ಯಶ್(ನಟ)
ಯಶ್ | |
---|---|
Born | ನವೀನ್ ಕುಮಾರ್ ಗೌಡ[೧] ೮ ಜನವರಿ ೧೯೮೬ |
Nationality | ಭಾರತೀಯ |
Other names | ರಾಕಿಂಗ್ ಸ್ಟಾರ್ ಯಶ್, ರಾಕಿ ಭಾಯಿ |
Occupation | ನಟ |
Years active | 2004– ಪ್ರಸ್ತುತ |
Spouse |
ರಾಧಿಕಾ ಪಂಡಿತ್ (ವಿವಾಹ:2016) |
Children | 2 |
ಯಶ್ (ನವೀನ್ ಕುಮಾರ್ ಗೌಡ ಜನ್ಮ ಹೆಸರು) ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಸೋಪ್ಗಳಲ್ಲಿ ಕಾಣಿಸಿಕೊಂಡರು.
ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು, ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ಅವರ ಎರಡನೆಯ ಚಿತ್ರವಾದ ಮೊಗ್ಗಿನ ಮನಸು (೨೦೦೮) ರಲ್ಲಿ, ಅವರು ರಾಧಿಕಾ ಪಂಡಿತ್ ವಿರುದ್ಧ ಪುರುಷ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ಯಶಸ್ಸು ಗಳಿಸಿತು ಮತ್ತು ಅವರಿಗೆ ಅತ್ಯುತ್ತಮ ಪೋಷಕ ನಟ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು ಮೊದಲ ಸಲ(೨೦೧೦), ಕಿರಾತಕ (೨೦೧೧), ಡ್ರಾಮ (೨೦೧೨), ಗೂಗ್ಲಿ (೨೦೧೩), ರಾಜಾ ಹುಲಿ (೨೦೧೩), ಗಜಕೇಸರಿ (೨೦೧೪), ಮುಂತಾದ ಹಲವು ವಾಣಿಜ್ಯ ಯಶಸ್ಸಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತು ಮಿ.ಮಿಸ್ಟರ್ ರಾಮಚಾರಿ (೨೦೧೪) ಮತ್ತು ಮಾಸ್ಟರ್ ಪೀಸ್.(೨೦೧೫) ೨೦೧೬ ಸಂತು ಸ್ಟ್ರೈಟ್ ಫಾರ್ವರ್ಡ್ (೨೦೧೮) ಕೆಜಿಎಫ್ ಚಾಪ್ಟರ್ ೧ (೨೦೨೧) ಕೆಜಿಎಫ್ ಚಾಪ್ಟರ್ ೨. ಕಿರಾತಕ, ನರ್ತನ್ ನಿರ್ದೇಶನದಲ್ಲಿ ಹೊಸ ಚಿತ್ರ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.[೨][೩][೪]
ಆರಂಭಿಕ ಜೀವನ
[ಬದಲಾಯಿಸಿ]ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳಿಗೆ ೮ ಜನವರಿ ೧೯೮೬ ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಅವರಿಗೆ ನಂದಿನಿ ಎಂಬ ಹೆಸರಿನ ತಂಗಿ ಇದ್ದಾರೆ. ಅವರ ತಂದೆ ಬಿಎಂಟಿಸಿ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಹಾರಾಜ ಹೈಸ್ಕೂಲ್‌ನಲ್ಲಿ ಶಾಲಾಶಿಕ್ಷಣವನ್ನು ಪಡೆದು, ಬಾಲ್ಯದ ದಿನಗಳನ್ನು ಮೈಸೂರಿನ ಪಡವಾರಹಳ್ಳಿಯಲ್ಲಿ ಕಳೆದರು. ತಮ್ಮ ಶಾಲಾಶಿಕ್ಷಣದ ನಂತರ, ಅವರು ನಾಟಕಕಾರ ಬಿ.ವಿ ಕಾರಂತರಿಂದ ರೂಪುಗೊಂಡ ಬೆನಕ ನಾಟಕ ಶಾಲೆಯನ್ನು ಸೇರಿದರು. ಯಶ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.
