ವಿಷಯಕ್ಕೆ ಹೋಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು


ಇದು ಕನ್ನಡ ವರ್ಣಮಾಲೆಯಲ್ಲಿ ಹದಿಮೂರನೆಯದು, ದೀರ್ಘಸ್ವರಾಕ್ಷರ, ಲಿಪಿಯ ದೃಷ್ಟಿಯಿಂದ ಮತ್ತು ಓಕಾರಗಳಲ್ಲಿ ಪ್ರಾಚೀನಕಾಲದ ಶಾಸನಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಬಹುಶಃ ಇವೆರಡಕ್ಕೂ ವ್ಯತ್ಯಾಸ ತೋರಿಸುವ ಪ್ರವೃತ್ತಿ ವಿಜಯನಗರ ಕಾಲಾಂತರ ಬೆಳೆದುಬಂದಿರಬೇಕು. ಆದರೆ ಬರೆವಣಿಗೆಯಲ್ಲಿನ ಈ ವ್ಯತ್ಯಾಸ ಖಚಿತವಾಗಿ ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಪ್ರ.ಶ. 18ನೆಯ ಶತಮಾನದ ಶಾಸನಗಳಲ್ಲಿ ಈ ಅಕ್ಷರದ ಹ್ರಸ್ವ ಮತ್ತು ದೀರ್ಘಗಳಿಗೆ ಪ್ರತ್ಯೇಕ ರೂಪಗಳಿರುವುದು ಕಂಡುಬರುತ್ತದೆ.

ಅಶೋಕನ ಕಾಲದಲ್ಲಿ ಅಕ್ಷರದ ಮೇಲ್ಭಾಗದಲ್ಲಿ ಎಡಬಲ ಗಳಲ್ಲಿ ಅಡ್ಡ ಗೀಟುಗಳಿದ್ದುವು. ಕದಂಬರ ಕಾಲದಲ್ಲಿ ಮೇಲಿನ ಅಡ್ಡಗೀಟುಗಳು ಡೊಂಕಾದುವು. ಗಂಗರ ಕಾಲಕ್ಕೆ ಬಲಭಾಗದ ರೇಖೆ ಇನ್ನೂ ಕೆಳಕ್ಕೆ ಬಾಗಿತು. ಇದು ರಾಷ್ಟ್ರಕೂಟ ಕಾಲದಲ್ಲಿ ಇನ್ನೂ ಸ್ಪಷ್ಟ. ಚಾಲುಕ್ಯರ ಕಾಲಕ್ಕೆ ಎಡದ ರೇಖೆಯ ಪ್ರಾಮುಖ್ಯ ಹೋಗಿ ಬಲಗಡೆಯ ರೇಖೆ ಇನ್ನೂ ಖಚಿತವಾಯಿತು. ಮದಕರಿನಾಯಕನ ಕಾಲಕ್ಕಾಗಲೆ ಅಕ್ಷರದಲ್ಲಿ ಓತ್ವ ಮತ್ತು ದೀರ್ಘಗಳು ಈಗಿನಂತೆ ಸ್ಪಷ್ಟವಾಗಿ ಗೋಚರಿಸಿದುವು.[]

ದ್ವನಿಮಾ ವಿಧಾನ

[ಬದಲಾಯಿಸಿ]

ಈ ಅಕ್ಷರ ಪಶ್ಚ-ಅರ್ಧ-ಸಂವೃತ-ಗೋಲ-ದೀರ್ಘ-ಸ್ವರವನ್ನು ಸೂಚಿಸುತ್ತದೆ.

ಸ್ವರಾಕ್ಷರಗಳು ಎಂದರೇನು ?

[ಬದಲಾಯಿಸಿ]
  1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.[]
  2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ದೀರ್ಘಸ್ವರ

[ಬದಲಾಯಿಸಿ]

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ಋೂ, ೡ, ಏ, ಓ - ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಅಕ್ಷರವೂ ಒಂದಾಗಿದೆ.

ಕನ್ನಡದ ನಾವಿ ಸ್ವರಗಳು

[ಬದಲಾಯಿಸಿ]

ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.

ಹೃಸ್ವಸ್ವರ ದೀರ್ಘಸ್ವರ

ಓ ಕನ್ನಡ ಅಕ್ಷರವನ್ನು ಬರೆಯುವ ವಿಧಾನ

[ಬದಲಾಯಿಸಿ]
ಕನ್ನಡ ದೇವನಾಗರಿ ISO 15919 ಸಂಕೇತ ಬರವಣಿಗೆ ಉಚ್ಚಾರಣೆ
OO

ದಿಂದ ಆರಂಭವಾಗುವ ನಾಮಪದಗಳು

[ಬದಲಾಯಿಸಿ]
  • ಪ್ರಾಣಿ ಸಂಬಂಧಿ ಪದ : ಓತಿ
  • ಮನುಷ್ಯ ಸಂಬಂಧಿ ಪದ : ಓಡ್ಯಪ್ಪ
  • ಸಸ್ಯ ಸಂಬಂಧಿ ಪದ : ಓಮ

ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು

[ಬದಲಾಯಿಸಿ]
  • ಓರ್ವ = ಒಬ್ಬ

ಉಲ್ಲೇಖ

[ಬದಲಾಯಿಸಿ]
  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಓ
  2. ಕೇಶಿರಾಜಶಬ್ದಮಣಿದರ್ಪಣ


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಓ&oldid=1201959" ಇಂದ ಪಡೆಯಲ್ಪಟ್ಟಿದೆ