ಹಣ್ಣಿನ ನೊಣ

ವಿಕಿಪೀಡಿಯ ಇಂದ
Jump to navigation Jump to search
  • ಡ್ರ್‍ಓಸೋಫಿಲ್ಲಾ ಮೆಲೆನೊಗಸ್ಟಾ ಪ್ರಭೇದಕ್ಕೆ ಸೇರಿರುವ ನೊಣ ಇದು.

(ಈ ಚಿಕ್ಕ ೨ ಮಿ.ಮೀ.ಇರುವ ನೊಣಕ್ಕೆ "ಗುಂಗಾಡಿ" ಅಥವಾ "ಗುಂಗುರು ನೊಣ", "ನುಸಿ",ಎನ್ನುವರು. ಆಹಾರ ಹಣ್ಣು ಕೊಳೆತ ಹಣ್ಣು-ತರಕಾರಿ, ಆಹಾರ ಪದಾರ್ಥಗಳ ಮೇಲೆ ಎರಗುತ್ತವೆ ಮತ್ತು ಮೊಟ್ಟೆ ಇಡುತ್ತವೆ. ಭಾರತದಲ್ಲಿ ಅವು ಹೆಚ್ಚಾಗಿ ಕಪ್ಪು ಬಣ್ಣದವು)

  • ಮಾದರಿ ಜೀವಿ:
  • ಈ ನೊಣಗಳನ್ನು ಸಾಕುವುದು, ಬೆಳೆಸುವುದು ಬಲು ಸುಲಭ. ಅಲ್ಲದೇ ಇವು ಸಾಕಷ್ಟು ವೇಗವಾಗಿ ಮೊಟ್ಟೆಗಳನ್ನು ಇಡುತ್ತವೆ. ಅಲ್ಲದೇ ಅ ಮೊಟ್ಟೆಗಳು ಮರಿಗಳಾಗಿ ಬದಲಾಗಲು ಸಹ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಜೆನೆಟಿಕ್ಸ್, ಫಿಸಿಯೊಲಾಜಿ, ಮೈಕ್ರೋಬಯಾಲ್ ಪ್ಯಾಥೊಜೆನೆಸಿಸ್ ಮತ್ತು ಜೀವ ಇತಿಹಾಸದ ಸಂಶೋಧನೆಗಳಲ್ಲಿ ಈ ನೊಣಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದ್ದರಿಂದ ಹಣ್ಣಿನ ನೊಣಗಳನ್ನು ಮಾದರಿ ಜೀವಿಗಳೆಂದು ವಿಜ್ಙಾನಿಗಳು ಕರೆಯುತ್ತಾರೆ.
  • ದೈಹಿಕ ರಚನೆ:
  • ಹಣ್ಣಿನ ನೊಣಗಳು ಗಾಢ ಕೆಂಪು ಬಣ್ಣದ ಕಣ್ಣುಗಳನ್ನು, ಕಂದು ಹಳದಿ ಮಿಶ್ರಿತ ಮೈಬಣ್ಣವನ್ನು ಹೊಂದಿರುತ್ತವೆ. ಹ್ಹಣ್ಣಿನ ನೊಣಗಳು ಗಾತ್ರದಲ್ಲಿ ಗಂಡಿಗಿಂತ ಸ್ವಲ್ಪ ಮಟ್ಟಿಗೆ ದೊಡ್ಡದಾಗಿದ್ದು ೨.೫ ಮಿಲಿ ಮೀಟರ್ ಅಷ್ಟು ಉದ್ದ ಬೆಳೆಯುತ್ತವೆ. ಗಂಡು ನೊಣಗಳ ಬೆನ್ನಿನ ಮೇಲೆ ಕಪ್ಪು ಬಣ್ಣದ ಬಿಡಿ ಗೆರೆಗಳು ಇರುತ್ತವೆ. ಸಂತಾನಾಭಿವೃದ್ಧಿ ಪ್ರಕ್ರಿಯೆಯಲ್ಲಿ ಸಹಾಯಕವಾಗುವ ನಿಟ್ಟಿನಲ್ಲಿ ಗಂಡು ನೊಣದ ಜನನೇಂದ್ರಿಯದ ಸುತ್ತಾ ಮುಳ್ಳಿನಂತಹ ರಚನೆಯನ್ನು ಹೊಂದಿರುತ್ತವೆ.
  • ಜೀವನ ಚಕ್ರ:
  • ಹೆಣ್ಣು ನೊಣಗಳು ಕೊಳೆತ ಹಣ್ಣು ಇಲ್ಲವೆ ಮಶ್ರೂಮ್ ಇವುಗಳ ಮೇಲೆ ಮೊಟ್ಟೆ ಇಡುತ್ತವೆ. ಇವು ಒಂದು ಬಾರಿಗೆ ೫ ಮೊಟ್ಟೆಗಳಂತೆ ೧ ಪ್ರಕ್ರಿಯೆಯಲ್ಲಿ ೫೦೦ ರವರೆಗೆ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಸಾಮಾನ್ಯವಾಗಿ ೮.೫ ದಿನಗಳಲ್ಲಿ ಮರಿಗಳಾಗಿ ಹೊರಬರುತ್ತವೆ ಆದರು ಬಾಹ್ಯ ತಾಪಮಾನಕ್ಕನುಗುಣವಾಗಿ ಕೆಲ ವಿಷಮ ಸನ್ನಿವೇಶಗಳಲ್ಲಿ ೭-೧೯ ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತವೆ.
  • ವೈಶಿಷ್ಟ್ಯ:
  • ಹಣ್ಣಿನ ನೊಣಗಳು ಜಿರಳೆಗಳಿಗಿಂತ ಹೆಚ್ಚು ರೇಡಿಯೋ ಆಕ್ಟಿವ್ ಕರಣಗಳನ್ನು ತೆಗೆದುಕೊಳ್ಳಬಲ್ಲವು. ಆದರೆ ಇವುಗಳ ಅಡಾಪ್ಟಿವ್ ನೇಚರ್ ತುಂಬ ಕಡಿಮೆ ಇದೆ.

ನೋಡಿ[ಬದಲಾಯಿಸಿ]

fruit fly Drosophilidae

ಉಲ್ಲೇಖ[ಬದಲಾಯಿಸಿ]

???