ಹೃದಯಕ್ಕೆ ಕರೋನರಿ ಸ್ಟೆಂಟ್ ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೃದಯ ಮತ್ತು ಅದರ ಮಾಂಸಖಂಡಗಳಿಗೆ ರಕ್ತಪೂರೈಕೆ ಮಾಡುವ ರಕ್ತನಾಳಗಳನ್ನು ತೋರುವ ಚಿತ್ರ. *(1-LCA) ಎಡ ಪರಿಧಮನಿಯ ಒಂದು ಶಾಖೆ-left coronary artery (ಎಲ್ಸಿಎ); *(2-RCA) ಬಲ ಪರಿಧಮನಿ =right coronary artery(ಆರ್.ಸಿ.ಎ); *ಮುಂಭಾಗದ ಹೊರಪದರದ ತುದಿ (ಒಂದು ತುತ್ತತುದಿಯ ಸತ್ತ ರಕ್ತನಾಳ )

ಎಂಜಿಯೊಪ್ಲಾಸ್ಟಿ - ಸ್ಟೆಂಟ್ ಅಳವಡಿಕೆ[ಬದಲಾಯಿಸಿ]

ಹೃದಯ ಸಂಬಂಧಿ ರೋಗ, ಎದೆನೋವಿನಿಂದ ಬಳಲುವವರಿಗೆ ಎಂಜಿಯೊಪ್ಲಾಸ್ಟಿ (ಬೈಪಾಸ್ ಶಸ್ತ್ರಚಿಕಿತ್ಸೆ) ಮೂಲಕ ಸ್ಟೆಂಟ್ ಅಳವಡಿಸಿ ಕೃತಕವಾಗಿ ರಕ್ತ ಪರಿಚಲನೆಗೆ ಅನುವು ಮಾಡಿಕೊಡುವ ವಿಧಾನವೇ ಸ್ಟೆಂಟ್ ಅಳವಡಿಸುವುದು.[೧]

  • ಪರಿಧಮನಿಗೆ ಅಳವಡಿಸುವ ಸ್ಟೆಂಟ್ ಚಿತ್ರ:[೧]

ಕರೋನರಿ ಆರ್ಟರಿ (ಪರಿಧಮನಿ) ಕಾಯಿಲೆ[ಬದಲಾಯಿಸಿ]

