ಶಿರಪಾದಿ
ಶಿರಪಾದಿ Temporal range:
| |
---|---|
ಅಸ್ತಿತ್ವದಲ್ಲಿರುವ ಮತ್ತು ಗತಿಸಿದ ಶಿರಪಾದಿಗಳು; ಮೇಲೆ ಎಡದಿಂದ ಪ್ರದಕ್ಷಿಣವಾಗಿ: ಸಾಮಾನ್ಯ ಆಕ್ಟೊಪಸ್ (ಆಕ್ಟೊಪಸ್ ವಲ್ಗ್ಯಾರಿಸ್), ಕರೀಬಿಯನ್ ದಿಬ್ಬದ ಸ್ಕ್ವಿಡ್ (ಸೆಪಿಯೊಟ್ಯೂತಿಸ್ ಸೆಪಿಯಾಯ್ಡೀ), ಕೋಣೆಗಳುಳ್ಳ ನಾಟಿಲಸ್ (ನಾಟಿಲಸ್ ಪಾಂಪೀಲಿಯಸ್), ಆರ್ತೊಸ್ಫಿಂಕ್ಟಸ್, ಕ್ಲಾರ್ಕೇಟ್ಯೂತಿಸ್ ಕೋನೊಕಾಡಾ, ಮತ್ತು ಸಾಮಾನ್ಯ್ ಕಟಲ್‍ಮೀನು (ಸೆಪಿಯಾ ಅಫ಼ಿಶಿನ್ಯಾಲಿಸ್) | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಮೊಲಸ್ಕಾ |
ಉಪವಿಭಾಗ: | ಕಾಂಚಿಫ಼ೆರಾ |
ವರ್ಗ: | ಸಿಫಲೊಪೋಡಾ Cuvier, 1797 |
ಉಪವರ್ಗಗಳು | |
|
ಶಿರಪಾದಿ ಎಂಬುದು ಮೃದ್ವಂಗಿಸಂಕುಲದ ಒಂದು ವರ್ಗ (ಸಿಫೆಲೊಪೋಡಾ). ಇದರಲ್ಲಿ ೮೦೦ ಕ್ಕಿಂತ ಹೆಚ್ಚು ಪ್ರಭೇದಗಳಿವೆ.[೩] ಸಾಗರವಾಸಿ ಕಡಲಿನ ಅತ್ಯಂತ ಆಳದ ಪಾತಳಿಯಿಂದ ಮೇಲ್ಭಾಗದ ಸ್ತರಗಳವರೆಗೂ ಹರಡಿವೆ. ಇವು ಎಲ್ಲ ಸಮುದ್ರಗಳಲ್ಲೂ ಮಹಾಸಾಗರಗಳಲ್ಲೂ ಕಂಡುಬರುತ್ತವೆ. ಗಾತ್ರಗಳಲ್ಲಿ ಅಗಾಧ ವ್ಯತ್ಯಾಸವಿದೆ. ಅತ್ಯಂತ ಚಿಕ್ಕ ಶಿರಪಾದಿ 2 ಸೆಂಮೀ, ದೈತ್ಯ ಸ್ಕ್ವಿಡ್‌ನದು 18 ಮೀ.
ದೇಹರಚನೆ
[ಬದಲಾಯಿಸಿ]ಶಿರಪಾದಿಯಲ್ಲಿ ತಲೆ ಮತ್ತು ಪಾದ ಒಂದುಗೂಡಿರುವುದರಿಂದ ಈ ಹೆಸರು. ದೇಹದ ಹಿಂಭಾಗದಲ್ಲಿ ಒಳಾಂಗಗಳು ಹಾಗೂ ಚಿಪ್ಪುಗಳಿವೆ. ಪಾದ ಅನೇಕ ತೋಳುಗಳಾಗಿ ವಿಭಾಗಗೊಂಡಿದ್ದು ಇವುಗಳ ಒಳಭಾಗದಲ್ಲಿ ಹೀರುಬಟ್ಟಲುಗಳಿವೆ. ವಿವಿಧ ಪ್ರಭೇದಗಳ ತೋಳುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಉಂಟು. ತಲೆಯ ಎರಡೂ ಕಡೆ ಒಂದೊಂದು ಉತ್ತಮವಾಗಿ ಬೆಳೆದ ಕಣ್ಣುಗಳೂ ಕೆಳಭಾಗದಲ್ಲಿ ಒಂದು ನಳಿಕೆಯೂ ಇವೆ.
ಶಿರಪಾದಿಗಳ ಆಕಾರ ವಿಚಿತ್ರ. ಶರೀರದ ಎರಡೂ ಕಡೆ ಒಂದೊಂದು ತ್ರಿಕೋಣಾಕಾರದ ರೆಕ್ಕೆ ಉಂಟು. ಚಿಪ್ಪು ಶರೀರದ ಒಳಭಾಗದಲ್ಲಿದೆ. ನಾಟಿಲಸ್ ಎಂಬ ಗಣಕ್ಕೆ ಸೇರುವ ಪ್ರಭೇದಗಳಲ್ಲಿ ಮಾತ್ರ ಚಿಪ್ಪು ಶರೀರದ ಹೊರಭಾಗದಲ್ಲಿರುವುದು. ಚಿಪ್ಪು ಸುಣ್ಣದಿಂದಾಗಿದೆ. ಇದರ ಒಳಮೈಯಲ್ಲಿ ಮುತ್ತಿನ ಸ್ತರವಿದೆ. ನಾಟಿಲಸ್‌ನಲ್ಲಿ ಹೊರಭಾಗಕ್ಕೂ ಈ ಸ್ತರ ಆವರಿಸಿರುವುದರಿಂದ ಚಿಪ್ಪಿಗೆ ಅಪೂರ್ವ ಸೌಂದರ್ಯ ಬಂದಿದೆ. ಆಕ್ಟೋಪಸ್‌ನಲ್ಲಿ ಚಿಪ್ಪು ಸಂಪೂರ್ಣವಾಗಿ ಮಾಯ. ಚಿಪ್ಪಿನಲ್ಲಿ ಅನಿಲ ಕೋಣೆಗಳು ತುಂಬಿರುವುದರಿಂದ ಶಿರಪಾದಿ ತೇಲುವುದಕ್ಕೆ ಅನುಕೂಲ.
ಶಿರಪಾದಿಗಳ ನರಮಂಡಲ ಉತ್ತಮವಾಗಿ ವಿಕಾಸಗೊಂಡಿದೆ. ಅಕಶೇರುಕಗಳ ಪೈಕಿ ಇವು ಬುದ್ಧಿವಂತ ಪ್ರಾಣಿಗಳು.[೪][೫][೬] ನರವ್ಯೂಹದಲ್ಲಿ ಒಂದು ಜೊತೆ ನರಗ್ರಂಥಿಗಳಿಂದಾದ ಮಿದುಳು, ಅನೇಕ ನರಗ್ರಂಥಿಗಳು, ಕೆಲವು ದೈತ್ಯನರಗಳಿವೆ. ದೈತ್ಯನರಗಳ ಮೂಲಕ ಸಂದೇಶಗಳು ವೇಗವಾಗಿ ಸಾಗುತ್ತವೆ. ಇಂದ್ರಿಯಗಳ ಪೈಕಿ ಕಣ್ಣು ಕಶೇರುಕಗಳ ತೆರದಲ್ಲೇ ಉತ್ತಮವಾಗಿ ವಿಕಾಸಗೊಂಡಿದೆ. ನೀರಿನ ಶುದ್ಧತೆಯನ್ನು ಅಳೆಯಲು ಆಸ್ಪ್ರೇಡಿಯಮ್ ಎಂಬ ಇಂದ್ರಿಯವೂ, ಗುರುತ್ವಾಕರ್ಷಣ ತಿಳಿದು ಸಮತೋಲನವನ್ನು ನೀಡಲು ಸ್ಟ್ಯಾಟೋಸಿಸ್ಟ ಎಂಬ ಇಂದ್ರಿಯವೂ ಇವೆ.[೭]
ಉಲ್ಲೇಖಗಳು
[ಬದಲಾಯಿಸಿ]- ↑ Wilbur, Karl M.; Trueman, E.R.; Clarke, M.R., eds. (1985), The Mollusca, vol. 11. Form and Function, New York: Academic Press, ISBN 0-12-728702-7
- ↑ Hildenbrand, Anne; Austermann, Gregor; Fuchs, Dirk; Bengtson, Peter; Stinnesbeck, Wolfgang (2021). "A potential cephalopod from the early Cambrian of eastern Newfoundland, Canada". Communications Biology. 4 (1): 388. doi:10.1038/s42003-021-01885-w. PMC 7987959. PMID 33758350.
- ↑ "Welcome to CephBase". CephBase. Archived from the original on 12 January 2016. Retrieved 29 January 2016.
- ↑ Tricarico, E.; Amodio, P.; Ponte, G.; Fiorito, G. (2014). "Cognition and recognition in the cephalopod mollusc Octopus vulgaris: coordinating interaction with environment and conspecifics". In Witzany, G. (ed.). Biocommunication of Animals. Springer. pp. 337–349. ISBN 978-94-007-7413-1.
- ↑ Budelmann, B. U. (1995). "The cephalopod nervous system: What evolution has made of the molluscan design". In Breidbach, O.; Kutsch, W. (eds.). The nervous systems of invertebrates: An evolutionary and comparative approach. Springer. ISBN 978-3-7643-5076-5.
- ↑ Chung, Wen-Sung; Kurniawan, Nyoman D.; Marshall, N. Justin (2020). "Toward an MRI-Based Mesoscale Connectome of the Squid Brain". iScience (in ಇಂಗ್ಲಿಷ್). 23 (1): 100816. Bibcode:2020iSci...23j0816C. doi:10.1016/j.isci.2019.100816. PMC 6974791. PMID 31972515.
- ↑ Nixon, Marion; Young, J. Z. (2003). The Brains and Lives of Cephalopods. New York: Oxford University Press. ISBN 978-0-19-852761-9.