ಪಾರ್ಸಿ ಜನಾಂಗ
ಭಾಷೆಗಳು | |
---|---|
Gujarati, English, Marathi | |
ಧರ್ಮ | |
Zoroastrianism |
ಪಾರ್ಸಿ ಅಥವಾ ಪಾರ್ಸೀ ಎಂದರೆ pronounced /ˈpɑrsiː/ಎರಡು ದೊಡ್ಡ ಜನಾಂಗದ ಜೊರೊಸ್ಟ್ರಿಯನ್‌ಅನುಯಾಯಿಗಳ ಸಮಾಜ ಅಥವಾ ಭಾರತದ ಉಪಖಂಡಕ್ಕೆ ಸೇರಿದ ಸಮೂದಾಯ ಎಂದು ಉಲ್ಲೇಖಿಸಲಾಗುತ್ತದೆ. ಈ ಪದವನ್ನು ಪುರಾತನ ಪರ್ಸಿಯನ್ ರು ತಮ್ಮನ್ನು ಗುರುತಿಸಿಕೊಳ್ಳಲು ಹೇಳುತ್ತಿದ್ದರು. ಸಂಪ್ರದಾಯಿಕವಾಗಿ ಸದ್ಯದ ಪಾರ್ಸಿಗಳು ಇರಾನಿನ ಝೊರೊಸ್ಟ್ರಿಯನ್ಸ್ ಗಳೆಂದು ಹೇಳಲಾಗುತ್ತದೆ.ಸುಮಾರು ೧೦ನೆಯ ಶತಮಾನದಲ್ಲಿADಯಲ್ಲಿ ಭಾರತದ ಪಶ್ಚಿಮ ಭಾಗಕ್ಕೆ ವಲಸೆ ಬಂದರು,ಇದಕ್ಕೆ ಕಾರಣವೆಂದರೆ ಇರಾನಿನಲ್ಲಿನ ಮುಸ್ಲಿಮರಕಾಟಕ್ಕೆ ಬೇಸತ್ತು ಅವರು ವಲಸೆ ಹೋದರೆಂದು [೧][೨][೩][೪] ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಬಹುಕಾಲದಿಂದ ಇರುವ ಪಾರ್ಸಿಗಳು ಇರಾನಿನಿಂದ ಬಂದಿದ್ದಾರಾದರೂ ಅವರೆಲ್ಲ ಇತ್ತೀಚೆಗೆ ಬಂದವರು.ಭಾರತೀಯ ಎರಡು ಝೊರೊಸ್ಟ್ರಿಯನ್ ಸಣ್ಣ ಗುಂಪುಗಳಿಗೆ ಸೇರಿದವರಾಗಿದ್ದಾರೆ.
Part of a series on |
Zoroastrianism |
---|
Primary topics |
Angels and demons |
Scripture and worship |
|
Accounts and legends |
History and culture |
Adherents |
ವ್ಯಾಖ್ಯಾನ ಮತ್ತು ಗುರುತಿಸುವಿಕೆ
[ಬದಲಾಯಿಸಿ]ಆದರೆ "ಪಾರ್ಸಿ" ಎಂಬ ಪದವು ಝೋರೊಸ್ಟ್ರಿಯನ್ ಪಠ್ಯಗಳಲ್ಲಿ ೧೭ನೆಯ ಶತಮಾನದ ವರೆಗೂ ಸೇರಿರಲಿಲ್ಲ. "ಆ ವೇಳೆಯ ವರೆಗೆ ಈ ಪಠ್ಯಗಳು ಝೋರ್ಥೊಶ್ಟಿ ,"ಝೋರೊಸ್ಟ್ರಿಯನ"ಅಥವಾ ಬೆಹ್ದಿನ್ ,[ಅದರ]ಒಳ್ಳೆಯ ಸ್ವಭಾವದ" ಅಥವಾ ಉತ್ತಮ ಧರ್ಮಕ್ಕೆ ಸೇರಿದ ಎನ್ನಲಾಗುತಿತ್ತು. ಸುಮಾರು ೧೨ನೆಯ ಶತಮಾಮನದಲ್ಲಿಹದಿನಾರು ಶ್ಲೋಕಗಳ ಒಂದು ಸಂಸ್ಕ್ರ್ತತಪಠ್ಯದಲ್ಲಿ ಹಿಂದು ಪಂಡಿತರು ಬರೆದ ಪಾರ್ಸಿಗಳ ಮೆಚ್ಚುಗೆ ಬಗ್ಗೆ ವಿವರಣೆ ಇದೆ.(ಪಾರ್ಸಿ ಪುರಾಣ;cf. Paymaster 1954, p. 8ಇದರಲ್ಲಿ ಝೋರೊಸ್ಟ್ರಿಯನ್ ಅರ್ಚಕನೊಬ್ಬನ ವಿವರಣೆ ಇದೆ.)ಈ ದಾಖಲೆಯನ್ನು ಪಾರ್ಸೀ ಗಳ ಅತ್ಯಂತ ಆರಂಭಿಕ ಮಾಹಿತಿ ಎಂದು ಪರಿಗಣಿಸಬೇಕಾಗಿದೆ.ಭಾರತೀಯ ಝೋರೊಸ್ಟ್ರಿಯನ್ ರ ಗುರುತು ಪತ್ತೆ ಇದರಿಂದ ಸಾಧ್ಯವೆನ್ನಲಾಗಿದೆ. ಯುರೊಪಿಯನ್ ಭಾಷೆಯಲ್ಲಿ ಪಾರ್ಸೀ ಗಳ ಮೊದಲ ಗೋಚರತೆಯು ೧೩೨೨ ರಲ್ಲಿ ಕಾಣಬಹುದು.ಫ್ರೆಂಚ್ ಭಿಕ್ಸು ಜೊರ್ಡಾನಸ್‌ಇವರ ಸ್ತಿತ್ವದ ಬಗ್ಗೆ ಠಾನಾಮತ್ತು ಬ್ರೋಚ್‌ನಲ್ಲಿ ಗುರುತಿಸಿದ್ದಾನೆ. ನಂತರ ಈ ಪದವು ಹಲವಾರು ಯುರೊಪಿಯನ್ ಪ್ರವಾಸಿಗರ ಜರ್ನಲ್ ಗಳಲ್ಲಿ ಕಾಣಿಸಿತು.ಮೊದಲು ಫ್ರೆಂಚ್ ಮತ್ತು ಪೊರ್ಚ್ ಗೀಸ್ ನಂತರ ಇಂಗ್ಲಿಷ್ ಇದೆಲ್ಲವೂ ಯುರೊಪಿಯ್ನ್ ಕೃತ ಸ್ಥಳೀಯ ಭಾಷೆಯ ಪಠ್ಯವಾಗಿದೆ. ಉದಾಹರಣೆಗೆ ಪೊರ್ಚ್ ಗೀಸ್ ವೈದ್ಯ ಗ್ರಸಿಯಾ ಡಿಒರೊಟಾ ಪ್ರಕಾರ ೧೫೬೩ರಲ್ಲಿ "ಅಲ್ಲಿ ಹಲವಾರು ವ್ಯಾಪಾರಿಗಳು [...]ಕಾಂಬೈ [...]ರಾಜ್ಯದಲ್ಲಿ ಇರುವುದನ್ನು ಅವರು ವೀಕ್ಷಿಸಿದ್ದಾರೆ.ಅವರನ್ನು ಎಸ್ಪಾರ್ಸಿಸ್ ಎಂದು ಕರೆಯಲಾಗುತಿತ್ತೆಂದು ಅವರು ವಿವರಿಸಿದ್ದಾರೆ, ನಾವು ಪೊರ್ಚ್ ಗೀಸರು ಅವರನ್ನು ಜಿವ್ಸ್ ಎನ್ನುತ್ತೇವೆ ಆದರೆ ಅವರು ಜಿವ್ಸ್ ಅಲ್ಲ. ಅವರು ಜೆನಶಗಳು ." ಆರಂಭಿಕ ೨೦ನೆಯ ಶತಮಾನದಲ್ಲಿ ಕಾನೂನಿನ ನಿಯಮಾವಳಿಗಂತೆ (ಕೆಳಗೆ ಕೊಟ್ಟಿರುವ ನೋಡಿ:ಸ್ವಯಂ-ಗ್ರಹಿಕೆಗಳು)ನ್ಯಾಯಾಧೀಶರುಗಳಾದ ದಾವರ್ ಮತ್ತು ಬಿಮ್ಯಾನ್ ಪ್ರಕಾರ (೧೯೦೯:೫೪೦)"ಪಾರ್ಸೀ"ಎನ್ನುವ ಪದವು ಇರಾನ್‌ನಲ್ಲಿ (Stausberg 2002, p. I.373)Boyce (2002, p. 105)ಝೋರೊಸ್ಟ್ರಿಯನ್ಸ್ ಅವರನ್ನು ಉಲ್ಲೇಖಿಸುತಿತ್ತು.ಅದೇ ರೀತಿ ಹಿಂದೂ ಪದವು ಯಾರು ಭಾರತದ ಉಪಖಂಡಕ್ಕೆ ಸೇರಿರುತ್ತಾರೆ ಅವರನ್ನು ಇರಾನಿನಲ್ಲಿ ಹಿಂದೂ ಎನ್ನಲಾಗುತಿತ್ತು.ಅದೇ ರೀತಿ ಭಾರತಿಯರು ಪಾರ್ಸೀಗಳನ್ನು ಉಲ್ಲೇಖಿಸಿದಾಗ ಅವರು ಗ್ರೇಟ್ ಇರಾನ್ ಗೆ ಸಂಬಂಧಪಟ್ಟವರೆಂದು ಹೇಳಲಾಗುತ್ತದೆ.ಅವರು ಕಟ್ಟಾ ಪರ್ಸಿಯನ್ನರುಹೌದೊ ಅಲ್ಲವೊ ಎಂಬುದನ್ನು ಪರಿಗಣಿಸದೇ ಈ ಅಭಿಪ್ರಾಯಕ್ಕೆ ಬರಲಾಗುತಿತ್ತು. ಯಾವುದೇ ಸಂದರ್ಭದಲ್ಲಿ 'ಪಾರ್ಸಿ'ಅನ್ನುವ ಶಬ್ದವು ಕೇವಲ ಅವರ ಇರಾನಿತ್ವ ಅಥವಾ 'ಪರ್ಸಿಯನ್ ' ಮೂಲವನ್ನಷ್ಟೇ ತೋರುವುದಿಲ್ಲಿ. ಇದು ಬಹುತೇಕವಾಗಿ ಒಂದು ಸಂಸ್ಕೃತಿಯ ಅಥವಾ ಜನಸಮೂದಾಯದ ಪರಿಚಯ" (Stausberg 2002, p. I. 373)ಮಾಡಿಕೊಡುತ್ತದೆ. ಇನ್ನೂ ಹೆಚ್ಚಾಗಿ (ಅನುವಂಶೀಯತೆಯೇ ಜನಾಂಗೀಯತೆಯನ್ನು ಗುರುತಿಸುವ ಒಂದೇ ಸಂಗತಿಯಲ್ಲ)ಪಾರ್ಸೀಗಳು ಪ್ರತಿ ಕ್ವಿಸ್ಸಾ ಎಂದರೆ ಅವರನ್ನು ಪಾರ್ಥಿಯನ್ಸ್ ಎನ್ನಬಹುದಿತ್ತು. (Boyce 2002, p. 105)ಪಾರ್ಸೀಸಿಸಮ್ (ಅಥವಾ 'ಪಾರ್ಸಿಸಿಸಮ್ ')ಎನ್ನುವ ಪದ ಅಕ್ವೆಟಿಲ್ -ಡುಪೆರ್ರಾನ್ ಎಂಬುದಕ್ಕೆ ಹೋಲಿಸಲಾಗುತ್ತದೆ,ಈತ ೧೭೭೫೦ರಲ್ಲಿ ಝೋರೊಸ್ಟ್ರಿಯನ್ ಪದದ ಬಳಕೆಯ ಪೂರ್ವದಲ್ಲೇ ಪಾರ್ಸಿ ಮತ್ತು ಝೋರೊಸ್ಟ್ರಿಯನ್ ಶಬ್ದಗಳನ್ನು ಪ್ರಯೋಗಿಸಿದ್ದಾನೆ.ಅದರೆ ಇಲ್ಲಿ ಕಣ್ತಪ್ಪಿನಿಂದಾಗಿ ಧರ್ಮಾಚರಣೆಯಲ್ಲಿ ಕೊನೆಯಲ್ಲಿ ಉಳಿದವ್ರೆಂದು ಉಲ್ಲೇಖಿಸಲಾಗಿದೆ.
ಒಂದು ಜನಾಂಗೀಯ ಸಮೂದಾಯ
[ಬದಲಾಯಿಸಿ]ಆದಾಗ್ಯೂ ಪಾರ್ಸಿಗಳು ಮೂಲಭೂತವಾಗಿ ಪರ್ಸಿಯಾದಿಂದ ಬಂದವರು,ಹಲವಾರು ಭಾರತೀಯ ಪಾರ್ರ್ಸಿಗಳು ಸಾಮಾಜಿಕ ಅಥವಾ ಕೌಟಿಂಬಿಕ ಸಂಬಂಧಗಳನ್ನು ಪರ್ಸಿಯನ್ನರಲ್ಲಿ ಕಳೆದುಕೊಂಡಿದ್ದಾರೆ. ಹಲವರು ಭಾಷೆ ಅಥವಾ ಇತ್ತೀಚಿನ ಇತಿಹಾಸವನ್ನು ತಮ್ಮೊಂದಿಗೆ ಹೋಲಿಸಿಕೊಳ್ಳುವುದಿಲ್ಲ. ಶತಮಾನಗಳಿಂದಲೂ ಮೊದಲ ಝೋರೊಸ್ಟ್ರಿಯನ್ಸ್ ಭಾರತಕ್ಕೆ ಬಂದಾಗಿನಿಂದ ಭಾರತದ ಸಮಾಜದಲ್ಲಿ ತಾವೇ ಒಂದಾಗಿ ಹೋಗಿದ್ದಾರೆ,ಅದಲ್ಲದೇ ತಮ್ಮದೇ ಆದ ಸ್ವಂತ ಆಚರಣೆ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ.(ಹೀಗೆ ಜನಾಂಗೀಯತೆಯ ಗುರುತನ್ನು ಸೂಚಿಸಿಕೊಂಡಿದ್ದಾರೆ.) ಇಲ್ಲಿನ ಪಾರ್ಸಿ ಸಮುದಾಯವು ವಿಶಿಷ್ಟ ಲಕ್ಷಣವನ್ನು ಹೊಂದಿದೆ,ಅವರು ಹೊಂದಾಣಿಕೆ,ಭಾಷೆ ಮತ್ತು ಇತಿಹಾಸದೊಂದಿಗೆ ಭಾರತೀಯ ರಾಷ್ಟ್ರೀಯತೆಯನ್ನು ಪಡೆದಿದ್ದಾರೆ.ಆದರೆ ಸರಾಸರಿ ಭಾರತೀಯರಂತಿಲ್ಲ.(ಕೇವಲ೦.೦೦೬% ರಷ್ಟು ಜನಸಂಖ್ಯೆ )ಈ ಜನಾಂಗವು ಭಾರತೀಯ ರಕ್ತ ಸಂಬಂಧ ಅಥವಾ ಸಾಂಸ್ಕೃತಿಕ ನಡೆನುಡಿ ಮತ್ತು ಧಾರ್ಮಿಕ ಆಚರಣೆಗಳಿಂದ ಸಂಪೂರ್ಣ ಭಿನ್ನವಾಗಿದ್ದಾರೆ. ವಂಶಾವಳಿಗಳ DNA ಪರೀಕ್ಷೆಗಳು ಅದರ ಶುದ್ಧತೆಯನ್ನು ಪರಿಶೀಲಿಸಿದಾಗ ಸಮ್ಮಿಶ್ರ ಫಲಿತಾಂಶಗಳು ಬಂದಿವೆ. ಒಂದು ಅಧ್ಯಯನದ ಪ್ರಕಾರ ಅವರು ಪಾರ್ಸಿ ಅಂಶಗಳನ್ನು (Nanavutty 1970, p. 13)ಉಳಿಸಲು ಮತ್ತು ಪರ್ಸಿಯನ್ ಬೇರುಗಳನ್ನು ಗಟ್ಟಿಯಾಗಿಸಲು ಅವರು ಸ್ಥಳೀಯರೊಂದಿಗೆ ಮದುವೆ ಸಂಬಂಧಗಳನ್ನು ಬೆಳಸಲಿಲ್ಲ. (Qamar et al. 2002, p. 1119)ಸುಮಾರು ೨೦೦೨ ಅಧ್ಯಯನದಲ್ಲಿY-ಕ್ರೊಮೊಸೊಮ್ (ಪಿತೃ ಮೂಲದ ವಂಶ)ಗಳನ್ನು DNA ಮೂಲಗಳನ್ನು ಪಾಕಿಸ್ತಾನಿ ಪಾರ್ಸಿಗಳನ್ನು ಪರೀಕ್ಷಿಸಿದಾಗ ಅವರು ತಮ್ಮ ಪ್ರಾದೇಶಿಕತೆಗಿಂತ ಇರಾನಿಯನ್ನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಆದಾಗ್ಯೂ ೨೦೦೪ರ ಅಧ್ಯಯನದ ಪ್ರಕಾರ ಪಾರ್ಸಿ ವಂಶಾವಳಿಯ ರೂಪಾಂತರ DNA (ರೂಪಾಂತರದ ಅನುವಂಶೀಯತೆ)ಪರೀಕ್ಷೆ ಮಾಡಿದಾಗ ಇವರು ಇರಾನಿಯನ್ನರಿಗಿಂತ ಗುಜರಾತಿಗಳವಂಶವಾಹಿನಿಗೆ ಸೇರುತ್ತಾರೆಂಬುದನ್ನು ಸ್ಪಷ್ಟಪಡಿಸಲಾಗಿದೆ. ಅಂದರೆ ೨೦೦೨ರ ಅಧ್ಯಯನವನ್ನು ಗಣನೆಗೆ ತೆಗೆದುಕೊಂಡ ನಂತರದ ೨೦೦೪ರ ಅಧ್ಯಯನಗಾರರು" ಆ ಕಾಲದಲ್ಲಿ ಪುರುಷ ಮಾಧ್ಯಮದೊಂದಿಗೆ ವಲಸೆ ಬಂದ ಪಾರ್ಸಿಗಳು ಸ್ಥಳೀಯ ಮಹಿಳೆಯರನ್ನು [...]ಮದುವೆಯಾದದ್ದರಿಂದ ಅವರ ಪ್ರಾಚೀನರ ವಂಶವಾಹಿನಿಯು mtDNA ನನ್ನು ಕಳೆದುಕೊಂಡು ನಂತರದ ದಿನಗಳಲ್ಲಿ ಇರಾನಿಯನ್ ನ ಮೂಲವನ್ನು (Quintana-Murci 2004, p. 840)ಕಳೆದುಕೊಂಡರು".
