ಥೈರಾಯ್ಡ್ ಗ್ರಂಥಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಾನ[ಬದಲಾಯಿಸಿ]

ಕುತ್ತಿಗೆಯಲ್ಲಿ ಥೈರಾಯಿಡ್ ತಾಣ(Thyroide)
  • ಇದು ಗಂಟಲುನಾಳದ ಆರಂಭದಲ್ಲಿ ಅದರ ಎರಡೂಕಡೆ ಇರುವ ಒಂದು ಜೊತೆ ಗ್ರಂಥಿಗಳು. ಇದರ ಚಟುವಟಿಕೆ ಅತಿಯಾದರೆ ಅವು ಇರುವ ಭಾಗ ಉಬ್ಬಿ ಉಬ್ಬಿ ಗುಳ್ಳೆಯಂತಾಗುತ್ತದೆ. ಅದು ಉಬ್ಬಿ ಒಂದು ತೆಂಗಿನಕಾಯಿ ಗಾತ್ರ ಆಗುವುದುಂಟು. ಈ ಬೇನೆ ಹೆಂಗಸರಿಗೆ ಹೆಚ್ಚಾಗಿ ಬರುವುದುಂಟು. ಅದನ್ನು ಗಳಗಂಡ ರೋಗ (ಗಾಯಿಟರ್) ಎಂದು ಕರೆಯುತ್ತಾರೆ.
  • ಥೈರಾಯ್ಡ್ ಗ್ರಂಥಿಯು ಗಂಟಲ ನಾಲದ ಮುಂಭಾಗದಲ್ಲಿ ಇದೆ. ಥೈರಾಯಿಡ್ ನ ರಸಗುಳ್ಳೆಗಳು ಒಸರುವ (ಪ್ರೇರಕ ದ್ರವ್ಯ (ಹಾರ್ಮೋನ್) ದಲ್ಲಿ ಥೈರೋಗ್ಲೊಬ್ಯುಲಿನ್ (thyroglobulin) ಎಂಬ ಸಂಯುಕ್ತ ರಸಾಯನಿಕ ಇದೆ. ಇದು ಗೈಕೋಪ್ರೋಟೀನ್ ಎಂಬ ಪ್ರೇರಕದ್ರವ್ಯ. ಥೈರಾಯ್ಡ್ ಒಂದು ಕಿರುಚೀಲಗಳಂತೆ ಇರುವ ಈ ಗ್ರಂಥಿಯಿಂದ ಗೈಕೋಪ್ರೋಟೀನ್ ಎಂಬ ಥೈರಾಯ್ಡ್ ಹಾರ್ಮೋನ್ ಒಸರುವುದು.

ಪ್ರೇರಕದ್ರವ್ಯ ಅಥವಾ ಹಾರ್ಮೋನುಗಳು[ಬದಲಾಯಿಸಿ]

  • ಥೈರಾಯ್ಡ್ ಹಾರ್ಮೋನ್‍ನಲ್ಲಿ ಥೈರಾಕ್ಸಿನ್ (T4)) ಮತ್ತು ಟ್ರಿಯೋಡೊಥೈರೋನೈನ್ (T3) ಗಳು ಸೆಲ್ಯುಲರ್ (ಜೀವ ಕೋಶಗಳ) ಚಯಾಪಚಯದ ದರವನ್ನು ಹೆಚ್ಚಿಸುವುದು ಪರಿಣಾಮವಾಗಿ, ಅದರಿಂದ ಆಮ್ಲಜನಕ ಬಳಕೆ ಹೆಚ್ಚುವುದು ಮತ್ತು ಶಾಖ ಉತ್ಪಾದನೆಯ ಏರಿಕೆಯನ್ನೂ ತರುತ್ತದೆ.
  • ಥೈರಾಯಿಡ್ ಹಾರ್ಮೋನು ಟಿಎಸ್ಎಚ್$ ನಿಂದ ಪ್ರೇರಿತವಾಗಿದೆ. ಜೀವಕೋಶಗಳಿಂದ ಸ್ರವಿಸುವಿಕೆಯನ್ನು ಖಾಲಿ ಕುಳಿ ಸಂಗ್ರಹಿಸುತ್ತದೆ ಮತ್ತು ಇದರಿಂದ ಥೈರಾಯ್ಡ್ ಹಾರ್ಮೋನ್ ಮಟ್ಟಗಳು ಏರುವುದು. ಈ ಹಾರ್ಮೋನುಗಳು ಪ್ರತಿರೋಧಕ್ಕೆ ಮೆದುಳಿನ ಹೈಪೋಥೈಲಮಸಗೆ ಮತ್ತು ಪಿಟ್ಯುಟರಿಗೆ ಪುನಃಗ್ರಹಿಕೆಯನ್ನು ಒದಗಿಸುವುದು.
  • ($:pituitary gland (located at the base of the brain) to release thyroid stimulating hormone (TSH). TSH stimulates the thyroid gland to release more T4)

