ಆಂಜಿಯೋಪ್ಲ್ಯಾಸ್ಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 1. REDIRECT Template:Infobox interventions

ಸಾಂಕೇತಿಕವಾಗಿ ಆಂಜಿಯೋಪ್ಲ್ಯಾಸ್ಟಿ ಎಂಬುದು ಅಪಧಮನಿಕಾಠಿಣ್ಯದ ಪರಿಣಾಮವಾಗಿ ಉಂಟಾಗುವ ಸಂಕುಚಿತವಾಗುವ ಅಥವಾ ತಡೆಯಾದ ರಕ್ತನಾಳವನ್ನು ಯಾಂತ್ರಿಕವಾಗಿ ಅಗಲಗೊಳಿಸುವ ತಾಂತ್ರಿಕ ವಿಜ್ಞಾನದ ವಿಧಾನವಾಗಿದೆ. ಬಲೂನ್ ಕೆಥೆಟರ್ ಎಂದು ಕರೆಯಲ್ಪಡುವ ಒಂದು ನಿರ್ದೇಶಿತ ಚಾಲಕ ಕಂಬಿ ಅಥವಾ ಒಂದು ಗೈಡ್ ವೈಯರ್ ನ ಮೇಲಿರುವ ಖಾಲಿಯಾಗಿರುವ ಹಾಗು ಚಪ್ಪಟೆಯಾದ ಬಲೂನನ್ನು, ಸಂಕುಚಿತಗೊಂಡ ಜಾಗಗಳಿಗೆ ಹಾಯಿಸಲಾಗುತ್ತದೆ. ನಂತರದಲ್ಲಿ ೭೫ ರಿಂದ ೫೦೦ ಬಾರಿ ಸಾಮಾನ್ಯ ರಕ್ತದೊತ್ತಡಕ್ಕೆ(೬ ರಿಂದ ೨೦ರ ವಾಯುಭಾರ) ಸಮನಾದ ಮತ್ತು ನಿರ್ಧಿಷ್ಟಪಡಿಸಿದ ನೀರಿನ ಒತ್ತಡಗಳನ್ನು ಬಳಸಿಕೊಂಡು ನಿರ್ದಿಷ್ಟ ಗಾತ್ರಕ್ಕೆ ಹಿಗ್ಗಿಸಲಾಗುತ್ತದೆ. ಒಳಸೇರಿದ ಬಲೂನು ಕೊಬ್ಬಿನ ಶೇಖರಣೆಯನ್ನು ಸಣ್ಣಚೂರುಗಳಾಗಿ ಒಡೆದು ಹಾಕುವ ಮೂಲಕ ರಕ್ತನಾಳದ ಹರಿವಿನಲ್ಲಿ ಸುಧಾರಣೆ ತರುತ್ತದೆ.ಇದಾದ ನಂತರದಲ್ಲಿ ಬಲೂನ್ ಸಂಕುಚಿತವಾಗಿ ಗಾಳಿ ಕಳೆದುಕೊಳ್ಳುತ್ತದೆ,ಆಗ ಅದನ್ನು ಹಿಂದಕ್ಕೆ ಎಳೆದುಕೊಳ್ಳಲಾಗುತ್ತದೆ. ಈ ಪದವು, "ನಾಳ" ಎಂಬ ಅರ್ಥವನ್ನು ನೀಡುವ ಅಗ್ಗೆಯಿಯೋಸ್ αγγειος ಹಾಗು "ರಚನೆಯಾದ" ಅಥವಾ "ಆಕಾರಗೊಂಡ" ಎಂಬ ಅರ್ಥವನ್ನು ನೀಡುವ ಪ್ಲ್ಯಾಸ್ಟೋಸ್ πλαστός ಎಂಬ ಗ್ರೀಕ್ ಪದಗಳ ವೈದ್ಯಕೀಯ ಪರಿಭಾಷಾ aggeîos ಅಂದರೆ "ನಾಳ" plastós ಅಂದರೆ "ರಾಚನಿಕ" ಇಲ್ಲವೆ "ಸಂಪೂರಿತ"ವಾದುದು ಎನ್ನಲಾಗಿದೆ. ಆಂಜಿಯೋಪ್ಲ್ಯಾಸ್ಟಿ ವಿಧಾನವು ಎಲ್ಲ ರೀತಿಯ ನಾಳೀಯ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ. ಇದನ್ನು ಸರ್ವೆಸಾಮಾನ್ಯವಾಗಿ ಅತ್ಯಲ್ಪ ಪ್ರಮಾಣದಲ್ಲಿ ಆಕ್ರಮಿಸುವ ಅಥವಾ ಚರ್ಮದ ಮೂಲಕ ತೂರಿಸುವ ವಿಧಾನದಿಂದ ನಡೆಸಲಾಗುತ್ತದೆ.

ಇತಿಹಾಸ[ಬದಲಾಯಿಸಿ]

ಬಲೂನ್ ಕೆಥೆಟರ್ ನ ಚಿತ್ರ.

