ವಿಷಯಕ್ಕೆ ಹೋಗು

ಅಂತರರಾಷ್ಟ್ರೀಯ ನ್ಯಾಯಾಲಯ

ನಿರ್ದೇಶಾಂಕಗಳು: 52°05′11.76″N 4°17′43.80″E / 52.0866000°N 4.2955000°E / 52.0866000; 4.2955000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

International Court of Justice
Cour internationale de justice
[[File:International Court of Justice HQ 2006.jpg|]]
Peace Palace, seat of the ICJ.
Org typePrincipal Organ
AcronymsICJ, CIJ
HeadPresident of the ICJ
Hisashi Owada
StatusActive
Established1945
Websitewww.icj-cij.org

ಅಂತರರಾಷ್ಟ್ರೀಯ ನ್ಯಾಯಾಲಯ (ಇದನ್ನು ಸಾಮಾನ್ಯವಾಗಿ ವಿಶ್ವ ನ್ಯಾಯಾಲಯ ಅಥವಾ ICJ )ಎಂದು ಉಲ್ಲೇಖಿಸಲಾಗುತ್ತದೆ.ಇದು ಪ್ರಾಥಮಿಕವಾಗಿ ಯುನೈಟೆಡ್ ನೇಶನ್ಸ್ ನ ನ್ಯಾಯಾಂಗದ ಅಂಗ ಸಂಸ್ಥೆಯಾಗಿದೆ. ಇದು ನೆದರ್ ಲ್ಯಾಂಡ್ಸ್ ನ ಹೇಗ್ಯುನ ಪೀಸ್ ಪ್ಯಾಲೇಸ್ ನಲ್ಲಿ ಮೂಲ ತಳಹೊಂದಿದೆ. ಅದರ ಪ್ರಮುಖ ಕಾರ್ಯಚಟುವಟಿಕೆಗಳೆಂದರೆ,ಆಯಾ ರಾಜ್ಯಗಳಿಂದ ಸಲ್ಲಿಸಿದ ಕಾನೂನು ವ್ಯಾಜ್ಯಗಳನ್ನು ಸ್ವೀಕರಿಸಿ;ಸಲಹೆ ಮತ್ತು ಅಭಿಪ್ರಾಯಗಳನ್ನು ಕಾನೂನಿನ ಆಧಾರದ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಅಧಿಕೃತ ಅಂಗಗಳು ಕೇಳುವ ಪ್ರಶ್ನೆಗಳ ಮೇಲೆ ಅವಲೋಕಿಸಲಾಗುತ್ತದೆ.ಇದಕ್ಕೆ ಸೂಕ್ತವಾದ ಸಂಸ್ಥೆಗಳು ಇವುಗಳು ಸಂಯುಕ್ತ ರಾಷ್ಟ್ರ ಸಂಸ್ಥೆಯ ಜನರಲ್ ಅಸೆಂಬ್ಲಿಯಿಂದ ಮಾನ್ಯತೆ ಪಡೆದ ದೇಶಗಳ ಕಾನೂನು ಮೊಕದ್ದಮೆ,ವ್ಯಾಜ್ಯಗಳನ್ನು ಅದು ಪುರಸ್ಕರಿಸುತ್ತದೆ. ಆದರೆ ಇಲ್ಲಿ ICJ ಯನ್ನು ಇಂಟರ್ ನ್ಯಾಶನಲ್ ಕ್ರಿಮಿನಲ್ ಕೋರ್ಟ್ ನೊಂದಿಗೆ ಹೋಲಿಸಿ ಗೊಂದಲಕ್ಕೀಡಾಗಬಾರದು.ಇದು ಕೂಡಾ ತನ್ನ ಶಕ್ತ್ಯಾನುಸಾರ "ಜಾಗತಿಕ" ನ್ಯಾಯಾಂಗದ ಪ್ರದೇಶದ ಕಾನೂನು ಅಧಿಕಾರದ ವ್ಯಾಪ್ತಿಯನ್ನು ಹೊಂದಿರುತ್ತದೆ.

ಚಟುವಟಿಕೆಗಳು

[ಬದಲಾಯಿಸಿ]

ಇದು 1945 ರಲ್ಲಿ UN ಚಾರ್ಟರ್ ನಿಂದ ಸ್ಥಾಪಿಸಲ್ಪಟ್ಟಿತು.ಈ ನ್ಯಾಯಾಲಯವು 1946 ರಲ್ಲಿ ಪರ್ಮನಂಟ್ ಕೋರ್ಟ್ ಆಫ್ ಇಂಟರ್ ನ್ಯಾಶನಲ್ ಜಸ್ಟಿಸ್ (ಅಂತಾರಾಷ್ಟ್ರೀಯ ಶಾಶ್ವತ ನ್ಯಾಯಿಕ ನ್ಯಾಯಾಲಯದ ಉತ್ತರಾಧಿಕಾರಿಯಾಗಿ ತನ್ನ ಅಸ್ತಿತ್ವ ಕಂಡುಕೊಂಡಿತು. ದಿ ಸ್ಟಾಚುಟ್ ಆಫ್ ಇಂಟರ್ ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ ,(ಅಂತಾರಾಷ್ಟ್ರೀಯ ನ್ಯಾಯಾಲಯದ ವಿಧಿ ನಿಯಮಗಳು)ಇದು ತನ್ನ ಹಿಂದಿನ ನ್ಯಾಯಾಂಗ ಅಂಗ ಸಂಸ್ಠೆಗೆ ಪೂರಕವಾಗಿದ್ದು ಇದು ಪ್ರಮುಖ ಸಂವಿಧಾನ ಮತ್ತು ನ್ಯಾಯಾಲಯದ ನಿಯಂತ್ರಣದ ಕುರಿತ ನಿಯಮಗಳನ್ನು [] ಹೊಂದಿರುತ್ತದೆ. ಈ ನ್ಯಾಯಾಲಯದ ಕಾರ್ಯಭಾರವು ವಿಶಾಲ ನ್ಯಾಯಾಧಿಕಾರಣದ ವ್ಯಾಪ್ತಿ ಹೊಂದಿದೆ. ಇದುವರೆಗೂ ICJ ತನ್ನ ಇತಿಹಾಸದಲ್ಲಿ ಕಡಿಮೆ ಪ್ರಮಾಣದ ಪ್ರಕರಣಗಳ ಜೊತೆಗೆ ವ್ಯವಹರಿಸಿದೆ.ಆದರೆ 1980 ರ ನಂತರ ಈ ನ್ಯಾಯಾಲಯದ ಸದುಪಯೋಗಪಡಿಸಿಕೊಳ್ಳಲು ಎಲ್ಲಾ ದೇಶಗಳು ತಮ್ಮ ಇಚ್ಛೆ ವ್ಯಕ್ತಪಡಿಸಿ ಸಮಯಾನುಸಾರ ಅನುಕೂಲ ಹೊಂದಲು ಉತ್ಸುಕವಾಗಿವೆ.ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮ ಉತ್ಸಾಹವನ್ನು ಪ್ರಕಟಿಸಿವೆ. ಆದರೆ ಯುನೈಟೆಡ್ ಸ್ಟೇಟ್ಸ್ ಕಡ್ಡಾಯ ಅಧಿಕಾರ ವ್ಯಾಪ್ತಿಯ ಬಗ್ಗೆ ತನ್ನ ಅಸಮ್ಮತಿ ಸೂಚಿಸಿ 1986 ರಲ್ಲಿ ನ್ಯಾಯಾಲಯ ಪ್ರಕರಣಗಳ ಆಧಾರದ ಮೇಲೆ ಅದರ ಕಾರ್ಯವ್ಯಾಪ್ತಿ ನಿಗದಿಗೆ ಅದು ಒಪ್ಪಿಗೆ ನೀಡಿದೆ. ಯುನೈಟೆಡ್ ನೇಶನ್ಸನ XIV ಚಾಪ್ಟರ್ ಪ್ರಕಾರ (ಸಂಯುಕ್ತ ರಾಷ್ಟ್ರ ಸಂಸ್ಥೆ)UN ಭದ್ರತಾ ಸಭೆಯು ಈ ವಿಶ್ವ ನ್ಯಾಯಾಲಯದ ತೀರ್ಪುಗಳನ್ನು ಜಾರಿಗೊಳಿಸುತ್ತದೆ.ಈ ಜಾರಿಯು ಐದು ಶಾಶ್ವತ ಸದಸ್ಯತ್ವ ಪಡೆದ ರಾಷ್ಟ್ರಗಳ ಪರಮಾಧಿಕಾರ ಅವಲಂಬಿಸಿದೆ. ಸದ್ಯ ವಿಶ್ವ ನ್ಯಾಯಾಲಯದ ಮುಂದೆ ಹನ್ನೆರಡು ಪ್ರಕರಣಗಳಿವೆ.

ಸಂಯೋಜನೆ

[ಬದಲಾಯಿಸಿ]
ಚಿತ್ರ:Public hearing at the ICJ.jpg
Public hearing at the ICJ.

ICJ ಗಾಗಿ ಒಟ್ಟು ಒಂಬತ್ತು ವರ್ಷ ಅಧಿಕಾರಾವಧಿ ಹೊಂದಿರುವ ಹದಿನೈದು ನ್ಯಾಯಾಧೀಶರನ್ನು UN ಸಾಮಾನ್ಯ ಮಂಡಳಿಯು ಚುನಾಯಿಸುತ್ತದೆ. ಇದರಲ್ಲಿ UN ನ ಭದ್ರತಾ ಮಂಡಳಿಯು ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಶನ್ (ಕಾಯಂ ವಾದ-ವಿವಾದ ವಿಷಯದ ಶಾಶ್ವತ ನ್ಯಾಯಾಲಯ)ನಲ್ಲಿರುವ ಗುಂಪು ಈ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತದೆ. ಇದರ ಚುನಾವಣಾ ಪ್ರಕ್ರಿಯೆ ಬಗ್ಗೆ ICJ ವಿಧಿ ನಿಯಮಗಳ 4-12 ರಲ್ಲಿ ವಿವರಿಸಲಾಗಿದೆ. ನ್ಯಾಯಾಧೀಶರು ಒಂಬತ್ತು ವರ್ಷಗಳ ಕಾಲಾವಧಿಗೆ ಆಯ್ಕೆಯಾಗುತ್ತಾರೆ,ಅವರು ಮತ್ತೆ ಎರಡು ಅವಧಿಗಳ ವರೆಗೆ ಮರು ಚುನಾಯಿಸಿಕೊಳ್ಳುವ ಅವಕಾಶ ಹೊಂದಿರುತ್ತಾರೆ. ಪ್ರತಿ ಮೂರುವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ,ಈ ಸಂದರ್ಭದಲ್ಲಿ ಬಹುತೇಕ ಒಂದು-ಮೂರಾಂಶದಷ್ಟು ನ್ಯಾಯಾಧೀಶರು ನಿವೃತ್ತಿ ಪಡೆಯುತ್ತಾರೆ.(ಸಾಮಾನ್ಯವಾಗಿ ಮರು ಚುನಾವಣೆಗಾಗಿ ಸ್ಪರ್ಧಿಸುವವರಾಗಿರುತ್ತಾರೆ) ಒಂದು ವೇಳೆ ನ್ಯಾಯಾಧೀಶರೊಬ್ಬರು ಅಧಿಕಾರವಧಿ ಇರುವಾಗಲೇ ಮೃತಪಟ್ಟರೆ ಅವರ ಅಧಿಕಾರವಧಿ ಪೂರ್ಣಗೊಳಿಸಲು ಅವರದೇ ರಾಷ್ಟ್ರೀಯತೆ ಹೊಂದಿರುವ ನ್ಯಾಯಾಧೀಶರ ಆಯ್ಕೆ ಮಾಡಲಾಗುತ್ತದೆ. ಆದರೆ ಒಂದೇ ದೇಶದ ಇಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗದು. ಅದರ ವಿಧಿ ನಿಯಮ 9 ರ ಪ್ರಕಾರ ನ್ಯಾಯಾಲಯದ ಸದಸ್ಯತ್ವವು "ವಿಶ್ವದ ಪ್ರಮುಖ ನಾಗರಿಕತೆ ಮತ್ತು ವಿಶ್ವದ ಕಾನೂನಿನ ತತ್ವಗಳ ಪ್ರಕಾರ ಅದನ್ನು ಜಾರಿ ಮಾಡಬೇಕಾಗುತ್ತದೆ." ಪ್ರಮುಖವಾಗಿ ಇದರ ಅರ್ಥ ವ್ಯಾಪ್ತಿಯು ಸಾಮಾನ್ಯ ಕಾನೂನು, ನಾಗರಿಕ ಕಾನೂನು ಮತ್ತು ಸಾಮಾಜಿಕ ತತ್ವದ ಕಾನೂನು (ಕಮ್ಯುನಿಷ್ಟ್ ಅವಧಿ ನಂತರದ ಕಾನೂನು ) ಇತ್ಯಾದಿಗಳಲ್ಲಿ ಅಡಗಿದೆ. ಸುಮಾರು 1960 ರಿಂದ ಭದ್ರತಾಮಂಡಳಿಯ ಐವರು ಕಾಯಂ ಸದಸ್ಯರ ಪೈಕಿ ನಾಲ್ವರು ಶಾಶ್ವತವಾಗಿದ್ದಾರೆ.(ಫ್ರಾನ್ಸ್ ,ರಶಿಯಾ,ದಿ ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ )ಈ ರಾಷ್ಟ್ರಗಳ ನ್ಯಾಯಾಧೀಶರು ಈ ನ್ಯಾಯಾಲಯದಲ್ಲಿ ಯಾವಾಗಲೂ ಇರುತ್ತಾರೆ. ಇದರಲ್ಲಿ ಅಪವಾದವೆಂದರೆ ಚೀನಾ; (ದಿ ರಿಪಬ್ಲಿಕ್ ಆಫ್ ಚೀನಾ 1971 ರವರೆಗೆ, ಅಲ್ಲದೇ 1971 ರ ನಂತರ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ) ಆಯಿತು.ಈ ದೇಶವು 1967-1985 ರ ವರೆಗೆ ಯಾವುದೇ ನ್ಯಾಯಾಧೀಶರನ್ನು ನೇಮಕ ಮಾಡಿರಲಿಲ್ಲ.ಯಾಕೆಂದರೆ ಇದು ಯಾವುದೇ ಅಭ್ಯರ್ಥಿಯನ್ನು ಸೂಚಿಸಿರಲಿಲ್ಲ. ಆದರೆ ICJ ಯ ಕಾನೂನು ಪರಿಧಿಯಲ್ಲಿ ಯಾವುದೇ ಭೂಪ್ರದೇಶದ ರಾಜಕೀಯ ಬಗ್ಗೆ ಪ್ರಸ್ತಾಪವಿಲ್ಲ.ಈ ನ್ಯಾಯಾಲಯದ ಪೀಠಗಳಲ್ಲಿ ಯಾವುದೇ ಪಕ್ಷ,ಪಂಗಡ ಮತ್ತು ರಾಜಕೀಯ ಅಂಶಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಈ ಅಧಿನಿಯಮ 2 ರ ಪ್ರಕಾರ ಎಲ್ಲಾ ನ್ಯಾಯಾಧೀಶರು "ಅವರ ರಾಷ್ಟ್ರೀಯತೆಯನ್ನು ಪರಿಗಣಿಸದೇ ಅತ್ಯುತ್ತಮ ನೈತಿಕ ಗುಣಗಳನ್ನು ಹೊಂದಿರಬೇಕಾದ ಅಗತ್ಯವಿದೆ."ಅವರು ತಮ್ಮ ಸ್ವದೇಶದಲ್ಲಿ ಉನ್ನತಮಟ್ಟದ ನ್ಯಾಯಾಂಗ ಅಧಿಕಾರಿ ಇಲ್ಲವೆ ವಿಶ್ವಮಟ್ಟದಲ್ಲಿ ಕಾನೂನು ಪ್ರತಿಭೆಯ ವಕೀಲರಾಗಿರಬೇಕು. ನ್ಯಾಯಾಂಗ ಕಾರ್ಯವ್ಯಾಪ್ತಿಯ ಸ್ವಾತಂತ್ರ್ಯದ ಬಗ್ಗೆ ನಿಯಮ 16-18 ರಲ್ಲಿ ವ್ಯಾಖ್ಯಾನಿಸಲಾಗಿದೆ. ಇಲ್ಲಿ ICJ ನ ನ್ಯಾಯಾಧೀಶರು ಯಾವುದೇ ಹುದ್ದೆಯಲ್ಲಿರಬಾರದು,ಇಲ್ಲವೇ ಕೌನ್ಸೆಲ್ (ಕಾನೂನು ಸಲಹೆಗಾರ) ಆಗಿರಕೂಡದು. ನಿಜಾರ್ಥದಲ್ಲಿ ಈ ನ್ಯಾಯಾಲಯದ ಸದಸ್ಯರು ಈ ಕಾನೂನು ನಿಯಮಗಳ ಬಗ್ಗೆ ತಮ್ಮದೇ ಆದ ಅರ್ಥವಿವರಣೆ ನೀಡುವ ಸಾಮರ್ಥ್ಯ ಹೊಂದಿರುತ್ತಾರೆ. ಇದು ಅವರಿಗೆ ಹೊರಭಾಗದಲ್ಲಿನ ವಾದ-ವಿವಾದಗಳಲ್ಲಿ ಭಾಗವಹಿಸಲು,ಅಲ್ಲದೇ ಯಾವುದೇ ಹಿತಾಸಕ್ತಿಯ ತೊಡಕುಗಳಿಲ್ಲದೇ ವೃತ್ತಿಪರ ಹುದ್ದೆಗಳಲ್ಲಿ ಮುಂದುವರೆಯುವ ಅವಕಾಶ ಒದಗಿಸುತ್ತದೆ.ಇನ್ನುಳಿದ ಸದಸ್ಯರ ಒಮ್ಮಾತಾಭಿಪ್ರಾಯದ ಮತದ ಮೇಲೆಯೇ ಒಬ್ಬ ನ್ಯಾಯಾಧೀಶರನ್ನು [] ವಜಾ ಮಾಡಬಹುದಾಗಿದೆ. ಈ ಸವಲತ್ತುಗಳಿದ್ದರೂ ICJ ನ ನ್ಯಾಯಾಧೀಶರ ಸ್ವಾತಂತ್ರದ ಬಗ್ಗೆ ಹಲವು ಪ್ರಶ್ನೆಗಳೇಳುತ್ತವೆ. ಉದಾಹರಣೆಗೆ ನಿಕಾರಾಗುವಾ ಪ್ರಕರಣ ದಲ್ಲಿ USA, ತಾನು ಈ ಪ್ರಕರಣದ ಭಾವನಾತ್ಮಕ ಪ್ರಚೋದನಾತ್ಮಕ ವಿಷಯಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಒಂದು ಸಂದೇಶವನ್ನು ರವಾನಿಸಿತು.ಈಸ್ಟರ್ನ್ ಬ್ಲಾಕ್ ರಾಜ್ಯಗಳ ನ್ಯಾಯಾಧೀಶರು ಇಲ್ಲಿ ಹಾಜರಿರುವುದರಿಂದ ಕೆಲವು ಸಂವೇದನಾಶೀಲ-ಸೂಕ್ಷ್ಮ ವಿಷಯಗಳನ್ನು ಬಹಿರಂಗಪಡಿಸಲಾಗದು ಎಂದು [] ಹೇಳಿತು. ನ್ಯಾಯಾಧೀಶರು ತಮ್ಮ ಜಂಟಿ ತೀರ್ಪುಗಳನ್ನು ಇಲ್ಲವೆ ತಮ್ಮ ಪ್ರತ್ಯೇಕ ಅಭಿಪ್ರಾಯ ಮಂಡಿಸಬಹುದು. ನಿರ್ಧಾರಗಳು ಮತ್ತು ಸಲಹಾ ಅಭಿಪ್ರಾಯಗಳು ಅದರ ಬಹುಮತದ ಮೇಲೆ ಅವಲಂಬಿಸಿವೆ.ಒಂದು ಸಮ-ಸಮ ಮತಾಭಿಪ್ರಾಯ ಬಂದರೆ ಆಗ ಅಧ್ಯಕ್ಷರ ಮತವು ನಿರ್ಧಾರಕ [] ಅಂಶವಾಗುತ್ತದೆ. ನ್ಯಾಯಾಧೀಶರು ಪ್ರತ್ಯೇಕ ಒಮ್ಮತದ ಅಭಿಪ್ರಾಯಗಳ ಸೂಚಿಸಬಹುದು.

