ಕ್ರೈಸ್ಟ್ ಯೂನಿವರ್ಸಿಟಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕ್ರೈಸ್ಟ್ ಯೂನಿವರ್ಸಿಟಿ
Administrative Block of Christ University, Bangalore.jpg
ಸ್ಥಾಪನೆ ೧೫ ಜುಲೈ ೧೯೬೯
ಪ್ರಕಾರ ಸಾರ್ವಜನಿಕ
ಕುಲಪತಿಗಳು 'ಡಾ. ಫ಼ಾ ಥೊಮಸ್ ಐಕರ'
ಉಪಕುಲಪತಿಗಳು ಕ. ಡಾ. ಫ಼ಾ. ಥೊಮಸ್ ಸಿ. ಮ್ಯಾಥ್ಯು
ಸಿಬ್ಬಂದಿ '-'
ವಿದ್ಯಾರ್ಥಿಗಳ ಸಂಖ್ಯೆ ೧೨೮೯೩
ಪದವಿ ಶಿಕ್ಷಣ '-'
ಸ್ನಾತಕೋತ್ತರ ಶಿಕ್ಷಣ '-'
ಡಾಕ್ಟರೇಟ್ ಪದವಿ '-'
ಇತರೆ '-'
ಆವರಣ ಶಹರ
ಅಂತರ್ಜಾಲ ತಾಣ [೧]


ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿ ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಕ್ರೈಸ್ಟ್ ಯೂನಿವರ್ಸಿಟಿ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೩೬ ವಿಷಯಗಳಲ್ಲಿ ಪದವಿ, ೩೨ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ೧೭ ವಿಷಯಗಳಲ್ಲಿ ಎಮ್ ಫಿಲ್ ಹಾಗೂ ಪಿಎಚ್ ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ಕ್ರೈಸ್ಟ್ ಯೂನಿವರ್ಸಿಟಿಯು ೨೦೦೮ರಲ್ಲಿ ವಿಶ್ವವಿದ್ಯಾಲಯದ ಸ್ಥಾನವನ್ನು ಪಡೆಯಿತು.

ಇತಿಹಾಸ/ಮಾಹಿತಿ[ಬದಲಾಯಿಸಿ]

Christ University Hosur road Bangalore 4819

ಕ್ರೈಸ್ಟ್ ಕಾಲೇಜು ೧೯೬೯ರ ಜುಲೈ ೧೫ ರಂದು ಸ್ಥಾಪಿತವಾಯಿತು. ಶ್ರೇಷ್ಠತೆ ಹಾಗು ಸೇವೆಯನ್ನು ತನ್ನ ಧ್ಯೆಯವಾಗಿಟ್ಟುಕೊಂಡಿದ್ದು, ಶಿಕ್ಷಣ ಕ್ಷೇತ್ರಕ್ಕೆ ಗಣನೀಯ ಕೊಡುಗೆಯನ್ನು ನೀಡಿದ ಈ ಕಾಲೇಜು ೨೦೦೮ನೆ ಇಸವಿಯಲ್ಲಿ ಕ್ರೈಸ್ಟ್ ಯೂನಿವರ್ಸಿಟಿ ಎಂಬ ಅಭಿಧಾನವನ್ನು ಪಡೆಯಿತು. ವಿಶ್ವವಿದ್ಯಾನಿಲಯ ಅನುದಾನಗಳ ಆಯೋಗದಿಂದ (ಯುಜಿಸಿ) ಡೀಮ್ದ್ ವಿಶ್ವವಿದ್ಯಾನಿಲಯವೆಂದು ಘೋಷಿತವಾದ ಈ ಖಾಸಗಿ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ನಡೆಸುತ್ತಿರುವವರು ಕಾರ್ಮೆಲೈಟ್ಸ್ ಆಫ಼್ ಮೇರಿ ಇಮ್ಯಾಕ್ಯುಲೇಟ್ ಸಿರಿಯನ್ ಕ್ಯಾಥೊಲಿಕ್ ಕ್ರೈಸ್ತ ಧರ್ಮಸಂಸ್ಥಾಪನೆಯ ಧರ್ಮಗುರುಗಳು. ಈ ವಿದ್ಯಾಸಂಸ್ಥೆಯು ೧೯೯೦ ನ೦ತರ ಗಮನಾರ್ಹವಾದ ಅಭಿವೃದ್ದಿಯನ್ನು ಕಾಣುತ್ತಿದೆ. ಕಾಲೇಜಿನ ಪ್ರಪ್ರಥಮ ಪ್ರಾಂಶುಪಾಲರಾದ ಫಾ||ಅ೦ತೊಣಿ ಕರಿಯಲ್ ರವರು ಬಹಳ ಶಿಸ್ತು ಮತ್ತು ಸಂಯಮದಿಂದ ಕಾರ್ಯ ನಿರ್ವಹಿಸಿ ಸಂಸ್ಥೆಯ ಪ್ರಗತಿಗೆ ಕಾರಣರಾದರು. ಪ್ರಸ್ತುತ ಕರ್ನಲ್ ಡಾ||ಫಾ|| ಥಾಮಸ್ ಸಿ. ಮ್ಯಾಥ್ಯು ಅವರು ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಯು ಇಂದು ಭಾರತದ ಅತ್ಯುತ್ತಮ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ.

