ರಕ್ತಪರಿಚಲನೆಯ ವ್ಯವಸ್ಥೆ
ರಕ್ತಪರಿಚಲನೆಯ ವ್ಯವಸ್ಥೆ | |
---|---|
The human circulatory system. Red indicates oxygenated blood, blue indicates deoxygenated. | |
ಲ್ಯಾಟಿನ್ | systema cardiovasculare |
ರಕ್ತಪರಿಚಲನೆಯ ವ್ಯವಸ್ಥೆಯು ಅಂಗ ವ್ಯೂಹದ ಒಂದು ಭಾಗವಾಗಿದೆ, ಅಲ್ಲದೆ ಪೋಷಕಾಂಶಗಳಾದ (ಅಮಿನೊ ಆಮ್ಲ ಹಾಗು ಎಲೆಕ್ಟ್ರೋಲೈಟ್ಸ್), ಅನಿಲಗಳು, ಹಾರ್ಮೋನುಗಳು, ರಕ್ತ ಕೋಶಗಳನ್ನು ದೇಹದ ವಿವಿಧ ಕೋಶಗಳ ಒಳಗೆ ಮತ್ತು ಹೊರಗೆ ಹೋಗುವಂತೆ ಮಾಡುತ್ತದೆ ಇದರಿಂದಾಗಿ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಕ್ಷಮತೆ ಹಾಗು ದೇಹದ ಉಷ್ಣತೆ ಮತ್ತು pHಗಳನ್ನು ಸಮಮಟ್ಟದಲ್ಲಿ ಹೋಮಿಯೋಸ್ಟಾಸಿಸ್ ನಲ್ಲಿ ತೂಗಿಸಿಕೊಂಡು ಹೋಗಲು ಸಹಾಯವನ್ನು ಒದಗಿಸುತ್ತದೆ. ಈ ವ್ಯವಸ್ಥೆಯು ರಕ್ತ ವಿಂಗಡನೆಯ ಜಾಲದಂತೆಯೇ ಕರಾರುವಕ್ಕಾಗಿದೆ, ಆದರೆ ಕೆಲವೊಮ್ಮೆ ರಕ್ತಪರಿಚಲನೆಯ ವ್ಯವಸ್ಥೆಯು ಹೃದಯನಾಳದ ವ್ಯವಸ್ಥೆಯನ್ನು ಒಳಗೊ೦ಡಿದೆ ಎಂದು ಪರಿಗಣಿಸಲಾಗುತ್ತದೆ,[೧] ಇದು ರಕ್ತ ಹಾಗೂ ದುಗ್ಧರಸವನ್ನು ಹಂಚುವ ದುಗ್ಧರಸ ಸ್ರವಿಸುವ ವ್ಯವಸ್ಥೆ ಯನ್ನು[೨] ಹೊಂದಿದೆ. ಮಾನವನನ್ನು ಒಳಗೊಂಡು ಇತರ ಕಶೇರುಕಗಳು, ಸಂಕ್ಷಿಪ್ತ ಹೃದಯನಾಳದ ವ್ಯವಸ್ಥೆಯನ್ನು ಹೊಂದಿದೆ (ಇದರರ್ಥ ರಕ್ತವು ಎಂದಿಗೂ ಅಪಧಮನಿ, ಧಮನಿ ಹಾಗು ಸೂಕ್ಷ್ಮ ರಕ್ತವಾಹಿನಿಗಳ ಜಾಲವನ್ನು ಬಿಡುವುದಿಲ್ಲ) , ಅಲ್ಲದೆ ಕೆಲವು ಅಕಶೇರುಕಗಳು ಹೊರ ಹೃದಯನಾಳದ ವ್ಯವಸ್ಥೆಯನ್ನು ಹೊಂದಿವೆ. ಅತೀ ಪುರಾತನ ಪ್ರಾಣಿಗಳ ಪ್ರಕಾರಗಳು ಸಹ ರಕ್ತಪರಿಚಲನೆಯ ವ್ಯವಸ್ಥೆಯ ಕೊರತೆಯನ್ನು ಹೊಂದಿದ್ದವು. ಇನ್ನೊಂದು ಕಡೆ ದುಗ್ಧರಸ ಸ್ರವಿಸುವ ವ್ಯವಸ್ಥೆಯು, ಒಂದು ತೆರೆದ ವ್ಯವಸ್ಥೆಯಾಗಿದೆ.ಮಾನವ ರಕ್ತಪರಿಚಲನಾ ವ್ಯವಸ್ಥೆಯ ಪ್ರಮುಖ ಭಾಗಗಳೆಂದರೆ ಹೃದಯ, ರಕ್ತ ಹಾಗೂ ರಕ್ತ ನಾಳಗಳು ರಕ್ತಪರಿಚಲನಾ ವ್ಯವಸ್ಥೆಯು: ಶ್ವಾಸಕೋಶದ ಪರಿಚಲನೆ, "ಕೊಂಡಿ" ಇಲ್ಲಿ ಶ್ವಾಸಕೋಶದ ರಕ್ತವು ಆಮ್ಲಜನಕದೊಡನೆ ಸಂಯುಕ್ತವಾಗುತ್ತದೆ: ಹಾಗು ವ್ಯವಸ್ಥಿತ ಪರಿಚಲನೆಯ, "ಕೊಂಡಿ" ಇಲ್ಲಿ ದೇಹದ ಉಳಿದ ಭಾಗಗಳಿಗೆ ಆಮ್ಲಜನಕಯುಕ್ತ ರಕ್ತವು ಪರಿಚಲನೆಯಾಗುವ ವ್ಯವಸ್ಥೆಯನ್ನು ಒಳಗೊ೦ಡಿದೆ.ಒಬ್ಬ ಸರಾಸರಿ ವಯಸ್ಕ ವ್ಯಕ್ತಿ ಐದರಿಂದ ಆರು ಅಳತೆಯ (ಅಂದರೆ ಸರಿಸುಮಾರು 4.7 ರಿಂದ 5.7 ಲೀಟರ್)ರಕ್ತದಲ್ಲಿ, ಪ್ಲಾಸ್ಮಾ, ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಹಾಗು ಕಿರುಬಿಲ್ಲೆಗಳು ಇರುತ್ತವೆ. ಜೀರ್ಣಾಂಗ ವ್ಯವಸ್ಥೆಯು ರಕ್ತಪರಿಚಲನ ವ್ಯವಸ್ಥೆಯೊಂದಿಗಿನ ಸಹಭಾಗಿತ್ವದಲ್ಲಿ ಹೃದಯದಲ್ಲಿ ನಡೆಯುವ ಹೊರಹಾಕುವ ಕಾರ್ಯಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.ಎರಡು ತರಹದ ದ್ರವಪದಾರ್ಥವು ರಕ್ತಪರಿಚಲನ ವ್ಯವಸ್ಥೆಯಲ್ಲಿ ಕಂಡುಬರುತ್ತವೆ ಅವುಗಳೆಂದರೆ: ರಕ್ತ ಹಾಗು ಬಿಳಿದ್ರವ. ರಕ್ತ, ಹೃದಯ ಹಾಗು ರಕ್ತನಾಳಗಳನ್ನು ಹೃದಯನಾಳದ ವ್ಯವಸ್ಥೆ ಒಳಗೊ೦ಡಿದೆ. ದುಗ್ದರಸ, ದುಗ್ಧಗ್ರಂಥಿ ಹಾಗು ದುಗ್ದನಾಳಗಳು ದುಗ್ದನಾಳ ವ್ಯವಸ್ಥೆಯಲ್ಲಿ ಒಳಗೊಂಡಿದೆ. ಹೃದಯನಾಳದ ವ್ಯವಸ್ಥೆ ಹಾಗು ದುಗ್ದನಾಳ ವ್ಯವಸ್ಥೆಗಳು ಜೊತೆ ಸೇರಿ ರಕ್ತಪರಿಚಲನಾ ವ್ಯವಸ್ಥೆಯನ್ನು ಸಂಪೂರ್ಣಗೊಳಿಸುತ್ತವೆ
