ಜಯಾ ತ್ಯಾಗರಾಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಜಯಾ ತ್ಯಾಗರಾಜನ್
ಡಿಸೆಂಬರ್ ೨೦೧೧ ರಲ್ಲಿ ದೆಹಲಿಯಲ್ಲಿನ, ಐಸಿಸಿಆರ್ನಲ್ಲಿ ನಡೆದ ಪ್ರದರ್ಶನದಲ್ಲಿ ತೆಗೆದ ಚಿತ್ರ
ಹಿನ್ನೆಲೆ ಮಾಹಿತಿ
ಜನ್ಮನಾಮಜಯಲಕ್ಷ್ಮೀ ಕೃಷ್ಣಮೂರ್ತಿ
ಜನನ(೧೯೫೬-೧೨-೨೯)೨೯ ಡಿಸೆಂಬರ್ ೧೯೫೬
ಕೊಯಂಬತ್ತೂರು, ತಮಿಳುನಾಡು, ಭಾರತ

ಜಯಾ ತ್ಯಾಗರಾಜನ್ (೧೯೫೬ ರಲ್ಲಿ ಭಾರತದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು) ಸಾಂಪ್ರದಾಯಿಕ ಭಾರತೀಯ ಕಲಾವಿದೆ, ಅವರ ತಂಜೂರು ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ . [೧] ಈ ವರ್ಣಚಿತ್ರಗಳು ಹುಟ್ಟಿಕೊಂಡ ಮದ್ರಾಸ್ ರಾಜ್ಯದಲ್ಲಿ ಜಯಾ ಜನಿಸಿದರು.

ಶಿಕ್ಷಣ[ಬದಲಾಯಿಸಿ]

೧೯೭೬ ರಲ್ಲಿ ಇತಿಹಾಸದಲ್ಲಿ ತನ್ನ ಸ್ನಾತಕೋತ್ತರ ಪದವಿ ಮತ್ತು ೧೯೭೮ ರಲ್ಲಿ ಭಾರತೀಯ ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಮದ್ರಾಸ್‌ನ ಕಲಾಕ್ಷೇತ್ರ ಸ್ಕೂಲ್ ಆಫ್ ಫೈನ್ ಆರ್ಟ್ಸ್‌ನಿಂದ ಲಲಿತಕಲೆಯಲ್ಲಿ ಡಿಪ್ಲೊಮಾ ಪಡೆದರು. ವಿಭಾಗದ ಮುಖ್ಯಸ್ಥರಾದ ಶ್ರೀ ಕೆ. ಶ್ರೀನಿವಾಸುಲು ಅವರ ಮಾರ್ಗದರ್ಶನ ಪಡೆದರು.[೨]

ಜಯಾ ಅವರು ತಂಜಾವೂರು ಸ್ಕೂಲ್ ಆಫ್ ಪೇಂಟಿಂಗ್ಸ್‌ನ ತೀವ್ರ ಅನುಯಾಯಿಗಳಾಗಿದ್ದಾರೆ ಮತ್ತು ಅವರ ವಿವಿಧ ಪ್ರದರ್ಶನಗಳು ತಂಜೂರಿನ ಹಳೆಯ ಮೇರುಕೃತಿಗಳ ಪುನರುತ್ಪಾದನೆಗಳಾಗಿವೆ.

ಪ್ರದರ್ಶನಗಳು[ಬದಲಾಯಿಸಿ]

ಏಪ್ರಿಲ್ ೨೦೦೯ ರ ನ್ಯೂಯಾರ್ಕ್ನ ಏಷ್ಯಾ ಇನಿಶಿಯೇಟಿವ್ಸ್ ಪ್ರಾರಂಭದಲ್ಲಿ ಕಾನ್ಸುಲ್ ಜನರಲ್ ಶ್ರೀ ಪ್ರಭು ದಯಾಲ್ ಮತ್ತು ರಾಯಭಾರಿ ಫಿಲಿಪ್ ಟಾಲ್ಬೋಟ್ ಅವರೊಂದಿಗೆ ಜಯ ತ್ಯಾಗರಾಜನ್ (ತೀವ್ರ ಬಲಬದಿಯಲ್ಲಿ)

೧೯೮೦ ರಲ್ಲಿ ಕಲಕ್ಷೇತ್ರ ಶಾಲೆಯಲ್ಲಿ ಅವರ ಮೊದಲ ಪ್ರದರ್ಶನ ಮಾಡಿದ ನಂತರ ೧೯೮೧ ರಲ್ಲಿ ಒಂದು ಪ್ರದರ್ಶನ ಮಾಡಿದರು. ಅವರು ೧೯೮೨ ರಲ್ಲಿ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಮತ್ತು ಮೇ ೧೯೯೨ ಮತ್ತು ಆಗಸ್ಟ್ ೧೯೯೩ ರಲ್ಲಿ ನವದೆಹಲಿಯ ತ್ರಿವೇಣಿ ಆರ್ಟ್ ಗ್ಯಾಲರಿಯಲ್ಲಿ ಯಶಸ್ವಿಯಾಗಿ ಏಕವ್ಯಕ್ತಿ ಪ್ರದರ್ಶನಗಳನ್ನು ನಡೆಸಿದ್ದಾರೆ. ೧೯೮೬ ರಲ್ಲಿ ನವದೆಹಲಿಯ ಲಲಿತ್ ಕಲಾ ಅಕಾಡೆಮಿ ಆಯೋಜಿಸಿದ್ದ ಕಲಾ-ಮೇಳದಲ್ಲಿ ಭಾಗವಹಿಸಲು ಅವರನ್ನು ಕೇಳಲಾಯಿತು.[೩]