ಕರೋನರಿ ಆರ್ಟರಿ (ಪರಿಧಮನಿ) ಕಾಯಿಲೆ (ಸಿಎಡಿ), (ಹೃದಯದ ಸ್ನಾಯುಗಳಿಗೆ ಆಹಾರ ಒದಗಿಸಲು ರಕ್ತ ಪೂರೈಕೆ ಮಾಡುವ ಹೃದಯದ ಶುದ್ಧ ರಕ್ತನಾಳದ ಅಥವಾ ಕರೋನರಿ ಆರ್ಟರಿಯಲ್ಲಿ ಕೊಬ್ಬಸಂಗ್ರಹಿಸಿ ರಕ್ತಚಲನೆ ವೇಗ ಮತ್ತು ಪ್ರಮಾಣ ಕಡಿಮೆಯಾಗಿ ಹೃದಯದ ಸ್ನಾಯುಗಳಿಗೆ- ಅದರ ಜೀವಕೋಶಗಳಿಗೆ ಆಹಾರ, ಆಮ್ಲಜನಕದ ಕೊರತೆಯಾಗುವುದು, ಹೃದಯ ದುರ್ಲವಾಗುವುದು.) ಒಂದು ರಕ್ತ ಕೊರತೆಯ ಹೃದ್ರೋಗ (ಐಎಚ್.ಡಿ) ಎಂದು ಕರೆಯಲಾಗುತ್ತದೆ,[೨] ಈ ಬಗೆ ಒಂದು ಗುಂಪು ರೋಗಗಳನ್ನು ಒಳಗೊಂಡಿದೆ. ಸ್ಥಿರ ಗಂಟಲೂತ, ಅಸ್ಥಿರ ಗಂಟಲೂತ, ಹೃದಯಾಘಾತ, ಮತ್ತು ಆಕಸ್ಮಿಕ ಹೃದಯ ಸಂಬಂಧಿ ಸಾವು.[೩] ಇದು ಹೃದಯರಕ್ತನಾಳದ ರೋಗಗಳ ಗುಂಪಿನಲ್ಲಿ ಸೇರಿದೆ. ಇದು ಅತ್ಯಂತ ಸಾಮಾನ್ಯ ವಿಧ ಗಳಲ್ಲಿ ಒಂದು.[೪] ಈ ತೊಂದರೆಯ ಸಾಮಾನ್ಯ ಲಕ್ಷಣ ಎದೆ ನೋವು ಅಥವಾ ಅಸ್ವಸ್ಥತೆ ಭುಜ, ತೋಳು, ಬೆನ್ನು, ಕುತ್ತಿಗೆ, ಅಥವಾ ದವಡೆ ಗಳಿಗೆ ನೋವು ಹರಡಬಹುದು. ಸಾಮಾನ್ಯವಾಗಿ ಲಕ್ಷಣಗಳು - ಆಗಾಗ ಎದೆಯುರಿ ಅನಿಸಬಹುದು. ವ್ಯಾಯಾಮ ಅಥವಾ ಭಾವನಾತ್ಮಕ ಒತ್ತಡ ಸಂಭವಿಸುವ ಸಮಯದಲ್ಲಿ ಹೆಚ್ಚು ಕಡಿಮೆ ಕೆಲವು ನಿಮಿಷಗಳ ಒಳಗೆ ನೋವು ಎದೆಯುರಿ ಕಾಣಿಸಬಹುದು. ಮತ್ತು ಸ್ವಲ್ಪ ವಿಶ್ರಾಂತಿಯ ನಂತರ ಸುಧಾರಣೆ ಕಾಣುವುದು. ಉಸಿರಾಟದ ತೊಂದರೆ ಸಂಭವಿಸಬಹುದು ಮತ್ತು ಕೆಲವೊಮ್ಮೆ ಯಾವುದೇ ರೋಗಲಕ್ಷಣಗಳು ಕಾನದಿರಬಹುದು. ಮೊದಲ ರೋಗ ಚಿಹ್ನೆ ಕೆಲವೊಮ್ಮೆ ಹೃದಯಾಘಾತವೇ ಆಗಬಹುದು. ಇತರೆ ತೊಂದರೆಗಳು ಹೃದಯಸ್ತಂಬನ ಅಥವಾ ಅನಿಯಮಿತ ಎದೆಬಡಿತಗಳು ಲಕ್ಷಣಗಳಲ್ಲಿ ಸೇರಿವೆ.[೫][೬]

ಹೃದಯ ಚಿಕಿತ್ಸೆಯ ಸ್ಟೆಂಟ್‌[ಬದಲಾಯಿಸಿ]

ಒಂದು ಪರಿಧಮನಿಯ ಸ್ಟೆಂಟ್ ಮಾದರಿ. ಈ ಟಾಕ್ಸಸ್ ಸ್ಟೆಂಟ್ ಔಷಧಯುಕ್ತ ಸ್ಟೆಂಟ್ ಎಂದು ಕರೆಯಲಾಗುತ್ತದೆ. Taxus stent FDA

ಸ್ಟೆಂಟ್‌ ಅಂದರೆ ಅತ್ಯಂತ ಸಣ್ಣದಾದ, ಹಿಗ್ಗುವ ಪುಟಾಣಿ ಟ್ಯೂಬ್‌. ಇದು ಜಾಲರಿಯಂತೆ ಇರುತ್ತದೆ. ಹೃದಯ ರಕ್ತನಾಳದಲ್ಲಿ ತಡೆ ಉಂಟಾದರೆ ಅವುಗಳನ್ನು ಹೋಗಲಾಡಿಸುತ್ತದೆ. ಮುಖ್ಯವಾಗಿ ಪ್ಲೇಕ್‌ ಎಂಬ ಜಿಡ್ಡಿನ ರೀತಿಯ ಸಂರಚನೆ ಹೃದಯ ರಕ್ತನಾಳದ ಒಳಗೆ ಬೆಳೆದಿದ್ದರೆ ಆಗ ಪ್ರಮುಖ ರಕ್ತನಾಳದಲ್ಲಿ ಸರಾಗ ರಕ್ತ ಸಂಚಾರಕ್ಕೆ ತಡೆಯಾಗುತ್ತದೆ. ಅಥವಾ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯಿಂದಲೂ ಪ್ರಮುಖ ರಕ್ತನಾಳದಲ್ಲಿ ತಡೆಯಾಗಬಹುದು. ಈ ಸಂದರ್ಭ ವ್ಯಕ್ತಿಗೆ ಎದೆನೋವು, ಹೃದಯಸ್ತಂಭನ, ಹೃದಯದ ಕಾಯಿಲೆಗೆ ಕಾರಣವಾಗುತ್ತದೆ. ಈ ಸಂದರ್ಭ ಪ್ರಮುಖ ರಕ್ತನಾಳವನ್ನು ಸರಾಗವಾಗಿಸಲು ಈ ಸ್ಟೆಂಟ್‌ಗಳ ಬಳಕೆಯಾಗುತ್ತದೆ. ಇಂತಹ ಸ್ಟೆಂಟ್‌ ಗಳಿಗೆ ಕರೋನರಿ ಸ್ಟೆಂಟ್ಸ್‌ ಎಂದು ಕರೆಯುತ್ತಾರೆ. ಇದು ಲೋಹದಿಂದ ಮಾಡಿದ್ದು. ಒಂದು ಸಾಮಾನ್ಯ (ಬಿಎಮ್‌ಎಸ್‌) ಸ್ಟೆಂಟ್‌ ಆದರೆ ಇನ್ನೊಂದು ಔಷಧ ಹೊರಸೂಸುವ (ಡ್ರಗ್‌ ಇಲ್ಯೂಟಿಂಗ್‌) ಸ್ಟೆಂಟ್‌. ಈ ಸ್ಟೆಂಟ್‌ ನಿಧಾನವಾಗಿ ರಕ್ತನಾಳದಲ್ಲಿ ಔಷಧವನ್ನು ಹೊರಸೂಸಿ ತಡೆಯನ್ನು ತೆರವುಗೊಳಿಸುತ್ತದೆ. ಇಂತಹ ಕರೋನರಿ ಸ್ಟೆಂಟ್‌ಗಳನ್ನು ಹೃದಯ ರಕ್ತನಾಳದಲ್ಲಿ ಕೂರಿಸುವ ಪ್ರಕ್ರಿಯೆಗೆ "ಆ್ಯಂಜಿಯೋಪ್ಲಾಸ್ಟಿ' ಎಂದು ಹೆಸರು. [೭]

ಹೃದಯದಲ್ಲಿ ಸ್ಟೆಂಟ್‌ ಕೂರಿಸುವುದು[ಬದಲಾಯಿಸಿ]

ಸ್ಟೆಂಟ್ ನಿಯೋಜನೆ ಚಿತ್ರ. 'ಎ' ರಲ್ಲಿ ಕ್ಯಾತಿಟರ್ ಲೆಸಿಯಾನ್ ಅಡ್ಡಲಾಗಿ ಸೇರಿಸಲಾಗುತ್ತದೆ. 'ಬಿ' , ಬಲೂನ್ ಸ್ಟೆಂಟ್ ವಿಸ್ತರಿಸುವ ಮತ್ತು ಪ್ಲೇಕ್ ಕುಗ್ಗಿಸಿ, ಹಿಗ್ಗಿಸಲಾಗುತ್ತದೆ. 'ಸಿ' ರಲ್ಲಿ ಕ್ಯಾತಿಟರ್ ಮತ್ತು ಡೆಫ್ಲೇಟೆಡ್ ಬಲೂನ್ ತೆಗೆದುಹಾಕಲಾಗಿದೆ. ಮೊದಲು ಮತ್ತು ನಂತರ ಅಪಧಮನಿಯ ಅಡ್ಡ ವಿಭಾಗಗಳು ಸ್ಟೆಂಟ್ ಉದ್ಯೋಗ ಫಲಿತಾಂಶಗಳನ್ನು ತೋರಿಸುವುದು.