ಯುಜಿಸಿ ಪ್ರಾಯೊಜಿತ ನ್ಯಾಶನಲ್ ಅಸೆಸ್ಮೆಂಟ್ ಆಂಡ್ ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್)ನಿಂದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆ ಎಂದು ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಕಾಲೇಜೆಂಬ ಗರಿಮೆ ಈ ಸಂಸ್ಥೆಗಿದೆ. ೧೯೯೮ರಲ್ಲಿ ಮೊದಲ ಬಾರಿ ಆನಂತರ ೨೦೦೫ರಲ್ಲಿ ಮತ್ತೊಮ್ಮೆ ನ್ಯಾಕ್ ಮಾನ್ಯತೆಯನ್ನು ಈ ಸಂಸ್ಠೆ ಪಡೆದಿದೆ. ಪ್ರಸ್ತುತ ನ್ಯಾಕ್ ನಿಂದ ಏ ಪ್ಲಸ್ (A+) ಅತ್ಯುನ್ನತೆ ದರ್ಜೆಯನ್ನು ಪಡೆದಿರುವ ಶೈಕ್ಷಣಿಕ ಸಂಸ್ಥೆಯು ಇದಾಗಿದ್ದು " ಶ್ರೇಷ್ಠತೆಗೆ ಸಂಭಾವ್ಯತೆ" ಇರುವ ಕಾಲೇಜ್ ಎಂದು ಗುರುತಿಸಲ್ಪಟ್ಟಿತ್ತು.