ಆರಂಭದಲ್ಲಿ ಆಂಜಿಯೋಪ್ಲ್ಯಾಸ್ಟಿ ವಿಧಾನವನ್ನು ಮೂಲತಃ ಮಧ್ಯಸ್ಥಿಕೆ ರೇಡಿಯಾಲಜಿ ತಜ್ಞ ಚಾರ್ಲ್ಸ್ ಡೋಟರ್ ೧೯೬೪ರಲ್ಲಿ ವ್ಯಾಖ್ಯಾನಿಸಿದರು.[೧] ಡಾ. ಡೋಟರ್, ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಆಂಜಿಯೋಪ್ಲ್ಯಾಸ್ಟಿ ಹಾಗು ತೂರುನಳಿಕೆ-ವಿತರಣಾ ನಾಳದ ಪರಿಶೋಧನೆ ಮಾಡಿದವರಲ್ಲಿ ಮೊದಲಿಗರೆನಿಸಿದರು. ಇದನ್ನು ಆರಂಭದಲ್ಲಿ ಬಾಹ್ಯ ಅಪಧಮನಿಯ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿತ್ತು. ಜನವರಿ ೧೬, ೧೯೬೪ರಲ್ಲಿ ಡೋಟರ್ ಅವರು, ೮೨ ವರ್ಷದ ವೃದ್ಧೆ ನೋವಿನಿಂದ ಕೂಡಿದ ಕಾಲಿನಲ್ಲಿನ ರಕ್ತದ ಕೊರತೆಯಿಂದ ನರಳುವುದರ ಜೊತೆಗೆ ಗ್ಯಾಂಗ್ರೀನ್ ಉಂಟಾಗಿದ್ದ ಕಾಲಿಗೆ ಛೇದನ ಮಾಡಿಸಿಕೊಳ್ಳಲು ನಿರಾಕರಿಸಿದಾಗ, ಸೂಪರ್ಫೀಶಿಯಲ್ ಫೆರೋಮಲ್ ಆರ್ಟರಿ(SFA) ಯ ಬಹಳ ಬಿಗಿಯಾಗಿದ್ದ, ಕೇಂದ್ರೀಕೃತವಾದ ನಾಳಸಂಕೋಚನವನ್ನು ಚರ್ಮದ ಮೂಲಕ ಹಿಗ್ಗಿಸಿದರು. ಗೈಡ್ ವೈರ್ ಹಾಗು ಏಕಾಕ್ಷ ಟೆಫ್ಲಾನ್ ಕೆಥೆಟರ್ ಗಳೊಂದಿಗೆ ನಾಳಸಂಕೋಚನದ ಯಶಸ್ವಿ ವಿಸ್ತರಣೆಯ ನಂತರ, ಆಕೆಯ ಕಾಲಿನಲ್ಲಿ ರಕ್ತ ಪರಿಚಲನೆಯು ಮತ್ತೆ ಸುಗಮವಾಯಿತು. ಎರಡೂವರೆ ವರ್ಷಗಳ ನಂತರ ಆಕೆ ನ್ಯುಮೋನಿಯಾದಿಂದ ಸಾಯುವವರೆಗೂ ಹಿಗ್ಗಿದ ಅಪಧಮನಿಯು ತೆರೆದುಕೊಂಡೇ ಇತ್ತು.[೨] ಚಾರ್ಲ್ಸ್ ಡೋಟರ್ ರನ್ನು ಸಾಮಾನ್ಯವಾಗಿ "ಮಧ್ಯಸ್ಥಿಕೆ ರೇಡಿಯಾಲಜಿ ಜನಕನೆಂದು" ಕರೆಯಲಾಗುತ್ತದೆ. ಅದಲ್ಲದೇ ೧೯೭೮ರಲ್ಲಿ ವೈದ್ಯಕೀಯ ವಿಭಾಗದಲ್ಲಿ ನೀಡಲಾಗುವ ನೋಬಲ್ ಪ್ರಶಸ್ತಿಗೆ ನಾಮಾಂಕಿತಗೊಂಡರು. ರೋಗಿಯು ಪ್ರಜ್ಞೆಯಲ್ಲಿರುವಾಗಲೇ ಮೊದಲ ಪರಿಧಮನಿ ಆಂಜಿಯೋಪ್ಲ್ಯಾಸ್ಟಿಯನ್ನು ಜರ್ಮನ್ ಹೃದಯತಜ್ಞ ಆಂಡ್ರೆಯಾಸ್ ಗ್ರುಯೆಂಟ್ಜಿಗ್ ಸೆಪ್ಟೆಂಬರ್ ೧೯೭೭ರಲ್ಲಿ ನೆರವೇರಿಸಿದರು.[೩]

ಪರಿಧಮನಿ ಕಾಯಿಲೆಗಳು ಉಂಟಾಗುವ ಕಾರಣಗಳು[ಬದಲಾಯಿಸಿ]

ಪರಿಧಮನಿಗಳಲ್ಲಿ ತಡೆಯು, ಅತಿ-ಒತ್ತಡ, ಮಧುಮೇಹ, ವ್ಯಾಯಾಮವಿಲ್ಲದ ಜೀವನಶೈಲಿ, ಧೂಮಪಾನ, ಅತಿಯಾದ ಕೊಬ್ಬಿನ ಮಟ್ಟಗಳು, ಕೊಬ್ಬಿನಿಂದ ಕೂಡಿದ ಆಹಾರಗಳು, ಹಾಗು ಹೃದಯರಕ್ತನಾಳದ ಕಾಯಿಲೆಗಳಿಂದ ಉಂಟಾಗುತ್ತದೆ. ತಡೆಗಳನ್ನು ಆಂಜಿಯೋಪ್ಲ್ಯಾಸ್ಟಿ ಮೂಲಕ ತೆಗೆದುಹಾಕಲಾಗುತ್ತದೆ.[೪] ಆಂಜಿಯೋಪ್ಲ್ಯಾಸ್ಟಿಗಳು ಬೈಪಾಸ್ ಶಸ್ತ್ರಚಿಕಿತ್ಸೆಗಿಂತ ಬಹಳ ಸುರಕ್ಷಿತವಾಗಿರುತ್ತವೆ, ಹಾಗು ಅಂಕಿಅಂಶಗಳ ಪ್ರಕಾರ, ಈ ಪ್ರಕ್ರಿಯೆಯಿಂದ ಉಂಟಾಗುವ ತೊಂದರೆಗಳಿಂದ ೧%ಕ್ಕೂ ಕಡಿಮೆ ಜನರು ಮರಣವನ್ನಪ್ಪುತ್ತಾರೆ.[೫] ಆಂಜಿಯೋಪ್ಲ್ಯಾಸ್ಟಿಯ ನಂತರ ಅಥವಾ ಆ ಸಮಯದಲ್ಲಿ ಉಂಟಾಗುವ ತೊಂದರೆಗಳು ಈ ಕೆಳಕಂಡಂತಿವೆ:

