ಸದಸ್ಯ:Prakrutisudarshan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು, ಕರ್ನಾಟಕ.

ಜನ್ಮ ಮತ್ತು ಶಿಕ್ಷಣ

ಕರ್ನಾಟಕ ಶಾಸ್ತ್ರೀಯ ಸಂಗೀತ ವಾದ್ಯಗಳು

ನನ್ನ ಹೆಸರು ಪ್ರಕೃತಿ. ನಾನು ಹುಟ್ಟಿದ್ದು ಮತ್ತು ಬೆಳದಿದ್ದು ಬೆಂಗಳೂರಿನಲ್ಲಿ. ಆದರೆ ನಂತರ ಕರ್ನಾಟಕದ ಸಾಂಸ್ಕೃತಿಕ ನಗರ ಎಂದು ಪ್ರಸಿದ್ಧವಾದ ಮೈಸೂರಿನಲ್ಲಿ ನನ್ನ ಶಿಕ್ಷಣವನ್ನು ಮುಂದುವರಿಸಿದೆ. ಕ್ರೈಸ್ಟ್ ಅಲ್ಲಿ ಬಿ.ಸ್ಸಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಓದುತ್ತಿದ್ದೇನೆ.

ಕುಟುಂಬ

ನನ್ನ ತಂದೆ ಆಂಗ್ಲ ಭಾಷೆಯಲ್ಲಿ ಎಂ.ಎ, ಎಂ.ಫಿಲ್ ಪದವಿ ಮುಗಿಸಿ, ಮೈಸೂರಿನ ವಿ-ಲೀಡ್ ಎಂಬ ಏನ್.ಜಿ.ಒನಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಒಬ್ಬಳೇ ಮಗಳಾದ ಕಾರಣ ತಂದೆ-ತಾಯಿ ಇಬ್ಬರಿಗೂ ಬಹಳ ಹತ್ತಿರ. ನನ್ನ ತಾಯಿ ನನ್ನ ಮೊದಲ ಗುರು ಮಾತ್ರ ಅಲ್ಲ, ನನ್ನ ಎಲ್ಲ ಕೆಲಸಗಳಿಗೂ ಪ್ರೇರಣೆ.

ಗುರಿ ಮತ್ತು ಸಾಧನೆ

ಮುಂದೆ ಖಗೋಳ ವಿಜ್ಞಾನಿ ಆಗಬೇಕೆಂಬ ಆಸೆ. ನನ್ನ ಜೀವನದ ಸ್ಪೂರ್ತಿ ಎಂದರೆ, ಆಲ್ಬರ್ಟ್ ಐನ್ಸ್ಟೈನ್ ಮತ್ತು ಸ್ಟೆಫೆನ್ ಹಾಕಿಂಗ್. ನಾನು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಲೆಗಳಲ್ಲಿ ಜೂನಿಯರ್ ಪದವಿ ಮುಗಿಸಿ ಸಂಗೀತವನ್ನು ಮುಂದುವರಿಸುತ್ತಿದ್ದೇನೆ. ನಾನು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಗಳಿಸಿದ್ದೆ.

ಕರ್ನಾಟಕದ ನಕ್ಷೆ

ಹವ್ಯಾಸ ಮಾತು ಆಸಕ್ತಿ

ನನಗೆ ಕನ್ನಡ ಭಾಷೆಯ ಮೇಲೆ ಬಹಳ ಅಭಿಮಾನ. ಕುವೆಂಪು, ಬೀಚಿ, ಲಂಕೇಶ್ ಅವರ ಕಥಾಸಂಕಲನಗಳು ಬಹಳ ಪ್ರಿಯ. ಅದಲ್ಲದೆ ನನಗೆ ಬರೆಯುವ ಅಭ್ಯಾಸ. ಪ್ರವಾಸದ ಅನುಭವಗಳು, ಸಣ್ಣ ಕಥೆಗಳು, ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬರೆಯುತ್ತೇನೆ. ನಾನು ಸ್ವಾಮಿ ವಿವೇಕಾನಂದ ಅವರ ತತ್ವಗಳಿಂದ ಪ್ರಭಾವಾವಿತಳು . ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರಿಸಿಲ್ಲ ಆದರೆ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಗಳೆಂದರೆ ಬಹಳ ರುಚಿ. ನನಗೆ ವಿಶ್ವದ ಅತಿ ಹೆಚ್ಚು ಜಾಗಗಳಿಗೆ ಪ್ರವಾಸ ಮಾಡಬೇಕೆಂಬ ಕುತೂಹಲ ಇದೆ. ಹದಿನೆಂಟು ವರ್ಷಗಳ ಈ ಬಾಲಕಿ ತನ್ನ ಗುರಿ ಮುಟ್ಟಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಕನಸು ಕಂಡಿದ್ದಾಳೆ.