ಜಾನು (ಚಲನಚಿತ್ರ)
ಜಾನು | |
---|---|
ನಿರ್ದೇಶನ | ಪ್ರೀತಂ ಗುಬ್ಬಿ |
ನಿರ್ಮಾಪಕ |
|
ಲೇಖಕ | ಗುರುರಾಜ್. ಎಂ. ದೇಸಾಯಿ [ಸಂಭಾಷಣೆ] |
ಚಿತ್ರಕಥೆ | ಪ್ರೀತಂ ಗುಬ್ಬಿ |
ಕಥೆ | ಪ್ರೀತಂ ಗುಬ್ಬಿ |
ಪಾತ್ರವರ್ಗ |
|
ಸಂಗೀತ | ವಿ.ಹರಿಕೃಷ್ಣ |
ಛಾಯಾಗ್ರಹಣ | ಎಸ್. ಕೃಷ್ಣ |
ಸಂಕಲನ | Deepu. ಎಸ್. ಕುಮಾರ್ |
ಸ್ಟುಡಿಯೋ | ಜಯಣ್ಣ ಕಂಬೈನ್ಸ್ |
ವಿತರಕರು | ಜಯಣ್ಣ ಫಿಲಮ್ಸ್ |
ಬಿಡುಗಡೆಯಾಗಿದ್ದು | 2012 ರ ಜೂನ್ 1 |
ಅವಧಿ | 2 ಗಂಟೆಗಳು 17 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | ₹ 4 ಕೋಟಿ [೧] |
ಜಾನು 2012 ರ ಕನ್ನಡ ರೋಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದು ಜಯಣ್ಣ ಕಂಬೈನ್ಸ್ ನಿರ್ಮಿಸಿದ್ದಾರೆ. ಯಶ್ ಮತ್ತು ದೀಪಾ ಸನ್ನಿಧಿ ನಾಯಕ ನಾಯಕಿಯಾಗಿದ್ದು, ರಂಗಾಯಣ ರಘು, ಸಾಧು ಕೋಕಿಲ, ಶೋಬರಾಜ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತಸಂಯೋಜಕರು. [೨] ಈ ಚಲನಚಿತ್ರವು 1 ಜೂನ್ 2012 ರಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಯಾಯಿತು. [೩] ಈ ಚಲನಚಿತ್ರವನ್ನು 2018 ರಲ್ಲಿ ಒಡಿಯಾದಲ್ಲಿ ಲವ್ ಎಕ್ಸ್‌ಪ್ರೆಸ್ ಎಂದು ರೀಮೇಕ್ ಮಾಡಲಾಯಿತು. [೪]
ಪಾತ್ರವರ್ಗ
[ಬದಲಾಯಿಸಿ]- ಸಿದ್ಧಾರ್ಥ್ ಪಾತ್ರದಲ್ಲಿ ಯಶ್
- ಜಾನು ಪಾತ್ರದಲ್ಲಿ ದೀಪಾ ಸನ್ನಿಧಿ
- ರಂಗಾಯಣ ರಘು
- ಸಾಧು ಕೋಕಿಲ
- ಲಯ ಕೋಕಿಲಾ
- ಚಿಕ್ಕಣ್ಣ
- ಮಧು ಗುರುಸ್ವಾಮಿ
- ರಾಘವ ಉದಯ್
- ಶೋಬರಾಜ್
- ರಾಕ್ಲೈನ್ ಸುಧಾಕರ್
- ರಾಜಶೇಖರ್ ನಾಯ್ಡು
- ಸಂಗೀತಾ
- ಎಂ ಎಸ್ ಉಮೇಶ್
- ರವಿವರ್ಮ
ನಿರ್ಮಾಣ
[ಬದಲಾಯಿಸಿ]ಹಾಗೆ ಸುಮ್ಮನೆ ಮತ್ತು ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ನಂತರ, ಪ್ರೀತಂ ಗುಬ್ಬಿ ಹಿಂದಿನ ಚಿತ್ರಗಳಂತೆ ನಿರ್ಮಾಪಕರಾದ ಜಯಣ್ಣ ಕಂಬೈನ್ಸ್‌ನೊಂದಿಗೆ ಸೇರಿಕೊಂಡರು.
ಬಾಕ್ಸ್ ಆಫೀಸ್ ನಲ್ಲಿ
[ಬದಲಾಯಿಸಿ]ಜಾನು ಬಹು ನಿರೀಕ್ಷಿತ ಚಿತ್ರವಾಗಿದ್ದು ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಆದರೆ ಚಿತ್ರವು ಬಿಡುಗಡೆಯಾದ ನಂತರ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು, ಆದರೂ ಅದು 50 ದಿನಗಳ ಓಟವನ್ನು ಪೂರ್ಣಗೊಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ. [೫]
ಧ್ವನಿಮುದ್ರಿಕೆ
[ಬದಲಾಯಿಸಿ]ವಿ.ಹರಿಕೃಷ್ಣ ಚಿತ್ರದ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದಾರೆ. ಆಲ್ಬಮ್ ಐದು ಹಾಡುಗಳನ್ನು ಒಳಗೊಂಡಿದೆ. [೬] ಹಾಡುಗಳಿಗೆ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಆಲ್ಬಮ್ 13 ಮೇ 2012 ರಂದು ಬಿಡುಗಡೆಯಾಯಿತು. [೭]
Track listing | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಏನ್ ಸಮಾಚಾರ ರೀ" | ಯೋಗರಾಜ ಭಟ್ | ಟಿಪ್ಪು | 4:08 |
2. | "ಕದ್ದು ಮುಚ್ಚಿ" | ಜಯಂತ ಕಾಯ್ಕಿಣಿ | ಅನುರಾಧಾ ಭಟ್ | 3:38 |
3. | "ಕಣ್ ಮುಚ್ರೋ ಕಣ್ ಮುಚ್ರಿ" | ಯೋಗರಾಜ ಭಟ್ | ವಿ.ಹರಿಕೃಷ್ಣ | 4:11 |
4. | "ನೀನೇ ನನ್ನ ಸವಿಗನಸು" | ಜಯಂತ ಕಾಯ್ಕಿಣಿ | ಸೋನು ನಿಗಮ್ | 4:10 |
5. | "ಸ್ವಲ್ಪ ಬಿಟ್ಕೊಂಡು" | ಯೋಗರಾಜ ಭಟ್ | ವಿ.ಹರಿಕೃಷ್ಣ, ಲಕ್ಷ್ಮಿ ವಿಜಯ್ | 4:19 |
ಒಟ್ಟು ಸಮಯ: | 20:26 |
ಉಲ್ಲೇಖಗಳು
[ಬದಲಾಯಿಸಿ]- ↑ https://www.news18.com/news/india/sandalwood-progress-report-of-first-half-of-2012-485642.html
- ↑ "IndiaGlitz - Lavish song for Jaanu - Kannada Movie News". Retrieved 2016-10-26.
- ↑ "IndiaGlitz - Jaanu gets U certificate - Telugu Movie News". Retrieved 2016-10-26.
- ↑ "Love Express Trailer | Odia Movie | Swaraj & Sunmeera".
- ↑ "Completes 50 days". Archived from the original on 2013-07-21.
- ↑ "Jaanu (Original Motion Picture Soundtrack) - EP". iTunes. Retrieved 2 March 2015.
- ↑ "'Jaanu' five songs audio'". indiaglitz.com. 15 May 2012.