಕರೆಯುತ್ತಾರೆ. ಹೆಚ್ಚು ಮರಳನ್ನು ಹೊತ್ತು ತರುವ ಈ ನದಿ ವರ್ಷದಲ್ಲಿ ಹೆಚ್ಚುಕಾಲ ನೆಲದ ಅಡಿಯಲ್ಲಿ ಹರಿಯುತ್ತದೆ.

ಈ ನದಿಯ ಕರ್ನಾಟಕ ರಾಜ್ಯದ ಜಲಾನಯನ ಪ್ರದೇಶದಲ್ಲಿ ಸು. 116 ಕೆರೆಗಳಿವೆ. ಜಕ್ಕಲಮಡಗು ಮತ್ತು ಶ್ರೀನಿವಾಸ ಸಾಗರಗಳು ಇದರ ಎರಡು ಮುಖ್ಯ ಅಣೆಕಟ್ಟುಗಳು. ವಿದುರಾಶ್ವತ್ಥ ಪುಣ್ಯಕ್ಷೇತ್ರ ಇರುವುದು ಇದರ ದಡದಲ್ಲೇ. ಇಲ್ಲಿನ ಪವಿತ್ರ ಅಶ್ವತ್ಥಮರವನ್ನು ಮಹಾಭಾರತದ ವಿದುರನೇ ನೆಟ್ಟನೆಂದು ನಂಬಿಕೆ.

ಅಲ್ಲಿ ಕಾಣಸಿಗುವ ಸುರ್ಯಾಸ್ತಮಾನ

ಉಲ್ಲೇಖಗಳು

[ಬದಲಾಯಿಸಿ]
  1. Kumar, Rakesh; Singh, R.D.; Sharma, K.D. (2005-09-10). "Water Resources of India" (PDF). Current Science. 89 (5). Bangalore: Current Science Association: 794–811. Retrieved 2013-10-13.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: