ದಕ್ಷಿಣ ಕರ್ನಾಟಕ
ದಕ್ಷಿಣ ಕರ್ನಾಟಕವು ಕಾವೇರಿ ಕಣಿವೆಯಾಗಿದ್ದು, ಸಮೃದ್ಧವಾಗಿದೆ, ಹೇಮಾವತಿ, ಲಕ್ಷ್ಮಣತೀರ್ಥ, ಕಬಿನಿ, ಯಗಚಿ, ನುಗು ಅರ್ಕಾವತಿ ,ಶಿಂಷ ಮುಂತಾದ ನದಿಗಳು ಹುಟ್ಟಿ ಹರಯುತ್ತವೆ.
ಇತಿಹಾಸ
[ಬದಲಾಯಿಸಿ]ದಕ್ಷಿಣ ಕರ್ನಾಟಕವನ್ನು ಕದಂಬರು, ಚಾಲುಕ್ಯರು, ಹೋಯ್ಸಳರು, ಗಂಗರು, ಮೈಸೂರು ಒಡೆಯರು, ಮೈಸೂರು ಸುಲ್ತಾನರು ಆಳಿದ್ದಾರೆ. ಇವರಲ್ಲಿ ಪ್ರಮುಖರಾದವರೆಂದರೆ ಮೈಸೂರಿನ ಒಡೆಯರು, ಕದಂಬರು ಮತ್ತು ಮೈಸೂರಿನ ಸುಲ್ತಾನರು.
೨೦ ನೇ ಶತಮಾನದ ಸಂಧರ್ಭದಲ್ಲಿ ಇದು ಮೈಸೂರಿನ ರಾಜರ ಆಳ್ವಿಕೆಯಲ್ಲಿತ್ತು, ೧೯೪೭ ರ ಭಾರತ ಸ್ವಾತಂತ್ರ್ಯದ ನಂತರ ಇದನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು, ಇದು ದಕ್ಷಿಣ ಕರ್ನಾಟಕವಾದರು ಈಗಲು ಸಹ ಇಲ್ಲಿ ಸ್ಥಳೀಯವಾಗಿ ಈ ಭಾಗವನ್ನು ಹಳೇ ಮೈಸೂರು ಭಾಗವೆಂದು ಕರೆಯುತ್ತಾರೆ.
ಇಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ
ಸ್ಥಳ | ಸ್ಥಳ ವಿಶೇಷ |
---|---|
ಮೈಸೂರು | ಅರಮನೆಗಳು |
ಬೇಲೂರು-ಹಳೇಬೀಡು | ಪ್ರಾಚೀನ ದೇವಾಲಯಗಳು |
ಬೆಂಗಳೂರು | ರಾಜ್ಯ ರಾಜಧಾನಿ |
ಜೋಗ | ಜಲಪಾತ |
ಧರ್ಮಸ್ಥಳ | ಹಿಂದೂ ಧಾರ್ಮಿಕ ಕ್ಷೇತ್ರ |
ನಾಗರಹೊಳೆ | ಅಭಯಾರಣ್ಯ |
ಜಿಲ್ಲೆಗಳು
[ಬದಲಾಯಿಸಿ]- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಚಿಕ್ಕಬುಳ್ಳಾಪುರ
- ಕೋಲಾರ
- ತುಮಕೂರು
- ರಾಮನಗರ
- ಮಂಡ್ಯ
- ಚಿತ್ರದುರ್ಗ
- ದಾವಣಗೆರೆ
- ಶಿವಮೊಗ್ಗ
- ಉಡುಪಿ
- ದಕ್ಷಿಣ ಕನ್ನಡ
- ಚಿಕ್ಕಮಗಳೂರು
- ಹಾಸನ
- ಮೈಸೂರು
- ಕೊಡಗು
- ಚಾಮರಾಜನಗರ
ಆಡಳಿತ
[ಬದಲಾಯಿಸಿ]ರೆವಿನ್ಯೂ ವಿಭಾಗಗಳು
