ವಿಷಯಕ್ಕೆ ಹೋಗು

ಕಲಾಕ್ಷೇತ್ರ

Coordinates: 12°59′17″N 80°15′54″E / 12.9881°N 80.26500°E / 12.9881; 80.26500
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಾಕ್ಷೇತ್ರ
140x
Location
ಬೆಸೆಂಟ್ ನಗರ, ಚೆನ್ನೈ, ಭಾರತ,
Coordinates 12°59′17″N 80°15′54″E / 12.9881°N 80.26500°E / 12.9881; 80.26500
Information
ಸ್ಥಾಪನೆ ಜನವರಿ 1936
Founder ರುಕ್ಮಿಣಿ ದೇವಿ ಅರುಂಡೇಲ್
ನಿರ್ದೇಶಕರು ಪ್ರಿಯದರ್ಶಿನಿ ಗೋವಿಂದ್
ಅಧ್ಯಕ್ಷರು ಎನ್.ಗೋಪಾಲಸ್ವಾಮಿ[]

ಕಲಾಕ್ಷೇತ್ರ: ಚೆನ್ನೈನಲ್ಲಿರುವ ಸಂಗೀತ, ನಾಟ್ಯ ಬೋಧನಾ ಸಂಸ್ಥೆ. ರುಕ್ಮಿಣಿದೇವಿ ಅರುಂಡೇಲ್ ಅವರಿಂದ ಜನವರಿ ೧೯೩೬ರಲ್ಲಿ ಸ್ಥಾಪಿಸಲ್ಪಟ್ಟಿತು. ಭರತನಾಟ್ಯ, ಸಂಗೀತ ಇವುಗಳ ಬೋಧನೆಗೆ ಮೀಸಲಾದ ಸಂಸ್ಥೆ. ಈ ಸಂಸ್ಥೆಗೆ ದೇಶ ವಿದೇಶಗಳಲ್ಲಿ ಮನ್ನಣೆ ದೊರಕಿ ಪ್ರಸಿದ್ಧಿ ಪಡೆಯಿತು. ರುಕ್ಮಿಣಿದೇವಿಯವರು ೧೯೫೨, ಮತ್ತು ೧೯೫೬ರಲ್ಲಿ ಭಾರತದ ರಾಜ್ಯಸಭಾ ಸದಸ್ಯೆಯಾಗಿ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿಯಂತೆ ವಿದೇಶಗಳಲ್ಲಿ ಸಂಚರಿಸಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಾನಂತರ ಭಾರತ ಸರ್ಕಾರ ‘ಕಲಾಕ್ಷೇತ್ರ ಫೌಂಡೇಷನ್ ಆ್ಯಕ್ಟ್‌ ನಂ.೬/೧೯೯೪’ ಅನ್ನು ಹೊರಡಿಸಿತು. ಚೆನ್ನೈ ಸರ್ಕಾರ ೨೯ ಸೆಪ್ಟಂಬರ್ ೨೦೦೩ರಲ್ಲಿ ಸಂಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಈಗ ೪ ಮತ್ತು ೫ ವರ್ಷಗಳ- ಗಾಯನ, ವಾದ್ಯಗಳ ನುಡಿಸುವಿಕೆ ಮತ್ತು ನಾಟ್ಯ ಇವುಗಳ ತರಬೇತಿ ತರಗತಿಗಳು ನಡೆಯುತ್ತಿವೆ. ಈ ಸಂಸ್ಥೆಯಲ್ಲಿ ಟೈಗರ್ ವರದಾಚಾರ್, ಮೈಸೂರು ವಾಸುದೇವಾಚಾರ್, ಪಾಪನಾಶಂ ಶಿವನ್, ಮೀನಾಕ್ಷಿ ಸುಂದರಂ ಪಿಳ್ಳೆ ಮೊದಲಾದ ಪ್ರಸಿದ್ಧ ವಿದ್ವಾಂಸರು ಬೋಧಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]