ವೈಯಕ್ತಿಕ ಜೀವನ
[ಬದಲಾಯಿಸಿ]ಯಶ್ ತಮ್ಮ ಬಹುಕಾಲದ ಪ್ರೇಯಸಿ ರಾಧಿಕಾ ಪಂಡಿತ್ ಅನ್ನು ೨೦೧೬ ರಲ್ಲಿ ವಿವಾಹವಾದರು. ದಂಪತಿಗಳಿಗಿಬ್ಬರಿಗೆ ೨೦೧೮ ಡಿಸೆಂಬರ್ ೨ ರಲ್ಲಿ ಜನಿಸಿದ ಹೆಣ್ಣು ಮಗು ಮತ್ತು ೨೦೧೯ ಅಕ್ಟೋಬರ್ ೩೦ ರಲ್ಲಿ ಜನಿಸಿದ ಗಂಡು ಮಗನಿದ್ದಾನೆ.
ನಟನಾಗಿ
[ಬದಲಾಯಿಸಿ]ಯಶ್ ಈಟಿವಿ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾದ ಅಶೋಕ್ ಕಶ್ಯಪ್ ನಿರ್ದೇಶನದ ಗೋಕುಲ ಧಾರವಾಹಿಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅಂತಹ ಮಳೆಬಿಲ್ಲು ಮತ್ತು ಪ್ರೀತಿ ಇಲ್ಲದ ಮೇಲೆ ಹಾಗೂ ಇನ್ನೂ ಹಲವಾರು ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಇವರು ಪ್ರಿಯಾ ಹಾಸನ್ ನಿರ್ದೇಶನದ ಜಂಭದ ಹುಡುಗಿ (೨೦೦೭) ಚಲನಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಅವನು ನಂದ ಗೋಕುಲ ಧಾರಾವಾಹಿಯ ಸಹನಟಿ ರಾಧಿಕಾ ಪಂಡಿತ್ ಜೊತೆ ಪೋಷಕ ಪಾತ್ರದಲ್ಲಿ, ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಅಭಿನಯಿಸಿದ್ದಾರೆ. ಅವರು ಇದರಲ್ಲಿನ ಅಭಿನಯಕ್ಕಾಗಿ ಪೋಷಕ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದರು. ಯಶ್ ನಂತರ ಚಿತ್ರಗಳಲ್ಲಿ ರಾಕಿ (೨೦೦೮), ಕಳ್ಳರ ಸಂತೆ (೨೦೦೯), ಗೋಕುಲ (೨೦೦೯) ನಲ್ಲಿ ನಾಯಕ ಪಾತ್ರಗಳಲ್ಲಿ ನಟಿಸಿದರು.