[ಬದಲಾಯಿಸಿ]ದಕ್ಷಿಣ ಕರ್ನಾಟಕವು ಒಟ್ಟು ೩ ರೆವಿನ್ಯೂ ವಿಭಾಗಗಳ ೧೭ ಜಿಲ್ಲೆಗಳನ್ನೊಳಗೊಂಡಿದೆ,
ಕಾವೇರಿ ನದಿಯು ಈ ಭಾಗದ ಮುಖ್ಯ ನದಿಯಾಗಿದ್ದು, ಕೃಷ್ಣರಾಜಸಾಗರ ದೊಡ್ಡ ಜಲಾಶಯವಾಗಿದೆ. ಪಶ್ಚಿಮದಲ್ಲಿ ಪಶ್ಚಿಮಘಟ್ಟಗಳಿದ್ದು ಹೆಚ್ಚಿನ ಮಳೆ ಪಡೆಯುತ್ತದೆ.ಭತ್ತ, ಕಬ್ಬು, ಮತ್ತು ತಂಬಾಕು ಇಲ್ಲಿನ ಪ್ರಮುಖ ಬೆಳೆಗಳಾಗಿದ್ದು, ತೆಂಗು ಮತ್ತು ಅಡಿಕೆ ಇಲ್ಲಿನ ಮುಖ್ಯ ತೋಟಗಾರಿಕಾ ಬೆಳೆಗಳಾಗಿವೆ.
ಭೌಗೋಳಿಕ ಲಕ್ಷಣ ಮತ್ತು ಹವಾಮಾನ
[ಬದಲಾಯಿಸಿ]ದಖ್ಹನ್ ಪ್ರಸ್ತಭೂಮಿಯಲ್ಲಿರುವ ದಕ್ಷಿಣ ಕರ್ನಾಟಕವು ಕಾವೇರಿ, ಹೇಮಾವತಿ, ಕಬಿನಿ, ಲಕ್ಷ್ಮಣತೀರ್ಥ ಮುಂತಾದ ನದಿಗಳ ಉಗಮ ಸ್ಥಳವಾಗಿದ್ದು ಬಹುತೇಕ ಈ ಭಾಗದ ನದಿಗಳು ಪಶ್ಚಿಮಘಟ್ಟದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತವೆ. ಆದರೆ ಶಿಂಷ, ಅರ್ಕಾವತಿ, ವೃಷಭಾವತಿ ಮತ್ತು ಪೆನ್ನಾರ್ ನದಿಗಳು ನಂದಿ ಬೆಟ್ಟ ಮತ್ತು ಬೆಂಗಳೂರು ಭಾಗದ ಬಯಲುಸೀಮೆಯಲ್ಲಿ ಹುಟ್ಟಿ ಕಾವೇರಿಯನ್ನು ಸೇರುತ್ತವೆ.
ಪೂರ್ವಾಭಿಮುಖವಾಗಿ ಹರಿಯುವ ನದಿಗಳು
[ಬದಲಾಯಿಸಿ]ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು
[ಬದಲಾಯಿಸಿ]ಹವಾಮಾನ
[ಬದಲಾಯಿಸಿ]ಈ ಭಾಗದಲ್ಲಿ ವರ್ಷಪೂರ್ತಿ ಹಿತಕರ ವಾತವರಣವಿದ್ದು, ಜೂನ್ ರಿಂದ ಅಕ್ಟೋಬರ್ ವರೆಗೆ ನೈರುತ್ಯ ಮಾನ್ಸೂನ್ ಮಾರುತಗಳು ಮಳೆ ಸುರಿಸುತ್ತವೆ. ಚಳಿಗಾಲದಲ್ಲಿ ಕನಿಷ್ಟ ತಾಪಮಾನವು ೧೪ ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, ಬೀಸಿಗೆಯಲ್ಲಿ ಗರಿಷ್ಟ ತಾಪಮಾನವು ಸುಮಾರು ೩೦ ರಿಂದ ೩೫ ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ.