ಜೇಡಿ ಮಣ್ಣಿನ ಅಂಕಣ
ಜೇಡಿ ಮಣ್ಣಿನ ಅಂಕಣ ಎಂಬುದು ಟೆನಿಸ್ ಅಂಕಣದ ನಾಲ್ಕು ವಿಭಿನ್ನ ಬಗೆಗಳ ಪೈಕಿ ಒಂದಾಗಿದೆ. ಪುಡಿಪುಡಿಮಾಡಿದ ಜೇಡಿ ಪದರುಗಲ್ಲು, ಕಲ್ಲು ಅಥವಾ ಇಟ್ಟಿಗೆಯಿಂದ ಜೇಡಿ ಮಣ್ಣಿನ ಅಂಕಣಗಳನ್ನು ರೂಪಿಸಲಾಗುತ್ತದೆ. ಹಸಿರು ಮಣ್ಣು, ಅಥವಾ ಹರ್-ಟ್ರು "ಅಮೆರಿಕಾದ" ಜೇಡಿ ಮಣ್ಣಿಗಿಂತ ಕೆಂಪು ಜೇಡಿ ಮಣ್ಣು ವೇಗ ನಿಧಾನಗತಿಯದ್ದಾಗಿರುತ್ತದೆ ಅಥವಾ ಚೆಂಡಿನ ವೇಗ ಕಡಿಮೆ ಮಾಡುವ ಲಕ್ಷಣವನ್ನು ಹೊಂದಿರುತ್ತದೆ. ಫ್ರೆಂಚ್ ಓಪನ್ ಪಂದ್ಯಾವಳಿಗಳಲ್ಲಿ ಜೇಡಿ ಮಣ್ಣಿನ ಅಂಕಣಗಳನ್ನು ಬಳಸುವುದರಿಂದ ಅವು ಗ್ರಾಂಡ್ ಸ್ಲಾಂ ಪಂದ್ಯಾವಳಿಗಳ ಪೈಕಿ ಅನನ್ಯವೆನಿಸಿಕೊಂಡಿವೆ.
ಜೇಡಿ ಮಣ್ಣಿನ ಅಂಕಣಗಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ ಅಥವಾ ಬ್ರಿಟನ್‌ಗಿಂತ ಯುರೋಪ್ ಭೂಖಂಡ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ "ರುಬಿಕೊ" ಎಂದೂ ಹೆಸರಾದ ಹಸಿರು ಜೇಡಿ ಮಣ್ಣಿನಿಂದ ಅಂಕಣಗಳನ್ನು ರೂಪಿಸಲಾಗುತ್ತದೆ ಮತ್ತು ರುಬಿಕೊವನ್ನು ಅನೇಕವೇಳೆ "ಜೇಡಿ ಮಣ್ಣು" ಎಂಬುದಾಗಿ ಕರೆಯಲಾಗುತ್ತದೆ; ಆದರೆ ಯುರೋಪಿನ ಮತ್ತು ಲ್ಯಾಟಿನ್ ಅಮೆರಿಕಾದ ಬಹುತೇಕ ದೇಶಗಳಲ್ಲಿ ಬಳಸಲ್ಪಡುವ ಅದೇ ಜೇಡಿ ಮಣ್ಣಿನಿಂದ ಈ ಅಂಕಣಗಳು ರೂಪುಗೊಂಡಿರುವುದಿಲ್ಲ. ಇತರ ಬಗೆಗಳ ಟೆನಿಸ್ ಅಂಕಣಗಳನ್ನು ನಿರ್ಮಿಸುವುದಕ್ಕಿಂತ ಜೇಡಿ ಮಣ್ಣಿನ ಅಂಕಣಗಳನ್ನು ನಿರ್ಮಿಸುವುದು ಅಗ್ಗವಾಗಿದೆಯಾದರೂ, ಮಟ್ಟಸವಾಗಿರುವಿಕೆಯನ್ನು ಕಾಯ್ದುಕೊಂಡು ಹೋಗಲು ಜೇಡಿ ಮಣ್ಣಿನ ಅಂಕಣಗಳ ಮೇಲ್ಮೈಯನ್ನು ಮಟ್ಟಸ ಮಾಡಬೇಕಾಗಿ ಬರುತ್ತದೆಯಾದ್ದರಿಂದ, ಅವುಗಳ ನಿರ್ವಹಣಾ ವೆಚ್ಚಗಳು ಹೆಚ್ಚಿನದಾಗಿರುತ್ತವೆ. ನೀರಿನ ಅಂಶದ ಸಮತೋಲನವನ್ನೂ ಕಾಯ್ದುಕೊಳ್ಳಬೇಕಾಗುತ್ತದೆ; ನೀರು ಹರಿದುಹೋಗಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ, ಹಸಿರು ಅಂಕಣಗಳನ್ನು ಅನೇಕವೇಳೆ ಇಳಿಜಾರಾಗಿಸಿರಲಾಗುತ್ತದೆ.[೧]
ಆಟ
[ಬದಲಾಯಿಸಿ]ಹೆಚ್ಚಿನದಾಗಿರುವ ವೇಗವಾದ ಸುತ್ತುಚಲನೆಗೆ (ಟಾಪ್‌ಸ್ಪಿನ್) ಸಂಬಂಧಿಸಿದಂತೆ ಜೇಡಿ ಮಣ್ಣಿನ ಅಂಕಣಗಳು "ಸಂಪೂರ್ಣ ಪಾಶ್ಚಾತ್ಯ ಹಿಡಿತಕ್ಕೆ" ಒಲವು ತೋರುತ್ತವೆ. ಜೇಡಿ ಮಣ್ಣಿನ ಅಂಕಣದಲ್ಲಿ ಆಡುವವರು, ಎಲ್ಲೆಗೆರೆಗೆ ಸುಮಾರು 5ರಿಂದ 10 ಅಡಿಗಳಷ್ಟು ಹಿಂಭಾಗದಲ್ಲಿರುವ ಒಂದು ಅರೆವೃತ್ತದಲ್ಲಿ ಸಾಮಾನ್ಯವಾಗಿ ಆಡುತ್ತಾರೆ.
ಜೇಡಿ ಮಣ್ಣಿನ ಅಂಕಣಗಳಲ್ಲಿ ಚೆಂಡುಗಳು ತುಲನಾತ್ಮಕವಾಗಿ ಎತ್ತರದಲ್ಲಿ ಮತ್ತು ಹೆಚ್ಚು ನಿಧಾನವಾಗಿ ಪುಟಿಯುವುದರಿಂದ ಅವು "ನಿಧಾನ ಗತಿಯ" ಅಂಕಣಗಳೆಂದು ಪರಿಗಣಿಸಲ್ಪಟ್ಟಿವೆ; ಅಂಕಣದ ಈ ಲಕ್ಷಣದಿಂದಾಗಿ ಆಟಗಾರನು ಒಂದು ಹಿಂದಿರುಗಿಸಲಾಗದ ಹೊಡೆತವನ್ನು ಹೊಡೆಯುವುದು ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ. ಇಲ್ಲಿ ಕೆಲವೇ ಮಂದಿ ವಿಜೇತರು ಇರುವುದರಿಂದ ಅಂಕಗಳು ಸಾಮಾನ್ಯವಾಗಿ ಸುದೀರ್ಘವಾಗಿರುತ್ತವೆ. ಆದ್ದರಿಂದ, ಏಕನಿಷ್ಠೆಯವರಾಗಿರುವಂಥ ಮತ್ತು ಸಾಮಾನ್ಯವಾಗಿ ಹೆಚ್ಚು ರಕ್ಷಣಾತ್ಮಕವಾಗಿರುವಂಥ ಎಲ್ಲೆಗೆರೆ ಆಟಗಾರರ ಕಡೆಗೆ ಜೇಡಿ ಮಣ್ಣಿನ ಅಂಕಣಗಳು ಅತೀವವಾಗಿ ಒಲವು ತೋರುತ್ತವೆ; ಇದರಿಂದಾಗಿ ರಾಫೆಲ್ ನಡಾಲ್, ಜೋರ್ನ್ ಬೋರ್ಗ್ ಮತ್ತು ಜಸ್ಟಿನ್ ಹೆನಿನ್ ಮೊದಲಾದ ಆಟಗಾರರು ಫ್ರೆಂಚ್ ಓಪನ್ ಪಂದ್ಯಾವಳಿಗಳಲ್ಲಿ ಯಶಸ್ಸು ಕಾಣುವುದು ಸಾಧ್ಯವಾಗಿದೆ. ಶಕ್ತಿಯುತವಾದ ನೆಲದ ಹೊಡೆತಗಳನ್ನು ಹೊಂದಿರುವ ಆಕ್ರಮಣಕಾರಿ ಎಲ್ಲೆಗೆರೆ ಆಟಗಾರರು ಕೂಡಾ ಜೇಡಿ ಮಣ್ಣಿನ ಅಂಕಣಗಳ ಮೇಲೆ ಯಶಸ್ಸನ್ನು ಕಂಡಿದ್ದಾರೆ. ವಿಶೇಷವಾಗಿ ಉದ್ದನೆಯ ಆಟಗಾರರ ವಿಷಯದಲ್ಲಿ ಇದು ಸತ್ಯವಾಗಿದೆ. ಏಕೆಂದರೆ, ಹೆಚ್ಚು ಎತ್ತರದ ಪುಟಿತಗಳು ಅವರ ಹೊಡೆಯುವ ವಲಯಗಳಲ್ಲಿ ಬಂದಿಳಿಯುತ್ತವೆ. ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ 2 ಬಾರಿ ಅಂತಿಮ ಸ್ಪರ್ಧಿಯಾಗಿ ಹೊರಹೊಮ್ಮಿದ ರಾಬಿನ್ ಸೊಡರ್ಲಿಂಗ್ ಮತ್ತು ಆನಾ ಇವಾನೋವಿಕ್, ಜೆಲೆನಾ ಜಾಂಕೋವಿಕ್ ಹಾಗೂ ದಿನಾರಾ ಸಫೀನಾರಂಥ ಮಹಿಳಾ ಆಟಗಾರರು ಜೇಡಿ ಮಣ್ಣಿನ ಅಂಕಣಗಳ ಮೇಲೆ ಯಶಸ್ಸು ಕಾಣುವುದಕ್ಕೆ ಈ ಅಂಶವು ನೆರವಾಗಿದೆ.
ಜೇಡಿ ಮಣ್ಣಿನ ಅಂಕಣದಲ್ಲಿ ಆಡುವ ಆಟಗಾರರು ತಮ್ಮ ಎದುರಾಳಿಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ವೇಗವಾದ ಸುತ್ತುಚಲನೆಗಳನ್ನು ಬಳಸುತ್ತಾರೆ. ಜಲ್ಲಿಕಲ್ಲಿನ ಅಂಕಣಗಳ ಮೇಲಿನ ಚಲನೆಯು ಬೇರಾವುದೇ ಮೇಲ್ಮೈ ಮೇಲಿನ ಚಲನೆಗಿಂತ ಅತ್ಯಂತ ವಿಭಿನ್ನವಾಗಿದೆ. ಒಂದು ಗಡಸು ಅಂಕಣ ಅಥವಾ ಹುಲ್ಲಿನ ಅಂಕಣದ ಮೇಲೆ ಕಂಡುಬರುವಂಥ ಓಡುವಿಕೆ ಮತ್ತು ನಿಲ್ಲುವಿಕೆಗೆ ಪ್ರತಿಯಾಗಿ, ಹೊಡೆತದ ಸಂದರ್ಭದಲ್ಲಿ ಚೆಂಡಿನೆಡೆಗೆ ಸಲೀಸಾಗಿ ಸಾಗುವಂಥ ಸಾಮರ್ಥ್ಯವನ್ನು ಜೇಡಿ ಮಣ್ಣಿನ ಮೇಲಿನ ಆಡುವಾಗ ಅನೇಕವೇಳೆ ಹೊಂದಿರಬೇಕಾಗುತ್ತದೆ ಮತ್ತು ಅಂಥ ಆಟವನ್ನು ಅದು ಒಳಗೊಂಡಿರುತ್ತದೆ. ಜೇಡಿ ಮಣ್ಣಿನ ಅಂಕಣಗಳ ಮೇಲೆ ಅತಿಶಯಿಸಿ ಆಟವಾಡುವ, ಆದರೆ ಅದೇ ಆಟವನ್ನು ವೇಗದ ಅಂಕಣಗಳ ಮೇಲೆ ಪುನರಾವರ್ತಿಸಲು ಹೆಣಗಾಡುವಂಥ ಆಟಗಾರರನ್ನು ಜೇಡಿ ಮಣ್ಣು-ಅಂಕಣದ ಪರಿಣಿತರು ಎಂದು ಕರೆಯಲಾಗುತ್ತದೆ.
ಜೇಡಿ ಮಣ್ಣಿನ ಅಂಕಣಗಳಲ್ಲಿ ಕಂಡುಬರುವ ಒಂದು ಅನನ್ಯತೆಯೆಂದರೆ ಇದರಲ್ಲಿ ಚೆಂಡು ಪುಟಿದಾಗ ಮೈದಾನದಲ್ಲಿ ಒಂದು ಗುರುತನ್ನು ಅದು ಉಳಿಸುತ್ತದೆ. ಒಂದು ಹೊಡೆತವು 'ಇನ್' (ಒಳಗೆ) ಆಗಿದೆಯೋ ಅಥವಾ 'ಔಟ್" (ಹೊರಗೆ) ಆಗಿದೆಯೋ ಎಂಬುದನ್ನು ನಿರ್ಣಯಿಸುವಲ್ಲಿ ಇದು ನೆರವಾಗಬಲ್ಲದು. ಕೆಂಪು ಜೇಡಿ ಮಣ್ಣಿನ ಅಂಕಣಗಳ ಟೀಕಾಕಾರರು ಅನೇಕ ಸಂಗತಿಗಳ ಕಡೆಗೆ ಬೆರಳುಮಾಡಿ ತೋರಿಸುತ್ತಾರೆ. ಅವೆಂದರೆ: ಅವನ್ನು ನಿರಂತರವಾಗಿ ತೇವದ ಸ್ಥಿತಿಯಲ್ಲೇ ಇಟ್ಟಿರಬೇಕಾಗುತ್ತದೆ, ಒಂದು ವೇಳೆ ಅದು ಒಣಗಿದ್ದೇ ಆದಲ್ಲಿ ಸಮಸ್ಯೆಗಳು ಮತ್ತೆ ಉದ್ಭವವಾಗುತ್ತವೆ, ಮತ್ತು ಕಲೆಗಳ ರೂಪದಲ್ಲಿ ಉಡುಪು ಮತ್ತು ಪಾದರಕ್ಷೆಗೆ ಹಾನಿಯುಂಟಾಗುತ್ತದೆ.
ಜೇಡಿ ಮಣ್ಣಿನ ಬಗೆಗಳು
[ಬದಲಾಯಿಸಿ]ಜೇಡಿ ಮಣ್ಣಿನ ಮೂರು ವಿಭಿನ್ನ ಬಗೆಗಳನ್ನು ನಾವು ಕಾಣಬಹುದು. ಅವೆಂದರೆ:
ಕೆಂಪು ಜೇಡಿ ಮಣ್ಣು
[ಬದಲಾಯಿಸಿ]ಬಹುತೇಕವಾಗಿ ಕೆಂಪು "ಜೇಡಿ ಮಣ್ಣಿನ" ಎಲ್ಲಾ ಅಂಕಣಗಳು ನೈಸರ್ಗಿಕ ಜೇಡಿ ಮಣ್ಣಿನಿಂದಲೇ ಮಾಡಲ್ಪಟ್ಟಿರುವುದಿಲ್ಲ, ಅದರ ಬದಲಿಗೆ ಪುಡಿಪುಡಿಮಾಡಿದ ಇಟ್ಟಿಗೆಯನ್ನು ಒತ್ತರಿಸಿ ತುಂಬಿ ಅಂಕಣವನ್ನು ರೂಪಿಸಲಾಗಿರುತ್ತದೆ. ಪುಡಿಪುಡಿಮಾಡಿದ ಇಟ್ಟಿಗೆಯ ಮೇಲೆ ಆಮೇಲೆ ಪುಡಿಪುಡಿಮಾಡಿದ ಇತರ ಕಣಗಳ ಒಂದು ಪದರವನ್ನು ಇರಿಸಿ ಮುಚ್ಚಲಾಗುತ್ತದೆ. ಈ ಬಗೆಯ ಮೇಲ್ಮೈಯು ನೀರನ್ನು ಸುಲಭವಾಗಿ ಹೀರಿಕೊಳ್ಳುವುದಿಲ್ಲ ಮತ್ತು ಇದು ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕಾ ಅತ್ಯಂತ ಸಾಮಾನ್ಯವಾಗಿದೆ. ನಿಜವಾದ ನೈಸರ್ಗಿಕ ಜೇಡಿ ಮಣ್ಣಿನ ಅಂಕಣಗಳು ಅಪರೂಪವೆಂದೇ ಹೇಳಬೇಕು. ಏಕೆಂದರೆ ಒಣಗಲಿಕ್ಕೆ ಅವು ಎರಡರಿಂದ ಮೂರು ದಿನಗಳ ಅವಧಿಯನ್ನು ತೆಗೆದುಕೊಳ್ಳುತ್ತವೆ. ಪೆನ್ಸಿಲ್ವೇನಿಯಾದ (PA) ಪಿಟ್ಸ್‌ಬರ್ಗ್‌ನಲ್ಲಿನ ಫ್ರಿಕ್ ಪಾರ್ಕ್ ಜೇಡಿ ಮಣ್ಣಿನ ಅಂಕಣಗಳಲ್ಲಿ ನೈಸರ್ಗಿಕ ಕೆಂಪು ಜೇಡಿ ಮಣ್ಣಿನ ಒಂದು ಉತ್ತಮ ಉದಾಹರಣೆಯನ್ನು ಕಾಣಬಹುದು. ಇದು ಕೆಂಪು ಜೇಡಿ ಮಣ್ಣಿನ ಆರು ಅಂಕಣಗಳನ್ನು ಒಳಗೊಂಡ ಒಂದು ಸಾರ್ವಜನಿಕ ಸೌಕರ್ಯವಾಗಿದ್ದು, ಇದು 1930ರಿಂದಲೂ[೨] ನಿರಂತರವಾಗಿ ಬಳಕೆಯಲ್ಲಿದೆ.
ಹಸಿರು ಜೇಡಿ ಮಣ್ಣು
[ಬದಲಾಯಿಸಿ]ಹರ್-ಟ್ರು ಅಥವಾ "ಅಮೆರಿಕಾದ" ಜೇಡಿ ಮಣ್ಣು ಎಂದು ಕರೆಯಲ್ಪಡುವ ಹಸಿರು ಜೇಡಿ ಮಣ್ಣು, ಕೆಂಪು ಜೇಡಿ ಮಣ್ಣನ್ನು ಹೋಲುವಂತಿರುತ್ತದೆ. ಆದರೆ ಇವುಗಳ ನಡುವಿನ ವ್ಯತ್ಯಾಸಗಳೆಂದರೆ, ಹಸಿರು ಜೇಡಿ ಮಣ್ಣು ಕೊಂಚಮಟ್ಟಿಗೆ ಗಡಸಾಗಿದೆ ಮತ್ತು ವೇಗವಾಗಿದೆ. ಹಸಿರು ಜೇಡಿ ಮಣ್ಣನ್ನು ಒತ್ತರಿಸಿ ತುಂಬಿಸಿ ಕೆಳಮೇಲ್ಮೈಯನ್ನು ರೂಪಿಸಲಾಗುತ್ತದೆ. ನಂತರ ಅದನ್ನು ಮತ್ತೊಂದು ಪದರದಿಂದ ಮುಚ್ಚಲಾಗುತ್ತದೆ. ಈ ಜೇಡಿ ಮಣ್ಣಿನ ಅಂಕಣಗಳನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಎಲ್ಲಾ 50 ಸಂಸ್ಥಾನಗಳಲ್ಲೂ ಕಾಣಬಹುದಾದರೂ, ಪೂರ್ವದ ಮತ್ತು ದಕ್ಷಿಣದ ಸಂಸ್ಥಾನಗಳಲ್ಲಿ ಅವು ಪ್ರಧಾನವಾಗಿ ನೆಲೆಗೊಂಡಿವೆ. ಆಗ್ನೇಯ ಭಾಗದ ಕೊಲ್ಲಿ ತೀರಪ್ರದೇಶದ ಭಾಗಗಳಲ್ಲಿ, ಹಸಿರು ಜೇಡಿ ಮಣ್ಣಿನ ಅಂಕಣಗಳನ್ನು ಅನೇಕವೇಳೆ "ರುಬಿಕೊ" ಎಂಬುದಾಗಿ ಉಲ್ಲೇಖಿಸಲಾಗುತ್ತದೆ. 2011ರಲ್ಲಿ, ಹರ್-ಟ್ರು ಹಸಿರು ಜೇಡಿ ಮಣ್ಣಿನ ಅಂಕಣಗಳ ಮೇಲೆ ಒಂದು WTA ಪಂದ್ಯಾವಳಿ ಆಡಲಾಯಿತು; ದಕ್ಷಿಣ ಕರೋಲಿನಾದ ಚಾರ್ಲ್ಸ್‌ಟನ್‌ನಲ್ಲಿ ಆಡಲಾದ ಈ ಪಂದ್ಯಾವಳಿಗೆ ಫ್ಯಾಮಿಲಿ ಸರ್ಕಲ್ ಕಪ್ ಎಂದು ಕರೆಯಲಾಗಿತ್ತು. ಇದಕ್ಕೂ ಮುಂಚೆ, ಫ್ಲೋರಿಡಾದ ಪಾಂಟೆ ವೆಡ್ರಾ ಕಡಲತೀರದಲ್ಲಿ MPS ಸಮೂಹ ಚಾಂಪಿಯನ್‌ಷಿಪ್‌ಗಳು ಆಯೋಜಿಸಲ್ಪಟ್ಟಿದ್ದವಾದರೂ, ಆ ಪಂದ್ಯಾವಳಿಯು 2010ರಲ್ಲಿ ಕೊನೆಗೊಂಡಿತು.
ನೀಲಿ ಜೇಡಿ ಮಣ್ಣು
[ಬದಲಾಯಿಸಿ]ರೊಮೇನಿಯಾದ ಮ್ಯಾಡ್ರಿಡ್ ಮಾಸ್ಟರ್ಸ್‌ನ ಮಾಲೀಕನಾದ ಇಯಾನ್ ಟಿರಿಯಾಕ್ ಒಂದು ಪ್ರಸ್ತಾವವನ್ನು ಮುಂದಿಟ್ಟಿದ್ದು, 2009ರಿಂದಲೂ ಮ್ಯಾಡ್ರಿಡ್ ಮಾಸ್ಟರ್ಸ್ ಪಂದ್ಯಾವಳಿಯು ಜೇಡಿ ಮಣ್ಣಿನ ಮೇಲೆ ಆಡಲ್ಪಡುತ್ತಿರುವುದರಿಂದ, ಪಂದ್ಯಾವಳಿಯ ಭವಿಷ್ಯದ ಆವೃತ್ತಿಗಳಿಗೆ ಸಂಬಂಧಿಸಿದಂತೆ ಪ್ರಧಾನ ಪ್ರಾಯೋಜಕ ಮ್ಯೂಚುವಾ ಮ್ಯಾಡ್ರಿಲೆನಾದ ಬಣ್ಣವಾದ ಒಂದು ಹೊಸ ನೀಲಿ ಜೇಡಿ ಮಣ್ಣಿನ ಮೇಲ್ಮೈ ಮೇಲೆ ಆಡಬೇಕು ಎಂದು ತಿಳಿಸಿದ್ದಾನೆ. ಈ ವಿವಾದಾತ್ಮಕ ಬದಲಾವಣೆಯ ಕುರಿತಾಗಿ ಆಟಗಾರರ ಕಡೆಯಿಂದ ಸಮ್ಮತಿ ಹೊರಬೀಳಬೇಕಿರುವುದರಿಂದ, ಅದಿನ್ನೂ ಬಾಕಿ ಉಳಿದಿದೆ. ಈ ಮಧ್ಯೆ, 2009ರಿಂದ ಜಾರಿಗೆ ಬರುವಂತೆ, ಹೊರಗಿನ ಅಂಕಣಗಳ ಪೈಕಿ ಒಂದನ್ನು ಈಗಾಗಲೇ ಹೊಸ ಸಾಮಗ್ರಿಯಿಂದ ರೂಪಿಸಲಾಗಿದ್ದು, ಆಟಗಾರರು ಅದನ್ನು ಪರೀಕ್ಷಿಸಬೇಕಿದೆ. ಸದರಿ ಓಪನ್ ಪಂದ್ಯಾವಳಿಯ ಈಗಿನ ನಿರ್ದೇಶಕನಾದ ಮ್ಯಾನ್ಯುಯೆಲ್ ಸಾಂಟಾನಾ, ಬಣ್ಣವನ್ನು ಹೊರತುಪಡಿಸಿದರೆ ಈ ಅಂಕಣದ ಮೇಲ್ಮೈಯು ಸಾಂಪ್ರದಾಯಿಕ ಕೆಂಪು ಜೇಡಿ ಮಣ್ಣಿನಂಥದೇ ಗುಣಲಕ್ಷಣಗಳನ್ನು ಉಳಿಸಿಕೊಂಡು ಹೋಗುತ್ತದೆ ಎಂಬ ಭರವಸೆ ನೀಡಿದ್ದಾನೆ.[೧] Archived 2007-10-28 ವೇಬ್ಯಾಕ್ ಮೆಷಿನ್ ನಲ್ಲಿ.
ಆಟಗಾರರು
[ಬದಲಾಯಿಸಿ]ಜಸ್ಟಿನ್ ಹೆನಿನ್ ಎಂಬಾಕೆಯು ಇತ್ತೀಚಿನ ವರ್ಷಗಳಲ್ಲಿ ಜೇಡಿ ಮಣ್ಣಿನ ಅಂಕಣದ ಮೇಲೆ ಆಟವಾಡಿ ಅತ್ಯಂತ ಯಶಸ್ಸನ್ನು ಕಂಡ ಆಟಗಾರ್ತಿ ಎನಿಸಿದ್ದಾಳೆ. ನಾಲ್ಕು-ಬಾರಿ ಫ್ರೆಂಚ್ ಓಪನ್ ಸಿಂಗಲ್ಸ್ ಚಾಂಪಿಯನ್ ಆಗಿದ್ದ ಈಕೆ 2010ರಲ್ಲಿ 20-ತಿಂಗಳ ಒಂದು ನಿವೃತ್ತಿಯನ್ನು ಕೊನೆಗೊಳಿಸಿದಳು. ಹೊಡೆತಗಳು, ವೇಗ, ಕಾಲ್ಚಳಕಗಳಲ್ಲಿ ಅವಳು ತೋರುತ್ತಿದ್ದ ವೈವಿಧ್ಯತೆ ಹಾಗೂ ಅವಳ ಪಕ್ಕೇಟುಗಳು, ಆಟದಲ್ಲಿನ ಅವಳ ಅತಿದೊಡ್ಡ ಅಸ್ತ್ರಗಳಾಗಿದ್ದವು. ಪ್ರಸಕ್ತವಾಗಿ, ರಾಫೆಲ್ ನಡಾಲ್ ಜೇಡಿ ಮಣ್ಣಿನ ಅಂಕಣದ ಮೇಲಿನ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡಿದ್ದಾನೆ; ಐದು ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಪಟ್ಟಗಳ ವಿಜೇತನಾಗಿರುವ ಈತ, 2009ರ ಮೇ 31ರಲ್ಲಿ ಸ್ವೀಡಿಷ್ ಆಟಗಾರ ರಾಬಿನ್ ಸೋಡರ್ಲಿಂಗ್‌ನಿಂದ ಸೋಲಿಸಲ್ಪಡುವವರೆಗೂ ಪಂದ್ಯಾವಳಿಯಲ್ಲಿ ಒಂದೂ ಪಂದ್ಯವನ್ನು ಸೋತಿರಲಿಲ್ಲ. ಒಂದು ಏಕೈಕ ಅಂಕಣದ ಮೇಲೆ ಯಾವುದೇ ಆಟಗಾರನು ದಾಖಲಿಸಿದ ಒಂದು ಸುದೀರ್ಘವಾದ ವಿಜಯದ ಪರಂಪರೆಗೆ ಸಂಬಂಧಿಸಿದ ದಾಖಲೆಯನ್ನು ನಡಾಲ್ ಹೊಂದಿದ್ದಾನೆ: ಜೇಡಿ ಮಣ್ಣಿನ ಅಂಕಣದಲ್ಲಿ 2005ರ ಏಪ್ರಿಲ್ ಮತ್ತು 2007ರ ಮೇ ತಿಂಗಳ ನಡುವೆ ದಾಖಲಿಸಿದ 81 ವಿಜಯಗಳೇ ಇದಕ್ಕೆ ಸಾಕ್ಷಿ.