ಮಾಧ್ಯಮ ಚಿತ್ರ
[ಬದಲಾಯಿಸಿ]2022 ರಲ್ಲಿ, ಯಶ್ ಸಂದರ್ಶನವೊಂದರಲ್ಲಿ ನಟ ವಿಜಯ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಆದರ್ಶಗಳಲ್ಲಿ ಒಬ್ಬರು ಎಂದು ಬಹಿರಂಗಪಡಿಸಿದರು.[೫]
ಚಲನಚಿತ್ರಗಳು
[ಬದಲಾಯಿಸಿ]ವರ್ಷ | ಚಿತ್ರ | ಪಾತ್ರ | ಟಿಪ್ಪಣಿ |
---|---|---|---|
೨೦೦೭ | ಜಂಭದ ಹುಡುಗಿ | ||
೨೦೦೮ | ಮೊಗ್ಗಿನ ಮನಸ್ಸು | ||
೨೦೦೮ | ರಾಕಿ | ರಾಕಿ | |
೨೦೦೯ | ಕಳ್ಳರ ಸಂತೆ | ಸೋಮು | |
೨೦೦೯ | ಗೋಕುಲ | ರಾಜಾ | |
೨೦೧೦ | ತಮಸ್ಸು | ಇಮ್ರಾನ್ | |
೨೦೧೦ | ಮೊದಲಸಲ | ಕಾರ್ತಿಕ್ | |
೨೦೧೧ | ರಾಜಾಧಾನಿ | ರಾಜಾ | |
೨೦೧೧ | ಕಿರಾತಕ | ನಂದೀಶ alias ಗೂಳಿ | |
೨೦೧೨ | ಲಕ್ಕಿ | ಲಕ್ಕಿ / ವಿಕ್ರಮ್ | |
೨೦೧೨ | ಜಾನು | ಸಿಧ್ಧಾರ್ಥ್ | |
೨೦೧೨ | ಡ್ರಾಮ | ವೆಂಕಟೇಶ | |
೨೦೧೩ | ಚಂದ್ರ | ಹಾಡೊಂದರಲ್ಲಿ ವಿಶೇಷ ಪಾತ್ರ | |
೨೦೧೩ | ಗೂಗ್ಲಿ | ಶರತ್ | |
೨೦೧೩ | ರಾಜಾಹುಲಿ | ರಾಜಾಹುಲಿ | |
೨೦೧೪ | ಗಜಕೇಸರಿ | ಕೃಷ್ಣ | |
೨೦೧೪ | ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ | ರಾಮಾಚಾರಿ | |
೨೦೧೫ | ಮಾಸ್ಟರ್ ಪೀಸ್ | ಯುವ | |
೨೦೧೬ | ಸಂತು ಸ್ಟ್ರೇಟ್ ಫ಼ಾರ್ವರ್ಡ್ | ಸಂತು | |
೨೦೧೮ | ಕೆಜಿಎಫ್ ಭಾಗ ೧ | ರಾಕಿ | |
೨೦೨೨ | ಕೆಜಿಎಫ್ ಭಾಗ ೨ | ರಾಕಿ | |
" ಮೈ ನೆಮ್ ಈಸ್ ಕಿರಾತಕ" | |||
ರಾಣಾ | |||
ಯಶ್, ನರ್ತನ್(ಮಫ್ತಿ) ಜೋಡಿ |
ಕಿರುತೆರೆ ಧಾರಾವಾಹಿಗಳು
[ಬದಲಾಯಿಸಿ]- ನಂದ ಗೋಕುಲ (ಈಟಿವಿ)
- ಮಳೆಬಿಲ್ಲು (ಈಟಿವಿ)
- ಉತ್ತರಾಯಣ (ಉದಯ ಟಿವಿ)
- ಪ್ರೀತಿ ಇಲ್ಲದ ಮೇಲೆ (ಈಟಿವಿ)
- ಶಿವ (ಡಿಡಿ೯)
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]Year[lower-alpha ೧] | Film | Award | Category | Result | Ref |
---|---|---|---|---|---|
2009 | ಮೊಗ್ಗಿನ ಮನಸು | ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ಪೋಷಕ ನಟ - ಕನ್ನಡ | ಗೆಲುವು | [೬] |
2013 | ಡ್ರಾಮಾ | ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ - ಕನ್ನಡ | Nominated | [೭] |
2014 | ಗೂಗ್ಲಿ | ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ - ಕನ್ನಡ | Nominated | [೮] |
2015 | ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ | ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ - ಕನ್ನಡ | ಗೆಲುವು | [೯] |
2015 | ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ | ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ - ಕನ್ನಡ | ಗೆಲುವು | [೧೦] |
ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ | ಸೈಮಾ | ಅತ್ಯುತ್ತಮ ನಟ - ಕನ್ನಡ | ಗೆಲುವು | [೧೧] | |
2016 | ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ | ಐಐಎಫ್ಎ ಉತ್ಸವಂ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ಕನ್ನಡ | ಗೆಲುವು | [೧೨] |
ಮಾಸ್ಟರ್‌ಪೀಸ್ | ಫೀಲ್ಮ್ಫೆರ್ ಅವಾರ್ಡ್ಸ್ ಸೌತ್ | ಅತ್ಯುತ್ತಮ ನಟ - ಕನ್ನಡ | Nominated | [೧೩] | |
ಮಾಸ್ಟರ್‌ಪೀಸ್ | ಸೈಮಾ | ಅತ್ಯುತ್ತಮ ನಟ - ಕನ್ನಡ | Nominated | [೧೪] | |
ಮಾಸ್ಟರ್‌ಪೀಸ್ | ಐಐಎಫ್ಎ ಉತ್ಸವಂ | ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ಕನ್ನಡ | Nominated | ||
2017 | ಸಂತು ಸ್ಟ್ರೇಟ್ ಫಾರ್ವರ್ಡ್ | ಸೈಮಾ | ಅತ್ಯುತ್ತಮ ನಟ - ಕನ್ನಡ | Nominated | [೧೫] |
2018 | ಕೆಜಿಎಫ್ ಭಾಗ ೧ | ಫಿಲ್ಮೀಬೀಟ್ | ಅತ್ಯುತ್ತಮ ನಟ – ಕನ್ನಡ | ಗೆಲುವು | |
2019 | ಝೀ ಕನ್ನಡ ಹೆಮ್ಮೆಯ ಕನ್ನಡಿಗ | ಅತ್ಯುತ್ತಮ ನಟ - ಕನ್ನಡ | ಗೆಲುವು |
- ↑ Refers to the year in which the award ceremony was held.
ಉಲ್ಲೇಖಗಳು
[ಬದಲಾಯಿಸಿ]- ↑ "Who is Naveen Kumar Gowda in Sandalwood?". The Times of India. Retrieved 26 January 2017.
- ↑ "SUDEEP, RADHIKA EMERGE AS TOP SANDALWOOD ACTORS". Bangalore Mirror. Retrieved 26 January 2017.
- ↑ "These hunks are the most desired men". The Times of India. Retrieved 26 January 2017.
- ↑ "Yash honed his acting skills in theatre". The Times of India. 21 August 2014.
- ↑ Hungama, Bollywood (March 28, 2022). "Yash reacts that "Vijay sir is a huge star, we should respect him" : Bollywood News". Bollywood Hungama. Retrieved January 5, 2024.
- ↑ "56th Idea Filmfare Awards 2008 South: The winners". Retrieved 5 April 2015.
- ↑ "60th Idea Filmfare Awards 2013 (South) Nominations". Filmfare. Archived from the original on 7 July 2013. Retrieved 5 April 2015.
- ↑ "61st Idea Filmfare Awards (South) Nomination list". Filmfare. Archived from the original on 8 July 2014. Retrieved 5 April 2015.
{{cite web}}
:|archive-date=
/|archive-url=
timestamp mismatch; 1 ಅಕ್ಟೋಬರ್ 2017 suggested (help) - ↑ "KGF 2 Yash Movie 2022". Archived from the original on 9 ಮೇ 2022. Retrieved 22 March 2022.
- ↑ "Yash, Shwetha Srivatsav are Filmfare best actors". Retrieved 27 June 2015.
- ↑ "Kannada award winners at siima". The Times of India. 11 August 2015. Retrieved 1 April 2018.
- ↑ "IIFA Utsavam: Here's a complete list of winners on day 2". Daily News and Analysis. 26 January 2016. Retrieved 1 April 2018.
- ↑ "Nominations for the 63rd Britannia Filmfare Awards (South)". filmfare.com. 7 June 2016. Archived from the original on 11 June 2016. Retrieved 1 April 2018.
- ↑ "siima Awards 2016 Kannada Nominees, Winners List & Show Details". worldhab.com. 28 June 2016. Archived from the original on 1 April 2018.
- ↑ "siima Nominations: Theri, Janatha Garage, Maheshinte Prathikaram and Kirik Party lead". The Indian Express. 31 May 2017. Retrieved 1 April 2018.