ರಾವಣ
ರಾವಣ | |
---|---|
Ethnic | Legend, thamizhan |
ಬಿರುದುಗಳು | ಲಂಕೆಯ ಅರಸ |
ಪೂರ್ವಾಧಿಕಾರಿ | ಕುಬೇರ |
ಉತ್ತರಾಧಿಕಾರಿ | ವಿಭೀಷಣ |
ಪಟ್ಟದರಸಿ | ಮಂಡೋದರಿ, ಧ್ಯಾನಮಾಲಿನಿ |
ಮಕ್ಕಳು | ಇಂದ್ರಜಿತು Yohmoththa ಅತಿಕಾಯ ಅಕ್ಷಯ ಕುಮಾರ ದೇವಾಂತಕ ನರಾಂತಕ ತ್ರಿಶಿರ ಮಂಥ |
ತಂದೆ | ವಿಶ್ರಾವಸ್ |
ತಾಯಿ | ಕೈಕೇಸಿ |
ಧಾರ್ಮಿಕ ನಂಬಿಕೆಗಳು | ಶೈವ ಪಂಥ |
ರಾವಣನ ಕುಲ - - ಮಾಳವ ದೊರೆ ನಂಜುಂಡಸ್ವಾಮಿ
ಈ ಕೆಳಗೆ ದಿವಂಗತ ಶ್ರೀ. ಗುಸ್ತಾವ್ ಓಪರ್ಥ ಅವರು ರಾವಣ ಹಾಗೂ ಆತನ ಕುಲದ ಬಗ್ಗೆ ಹೇಳಿರುವ ವಿಚಾರಗಳನ್ನು ನೋಡಿರಿ.
“ಪುಲಸ್ತ್ಯನು ಅಗಸ್ತ್ಯ ಹಾಗೂ ವಿಶ್ರಾವಸರ ತಂದೆಯೆಂದು ಹೇಳಲಾಗಿದೆ. ವಿಶ್ರಾವಸನಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು; ಇದವಿದ (ಅಥವಾ ಇಲವಿಲಾ)ಳಿಂದ ಕುಬೇರ ಮತ್ತು ರಾವಣ, ಕೇಶಿನೀಯಿಂದ ಕುಂಭಕರ್ಣ ಮತ್ತು ವಿಭೀಷಣರು ಹುಟ್ಟಿದರು. ದಕ್ಷಿಣ ಭಾರತದ ನಾಗರೀಕತೆಯ ಋಷಿ ಅಗಸ್ತ್ಯನು ಹೀಗಾಗಿ ಅತಿಯಾಗಿ ದ್ವೇಷಿಸಲ್ಪಟ್ಟ ರಾಕ್ಷಸರ ನಾಯಕ ರಾವಣನಿಗೆ ದೇವರ-ದ್ವೇಷಿಯಾಗಿದ್ದ ರಾಜನಿಗೆ ಚಿಕ್ಕಪ್ಪ. ರಾವಣನು ಭಾರತವನ್ನು ಜಯಿಸಿ ದೇವತೆಗಳನ್ನು ದಮನಮಾಡಿ ಅವರನ್ನು ತನ್ನ ಅಡಿಯಾಳುಗಳನ್ನಾಗಿಟ್ಟಿದ್ದ. ಅವರನ್ನು ವಿಷ್ಣುವು ಅವತಾರವೆತ್ತಿ ಬಲರಾಮನಾಗಿ ಹುಟ್ಟಿ ಕಾಪಾಡಿದ. ರಾವಣನ ಚಿಕ್ಕಪ್ಪ ರಾಕ್ಷಸರ ವಿರುದ್ದ ಯುದ್ದವನ್ನು ಆರಂಭಿಸಿದ್ದ ಹಾಗೂ ಆತನು ರಾಮನಿಗೆ ರಾಕ್ಷಸರನ್ನು ಬಗ್ಗುಬಡಿಯುವುದು ಹೇಗೆ ಎಂದು ಸಲಹೆ ನೀಡಿದ. ಈ ಬಗೆಯ ಹಲವು ಕೌಟುಂಬಿಕ ಕಲಹಗಳು ರಾವಣ ಹಾಗೂ ಬಾಲಿ(ವಾಲಿ)ಯವರ ವಿರುದ್ದ ಯುದ್ದದಲ್ಲಿ ರಾಮನಿಗೆ ಸಹಾಯ ಮಾಡಿದವು. ಅವರ ತಮ್ಮಂದಿರಾದ ವಿಭೀಷಣ ಹಾಗೂ ಸುಗ್ರೀವರು ರಾಮನ ಪಾಳೆಯ ಸೇರಿದರು.
