ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ಜೀವನ[ಬದಲಾಯಿಸಿ]

ಪ್ರಖ್ಯಾತ ಭೌತವಿಜ್ಞಾನಿ ನೀಲ್ಸ್ ಬೋರ್ ಅವರ ಪೂರ್ಣ ಹೆಸರು ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್. ಇವರು ಕ್ರಿ.ಶ ೧೮೮೫ ರ ಅಕ್ಟೋಬರ್ ೭ ರಂದು ಡೆನ್ಮಾರ್ಕ್ ನ ಕೋಪನ್ಹೇಗನ್ ನಲ್ಲಿ ಜನಿಸಿದರು. ಇವರ ತಂದೆ ಕೋಪನ್ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ನೀಲ್ಸ್ ತಮ್ಮ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿದರು. ಇವರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಪ್ರಯೋಗಗಳಿಗೆ ಅಗತ್ಯವಿದ್ದಷ್ಟು ಸೌಲಭ್ಯಗಳಿರಲಿಲ್ಲ . ಹೀಗಾಗಿ ತಂದೆಯ ಪ್ರಯೋಗಾಲಯದಲ್ಲೇ ತಮ್ಮ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು. [೧]

ಸಂಶೋಧನೆ[ಬದಲಾಯಿಸಿ]

ಇವರು ೧೯೦೯ ರಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ಹಾಗು ೧೯೧೧ ರಲ್ಲಿ ಡಾಕ್ಟರೆಟ್ ಪದವಿಯನ್ನು ಪಡೆದರು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ರವರು ಪರಮಾಣುವಿಗೆ ನಿಖರ ಭೌತರೂಪ ನೀಡಿ, ಪರಮಾಣು ಜಗತ್ತಿಗೆ ವೈಜ್ಞಾನಿಕ ತಳಪಾಯ ಹಾಕಿದರು. ಇವರು ಪರಮಾಣು ಕುರಿತು ಮಾಡಿದ ಸಂಶೋಧನೆಗಳು ಜಗತ್ಪ್ರಸಿದ್ಧಿ ಪಡೆದವು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್, ಪರಮಾಣು ಕುರಿತು ಮಾಡಿದ ಸಂಶೋಧನೆಗಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನ ಪಡೆದರು. [೨]

ಇವರು ೧೯೬೨ ರ ನವೆಂಬರ್ ೧೮ ರಂದು ವಿಧಿವಶರಾದರು.

ಉಲ್ಲೇಖಗಳು[ಬದಲಾಯಿಸಿ]

  1. http://www.nobelprize.org/nobel_prizes/physics/laureates/1922/bohr-bio.html
  2. http://www.jewishvirtuallibrary.org/jsource/biography/Bohr.html