೧೯೮೯ ಮತ್ತು ೨೦೦೦ ರಲ್ಲಿ ಅಖಿಲ ಭಾರತ ಲಲಿತಕಲೆ ಮತ್ತು ಕರಕುಶಲ ಸೊಸೈಟಿ ನಡೆಸಿದ ಸಾಂಪ್ರದಾಯಿಕ ಕಲಾ ಪ್ರದರ್ಶನಕ್ಕೆ ಜಯ ಅವರ ವರ್ಣಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಪೂಮ್‌ಪುಹಾರ್, ತಮಿಳುನಾಡು ಎಂಪೋರಿಯಂ, ಮತ್ತು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಅವರ ಪ್ರದರ್ನಗಳನ್ನು ಆಯ್ಕೆ ಮಾಡಲಾಗಿತ್ತು.

ಜಯಾ ಅವರು ಅಕ್ಟೋಬರ್ ೧೯೯೫ ರಲ್ಲಿ ಲಂಡನ್‌ನ ಭಾರತದ ಹೈ ಕಮಿಷನ್‌ನ ನೆಹರು ಸೆಂಟರ್, ಸೇಂಟ್ ಡೆನಿಸ್ ಮುನ್ಸಿಪಾಲಿಟಿ, ರಿಯೂನಿಯನ್ ಐಲ್ಯಾಂಡ್, ಇಂದಿರಾ ಗಾಂಧಿ ಕಲೆ ಮತ್ತು ಸಂಸ್ಕೃತಿ ಕೇಂದ್ರ, ಮಾರಿಷಸ್ ಮತ್ತು ಏಪ್ರಿಲ್ ೧೯೯೭ ರಲ್ಲಿ ಎ‌ಎನ್‌ಜ಼ಿ ಗ್ರಿಂಡ್ಲೇಸ್ ಬ್ಯಾಂಕ್‌ನಲ್ಲಿ ತಮ್ಮ ವರ್ಣಚಿತ್ರಗಳನ್ನು ಪ್ರದರ್ಶಿದರು. ಅಕ್ಟೋಬರ್ ೧೯೯೭, ೧೯೯೮ ಮತ್ತು ೨೦೦೨ ರಲ್ಲಿ ಜಯಾ ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿಯಲ್ಲಿ ತನ್ನ ವರ್ಣಚಿತ್ರಗಳ ಪ್ರದರ್ಶನವನ್ನು ನಡೆಸಿದರು. ಅವರು ೨೦೦೬ ರಲ್ಲಿ ಜೈಪುರದ ಜವಾಹರ್ ಕಲಾ ಕೇಂದ್ರದಲ್ಲಿ ತಮ್ಮ ವರ್ಣಚಿತ್ರಗಳ ಪ್ರದರ್ಶನವನ್ನು ನಡೆಸಿದರು.

ಜಯಾ ಇತ್ತೀಚೆಗೆ ಅಮೇರಿಕಾದಲ್ಲಿ ಏಷ್ಯಾ ಇನಿಶಿಯೇಟಿವ್ಸ್ ಪ್ರಾರಂಭದಲ್ಲಿ ಏಷ್ಯಾ ಇನಿಶಿಯೇಟಿವ್ಸ್ ಸಹಯೋಗದೊಂದಿಗೆ ನ್ಯೂಯಾರ್ಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದಲ್ಲಿ ತಂಜೂರು ವರ್ಣಚಿತ್ರಗಳನ್ನು ಪ್ರದರ್ಶಿಸಿದರು.

ಜಯ ಅವರ ಸೃಷ್ಟಿಗಳು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿನ ಅನೇಕ ಮನೆಗಳು ಮತ್ತು ಕಾರ್ಪೊರೇಟ್ ಕಚೇರಿಗಳಲ್ಲಿ ಹೆಮ್ಮೆಯ ಸ್ಥಾನವನ್ನು ಪಡೆದಿವೆ.

ಉಲ್ಲೇಖಗಳು[ಬದಲಾಯಿಸಿ]

  1. "Welcome to Embassy of India, Washington D C, USA" (PDF). Indianembassy.org. Retrieved 2019-07-07.
  2. "Archived copy". Archived from the original on 19 June 2010. Retrieved 12 May 2009.{{cite web}}: CS1 maint: archived copy as title (link)
  3. "Museums Openings". Washington Post. 22 February 2002. p. T62. Archived from the original on 5 ನವೆಂಬರ್ 2012. Retrieved 28 January 2011. ...Tanjore paintings by Jaya Thyagarajan through Tuesday....