ರಣಹದ್ದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Indian Vulture
Indian vulture
Conservation status
Scientific classification
Kingdom:
Animalia
Phylum:
Class:
Order:
Family:
Genus:
Species:
G. indicus
Binomial name
Gyps indicus
(Scopoli, 1786)
Synonyms

Gyps indicus indicus

ರಣಹದ್ದು ಒಮ್ಮುಖವಾಗಿ ವಿಕಾಸಗೊಂಡ, ಸಾಮಾನ್ಯವಾಗಿ ಕೊಳೆತ ಮಾಂಸವನ್ನು ತಿನ್ನುವ ಹಿಂಸ್ರಪಕ್ಷಿಗಳ ಎರಡು ಗುಂಪುಗಳಿಗೆ ನೀಡಲಾದ ಹೆಸರು ಕ್ಯಾಲಿಫೋರ್ನಿಯಾದ ಹಾಗು ಆಂಡೀಸ್‍ನ ಕಾಂಡರ್ಗಳನ್ನು ಒಳಗೊಂಡಿರುವ ನವೀನ ಜಗತ್ತಿನ ರಣಹದ್ದುಗಳು; ಮತ್ತು ಆಫ್ರಿಕಾದ ಬಯಲುಗಳಲ್ಲಿ ಸತ್ತ ಪ್ರಾಣಿಗಳ ಶವವನ್ನು ತಿನ್ನುತ್ತಿರುವಾಗ ಕಾಣಲಾದ ಪಕ್ಷಿಗಳನ್ನು ಒಳಗೊಂಡಿರುವ ಪ್ರಾಚೀನ ಜಗತ್ತಿನ ರಣಹದ್ದುಗಳು. ಕೆಲವು ಸಾಂಪ್ರದಾಯಿಕ ಪ್ರಾಚೀನ ಜಗತ್ತಿನ ರಣಹದ್ದುಗಳು ಗಡ್ಡವಿರುವ ರಣಹದ್ದನ್ನು ಒಳಗೊಂಡಂತೆ) ಇತರ ರಣಹದ್ದುಗಳಿಗೆ ನಿಕಟವಾಗಿ ಸಂಬಂಧಿಸಿಲ್ಲ ಎಂದು ಸಂಶೋಧನೆ ತೋರಿಸಿದೆ ಮತ್ತು ಹಾಗಾಗಿ ರಣಹದ್ದುಗಳನ್ನು ಎರಡರ ಬದಲು ಮೂರು ವರ್ಗಗಳಲ್ಲಿ ಉಪವಿಂಗಡಿಸಬೇಕು. ನವೀನ ಜಗತ್ತಿನ ರಣಹದ್ದುಗಳು ಉತ್ತರ ಹಾಗು ದಕ್ಷಿಣ ಅಮೇರಿಕಾದಲ್ಲಿ ಕಾಣುತ್ತವೆ. ಪ್ರಾಚೀನ ಜಗತ್ತಿನ ರಣಹದ್ದುಗಳು ಯೂರೋಪ್, ಆಫ್ರಿಕಾ ಹಾಗು ಏಷ್ಯಾದಲ್ಲಿ ಕಾಣುತ್ತವೆ, ಇದರರ್ಥ ಎರಡು ಗುಂಪುಗಳ ನಡುವೆ, ಆಸ್ಟ್ರೇಲಿಯಾ ಹಾಗು ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ರಣಹದ್ದುಗಳು ಎಲ್ಲ ಖಂಡಗಳಲ್ಲೂ ಕಾಣುತ್ತವೆ.[೧]

ರಣಹದ್ದು! ಈ ಹೆಸರು ಕೇಳಿದರೇ ಮಕ್ಕಳಾದಿಯಾಗಿ ಎಲ್ಲರಿಗೂ ಭಯ. ಆಕಾಶದಲ್ಲಿ ಎಷ್ಟೇ ಎತ್ತರದಲ್ಲಿ ಹಾರಾಡುತ್ತಿದ್ದರೂ ಶವಗಳ ಸುತ್ತ ದಿಢೀರನೆ ಪ್ರತ್ಯಕ್ಷವಾಗುತ್ತಿದ್ದ, ನಮ್ಮ ಸಾಕು ಪ್ರಾಣಿ ಹಾಗೂ ವನ್ಯಜೀವಿಗಳ ಶವಗಳನ್ನು ತಿಂದು ಊರನ್ನು ದುರ್ವಾಸನೆಯಿಂದ ರಕ್ಷಿಸುತ್ತಿದ್ದ ರಣಹದ್ದುಗಳು ಈಗ ನಿಧಾನವಾಗಿ ನಮ್ಮಿಂದ ಕಣ್ಮರೆಯಾಗುತ್ತಿವೆ. ಹಿಂದೊಮ್ಮೆ ಭಾರತದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದ ಬೋಳು ತಲೆಯ ರಣಹದ್ದುಗಳು ಕಾಣಸಿಗುವುದೇ ಅಪರೂಪ.

ಲಕ್ಷಣಗಳು[ಬದಲಾಯಿಸಿ]

ಬೋಳುತಲೆ, ಉದ್ದನೆಯ ಕತ್ತು, ಚಿಕ್ಕ ಬಾಲ, ಕತ್ತಿನ ಸುತ್ತ ಬಿಳಿಯ ಗರಿ, ಕಂದು ಬಣ್ಣದ ಮೈ, ಮಾಂಸ ಕತ್ತರಿಸುವ ಬಲಿಷ್ಠ ಕೊಕ್ಕು, ವಿಶಾಲವಾದ ರೆಕ್ಕೆ. ಭಯ ಹುಟ್ಟಿಸುವ ಕಣ್ಣು ಇಷ್ಟು ಬಿಳಿ ಹಿಂತಲೆಯ ರಣ ಹದ್ದಿನ ವಿಶೇಷತೆ. ಆಫ್ರಿಕಾದಲ್ಲಿ ಕಂಡು ಬರುವ ಹದ್ದುಗಳಲ್ಲಿಯೇ ಅತ್ಯಂತ ದೊಡ್ಡ ಪಕ್ಷಿ. ಬಿಳಿ ಹಿಂತಲೆಯ ರಣಹದ್ದು ಇದನ್ನು ಹಳೆ ಜಗತ್ತಿನ ಹದ್ದು ಎಂದು ಗುರುತಿಸಲಾಗಿದೆ. ಈ ತಲೆಮಾರಿನ ಹದ್ದುಗಳ ತಲೆ ಗರಿಗಳಿಂದ ತುಂಬಿರುತ್ತದೆ. ಜತೆಗೆ ಗಾತ್ರದಲ್ಲಿಯೂ ಚಿಕ್ಕದು. ಆದರೆ, ಬೋಳು ತಲೆಯ ರಣಹದ್ದು 4 ರಿಂದ 7 ಕೇಜಿ ಭಾರ ಮತ್ತು 94 ಸೆ. ಮೀ. ನಷ್ಟು ಉದ್ದ ಮತ್ತು 218 ಸೆ.ಮೀ ನಷ್ಟು ಅಗಲವಾದ ರೆಕ್ಕೆ ಹೊಂದಿದೆ. ಈ ಜಾತಿಯ ಹದ್ದುಗಳು ಆಫ್ರಿಕಾ, ಏಷ್ಯಾ ಮತ್ತು ಯುರೋಪ್‌ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅವುಗಳ ಜಾತಿಗೆ ಸೇರಿದ ಬಿಳಿ ಪೃಷ್ಠದ ರಣ ಹದ್ದು ಭಾರತದಲ್ಲಿಯೂ ಕಂಡು ಬರುತ್ತದೆ. ಬೋಳು ತಲೆ ರಣಹದ್ದು ಕೇವಲ ಮಾಂಸವನ್ನು ಮಾತ್ರ ತಿನ್ನುತ್ತವೆ.

ಮಾನವನೇ ಶತ್ರು[ಬದಲಾಯಿಸಿ]

ಮಾನವನನ್ನು ಬಿಟ್ಟರೆ ಹುಲಿಯಿಂದ ಮಾತ್ರ ಇವುಗಳನ್ನು ಬೇಟೆಯಾಡಲು ಸಾಧ್ಯ. ಉಳಿದಂತೆ ಇವಕ್ಕೆ ಯಾರೂ ವೈರಿಗಳಿಲ್ಲ. ವೈರಿಗಳಿಂದ ಪಾರಾಗುವ ಸಲುವಾಗಿ ಇವು ಈಗ ತಾನೇ ತಿಂದ ಆಹಾರವನ್ನು ಕೊಂಡೊಯ್ಯುತ್ತವೆ ಅಥವಾ ಆ ಜಾಗದಲ್ಲಿ ಕೆಲವು ದಿನಗಳ ಕಾಲ ಗಬ್ಬು ವಾಸನೆ ಸೂಸುವ ವಾಂತಿ ಮಾಡುತ್ತವೆ. ಹೀಗಾಗಿ ಇವುಗಳಿಂದ ಆಹಾರ ಕಸಿಯುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ.

ಆಕಾಶದಲ್ಲಿ ಗಸ್ತು[ಬದಲಾಯಿಸಿ]

ಹದ್ದುಗಳು ಶ್ರಮವಿಲ್ಲದೇ ಹಾರಾಟ ನಡೆಸುತ್ತವೆ. ರೆಕ್ಕೆ ಬಡಿಯದೇ ಒಂದು ತಾಸುಗಳ ಕಾಲ ಆಕಾಶದಲ್ಲಿ ಸುತ್ತುಹೊಡೆಯಬಲ್ಲದು. ಈ ತಲೆಮಾರಿನ ಹದ್ದುಗಳು ವಾಸನೆಯ ಮೂಲಕ ಆಹಾರ ಹುಡುಕುವ ಸಾಮರ್ಥ್ಯ ಹೊಂದಿದ್ದರೆ, ಹಳೆ ಜಗತ್ತಿನ ಹದ್ದು ಎಂದು ಗುರುತಿಸಿಕೊಂಡಿರುವ ಬೋಳು ತಲೆಯ ರಣ ಹದ್ದು ಕಣ್ಣಿನ ಸಹಾಯದಿಂದ ಆಹಾರ ಹುಡುಕುತ್ತದೆ. ಇದರ ದೃಷ್ಟಿ ಮಾನವನಿಗಿಂತ 8 ಪಟ್ಟು ಸೂಕ್ಷ್ಮ. ಅಂದರೆ ಇವು 3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರುತಿಸಬಲ್ಲದು. ಆಕಾಶದಲ್ಲಿ ಇವು ಸುತ್ತು ಹೊಡೆಯುತ್ತಾ ಕ್ರಮೇಣ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ. ಗುಂಪಾಗಿಯೇ ದಾಳಿ ನಡೆಸುತ್ತವೆ. ಸತ್ತ ಪ್ರಾಣಿಗಳ ಮುಂದೆ ನೂರಕ್ಕೂ ಹೆಚ್ಚು ಹದ್ದು ಜಮಾವಣೆಗೊಂಡು ಹಂಚಿಕೊಂಡು ಆಹಾರ ತಿನ್ನುತ್ತವೆ.

ಹಾರಾಟಕ್ಕೆ ಕೊನೆಯೇ ಇಲ್ಲ[ಬದಲಾಯಿಸಿ]

ಹದ್ದು ಹಾರುವ ಎತ್ತರಕ್ಕೆ ಕೊನೆಯೇ ಇಲ್ಲ. 12 ಕಿ.ಮೀ ಎತ್ತರಕ್ಕೂ ಹದ್ದು ತಲುಪಬಲ್ಲದು. ಅಲ್ಲದೇ ತಾಸಿಗೆ 60-80 ಕಿ.ಮೀ ವೇಗದಲ್ಲಿ ಸಾವಿರಾರು ಕಿ.ಮೀ ಸುತ್ತಳತೆಯಲ್ಲಿ ಗಸ್ತು ಹೊಡೆಯುತ್ತವೆ. ಆಹಾರ ಕಂಡೊಡನೆ ಗಂಟೆಗೆ 120 ಕಿ.ಮೀ ವೇಗದಲ್ಲಿ ನೆಲಕ್ಕೆ ಇಳಿದು ಶವಗಳ ಮುಂದೆ ಪ್ರತ್ಯಕ್ಷವಾಗುತ್ತವೆ. ಎತ್ತರದ ಮರಗಳ ತುತ್ತತುದಿಯಲ್ಲಿ ಇವು ಗೂಡು ಕಟ್ಟುತ್ತದೆ. ಆದರೆ ಈ ದೊಡ್ಡ ಹದ್ದುಗಳ ಗೂಡು ಕಾಗೆ ಗೂಡಿನಷ್ಟೇ ಚಿಕ್ಕದು.

ಪರಿಸರ ಸ್ನೇಹಿ[ಬದಲಾಯಿಸಿ]

ಹದ್ದು ಕೊಳೆತ ಪ್ರಾಣಿಗಳ ದೇಹವನ್ನು ತಿನ್ನುವುದರಿಂದ ಹರಡಬಹುದಾದ ರೋಗ-ರುಜಿನಗಳಿಂದ ಊರನ್ನು ರಕ್ಷಿಸುತ್ತಿದ್ದವು. ಪಾರ್ಸಿ ಜನಾಂಗದವರ ದೇಹ ತಿನ್ನಲೂ ರಣ ಹದ್ದುಗಳೇ ಬೇಕು. ಆದರೆ ಬೋಳು ತಲೆಯ ರಣ ಹದ್ದು ಕ್ರಮೇಣ ಅಳಿವಿನ ಅಂಚಿಗೆ ತಲುಪಿದೆ. ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಮುಂದೊಂದು ದಿನ ಸಂಪೂರ್ಣ ಕಣ್ಮರೆಯಾದರೂ ಅಚ್ಚರಿಯಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. "Vulture World". www.slate.com,17 May 2017.
"https://kn.wikipedia.org/w/index.php?title=ರಣಹದ್ದು&oldid=1009271" ಇಂದ ಪಡೆಯಲ್ಪಟ್ಟಿದೆ