ಕರ್ನಾಟಕ ರತ್ನ
ವಿಕಿಪೀಡಿಯ ಇಂದ
| ಕರ್ನಾಟಕ ರತ್ನ | ||
| ಪ್ರಶಸ್ತಿಯ ವಿವರ | ||
|---|---|---|
| ಮಾದರಿ | ನಾಗರಿಕ | |
| ವರ್ಗ | ಸಾರ್ವಜನಿಕ | |
| ಪ್ರಾರಂಭವಾದದ್ದು | ೧೯೯೧ | |
| ಮೊದಲ ಪ್ರಶಸ್ತಿ | ೧೯೯೨ | |
| ಕಡೆಯ ಪ್ರಶಸ್ತಿ | ೨೦೦೯ | |
| ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
| ವಿವರ | ಕರ್ನಾಟಕ ದ ಅತ್ಯುನ್ನತ ನಾಗರಿಕ ಪ್ರಶಸ್ತಿ | |
| ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
| ಕೊನೆಯ ಪ್ರಶಸ್ತಿ ಪುರಸ್ಕೃತರು | ಡಾ. ವೀರೇಂದ್ರ ಹೆಗ್ಗಡೆ | |
| ಪ್ರಶಸ್ತಿಯ ಶ್ರೇಣಿ | ||
| none ← ಕರ್ನಾಟಕ ರತ್ನ → ರಾಜ್ಯೋತ್ಸವ ಪ್ರಶಸ್ತಿ | ||
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. [೧] . ಒಟ್ಟಾರೆ ಇದುವರೆಗೆ ೮ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ [ಬದಲಾಯಿಸಿ]
ಈ ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ. [೧]
ಪ್ರಶಸ್ತಿ ಪುರಸ್ಕೃತರು [ಬದಲಾಯಿಸಿ]
ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿನ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಮೊಟ್ಟ ಮೊದಲ ಭಾರಿಗೆ ಪಡೆದರು. ನಂತರ ಇದನ್ನು ಡಾ. ರಾಜ್‌ಕುಮಾರ್, ಎಸ್. ನಿಜಲಿಂಗಪ್ಪ, ಸಿ ಎನ್ ಆರ್ ರಾವ್, ಭೀಮಸೇನ ಜೋಷಿ, ಶ್ರೀ ಶಿವಕುಮಾರ ಸ್ವಾಮಿಗಳು, ಡಾ. ಡಿ ಜವರೇಗೌಡ ಮತ್ತು ಡಾ. ವೀರೇಂದ್ರ ಹೆಗ್ಗಡೆ ಯವರಿಗೆ ನೀಡಿ ಗೌರವಿಸಲಾಗಿದೆ.
| ಕ್ರ.ಸಂ | ಹೆಸರು | ಜನನ / ಮರಣ | ಗೌರವಿಸಿದ್ದು | ಟಿಪ್ಪಣಿ |
|---|---|---|---|---|
| 1. | ಕುವೆಂಪು | ೧೯೦೪–೧೯೯೪ | ೧೯೯೨ | ಸಾಹಿತ್ಯ. |
| 2. | ಡಾ. ರಾಜ್‌ಕುಮಾರ್ | ೧೯೨೯–೨೦೦೬ | ೧೯೯೨ | ಸಿನೆಮಾ |
| 3. | ಎಸ್. ನಿಜಲಿಂಗಪ್ಪ [೨] | ೧೯೦೨–೨೦೦೦ | ೧೯೯೯ | ರಾಜಕೀಯ |
| 4. | ಸಿ ಎನ್ ಆರ್ ರಾವ್ [೩] | b. ೧೯೩೪ | ೨೦೦೦ | ವಿಜ್ಞಾನ |
| 5. | ಭೀಮಸೇನ ಜೋಷಿ | ೧೯೨೨–೨೦೧೧ [೪] | ೨೦೦೫ | ಸಂಗೀತ |
| 6. | ಶ್ರೀ ಶಿವಕುಮಾರ ಸ್ವಾಮಿಗಳು [೫] | b. ೧೯೦೭ | ೨೦೦೭ | ಸಾಮಾಜಿಕ ಸೇವೆ |
| 7. | ಡಾ. ಡಿ. ಜವರೇಗೌಡ [೧] | b. ೧೯೧೮ | ೨೦೦೮ | ಶಿಕ್ಷಣ, ಸಾಹಿತ್ಯ |
| 8. | ಡಾ. ವೀರೇಂದ್ರ ಹೆಗ್ಗಡೆ [೧] | b. ೧೯೪೮ | ೨೦೦೯ | ಸಾಮಾಜಿಕ ಸೇವೆ, ಲೋಕೋಪಕಾರಿ ಕೆಲಸ |
References [ಬದಲಾಯಿಸಿ]
- ↑ ೧.೦ ೧.೧ ೧.೨ ೧.೩ ಕರ್ನಾಟಕ ಸರ್ಕಾರ ದಿಂದ ಜವರೆ ಗೌಡ ಅವರಿಗೆ ಕರ್ನಾಟಕ ರತ್ನ, ವೀರೇಂದ್ರ ಹೆಗ್ಗಡೆ
- ↑ A home of mementoes
- ↑ ಸಿ.ಎನ್.ಆರ್ ರಾವ್ ರವರಿಗೆ ಕರ್ನಾಟಕ ರತ್ನ
- ↑ Karnataka declares day’s mourning to condole Joshi's death
- ↑ Siddaganga seer receives Karnataka ratna