ಹೃದಯದ ಪ್ರಮುಖ ರಕ್ತನಾಳಗಳಲ್ಲಿನ ತಡೆಗಳನ್ನು ಕಂಡುಹಿಡಿದ ಬಳಿಕ ವೈದ್ಯರು ಹೃದಯಕ್ಕೆ ಸಾಗುವ ಪ್ರಮುಖ ರಕ್ತನಾಳ (ಕುತ್ತಿಗೆ, ಭುಜ ಇತ್ಯಾದಿ) ಮೂಲಕವಾಗಿ ಪುಟ್ಟ ಟ್ಯೂಬ್‌ ಅನ್ನು ಹಾಯಿಸುತ್ತಾರೆ. ಇದಕ್ಕೆ ಕ್ಯಾಥರ್‌ ಎಂದು ಹೆಸರು. ಹೊರಭಾಗದಲ್ಲಿ ಹಿಗ್ಗುವ ಸ್ಟೆಂಟ್‌ ಮತ್ತು ಸ್ಟೆಂಟ್‌ ಹಿಗ್ಗಿಸಲು ಅನುಕೂಲವಾದ ಪುಟ್ಟ ಬಲೂನ್‌ ಇರುತ್ತದೆ. ರಕ್ತನಾಳಕ್ಕೆ ತಡೆಯಾದ ಜಾಗವನ್ನು ಎಕ್ಸ್‌ರೇಯಿಂದ ಗುರುತಿಸಿ ನಿರ್ದಿಷ್ಟ ಜಾಗದಲ್ಲಿ ಅದನ್ನು ಹಿಗ್ಗಿಸಲಾಗುತ್ತದೆ. ಈ ಮೂಲಕ ರಕ್ತನಾಳದಲ್ಲಿನ ತಡೆಯನ್ನು ಬದಿಗೆ ಸರಿಸಿ, ಸರಾಗ ರಕ್ತ ಪರಿಚಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಇನ್ನೊಂದು ಅತ್ಯಾಧುನಿಕ ವಿಧಾನದಲ್ಲಿ ಸ್ಟೆಂಟ್‌ಗಳನ್ನು ಬಳಸಿ ರಕ್ತನಾಳದೊಳಗಿನ ಜಿಡ್ಡನ್ನು ತೆಗೆಯಲಾಗುತ್ತದೆ. ಒಂದು ವೇಳೆ ರಕ್ತ ಹೆಪ್ಪುಗಟ್ಟುವ ಸಮಸ್ಯೆಯಿಂದ ರಕ್ತನಾಳ ಬಂದ್‌ ಆಗಿದ್ದಲ್ಲಿ ಸ್ಟೆಂಟ್‌ ಅಳವಡಿಕೆ ಬಳಿಕ ರಕ್ತ ಹೆಪ್ಪುಗಟ್ಟದಂತೆ ವೈದ್ಯರು ಚಿಕಿತ್ಸೆಯನ್ನು ನೀಡುತ್ತಾರೆ. [೮]

ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಯ ಕೆಲವು ಅಂಕಿ ಅಂಶಗಳು[ಬದಲಾಯಿಸಿ]

ಕರೊನರಿ ಆರ್ಟರಿಯಲ್ಲಿ ಒಳಗೆ ಕೊಬ್ಬು ಆವರಿಸಿರುವ ಚಿತ್ರ.
ಹೃದಯದ ಶುದ್ಧರಕ್ತನಾಳದಲ್ಲಿ ಕೊಬ್ಬುಸೇರಿ ದ, ಹೃದಯ ರೋಗದ ಲಕ್ಷಣ. Illustration depicting coronary artery disease
  • ಭಾರತದಲ್ಲಿ 6.19ಕೋಟಿ ಜನರು ಹೃದಯಸಂಬಂಧಿ ಕಯಿಲೆಯಿಂದ ಬಳಲುತ್ತಿದ್ದಾರೆ.
  • ಅಕಾಲಿಕ ಸಾವಿಗೀಡಾಗುವವರು 2.3ಕೋಟಿ (1990ರಲ್ಲಿ); 2010ರಲ್ಲಿ 3.7 ಕೋಟಿ.
  • ಹೇರದಯ ಸಮಸ್ಯಗೆ ಬಲಿಯಾಗುತ್ತಿರುವವರು 1 ಲಕ್ಷಜನಸಂಖ್ಯೆಗೆ 272 ಜನ ಭಾರತದಲ್ಲಿ.
  • ಜಾಗತಿಕವಾಗಿ 235 ಜನ
  • ದೆಹಲಿಯಲ್ಲಿ 33 ಸೆಕೆಂಡುಗಳಲ್ಲಿ ಹೇದಯಾಘಾತದಿಂದ ಸಾವು.
  • ಒಂದು ವರ್ಷದಲ್ಲಿ 20 ಲಕ್ಷ ಮಂದಿ ಹೃದಯಾಘಾತದಲ್ಲಿ ಸಾವು.
  • ಭಾರತದಲ್ಲಿ 2016ರರಲ್ಲಿ 4 ಲಕ್ಷ ಸ್ಟಂಟ್ ಗಳನ್ನು ಅಳವಡಿಸಲಾಗಿದೆ.
  • 2017 ರಲ್ಲಿ 5 ಲಕ್ಷ ಸ್ಟಂಟ್ ಗಳನ್ನು ಅಳವಡಿಸುವ ನಿರೀಕ್ಷೆ ಇದೆ.
  • ಭಾರತ 3 ಲಕ್ಷ ಸ್ಟಂಟ್ಗಲನ್ನು ಅಮದು ಮಾಡಿಕೊಳ್ಳುತ್ತದೆ.
  • ಸ್ಟಂಟ್ ವಹಿವಾಟು ಭಾರತದಲ್ಲಿ ಸುಮಾರು 2500 ಕೋಟಿ ರೂಪಾಯಿಗಳದ್ದು.
  • ದೊಡ್ಡ ಮಾರುಕಟ್ಟೆಯಲ್ಲ
  • ಸ್ಟೆಂಟ್‌ಗಳಿಗೆ ಭಾರತ ಜಗತ್ತಿನ ದೊಡ್ಡ ಮಾರುಕಟ್ಟೆ ಅಲ್ಲ ಎಂಬುದು ಹೃದ್ರೋಗ ತಜ್ಞರ ಅಭಿಮತ. ನಮ್ಮಲ್ಲಿ ವರ್ಷಕ್ಕೆ ಆಂಜಿಯೊಪ್ಲಾಸ್ಟಿ ಮಾಡಿಸಿಕೊಳ್ಳುವವರ ಸಂಖ್ಯೆ ಸುಮಾರು 5 ಲಕ್ಷ ಇದ್ದರೆ, ಜಪಾನ್‌ನಲ್ಲಿ ದುಪ್ಪಟ್ಟು ಇದೆ. ಅಮೆರಿಕದಲ್ಲಿ 20 ಲಕ್ಷ ಇದೆ.

