ಜಾಲರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಹದ ಪರದೆ ಜಾಲರಿ

ಜಾಲರಿಯು (ಜಾಲಂದರ) ಲೋಹ, ನಾರು, ಅಥವಾ ಇತರ ಮೆತುವಾದ ಅಥವಾ ಬಾಗಿಸಬಹುದಾದ ವಸ್ತುಗಳ ಜೋಡಣೆಗೊಂಡಿರುವ ಎಳೆಗಳಿಂದ ತಯಾರಿಸಲಾದ ತಡೆಗೋಡೆ. ಜಾಲರಿಯು ಅನೇಕ ಲಗತ್ತಿಸಲಾದ ಅಥವಾ ಹೆಣೆದ ಎಳೆಗಳನ್ನು ಹೊಂದಿರುವುದರಿಂದ ಜಾಲ ಅಥವಾ ಬಲೆಯನ್ನು ಹೋಲುತ್ತದೆ.

ಉಪಯೋಗಗಳು[ಬದಲಾಯಿಸಿ]

  • ಜಾಲರಿಗಳನ್ನು ಹಲವುವೇಳೆ ಕೀಟಗಳನ್ನು ಹೊರತಡೆಯಲು ಬಳಸಲಾಗುತ್ತದೆ. ಕಿಟಕಿಗಳ ಮೇಲಿನ ತಂತಿ ಪರದೆಗಳು ಮತ್ತು ಸೊಳ್ಳೆಪರದೆಗಳು ಜಾಲರಿಗಳಾಗಿವೆ.
  • ರೇಡಿಯೋ ಆವೃತ್ತಿ ವಿಕಿರಣದ ವಿರುದ್ಧ ರಕ್ಷಿಸಲು ತಂತಿಪರದೆಗಳನ್ನು ಬಳಸಬಹುದು, ಉದಾ. ಮೈಕ್ರೋವೇವ್ ಓವನ್ ಹಾಗೂ ಫ಼್ಯಾರಡೇ ಪಂಜರಗಳು.
  • ಲೋಹದ ಮತ್ತು ನೈಲಾನ್ ತಂತಿಜಾಲರಿಯ ಶೋಧಕಗಳನ್ನು ಸೋಸುವಿಕೆಯಲ್ಲಿ ಬಳಸಲಾಗುತ್ತದೆ.
  • ತಂತಿಜಾಲರಿಯನ್ನು ಸುಭದ್ರ ಪ್ರದೇಶಗಳ ರಕ್ಷಣೆಯಲ್ಲಿ ಮತ್ತು ವಿಧ್ವಂಸಕ ಪರದೆಗಳ ರೂಪದಲ್ಲಿ ರಕ್ಷಣೆಯಾಗಿ ಬಳಸಲಾಗುತ್ತದೆ.
  • ತಂತಿಜಾಲರಿಗೆ ರೂಪಕೊಟ್ಟು ಉದ್ಯಾನದ ಆಸನಗಳು, ತ್ಯಾಜ್ಯ ಬುಟ್ಟಿಗಳು ಮತ್ತು ವಸ್ತು ನಿರ್ವಹಣೆಗಾಗಿ ಇತರ ಬುಟ್ಟಿಗಳನ್ನು ಸೃಷ್ಟಿಸಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wire Mesh Archived 2019-05-06 ವೇಬ್ಯಾಕ್ ಮೆಷಿನ್ ನಲ್ಲಿ.

"https://kn.wikipedia.org/w/index.php?title=ಜಾಲರಿ&oldid=1129168" ಇಂದ ಪಡೆಯಲ್ಪಟ್ಟಿದೆ