ವಿಶೇಷ ಸಂದರ್ಭದ ತಾತ್ಕಾಲಿಕ ನ್ಯಾಯಾಧೀಶರು

[ಬದಲಾಯಿಸಿ]

ಕಾನೂನಿನ ಅಧಿನಿಯಮದ 31 ನೆಯ ವಿಧಿ ಪ್ರಕಾರ ವಿಶೇಷ ಪ್ರಕರಣದಲ್ಲಿನ ತಾತ್ಕಾಲಿಕ ನ್ಯಾಯಾಧೀಶರು ತ್ವರಿತ ಇತ್ಯರ್ಥಕ್ಕೆ ಕಾದಿರುವ ಕಲಹದ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ತಾವೇ ಹಾಜರಾಗಬಹುದು. ಈ ಪದ್ದತಿಯಲ್ಲಿ ವ್ಯಾಜ್ಯದವರು ತಮಗೆ ಬೇಕಾದ ನ್ಯಾಯಾಧೀಶರನ್ನು ನಾಮಸೂಚಕ ಮಾಡಬಹುದು. ಇದರಿಂದಾಗಿ ಒಂದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಹದಿನೇಳು ನ್ಯಾಯಾಧೀಶರು ಹಾಜರಿರಬಹುದಾಗಿದೆ. ಈ ಪದ್ದತಿಯನ್ನು ಸ್ಥಳೀಯ ನ್ಯಾಯಾಲಯಗಳಿಗೆ ಹೋಲಿಸಿದರೆ ವಿಚಿತ್ರ ಎನಿಸಬಹುದು.ಇದರ ಉದ್ದೇಶವೆಂದರೆ ನ್ಯಾಯಾಲಯಕ್ಕೆ ತನ್ನೆಲ್ಲ ಪ್ರಕರಣಗಳನ್ನು ದಾಖಲಿಸಬಹುದು. ಉದಾಹರಣೆಗೆ ಒಂದು ರಾಜ್ಯ ಅಥವಾ ದೇಶವು ತನ್ನ ಪ್ರಕರಣಗಳ ಇನ್ನಷ್ಟು ಸ್ಪಷ್ಟಗೊಳಿಸಲು ಅಲ್ಲಿನ ಪ್ರಾದೇಶಿಕ ವಿವರ ತಿಳಿದಿರುವ ನ್ಯಾಯಾಂಗದ ಅಧಿಕಾರಿಯನ್ನು ಈ ಪ್ರಕರಣಗಳಲ್ಲಿ ಭಾಗವಹಿಸುವಂತೆ ಸೂಚಿಸಬಹುದು.ಆಯಾ ರಾಜ್ಯಗಳು ಹೆಚ್ಚು ಮನದಟ್ಟು ಮಾಡುವ ಕ್ರಮಕ್ಕೆ ಮುಂದಾಗಲು ಅದು ನ್ಯಾಯಾಲಯದ ಅಧಿಕಾರಿ ವ್ಯಾಪ್ತಿಗೆ ಪೂರಕವಾದ ವಿವರ ಒದಗಿಸಬೇಕಾಗುತ್ತದೆ. ಈ ವಿಧಾನವು ನ್ಯಾಯಾಂಗ ವಿಭಾಗದ ಚತುವಟಿಕೆಗಳಿಗೆ ಅಷ್ಟಾಗಿ ಹೊಂದಾಣಿಕೆಯಾಗದಿದ್ದರೂ,ಇದು ವಾಸ್ತವದಲ್ಲಿ ಕೊಂಚ ವ್ಯತಿರಿಕ್ತ ಪರಿಣಾಮ ಬೀರಬಹುದು. ತಾತ್ಕಾಲಿಕ ವಿಶೇಷ ಪ್ರಕರಣದಲ್ಲಿನ ನ್ಯಾಯಾಧೀಶರು(ಯಾವಾಗಲೂ ಅಲ್ಲ) ತಮ್ಮನ್ನು ನೇಮಕ ಮಾಡಿದ ಆ ದೇಶದ ಪರವಾಗಿ ಮತ ಚಲಾಯಿಸುತ್ತಾರೆ,ಹೀಗಾಗಿ ಇನ್ನುಳಿದ ವಿಷಯಗಳು ಇಲ್ಲಿ ಗೌಣವಾಗಿರುತ್ತದೆ.

ಚೇಂಬರ್ ಗಳು (ಪೀಠಗಳು)

[ಬದಲಾಯಿಸಿ]

ಸಾಮಾನ್ಯವಾಗಿ ನ್ಯಾಯಾಲಯವು ಪೂರ್ಣ ಪೀಠದ ಮೂಲಕ ಪ್ರಕರಣದ ಇತ್ಯರ್ಥಕ್ಕೆ ಮುಂದಾಗುತ್ತದೆ.ಆದರೆ ಕಳೆದ ಹದಿನೈದು ವರ್ಷಗಳಿಂದ ಅದು ಆಯಾ ಸಂದರ್ಭಗಳಲ್ಲಿ ಚೇಂಬರ್ ನಂತೆ ಕುಳಿತು ಚರ್ಚಿಸುತ್ತದೆ. ಅಧಿನಿಯಮ 26-29 ರಲ್ಲಿ ನ್ಯಾಯಾಲಯವು 3 ಅಥವಾ 5 ನ್ಯಾಯಾಧೀಶರಿರುವ ಸಣ್ಣ ಸಣ್ಣ ಚೇಂಬರ್ ಗಳ ರಚನೆಗೆ ಅವಕಾಶ ನೀಡುತ್ತದೆ. ಅಧಿನಿಯಮ 26 ರ ಪ್ರಕಾರ ಎರಡು ಪ್ರಕಾರದ ಚೇಂಬರ್ ಗಳನ್ನು ಕಾಣಬಹುದು:ಮೊದಲನೆಯದಾಗಿ,ವಿಶೇಷ ವರ್ಗೀಕೃತ ಪ್ರಕರಣಗಳಿಗಾಗಿರುವ ಚೇಂಬರ್ಸ್ ಅಲ್ಲದೇ ನಿರ್ಧಿಷ್ಟ ಕಲಹಗಳ ಬಗ್ಗೆ ವಿಚಾರಣೆ ನಡೆಸಲು ತಾತ್ಕಾಲಿಕ ಚೇಂಬರ್ ಗಳ ರಚನೆಯಾಗುತ್ತದೆ. ಅದೇ 1993 ರಲ್ಲಿ ಅಧಿನಯಮ 26(1) ರ ಪ್ರಕಾರ ICJ ನ ಶಾಸನ ಬದ್ದತೆಯ ಚೇಂಬರ್ ನ್ನು ಸ್ಥಾಪಿಸಲಾಯಿತು.ಇದು ವಿಶೇಷವಾಗಿ ಪರಿಸರೀಯ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಲಾಯಿತು.(ಈ ಚೇಂಬರ್ ನ್ನು ಇನ್ನೂವರೆಗೂ ಬಳಸಿಲ್ಲ) ತಾತ್ಕಾಲಿಕ ವಿಶೇಷ ಪ್ರಕರಣಗಳ ಚೇಂಬರ್ ಗಳು ನಿರಂತರವಾಗಿ ತಮ್ಮ ಸಭೆ-ಚರ್ಚೆಗಳ ನಡೆಸುತ್ತವೆ. ಉದಾಹರಣೆಗೆ ಈ ಚೇಂಬರ್ ಗಳು ಗಲ್ಸ್ ಆಫ್ ಮೈನೆ ಪ್ರಕರಣ (USA v ಕೆನಡಾ) ಮೊಕದ್ದಮೆಗಳ ವಿಚಾರಣೆ []</ref> ನಡೆಸುತ್ತಿದೆ. ಈ ಪ್ರಕರಣದಲ್ಲಿನ ಕಕ್ಷಿದಾರರಿಗೆ ನ್ಯಾಯಾಲಯ ನೇಮಿಸಿದ ನ್ಯಾಯಾಧೀಶರು ಸಮ್ಮತವಾಗದಿದ್ದರೆ ಅವರು ತಮ್ಮ ಪ್ರಕರಣ ವಾಪಸು ಪಡೆಯುವುದಾಗಿ ಹೇಳಿದರು.ಈ ಚೇಂಬರ್ ನ ವಿಚಾರಣೆಯು ಸಂಬಂಧಿಸಿದವರ ಸಮ್ಮತಿಯನ್ನೂ ಪಾಲಿಸಬೇಕಾಗುತ್ತದೆ. ಚೇಂಬರ್ ಗಳ ತೀರ್ಪುಗಳು ಪೂರ್ಣ ಪ್ರಮಾಣದ ಬೆಂಚುಗಳ ನೀಡುವ ತೀರ್ಪುಗಳಿಗಿಂತ ಕಡಿಮೆ ಮಟ್ಟದ ಅಧಿಕಾರ ಹೊಂದಿರುತ್ತವೆ.ಅದಲ್ಲದೇ ಸಾರ್ವತ್ರಿಕ ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಸಂಸ್ಕೃತಿ ಮತ್ತು ಕಾನೂನಿನ ದೃಷ್ಟಿಕೋನದ ಕೊರತೆಯೂ ಇದರಲ್ಲಿ ಕಾಣಬರುತ್ತದೆ. ಇನ್ನೊಂದೆಡೆ ಈ ಚೇಂಬರ್ ಗಳ ಉಪಯೋಗವು ನ್ಯಾಯಾಲಯದ ಕಾರ್ಯತತ್ಪರತೆಯನ್ನು ಉತ್ತೇಜಿಸುತ್ತವೆ,ಇದರಿಂದ ಅಂತಾರಾಷ್ಟ್ರೀಯ ವ್ಯಾಜ್ಯದ ನಿರ್ಣಯಗಳ ಅರ್ಥವ್ಯಾಪ್ತಿಗೆ [] ಒಳಪಡುತ್ತವೆ.

ಸದ್ಯದ ಒಟ್ಟು ರಚನಾಕ್ರಮ

[ಬದಲಾಯಿಸಿ]

ಇತ್ತೀಚಿನ 2010 ರ ಜೂನ್ ತಿಂಗಳ ವರೆಗಿನ ನ್ಯಾಯಾಲಯದ ರಚನೆಯು:

ಹೆಸರು ರಾಷ್ಟ್ರ ಸ್ಥಾನಮಾನ ಚುನಾಯಿತ ಅವಧಿ ಮುಕ್ತಾಯ
ಹಿಸಾಶಿ ಒವಡಾ [64] ಜಪಾನ್‌ ಅಧ್ಯಕ್ಷ/ರಾಷ್ಟ್ರಪತಿ 2003 2012
ಪೀಟರ್ ಟೊಮ್ಕಾ [103] ಸ್ಲೊವೇಕಿಯಾ ಉಪ ರಾಷ್ಟ್ರಪತಿ/ಉಪಾಧ್ಯಕ್ಷರು 2003 2012
ಅಬ್ದುಲ್ ಜಿ. ಕೊರೊಮಾ ಸಿಯೆರ್ರಾ ಲಿಯೋನ್ ಸಿಯೆರಾ ಲಿಯೊನೆ ಸದಸ್ಯರು 1994, 2003 2012
ಔನ್ ಶೌಕತ್ ಅಲ್-ಖಸಾವೆನ್ [41] ಜೋರ್ಡಾನ್ ಸದಸ್ಯರು 2000, 2009 2018
ಥಾಮಸ್ ಬರ್ಗೆಂತಾಲ್ ಅಮೇರಿಕ ಸಂಯುಕ್ತ ಸಂಸ್ಥಾನ ಯುನೈಟೆಡ್ ಸ್ಟೇಟ್ಸ್ ಸದಸ್ಯರು 2000, 2006 2015
ಬ್ರುನೊ ಸಿಮ್ಮಾ [106] ಜರ್ಮನಿ ಸದಸ್ಯರು 2003 2012
ರೊನ್ನಿ ಅಬ್ರಾಮ್ [88] ಫ್ರಾನ್ಸ್‌ ಸದಸ್ಯರು 2005, 2009 2018
Sir ಕೆನ್ನೆತ್ ಕೀಥ್ [100] ನ್ಯೂಜಿಲೆಂಡ್‌ ಸದಸ್ಯರು 2006 2015
ಬೆರ್ನಾರ್ಡೊ ಸೆಪುಲ್ವೆದಾ ಆಮೊರ್ [98] ಮೆಕ್ಸಿಕೊ ಸದಸ್ಯರು 2006 2015
ಮೊಹ್ಮದ್ ಬೆನ್ನೌನಾ ಮೊರಾಕೊ ಮೊರ್ರೊಕ್ಕೊ ಸದಸ್ಯರು 2006 2015
ಲೆಒನಿಡ್ ಸ್ಕೊಟ್ನಿಕೊಯಿ [49] ರಷ್ಯಾ ಸದಸ್ಯರು 2006 2015
ಅಂಟೊನಿಯಾ ಆಗಸ್ಟೊ ಟ್ರಿಂಡೇಡ್ [75] ಬ್ರೆಜಿಲ್‌ ಸದಸ್ಯರು 2009 2018
ಅಬ್ದುಲ್ ಕಾವಿ ಯುಸುಫ್ ಸೊಮಾಲಿಯ ಸೊಮಾಲಿಯಾ ಸದಸ್ಯರು 2009 2018
ಸರ್ ಕ್ರಿಸ್ಟೊಫರ್ ಜಾನ್ ಗ್ರೀನ್ ವುಡ್ [116] ಯುನೈಟೆಡ್‌ ಕಿಂಗ್‌ಡಮ್‌ ಸದಸ್ಯರು 2009 2018
ಕ್ಸು ಹಂಕಿನ್ {55} ಚೈನಾದ ಜನರ ಗಣತಂತ್ರ** ಸದಸ್ಯರು 2010 2012

ಕಳೆದ 2008 ರ ನವೆಂಬರ್ 6 ರಂದು ನಡೆದ ಕೊನೆ ಚುನಾವಣೆ ಫಲಿತಾಂಶಗಳು:

  • ಮರುಚುನಾಯಿತರಾದವರು, ಫ್ರಾನ್ಸ್ನ ರೊನ್ನಿ ಅಬ್ಱಾಮ್ ಮತ್ತು ಜೊರ್ಡಾನ್ನ ಔನ್ ಶೌಕತ್ ಅಲ್-ಖಸಾವ್ನೆಹ್ (ಕಳೆದ 2009ರ ಫೆಬ್ರವರಿ 5ಕ್ಕೆ ಅವಧಿ ಪೂರ್ಣ), ಆಗ UKನ ಕ್ರಿಸ್ಟೊಫರ್ ಗ್ರೀನ್ ವುಡ್ , ಬ್ರ್ಯಾಜಿಲ್ನ ಅಂಟೊನಿಯೊ ಆಗಸ್ಟೊ ಕ್ಯಾಂಕೆಡೊ ಟ್ಯ್ರಿಂಡೇಡ್ ಮತ್ತುಸೊಮಾಲಿಯಾದ ಅಬ್ದುಲ್ ಕಾವಿ ಯುಸುಫ್ (ಕಳೆದ 2009ರ ಫೆಬ್ರವರಿ 6 ರಿಂದ ಅವಧಿ ಆರಂಭ) ಇವರೆಲ್ಲಾ ಹೊಸದಾಗಿ ಚುನಾಯಿತರಾದವರು.
  • ಘೋಷಿತ ಅಭ್ಯರ್ಥಿಗಳಾದ ಸಾಯೆಮನ್ ಬುಲಾ-ಬುಲಾ (ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊ ), ಮಿರಿಯಮ್ ಡಿಫೆನ್ಸರ್-ಸ್ಯಾಂಟಿಗೊ (ಫಿಲಿಪೈನ್ಸ್) ಮತ್ತು ಮೌರೀಸ್ ಕಾಮ್ಟೊ (ಕ್ಯಾಮ್ರೊನ್) lಇವರೆಲ್ಲಾ ಕೊನೆ ಮತದಾನದಲ್ಲಿ ಪರಾಭವಗೊಂಡರು. ಹೊಸದಾಗಿ 3 ನ್ಯಾಯಾಧೀಶರ ಬದಲಾಗಿ UKನ ರೊಸಾಲಿ ಹಿಗ್ಗಿನ್ಸ್ (ICJ ಅಧ್ಯಕ್ಷ), ಗೊಂಜಾಲೊ ಪ್ಯಾರಾ ಅರಂಗುರೆನ್ ವೆನೆಜುಲಾ;ಮತ್ತುಮಡಗಾಸ್ಕರ್ ನ ರೇಮಂಡ್ ರಂಜೇವಾ (ಕಳೆದ 2009ರ ಫೆಬ್ರವರಿ 5 ರಲ್ಲಿ ಎಲ್ಲಾ ಅವಧಿಗಳು ಮುಗಿದವು.)[][]

ನ್ಯಾಯಾಧಿಕರಣದ ಕಾರ್ಯವ್ಯಾಪ್ತಿ

[ಬದಲಾಯಿಸಿ]

UN ಚಾರ್ಟರ್ ನ ಅಧಿನಿಯಮ 93 ರ ಪ್ರಕಾರ ಎಲ್ಲಾ 192 UN (ಸಂಯುಕ್ತ ರಾಷ್ಟ್ರ ಸಂಸ್ಥೆ)ಸದಸ್ಯರು ನ್ಯಾಯಾಲಯದ ಶಾಸನಬದ್ದ ನಿಯಮಗಳಿಗೆ ನೈಸರ್ಗಿಕವಾಗಿ ಪಕ್ಷಗಾರರಾಗಿರುತ್ತಾರೆ.ಅವರಿಗೆ ಸದಸ್ಯತ್ವದಿಂದಲೇ ಈ ಅಧಿಕಾರ [] ಪ್ರಾಪ್ತವಾಗಿರುತ್ತದೆ. ಆದರೆ UN ನ ಸದಸ್ಯರಲ್ಲದವರೂ ನ್ಯಾಯಾಲಯದ ಶಾಸನ ನಿಯಮ 93(2)ಪ್ರಕಾರ ಅದಕ್ಕೆ ಪಕ್ಷದಾರರಾಗಿರುತ್ತಾರೆ ಉದಾಹರಣೆಗೆ ಸ್ವಿಜರ್ ಲ್ಯಾಂಡ್ UN ನ ಸದಸ್ಯ ರಾಷ್ಟ್ರವಾಗುವ ಮುಂಚೆ ಈ ವಿಧಾನ ಬಳಸಿ 1948 ರಲ್ಲಿ ಓರ್ವ ಪಕ್ಷಗಾರವಾಗಿತ್ತು. ಅದಲ್ಲದೇ ನೌರು ಕೂಡಾ 1988 ರಲ್ಲಿ ಪಕ್ಷಗಾರನಾಗಿತ್ತು. ಒಮ್ಮೆ ದೇಶವು ನ್ಯಾಯಾಲಯದ ಅಧಿನಿಯಮಗಳಡಿ ಪಕ್ಷಗಾರನಾದರೆ ಅದು ನ್ಯಾಯಾಲಯದ ಮುಂದಿರುವ ಪ್ರಕರಣಗಳ ವಿಚಾರಣೆಯಲ್ಲಿ ಭಾಗವಹಿಸಬಹುದಾಗಿದೆ. ಆದರೆ ಈ ಪಕ್ಷಗಾರರಿಗೆ ನ್ಯಾಯಾಲಯವು ವ್ಯಾಜ್ಯ ಪರಿಹಾರಕ್ಕಾಗಿ ಕ್ಷೇತ್ರವ್ಯಾಪ್ತಿಯನ್ನು ನಿಗದಿ ಮಾಡುವುದಿಲ್ಲ.ಇದು ಸ್ವಯಂಆಗಿ ಇದಕ್ಕೆ ಅಧಿಕಾರ ಪ್ರಪ್ತಿಯಾಗುವುದಿಲ್ಲ. ಇಲ್ಲಿ ನ್ಯಾಯಾಲಯದ ಕಾರ್ಯವ್ಯಾಪ್ತಿ ಕ್ಷೇತ್ರವು ICJ ನಲ್ಲಿ ಎರಡು ಪ್ರಕಾರದ್ದಿರುತ್ತದೆ:ಕಲಹದ ಕುರಿತ ವಿಷಯಗಳು ಮತ್ತು ಸಲಹಾ ಅಭಿಪ್ರಾಯಗಳು.

ಕಲಹಕ್ಕೆ ಸಂಬಂಧಿಸಿದ ವಿವಾದಿತ ವಿಷಯಗಳು

[ಬದಲಾಯಿಸಿ]

ಈ ಕಲಹಕ್ಕೆ ಸಂಬಂಧಿಸಿದ ಪ್ರಕರಣಗಳು (ಕೊಂಚ ತೊಂದರೆಯುಳ್ಳ ವ್ಯವಹಾರಗಳ ವ್ಯಾಜ್ಯಗಳ ಬಗೆಹರಿಸುಯುವಿಕೆ)ಇಲ್ಲಿ ಆಯಾ ರಾಜ್ಯಗಳ ನಡುವಿನ ವಿವಾದಗಳ ಬಗ್ಗೆ ತಮ್ಮ ವಿಷಯಗಳ ಅರ್ಜಿ ಸಲ್ಲಿಸಲು ICJ ಅನುಮತಿ ನೀಡುತ್ತದೆ. ಕೇವಲ ರಾಜ್ಯ ಗಳು ಮಾತ್ರ ಇಂತಹ ಕಲಹಗಳ ಬಗೆಹರಿಸುವ ಪ್ರಕರಣಗಳಲ್ಲಿ ಪಕ್ಷಗಾರರಾಗಿರುತ್ತವೆ. ವ್ಯಕ್ತಿಗಳು, ಕಾರ್ಪೊರೇಶನ್ಗಳು, ಫೆಡರಲ್ ಸ್ಟೇಟ್ ನ ಭಾಗಗಳ ಪ್ರದೇಶಗಳು, NGOಗಳು,(ಸರ್ಕಾರೇತರ ಸಂಸ್ಥೆಗಳು) UN ಅಂಗಸಂಸ್ಥೆಗಳು ಮತ್ತು ಸ್ವಯಂ-ನಿರ್ಧಾರದಸಮೂಹಗಳನ್ನು ಇಂತಹ ಪ್ರಕರಣಗಳಲ್ಲಿನ ನೇರ ಭಾಗವಹಿಸುವಿಕೆಯಿಂದ ನಿಷೇಧಿಸಲಾಗಿದೆ.ಆದರೆ ನ್ಯಾಯಾಲಯವು ತನಗೆ ಅಗತ್ಯವಿರುವ ಸಾರ್ವಜನಿಕ ಮಾಹಿತಿಯನ್ನುಅಂತಾರಾಷ್ಟ್ರೀಯ ಸಂಘಸಂಸ್ಥೆಗಳ ಮೂಲಕ ಪಡೆಯಬಹುದಾಗಿದೆ. ಆದರೆ ಒಂದು ರಾಜ್ಯವು ಇನ್ನೊಂದು ರಾಜ್ಯದ ಮೇಲೆ ದೂರು ತಂದಾಗ ಆ ಪ್ರಕರಣ ಇತ್ಯರ್ಥಗೊಳಿಸುವಾಗ ರಾಜ್ಯವಲ್ಲದವರ ಆಸಕ್ತಿಯನ್ನು ಬದಿಗಿರಿಸದೇ ನ್ಯಾಯಾಲಯ ವಿಚಾರಣೆ ನಡೆಸುತ್ತದೆ. ಉದಾಹರಣೆಗೆ ಒಂದು ರಾಜ್ಯವು "ರಾಜತಾಂತ್ರಿಕ ರಕ್ಷಣೆ"ಯ ಪ್ರಕರಣವನ್ನು ತನ್ನ ರಾಷ್ಟ್ರೀಯರು ಅಥವಾ ಕಾರ್ಪೊರೇಶನ್ ಗಳ ಪರವಾಗಿ ತಂದಾಗ ಈ ಸಂದರ್ಭ [೧೦] ಉದ್ಭವಿಸುತ್ತದೆ. ಕಲಹದ ವ್ಯಾಜ್ಯ-ವಿವಾದಗಳ ಬಗೆಹರಿಸುವಾಗ ನ್ಯಾಯಾಲಯದ ಕಾರ್ಯಚಟುವಟಿಕೆ ವ್ಯಾಪ್ತಿಯು ಬಹಳಷ್ಟು ಸಲ ಪ್ರಶ್ನೆಗೀಡಾಗುತ್ತದೆ. (ಕೆಳಗಿನ ನಿರ್ವಹಣಾ ವಿಧಾನ ನೋಡಿ.) ಇದರಲ್ಲಿ ಒಂದು ಪ್ರಮುಖ ನಿಯಮವೆಂದರೆ ICJ ಯು ಒಮ್ಮತದ ಆಧಾರದ ಮೇರೆಗೆ ತನ್ನ ಕಾರ್ಯವ್ಯಾಪ್ತಿ ಗುರುತಿಸಿಕೊಳ್ಳುತ್ತದೆ. ಇದರ ಬಗ್ಗೆ ಅಧಿನಿಯಮ 36 ರಲ್ಲಿ ನಾಲ್ಕು ಮೂಲಾಧಾರಗಳ ನೀಡಿ ನ್ಯಾಯಾಲಯದ ಕಾರ್ಯನಿರ್ವಹಣೆಯ ವ್ಯಾಪ್ತಿ ಪ್ರದೇಶದ ಬಗ್ಗೆ ವಿವರ ನೀಡುತ್ತದೆ.

  • ಮೊದಲು, 36(1) ಅಧಿನಿಯಮವು ಪಕ್ಷಗಾರರು ತಮ್ಮ ಪ್ರಕರಣಗಳನ್ನು ನ್ಯಾಯಾಲಯಕ್ಕೆ ತರಲು ಸೂಚಿಸುತ್ತದೆ.(ಕಾರ್ಯವ್ಯಾಪ್ತಿ ಪ್ರದೇಶವು "ವಿಶೇಷ ಒಪ್ಪಂದ" ಅಥವಾ"ರಾಜಿ ") ವನ್ನು ಅವಲಂಬಿಸಿದೆ. ಈ ವಿಧಾನವು ಸಾಮಾನ್ಯವಾಗಿ ವಿಷಯದ ಸುಸ್ಪಷ್ಟತೆ ಅವಲಂಬಿಸಿದೆ.ಇಲ್ಲಿ ನಿಜವಾದ ಕಾರ್ಯವ್ಯಾಪ್ತಿಯ ಪ್ರದೇಶದ ಅಂಶ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಇದು ಬಹುಶಃ ನ್ಯಾಯಾಲಯದ ನ್ಯಾಯವ್ಯಾಪ್ತಿ ಕಂಡು ಹಿಡಿಯಲು ಬಹಳಷ್ಟು ಸಮರ್ಥ ಮೂಲಾಧಾರವೆನಿಸಿದೆ.ಈ ವ್ಯಾಜ್ಯಗಳ ವಿವಾದದಲ್ಲಿ ಸಿಲುಕಿರುವ ರಾಜ್ಯಗಳೋ ತಮ್ಮ ಕಲಹ ಬೇಗ ಮುಗಿದರೆ ಸಾಕೆಂಬ ಚಿಂತೆಯಲ್ಲಿದ್ದಾಗ ನ್ಯಾಯಾಲಯದ ತೀರ್ಪನ್ನೇ ಅವು ನೆಚ್ಚ್ಕೊಂಡಿರುತ್ತವೆ.
  • ಎರಡನೆಯದಾಗಿ 36(1) ಅಧಿನಿಯಮ ಕೂಡಾ ನ್ಯಾಯಾಲಯದ ಕಾನೂನು ವ್ಯಾಪ್ತಿಯನ್ನು"ವಿಶೇಷವಾಗಿ ಒಡಂಬಡಿಕೆಗಳು ಮತ್ತು ಸಮಾವೇಶದ ಕುರಿತ ವಿವಾದದ ಒತ್ತಡ"ಗಳಿಗೆ ಅಂಟಿಕೊಂಡಿರುತ್ತವೆ. ಬಹಳಷ್ಟು ಆಧುನಿಕ ಒಡಂಬಡಿಕೆಗಳು ರಾಜಿ ಸೂತ್ರದ ನಿಯಮಾವಳಿ ಹೊಂದಿರುತ್ತವೆ.ಇದರಿಂದ ICJ ಗೆ ಇಂತಹ ವ್ಯಾಜ್ಯಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು [೧೧] ಸುಲಭವಾಗುತ್ತದೆ. ರಾಜಿ ಸೂತ್ರದ ಮೇಲೆ ಅವಲಂಬಿತ ಪ್ರಕರಣಗಳು ವಿಶೇಷ ಒಪ್ಪಂದದ ಪ್ರಕರಣಗಳಷ್ಟು ಪರಿಣಾಮಕಾರಿಯಾಗಿರಲ್ಲ.ಹೀಗಾಗಿ ಕೆಲವು ರಾಜ್ಯಗಳು ಇಂತಹ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯವನ್ನು ಅವಲಂಬಿಸದೇ ಅದರ ತೀರ್ಪನ್ನೂ ಕೂಡ ತಿರಸ್ಕರಿಸಬಹುದಾಗಿದೆ. ಉದಾಹರಣೆಗೆ ಇರಾನ್ ನ ಒತ್ತೆಯಾಳು ಬಿಕ್ಕಟ್ಟಿನ ಪ್ರಕರಣದಲ್ಲಿ ಇರಾನ್ ,US ತಂದ ವೆಯೆನ್ನಾ ಕನ್ವೆನ್ಶನ್ ಆನ್ ಡಿಪ್ಲೊಮ್ಯಾಟಿಕ್ ರಿಲೇಶನ್ಸ್ ನ ಅಡಿ ರಾಜಿ ಸೂತ್ರದ ನಿಯಮವನ್ನು ನಿರಾಕರಿಸಿತು.ಅಲ್ಲದೇ ಇದು ನ್ಯಾಯಾಲಯದ ತೀರ್ಪನ್ನು ಒಪ್ಪಲು [೧೨] ಸಿದ್ದವಾಗಲಿಲ್ಲ. ಹೀಗೆ 1970 ರಿಂದ ಇಂತಹ ನಿಯಮದ ಉಪಯೋಗವನ್ನು ನಿರಾಕರಿಸಲಾಗುತ್ತದೆ. ಹಲವಾರು ಆಧುನಿಕ ಒಡಂಬಡಿಕೆಗಳು ತಮ್ಮದೇ ಆದ ಪರಿಹಾರ ಮಾರ್ಗಗಳ ಹುಡುಕಿ ಅದನ್ನು [೧೩] ವಾದ-ವಿವಾದದ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿವೆ.
  • ಮೂರನೆಯ ನಿಯಮ 36(2) ರಾಜ್ಯಗಳಿಗೆ ಅವುಗಳದೇ ಆದ ಆಯ್ಕೆಯ ಹಕ್ಕನ್ನು ಬಿಟ್ಟು ನ್ಯಾಯಾಲಯದ ಕಾರ್ಯವ್ಯಾಪ್ತಿಗನುಸಾರ ಪರಿಹಾರ ಕಂಡುಕೊಳ್ಳಲು ಸೂಚಿಸುತ್ತದೆ. ಆದರೆ ಈ "ಕಡ್ಡಾಯ"ಎಂಬ ನಿಯಮವು 36(2)ಅಧಿನಿಯಮವನ್ನು ಒಂದೊಂದು ಬಾರಿ ಕಾರ್ಯಕ್ಷೇತ್ರದ ವ್ಯಾಪ್ತಿ ಬಗ್ಗೆ ತಪ್ಪಾಗಿ ಅರ್ಥೈಸಲಾಗುತ್ತದೆ.ಯಾಕೆಂದರೆ ಅದರ ಘೋಷಣೆಗಳು ಆಯಾ ರಾಜ್ಯಗಳು ಸ್ವಯಂ ಪ್ರೇರಣೆಯಿಂದ ಒಪ್ಪಲ್ಪಡುತ್ತವೆ. ಇನ್ನು ಹೆಚ್ಚೆಂದರೆ ಹಲವಾರು ಘೋಷಣೆಗಳು ಕೆಲವು ನಿರ್ಭಂದಗಳನ್ನು ಹೊಂದಿವೆ,ಅಂದರೆ ಕೆಲವನ್ನು ಕಾರ್ಯವ್ಯಾಪ್ತಿಯಿಂದ ಹೊರಪಡಿಸುವುದು,ನಿಶ್ಚಿತ ವ್ಯಾಜ್ಯಗಳು ("ರೇಶನೆ ಮಟ್ರಿಯಾ ")[೧೪] ಇತ್ಯಾದಿ. ಪರಸ್ಪರ ಪ್ರತಿಕ್ರಿಯಾತ್ಮಕ ತತ್ವಗಳೂ ಸಹ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ಮಿತಿಗೊಳಪಡಿಸುತ್ತವೆ. ಸುಮಾರು 2006 ರ ಅಕ್ಟೋಬರ್ ನಲ್ಲಿ ಅರವತ್ತೇಳು ರಾಜ್ಯಗಳು ಘೋಷಗಳ [೧೫] ಜಾರಿಯಲ್ಲಿವೆ. ಭದ್ರತಾ ಮಂಡಳಿಯ ಕಾಯಂ ಸದಸ್ಯರ ಪೈಕಿ ಯುನೈಟೆಡ್ ಕಿಂಗ್ಡಮ್ ಮಾತ್ರ ಘೋಷಣೆ ಹೊಂದಿದೆ. ನ್ಯಾಯಾಲಯದ ಆರಂಭಿಕ ವರ್ಷಗಳಲ್ಲಿಬಹಳಷ್ಟು ಕೈಗಾರಿಕಾ ಕ್ರಾಂತಿಯ ದೇಶಗಳು ತಮ್ಮ ನೊಂದಣಿ ಘೋಷಣೆ ಮಾಡಿಕೊಂಡಿವೆ. ನಿಕಾರೊಗಾವಾ ಪ್ರಕರಣ ದ ನಂತರ ಅಭಿವೃದ್ದಿ ಹೊಂದುತ್ತಿರುವ ದೇಶಗಳಿಂದ ಘೋಷಣೆಗಳ ಸಲ್ಲಿಕೆ ಹೆಚ್ಚಳವಾಗಿದೆಯಲ್ಲದೇ 1980 ರಿಂದ ಈ ನ್ಯಾಯಾಲಯದ ಬಗ್ಗೆ ಹೆಚ್ಚಿನ ವಿಶ್ವಾಸ ಬೆಳೆಯುತ್ತಿದೆ. ಕೈಗಾರಿಕಾ ಅಭಿವೃದ್ಧಿ ಹೊಂದಿದ ದೇಶಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಘೋಷಣೆಗಳ ಬದಲಾವಣೆ ಅಥವಾ ಅದರ ನಿಯಮಾವಳಿಗಳ ಅದಲು-ಬದಲು ಮಾಡುತ್ತಿವೆ. ಉದಾಹರಣೆಗಾಗಿ USA ಈ ಹಿಂದೆ ತಿಳಿಸಿದಂತೆ ಮತ್ತು ಆಸ್ಟ್ರೇಲಿಯಾ ತನ್ನ ಮೇರಿ ಟೈಮ್ ಗಡಿ ವಿಚಾರದಲ್ಲಿ 2002 ರಲ್ಲಿ ತನ್ನ ಘೋಷಣೆಗಳ ಪುನರ್ ಪರಿಷ್ಕರಿಸಿತು.(ಇದು ಬಹುತೇಕ ಈಸ್ಟ್ ಟಿಮೊರ್ ನ ಸವಾಲನ್ನೆದುರಿಸಲು ಅಂದರೆ ಅವರು ಎರಡು ತಿಂಗಳಿನ ನಂತರ ಸ್ವಾತಂತ್ರ್ಯ [೧೬] ಪಡೆದುಕೊಂಡಿದೆ.
  • ಅಂತಿಮವಾಗಿ 36(5) ಅಧಿನಿಯಮವು ಪರ್ಮನಂಟ್ ಕೋರ್ಟ್ ಆಫ್ ಇಂಟರ್ ನ್ಯಾಶನಲ್ ಜಸ್ಟಿಸ್ (ಅಂತಾರಾಷ್ಟ್ರೀಯ ಕಾಯಂ ನ್ಯಾಯಾಧಿಕರಣದ ನ್ಯಾಯಾಲಯ)ದ ಶಾಸನಬದ್ದ ನಿಯಮಗಳಡಿ ತನ್ನ ಘೋಷಣೆಯನ್ನು ಪುನರ್ ಪರಿಶೀಲಿಸಿತು. ಅದೇ ನಿಯಮಾವಳಿ 37 ರಡಿ ಈ ಕಾರ್ಯಕ್ಷೇತ್ರವನ್ನು ರಾಜಿ ಸೂತ್ರದ ವರ್ಗೀಕರಣದ ಒಪ್ಪಂದ ಮೇಲೆ ಅದನ್ನು ಅಂಗೀಕರಿಸಲಾಗಿದೆ.ಇದು PCIJ ಯ ಸಮ್ಮತಿ ಮೇರೆಗೆ ರೂಪಿಸಲಾಗುತ್ತದೆ.
  • ಇನ್ನು ಅಧಿಕವೆಂದರೆ ಕೋರ್ಟ್ ತನ್ನ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಒಟ್ಟಾಭಿಪ್ರಾಯ (ಫೊರಮ್ ಪ್ರೊರೊಗೊಟಮ್ )ಒಳಗೊಂಡಿದೆ. ಸ್ಪಷ್ಟವಾಗಿ ಅಧಿನಿಯಮ 36 ರಲ್ಲಿ ನ್ಯಾಯಾಂಗದ ಕಾರ್ಯಕ್ಷೇತ್ರದ ವ್ಯಾಪ್ತಿಯ ಬಗ್ಗೆ ವಿವರಿಸಲಾಗಿದ್ದು ICJ ಯ ಮಾರ್ಗಸೂಚಿಗನುಗುಣವಾಗಿ ಪ್ರತಿಕ್ರಿಯುಸುವ ರಾಜ್ಯಗಳ ಬಗ್ಗೆ ಅದರ ಸೂಕ್ತ ಅಹರತೆಯ ಮೇರೆಗೆ ನಿರ್ಧರಿಸಲಾಗುತ್ತದೆ. ಆದರೆ ಈ ರೀತಿಯ ವಿಧಾನವು ಕೊರ್ಫು ಚಾನಲ್ ಪ್ರಕರಣದಲ್ಲಿ ಟಿಪ್ಪಣಿ ಮಾಡಲಾಯಿತು.(UK ವಿರುದ್ದ ಅಲ್ಬೇನಿಯಾ)(1949)ಅದರಲ್ಲಿ ಅಲ್ಬೇನಿಯಾ ಸಲ್ಲಿಸಿದ ಪತ್ರದಲ್ಲಿICJ ಈಗಿರುವ ಕಾರ್ಯ ವ್ಯಾಪ್ತಿಯ ಕ್ಷೇತ್ರದಲ್ಲಿ ನ್ಯಾಯಾಲಯವು ತನ್ನ ತೀರ್ಪು ನೀಡಲು ಸಾಧ್ಯವಾಗುತ್ತದೆ.

ಸಲಹಾ ಅಭಿಪ್ರಾಯ

[ಬದಲಾಯಿಸಿ]
Audience of the "Accordance with International Law of the Unilateral Declaration of Independence by the Provisional Institutions of Self-Government of Kosovo"

ಸಲಹಾ ಅಭಿಪ್ರಾಯವು ನ್ಯಾಯಾಲಯದ ಕಾರ್ಯಚಟುವಟಿಗಳಲ್ಲಿ ಒಂದಾಗಿದೆ.ಇದು ವಿಶೇಷವಾಗಿ ಯುನೈಟೆಡ್ ನೇಶನ್ಸ್ ನ ಅಂಗಸಂಸ್ಥೆಗಳು ಮತ್ತು ಏಜೆನ್ಸಿಗಳಿಗೆ ಮುಕ್ತ ವಾಗಿರುತ್ತದೆ. ಮನವಿ ಸ್ವೀಕರಿಸಿದ ಮೇಲೆ ನ್ಯಾಯಾಲಯವು ಯಾವ ದೇಶ ಅಥವಾ ರಾಜ್ಯದಿಂದ ಇಲ್ಲವೆ ಸಂಘಟನೆಯಿಂದ ಉತ್ತಮ ಮಾಹಿತಿ ನೀಡುತ್ತವೆ ಎಂಬುದನ್ನು ತಿಳಿದು ಅವುಗಳು ಲಿಖಿತ ಇಲ್ಲವೆ ಹೇಳಿಕೆಗಳ ಮೂಲಕ ಒದಗಿಸಲು ಅವಕಾಶ ನೀಡುತ್ತದೆ. ಇಂತಹ ಸಲಹಾ ಅಭಿಪ್ರಾಯಗಳು UN ಏಜೆನ್ಸಿಗಳು ನ್ಯಾಯಾಲಯದ ಸಹಾಯ ಪಡೆದು ತಮ್ಮ ಕಾನೂನು ವಿಷಯಗಳ ಸಂಕೀರ್ಣತೆಯನ್ನು ಪರಿಹರಿಸಿಕೊಳ್ಳಲು ಮುಂದಾಗುತ್ತವೆ.ಆಯಾ ರಾಜ್ಯಗಳ ಕಡ್ಡಾಯದ ನಿಯಮಗಳಡಿ ಬರುವ ಇಂತಹ ವ್ಯಾಜ್ಯಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳುತ್ತವೆ . ತಾತ್ವಿಕವಾಗಿ ನ್ಯಾಯಾಲಯದ ಸಲಹಾ ಅಭಿಪ್ರಾಯಗಳು ಕೇವಲ ಸಂಪರ್ಕದ ಗುಣಲಕ್ಷಣಗಳನ್ನು ಹೊಂದಿರುತ್ತವೆ,ಅವು ಪ್ರಭಾವೀ ಮತ್ತು ವ್ಯಾಪಕವಾಗಿ ಮನ್ನಿಸಲ್ಪಡುತ್ತವೆ. ಅದರೆ ಕೆಲವು ಸಲಕರಣೆ ಅಥವಾ ಸೂತ್ರಗಳು ಇಲ್ಲವೆ ನಿಯಂತ್ರಣಗಳ ಬಗ್ಗೆ ಅದರ ಸಲಹಾ ಅಭಿಪ್ರಾಯಗಳು ಸಂಬಂಧಪಟ್ಟ ಏಜೆನ್ಸಿಗಳು ಅಥವಾ ರಾಜ್ಯಗಳಿಗೆ ಜಾರಿಯ ಕಟ್ಟಳೆಯನ್ನು ವಿಧಿಸುತ್ತವೆ.ಅವುಗಳು ನ್ಯಾಯಾಲಯದ ಕಾರ್ಯಚಟುವಟಿಕೆಯ ವ್ಯಾಪ್ತಿಯಿಂದ ಹೊರಗಿದ್ದರೂ ನ್ಯಾಯಾಲಯದ ಶಾಸನಬದ್ದ ನಿಯಮಾವಳಿಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಈ ಕಟ್ಟಳೆಗೆ ಒಪ್ಪದ ಗುಣಲಕ್ಷಣಗಳು ಅಂದರೆ ಈ ಸಲಹಾ ಅಭಿಪ್ರಾಯಗಳು ಕಾನೂನಿನ ಪರಿಣಾಮಗಳಿಲ್ಲದೇ ಇಲ್ಲ.ನ್ಯಾಯಾಲಯದ ಅಧಿಕಾರ ವ್ಯಾಪ್ತಿಯು ಅದರ ಸಂಬಂಧಿತ ವ್ಯಕ್ತಿಗಳು ನೀಡುವ ಅಭಿಪ್ರಾಯದ ಮೇಲೆ ಕೂಡ ರಾಜ್ಯಗಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬೇಕಿದೆ.ಅಂತಾರಾಷ್ಟ್ರೀಯ ಕಾನೂನಿನ ತಳಹದಿ ಮೇಲೆ ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಾಧ್ಯವಿದೆ.ಸಾರ್ವಭೌಮತ್ವದ ಅಧಿಕಾರ ಹೊಂದಿರುವ ರಾಜ್ಯಗಳ ನಡುವಿನ ಕಲಹದ ವ್ಯಾಜ್ಯಗಳಿಗೆ ನ್ಯಾಯಾಲಯ ಅಂತಾರಾಷ್ಟ್ರೀಯ ಕಾನೂನಿನನ್ವಯ ಪರಿಹಾರ ಕೊಡಿಸಿ ಅದರ ಸಮಸ್ಯೆಗೆ ಕೊನೆಹಾಡುತ್ತದೆ. ಈ ಸಲಹಾ ಅಭಿಪ್ರಾಯವು ಸಂಯುಕ್ತ ರಾಷ್ಟ್ರ ಸಂಘದ ನ್ಯಾಯಾಂಗ ವಿಭಾಗದ ಅಧಿಕೃತ ಟಿಪ್ಪಣಿ ಪಡೆದು ನ್ಯಾಯಾಲಯ ತನ್ನ ಈ ನಿಟ್ಟಿನ ಸ್ಥಾನ-ಮಾನ ಮತ್ತು ಅಧಿಕಾರ [೧೭] ಪಡೆಯುತ್ತದೆ.

ಸಲಹಾ ಅಭಿಪ್ರಾಯಗಳು ಬಹಳಷ್ಟು ಬಾರಿ ವಿವಾದಾತ್ಮಕವಾಗಿರುತ್ತವೆ.ಯಾಕೆಂದರೆ ಪ್ರಶ್ನೆ ಕೇಳಿದ ಅಥವಾ ಈ ಸಮಸ್ಯೆಯು "ಹಿಂಬಾಗಿಲು" ಪ್ರವೇಶಕ್ಕೆ ಕೂಡ ನ್ಯಾಯಾಲಯದ ಅನುಮತಿ ಬೇಕಾಗುತ್ತದೆ.ಹೀಗೆ ನ್ಯಾಯಾಲಯದ ಎದುರಿಗೆ ಇರುವ ಕಲಹದ ವಿವಾದಗಳಿಗೆ ಅದು ತನ್ನದೇ ಆದ ಕಾನೂನು ಸಲಹೆಗಳನ್ನು ನೀಡಬಹುದು. ಈ ಸಲಹಾ ಅಭಿಪ್ರಾಯಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಿಕ ಪ್ರಕರಣಗಳ ಪಟ್ಟಿಯ ಲೇಖನದಲ್ಲಿ ನೋಡಬಹುದಾಗಿದೆ. ಸದ್ಯದ ಜನಪ್ರಿಯ ಎಲ್ಲರಿಗೂ ಪರಿಚಿತ ಸಲಹಾ ಅಭಿಪ್ರಾಯವು ಅಣ್ವಸ್ತ್ರಗಳ ಪ್ರಕರಣ ದಲ್ಲಿ ಹೆಚ್ಚು ವ್ಯಾಪಕವಾಗಿದೆ.

ICJ ಮತ್ತು ಭದ್ರತಾ ಮಂಡಳಿ

[ಬದಲಾಯಿಸಿ]

ಅಧಿನಿಯಮ 94 ರ ಪ್ರಕಾರ ಎಲ್ಲಾ UN ನ ಸದಸ್ಯರು ನ್ಯಾಯಾಲಯದ ತೀರ್ಪುಗಳನ್ನು ಮಾನ್ಯ ಮಾಡುವ ಕರ್ತ್ಯವ್ಯವನ್ನು ಹೊಂದಿರುತ್ತಾರೆ. ಒಂದು ವೇಳೆ ಪಕ್ಷಗಾರರು ಇಲ್ಲವೆ ಕಕ್ಷಿದಾರರು ತೀರ್ಪನ್ನು ಮನ್ನಿಸದಿದ್ದರೆ ಇದರ ಜಾರಿಗೆ ಭದ್ರತಾ ಮಂಡಲಿಗೆ ಅಧಿಕಾರ ನೀಡಲಾಗುತ್ತದೆ. ಈ ಜಾರಿ ಪದ್ದತಿಯಲ್ಲಿ ಕೆಲವು ಸ್ಪಷ್ಟ ಸಮಸ್ಯೆಗಳಿವೆ. ಒಂದು ವೇಳೆ ತೀರ್ಪು ಕಾಯಂ ಭದ್ರತಾ ಮಂಡಳಿ ಸದಸ್ಯರ ಅಥವಾ ಅವರ ಮಿತ್ರಪಕ್ಷಗಳ ವಿರುದ್ದ ಹೊರಬಂದಾಗ ಆಗ ಈ ತೀರ್ಪಿನ ಜಾರಿಗೆ ನ್ಯಾಯಾಲಯದ ಪರಮಾಧಿಕಾರ ಕೆಲಸಕ್ಕೆ ಬರುತ್ತದೆ. ಇದು ಉದಾಹರಣೆಗೆ ನಿಕಾರಾಗುವ ಪ್ರಕರಣದ ನಂತರ ಯಾವಾಗ ನಿಕಾರಾಗುವಾವು U.S ಯಾವಾಗ ನ್ಯಾಯಾಲಯದ ತೀರ್ಪನ್ನು ಭದ್ರತಾ ಮಂಡಳಿ ಎದುರು ಪೂರ್ಣವಾಗಿ ಜಾರಿ ಮಾಡಲಿಲ್ಲವೋ ಆಗ ಇಂತಹ ಸಮಸ್ಯೆ [] ಉದ್ಭವಿಸಿತು. ಅದಲ್ಲದೇ ಭದ್ರತಾ ಮಂಡಳಿಯು ತೀರ್ಪನ್ನು ಜಾರಿ ಮಾಡಲು ನಿರಾಕರಿಸಿದರೆ ಆ ರಾಜ್ಯದ ವಿರುದ್ದ ಅದರ ಜಾರಿಗೆ ಯಾರೂ ಒತ್ತಾಯ ಮಾಡಲಾಗದು. ICJ ಮತ್ತು ಭದ್ರತಾ ಮಂಡಳಿ ನಡುವಿನ ಸಂನಬಂಧ,ಅವುಗಳ ಅಧಿಕಾರದ ಪ್ರತ್ಯೇಕತೆ ಬಗ್ಗೆ ನ್ಯಾಯಾಲಯವು 1992 ರ ಪಾನ್ ಏಮ್ ಪ್ರಕರಣದಲ್ಲಿ ಸ್ಪಷ್ಟನೆ ಕೊಟ್ಟಿತು. ನ್ಯಾಯಾಲಯವು ಲಿಬಿಯಾದ ಹಕ್ಕುಗಳ ರಕ್ಷಣೆಗೆ ಅದು ತನ್ನ ಕಾನೂನು ಸವಲತ್ತುಗಳ ಬಳಸಲು ಕೈಕಟ್ಟಿ ಹಾಕಲಾಗಿತ್ತು.ಯುನೈಟೆಡ್ ಕಿಂಗಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಹಾಕಿದ್ದ ದಿಗ್ಬಂಧನದ ಬಗ್ಗೆ ಅದು ತನ್ನ ಮನವಿಯಲ್ಲಿ ಹೇಳಿತ್ತು. ಇದರಲ್ಲಿನ ಸಮಸ್ಯೆಯೆಂದರೆ ಈ ದಿಗ್ಬಂಧನಗಳನ್ನು ಭದ್ರತಾ ಮಂಡಳಿಯೇ ಅಧಿಕಾರದ ಮೂಲಕ ಜಾರಿಗೆ ತಿಳಿಸಿತ್ತು.ಅಂದರೆ ಭದ್ರತಾ ಮಂಡಳಿಯ ಚಾಪ್ಟರ್ VII ರ ಕಾರ್ಯಚತುವಟಿಕೆಗಳು ಹಾಗು ನ್ಯಾಯಾಲಯದ ನ್ಯಾಯಿಕ ಕರ್ತವ್ಯದ ಬಗ್ಗೆ ಇಲ್ಲಿ ವಿವಾದದ ಸುಳಿ ಸುತ್ತಿಕೊಂಡಿತ್ತು. ಹನ್ನೊಂದು ಮತಗಳಲ್ಲಿ ಐದು ಮತಗಳ ಬೆಂಬಲದ ಮೂಲಕ ನ್ಯಾಯಾಲಯವು ಲಿಬಿಯಾ ಸಮಸ್ಯೆ ಕುರಿತ ಈ ನಿರ್ಧಾರವನ್ನು ಪ್ರಕಟಿಸಿತ್ತು.ಮಾಂಟ್ರಿಯಲ್ ಸಮಾವೇಶದ ನಂತರ ಲಿಬಿಯಾದ ಮೂಲ ಸಮಸ್ಯೆಯನ್ನು ಸಮಂಜಸವಾದುದಲ್ಲ ಎಂಬ ವಿಚಾರ ಮಂಡಿಸಲಾಯಿತು.ಯಾಕೆಂದರೆ ಈ ತೀರ್ಪನ್ನು ಭದ್ರತಾ ಮಂಡಳಿಯೇ ತೆಗೆದುಕೊಂಡಿತ್ತು. UN ಚಾರ್ಟರ್ ನ 103 ರ ಅಧಿನಿಯಮದಂತೆ ಅದರಡಿ ನಡೆಯುವ ಕ್ರಮ ಕೈಗೊಳ್ಳುವ ನಿರ್ಣಯಗಳು ಅದರ ಕಾನೂನು ರೀತಿ ವಿಧಾನಗಳ ಜಾರಿಗೆ ಶಿಫಾರಸು ಮಾಡುತ್ತವೆ. ಆದರೂ ನ್ಯಾಯಾಲಯವು ಈ ಅರ್ಜಿಯು ಸ್ವೀಕರಿಸಲು ಸೂಕ್ತ ಎನ್ನುವುದನ್ನು ಘೋಷಿಸಿತು. ಈ ಪ್ರಕರಣದಲ್ಲಿ ಅದರ ನೈಜ ಕಾರಣಗಳ ಮೇಲೆ ಪಕ್ಷಗಾರರಿಗೆ ತೀರ್ಪು ದೊರೆಯಲಿಲ್ಲ.(ಯುನೈಟೆಡ್ ಕಿಂಗ್ಡಮ್ ,ಯುನೈಟೆಡ್ ಸ್ಟೇಟ್ಸ್ ಮತ್ತು ಲಿಬಿಯಾಗಳು ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ 2003ರಲ್ಲಿ ಬಗೆಹರಿಸಿಕೊಂಡವು) ನ್ಯಾಯಾಲಯದ ಬಹುತೇಕ ನಿರಾಕರಣೆಯು ಭದ್ರತಾ ಮಂಡಳಿಯ ಸದಸ್ಯರ ಒಳಗೊಳ್ಳುವಿಕೆ ಅದರ ವಿವಾದ ಬಗೆಹರಿಸುವ ಸಂದರ್ಭದಲ್ಲಿ ಅಡತಡೆ ಮಾಡಿದ್ದನ್ನು ನ್ಯಾಯಾಲಯ ಒಪ್ಪದೇ ಈ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಬಿಡಬೇಕಾದ ಪ್ರಸಂಗ ಬಂತು. ನಿಕಾರಾಗುವಾ ಪ್ರಕರಣದಲ್ಲಿ ನ್ಯಾಯಾಲಯವು ಭದ್ರತಾ ಮಂಡಳಿಯಿಂದ ತೆಗೆದುಕೊಂಡ ಕ್ರಮವ ಮತ್ತು ICJ ನ ನ್ಯಾಯಾಧಿಕರಣದ ನಿರ್ಣಯವು ಅಸ್ಥಿರತೆ ತಂದಿತು.ಈ ಕಲಹದ ವಿಷಯದಲ್ಲಿ ಎಲ್ಲಾ ವಿವರಣೆಗಳು ಭದ್ರತಾ ಮಂಡಳಿಯ ಪರವಾಗಿದ್ದವು. "ನ್ಯಾಯಾಲಯ ನೀಡಿದ ತೀರ್ಪಿನನ್ವಯ ಪಕ್ಷಗಾರರು ಅದರ ನಿಯಮದಂತೆ ನಡೆಯಬೇಕಾದುದು ಕಾನೂನು ಸಮ್ಮತಿಯುಳ್ಳದ್ದಾಗಿದೆ."ಇಲ್ಲಿ ಭದ್ರತಾ ಮಂಡಳಿಯ ಶಿಫಾರಸುಗಳನ್ನು ಇಲ್ಲವೆ ಅದು ಸೂಕ್ತವೆನಿಸುವ ನಿರ್ಧಾರ ಕೈಗೊಳ್ಳಲು ಬಿಡಲಾಗುತ್ತದೆ." ಪ್ರಾಯೋಗಿಕವಾಗಿ ನ್ಯಾಯಾಲಯದ ಅಧಿಕಾರವು ಪಕ್ಷಗಾರರು ಪಾಲಿಸುವ ಕಾನೂನು ನಿಯಮಗಳ ಅನುಸರಣೆಯನ್ನು ಅವಲಂಬಿಸಿದೆ,ಅಲ್ಲದೇ ಭದ್ರತಾ ಮಂಡಳಿಯು ತನ್ನ ಕ್ರಮಗಳ ಜಾರಿಗೊಳಿಸಬೇಕಾದರೆ ಆ ಪಕ್ಷಗಾರರ ಮನದಿಚ್ಛೆಯೂ ಅಗತ್ಯವಾಗಿ ಬೇಕಾಗುತ್ತದೆ. "ಆದರೆ ಆಚರಣೆಯ ನಿಯಮಗಳ ಸೂತ್ರದ ಅನುಸಾರ "ಪಕ್ಷಗಾರರಿಗೆ ನ್ಯಾಯಾಲಯದ ತೀರ್ಪು ಅಂತಿಮವಾದುದು ಮತ್ತು ಅದರ ಮೇಲೆ ಮೇಲ್ಮನವಿ ಸಾಧ್ಯವಿಲ್ಲ."ಇಲ್ಲಿ "ಚಾರ್ಟರ್ ಗೆ ಸಹಿ ಹಾಕಿದ ಸದಸ್ಯ ರಾಷ್ಟೃವು ಅಂದರೆ ಸಂಯುಕ್ತ ರಾಷ್ಟ್ರ ಸಂಘದ ಸದಸ್ಯತ್ವ ಹೊಂದಿದ್ದ ಇದು ಅಂತಾರಾಷ್ಟ್ರೀಯ ನ್ಯಾಯಾಲಯದ ನೀಡಿದ್ದ ತೀರ್ಪನ್ನು ಒಪ್ಪಲೇಬೇಕಾಗುತ್ತದೆ,ಅದು ಇಂಥ ಕೆಲವು ಪ್ರಕರಣಗಳಲ್ಲಿ ಪಕ್ಷಗಾರನಾಗಿದ್ದರೂ ಅದು ಅಂತಾರಾಷ್ಟ್ರೀಯ ಕಾನೂನಿಗೆ ತಲೆ ಬಾಗಲೇಬೇಕು. ಉದಾಹರಣೆಗೆ ಈ ಹಿಂದೆ ಯುನೈಟೆಡ್ ಸ್ಟೇಟ್ಸ್ ತನ್ನ ರಚನಾ ವಿಷಯದಲ್ಲಿ 1946 ರಲ್ಲಿ ನ್ಯಾಯಾಲಯದ ಕಾರ್ಯಕ್ಷೇತ್ರ ವ್ಯಾಪ್ತಿಯನ್ನು ಒಪ್ಪಿತ್ತು.ಆದರೆ ನಿಕಾರಾಗುವಾ ವಿರುದ್ದ ಯುನೈಟೆಡ್ ಸ್ಟೇಟ್ಸ್ ಪ್ರಕರಣದಲ್ಲಿ,1948 ರ ನ್ಯಾಯಾಲಯದ ತೀರ್ಪಿಗೆ ಅದು ಅಷ್ಟಾಗಿ ಸ್ಪಂದಿಸದೇ "ಅದರಿಂದ ದೂರವಿದ್ದು ಒತ್ತಡ ಹಾಕದಂತೆ" ಹೇಳಲಾಯಿತು ಆದರೆ ಅದು ನಿಕಾರಾಗುವಾದ ವಿರುದ್ದ ತನ್ನ ಬಲಪ್ರಯೋಗ ನಿಲ್ಲಿಸಲು ಸಿದ್ದನಾಗಲಿಲ್ಲ. ನ್ಯಾಯಾಲಯ ಹೇಳುವ ಪ್ರಕಾರ (ಅಮೆರಿಕಾ ನ್ಯಾಯಾಧೀಶರ ಹೊರತಾಗಿ)ಯುನೈಟೆಡ್ ಸ್ಟೇಟ್ಸ್ "ನಿಕಾರಾಗುವಾದೊಂದಿಗಿನ ಫ್ರೆಂಡ್ ಶಿಪ್ ಟ್ರೀಟಿಯನ್ನು ಉಲ್ಲಂಘಿಸಿ ಅದರ ವಿರುದ್ದ ಸೈನ್ಯ ಬಲದ ಪ್ರಯೋಗ ಮಾಡುತ್ತಿರುವ ಬಗ್ಗೆ ಸ್ಪಷ್ಟಪಡಿಸಿತು."ಅಲ್ಲದೇ ಈ ಯುದ್ದದ ಹಾನಿಗಳನ್ನು ತುಂಬಿಕೊಡುವಂತೆ ಯುನೈಟೈಡ್ ಸ್ಟೇಟ್ಸ್ ಗೆ ಸೂಚನೆ ನೀಡಿತು.(ಎರಡನೆಯ ಟಿಪ್ಪಣಿ ನೋಡಿ) ಕಲಹದ ಪ್ರಕರಣದ ಉದಾಹರಣೆಗಳು:

  • ಯುನೈಟೆಡ್ ಸ್ಟೇಟ್ಸ್ ನ 1980 ರ ದೂರಿನಲ್ಲಿ ಇರಾನ್ ಅಮೆರಿಕನ್ ರಾಜತಾಂತ್ರಿಕರನ್ನು ತೆಹರಾನ್ ನಲ್ಲಿ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿ ವಶದಲ್ಲಿಟ್ಟುಕೊಂಡಿದೆ,ಎಂಬ ಅರೋಪ ದಾಖಲಾಯಿತು.
  • ತುನೇಶಿಯಾ ಮತ್ತು ಲಿಬಿಯಾ ನಡುವೆ ಗಡಿ ಗುರುತಿಸುವಿಕೆ ಕುರಿತು ವಿವಾದ ಉಂಟಾಗಿತ್ತು.
  • ಪಾಕಿಸ್ತಾನವು ಕಾಶ್ಮೀರ ಜನತೆಯ ಮೂಲಕ ಭಾರತವು ಹಿತಾಸಕ್ತಿಗಳ ತಡೆಗೆ ಬಲವಂತ ಮಾಡುತ್ತದೆ ಎಂಬ ದೂರು,ಇದನ್ನು ರಾಜ್ಯ ಭಯೋತ್ಪಾದನೆ ಎಂದು ದೂರಿದ ಅದು ಇಲ್ಲಿ ನೇರವಾಗಿ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ದೂರಿತ್ತು.
  • U.S. ಮತ್ತು ಕೆನಡಾ ನಡುವಿನ ಮೇರಿ ಟೈಮ್ ಗಡಿ ಮೈನೆ ಕೊಲ್ಲಿಯ ಪ್ರದೇಶದ ಬಗ್ಗೆ ವಿಭಜನೆಯ ದೂರು.
  • ಅದೇ ರೀತಿ ಫೆಡರಲ್ ರಿಪಬ್ಲಿಕ್ ಆಫ್ ಯುಗೊಸ್ಲಾವಿಯಾದಿಂದ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಸಂಘಟನೆಯ ಸದಸ್ಯ ರಾಜ್ಯಗಳು ಕೊಸೊವಾ ಯುದ್ದದ ಕ್ರಮದ ಬಗ್ಗೆ ದೂರಲಾಯಿತು. ಇದನ್ನು ನ್ಯಾಯಾಲಯದ ಕಾರ್ಯಕ್ಷೇತ್ರ ವ್ಯಾಪ್ತಿಯ ಮಿತಿಯಿಂದಾಗಿ 2004 ರ ಡಿಸೆಂಬರ್ 15 ರಲ್ಲಿ ನಿರಾಕರಿಸಲಾಯಿತು.ಯಾಕೆಂದರೆ FRY ಯು ಅರ್ಜಿ ಸಲ್ಲಿಸುವ ವೇಳೆಗೆ ICJ ನ ಶಾಸನಬದ್ದ ನಿಯಮಗಳಿಗೆ ಬದ್ದವಾದ ಸದಸ್ಯವಾಗಿರಲಿಲ್ಲ.

ಸಾಮಾನ್ಯವಾಗಿ ನ್ಯಾಯಾಲಯವು ಗಡಿ ಬಳಕೆ ಹಾಗು ಸಾಗರದ ಮಾರ್ಗಗಳ ಉಪಯೋಗದ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ. ಹಲವಾರು ಬಾರಿ ನ್ಯಾಯಾಲಯವು ರಾಜ್ಯಗಳು ತಮ್ಮ ನಾಗರಿಕರ ಕೊಡುಕೊಳ್ಳುವಿಕೆ ನ=ಬಗೆಗೆನ ವಿವಾದಗಳನ್ನು ಹುಟ್ಟು ಹಾಕಿದಾಗ,ನ್ಯಾಯಾಲಯವು ಇಂತಹ ವಿಷಯಗಾಳಲ್ಲಿ ಇಣುಕುವ ರಾಜಕಾರಣವನ್ನು ಪರಿಗಣಿಸಿ ಅದಕ್ಕೆ ಪರಿಹಾರ ಸೂಚನೆಗೆ ಹಿಂದೇಟು ಹಾಕಬಹುದು.ಯಾಕೆಂದರೆ ಕೆಲ ಸಂದರ್ಭದಲ್ಲಿ ಅದರ ತೀರ್ಪುಗಳ ಜಾರಿಗೆ ಆಯಾ ಸಂದರ್ಬದ ತಾಂತ್ರಿಕತೆಯ ಕೊರತೆಯೂ ಇಲ್ಲಿ ಕಾರಣವಾಗುತದೆ.ಇಲ್ಲಿ ನ್ಯಾಯಾಲಯದ ಕಾರ್ಯಕ್ಷೇತ್ರದ ವ್ಯಾಪ್ತಿ ಕೂಡ ಪರಿಗಣಿತವಾಗುತ್ತದೆ. ಸೈನ್ಯಬಲದ ಪ್ರಯೋಗದ ಕುರಿತು ನ್ಯಾಯಾಲಯವು ತನ್ನ ಕಾರ್ಯಕ್ಷೇತ್ರವನ್ನು ಪರಿಗಣಿಸಿ ಪ್ರಕರಣಗಳ ಕೈಗೆತ್ತಿಕೊಳ್ಳುತ್ತದೆ.

ಕಾನೂನು ಅಳವಡಿಕೆ

[ಬದಲಾಯಿಸಿ]

ನ್ಯಾಯಾಲಯವು ಪ್ರಕರಣಗಳ ಇತ್ಯರ್ಥ್ಯಕ್ಕೆ ICJ ಶಾಸನಬದ್ದ ನಿಯಮಗಳಲ್ಲಿ ಉಲ್ಲೇಖಿಸಿರುವ ನಿಯಮಾವಳಿ 38 ರ ಅಧಿನಿಯಮವನ್ನು ಅಳವಡಿಸುತ್ತದೆ.ಅಂತಾರಾಷ್ಟ್ರೀಯ ಸಮಾವೇಶಗಳು,ಅಂತಾರಾಷ್ಟ್ರೀಯ ಆಚರಣೆಗಳು "ಅಲ್ಲದೇ ನಾಗರಿಕ ರಾಷ್ಟ್ರಗಳು ಅನುಸರಿಸುವ ಸಾಮಾನ್ಯ ತತ್ವಗಳನ್ನು ಅದು ಕಾನೂನು ರೀತ್ಯ ಅಳವಡಿಸುತ್ತದೆ. ಇದು ಈ ಸಂದರ್ಭದಲ್ಲಿ ಪ್ರಸಕ್ತ ಸಾಹಿತ್ಯಿಕ ಕೃತಿಗಳನ್ನು ಸಹ ಉಲ್ಲೇಖಿಸುತ್ತದೆ.("ಹಲವಾರು ಪ್ರಮುಖರ ಉಪದೇಶಗಳು ಹಲವಾರು ದೇಶಗಳ ಪ್ರತಿಭಾವಂತರ ಬರಹಗಳು"ಇತ್ಯಾದಿ)ಅದರಂತೆ ಹಿಂದಿನ ತೀರ್ಪುಗಳ ಉಲ್ಲೇಖಿಸಿ ಅಧ್ಯಯನ ಯೋಗ್ಯವನ್ನು ಆಯ್ದುಕೊಳ್ಳುತ್ತದೆ.ಆಗ ಅದಕ್ಕೆ ಸಂಬಂಧಿಸಿದ ಕಾನೂನನ್ನು ಅದು ವ್ಯಾಖ್ಯಾನಿಸುತ್ತದೆ,ಈ ಹಿಂದಿನ ಸ್ಟೇರ್ ಡಿಸಿಸಿಸ್ (ಹಿಂದಿನ ನ್ಯಾಯಾಧೀಶರು ಅನುಸರಿಸಿದ ನಿಯಮಗಳು) ತತ್ವಗಳ ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ನಿಯಮಾವಳಿ 59 ರ ಪ್ರಕಾರ ಸಾಮಾನ್ಯ ಕಾನೂನು ಈ ಹಿಂದಿನ ನಿರ್ಣಯಗಳ ಅಥವಾ ನ್ಯಾಯಾಧೀಶರ ಅಭಿಪ್ರಾಯ ವು ICJ ನ ಅಳವಡಿಕೆಯ ಸೂತ್ರವಾಗಿರುತ್ತದೆ.ಹೀಗೆ ನ್ಯಾಯಾಲಯದ ತೀರ್ಪು ಕೇವಲ ಆಯಾ ರಾಜ್ಯಗಳ ಪಕ್ಷಗಾರರಿಗೆ ಸಂಬಂಧಿಸಿರುತ್ತದೆ. ಆದರೂ 38(1)(d) ರ ನಿಯಮದಡಿ ನ್ಯಾಯಾಲಯವು ತನ್ನ ಹಿಂದಿನ ತೀರ್ಪುಗಳನ್ನು ಪರಿಗಣಿಸಬಹುದಾಗಿದೆ. ಅದರೆ ನೈಜ ಸ್ಥಿತಿಯಲ್ಲಿ ತನ್ನ ಹಿಂದಿನ ತೀರ್ಪುಗಳ ಬಗ್ಗೆ ನ್ಯಾಯಾಲಯವು ತನ್ನ ನಿರ್ಧಾರ ಕಾದಿರಿಸುವ ಹಕ್ಕನ್ನೂ ಹೊಂದಿದ್ದು, ಇದು ಸಾಮನ್ಯ ಕಾನೂನಿನ ವಿಧಾನದ(ಮೇಲ್ಮಟ್ಟದ) ಸರ್ವಾಧಿಕಾರದ ನ್ಯಾಯಾಲಯಗಳ ಸಾಮಾನ್ಯ ಕಾನೂನಿನ ಪದ್ದತಿಯನ್ನು ಅಳವಡಿಸುತ್ತದೆ. ಇನ್ನೂ ಹೆಚ್ಚೆಂದರೆ ಅಂತಾರಾಷ್ಟ್ರೀಯ ವಕೀಲರುಗಳು ICJ ನ ತೀರ್ಪುಗಳು ಅತ್ಯಂತ ಬೆಲೆಬಾಳುವವು ಎಂಬುದನ್ನು ಮನಗಂಡಿರುತ್ತಾರೆ. ಪಕ್ಷಗಾರ ರಾಜ್ಯಗಳು ಒಪ್ಪಿದಲ್ಲಿ ಅವರು ತಮ್ಮ ಪ್ರಕರಣದ ಬಗ್ಗೆ ಅಂತಾರಾಷ್ಟ್ರೀಯ ಕಾನೂನಿನ ಆಧಾರ ದ ಮೇಲೆ ನಿರ್ಣಯ ಕೈಗೊಳ್ಳಲು ನ್ಯಾಯಾಲಯಕ್ಕೆ ಮುಕ್ತ ಅವಕಾಶ ಒದಗಿಸುತ್ತವೆ.("ನ್ಯಾಯನೀಡಿಕೆ ಮತ್ತು ನ್ಯಾಯ ಸಮ್ಮತ ನಡವಳಿಕೆಗೆ ಅವಕಾಶ)ಅಂದರೆ ಇಲ್ಲಿ ಸೂಕ್ತ ನಿರ್ಧಾರಕ್ಕೆ ನ್ಯಾಯಾಲಯಕ್ಕೆ ಆಯ್ಕೆ [೧೮] ಇರುತ್ತದೆ. ಆದರೆ ಈ ನಿಯಮಾವಳಿಯ ಅವಕಾಶವು ನ್ಯಾಯಾಲಯದ ಇತಿಹಾಸದಲ್ಲೇ ಬಳಕೆಯಾಗಿಲ್ಲ. ಇದುವರೆಗೂ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧಿಕರಣವು ಸುಮಾರು 130 ಪ್ರಕರಣಗಳ ಇತ್ಯರ್ಥಗೊಳಿಸಿದೆ.

ವಿಧಿವಿಧಾನ

[ಬದಲಾಯಿಸಿ]

ICJ ತನ್ನ ಸ್ವಂತ ಅಧಿಕಾರದ ವ್ಯಾಪ್ತಿಯಲ್ಲಿ ನಿರ್ಣಯಗಳ ಮಂಡಿಸುತ್ತದೆ. ಈ ನ್ಯಾಯಾಲಯದ ಕಾರ್ಯಚಟುವಟಿಕೆಗಳ ವಿಧಾನವು ರೂಲ್ಸ್ ಆಫ್ ಕೋರ್ಟ್ ಆಫ್ ದಿ ಇಂಟರ್ ನ್ಯಾಶನಲ್ ಕೋರ್ಟ್ ಆಫ್ ಜಸ್ಟೀಸ್ 1978 ಇದರಲ್ಲಿ ದಾಖಲಿಸಲಾಗಿದೆ.(ಇದನ್ನು 2005,ಸೆಪ್ಟೆಂಬರ್ 29 ರಲ್ಲಿ ತಿದ್ದುಪಡಿ [] ಮಾಡಲಾಗಿದೆ,) ICJ ಮುಂದಿರುವ ಪ್ರಕರಣಗಳು ಯಾವಾಗಲೂ ಒಂದು ಗುಣಮಟ್ಟದ ವಿಧಾನದ ಮೇಲೆ ಅನುಸರಣಗೆ ಬರುತ್ತದೆ. ದೂರುದಾರರಿಂದ ಪ್ರಕರಣಗಳ ಇತ್ಯರ್ಥವು ಲಿಖಿತ ವಿವರವು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.ಈ ಮೂಲಕ ಇದನ್ನು ನ್ಯಾಯಾಲಯವು ತನ್ನ ಕಾರ್ಯ ವಿಧಾನ ಮತ್ತು ಕಾರ್ಯ ವ್ಯಾಪ್ತಿ ಪರಿಗಣಿಸಿ ಕ್ರಮಕ್ಕೆ ಮುಂದಾಗುತ್ತದೆ. ಇದರ ಪ್ರತಿಕಕ್ಷಿಗಾರರು ಅದರ ಕಾರ್ಯಕ್ಷೇತ್ರದ ವ್ಯಾಪ್ತಿ ಪರಿಗಣಿಸಿ ಪ್ರಕರಣದ ಸೂಕ್ತ ಅಂಶಗಳ ಆಧಾರದ ಮೇಲೆ ಇದನ್ನು ಮುಂದುವರೆಸುತ್ತದೆ.

