ಸಂತಾರಾ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಕಂಭರಿಯ ಚಾಹಮಾನಗಳು
೭ ನೇ ಶತಮಾನ–೧೮ನೇ ಶತಮಾನ
Capitalಹೊಂಬುಜ & ಕಳಸ
Religion
ಜೈನ ಧರ್ಮ
Governmentರಾಜಪ್ರಭುತ್ವ
History 
• Established
೭ ನೇ ಶತಮಾನ
• Disestablished
೧೮ನೇ ಶತಮಾನ
Succeeded by
ಕೆಳದಿಯ ನಾಯಕರು
Today part ofಕರ್ನಾಟಕ
ಕಾರ್ಕಳದಲ್ಲಿ ಬಾಹುಬಲಿಯ ಏಕಶಿಲೆಯನ್ನು ೧೪೩೨ ಸಿಇ, ರಲ್ಲಿ ಸಂತರ-ಭೈರರಸ ರಾಜವಂಶದ ದೊರೆ ಸ್ಥಾಪಿಸಿದರು.

ಸಂತಾರ ಅಥವಾ ಭೈರರಸ [೧] ಭಾರತದ ಕರ್ನಾಟಕದ ಮಧ್ಯಕಾಲೀನ ಆಡಳಿತ ರಾಜವಂಶವಾಗಿತ್ತು. [೨] ಅವರ ಸಾಮ್ರಾಜ್ಯದ ವ್ಯಾಪ್ತಿ ಪ್ರದೇಶವು ಮಲೆನಾಡು ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿತ್ತು. [೩] ಇವರ ರಾಜ್ಯವು ಎರಡು ರಾಜಧಾನಿಗಳನ್ನು ಹೊಂದಿತ್ತು. ಕರಾವಳಿಯ ಬಯಲು ಸೀಮೆಯಲ್ಲಿ ಕಾರ್ಕಳ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಳಸ . ಆದ್ದರಿಂದ ಅವರು ಆಳಿದ ಪ್ರದೇಶವನ್ನು ಕಳಸ-ಕಾರ್ಕಳ ಸಾಮ್ರಾಜ್ಯ ಎಂದೂ ಕರೆಯುತ್ತಾರೆ. ಸಂತರು ಜೈನ ಮತದವರಾಗಿದ್ದರು ಮತ್ತು ಶೈವ ಅಲುಪಾ ರಾಜಮನೆತನದೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದರು. [೩] ವಿಜಯನಗರ ಸಾಮ್ರಾಜ್ಯದ ಉದಯದ ನಂತರ ಸಂತರು ಅದರ ಸಾಮಂತರಾದರು. ಈ ಅವಧಿಯಲ್ಲಿ, ಸಾಂತರ ದೊರೆ ವೀರ ಪಾಂಡ್ಯ ಭೈರರಸ ಕಾರ್ಕಳದಲ್ಲಿ ಬಾಹುಬಲಿಯ ಏಕಶಿಲೆಯನ್ನು ಸ್ಥಾಪಿಸಿದನು. [೩] ವಿಜಯನಗರದ ಅಳಿವಿನ ನಂತರ ಕೆಳದಿಯ ನಾಯಕರ ಆಕ್ರಮಣಗಳು ಮತ್ತು ನಂತರ ಬಂದ ಹೈದರ್ ಅಲಿಯಿಂದ ರಾಜವಂಶವು ವಿನಾಶಕ್ಕೆ ಒಳಗಾಯಿತು.

ಮೂಲಗಳು[ಬದಲಾಯಿಸಿ]

ಉತ್ತರ ಭಾರತದ ಮಥುರಾದ ಜೈನ ರಾಜಕುಮಾರ ಜಿನದತ್ತ ರಾಯ ಅಥವಾ ಜಿಂದುತ್ ರಾಯ್ ಈ ವಂಶದ ಸ್ಥಾಪಕ ಎಂದು ಭಾವಿಸಲಾಗಿದೆ. [೪] ಹುಮ್ಚಾದಲ್ಲಿ ಸಾಮ್ರಾಜ್ಯದ ಅಡಿಪಾಯವನ್ನು ಹಾಕುವ ಜೈನ ದೇವತೆ ಪದ್ಮಾವತಿಯ ವಿಗ್ರಹದೊಂದಿಗೆ ಅವನು ಹುಮ್ಚಾ ಪಟ್ಟಣಕ್ಕೆ ವಲಸೆ ಬಂದನೆಂದು ಹೇಳಲಾಗುತ್ತದೆ. ಇವರು ಹಮ್ಚಾ ಜೈನ ದೇವಾಲಯಗಳನ್ನು ಸಹ ನಿರ್ಮಿಸಿದರು.