ಇತಿಹಾಸ[ಬದಲಾಯಿಸಿ]

  • ಕಳೆದ ಶತಮಾನದಲ್ಲಿ ಸ್ವಿಟ್ಜರ್ಲೆಂಡಿನಲ್ಲಿ, ಗಳಗಂಡಬೇನೆಗೆ ಗುರಿಯಾದ ಇಬ್ಬರು ರೋಗಿಗಳಮೇಲೆ ಅಲ್ಲಿನ ವೈದ್ಯರೊಬ್ಬೆರು ಶಸ್ತ್ರ ಚಿಕಿತ್ಸೆ ನಡೆಸಿದರು. ಅವರು ಅತಿಯಾಗಿಬೆಳೆದ ಆ ಗ್ರಂಥಿಯನ್ನೇ ಕತ್ತರಿಸಿ ತೆಗೆದರು. ಇದರಿಂದ ರೋಗ ಕಡಿಮೆಯಾದಂತೆ ಕಂಡರೂ ಕೆಲವು ಸಮಯದ ಬಳಿಕ ಅವರ ಚರ್ಮವು ನಿರಿಗಟ್ಟ ತೊಡಗಿತು, ರೂಪ ವಿಕಾರಗೊಂಡಿತು. ಇದರಿಂದ ಥೈರಾಯಿಡ್ ಗ್ರಂಥಿ ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂಬ ತಿಳುವಳಿಕೆ ಬಂತು. ಅದಕ್ಕಾಗಿ ಆ ಗ್ರಂಥಿಯಲ್ಲಿರುವ ದ್ರವ್ಯ ಯಾವುದು ಎಂದು ಸಂಶೋಧಿಸಿದರು. ಅದು ಅಯೋಡಿನ್ ಧಾತುವಿನ ಸಂಯುಕ್ದದ ದ್ರವ- ಥೈರಾಯಿಡ್ ದ್ರವ ಎಂದು ತಿಳಿಯಿತು. ಅದನ್ನು ಥೈರಾಕ್ಷಿನ್ ದ್ರವ ಎಂದು ಕರೆಯುತ್ತಾರೆ.

ಥೈರಾಕ್ಷಿನ್ ದ್ರವದ ಪ್ರಭಾವ[ಬದಲಾಯಿಸಿ]

ಥೈರಾಯಿಡ್ ಗ್ರಂಥಿಯ ರೋಗದ ಪರಿಣಾಮ ;The thyroid gland in health and disease (1917) (14780980651)
  • ಈ ದ್ರವ ಕಡಿಮೆ ಉತ್ಪನ್ನವಾದರೆ ಮುಖ ಒರಟಾಗುವುದು, ಚರ್ಮ ನಿರಿಗಟ್ಟುವುದು; ಮುಪ್ಪು ಬಂದಂತೆ ಆಗುವುದು, ಹಸ್ತ ಬೆರಳು ದಪ್ಪವಾಗುತ್ತವೆ, ತಲೆಗೂದಲೂ ಹುಬ್ಬೂ ಉದುರತೊಡಗುತ್ತವೆ. ಚಟುವಟಿಕೆ ಕಡಿಮೆಯಾಗುವುದು; ದೇಹದ ಬೆಳವಣಿಗೆ ಕುಂದುವುದು. ಬುದ್ಧಿ ಮಂದವಾಗುತ್ತದೆ; ಲೈಂಗಿಕ ಚಟುವಟಿಕೆಯನ್ನು ತಗ್ಗಿಸುತ್ತದೆ. ಶರೀರವು ವ್ಯವಸ್ಥಿತವಾಗಿ ಬೆಳೆಯುವುದಕ್ಕೂ ಲೈಂಗಿಕ ಚಟುವಟಿಕೆಗೂ ಈ ಗ್ರಂಥಿ ಅವಶ್ಯಕ ಎಂಬುದು ತಿಳಿಯಿತು.
  • ಈ ಗ್ರಂಥಿಯ ಚಟುವಟಿಕೆ ಹೆಚ್ಚಾದರೆ ಅಪಾಯವೂ ಇದೆ. ಮನಸ್ಸಿನ ಭಾವೋದ್ವೇಗ ಹೆಚ್ಚುತ್ತದೆ ರಕ್ತ ಸಂಚಾರದ ವೇಗ ಹೆಚ್ಚುತ್ತದೆ. ಅದು ಅತಿಯಾಗಿ ಬೆಳೆದರೆ ಗಂಟಲು ಗುಳ್ಳೆಯಾಗಬಹುದು (ಗಳಗಂಡ). ಅದು ದೊಡ್ಡದಾಗಿ ಬೆಳೆದರೆ ಹೆಚ್ಚು ಬೆಳೆದ ಭಾಗವನ್ನು ಕತ್ತರಿಸಿ ತೆಗೆಯುವರು.
  • ಸ್ತ್ರೀಯರು ಗರ್ಭಿಣಿಯರಾದಾಗ ಬಾಣಂತಿಯರಲ್ಲಿ ಹಾಲುತುಂಬಿದಾಗ, ಋತುಮತಿಯಾದಾಗ ಈ ಗ್ರಂಥಿಯ ಚಟುವಟಿಕೆ ಹೆಚ್ಚಿ ಥೈರಾಯಿಡ್ ಒಸರುವಿಕೆ ಹೆಚ್ಚುತ್ತದೆ. ಇದರಿಂದ ಮನಸ್ಸಿನ ಆತುರ ಕಾತುರ ಹೆಚ್ಚುತ್ತದೆ. [೧]