ಸ್ವಯಂ-ಗ್ರಹಿಕೆಗಳು
[ಬದಲಾಯಿಸಿ]ಯಾರು ಪಾರ್ಸಿ ಅಥವಾ ಯಾರು ಪಾರ್ಸಿಗಳಲ್ಲ ಎಂಬ ಬಗ್ಗೆ ಇನ್ನೂ ವಿವಾದಗಳಿವೆ,ಭಾರತದಲ್ಲಿರುವ ಝೋರೊಸ್ಟ್ರಿಯನ್ ಸಮುದಾಯ ಕೂಡಾ ಒಂದು ದೊಡ್ಡ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದೆ ಎನ್ನಬಹುದು. ಸಾಮಾನ್ಯವಾಗಿ ಒಬ್ಬ ಪಾರ್ಸಿಯನ್ನು ಹೀಗೆ ಕರೆಯುತ್ತಾರೆ: a) ನೇರವಾಗಿ ಮೂಲ ಪರ್ಸಿಯನ್ ನಿರಾಶ್ರಿತರು ಮತ್ತು b)ವಾಡಿಕೆಯಂತೆ ಝೋರೊಸ್ಟ್ರಿಯನ್ ಧರ್ಮದಿಂದ ಪ್ರವೇಶ ಪಡೆದಿದ್ದು. ಈ ವಿಚಾರದಂತೆ ಪಾರ್ಸಿ ಯು ಒಂದು ಸಮೂದಾಯದ ಜನಾಂಗೀಯ-ಧರ್ಮದ ವಿನ್ಯಾಸಗಾರ ಎನ್ನಬಹುದು. ಈ ಸಮಾಜದ ಕೆಲವರ ವಾದದ ಪ್ರಕಾರ ಮಗುವೊಂದು ಪಾರ್ಸಿ ತಂದೆಯನ್ನು ಹೊಂದಿದ್ದರೆ ಮಾತ್ರ ಧರ್ಮದಲ್ಲಿ ಪ್ರವೇಶಿಸಬಹುದಾಗಿದೆ,ಆದರೆ ಎಷ್ಟೊ ಜನ ಝೋರೊಸ್ಟ್ರಿಯನ್ ರು ಇದನ್ನು ನಿಯಮಗಳ ಉಲ್ಲಂಘನೆಯೆಂದೂ ಹೇಳುತ್ತಾರೆ.ಇಲ್ಲಿ ತಮ್ಮ ಜನಾಂಗದ ಲಿಂಗ ಸಮಾನತೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂಬುದು ಅವರ ವಾದ.ಇದು ಹಳೆಯ ಪಾರ್ಸಿ ಎಂಬ ವ್ಯಾಖ್ಯಾನದ ಗಡಿ ಮೀರುತ್ತದೆ ಎನ್ನುವುದು ಅವರ ವಿಚಾರವಾಗಿದೆ. a)ಪಾರ್ಸಿ ಎಂಬ ವ್ಯಾಖ್ಯಾನವು ಪದೇ ಪದೇ ೧೯೦೯ರ ಕಾನೂನು ತೀರ್ಪಿನಂತೆ (ಅದೀಗ ಗೌಣ) ಅಂದರೆ ವ್ಯಕ್ತಿಯೊಬ್ಬ ಕೇವಲ ಝೋರೊಸ್ಟ್ರಿಯನ್ ಆಗಿ ಮತಾಂತರನಾದರೆ ಆತ ಪಾರ್ಸಿಯಾಗಲಾರ;(ಈ ಪ್ರಕರಣವೂ ಪ್ರಶ್ನೆಯ ಹಂತದಲ್ಲಿದೆ)ಪಾರ್ಸಿಗಳು ಯಾರು ಮೂಲವಾಗಿ ಪರ್ಸಿಯನ್ ವಲಸೆಗಾರರಿದ್ದಾರೊ ಮತ್ತು ಯಾರು ಝೋರೊಸ್ಟ್ರೊಯನ್ ತಂದೆ ತಾಯಿಗಳಿಂದ ಹುಟ್ಟಿರುತ್ತಾರೊ ಅಲ್ಲದೇ ಯಾರು ಝೋರೊಸ್ಟ್ರಿಯನ್ ಧರ್ಮವನ್ನು ಆಚರಿಸುತ್ತಾರೊ ಅವರು ಪಾರ್ಸೀಗಳೆಂದು ಕರೆಯಲ್ಪಡುತ್ತಾರೆ. b)ಪರ್ಸಿಯಾದ ಇರಾನಿಗಳು ಝೋರೊಸ್ಟ್ರಿಯನ್ ಧರ್ಮವನ್ನು ಯಾರು ಪಾಲಿಸುತ್ತಾರೊ; c)ಪಾರ್ಸಿ ತಂದೆ ಮತ್ತು ಅವರ ಮೂಲ ಸಂಬಂಧದ ಜೊತೆಗೆ ಹುಟ್ಟಿದ ಮಕ್ಕಳು ಕ್ರಮಬದ್ದ ಆಚರಣೆಯಂತೆ ಧರ್ಮದೊಳಕ್ಕೆ ಪ್ರವೇಶ ಪಡೆಯುವವರು (Sir Dinsha Manekji Petit v. Sir Jamsetji Jijibhai 1909)ಪಾರ್ಸಿಗಳಾಗಿರುತ್ತಾರೆ. ಈ ವ್ಯಾಖ್ಯಾನವನ್ನು ಹಲವಾರು ವೇಳೆ ಅನೂರ್ಜಿತಗೊಳಿಸಿದ ಸಂದರ್ಭಗಳೂ ಇವೆ. ಭಾರತದ ಸಂವಿಧಾನದ ಪ್ರಕಾರ ಸಮಾನತೆಯ ಮೂರನೆಯ ಅಧಿನಿಮವು ವಂಶವಾಹಿನಿಯಕುರಿತ ವಿಷಯಗಳ ಕೆಲವು ತತ್ವಗಳನ್ನು ಪ್ರಸ್ತಾಪಿಸಿದೆ. ಎರಡನೆಯ ಉಪನಿಯಮವು ೧೯೪೮ ರಲ್ಲಿ (Sarwar Merwan Yezdiar v. Merwan Rashid Yezdiar 1948)ಅನೂರ್ಜಿತಗೊಂಡಿತು. ಸುಮಾರು ೧೯೫೦ರಲ್ಲಿನ ಒಂದು ಮನವಿ ಅರ್ಜಿಯುಲ್ಲಿ ೧೯೪೮ರ ತೀರ್ಪನ್ನು ಎತ್ತಿ ಹಿಡಿದು ಇಡೀ ೧೯೦೯ರ ವ್ಯಾಖ್ಯಾನವು ಸಂಪೂರ್ಣ ನ್ಯಾಯಾಲಯದ ಸಮ್ಮತಿ ಗೆ ಒಳಪಟ್ಟಿಲ್ಲ.ಇದು ಸಾಮಾನ್ಯವಾದ ಮತ್ತು ಕಾನೂನಿನ್ ಕಟ್ಟುಪಾಡಿಗೆ ಒಳಪಟ್ಟಿಲ್ಲ.ಎಂದು ಹೇಳಲಾಯಿತು.(ಇದನ್ನೇ ೧೯೬೬ರಲ್ಲಿ Merwan Rashid Yezdiar v. Sarwar Merwan Yezdiar 1950ಸ್ಪಷ್ಟಪಡಿಸಲಾಯಿತು);Jamshed Irani v. Banu Irani 1966) ಆದರೆ ಬಹುತೇಕ ಎಲ್ಲ ಸುಶಿಕ್ಷಿತ ಪಾರ್ಸಿಗಳು ೧೯೦೯ರ ತೀರ್ಪನ್ನು ಕಾನೂನಿನ ಕಟ್ಟುಪಾಡೆಂದು ಪರಿಗಣಿಸುತ್ತಾರೆ. "ಫೆಬ್ರವರಿ ೨೧,೨೦೦೬ರ ಪರ್ಸಿಯಾನಾ ಎಂಬ ಪಾಕ್ಷಿಕದಲ್ಲಿ ಸಂಪಾದಕರು ವಿವರಿಸಿದಂತೆ ಹಲವಾರು ಮಕ್ಕಳು ಪಾರ್ಸಿ ತಾಯಿ ಮತ್ತು ಪಾರ್ಸಿಯೇತರ ತಂದೆಗೆ ಜನಿಸಿದ್ದಾರೆ,ಇವರನ್ನು ಧರ್ಮದಒಳಗೆ ಸೇರಿಸಲಾಗಿದೆ,ಆದರೆ ಇಲ್ಲಿ "ಮಕ್ಕಳು ತಾಯಿಯ ಧರ್ಮವನ್ನು ಅನುಸರಿತ್ತಾರೊ ಎಂಬ ಬಗ್ಗೆ ಸಾಕಷ್ಟು ವಿಚಾರಗಳನ್ನು ನಾವೆಲ್ಲರೂ ಪರಿಶೀಲಿಸಬೇಕಾಗಿದೆ". ಆದಾಗ್ಯೂ ಸಂಪಾದಕರು ಹೇಳುವಂತೆ "ಅವರು ಕಾನೂನುಬದ್ದವಾಗಿ ಮತ್ತು ಪೂರ್ಣಪ್ರಮಾಣದ ಝೋರೊಸ್ಟ್ರಿಯನ್ಸ್ ಆದರೂ ಅವರನ್ನು ಪರ್ಸಿ ಝೋರೊಸ್ಟ್ರಿಯನ್ ನಂತೆ ಕಾಣಲಾಗದು.ಆದ್ದರಿಂದ ಕಾನೂನು ಸಂಪ್ರದಾಯದ ಆಚರಣೆಗಳಾದ [ಅಗ್ನಿ ದೇವಾಲಯಗಳು]ಮತ್ತು ಕೆಲವು ಅಪರೂಪದ ಝೋರೊಸ್ಟ್ರಿಯನರ್ ಸಂಪ್ರದಾಯಗಳನ್ನು ಅವರು (Parsiana 2006)ಮಾಡಲಾರರು.
ಜನಸಂಖ್ಯಾ ಅಂಕಿಅಂಶಗಳು
[ಬದಲಾಯಿಸಿ]
ಪ್ರಸ್ತುತ ಜನಸಂಖ್ಯೆ
[ಬದಲಾಯಿಸಿ]ಒಂದು ಸಾಂಪ್ರದಾಯಕವಾದ ಅಂದಾಜಿನ ಪ್ರಕಾರ ವಿಶ್ವಾದ್ಯಂತ ಪಾರ್ಸಿಗಳ ಸಂಖ್ಯೆಯು ೧೦೦,೦೦೦ರಷ್ಟಿದೆ.ಆದರೆ ವೈಯಕ್ತಿಕ ಅಂದಾಜು ಕೆಲಮಟ್ಟಿಗೆ ಹೆಚ್ಚು [೫]ಕಡಿಮೆ ಅಂಕಿ ಸಂಖ್ಯೆ ನೀಡಬಹುದು;ಕೆಲವರು ಹೇಳುವಂತೆ ೧೦೦,೦೦೦ಕಿಂತ ಕಡಿಮೆಯೇ [೬]ಇರಬಹುದು,ಇಲ್ಲವೆ "ಗರಿಷ್ಟ"೧೧೦,೦೦೦ ಅಥವಾ ೧೧೦,೦೦೦ ± ೧೦%.ಎಂದು [೭]ಹೇಳಲಾಗುತ್ತದೆ. ಮೊದಲ ಎರಡು ಅಂಕಿಅಂಶಗಳು ೧೯೮೦ರಲ್ಲಿನ ದಾಖಲೆಯಾಗಿದವೆ,ಅಂದರೆ ಭಾರತದ ಜನಗಣತಿ ೧೯೮೧ರಲ್ಲಿನ ಫಲಿತಾಂಶವಾಗಿದೆ.ಒಟ್ಟಾರೆ ೭೧,೬೩೦ ಪಾರ್ಸಿಗಳು ಈ ಪಟ್ಟಿಯಲ್ಲಿದ್ದರು ಜಾನ್ ಹಿನ್ನೆಲ್ ನ ಆರಂಭಿಕ ಲೆಕ್ಕಾಚಾರವು ಇದೇ ಅಂಶಗಳನ್ನು ಬೆಳಕಿಗೆ ತಂದಿತ್ತು. ಕೊನೆಯ ಅಂಕಿಅಂಶವು ಒಟ್ಟು ಜನಸಂಖ್ಯೆಯಲ್ಲಿನ ಪಾರ್ಸಿಗಳ ಜನಸಂಖ್ಯೆಯನ್ನು ತೋರಿಸುತ್ತದೆ.ಭಾರತದ ೨೦೦೧ರ ಜನಗನತಿ ಪ್ರಕಾರ ೬೯,೬೦೧ ಪಾರ್ಸಿಗಳು ಇಲ್ಲಿದ್ದಾರೆ,ಅದರಲ್ಲೂ ಬಹುತೇಕವಾಗಿ ಮುಂಬಯಿಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರ ವಾಸಸ್ಥಾನವಿದೆ.(ಈ ಹಿಂದೆ ಇದನ್ನು ಬಾಂಬೆ ಎನ್ನಲಾಗುತಿತ್ತು) "ಭಾರತ ಬಿಟ್ಟು ಇನ್ನುಳಿದ ದೇಶಗಳಲ್ಲಿನ ವರದಿಯಾಗಿರುವಂತೆ:(ಸ್ಥಳೀಯ ಪಾರ್ಸಿ/ಝೋರೊಸ್ಟ್ರಿಯನ್ ಅಸೊಸಿಯೇಶನ್ )ಪಾರ್ಸಿ ಜನಸಂಖ್ಯೆಯು ಬ್ರಿಟೇನ್ ೫೦೦೦,USA, ೬,೫೦೦;ಕೆನಡಾ ೪೫೦೦; ಆಸ್ಟ್ರೇಲಿಯಾ,೩೦೦;ಪಾಕಿಸ್ತಾನ,೩೦೦೦;ಹಾಂಗ್ ಕಾಂಗ್ ೧೫೦;ಕೀನ್ಯ ೮೦; (ಹಿನ್ನೆಲ್ಸ್ ನೊಳಗೆ [೮]). ಪಾಕಿಸ್ತಾನ ಒಂದನ್ನು ಅಪವಾದವೆಂಬಂತೆ ಬಿಟ್ಟರೆ ಉಳಿದೆಲ್ಲಡೆ ಪಾರ್ಸಿಗಳು ಮೊದಲ/ಎರಡನೆಯ ತಲೆಮಾರಿನವರಾಗಿ ಕಾಣುತ್ತಾರೆ)ಅವರೆಲ್ಲ ಸಾಂಪ್ರದಾಯಿಕ ರೀತಿಯಲ್ಲಿ ನೆಲೆಯೂರಿದ್ದಾರೆ.
ಜನಸಂಖ್ಯಾ ಕ್ರಮಗಳು
[ಬದಲಾಯಿಸಿ]ಭಾರತೀಯ ಜನಗಣತಿಯ ಅಂಕಿಅಂಶಗಳ ಪ್ರಕಾರ ಪಾರ್ಸಿಗಳ ಸಂಖ್ಯೆಯು ಬರಬರುತ್ತಾ ದಶಕಗಳಿಂದೀಚೆಗೆ ಇಳಿಮುಖದತ್ತ ಸಾಗಿದ್ದು ಕಾಣುತ್ತದೆ, ಅತಿ ಹೆಚ್ಚಿನ ಜನಸಂಖ್ಯೆಯು ೧೯೪೦-೪೧ರಲ್ಲಿ ೧೧೪,೮೯೦ ಎಂದು ದಾಖಲಾಗಿತ್ತು.ಅದು ಸದ್ಯದ ಕ್ರೌನ್ ಕಾಲನಿ (ಬ್ರಿಟಿಶ್ ಆಡಳಿತಭಾಗ)ಭಾರತ,ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನೊಳಗೊಂಡಿದೆ. ಸ್ವಾತಂತ್ರಾ ನಂತರದ ಭಾರತದಲ್ಲಿನ ಅಂಕಿಅಂಶಗಳ ಪ್ರಕಾರ(೧೯೫೧:೧೧೧,೭೯೧)ಆದರೆ ಇವತ್ತಿನ ವರೆಗೆ ದಶಕವೊಂದಕ್ಕೆ ಸುಮಾರು ೯%ರಷ್ಟು ಇಳಿಕೆಯಾಗಿದೆ. ನ್ಯಾಶನಲ್ ಕಮೀಟಿ ಫಾರ್ ಮೈನೊರಿಟ್ಯೀಸ್ ಪ್ರಕಾರ ಈ ಸಮುದಾಯದ ಜನಸಂಖ್ಯೆ ಇಳಿಕೆಗೆ ವಿಶಿಷ್ಟ ಕಾರಣಗಕಳಿವೆ ಎಂದು ಹೇಳುತ್ತದೆ.,ಇದಕ್ಕೆ ಬಹು ಮುಖ್ಯವಾದುದೆಂದರೆ ಸಂತಾನ ಇಲ್ಲದಿರುವುದು ಮತ್ತು ವಲಸೆಯೇ (Roy & Unisa 2004, p. 8, 21 )ಕಾರಣ. ಈ ಅಂದಾಜನ್ನು ನೋಡಿದರೆ ೨೦೨೦ರ ಹೊತ್ತಿಗೆ ಪಾರ್ಸಿಗಳ ಸಂಖ್ಯೆ ಕೇವಲ ೨೩,೦೦೦ಆಗಲಿದೆ.(ಇದು ಭಾರತದ ಒಟ್ಟು ಜನಸಂಖ್ಯೆಯ ೦.೦೦೦೨% ರಷ್ಟಾಗುವುದು) ನಂತರ ಇದನ್ನು ಸಮುದಾಯ ಎಂದು ಕರೆಯುಅವ ಬದಲು ಒಂದು 'ಗುಂಪು 'ಅಥವಾ ಬುಡಕಟ್ಟು ಎಂದಷ್ಟೇ (Taraporevala 2000, p. 9)ಹೇಳಬೇಕಾಗುತ್ತದೆ. ಇದರಲ್ಲಿ ಸುಮಾರು ಒಂದಂಶದಷ್ಟು ಪ್ರಮಾಣವು(Roy & Unisa 2004, p. 21 )ವಲಸೆಯಿಂದಾಗುತ್ತಿದೆ. ಮರಣದ ಪ್ರಮಾಣಕ್ಕಿಂತ ಜನನ ಪ್ರಮಾಣ ತೀರ ಅತ್ಯಲ್ಪವಾಗಿದ್ದು ೨೦೦೧ರ ಅಂಕಿಅಂಶಗಳ ಪ್ರಕಾರ ಒಟ್ಟು ಜನಸಂಖ್ಯೆಯ ೩೧%ರಷ್ಟು ೬೦ವರ್ಷ ಅಥವಾ ಅದಕ್ಕಿಂತ ಹೆಚ್ಚು ಮೇಲ್ಪಟ್ಟವಸ್ರಿದ್ದಾರೆ. ರಾಷ್ಟ್ರೀಯ ಸರಾಸರಿ ಪ್ರಮಾಣವು ಈ ಗುಂಪಿಗೆ ೭%ರಷ್ಟಾಗಿದೆ. ಕೇವಲ ೪.೭%ರಷ್ಟು ಪಾರ್ಸಿ ಸಮುದಾಯದ ಜನಸಂಖ್ಯೆಯು ೬ ವರ್ಷದೊಳಗಿನವರದಾಗಿದೆ.ಇದು ಪ್ರತಿ ಸಾವಿರಕ್ಕೆ ಪ್ರತಿವರ್ಷ ೭ ಜನನದ ಪ್ರಮಾಣ (Roy & Unisa 2004, p. 14 )ದಾಖಲಾಗುತ್ತಿದೆ.