ಜಿನದತ್ತನಿಂದ ಸ್ಥಾಪಿಸಲ್ಪಟ್ಟ ರಾಜವಂಶವು ೧೨ ನೇ ಶತಮಾನದಲ್ಲಿ ಎರಡು ಶಾಖೆಗಳಾಗಿ ವಿಭಜಿಸಲ್ಪಟ್ಟಿತು, ಒಂದು ಶಾಖೆಯು ಕಳಸದಲ್ಲಿ ಮತ್ತು ಇನ್ನೊಂದು ಶಿವಮೊಗ್ಗ ಜಿಲ್ಲೆಯ ಹೊಸಗುಂದದಲ್ಲಿ ನೆಲೆಗೊಂಡಿದೆ. ಕ್ರಮೇಣ ಈ ಶಾಖೆಗಳು ಹಳೆಯ ದಕ್ಷಿಣ ಕೆನರಾ ಜಿಲ್ಲೆಯ ಕೆರವಶೆ ಮತ್ತು ಕಾರ್ಕಳಕ್ಕೆ ತಮ್ಮ ರಾಜಧಾನಿಗಳನ್ನು ಬದಲಾಯಿಸಿದವು.

ಸಂತರವರು ಹಲವಾರು ಜೈನ ಸ್ಮಾರಕಗಳನ್ನು ನಿರ್ಮಿಸಿದರು ಮತ್ತು ಕರ್ನಾಟಕ, ತುಳುನಾಡು ಮತ್ತು ಮಲೆನಾಡು ಪ್ರದೇಶದಲ್ಲಿ ಜೈನ ಧರ್ಮದ ಹರಡುವಿಕೆಗೆ ಕಾರಣರಾಗಿದ್ದರು. [೨] ಅವರು ಶಿವಮೊಗ್ಗ ಜಿಲ್ಲೆಯ ನಗರ ತಾಲ್ಲೂಕಿನ ಪಂಚಕೂಟ ಬಸದಿಯ ಜೈನ ಸನ್ಯಾಸಿಗಳ ನಿರ್ವಹಣೆಗಾಗಿ ಎರಡು ಗ್ರಾಮಗಳನ್ನು ದಾನ ಮಾಡಿದರು. [೫]

ಟಿಪ್ಪಣಿಗಳು[ಬದಲಾಯಿಸಿ]

ಈ ರಾಜವಂಶಕ್ಕೆ ಸಾಂತಾ, ಸಂತಾರಾ ಎಂದು ಸಹ ಕರೆಯುತ್ತಾರೆ. ಈ ರಾಜರುಗಳು ತಮ್ಮ ಹೆಸರಿಗೆ ಪಾಂಡ್ಯ ಮತ್ತು ಒಡೆಯ ಎಂಬ ಬಿರುದುಗಳನ್ನು ಜೋಡಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Alternate forms of the dynasty's name include Santha, Santa, Santhara. The kings of the dynasty also attached titles like Pandya and Odeya to their names.
  2. ೨.೦ ೨.೧ Chavan, Shakuntala Prakash (2005). Jainism in Southern Karnataka Up to AD 1565. D.K. Printworld. pp. 181–183. ISBN 9788124603154. Retrieved 24 February 2018.Chavan, Shakuntala Prakash (2005). Jainism in Southern Karnataka Up to AD 1565. D.K. Printworld. pp. 181–183. ISBN 9788124603154. Retrieved 24 February 2018.
  3. ೩.೦ ೩.೧ ೩.೨ Prabhu, Ganesh (2002-02-04). "Karkala gears up for 'Mahamastakabhisheka'". en:The Hindu. Archived from the original on 22 March 2002. Retrieved 24 February 2018.
  4. Jaganathan, Rijutha (21 August 2017). "Humcha's Jain heritage". www.deccanherald.com. Deccan Herald. Retrieved 24 February 2018.
  5. Ram Bhushan Prasad Singh 2008, p. 83.

ಮೂಲಗಳು[ಬದಲಾಯಿಸಿ]