ಥೈರಾಯಿಡ್ ಗ್ರಂಥಿಯ ಸಮಸ್ಯೆ[ಬದಲಾಯಿಸಿ]

ಗಳಗಂಡ ΙΙΙನೇ ಹಂತ
ಗಳಗಂಡಕ್ಕೆ ಒಳಗಾದ ಮೇಕೆ - (goitre)
  • ಥೈರಾಯಿಡ್ ಗ್ರಂಥಿಯ ಪ್ರಧಾನ ಸಮಸ್ಯೆಯು ಥೈರಾಯಿಡ್ ಗ್ರಂಥಿಯು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅದು ಅನೇಕ ಆರೋಗ್ಯ ಸಮಸ್ಸೆಗಳಿಗೆ ಕಾರಣವಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಸೇರಿಸಿ ಅದನ್ನು ಥೈರಾಯಿಡ್ ಅವ್ಯವಸ್ಥೆ ಎನ್ನುವರು ಅಥವಾ ಥೈರಾಯಿಡ್ ಕಾರ್ಯದಲ್ಲಿ ಕ್ರಮ ತಪ್ಪುವುದು ಎಂದೂ ಕರೆಯಬಹುದು.
  • ಥೈರಾಯಿಡ್ ಗ್ರಂಥಿಯ ಏರುಪೇರು ಆಗಿ ಅತಿಚಟುವಟಿಕೆಯಿಂದ ಹೆಚ್ಚು ಥೈರಾಕ್ಷಿನ್ ಬಿಡುಗಡೆಯಾದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗಲು ಕಾರಣವಾಗಬಹುದು. ಅದನ್ನು ಗಳಗಂಡವೆನ್ನುತ್ತಾರೆ(Goiter). ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು:
  1. ಥೈರಾಯಿಡ್ ಗ್ರಂಥಿಯ ಅತಿಯಾದ ಕ್ರಿಯೆ ಹೈಪರ್ - ಥೈರಾಯಿಡಿಸಮ್
  2. ಥೈರಾಯಿಡ್ ಗ್ರಂಥಿಯ ಅತ್ಯಂತ ಕಡಿಮೆ ಕ್ರಿಯೆ ಹೈಪೋಥೈರಾಯಿಡಿಸಮ್
  3. ಥೈರಾಯಿಡ್ ಗ್ರಂಥಿಯ ಗಂಟುಗಳು (Nodule): ಥೈರಾಯಿಡ್ ನಾಡಬಲ್ (ಕ್ಯಾನ್ಸರ್ ರಹಿತದ ಗಂಟು)
  4. ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ (Thyroid Cancer )
  • ಈ ಯಾವುದೇ ಸಮಸ್ಯೆ ಗಳಗಂಡಕ್ಕೆ (Goiter ) ಅಂದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದಕ್ಕೆ ಕಾರಣವಾಗಬಹುದು.[೨]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ವಿಜ್ಞಾನ ಪ್ರಪಂಚ: ಭಾಗ ೨: ಜೀವ ಜೀವನ: ಲೇಖಕ-ಶಿವರಾಮ ಕಾರಂತ: ಹರ್ಷ ಪ್ರಕಟನಾಲಯ, ಪುತ್ತೂರು, ದ.ಕ.:೧೯೬೦.
  2. Thyroid DisordersMedical Author: Melissa Conrad Stöppler, MD Medical Editor: Robert Ferry Jr., M