ಪ್ರಾಥಮಿಕ ಆಕ್ಷೇಪಣೆಗಳು

[ಬದಲಾಯಿಸಿ]

ನ್ಯಾಯಾಲಯದ ಕಾರ್ಯವ್ಯಾಪ್ತಿಯ ಪರಿಗಣಿಸಿ ಪ್ರತಿಕಕ್ಷಿಗಾರರು ತಮ್ಮ ದೂರನ್ನು ಸಲ್ಲಿಸುತ್ತಾರೆ,ಆಗ ನ್ಯಾಯಾಲಯವು ಪ್ರಾಥಮಿಕ ಆಕ್ಷೇಪಣೆಗಳನ್ನು ಎತ್ತಬಹುದು. ಇಂತಹ ಆಕ್ಷೇಪಣೆಗಳು ನ್ಯಾಯಾಲಯದ ಮುಂದೆ ಬಂದಾಗ ನ್ಯಾಯಾಲಯವು ಅರ್ಜಿದಾರರ ದೂರಿನ ಯೋಗ್ಯತೆ ಪರಿಶೀಲಿಸಿ ಅದನ್ನು ಸರಿಪಡಿಸಬಹುದು. ಸಾಮಾನ್ಯವಾಗಿ ಆಗಾಗ್ಗೆ ಈ ಪ್ರಾಥಮಿಕ ಆಕ್ಷೇಪಣೆಗಳ ಬಗ್ಗೆ ಸಾರ್ವಜನಿಕ ಅಹವಾಲುಗಳನ್ನು ಸಹ ಸ್ವೀಕರಿಸಿ ನ್ಯಾಯಾಲಯ ತನ್ನ ತೀರ್ಪುಗಳನ್ನು ನೀಡಬಹುದು. ಪಕ್ಷಗಾರರು ಅಥವಾ ಕಕ್ಷಿಗಾರರು ನ್ಯಾಯಾಲಯದ ಕಾರ್ಯಕ್ಷೇತ್ರ ಅಧಿಕಾರ ವ್ಯಾಪ್ತಿ ಪರಿಗಣಿಸಿ ಪ್ರಕರಣಗಳ ಇತ್ಯರ್ಥಕ್ಕೆ ನ್ಯಾಯಾಲಯಕ್ಕೆ ಮನವಿ ಮಾಡಬಹುದು.ಇಲ್ಲವೆ ಈ ಪ್ರಕರಣದ ಸ್ವೀಕರಿಸಲು ವಿಶೇಷ ಮನವಿ ಸಲ್ಲಿಸಬಹುದಾಗಿದೆ. ಪ್ರಕರಣಗಳ ಸ್ವೀಕರಿಸದಿರಲು ನ್ಯಾಯಾಲಯವು ದೂರುಗಳ ಶ್ರೇಯಾಂಕ ಅಥವಾ ವರ್ಗೀಕರಣ ಪರಿಶೀಲಿಸಿ ಅದನ್ನು ವಿವಾದ ಇತ್ಯರ್ಥಕ್ಕೆ ಪರಿಗಣಿಸಬಹುದು.ಕೆಲವೊಮ್ಮೆ ಅದರೆ ಕಾರ್ಯವ್ಯಾಪ್ತಿ ಮೀರಿದ ಪ್ರಕರಣವಾದರೆ ಅಥವಾ ಅದು "ನ್ಯಾಯಯುತ ವ್ಯಾಜ್ಯ"ವಾಗಿರದಿದ್ದರೆ ನ್ಯಾಯಾಲಯ ಅದನ್ನು ಕೈಗೆತ್ತಿಕೊಳ್ಳುವ ಬಗ್ಗೆ ತನ್ನ ಅಭಿಪ್ರಾಯವನ್ನು ಸಂಬಂಧಪಟ್ಟವರಿಗೆ ವಿವರಿಸಬಹುದಾಗಿದೆ. ಇನ್ನೂ ಹೆಚ್ಚೆಂದರೆ ಆಕ್ಷೇಪಣೆಗಳು ಅಗತ್ಯ ಕಕ್ಷಿದಾರರು ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ನ್ಯಾಯಾಲಯಕ್ಕೆ ಬರಬಹುದು. ಒಂದು ವೇಳೆ ಪ್ರಕರಣದಲ್ಲಿ ನ್ಯಾಯಾಲಯವು ಹಕ್ಕುಗಳು ಮತ್ತು ಅದರ ಕಟ್ಟಳೆಗಳ ಬಗ್ಗೆ ಕಕ್ಷಿದಾರರ ಒಪ್ಪಿಗೆ ಇಲ್ಲದೇ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾದರೆ ಅದು ತನ್ನ ನಿರ್ಧಾರಗಳ ಬದಲಿಸಿ ವಿವರಿಸುವ ಸಾಧ್ಯತೆ ಇದೆ.ಪ್ರಕರಣದ ಅಡಕ ಅಂಶಗಳ ಮೇಲೆ ಈ ತೀರ್ಪು ತೀರ್ಮಾನವಾಗುತ್ತದೆ. ನ್ಯಾಯಾಲಯವು ಇದು ತನ್ನ ಕಾರ್ಯವ್ಯಾಪ್ತಿ ಮತ್ತು ಈ ಪ್ರಕರಣವು ಸ್ವೀಕರಿಸಲು ಯೋಗ್ಯವೆನಿಸಿದರೆ ಪ್ರತಿಕಕ್ಷಿದಾರನು ತನ್ನ ದೂರಿನ ಎಲ್ಲಾ ಸೂಕ್ತ ಮತ್ತು ಯೋಗ್ಯ ಅಂಶಗಳನ್ನು ತನ್ನ ಅರ್ಜಿಯಲ್ಲಿ ನಮೂದಿಸಿ ತಿಳಿಸಬೇಕಾಗುತ್ತದೆ. ಎಲ್ಲಾ ಲಿಖಿತ ವಾದ-ವಿವಾದಗಳು ದಾಖಲಾದಾಗ ನ್ಯಾಯಾಲಯವು ಸಾರ್ವಜನಿಕ ಅಭಿಪ್ರಾಯ, ಅಹವಾಲನ್ನು ಪಡೆಯಲು ಮುಂದಾಗುತ್ತದೆ. ಒಮ್ಮೆ ಪ್ರಕರಣ ದಾಖಲಾದ ನಂತರ ಯಾವುದೇ ಪಕ್ಷಗಾರ (ಸಾಮಾನ್ಯವಾಗಿ ಅರ್ಜಿದಾರ)ತನ್ನ ಪ್ರಕರಣದ ಯಥಾಸ್ಥಿತಿಗೆ ಮನವಿ ಸಲ್ಲಿಸುತ್ತದೆ. ಇಂತಹ ಆದೇಶಗಳು ನ್ಯಾಯಿಕ(ಅಥವಾ ಮಧ್ಯಂತರ) ನಿಯಮಾವಳಿಗಳು ಸಂಬಂಧಪಟ್ಟಂತೆ ಯುನೈಟೈಡ್ ಸ್ಟೇಟ್ಸ್ ಕಾನೂನುಗಳ ಪ್ರತಿಬಂಧಕಗಳಿಗೆ ಲಗತ್ತಾಗಿರುತ್ತವೆ. ಶಾಸನಬದ್ದ ನಿಯಮಾವಳಿ 41 ರ ಪ್ರಕಾರ ಇಂತಹ ಅದೇಶಗಳ ನೀಡಲು ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ. ಪ್ರಕರಣದ ಇತ್ಯರ್ಥಕ್ಕೆ ನ್ಯಾಯಾಲಯ ಪರಿಹಾರ ಸೂಚಿಸಲು ಪ್ರಕರಣದ ಪ್ರಾಥಮಿಕ ಮೂಲ ಕಾರಣ ನ್ಯಾಯಾಧಿಕರಣದ ಕಾರ್ಯವ್ಯಾಪ್ತಿಯನ್ನು ಪರಿಶೀಲಿಸುತ್ತದೆ.ಇದಕ್ಕಾಗಿ ನ್ಯಾಯಾಲಯಕ್ಕೆ ಸೂಕ್ತ ಕಾಗದಪತ್ರಗಳ ಸಲ್ಲಿಕೆಯಾಗಿರಬೇಕಾಗಿರುತ್ತದೆ.

ಮಧ್ಯಸ್ಥಿಕೆ ವಹಿಸಲು ಮನವಿ ಅರ್ಜಿ

[ಬದಲಾಯಿಸಿ]

ಕೆಲವೊಂದು ಮೂರನೆಯ ಪಕ್ಷಗಾರರಾದ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆ ಬಂದಾಗ ಅದರ ಮಧ್ಯಸ್ತಿಕೆ ವಹಿಸಲು ನ್ಯಾಯಾಲಯಕ್ಕೆ ಮನವಿ ಮಾಡಬಹುದು.ಈ ಸಂದರ್ಭದಲ್ಲಿ ನ್ಯಾಯಾಲಯವು ಪೂರ್ಣ ಪಕ್ಷಗಾರರಂತೆ ವರ್ತಿಸಬೇಕಾಗಿಯೂ ಬರಬಹುದು. ಅಧಿನಿಯಮಾವಳಿ 62 ರ ಪ್ರಕಾರ "ಕಾನೂನು ರೀತಿಯ ಆಸಕ್ತಿ"ಯನ್ನು ತೋರಿಸಲು ಇದನ್ನು ಅಳವಡಿಸಲಾಗುತ್ತದೆ.ಆಗ ನ್ಯಾಯಾಲಯವು ಮಧ್ಯೆ ಪ್ರವೇಶಿಸಬೇಕೇ ಬೇಡವೇ ಎಂಬ ತೀರ್ಮಾನ ಕೈಗೊಳ್ಳುತ್ತದೆ. ಮಧ್ಯಸ್ಥಿಕೆ ವಹಿಸುವಂತೆ ಹೇಳುವ ಅರ್ಜಿಗಳು ವಿರಳ 1990 ರಲ್ಲಿ ಇಂತಹ ಪ್ರಕರಣ ವರದಿಯಾಗಿತ್ತು.

ತೀರ್ಪು ಮತ್ತು ಪರಿಹಾರಗಳು

[ಬದಲಾಯಿಸಿ]

ಒಮ್ಮೆ ನಿರ್ಣಯಗಳು ನೀಡಲ್ಪಟ್ಟಾಗ ನ್ಯಾಯಾಲಯವು ಬಹುತೇಕ ತನ್ನೆಲ್ಲ ಅಭಿಪ್ರಾಯಗಳನ್ನು ಮಂಡಿಸಿರುತ್ತದೆ. ವೈಯಕ್ತಿಕ ನ್ಯಾಯಾಧೀಶರು ತಮ್ಮ ಸ್ವಂತ ಅಭಿಪ್ರಾಯಗಳ ಮಂಡಿಸಬಹುದು.(ಅಂದರೆ ಅಭಿಪ್ರಾಯವು ನ್ಯಾಯಾಲಯದ ಒಟ್ಟಾರೆ ತೀರ್ಪಿಗೆ ಬದ್ದವಾಗಿ ಅವರ ವೈಯಕ್ತಿಕ ಕಾರಣಗಳನ್ನು ಮಾತ್ರ ವಿವರಿಸಬೇಕಾಗುತ್ತದೆ)(ಅವರು ಬಹುಮತದ ಅಭಿಪ್ರಾಯಕ್ಕೆ ಅಸಮ್ಮತಿ ವ್ಯಕ್ತಪಡಿಸುವ ಸಾಧ್ಯತೆ ಇದೆ.) ನ್ಯಾಯಾಲಯದ ತೀರ್ಪುಗಳ ಕುರಿತಂತೆ ಯಾವುದೇ ಮೇಲ್ಮನವಿಗೆ ಅವಕಾಶವಿಲ್ಲ;ಯಾಕೆಂದರೆ ಅದರ ತೀರ್ಪು ಹೆಚ್ಚು ಕಮ್ಮಿ [೧೯] ಪ್ರಶ್ನಾತೀತವಾಗಿರುತ್ತದೆ.

ಟೀಕೆಗಳು

[ಬದಲಾಯಿಸಿ]

ಈ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಲಯವು ಹಲವಾರು ವಿಷಯಗಳಲ್ಲಿ ಟೀಕೆಗಳ ಪಡೆದಿದೆ.ತನ್ನ ತೀರ್ಪು ನೀಡುವಲ್ಲಿ,ಅದರ ಕಾರ್ಯವಿಧಾನದ ಬಗ್ಗೆ ಮತ್ತು ಅದರ ಅಧಿಕಾರ ವ್ಯಾಪ್ತಿ ಬಗ್ಗೆ ಸಾಕಷ್ಟು ಟೀಕೆ-ಟಿಪ್ಪಣಿ ಪಡೆದಿದೆ. ಸಂಯುಕ್ತ ರಾಷ್ಟ್ರ ಸಂಘದ ಮೇಲೂ ಸಹ ಟೀಕೆಗಳ ಸುರಿಮಳೆ ಇದೆ ಕೇವಲ ಕೆಲವೇ ಕೆಲವು ಬಲಿಷ್ಟ ರಾಷ್ಟ್ರಗಳ ಕೈಯಲ್ಲಿ ಈ ಅಧಿಕಾರ ಇದೆ ಎನ್ನಲಾಗಿದೆ.ಈ ಚಾರ್ಟರ್ ನಲ್ಲಿರುವ ಸದಸ್ಯರ ಅಧಿಕಾರ ವ್ಯಾಪ್ತಿಯು ಅಷ್ಟಾಗಿ ಯಾರಿಗೂ ತೃಪ್ತಿ ತಂದಿಲ್ಲ.ನ್ಯಾಯಾಧೀಶರೂ ಸಹ ಭದ್ರತಾ ಮಂಡಳಿಯ ಆಧೀನದಲ್ಲಿದ್ದಾರೆಂಬ ದೂರು ಇದೆ. ಪ್ರಮುಖ ಟೀಕೆಗಳು:

