ವಿಷಯಕ್ಕೆ ಹೋಗು

ಗೀತಾ ಜಾವಡೇಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗೀತಾ ಜಾವದೇಕರ ಇಂದ ಪುನರ್ನಿರ್ದೇಶಿತ)

ಗೀತಾ ಜಾವಡೇಕರ, ಮೂಲತಃ ಗೀತಾ ಜೋಶಿ ಇವರು ಧಾರವಾಡದವರು.

ಶಿಕ್ಷಣ

[ಬದಲಾಯಿಸಿ]

ಗೀತಾ ತಮ್ಮ ೧೦ನೆಯ ವಯಸ್ಸಿನಲ್ಲಿಯೆ ಹಿಂದುಸ್ತಾನಿ ಸಂಗೀತ ಕಲಿಯಲು ಪ್ರಾರಂಭಿಸಿದರು. ಇವರ ಮೊದಲ ಗುರು ಶ್ರೀ ಆರ್.ಪಿ.ಹೂಗಾರ. ಸಂಗೀತ ವಿಶಾರದ ಹಾಗು ಸಂಗೀತ ಅಲಂಕಾರ ಪರೀಕ್ಷೆಗಳಲ್ಲಿ ಪ್ರಥಮರಾಗಿ ಉತ್ತೀರ್ಣರಾದ ಗೀತಾರಿಗೆ ಕರ್ನಾಟಕ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಶಿಷ್ಯವೇತನ ಲಭಿಸಿತು.ಸೇಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ಗೀತಾ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. (ಸಂಗೀತ) ಪರೀಕ್ಷೆಯಲ್ಲಿಯೂ ಸಹ ಪ್ರಥಮರಾಗಿ ಉತ್ತೀರ್ಣರಾಗಿ,ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಇಂಗ್ಲಿಷ್ ಸಾಹಿತ್ಯದಲ್ಲಿ ಪಡೆದರು.

ಸಂಗೀತದಲ್ಲಿ ತಮ್ಮ ಶಿಕ್ಷಣವನ್ನು ಪಂಡಿತ ಪಂಚಾಕ್ಷರಿ ಗವಾಯಿ, ಶ್ರೀಮತಿ ಪದ್ಮಾವತಿ ಶಾಲಿಗ್ರಾಮ ಹಾಗು ಪಂಡಿತ ರತ್ನಾಕರ ಪೈ ಇವರಲ್ಲಿ ಮುಂದುವರಿಸಿದ ಗೀತಾ ಪದ್ಮಭೂಷಣ ಪಂಡಿತ ಮಲ್ಲಿಕಾರ್ಜುನ ಮನಸೂರರಿಂದ ಮಾರ್ಗದರ್ಶನ ಪಡೆದರು.

ಸಾಧನೆ

[ಬದಲಾಯಿಸಿ]

ಗೀತಾ ಜಾವಡೇಕರ ಆಕಾಶವಾಣಿ ಹಾಗು ದೂರದರ್ಶನ ಕೇಂದ್ರಗಳ ಪ್ರಥಮ ದರ್ಜೆಯ ಕಲಾವಿದರಾಗಿದ್ದಾರೆ.

ಗೀತಾರವರು ಧಾರವಾಡ, ಹುಬ್ಬಳ್ಳಿ, ಮೈಸೂರು, ಪುಣೆ, ಮುಂಬಯಿಗಳಲ್ಲಿ ಅಲ್ಲದೆ, ಅಮೇರಿಕಾ, ಯುರೋಪ್, ಜಪಾನ್ ಹಾಗು ಕೊಲ್ಲಿ ದೇಶಗಳಲ್ಲೂ ಸಹ ಸಂಗೀತ ಕಚೇರಿ ನೀಡಿದ್ದಾರೆ.