ಗುಡಿ ಪಾಡ್ವ
Gudhi Padwa or Samvatsar Padvo | |
---|---|
ಆಚರಿಸಲಾಗುತ್ತದೆ | Marathi Hindus, Konkanis |
ರೀತಿ | Hindu lunar new year's Day |
ಆಚರಣೆಗಳು | 1 day |
ಆರಂಭ | Chaitra |
ದಿನಾಂಕ | March 22 |
೨೦೨೪ date | |
Related to | Hindu calendar |
ಗುಡಿ ಪಾಡ್ವ ಅಥವಾ ಗುಢಿ ಪಾಡ್ವ (ಮರಾಠಿ:गुढी पाडवाಇದನ್ನು ಸಾಮಾನ್ಯವಾಗಿ ಹೇಳುವಾಗ ಡಿ ಮತ್ತು ಢಿ ಅಕ್ಷರಗಳಿಂದಾಗಿ ವ್ಯತ್ಯಾಸ ಉಂಟಾಗುತ್ತದೆ) ಎಂಬುದು ಹಿಂದೂಗಳ ಪವಿತ್ರ ದಿನವಾದ ಚೈತ್ರ ಮಾಸದ ಶುಕ್ಲ ಪ್ರತಿಪದ[೧] ದ ಮರಾಠಿ ಹೆಸರು. ಇದನ್ನು ಚಾಂದ್ರಸೌರ ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ ಪ್ರಾರಂಭವನ್ನು ಸೂಚಿಸುವುದಕ್ಕಾಗಿ ಆಚರಿಸಲಾಗುತ್ತದೆ.
ಬೇರೆ ಭಾಷೆಗಳು, ರಾಜ್ಯಗಳು ಮತ್ತು ಜನರಲ್ಲಿ ಗುಡಿ ಪಾಡ್ವ
[ಬದಲಾಯಿಸಿ]ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಾಡ್ವ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಹಿಂದುಜಾಗೃತಿ [೧] ಎಂದು ಕೂಡಾ ಹೇಳುತ್ತಾರೆ.
- ಗೋವಾದ ಹಿಂದೂ ಕೊಂಕಣಿ ಜನರು ಇದನ್ನು ಸಂವತ್ಸರ ಪಾಡ್ವೊ ಎಂದು ಕರೆಯುತ್ತಾರೆ. [೨]
- ಕರ್ನಾಟಕ ಹಾಗೂ ಕೇರಳದಲ್ಲಿ ಕೊಂಕಣಿಯವರನ್ನು ಬಿಟ್ಟು ಉಳಿದವರು ಯುಗಾದಿ ಎಂದು ಆಚರಿಸುತ್ತಾರೆ. [ಸೂಕ್ತ ಉಲ್ಲೇಖನ ಬೇಕು]
- ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರಖಾಂಡ, ಬಿಹಾರ ಹಾಗೂ ಚತ್ತಿಸ್ಘರ್ಗಳಲ್ಲಿ ನವ ವರ್ಷ ಸಂವತ್ ಎಂದು ಆಚರಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಭಾರತದ [೧] ಇತರೆ ಪ್ರದೇಶಗಳಲ್ಲಿ ಹಬ್ಬವನ್ನು ಆಚರಿಸುವ ಸಮಯಗಳು
- ಕಾಶ್ಮೀರದಲ್ಲಿ ನೌ ರೋಝ್
- ಪಂಜಾಬ್ನಲ್ಲಿ ಬೈಸಾಕಿ
- ಸಿಂಧಿ ಜನರಲ್ಲಿ ಚೇತಿ ಚಾಂದ್ [ಸೂಕ್ತ ಉಲ್ಲೇಖನ ಬೇಕು]
- ಬಂಗಾಳದಲ್ಲಿ ನವ ವರ್ಷ
- ಅಸ್ಸಾಂನಲ್ಲಿ ಗೊರು ಬಿಹು
- ತಮಿಳು ನಾಡಿನಲ್ಲಿ ಪುಥಾಂದು
- ಆಂಧ್ರ ಪ್ರದೇಶದಲ್ಲಿ ಯುಗಾದಿ
- ಕೇರಳದಲ್ಲಿ ವಿಶು.
- ಕರಾವಳಿ ಕರ್ನಾಟಕದಲ್ಲಿ ಬಿಸು
ವ್ಯುತ್ಪತ್ತಿ
[ಬದಲಾಯಿಸಿ]ಪಾಡ್ವ ಎಂಬ ಶಬ್ಧವು ಸಂಸ್ಕೃತದ ಸೂರ್ಯಮಾನ ತಿಂಗಳಿನ ಮೊದಲನೆ ದಿನ ಪ್ರತಿಪದದಿಂದ ಬಂದದ್ದು[ಸೂಕ್ತ ಉಲ್ಲೇಖನ ಬೇಕು] ಅಂದರೆ ಅಮವಾಸ್ಯೆಯ ದಿನದ ನಂತರದ ಮೊದಲ ದಿನ. ಹಬ್ಬಕ್ಕೆ ಗುಢಿ ಎನ್ನುವ ಹೆಸರು ನೀಡಿ ಅದನ್ನು ಸೂಚಿಸಲಾಗಿದೆ. ಪಾಡ್ವ ಅಥವಾ ಪಡವೊ ಎಂಬ ಶಬ್ಧವು ದೀಪಾವಳಿಯ ಮೂರನೆಯ ದಿನವಾದ ಬಲಿಪ್ರತಿಪದವನ್ನು ಸೂಚಿಸುತ್ತದೆ [ಸೂಕ್ತ ಉಲ್ಲೇಖನ ಬೇಕು], ಇದು ಸುಗ್ಗಿ ಕಾಲದ ಕೊನೆಯಲ್ಲಿ ಬರುವ ಹಬ್ಬವಾಗಿದೆ.
ಮಹತ್ವ
[ಬದಲಾಯಿಸಿ]ಹಬ್ಬದ ಸಮಯ
[ಬದಲಾಯಿಸಿ]ವರ್ಷದ ಮೊದಲ ತಿಂಗಳ ಮೊದಲ ದಿನವಾಗಿದ್ದು, ಗುಡಿ ಪಾಡ್ವವು ಮರಾಠಿ ಜನರ ಹೊಸವರ್ಷವೂ ಆಗಿದೆ.[ಸೂಕ್ತ ಉಲ್ಲೇಖನ ಬೇಕು]
ಕೃಷಿಗೆ ಸಂಬಂಧಿಸಿದಂತೆ
[ಬದಲಾಯಿಸಿ]ಭಾರತವು ಹೆಚ್ಚಾಗಿ ರೈತಾಪಿ ಸಮಾಜವಿರುವ ದೇಶವಾಗಿದೆ. ಇದರಿಂದಾಗಿ ಹಬ್ಬಗಳನ್ನು ಹೆಚ್ಚಾಗಿ ಬೆಳೆಯ ಕೊಯ್ಲು ಹಾಗೂ ಬಿತ್ತನೆ ಸಮಯದಲ್ಲಿ ಆಚರಿಸಲಾಗುತ್ತದೆ.of crops. ಈ ದಿನವು ವ್ಯವಸಾಯದ ಸುಗ್ಗಿಯ ಕೊನೆಯ ದಿನ ಹಾಗೂ ಹೊಸದರ ಪ್ರಾರಂಭದ ದಿನವಾಗಿರುತ್ತದೆ. ಸೂರ್ಯ ಕಾಲದ ಕೊನೆಯಲ್ಲಿ ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ.
ಜ್ಯೋತಿಷ್ಯಶಾಸ್ತ್ರ
[ಬದಲಾಯಿಸಿ]ಗಿಡಿ ಪಾಡ್ವವು ಸೇಡ್-ಟೀನ್ ಮಹೂರ್ತಗಳಲ್ಲಿ ಒಂದಾಗಿದೆ (ಮರಾಠಿಯಿಂದ ಭಾಷಾಂತರವಾಗಿದೆ: ಭಾರತದ ಸೂರ್ಯಮಾನ ಕ್ಯಾಲೆಂಡರ್‌ನ 3 ಹಾಗೂ ಅರ್ಧ ಶುಭಕರವಾದ ದಿನವಾಗಿದೆ). ಪೂರ್ಣ ಪಟ್ಟಿಯು ಕೆಳಕಂಡಂತಿದೆ
- ಗುಡಿ ಪಾಡ್ವ - ಚೈತ್ರ ಮಾಸ (ಶುಕ್ಲ ಪಕ್ಷ) ದ 1ನೆಯ ತಿಥಿ
- ವಿಜಯದಶಮಿ - ಅಶ್ವಿನಿ ನಕ್ಷತ್ರದ 10ನೆಯ ತಿಥಿ
- ಬಲಿಪ್ರತಿಪದ - ಕಾರ್ತೀಕ ಮಾಸದ (ಶುಕ್ಲ ಪಕ್ಷ) 1ನೆಯ ತಿಥಿ
- ಅಕ್ಷಯ ತೃತೀಯಾ
ಐತಿಹಾಸಿಕ
[ಬದಲಾಯಿಸಿ]ಯುದ್ಧದಲ್ಲಿ ಹುನಾರರನ್ನು ಸೋಲಿಸಿದ ನಂತರದ ಶಾಲಿವಾಹನ ಕ್ಯಾಲೆಂಡರ್‌ನ ಪ್ರಾರಂಭವನ್ನು ಕೂಡ ಇದು ನೆನಪಿಸುತ್ತದೆ.[೩]
ಧಾರ್ಮಿಕ
[ಬದಲಾಯಿಸಿ]ಬ್ರಹ್ಮ ಪುರಾಣದ ಪ್ರಕಾರ ಮಹಾ ಜಲಪ್ರಳಯದ ನಂತರ ಪ್ರಪಂಚವನ್ನು ಸೃಷ್ಟಿಸಿದ ಬ್ರಹ್ಮ ಪ್ರಾರಂಭದ ದಿನವನ್ನು ಸೂಚಿಸುವುದಕ್ಕಾಗಿ ಇದನ್ನು ಸೃಷ್ಟಿಸಿದನೆನ್ನಲಾಗಿದೆ[೩].
ಕಾಲಿಕ
[ಬದಲಾಯಿಸಿ]ಈ ದಿನದಂದು ಸೂರ್ಯನು ಭೂಮಧ್ಯರೇಖೆ ಹಾಗೂ ನಡು ಹಗಲಿನ ರೇಖೆಗಳ ಮಧ್ಯದಲ್ಲಿರುತ್ತಾನೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ವಸಂತ ಋತು ಅಥವಾ ಸುಗ್ಗಿ ಕಾಲದ ಪ್ರಾರಂಭವಾಗಿದೆ[೩].
ಗುಡಿ
[ಬದಲಾಯಿಸಿ]ಗುಡಿ ಪಾಡ್ವದಂದು ಸಾಂಪ್ರದಾಯಿಕ ಮಹಾರಾಷ್ಟ್ರ ಜನರ ಮನೆಗಳಲ್ಲಿ ಕಿಟಕಿಗಳ ಹೊರತೆ ನೇತು ಹಾಕಿರುವ ಗುಡಿಗಳನ್ನು ಕಾಣಬಹುದು. ಗುಡಿ ಎಂದರೆ ಹಸಿರು ಅಥವಾ ಹಳದಿ ಬಣ್ಣದ ಜರಿ ಹೊಂದಿರುವ ಬಟ್ಟೆಯನ್ನು ಉದ್ದನೆಯ ಕೋಲಿಗೆ ಸಿಕ್ಕಿಸಿ ಅದಕ್ಕೆ ಕಬ್ಬು , ಹಾಗೂ ಬೇವಿನ ಎಲೆಗಳನ್ನು ಸಿಕ್ಕಿಸಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು], ಮಾವಿನ ತಳಿರನ್ನು ಹಾಕಿ ಕೆಂಪು ಹೂವುಗಳ ಹಾರವನ್ನೂ ಹಾಕಲಾಗುತ್ತದೆ. ಬೆಳ್ಳಿಯ ಅಥವಾ ತಾಮ್ರದ ಬಿಂದಿಗೆಯನ್ನು ಬೋರಲು ಮಾಡಿ ಅದರ ಮೇಲೆ ಹಾಕಲಾಗುತ್ತದೆ. ಈ ಗುಡಿಯನ್ನು ಮನೆಯ ಹೊರಗೆ ಕಿಟಕಿಯ ಮೇಲೆ ಅಥವಾ ಮನೆಯ ಮೇಲ್ಭಾಗದಲ್ಲಿ ಎಲ್ಲರಿಗೂ ಕಾಣಿಸುವಂತೆ ಹಾಕಲಾಗುತ್ತದೆ.
ಗುಡಿಯನ್ನು ಹೀಗೆ ಹಾಕುವುದರ ಹಿಂದೆ ಕೆಲವು ಮಹತ್ವಗಳಿವೆ, ಅವೆಂದರೆ
- ಗುಡಿಯು ಬ್ರಹ್ಮ ಧ್ವಜ ವನ್ನು ಬಿಂಬಿಸುತ್ತದೆ (ಭಾಷಾಂತರ: ಬ್ರಹ್ಮನ ಬಾವುಟ) ಇದನ್ನು ಬ್ರಹ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ, ಏಕೆಂದರೆ ಭಗವಾನ್ ಬ್ರಹ್ಮನು ವಿಶ್ವವನ್ನು ರೂಪಿಸಿದ್ದು ಈ ದಿನವೇ. ಇದು ಇಂದ್ರಧ್ವಜ ವನ್ನು ಬಿಂಬಿಸುತ್ತದೆ. (ಭಾಷಾಂತರ: ಇಂದ್ರನ ಬಾವುಟ)[೩].
- ಪುರಾಣದ ಪ್ರಕಾರ, ಗುಡಿಯು ರಾಮನ ವಿಜಯದ ಸಂಕೇತವಾಗಿದೆ, ರಾವಣನನ್ನು ಸಂಹಾರಮಾಡಿ ವಿಜಯ ಹಾಗೂ ಸಡಾಗರದಿಂದ ಅಯೋಧ್ಯೆಗೆ ಹಿಂತಿರುಗಿದ ದಿನವಾಗಿದೆ. ವಿಜಯದ ಸಂಕೇತವನ್ನು ಎಂದಿಗೂ ಎತ್ತರದಲ್ಲಿ ಹಿಡಿಯಲಾಗುತ್ತದೆ ಹಾಗೆಯೇ ಈ ಗುಡಿ (ಧ್ವಜ). ಈ ಹಬ್ಬವನ್ನು ರಾಮನು 14 ವರ್ಷಗಳ ವನವಾಸವನ್ನು ಮುಗಿಸಿ ಹಿಂದಿರುಗಿದ ಸಂಭ್ರಮಾಚರಣೆಯ ಸಂಕೇತವೆಂದು ಕೂಡಾ ಹೇಳಲಾಗಿದೆ[೩].
- ಮಹಾರಾಷ್ಟ್ರಿಗರು ಈ ದಿನವನ್ನು ಮರಾಠಾ ಸೇನೆಯ ಮುಖ್ಯಸ್ಥ ಛತ್ರಪತಿ ಶಿವಾಜಿಯ ವಿಜಯದ ಸಂಕೇತವೆಂದು ಹೇಳುತ್ತಾರೆ. ಇದು ಸಕರ ಮೇಲೆ ಯುದ್ಧ ಮಾಡಿ ಗೆದ್ದ ರಾಜ ಶಾಲಿವಾಹನನು ಪೈತಾನಕ್ಕೆ ಹಿಂದಿರುಗಿದ ದಿನವಾಗಿಯೂ ಆಚರಿಸುತ್ತಾರೆ[೩].
- ಕೇಡನ್ನು ಕೊನೆಗೊಳಿಸಿ ಸಮೃದ್ಧಿ ಹಾಗೂ ಶುಭಯೋಗವನ್ನು ಮನೆಯೊಳಗೆ ಆಹ್ವಾನಿಸುವುದಕ್ಕಾಗಿ ಗುಡಿಯನ್ನು ಸ್ಥಾಪಿಸುವುದೆಂದು ನಂಬಲಾಗಿದೆ[೩].
ಗುಡಿಯನ್ನು ಮನೆಯ ಮುಖ್ಯದ್ವಾರದ ಬಲಭಾಗದಲ್ಲಿ ಸ್ಥಾಪಿಸಲಾಗುತ್ತದೆ. ಬಲಭಾಗವು ಚೈತನ್ಯದ ಸಂಕೇತವಾಗಿರುತ್ತದೆ.[೧]
- ದೊಂಬಿವಿಲಿ ನಗರವು 13 ವರ್ಷಗಳ ಹಿಂದೆ ಗುಡಿ ಪಾಡ್ವದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಅರ್ಥದಲ್ಲಿ "ಶೋಭ ಯಾತ್ರೆ ಯನ್ನು ಕೈಗೊಂಡಿತ್ತು."
ಆಚರಣೆಗಳು
[ಬದಲಾಯಿಸಿ]ಹಬ್ಬದ ದಿನದಂದು, ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಹಸುವಿನ ಸಗಣಿಯಿಂದ ಸಾರಿಸಲಾಗುತ್ತದೆ. ನಗರಗಳಲ್ಲಿಯೂ ಕೂಡಾ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಹೆಂಗಸರು ಮತ್ತು ಮಕ್ಕಳು ರಂಗೋಲಿ ಚಿತ್ತಾರಗಳನ್ನು ಮನೆಯ ಮುಂಭಾಗದಲ್ಲಿ ಬಿಡಿಸಿ ಬಣ್ಣಗಳನ್ನು ತುಂಬುತ್ತಾರೆ. ಹಬ್ಬದ ಎಲ್ಲರೂ ಹೊಸಬಟ್ಟೆಗಳನ್ನು ಧರಿಸಿ ಕುಟುಂಬದವರೆಲ್ಲಾ ಒಟ್ಟಾಗಿ ಸೇರುತ್ತಾರೆ.
ಸಾಂಪ್ರದಾಯಿಕವಾಗಿ, ಕುಟುಂಬಗಳು ಬೇವಿನ ಮರದ ಎಲೆಗಳನ್ನು ತಿನ್ನುವುದರ ಮೂಲಕ ಹಬ್ಬದ ಆಚರಣೆಯನ್ನು ಪ್ರಾರಂಭಿಸಬೇಕಾಗುತ್ತದೆ. ಕೆಲವುಬಾರಿ, ಬೇವಿನ ಎಲೆಯನ್ನು ಬೆಲ್ಲದೊಂದಿಂಗೆ ಹಾಗೂ ಹುಣಸೆ ಹಣ್ಣಿನೊಂದಿಗೆ ಬೆರೆಸಿ ತಿನ್ನುವ ಆಚರಣೆ ಇದೆ. ಕುಟುಂಬದ ಎಲ್ಲಾ ಸದಸ್ಯರುಗಳು ಮೊದಲಿಗೆ ಈ ಮಿಶ್ರಣವನ್ನು ತಿಂದರೆ ದೇಹದ ರೋಗ ನಿರೋಧಕ ವ್ಯವಸ್ಥೆಯು ಸುಧಾರಿಸಿ ಖಾಯಿಲೆಗಳೊಂದಿಗೆ ಹೋರಾಡುವುದೆಂಬ ನಂಬಿಕೆ ಇದೆ.
ಮಹಾರಾಷ್ಟ್ರದ ಕುಟುಂಬಗಳು ಶ್ರೀಖಂಡ ಹಾಗೂ ಪೂರಿಯನ್ನು ಈ ದಿನದಂದು ತಯಾರಿಸುತ್ತಾರೆ. ಕೊಂಕಣಿ ಜನರು ಕನಾಂಗಚಿ ಖೀರ್ ತಯಾರಿಸುತ್ತಾರೆ, ಇದು ಸಿಹಿ ಗೆಣಸು, ತೆಂಗಿನಕಾಯಿ ಹಾಲು, ಬೆಲ್ಲ, ಅಕ್ಕಿ ಹಿಟ್ಟು ಇತ್ಯಾದಿಗಳು ಹಾಗೂ ಸಣ್ಣಗಳಿಂದ ತಯಾರಿಸುವ ಪಾಯಸ ವಾಗಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಅಳತೆಯ ಹಿಂದೂ ಮಾನಗಳು
- ಪಂಚಾಂಗ
- ಶೋಭ ಯಾತ್ರೆ
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ "Chaitra Shukla Pratipada (Gudi Padwa)". Hindu Janajagruti Samiti.
- ↑ Gajrani, S. History, Religion and Culture of India. Vol. Volume 3. p. 108.
{{cite book}}
:|volume=
has extra text (help) - ↑ ೩.೦ ೩.೧ ೩.೨ ೩.೩ ೩.೪ ೩.೫ ೩.೬ "Significance of Gudi Padwa". Hindu Jagriti Samiti. Archived from the original on 2013-04-14. Retrieved 2010-12-13.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಗುಡಿ ಪಾಡ್ವ ಜ್ಯೋತಿಷ್ಯ ಶಾಸ್ತ್ರ Archived 2010-08-30 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: extra text: volume
- CS1: long volume value
- Moveable holidays (2014 date missing)
- Infobox holiday with missing field
- Infobox holiday fixed day
- Articles with unsourced statements from August 2010
- Articles with invalid date parameter in template
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಹಿಂದೂ ಹಬ್ಬಗಳು
- ಭಾರತದಲ್ಲಿ ಹಬ್ಬಗಳು
- ಹೊಸ ವರ್ಷದ ಆಚರಣೆಗಳು
- ಮಹಾರಾಷ್ಟ್ರದ ಸಂಸ್ಕೃತಿ
- ಮಹಾರಾಷ್ಟ್ರದ ಹಬ್ಬಗಳು
- ಹಿಂದೂ ಧರ್ಮದ ಹಬ್ಬಗಳು