ಸೊಳ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೊಳ್ಳೆ
ಸೊಳ್ಳೆ
Scientific classification
ಸಾಮ್ರಾಜ್ಯ:
ಅನಿಮೇಲಿಯ
ವಿಭಾಗ:
ಅರ್ತ್ರೊಪೋಡ
ವರ್ಗ:
ಇಂಸೆಕ್ಟ
ಗಣ:
ಉಪಗಣ:
ನೆಮಟೊಸೆರ
ಕೆಳಗಣ:
ಕುಲಿಕೊಮೋರ್ಫ
ಮೇಲ್ಕುಟುಂಬ:
ಕುಲಿಕೈಡಿಯ
ಕುಟುಂಬ:
ಕುಲಿಸಿಡೇ

Meigen, ೧೮೧೮ [೧]

ಪೀಠಿಕೆ[ಬದಲಾಯಿಸಿ]

 • ಸೊಳ್ಳೆಗಳು ಕುಲಿಸಿಡೇ ಜಾತಿಗೆ ಸೇರಿದ ಚಿಕ್ಕ-ಚಿಕ್ಕ ಕೀಟಗಳು.ಕೆಲವು ಸೊಳ್ಳೆಗಳು ಪ್ರಾಣಿಗಳ ರಕ್ತವನ್ನು ಕುಡಿಯುತ್ತವೆ, ಮಾನವನದ್ದು ಕೂಡ.ಹೆಣ್ಣು ಸೊಳ್ಳೆಗಳು ರಕ್ತ-ಕುಡಿಯುವ ಪಿಶಾಚಿಗಳೆಂದು ಕರೆಯುತ್ತಾರೆ.ಕುಡಿಯುವುದಷ್ಟೇ ಅಲ್ಲದೇ, ರೋಗಗಳನ್ನು ಹರಡುತ್ತವೆ. ಅವೆಂದರೆ- ಮಲೇರಿಯಾ, ಡೆಂಗ್ಯೂ, ಕಾಮಾಲೆ, ಚಿಕನ್ ಗುನ್ಯಾ ಈ ಬಗೆಯವು .ತಜ್ಞರ ಪ್ರಕಾರ ಸೊಳ್ಳೆಗಳು ಮಾನವಕುಲಕ್ಕೆ ಅತೀ ಅಪಾಯಕಾರಿ ಜೀವಿಗಳು.[೨]
 • ಸೊಳ್ಳೆಯ ಕಚ್ಚುವಿಕೆಯು ಚರ್ಮಕ್ಕೆ ಹರಡಿದ ಲಾಲಾರಸವು ತುರಿಕೆ ಮತ್ತು ರಾಶ್‍ಗೆ/ ದದ್ದು ಬರಲು ಕಾರಣವಾಗಬಹುದು. ಇದರ ಜೊತೆಗೆ, ಸೊಳ್ಳೆಗಳ ಅನೇಕ ಪ್ರಭೇದಗಳು ಕಾಯಿಲೆಯನ್ನು ಉಂಟುಮಾಡುವ ಅಥವಾ ಹರಡುವ (ಅಥವಾ ಎರಡೂ) ಮಲೇರಿಯಾ, ಹಳದಿ ಜ್ವರ, ಚಿಕನ್ಗುನ್ಯಾ, ವೆಸ್ಟ್ ನೈಲ್ ವೈರಸ್, ಡೆಂಗ್ಯೂ ಜ್ವರ, ಫಿಲಾರಿಯಾಸಿಸ್, ಝಿಕಾ ವೈರಸ್ ಮತ್ತು ಇತರ ಅರ್ಬೊವೈರಸ್ಗಳು ರೋಗಗಳನ್ನು ಉಂಟುಮಾಡುವ ಜೀವಿಗಳನ್ನು ಮಾನವನ ದೇಹಕ್ಕೆ ಸೇರಿಸುತ್ತವೆ, ಮತ್ತು ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳು ಹೆಚ್ಚು ಜನರನ್ನು ಕೊಲ್ಲುತ್ತವೆ: ಇದರಿಂದ ಪ್ರತಿ ವರ್ಷ 700,000 ಕ್ಕಿಂತ ಹೆಚ್ಚು ಜನರು ಸಾವಿಗೀಡಾಗುತ್ತಾರೆ.[೩][೪][೫]

ವಿವರ[ಬದಲಾಯಿಸಿ]

 • ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ಹಾವು. ಈ ಪ್ರಾಣಿಗಳಿಗಳಿಗಿಂತ ಅಪಾಯಕಾರಿಯಾದದ್ದು ಸೊಳ್ಳೆ.ಅದರಲ್ಲೂ ಹೆಣ್ಣು ಸೊಳ್ಳೆ. ಸುಮಾರು ನಾಲ್ಕು ಕೋಟಿ ಐವತ್ತು ಲಕ್ಷ ಜನರು ಸತ್ತಿರುವುದು ಈ ಹೆಣ್ಣು ಸೊಳ್ಳೆಯಿಂದಲೇ. (ಗಂಡು ಸೊಳ್ಳೆಗಳು ಗಿಡಗಳನ್ನು ಮಾತ್ರ ಕಚ್ಚುತ್ತವೆ).
 • ಮಲೇರಿಯಾ, ಹಳದಿ ಜ್ವರ, ಡೆಂಗಿ, ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ), ಫಿಲಾರಿಯಾಸಿಸ್, ಆನೆ ಕಾಲು ರೋಗ ಸೇರಿದಂತೆ ನೂರಕ್ಕೂ ಹೆಚ್ಚು ಮಾರಕ ರೋಗಗಳನ್ನು ತರುವ ಸಾಮರ್ಥ್ಯ ಈ ಹೆಣ್ಣು ಸೊಳ್ಳೆಗಳಿಗಿದೆ. ಇಂದಿಗೂ ವಿಶ್ವದಲ್ಲಿ ಪ್ರತಿ ಹನ್ನೆರಡು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಸೊಳ್ಳೆಯಿಂದ ಸಾಯುತ್ತಿದ್ದಾನೆ.
 • ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಸೊಳ್ಳೆ ಇಷ್ಟೊಂದು ಅಪಾಯಕಾರಿ ಎಂಬುದೇ ಯಾರ ಗಮನಕ್ಕೂ ಬಂದಿರಲಿಲ್ಲ. 1877ರಲ್ಲಿ ಬ್ರಿಟಿಷ್ ವೈದ್ಯ ಪ್ಯಾಟ್ರಿಕ್ ಮ್ಯಾನ್ಸನ್, (‘ಮಸ್ಕಿಟೊ ಮ್ಯಾನ್ಸನ್’ ಎಂದು ಪ್ರಸಿದ್ಧರಾದರು) ಆನೆಕಾಲು ರೋಗಕ್ಕೆ ಮೂಲ ಸೊಳ್ಳೆ ಎಂಬುದನ್ನು ಕಂಡುಕೊಂಡರು.
 • ಇದಾದ 17 ವರ್ಷಗಳ ನಂತರ, ಅಂದರೆ 1894ರಲ್ಲಿ ಮಲೇರಿಯಾ ಕೂಡ ಸೊಳ್ಳೆಯ ಫಲವೇ ಎಂಬ ಸಂಶಯ ವ್ಯಕ್ತವಾಯಿತು. ಭಾರತದ ರೊನಾಲ್ಡ್ ರೋಸ್‌ ಎಂಬ ವೈದ್ಯರಿಗೆ ಈ ಕುರಿತು ಸಂಶೋಧನೆ ಮಾಡಲು ಮ್ಯಾನ್ಸನ್ ಸಲಹೆ ನೀಡಿದರು.

ಸಂಶೋಧನೆ[ಬದಲಾಯಿಸಿ]

 • ಹೆಣ್ಣು ಸೊಳ್ಳೆಗಳು ಹೇಗೆ ತಮ್ಮ ಎಂಜಿಲಿನ ಮೂಲಕ ಪ್ಲಾಸ್ಮೋಡಿಯಂ ಪ್ಯಾರಾಸೈಟ್ ಅನ್ನು ಹರಡುತ್ತವೆ ಎಂಬುದನ್ನು ಕಂಡುಹಿಡಿದ ಮೊದಲ ವ್ಯಕ್ತಿಯಾದರು ರೋಸ್. ಇವರು ಹಕ್ಕಿಯನ್ನು ಬಳಸಿಕೊಂಡು ಸಿದ್ಧಾಂತವನ್ನು ಸಾಬೀತು ಮಾಡಲು ಹೊರಟರು. ಆದರೆ ಮ್ಯಾನ್ಸನ್ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರು. ಈ ಸಿದ್ಧಾಂತ ಮನುಷ್ಯರ ಮೇಲೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಕೊಳ್ಳಲು ತಮ್ಮ ಮಗನನ್ನೇ ಪ್ರಯೋಗಕ್ಕೆ ಒಡ್ಡಿದರು.(ಔಷಧಿ ಕೊಟ್ಟ ನಂತರ ಮಗ ತಕ್ಷಣ ಗುಣಮುಖನಾದದ್ದು ವಿಶೇಷ).
 • ಈ ಸಂಶೋಧನೆ ಫಲವಾಗಿ 1902ರಲ್ಲಿ ರೋಸ್‌ ಅವರಿಗೆ ನೋಬೆಲ್ ಪ್ರಶಸ್ತಿ ದೊರಕಿತು. ಮ್ಯಾನ್ಸನ್‌, ರಾಯಲ್ ಸೊಸೈಟಿಯ ಸದಸ್ಯರಾಗಿ, ಲಂಡನ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸನ್‌ ಸಂಸ್ಥೆ ಸ್ಥಾಪಿಸಿದರು.

ಸೊಳ್ಳೆಯ ವಿಧಗಳು[ಬದಲಾಯಿಸಿ]

ಅನಾಫಿಲಿಸ್‌ ಆಲ್ಬುಮಿನಸ್ ಸೊಳ್ಳೆಯು ಮನುಷ್ಯನ ತೋಳಿನಿಂದ ಆಹಾರ ಪಡೆಯುತ್ತದೆ. ಈ ಸೊಳ್ಳೆಯು ಮಲೇರಿಯಾದ ರೋಗವಾಹಕ ಮತ್ತು ಸೊಳ್ಳೆ ನಿಯಂತ್ರಣ ಮಲೇರಿಯಾದಂತಹ ಘಟನೆಗಳನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಮಾರ್ಗ.
 • ಸೊಳ್ಳೆಯಲ್ಲಿ 2,500 ಪ್ರಭೇದಗಳಿವೆ. ಅದರಲ್ಲಿ 400 ‘ಅನಾಫಿಲಿಸ್’ ಕುಟುಂಬಕ್ಕೆ ಸೇರಿದವು ಮತ್ತು 40 ಪ್ರಭೇದಗಳು ಮಲೇರಿಯಾ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುವಂಥವು. ಅನಾಫಲೀಸ್ ಹೆಣ್ಣು ಸೊಳ್ಳೆ ತಾನು ಹೀರಿದ ರಕ್ತವನ್ನು ನೀರಿನ ಮೇಲಿಟ್ಟ ತನ್ನ ಮೊಟ್ಟೆಯನ್ನು ಬಲಿಸಲು ಬಳಸುತ್ತದೆ. ಅವು ನೀರಿನಲ್ಲಿ ಮರಿಯಾಗುತ್ತವೆ. ಆ ಮರಿಸೊಳ್ಳೆಗಳು ನೀರಿನಲ್ಲೇ ಈಜಾಡಿಕೊಂಡು ರೋಗದ ಮೂಲವಾಗುತ್ತವೆ.
 • ಹೆಣ್ಣು ಸೊಳ್ಳೆಗಳು ತೇವವಿರುವ ಕಡೆ, ನೀರಿನ ಆಶ್ರಯ, ಕಾರ್ಬನ್ ಡೈ ಆಕ್ಸೈಡ್, ದೇಹದ ಉಷ್ಣತೆಗೆ ಆಕರ್ಷಿತವಾಗುತ್ತವೆ. ಬೆವರುವ ಜನರ ಹಾಗೂ ಗರ್ಭಿಣಿಯರಿಗೆ ಸೊಳ್ಳೆ ಕಚ್ಚುವುದು ಹೆಚ್ಚು. ಇಷ್ಟೆಲ್ಲಾ ಪ್ರಭೇದಗಳಿರುವ ಹಾಗೂ ಜೀವಕ್ಕೇ ಎರವಾಗುವ ಸೊಳ್ಳೆಯನ್ನು ‘ಚಿಕ್ಕ ಕೀಟ’ ಎಂದು ಕರೆಯಲಾಗಿದೆ. ಆದರೆ ಇದು ಮಾನವರಿಗೆ ಭೂಮಿ ಮೇಲಿನ ಭಯಾನಕ ಜೀವಿ.[೬]

ಸೊಳ್ಳೆಯ ಅಂಗರಚನಾ ಶಾಸ್ತ್ರೀಯ ವಿವರಣೆ[ಬದಲಾಯಿಸಿ]

ಭಾರತದಲ್ಲಿ ಮಲೇರಿಯಾ[ಬದಲಾಯಿಸಿ]

 • ಮಲೇರಿಯಾವನ್ನು ಸೋಲಿಸಲು ಭಾರತ ದಾರಿ ಮಾಡಿಕೊಂಡಿದೆ. ಸಂಘಟಿತವಾದ ಮಲೇರಿಯಾ-ವಿರೋಧಿ ಅಭಿಯಾನದ ಸಂಯೋಜನೆ, ತ್ವರಿತ ರೋಗನಿರ್ಣಯದ ಪರೀಕ್ಷೆಗಳ ಲಭ್ಯತೆ, ಆರ್ಟೆಮೆಸಿನಿನ್-ಆಧಾರಿತ ಸಂಯೋಜನೆಯ ಚಿಕಿತ್ಸೆಗಳು (ಎಸಿಟಿ) ಮತ್ತು ಸಮುದಾಯದ ಚಲನಶೀಲತೆಗಳನ್ನು ಬಳಸುವುದು, ಇವು ಭಾರತವು ಮಲೇರಿಯಾ ಹರಡುವಿಕೆಯನ್ನು ಹತೋಟಿಗೆ ತರಲು ಸಹಾಯ ಮಾಡಿದೆ. ಮಲೇರಿಯಾ ಸಂಖ್ಯೆಯನ್ನು ಕಡಿಮೆಗೊಳಿಸಲು ದೇಶದ ನಿರ್ವಹಣೆಯ ಪರಿಣಾಮ ಹೀಗಿದೆ.
ಮಲೇರಿಯಾ ಸೋಂಕಿನವರು. ಸಾವು
2001 :20.8 ಲಕ್ಷ ಸಾವು::1005
2004:19.1 ಲಕ್ಷ ಸಾವು::949
2007 : 15.1 ಲಕ್ಷ ಸಾವು:: 1311
2010: ಸಾವು::1018
2014:8.5 ಲಕ್ಷ ಸಾವು::316