ಶ್ರೀಲಂಕಾ ದೇಶದ ಪ್ರಾಚೀನ-ಐತಿಹಾಸಿಕ ರಾಜಧಾನಿಯ ಮೊದಲಿನ ಹೆಸರು ಪುಲಸ್ತಿನಗರ .
ನಾವು ರಾವಣನನ್ನು ಶ್ರೀಲಂಕಾದ ರಾಜನೆಂದು ಪರಿಗಣಿಸಿದರೆ ಮತ್ತು ಆತನನ್ನು ಸಂಪೂರ್ಣ ದಕ್ಷಿಣ ಭಾರತದ ನಾಯಕನೆಂದು ಮಾನ್ಯತೆ ನೀಡಿದರೆ ಹಾಗೂ ಇಂದಿನ ಪುಲಯರು(ಹೊಲಯರು)ಗಳನ್ನು ಮೂಲನಿವಾಸಿಗಳ ಪ್ರತಿನಿಧಿಗಳು ಎಂದು ಒಪ್ಪಿದರೆ ಪುಲಸ್ತ್ಯ ಮತ್ತು ಪುಲಯನ್ ಪದಗಳ ನಡುವೆಯಿರುವ ಸಾಮ್ಯತೆಯನ್ನು ನಾವು ವಿವರಿಸಿದಂತಾಗುತ್ತದೆ.
ಪೌಲಸ್ತ್ಯ ಅಗಸ್ತ್ಯ ಮತ್ತು ಪೌಲಸ್ತ್ಯ ರಾವಣರ ನಡುವೆ ಇದ್ದ ಸಂಬಂಧವು ವಿಸ್ತøತ ಹಾಗೂ ಹೊಸ ವಿಚಾರಗಳಿಗೆ ದಾರಿಮಾಡಿಕೊಡುತ್ತದೆ. ಈ ಎಲ್ಲಾ ಮೇಲಿನ ಚರ್ಚೆಯಿಂದ ಕಂಡುಬರುವ ಅಂಶವೇನೆಂದರೆ ಭಾರತದ ಎಲ್ಲಾ ಬುಡಕಟ್ಟುಗಳು ಹಾಗೂ ಜನಾಂಗಗಳ ಮೂಲಪುರುಷರು ಒಂದೇ ಮೂಲದಿಂದ ಬಂದಿದ್ದಾರೆ ಮತ್ತು ಹಾಗಾಗಿ ಅವರುಗಳ ನಡುವೆ ಯಾವುದೇ ಪ್ರಮುಖ ವ್ಯತ್ಯಾಸಗಳು ಕಂಡಬರುವುದಿಲ್ಲ ಎಂದು ಒಪ್ಪಬೇಕಾಗುತ್ತದೆ. ಇವರಲ್ಲಿ ಕೆಲವರು ಸಮಾಜದ ಸ್ತರಗಳಲ್ಲಿ ಕುಸಿದು ತಾವಿಂದು ಬದುಕುತ್ತಿರುವ ಸ್ಥಿತಿ-ಗತಿಗೆ ನಂತರದ ಘಟನೆಗಳೇ ಕಾರಣ.