  • ಹಲವಾರು ಬಾರಿ "ಕಡ್ಡಾಯ" ನ್ಯಾಯಾಧಿಕರಣದ ವ್ಯಾಪ್ತಿಯು ಒಪ್ಪಿಗೆ ಸೂಚಿತ ಅರ್ಜಿಗಳ ಮೇರೆಗೆ ಪರಿಗಣಿತವಾಗುತ್ತದೆ.ಇಲ್ಲಿ ಸಲಹೆ ಸೂಚನೆ ಅಥವಾ ಅಭಿಪ್ರಾಯಗಳಿಗೆ ಅಂತಹ ಬೆಲೆ ಇಲ್ಲ ಎಂಬ ವಾದವೂ ಇದೆ.ಭದ್ರತಾ ಮಂಡಳಿಯ ಕಪಿಮುಷ್ಟಿಯ ಬಗೆಗೂ ಅಪಸ್ವರ ಕಂಡುಬರುತ್ತದೆ.
  • ಸಂಘಟನೆಗಳು,ಖಾಸಗಿ ಉದ್ಯೋಗ ಸಂಸ್ಥೆಗಳು ಮತ್ತು ವ್ಯಕ್ತಿಗಳು ಆಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ತಮ್ಮ ಅಹವಾಲನ್ನು ಪ್ರಕಟಿಸಲಾಗದು.ರಾಷ್ಟ್ರೀಯ ಸರ್ವೋಚ್ಚ ನ್ಯಾಯಾಲಯಗಳ ಮುಂದೆ ಮಂಡಿಸುವ ಮೇಲ್ಮನವಿ ಹಕ್ಕು ಇಲ್ಲ ಎಂಬ ಕೊರಗೂ ಇದೆ. U.N. ಏಜೆನ್ಸೀಗಳು ಸಲಹಾ ಅಭಿಪ್ರಾಯಗಳ ಹೊರತಾಗಿ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರಲಾರವು.(ನ್ಯಾಯಾಲಯದಿಂದ ಒಂದು ಕಾರ್ಯವಿಧಾನ ಆದೇಶಿಸಿದಂತೆ ಅದು ಕಟ್ಟಳೆಯಾಗುತ್ತದೆ)
  • ಇನ್ನುಳಿದ ಅಸ್ತಿತ್ವದಲ್ಲಿರುವ ICCಯಂತಹ ನ್ಯಾಯಾಲಯಗಳು ಅಂತಾರಾಷ್ಟ್ರೀಯ ನ್ಯಾಯಾಲಯಗಳ ಮುಂದೆ ತಮ್ಮ ವ್ಯಾಜ್ಯಗಳನ್ನು ತರಲು ಅವಕಾಶವಿಲ್ಲ.
  • ಅಂತಾರಾಷ್ಟ್ರೀಯ ನ್ಯಾಯಾಲಯವು ತನ್ನ ಪ್ರತ್ಯೇಕ ಅಧಿಕಾರಗಳನ್ನು ಪೂರ್ಣವಾಗಿ ಉಪಯೋಗಿಸಲು ಆಗುತ್ತಿಲ್ಲ.ಭದ್ರತಾ ಮಂಡಳಿಯ ಶಾಶ್ವತ ಸದಸ್ಯರ ಪರಮಾಧಿಕಾರವು ಕೆಲವು ಪ್ರಕರಣಗಳಲ್ಲಿ ಉಪಯೋಗಿಸುವಲ್ಲಿ ಅಡ್ಡಿಯುಂಟು ಮಾಡುತ್ತವೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿನ ಬರಹ
  • ಇಂಟರ್ ನ್ಯಾಶನಲ್ ಕ್ರಿಮಿನಲ್ ಟ್ರಿಬುನಲ್ ಫಾರ್ ರವಾಂಡಾ
  • ಇಂಟರ್ ನ್ಯಾಶನಲ್ ಕ್ರಿಮಿನಲ್ ಟ್ರಿಬುನಲ್ ಫಾರ್ ರವಾಂಡಾಫಾರ್ ಯುಗೊಸ್ಲಾವಿಯಾ
  • ಲಿಸ್ಟ್ ಆಫ್ ಇಂಟರ್ ನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ ಕೇಸಿಸ್
  • ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದಿರುವ ಒಡಂಬಡಿಕೆಗಳು ಮತ್ತು ಒಪ್ಪಂದಗಳು
  • Mundializatio
  • United Nations Economic and Social Councilಯುನೈಟೆಡ್ ನೆಶೆನ್ಸ್ ಎಕನಮಿಕ್ ಮತ್ತು ಸೊಶಿಯಲ್ ಕೊನ್ಸಿಲ್
  • United Nations Secretariatಯುನೈಟೆಡ್ ನೆಶನ್ ಸೆಕ್ರೆಟರಿಎಟ್
  • United Nations MundializationTrusteeship Councilಯುನೈಟೆಡ್ ನೆಶನ್ ಮಾಡಿಅಲೆಶನ್ ಟ್ರಟ್ಸೀ
  • ವಿಶ್ವ ನಾಗರೀಕ

ಟಿಪ್ಪಣಿಗಳು

[ಬದಲಾಯಿಸಿ]
  1. Statute of the International Court of Justice Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ..ಸ್ಟಟುಟ್ ಅಫ್ ದಿ ಇಟರ್ನಶಿನಲ್ ಕೋಟ್ ಅಫ್ ಜಸ್ಟೀಸ್ ಅಗಸ್ಟ್ 10 2007ರಂದು ಮರುಸಂಪಾದಿಸಲಾಯಿತು.
  2. ICJ Statute, Article 18(1)ಎ ಸಿ ಜೆ ಸ್ತಟುಟ್ ಅರ್ಟಿಕಲ್ 18
  3. ೩.೦ ೩.೧ Case Concerning Military and Paramilitary Activities In and Against Nicaragua (Nicaragua v USA), [1986] ICJ Reports 14, 158–60 (Merits) per Judge Lachs.ಕೇಸ್ ಕನ್ಸರ್ನಿಗ್ ಮಿಲಿಟರಿ ಮತ್ತು ಪರ್ಲಿಮೆನ್ಟರಿ ಅಕ್ಟಿವಿಟಿಸ್ ಇನ್ ಮತ್ತು ಅಗೆನೆಸ್ಟೆ ನಿಕರಗು
  4. This occurred in the Legality of the Use by a State of Nuclear Weapons in Armed Conflict (Opinion requested by WHO), [1996] ICJ Reports 66.ದಿಸ್ ಅಕ್ಯುಡ್ ಇನ್ ದ ಲೀಗಲಿಟಿ ಯುಸ್ ಬೈ ಎ ಸ್ಟೈಟ್ ಅಫ್ ನ್ಯುಕ್ಲಿಯರ್ ವೆಪನ್ಸಿನ್ ಇನ್ ಅರ್ಮುಡ್ ಕನ್ಫಿಕ್ಟ್ ಓಪಿನಿಯನ್ ರಿಕ್ವೆಸ್ಟಡ್ ಬೈ ಡಡ್ಬ್ಳಯು ಓ
  5. Rules of Court of the International Court of Justice 1978 (as amended on 5 December 2000).ರುಲ್ಸ್ ಅಫ್ ಕೋಟ್ ಅೞ್ ಡಿ ಐ 2009ರ ಡಿಸೆಂಬರ್ 9ರಂದು ಸಂಕಲನಗೊಂಡಿತು. See also Practice Directions I-XII (as at 30 July 2004). 10 ಡಿಸೆಂಬರ್‌ 2009ರಂದು ಪರಿಷ್ಕರಿಸಲಾಗಿದೆ.
  6. ೬.೦ ೬.೧ Schwebel S "Ad Hoc Chambers of the International Court of Justice" (1987) 81 American Journal of International Law 831.
  7. www.un.org, Five judges elected to serve on UN International Court of Justic
  8. By JOHN HEILPRIN Associated Press 2008-11-07 07:05 AM (2008-11-07). "etaiwannews.com,World's top court among nations gets new judges". Etaiwannews.com. Archived from the original on 2011-06-29. Retrieved 2010-07-24.{{cite web}}: CS1 maint: numeric names: authors list (link)
  9. The jurisdiction is discussed in the entire Chapter XIV of the UN Charter (Articles 92–96).ದ ಜೂರಿಸ್ದಿಕಶನ್ ಇಸ್ ಡಿಸ್ಕ್ಡ್ ಇನ್ ದ ಎನ್ಟೈರ್ ಚಾಪ್ಟರ್ ಅಫ್ ದಿ ಯು ಎನ್ ಚಾಪ್ಟೆರ್ Full text ಪೂರ್ಣ ಪಾಠ Archived 2009-02-20 ವೇಬ್ಯಾಕ್ ಮೆಷಿನ್ ನಲ್ಲಿ.
  10. See the Nottebohm Case (Liechtenstein v Guatemala), [1955] ICJ Reports 4.ಸಿ ದ ನೊಟ್ಟಬೌಮ್ ಕೋಸ್ ಲಿಚ್ಟನ್ಸ್ತೆನ್ ವಿ. ಗುಟೆಮಲ] [1955] ಐಸಿಜೆ ರಿಪೋಟ್ಸ್
  11. See List of treaties that confer jurisdiction on the ICJ.ಸಿ ಲಿಸ್ಟ್ ಅಫ್ ಟ್ರಿಟಿಸ್ ಡಟ್ ಕೌನ್ಫೆರ್ ಜೂರಿಸ್ಡಿಕಶನ್ ಅನ್ ದ ಐ ಸಿ ಜೆ
  12. Case Concerning United States Diplomatic and Consular Staff in Tehran (USA v Iran), [1979] ICJ Reports 7.ಕೇಸ್ ಕನ್ಸರನಿನ್ಗ್ ಯುನೈಟೈಡ್ ಸ್ಟೈಟ್ಸ್ ಡಿಪ್ಲಮ್ಯಟಿಕ್ ಮತ್ತು ಕನ್ಸುಲರ್ ಸ್ಟಫ್ ಇನ್ ಥೆಹರನ್
  13. See Charney J "Compromissory Clauses and the Jurisdiction of the International Court of Justice" (1987) 81 American Journal of International Law 855.ಸಿ ಚಾರ್ನಿ.ಜೆ ಕಪ್ರಮಿಸ್ಸರಿ ಕ್ಲಚ್ಸ್ ಮತ್ತು ದ ಜೂರಿಸ್ ಡಿಕಶನ್ ಅಫ ದ ಇನ್ಟೆರ್ ನ್ಯಾಶಿನಲ್ ಕೋಟ್ ಅಫ್ ದಿ ಜಟ್ಸಸ್"[1987]81 ಅಮೇರಿಕನ್ ಜರ್ನಲ್ ಅಫ್ ಇನ್ಟ್ರ್ ನ್ಯಾಶಿನಲ್ ಲಾ.
  14. See Alexandrov S Reservations in Unilateral Declarations Accepting the Compulsory Jurisdiction of the International Court of Justice (Leiden: Martinus Nijhoff, 1995).ಸಿ ಅಲ್ಕ್ಷಡೃಔ ಸ. ರಿಸೆರ್ವೆಶನ್ಸ್ ಇನ್ ಯುನಿಲೆಟರಲ್ ಡಿಕ್ಳರೆಶನ್ಸ್ ಅಕ್ಸೆಪ್ಟಿಗ್ ದ ಕಮ್ಪಲಸರಿ ಜೂರಿಸ್ಡಿಕಶನ್ ಅಫ್ ದಿ ಇನ್ಟೆನ್ಯಾಶಿನಲ್ ಕೋಟ್ ಅಫ್ ಜಸ್ಟೈಐಸ್ಲ್ ಲೆಅಡನ್:ಮಾರ್ಟಿನಸ್ ನಿಝೊಫ್ಫ್ 1995.
  15. For a complete list of countries and their stance with the ICJ, see Declarations Recognizing as Compulsory the Jurisdiction of the Court Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ..ಫಾರ್ ಏ ಕಮಪ್ಲಿಟ್ ಲಿಸ್ಟ್ ಆಫ್ ಕಟ್ರ್ರೀಸ್ ಮತ್ತು ದೆರ್ ಸ್ಟನ್ಸ್ ವಿತ್ ದ ಐ.ಸಿ.ಜೆ. ಸಿ ಡಿಕ್ಳರೆಶನ್ಸ್ ರೆಕಗ್ನಿಶನ್ ಅಸ್ ಕಮ್ಪಸರಿ ದ ಜೂರಿಸ್ಡಿಕಶ್ನ್ ಅಫ್ ದಿ ಕೋರ್ಟ್ ಅಗಸ್ಟ್ 7 2008ರಂದು ಮರುಸಂಪಾದಿಸಲಾಗಿದೆ.
  16. Australia, East Timor strike oil, gas deal Archived 2017-06-06 ವೇಬ್ಯಾಕ್ ಮೆಷಿನ್ ನಲ್ಲಿ. by Bob Burton, Asia Times, 17 May 2005.ಆಸ್ತ್ರೇಲಿಯ, ಈಸ್ಟ್ ಟಿಮೋರ್ ಸ್ಟಿಕೆ ಆಯಿಲ್ ಗ್ಯಾಸ್ ಡೀಲ್ ಬೈ ಬೊಬ್ ಬರ್ಟನ್ ಏಶಿಯ ಟೈಮ್ಸ್ ೧೭ ಮೇ 2005. Retrieved 4-21-06.ರಿಟ್ರೈಉಡ4-21-06
  17. The UN General Assembly Requests a World Court Advisory Opinion On Israel's Separation Barrier , Pieter H.F. Bekker, ASIL Archived 2008-02-12 ವೇಬ್ಯಾಕ್ ಮೆಷಿನ್ ನಲ್ಲಿ. (American Society of International Law) Insights, December 2003.ದಿ ಯು ಯನ್ ಜೆನರಲ್ ಅಸೆಮ್ಲಿ ರಿಕ್ವೆಸ್ಟ್ ಎ ವಲ್ಡ್ ಕೋಟ್ ಅಡ್ವರ್ಸರಿ ಒಪಿನಿಯನ್ ಆನ್ ಇಸ್ರೆಲ್ ನ ಸಪರೇಶನ್ ಬ್ಯಾರಿಯರ್ ಪೀಟರ್ ಹೆಚ್.ಏಫ್ ಬೆಕ್ಕೆರ್, ಎ ಸ್ಐ ಲ್ ಅಮೇರಿಕನ್ ಸೊಸೈಟಿ ಅಫ್ ಇನ್ಟ್ ನ್ಯಾಶಿನಲ್ ಲಾ, ಇನ್ಸೈಟ್ ಡಿಸೇಬರ್2003
  18. Statute of the International Court of Justice, Article 38(2)ಸ್ಟಟುಟ್ ಅಫ್ ದಿ ಇನ್ಟೆರ್ನನ್ಯಾಶಿನಲ್ ಕೋಟ್ ಅಫ್ ಜಸ್ಟೀಸ, ಅರ್ಟಿಕಲ್
  19. Statute of the International Court of Justice, Article 60ಸ್ಟ್ತಟ್ಯು ಅಫ್ ದಿ ಇಟರ್ ನ್ಯಾಶನಲ್ ಕೋಟ್ ಅಫ್ ಜಸ್ಟೈಐಸ್, ಅರ್ಟಿಕಲ್


ಹೆಚ್ಚಿ ಓದಿಗಾಗಿ

[ಬದಲಾಯಿಸಿ]
  • Rosenne S, Rosenne's the world court: what it is and how it works 6th ed (Leiden: Martinus Nijhoff, 2003).
  • Decisions of the World Court Relevant to the UNCLOS (2010) and Contents & Indexes dedicated to Former ICJ President Stephen M. Schwebelಡಿಸಿಶನ್ಸ್ ಅಫ್ ದ ವಲ್ಡ್ ಕೋಟ್ ರಿಲವೆಟ್ ಟು ದ ಎನ್ಕ್ಲೊಸ ಮತ್ತು ಕನ್ಟೆಟ್ಸ್ ಇಡೆಕ್ಸ್ ಡೆಡಿಕೆಟೆಡ್ ಟು ಫರ್ಮರ್ ಪ್ರೆಸಿಡೆಟ್ ಸ್ಟೆಫನ್ ಅಮ್.ಶುವೆಬೆಲ್

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • International Court of Justice Archived 2017-04-23 ವೇಬ್ಯಾಕ್ ಮೆಷಿನ್ ನಲ್ಲಿ., Official siteಇಟೆರ್ನ್ಯಶಿನಲ್ ಕೋರ್ಟ್ ಅಫ್ ಜಸ್ಟೈಸ್ ಅಫಿಶಿಲ್
  • List of cases Archived 2008-12-05 ವೇಬ್ಯಾಕ್ ಮೆಷಿನ್ ನಲ್ಲಿ. ruled upon by the ICJ since its creation in 1946ಲಿಸ್ಟ್ ಅಫ್ ಕಸೆಸ್ ರುಲ್ಡ್ ಅಪ್ನ್ ಬೈ ದಿ ಐ ಸಿ ಜೆ
  • Hague Justice Portal: Academic gateway to The Hague organisations concerning international peace, justice and security.ಹಗ್ಯು ಜಸ್ಟಿಸ್ ಪೊರಟಲ್ ಅಕಡಮಿಕ್ ಗೇಟ್ ವೆ ಟು ದಿ ಹಗ್ಯು ಅರ್ಗನೈಸೆಶನ್ಸ್ ಕನ್ಸರ್ನಿಗ್ ಇಟೆರ್ನಶಿನಲ್ ಪೀಸ,ಜಸ್ಟೀಸ್ ಮತ್ತು ಸೆಕ್ಯುರಿಟಿ

52°05′11.76″N 4°17′43.80″E / 52.0866000°N 4.2955000°E / 52.0866000; 4.2955000