ಸೌತ್ ಇಂಡಿಯನ್ ಬ್ಯಾಂಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೌತ್ ಇಂಡಿಯನ್ ಬ್ಯಾಂಕ್
ಸ್ಥಾಪನೆ೧೯೨೯
ಮುಖ್ಯ ಕಾರ್ಯಾಲಯಎಸ್ಐಬಿ ಹೌಸ್, ಮಿಷನ್ ಕ್ವಾರ್ಟರ್ಸ್, ತ್ರಿಸ್ಸೂರು ಸಿಟಿ, ಕೇರಳ, ಭಾರತ, ೬೮೦೦೦೧
ಪ್ರಮುಖ ವ್ಯಕ್ತಿ(ಗಳು)ವಿಜೆ ಮ್ಯಾಥ್ಯೂ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ
ಉತ್ಪನ್ನಸಾಲ, ಉಳಿತಾಯ ಖಾತೆ , ವಿಮೆ ಪದ್ಧತಿ.
ಜಾಲತಾಣwww.southindianbank.com

ಸೌತ್ ಇಂಡಿಯನ್ ಬ್ಯಾಂಕ್ ಪ್ರಮುಖವಾಗಿ ಖಾಸಗಿ ವಲಯದ ಬ್ಯಾಂಕ್ ಹಾಗು ಇದರ ಕೇಂದ್ರ ಕಾರ್ಯಾಲಯ ಭಾರತಕೇರಳದಲ್ಲಿ ಇರುವ ತ್ರಿಶೂರು ಎಂಬ ಸಿಟಿಯಲ್ಲಿ ಇದೆ. ಸೌತ್ ಇಂಡಿಯನ್ ಬ್ಯಾಂಕ್ ೮೩೯ ಶಾಖೆಗಳನ್ನು ಹೊಂದಿದೆ.೪ ಸೇವಾ ಶಾಖೆಗಳನ್ನು ಹೊಂದಿದೆ. ಮತ್ತು ಇದರ ೨೦ ಪ್ರಾದೇಶಿಕ ಕಛೇರಿಗಳು, ೨೭ ಹೆಚ್ಚು ರಾಜ್ಯಗಳಲ್ಲಿ ಮತ್ತು ಭಾರತದಲ್ಲಿ ೩ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೆ. ಸೌತ್ ಇಂಡಿಯನ್ ಬ್ಯಾಂಕ್ ೧೩೦೭ ಎಟಿಎಂಗಳನ್ನು ಹೊಂದಿದೆ. ಹಾಗು ಭಾರತದಾದ್ಯಂತ ನಗದು ಠೇವಣಿ ಯಂತ್ರಗಳು ಎಲ್ಲ ಬ್ಯಾಂಕ್ ಗಳಲ್ಲಿ ಇದೆ.ನಗದು ಠೇವಣಿ ಯಂತ್ರಗಳಲ್ಲಿ ಗ್ರಾಹಕರು ೨೦೦೦೦೦ ಕಿಂತ ಕಡಿಮೆ ಹಣ್ಣವನ್ನು ಜಮ ಮಾಡಬಹುದು. ಸೌತ್ ಇಂಡಿಯನ್ ಬ್ಯಾಂಕ್ ಎಲ್ಲ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸೌತ್ ಇಂಡಿಯನ್ ಬ್ಯಾಂಕ್ ಭಾರತದಲ್ಲಿ ಖಾಸಗಿ ವಲಯದ ಬ್ಯಾಂಕುಗಳ ನಡುವೆ ೮ ನೇ ದೊಡ್ಡ ಶಾಖೆಅಗಿದೆ. ಸೌತ್ ಇಂಡಿಯನ್ ಬ್ಯಾಂಕ್ ವಿಷನ್ ಗ್ರಾಹಕ ಸೇವೆ ಹಾಗು ಹೂಡಿಕೆದಾರ ಮೌಲ್ಯ ಮತ್ತು ಸಾಂಸ್ಥಿಕ ಆಡಳಿತದ ಪ್ರದೇಶಗಳಲ್ಲಿ ಹೆಚ್ಚು ಆದ್ಯತೆಯ ಕೊಡುವುದು. ಮತ್ತು ಇದರ ಗುರಿ ತಮ್ಮ ಗ್ರಾಹಕರಿಗೆ ಸುರಕ್ಷಿತ ಒದಗಿಸುವುದು ಹಾಗು ಗುಣಮಟ್ಟ, ಪ್ರಕ್ರಿಯೆಗಳು ನಿಯೋಜಿಸುವುದು.[೧]

ಇತಿಹಾಸ[ಬದಲಾಯಿಸಿ]

ಸೌತ್ ಇಂಡಿಯನ್ ಬ್ಯಾಂಕ್ ೧೯೧೩ ರ ಕಂಪನಿಗಳ ಕಾಯ್ದೆಯಡಿ ಖಾಸಗಿ ಕಂಪನಿಯಾಗಿ ನೋಂದಣಿಯಾಗಿ ತ್ರಿಸ್ಸೂರು ನಲ್ಲಿ ೨೯-೦೧-೧೯೨೯ ರಲ್ಲಿ ವ್ಯಾಪಾರ ಆರಂಭಿಸಿದರು.ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ೪೪ ಉದ್ಯಮಶೀಲ ಗುಂಪೊಂದನ್ನು ರೂಪುಗೊಂಡಿದೆ ಹಾಗು ಆರಂಭಿಕದಲ್ಲಿ ಅವರ ಪ್ರತಿ ಬಂಡವಾಳ ೨೨೦೦೦ ಪಾವತಿ ಮಾಡಿದರು.ಅವರ ಮುಖ್ಯ ಉದ್ದೇಶ ತ್ರಿಸ್ಸೂರು ವ್ಯಾಪಾರಿ ಸಮುದಾಯಕ್ಕೆ ಸಹಾಯ ಮಾಡುವುದು.ಮತ್ತು ಆಸಕ್ತಿಯ ಅತಿಯಾದ ದರಗಳ ಆರೋಪದ ಹಣವನ್ನು ಕಡಿಮೆ ಮಾಡುವುದು.ಸೌತ್ ಇಂಡಿಯನ್ ಬ್ಯಾಂಕ್ ಸಾರ್ವಜನಿಕರಿಂದ ಬಹಳ ಉತ್ತಮ ಬೆಂಬಲ ಪಡೆದ.ಆರಂಭದಲ್ಲಿ ಬೆಳವಣಿಗೆ ನಿಧಾನ ಮತ್ತು ಸ್ಥಿರವಾಗಿತ್ತು ನಂತರ ಅದರ ಬೆಳವಣಿಗೆ ತುಂಬ ವೇಗವಾಗಿ ಸಾಗಿತು.ಪ್ರತಿ ವರ್ಷವು ಸೌತ್ ಇಂಡಿಯನ್ ಬ್ಯಾಂಕ್ ಶಾಖೆಗಳ ಸಂಖ್ಯೆ ಸ್ಥಿರತೆ ಹೆಚ್ಚುತಿದೆ ಮತ್ತು ಜನಪ್ರಿಯತೆವಾಗುತಿದೆ.ಇದು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಎರಡನೇ ವೇಳಾಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ೦೭-೦೮-೧೯೪೬ ರಂದು ನಿಗದಿತ ಬ್ಯಾಂಕ್ ಎಂದು ಗೋಷಿಸಾಲಾಗಿಹಿತ್ತು.ಸೌತ್ ಇಂಡಿಯನ್ ಬ್ಯಾಂಕ್ ಕೇರಳದಲ್ಲಿ ಖಾಸಗಿ ವಲಯದ ಮೊದಲ ನಿಗದಿತ ಬ್ಯಾಂಕ್. ಹಾಗು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ೧೯೪೯ ಸೆಕ್ಷನ್ ೨೨ ಅಡಿಯಲ್ಲಿ ಪರವಾನಗಿ ಪಡೆಯಿತು.

ಬ್ರ್ಯಾಂಡ್ ರಾಯಭಾರಿ[ಬದಲಾಯಿಸಿ]

ಮಮ್ಮುಟ್ಟಿ ಸೌತ್ ಇಂಡಿಯನ್ ಬ್ರಾಂಡ್ ರಾಯಭಾರಿ

ಮಲಯಾಳಿ ಸೂಪರ್ ಸ್ಟಾರ್ ಮಮ್ಮುಟ್ಟಿ ಬ್ಯಾಂಕ್ ಬ್ರ್ಯಾಂಡ್ ರಾಯಭಾರಿಯಾದರು.ಮಮ್ಮುಟ್ಟಿ ಅವರು ಭಾರತದ ನಟ ಮತ್ತು ನಿರ್ಮಾಪಕರಾಗಿದ್ದು, ಮುಖ್ಯವಾಗಿ ಮಲೆಯಾಳಂ ಸಿನೆಮಾದಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೆಲವು ತಮಿಳು, ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.[೨]

ನಿರ್ದೇಶಕರ ಮಂಡಳಿ[ಬದಲಾಯಿಸಿ]

  • ಶ್ರಿ ಸಲೀಂ ಗಂಗಾಧರನ್ನ್ -ಕಾರ್ಯನಿರ್ವಾಹಕ ಅಧ್ಯಕ್ಷ,
  • ವಿಜೆ ಮ್ಯಾಥ್ಯೂ -ನಿರ್ದೇಶಕ ಹಾಗೂ ಸಿಇಒ ವ್ಯವಸ್ಥಾಪಕ,
  • ಮೋಹನ್ ಇ ಅಲಪಟ್-ನಿರ್ದೇಶಕ,
  • ಕೆ ಥಾಮಸ್ ಜಾಕೋಬ್-ನಿರ್ದೇಶಕ,
  • ಜಾನ್ ಜೋಸೆಫ್-ನಿರ್ದೇಶಕ,
  • ಫ್ರಾನ್ಸಿಸ್ ಅಲಪಟ್-ನಿರ್ದೇಶಕ,
  • ಚೇರಿಯನ್ ವ್ರಾಕೆ-ನಿರ್ದೇಶಕ,
  • ರಂಜನಾ ಸಲಗಾಂವಕರ್- ನಿರ್ದೇಶಕ,[೩]

ಶಾಖೆಗಳು[ಬದಲಾಯಿಸಿ]

ಬ್ಯಾಂಕ್ ತನ್ನ ಶಾಖೆಗಳನ್ನು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಛತ್ತೀಸ್ಗಢ ಹಾಗು ಹಲವು ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.ಸೌತ್ ಇಂಡಿಯನ್ ಬ್ಯಾಂಕ್ ಹಳ್ಳಿಗಳಲ್ಲಿ ನೇರ ಉದ್ಯಮ ಹಾಗು ಕರೆಸ್ಪಾಂಡೆಂಟ್ಸ್ ಉದ್ಯಮ ನೇಮಕಮಾಡಿಕೊಳಲು ಎಫ್ಐಪಿ ಸೆಲ್ ಅಧಿಕಾರಿಗಳನ್ನು ನೇಮಕಮಾಡಿದೆ.ಸೌತ್ ಇಂಡಿಯನ್ ಬ್ಯಾಂಕ್ ಉಳಿತಾಯ ಖಾತೆ,ನಮ್ಮೊಂದಿಗೆ ಉಳಿತಾಯ ಖಾತೆ ಸುರಕ್ಷಿತ ಮತ್ತು ಅನುಕೂಲಕರದ ರೀತಿಯಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಹಣಕಾಸು ವ್ಯವಹಾರಗಳ ಅನುಕೂಲಕರ ರೀತಿಯಲ್ಲಿ ಒದಗಿಸುತ್ತದೆ.ಹಾಗು ಶಕ್ತಿಯುತ ತಂತ್ರಜ್ಞಾನ ಆಧಾರಿತವಾಗಿ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತದೆ.ನಿಮ್ಮ ನಿಖರವಾದ ಅವಶ್ಯಕತೆ ಸರಿಹೊಂದುವಂತೆ ಉಳಿತಾಯ ಖಾತೆಗಳು ವಿಭಿನ್ನ ರೀತಿಗಳಿವೆ.ಸೌತ್ ಇಂಡಿಯನ್ ಬ್ಯಾಂಕ್ ಗುಂಪು ಸಂಬಳ ಉಳಿತಾಯ ಖಾತೆಗಳನ್ನು ತಮ್ಮ ಗ್ರಾಹಕರಿಗೆ ಒದಗಿಸುತ್ತದೆ,ಗುಂಪು ಸಂಬಳ ಉಳಿತಾಯ ಖಾತೆ ಎಂದರೆ ವಿವಿಧ ವ್ಯಾಪಾರ ನೌಕರರು ತಮ್ಮ ಸಂಬಳವನ್ನು ಉಳಿತಾಯ ಮಾಡುವುದು.ಈ ಯೋಜನೆ ಅನೇಕ ಅನುಕೂಲಗಳು ಹೊಂದಿದೆ,ಮತ್ತು ಈ ಉಪಯೋಗಗಳು ಒಂದು ಸಾಮಾನ್ಯ ಉಳಿತಾಯ ಖಾತೆಯವರು ಪಡೆಯಬವುದು.ಸೌತ್ ಇಂಡಿಯನ್ ಬ್ಯಾಂಕ್ ಹಣ ವರ್ಗಾವಣೆ ಇದರಲ್ಲಿ ಎರಡು ರೀತಿಯಗಳು ಇವೆ.ಮೊದಲನೆಯದು ದೇಶೀಯ ವರ್ಗಾವಣೆ,ಎರಡನೇಯದು ಅಂತಾರಾಷ್ಟ್ರೀಯ ವರ್ಗಾವಣೆ, ದೇಶೀಯ ವರ್ಗಾವಣೆ ಎಂದರೆ ಭಾರತದಲ್ಲಿ ಮಾತ್ರ ಹಣ ವರ್ಗಾವಣೆ ಮಾಡುವುದು,ಅಂತಾರಾಷ್ಟ್ರೀಯ ವರ್ಗಾವಣೆ ಎಂದರೆ ಭಾರತದಿಂದ ಯಾವುದೇ ಇತರ ದೇಶಗಳಿಗೆ ಹಣ ವರ್ಗಾವಣೆ ಮಾಡುವುದು.ಸೌತ್ ಇಂಡಿಯನ್ ಬ್ಯಾಂಕ್ ಉದ್ಯಮ ಖಾತೆಯ ಸೌಲಭ್ಯಗಳು ಒದಗಿಸುತ್ತದೆ.ನಾವು ವಿವಿಧ ಉದ್ಯಮ ಖಾತೆಗಳ ಅವುಗಳು ಕರೆಂಟ್ ಅಕೌಂಟ್, ಓವರ್ಡ್ರಾಫ್ಟ್, ನಗದು ಸಾಲಗಳು ಮತ್ತು ಮರ್ಕೆಂಟೈಲ್ ಕ್ರೆಡಿಟ್ಸ್ ಎಂಬ ಉದ್ಯಮ ಖಾತೆಯ ಸೌಲಭ್ಯಗಳು ಒದಗಿಸಿದೆ.ಈ ಖಾತೆಗಳನ್ನು ನೀವು ದಿನನಿತ್ಯ ಬ್ಯಾಂಕಿಂಗ್ ಕಾರ್ಯಾಚರಣೆಗೆ ಅನುಕೂಲವಾಗಿದೆ.

ವಿಮೆ ಪದ್ಧತಿ[ಬದಲಾಯಿಸಿ]

ಸೌತ್ ಇಂಡಿಯನ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ವಿಮೆ ಪದ್ಧತಿಯ ಸೌಲಭ್ಯಗಳು ಒದಗಿಸುತ್ತದೆ.ವಿಮೆ ಪದ್ದತಿಯಲ್ಲಿ ಜೀವ ವಿಮೆ,ಆರೋಗ್ಯ ವಿಮೆ,ಸಾಮಾನ್ಯ ವಿಮೆ ಎಂಬ ಸೌಲಭ್ಯಗಳು ಒದಗಿಸುತ್ತದೆ.ಆರೋಗ್ಯ ವಿಮೆ ವೈದ್ಯಕೀಯ ವೆಚ್ಚಗಳು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಅದರಿಂದ ಒಳ್ಳೆಯ ಮತ್ತು ಗುಣಮಟ್ಟದ ವೈದ್ಯಕೀಯ ಸಾಮಾನ್ಯ ಜನರಿಗೆ ಒದಗಿಸುವ ಅನುಸಾರವಾಗಿ ಸೌತ್ ಇಂಡಿಯನ್ ಬ್ಯಾಂಕ್ ಆರೋಗ್ಯ ವಿಮೆ ಪದ್ಧತಿಯ ತಮ್ಮ ಗ್ರಾಹಕರಿಗೆ ಒದಗಿಸುತ್ತದೆ.ಆರೋಗ್ಯ ವಿಮೆ ಅಡಿಯಲ್ಲಿ ಆರೋಗ್ಯ ಗಾರ್ಡ್,ಪ್ರೀಮಿಯಂ ವೈಯಕ್ತಿಕ ಗಾರ್ಡ್,ಕ್ರಿಟಿಕಲ್ ಇಲ್ನೆಸ್,ಸ್ಟಾರ್ ಪ್ಯಾಕೇಜ್,ಎಕ್ಸ್ಟ್ರಾ ಕೇರ್,ಫ್ಯಾಮಿಲಿ ಫ್ಲೋಟರ್ ಆರೋಗ್ಯ ಗಾರ್ಡ್,ಆರೋಗ್ಯ ಖಚಿತಪಡಿಸಿಕೊಳ್ಳಿ,ಸಂಕಟ್ ಮೋಚನ್,ಕಂಪ್ಯಾನಿಯನ್ ಪ್ರಯಾಣ,ಎಸ್ಐಬಿ ಆರೋಗ್ಯ ಸಹಾಯ,ಎಂಬುದು ಆರೋಗ್ಯ ವಿಮೆ ಅಡಿಯಲ್ಲಿ ಬರುವುದು.[೪]

ಪ್ರಧಾನಿ ಸಾಮಾಜಿಕ ಭದ್ರತಾ ಯೋಜನೆಗಳು[ಬದಲಾಯಿಸಿ]

ಸೌತ್ ಇಂಡಿಯನ್ ಬ್ಯಾಂಕ್ ಪ್ರಧಾನಿ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳು ಒದಗಿಸುತ್ತದೆ.ಅದರಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಎರಡು ಯೋಜನೆಗಳ ಸೌಲಭ್ಯಗಳು ಒದಗಿಸುತ್ತದೆ.[೫]

ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್[ಬದಲಾಯಿಸಿ]

ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್, ಇಂಡಿಯಾ ಲಿಮಿಟೆಡ್ ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಭಾರತ ಸರ್ಕಾರವು ೧೯೫೭ ರಲ್ಲಿ ಸ್ಥಾಪಿಸಲಾಯಿತು. ಮತ್ತು ಇದರ ಕಾರ್ಯಗಳು ಸಚಿವಾಲಯ ವಾಣಿಜ್ಯ ಮತ್ತು ಕೈಗಾರಿಕೆ, ವಾಣಿಜ್ಯ ಇಲಾಖೆ ಆಡಳಿತಾತ್ಮಕ ನಿಯಂತ್ರಸಿವುದು.ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್ ಎಕ್ಸ್ಪೋರ್ಟ್ರ್ಸ್ ಕ್ರೆಡಿಟ್ ವಿಮೆ ನೀತಿಗಳು ಭಾರತದ ಮಾರಾಟಗಾರರಿಗೆ, ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಸೌಲಭ್ಯಗಳು ಒದಗಿಸುತ್ತದೆ.ಮತ್ತು ಇತರ ಬ್ಯಾಂಕುಗಳ ಗ್ರಾಹಕರು ಕ್ರೆಡಿಟ್ ವಿಮೆ ಪಾಲಿಸಿಗಳಿಗೆ ನಮ್ಮ ಶಾಖೆಗಳನ್ನು ಅನುಸಂಧಾನ ಮಾಡಬಹುದು. ಸೌತ್ ಇಂಡಿಯನ್ ಬ್ಯಾಂಕ್ ತಮ್ಮ ಗ್ರಾಹಕರಿಗೆ ಎರಡು ರಿತಿ ಸಾಲವನ್ನು ನಿಡುತದೆ ಮೊದಲನೇಯದು ವೈಯಕ್ತಿಕ ಸಾಲಗಳು,ಎಸ್ಐಬಿ ಫ್ಲೆಕ್ಸಿ ಸಾಲದ, ಸೌಲಭ್ಯಗಳು ಒದಗಿಸುತ್ತದೆ.

ವಿದ್ಯಾರ್ಥಿವೇತನ ಯೋಜನೆ[ಬದಲಾಯಿಸಿ]

ಸೌತ್ ಇಂಡಿಯನ್ ಬ್ಯಾಂಕ್ ವಿದ್ಯಾರ್ಥಿವೇತನ ಯೋಜನೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಮುಂದುವರಿಸಲು ವಿದ್ಯಾರ್ಥಿವೇತನವನ್ನು ಕೊಡುತಾರೆ. ವಿದ್ಯಾರ್ಥಿವೇತನವನ ಅರ್ಜಿಗಳನ್ನು ಸರ್ಕಾರ ಅಧ್ಯಯನ ವಿದ್ಯಾರ್ಥಿಗಳಿಗೆ ಕೊಡಲಾಗಿದೆ.ವಿದ್ಯಾರ್ಥಿವೇತನ ನಿಯಮಗಳು ವಿದ್ಯಾರ್ಥಿಗಳು ಭಾರತೀಯ ನಾಗರಿಕರಾಗಿರಬೇಕು, ವಿದ್ಯಾರ್ಥಿ ಮೆರಿಟ್ ಪಟ್ಟಿ ಪ್ರವೇಶ ಇರಬೇಕು, ಬಿಪಿಎಲ್ ಕುಟುಂಬದ ಸೇರಿದ ವಿದ್ಯಾರ್ಥಿಗಳು ,ಕುಟುಂಬ ಆದಾಯ ೧ ಲಕ್ಷಕಿಂತ ಕಡಿಮೆ ಇರಬೇಕು,ಇವುಗಳು ಇದರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುತಾರೆ.

ಎಸ್ಐಬಿ ಮಿರರ್[ಬದಲಾಯಿಸಿ]

ನಿಮ್ಮ ಸ್ಮಾರ್ಟ್ ಫೋನ್ ಎಸ್ಐಬಿ ಮಿರರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು ಇದರ ಮೂಲಕ ಎಲ್ಲಾ ಎಸ್ಐಬಿ ಸಂಬಂಧಿತ ಮಾಹಿತಿ ಪಡೆಯಬಹುದು.[೬]

ಉಲ್ಲೇಖಗಳು[ಬದಲಾಯಿಸಿ]