ಪುಲ ಎಂಬ ಪದವು ಪಲ್ಲ ಎಂಬ ಪದದ ವಿರೂಪವೆಂದು ಒಪ್ಪಬೇಕಾಗುತ್ತದೆ. ‘ಅ’ಕಾರವು ‘ಉ’ಕಾರವಾಗುವುದನ್ನು ನಾವು ಸುಲಭವಾಗಿ ವಿವರಿಸಬಹುದು ‘ಅ’ಕಾರವು ಕೇವಲ ‘ಉ’ಕಾರವಾಗುವುದಲ್ಲ ಸಂಸ್ಕøತದಲ್ಲಿ ‘ಪಲ’ ಎಂಬುದು ತಮಿಳಿನಲ್ಲಿ ಪುಲೈ ಎಂದಾಗುತ್ತದೆ. ಆದರೆ ‘ಅ’ಸ್ವರವನ್ನು ಬಹಳಷ್ಟು ಸಾರಿ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ‘ಉ’ ಸ್ವರದಂತೆ ಉಚ್ಚರಿಸಲಾಗುತ್ತದೆ. ಈ ಎಲ್ಲಾ ಘಟನೆಗಳಲ್ಲಿ ವಿವರಿಸಿದ ಪುಲಹ, ಪುಲಸ್ತ್ಯ, ಪುಲೋಮನ್ ಮತ್ತು ಇತ್ಯಾದಿ ಪದಗಳು ಪುಲಯರು (ಹೊಲಯರು) ಎಂಬ ಪದಗಳಿಗೆ ಸಾಮ್ಯತೆ ಹೊಂದಿರುವುದು ಎದ್ದು ಕಾಣುತ್ತದೆ.”
ನಾವೀಗ ಈ ಕೆಳಗೆ ದಿವಂಗತ ಶ್ರೀ. ಗುಸ್ತಾವ್ ಓಪರ್ಥ ಅವರು ರೆವರೆಂಡ್ ಎಫ್. ಕಿಟ್ಟೆಲ್ ರಾವಣ ಹಾಗೂ ಆತನ ಕುಲದ ಬಗ್ಗೆ ಹೇಳಿರುವ ವಿಚಾರಗಳ ಬಗ್ಗೆ ನೋಡೊಣ.
“ರೆವರೆಂಡ್ ಎಫ್. ಕಿಟ್ಟೆಲ್ ಅವರು ಪುಲೈ, ಪುಲೆ, ಪೊಲೆ, ಮತ್ತು ಪುಲಹ ಹಾಗೂ ಪುಲಸ್ತ್ಯ ಪದಗಳ ಮೂಲಗಳ ಬಗ್ಗೆ ಇಂಡಿಯನ್ ಆಂಟಿಕ್ವಾರಿ ಸಂಪುಟ VIII(1879) ಪುಟಗಳು 50,51ರಲ್ಲಿ ಬರೆದಿರುವುದನ್ನು ತಾಳೆ ನೋಡಿರಿ. ನಾನು ಕಿಟ್ಟೆಲ್ ಅವರ ಈ ಲೇಖನ ಓದುವುದಕ್ಕಿಂತ ಮೊದಲೇ ನನ್ನ ತೀರ್ಮಾನಕ್ಕೆ ಬಂದಿದ್ದೆ, ನಾನು ಅವರು ಈ ವಿಷಯಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಒಪ್ಪುತ್ತೇನೆ ಮತ್ತು ಇಲ್ಲಿ ಅವರ ಮಾತನ್ನು ಸಂತೋಷದಿಂದ ಉಲ್ಲೇಖಿಸುತ್ತೇನೆ. “ಪಲ್ಲವರು ಮತ್ತು ಪಲ್ಲವಕ, ಸ್ವತಂತ್ರಾಧಿಕಾರವುಳ್ಳ ಹಾಗೂ ವೀರತ್ವವುಳ್ಳ ಇವರನ್ನು ಪೊಲೆಯರು ಎನ್ನುವುದಕ್ಕೆ ನಾನು ಅಂಜಿಕೊಳ್ಳುವುದಿಲ್ಲ; ಅಂದು ಶಕ್ತಿಶಾಲಿ ಬುಡಕಟ್ಟಿನವರಾದ ಪೊಲೆಯರು(ಹೊಲೆಯರು)ಗಳ ಸಂತತಿಯವರುಗಳಲ್ಲಿ ಯಾರೋ ಒಬ್ಬ ಪಲ್ಲವ ರಾಜವಂಶವನ್ನು ಹುಟ್ಟು ಹಾಕಲಿಲ್ಲ ಎಂದು ಯಾರಿಗೆ ಗೊತ್ತು?” ಅಂದರೆ ಪೊಲೆಯರೆ ಪಲ್ಲವ ರಾಜವಂಶವನ್ನು ಹುಟ್ಟು ಹಾಕಿದರು.
