ವಿಷಯಕ್ಕೆ ಹೋಗು

ಮ್ಯಾಕ್ಸ್ ಪ್ಲಾಂಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಕ್ಸ್ ಪ್ಲಾಂಕ್
Planck in 1933
ಜನನMax Karl Ernst Ludwig Planck
(೧೮೫೮-೦೪-೨೩)೨೩ ಏಪ್ರಿಲ್ ೧೮೫೮
Kiel, Duchy of Holstein
ಮರಣ4 October 1947(1947-10-04) (aged 89)
Göttingen, Lower Saxony, Germany
ರಾಷ್ಟ್ರೀಯತೆGerman
ಕಾರ್ಯಕ್ಷೇತ್ರPhysics
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠLudwig Maximilian University of Munich
ಡಾಕ್ಟರೇಟ್ ಸಲಹೆಗಾರರುAlexander von Brill
Gustav Kirchhoff[೧]
Hermann von Helmholtz
ಡಾಕ್ಟರೇಟ್ ವಿದ್ಯಾರ್ಥಿಗಳು
Other notable studentsLise Meitner
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು
ಸಂಗಾತಿMarie Merck (1887–1909)
Marga von Hösslin (1911–1947)
ಹಸ್ತಾಕ್ಷರ
ಟಿಪ್ಪಣಿಗಳು
His son Erwin Planck was executed in 1945 by the Gestapo for his part in the assassination attempt on Adolf Hitler.

'ಮ್ಯಾಕ್ಸ್ ಪ್ಲಾಂಕ್' (೧೮೫೮-೧೯೪೭) ಜರ್ಮನಿಭೌತಶಾಸ್ತ್ರಜ್ಞ. ಕ್ವಾಂಟಮ್ ತತ್ವದ ಪ್ರತಿಪಾದಕ,ವಿಕಿರಣಶೀಲತೆಯ ನಿಯಮಗಳನ್ನು ನಿರೂಪಿಸಿದವರು.ಇವರು ಜರ್ಮನಿಯ ಕೀಲ್ ಪಟ್ಟಣದಲ್ಲಿ ಜನಿಸಿದರು.ಇವರಿಗೆ ೧೯೧೮ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ಜೀವನ[ಬದಲಾಯಿಸಿ]

ಮ್ಯಾಕ್ಸ್ ಪ್ಲಾಂಕ್, ಪರಮಾಣುವನ್ನು ಜಗತ್ತಿಗೆ ಪರಿಚಯಿಸಿದ ಖ್ಯಾತ ವಿಜ್ಞಾನಿ. ಇವರು ೧೮೫೮, ಏಪ್ರಿಲ್ ೨೩ ರಂದು ಡೇನಿಪ್ ರೇವು ಕೀಲ್ ಎಂಬ ಪ್ರದೇಶದಲ್ಲಿ ಜನಿಸಿದರು. ಇವರ ತಂದೆ ತಾಯಿ ಮೂಲತಃ ಜರ್ಮನಿಯವರು. ಮ್ಯಾಕ್ಸ್ ಪ್ಲಾಂಕ್ ರ ತಂದೆ ನ್ಯಾಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹೀಗಾಗಿ ಮುಂದೆ ಇವರ ತಂದೆಗೆ ವರ್ಗಾವಣೆ ಯಾದಾಗ ಕುಟುಂಬ ಸಮೇತ ಇವರು ಮ್ಯೂನಿಚ್ ಗೆ ಬರಬೇಕಾಯಿತು.[೨]

ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಮ್ಯಾಕ್ಸ್ ಪ್ಲಾಂಕ್, ಮುಂದೆ ಮ್ಯೂನಿಚ್ ಮತ್ತು ಬರ್ಲಿನ್ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು.

ಸಾಧನೆ[ಬದಲಾಯಿಸಿ]

ಇವರು ಪರಮಾಣು ಜಗತ್ತಿಗೆ ಕ್ರಮಬದ್ಧ ವಿಧಾನದ ಮೂಲಕ ಅಧ್ಯಯನ ಮಾಡಲು ಬಲವಾದ ಅಡಿಪಾಯ ಹಾಕಿದರು. ಒಂದು ವಸ್ತು ಯಾವ ರೀತಿ ಪರಮಾಣು ಗುಂಪಾಗಿದೆಯೋ ಅದರಂತೆ ಶಕ್ತಿಯ ಕಟ್ಟುಗಳ ಸಂಕೀರ್ಣ ಅಥವಾ ಗುಂಪು ಎಂದು ಜಗತ್ತಿಗೆ ತಿಳಿಸಿಕೊಟ್ಟರು. ಇವರು ಶಕ್ತಿಯ ಮಾಪನಕ್ಕೆ E=hv ಎಂಬ ಸರಳ ಸೂತ್ರ ನೀಡಿದರು. E ಶಕ್ತಿಯ ಪೊಟ್ಟಣ, v ಇದಕ್ಕೆ ಕಾರಣವಾದ ಆವೃತ್ತಿ, h ಇವುಗಳ ಅಣುಧಾತು. h ಒಂದು ನಿಯತಾಂಕ ಎಂದು ಪ್ಲಾಂಕ್ ಪ್ರತಿಪಾದಿಸಿದರು. Eಯನ್ನು ಅವರು ಕ್ವಾಂಟಮ್ ಎಂದು ಕರೆದರು.[೩]

ಕ್ವಾಂಟಮ್ ಸಿದ್ಧಾಂತದ ಜನಕ ಮ್ಯಾಕ್ಸ್ ಪ್ಲಾಂಕ್ ೧೯೪೭, ಅಕ್ಟೋಬರ್ ೩ ರಂದು ವಿಧಿವಶರಾದರು.

ಉಲ್ಲೇಖಗಳು[ಬದಲಾಯಿಸಿ]

  1. Physics Tree profile Max Planck
  2. https://www.nobelprize.org/nobel_prizes/physics/laureates/1918/planck-bio.html
  3. http://scienceworld.wolfram.com/biography/Planck.html

ಬಾಹ್ಯ ಸಂಪರ್ಕಗಳು[ಬದಲಾಯಿಸಿ]