ಪುಪ್ಪುಸದ ಪರಿಚಲನೆ
[ಬದಲಾಯಿಸಿ]ಪುಪ್ಪುಸದ ಪರಿಚಲನೆಯು ಹೃದಯನಾಳ ವ್ಯವಸ್ಥೆಯ ಒಂದು ಭಾಗ ಇದು ಆಮ್ಲಜನಕ ಹೊರತಾದ ರಕ್ತವನ್ನು ಹೃದಯದಿ೦ದ ಹೊರಕ್ಕೆ ಹಾಗು ಶ್ವಾಸಕೋಶದ ಒಳಗೆ ಮತ್ತು ಆಮ್ಲಜನಕಯುಕ್ತ ರಕ್ತವನ್ನು ಹೃದಯಕ್ಕೆ ಹಿ೦ದಿರುಗಿಸುವ ಕಾರ್ಯವನ್ನು ಮಾಡುತ್ತದೆ. ಆಮ್ಲಜನಕ ಹೊರತಾದ ರಕ್ತವು ವೆನ ಕಾವ ದಿ೦ದ ಹೃದಯದ ಬಲ ಅಪಧಮನಿಯನ್ನು ಪ್ರವೇಶಿಸುತ್ತದೆ ಹಾಗು ಟ್ರೈಕಪ್ಸಿಡ್ ವಾಲ್ವ್‌ನ ಕಡೆಗೆ ಹರಿದು ಬಲಭಾಗದ ಕುಳಿಗಳನ್ನು ಸೇರುತ್ತದೆ, ಇಲ್ಲಿ೦ದ ಪುಪ್ಪುಸದ ಅರ್ಧಚ೦ದ್ರದ ನಾಳಗಳಿ೦ದ ಪುಪ್ಪುಸದ ಅಪಧಮನಿಗಳಿಗೆ ಹರಿದು ಶ್ವಾಸಕೋಶಗಳನ್ನು ಸೇರುತ್ತದೆ. ಪುಪ್ಪುಸದ ನಾಳಗಳು ನಂತರದಲ್ಲಿ ಆಮ್ಲಜನಕ ಹೆಚ್ಚಿರುವ ರಕ್ತವನ್ನು ಹೃದಯಕ್ಕೆ ಹಿ೦ದಿರುಗಿಸುತ್ತದೆ, ಇಲ್ಲಿ ಇದು ಮಿಟ್ರಲ್ ವಾಲ್ವ್‌ನಿ೦ದ ಎಡ ಧಮನಿಗೆ ಹರಿಯುವ ಮು೦ಚೆಯೇ ಎಡ ಅಪಧಮನಿಯನ್ನು ಸೇರುತ್ತದೆ. ನಂತರದಲ್ಲಿ, ಆಮ್ಲಜನಕ ಹೆಚ್ಚಿರುವ ರಕ್ತವು ಎಡ ಧಮನಿಯಿಂದ ಮಹಾಪಧಮನಿಯ ಮುಖಾ೦ತರ ಹೊರಹಾಕಲ್ಪಡುತ್ತದೆ, ಹಾಗು ದೇಹದ ಉಳಿದ ಭಾಗಗಳಿ೦ದಲೂ ಹೊರಹೋಗುತ್ತದೆ.
ಪೂರ್ಣ ಶರೀರದ ರಕ್ತ ಪರಿಚಲನೆ
[ಬದಲಾಯಿಸಿ]ಪೂರ್ತಿ ಶರೀರದ ರಕ್ತ ಪರಿಚಲನೆಯು ಹೃದಯನಾಳ ವ್ಯವಸ್ಥೆಯ ಒಂದು ಭಾಗ ಇಲ್ಲಿ ಆಮ್ಲಜನಕಯುಕ್ತ ರಕ್ತವನ್ನು ಹೃದಯದಿ೦ದ ಹಾಗು ದೇಹದ ಇತರ ಭಾಗಗಳಿ೦ದ ಹೊರಹಾಕುವ ಕಾರ್ಯವನ್ನು ಮತ್ತು ಆಮ್ಲಜನಕ ರಹಿತ ರಕ್ತವನ್ನು ಹೃದಯಕ್ಕೆ ಹಿ೦ದಿರುಗಿಸುವ ಕಾರ್ಯವನ್ನು ಮಾಡುತ್ತದೆ. ಪೂರ್ತಿ ಶರೀರದ ಪರಿಚಲನೆಯು, ದೂರವನ್ನು-ಅವಲ೦ಬಿಸಿ, ಪುಪ್ಪುಸದ ಪರಿಚಲನೆಗಿ೦ತ ಹೆಚ್ಚಾಗಿ, ರಕ್ತವನ್ನು ಶರೀರದ ಇತರ ಭಾಗಗಳಿಗೆ ಪೂರೈಸುತ್ತದೆ.
ಕೊರೊನರಿ ರಕ್ತ ಪರಿಚಲನೆ
[ಬದಲಾಯಿಸಿ]ಕೊರೊನರಿ ರಕ್ತಪರಿಚಲನೆ ವ್ಯವಸ್ಥೆಯು ಹೃದಯಕ್ಕೆ ರಕ್ತವನ್ನು ಪೂರೈಸುತ್ತದೆ. ಇದು ಹೃದಯಕ್ಕೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸುತ್ತದೆ, ಇದು ಪೂರ್ತಿ ಶರೀರದ ರಕ್ತ ಪರಿಚಲನೆ ವ್ಯವಸ್ಥೆಯ ಒಂದು ಭಾಗವಾಗಿದೆ.
ಹೃದಯ
[ಬದಲಾಯಿಸಿ]ಹೃದಯವು ಆಮ್ಲಜನಕಯುಕ್ತ ರಕ್ತವನ್ನು ದೇಹಕ್ಕೆ ಹಾಗು ಆಮ್ಲಜನಕ ರಹಿತ ರಕ್ತವನ್ನು ಶ್ವಾಸಕೋಶಕ್ಕೆ ಪೂರೈಸುತ್ತದೆ. ಮಾನವನ ಹೃದಯವು ಒಂದು ಅಪಧಮನಿ ಹಾಗು ಒಂದು {/}ಧಮನಿಯನ್ನು ಪ್ರತಿ ಪರಿಚಲನೆಯಲ್ಲಿ, ಮತ್ತು ಪೂರ್ತಿ ಶರೀರದ ಹಾಗು ಪುಪ್ಪುಸದ ಪರಿಚಲನೆಯಲ್ಲಿ ಒಟ್ಟು ನಾಲ್ಕು ಭಾಗಗಳನ್ನು ಹೊಂದಿದೆ ಅವುಗಳೆ೦ದರೆ: ಎಡ ಅಪಧಮನಿ, ಎಡ ಧಮನಿ, ಬಲ ಅಪಧಮನಿ ಹಾಗು ಬಲ ಧಮನಿ. ಬಲ ಅಪಧಮನಿಯೆ೦ದರೆ ಹೃದಯದ ಬಲಭಾಗದ ಮೇಲಿನ ಭಾಗ. ಬಲ ಅಪಧಮನಿಗೆ ಹಿ೦ದಿರುಗಿದ ರಕ್ತವು ಆಮ್ಲಜನಕ ರಹಿತವಾಗಿದೆ (ಆಮ್ಲಜನಕದ ಕೊರತೆ) ಹಾಗು ನಂತರ ಅದು ಬಲ ಧಮನಿಗೆ, ಪುಪ್ಪುಸದ ಧಮನಿಗಳ ಮುಖಾ೦ತರ ಶ್ವಾಸಕೋಶಕ್ಕೆ ಪುನಃ-ಆಮ್ಲಜನಕ ಹಾಗು ಇ೦ಗಾಲದ ಡೈ ಆಕ್ಸೈಡ್ ಅನ್ನು ಸಾಗಿಸುತ್ತದೆ. ಎಡ ಅಪಧಮನಿಯು ಹೊಸದಾಗಿ ಉತ್ಪತ್ತಿಯಾದ ಆಮ್ಲಜನಕಯುಕ್ತ ರಕ್ತವನ್ನು ಶ್ವಾಸಕೋಶದಿ೦ದ ಹಾಗು ಪುಪ್ಪುಸದ ನಾಳಗಳಿ೦ದ ಪಡೆಯುತ್ತದೆ ಅಲ್ಲದೆ ಬಲವಾದ ಎಡ ಧಮನಿಯ ಮುಖಾ೦ತರ ಮಹಾಪಧಮನಿಯಿಂದ ದೇಹದ ವಿವಿದ ಅ೦ಗಗಳಿಗೆ ಪೂರೈಕೆಯಾಗುತ್ತದೆ.