ರಾವಣನು ಪುಲಸ್ತ್ಯ ಅಥವಾ ಪೌಲಸ್ತ್ಯ ಕುಲದವನೆಂದು ಹೇಳುತ್ತಾರೆ. ಪುಲಸ್ತ, ಪೌಲಸ್ತ ಎಂಬುದು ಪೊಲಸ್ತ ಅಥವಾ ಹೊಲದ ಎಂಬ ಅರ್ಥದಲ್ಲೂ ಬಳಕೆಯಾಗುತ್ತಿದೆ. ನಾನು ಈ ಹಿಂದೆ
ಇಲ್ಲಿರಿಯನ್-ಥ್ರಾಸಿಯನ್ ಭಾಷೆಯಿಂದ ‘ರಾಜ’ ಎಂಬ ಪದ ಮೂಲತಃ ರಾಯ (Raja) ಪದದಿಂದ ಬಂದ ಬಗ್ಗೆ ವಿವರಿಸಿದ್ದೇನೆ. ರಾಜ. ರಾಯ ಮತ್ತು ರಾವ್ ಎಂಬ ಪದಗಳು ಸಮಾನಾರ್ಥಕ ಪದಗಳು. ಪೌಲಸ್ತ್ಯ ರಾವಣ ಎಂದರೆ ಪೊಲಯರ ರಾಜ ಎಂದು ಅರ್ಥ ನೀಡುತ್ತದೆ.
ಹೊಲಯರು(ಪೊಲಯರು) ಅಪಾರ ಸಂಖ್ಯೆಯಲ್ಲಿರುವ ಮಳವಳ್ಳಿ ತಾಲ್ಲೂಕಿನ ರಾವಣನ ಪ್ರಖ್ಯಾತ ದೇವಸ್ಥಾನ ಮಳವಳ್ಳಿ-ಕನಕಪುರ ರಸ್ತೆಯಲ್ಲಿ ಸಿಗುವ ಚೋಳನಹಳ್ಳಿಯಲ್ಲಿ ಇದೆ. ಆ ದೇವಸ್ಥಾನದ ಸುತ್ತ-ಮುತ್ತ ನೂರಾರು ವೀರಗಲ್ಲುಗಳು ಹಾಗೂ ಮಾಸ್ತಿಕಲ್ಲುಗಳಿವೆ. ಅಂದರೆ ಅಲ್ಲಿ ಹಿಂದೆ ನಡೆದ ಒಂದು ದೊಡ್ಡ ಯುದ್ದದ ಕುರುಹುಗಳಾಗಿ ಅವು ಇಂದಿಗೂ ಉಳಿದಿವೆ.
_
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Ranan Vadh in Varanasi
- The importance of being earnest with Thotsakan's death Archived 2014-02-11 ವೇಬ್ಯಾಕ್ ಮೆಷಿನ್ ನಲ್ಲಿ.
- Rawana the Historical King of Heladiwa|Ramayana Research Archived 2013-07-08 ವೇಬ್ಯಾಕ್ ಮೆಷಿನ್ ನಲ್ಲಿ.
- Ravana - The Greatest Emperor
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |