ವಿಷಯಕ್ಕೆ ಹೋಗು

ಲೀಸ್ ಮೇಟ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೀಸ್ ಮೇಟ್ನರ್
ಜನನನವೆಂಬರ್ ೭, ೧೮೭೮
ವಿಯೆನ್ನಾ
ಮರಣಅಕ್ಟೋಬರ್ ೨೭, ೧೯೬೮
ಕೇಂಬ್ರಿಡ್ಜ್
ಕಾರ್ಯಕ್ಷೇತ್ರಭೌತಶಾಸ್ತ್ರ
ಪ್ರಭಾವಿತರುಒಟ್ಟೋ ಹಾನ್
ಹಸ್ತಾಕ್ಷರ

ಲೀಸ್ ಮೇಟ್ನರ್ (ನವೆಂಬರ್ ೭, ೧೮೭೮ - ಅಕ್ಟೋಬರ್ ೨೭, ೧೯೬೮) ಒಬ್ಬ ಮೇಧಾವಿ ಆಸ್ಟ್ರಿಯನ್ ಭೌತಶಾಸ್ತ್ರಜ್ಞರು.

ಮೇರಿ ಕ್ಯೂರಿಯ (1867-1934) ಉಜ್ವಲ ಆದರ್ಶ ಈಕೆಯ ಭವಿಷ್ಯವನ್ನು ರೂಪಿಸಿತು.

೧೯೦೭ರಲ್ಲಿ ಇವರು ಆ ವೇಳೆಗೆ ಶಕಲ ಸಿದ್ಧಾಂತದ ಜನಕರೆಂದು ಪ್ರಸಿದ್ಧರಾದ ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲಾಂಕ್‍ನೊಡನೆ ಕೆಲಸ ಮಾಡಿದರು. ಪ್ಲ್ಯಾಂಕರ ದಿಗ್ದರ್ಶನದಲ್ಲಿ ಈಕೆ ಅತಿ ವೇಗದಿಂದ ಮುಂದುವರಿದಳು. ಅನಂತರ, ಬರ್ಲಿನ್ನಿನ ಕೆ. ಡಬ್ಲ್ಯೂ. ಇನ್‍ಸ್ಟಿಟ್ಯೂಟಿನಲ್ಲಿ ವಿಕಿರಣಶೀಲ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದರು.

ಪ್ರೊಟಾಕ್ಟಿನಿಯಮ್ ಮೂಲಧಾತುವನ್ನು ಕಂಡುಹಿಡಿದರು. ಆದರೆ ೧೯೪೪ರಲ್ಲಿ ಈಕೆಯ ಜೊತೆ ಕೆಲಸ ಮಾಡಿದ ಓಟೋ ಹಾನ್‍ಗೆ ನೊಬೆಲ್ ಪಾರಿತೋಷಿಕ ದೊರೆಯಿತು, ಸರಿಸಮಾನವಾಗಿ ದುಡಿದ ಲೀಸ್ ಮೇಟ್ನರ್‌ರ ಹೆಸರೇ ಇರಲಿಲ್ಲ. ಪರಮಾಣು ವಿಭಜನೆಯಲ್ಲಿ ಮೊತ್ತಮೊದಲಿಗರಾದರೂ ಈ ವಿಜ್ಞಾನಿ ಅಣುಬಾಂಬ್ ತಯಾರಿಸಲು ನಿರಾಕರಿಸಿದರು. ಮೈಟಿನಿರ್ ಅವರನ್ನು ನೊಬೆಲ್ ಸಮಿತಿಯು ಮಹಿಳಾ ವೈಜ್ಞಾನಿಕ ಸಾಧನೆಯನ್ನು ಕಡೆಗಣಿಸಿರುವ ಉದಾಹರಣೆಯಾಗಿ ಪ್ರಸ್ತಾವಿಸಿದರು[೧][೨].

೧೯೯೭ರಲ್ಲಿ ಫಿಸಿಕ್ಸ್ ಟುಡೆ ಅಧ್ಯಯನದಲ್ಲಿ ಮೈಟಿನಿರ್ ಅವರನ್ನು ಕಡೆಗಣಿಸಿದ ವಿಷಯದ ಬಗ್ಗೆ "ವೈಯಕ್ತಿಕ ನಕಾರಾತ್ಮಕ ಅಭಿಪ್ರಾಯಗಳಿಂದ ಅರ್ಹ ವಿಜ್ಞಾನಿಯನ್ನು ಹೊರಗಿಡಲು ಕಾರಣವಾಯಿತು, ಇದು ಒಂದು ಅಪುರೂಪದ ಉದಾಹರಣೆ" ಎಂದು ನೊಬೆಲ್ ತೀರ್ಮಾನಿಸಿದ್ದಾರೆ. ಎಲಿಮೆಂಟ್ ೧೦೯, ಅನ್ನು "ಮೀಟ್ನೇರಿಯಮ್" ಎಂದು ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.

ಆರಂಭಿಕ ಜೀವನ[ಬದಲಾಯಿಸಿ]

1906ರಲ್ಲಿ ಮೇಟ್ನರ್

ಮೈಟಿನರ್ ಒಂದು ಯೆಹೂದಿ ಕುಟುಂಬದಲ್ಲಿ ಎಂಟು ಜನ ಮಕ್ಕಳಲ್ಲಿ ಮೂರನೇಯವರಾಗಿ ಜನಿಸಿದರು. ಅವರ ತಂದೆ ಫಿಲಿಪ್ ಮೈಟೆನಿರ್, ಆಸ್ಟ್ರಿಯಾದ ಯೆಹೂದ್ಯ ಮತದ ಮೊದಲ ವಕೀಲರಾಗಿದ್ದರು. ಲಿಸ್ ಮೈಟಿನಿಯರ್ ನವೆಂಬರ ೭ರಂದು ಜನಿಸಿದರು. ಅವರು ತಮ್ಮ ಹೆಸರು ಎಲಿಸ್ ಬದಲಾಗಿ ಲಿಸ್ ಎಂದು ಸಂಕ್ಷಿಪ್ತ ಮಾಡಿಕೊಂಡರು. ಮೈಟಿನಿರ್ ೧೭ ನವೆಂಬರ್ ೧೮೭೮ ರಂದು ಜನಿಸಿದರು ಎಂದು ವಿಯೆನ್ನಾ ಜೀವಿಶ್ ಸಮಾಜದ ಜನನಗಳ ನೋಂದಣಿ ಪಟ್ಟಿಯಲ್ಲಿದೆ, ಅದರೆ ಇತರ ಎಲ್ಲಾ ದಾಖಲೆಗಳಲ್ಲಿ ನವೆಂಬರ್ ೭ ಎಂದಿದೆ. ಇವರು ಸಹ ಇದನ್ನೆ ಪಾಲಿಸಿದರು. ವಯಸ್ಕರಾದ ನಂತರು ಇವರು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಿಕೊಂಡರು. ೧೯೦೮ರಲ್ಲಿ ಬ್ಯಾಪ್ಟೈಜ್ ಮಾಡಲಾಯಿತು.[೩]

ಶಿಕ್ಷಣ[ಬದಲಾಯಿಸಿ]

೧೯೦೦ರಲ್ಲಿ ಸರಿಸುಮಾರಿಗೆ ವಿಯೆನ್ನಾದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣದ ಸಾರ್ವಜನಿಕ ಸಂಸ್ಥೆಗಳಿಗೆ ಹಾಜರಾಗಲು ಅವಕಾಶವಿರಲಿಲ್ಲ. ಆದರೆ ಮೈಟಿನರ್ ತಮ್ಮ ಪೋಷಕರ ಬೆಂಬಲದಿಂದ ಭೌತಶಾಸ್ತ್ರದಲ್ಲಿ ಖಾಸಗಿ ಶಿಕ್ಷಣವನ್ನು ಪಡೆದರು. ೧೯೦೧ರಲ್ಲಿ ಅಕ್ಯಾಡೆಮಿಶೆಸ್ ಜಿಮ್ನಾಷಿಯಮ್ "ಬಾಹ್ಯ ಮತುರಾ" ಪರೀಕ್ಷೆಯಿಂದ ಅವರ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮೈಟಿನಿರ್ ಭೌತಶಾಸ್ತ್ರ ಅಧ್ಯಯನವನ್ನು ಮಾಡಿ ೧೯೦೫ ರಲ್ಲಿ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಎರಡನೇ ಮಹಿಳೆಯಾದರು.[೪][೫] ಅವರು ಡಾಕ್ಟರೇಟ್ ಸ್ವೀಕರಿಸಿದ ನಂತರ ಅನಿಲ ದೀಪ ಕಾರ್ಖಾನೆಯಲ್ಲಿ ಕೆಲಸ ಮಾಡಲು ಸಿಕ್ಕಿದ ಅವಕಾಶವನ್ನು ನಿರಾಕರಿಸಿದರು. ಅವರು ಆರ್ಥಿಕ ಬೆಂಬಲದಿಂದ ಬರ್ಲಿನ್ ಫ್ರೆಡ್ರಿಕ್-ವೆಲ್ಹೆಮ್ ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಪ್ರಸಿದ್ದ ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲಾಂಕ್ ತಮ್ಮ ಉಪನ್ಯಾಸಗಳಿಗೆ ಹಾಜರಾಗಲು ಅವಕಾಶ ನೀಡಿದರು. ಸಾಮಾನ್ಯವಾಗಿ ತಮ್ಮ ಉಪನ್ಯಾಸಗಳಿಗೆ ಹಾಜರಾಗಲು ಬಯಸುವ ಯಾವುದೇ ಮಹಿಳೆಯನ್ನು ಅವರು ತಿರಸ್ಕರಿಸುತ್ತಿದ್ದರು. ಹಾಗಾಗಿ ಇದು ಅಸಾಮಾನ್ಯ ಸೂಚಕವಾಯಿತು.[೬]

ನೀಲ್ಸ್ ಬೋಹ್ರ್ ಇನ್ಸ್ಟಿಟ್ಯೂಟ್‍ನಲ್ಲಿ ಹಾನ್ ಅವರ ಉಪನ್ಯಾಸದ ಸಂಧರ್ಭದಲ್ಲಿ ಹಾನ್,ಬೋರ್, ಮೇಟ್ನರ್ ಅವರನ್ನು ಭೇಟಿಯಾದರು. ನಂತರದ ದಿನಗಳಲ್ಲಿ ಒಂದೊಂದಾಗಿ ಸರಣಿ ಪತ್ರಗಳ ವಿನಿಮಯ ಮುಂದುವರೆಯೆತು. ಹಾನ್ ಮತ್ತು ಅವನ ಸಹಾಯಕ ಫ್ರಿಟ್ಸ್ ಸ್ಟ್ರಾಸ್‍ಮನ್ ಬರ್ಲಿನ್-ದಲೆಮ್ನಲ್ಲಿರುವ ತಮ್ಮ ಪ್ರಯೋಗಾಲಯದಲ್ಲಿ ಅತಿ ಕಷ್ಟವಾದ ಪರಮಾಣು ವಿದಳನ ಪ್ರಯೋಗವನ್ನು ನಡೆಸಿದರು. ವಿದಳನದಿಂದ ಉಂಟಾದ ಉತ್ಪನ್ನ ಬೇರಿಯಂ ಎಂದು ಗುರುತಿಸಿದರು.

ವೈಜ್ಞಾನಿಕ ವೃತ್ತಿಜೀವನ[ಬದಲಾಯಿಸಿ]

ಒಂದು ವರ್ಷಗಳ ಕಾಲ ಪ್ಲಾಂಕ್‍ರವರ ಉಪನ್ಯಾಸಗಳಿಗೆ ಹಾಜರಾದ ನಂತರ ಮೆಟಿನಿರ್ ಪ್ಲಾಂಕ್ ನ ಸಹಾಯಕಿ ಆದರು. ಮೊದಲು ವರ್ಷಗಳಲ್ಲಿ ಅವರ ರಸಾಯನಶಾಸ್ತ್ರಜ್ಞ ಒಟ್ಟೋಹಾನ್ ಒಟ್ಟಾಗಿ ಕೆಲಸಮಾಡಿ ಹಲವಾರು ಹೊಸ ಐಸೊಟೋಪ್‍ಗಳನ್ನು ಕಂಡುಹಿಡಿದರು. ೧೯೦೯ರಲ್ಲಿ ಬೀಟಾ ವಿಕಿರಣಗಳ ಬಗ್ಗೆ ಎರಡು ಸಂಶೋಧನೆಗಳನ್ನು ಮಾಡಿದರು.

೧೯೧೨ರಲ್ಲಿ ಹಾನ್-ಮೈಟಿನಿರ್ ಸಂಶೋಧಕರ ತಂಡ ಬರ್ಲಿನ್-ದಲೆಮ್ ದಲ್ಲಿ ಇರುವ ಕೈಸರ್-ವಿಲ್ಹೆಲ್ಮ್ ಸಂಸ್ಥೆಗೆ ಸ್ಥಳಾಂತರಗೊಂಡಿತು. ಅವರು ಹಾನ್‍ರ ರೇಡಿಯೋ ರಸಾಯನ ಶಾಸ್ತ್ರ ವಿಭಾಗದಲ್ಲಿ "ಅತಿಥಿ" ಯಾಗಿ ವೇತನ ಇಲ್ಲದೆ ಕೆಲಸ ಮಾಡಿದರು.[೭] ೧೯೧೩ರಲ್ಲಿ , ೩೫ ವರ್ಷಗಳಾಗಿದ್ದ ಅವರಿಗೆ ಸಹಾಯಕ ಪ್ರೊಫೆಸರ್ ಆಗಿ ಪ್ರಾಗ್‍ಗೆ ಹೋಗಲು ಪ್ರಸ್ತಾಪ ಸಿಕ್ಕಿತು. ನಂತರ ಅವರಿಗೆ ಕೆಡಬ್ಲ್ಯುಐ ನಲ್ಲಿ ಶಾಶ್ವತ ಸ್ಥಾನ ಸಿಕ್ಕಿತು.

ವಿಶ್ವ ಸಮರ ೧ ಮೊದಲ ಭಾಗದಲ್ಲಿ ಅವರು ನರ್ಸ್ ಆಗಿ ಎಕ್ಸರೆ ಉಪಕರಣಗಳ ನಿರ್ವಹಣೆ ಮಾಡುತ್ತಿದ್ದರು. ಅವರು ತಮ್ಮ ಸಂಶೋಧನೆಯನ್ನು ಮುಂದುವರಿಸಲು ೧೯೧೬ ರಲ್ಲಿ ಬರ್ಲಿನ್ ಗೆ ಹಿಂದಿರುಗಿದರು. ಆದರೆ ಯುದ್ಧದಲ್ಲಿ ಬಲಿಯಾದವರ ನೋವು, ವೈದ್ಯಕೀಯ ಮತ್ತು ಭಾವನಾತ್ಮಕ ಅಗತ್ಯಗಳನ್ನು ವಿಚಾರಿಸದೆ ತಮ್ಮ ಸಂಶೋಧನಾ ಪ್ರಯತ್ನವನ್ನು ಮುಂದುವರಿಸಲು ಬಯಸಿದ ಅವರು ತಲೆತಗ್ಗಿಸಿದರು.

೧೯೧೭ರಲ್ಲಿ, ಮೈಟ್ನಿರ್ ಮತ್ತು ಹಾನ್ ಅವರು ಅತಿ ಹೆಚ್ಚು ಕಾಲದ ಐಸೊಟೋಪ್ ಪ್ರೊಟ್ಯಾಕ್ಟಿನಿಯಂ ಅನ್ನು ಕಂಡುಹಿಡಿದರು. ಇದ್ದಕ್ಕಾಗಿ ಅವರಿಗೆ ಬರ್ಲಿನ್ ಅಕಾಡೆಮಿ ಆಫ್ ಸೈನ್ಸ್‌ನಿಂದ ಲೇಬಿನಿಟ್ಸ್ ಪದಕ ದೊರೆಯಿತು. ಅದೇ ವರ್ಷದಲ್ಲಿ ಮೈಟ್ನರ್ ಗೆ ಆರ ಸ್ವಂತ ಭೌತಶಾಸ್ತ್ರ ವಿಭಾಗವನ್ನು ಕೈಸರ್ ವಿಲ್ಹೆಲ್ಮ್ ಇನ್ಸ್ಟಿಟ್ಯೂಟ್‍ನಲ್ಲಿ ನೀಡಲಾಗಿತ್ತು.

೧೯೨೬ರಲ್ಲಿ ಮೈಟ್ನರ್ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ, ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಜರ್ಮನಿಯ ಮೊದಲ ಮಹಿಳೆಯಾದರು.

1930ರಲ್ಲಿ ವಿಜ್ಞಾನ ಸಂಸ್ಥೆಗಳು ಯುರೇನಿಯಮ್‌ನತ್ತ ತಮ್ಮ ಲಕ್ಷ್ಯಕೇಂದ್ರೀಕರಿಸಿ ಕಾರ್ಯಪ್ರವೃತ್ತವಾದವು. ಈ ಧಾತುವನ್ನು ನ್ಯೂಟ್ರಾನುಗಳ ತಾಡನೆಗೆ ಈಡುಮಾಡಿದಾಗ ನೆಪ್ಚೊನಿಯಮ್ ಎಂಬ ಹೊಸ ಧಾತು ಉತ್ಪನ್ನವಾಗುವುದೆಂದು 1934ರಲ್ಲಿ ಎನ್ರಿಕೋ ಫರ್ಮಿ (1901-54) ಸಾರಿದರು. ಫರ್ಮಿ ಅವರ ಈ ಅಭಿಪ್ರಾಯ ಅನೇಕರಿಗೆ ಒಪ್ಪಿಗೆಯಾಗಲಿಲ್ಲ. ಇಂಥವರ ಪ್ರಕಾರ ಯುರೇನಿಯಮ್ ನ್ಯೂಕ್ಲಿಯಸ್ ತುಂಡಾಯಿತೇ ಹೊರತು, ಯಾವುದೇ ಹೊಸ ಧಾತು ಉತ್ಪನ್ನವಾಗಲಿಲ್ಲ. ಇಂಥ ಪ್ರಯೋಗ ಹೊಸ ಧಾತುಗಳನ್ನು ಉತ್ಪಾದಿಸದೆ ನಮಗೆ ಈ ಮೊದಲೆ ಪರಿಚಿತವಿದ್ದ ಧಾತುಗಳನ್ನು ಮಾತ್ರ ಉತ್ಪಾದಿಸಬಲ್ಲದು ಎಂಬುದಾಗಿ ಐರಿನ್ ಕ್ಯೂರಿ (1897-1956) ಕೂಡ ಸ್ಪಷ್ಟವಾಗಿ ಹೇಳಿದರು. ಈ ಸಂಬಂಧದಲ್ಲಿ ಐನ್‌ಸ್ಟೈನರ (1879-1955) E=mc2 ಸಮೀಕರಣ, ಪ್ರತಿಯೊಬ್ಬ ಸಂಶೋಧಕನ ಎದುರಿನಲ್ಲಿಯೂ ಬೃಹತ್ ಪ್ರಶ್ನಾರ್ಥಕ ರೀತಿಯಲ್ಲಿ ಓಲಾಡತೊಡಗಿತು. ಏಕೆಂದರೆ ಪರಮಾಣು ಛೇದನಪರಿಣಾಮ ನಂಬಲು ಅಸಾಧ್ಯವೆನಿಸುವಷ್ಟು ಶಕ್ತಿಯನ್ನು ಬಿಡುಗಡೆ ಮಾಡುವುದೆಂದು ಈ ಸಮೀಕರಣ ತಿಳಿಸುತ್ತದೆ.

ಇದೇ ವೇಳೆಗೆ ಮೈಟ್ನರ್ ಬರ್ಲಿನ್ನಿನಲ್ಲಿ ಇದೇ ಸಮಸ್ಯೆಯನ್ನು ಬಿಡಿಸುವುದರಲ್ಲಿ ಮಗ್ನಳಾಗಿದ್ದಳು. ಈಗ ಈ ಸಮಸ್ಯೆಗೆ ತುರ್ತು ಪರಿಹಾರ ಶೋಧಿಸುವುದು ಅತ್ಯಗತ್ಯವಾಗಿತ್ತು. ನಾಟ್ಸೀ ಪ್ರಭುಗಳು ಯಹೂದ್ಯಜೆಯಾದ ಈಕೆಯ ಕಾರ್ಯ ಪ್ರಗತಿಗೆ ಸಂಬಂಧಿಸಿದಂತೆ ವರದಿಗಳನ್ನು ಅಧಿಕಾರಯುತವಾಗಿ ಕೇಳುತ್ತಿದ್ದರು ಮತ್ತು ಈಕೆಗೆ ಹೆಜ್ಜೆ ಹೆಜ್ಜೆಗೂ ಕಿರುಕುಳ ಕೊಡುತ್ತಿದ್ದರು. ಇವೆಲ್ಲದರಿಂದಾಗಿ ಈಕೆಗೆ ತನ್ನ ಜೀವನದ ದಿವಸಗಳು ತುಂಬಿಬಂದವು ಎಂದು ಎನಿಸತೊಡಗಿತು. ತನ್ನ ಜೀವನದಲ್ಲಿಯೇ ಅತ್ಯಂತ ಮಹತ್ತ್ವದ ಪ್ರಯೋಗದಲ್ಲಿ ನಿರತಳಾದ ಈಕೆಗೆ ಖುದ್ದು ಜೀವನವನ್ನೇ ಉಳಿಸಿಕೊಳ್ಳಲು ಜರ್ಮನಿಯಿಂದ ಓಡಿಹೋಗದೆ ವಿಧಿ ಇರಲಿಲ್ಲ.

ಯುರೇನಿಯಮ್ ನ್ಯೂಕ್ಲಿಯಸನ್ನು ಅಲ್ಪವೇಗ ನ್ಯೂಟ್ರಾನುಗಳಿಂದ ಉದ್ರೇಕಿಸಿದಾಗ ಬೇರಿಯಮ್ ಧಾತು ಕಂಡುಬಂತು. ತನ್ನ ಸಹೋದ್ಯೊಗಿಗಳಾದ ಹಾನ್ ಮತ್ತು ಸ್ಟ್ರಾಸ್‌ಮನ್ ಸಹಕಾರದಿಂದ ಮೈಟ್ನರ್ ತಯಾರಿಸಿದ ಪರಮಾಣು ಸೂಕ್ಷ್ಮದರ್ಶಕ ಇದನ್ನು ಸ್ಥಿರೀಕರಿಸಿದಾಗ ಸಂಶೋಧನೆಗೆ ಹೆಚ್ಚಿನ ಚಾಲನೆ ಒದಗಿದಂತಾಯಿತು. ಇದರ ಪರಿಣಾಮ ಗಮನಿಸುವಷ್ಟರಲ್ಲಿಯೇ ಮೈಟ್ನರ್ ನಾಟ್ಸಿಗಳ ಹಿಡಿತದಿಂದ ಪಾರಾಗಲು ಸ್ಟಾಕ್‌ಹೋಮ್‌ಗೆ ಪಲಾಯನಮಾಡಿ ಕೋಪನ್‌ಹೇಗನ್ನಿನಲ್ಲಿ ನೀಲ್ಸ್ ಬೋರ್ (1885-1962) ಜೊತೆ ಸಂಶೋಧನಮಗ್ನನಾಗಿದ್ದ ತನ್ನ ಸೋದರಳಿಯ ಆಟೋ ಫ್ರಿಶ್‌ನಲ್ಲಿ ಆಶ್ರಯ ಪಡೆದಳು.

೧೯೩೫ರಲ್ಲಿ ಒಟ್ಟೋಹಾನ್ ಟ್ರಾನ್ಸ್‌ಯುರೇನಿಯಮ್ ಸಂಶೋಧನೆಯ ಕಾರ್ಯಕ್ರಮವನ್ನು ಕೈಗೊಂಡರು. ಈ ಕಾರ್ಯಕ್ರಮವು ಭಾರ ಬೈಜಿಕ ಕೇಂದ್ರಗಳ ಪರಮಾಣು ವಿದಳನದ ಪತ್ತೆಗೆ ಕಾರಣವಾಯಿತು. ಆದರೆ ಮೈಟ್ನರ್ ಬರ್ಲಿನ್ ಬಿಟ್ಟು ಅರ್ಧ ವರ್ಷವಾಗಿತ್ತು. ಅವರನ್ನು "ಜರ್ಮನ್ ಮೇರಿ ಕ್ಯೂರಿ" ಎಂದು ಆಲ್ಬರ್ಟ್ ಐನ್‍ಸ್ಟೈನ್ ಕೊಂಡಾಡಿದರು.[೮]

ಹಾನ್ ಹಾಗೂ ಸ್ಟ್ರಾಸ್‌ಮನ್‌ರ ಪ್ರಯೋಗಗಳ ಫಲಿತಾಂಶಗಳು ಈಕೆಗೆ ತಿಳಿಸಲ್ಪಟ್ಟವು. 238 ಪರಮಾಣು ತೂಕದ ಯುರೇನಿಯಮ್, 140 ಹಾಗೂ 90 ಪರಮಾಣು ತೂಕಗಳನ್ನು ಹೊಂದಿದ್ದ ಎರಡು ಪ್ರಮುಖ ಸಮಸ್ಥಾನಿಗಳಾಗಿ ಮಾರ್ಪಟ್ಟಿರುವುದು ಕಂಡುಬಂದಿತು. ಅಂದರೆ ಕೊನೆಗೂ ಪರಮಾಣು ವಿದಳನೆ ಮಾನವನಿಗೆ ಸಿದ್ಧಿಸಿತು. ಮೈಟ್ನರ್ ಈ ಪ್ರಯೋಗವನ್ನು ಪುನಃ ಮಾಡಿ ತಪಾಸಿಸುವುದಾಗಿ ನಿರ್ಧರಿಸಿದಳು. ಹೀಗೆ ಈಕೆ ಒಂದು ರೀತಿಯಲ್ಲಿ ಇತಿಹಾಸವನ್ನೇ ನಿರ್ಮಿಸಿದಳು. ಯುರೇನಿಯಮ್ ಪರಮಾಣುವಿನ ವಿದಳನ ಬೇರಿಯಮ್ ಮತ್ತು ಕ್ರಿಪ್ಟಾನ್ ಎಂಬ ಎರಡು ನ್ಯೂಕ್ಲಿಯಸುಗಳನ್ನು ಕೊಟ್ಟುದರ ಜೊತೆಗೆ 200 ಸಾವಿರ ಎಲೆಕ್ಟ್ರಾನ್ ವೋಲ್ಟ್ ಪ್ರಚಂಡಶಕ್ತಿಯನ್ನು ಕೂಡ ಬಿಡುಗಡೆ ಮಾಡಿತು. ಎಂದರೆ ಇಲ್ಲಿಯ ಒಟ್ಟು ರಾಶಿಯ ಹಲವು ಭಾಗ ಐನ್‍ಸ್ಟೈನ್ 1905ರಲ್ಲಿ ಮುನ್ಸೂಚಿಸಿದ್ದಂತೆಯೇ ಶಕ್ತಿಯಾಗಿ ರೂಪಾಂತರಹೊಂದಿತ್ತು.

ಈ ಪ್ರಯೋಗದಲ್ಲಿ ನ್ಯೂಟ್ರಾನುಗಳ ಪ್ರವಾಹದಿಂದ ಉಂಟಾದ ಬದಲಾವಣೆಯನ್ನು ಈಕೆ ವಿದಳನ (ಫಿಷನ್) ಎಂದು ಹೆಸರಿಸಿದ್ದಳು. ರಾಷ್ಟ್ರಗಳು ಜೀವನ ಮರಣಗಳ ಹೋರಾಟದಲ್ಲಿ ತೊಡಗಿದ್ದ ಅಂದಿನ ವೇಳೆಯಲ್ಲಿ (1939-40) ಈ ಸಂಶೋಧನೆಯ ಸೈನಿಕಮಹತ್ತ್ವ ಸ್ಫುಟವಾಗಿ ಗೋಚರಿಸುವಂತಿತ್ತು. ಇದೇ ವೇಳೆಗೆ ನೀಲ್ಸ್ ಬೋರ್ ಅಮೆರಿಕಕ್ಕೆ ತೆರಳಿದವರು ಅಲ್ಲಿ ಪರಿಸ್ಥಿತಿಯನ್ನು ಐನ್‌ಸ್ಟೈನ್ ಮತ್ತು ಫರ್ಮಿ ಅವರೊಂದಿಗೆ ಚರ್ಚಿಸಿದರು. 1945ರ ಪರಮಾಣು ಬಾಂಬ್ ಪ್ರಯೋಗದವರೆಗಿನ ಮುಂದಿನ ಹಂತಗಳೆಲ್ಲವೂ ಈಗ ಸರ್ವವಿದಿತವಾಗಿವೆ.

ಕೈಸರ್ ವಿಲ್ಹೆಲ್ಮ್ ಇನ್ಸ್ಟಿಟ್ಯೂಟ್‍ನಲ್ಲಿ ಮೈಟ್ನರ್ ಕೇಂಬ್ರಿಡ್ಜ್ ಕ್ಯಾವೆಂಡಿಶ್ ಪ್ರಯೋಗಾಲಯದ ಜೇಮ್ಸ್ ಚಾಡ್‍ವಿಕ್‍ರನ್ನು ಸಂಪರ್ಕಿಸಿದರು. ಚಾಡ್ವಿಕ್ ಮತ್ತಿತರರು ನ್ಯೂಟ್ರಾನ್ ಅಸ್ತಿತ್ವವನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದ ಕಾರಣ ಮೈಟ್ನರ್ ಚಾಡ್ವಿಕ್‍ಗೆ ಪೊಲೊನಿಯಮ್ ಕಳುಹಿಸಿದರು. ಚಾಡ್ವಿಕ್‍ಗೆ ಅಗತ್ಯವಿದ್ದ ಕಾರಣ ಅವರು ಬಾಲ್ಟಿಮೋರ್ ನ ಒಂದು ಅಸ್ಪತ್ರೆಯಿಂದ ಹೆಚ್ಚು ಪೊಲೊನಿಯಮ್ ಪಡೆದರು. ಆದರು ಅವರು ಮೈಟ್ನರ್ ಗೆ ಕೃತಜ್ಞರಾಗಿದ್ದರು. ನಂತರ ಅವರು ಹೀಗೆ ಹೇಳಿದರು "ಮೈಟ್ನರ್ ದೃಡವಾದ ನಿರ್ಧಾರ ತೆಗೆದುಕೂಂಡು ಹಾಗು ನನ್ನ ಹಾಗೆ ಹಲವಾರು ವರ್ಷಗಳ ಕಾಲ ಕ್ಯಾವೆಂಡಿಶ್‍ನಲ್ಲಿ ವಾಸವಾಗಿದ್ದ ಪಕ್ಷದಲ್ಲಿ ಖಂಡಿತವಾಗಿಯೂ ನ್ಯೂಟ್ರಾನ್ ಕಂಡುಹಿಡಿಯುತ್ತಿದ್ದರು."

ಇತಿಹಾಸದ ಅನಿವಾರ್ಯ ಗತಿಯಲ್ಲಿ ಪರಮಾಣು ಶಕ್ತಿ ಬಸಿತ ಕುರಿತಂತೆ ಮೊದಲ ಸಂಶೋಧನೆಗಳಲ್ಲಿ ಮೈಟ್ನರ್ ವಹಿಸಿದ ಪಾತ್ರ ಗಣನೀಯವಾದದ್ದು. ವಿದಳನದ ಪ್ರಾಯೋಗಿಕ ಸಾಧ್ಯತೆಯನ್ನು ಗಣಿತಸೂತ್ರವನ್ನೂ ಮೊದಲಿಗೆ ಕಂಡುಕೊಂಡ ಕೆಲವೇ ಮಂದಿ ಮಹಾವಿಜ್ಞಾನಿಗಳ ಪೈಕಿ ಈಕೆ ಒಬ್ಬಳು. ಆದರೆ ತರುವಾಯದ ಯುದ್ಧಪ್ರಯೋಗ ವಿಚಾರಗಳಲ್ಲಿ ಈಕೆಯ ಪಾತ್ರ ಏನೂ ಇಲ್ಲ: ವಿಜ್ಞಾನಿ ಆವಿಷ್ಕರಿಸುತ್ತಾನೆ, ರಾಜಕಾರಣಿ ಪ್ರಯೋಗಿಸುತ್ತಾನೆ ಎನ್ನುವ ಸೂತ್ರದಂತೆ.

ಪ್ರಶಸ್ತಿಗಳು, ಗೌರವಗಳು[ಬದಲಾಯಿಸಿ]

 • ೧೯೪೪ ರಲ್ಲಿ ನೋಬಲ್ ಪ್ರಶಸ್ತಿಯನ್ನು ಘೋಷಿಸಿದರು.
 • ೧೯೪೫ ನವೆಂಬರ್ ೧೫ ರಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸನ ಸದಸ್ಯೆ.
 • ೧೯೪೯ ರಲ್ಲಿ ಹಾನ್‍ರೊಂದಿಗೆ ಜರ್ಮನ್ ಫಿಸಿಕಲ್ ಸೊಸೈಟಿಯಿಂದ ಮ್ಯಾಕ್ಸ್ ಪ್ಲಾಂಕ್ ಪದಕ ಪಡೆದರು.
 • ೧೯೫೪ ರಲ್ಲಿ ಜರ್ಮನ್ ಕೆಮಿಕಲ್ ಸೊಸೈಟಿಯ ಮೊದಲ ಒಟ್ಟೋಹಾನ್ ಪ್ರಶಸ್ತಿ ಪಡೆದರು.[೯]
 • ಜರ್ಮನಿಯ ವಿಜ್ಞಾನಿಗಳಿಗೆ ಮೀಸಲಾದ ಉನ್ನತ ವರ್ಗದ ಪ್ರಶಸ್ತಿ ಪಡೆದರು.
 • ಮೈಟ್ನರ್ ತಮ್ಮ ಕೆಲಸಕ್ಕೆ ೨೧ ವೈಜ್ಞಾನಿಕ ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದರು.
 • ೧೯೪೭ ರಲ್ಲಿ ಅವರು ವಿಜ್ಞಾನಕ್ಕೆ ವಿಯೆನ್ನಾ ನಗರದ ಪ್ರಶಸ್ತಿ ಪಡೆದರು.
 • ಅವರು ಆಸ್ಟ್ರಿಯನ್ ವಿಜ್ಞಾನ ಅಕಾಡೆಮಿಯ ವೈಜ್ಞಾನಿಕ ವರ್ಗದ ಮೊದಲ ಮಹಿಳಾ ಸದಸ್ಯರಾಗಿದ್ದರು.
 • ೧೯೬೦ ರಲ್ಲಿ ಮೈಟ್ನರ್ ವಿಜ್ಞಾನ ಮತ್ತು ಕಲೆಯ ವಿಲ್ಹೆಲ್ಮ್ ಎಕ್ಸೆನರ್ ಪದಕ ಪಡೆದರು.[೧೦]

ಕೊನೆಯ ದಿನಗಳು[ಬದಲಾಯಿಸಿ]

೧೯೪೯ ರಲ್ಲಿ ಮೈಟ್ನಿರ್ ಸ್ವೀಡಿಷ್ ಪ್ರಜೆಯಾದರು. ೧೯೬೦ ರಲ್ಲಿ ನಿವೃತ್ತರಾಗಿ ಯು.ಕೆ. ಗೆ ತರಳಿದರು. ಅಲ್ಲಿ ಅವರ ಸಂಬಂಧಿಕರೆಲ್ಲಾ ವಾಸವಾಗಿದ್ದರು. ಆದರೂ ಅವರು ಅರೆಕಾಲಿಕ ಕೆಲಸ ಮತ್ತು ಉಪನ್ಯಾಸಗಳನ್ನು ಮುಂದುವರಿಸಿದರು. ೧೯೬೪ ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಶ್ರಮದಾಯಕವಾದ ಪ್ರವಾಸದಿಂದಾಗಿ ಮೈಟಿನಿರ್ ಗೆ ಹೃದಯಾಘಾತವಾಯಿತು. ಇದರಿಂದಾಗಿ ಹಲವಾರು ತಿಂಗಳಕಾಲ ನಂತರ ಅವರು ಚೇತರಿಸಿಕೊಂಡರು. ಅಪಧಮನಿಕಾಠಿನ್ಯದಿಂದಾಗಿ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ದುರ್ಬಲಗೊಂಡ ಕಾರಣ ಎನ್ರಿಕೊ ಫರ್ಮಿ ಪ್ರಶಸ್ತಿಯನ್ನು ಸ್ವೀಕರಿಸಲು ಅಮೇರಿಕಾಗೆ ಹೋಗಲು ಸಾಧ್ಯವಾಗಲಿಲ್ಲ. ಅವರ ಸಂಬಂಧಿಕರು ಅದನ್ನು ಮೈಟ್ನರ್ ಪರವಾಗಿ ಸ್ವೀಕರಿಸಿದರು.ಅವರು ೮೯ ನೇ ವಯಸ್ಸಿನಲ್ಲಿ ,೨೭ ಅಕ್ಟೋಬರ್ ೧೯೬೮ ರಂದು ನಿಧನರಾದರು. ಅವರ ಸೋದರಳಿಯ ಒಟ್ಟೊ ಫಿಸ್ಚ್ ಸಮಾಧಿಯ ತಲೆಗಲ್ಲಿನ ಮೇಲೆ ಹೀಗೆ ಶಾಸನ ರಚಿಸಿದರು. "ಲೀಸ್ ಮೈಟ್ನರ್, ತನ್ನ ಮಾನವಿಯತೆಯನ್ನು ಎಂದಿಗೂ ಕಳೆದುಕೊಂಡಿಲ್ಲದ ಭೌತಶಾಸ್ತ್ರಜ್ಞೆ". ಮೈಟ್ನಿರ್ ಅವರ ಹಳ್ಳಿಯಲ್ಲಿ ಒಂದು ಸಣ್ಣ ರಸ್ತೆಯನ್ನು "ಮೈಟ್ನಿರ್ ಕ್ಲೊಸ್" ಎಂದು ಹೆಸರಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

 1. "Otto Hahn, Lise Meitner and Fritz Strassmann". Chemistry Heritage. Retrieved 3 August 2007.
 2. "The Woman Behind the Bomb". The Washington Post. Retrieved 3 August 2007.
 3. "Lise Meitner | Biography". atomicarchive.com. 27 October 1968. Retrieved 9 April 2012.
 4. Sime 1996, p. 398.
 5. Calvin, Scott (2017). "3. Lise Meitner (Sec. 3.1)". Beyond Curie: Four women in physics and their remarkable discoveries, 1903 to 1963. Morgan and Claypool. Retrieved 27 April 2021.
 6. Sime 1996, pp. 24–26.
 7. Sime 1996, pp. 44–45.
 8. Bartusiak, Marcia (17 March 1996). "The Woman Behind the Bomb". The Washington Post.
 9. Frisch 1970, p. 415.
 10. "Lise Meitner" (in ಜರ್ಮನ್). Österreichischer Gewerbeverein. Retrieved 13 July 2020.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. http://cwp.library.ucla.edu/Phase2/Meitner,_Lise@844904033.html
 2. http://alsos.wlu.edu/qsearch.aspx?browse=people/Meitner,+Lise Archived 2019-03-12 ವೇಬ್ಯಾಕ್ ಮೆಷಿನ್ ನಲ್ಲಿ.
 3. https://www.wired.com/thisdayintech/2010/02/0211lise-meitner-publishes-nuclear-fission
 4. https://drive.google.com/file/d/0B1yz8B3IPltmeGk2T0J4VlhialE/edit?usp= "
 5. Catalogue of the Lise Meitner papers at the Churchill Archives Centre
 6. "Lise Meitner", "Contributions of 20th-Century Women to Physics" (CWP), University of California, Los Angeles
 7. Wired.com: "February 11, 1939: Lise Meitner, 'Our Madame Curie'"
 8. "Lise Meitner", B. Weintraub, Chemistry in Israel, no. 21, May 2006, p. 35.
 9. Meitner, Lise at biografiA Encyclopedia of Austrian Women
 10. Elise Meitner: Co-discoverer of Nuclear Fission
 11. "Elise Meitner" NPS
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: