ಅಟ್ಟೊ ಹಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಟ್ಟೊ ಹಾನ್
ಅಟ್ಟೊ ಹಾನ್
Born
ಅಟ್ಟೊ ಹಾನ್

೮ ಮಾರ್ಚ್ ೧೮೭೯
ಜರ್ಮನಿ
Nationalityಜರ್ಮನಿ

ಜರ್ಮನಿಯ ರೇಡಿಯೋ-ರಸಾಯನವಿಜ್ಞಾನಿಯಾಗಿದ್ದ ಅಟ್ಟೊ ಹಾನ್‌ರವರು ೧೮೭೯ರ ಮಾರ್ಚ್ ೮ರಂದು ಫ್ರಾಂಕ್‌ಫುರ್ಟ್‌ನಲ್ಲಿ ಜನಿಸಿದರು. ಥೋರಿಯಂನ ವಿಕಿರಣಪಟು ಭಸ್ಮಪತನದ (radioactive breakdown) ಅವಧಿಯಲ್ಲಿ ಉತ್ಪತ್ತಿಯಾದ ಕೆಲವು ರೇಡಿಯೋ-ಸಮಸ್ಥಾನಿಗಳನ್ನು (radio isotopes) ಹಾನ್‌ರವರು ಕಂಡುಹಿಡಿದರು. ಅವರು ೧೯೦೪ರಲ್ಲಿ ರೇಡಿಯೋಥೋರಿಯಂ,[೧] ೧೯೦೭ರಲ್ಲಿ ಮಿಸೋಥೋರಿಯಂಗಳನ್ನು ಕಂಡುಹಿಡಿದರು. ಅವರು ೧೯೧೮ರಲ್ಲಿ ಮಹಿಳಾ ವಿಜ್ಞಾನಿ ಲೈಸ್ ಮೈಟ್ನರ್‌ರವರ (೧೮೭೮-೧೯೬೮) ಜೊತೆ ಸೇರಿ ಒಂದು ಹೊಸ ಧಾತುವಿನ ಅಧಿಕ ಜೀವಾವಧಿಯ ಸಮಸ್ಥಾನಿಯನ್ನು ಕಂಡುಹಿಡಿದು, ಅದಕ್ಕೆ ‘ಪ್ರೊಟಾಕ್ಟಿನಿಯಮ್’ (protactinium) ಎಂಬುದಾಗಿ ನಾಮಕರಣ ಮಾಡಿದರು. ತಮ್ಮ ಬೀಜಕೋಶದಲ್ಲಿ ಸಮನಾದ ಒಂದೇ ರೀತಿಯ ಉಪಪರಮಾಣ್ವಿಕ ಕಣಗಳಿದ್ದರೂ, (subatomic) ಬೇರೆಬೇರೆ ಶಕ್ತಿ ಮತ್ತು ಅರ್ಧಾಯುವನ್ನು (half-life) ಹೊಂದಿರುವ ರೇಡಿಯೋ ಸಮಸ್ಥಾನಿಗಳು ಅಂದರೆ ಬೈಜಿಕ ಸಮಾಂಗಿಗಳನ್ನು (nuclear isomers) ಅವರಿಬ್ಬರೂ ೧೯೨೧ರಲ್ಲಿ ಕಂಡುಹಿಡಿದರು. ಹಾನ್‌ರವರು ಬೈಜಿಕ ವಿದಳನದ ಪ್ರಕ್ರಿಯೆಗೆ (nuclear fission) ಮತ್ತು ಸರಪಳಿಕ್ರಿಯೆಗೆ (chain reaction) ನಾಂದಿ ಹಾಡಿದರು. ಅವರ ಸಂಶೋಧನೆಗಳು ಮುಂದೆ ೧೯೪೫ರಲ್ಲಿ ಮೊದಲ ಪರಮಾಣು ಬಾಂಬ್ ಸ್ಪೋಟಕ್ಕೆ ದಾರಿ ಮಾಡಿಕೊಟ್ಟಿತು. ಹಾನ್‌ರವರ ಸಂಶೋಧನೆಗಳಿಗೆ ೧೯೪೪ರ ಭೌತವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೨] ಹಾನ್‌ರವರು ೧೯೬೮ರ ಜುಲೈ ೨೮ರಂದು ಗೊಟಿಂಗೆನ್‌ನಲ್ಲಿ ನಿಧನರಾದರು. ೧೦೫ನೆಯ ಧಾತುವಿಗೆ ಹಾನ್‌ರವರ ಗೌರವಾರ್ಥವಾಗಿ ‘ಹಾನಿಯಮ್’ ಎಂಬುದಾಗಿ ನಾಮಕರಣ ಮಾಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]