[೯]

ಭಾರತ ಸರ್ಕಾರದ ಕ್ರಮ[ಬದಲಾಯಿಸಿ]

ಕೇಂದ್ರ ಸರ್ಕಾರ ಇದೀಗ ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿ ಹೇರಿದೆ. ಅಂದರೆ ಯಾವುದೇ ರೀತಿಯ ಸ್ಟೆಂಟ್‌ಗಳನ್ನು (ವಿದೇಶದಿಂದ ಆಮದು ಮಾಡಿದ ಸ್ಟೆಂಟ್‌ ಆಗಿದ್ದರೂ ಕೂಡ) 29,600 ಸಾವಿರ ರೂ. ಮೇಲ್ಪಟ್ಟು (ಡ್ರಗ್‌ ಇಲ್ಯೂಟಿಂಗ್‌ ಸ್ಟೆಂಟ್‌) ಮಾರಾಟ ಮಾಡುವಂತಿಲ್ಲ. ಬಿಎಂಎಸ್‌ ಸ್ಟೆಂಟ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ ಗರಿಷ್ಠ 7,260 ರೂ. ಎಂದು ನಿಗದಿ ಮಾಡಿದ್ದು, ಡ್ರಗ್‌ ಇಲ್ಯೂಟಿಂಗ್‌ ಸ್ಟೆಂಟ್‌ ಬೆಲೆಯನ್ನು ಗರಿಷ್ಠ 29,600 ರೂ. ಎಂದು ನಿಗದಿ ಪಡಿಸಿದೆ. ಅಂದರೆ ಅವುಗಳ ಬೆಲೆಯಲ್ಲಿ ಶೇ.40ರಷ್ಟು ಕಡಿತ. ಈ ಮೊದಲು ಎರಡೂ ರೀತಿಯ ಸ್ಟೆಂಟ್‌ಗಳ ಬೆಲೆ 25 ಸಾವಿರ ರೂ.ಗಳಿಂದ 1.50 ಲಕ್ಷ ರೂ. ವರೆಗೆ ಇತ್ತು. ಸದ್ಯ ವ್ಯಾಟ್‌, ಸ್ಥಳೀಯ ತೆರಿಗೆಯನ್ನು ಸೇರಿಸಿ ಹೊಸ ಬೆಲೆ ಅನ್ವಯಿಸಲಾಗಿದೆ.

ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿಗೆ ಕಾರಣ[ಬದಲಾಯಿಸಿ]

ಭಾರತದ ಸ್ಟೆಂಟ್‌ ಮಾರುಕಟ್ಟೆ ಸುಮಾರು 33 ಕೋಟಿ ರೂ. ಮೌಲ್ಯದ್ದು. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸಕ್ಕರೆ ಕಾಯಿಲೆ ರೋಗಿಗಳ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಹೃದಯದ ಕರೋನರಿ ರಕ್ತನಾಳಗಳ ಕಾಯಿಲೆ (ಸಿಎಡಿ) ಪ್ರಕರಣಗಳೂ ಹೆಚ್ಚಾಗಿವೆ. ಇದರಿಂದ ಸ್ಟೆಂಟ್‌ಗಳ ಬೇಡಿಕೆ ಹಿಂದೆಂದಿಗಿಂತ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಮುಖ್ಯ ಆರೋಗ್ಯ ಸಮಸ್ಯೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ಗಳ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು ಎಂಬುದು ತಜ್ಞರ ಒತ್ತಾಸೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಟೆಂಟ್‌ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಸ್ಟೆಂಟ್‌ಗಳ ಅಗತ್ಯ ಹೆಚ್ಚಿದ್ದರಿಂದ ಅವುಗಳನ್ನು ಭಾರೀ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಬಡ ರೋಗಿಗಿಳಿಗೆ ಆ್ಯಂಜಿಯೋಪ್ಲಾಸ್ಟಿ ಕೈಗೆಟುಕದ ಸಂಗತಿಯಾಗಿತ್ತು.

ಸ್ಟೆಂಟ್‌ ಬೆಲೆ ಇಳಿಕೆ[ಬದಲಾಯಿಸಿ]

2016 ಜುಲೈಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸ್ಟೆಂಟ್‌ಗಳನ್ನು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (ಎನ್‌ಎಲ್‌ಇಎಮ್‌ 2015)ಗೆ ಸೇರಿಸಿತ್ತು.ಇದರಿಂದ ಔಷಧ ಬೆಲೆ ನಿಯಂತ್ರಣ ಆದೇಶ ಅನ್ವಯ ಕೇಂದ್ರ ಸರ್ಕಾರ ಸ್ಟೆಂಟ್‌ಗಳ ಬೆಲೆ ಮೇಲೆ ಮಿತಿಯನು ಹೇರಬಹುದಾಗಿದೆ. ಅಗತ್ಯವಸ್ತುಗಳ ಕಾಯ್ದೆ ಅಡಿ ಇವುಗಳೂ ಬರುವುದರಿಂದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಸ್ಟೆಂಟ್‌ಗಳನ್ನು ಒದಗಿಸುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ರಾಷ್ಟ್ರೀಯ ಫಾರ್ಮಾಸುÂಟಿಕಲ್‌ ಬೆಲೆ ನೀತಿ 2012ರ ಅನ್ವಯ ಶೇ.40ರಷ್ಟು ಬೆಲೆ ಇಳಿಕೆಗೆ ನಿರ್ಧರಿಸಲಾಗಿದೆ. [೧೦]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಹೃದ್ರೋಗಿಗಳಿಗೆ ಸಿಹಿಸುದ್ದಿ, ಪರಿಧಮನಿಗೆ ಅಳವಡಿಸುವ ಸ್ಟೆಂಟ್ ಅಗ್ಗ
  2. Bhatia, Sujata K. (2010). Biomaterials for clinical applications(Online-Ausg. ed.). New York: Springer. p. 23..
  3. Wong, ND (May 2014). "Epidemiological studies of CHD and the evolution of preventive cardiology.". Nature reviews. Cardiology. 11 (5): 276–89 .
  4. GBD 2013 Mortality and Causes of Death, Collaborators (17 December 2014).
  5. What Are the Signs and Symptoms of Coronary Heart Disease
  6. Coronary Artery Disease (CAD)
  7. "ಸ್ಟೆಂಟ್‌ ಹೇಗೆ ಕೆಲಸ ಮಾಡುತ್ತೆ ಗೊತ್ತಾ..?;Feb 24, 2017, 3:37 PM IST". Archived from the original on ಮಾರ್ಚ್ 7, 2017. Retrieved ಮಾರ್ಚ್ 18, 2017.
  8. "ಸ್ಟೆಂಟ್‌ಗಳನ್ನು ಕೂರಿಸೋದು ಹೇಗೆ?". Archived from the original on 2017-03-07. Retrieved 2017-03-18.
  9. "ಅಂತರಾಳ;ಸ್ಟೆಂಟ್ ಬೆಲೆ ಇಳಿಕೆ ಸುತ್ತ...;'ಹೃದಯ'ಸ್ಪರ್ಶಿ ನಿರ್ಧಾರ;ರಾಜೇಶ್ ರೈ ಚಟ್ಲ;18 Mar, 2017". Archived from the original on 2016-11-23. Retrieved 2017-03-18.
  10. "ಕೇಂದ್ರ ಸರ್ಕಾರ ಮಾಡಿದ್ದೇನು?". Archived from the original on 2017-03-07. Retrieved 2017-03-18.