ವಿಶ್ವವಿದ್ಯಾಲಯ ಧನಸಹಾಯ ಆಯೋಗ
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ನಿರ್ವಹಣೆಗಾಗಿ 1956ರಲ್ಲಿ ಕೇಂದ್ರ ಸರಕಾರದಿಂದ ಸ್ಥಾಪಿಸಲ್ಪಟ್ಟ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುತ್ತದೆ ಮತ್ತು ಅಂತಹ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿಕಾಸಕ್ಕಾಗಿ ಧನ ಸಹಾಯ ಮಾಡುತ್ತದೆ. [೧]
ಖ್ಯಾತ ಶಿಕ್ಷಣತಜ್ಞರಾದ ಪ್ರೊ.ವೇದ ಪ್ರಕಾಶ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅದ್ಯಕ್ಷರಾಗಿ ೧೮ ಜನೇವರಿ ೨೦೧೩ರಂದು ನೇಮಕಗೊಂಡಿದ್ದಾರೆ. [೨]
ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಧಾನ ಕಛೇರಿ ದೆಹಲಿಯಲ್ಲಿದ್ದು, ಪುಣೆ, ಭೋಪಾಲ್, ಕೊಲ್ಕತ್ತ, ಹೈದರಾಬಾದ್, ಗುವಾಹಾಟಿ ಮತ್ತು ಬೆಂಗಳೂರು ನಗರಗಳಲ್ಲಿ ಆರು ಪ್ರಾದೇಶಿಕ ಕಛೇರಿಗಳಿವೆ.
೧೯೪೫ನಲ್ಲಿ ಈ ಆಯೋಗ ಅಲಿಘರ್ ಬನಾರಸ್ ಮತ್ತು ದೆಲ್ಲಿ ವಿಶ್ವವಿಧ್ಯಾಲಯಗಳ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಪ್ರಾರಂಭವಾಯಿತು ನಂತರ ೧೯೫೨ನಲ್ಲಿ ಸರ್ಕಾರ ಎಲ್ಲಾ ವಿಶ್ವವಿಧ್ಯಾಲಯಗಳಿಗೂ ಆಯೋಗವನ್ನು ನೀಡಲು ನಿರ್ಧರಿಸಿತು.
ಉಲ್ಲೇಖ