ರಂಗವಲ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ರಂಗೋಲಿ


ರಂಗವಲ್ಲಿಅಥವಾ ರಂಗೋಲಿ ಚಿತ್ರಕಲೆಯ ಬಿಂದುಜ ಎಂಬ ವಿಭಾಗಕ್ಕೆ ಸೇರಿದ ಒಂದು ಜಾನಪದ ಕಲೆ.ರಂಗವಲ್ಲಿ ಎಂದರೆ ಬಣ್ಣಗಳಿಂದ ಅಲಂಕರಿಸಿದ ಲತೆಗಳು ಎಂದರ್ಥವಿದೆ.ಸ್ತ್ರೀಯರು ತಮ್ಮ ಕಲಾನೈಪುಣ್ಯ,ಕಲ್ಪನಾ ಶಕ್ತಿಯ ಅಭಿವ್ಯಕ್ತಿಯಾಗಿ ಬೆರಳುಗಳ ಸಹಾಯದಿಂದ ಮೂಡಿಸುವ ಕಲೆಯಾಗಿ ಹೆಚ್ಚು ಪ್ರಚಲಿತ.ಹುಡಿಮಣ್ಣು,ಸುಣ್ಣ,ಬಣ್ಣದ ಹುಡಿಗಳನ್ನು ಉಪಯೋಗಿಸುವ ಚಿತ್ರಗಳು.

ಕೇರಳದ ಪುಷ್ಪರಂಗೋಲಿ[ಬದಲಾಯಿಸಿ]

ಹಿಂದೆ ರಂಗೋಲಿಯ ರಂಗು ಹೆಚ್ಚಿಸುವುದಕ್ಕೆ, ಶೇಡಿ, ರಂಗೋಲಿ ಪುಡಿಗಳ ಜೊತೆ ಬಣ್ಣ ಬಣ್ಣದ ಕಲ್ಲಿನ ಪುಡಿಗಳನ್ನು ಬಳಸುತ್ತಿದ್ದರು. ಬೇರೆ ಬೇರೆ ಬಣ್ಣದ ಕಲ್ಲುಗಳನ್ನು ತಂದು ಅದನ್ನು ಪುಡಿ ಮಾಡಿ, ರಂಗೋಲಿಗೆ ಬರೆಯಲು ಬಳಸುತ್ತಿದ್ದರಂತೆ. ಕಪ್ಪು ಬಣ್ಣಕ್ಕಾಗಿ “ರಾಗಿ”ಯ ಬಳಸುತ್ತಿದ್ದರಂತೆ. ರಾಗಿಯ ಜೊತೆ ತೆಂಗಿನ ಕಾಯಿಯ ಸಣ್ಣ ಚೂರನ್ನು ಹಾಕಿ ಅವೆಲ್ಲವೂ ಕಪ್ಪಾಗುವವರೆಗೆ ಹುರಿದು ನಾರನ್ನು ಸೇರಿಸಿ ಅರೆದು ಕುದಿಸಿ ಕಪ್ಪು ಬಣ್ಣಕ್ಕಾಗಿ ಬಳಸುತ್ತಿದ್ದರಂತೆ.

ಕೇರಳದಲ್ಲಿ ಓಣಂ ಹಬ್ಬದ ವಿಶೇಷವಾಗಿರುವ ಪುಷ್ಪರಂಗೋಲಿಯ ವೈಭವವಂತೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ.

ಹೀಗೆ ವೈವಿಧ್ಯ ಸಂಪ್ರದಾಯ, ಕಲೆಯೊಂದಿಗೆ ಅತ್ಯಂತ ಸಿರಿವಂತೆ ನಮ್ಮ ಭಾರತ ಮಾತೆ. ಸಾಮಾನ್ಯವಾಗಿ ಸಂಸ್ಕೃತಿ ಜೀವಂತವಾಗಿರುವುದೇ ಗ್ರಾಮೀಣ ಪ್ರದೇಶದಲ್ಲಾಗಿರುವುದರಿಂದ ರಂಗೋಲಿಯ ನಿಜವಾದ ರಂಗು, ಅದಕ್ಕಿರುವ ನೈಜ ಗೌರವವನ್ನು ಅರಿಯಬೇಕೆಂದರೆ ನಾವು ಹಳ್ಳಿಗಳಿಗೆ ಹೋಗಿ ನೋಡಲೇ ಬೇಕು. ರಂಗೋಲಿಯ ವೈವಿಧ್ಯ ಮತ್ತು ಅದಕ್ಕಿರುವ ಗೌರವದ ನಿಜವಾದ ಅನುಭವವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರ ನಾವು ಈ ರಂಗೋಲಿಗಳನ್ನು ನೋಡುತ್ತಿದ್ದೇವೆ. ಆಧುನಿಕತೆಯ ಭರಾಟೆಯಲ್ಲಿ ರಂಗೋಲಿ ಸಂಸ್ಕೃತಿ ನಿಧಾನವಾಗಿ ಅಳಿವಿನತ್ತ ವಾಲುತ್ತಿದೆ ಎಂಬುದನ್ನು ಮಾತ್ರ ಸಿದ್ಧ ಸತ್ಯ. ಭಾರತದ ಅತ್ಯಂತ ವಿಶಿಷ್ಠ ಸಂಸ್ಕೃತಿಯಾದ ಈ ರಂಗೋಲಿ ಕಲೆ ಉಳಿವಿಗೆ ಪ್ರಯತ್ನಿಸಲೇಬೇಕಾದ ಜವಾಬ್ದಾರಿ ಎಲ್ಲ ಸಂಸ್ಕೃತಿವಂತ ಭಾರತೀಯರ ಮೇಲಿದೆ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ರಂಗವಲ್ಲಿ&oldid=718443" ಇಂದ ಪಡೆಯಲ್ಪಟ್ಟಿದೆ