[೭]

ಸೊಳ್ಳೆಗಳು ಮತ್ತು ಮನುಷ್ಯರು[ಬದಲಾಯಿಸಿ]

 • ಫ್ಲೊರಿಡಾದ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರಾಧ್ಯಾಪಕ ಜೆರ್ರಿ ಬಟ್ಲರ್ ತಿಳಿಸಿದ್ದಾರೆ. ಸೊಳ್ಳೆಗಳು ಆಹಾರದ ಉದ್ದೇಶಕ್ಕಾಗಿ ರಕ್ತ ಹೀರುವುದಿಲ್ಲ. ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೋಟೀನ್‌ಗಳನ್ನು ಪಡೆಯುವುದಕ್ಕಾಗಿ ರಕ್ತ ಹೀರುತ್ತವೆ ಎಂದು ಅವರು ತಮ್ಮ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.ಒ ಗುಂಪಿನ ರಕ್ತವುಳ್ಳವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಶೇಕಡ 83ರಷ್ಟು ಹೆಚ್ಚು. ಬಿ ಗುಂಪಿನ ರಕ್ತದವರತ್ತ ಆಕರ್ಷಿತವಾಗುವ ಸಾಧ್ಯತೆ ಸಾಮಾನ್ಯವಾಗಿದ್ದರೆ ಎ ಗುಂಪಿನ ರಕ್ತ ಇರುವವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ತುಂಬಾ ಕಡಿಮೆ. ಸ್ಥೂಲಕಾಯದವರು, ಗರ್ಭಿಣಿಯರು, ವ್ಯಾಯಾಮನಿರತರು, ಹೆಚ್ಚು ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದರಿಂದ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಹೆಚ್ಚು.[೮]

ತಡೆ ಮತ್ತು ನಾಶ[ಬದಲಾಯಿಸಿ]

 • ಸೊಳ್ಲೆತಡೆಗಾಗಿ ಅನೇಕ ಬಗೆಯ ಸಲಕರಣೆ, ಮುಲಾಮು, ಸಿಂಪರಣೆ, ವಿದ್ಯತ್‍ಕೋಶಗಳು ಇವೆ ಆದರೆ ಸಮಪೂರ್ನ ತಡೆಗೆ ವಿಫಲವಾಗಿವೆ. ಹೊಸ ಸಲಕರಣೆಗಳು ಬರತ್ತಿವೆ. [೯]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Harbach, Ralph (November ೨,೨೦೦೮). "Family Culicidae Meigen, ೧೮೧೮". Mosquito Taxonomic Inventory. {{cite web}}: Check date values in: |date= (help)[ಶಾಶ್ವತವಾಗಿ ಮಡಿದ ಕೊಂಡಿ]
 2. "ಆರ್ಕೈವ್ ನಕಲು". Archived from the original on 2013-03-30. Retrieved 2013-09-02.
 3. ["Mosquitoes of Michigan -Their Biology and Control". Michigan Mosquito Control Organization. 2013. Archived from the original on 2013-03-30.]
 4. Gates, Bill. "The Deadliest Animal in the World".
 5. Bates, Claire (2016-01-28). "Would it be wrong to eradicate
 6. ಭೂಮಿ ಮೇಲಿನ ಅತಿ ಅಪಾಯಕಾರಿ ಜೀವಿ-prajavani:[[https://web.archive.org/web/20170609071350/http://www.prajavani.net/taxonomy/term/71 Archived 2017-06-09 ವೇಬ್ಯಾಕ್ ಮೆಷಿನ್ ನಲ್ಲಿ.]]
 7. India well on its way to beating malaria
 8. "ಆರ್ಕೈವ್ ನಕಲು". Archived from the original on 2017-08-04. Retrieved 2017-08-02.
 9. German Mosquito Killer Trap
"https://kn.wikipedia.org/w/index.php?title=ಸೊಳ್ಳೆ&oldid=1163919" ಇಂದ ಪಡೆಯಲ್ಪಟ್ಟಿದೆ