[೩] ಜೇಡಿ ಮಣ್ಣಿನ ಅಂಕಣದ ಮೇಲಿನ ಇತರ ಯಶಸ್ವಿ ಆಟಗಾರರಲ್ಲಿ ಮಾರ್ಗರೇಟ್ ಕೋರ್ಟ್, ಕ್ರಿಸ್ ಎವರ್ಟ್, ಜೋರ್ನ್ ಬೋರ್ಗ್, ಇವಾನ್ ಲೆಂಡ್ಲ್, ಮ್ಯಾಟ್ಸ್ ವಿಲಾಂಡರ್, ಮೊನಿಕಾ ಸೆಲೆಸ್, ಸ್ಟೆಫಿ ಗ್ರಾಫ್, ಅರಾಂಟ್ಸಾ ಸ್ಯಾಂಚೆಜ್ ವಿಕ್ಯಾರಿಯೊ, ಮತ್ತು ಗಸ್ಟಾವೊ ಕುಯೆರ್ಟನ್ ಸೇರಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಅತ್ಯಂತ ಹೆಚ್ಚಿನ ಅನುಕ್ರಮಿಕ ಸೆಟ್ಟುಗಳನ್ನು ಅಂದರೆ 40 ಅನುಕ್ರಮಿಕ ಸೆಟ್ಟುಗಳನ್ನು (2005ರಿಂದ 2010ರವರೆಗೆ) ಗೆದ್ದ ಮಹಿಳೆಯರ ಪೈಕಿ ಹೆಲೆನ್ ವಿಲ್ಸ್ ಮೂಡಿ ಜೊತೆಯಲ್ಲಿ ಪಂದ್ಯ ಸಮಮಾಡಿಕೊಂಡ ಜಸ್ಟಿನ್ ಹೆನಿನ್ ಸೇರಿದ್ದಾಳಾದರೂ, ಓಪನ್ ಪಂದ್ಯಾವಳಿಯ ಯುಗದಲ್ಲಿ ಅವಳ ದಾಖಲೆಯು ಸಾಧಿಸಲ್ಪಟ್ಟಿತು ಮತ್ತು ಸಾಧಿಸಲ್ಪಡಲು ಗಮನಾರ್ಹವಾಗಿ ಕಷ್ಟವಾದ ದಾಖಲೆಯ ಸ್ವರೂಪವು ಅದಕ್ಕೆ ದಕ್ಕಿತು.
ಪುರುಷರು ಮತ್ತು ಮಹಿಳೆಯರ ಪೈಕಿ, ಜೇಡಿ ಮಣ್ಣಿನ ಅಂಕಣದ ಮೇಲೆ ಸುದೀರ್ಘವಾದ ವಿಜಯದ ಪರಂಪರೆಯನ್ನು ದಾಖಲಿಸಿದ ಕೀರ್ತಿ ಕ್ರಿಸ್ ಎವರ್ಟ್‌ಗೆ ಸೇರಿದೆ. 1973ರ ಆಗಸ್ಟ್‌ನಿಂದ 1979ರ ಮೇ 12ರವರೆಗೆ ಜೇಡಿ ಮಣ್ಣಿನ ಅಂಕಣದಲ್ಲಿನ 125 ಅನುಕ್ರಮಿಕ ಪಂದ್ಯಗಳನ್ನು ಅವಳು ಗೆದ್ದಳು ಎಂಬುದು ಗಮನಾರ್ಹ ಸಂಗತಿ.
ಥಾಮಸ್ ಮಸ್ಟರ್ ಕೂಡಾ ಜೇಡಿ ಮಣ್ಣಿನ ಅಂಕಣದ ಮೇಲಿನ ಓರ್ವ ಯಶಸ್ವಿ ಆಟಗಾರ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದಾನೆ. ಆತ ಫ್ರೆಂಚ್ ಓಪನ್ ಪಂದ್ಯಾವಳಿಯನ್ನು ಒಂದು ಬಾರಿಯಷ್ಟೇ ಗೆದ್ದಿದ್ದರೂ, ಅವನ ವೃತ್ತಿಜೀವನದ 44 ಸಿಂಗಲ್ಸ್ ಪಟ್ಟಗಳ ಪೈಕಿ 40 ಪಟ್ಟಗಳು ಜೇಡಿ ಮಣ್ಣಿನ ಅಂಕಣದ ಮೇಲೆಯೇ ಗೆಲ್ಲಲ್ಪಟ್ಟವು ಎಂಬ ಅಂಶವನ್ನು ನಾವು ಗಮನಿಸಬೇಕು.
ಜೇಡಿ ಮಣ್ಣಿನ ಅಂಕಣದ ಪರಿಣಿತ
[ಬದಲಾಯಿಸಿ]ಜೇಡಿ ಮಣ್ಣಿನ ಅಂಕಣಗಳ ಮೇಲೆ ಅತಿಶಯಿಸಿ ಪ್ರದರ್ಶನ ನೀಡುವಂಥ, ಆದರೆ ಗಡಸು ಅಂಕಣಗಳು, ಹುಲ್ಲಿನ ಅಂಕಣಗಳು, ಅಥವಾ ಇತರ ಮೇಲ್ಮೈಗಳ ಮೇಲೆ ಅದೇ ಗುಣಮಟ್ಟದ ಕಾರ್ಯಸಾಧನೆ ಮಾಡದಂಥ ಓರ್ವ ಟೆನಿಸ್ ಆಟಗಾರನನ್ನು ಓರ್ವ ಜೇಡಿ ಮಣ್ಣಿನ ಅಂಕಣದ ಪರಿಣಿತ ಎಂದು ಕರೆಯಲಾಗುತ್ತದೆ. ಸಾಧಾರಣ ಆಟಗಾರರಿಗಿಂತ ಹೆಚ್ಚಾಗಿ, ATP ಅಥವಾ WTA ಪ್ರವಾಸಗಳಲ್ಲಿ ತೊಡಗಿರುವ ವೃತ್ತಿಪರ ಆಟಗಾರರಿಗೆ ಈ ಪರಿಭಾಷೆಯನ್ನು ಮೇಲಿಂದ ಮೇಲೆ ಅನ್ವಯಿಸಲಾಗುತ್ತದೆ.
ಬ್ಯಾಟಿನ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಪ್ರಗತಿಗಳ ಭಾಗಶಃ ಕಾರಣದಿಂದಾಗಿ, ಅಗಾಧ ವೇಗವಾದ ಸುತ್ತುಚಲನೆಯನ್ನು ಸೃಷ್ಟಿಸುವಂಥ ದೀರ್ಘವಾದ, ಸುತ್ತುವಂಥ ನೆಲದ ಹೊಡೆತಗಳನ್ನು, ಮೇಲ್ಮೈಯು ವೇಗವಾಗಿರುವಾಗ ಮತ್ತು ಚೆಂಡುಗಳು ಸಾಕಷ್ಟು ಎತ್ತರಕ್ಕೆ ಪುಟಿಯದಿದ್ದಂಥ ಸಂದರ್ಭಗಳಲ್ಲಿ ಸಾಕಷ್ಟು ಕಡಿಮೆ ಪರಿಣಾಮಕಾರಿಯಾಗಿರುವ ಹೊಡೆತಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ, ಇಂದಿನ ಜೇಡಿ ಮಣ್ಣಿನ ಅಂಕಣದ ಪರಿಣಿತರು ಹೆಸರುವಾಸಿಯಾಗಿದ್ದಾರೆ. ಜೇಡಿ ಮಣ್ಣಿನ ಅಂಕಣದ ಪರಿಣಿತರು ಇತರ ಆಟಗಾರರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜೇಡಿ ಮಣ್ಣಿನ ಮೇಲೆ ಸಲೀಸಾಗಿ ಸಾಗುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರ ಪೈಕಿ ಅನೇಕರು, ಬೀಳು ಹೊಡೆತವನ್ನು ಹೊಡೆಯುವಲ್ಲಿ ಅತ್ಯಂತ ನಿಪುಣರಾಗಿರುತ್ತಾರೆ; ಜೇಡಿ ಮಣ್ಣಿನ ಅಂಕಣಗಳ ಮೇಲೆ ಹೊರಹೊಮ್ಮುವ ಚೆಂಡಿನ ಹೊಡೆತಗಳ ಶ್ರೇಣಿಗಳು ಎಲ್ಲೆಗೆರೆಯಿಂದ ಸಾಕಷ್ಟು ದೂರದಲ್ಲಿ ತಳ್ಳಲ್ಪಡುವ ಸ್ಥಿತಿಯನ್ನು ಆಟಗಾರರಿಗೆ ಅನೇಕವೇಳೆ ಒಡ್ಡುವುದರಿಂದ ಈ ಬೀಳು ಹೊಡೆತವು ಪರಿಣಾಮಕಾರಿಯಾಗಿರುತ್ತದೆ. ಜೊತೆಗೆ, ನಿಧಾನ ಗತಿಯ, ದೀರ್ಘವಾದ ಚೆಂಡಿನ ಹೊಡೆತಗಳ ಶ್ರೇಣಿಗಳನ್ನು ಹೊಮ್ಮಿಸಬೇಕೆಂದರೆ, ಒಂದು ಮಹಾನ್ ಮಟ್ಟದಲ್ಲಿರುವ ಮಾನಸಿಕ ಏಕಾಗ್ರತೆ ಮತ್ತು ದೇಹ-ದಾರ್ಢ್ಯತೆಯನ್ನು ಆಟಗಾರರು ಹೊಂದಿರಬೇಕಾಗುತ್ತದೆ.
"ಜೇಡಿ ಮಣ್ಣಿನ ಅಂಕಣದ ಪರಿಣಿತರು" ಎಂಬ ವರ್ಗದಲ್ಲಿರುವ ಥಾಮಸ್ ಮಸ್ಟರ್, ಸೆರ್ಗಿ ಬ್ರುಗುಯೆರಾ, ಗಸ್ಟಾವೊ ಕುಯೆರ್ಟನ್, ಮತ್ತು ಜುವಾನ್ ಕಾರ್ಲೋಸ್ ಫೆರೆರೊರಂಥ ಕೆಲವೊಂದು 'ಪ್ಲೇಸಿಂಗ್ ಹೊಡೆತದ' ಆಟಗಾರರಿಂದಾಗಿ "ಜೇಡಿ ಮಣ್ಣಿನ ಅಂಕಣದ ಪರಿಣಿತ" ಎಂಬುದರ ಅರ್ಥವಿವರಣೆಯು ಬದಲಾಗುತ್ತಾ ಹೋಗುತ್ತದೆ; ಏಕೆಂದರೆ ಈ ಆಟಗಾರರು ಇತರ ಮೇಲ್ಮೈಗಳ ಮೇಲೆ ಆಡಲಾದ ಪಂದ್ಯಾವಳಿಗಳನ್ನು (ಮಾಸ್ಟರ್ಸ್ ಸರಣಿ ಸ್ಪರ್ಧೆಗಳನ್ನು ಒಳಗೊಂಡಂತೆ) ಗೆದ್ದಿದ್ದಾರೆ. ಆದಾಗ್ಯೂ, ಈ ಆಟಗಾರರು ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿನ ಪ್ರಮುಖ ಪಟ್ಟಗಳನ್ನಷ್ಟೇ ಗೆದ್ದಿರುವುದರಿಂದ, ಅವರಿಗೆ ಇಂಥದೊಂದು ಹಣೆಪಟ್ಟಿಯನ್ನು ಕೆಲವೊಮ್ಮೆ ಅಂಟಿಸಲಾಗುತ್ತದೆ. ಸೆರ್ಗಿ ಬ್ರುಗುಯೆರಾ, ಆಲ್ಬರ್ಟ್ ಕೋಸ್ಟಾ ಮತ್ತು ಗ್ಯಾಸ್ಟನ್ ಗೌಡಿಯೊರಂಥ ಇತರ ಆಟಗಾರರು, ಜೇಡಿ ಮಣ್ಣಿನ ಅಂಕಣದ ಮೇಲೆ ತಮ್ಮ ವೃತ್ತಿಜೀವನದ ಎಲ್ಲಾ ಅಥವಾ ಸರಿಸುಮಾರಾಗಿ ಎಲ್ಲ ಪಟ್ಟಗಳನ್ನು ಗೆದ್ದ ಫ್ರೆಂಚ್ ಓಪನ್ ಚಾಂಪಿಯನ್‌ಗಳಾಗಿದ್ದರು. ಮಹಿಳಾ ಆಟಗಾರರ ಪೈಕಿ, ಏಕಮಾತ್ರವಾಗಿ ಜೇಡಿ ಮಣ್ಣಿನ ಅಂಕಣಕ್ಕೆ ಸೀಮಿತಗೊಳಿಸಲ್ಪಟ್ಟಂಥ ಅತ್ಯುತ್ತಮ ಫಲಿತಾಂಶಗಳನ್ನು ಹೊಂದಿದ್ದವರ ಸಂಖ್ಯೆಯು ಅತ್ಯಂತ ಕಡಿಮೆ ಎನ್ನಬಹುದು. ವರ್ಜೀನಿಯಾ ರುಝಿಸಿ, ಅನಾಸ್ಟಾಸಿಯಾ ಮಿಸ್ಕಿನಾ, ಇವಾ ಮಜೋಲಿ, ಸ್ಯೂ ಬಾರ್ಕರ್, ಆನಾ ಇವಾನೋವಿಕ್ ಮತ್ತು ಫ್ರಾನ್ಸೆಸ್ಕಾ ಸ್ಕಿಯಾವೊನೆ ಮೊದಲಾದವರು 1968ರಲ್ಲಿ ಟೆನಿಸ್ ಓಪನ್ ಯುಗವು ಆರಂಭವಾದಂದಿನಿಂದ ಕೇವಲ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಮಾತ್ರವೇ ಪ್ರಮುಖ ಪಟ್ಟಗಳನ್ನು ಗೆದ್ದ ಆಟಗಾರ್ತಿಯರು ಎನಿಸಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಜೇಡಿ ಮಣ್ಣಿನ ಅಂಕಣದಲ್ಲಿ ಆಡುವವರು ಇತರ ಮೇಲ್ಮೈಗಳ[೪] ಮೇಲೂ ಆಡಲು ಪ್ರಯತ್ನಿಸಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಒಂದಷ್ಟು ಯಶಸ್ಸನ್ನೂ ಗಳಿಸಿದ್ದಾರೆ. 2003ರಲ್ಲಿ[೫] ಫೆರೆರೊ US ಓಪನ್ ಪಂದ್ಯಾವಳಿಯ ಅಂತಿಮ ಹಂತಕ್ಕೆ ತಲುಪಿದ; ಅದೇ ವರ್ಷದಲ್ಲಿ ಆತ ಫ್ರೆಂಚ್ ಓಪನ್‌ನ್ನು ಗೆದ್ದ, ಮತ್ತು ಗಡಸು ಅಂಕಣ ಪಂದ್ಯಾವಳಿಗಳನ್ನೂ[೬] ಆತ ಗೆದ್ದಿದ್ದಾನೆ. ನಡಾಲ್ ಒಂದಷ್ಟು ಪ್ರಶಸ್ತಿಗಳು-ಪಟ್ಟಗಳನ್ನು ಗೆಲ್ಲುವವರೆಗೆ ಓರ್ವ ಜೇಡಿ ಮಣ್ಣಿನ ಅಂಕಣದ ಪರಿಣಿತ ಎಂದೇ ಪರಿಗಣಿಸಲ್ಪಟ್ಟಿದ್ದ; ಅಂದರೆ ಹುಲ್ಲಿನ ಅಂಕಣದ ಮೇಲೆ ನಡೆದ ವಿಂಬಲ್ಡನ್ ಪಂದ್ಯಾವಳಿಯ ನಾಲ್ಕು ಅಂತಿಮ ಪಂದ್ಯಗಳಿಗೆ (2008ರಲ್ಲಿ ಹಾಗೂ ಮತ್ತೊಮ್ಮೆ 2010ರಲ್ಲಿನ ವಿಜಯ) ತಲುಪಿದ್ದು, 2009ರಲ್ಲಿ ಗಡಸು ಅಂಕಣದ ಮೇಲೆ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯನ್ನು ಗೆದ್ದಿದ್ದು, 2008ರಲ್ಲಿ ಗಡಸು ಅಂಕಣದ ಮೇಲೆ ಒಲಿಂಪಿಕ್ ಸಿಂಗಲ್ಸ್ ಬಂಗಾರ ಪದಕವನ್ನು ಗೆದ್ದಿದ್ದು, ಮತ್ತು ಗಡಸುಅಂಕಣಗಳ ಮೇಲೆ ಐದು ಮಾಸ್ಟರ್ಸ್ ಪಟ್ಟಗಳನ್ನು ಗೆದ್ದಿದ್ದು ಇವೆಲ್ಲವೂ ಆ ವ್ಯಾಪ್ತಿಗೆ ಸೇರುತ್ತವೆ; ಇಷ್ಟೇ ಅಲ್ಲ, ಜೇಡಿ ಮಣ್ಣಿನ ಅಂಕಣದ ಮೇಲೆ ಅವನು ಸಾಧಿಸಿದ ನಾಲ್ಕು ಅನುಕ್ರಮಿಕ ಫ್ರೆಂಚ್ ಓಪನ್ ಪಟ್ಟಗಳ ಯಶಸ್ಸು ಹಾಗೂ 81 ಅನುಕ್ರಮಿಕ ಪಂದ್ಯಗಳ ಒಂದು ವಿಜಯ ಪರಂಪರೆಯೂ ಈ ಪಟ್ಟಿಗೆ ಸೇರುತ್ತವೆ.
ಜೇಡಿ ಮಣ್ಣಿನ ಮೇಲೆ ಆಡಲ್ಪಟ್ಟ ವೃತ್ತಿಪರ ಪಂದ್ಯಾವಳಿಗಳು
[ಬದಲಾಯಿಸಿ]ಗ್ರಾಂಡ್ ಸ್ಲಾಂ (ಕೆಂಪು)
[ಬದಲಾಯಿಸಿ]- ರೋಲ್ಯಾಂಡ್ ಗ್ಯಾರೋಸ್ (ಪ್ಯಾರಿಸ್, ಫ್ರಾನ್ಸ್)
ATP ವರ್ಲ್ಡ್ ಟೂರ್ ಮಾಸ್ಟರ್ಸ್ 1000 (ಕೆಂಪು)
[ಬದಲಾಯಿಸಿ]- ಮಾಸ್ಟರ್ಸ್ ಸರಣಿ ಮಾಂಟೆ ಕಾರ್ಲೋ (ಮೊನ್ಯಾಕೊದ ಮಾಂಟೆ ಕಾರ್ಲೋ ಎಂಬುದಾಗಿ ಇದು ಜಾಹೀರುಗೊಳಿಸಲ್ಪಡುತ್ತದೆ; ಫ್ರಾನ್ಸ್‌ನ ರಾಕೆಬ್ರೂನ್-ಕ್ಯಾಪ್-ಮಾರ್ಟಿನ್‌ನಲ್ಲಿ ವಾಸ್ತವಿಕ ತಾಣವಿದೆ)
- ಇಂಟರ್‌ನೇಜಿಯೋನ್ಯಾಲಿ BNL ಡಿ.ಇಟಾಲಿಯಾ (ರೋಮ್, ಇಟಲಿ)
- ಮಾಸ್ಟರ್ಸ್ ಸರಣಿ ಮ್ಯಾಡ್ರಿಡ್ (ಮ್ಯಾಡ್ರಿಡ್, ಸ್ಪೇನ್)
ATP ವರ್ಲ್ಡ್ ಟೂರ್ 500 ಸರಣಿ (ಕೆಂಪು)
[ಬದಲಾಯಿಸಿ]- ಎಬಿಯೆರ್ಟೋ ಮೆಕ್ಸಿಕ್ಯಾನೊ ಟೆಲ್ಸೆಲ್ (ಅಕಾಪುಲ್ಕೊ, ಮೆಕ್ಸಿಕೊ)
- ಅಂತರರಾಷ್ಟ್ರೀಯ ಜರ್ಮನ್ ಓಪನ್ (ಹ್ಯಾಂಬರ್ಗ್, ಜರ್ಮನಿ)
- ಟೋರ್ನಿಯೊ ಗೊಡೊ (ಬಾರ್ಸಿಲೋನಾ, ಸ್ಪೇನ್)
ATP (ಕೆಂಪು)
[ಬದಲಾಯಿಸಿ]- ಮೊವಿಸ್ಟರ್ ಓಪನ್ (ಸ್ಯಾಂಟಿಯಾಗೊ, ಚಿಲಿ)
- ಕೊಪಾ ಟೆಲ್‌ಮೆಕ್ಸ್ (ಬ್ಯೂನೋಸ್ ಐರ್ಸ್, ಅರ್ಜೆಂಟೀನಾ)
- ಬ್ರಸಿಲ್ ಓಪನ್ (ಕೋಸ್ಟಾ ಡೊ ಸೌಪೆ, ಬ್ರೆಜಿಲ್)
- ಗ್ರಾಂಡ್ ಪ್ರಿಕ್ಸ್ ಹಸನ್ II (ಕ್ಯಾಸಾಬ್ಲಾಂಕಾ, ಮೊರೊಕೊ)
- ಎಸ್ಟೊರಿಲ್ ಓಪನ್ (ಎಸ್ಟೊರಿಲ್, ಪೋರ್ಚುಗಲ್)
- BMW ಓಪನ್ (ಮ್ಯೂನಿಕ್, ಜರ್ಮನಿ)
- ಸರ್ಬಿಯಾ ಓಪನ್ (ಬೆಲ್‌ಗ್ರೇಡ್, ಸರ್ಬಿಯಾ)
- ನೈಸ್ ಓಪನ್ (ನೈಸ್, ಫ್ರಾನ್ಸ್)
- ವರ್ಲ್ಡ್ ಟೀಮ್ ಕಪ್ (ಡ್ಯೂಸೆಲ್‌ಡಾರ್ಫ್, ಜರ್ಮನಿ)
- ಸ್ವೀಡಿಷ್ ಓಪನ್ (ಬ್ಯಾಸ್ಟಡ್, ಸ್ವೀಡನ್)
- ಮರ್ಸಿಡಿಸ್ ಕಪ್ (ಸ್ಟಟ್‌ಗಾರ್ಟ್, ಜರ್ಮನಿ)
- ಅಲಿಯಾನ್ಜ್ ಸ್ಯೂಸೆ ಓಪನ್ (ಜಿಸ್ಟಾಡ್, ಸ್ವಿಜರ್ಲೆಂಡ್)
- ಕ್ರೊಯೇಷಿಯಾ ಓಪನ್ (ಉಮಾಗ್, ಕ್ರೊಯೇಷಿಯಾ)
- ಓಪನ್ ರೊಮೇನಿಯಾ (ಬುಚಾರೆಸ್ಟ್, ರೊಮೇನಿಯಾ)
ATP (ಹರ್-ಟ್ರು)
[ಬದಲಾಯಿಸಿ]WTA (ಹಸಿರು)
[ಬದಲಾಯಿಸಿ]WTA (ಕೆಂಪು)
[ಬದಲಾಯಿಸಿ]- ಕೊಪಾ ಕೊಲ್ಸಾನಿಟಾಸ್ (ಬೊಗೊಟಾ, ಕೊಲಂಬಿಯಾ)
- ಎಬಿಯೆರ್ಟೋ ಮೆಕ್ಸಿಕ್ಯಾನೊ ಟೆಲ್ಸೆಲ್ (ಅಕಾಪುಲ್ಕೊ, ಮೆಕ್ಸಿಕೊ)
- ಆಂದಲೂಸಿಯಾ ಟೆನಿಸ್ ಎಕ್ಸ್‌ಪೀರಿಯೆನ್ಸ್ (ಮಾರ್ಬೆಲ್ಲಾ, ಸ್ಪೇನ್)
- ಬಾರ್ಸಿಲೋನಾ ಮಹಿಳೆಯರ ಓಪನ್ (ಬಾರ್ಸಿಲೋನಾ, ಸ್ಪೇನ್)
- ಪೋರ್ಷೆ ಟೆನಿಸ್ ಗ್ರಾಂಡ್ ಪ್ರಿಕ್ಸ್ (ಸ್ಟಟ್‌ಗಾರ್ಟ್, ಜರ್ಮನಿ)
- ಗ್ರಾಂಡ್ ಪ್ರಿಕ್ಸ್ SAR ಲಾ ಪ್ರಿನ್ಸೆಸ್ಸೆ ಲಲ್ಲಾ ಮೆರ್ಯೆಮ್ (ಫೆಸ್, ಮೊರೊಕೊ)
- ಇಂಟರ್‌ನೇಜಿಯೋನ್ಯಾಲಿ BNL ಡಿ.ಇಟಾಲಿಯಾ (ರೋಮ್, ಇಟಲಿ)
- ಎಸ್ಟೊರಿಲ್ ಓಪನ್ (ಎಸ್ಟೊರಿಲ್, ಪೋರ್ಚುಗಲ್)
- ಮ್ಯಾಡ್ರಿಡ್ ಮಾಸ್ಟರ್ಸ್ (ಮ್ಯಾಡ್ರಿಡ್, ಸ್ಪೇನ್)
- ವಾರ್ಸಾ ಓಪನ್ (ವಾರ್ಸಾ, ಪೋಲೆಂಡ್)
- ಇಂಟರ್‌ನೇಷನೌಕ್ಸ್ ಡಿ ಸ್ಟ್ರಾಸ್‌ಬೋರ್ಗ್ (ಸ್ಟ್ರಾಸ್‌ಬೋರ್ಗ್, ಫ್ರಾನ್ಸ್)
- GDF SUEZ ಗ್ರಾಂಡ್ ಪ್ರಿಕ್ಸ್ (ಬುಡಾಪೆಸ್ಟ್, ಹಂಗರಿ)
- ಸ್ವೀಡಿಷ್ ಓಪನ್ ಮಹಿಳಾ ಪಂದ್ಯಾವಳಿ (ಬ್ಯಾಸ್ಟಡ್, ಸ್ವೀಡನ್)
- ಇಂಟರ್‌ನೇಜಿಯೊನೇಲಿ ಪೆಮಿನಿಲಿ ಡಿ ಪಾಲೆರ್ಮೊ (ಪಾಲೆರ್ಮೊ, ಇಟಲಿ)
- ECM ಪ್ರಾಗ್ವೆ ಓಪನ್ (ಪ್ರಾಗ್ವೆ, ಝೆಕ್ ಗಣರಾಜ್ಯ)
- ಗ್ಯಾಸ್ಟೀನ್ ಮಹಿಳೆಯರ ಪಂದ್ಯಾವಳಿ (ಬ್ಯಾಡ್ ಗ್ಯಾಸ್ಟೀನ್, ಆಸ್ಟ್ರಿಯಾ)
ಇವನ್ನೂ ಗಮನಿಸಿ
[ಬದಲಾಯಿಸಿ]- ಟೆನಿಸ್ ಅಂಕಣ
ಉಲ್ಲೇಖಗಳು
[ಬದಲಾಯಿಸಿ]- ↑ http://www.xsports.com/clay.htm
- ↑ "Frick Park Clay Court Tennis Club". Archived from the original on 2014-08-08. Retrieved 2011-01-18.
- ↑ ATP_World_Tour_records#Winning_Streaks_.28Open_Era.29
- ↑ Ford, Bonnie D (2003-09-206). "Nadal the lead warrior in Spanish surge on grass". EPSN.com. Retrieved 2008-07-10.
{{cite news}}
: Check date values in:|date=
(help) - ↑ "Ferrero shatters Agassi hopes". BBC. 2008-06-27. Retrieved 2008-07-10.
- ↑ "Ferrero claims Madrid title". BBC. 2002-10-19. Retrieved 2008-07-10.