ಜನಪ್ರಿಯ ಆಂಗ್ಲ ವಾರಪತ್ರಿಕೆ "ಇಂಡಿಯಾ ಟುಡೆ", ಇಸವಿ ೨೦೧೫ರಲ್ಲಿ ದೇಶಾದ್ಯಂತ ವಿದ್ಯಾಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧ ಪಟ್ಟಂತೆ ನಡೆಸಿದ ಸಮೀಕ್ಷೆಯ ಪ್ರಕಾರ ಕ್ರೈಸ್ಟ್ ಯೂನಿವರ್ಸಿಟಿಯು ಬಿಬಿಎ (BBA) ಹಾಗು ಬಿಸಿಎ (BCA) ಪದವಿ ಶಿಕ್ಷಣ ನೀಡುವ ಭಾರತದ ಎಲ್ಲಾ ಸಂಸ್ಥೆಗಳ ಪೈಕಿ ಅಗ್ರಗಣ್ಯ ಎಂದು ವರದಿಯಾಗಿದೆ. ಅಂತೆಯೆ ವಿಜ್ಞಾನ ಹಾಗು ಮಾಧ್ಯಮ ಸಂಪರ್ಕ ವಿಷಯಗಳಿಗೆ ಸಂಬಂಧ ಪಟ್ಟ ಪದವಿ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳ ಪೈಕಿ ಮೂರನೇ ಸ್ಥಾನ, ವಾಣಿಜ್ಯ ಹಾಗು ಕಲಾ ವಿಭಾಗಗಳಲ್ಲಿ ೪ನೇ ಸ್ಥಾನ ಹಾಗು ಕಾನೂನು ವಿಭಾಗದಲ್ಲಿ ೧೨ನೇ ಸ್ಥಾನವನ್ನು ಕ್ರೈಸ್ಟ್ ಯೂನಿವರ್ಸಿಟಿ ಗಳಿಸಿದೆ. ಇದಷ್ಟೆ ಅಲ್ಲದೆ ಇದೇ ವರ್ಷ ಮಲಯಾಳ ಮನೊರಮ ಪ್ರಕಾಶನದಿಂದ ಪ್ರಕಟವಾಗುವ ಪ್ರಸಿದ್ಧ ಆಂಗ್ಲ ವಾರಪತ್ರಿಕೆ "ದ ವೀಕ್" ಮತ್ತು "ಹಂಸ" ಸಂಸ್ಥೆ ದೇಶಾದ್ಯಂತ ಜಂಟಿಯಾಗಿ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ ಕ್ರೈಸ್ಟ್ ಯೂನಿವರ್ಸಿಟಿ ಕಲಾ ಕಾಲೇಜುಗಳ ಪೈಕಿ ೯ನೇ ಸ್ಥಾನದಲ್ಲಿ, ವಾಣಿಜ್ಯ ಕಾಲೇಜುಗಳ ಪೈಕಿ ೬ನೇ ಸ್ಥಾನದಲ್ಲಿ ಹಾಗು ವಿಜ್ಞಾನ ಕಾಲೇಜುಗಳ ಪೈಕಿ ೮ನೇ ಸ್ಥಾನದಲ್ಲಿದೆ. ಇದಲ್ಲದೆ ದಕ್ಷಿಣ ವಲಯದಲ್ಲಿರುವ ಖಾಸಗಿ ಕಾನೂನು ಕಾಲೇಜುಗಳ ಪೈಕಿ ಕ್ರೈಸ್ಟ್ ಯೂನಿವರ್ಸಿಟಿಯ "ಸ್ಕೂಲ್ ಆಫ್ ಲಾ" ಅಗ್ರ ಸ್ಥಾನದಲ್ಲಿದ್ದು ಖಾಸಗಿ ಹೊಟೇಲ್ ಮ್ಯಾನೆಜ್ಮೆಂಟ್ ಕಾಲೇಜುಗಳ ಪೈಕಿ ೨ನೆ ಸ್ಥಾನದಲ್ಲಿದೆ. ಅಖಿಲ ಭಾರತೀಯ ಮಟ್ಟದಲ್ಲಿ ಖಾಸಗಿ ಹೊಟೇಲ್ ಮ್ಯಾನೆಜ್ಮೆಂಟ್ ಕಾಲೇಜುಗಳ ಪೈಕಿ ಕ್ರೈಸ್ಟ್ ಯೂನಿವರ್ಸಿಟಿಯು ೪ನೇ ಸ್ಥಾನದಲ್ಲಿದೆ.ಅಂತೆಯೇ ೨೦೧೪ನೇ ಇಸವಿಯಲ್ಲೂ ಕೂಡ ಇಂಡಿಯಾ ಟುಡೆ-ನೀಲ್ಸ್ ಸಂಸ್ಥೆ ದೇಶಾದ್ಯಂತ ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ ಕ್ರೈಸ್ಟ್ ಯೂನಿವರ್ಸಿಟಿಯು ಬಿಬಿಎ (BBA) ಪದವಿ ಶಿಕ್ಷಣ ನೀಡುವ ಭಾರತದ ಎಲ್ಲಾ ಸಂಸ್ಥೆಗಳ ಪೈಕಿ ಅಗ್ರಗಣ್ಯ ಎಂದು ವರದಿಯಾಗಿತ್ತು.

ಉಪಕುಲಪತಿಗಳು[ಬದಲಾಯಿಸಿ]

 1. ಕರ್ನಲ್ ಡಾ||ಫಾ|| ಥಾಮಸ್ ಸಿ. ಮ್ಯಾಥ್ಯು (೨೦೦೮ ರಿಂದ)

ಆವರಣ[ಬದಲಾಯಿಸಿ]

ಸೌಂದರ್ಯಪ್ರಜ್ಞೆ ಕ್ರೈಸ್ಟ್ ಯೂನಿವರ್ಸಿಟಿಯ ಬಹಳಷ್ಟು ವೈಶಿಷ್ಟ್ಯಗಳಲ್ಲಿ ಒಂದು. ಧರ್ಮರಾಮ್ ಕಾಲೇಜ್ ಸೇರಿ ಸುಮಾರು ೧೦೦ ಎಕರೆ ವಿಸ್ತೀರ್ಣ ಹೊಂದಿರುವ ವಿಶ್ವವಿದ್ಯಾನಿಲಯದ ಆವರಣದ ಮೆರುಗೆ ಇಲ್ಲಿ ಕಂಗೊಳಿಸುತ್ತಿರುವ ಪ್ರಕೃತಿ ಸೌಂದರ್ಯ. ವಿಧವಿಧವಾದ ಸಸ್ಯರಾಶಿಯನ್ನು ಹೊಂದಿರುವ ಈ ಆವರಣಕ್ಕೆ ಕಾಲಿಟ್ಟವರಿಗೆ ಮನೋಲ್ಲಾಸ, ಆರೋಗ್ಯ ಕಟ್ಟಿಟ್ಟ ಬುತ್ತಿ. ವಿದ್ಯಾಭ್ಯಾಸಕ್ಕೆ/ಸಂಶೋಧನೆಗೆ ಅನುಕೂಲಕರವಾಗಿರುವ ಸಸ್ಯ ತಳಿಗಳನ್ನು ಕೂಡ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗ ಇಲ್ಲಿ ಯಥೇಚ್ಛವಾಗಿ ಬೆಳೆಸಿದೆ. ಸತತವಾಗಿ ೨೦ ವರ್ಷ "ಅತ್ಯುತ್ತಮ ಸಂಸ್ಥಾಪೋಷಿತ ಉದ್ಯಾನವನ" ಎಂದು ಮೈಸೂರು ತೊಟಗಾರಿಕೆ ಸಮಾಜದಿಂದ ಶ್ಲಾಘನೆಗೆ ಒಳಪಟ್ಟಿರುವುದು ಕ್ರೈಸ್ಟ್ ಯೂನಿವರ್ಸಿಟಿಯ ಪರಿಸರಪ್ರೇಮಕ್ಕೆ ಸಾಕ್ಷಿ. ಇದಷ್ಟೇ ಅಲ್ಲ! ನಿರಂತರ ೩ ವರ್ಷ (ಇಸವಿ ೨೦೦೦ ರಿಂದ ೨೦೦೨) "ಅತ್ಯುತ್ತಮ ಸಂಸ್ಥಾಪೋಷಿತ ಕಟ್ಟಡ ಹಾಗು ಉದ್ಯಾನವನ" ಎಂದು ಬೆಂಗಳೂರು ನಗರ ಕಲಾ ಆಯೋಗದ ವತಿಯಿಂದ ಈ ಶಿಕ್ಷಣ ಸಂಸ್ಥೆಯು ಪುರಸ್ಕೃತವಾಗಿದೆ. ಪರಿಸರ ಸಂರಕ್ಷಣೆ ಹಾಗು ಅದರ ಬಗ್ಗೆ ಅರಿವು/ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ವಿಶ್ವವಿದ್ಯಾನಿಲಯವು ಗುಣಾತ್ಮಕ ಪಾತ್ರವನ್ನು ವಹಿಸುತ್ತಿರುವುದು ತನ್ನ ಆವರಣದ ಮಾದರಿ ನಿರ್ವಹಣೆ ಮುಖಾಂತರ. "ಸ್ವಚ್ಛ ಆವರಣ, ಸ್ವಚ್ಛ ವಾತಾವರಣ" ಎಂಬ ಧೋರಣೆಯನ್ನು ಯಕಶ್ಚಿತ್ ಅಳವಡಿಸಿಕೊಂಡಿರುವ ಕ್ರೈಸ್ಟ್ ಯೂನಿವರ್ಸಿಟಿ ಕಸರಹಿತ ಆವರಣವನ್ನು ಅಕ್ಷರಶಃ ನಿಭಾಯಿಸಿಕೊಂದು ಬಂದಿದೆ.

ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡಿರುವ ಈ ವಿಶ್ವವಿದ್ಯಾನಿಲಯದ ಆವರಣದಲ್ಲಿ ಒಣ ಮತ್ತು ಒದ್ದೆ (ಆಹಾರ) ತ್ಯಾಜ್ಯವನ್ನು ವಿಂಗಡಿಸಿ ಮರುಬಳಕೆಗೆ ಒಡ್ಡಲಾಗುತ್ತದೆ. "ಕಸದಿಂದ ರಸ" ತೆಗೆಯಲೆಂದೇ ಸ್ಥಾಪಿಸಲಾದ "ಪರಿವರ್ತನ" ಎಂಬ ತ್ಯಾಜ್ಯ ನಿರ್ವಹಣಾ ಹಾಗು ಮರುಬಳಕಾ ಘಟಕದಲ್ಲಿ ಕಸದ ಬುಟ್ಟಿ ಸೇರಿದ ಕಾಗದ ಹಾಗು ತಂಪು ಪಾನಿಯದ ಪ್ಯಾಕೆಟ್ಟುಗಳಿಂದ ಕಡತ ಮತ್ತಿತರ ಲೇಖನಾ ಸಾಮಾಗ್ರಿಗಳನ್ನು ತಯಾರಿಸಿ ಮಾರಾಟಕ್ಕಿಡಲಾಗುತ್ತದೆ. ಅಂತೆಯೆ ಆಹಾರ ತ್ಯಾಜ್ಯವನ್ನು ಅವರಣದಲ್ಲಿರುವ ಜೈವಿಕ ಅನಿಲ ಸ್ಥಾವರಕ್ಕೆ ಉಣಿಸಲಾಗುತ್ತದೆ. ಕ್ರೈಸ್ಟ್ ಯೂನಿವರ್ಸಿಟಿ ಆವರಣಕ್ಕೆ ಸೇರ್ಪಡೆಯಾಗಿರುವ ಧರ್ಮಾರಾಮ್ ಕಾಲೇಜಿನ ಸುಮಾರು ಒಂದು ಸಾವಿರ ನಿವಾಸಿ ವಿದ್ಯಾರ್ಥಿಗಳು ಹಾಗು ಸಿಬ್ಬಂದಿವರ್ಗದವರಿಗೆ ಅಡುಗೆ ತಯಾರಾಗುವುದು ಇದೇ ಜೈವಿಕ ಅನಿಲದಿಂದ.

ವಾಸ್ತುಶಿಲ್ಪ[ಬದಲಾಯಿಸಿ]

ಕ್ರೈಸ್ಟ್ ಯೂನಿವೆರ್ಸಿಟಿಯ ಆವರಣವನ್ನು ೬ ಕಟ್ಟಡ ವಿಭಾಗಗಳಾಗಿ ವಿಂಗಡಿಸಲಾಗಿದೆ-

೧) ಸಭಾಂಗಣ ವಿಭಾಗ

೨) ಕೇಂದ್ರೀಯ ವಿಭಾಗ

೩) ವಿಭಾಗ ೧

೪) ವಿಭಾಗ ೨

೫) ವಿಭಾಗ ೩

೬) ವಿಭಾಗ ೪.

ವಿಭಾಗ ೪ನ್ನು ೨೦೧೫ರಲ್ಲಿ ಉದ್ಘಾಟಿಸಲಾಯಿತು. ವಿಭಾಗ ೧ರಲ್ಲಿ ೩ನೇ ಸೆಮಿಸ್ಟರ್ ಸಿಬಿಜ಼್, ೫ನೇ ಸೆಮಿಸ್ಟರ್ ಬಿಸಿಬಿ/ಬಿಸಿಜ಼್, ಹೊಸ ಜೈವಿಕ ತಂತ್ರಜ್ಞಾನ ಪ್ರಯೋಗಾಲಯ, ೧ನೇ ಸೆಮಿಸ್ಟರ್ ಸಿಎಮ್ಇ, ೩ನೇ ಸೆಮಿಸ್ಟರ್ ಪಿಎಸ್ ಇಂಗ್ಲಿಷ್, ೫ನೇ ಸೆಮಿಸ್ಟರ್ ಸಿಬಿಜ಼್/ಬಿಸಿಜ಼್, ರಸಾಯನಶಾಸ್ತ್ರ ಪ್ರಯೋಗಾಲಯ, ಸಾಮಾನ್ಯ ಉಪಕರಣ ಪ್ರಯೋಗಾಲಯ, ೧ನೇ ಸೆಮಿಸ್ಟರ್ ಪಿಎಸ್ ಇಂಗ್ಲಿಷ್, ೩ನೇ ಸೆಮಿಸ್ಟರ್ ಇಪಿಎಸ್, ೩ನೇ ಸೆಮಿಸ್ಟರ್ ಹೆಚ್ಇಪಿ, ೫ನೇ ಸೆಮಿಸ್ಟರ್ ಪಿಎಮ್ಇ/ಪಿಸಿಎಮ್, ೩ನೇ ಸೆಮಿಸ್ಟರ್ ಪಿಎಸ್ಇಕೊ, ೫ನೇ ಸೆಮಿಸ್ಟರ್ ಪಿಎಸ್ಇಕೊ, ನೇ ಸೆಮಿಸ್ಟರ್ ಪಿಸಿಎಮ್,೧ನೇ ಸೆಮಿಸ್ಟರ್ ಪಿಎಸ್ಇಕೊ, ೩ನೇ ಸೆಮಿಸ್ಟರ್ ಪಿಎಸ್ಇಕೊ, ೧ನೇ ಸೆಮಿಸ್ಟರ್ ಇಪಿಎಸ್, ೧ನೇ ಸೆಮಿಸ್ಟರ್ ಹೆಚ್ಇಪಿ, ೫ನೇ ಸೆಮಿಸ್ಟರ್ ಹೆಚ್ಇಪಿ, ೫ನೇ ಸೆಮಿಸ್ಟರ್ ಇಪಿಎಸ್, ೩ನೇ ಸೆಮಿಸ್ಟರ್ ಜೆಪಿಇಂಗ್ಲಿಷ್/ಪಿಇಪಿ, ೧ನೇ ಸೆಮಿಸ್ಟರ್ ಬಿಸಿಜ಼್, ೧ನೇ ಸೆಮಿಸ್ಟರ್ ಬಿಸಿಬಿ, ೧ನೇ ಸೆಮಿಸ್ಟರ್ ಸಿಬಿಜ಼್, ೧ನೇ ಸೆಮಿಸ್ಟರ್ ಎಮ್ ಸಿಹೆಚ್ ಇ, ೫ನೇ ಸೆಮಿಸ್ಟರ್ ಬಿಎ ಸೈಕಾಲೊಜಿ ಹಾನರ್ಸ್, ೩ನೇ ಸೆಮಿಸ್ಟರ್ ಎಮ್ಎಸ್ ಸಿ ಕೆಮಿಸ್ಟ್ರಿ ಹಾಗೂ ಎಮ್ ಎಸ್ ಎಫ಼್ ಎಮ್ ತರಗತಿಗಳನ್ನು ನಡೆಸಲಾಗುತ್ತದೆ. ಇದಲ್ಲದೆ ಒಂದು ಕಿರುಸಭಾಂಗಣ, ೨ ರಸಾಯನಶಾಸ್ತ್ರ ಪ್ರಯೋಗಾಲಯಗಳು, ಒಂದು ಸಸ್ಯಶಾಸ್ತ್ರ ಹಾಗು ಒಂದು ಪ್ರಾಣಿಶಾಸ್ತ್ರ ಪ್ರಯೋಗಾಲಯಗಳನ್ನು ಈ ವಿಭಾಗ ಹೊಂದಿದೆ. ಸಮಾಜಶಾಸ್ತ್ರ ಸಿಬ್ಬಂದಿ ಕೊಠಡಿ, ಪರೀಕ್ಷಾ ನಿಯಂತ್ರಕರ ಕಛೇರಿ, ವಿಶ್ವವಿದ್ಯಾನಿಲಯದಿಂದ ನಡೆಸಲ್ಪಡುತ್ತಿರುವ ಸಮಾಜಸೇವಾ ಸಂಸ್ಥೆಯಾದ ಸೆಂಟರ್ ಫಾರ್ ಸೊಶಿಯಲ್ ಆಕ್ಷನ್ (ಸಿಎಸ್ಎ) ಕಛೇರಿ, ಅಂತರ್ರಾಷ್ಟೀಯ ವ್ಯವಹಾರಗಳ ಕಛೇರಿ, ದೈಹಿಕ ಶಿಕ್ಷಣ ವಿಭಾಗದ ಕಛೇರಿ, ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ ಸಿಬ್ಬಂದಿ ಕೊಠಡಿಗಳು ಹಾಗು ಮಾನವಿಕ ಮತ್ತು ವಿಜ್ಞಾನ ವಿಭಾಗೀಯ ಮುಖ್ಯಸ್ಥರ ಕಛೇರಿಗಳು ಕೂಡ ಇದೇ ಕಟ್ಟಡದಲ್ಲಿವೆ. ವಿಭಾಗ ೧ರ ಕಟ್ಟಡ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲ್ಪಟ್ಟ ಮೊಟ್ಟ ಮೊದಲ ಕಟ್ಟಡವಾಗಿದ್ದು ಹಿಂದೆ ಇದೇ ಕ್ರೈಸ್ಟ್ ಕಾಲೇಜಾಗಿತ್ತು.