 • ಅಪಧಮನಿಯ ಛಿದ್ರವಾಗುವಿಕೆಯು ರಕ್ತ ಪರಿಚಲನೆಗೆ ಸಂಪೂರ್ಣ ತಡೆ ಉಂಟುಮಾಡುತ್ತದೆ; ಹಾಗು ಸಂಭಾವ್ಯವಾಗಿ ಹೃದಯಸ್ನಾಯುವಿನ ಊತಕವು ಸಾವನ್ನೂ ತರಬಹುದು - ಇದನ್ನು ಸಾಮಾನ್ಯವಾಗಿ ಕೇವಲ ಒಂದು ನಳಿಕೆಯನ್ನು ಅಳವಡಿಸುವ ಮೂಲಕ ಸರಿಪಡಿಸಬಹುದು.
 • ಕೆಲವೊಂದು ಸಂದರ್ಭಗಳಲ್ಲಿ ಹೊರದೂಡಲ್ಪಟ್ಟ ಅಡತಡೆ ಗೆಡ್ಡೆಗಳು ಪಾರ್ಶ್ವವಾಯುವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.(ಆಂಜಿಯೋಪ್ಲ್ಯಾಸ್ಟಿಗಳಿಗೆ ಒಳಗಾಗುವ ೧%ಕ್ಕೂ ಕಡಿಮೆ ರೋಗಿಗಳಲ್ಲಿ ಇದು ಕಂಡುಬರುತ್ತದೆ);
 • ಕೆಥೆಟರ್ ನ್ನು ಅಳವಡಿಸಿದ ಜಾಗದಲ್ಲಿ ರಕ್ತಸ್ರಾವ ಅಥವಾ ರಕ್ತ ಹೆಪ್ಪುಗಟ್ಟಿ ಮರಗಟ್ಟಿದಂತಹ ಮೂಗೇಟುಗಳು ಉಂಟಾಗಬಹುದು;
 • ಮೂತ್ರಪಿಂಡದ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಮೂತ್ರಪಿಂಡದ ಕಾಯಿಲೆ ಹಾಗು ಮಧುಮೇಹದಿಂದ ಬಳಲುತ್ತಿರುವವರು ಇದಕ್ಕೆ ತುತ್ತಾಗುತ್ತಾರೆ - ಇದು ಎಕ್ಸ್ ರೇಗೆ ಬಳಸಲಾಗುವ ಐಯೋಡಿನ್ ಕಾಂಟ್ರ್ಯಾಸ್ಟ್ ಡೈಗಳಿಂದ ಉಂಟಾಗುತ್ತದೆ, ಅಪಾಯ ತಪ್ಪಿಸುವ ಸಲುವಾಗಿ ಪ್ರಕ್ರಿಯೆಗೆ ಮುಂಚೆ ಅಥವಾ ನಂತರ ಅಭಿಧಮನಿಯೊಳಗೇ ದ್ರವಗಳ ಸೇರ್ಪಡೆ ಹಾಗು ಔಷಧಗಳನ್ನು ನೀಡಬಹುದು.
 • ಅರ್ರಿತ್ಮಿಯಾ(ಅಸಹಜ ಮತ್ತು ಏರಿಳಿತದ ಅನಿಯಮಿತ ಹೃದಯ ಬಡಿತ);[೬]
 • ಆಂಜಿಯೋಪ್ಲ್ಯಾಸ್ಟಿ ಸಮಯದಲ್ಲಿ ನೀಡಲಾಗುವ ಡೈನಿಂದ ಉಂಟಾಗುವ ಅಲರ್ಜಿ ಪ್ರತಿಕ್ರಿಯೆ;
 • ಸುಮಾರು ೩ ರಿಂದ ೫%ನಷ್ಟು ಪ್ರಕರಣಗಳ ಸಂದರ್ಭದಲ್ಲಿ ಹೃದಯಸ್ನಾಯುವಿನ ಊತಕ ಸಾವನ್ನು ತರಬಹುದು;
 • ಪ್ರಕ್ರಿಯೆಯ ಸಮಯದಲ್ಲಿ ತುರ್ತಾಗಿ ಮಾಡಬೇಕಾದ ಪರಿಧಮನಿಯ ಬೈಪಾಸ್ ಕಸಿಯ ಅಗತ್ಯತೆ(ಶೇಕಡಾ ೨-೪ರಷ್ಟು ಜನರಲ್ಲಿ). ಅಪಧಮನಿಯು ತೆರೆದುಕೊಳ್ಳುವ ಬದಲು ಮುಚ್ಚಿಕೊಂಡರೆ ಇದು ಉಂಟಾಗಬಹುದು;
 • ಮರುನಾಳಸಂಕೋಚನ, ಆಂಜಿಯೋಪ್ಲ್ಯಾಸ್ಟಿಯ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ, ಹಾಗು ಪ್ರಕ್ರಿಯೆಯ ನಂತರದ ಹಲವಾರು ವಾರಗಳಿಂದ ತಿಂಗಳವರೆಗೆ ಇದು ಕ್ರಮೇಣವಾಗಿ ರಕ್ತ ನಾಳಗಳನ್ನು ಮತ್ತೆ ಸಂಕುಚಿತಗೊಳಿಸುತ್ತವೆ. ಈ ತೊಂದರೆಯನ್ನು ಮತ್ತಷ್ಟು ಉಲ್ಬಣಗೊಳಿಸಲು ಕೆಲವು ನಿರ್ದಿಷ್ಟ ಪರಿಸ್ಥಿತಿಗಳು ಕಾರಣವಾಗುತ್ತವೆ, ಹಾಗು ಇವುಗಳೆಂದರೆ ಅತಿ ಒತ್ತಡ, ಮಧುಮೇಹ, ಗಂಟಲೂತದ ನೋವು ಅಥವಾ ಮೂತ್ರಪಿಂಡದ ಸಮಸ್ಯೆ ಎಂದಾಗುತ್ತದೆ.
 • ರಕ್ತದ ಹೆಪ್ಪುಗಟ್ಟುವಿಕೆ(ನಳಿಕೆಯಲ್ಲಿ ಪದರುಗಳಾಗಿ ಹೆಪ್ಪುಗಟ್ಟುವಿಕೆಯು ಉಂಟಾಗುವುದು), ಆಂಜಿಯೋಪ್ಲ್ಯಾಸ್ಟಿ ನಡೆದ ಹಲವು ಗಂಟೆಗಳ ಅಥವಾ ತಿಂಗಳುಗಳ ನಂತರ ನಳಿಕೆಯೊಳಗೆ ಉಂಟಾಗಬಹುದು, ಹಾಗು ಇವುಗಳು ಹೃದಯಸ್ನಾಯುವಿನ ಊತಕದಿಂದಾಗಿ ಸಾವನ್ನು ಉಂಟುಮಾಡಬಹುದು.[೭]

ಹೀಗೆ ೭೫ ವರ್ಷಕ್ಕೂ ಮೇಲ್ಪಟ್ಟ ರೋಗಿಗಳಲ್ಲಿ, ಮಧುಮೇಹ ಅಥವಾ ಕಿಡ್ನಿ ಕಾಯಿಲೆಯಿಂದ ನರಳುವ ರೋಗಿಗಳಲ್ಲಿ ಅಥವಾ ತೀವ್ರತರವಾದ ಹೃದಯದ ತೊಂದರೆ ಅಥವಾ ಹೃದಯದ ಅಪಧಮನಿಯೊಳಗೆ ಉಂಟಾಗುವ ಮಲಿನವಾದ ರಕ್ತದ ಗೆಡ್ಡೆಗಳನ್ನೂ ಹೊಂದಿರುವವರಲ್ಲಿ ಆಂಜಿಯೋಪ್ಲ್ಯಾಸ್ಟಿ ಉಂಟುಮಾಡುವ ಅಪಾಯಗಳು ಅಧಿಕವಾಗಿರುತ್ತವೆ. ಅಲ್ಲದೇ, ಹೃದಯದಲ್ಲಿ ರಕ್ತವು ಸರಿಯಾಗಿ ಪೂರೈಕೆಯಾಗದ ರೋಗಿಗಳು ಹಾಗು ಮಹಿಳೆಯರು ಇಲ್ಲಿ ಹೆಚ್ಚಿನ ಅಪಾಯಕ್ಕೆ ಒಳಪಡುತ್ತಾರೆಂದು ಪರಿಗಣಿಸಲಾಗಿದೆ. ಆದಾಗ್ಯೂ ಹೃದಯಸ್ನಾಯುವಿನ ಊತಕ ಸಾವು, ಲಕ್ವ ಅಥವಾ ಮೂತ್ರಪಿಂಡದ ಸಮಸ್ಯೆಗಳಂತಹ ಜಟಿಲತೆಗಳು ಬಹಳ ವಿರಳವಾಗಿರುತ್ತವೆ. ಆಂಜಿಯೋಪ್ಲ್ಯಾಸ್ಟಿಗೆ ಒಳಪಡುವ ರೋಗಿಗಳು ಮರಣವನ್ನಪ್ಪುವುದು ಬಹಳ ಕಡಿಮೆ, ಸುಮಾರು ೦.೧%ರಷ್ಟು ರೋಗಿಗಳು ಈ ಅಪಾಯಕ್ಕೆ ಸಿಲುಕುತ್ತಾರೆ.(ಸಾಮಾನ್ಯವಾದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಇದು ೧% ರಿಂದ ೨%ನಷ್ಟಿರುತ್ತದೆ). ಒಟ್ಟಾರೆಯಾಗಿ, ತುಲನಾತ್ಮಕವಾಗಿ ಅಪಾಯದ ಪ್ರಮಾಣಗಳು ಬಹಳ ಕಡಿಮೆಯಿರುತ್ತವೆ, ಹಾಗು ನಿರೀಕ್ಷಿತ ಅಪಾಯದ ವಿರುದ್ಧ ಸಂಭಾವ್ಯ ಅನುಕೂಲವನ್ನು ಸರಿದೂಗಿಸಿದಾಗ ಇವು ಹಲವು ಪರಿಸ್ಥಿತಿಗಳಲ್ಲಿ ಅಂಗೀಕಾರಗೊಂಡಿವೆ.(ಅಪಾಯ-ಪ್ರಯೋಜನದ ಅನುಪಾತ).[೮]

ವಿವಾದ[ಬದಲಾಯಿಸಿ]

ಹೃದಯಾಘಾತವಾದ ವ್ಯಕ್ತಿಯನ್ನು ಉಳಿಸಿಕೊಳ್ಳುವಲ್ಲಿ ಆಂಜಿಯೋಪ್ಲ್ಯಾಸ್ಟಿಯ ಮಹತ್ವವು ಹಲವಾರು ಅಧ್ಯಯನಗಳಿಂದ ಸ್ಪಷ್ಟವಾಗಿ ನಿರೂಪಿತವಾಗಿದೆ.(ತಕ್ಷಣವೇ ತಡೆಯಾಗುವುದನ್ನು ಪರಿಹರಿಸುವುದು), ಆದರೆ ಅಧ್ಯಯನಗಳು, ತೀವ್ರತರವಾದ ಗಂಟಲು ನೋವಿರುವ ರೋಗಿಗಳಲ್ಲಿ ಆಂಜಿಯೋಪ್ಲ್ಯಾಸ್ಟಿ vs. ವೈದ್ಯಕೀಯ ಚಿಕಿತ್ಸೆಗೆ ಕ್ಲಿಷ್ಟಕರ ಮುಕ್ತಾಯವನ್ನು ತಗ್ಗಿಸುವುದಕ್ಕಾಗಿ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿವೆ. ಅಪಧಮನಿಯನ್ನು-ತೆರೆಯುವ ಪ್ರಕ್ರಿಯೆಯು ತಾತ್ಕಾಲಿಕವಾಗಿ ಎದೆ ನೋವಿಗೆ ಉಪಶಮನ ನೀಡುತ್ತದೆ, ಆದರೆ ದೀರ್ಘಕಾಲಿಕವಾಗಿ ಖಾಯಂ ಪರಿಹಾರ ಒದಗಿಸುವುದಿಲ್ಲ. "ಬಹುತೇಕ ಹೃದಯಾಘಾತಗಳು, ಸಂಕುಚಿತ ಅಪಧಮನಿಯಲ್ಲಿ ಉಂಟಾಗುವ ತಡೆಗಳಿಂದ ಆಗುವುದಿಲ್ಲ".[೯] ಹೆಚ್ಚಿನ ಅಪಾಯವಿರುವ ರೋಗಿಗಳಲ್ಲಿ ಹೃದಯಾಘಾತವನ್ನು ಶಾಶ್ವತವಾಗಿ ಹಾಗು ಯಶಸ್ವಿಯಾಗಿ ತಡೆಗಟ್ಟುವ ವಿಧಾನವೆಂದರೆ ಧೂಮಪಾನ ನಿಲ್ಲಿಸುವುದು.ವ್ಯಾಯಾಮದ ಪ್ರಮಾಣ ಹೆಚ್ಚಿಸುವುದು ಹಾಗು "ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಔಷಧಿ ಸೇವಿಸುವುದು, ಕೊಬ್ಬಿನ ಮಟ್ಟಗಳನ್ನು ತಗ್ಗಿಸುವುದು ಹಾಗು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು."[೯]

ಕಾರ್ಯವಿಧಾನದ ನಂತರ[ಬದಲಾಯಿಸಿ]

ಆಂಜಿಯೋಪ್ಲ್ಯಾಸ್ಟಿಯ ನಂತರ, ಹಲವು ರೋಗಿಗಳನ್ನು ರಾತ್ರಿಪೂರ್ತಿ ಆಸ್ಪತ್ರೆಯಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತದೆ.ಆದರೆ ಯಾವುದೇ ಸಮಸ್ಯೆಗಳು ಕಂಡುಬರದಿದ್ದಲ್ಲಿ ಮರು ದಿವಸ ರೋಗಿಗಳನ್ನು ಮನೆಗೆ ಕಳುಹಿಸಲಾಗುತ್ತದೆ. ಕೆಥೆಟರ್ ಅಳವಡಿಸಲಾದ ಜಾಗದಲ್ಲಿ ರಕ್ತಸ್ರಾವವಾಗುತ್ತಿದೆಯೇ ಹಾಗು ಊದಿದೆಯೇ ಎಂಬುದನ್ನು ಪರೀಕ್ಷಿಸುವುದರ ಜೊತೆಗೆ ಹೃದಯ ಬಡಿತದ ಪ್ರಮಾಣ ಹಾಗು ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ, ಸ್ನಾಯು ಸಂಕೋಚನಗಳ ವಿರುದ್ಧ ಅಪಧಮನಿಗಳನ್ನು ರಕ್ಷಿಸುವ ಸಲುವಾಗಿ ರೋಗಿಗಳು ವಿರಮಿಸಲು ಔಷಧಿ ನೀಡಲಾಗುತ್ತದೆ. ಈ ಪ್ರಕ್ರಿಯೆಯ ನಂತರ ರೋಗಿಗಳು ಸರ್ವೆ ಸಾಮಾನ್ಯ ಎರಡರಿಂದ ಆರು ಘಂಟೆಗಳೊಳಗಾಗಿ ನಡೆಯಲು ಸಮರ್ಥರಾಗಿರುತ್ತಾರೆ; ಹಾಗು ಒಂದು ವಾರದ ನಂತರ ತಮ್ಮ ಸಾಮಾನ್ಯ ದಿನಚರಿಗೆ ಮರಳಬಹುದು.[೧೦] ಆಂಜಿಯೋಪ್ಲ್ಯಾಸ್ಟಿಯಿಂದ ಬಹಳ ಬೇಗನೆ ಚೇತರಿಸಿಕೊಳ್ಳಬೇಕಾದರೆ, ಈ ಪ್ರಕ್ರಿಯೆಯ ನಡೆದ ಹಲವಾರು ದಿನಗಳವರೆಗೆ ದೈಹಿಕ ಚಟುವಟಿಕೆಯನ್ನು ತಡೆಹಿಡಿಯಬೇಕು. ರೋಗಿಗಳಿಗೆ ಯಾವುದೇ ರೀತಿಯ ಭಾರ ಎತ್ತದಂತೆ ಸಲಹೆ ನೀಡಲಾಗುತ್ತದೆ, ಮೊಮ್ಮಕ್ಕಳನ್ನು ಎತ್ತಿ ಆಡಿಸುವುದು ಅಥವಾ ಇತರ ಶ್ರಮದಾಯಕ ದೈಹಿಕ ಚಟುವಟಿಕೆಯನ್ನು ಒಂದು ವಾರದ ಕಾಲ ಮಾಡಬಾರದು.[೧೧] ಸೂಕ್ಷ್ಮವಾದ ಬಲೂನ್ ಆಂಜಿಯೋಪ್ಲ್ಯಾಸ್ಟಿಯ ನಂತರ ಕನಿಷ್ಠ ಎರಡು ವಾರಗಳ ಕಾಲ ರೋಗಿಗಳು ದೈಹಿಕ ಒತ್ತಡ ಅಥವಾ ಸುದೀರ್ಘವಾದ ಕ್ರೀಡಾ ಚಟುವಟಿಕೆಗಳಿಗೆ ತಡೆಹಾಕಬೇಕು.[೧೨] ನಳಿಕೆಯನ್ನು ಅಳವಡಿಸಲಾದ ರೋಗಿಗಳಿಗೆ ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟವುದನ್ನು ತಡೆಯುವ ಕ್ಲೋಪಿಡೋಗ್ರೆಲ್ ನ್ನು ಸೇವಿಸಲು ಸೂಚಿಸಲಾಗುತ್ತದೆ, ಇದನ್ನು ಅಸೆಟಿಲ್ಸಾಲಿಸಿಲಿಕ್ ಆಮ್ಲದೊಂದಿಗೆ ಸೇವಿಸಬೇಕು. ಈ ಔಷಧಗಳನ್ನು ರಕ್ತವು ಹೆಪ್ಪುಗಟ್ಟುವುದನ್ನು ತಡೆಗಟ್ಟಲು ನೀಡಲಾಗುತ್ತದೆ, ಹಾಗು ಇವುಗಳನ್ನು ಸಾಮಾನ್ಯವಾಗಿ ಈ ಪ್ರಕ್ರಿಯೆಯು ನಡೆದ ನಂತರ ಕನಿಷ್ಠಪಕ್ಷ ಮೊದಲ ತಿಂಗಳ ಅವಧಿವರೆಗೂ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಹಲವು ಸಂದರ್ಭಗಳಲ್ಲಿ, ರೋಗಿಗಳಿಗೆ ಈ ಮಾದರಿಯ ಔಷಧಿಯನ್ನು ಒಂದು ವರ್ಷದ ಕಾಲ ತೆಗೆದುಕೊಳ್ಳುವಂತೆ ಹೇಳಲಾಗುತ್ತದೆ. ಅಲ್ಲದೇ, ಹಲ್ಲುಗಳಿಗೆ ಸಂಬಂಧಿತ ತೊಂದರೆಯಲ್ಲಿರುವ ರೋಗಿಗಳಿಗೆ ಅದನ್ನು ಕೆಲದಿನ ಮುಂದೂಡುವಂತೆ ಸಲಹೆ ನೀಡಲಾಗುತ್ತದೆ, ಏಕೆಂದರೆ ಈ ಸಂದರ್ಭದಲ್ಲಿ ಹಲ್ಲಿನ ಚಿಕಿತ್ಸೆ ಮಾಡಿದರೆ ಹೃದಯದ ಸೋಂಕಾದ ಎಂಡೋಕಾರ್ಡಿಟಿಸ್(ಹೃದಯದ ಒಳಪೊರೆಯ ಉರಿಯೂತದ) ನಂಜಿನ ಅಪಾಯಕ್ಕೆ ಗುರಿಯಾಗುವ ಸಂಭವವಿರುತ್ತದೆ. ನಳಿಕೆಯ ಅಳವಡಿಕೆಯ ಜಾಗದಲ್ಲಿ ಊತ, ರಕ್ತಸ್ರಾವ ಅಥವಾ ನೋವನ್ನು ಅನುಭವಿಸುವ ರೋಗಿಗಳು, ಜ್ವರದಿಂದ, ತಲೆಸುತ್ತಿನಿಂದ ಅಥವಾ ಶಕ್ತಿಹೀನತೆಯಿಂದ ಬಳಲಬಹುದು, ಇವರುಗಳು ಶರೀರದ ತಾಪಮಾನದಲ್ಲಾಗಲೀ ಅಥವಾ ತೋಳು ಅಥವಾ ಕಾಲಿನ ಬಣ್ಣದಲ್ಲಿ ವ್ಯತ್ಯಾಸವನ್ನು ಗುರುತಿಸಬಹುದು, ಅಥವಾ ಉಸಿರಾಟದ ತೊಂದರೆ ಅಥವಾ ಎದೆ ನೋವನ್ನು ಅನುಭವಿಸಬಹುದು, ಇಂತಹವರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗುತ್ತದೆ..

ಬಾಹ್ಯ ಆಂಜಿಯೋಪ್ಲ್ಯಾಸ್ಟಿ[ಬದಲಾಯಿಸಿ]

ಬಾಹ್ಯ ಆಂಜಿಯೋಪ್ಲ್ಯಾಸ್ಟಿ ಎಂದರೆ, ಅಪಧಮನಿಯ ಹೊರಭಾಗದಲ್ಲಿ ರಕ್ತ ನಾಳಗಳನ್ನು ತೆರೆಯಲು ಬಲೂನನ್ನು ಬಳಸಿಕೊಳ್ಳುವುದಕ್ಕೆ ಉಲ್ಲೇಖಿತವಾಗಿದೆ. ಇದನ್ನು ಸಾಮಾನ್ಯವಾಗಿ ಉದರ, ಕಾಲು ಹಾಗು ಮೂತ್ರಪಿಂಡದ ಕುಗ್ಗುವಿಕೆ ಕಡಿಮೆ ಮಾಡಲು ಮತ್ತು ಅಪಧಮನಿಕಾಠಿಣ್ಯದ ಚಿಕಿತ್ಸೆಗೆ ಬಳಸಲಾಗುತ್ತದೆ. ರಕ್ತನಾಳಗಳಲ್ಲಿನ ನರಗಳ ಕುಗ್ಗುವಿಕೆ, ಇತ್ಯಾದಿಗಳಿಗೆ ಚಿಕಿತ್ಸೆ ನೀಡಲೂ ಸಹ PAಯನ್ನು ಮಾಡಬಹುದು. ಸಾಮಾನ್ಯವಾಗಿ ಬಾಹ್ಯ ಆಂಜಿಯೋಪ್ಲ್ಯಾಸ್ಟಿಯನ್ನು, ಹೊರಭಾಗದಲ್ಲಿ ನಳಿಕೆಯ ತೂರಿಕೆ ಹಾಗು ಅತ್ಹೆರೆಕ್ಟಮಿಯ ಸಹಯೋಗದೊಂದಿಗೆ ಮಾಡಲಾಗುತ್ತದೆ.

ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ[ಬದಲಾಯಿಸಿ]

ಒಂದು ಪರಿಧಮನಿಯ ಆಂಜಿಯೋಗ್ರಾಮ್(ಅಪಧಮನಿಗಳಲ್ಲಿ ರೇಡಿಯೋ-ನಿಷ್ಪಾರದರ್ಶಕ ವೈದೃಶ್ಯಗಳೊಂದಿಗೆ ಎಕ್ಸ್ ರೇ) ಎಡಬದಿಯ ಅಪಧಮನಿ ಪರಿಚಲನೆಯನ್ನು ಪ್ರದರ್ಶಿಸುತ್ತಿರುವುದು.ಚಿತ್ರದ ಎಡಬದಿಯ ಮೇಲ್ಭಾಗದ ಚತುರ್ಥದಲ್ಲಿ ಅಂತ್ಯದ ಲೆಫ್ಟ್ ಮೇನ್ ಕರೋನರಿ ಆರ್ಟರಿ(LMCA).ಇದರ ಪ್ರಮುಖ ಅಂಗಗಳು(ಇದೂ ಸಹ ಕಂಡುಬರುತ್ತದೆ.) ಲೆಫ್ಟ್ ಸರ್ಕಂಫ್ಲೆಕ್ಸ್ ಆರ್ಟರಿ(ಎಡಬದಿಯ ಪರಿವೇಷ್ಟಿತ ಅಪಧಮನಿ)ಯಾಗಿದ್ದು, ಆರಂಭದಲ್ಲಿ ಇದು ಮೇಲಿಂದ ಕೆಳಗೆ ಹಾಗು ನಂತರದಲ್ಲಿ ಮಧ್ಯದಿಂದ-ಕೆಳಭಾಗದವರೆಗೆ ಹಾದುಹೋಗಿದೆ, ಹಾಗು ಲೆಫ್ಟ್ ಆಂಟೀರಿಯರ್ ಡಿಸೆಂಡಿಂಗ್ ಆರ್ಟರಿ, ಇದು ಚಿತ್ರದಲ್ಲಿ ಎಡದಿಂದ ಬಲಭಾಗಕ್ಕೆ ಹಾಗು ನಂತರದಲ್ಲಿ ಚಿತ್ರದಲ್ಲಿ ಮಧ್ಯಭಾಗದಿಂದ ಅಂತ್ಯದ LCXವರೆಗೂ ಹಾದುಹೋಗಿರುವುದು ಕಂಡುಬಂದಿದೆ. ಸಾಮಾನ್ಯವಾಗಿ LAD, ಎರಡು ದೊಡ್ಡ ಕರ್ಣೀಯ ಅಂಗಗಳನ್ನು ಹೊಂದಿದೆ, ಇದು ಚಿತ್ರದ ಮಧ್ಯಭಾಗದಿಂದ ಮೇಲ್ಭಾಗಕ್ಕೆ ಹಾಗು ಚಿತ್ರದ ಮಧ್ಯಭಾಗದಿಂದ-ಬಲಕ್ಕೆ ಹಾದು ಹೋಗಿರುವುದನ್ನು ಕಾಣಬಹುದು.

ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಪರ್ಕ್ಯುಟೇನಿಯಸ್ ಕರೋನರಿ ಇಂಟರ್ವೆನ್ಶನ್ (PCI ) ಎಂಬುದು, ಪರಿಧಮನಿಯ ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಕಂಡುಬರುವ ಹೃದಯದ ಸಂಕುಚಿತ(ಕಿರಿದುಗೊಂಡ) ಪರಿಧಮನಿಯನ್ನು ಸರಿಪಡಿಸುವ ಚಿಕಿತ್ಸಾ ವಿಧಾನ. ಈ ಸಂಕುಚಿತ, ವಿಭಜನೆಯಾದ ಖಂಡಗಳು, ಅಪಧಮನಿಕಾಠಿಣ್ಯದಿಂದ ಉಂಟಾಗುವ ಕೊಬ್ಬಿನ ಶೇಖರಣೆಯಿಂದ ಸಂಕಲಿತವಾಗಿರುತ್ತವೆ. PCIಯನ್ನು ಸಾಮಾನ್ಯವಾಗಿ ಇಂಟರ್ ವೆನ್ಷನಲ್(ಮಧ್ಯಸ್ಥಿಕೆ) ಹೃದಯತಜ್ಞರು ನಡೆಸುತ್ತಾರೆ. ತೀವ್ರತರ ಅಪಧಮನಿ ಕಾಯಿಲೆ ಹೊಂದಿರುವ ರೋಗಿಗಳಿಗೆ PCI ಚಿಕಿತ್ಸೆ ನೀಡಿದಾಗಿ ಅದು ಎದೆ ನೋವನ್ನು ಕಡಿಮೆ ಮಾಡುತ್ತದೆ. ಆದರೆ ಉತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಿದಾಗಲೂ ಸಹ ಸಾವಿನ ಅಪಾಯ, ಹೃದಯಸ್ನಾಯುವಿನ ಊತಕ ಸಾವು, ಅಥವಾ ಇತರ ಪ್ರಮುಖ ಹೃದಯರಕ್ತನಾಳದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ.[೧೩]

ಮೂತ್ರಪಿಂಡದ ಅಪಧಮನಿ ಆಂಜಿಯೋಪ್ಲ್ಯಾಸ್ಟಿ[ಬದಲಾಯಿಸಿ]

ಮೂತ್ರಪಿಂಡದ ಅಪಧಮನಿಕಾಠಿಣ್ಯಕ್ಕೆ, ಮೂತ್ರಪಿಂಡದ ಅಪಧಮನಿಯ ಆಂಜಿಯೋಪ್ಲ್ಯಾಸ್ಟಿ ವಿಧಾನದ(ಪರ್ಕ್ಯುಟೇನಿಯಸ್ ಟ್ರ್ಯಾನ್ಸ್ಲುಮಿನಲ್ ರೀನಲ್ ಆಂಜಿಯೋಪ್ಲ್ಯಾಸ್ಟಿ, PTRA) ಮೂಲಕ ಚಿಕಿತ್ಸೆ ನೀಡಬಹುದು. ಮೂತ್ರಪಿಂಡದ ಅಪಧಮನಿ ಕುಗ್ಗುವಿಕೆಯು ಅತಿ-ಒತ್ತಡಕ್ಕೆ ಎಡೆ ಮಾಡಿಕೊಡುವುದರ ಜೊತೆಗೆ ಮೂತ್ರಪಿಂಡದ ಕಾರ್ಯವೈಫಲ್ಯವನ್ನು ಉಂಟುಮಾಡಬಹುದು.

ಶೀರ್ಷಧಮನಿ ಆಂಜಿಯೋಪ್ಲ್ಯಾಸ್ಟಿ[ಬದಲಾಯಿಸಿ]

ಶೀರ್ಷಧಮನಿ ಅಪಧಮನಿ ಕುಗ್ಗುವಿಕೆಯನ್ನು ಆಂಜಿಯೋಪ್ಲ್ಯಾಸ್ಟಿ ವಿಧಾನದ ಮೂಲಕ ಸರಿಪಡಿಸಲಾಗುತ್ತದೆ ಹಾಗು ಹಲವು ಆಸ್ಪತ್ರೆಗಳಲ್ಲಿ ಅಪಾಯದ ಹಂತದಲ್ಲಿರುವ ರೋಗಿಗಳಿಗೆ ನಳಿಕೆಯ ಮೂಲಕ ಅಳವಡಿಸಲಾಗುತ್ತದೆ.

ಮಿದುಳಿನ ಅಪಧಮನಿಗಳ ಆಂಜಿಯೋಪ್ಲ್ಯಾಸ್ಟಿ[ಬದಲಾಯಿಸಿ]

ರಷ್ಯನ್ ನರಶಸ್ತ್ರಚಿಕಿತ್ಸಾ ತಜ್ಞ ಜುಬ್ಕೋವ್ ಹಾಗು ಅವರ ಸಹೋದ್ಯೋಗಿಗಳು, ನಾಳವ್ಯಾಕೋಚದ SAHನ ನಂತರ ವ್ಯಾಸೋಸ್ಪ್ಯಾಸಂಗೆ ಟ್ರ್ಯಾನ್ಸ್ ಲುಮಿನಲ್ ಬಲೂನ್ ಆಂಜಿಯೋಪ್ಲ್ಯಾಸ್ಟಿ ವಿಧಾನದ ಮೊದಲ ಬಳಕೆಯನ್ನು ೧೯೮೩ರಲ್ಲಿ ವರದಿಮಾಡಿದರು.[೧೪][೧೫]

ಇವನ್ನೂ ಗಮನಿಸಿ[ಬದಲಾಯಿಸಿ]

 • ಆಂಜಿಯೋಗ್ರಾಂ
 • ಅಥೆರೆಕ್ಟಮಿ
 • ಚಾರ್ಲ್ಸ್ ಡೋಟರ್
 • ಮಧ್ಯಸ್ಥಿಕೆಯ ವಿಕಿರಣಶೀಲತೆಯ ಶಾಸ್ತ್ರ
 • ನಾಳೀಯ ಶಸ್ತ್ರಚಿಕಿತ್ಸೆ
 • ನಳಿಕೆ

ಉಲ್ಲೇಖಗಳು[ಬದಲಾಯಿಸಿ]

 1. ಡೋಟರ್, C.T. ಹಾಗು M.P. ಜುಡ್ಕಿನ್ಸ್. ಅಪಧಮನಿಕಾಠಿಣ್ಯದ ಅಡ್ಡಿಗೆ ಟ್ರ್ಯಾನ್ಸ್ಲುಮಿನಲ್ ಚಿಕಿತ್ಸೆ. ಪ್ರಸಾರಾಂಗ. ನವೆಂಬರ್ ೧೯೬೪, ಸಂಪುಟ XXX. ಪುಟಗಳು ೬೫೪-೬೭೦.
 2. Rosch Josef; et al. (2003). "The birth, early years, and future of interventional radiology". J Vasc Interv Radiol 14 (7): 841–853. PMID 12847192. 
 3. ಆಂಡ್ರೆಯಾಸ್ ಗ್ರುಯೆಂಟ್ಜಿಗ್ ರ ಜೀವಿತಕಥೆಯ ನಕ್ಷೆ http://www.ptca.org/archive/bios/gruentzig.html
 4. "Angioplasty". Retrieved 2010-04-06. 
 5. "The Facts on Angioplasty". Retrieved 2010-04-06. 
 6. "What Are the Risks of Coronary Angioplasty?". Retrieved 2010-04-06. 
 7. "Risks And Possible Complications". Retrieved 2010-04-06. 
 8. "PTCA or Balloon Angioplasty". Retrieved 2010-04-06. 
 9. ೯.೦ ೯.೧ ಕೊಲಾಟಾ, ಗಿನಾ. "ನ್ಯೂ ಹಾರ್ಟ್ ಸ್ಟಡೀಸ್ ಕೊಶ್ಚನ್ ದಿ ವ್ಯಾಲ್ಯೂ ಆಫ್ ಒಪನಿಂಗ್ ಆರ್ಟರೀಸ್" ದಿ ನ್ಯೂ ಯಾರ್ಕ್ ಟೈಮ್ಸ್ , ಮಾರ್ಚ್ ೨೧, ೨೦೦೪. ಜನವರಿ ೨೯, ೨೦೧೧ರಲ್ಲಿ ಸಂಕಲನಗೊಂಡಿದೆ.
 10. "What should I expect after my procedure?". Retrieved 2010-04-06. 
 11. "After the operation". Retrieved 2010-04-06. 
 12. "Angioplasty Recovery". Retrieved 2010-04-06. 
 13. Boden W. E., O'Rourke R. A.; et al. (2007). "Optimal medical therapy with or without PCI for stable coronary disease". N Engl J Med 356 (15): 1503–16. doi:10.1056/NEJMoa070829. PMID 17387127. 
 14. Lua error in ಮಾಡ್ಯೂಲ್:Citation/CS1 at line 3606: bad argument #1 to 'pairs' (table expected, got nil).
 15. Lua error in ಮಾಡ್ಯೂಲ್:Citation/CS1 at line 3606: bad argument #1 to 'pairs' (table expected, got nil).

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

 1. REDIRECT Template:Vascular procedures