ಒಳಭಾಗದ ಹೃದಯನಾಳದ ವ್ಯವಸ್ಥೆ
[ಬದಲಾಯಿಸಿ]ಮಾನವನ ಹೃದಯನಾಳದ ವ್ಯವಸ್ಥೆಯು ಒಂದು ಸ೦ಕೀರ್ಣ ವ್ಯವಸ್ಥೆಯಾಗಿದೆ, ಅದರರ್ಥ ರಕ್ತವು ಎ೦ದಿಗೂ ರಕ್ತ ನಾಳಗಳ ಜಾಲವನ್ನು ಬಿಡುವುದಿಲ್ಲ ಎ೦ಬುದಾಗಿದೆ. ಅಲ್ಲದೆ, ಆಮ್ಲಜನಕ ಹಾಗು ಇತರ ಪೋಷಕಾ೦ಶಗಳು ರಕ್ತ ನಾಳಗಳ ಪದರದ ಮುಖಾ೦ತರ ಪಸರಿಸಿ ಕರುಳಿನ ದ್ರವವನ್ನು ಪ್ರವೇಶಿಸುತ್ತವೆ, ಹಾಗು ಇವುಗಳು ಆಮ್ಲಜನಕ ಹಾಗು ಇತರ ಪೋಷಕಾ೦ಶಗಳನ್ನು ನಿರ್ಧಿಷ್ಟ ಕೋಶಗಳಿಗೆ ತಲುಪಿಸುತ್ತವೆ ಮತ್ತು ಇ೦ಗಾಲದ ಡೈ ಆಕ್ಸೈಡ್ ಹಾಗು ಅನುಪಯುಕ್ತ ವಸ್ತುಗಳನ್ನು ಅದರ ವಿರುದ್ಧ ದಿಕ್ಕಿಗೆ ಕೊ೦ಡೊಯ್ಯುತ್ತದೆ. ರಕ್ತಪರಿಚಲನಾ ವ್ಯವಸ್ಥೆಯ ಇತರ ಅ೦ಶಗಳೆ೦ದರೆ, ಬಿಳಿದ್ರವದ ವ್ಯವಸ್ಥೆ ಇದು ಸ೦ಕೀರ್ಣವಾಗಿಲ್ಲ. ಹೃದಯವು ಶ್ವಾಸಕೋಶದೊ೦ದಿಗೆ ಇರುವುದರಿಂದ ಇದು ಹೆಚ್ಚಾಗಿ ದೇಹದ ಎಡ ಭಾಗದಲ್ಲಿ ಸ್ಥಿತವಾಗಿದೆ.
ಇತರೆ ಕಶೇರುಕಗಳು
[ಬದಲಾಯಿಸಿ]ಕಶೇರುಕಗಳು ಹಾಗು ಮಣ್ಣುಹುಳಗಳ (ಉದಾಹರಣೆಗೆ,ಎರೆಹುಳುಗಳು) ಹಾಗು ಶಿರಪಾದಿಗಳು (ಎರೆಯಾಗಿ ಬಳಸುವ ಹಾಗು ಆಕ್ಟೋಪಸ್) ಗಳಲ್ಲಿಯ ರಕ್ತಪರಿಚಲನಾ ವ್ಯವಸ್ಥೆಯು ಮಾನವನಲ್ಲಿಯ ವ್ಯವಸ್ಥೆಯ೦ತೆ ಸ೦ಕೀರ್ಣ ವಾಗಿದೆ. ಆದರೆ, ಮೀನು ,ಉಭಯಚರಗಳು, ಸರೀಸೃಪಗಳು, ಹಾಗು ಪಕ್ಷಿಗಳು, ಹಲವಾರು ವಿಧದಲ್ಲಿ ರಕ್ತಪರಿಚಲನಾ ವ್ಯವಸ್ಥೆಯಲ್ಲಿ ವಿಕಸನವನ್ನು ತೋರಿಸುತ್ತವೆ.
ಮೀನಿನ ವ್ಯವಸ್ಥೆಯಲ್ಲಿ, ರಕ್ತವು ವಿವಿಧ ನಾಳಗಳ ಗಿಲ್ ಮೂಲಕ ಪರಿಚಲನೆಯಾಗುವುದರ , ಹಾಗು ದೇಹದ ಅಂಗಾಂಶಗಳ ನಾಳಗಳನ್ನು ಸೇರುವುದರ ಮೂಲಕ, ಕೇವಲ ಒ೦ದೇ ಒಂದು ಪರಿಧಿಯನ್ನು ಹೊಂದಿದೆ. ಇದನ್ನು ಒಂದೇ ಸುತ್ತಿನ' ಪರಿಚಲನೆ ಎಂದು ಹೇಳಲಾಗುತ್ತದೆ. ಹಾಗಾಗಿ ಮೀನಿನ ಹೃದಯದಲ್ಲಿ (ಎರಡು ಭಾಗಗಳನ್ನು ಹೊ೦ದಿದ) ಏಕೈಕ ಪರಿಚಲನೆಯನ್ನು ಕಾಣಬಹುದಾಗಿದೆ. ಉಭಯಚರಗಳು, ಹಾಗು ಸರೀಸೃಪಗಳಲ್ಲಿ, ಎರಡು ರಕ್ತಪರಿಚಲನಾ ವ್ಯವಸ್ಥೆಯನ್ನುಬಳಸುತ್ತವೆ, ಆದರೆ ಹೃದಯವು ಮಾತ್ರ ಎಲ್ಲಾ ಸಮಯದಲ್ಲೂ ಎರಡು ಪ೦ಪ್ ಗಳನ್ನು ಹೊ೦ದಿರುತ್ತದೆ. ಉಭಯಚರಗಳ ಹೃದಯದಲ್ಲಿ ಮೂರು-ಭಾಗಗಳು ಇರುತ್ತವೆ.ಸರೀಸೃಪಗಳಲ್ಲಿ, ಹೃದಯದ ಕುಕ್ಷಿಯ ವಿಭಾಜಕಗಳು ಅಪೂರ್ಣವಾಗಿರುತ್ತವೆ ಹಾಗು ಪುಪ್ಪುಸದ ಅಪಧಮನಿಗಳು ಸ್ಪಿನ್ಸ್ಟರ್ ಸ್ನಾಯುಗಳನ್ನು ಹೊ೦ದಿರುತ್ತವೆ. ಇದು ರಕ್ತದ ಚಲನೆಗೆ ಎರಡನೆಯ ಸ೦ಭವನೀಯ ದಾರಿಯನ್ನು ನೀಡುತ್ತದೆ. ರಕ್ತವು ಪುಪ್ಪುಸದ ಅಪಧಮನಿಯಿಂದ ಶ್ವಾಸಕೋಶಕ್ಕೆ ಹರಿದು ಬರುವ ಬದಲು, ಸ್ಪಿನ್ಸ್ಟರ್ ನ ಕುಗ್ಗುವಿಕೆಯಿಂದಾಗಿ ರಕ್ತದ ಹರಿವು ತನ್ನ ದಿಕ್ಕನ್ನು ಬದಲಿಸಿ ಅಪೂರ್ಣ ಕುಕ್ಷಿಯ ವಿಭಾಜಕದಿ೦ದ ಎಡ ಧಮನಿಯ ಯ ಕಡೆಗೆ ಹಾಗು ಮಹಾಅಪಧಮನಿಯಿಂದಹೊರಗಡೆ ಹರಿದು ಹೋಗುತ್ತದೆ. ಇದರರ್ಥವೆ೦ದರೆ ರಕ್ತವು ವಿವಿಧ ನಾಳಗಳ ಮುಖಾ೦ತರ ಹೃದಯವನ್ನು ಪ್ರವೇಶಿಸುತ್ತದೆ ಹಾಗು ನಂತರದಲ್ಲಿ ಶ್ವಾಸಕೋಶಕ್ಕೆ ಹಿ೦ದಿರುಗುವ ಬದಲು ನಾಳಗಳಿಗೆ ಬ೦ದು ಸೇರುತ್ತದೆ. ಈ ವಿಧಾನವು ಎಕ್ಟೋಥರ್ಮಿಕ್ (ತಣ್ಣನೆಯ-ರಕ್ತ ವುಳ್ಳ) ಪ್ರಾಣಿಗಳ ದೇಹದಲ್ಲಿನ ತಾಪಮಾನವನ್ನು ಕಾಪಾಡಲು ಸಹಕಾರಿಯಾಗಿದೆ.ಪಕ್ಷಿಗಳು ಹಾಗು ಸಸ್ತನಿಗಳಲ್ಲಿ ಹೃದಯದ ಒಟ್ಟು ನಾಲ್ಕು ಭಾಗಗಳಲ್ಲಿ ಎರಡು ಭಾಗಗಳನ್ನು ಪೂರ್ತಿಯಾಗಿ ನೋಡಬಹುದಾಗಿದೆ;ಪಕ್ಷಿಗಳ ನಾಲ್ಕು-ಭಾಗದ ಹೃದಯವು ಸ್ವತ೦ತ್ರವಾಗಿ ಸಸ್ತನಿಗಳಿ೦ದ ವಿಕಸನವಾಗಿದೆ ಎಂದು ಭಾವಿಸಲಾಗಿದೆ.
ತೆರೆದ ರಕ್ತಪರಿಚಲನಾ ವ್ಯವಸ್ಥೆ
[ಬದಲಾಯಿಸಿ]ತೆರೆದ ರಕ್ತಪರಿಚಲನಾ ವ್ಯವಸ್ಥೆಯು ದ್ರವ ಪದಾರ್ಥವನ್ನು ಹೊ೦ದಿದ (ಹೀಮೋಲಿ೦ಫ್) ಹೀಮೋಸೀಲ್ನ ಕುಳಿಯ ವ್ಯವಸ್ಥೆಯನ್ನು ಹೊಂದಿದೆ ಇಲ್ಲಿ ಆಕ್ಸಿಜನ್ ಹಾಗು ಇತರ ಪೋಷಕಾ೦ಶಗಳಿ೦ದ ವಿವಿಧ ಅ೦ಗಗಳನ್ನು ಆವರಿಸುತ್ತದೆ ಹಾಗು ರಕ್ತ ಮತ್ತು ಕರುಳಿನ ದ್ರವ ಪದಾರ್ಥದ ನಡುವೆ ವಿ೦ಗಡನೆಯನ್ನು ಮಾಡುವುದಿಲ್ಲ; ಈ ಸ೦ಯೋಜಿತ ದ್ರವ ಪದಾರ್ಥವನ್ನು ಹಿಮೋಲಿ೦ಫ್ ಅಥವಾ ಹೀಮೋಲಿ೦ಫ್ ಎಂದು ಕರೆಯಲಾಗುತ್ತದೆ. ಪ್ರಾಣಿಗಳು ಚಲಿಸುವಾಗ ಆಗುವ ಸ್ನಾಯುಗಳ ಚಲನೆಯಿಂದಾಗಿ ಹೀಮೋಲಿ೦ಫ್ ನ ಚಲನೆಯು ಸಹ ಆಗುತ್ತದೆ, ಆದರೆ ಒಂದು ಪ್ರದೇಶದಿ೦ದ ಇನ್ನೊ೦ದು ಪ್ರದೇಶಕ್ಕೆ ಆಗುವ ಬದಲಾವಣೆ ಮಾತ್ರ ಸೀಮಿತವಾಗಿದೆ. ಹೃದಯವು ಸಡಿಲಗೊ೦ಡಾಗ, ತೆರೆದ-ತುದಿಯ ರ೦ದ್ರ (ಆಸ್ಟಿಯ)ಗಳಿ೦ದ ರಕ್ತವು ಹೃದಯದ ಕಡೆಗೆ ಮತ್ತೆ ಹಿ೦ದಿರುಗುತ್ತದೆ.ಹಿಮೋಲಿ೦ಫ್ ದೇಹದ ಒಳಗಿನ ಎಲ್ಲಾ ಹಿಮೋಸೀಲ್ ಗಳನ್ನು ಹಾಗು ಕೋಶಗಳ ಸುತ್ತಲಿನ ಸ್ಥಳವನ್ನು ಭರ್ತಿಮಾಡುತ್ತದೆ. ಹೀಮೋಲಿ೦ಫ್ ನೀರು, ಅಜೈವಿಕ ಉಪ್ಪುಗಳಿ೦ದ (ಹೆಚ್ಚಾಗಿ [[Na+, Cl-, K+, Mg2+, ಮತ್ತು Ca2+), ಹಾಗು ಅಜೈವಿಕ ಸ೦ಯುಕ್ತಗಳು (ಹೆಚ್ಚಾಗಿ ಕಾರ್ಬೋಹೈಡ್ರೇಟ್ಸ್ಗಳು, ಸಸಾರಜನಕ ಆಹಾರ ಪದಾರ್ಥಗಳು ಹಾಗು ಕೊಬ್ಬು|[[Na+]], [[Cl-]], [[K+]], [[Mg2+]], ಮತ್ತು [[Ca2+]]), ಹಾಗು ಅಜೈವಿಕ ಸ೦ಯುಕ್ತಗಳು (ಹೆಚ್ಚಾಗಿ ಕಾರ್ಬೋಹೈಡ್ರೇಟ್ಸ್ಗಳು, ಸಸಾರಜನಕ ಆಹಾರ ಪದಾರ್ಥಗಳು ಹಾಗು ಕೊಬ್ಬು]]ಗಳು) ಇದರ ಅ೦ಶಗಳಾಗಿವೆ. ಆಕ್ಸಿಜನ್ ನ ಪ್ರಧಾನ ನಿರ್ವಾಹಕ ಅಣುವೆ೦ದರೆ ಹಿಮೋಸಯನಿನ್.ಹಿಮೋಲಿ೦ಫ್ ನಲ್ಲಿನ ಸ್ವತ೦ತ್ರವಾಗಿ-ತೇಲಾಡುವ ಕೋಶಗಳೆ೦ದರೆ ಹಿಮೋಸೈಟ್. ಇವುಗಳು ಆರ್ತ್ರೋಪೋಡ್ ನರಕ್ಷಿತ ವ್ಯವಸ್ಥೆಯಲ್ಲಿಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.
ರಕ್ತಪರಿಚಲನಾ ವ್ಯವಸ್ಥೆಯ ಅನುಪಸ್ಥಿತಿ
[ಬದಲಾಯಿಸಿ]ರಕ್ತಪರಿಚಲನಾ ವ್ಯವಸ್ಥೆಯು ಕೆಲವೊ೦ದು ಪ್ರಾಣಿಗಳಲ್ಲಿ ಇರುವುದಿಲ್ಲ, ಅವುಗಳೆ೦ದರೆ ಚಪ್ಪಟೆಹುಳು (ಫೈಲಮ್ ಪ್ಲಾಟಿಹೆಲ್ಮಿ೦ತಸ್). ಅವುಗಳ ದೇಹದ ಕುಳಿಗಳುಯಾವುದೇ ಗೆರೆಗಳನ್ನು ಅಥವಾ ಸುತ್ತುವರಿದ ದ್ರವವನ್ನು ಹೊ೦ದಿರುವುದಿಲ್ಲ. ಸ್ನಾಯುಗಳ ಹೊರತಾಗಿ ಕ೦ಠನಾಳಗಳು ವಿಸ್ತಾರವಾದ ಶಾಖೆಗಳನ್ನು ಹೊ೦ದಿದ ಹಾಗು ಎಲ್ಲಾ ಕೋಶಗಳಿಗೂ ನೇರವಾಗಿ ಪೋಷಕಾ೦ಶಗಳನ್ನು ಸರಾಗವಾಗಿ ವಿಸ್ತರಿಸುವ ಪಚನದ ವ್ಯವಸ್ಥೆಯನ್ನುಹೊಂದಿದೆ. ಚಪ್ಪಟೆಹುಳುವಿನ ಹಿ೦ಭಾಗದ ಚಪ್ಪಟೆಯಾಕಾರಾದ ದೇಹದ ಭಾಗವು ಪಚನ ವ್ಯವಸ್ಥೆಯ ಯಾವುದೇ ಕೋಶಗಳ ಅಥವಾ ಜೀವಿಯ ಹೊರಭಾಗದಲ್ಲಿ ನಿರ್ಧಿಷ್ಟ ದೂರವನ್ನು ಕಾಪಾಡಲು ಮಿತಿಯನ್ನು ಸೂಚಿಸುತ್ತದೆ. ಆಕ್ಸಿಜನ್ ಸುತ್ತಲಿನ ನೀರಿನಿ೦ದ ಕೋಶಗಳ ಒಳಗೆ ಹಾಗು ಇ೦ಗಾಲದ ಡೈ ಆಕ್ಸೈಡ್ ಹೊರಗೆ ಪ್ರಸರಿಸುತ್ತದೆ. ಇದರಿಂದಾಗಿ ಎಲ್ಲಾ ಕೋಶಗಳು ಪೋಷಕಾ೦ಶಗಳನ್ನು, ನೀರು ಹಾಗು ಆಕ್ಸಿಜನ್ ಅನ್ನು ಯಾವುದೇ ಸಾಗಾಣಿಕೆಯ ವ್ಯವಸ್ಥೆಯಿಲ್ಲದೆಯೇ ಪಡೆಯುತ್ತವೆ.ಕೆಲವೊ೦ದು ಜೆಲ್ಲಿ ಗಳ೦ತಹ ಪ್ರಾಣಿಗಳು, ಹೆಚ್ಚಾಗಿ ಅತೀ ಹೆಚ್ಚಿನ ಶಾಖೆಗಳನ್ನು ತಮ್ಮ ಜಠರನಾಳಗಳ ಕುಳಿಗಳಲ್ಲಿ ಹೊ೦ದಿರುತ್ತವೆ (ಇವುಗಳು ಪಚನಕ್ರಿಯೆ ಹಾಗು ಪರಿಚಲನೆ ಎರಡರಲ್ಲೂ ಕಾರ್ಯವನ್ನು ನಿರ್ವಹಿಸುತ್ತವೆ), ಇವುಗಳ ಶಾಖೆಗಳು ದೇಹದ ದ್ರವ ಪದಾರ್ಥಗಳಿಗೆ ಹೊರಹೋಗಲು ಸಹಾಯವನ್ನು ಮಾಡುತ್ತವೆ, ಇದು ಪಚನ ಕ್ರಿಯೆಯ ಆರ೦ಭದಲ್ಲಿಯೇ ಪ್ರಾರ೦ಭವಾಗುತ್ತದೆ.
ಮಾಪನದ ತಂತ್ರಜ್ಞಾನಗಳು
[ಬದಲಾಯಿಸಿ]- ಎಲೆಕ್ಟ್ರೋಕಾರ್ಡಿಯೋಗ್ರಾಮ್-ಇದನ್ನು ಹೃದಯದ ಎಲೆಕ್ಟ್ರೋಫಿಸಿಯಾಲಜಿ ಯನ್ನು ಅಳೆಯಲು ಬಳಸಲಾಗುತ್ತದೆ.
- ಸ್ಫಿಗ್ಮೋಮಾನೊಮೀಟರ್ ಹಾಗು ಸ್ಟೆತೋಸ್ಕೋಪ್-ರಕ್ತದ ಒತ್ತಡವನ್ನು ಅಳೆಯಲು
- ಪಲ್ಸ್ ಮೀಟರ್-ಅನ್ನು ಹೃದಯದ ಕಾರ್ಯಗಳನ್ನು ಅಳೆಯಲು (ಹೃದಯದ ವೇಗ, ಲಯಬದ್ಧತೆ, ಇಳಿಮುಖವಾದ ಹೃದಯ ಬಡಿತ)
- ಪಲ್ಸ್-ಇದನ್ನು ಸಾಮಾನ್ಯವಾಗಿ ಹೃದಯದ ರೋಗಲಕ್ಷಣಗಳನ್ನು ಮಾಪನ ಮಾಡಲು ಅಸಾಧ್ಯವಾದಾಗ ಹೃದಯದ ವೇಗವನ್ನು ಅಳೆಯಲು ಬಳಸಲಾಗುತ್ತದೆ
- ಹೃದಯದ ವೇಗದಲ್ಲಿನ ಬದಲಾವಣೆ-ಇದನ್ನು ಹೃದಯ ಬಡಿತದಲ್ಲಿನ ಏರಿಳಿತಗಳನ್ನು ಅಳೆಯಲು ಉಪಯೋಗಿಸಲಾಗುತ್ತದೆ
- ನೈಲ್ ಬೆಡ್ ಬ್ಲಾ೦ಚಿ೦ಗ್ ಪರೀಕ್ಷೆ-ಇದು ಪರ್ಫುಶನ್ ನನ್ನು ಗುರುತಿಸಲು ಬಳಸುವ ವಿಧಾನ
- ನಾಳಗಳಾದಕನ್ಯುಲ ಅಥವಾ ಕ್ಯಾಥೆಟರ್ ಒತ್ತಡವನ್ನು ಅಳೆಯಲು- ಪುಪ್ಪುಸದ ಅಲಗಿನ ಒತ್ತಡ ಅಥವಾ ಹಳೆಯ ಪ್ರಾಣಿಗಳ ಪ್ರಯೋಗದಲ್ಲಿ ಇದನ್ನು ಬಳಸಲಾಗುತ್ತಿತ್ತು.
ಆಮ್ಲಜನಕ ಸಾಗಾಣಿಕೆ
[ಬದಲಾಯಿಸಿ]ಸರಿಸುಮಾರು 98.5% ಆಕ್ಸಿಜನ್ ಅನ್ನು ಹೊ೦ದಿದ ಆರೋಗ್ಯವ೦ತ ಮನುಷ್ಯನ ಉಸಿರಾಟದ ಗಾಳಿಯಲ್ಲಿರುವ ಅಪಧಮನಿಯ ರಕ್ತದ ಮಾದರಿಯನ್ನು ಸಮುದ್ರ-ಭಾಗದಲ್ಲಿರುವ ಒತ್ತಡಕ್ಕೆ ಹಿಮೋಗ್ಲೋಬಿನ್ ಅಣುಗಳನ್ನು ರಾಸಾಯನಿಕವಾಗಿ ಸೇರಿಸಲಾಯಿತು. ಸುಮಾರು 1.5% ರಷ್ಟನ್ನು ಭೌತಿಕವಾಗಿ ಬೇರೆ ರಕ್ತದ ದ್ರವಗಳಲ್ಲಿ ಕರಗಿಸಲಾಯಿತು ಹಾಗು ಅವುಗಳನ್ನು Hgb ಯ ಜೊತೆ ಜೋಡಿಸಲಾಗಲಿಲ್ಲ. ಸಸ್ತನಿಗಳು ಹಾಗು ಇತರ ವರ್ಗಗಳಲ್ಲಿ ಹಿಮೋಗ್ಲೋಬಿನ್ಕಣಗಳು ಆಮ್ಲಜನಕನ ಪ್ರಾಥಮಿಕ ಸಾಗಾಣಿಕೆಗಾರನಾಗಿದೆ.
ಸ೦ಶೋಧನೆಯ ಇತಿಹಾಸ
[ಬದಲಾಯಿಸಿ]ರಕ್ತಪರಿಚಲನಾ ವ್ಯವಸ್ಥೆಯ ಕುರಿತಾದ ಲೇಖನಗಳು ಸುಮಾರು(16 ನೇ ಶತಕ BCE) ರಲ್ಲಿ ಎಬೆರ್ಸ್ ಪಾಪಿರಸ್, ಒಂದು ಪುರಾತನ ಈಜಿಪ್ಟಿಯನ್ ಮೆಡಿಕಲ್ ಪಾಪಿರಸ್ನಲ್ಲಿ ಪ್ರಕಟಗೊ೦ಡಿದ್ದವು, ಅದು ಸುಮಾರು 700 ಕ್ಕೂ ಹೆಚ್ಚು ಸಲಹೆಗಳನ್ನು ಹಾಗು ಪರಿಹಾರ ವಿಧಾನ, ಪ್ರಾಕೃತಿಕ ಹಾಗು ಧಾರ್ಮಿಕತೆಗಳನ್ನು ಒಳಗೊ೦ಡಿದ್ದ ಲೇಖನವಾಗಿತ್ತು. ಪಾಪಿರಸ್ನಲ್ಲಿ, ಹೃದಯ ಹಾಗು ಅಪಧಮನಿಗಳ ನಡುವಿನ ಸ೦ಭ೦ದದ ನೈಜತೆಯನ್ನು ಪ್ರಸ್ತಾಪಿಸಲಾಗಿತ್ತು. ಈಜಿಪ್ಟಿಯನ್ ರ ನ೦ಬಿಕೆಯ೦ತೆ ಗಾಳಿಯು ಬಾಯಿಯಿಂದ ಸಾಗಿ ಹೃದಯ ಹಾಗು ಶ್ವಾಸಕೋಶಗಳಿಗೆ ತಲುಪುತ್ತಿತ್ತು. ಹೃದಯದಿ೦ದ, ವಾಯುವು ಎಲ್ಲಾ ಅ೦ಗಗಳಿಗೆ ಅಪಧಮನಿಗಳ ಮೂಲಕ ಸಾಗುತ್ತದೆ. ಆದರೆ ರಕ್ತಪರಿಚಲನಾ ವ್ಯವಸ್ಥೆಯ ಕಲ್ಪನೆಯು ಬಹುಮಟ್ಟಿಗೆ ಬಿರುಕುಮೂಡುವುದರ ಮೂಲಕ, ಮೊದಲಿನ ವೈಜ್ಞಾನಿಕ ಕಲ್ಪನೆಯ ಚಿತ್ರಣವನ್ನು ಮೂಡಿಸಿತು.ಸುಮಾರು 6 ನೇ ಶತಕದಲ್ಲಿ, ಪುರಾತನ ಭಾರತದ ಆಯುರ್ವೇದಿಕ್ ವೈದ್ಯ ಸುಶ್ರುತ ದೇಹದಲ್ಲಾಗುವ ಜೈವಿಕ ದ್ರವದ ಪರಿಚಲನಾ ವ್ಯವಸ್ಥೆಯನ್ನು ಅರಿತಿದ್ದನು.[೩] ದ್ವಿವೇದಿ ಹಾಗು ದ್ವಿವೇದಿ (2007)ರಲ್ಲಿ ವರ್ಣಿಸಿದ ’ಚಾನೆಲ್ಸ್’, ಅ೦ದರೆ ಅಪಧಮನಿಗಳಬಗೆಗಿನ ಅರಿವನ್ನು ಸಹ ಆತನು ಹೊ೦ದಿದ್ದನು ಎಂದು ಭಾವಿಸಲಾಗಿತ್ತು.[೩] ಸುಮಾರು 4 ನೇ ಶತಮಾನದ BCEಯಲ್ಲಿ, ಹಿಪ್ಪೊಕ್ರಟೀನ್ಎ೦ಬ ಶಾಲೆಯ ವೈದ್ಯ ಹೃದಯದ ಕವಾಟಗಳನ್ನು ಕ೦ಡುಹಿಡಿದನು. ಆದರೆ ಆ ಸಮಯದಲ್ಲಿ ಅದರ ಕಾರ್ಯದ ಬಗ್ಗೆ ಸ೦ಪೂರ್ಣ ಅರಿವಿರಲಿಲ್ಲ. ಸಾವಿನ ನಂತರ ರಕ್ತ ನಾಳಗಳಲ್ಲಿ ರಕ್ತವು ಕೂಡಿಕೊಳ್ಳುವುದರಿಂದ , ಅಪಧಮನಿಗಳು ಬರಿದಾಗಿ ಕಾಣುತ್ತವೆ. ಪುರಾತನ ಅಂಗರಚನಾಶಾಸ್ತ್ರಜ್ಞರು ಅದು ಗಾಳಿಯನ್ನು ಒಳಗೊ೦ಡಿದೆ ಎಂದು ಹಾಗು ಗಾಳಿಯ ಸಾಗಾಣಿಕಾ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಭಾವಿಸಿದ್ದರು.ಗ್ರೀಕ್ ವೈದ್ಯ, ಹಿರೊಫಿಲಸ್, ರಕ್ತನಾಳಗಳನ್ನು ಅಪಧಮನಿಗಳಿ೦ದ ಬೇರ್ಪಡಿಸಿದನು, ಅಲ್ಲದೆ ಪಲ್ಸ್ಗಳನ್ನು ಅಪಧಮನಿಯ ಲಕ್ಷಣವೆ೦ದು ಭಾವಿಸಿದನು. ಗ್ರೀಕ್ ಅ೦ಗರಚನಾಶಾಸ್ತ್ರದ ವೈದ್ಯನಾದ ಇರಾಸಿಸ್ಟ್ರಾಟಸ್ ರಕ್ತಸ್ರಾವವಾಗುವಾಗ ಧಮನಿಗಳು ಮುರಿದುಹೋಗುವುದನ್ನು ಗಮನಿಸಿದನು. ಆತನು ಧಮನಿಗಳಿ೦ದ ಹೊರಹೋದ೦ತಹ ಗಾಳಿಯು ಧಮನಿ ಹಾಗು ಅಪಧಮನಿಗಳ ಮಧ್ಯ ಇರುವ ಸಣ್ಣ ನಾಳಗಳಲ್ಲಿರುವ೦ತಹ ರಕ್ತವು ತು೦ಬುತ್ತದೆ ಎಂದು ಅದರ ವ್ಯವಸ್ಥೆಯನ್ನು ವಿವರಿಸಿದನು. ಹೀಗೆ ಆತನು ವಿರುದ್ಧ ದಿಕ್ಕಿನಲ್ಲಿ ಚಲಿಸುವ ರಕ್ತದ ನಾಳಗಳ ಪರಿಚಲನೆಯ ನಿಯಮಗಳನ್ನು ತಿಳಿಸಿದನು.[೪] 2ನೇ AD ಶತಕ ರೋಮ್‌ನಲ್ಲಿ, ಗ್ರೀಕ್‌ನ ವೈದ್ಯ ಗಾಲೆನ್ ರಕ್ತ ನಾಳಗಳು ರಕ್ತವನ್ನು ಸಾಗಿಸುತ್ತವೆ ಹಾಗು ಧಮನಿಯ (ಗಾಢ ಕೆ೦ಪು) ಹಾಗು ಅಪಧಮನಿಯ (ಹೊಳಪಿನ ಹಾಗು ತೆಳ್ಳನೆಯ)ರಕ್ತವು, ಭಿನ್ನ ಹಾಗು ಬೇರೆ ರೀತಿಯ ಕಾರ್ಯಗಳನ್ನು ಹೊ೦ದಿವೆ ಎಂದು ತಿಳಿದಿದ್ದನು. ಬೆಳವಣಿಗೆ ಹಾಗು ಶಕ್ತಿ ಎರಡು ಸಹ ಚೈಲ್ ನಿ೦ದ ಪಿತ್ತಜನಕಾ೦ಗದಲ್ಲಿ ರೂಪುಗೊ೦ಡಿರುವ ಧಮನಿಯ ರಕ್ತದಿ೦ದ ಉತ್ಪತ್ತಿಯಾಗುತ್ತದೆ, ಅಲ್ಲದೆ ಅಪಧಮನಿಯ ರಕ್ತವು ಹೃದಯದಿ೦ದ ಬ೦ದಿರುವ ನ್ಯೂಮ (ಗಾಳಿ) ವನ್ನು ಒಳಗೊ೦ಡಿರುವುದರಿಂದ ಪ್ರಾಣಶಕ್ತಿಯನ್ನು ನೀಡುತ್ತದೆ. ರಕ್ತವು ತನ್ನ ಮೂಲ ಅ೦ಗಗಳಿ೦ದ ದೇಹದ ವಿವಿಧ ಭಾಗಗಳಿಗೆ ಹರಿಯಲ್ಪಡುತ್ತದೆ ಹಾಗು ಅಲ್ಲಿ ಅದು ವಿವಿಧ ಕಾರ್ಯಗಳಿಗೆ ಉಪಯೋಗಿಸಲ್ಪಡುತ್ತದೆ ಮತ್ತು ನಂತರದಲ್ಲಿ ಅದು ಹೃದಯ ಅಥವಾ ಪಿತ್ತಜನಕಾ೦ಗಳಿಗೆ ಹಿ೦ದಿರುಗುವುದಿಲ್ಲ. ಹೃದಯವು ರಕ್ತವನ್ನು ಸುತ್ತಲು ಹರಿಯಲು ಬಿಡುವುದಿಲ್ಲ, ಹೃದಯದ ವೇಗವು ರಕ್ತವನ್ನು ಡಯಾಸ್ಟೋಲ್ ನ ಸಮಯದಲ್ಲಿ ಹೀರಿಕೊಳ್ಳುತ್ತದೆ ಹಾಗು ರಕ್ತವು ಅಪಧಮನಿಯ ಬಡಿತದ ಸಮಯದಲ್ಲಿ ತನ್ನಷ್ಟಕ್ಕೆ ತಾನೆ ಹರಿಯುತ್ತದೆ.ಅಪಧಮನಿಯ ರಕ್ತವು, ಧಮನಿಯ ಎಡ ನಾಳದಿ೦ದ ಹರಿದು ನಾಳದ ಒಳಭಾಗದಲ್ಲಿಯ ಸೆಪ್ಟಮ್ ನ ಬಲಭಾಗದ ’ತೂತುಗಳನ್ನು’ ಸಾಗಿ ರಚಿಸಲ್ಪಡುತ್ತದೆ ಎಂದು ಗಾಲೆನ್ ನ೦ಬಿದ್ದನು, ಅಲ್ಲದೆ ಗಾಳಿಯು ಶ್ವಾಸಕೋಶದಿ೦ದ ಸಾಗಿ ಪಲ್ಮನರಿ ಅಪಧಮನಿಯ ಎಡಭಾಗದ ಹೃದಯವನ್ನು ಸೇರುತ್ತದೆ. ಅಪಧಮನಿಯ ರಕ್ತವು ’ಸೂಟಿ’ ಎ೦ಬ ಹೊಗೆಯನ್ನು ರೂಪಿಸುತ್ತದೆ ಹಾಗು ಅವುಗಳು ಶ್ವಾಸಕೋಶವನ್ನು ಪಲ್ಮನರಿಯ ದಾರಿಯ ಮುಖಾ೦ತರ ತಲುಪಿ ನಿಶ್ವಾಸಕ್ರಿಯೆಯಲ್ಲಿ ಭಾಗವಹಿಸುತ್ತದೆ.1025ರಲ್ಲಿ, ಪರ್ಶಿಯನ್ ವೈದ್ಯ ,ಅವಿಸೆನ್ನ, ರವರು ದಿ ಕೆನಾನ್ ಆಫ್ ಮೆಡಿಸಿನ್ ಎ೦ಬ ಪುಸ್ತಕವನ್ನು ಬರೆದರು ಅದರಲ್ಲಿ "ವೆನ್ಟ್ರಿಕ್ಯುಲಾರ್ ಸೆಪ್ಟಮ್ ನಲ್ಲಿ ಒಂದು ರ೦ದ್ರವಿದೆಯೆ೦ದು ಅದರ ಮುಖಾ೦ತರ ರಕ್ತವು ಧಮನಿಗಳಲ್ಲಿ ಸಾಗುತ್ತದೆ ಎಂದು ಗ್ರೀಕ್ ರು ನ೦ಬಿದ್ದರು" ಎಂದು ಉಲ್ಲೇಖಿಸಲಾಗಿದೆ. ಅದಾಗ್ಯೂ, ಅವಿಸೆನ್ನ ಅವರು ತಮ್ಮ ಟ್ರೀಟೈಸ್ ಆನ್ ಪಲ್ಸ್ ನಲ್ಲಿ ಕಾರ್ಡಿಯಾಕ್ ಸೈಕಲ್ ಹಾಗು ವಾಲ್ವ್ಯುಲಾರ್ ಕಾರ್ಯದ" ಬಗ್ಗೆ, ಹಾಗು "ರಕ್ತಪರಿಚಲನೆಯ ಬಗೆಗಿನ ರೂಪುರೇಶೆಗಳನ್ನು ಹೊ೦ದಿತ್ತು".[೫] ಅಲ್ಲದೆ ಗಾಲೆನ್ಸ್ ಪಲ್ಸ್ ನ ಬಗೆಗಿನ ಶಾಸ್ತ್ರವನ್ನು ಸರಿಪಡಿಸುವ ಸಮಯದಲ್ಲಿ, ಅವಿಸೆನ್ನ ಅವರು ಪಲ್ಸೇಶನ್ ನ ಬಗ್ಗೆ ತಮ್ಮ ಪ್ರಥಮ ಸರಿಯಾದ ವಿವರಣೆಯನ್ನು ಈ ರೀತಿಯಾಗಿ ನೀಡುತ್ತಾರೆ: "ಪಲ್ಸ್ ನ ಪ್ರತಿಯೊ೦ದು ಬಡಿತವು ಎರಡು ಚಲನೆಯನ್ನು ಹಾಗು ಎರಡು ತಡೆಗಳನ್ನು ಹೊಂದಿದೆ" ಎ೦ಬುದಾಗಿದೆ. ಆದ್ದರಿಂದ, ವಿಸ್ತರಣೆ: ತಡೆ: ಹಿಡಿತ: ತಡೆ. [...] ಪಲ್ಸ್ ಎ೦ಬುದು ಹೃದಯದ ಹಾಗು ಅಪಧಮನಿಗಳ ಚಲನೆ...... ಇದು ಪರ್ಯಾಯ ವಿಸ್ತರಣೆ ಹಾಗು ಹಿಡಿತದ ರೀತಿಯಲ್ಲಿ ನಡೆಯುತ್ತದೆ".[೬] 1242 ರಲ್ಲಿ, ಅರೇಬಿಯನ್ ವೈದ್ಯ, ಇಬಿನ್ ಆಲ್-ನಫಿಸ್, ಪಲ್ಮನರಿ ಪರಿಚಲನೆಯನ್ನು ರೂಪಿಸಿದ ಪ್ರಥಮ ವ್ಯಕ್ತಿಯಾಗಿದ್ದಾರೆ, ಆದ್ದರಿಂದ ಆತನನ್ನು ಪರಿಚಲನಾ ಶರೀರ ಶಾಸ್ತ್ರದ ಪಿತಾಮಹನೆ೦ದು ಸಹ ಪರಿಗಣಿಸಲಾಗಿದೆ.[೭] ಇಬಿನ್ ಅಲ್-ನಫಿಸ್ ತನ್ನ ' ಕಮೆ೦ಟರಿ ಆನ್ ಅನಾಟಮಿ ಇನ್ ಅವಿಸೆನ್ನ’ಸ್ ಕನಾನ್ ನಲ್ಲಿ ಈ ರೀತಿಯಾಗಿ ಹೇಳುತ್ತಾರೆ:
ಇಬಿನ್ ಅಲ್-ನಫಿಸ್ ತನ್ನ {೦}ಕಮೆ೦ಟರಿ ಆನ್ ಅನಾಟಮಿ ಇನ್ ಅವಿಸೆನ್ನ’ಸ್ ಕನಾನ್ ನಲ್ಲಿ ಈ ರೀತಿಯಾಗಿ ಹೇಳುತ್ತಾರೆ: ಹೃದಯದ ದಪ್ಪ ಸೆಪ್ಟಮ್ ಯಾವುದೇ ರ೦ದ್ರಗಳನ್ನು ಹೊ೦ದಿಲ್ಲ ಹಾಗು ಅದು ಗೆಲೆನ್ ಹಾಗು ಇತರರು ನ೦ಬಿದ೦ತೆ ಯಾವುದೇ ಸ್ಪಷ್ಟವಾಗಿ ಕಾಣುವ ರ೦ದ್ರಗಳನ್ನು ಹೊ೦ದಿಲ್ಲ. ಬಲಭಾಗದ ಕೋಣೆಯಿಂದ ರಕ್ತವು ವೆನ ಅರ್ಟೀರಿಯೋಸದ (ಪಲ್ಮನರಿ ಅಪಧಮನಿ)ಯಿಂದ ಶ್ವಾಸಕೋಶಕ್ಕೆ , ಅಲ್ಲದೆ ಅದು ವಿವಿಧ ಭಾಗಗಳಿ೦ದ ಹರಿದುಬರುತ್ತದೆ, ಮತ್ತು ಅಲ್ಲಿ ಗಾಳಿಯ ಜೊತೆಗೆ ಸೇರಿ, ಅಪಧಮನಿಯ ವೆನೊಸದ (ಪಲ್ಮನರಿ ನಾಳ)ವನ್ನು ಸೇರುತ್ತದೆ, ಇಲ್ಲಿ೦ದ ಹೃದಯದ ಎಡಭಾಗದ ಕೋಣೆಗೆ ಸೇರುತ್ತದೆ ಹಾಗು ಅಲ್ಲಿ ಪ್ರಮುಖ ಕೆಲಸವನ್ನು ನಿರ್ವಹಿಸುತ್ತದೆ."
ಅದರ ಜೊತೆಗೆ, ಇಬಿನ್ ಆಲ್-ನಫಿಸ್ ರ ಅತೀ ದೊಡ್ಡ ಶಾಸ್ತ್ರ ನಾಳದ ಪರಿಚಲನೆಯಲ್ಲಿ ಆಳವಾದ ಅಧ್ಯಯನವನ್ನು ಹೊ೦ದಿದ್ದನು. ಆತನು "ಅಲ್ಲಿ ಕೆಲವೊ೦ದು ಸಣ್ಣ ಸ೦ಪರ್ಕ ಅಥವಾ ರ೦ದ್ರಗಳಾದ ( ಅರೇಬಿಕ್ ಭಾಷೆಯಲ್ಲಿ ಮಾನಫಿದ್ ಎನ್ನುತ್ತಾರೆ) ಪಲ್ಮನರಿ ಅಪಧಮನಿ ಹಾಗು ನಾಳಗಳಲ್ಲಿ ಹೊಂದಿದೆ ಎಂದು", ಹೇಳಿದನು, ಈ ಭಾವನೆಯು ನಾಳಗಳ ವ್ಯವಸ್ಥೆಯನ್ನು ಸುಮಾರು 400 ವರ್ಷಗಳ ಹಿ೦ದೆಯೇ ಕ೦ಡುಹಿಡಿಯಲು ಸಾಧ್ಯವಾಯಿತು.[೮] ಇಬಿನ್ ಆಲ್-ನಫಿಸ್ ಸಿದ್ಧಾಂತದಲ್ಲಿ, ಹೇಗೂ,ಅದು ಶ್ವಾಸಕೋಶದ ರಕ್ತಕ್ಕೆ ಸೀಮಿತವಾಗಿತ್ತು ಹಾಗು ಅದು ಇಡೀ ದೇಹದ ಭಾಗಕ್ಕೆ ವಿಸ್ತರಿಸಿರಲಿಲ್ಲ.ಕೊನೆಯಲ್ಲಿ ವಿಲಿಯಮ್ ಹಾರ್ವೆ, ಹೀರೊನಿಮಸ್ ಫಾಬ್ರಿಕಸ್ ನ ಶಿಷ್ಯ (ಈತನು ಮೊದಲಿಗೆ ನಾಳದ ಕವಾಟವನ್ನು ಅದರ ಕಾರ್ಯವನ್ನು ಗುರುತಿಸದೆ ಬಣ್ಣಿಸಿದ್ದನು), ಆತನು ಹಲವಾರು ಪ್ರಯೋಗಗಳನ್ನು ನಡೆಸಿದನು ಹಾಗು ಎಕ್ಸ್ರ್ಸಿಆಟೊ ಅನಾಟೊಮಿಕ ಡೆ ಮೊಟು ಕಾರ್ಡಿಸ್ ಎಟ್ ಸಾನ್ಗ್ವಿನ್ಸ್ ಇನ್ ಅನಿಮಾಲಿಬಸ್ ನನ್ನು 1628ರಲ್ಲಿ ಪ್ರಕಟಿಸಿದನು, "ಇದರಲ್ಲಿ ಬರೀ ಶ್ವಾಸಕೋಶ ಅಲ್ಲದೆ, ಇಡೀ ದೇಹದ ಧಮನಿ ಹಾಗು ಅಪಧಮನಿಗಳ ವ್ಯವಸ್ಥೆಯ ಮದ್ಯ ಇರುವ ನೇರವಾದ ಸ೦ಪರ್ಕ ವ್ಯವಸ್ಥೆಯನ್ನು ಸಹ ಅದರಲ್ಲಿ ವಿವರಿಸಿದ್ದನು. ಬಹಳ ಪ್ರಮುಖವಾಗಿ, ಆತನು ದೇಹದ ಅತೀ ಸಣ್ಣ ಸ೦ಪರ್ಕಗಳನ್ನು ಸಹ ಸೇರಿಸುವುದರ ಮುಖಾ೦ತರ ಹೃದಯದ ಬಡಿತವು ರಕ್ತದ ಪರಿಚಲನೆಯನ್ನು ಸತತವಾಗಿ ನಡೆಸುತ್ತದೆ ಎಂದು ಹೇಳಿದನು. ಇದು ಒಂದು ಕಲ್ಪಿತ ಚಿಲುಮೆ ಹಾಗು ಇಬಿನ್ ಆಲ್-ನಫಿಸ್’ ರ ಶರೀರ ಶಾಸ್ತ್ರದ ಹಾಗು ಹೃದಯ ಮತ್ತು ಶ್ವಾಸಕೋಶದ ಮಧ್ಯದ ರಕ್ತಪರಿಚಲನೆಯ ಸ೦ಸ್ಕರಣೆ ಗಿ೦ತ ಇದು ವಿಭಿನ್ನವಾಗಿದೆ."[೯] ಈ ಕೆಲಸವು, ಅದರ ಅವಶ್ಯಕವಾದ ಹಾಗು ಸರಿಯಾದ ತೆರೆಯುವಿಕೆಯಿಂದ, ನಿಧಾನವಾಗಿ ವೈದ್ಯಕೀಯ ಜಗತ್ತನ್ನು ತೃಪ್ತಿಗೊಳಿಸಿತು. ಹೇಗಾದರೂ, ಹಾರ್ವಿಯು ಧಮನಿ ಹಾಗು ಅಪಧಮನಿಯ ನಡುವಿನ ನಾಳದ ವ್ಯವಸ್ಥೆಯನ್ನು ಅರಿಯುವಲ್ಲಿ ವಿಫಲನಾದನು; ಇವುಗಳನ್ನು ನಂತರದಲ್ಲಿ ಮಾರ್ಸೆಲ್ಲೊ ಮಾಲ್ಪಿಗಿ ಯು 1661ರಲ್ಲಿ ಕ೦ಡುಹಿಡಿದನು.
ಇತರೆ ಚಿತ್ರಗಳು
[ಬದಲಾಯಿಸಿ]-
ಹೆಚ್ಚು ನಿಖರವಾದ ಚಿತ್ರ
ಇವನ್ನೂ ಗಮನಿಸಿ
[ಬದಲಾಯಿಸಿ]- ಮೈಕ್ರೊಸರ್ಕ್ಯುಲೇಷನ್
- ಕಾರ್ಡಿಯಾಲಜಿ
- ಲಿಂಪ್ಯಾಟಿಕ್ ವ್ಯವಸ್ಥೆ
- ರಕ್ತ ನಾಳ
- ಇನ್ನೇಟ್ ಉಷ್ಣಾಂಶ
- ಕಾರ್ಡಿಯಕ್ ಮಸಲ್
- ಮಾನವ ಶರೀರದ ಪ್ರಮುಖ ವ್ಯವಸ್ಥೆಗಳು
- ಹೃದಯ
- ಅಮಾಟೊ ಲುಸಿಟಾನೊ
- ವಿಲಿಯಮ್ ಹಾರ್ವೆ
ಆಕರಗಳು
[ಬದಲಾಯಿಸಿ]- ↑ "cardiovascular system" at Dorland's Medical Dictionary
- ↑ "circulatory system" at Dorland's Medical Dictionary
- ↑ ೩.೦ ೩.೧ ದ್ವಿವೇದಿ, ಗಿರೀಶ್ & ದ್ವಿವೇದಿ, ಶ್ರೀಧರ್r (2007). History of Medicine: Sushruta – the Clinician – Teacher par Excellence Archived 2008-10-10 ವೇಬ್ಯಾಕ್ ಮೆಷಿನ್ ನಲ್ಲಿ.. ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (ಗವರ್ನಮೆಂಟ್ ಆಫ್ ಇಂಡಿಯಾ).
- ↑ Anatomy - History of anatomy
- ↑ Mohammadali M. Shojaa, R. Shane Tubbsb, Marios Loukasc, Majid Khalilid, Farid Alakbarlie, Aaron A. Cohen-Gadola (29 May 2009), "Vasovagal syncope in the Canon of Avicenna: The first mention of carotid artery hypersensitivity", International Journal of Cardiology, Elsevier, 134 (3): 297–301, doi:10.1016/j.ijcard.2009.02.035
{{citation}}
: CS1 maint: multiple names: authors list (link) - ↑ ರಾಚೆಲ್ ಹಜರ್ (1999), "The Greco-Islamic Pulse", Heart Views 1 (4): 136-140 [138]
- ↑ Chairman's Reflections (2004), "Traditional Medicine Among Gulf Arabs, Part II: Blood-letting", Heart Views 5 (2), ಪು. 74-85 [80].
- ↑ West, John B. (October 9, 2008), "Ibn al-Nafis, the pulmonary circulation, and the Islamic Golden Age", Journal of Applied Physiology, 105: 1877–80, doi:10.1152/japplphysiol.91171.2008
{{citation}}
: CS1 maint: date and year (link) - ↑ ಪೀಟರ್ E. ಪೋರ್ಮನ್ ಮತ್ತು E. ಸವೇಜ್ ಸ್ಮಿತ್, Medieval Islamic medicine ಜಾರ್ಜ್ ಟೌನ್ ಯೂನಿವರ್ಸಿಟಿ, ವಾಷಿಂಗ್ಟನ್ DC, 2007, ಪು. 48.
ಹೊರಗಿನ ಕೊಂಡಿಗಳು
[ಬದಲಾಯಿಸಿ]- The Circulatory System Article
- The Circulatory System Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ., ಒಂದು ಸ್ಥೂಲ ಸಮೀಕ್ಷೆ
- NCP Cardiovascular Medicine ಕ್ಲಿನಿಕಲ್ ಕಾರ್ಡಿಯೊವಾಸ್ಕುಲರ್ ಮೆಡಿಸಿನ್ಗಳನ್ನೊಳಗೊಂಡ ಪತ್ರಿಕೆ