ವಿಭಾಗ ೨ರಲ್ಲಿ ೪೮ ತರಗತಿ ಕೊಠಡಿಗಳಲ್ಲದೆ ಶುಶ್ರೂಷಾ ಕಛೇರಿ, ಬಿಹೆಚ್ಎಮ್ (ಹೊಟೇಲ್ ಮ್ಯಾನೆಜ್ಮೆಂಟ್) ಕಛೇರಿ ಹಾಗು ಗೋದಾಮು, ಧೋಬಿಖಾನೆ, ಮಹಿಳಾ ವಿಶ್ರಾಂತಿ ಗೃಹ, ೩ ಭೌತಶಾಸ್ತ್ರ ಪ್ರಯೋಗಾಲಯಗಳು ಹಾಗು ಒಂದು ಸಮಾವೇಶಾಕೊಠಡಿ ಇವೆ.

ವಿಭಾಗಗಳು[ಬದಲಾಯಿಸಿ]

ಭಾಷಾ ವಿಭಾಗಗಳು[ಬದಲಾಯಿಸಿ]

 • ಕನ್ನಡ

ಕ್ರೈಸ್ಟ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಇಲ್ಲಿನ ಕನ್ನಡ ವಿಭಾಗ ಅದರ ಕನ್ನಡ ಸಂಘದ ಮೂಲಕ ಹೆಸರು ಪಡೆದಿದೆ. ಚಿ.ಶ್ರೀನಿವಾಸರಾಜು ಅವರು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕನ್ನಡ ಸಂಘವನ್ನು ಕಟ್ಟಿ ಕನ್ನಡ ಸಂಸ್ಕೃತಿಯ ಉಳಿವು, ಅರಿವು ಹಾಗು ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಹಿಂದೊಮ್ಮೆ ಕ್ರೈಸ್ಟ್ ಕಾಲೇಜ್ ಆಗಿದ್ದ ಈ ಶಿಕ್ಷಣ ಸಂಸ್ಥೆಯು ಈಗ ವಿಶ್ವವಿದ್ಯಾನಿಲಯವಾಗಿ ಹೆಸರು ಗಳಿಸಿದೆ. ಇಲ್ಲಿ ಕನ್ನಡಕ್ಕೆ ವಿಶೇಷ ಆದ್ಯತೆ ಇದೆ. ಪುಸ್ತಕ ಪ್ರಕಟಣೆ, ಯಕ್ಷಗಾನ ತರಬೇತಿ ಮತ್ತು ಪ್ರದರ್ಶನ, ಕನ್ನಡ ನಾಟಕ, ಅಂತರ್ ತರಗತಿ ಸ್ಪರ್ಧೆಗಳು, ವಾಗರ್ಥ ವಿದ್ಯಾರ್ಥಿ ಪತ್ರಿಕೆ ಮೊದಲಾದ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಕನ್ನಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ನಾಡಿನಾದ್ಯಂತ ಹೆಸರು ಗಳಿಸಿದೆ. ಈಗ ಕನ್ನಡ ವಿಭಾಗವು ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಬರೆಯಲು ತರಬೇತಿ ನೀಡುತ್ತಿದೆ. ಪ್ರಸ್ತುತ ಕನ್ನಡ ವಿಭಾಗದಲ್ಲಿ ಡಾ. ಶಿವಪ್ರಸಾದ್ ಮತ್ತು ಡಾ. ರತಿ ಎಂ.ಟಿ ಅವರು ಅಧ್ಯಾಪಕರಾಗಿ ಕಾರ್ಯ‍ನಿರ್ವಹಿಸುತ್ತಿದ್ದಾರೆ. ದ.ರಾ ಬೇಂದ್ರೆ ಸ್ಮೃರಣಾರ್ಥ ಅಂತರ ಕಾಲೇಜು ಕವನ ಸ್ಪರ್ಧೆ, ಅ. ನ. ಕೃ ಸ್ಮಾರಕ ಕಥಾ ಸ್ವರ್ಧೆಗಳು ಇಂದಿಗೂ ಇಲ್ಲಿ ಚಾಲ್ತಿಯಲ್ಲಿವೆ.


 • ಹಿಂದಿ
 • ಸಂಸ್ಕೃತ
 • ತಮಿಳು
 • ಉರ್ದು
 • ಫ್ರೆಂಚ್

ವಿಷಯ ವಿಭಾಗಗಳು[ಬದಲಾಯಿಸಿ]

 • ವಾಣಿಜ್ಯ
 • ವಿಜ್ಞಾನ
 • ಮ್ಯಾನೇಜ್ಮೆಂಟ್
 • ಕಾನೂನು
 • ಮಾನವಿಕ

ಹೊರಗಿನ ಸಂಪರ್ಕಗಳು[ಬದಲಾಯಿಸಿ]