ಸೊಳ್ಳೆಪರದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೌಕಟ್ಟಿನಿಂದ ಇಳಿಬಿಟ್ಟ ಸೊಳ್ಳೆಪರದೆ.

ಸೊಳ್ಳೆಪರದೆಯು (ಮಚ್ಛರದಾನಿ) ಹಾಸಿಗೆ ಅಥವಾ ಮಲಗುವ ಪ್ರದೇಶದ ಮೇಲೆ ಆವರಿಸುವಂತೆ ಇಳಿಬಿಡಲಾಗುವ ಒಂದು ಬಗೆಯ ಜಾಲರಿಯಂಥ ರಚನೆಯ ಪರದೆ. ಇದು ಸೊಳ್ಳೆಗಳು, ನೊಣಗಳು ಮತ್ತು ಇತರ ಹಾನಿಕಾರಕ ಕೀಟಗಳ ಕಡಿತದ ವಿರುದ್ಧ, ಮತ್ತು ಹಾಗಾಗಿ ಅವು ಸಾಗಿಸಬಹುದಾದ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಂತಹ ತಡೆಯಬಹುದಾದಂಥ, ಕೀಟಗಳಿಂದ ಹರಡುವ ರೋಗಗಳಲ್ಲಿ ಮಲೇರಿಯಾ, ಡೆಂಗೇ, ಪೀತಜ್ವರ, ಜ಼ೀಕಾ ವೈರಾಣು ಮತ್ತು ವೆಸ್ಟ್ ನೈಲ್ ವೈರಾಣು ಸೇರಿದಂತೆ ವಿವಿಧ ರೂಪಗಳ ಮಸ್ತಿಷ್ಕೋದ್ರೇಕ ಸೇರಿವೆ.[೧]

ಪರಿಣಾಮಕಾರಿಯಾಗಲು ಸೊಳ್ಳೆಪರದೆಯ ಜಾಲರಿಯು ಅಂತಹ ಕೀಟಗಳನ್ನು ಹೊರಗಿಡುವಷ್ಟು ಸೂಕ್ಷವಾಗಿರಬೇಕು, ಆದರೆ ಅಸ್ವೀಕಾರ್ಯ ಮಟ್ಟದಲ್ಲಿ ಗೋಚರತೆ ಅಥವಾ ವಾಯುಸಂಚಾರವನ್ನು ತಡೆಯಬಾರದು. ಸೂಕ್ತವಾದ ಕೀಟನಾಶಕ ಅಥವಾ ಕೀಟ ನಿವಾರಕದಿಂದ ಸೊಳ್ಳೆಪರದೆಯನ್ನು ಪೂರ್ವಸಂಸ್ಕರಣೆ ಮಾಡಿ ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು ಸಾಧ್ಯವಿದೆ.

ಉಲ್ಲೇಖಗಳು[ಬದಲಾಯಿಸಿ]

  1. "All Mosquito Netting Info". Retrieved 2009-10-27.