ಇನ್ನಿತರ ಜನಸಂಖ್ಯಾ ಅಂಕಿಅಂಶಗಳು
[ಬದಲಾಯಿಸಿ]ಪಾರ್ಸಿಗಳಲ್ಲಿ ಲಿಂಗ ಪ್ರಮಾಣದ ವ್ಯತ್ಯಾಸ ಕೂಡಾ ವಾಡಿಕೆಯಂತಿಲ್ಲ.೨೦೦೧ರ ಅಂದಾಜಿನಂತೆ ೧೦೦೦ ಪುರುಷರಿಗೆ ೧೦೫೦ ಮಹಿಳೆಯರಿದ್ದಾರೆ,(೧೯೨೪ರಿಂದ ೧೯೯೧ರವರೆಗೆ)(ವೃದ್ದ ಪುರುಷರಿಗಿಂತ ವೃದ್ದ ಮಹಿಳೆಯರ ಸಂಖ್ಯೆಯೇ ಜಾಸ್ತಿ ಇದೆ.) ರಾಷ್ಟ್ರೀಯ ಸರಾಸರಿ ಪ್ರಮಾಣವು ೧೦೦೦ ಪುರುಷರಿಗೆ ೯೩೩ ಮಹಿಳೆಯರಿದ್ದಾರೆ. ಪಾರ್ಸಿಗಳಲ್ಲಿ ಅತ್ಯಧಿಕ ಸಾಕ್ಷರ ಪ್ರಮಾಣವಿದೆ.೨೦೦೧ರ ಪ್ರಕಾರ ಸಾಕ್ಷರತೆಯು ೯೭.೯%ಆಗಿದೆ,ಇದು ಯಾವುದೇ ಭಾರತಿಯ ಜನಾಂಗಕ್ಕಿಂತ ಅಧಿಕವೆನಿಸಿದೆ.(ರಾಷ್ಟ್ರೀಯ ಸರಾಸರಿಯು೬೪.೮%ರಷ್ಟಾಗಿದೆ) ಸುಮಾರು ೯೬.೧ರಷ್ಟು ಪಾರ್ಸಿಗಳು ನಗರಗಳಲ್ಲಿ ವಾಸವಾಗಿದ್ದಾರೆ,(ರಾಷ್ಟ್ರೀಯ ಸರಾಸರಿಯು ೨೭.೮%ಗಳಾಗಿದೆ.) ಅತಿ ದೊಡ್ಡ ಬಾಂಬೆ ಪ್ರದೇಶದಲ್ಲಿ ಪಾರ್ಸಿಗಳ ಜನಸಾಂದ್ರತೆ ಜಾಸ್ತಿ;ca. ೧೦%ರಷ್ಟು ಮಹಿಳೆಯರು ಮತ್ತು ca. ೨೦% ರಷ್ಟು ಪುರುಷರು ಮದುವೆ (Roy & Unisa 2004, p. 18, 19 )ಮಾಡಿಕೊಳ್ಳುವುದಿಲ್ಲ.
ಇತಿಹಾಸ
[ಬದಲಾಯಿಸಿ]ಗುಜರಾತಿಗೆ ಆಗಮನ
[ಬದಲಾಯಿಸಿ]ಕ್ವಿಸ್ಸಾ-i ಸಂಜನ ಪ್ರಕಾರ "ಸ್ಟೊರಿ ಆಫ್ ಸಂಜನ್ "ನಲ್ಲಿ ಭಾರತದ ಆರಂಭಿಕ ಇತಿಹಾಸದಲ್ಲಿ ಝೋರೊಸ್ಟ್ರಿಯನ್ ನಿರಾಶ್ರಿತರು ಹೇಗೆ ಭಾರತಕ್ಕೆ ಬಂದು ನೆಲಎಯೂರಿದರು ಎಂಬುದು ಆರು ಶತಮಾನದ ದಾಖಲೆ ಇತಿಹಾಸವಾಗಿದೆ.ಇದರಲ್ಲಿನ ಒಂದು ಗುಂಪು ತಮ್ಮ ಆಗಮನ ಮತ್ತು ವಲಸೆಯನ್ನು ಅಂದಾಜಿನ ಮೇಲೆ ಹೇಳಿಕೊಳ್ಳುತ್ತದೆ.(ಈ ಗುಂಪು ಮೊದಲಿಗೆ ಬಂದಿದ್ದು ಎನ್ನಲಾಗಿದೆ)ಇವರೆಲ್ಲರೂ (ಗ್ರೇಟರ್ )ಖೊರಾಸಾನ್ ದಿಂದ ಮೂಲತ: (Hodivala 1920, p. 88)ಬಂದವರು. ಈ ಪ್ರದೇಶವು ಸೆಂಟ್ರಲ್ ಏಷ್ಯಾದಲ್ಲಿದ್ದು ಇದು ಇರಾನಿನ ಆಗ್ನೇಯ ಭಾಗಕ್ಕೆ ಒಳಪಟ್ಟಿದೆ.(ಇದು ಖೊರಾಸಾನ ಪ್ರಾಂತಕ್ಕೆ ಒಳಪಟ್ಟಿದೆ)ಉತ್ತರ ಅಪಘಾನಿಸ್ತಾನ್ ಮತ್ತು ಮೂರು ಸೆಂಟ್ರಲ್ ಏಷ್ಯನ್ ರಿಪಬ್ಲಿಕ್ ಗಳು,ಅಂದರೆ ತಾಜಕಿಸ್ತಾನ್ ,ಟರ್ಕ್ ಮೆನಿಸ್ತಾನ್ ಮತ್ತು ಉಜ್ಬೆಕಿಸ್ತಾನಕ್ಕೆ ಒಳಪಟ್ಟಿವೆ. ಈ ವಲಸೆಗಾರರು ಸ್ಥಳೀಯ ಆಡಳಿತಗಾರ ಜಡಿ ರಾನಾನಿಂದ ಪರವಾನಿಗೆ ಪಡೆದು ಅದರ ನಿಯಮದಂತೆ ಅವರು ಸ್ಥಳೀಯ ಭಾಷೆ ಗುಜರಾತಿ,ಅವರ ಮಹಿಳೆಯರು ಸ್ಥಳೀಯ ಸೀರೆ ಉಡುವ ಸಂಪ್ರದಾಯವನ್ನು ಆಚರಿಸಬೇಕೆಂಬುದು ಅವರ ಕರಾರಿಗಿತ್ತು.ಅದರಲ್ಲಿ ಅವರು ತಮ್ಮ ತೋಳುಗಳನ್ನು ಪ್ರದರ್ಶಿಸಲು (Hodivala 1920)ಅವಕಾಶವಿರಲಿಲ್ಲ) (Hodivala 1920, p. 88)ನಂತರ ಈ ವಲಸೆಗಾರರು ಕರಾರುಗಳಿಗೆ ಒಪ್ಪಿಕೊಂಡರಲ್ಲದೇ ತಮ್ಮ ವಾಸಸ್ಥಾನಕ್ಕೆ ಸಂಜನ್‌ಎಂಬ ಹೆಸರಿಟ್ಟರು. ಅವರ ಮೂಲನಿವಾಸದ ನಗರ ಸಂಜನ್‌ಇದರ ಹೆಸರಾಯಿತು.ಇದು ಮೆರ್ವ್‌ಬಳಿಯಲ್ಲಿದೆ, ಅಂದರೆ ಟರ್ಕೆಮಿನಿಸ್ತಾನ್ (Hodivala 1920, p. 88)ಎನ್ನುತ್ತಾರೆ. "ನೀವು ಹೇಗೆ ಇಲ್ಲಿ ಬದುಕು ಸಾಗಿಸುತ್ತೀರಿ ಎಂದಾಗ ಅವರ ಉತ್ತರ "ನಾವು ಹಾಲಿನಲ್ಲಿ ಕರಗುವ ಸಕ್ಕರೆಯಂತೆ ನಿಮ್ಮ ಸಂಸ್ಕೃತಿಯಲ್ಲಿ ಮಿಳಿತವಾಗುತ್ತೇವೆ." ಈ ಮೊದಲ ನಿರಾಶ್ರಿತರ ಗುಂಪು ಬ೬ದ ನಂತರದ ಐದು ವರ್ಷಗಳಿಗೆ ಎರಡನೆಯ ತಂಡ ಗ್ರೇಟರ್ ಖೊರಾಸಾನ್ ನಿಂದ ಬಂದು ಅದು ಅಲ್ಲಿನವರೊಂದಿಗೆ ತನ್ನ ಧಾರ್ಮಿಕ ನಿಯಮಗಳನ್ನು ಪಾಲಿಸಿ ಅವರೊಂದಿಗೆ ಮಿಳಿತವಾಯಿತು.(ದಿ ಅಲತ್ )(ಉಜ್ಬೆಕಿಸ್ತಾನದ ಜಿಲ್ಲೆ) ಇನ್ನೂ ಅಲ್ಲದೇ ಖೊರಾಸಾನಿ ಗಳು ಅಥವಾ ಕೊಹೊಸ್ತಾನಿ ಗಳು-ಪರ್ವತ ವಾಸಿ ಗಳು,ಈ ಮೊಅಲಿನ ಎರಡು ಗುಂಪುಗಳನ್ನು ಆರಂಭಿಕವಾಗಿ (Vimadalal 1979, p. 2) [ಸೂಕ್ತ ಉಲ್ಲೇಖನ ಬೇಕು]ಕರೆಯಲಾಯಿತು,ಇದರಲ್ಲಿ ಕನಿಷ್ಟ ಪಕ್ಷ ಒಂದು ಗುಂಪು ಈ ಪ್ರದೇಶದಿಂದ ವಲಸೆ ಬಂದಿದೆ.ಅದು ಸಾರಿಎಂಬ ಪ್ರದೇಶದಿಂದ;(ಇಂದು ಈ ಪ್ರದೇಶವನ್ನು ಮಜಂದರಾನ್ ,ಇರಾನ್ ಎನ್ನುತ್ತಾರೆ) (Paymaster 1954) ಸಂಜನ್ ಗುಂಪು ಮಾತ್ರ ಶಾಶ್ವತ ನೆಲಎವಾಸಿಗಳಾದರು;ಅವರು ಇಲ್ಲಿಗೆ ಬಂದು ತಮ್ಮ ವಾಸಸ್ಥಾನಗಳನ್ನು ಮಾಡಿಕೊಂಡರೆಂಬುವ ದಿನಾಂಕದ ಬಗ್ಗೆ ಇನ್ನೂ ವಿವಾದವಿದೆ. ಇಲ್ಲಿನ ಎಲ್ಲಾ ಮಾಹಿತಗಳ ಮೂಲಾಧಾರವೆಂದರೆ ಕ್ವಿಸ್ಸಾ ಇದು ಕೆಲವು ಕಾಲದ ಘಟನೆಗಳಿಗೆ ಕೆಲವೊಮ್ಮೆ ವಿರೋಧಾಭಾಸವೆನಿಸ್ದ್ದು ಸಹಜ. ಅನುಕ್ರಮವಾಗಿ ೯೩೬ AD,೭೬೫ AD ಮತ್ತು ೭೧೬ AD ವರ್ಷಗಳಲ್ಲಿ ಅವರು ಬಂದಿರಬಹುದಾದ ಸಾಧ್ಯತೆಗಳಿವೆ.ಈ ಕಾಲಮಾನದ ಬಗ್ಗೆ ಇನ್ನೂ ಸಂಶಯಗಳಿವೆ ಇದಕ್ಕೆ ಮೂಲ ಕಾರಣವೆಂದರೆ "ಪಾರ್ಸಿಗಳ ನಡುವಿನ ತೀವ್ರತರವಾದ ಕಾಳಗವೇ [...]ಕಾರಣವೆಂದು (Taraporevala 2000)ಹೇಳಬಹುದು. ಪಾರ್ಸಿಗಳ ಆಗಮನದ ನಿಗದಿತ ದಿನಾಂಕವನ್ನು ಪಾರ್ಸಿ ಪಠ್ಯಗಳಲ್ಲಿ ೧೮ನೆಯ ಶತಮಾನದ ಮುಂಚೆ ದಾಖಲಿಸಿಲ್ಲ. ಕ್ವಿಸ್ಸಾದ ಮಹತ್ವ ಏನೆಂದರೆ ಇದು ಘಟನೆಗಳನ್ನು ರಚಿಸುವಲ್ಲಿ ಹೆಚ್ಚಿನ ಪಾತ್ರ ವಹಿಸಿಲ್ಲ ಆದರೆ ಪಾರ್ಸಿಗಳ ವ್ಯಕ್ತಿತ್ವವನ್ನು ಅದು ಸಮಗ್ರ ಮಾಹಿತಿ ಮೂಲಕ ನೀಡಲು ಸಮರ್ಥವಾಗಿದೆ.ಅವರ ನೇರ ಸಂಬಂಧ ಹಾಗು ಆ ಗುಂಪುಗಳು ವಾಸಿಸುವ ಸಮುದಾಯದ ಸಾಂಸ್ಕೃತಿಕ ಪ್ರತಿಬಿಂಬವಾಗಿದೆ. ಆದರೂ ಈ ಪಠ್ಯವು ಪಾರ್ಸಿಗಳ ಪರಿಚಯ ಮತ್ತು ಅವರನ್ನು ಗುರುತಿಸುವ ಬಗ್ಗೆ ಬೆಳಕು ಚೆಲ್ಲುತ್ತದೆ. " ಏನೇ ಆದರೂ ಕೂಡಾ ಬಾಯಿ ಮಾತಿನ ವಿವರಕ್ಕಿಂತ ಇದು ದಾಖಲಿತ ವಿಷಯಗಳನ್ನು ನಮ್ಮ ಮುಂದಿಡುತ್ತದೆ.ಪಾರ್ಸಿಗಳ ಇಟಿಹಾಸದ ಶಾಸ್ತ್ರವನ್ನು ಅದು ಸ್ಥೂಲವಾಗಿ ವಿವರಿಸುತ್ತದೆ." (Kulke 1978, p. 25) ಆದರೆ ದಿ ಸಂಜನ್ ರೇ ಮೊದಲು ಉಪಖಂಡಕ್ಕೆ ಬಂದ ಝೋರೊಸ್ಟ್ರಿಯನ್ಸ್ ಅಲ್ಲವೆಂದು ಹೇಳಬಹುದು. ಸಿಂಧ್‌ಮತ್ತು ಬಲೂಚಿಸ್ತಾನಗಳು ಪೂರ್ವದ ಸಾಸ್ಸನಿದ್‌ನ (೨೨೬-೬೫೧ AD)ಪ್ರಾಂತವಾಗಿದ್ದವು. ಈ ಸಾಮ್ರಾಜ್ಯವು ನಂತರ ತನ್ನ ಮಿಲಿಟರಿ ತುಕುಡಿಯನ್ನು ಅಲ್ಲಿ ನೆಲೆ ಮಾಡಿತ್ತು. .ಇಂತಹ ಪ್ರಾಂತಗಳು ನಿರಂತರವಾಗಿ ತಮ್ಮ ಅಸ್ತಿತ್ವ ಕಳೆದುಕೊಂಡರೂ ಇರಾನ್ ಪೂರ್ವ ಮತ್ತು ಪಶ್ಚಿಮದೊಡನೆ ತನ್ನ ವ್ಯಾಪಾರಿ ವಹಿವಾಟ್ಗಳನ್ನು ಮುಂದುವರೆಸಿತ್ತು.ಬ್ರಾಹ್ಮಿನಕಲ್ ಪ್ರೊಹಾತ್ಸವಿಲ್ಲದ ಕಾರಣ ಸಮುದ್ರ ಯಾನಗಳು ನಿಲ್ಲುವ ಸ್ಥಿತಿ ತಲುಪಿದವು.ಹಿಂದುಗಳು ಇದನ್ನು ಮಲಿನಗೊಳಿಸುತ್ತಿದ್ದಾರೆಂಬ ಆಗಿನ ದೂರಿನನ ಮೇರೆಗೆ ಇರಾನಿಗಳು ಆಗ ವ್ಯಾಪಾರಿ ಘಟಕಗಳನ್ನು ಗುಜರಾತಿನಲ್ಲಿಯೂ ಆರಂಭಿಸಿದರು. ಅರಬ್ ಇತಿಹಾಸಜ್ಞ ಅಲ್ -ಮಸುದಿ ೯ನೆಯ ಶತಮಾನದಲ್ಲಿ ಝೋರೊಸ್ಟ್ರಿಯನ್ಸರ ಅಗ್ನಿ ದೇವಾಲಯಗಳು ಅಲ್ ಹಿಂದ್ ಮತ್ತು ಅಲ್ ಸಿಂಧ್ ನಲ್ಲಿ ಕಂಡು ಬಂದವು. (Stausberg 2002, p. I.374)ಬಹುಮಟ್ಟಿಗೆ ಗುಜರಾತಿಅನ ಬಂದರು ಪ್ರದೇಶಗಳು ಇರಾನಿಯನ್ ರ ವ್ಯಾಪಾರಕ್ಕೆ ಮತ್ತಷ್ಟು ನೆರವಾದವು;ಅಲ್ಲಿನ ಸಿಲ್ಕ್ ರೋಡ್ ನ್ನು ಅವರು ಮೆಚ್ಚಿ ವಿವಿಧ ಪ್ರದೇಶಗಳೊಂದಿಗೆ ತಮ್ಮ ವ್ಯಾಪಾರಿ ಸಂಬಂಧಗಲನ್ನು ಬೆಸೆದುಕೊಂಡರು. ಹೀಗೆ ಭಾರತೀಯರು ಮತ್ತು ಇರಾನಿಯನ್ನರ ನಡುವಿನ ಸಂಬಂಧವು ಕಾಮನ್ ಯುಗ(ಕ್ರಿಸ್ಚಿಯನ್ ಯುಗ)ಕ್ಕಿಂತಲೂ ಮುಂಚೆಯೂ ಉತ್ತಮವಾಗಿತ್ತು.ಪುರಾಣಗಳು ಮತ್ತು ಮಹಾಭಾರತದ ಕಥೆಗಳಲ್ಲಿ ಪರಸಿಕಾಸ್ ಅಂದರೆ ಇಂಡಸ್‌ನದಿಯ ಪಶ್ಚಿಮದಲ್ಲಿ ವಾಸಿಸುವರೆಂದು ವರ್ಣಿಸಲಾಗಿದೆ. (Maneck 1997, p. 15) "ಪಾರ್ಸಿ ಪುರಾಣೇತಿಹಾಸದ ಪ್ರಕಾರ ಅವರ ಪ್ರಾಚೀನರು ಮತ್ತು ಧಾರ್ಮಿಕ ನಿರಾಶ್ರಿತರು ಇರಾನ್ ನಲ್ಲಿನ ಅತ್ಯಾಭಿಮಾನದ ಮುಸ್ಲಿಮರ ಆಡಳಿತಕ್ಕೆ ಮತ್ತು ಅವರ ದಾಳಿಗೆ ಬೇಸತ್ತು ತಮ್ಮ ಧಾರ್ಮಿಕ ಆಚರಣೆಗಳನ್ನು ಜೀವಂತವಾಗಿಡಲು ಭಾರತದೆಡೆಗೆ ಧಾವಿಸಿದರು".(Maneck 1997, p. 15; cf. Paymaster 1954, pp. 2–3ಆದರೆ ಭಾರತದ ಪಶ್ಚಿಮ ಬಂದರುವಿನ ಭಾಗದಲ್ಲಿ ಅಭ್ವೃದ್ಧಿ ನೋಡಿದರೆ ಇದು ಇರಾನ್ ಮೇಲೆ ಅರಬ್ ತನ್ನ ಹಿಡಿತ ಸಾಧಿಸಿದ ತರುವಾಯ ಎಂದು ಹೇಳಬಹುದು.ಆದರೆ ಝೋರೊಸ್ಟ್ರಿಯನ್ ರ ಧಾರ್ಮಿಕತೆ ಮೇಲಿನ ದಾಳಿಗಳಿಂದ ಮಾತ್ರ ವಲಸೆ ನಡೆದಿಲ್ಲ ಎಂಬ ಸತ್ಯವು ಅರಿವಿಗೆ ಬರುತ್ತದೆ. "ಒಂದು ವೇಳೆ "ಸಾಂಪ್ರದಾಯಕ ' ೮ನೆಯ ಶತಮಾನದಲ್ಲಿ ಈ ವಲಸೆಯಾದ ಬಗ್ಗೆ ಕ್ವಿಸ್ಸಾ ದಲ್ಲಿನ ದಾಖಲೆಗಳನ್ನು ಅಧಿಕೃತವೆಂದು ನಂಬಲಾಗಿದೆ.ಆಗ ಇರಾನಿನಲ್ಲಿ ಝೋರೊಸ್ಟ್ರಿಯನ್ ಪ್ರಬಲವಾಗಿದ್ದ ಕಾಲದಲ್ಲೇ ಬಹುತೇಕ ಆರ್ಥಿಕ ಕಾರಣಗಳಿಂದಾಗಿ ಈ ವಲಸೆ ನಡೆದಿರಬಹುದಾದ ಸಾಧ್ಯತೆಯನ್ನು ತಳ್ಳುವಂತಿಲ್ಲ. (Maneck 1997, p. 15)ಇದು ಪ್ರಕರಣದಲ್ಲಿ ಕಿಸ್ಸಾ ವಿವರಿಸಿದಂತೆ ಪಾರ್ಸಿಗಳು ಮೂಲಭೂತವಾಗಿ ಆಗ್ನೇಯದಿಂದ ಬಂದವರಾಗಿದ್ದಾರೆ;(ಅಂದರೆ ಸೆಂಟ್ರಲ್ ಏಷ್ಯಾ)ಆವಾಗಲೇ ಸಿಲ್ಕ್ ರೋಡ್ ವ್ಯಾಪಾರಕ್ಕೆ ಅವರು (Stausberg 2002, p. I.373)ಹೆಸರಾಗಿದ್ದರು. "ಆದರೆ ೧೭ ನೆಯ ಶತಮಾನದಲ್ಲಿ ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯ ಪರಿಚಾರಕ ಹೆನ್ರಿ ಲಾರ್ಡ್ ಹೇಳುವ ಪ್ರಕಾರ ಪಾರ್ಸಿಗಳು ಭಾರತಕ್ಕೆ ತಮ್ಮ ಆತ್ಮ ಸಾಕ್ಷಾತ್ಕಾರ ಮತ್ತು ಬಿಡುಗಡೆಯ ಬೇಡಿ ಬಂದವರು ಆದರೆ ಅವರು ಬರಬರುತ್ತಾ ವ್ಯಾಪಾರಿ ವಲಯವನ್ನು ಆಕ್ರಮಿಸಿ ಭಾರತದ ಸಮುದ್ರ ಕಿನಾರೆ,ಬಂದರು,ಕರಾವಳಿ ಪ್ರದೇಶಗಳಲ್ಲಿ ತಮ್ಮ ವ್ಯಾಪಾರಿ ಕೇಂದ್ರಗಳನ್ನು ಸ್ಥಾಪಿಸಿಕೊಂಡರು. ಆಗ ಅರಬರು ಮುಸ್ಲಿಮೇತರರಿಗೆ ಹೆಚ್ಕಿನ ಕರ ವಿಧಿಸುತ್ತಿದ್ದರು;ತಮ್ಮ ಬಂದರುಗಳ ಮೂಲಕ ಸಾಗುವ ವ್ಯಾಪಾರಿಗಳಿಗೆ ಈ ತೆರಿಗೆ ಹೊರೆ ಬೀಳುತಿತ್ತು.ಇದೂ ಒಂದು ಪಾರ್ಸಿಗಳ ವಲಸೆಗೆ ಕಾರಣವಾಗಿರಬಹುದು ಆದರೆ ಇದೇ ಕಾರಣವೆಂದು ಹೇಳಲಾಗುದಿಲ್ಲ. "ಕೇವಲ ಕಾಟದಿಂದ ಬೇಸತ್ತು ತಾವು ವಲಸೆ ಬಂದೆವೆಂದು ಹೇಳುವ ಕಾರಣದಲ್ಲಿ (Nariman 1933, p. 277) [ಸೂಕ್ತ ಉಲ್ಲೇಖನ ಬೇಕು]ಸ್ವತಹ ಪಾರ್ಸಿಗಳೇ ಪ್ರಶ್ನೆಗಳಿಗೆ ತುತ್ತಾಗುತ್ತಾರೆ.ಇಡೀ ತಮ್ಮ ಸಮುದಾಯ ಮುಸ್ಲಿಮ್ ದಬ್ಬಾಳಿಕೆಯಿಂದ ಹೊರಗಡೆ ಬರಲು ಈ ವ್ಯಾಪಾರದ ಕಾರಣವೂ ಮೂಲವಾಗಿರಬಹುದು.ಅದಲ್ಲದೇ ಗುಜರಾತಿನಲ್ಲಿ ಸಲೀಸಾಗಿ ಬಂದು ತಮ್ಮ ನೆಲೆಯನ್ನು ಕಂಡುಕೊಂಡ ಪಾರ್ಸಿಗಳು ವಲಸೆಗೆ ಒಂದೇ ಕಾರಣವೆನ್ನುವುದನ್ನು ಅಲ್ಲಗಳೆಯುತ್ತಾರೆ. (Maneck 1997, p. 16)
ಆರಂಭಿಕ ವರ್ಷಗಳು
[ಬದಲಾಯಿಸಿ]ಆದರೆ ಸಂಜನ್ ಗಳು ಹೇಗೆ ನೆಲೆವಾಸ ಕಂಡುಕೊಂಡವು ಎನ್ನುವುದನ್ನು ಕಿಸ್ಸಾ ಅಲ್ಪಸ್ವಲ್ಪವೇ ವಿವರಿಸುತ್ತದೆ,ಅದು ತನ್ನ ಟಿಪ್ಪಣಿಯನ್ನು "ಫೈಯರ್ ಆಫ್ ವಿಕ್ಟರಿ" ಎಂಬುದರ ಮೂಲಕ ವಿವರಿಸುತ್ತದೆ(ಮಧ್ಯ ಪರ್ಸಿಯನ್ :ಅತಾಶ್ ಬಹರ್ಮ್ )ಇದು ಸಂಜನನಲ್ಲಿನ ಬೆಳವಣಿಗೆ ಮತ್ತು ನವಸಾರಿಗೆ ಸಾಗಿ ಹೋಗಿದ್ದು ಇದರಲ್ಲಿದೆ. ಢಲ್ಲಾ ಅವರ ಪ್ರಕಾರ ನಂತರದ ಕೆಲವು ಶತಮಾನದ ವರೆಗೆ "ಸಂಪೂರ್ಣ ಕಷ್ಟ-ಕಾರ್ಪಣ್ಯಗಳು"(sic ) ಎಲ್ಲಿಯವರೆಗೆ ಝೋರೊಸ್ಟ್ರ್ತಿಯನ್ ಭಾರತದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸುವದಿಲ್ಲವೋ ಅಲ್ಲಿಯವರೆಗೆ ದುಗುಡದಲ್ಲಿದ ಜನಾಂಗ ಕೊಂಚ ನಿಟ್ಟುಸುರು ಬಿಟ್ಟಿತು.ಈ ಹೊಸ ದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಹಲವು ಮಾರ್ಗಗಳನ್ನು ಪಾರ್ಸಿಗಲು (Dhalla 1938, p. 447)ಕಂಡುಕೊಂಡರು. "ಎರಡು ಶತಮಾನದ ನಂತರ ಗುಜರಾತಿನ ವಿವಿಧೆಡೆ ಪಾರ್ಸಿಗಳು ನೆಲೆಯಾದರು,ಇದು "ಅವರ ನ್ಯಾಯಾಂಗ ಪರಿಧಿ ಕಾರ್ಯಚಟುವಟಿಕೆಯ ವ್ಯಾಪ್ತಿಗೆ ಕೆಲಮಟ್ಟಿಗೆ ತೊಂದರೆಳನ್ನುಂಟು ಮಾಡಿತು. ಈ (Kulke 1978, p. 29)ಸಮಸ್ಯೆಗಳನ್ನು ೧೨೯೦ರ ಸುಮಾರಿಗೆ ಗುಜರಾತಿನಲ್ಲಿ ಪಾಂಥಕ್ ಗಳನ್ನು (ಜಿಲ್ಲೆಗಳು)ಮಾಡಿ ಅವುಗಳಿಗೆ ಒಬ್ಬ ಅರ್ಚಕನ ನೇತೃತ್ವ ಕೊಡುವಲ್ಲಿ ಆಯಾ ಕುಟುಂಬಗಳ ಸದಸ್ಯರು ಸಫಲರಾದರು. (ನ್ಯಾಯಾಧಿಕರಣದ ಪರಿಧಿ ಕುರಿತಂತೆ ಇನ್ನೂ ಪಾರ್ಸಿಗಳಲ್ಲಿ ವಿವಾದಗಳಿವೆ,ಅತಾಶ್ ಬಹ್ರಾಮ್ ತನ್ನ ಅಧಿಕಾರದ ವ್ಯಾಪ್ತಿಯನ್ನು ಉದ್ವದಾಗೆ ೧೭೪೨ರಲ್ಲಿ ವರ್ಗಾಯಿಸಲಾಯಿತು.ಈಗಲೂ ಕೂಡಾ ಆಯಾ ಪಾಂಥಕ್ ಕುಟುಂಬದ ವ್ಯಾಪ್ತಿಗಳಲ್ಲಿನ ನೇತೃತ್ವದ ಅಧಿಕಾರವನ್ನು ಪರ್ಯಾದ ಮೇಲೆ ನಡೆಸಲಾಗುತ್ತಿದೆ). ಮುಂಬಯಿ ಬಳಿಯ ಕನ್ಹೇರಿ ಗುಹೆಗಳಲ್ಲಿನ ಬರಹಗಳನ್ನು ಗಮನಿಸಿದರೆ ೧೧ ಶತಮಾನದ ಆರಂಭದಲ್ಲಿಮಿಡಲ್ ಪರ್ಸಿಯನ್ ಆವಾಗಿನ ಝೋರೊಸ್ಟ್ರಿಯನ್ ಅರ್ಚಕರ ಸಾಹಿತ್ಯ ಮತ್ತು ಉತ್ತರಾಧಿತ್ವದ ಭಾಷೆಯಾಗಿತ್ತು.ಈಗಲೂ ಕೂಡಾ ಇದೇ ಪರಕಂಪರೆ ಮುಂದುವರೆದಿದೆ. ಕಿಸ್ಸಾ ಮತ್ತು ಕನ್ಹೇರಿ ಕೆತ್ತನೆಯ ಬರಹಗಳಲ್ಲಿ ಬಿಟ್ಟರೆ ೧೨ ಮತ್ತು ೧೩ನೆಯ ಶತಮಾನದಲ್ಲಿ "ಪ್ರಭುದ್ದ" (Dhalla 1938)[verification needed]ಸಂಸ್ಕೃತ ಜೆಂದ್ ಭಾಷಾಂತರಗಳಲ್ಲಿ ಮತ್ತು ಅವೆಸ್ತಾವಿಮರ್ಶೆಗಳಲ್ಲಿ ಇದರ ಸಿದ್ದತೆಗಳ ಬಗ್ಗೆ ಇದೆ. ಈ ಭಾಷಾಂತರದ ಮೂಲಕ "ಧಾರ್ಮಿಕ ಅಧ್ಯಯನಗಳ ಪ್ರಕಾರ ಇದು ಅತ್ಯಂತ ಉತ್ಸಾಹದ ಅಂಶಗಳನ್ನು ನೀಡಿದೆ.ಇಲ್ಲಿ ಮಿಡಲ್ ಪರ್ಸಿಯನ್ ನ ಮತ್ತು ಸಂಸ್ಕ್ರತ್ ಪ್ರಾಬಲ್ಯ ಆಗಿನ ಕಾಲದ ಧಾರ್ಮಿಕ ಗುರುಗಳ ಆದೇಶದ ಮೇಲೆ ಇದನ್ನು ಆ ಕಾಲಕ್ಕೆ ತಕ್ಕಂತೆ (Dhalla 1938, p. 448)ಬದಲಾಯಿಸಲಾಗಿದೆ. ಆಗ ೧೩ನೆಯ ಶತಮಾನದಿಂದ ಹಿಡಿದು ೧೬ ನೆಯ ಶತಮಾನದ ವರೆಗೆ ಗುಜರಾತಿನ ಝೋರೊಸ್ಟ್ರಿಯನ್ ಅರ್ಚಕ ವರ್ಗವು ತಮ್ಮ ಸಹ ಧರ್ಮಿಕರಿರುವ ಇರಾನಿಗೆ ಇಪ್ಪತ್ತೆರಡು ಮನವಿಗಳನ್ನು ಕಳಿಸಿ ತಮ್ಮ ಆಚರಣೆಗಳ ಬಗ್ಗೆ ಎಲ್ಲ ವಿವರಗಳನ್ನು ನಮಗಿಂತ ಹೆಚ್ಕು ಗೊತ್ತಿರುವವರಾಗಿರಲಿ ಎಂದು ಅವರು ಈ ರೀತಿಯ ಮನವಿಗಳನ್ನು ಮಾಡುತ್ತಿದ್ದರು.ಹೀಗೆ ತಮ್ಮ ಇರಾನಿಯನ್ ನ ಝೋರೊಸ್ಟ್ರಿಯನ್ ರಿಗೆ ತಿಳಿಸುವಂತೆ ಅವರು ತಮ್ಮ ವ್ಯವಸ್ಥೆ (Dhalla 1938, p. 457)ಮಾಡಿಕೊಂಡಿದ್ದರು. ಇಂತಹ ಸಂವಹನ ಸಂಪರ್ಕಗಳನ್ನು ಅವರು ಜೋಪಾನವಾಗಿ ಕಾಯ್ದಿಟ್ಟುಕೊಂಡಿದ್ದಾರೆ.ಇವುಗಳನ್ನು ಸಮುದಾಯದ ಸುದೀರ್ಘ ಬರಹ ಗಳ ಪಟ್ಟಿಯೊಂದನ್ನು ಅವರು ೧೪೭೮-೧೭೬೬ ಅವಧಿಯೊಳಗಿನ ಈ ವಿವರವು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳನ್ನು ಒಳಗೊಂಡಿತ್ತು. ಸಾಮಾನ್ಯವಾಗಿ ೨೧ನೆಯ ಶತಮಾನದ ದೃಷ್ಟಿಯಿಂದ ಈ ಗುಜರಾತಿ:questionsಸೂಳ್ನುಡಿ ಗಳು ಎಲ್ಲೆಡೆಗೆ ಪ್ರಸಿದ್ದಿಗೆ ಬಂದವು.ಉದಾಹರಣೆಗೆ ಸುದೀರ್ಘ ಬರಹ ಗಳು ೩೭೬:ಅವೆಸ್ತನ್ ಭಾಷಾಂತರಕ್ಕಾಗಿ ಝೋರೊಸ್ಟ್ರಿಯನ್ ಅಲ್ಲದವರಿಂದ ತಯಾರಾದ ಮಸಿಯಿಂದ ತಯಾರಿಸಲಾಯಿತೆ ಅಥವಾ ಇದು ಆರಂಭಿಕ ಝೋರೊಸ್ಟ್ರಿಯನ್ ರ ಆತಂಕಗಳು ಆಧುನಿಕರಿಗೆ ವರ್ಗಾವಣೆಯಾಗಿವೆಯೇ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಹೀಗೆ ಮಸಿಯ ಪ್ರಶ್ನೆಯು ಸಾಮಾನ್ಯವಾಗಿ ಒಂದು ಹೆದರಿಕೆಯ ಸಂಕೇತದಂತೆ ಕೆಲಸ ಮಾಡುತ್ತದೆ.ಇದು ತನ್ನ ಗುರುತಿನ ನಷ್ಟವನ್ನೂ ತೋರಿಸುತ್ತದೆ.ಇದರಿಂದಾಗಿ ಈ ಪ್ರಮೇಯವು ಹೊಸ ಸವಾಲುಗಳನ್ನು ಮುಂದಿಟ್ಟರೂ ಅದರ ಮುಂದುವರಿಕೆ ೨೧ನೆಯ ಶತಮಾನದ ವರೆಗೂ ಇರುವುದು ಸಾಧ್ಯವಾಗುತ್ತದೆ. ಇನ್ನು ಝೋರೊಸ್ಟ್ರಿಯನ್ ಗಳಲ್ಲದವರ ಜುದ್ದಿನ್ ಗಳು ಮತಾಂತರದ ಬಗ್ಗೆ ಪ್ರಶ್ನಿಸಿದಾಗ ಉತ್ತರವು (R೨೩೭, R೨೩೮)ಒಪ್ಪಿಕೊಳ್ಳಬಹುದು ಮತ್ತಲ್ಲದೇ ಯೋಗ್ಯತೆಯನ್ನು (Dhalla 1938, pp. 474–475)ಮಾನದಂಡವಾಗಿಸುವುದು. ಹೇಗಾದರೂ "ಅವರು ತಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಬದುಕಿದ್ದರೂ ಅವರಿಗೆ ಮತಾಂತರದ ಬಗ್ಗೆ ಯಾವುದೇ ಉತ್ಸಾಹವಿರಲಿಲ್ಲ. ತಮ್ಮ ಅಂತ:ಸತ್ವದ ಭಾಗವು ವಿಭಿನ್ನಗೊಳ್ಳದಂತೆ ಇಂತಹ ವಿಶಾಲ ಜಗತ್ತಿನ ವಿವಿಧ ಸಂಸ್ಕೃತಿಗಳಲ್ಲಿ ತಮ್ಮ ಧರ್ಮ ಮತ್ತು ಸಂಸ್ಕೃತಿಯ ಉಳಿಯುವಿಗಾಗಿ ಅವರು ಪ್ರಬಲ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ.ಅವರ ಜನಾಂಗೀಯ ವಿಶಿಷ್ಟ ಗುಣಲಕ್ಷಣಗಳನ್ನು ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುತ್ತದೆ. ಹಿಂದು ಜಾತಿ ವ್ಯವಸ್ಥೆಯ ಪರಿಧಿಯಲ್ಲಿ ಬದುಕುತ್ತಿರುವ ಆ ಜನಾಂಗ ತಮ್ಮ ಸ್ವಂತ ಜನಾಂಗದ ಅಭ್ಯುದಯದೊಂದಿಗೆ ಪರಿಸರದ ಜವಾಬ್ದಾರಿಗೂ (Dhalla 1938, p. 474)ಬದ್ದರಾಗಿರಬೇಕಾಗುತ್ತದೆ. ಇನ್ನು ಕೆಲವು ಅಂಶಗಳನ್ನು ಗಮನಿಸಿದರೆ (ಅವರು ಭಾರತಕ್ಕೆ ಬಂದ ನಂತರ)ಝೋರೊಸ್ಟ್ರಿಯನ್ಸ್ ರು ತಮ್ಮ ಸಾಮಾಜಿಕ ರಚನೆಯನ್ನು ಉಳಿಸಲು ಹೆಣಗಾಡಿದ್ದಾರೆ,ಅವರು ತಮ್ಮೊಂದಿಗೆ ತಂದ ಸಂಸ್ಕೃತಿ,ಆಚರಣೆಯು ತಮ್ಮ ಸಣ್ಣ ಜನಾಂಗದ ಹೆಗ್ಗುರುತಾಗಿ ಉಳಿಯಲು ಶ್ರಮಿಸಿದ್ದಾರೆ.ತಮ್ಮ ಉತ್ತರದಾಯಿತ್ವ ಅರ್ಚಕ ವೃತ್ತಿ(ಅದನ್ನು ಅಸ್ರೊನಿಹ್ ಇರಾನ್ ನಿನ ಅಸ್ಸನಿದ್ ನಲ್ಲಿಕರೆಯಲಾಗುತ್ತದೆ) ಇನ್ನುಳಿದ ವಲಯಗಳೆಂದರೆ-ದಿ(r)ಅಥೆಸ್ಸ್ಟರಿಹ್ (ಉದಾತ್ತತೆ,ಸೈನಿಕರು ಮತ್ತು ನಾಗರಿಕ ಸೇವಕರು),ವಸ್ತರೊಶಿಸ್ (ರೈತರು ಮತ್ತು ದನಗಾಹಿಗಳು),ಹುಟೊಕ್ಶಿಶಿಸ್ (ಕುಶಲಕರ್ಮಿಗಳು ಮತ್ತು ಕಾರ್ಮಿಕರು)ಇವರೆಲ್ಲರೂ ಈಗ ಸಮಗ್ರ ಪ್ರಗತಿಯೊಂದಿಗೆ ಉತ್ತಮ ಕಾರಣವನ್ನು ನೀಡುತ್ತಾರೆ.ಇವರನ್ನು ಬೆಹದಿನ್ (ದಯನಾ ಅವರ ಅನುಯಾಯಿಗಳು "ಉತ್ತಮ ಧರ್ಮಾಚರಣೆಗಾಗಿ"ಇದು ಒಂದು ಅನುವಾದ) ಈ ಬದಲಾವಣೆಯು ಸುದೀರ್ಘ ಕಾಲದ ತೊಡಕುಗಳಿಗೆ ಆರಂಭ ಒದಗಿಸಬಹುದು. ಇದು ಆಗಿನ ಪರಿಸ್ಥಿತಿಗಳನ್ನು ಪರಿಗಣಿಸಿ ಅನುವಂಶೀಯ ಧಾರೆಯನ್ನು ಎರೆದು ಅಂತರ್ ವರ್ಗೀಯ ಮದುವೆಗಳಿಗೆ ಅದು ಅವಕಾಶ ಮಾಡಿಕೊಟ್ಟರೂ ಅದರ ನಿರಂತರ ಸಮಸ್ಯೆಯು ಕಾಡಲಾರಂಭಿಸಿತು(ಈ ಅರ್ಚಕ ಉತ್ತರದಾಯಿತ್ವದ ಸಮಸ್ಯೆಯು ೨೦ನೆಯ ಶತಮಾನದ ವರೆಗೂ ಅನುಗಾಲ ಬೆಂಬತ್ತಿತು) ಇನ್ನೊಂದರ ಸ್ಥಿತಿಗಳ ಬಗ್ಗೆ ಯೋಚಿಸಿದರೆ ವೃತ್ತಿ-ಉದ್ಯೋಗಪರತೆಯ ಬಗ್ಗೆ ಬ್ರಿಟಿಶ್ ವಸಾಹತುಶಾಹಿ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ.ಪಾರ್ಸಿಗಳಲ್ಲಿನ ಈ ಪರಂಪರೆ ಕೂಡಾಹಿಂದು ಜಾತಿ ವ್ಯವಸ್ಥೆಯಂತೆಯೇ ಜಟಿಲತೆ ಕಂಡರೂ ಅದು ಸಣ್ಣ ಪ್ರಮಾಣದ ತಾಳ್ಮೆಯನ್ನೂ ಪರೀಕ್ಷಿಸುವಂತಿದೆ.(ಉದಾಹರಣೆಗೆ ಒಬ್ಬ ಗುಮಾಸ್ತನೊಂದಿಗೆ ಮತ್ತೊಬ್ಬನ ಸಂಪರ್ಕ ಸಾಧ್ಯವಾಗದ ಪರಿಸ್ಥಿತಿಗಳನ್ನು ಹುಟ್ಟುಹಾಕಿದೆ)
ಅವಕಾಶದ ಕಾಲ
[ಬದಲಾಯಿಸಿ]ಆರಂಭಿಕ ೧೬೦೦ನೆಯ ಇಸ್ವಿಯಲ್ಲಿ ವಾಣಿಜ್ಯ ಒಪ್ಪಂದದ ಪ್ರಕಾರ ಮುಘಲ್‌ಚಕ್ರವರ್ತಿ ಜಹಾಂಗಿರ್‌ಮತ್ತು ಜೇಮ್ಸ್ ಇ ಆಫ್ ಇಂಗ್ಲೆಂಡ್ ಜೂತೆ ಕರಾರಾಯಿತು,ಹೀಗೆ ಈಸ್ಟ್ ಇಂಡಿಯಾ ಕಂಪನಿಯು ಸೂರತ್ ಮತ್ತಿತರೆಡೆನಲ್ಲಿ ನೆಲೆಸಲು ಮತ್ತು ಫ್ಯಾಕ್ಟರಿಗಳನ್ನು ತೆರೆಯಲು ಸಂಪೂರ್ಣ ಹಕ್ಕುಗಳನ್ನು ಪಡೆದರು. ಈ ಸಂದರ್ಭದಲ್ಲಿ ಗುಜರಾತಿನಾದ್ಯಂತ ರೈತ ಸಮುದಾಯದಿಂದ ಹೊರಬಂದು ಪಾರ್ಸಿಗಳು ಬ್ರಿಟಿಶ್ ಉಸ್ತುವಾರಿಯ ಸೆಟಲ್ ಮೆಂಟ್ ಗಳಲ್ಲಿ ಹೊಸ ಉದ್ಯೋಗಕ್ಕೆ ಅಂಟಿಕೊಂಡರು. ಬ್ರಿಟಿಶ್ ಈಸ್ಟ್ ಇಂಡಿಯಾ ಕಂಪನಿಯು ೧೬೬೮ರಲ್ಲಿಮುಂಬಯಿನ ಏಳು ದ್ವೀಪಗಳನ್ನು ಚಾರ್ಲ್ಸ್ II ಆಫ್ ಇಂಗ್ಲೆಂಡ್‌ಅವರಿಂದ ಗುತ್ತಿಗೆ ಪಡೆಯಿತು. ಈ ದ್ವೀಪದ ಪೂರ್ವದ ಕರಾವಳಿಯಲ್ಲಿ ಅತ್ಯಂತ ಗಹನವಾದ ಭಾಗವನ್ನು ಪಡೆದ ಕಂಪನಿಯು ತನ್ನ ಮೊದಲ ಬಂದರನ್ನು ಆರಂಭಿಸಿತು.ಹೀಗೆ ಅವರು ತಮ್ಮ ಸೆಟಲ್ ಮೆಂಟ್ ಗಳನ್ನು ಸೂರತ್ ನಿಂದ ಇಲ್ಲಿಗೆ ವರ್ಗಾಯಿಸಿದರು. ಪಾರ್ಸಿಗಳು ಆ ಕಾಲದಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ವಿಶ್ವಾಸವನ್ನು ಗಳಿಸಿದರು.(Palsetia 2001, pp. 47–57) ಈ ಸಂದರ್ಭದಲ್ಲಿ ಸಮಾಜದಲ್ಲಿ ಹೆಸರು ಮಾಡಲು ಸಾಕ್ಷ್ರತೆ ಎಷ್ಟು ಅಗತ್ಯವೆನಿಸಿತ್ತೊ ಅಷ್ಟೇ ವೇಗದಲ್ಲಿ ಪಾರ್ಸಿ ಯುವಕರು ಉತ್ತಮ ವಿದ್ಯಾಭ್ಯಾಸಕ್ಕೆ ತೊಡಗಿದರು,ಅದಕ್ಕೆ ಪೂರಕವೆನ್ನುವಂತೆ ಬ್ರಿಟಿಶ್ ರು ಸಹ ತಮ್ಮ ಪ್ರತಿಷ್ಟಾಪಿತ ಉದ್ಯಮಗಳಿಗೆ ಇಂತವರನ್ನು ಆಯ್ಕೆ ಮಾಡಲು ಮನಸು ಮಾಡಿದರು. ಇಂತಹ ಗುಣಮಟ್ಟ ಅವರನ್ನು "ತಾವು ಬ್ರಿಟಿಶ್ ರನ್ನು ಪ್ರತಿನಿಧಿಸುತ್ತಿದ್ದೇವೆ ಎಂಬ ಮಟ್ಟಕ್ಕೆ ತಂದಿತು".ಹೀಗೆ ಇದೇ ಕಾರಣದಿಂದಲೇ ಪಾರ್ಸಿಗಳು ಯಾರಿಗೂ ಕಡಿಮೆ ಇಲ್ಲದಂತೆ ಕೆಲಸ ಮಾಡಿ ದಕ್ಷಿಣ ಏಷ್ಯಾದ ಯಾವುದೇ ಸಮಾಜದ ಜನರಿಗಿಂತ ಉತ್ತಮವಾಗಿ ಕೆಲಸ (Luhrmann 2002, p. 861)ಮಾಡಿದರು." ಆದರೆ ಬ್ರಿಟಿಶರು ಇದೇ ಸಂದರ್ಭದಲ್ಲಿ ಇನ್ನುಳಿದ ಭಾರತಿಯರನ್ನು ನಿಷ್ಕ್ರಿಯರು,ಅಜ್ಞಾನಿಗಳು,ವಿವೇಕರಹಿತರು,ಹೊರನೋಟಕ್ಕೆ ವಿನಮ್ರ,ಆಂತರ್ಯದಲ್ಲಿ ದ್ರೋಹಿಗಳು ಎಂದು ಬ್ರಿಟಿಶ ರು (Luhrmann 1994, p. 333)ತಿಳಿದರು;ಆಗ ಪಾರ್ಸಿಗಳು ಇವರ ಕಣ್ಣಿಗೆ ಉತ್ತಮ ಕೆಲಸಗಾರರಂತೆ ಕಂಡರು. ಮಂಡೆಲ್ಸಲೊ (೧೬೩೮) ಇವರನ್ನು "ಉದ್ಯೋಗಶೀಲರು",ಆತ್ಮಸಾಕ್ಷಿಯುಳ್ಳವರು"ಮತ್ತು "ಕುಶಲ ಕೆಲಸಗಾರರು"ಎಂದು ವಿವರಿಸಿ ಅವರ ವ್ಯಾಪಾರಿ ಬುದ್ದಿಯನ್ನು ಹೊಗಳಿದ. ಅಂತಹದೇ ಗುಣಗಾನವು ಇನ್ನು ಹಲವರಿಂದ ನ್ಡೆಯಿತು.ಜೇಮ್ಸ್ ಮ್ಯಾಕಿಂಟೊಶ್ ೧೮೦೪ ರಿಂದ ೧೮೧೧ ರ ವರೆಗೆ ಮುಂಬಯಿನ ದಾಖಲೆ ಮಾಡಿದವರಲ್ಲಿ ಪ್ರಮುಖ."ಈ ಪಾರ್ಸಿಗಳ ಸಣ್ಣ ಸಮುದಾಯವು ಅಗಾಧ ಶಕ್ತಿ ಹೊಂದಿದೆ ಮತ್ತುಕಾಟವನ್ನು ತಡೆಯದೇ ಭಾರತಕ್ಕೆ ವಲಸೆ ಬಂದು ಇಂದು ತಮ್ಮ ಅಜ್ಞಾನ ಮತ್ತು ಬಡತನಗಳನ್ನು ಕಳಚಿಟ್ಟು ಕಾರ್ಯ ಮಾಡುತಿದ್ದಾರೆ.(Loc. cit.ಏಷ್ಯಾದಲ್ಲೇ ಅತ್ಯತ್ತಮ ವ್ಯಾಪಾರಿ ಕಲೆಗೆ ಪ್ರಸಿದ್ದಿ ಪಡೆದರು. Darukhanawala & Jeejeebhoy 1938, p. 33). ಇವರಲ್ಲಿ ಅತ್ಯುತ್ತಮ ಉದ್ಯಮಶೀಲತೆ ಪ್ರತಿನಿಧಿಯಾದ ರುಸ್ತೊಮ್ ಮನೆಕ್‌ಡಚ್ ಮತ್ತು ಪೊರ್ಚ್ ಗೀಸ್ ಉತ್ತಮ ಅವಕಾಶ ಮತ್ತು ಅದೃಷ್ಟವನ್ನು ಗಳಿಸಿಕೊಂಡ. ಮೆನೆಕ್ ೧೭೦೨ ರಲ್ಲಿ ಮೊದಲ ದಳ್ಳಾಳಿಯಾಗಿ ಕಂಪನಿಗೆ ನೇಮಕಗೊಂಡ.(ಆಗ ಅತನಿಗೆ "ಸೇಠ್ "ಎಂಬ ಹೆಸರೂ ಬಂತು)ಹೀಗೆ ಆತ ಮತ್ತು ಆತನ ಪಾರ್ಸಿ ಸಹೋದ್ಯೋಗಿಗಳು ಈ ವೃತ್ತಿಯನ್ನು ಇನ್ನಷ್ಟು ವಿಸ್ತರಿಸಲು ನೆರವಾದರು,ಇದು ವಿಶಾಲ ಪಾರ್ಸಿ ಸಮಾಜಕ್ಕೆ ಒಂದು ಹೆಸರು (White 1991, p. 304)ತಂದುಕೊಟ್ಟಿತು. ಹೀಗೆ ೧೮ನೆಯ ಶತಮಾನದ ಮಧ್ಯದಲ್ಲಿಬಾಂಬೆ ಪ್ರೆಸಿಡೆನ್ಸಿಯ ಬ್ರೊಕರೇಜ್ ಹೌಸಸ್ ಆಡಳಿತವು ಪಾರ್ಸಿಗಳ ಕೈಗೆ ಬಂತು. "ಜೇಮ್ಸ್ ಫೊರ್ಬ್ಸ್ ಬ್ರೊಚ್ ನ ಕಲೆಕ್ಟರ್ (ಸದ್ಯ ಭಾರುಚ್ )ತನ್ನ ಪುಸ್ತಕ ಒರಿಯೆಂಟಲ್ ಮೆಮೊಯರ್ಸ್ (೧೭೭೦)ನಲ್ಲಿ"ಬಾಂಬೆ ಮತ್ತು ಸೂರತ್ ನಲ್ಲಿನ ಹಲವಾರು ಹಡಗುಗಳ ಮಾಲಿಕತ್ವ ಮತ್ತು ಪ್ರಮುಖ ವ್ಯಾಪಾರಿ ವ್ಯವಹಾರವು ಪಾರ್ಸಿಗಳ ಕೈಯಲ್ಲಿದೆ. "ಕ್ರಿಯಾತ್ಮಕ,ಹುರುಪಿನ,ಹೆಮ್ಮೆಯ ಮತ್ತು ನಿರಂತರ ದುಡಿಮೆ ಶಕ್ತಿ ಇವುಗಳು ಕಂಪನಿಯ ಏಳ್ಗೆಯನ್ನು ತರುವುದಲ್ಲದೇ ಹಿಂದುಸ್ತಾನದ ಪಶ್ಕಿಮ ದಂಡೆಗಳಲ್ಲಿ ಇವರ ಸಾಮ್ರಾಜ್ಯ ಚಟುವಟಿಕೆಯಿಂದ ಇರುತ್ತದೆ.(Loc. cit. Darukhanawala & Jeejeebhoy 1938, p. 33). ಕ್ರಮೇಣ ಕೆಲವು ಕುಟುಂಬಗಳು ಆಸ್ತಿ,ಸಂಪತ್ತು ಮತ್ತು ಪ್ರಾಧಾನ್ಯತೆ ಪಡೆದವು.(ಸೊರಬ್ಜಿ,ಮೊದಿ,ಕ್ಯಾಮಾ,ವಾಡಿಯಾ,ಜೀಜೀಭೊಯ್ ,ಮೆಹತಾ,ಅಲ್ಲಬ್ಲೆಸ್ ,ದಾದಿಸೆಠ್ ,ಪೆಟಿಟ್ ,ಪಟೆಲ್ ,ಟಾಟಾ ಇತ್ಯಾದಿ.)ಹೀಗೆ ಇದರಲ್ಲಿ ಹಲವರು ನಗರದ ಸಾರ್ವಜನಿಕ ಕೆಲಸಗಳಲ್ಲಿತಮ್ಮನ್ನು ತಾವು ತೊಡಗಿಸಿಕೊಂಡರು.ಹಲವಾರು ಶಿಕ್ಷಣ ಸಂಸ್ಥೆಗಳು,ಕೈಗಾರಿಕೆ ಮತ್ತು ದತ್ತಿ ನಿಧಿಯ ಉದ್ಯಮಗಳನ್ನು ನಡೆಸುತ್ತಿದ್ದರು.(Hull 1913; cf. Palsetia 2001, pp. 37–45, 62–64, 128–140, 334–135). ಮೆನೆಕ್ ತನ್ನಿತರ ಕೆಲಸಗಳೊಂದಿಗೆ ಪಾರ್ಸಿ ಸಮುದಾಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ.ಬಾಂಬೆಯನ್ನು ಪಾರ್ಸಿಗಳ ತಳಪಾಯದ ನಗರವೆನ್ನುವಂತೆ ಆತ (White 1991, p. 304)ಮಾಡಿದ. ಆಗಿನ ರಾಜಕೀಯ ಮತ್ತು ಆರ್ಥಿಕ ತೊಡಕುಗಳಿಂದಾಗಿ ೧೭೨೦ ಹಾಗು ೧೭೩೦ ರಲ್ಲಿ ಮುಘಲ್ ಆಡಳಿತ ಹಾಗು ಮರಾಠರ ನಡುವೆ ಸುರುವಾದ ಕದನವು ಹಲವಾರು ಪಾರ್ಸಿ ಕುಟುಂಬಗಳು ಸೂರತ್ ನಿಂದ ವಲಸೆ ಹೋಗಬೇಕಾಯಿತು. ಅದೇ ೧೭೦೦ರಲ್ಲಿ "ಕೆಲವು ಕೈಬೆರಳೆಣಕೆಯ ವ್ಯಕ್ತಿಗಳು ವ್ಯಾಪಾರಿ ಕಡತಗಳಲ್ಲಿ ಸೇರಿದರು,ಮಧ್ಯ ಶತಮಾನದಲ್ಲಿ ಪಾರ್ಸಿಗಳು ಬಾಂಬೆಯಲ್ಲಿ ಮಹತ್ವದ ವಾಣಿಜ್ಯ ಸಮೂಹವಾಗಿ (White 1991, p. 312)ಗುರುತಿಸಿಕೊಂಡಿತು. ಮೆನೆಕ್ ನ ಉದಾರತೆ ಕೂಡ ಈ ಸಂದರ್ಭದಲ್ಲಿ ಪಾರ್ಸಿಗಳ ಮಾನವಿಯತೆಯ ಉದಾರತೆಯ ಉದಾಹರಣೆಯಾಗಿದೆ. ದಿ ಆಂಗ್ಲಿಕನ್‌ಚಾಪ್ಲಿನ್ ಜೊನ್ ಒವಿಂಗ್ಟೊನ್ ೧೬೮೯ ರಲ್ಲಿವರದಿ ಮಾಡಿದಂತೆ "ಬಡವರು ಮತ್ತು ಇನ್ನಿತರರಿಗೆ ನೆರವಾದರು,ಜನರ ಬೇಕು ಬೇಡಗಳಿಗೆ ಈ ಸಮಾಜ ಸ್ಪಂದಿಸಿತು ಎಂದು ಅತ ಬರೆದ. ಅವರ ಸಾರ್ವತ್ರಿಕ ದಯೆ,ಕಾರ್ಯಶೀಲತೆ,ಸತತ ಕೆಲಸ,ಆಯಾ ಋತುಮಾನದಲ್ಲಿ ಕೊಡುಗೆ,ದಾನ ನೀಡುವಿಕೆ ಮತ್ತು ಅನಾಥರು,ತೊಂದರೆಗೀಡಾದವರು,ನತದೃಷ್ಟರು ಹೀಗೆ ಎಲ್ಲರ ನೆರವಿಗೆ ಧಾವಿಸಿದ (Ovington 1929, p. 216)ಉದಾಹರಣೆಗಳಿವೆ.
ನವರೊಜ್ ೧೭೨೮ರಲ್ಲಿ ರುಸ್ತೊಮರ ಪುತ್ರ (ನಂತರ ನವರೊಜೀ) ಅವರು ಬಾಂಬೆ ಪಾರ್ಸಿ ಪಂಚಾಯತ ವನ್ನು ಸ್ಥಾಪಿಸಿದರು(ಇದು ಸ್ವಯಂ ಆಡಳಿತಕ್ಕೆ ಅನುಕೂಲವಾಗಲು ಈಗಿರುವ ಟ್ರಸ್ಟಿನಂತೆ ಅಲ್ಲ)ಹೊಸದಾಗಿ ಬರುವ ಪಾರ್ಸಿಗಳ ಧಾರ್ಮಿಕ,ಸಾಮಾಜಿಕ,ಕಾನೂನಿನ ಮತ್ತು ಹಣಕಾಸು ವ್ಯವಹಾರಗಳಲ್ಲಿ ಮಾರ್ಗದರ್ಶಿಯಾಗಲು ಇದು ಸಹಕಾರಿಯಾಯಿತು. ಮೆನೆಕ್ ಸೆಠ್ ಕುಟುಂಬವು ತಮ್ಮ ವಿಶಾಲ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ವೇಳೆ,ಹಣಕಾಸಿನ ನೆರವು,ಇತ್ಯಾದಿಗಳನ್ನು ಪಾರ್ಸಿ ಸಮಾಜಕ್ಕೆ ನೀಡಿತು.ಈ ನೂತನ ಪಂಚಾಯತವು ಹಳೆಯ ಕವಚದಿಂದ ಹೊರಬಂದು ಪಾರ್ಸಿಗಳ ನಗರ ಜೀವನಕ್ಕೆ ಮೆರಗು ನೀಡಿತು.ಪಾರ್ಸಿಗಳು ತಮ್ಮ ಸಮುದಾಯದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಒತ್ತು (Karaka 1884, pp. 215–217)ಕೊಡುವಂತಾಯಿತು. ಆದರೂ ಕೂಡಾ ೧೮೩೮ರಲ್ಲಿ ಈ ಪಂಚಾಯತವು ಕೆಲವು ದೋಷಗಳು ಮತ್ತು ಸ್ವಜನಪಕ್ಷಪಾತದ ತಪ್ಪಿನಿಂದಾಗಿ ದಾಲಿಗೊಳಗಾಯಿತು. ಸುಮಾರು ೧೮೫೫ ರಲ್ಲಿಬಾಂಬೆ ಟೈಮ್ಸ್ ವರದಿ ಮಾಡಿರುವಂತೆ ಈ ಪಂಚಾಯತಕ್ಕೆ ಯಾವುದೇ ನೈತಿಕ ಕಡಿವಾಣವಿಲ್ಲ(ದಿ ಬಂದೊಬಸ್ತ್ ಅಥವಾ ನೀತಿ ಸಂಹಿತೆ)ಹೀಗೆ ಈ ಪರಿಷತನ್ನು ಕೂಡಲೇ ಚಟುವಟಿಕೆ ನಿಲ್ಲಿಸಲು ಸದಸ್ಯರಿಗೆ (Dobbin 1970, p. 150-151)ಹೇಳಲಾಯಿತು. ಜುಲೈ ೧೮೫೬ರಲ್ಲಿ ರೂಪಿಸಿದ ನಿಯಮದ ಪ್ರಕಾರ ಪ್ರೈವಿ ಕೌನ್ಸಿಲ್ ನ ನ್ಯಾಯಾಧಿಕರಣದ ಸಮಿತಿಯು ತಿಳಿಸಿದಂತೆ ಪಾರ್ಸಿಗಳ ಮದುವೆ ಮತ್ತು ವಿಚ್ಚೇದನ ಕುರಿತಂತೆ ಪಂಚಾಯತ್ ಗೆ ಯಾವುದೇ ಹಕ್ಕಿಲ್ಲ ಎಂದು ತೀರ್ಪಿತ್ತಿತ್ತು.ನಂತರ ಅದು ಸರ್ಕಾರದಿಂದ ಮಾನ್ಯತೆ ಪಡೆದ "ಪಾರ್ಸಿ ಮೆಟ್ರಿಮೊನಿಯಲ್ ಕೋರ್ಟ್ "ಆಗಿ ಉಳಿಯಿತೆನ್ನಬಹುದು. ಹೇಗೆಯಾದರೂ ಪಂಚಾಯತಿಯು ಮರುಸ್ಥಾಪನೆಗೊಂದು ಸಮಾಜದ ಅಸ್ತಿಪಾಸ್ತಿಗಳನ್ನು ಆಡಳಿತ ನೋಡಲು ಆರಂಭಿಸಿತಾದರೂ ನಂತರ ಸ್ವಯಂ ಸರ್ಕಾರದ ನಿಯಮಗಳಿಂದ ಹಿನ್ನಡೆ ಪಡೆಯಿತು(Palsetia 2001, pp. 223–225). .ಅದೇ ವೇಳೆಗೆ ಪಂಚಾಯತದ ಪಾತ್ರ ಇಳಿಮುಖಗೊಂಡಿತು;ಪೂರಕವಾಗಿ ಇಂತಹದೇ ಸಂಸ್ಥೆಗಳು ಹುಟ್ಟಿಕೊಂಡು ಸಾಮಾಜಿಕ ಬದ್ದತೆಯ ಕೊರತೆಯಿಂದ ಬಳಲುತ್ತಿದ್ದ ಸಮಾಜಕ್ಕೆ ಉಳಿದ ಸಾಂತ್ವನದ ಅಗತ್ಯವಿತ್ತು.ಸಮಾಜದ ಉನ್ನತಿಗೆ ಮತ್ತೆ ತಲೆ ಎತ್ತಲು ಪಂಚಾಯತ ಮಾಡಿದ ಕಾರ್ಯಗಳನ್ನೇ ಇನ್ನಿತರ ಸಂಸ್ಥೆಗಳು ಮಾಡಿದವು. ಮಧ್ಯ ಶತಮಾನದ ಭಾಗದಲ್ಲಿಪಾರ್ಸಿಗಳಿಗೆ ತಮ್ಮ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದರ ಅರಿವಾಯಿತು.ಅದರ ಪರಿಹಾರಕ್ಕಾಗಿ ಅವರು ಶಿಕ್ಷಣವೊಂದೇ ಮಾರ್ಗವೆಂದುಕೊಂಡರು. ಜೆಮ್ ಸೆಟ್ ಜೀಭೊಯ್ "ಪಾರ್ಸಿ ಬೆನವೊಲಂಟ್ ಫಂಡ್ "(ಧರ್ಮಾರ್ಥ ಸಹಾಯ ನಿಧಿ) ಸ್ಥಾಪಿಸಿ ಪಾರ್ಸಿ ಸಮುದಾಯದ ಶಿಕ್ಷಣ,ಉದ್ಯೋಗ ಇತ್ಯಾದಿಗಳನ್ನು ಸೂರತ್ ಮತ್ತು ಸುತ್ತನಲ್ಲಿರುವ ಪಾರ್ಸಿಗಳಿಗೆ ಒದಗಿಸಲು ಮುಂದಾದರು. ಪಾರ್ಸಿಗಳು ೧೮೪೯ರಲ್ಲಿ ಅವರ ಮೊದಲ ಶಾಲೆಯನ್ನು ಆರಂಭಿಸಿದರು.(ಸಹ-ಶಿಕ್ಷಣ,ಆಗ ಅದು ಹೊಸ ವಿಧಾನವಾಗಿತ್ತು,ನಂತರ ಇದು ಗಂಡು-ಹೆಣ್ಣುಮಕ್ಕಳ ಶಾಲೆ ಎಂದು ಎರಡು ವಿಭಾಗಗಳಾಗಿ ಒಡೆಯಿತು)ಹೀಗೆ ಶಿಕ್ಷಣ ಕ್ರಾಂತಿಯು ವೇಗ ಪಡೆದುಕೊಂಡಿತು. ಪಾರ್ಸಿಗಳ ಶಾಲೆಗಳು ದ್ವಿಗುಣಗೊಂಡಂತೆ ಇನ್ನಿತರ ಶಾಲೆಗಳೂ ತಲೆ ಎತ್ತಿದವು.(Palsetia 2001, pp. 135–139) ಹೀಗೆ ಉತ್ತಮ ಶಿಕ್ಷಣದೊಂದಿಗೆ ಸಾಮಾಜಿಕ ಅಭಿವೃದ್ಧಿ ಬಗ್ಗೆ ೧೮೫೪ರಲ್ಲಿ ಅದರ ತೀವ್ರತೆ ಹೆಚ್ಚಾಯಿತು. ದಿನ್ಶಾ ಮೆನೆಕ್ ಜಿ ಪೆಟಿಟ್"ಪರ್ಸಿಯನ್ ಝೋರೊಸ್ಟ್ರಿಯನ್ ಅಮೆಲಿಯೊರೇಶನ್ ಫಂಡ್ "ಸ್ಥಾಪಿಸಿ ಇರಾನನಲ್ಲಿರುವ ಸಹ ಧರ್ಮಿಯರಿಗೆ ನೆರವಾಗಲು ಮುಂದಾದರು. ಈ ನಿಧಿಯು ಅಸಂಖ್ಯಾತ ಇರಾನಿನ ಝೋರೊಸ್ಟ್ರಿಯನ್ನರು ಭಾರತಕ್ಕೆ ವಲಸೆ ಬರಲು ನೆರವಾಯಿತು.(ಅವರನ್ನೀಗ ಇರಾನೀಸ್ ಎನ್ನಲಾಗುತ್ತದೆ)ಅವರು ೧೮೮೨ರಲ್ಲಿ ತಮ್ಮ ಸಹಧರ್ಮಿಯರೊಂದಿಗೆ ಜಿಜ್ಯಾ ತೆರಿಗೆ ಮಾಫಿಗೆ ಅವರು ಒಳಗಾಗಬೇಕಾಯಿತು. ಪಾರ್ಸಿಗಳು ೧೮ ಮತ್ತು ೧೯ನೆಯ ಶತಮಾನದಲ್ಲಿ ಶಿಕ್ಷಣ,ಕೈಗಾರಿಕೆ ಮತ್ತು ಸಾಮಾಜಿಕ ವಿಷಯಗಳಲ್ಲಿ ಅತ್ಯಂತ ಅಗ್ರಗಣ್ಯ ಜನಸಮುದಾಯ ಎಂದು ಕರೆಸಿಕೊಂಡರು. ಅವರು ಪ್ರಗತಿಯ ನಾಯಕರಾಗಿ ಬಂದು ಅತ್ಯಧಿಕ ಅದೃಷ್ಟ, ಸಂಪತ್ತು ಗಳಿಸಿ ಅದನ್ನು ಅಗತ್ಯವಿರುವವರಿಗೆ ದೊಡ್ಡ ಪ್ರಮಾಣದ ದಾನ (Dhalla 1948, p. 483) (Dhalla 1948, p. 483) ಮಾಡಿದರು. ಆಗ ೧೯ನೆಯ ಶತಮಾನದ ಹೊತ್ತಿಗೆ ಭಾರತ ವಸಾಹತುಶಾಯಿಯಲ್ಲಿ ಪಾರ್ಸಿಗಳ ಜನಸಂಖ್ಯೆಯು ೮೫,೩೯೭ ಆಗಿತ್ತು,ಇದರಲ್ಲಿ ೪೮,೫೦೭ ಜನರು ಬಾಂಬೆನಲ್ಲಿ ವಾಸವಾಗಿದ್ದರು.ಅಂದರೆ ನಗರದ ಒಟ್ಟು ಜನಸಂಖ್ಯೆಯ ೬% ರಷ್ಟು ಇತ್ತು,(೧೮೮೧ರ [ಸೂಕ್ತ ಉಲ್ಲೇಖನ ಬೇಕು]ಜನಗಣತಿ) ಪಾರ್ಸಿಗಳನ್ನು ನಗರದಲ್ಲಿನ ಈ ಸಂಖ್ಯೆ ಆಧರಿಸಿ ಸಾಂಖಿಕವಾಗಿ ಅಲ್ಪಸಂಖ್ಯಾತರೆಂದು ಪರಿಗಣಿಸಿದ್ದು ಇದೇ ಮೊದಲೆನ್ನಬಹುದು. .ಈ ೧೯ನೆಯ ಶತಮಾನವು ಸಮಾಜದಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿತು. ಇದೇ ತೆರನಾದ ೧೭ ಮತ್ತು ೧೮ನೆಯ ಶತಮಾನದ ಪಾರ್ಸಿ ಜನಾಂಗದ ಸಾಂಸ್ಕೃತಿಕ ಚಿನ್ನೆಗಳಾದ ಭಾಷೆ(ಪಾರ್ಸಿಗೆ ಸರಿಸಮಾನಾದ ಗುಜರಾತಿ),ಕಲೆ ಮತ್ತು ಗುಡಿ ಕೈಗಾರಿಕೆ ಕಲೆ ನೈಪುಣ್ಯ ಮತ್ತು ಉತ್ತಮ ಉಡುಪಿನ ಹವ್ಯಾಸಗಳು ಪಾರ್ಸಿ ರಂಗಕಲೆಗೆ ಪ್ರೊತ್ಸಾಹ ನೀಡಿದವು,ಇದರ ಜೊತೆಗೆ ಸಾಹಿತ್ಯ,ಸುದ್ದಿಪತ್ರಿಕೆಗಳು ಮತ್ತು ಮ್ಯಾಗ್ಸಿನ್ಸ್ ಮತ್ತು ಶಾಲೆಗಳು ಬೆಳವಣಿಗೆ ಕಂಡವು. ಪಾರ್ಸಿಗಳು ಸದ್ಯ ಸಮುದಾಯ ವೈದ್ಯಕೀಯ ಕೇಂದ್ರಗಳು,ಅಂಬ್ಯುಲನ್ಸ್ ಕಾರ್ಪ್ಸ್ ,ಬಾಯ್ ಸ್ಕೌಟ್ ಟ್ರೂಪ್ಸ್ ,ಕ್ಲಬ್ಸ್ ಮತ್ತು ಮಸಾನಿಕ್ ಲಾಜ್ಡಗಳು(ಸೌಹಾರ್ದ ಕೇಂದ್ರಗಳು)ನಡೆಸುತ್ತಿದ್ದಾರೆ. e.ಅವರು ತಮ್ಮದೇ ಆದ ಪ್ರತಿಷ್ಟಾನಗಳು ಮತ್ತು ಗೃಹ ವಿಭಾಗದ ಎಸ್ಟೇಟ್ ಗಳು,ಕಾನೂನು ಸಂಸ್ಠೆಗಳು,ನ್ಯಾಯಾಲಯಗಳು ಮತ್ತು ಆಡಲಿತ ಹೊಂದಿದ್ದಾರೆ. ಸದ್ಯ ಅವರು ಕೈಮಗ್ಗದವರು ಅಥವಾ ಸಣ್ಣ ವ್ಯಾಪಾರಿಗಳಲ್ಲ;ಅವರೀಗ ಬ್ಯಾಂಕುಗಳ ಸ್ಥಾಪಿಸಿ ಅವುಗಳನ್ನು ನಡೆಸುತ್ತಿದ್ದಾರೆ,ಬೃಹತ್ ಕೈಗಾರಿಕೆಗಳು,ಶಿಪ್ ಯಾರ್ಡ್ ಗಳು ಶಿಪ್ಪಿಗ್ ಕಂಪನಿಗಳು ಇತ್ಯಾದಿಗಳಿವೆ. ಇನ್ನೂ ಹೆಚ್ಚೆಂದರೆ ತಮ್ಮ ಗೌರವ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳಸುವುದರೊಂದಿಗೆ ರಾಷ್ಟ್ರೀಯತೆ ಭಾರತೀಯನ್ನು ಕಾಯ್ದುಕೊಂಡಿದ್ದಾರೆ.ದಾದಾಭಾಯಿ ನವರೊಜಿ ,ಬ್ರಿಟಿಶ್ ಪಾರ್ಲಿಮೆಂಟ್ ನಲ್ಲಿ ಸ್ಥಾನ ಪಡೆದ ಏಕೈಕ ಏಷ್ಯನ್ ಅವರಾಗಿದ್ದಾರೆ.ಅವರ ಮಾತಿನಲ್ಲಿ ಹೇಳುವುದಾದರೆ,"ನಾನೊಬ್ಬ ಹಿಂದು ಇರಬಹುದು,ಒಬ್ಬ ಮೊಮ್ಮಡೆನ್ ಇರ್ಫಬಹುದು,ಒಬ್ಬ ಪಾರ್ಸಿ ಆಗಿರಬಹುದು,ಒಬ್ಬ ಕ್ರಿಶ್ಚಿಯನ್ ಇರಬಹುದು ಯಾವುದೇ ವರ್ಗಕ್ಕೆ ಸೇರಿದರೂ ಇದಕ್ಕಿಂತ ಹೆಚ್ಚಾಗಿ ನಾನೊಬ್ಬ ಭಾರತೀಯ" ನಮ್ಮ ದೇಶವೆಂದರೆ ಭಾರತ,ನಮ್ಮ ರಾಷ್ಟೀಯತೆ ಭಾರತಿಯತೆ" (Ralhan 2002, p. 1101)
ಜನಾಂಗದಲ್ಲಿನ ಘರ್ಷಣೆಗಳು
[ಬದಲಾಯಿಸಿ]ಕ್ಯಾಲಂಡರಿಯಲ್ ಭಿನ್ನಾಭಿಪ್ರಾಯಗಳು
[ಬದಲಾಯಿಸಿ]ಈ ವಿಭಾಗದಲ್ಲಿ ಪಾರ್ಸಿಗಳಿಗೆ ಮಾತ್ರ ಸಂಬಂಧಪಟ್ಟ ಕ್ಯಾಲಂಡರ್ ವಿಷಯವನ್ನು ಮಾತ್ರ ಹೊಂದಿರುತ್ತದೆ. ಉದಾಹರಣೆಗೆ ಝೋರೊಸ್ಟ್ರಿಯನ್ಸ್ ಗಳ ಇತಿಹಾಸ ,ಧರ್ಮದ ಉದ್ದೇಶ,ಅದರ ವಿವರ ಮತ್ತು ವ್ಯತ್ಯಾಸಗಳನ್ನು ಅದು ಸೂಚಿಸುತ್ತದೆ.ಝೋರೊಸ್ಟ್ರಿಯನ್ಸ್ ಕ್ಯಾಲಂಡರ್‌ನೋಡಿ ಸುಮಾರು ೧೨ನೆಯ ಶತಮಾನದ ವರೆಗೂ ಎಲ್ಲಾ ಝೋರೊಸ್ಟ್ರಿಯನ್ನರು ೩೬೫ ದಿನಗಳ ಧಾರ್ಮಿಕ ಕ್ಯಾಲಂಡರ್ ನ್ನು ಅನುಸರಿಸುತ್ತಿದ್ದರು.ಆದಿಶಿರ್‌ಕ್ಯಾಲಂಡರ್ ಸುಧಾರಣೆಗಳು ಆಗುವ ವರೆಗೂ ಯಾವುದೇ ಬದಲಾವಣೆಗಳಿರಲಿಲ್ಲ.(r. ೨೨೬-೨೪೧ AD). ಆ ಕ್ಯಾಲಂಡರನಲ್ಲಿರುವ ಕೆಲವು ಅಂಶಿಕ ವಿವರಗಳು ಪೂರ್ಣ ಸೌರಮಾನದ ಕಾಲಮಾನ ತೋರಿಸುತ್ತಿರಲಿಲ್ಲವಾದ್ದರಿಂದ ಅದು ಋತುಗಳಿಗೆ ಪೂರಕವಾಗಿರಲಿಲ್ಲವೆಂದು ಹೇಳಬಹುದು. ಸುಮಾರು ೧೧೨೫ ಮತ್ತು೧೨೫೦ರಲ್ಲಿ(cf. Boyce 1970, p. 537),ಪಾರ್ಸಿಗಳು ಅಧಿಕ ಮಾಸ ಎನ್ನುವಂತಹದನ್ನು ತಮ್ಮ ಕ್ಯಾಲಂಡರ್ ನೊಳಗಡೆ ಸೇರಿಸಿದರು.ಅಂದರೆ ವರ್ಷಕ್ಕೆ ಬೇಕಾಗುವ ಅಂಶಿಕ ಪ್ರಮಾಣದ ದಿನಗಳನ್ನು ಅವರು ಸೇರ್ಪಡೆ ಮಾಡಿದರು. ಹೀಗೆ ಪಾರ್ಸಿಗಳು,ಅಂದರೆ ಝೋರೊಸ್ಟ್ರಿಯನ್ಸ್ ಗಳು ಮಾತ್ರ ಮಾಡಲು ಸಾಧ್ಯವಾಯಿತು,(ಅದಲ್ಲದೇ ಇದನ್ನು ಒಂದು ಸಾರಿ ಮಾತ್ರ ಮಾಡಲು ಸಾಧ್ಯ)ಇದರಿಂದಾಗಿ ಪಾರ್ಸಿಗಳು ಮತ್ತು ಝೋರೊಸ್ಟ್ರಿಯನ್ಸ್ ಬಳಸುವ ಕ್ಯಾಲಂಡರ್ ಗಳ ನಡುವಿನ ಅಂತರವು ಮೂವತ್ತು ದಿನಗಳ ಏರು-ಪೇರನ್ನು ತೋರಿಸುತ್ತದೆ. ಈಗಲೂ ಕೂಡಾ ಕ್ಯಾಲಂಡರ್ ಅದೇ ಶಹೆನಶಾಹಿ (ಸಾಮ್ರಾಜ್ಯಾಧಿಕಾರ) ಎಂದು ಕರೆಯಲ್ಪಡುತ್ತದೆ.ಯಾಕೆಂದರೆ ಕ್ಯಾಲಂಡರ್ ಗಳು ಬಹುಕಾಲ ಒಂದೇ ತೆರನಾಗಿ ಇರಲಾರವು.
ಪಾರ್ಸಿಗಳು ೧೭೪೫ರಲ್ಲಿ ಸೂರತ್ ನಲ್ಲಿದ್ದ ಸಂದರ್ಭದಲ್ಲಿ ಕಾಲಗುಣಕ್ಕೆ ತಕ್ಕಂತೆ ಕಾದ್ಮಿ ಅಥವಾ ಕಾದಿಮಿ ಕ್ಯಾಲಂಡರ್ ನ್ನು ತಮ್ಮ ಧರ್ಮಗುರುಗಳ ಶಿಫಾರಸ್ಸಿನ ಮೇಲೆ ಆಚರಣೆಗೆ ತಂದರು.ಯಾಕೆಂದರೆ ನಾವು ವಾಸಿಸುತ್ತಿರುವ "ಸ್ಥಳದಲ್ಲಿ"ಅದು ಸರಿಯಾಗಿರಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಆದರೂ ಕೂಡಾ ಶೆಹನಶಾಹಿ ಕ್ಯಾಲಂಡರನ್ನು ಅವರು "ರಾಜಪ್ರಭುತ್ವ"ದೆಂದು ರದ್ದುಪಡಿಸಿದರು. ಜನಾಂಗದಲ್ಲಿನ ಎರಡು ವರ್ಗಗಳನ್ನು ಒಂದುಗೂಡಿಸಲು ೧೯೦೬ರಲ್ಲಿ (೧೧ ಶತಮಾನದ ಆಧಾರದ ಮೇಲಿನ ಮೂರನೆಯ ಕ್ಯಾಲಂಡರ್ ಸೆಲ್ಜುಕ್‌ಮಾದರಿ)ಆಚರಣೆಗೆ ತಂದರು;ಇದನ್ನು ಫಸಿಲಿ ,ಅಥವಾ ಫಸ್ಲಿ ಕ್ಯಾಲಂಡರ್ ಎಂದರು,ಇದು ನಾಲ್ಕು ವರ್ಷಗಳಿಗೊಮ್ಮೆ ಲೀಪ್ ಡೇಸ್ ಅಥವಾ ಅಧಿಕ ದಿನಗಳು ಇರುತ್ತವೆ ವಸಂತದ ವಿಷುಸಂಕ್ರಾಂತಿಯ ದಿನವನ್ನು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಏನೇ ಆದರೂ ಇದೊಂದೇ ಕ್ಯಾಲಂಡರ್ ಋತುಗಳ ನಡುವೆ ಸೌಹಾರ್ದತೆಯನ್ನು ತಂದಿತೆನ್ನಬಹುದು,ಆದರೆ ಬಹುತೇಕ ಪಾರ್ಸಿ ಸದಸ್ಯರು ಇದು ಝೋರೊಸ್ಟ್ರಿಯನ್ ಸಂಪ್ರದಾಯ (ಡೆಂಕಾರ್ಡ್ ೩.೪೧೯)[ಸೂಕ್ತ ಉಲ್ಲೇಖನ ಬೇಕು]ಗೆ ಅನುಸಾರವಾಗಿ ಇಲ್ಲವೆಂದು ಅದನ್ನು ತಿರಸ್ಕರಿಸಿದರು. ಇಂದು ಬಹಳಷ್ಟು ಪಾರ್ಸಿಗಳು ಶಹೆನಶಾಹಿ ಯ ಪಾರ್ಸಿ ಆವೃತ್ತಿಯ ಕ್ಯಾಲಂಡರನ್ನು ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಕಾದ್ಮಿ ಕ್ಯಾಲಂಡರನ್ನು ಸೂರತ್ ಮತ್ತು ಭರುಚ್ ಸುತ್ತಮುತ್ತಲಿನ ಪಾರ್ಸಿ ಸಮುದಾಯದವರು ಇದನ್ನು ಬಳಸುತ್ತಾರೆ. ಆದರೆ ಫಸ್ಲಿ ಕ್ಯಾಲಂಡರ್ ಅಷ್ಟಾಗಿ ಪಾರ್ಸಿಗಳ ನಡುವೆ ಮಹತ್ವ ಪಡೆದಿಲ್ಲ. ಇದಲ್ಲದೇ ಬಸ್ತಾನಿ ಕ್ಯಾಲಂಡರ್ (ಇರಾನಿಯನ್ ಕ್ಯಾಲಂಡರ್ ಅಂದರೆ ಫಸ್ಲಿ ಕ್ಯಾಲಂಡರ್ ನ ಲಕ್ಷಣಗಳನ್ನೊಳಗೊಂಡ)ಇದು ಇರಾನಿನ ಝೋರೊಸ್ಟ್ರಿಯನ್ ರ ನಡುವೆ ಜನಪ್ರಿಯವಾಗಿದೆ.
ಕ್ಯಾಲಂಡರ್ ಬಗೆಗಿನ ವ್ಯಾಜ್ಯಗಳ ಪರಿಣಾಮ
[ಬದಲಾಯಿಸಿ]ಕೆಲವು ಅವೆಸ್ತಾಪ್ರಾರ್ಥನೆಗಳು ಕೆಲವು ತಿಂಗಳುಗಳ ಹೆಸರನ್ನು ಹೊಂದಿದ್ದರೆ,ಇನ್ನುಳಿದ ಪ್ರಾರ್ಥನೆಗಳನ್ನು ಇನ್ನುಳಿದ ದಿನಗಳಲ್ಲಿ ಬಳಸಲಾಗುತ್ತದೆ,ಆಯಾ ವರ್ಷಕ್ಕೆ ಅನುಗುಣವಾಗಿ ಅದನ್ನು ನಿರ್ಮಿಸಿ "ಸೂಕ್ತ"ರೀತಿಯಲ್ಲಿ ಸುಧಾರಣೆಗಳನ್ನು ತರುವಲ್ಲಿ ಶ್ರಮಿಸಲಾಗುತ್ತದೆ. ಸುಮಾರು ೧೭೦೦ ನೆಯ (ಅಥವಾ ಅದಕ್ಕೂ ಮೊದಲು೧೮೦೦) ಅತ್ಯಂತ ಜನಪ್ರಿಯ ಮುಖ್ಯ ಧರ್ಮಗುರು ಮತ್ತು ಕಾದ್ಮಿ ಯ ಕ್ಯಾಲಂಡರ್ ಅನುಯಾಯಿ ಬಾಂಬೆಯ ದಾದಿಸೆಥ್ ಅತಾಶ್ ಬೆರ್ಮ್ ನ ಫಿರೊಜ್ ಕೌಸ್ ದಸ್ತುರ್ ಅವರ ಪ್ರಕಾರ ಇರಾನಿಗಳ ಪ್ರಾಥನಾ ಉಚ್ಚರಣೆಯು ಸರಿಯಾಗಿದ್ದು ಆದರೆ ಪಾರ್ಸಿಗಳು ಬಳಸುವ ಉಚ್ಚಾರ ಸರಿಯಾದುದಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ರೀತಿಯಾಗಿ ಕೆಲವನ್ನು ಆತ ಬದಲಾಯಿಸಲು ಯಾತ್ನಿಸಿದ(ಆದರೆ ಎಲ್ಲಾ ಅಲ್ಲ)ಅದು ಬರುಬರುತ್ತಾ ಅತ್ಯಂತ ಪುರಾತನವೆಂದು ಕಾದ್ಮಿ ಕ್ಯಾಲಂಡರ್ ಅನುಯಾಯಿಗಳು ಅನುಸರಿಸಲಾರಂಭಿಸಿದರು.(ಹೀಗೆ ಇದನ್ನು ಸರಿಯಾದುದೆಂದು ಹೇಳಲಾಯಿತು) ಇದರ ವಿದ್ವಾಂಸರ ಪ್ರಕಾರ ಅವೆಸ್ತಾ ಭಾಷೆ ಮತ್ತು ಭಾಷಿಕ ವ್ಯತ್ಯಾಸವು ಕಾದ್ಮಿ ನಂತೆ ಸ್ವರದ ವ್ಯತ್ಯಾಸ ಕೇವಲ ಇರಾನಿನಲ್ಲಿ ಕಂಡು ಬರುತ್ತದೆ.ಕಾದ್ಮಿ ಗಳಲ್ಲದ ಅನುಯಾಯಿಗಳು ತಮ್ಮ ಉಚ್ಚರಣೆಯನ್ನು ಪಾರ್ಸಿಗಳಂತೆ ಮಾಡಲು ಯತ್ನಿಸುತ್ತಾರೆ. ಈ ಕ್ಯಾಲಂಡರ್ ವ್ಯಾಜ್ಯಗಳು ಸಂಪೂರ್ಣವಾಗಿ ಪ್ರಸಕ್ತಕ್ಕೆ ಸಂಬಂಧಿಸಿದವಲ್ಲ. ಸುಮಾರು ೧೭೮೦ರಲ್ಲಿ ವಿವಾದಗಳ ಕುರಿತಂತೆ ಬಹಳಷ್ಟು ಭಾವನಾತ್ಮಕ ತೀವ್ರತೆಯು ಹಿಂಸಾಚಾರಕ್ಕೆ ಆಗಾಗ್ಗೆ ಎಡೆ ಮಾಡಿಕೊಟ್ಟಿತು. ಸುಮಾರು ೧೭೮೩ರಲ್ಲಿ ಒಬ್ಬ ಶಹೆನಶಾಹಿ ಯು ಕಾದ್ಮಿ ಮಹಿಳೆಯೊಬ್ಬಳನ್ನು ಕಾಲಿನಂದ ತುಳಿದು ಕೊಂದನೆಂಬ ಕಾರಣಕ್ಕೆ ಭರುಚದ ಹೊಮ್ಜಿ ಜೆಮ್ ಶೆಡ್ಜಿ ಎಂಬಾತನನ್ನು ಮರಣದಂಡನೆಗೆ ಗುರಿಪಡಿಸಲಾಯಿತು. ಭಾರತದಲ್ಲಿನ ಎಂಟು ಅತಾಶ್ -ಬೆಹ್ರಾಮ್ಸ್ (ಅತ್ಯುನ್ನತ ಅಗ್ನಿ ದೇವಾಲಯಗಳು)ಇದರಲ್ಲಿ ಮೂರು ಕಾದ್ಮಿ ಉಚ್ಚರಣೆ ಮತ್ತು ಕ್ಯಾಲಂಡರನ್ನು ಅನುಸರಿಸಿದರೆ ಇನ್ನುಳಿದವು ಶೆಹನಶಾಹಿ ಯನ್ನು ಅಬನುಸರಿಸುತ್ತವೆ. ಆದರೆ ಫಾಸಲಿ ಗಳು ತಮ್ಮ ಸ್ವಂಟ ಅತಾಶ್ -ಬೆಹರ್ಮ್ ಹೊಂದಿಲ್ಲ.
ಪಾರ್ಸಿ ಗುರು(ಸನ್ಯಾಸಿ)
[ಬದಲಾಯಿಸಿ]ಭಾರತೀಯ ಪಾರ್ಸಿಗಳಲ್ಲಿ ದಸ್ತುರ್ ಜೆಮ್ಶೆಡ್ ಎರ್ವರ್ಡ್ ಸೊಹ್ರ್ಬ್ ಕುಕಾದಾರು ,ಈತನೊನೊಬ್ಬ ೧೯ನೆಯ ಶತಮಾನದಲ್ಲಿನ ಝೋರೊಸ್ಟೃಯನ್ ಧರ್ಮಗುರು,ಹಲವಾರು ಚಮತ್ಕಾರಗಳನ್ನು ಮಾಡಿದ್ದರಿಂದ ಈತನನ್ನು ಪಾರ್ಸಿಗಳು ಸಂತನೆಂದು ಆರಾಧಿಸುತ್ತಾರೆ [೯]
ದಿ ಇಲ್ಮ್-ಇ-ಕ್ಶೊನೂಮ್
[ಬದಲಾಯಿಸಿ]ದಿ ಇಲ್ಮ್-ಇ-ಕ್ಶೊನೂಮ್ (ಅಂದರೆ 'ಉಲ್ಲಾಸದ ವಿಜ್ಞಾನ' ಅಥವಾ ಆನಂದದ ವಿಜ್ಞಾನ)ಇದು ಪಾರ್ಸಿ ಝೋರೊಸ್ಟ್ರಿಯನ್ ರ ತತ್ವಜ್ಞಾನದ ಶಾಲೆ,ಇದು ಪುರಾಣ,ರಹಸ್ಯ ಮತ್ತು ನೈಸರ್ಗಿಕ ಶಕ್ತಿಅಗಳ ಕಲಿಸುತ್ತದೆ,ಇದರಲ್ಲಿ ಧರ್ಮದ ವ್ಯಾಖ್ಯಾನಗಿಂತ ಇದೇ ಪ್ರಮುಖವಾಗಿದೆ. ಅವರ ಆಚರಣೆ ಪ್ರಕಾರ ಝೋರೊಸ್ಟ್ರಿಯನ್ ಅನುಯಾಯಿಗಳ ೨೦೦೦ವ್ಯಕ್ತಿಗಳ ಗುಂಪೊಂದು ಅವರನ್ನು ಸಾಹೆಬ್ -ಇ-ದಿಲಾನ್ (ಹೃದಯ ಅಧಿಪತಿಗಳು)ಇವರು ಗುಡ್ಡಪರ್ವತಗಳಲ್ಲಿ ವಾಸಿಸುತ್ತಾರೆ,ಕ್ಯಾಕಸಸ್ (ಅಲ್ಬೊರ್ಜ್‌ಶ್ರೇಣಿಗಳಲ್ಲಿ)ಮತ್ತು ಮೌಂಟ್ ದಾಮವಂದ್ ಗಳಲ್ಲಿಇವರು ಇರುತ್ತಾರೆ. ಇಲ್ಲಿ ಕೆಲವುಪಾರ್ಸಿಗಳಲ್ಲಿ ವಿಶಿಷ್ಟ ಲಕ್ಷಣಗಳಿರುತ್ತವೆ,ಅವರು ಕ್ಶ್ನೂನೂಮ್ ನ ಅನುಯಾಯಿಗಳು ಆದಾಗ್ಯೂ ಅವರ ಕುಸ್ತಿ ಪ್ರಾರ್ಥನೆಗಳು ಫಾಸಲಿ ಗಳು ಉಪಯೋಗಿಸುವ ಪ್ರಾರ್ಥನೆಗೆ ಸಮರೂಪದಲ್ಲಿವೆ,ಇನುಳಿದ ಪಾರ್ಸಿ ಕ್ಶೊನೂಮ್ಸ್ ಗಳ ವಿಭಜನೆಗೊಂಡು ಅದನ್ನು ಅನುಸರಿಸುತ್ತಾರೆ. ಇನ್ನು ಕೆಲವು ಸಣ್ಣಪುಟ್ಟ ವ್ಯತ್ಯಾಸಗಳು ಇದರಲ್ಲಿ ಕಂಡುಬಂದರೂ ಕೆಲವು ಪುನರಾವರ್ತನೆಗೊಳ್ಳುತ್ತವೆ. ಕ್ಶ್ನೂಮ್ ಗಳು ಯಾವಾಗಲೂ ಅಂತರ ಏರ್ಪಡಿಸಿ ತಮ್ಮನ್ನು ಸಾಮಾನ್ಯವಾಗಿ ಇತರ ಪಾರ್ಸಿಗಾಳಿಂದಲೂ ದೂರವಿರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕ್ಶ್ನೂಮ್ ಅನುಯಾಯಿಗಳ ದೊಡ್ಡ ದಂಡು ಮಂಬೈನ ಹೊರವಲಯ ಜೋಗೇಶ್ವರಿಯಲ್ಲಿದೆ.ಅಲ್ಲಿ ಅವರ ಅಗ್ನಿ ದೇವಾಲಯವಿದೆ(ಬೆಹೆರ್ಮಶಾಹ್ ನವರೊಜಿ ಶರಾಫ್ ದಾರೆಮೆಹರ)ಅವರ ಹೌಸಿಂಗ್ ಕಾಲೊನಿ (ಬೆಹ್ರಮ್ ಬಾಗ್ ಮತ್ತು ಅವರದೇ ಆದ ಸುದ್ದಿ ಪತ್ರಿಕೆ ಪಾರ್ಸಿ ಪುಕಾರ ಇವೆ. ಸೂರತ್‌ನಲ್ಲಿ ಈ ಜನಾಂಗದ ಕೆಲಜನವಸತಿ ಇದ್ದರೂ ೧೯ನೆಯ ಶತಮಾನದ ದಶಕದ ಕೊನೆಯ ಭಾಗದಲ್ಲಿ ಕೆಲಮಟ್ಟಿಗೆ ಇತ್ತು.
ಹೊರಗಿಡುವುದು ಮತ್ತು ಒಳಗಿರುವುದು(ಬಹಿಷ್ಕಾರ-ಸ್ವಾಗತಿಸುವಿಕೆ)
[ಬದಲಾಯಿಸಿ]ಆತಂಕಗಳಲ್ಲಿ ಮುಖ್ಯವಾದವುಗಳೆಂದರೆ ಶತಮಾನಗಳ ಹಳೆಯದಾದ ಒಗೂಡುವಿಕೆಯ ಭಯಗಳು ಮತ್ತು ಗುಂಪಿನಲ್ಲಿ ಗುರುತಿಸುವಿಕೆಯ ಭೀತಿ ಇತ್ಯಾದಿ. ಆದರೂ ಆಕಹಣೆಯ ಪ್ರಶ್ನೆಯು ಮತ್ತು ಚಕಮಕಿಯ ಬಹುತೇಕ ಆಯಾ ಸಂದರ್ಭಕ್ಕೆ ಅನುಗುಣವಾಗಿರುತ್ತವೆ. ಪಾರ್ಸಿಗಳ ಜನಸಂಖ್ಯೆ ಹೆಚ್ಚಾಗಿರುವ ಸ್ಥಳದಲ್ಲಿ ಒಂದು ಅಗ್ನಿ ದೇವಾಲಯವಿರುತ್ತದೆ,ಅಲ್ಲಿನ ಧರ್ಮ ಗುರುಗಳು ಹೊರಗಿನವರಲ್ಲ ಅಂದರೆ ಆಚರಣೆ ಸ್ಥಳದಲ್ಲೇ ಇರುತ್ತಾರೆ. ಝೋರೊಸ್ಟ್ರಿಯನ್ ಅನುಯಾಯಿಗಳು ಅಗ್ನಿ ದೇವಾಲಯದಲ್ಲಿ ಪೂಜೆ ಮಾಡಬೇಕೆಂಬ ನಿಯಮವಿಲ್ಲ,ಅವರನ್ನು ಕೆಲವು ದೇವಾಲಯಗಳಿಗೆ ಹೋಗದಂತೆ ಕಟ್ಟಪ್ಪಣೆ ಇದೆ ಆದರೆ ಅವರು ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಬಹುದಾಗಿದೆ. ಈ ಸಂಘರ್ಷಣೆಗಳಿಂದ ಯಾವುದೇ ಪರಿಣಾಮವಾದರೂ ಇಳಿಮುಖವಾಗುತ್ತಿರುವ ಪಾರ್ಸಿ ಜನಸಂಖ್ಯೆಯು ಚಿಂತೆಗೀಡು ಮಾಡಿದೆ,ಜನನ ಪ್ರಮಾಣದ ಇಳಿಕೆ ಇದಕ್ಕೆ ಮೂಲ ಕಾರಣವಾಗಿದೆ.
ಮೃತರಿಗೆ ಸಂಬಂಧಿಸಿದ ವಿಷಯಗಳು
[ಬದಲಾಯಿಸಿ]ಮುಂಬಯಿ ಮತ್ತು ಕರಾಚಿಗಳಲ್ಲಿನ ಸಂಪ್ರದಾಯದಂತೆ ಮೃತ ಪಾರ್ಸಿಗಳನ್ನು ಟಾವರ್ಸ್ ಆಫ್ ಸೈಲೆನ್ಸ್ ಗೆ ತೆಗೆದುಕೊಂಡು ಹೋಗಿ ಅಲ್ಲಿ ಆ ಕೂಡಲೇ ನಗರದ ರಣ ಹದ್ದುಗಳ ಪಾಲಿಗೆ ನೀಡಲಾಗುತ್ತದೆ. ಇದಕ್ಕೆ ಕಾರಣವಂದರೆ ಭೂಮಿ,ಅಗ್ನಿ ಮತ್ತು ನೀರು ಪವಿತ್ರವಾದವುಗಳನ್ನು ಇವುಗಳನ್ನು ಅಪವಿತ್ರಗೊಳಿಸದಿರುವುದೇ ಇದಕ್ಕೆ ಕಾರಣವಾಗಿದೆ. ಆದರಿಂದ ದಹನ ಮತ್ತು ದಫನಗಳನ್ನು ಪಾರ್ಸಿ ಸಂಸ್ಕೃತಿ ನಿಷೇಧಿಸುತ್ತದೆ ಸದ್ಯದ ಸಮಸ್ಯೆಯೆಂದರೆ ಮುಂಬಯಿ ಕರಾಚಿಯಲ್ಲಿ ರಣಹದ್ದುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ,ನಗರಿಕರಣದ ವೇಗ ಮತ್ತು ಮತ್ನುಷ್ಯ್ತರು ಹಾಗು ಪ್ರಾಣಿಗಳು ಉಪಯೋಗಿಸುವ ವಿಷಪೂರಿತ ಔಷಧಿ ಡಿಕ್ಲೊಫೆನ್ಸ್‌ನ ಅತಿಯಾದ ಬಳಕೆ ಈ ಪಕ್ಷಿ ಸಂಕುಲ ನಶಿಸಲು ಕಾರಣವಾಗಿದೆ. ಇದರಿಂದಾಗಿ ಮೃತದೇಹಗಳು ನಾಶಹೊಂದಲು ಬಹುಸಮಯ ಹಿಡಿಯುತ್ತದೆ,ಅಲ್ಲದೇ ಇತರ ಸಮುದಾಯಗಳು ಇದರ ಬಗ್ಗೆ ತಮ್ಮ ಅಸಮಾಧಾನ [who?]ವ್ಯಕ್ತಪಡಿಸುತ್ತಿವೆ. ಆದರೆ ಮೃತವ್ಯಕ್ತಿಯ ಕೂಡಲೇ ದೇಹ ನಶಿಸಲು ಸೌರ ಪ್ಯಾನಲ್ ಗಳನ್ನು ಅಳವಡಿಸಲಾಗಿದೆಯಲ್ಲದೇ ಆದರೆ ಅದು ಭಾಗಶ: ಯಶಸ್ವಿಯಾಗಿದೆ. ಸಮುದಾಯದಲ್ಲಿ ಹೂಳುವುದು ಅಥವಾ ಸಂಸ್ಕಾರದ ನಿಷೇಧಗಳನ್ನು ತೆಗೆದು ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ದಿ ಟಾವರ್ ಆಫ್ ಸೈಲೆನ್ಸ್ ಮುಂಬಯಿನ ಮಲ್ ಬಾರ್ ಹಿಲ್ಸ್ ನಲ್ಲಿದೆ. ಮಲ್ ಬಾರ್ ಹಿಲ್ಸ್ ಮತ್ತು ಸುತ್ತಮುತ್ತಲಿನ ಜನರು ಈ ಬಗ್ಗೆ ತಮ್ಮ ದೂರುಗಳನ್ನು ಸಲ್ಲಿಸಿದ್ದಾರೆ. ಸದ್ಯ ಪಾರ್ಸಿಗಳಿಗೆ ಈ ಟಾವರ್ ನ ಅಂತ್ಯಸಂಸ್ಕಾರಕ್ಕಿಂತ ಹೂಳುವಿಕೆಗೆ ಅವಕಾಶದ ಅನುಮತಿ ನೀಡಲಾಗಿದೆ.
ಪ್ರಖ್ಯಾತ ಪಾರ್ಸಿಗಳು
[ಬದಲಾಯಿಸಿ]ಪಾರ್ಸಿಗಳು ಭಾರತದ ಇತಿಹಾಸ ಮತ್ತು ಅಭಿವೃದ್ಧಿಗೆ ತಮ್ಮ ಸಾಕಷ್ಟು ಕೊಡುಗೆ ನೀಡಿದ್ದಾರೆ,ತಮ್ಮ ಸಣ್ಣ ಪ್ರಮಾಣದ ಜನಸಂಖ್ಯೆ ಇದ್ದರೂ ಅವರ ಕೊಡುಗೆ ಅಪಾರ. "ಪಾರ್ಸಿ"ಅಂದರೆ [[ದೇವರ ಹೆಸರೇ|ದೇವರ ಹೆಸರೇ]] ಕೊಡುಗೈ ದಾನಿ" ಎಂದು ಪಾರ್ಸಿ ಎ೬ದರೆ ಸಂಸ್ಕೃತದಲ್ಲಿ ದಾನ ನೀಡುವವನು ಎಂದು ಅವರ ಉದಾರ ಗುಣ ಮತ್ತು ನೆರವಿನ ಗುಣಗಳು ಮಾರ್ಗದರ್ಶಿಯಾಗಿವೆ. ಮಹಾತ್ಮಾ ಗಾಂಧಿಹೇಳಿರುವಂತೆ "ನಾನು ನನ್ನ ದೇಸಹ್ದ ಬಗ್ಗೆ ಹೆಮ್ಮೆ ಪಡುತ್ತೇನೆ,ನನ್ನ ದೇಶವು ಪ್ರಸಿದ್ದ ಸಂಪನ್ ಭರಿತ ಝೋರೊಸ್ಟ್ರಿಯನ್ ನ್ನು ಕೊಟ್ಟಿದೆ ಅದು ದಾನ ದತ್ತಿ ,ಉದಾರತೆಗೆ ತನ್ನನ್ನು ತಾನು ಒಡ್ಡಿಕೊಂಡು ದೇಶದ ಎಲ್ಲರಿಗೂ (Rivetna 2002)ಮಾರ್ಗದರ್ಶಿಯಾಗಿದೆ" ಪಾರ್ಸಿಗಳ ಸತತ ಶ್ರಮದಿಂದಾಗಿ ಬಾಂಬೆ ನಗರದ ಹಲವಾರು ಹೆಸರಾಂತ ಸ್ಥಳಗಳು ಕಾಯಕಲ್ಪ ಕಂಡಿವೆ,ಉದಾಹರಣೆಗೆ ನಾರಿಮನ್ ಪಾಯಿಂಟ್ ಇತ್ಯಾದಿ. ಭಾರತದ ಸ್ವಾತಂತ್ರ ಚಳವಳಿಯಲ್ಲಿ ಪಾರ್ಸಿಗಳು ಬಹುಮಹತ್ವದ ಪಾತ್ರವಹಿಸಿದ್ದಾರೆ,ಅದರಲ್ಲಿ ಫಿರೊಜ್ ಶಾಹ್ ಮೆಹತಾ,ದಾದಾಭಾಯಿ ನವರೊಜಿ ಮತ್ತು ಭಿಕುಜಿ ಕ್ಯಾಮಾ,ಇತ್ಯಾದಿ. ವಿಶೇಷವಾಗಿ ವಿಜ್ಞಾನ ಮತ್ತು ಕೈಗಾರಿಕೆಗಳಲ್ಲಿ ಪಾರ್ಸಿಗಳ ಪಾತ್ರ ಅನನ್ಯವಾದುದು.ಭೌತಶಾಸ್ತ್ರಜ್ಞ ಹೊಮಿ.ಜೆ ಭಾಭಾ ಮತ್ತು ಟಾಟಾದ ವಿವಿಧ ಸದಸ್ಯರು;ಗೊದ್ರೆಜ್‌ಮತ್ತು ವಾಡಿಯಾಕೈಗಾರಿಕಾ ಕುಟುಂಬಗಳು. ಪಾರ್ಸಿ ಸಂಗೀತಗಾರರಲ್ಲಿ ಫ್ರೆಡ್ಡಿ ಮರ್ಕ್ಯುರಿ,ಸಂಯೋಜಕ ಕೈಕೊಸ್ರು ಶಾಪುರ್ಜಿ ಸೊರ್ಬ್ಜಿ ಮತ್ತು ಜುಬಿನ್ ಮೆಹತಾ ಇತ್ಯಾದಿ. ವಿಶೇಷವಾಗಿ ಕಲೆ ವಿಭಾಗದಲ್ಲಿ ಸಾಂಸ್ಕೃತಿಕ ಅಧ್ಯಯನಾಸಕ್ತ ಹೊಮಿ.ಕೆ.ಭಾಭಾ;ಚಿತ್ರಕಥೆಗಾರ ಮತ್ತು ಛಾಯಾಗ್ರಾಹಕ ಸೊನಿ ತಾರಾಪೊರೆವಾಲಾ;ಬರಹಗಾರರಾದ ರೊಹೊಂಟೊನ್ ಮಿಸ್ತ್ರಿ,ಫಿರ್ದುಸ್ ಕಂಗಾ, ಪಾಕಿಸ್ತಾನಿಬರಹಗಾರ ಬಪ್ಸಿ ಸಿದ್ವಾ,ಅರ್ಧಾಸಿರ್ ವಕಿಲ್ ಮತ್ತು ಪಾಕಿಸ್ತಾನಿಪತ್ತೆದಾರಿ ಪತ್ರಕರ್ತ ಅರ್ದೆಸಿರ್ ಕೊವಾಸ್ಜೀ. ಭಾರತದ ಮೊದಲ ಭಾರತೀಯ ಸೈನ್ಯದ ಫೀಲ್ಡ್ ಮಾರ್ಶಲ್ ಸ್ಯಾಮ್ ಮನೆಕ್‌ಅವರು ಕೂಡಾ ಪಾರ್ಸಿ. ಪಾರ್ಸಿಗಳ ಪಟ್ಟಿಯನ್ನು ವಿಕಿಪಿಡಿಯಾದಲ್ಲಿ :Category:Parsi peopleನೋಡಿ
ಜನಪ್ರಿಯ ಸಂಸ್ಕೃತಿಯಲ್ಲಿ ಪ್ರತಿನಿಧಿತ್ವ
[ಬದಲಾಯಿಸಿ]- ಸುಮಾರು ೨೦೦೫ರಲ್ಲಿ ಬಂದ ದಿ ಸ್ಪೇಸ್ ಬಿಟ್ವೀನ್ ಅಸ್ ಥ್ರಿಟಿ ಉಮ್ರಿಗರ್‌ಬರೆದ ಈ ಗ್ರಂಥ ಪಾರ್ಸಿ ಹೆಂಗಸು ಮತ್ತು ಪಾರ್ಸಿಯೇತರ ಸೇವಕನ ಬಗೆಗಿದೆ. ಸಮಾರಂಭಗಳು,ಅಂತ್ಯಸಂಸ್ಕಾರಗಳು ಮತ್ತು ಮತಾಂತರ ಇನ್ನಿತರ ಮೌಲ್ಯವರ್ಧಿತ ಅಂಶಗಳು ಪಾರ್ಸಿಗಳ ಜೀವನಶೈಲಿಯನ್ನು ವಿವರಿಸುತ್ತದೆ.
- ಕ್ಯಾಪ್ಟೇನ ಅಹಬ್ ನ ರಹಸ್ಯ ತಾಣಗಳು ಫೆದುಲ್ಲಾ ಮೊಬಿ ಡಿಕ್ ಕಾದಂಬರಿಯಲ್ಲಿ ಹೆರ್ಮನ್ ಮೆಲ್ವಿಲ್ಲೆ "ಪಾರ್ಸೀ" ಎಂದು ಪದ ಬಳಸಿದ್ದಾರೆ. ಹಲವು ಝೋರೊಸ್ಟ್ರಿಯನ್ ಸಂಪ್ರದಾಯಗಳಲ್ಲಿ ಅವರು ಅಗ್ನಿಗೆ ಹೆಚ್ಚು ಮಹತ್ವ ಕೊಡುವುದು.
- .ರುದ್ಯಾರ್ಡ್ ಕಿಪ್ಲಿಂಗ್ ನ "ಹೌ ದಿ ರಿನೊಸರೊಸ್ ಗಾಟ್ ಹಿಸ್ ಸ್ಕಿನ್ "(ಜಸ್ಟ್ ಸೊ ಸ್ಟೊರಿಸ್ )ನಲ್ಲಿ ಬರುವ ದ್ವೀಪಗಳಲ್ಲಿ ಬದುಕಿರುವ ಏಕೈಕ ಮನುಷ್ಯ ಪಾತ್ರವೆಂದರೆ ಪಾರ್ಸಿ ವ್ಯಕ್ತಿ,ಆತನ ಟೊಪ್ಪಿಗೆಯಲ್ಲಿ ಹೇಗೆ ಸೂರ್ಯ ಕಿರಣಗಳು ಆತನ ಬೆಳಕು ಬದುಕನ್ನು ಪ್ರತಿಫಲಿಸುತ್ತದೆ ಎಂದು ತೋರಿಸುತ್ತದೆ.
- ಸುಮಾರು ೨೦೦೬ರಲ್ಲಿನ ಚಿತ್ರ ಬಿಯಿಂಗ್ ಸಿರಸ್ ಇದು ಪಂಚಗಣಿಯಲ್ಲಿರುವ ನಿಷ್ಕ್ಕ್ರಿಯ ಪಾರ್ಸಿ ಕುಟುಂಬದ ಅಸಂಖ್ಯಾತ ಇಂಗ್ಲಿಷ್ ಭಾಷೆಯ ಭಾರತೀಯ ಚಿತ್ರಗಳಿಗೆ ಕೊಡುಗೆ ನೀಡಿದೆ. ಇದು ಮಾಧ್ಯಮಗಳಲ್ಲಿ ಮತ್ತು ವಿದೇಶಿ ಚಲನಚಿತ್ರಗಳ ಉತ್ಸವದಲ್ಲಿ ಮೆಚ್ಚುಗೆ ಪಡೆದರೂ ಹಲವಾರು ಪಾರ್ಸೀ ವ್ಯಕ್ತಿಸಮುದಾಯಗಳಿಂದ ಟೀಕೆಗೆ ಒಳಗಾಯಿತು. ಮರಾಠಿ ರಂಗ ನಿರ್ದೇಶಕಿ ವಿಜಯಾ ಮೆಹತಾ ಪಾರ್ಸಿ ದಂಪತಿ ಮೇಲಿನ ಪೆಸ್ಟೊನ್ಜೀ ಚಿತ್ರ ನಿರ್ಮಿಸಿದರು.ಇದರಲ್ಲಿ ಪ್ರಸಿದ್ದ ಶಬಾನಾ ಆಜ್ಮಿ ,ನಾಸುರುದ್ದೀನ್ ಶಾ ಮತ್ತು ಅನುಪಮ್ ಖೇರ್ ಅಭಿನಯಿಸಿದ್ದಾರೆ.
- ದೀಪಾ ಮೆಹ್ತಾರ ೧೯೯೮ರ ಚಿತ್ರ ಅರ್ಥ್ (ಭಾರತದಲ್ಲಿ ೧೯೪೭ ರಲ್ಲಿ ಬಿಡುಗಡೆಯಾಯಿತು)ಇದು ಪಾರ್ಸಿ ಕುಟುಂಬವೊಂದು ಭಾರತ ವಿಭಜನೆ ಸಂದರ್ಭದಲ್ಲಿ ಉಂಟಾದ ಘಟನೆಯ ವಿವರಮ್ ಇಲ್ಲಿದೆ.(ಇದು ಧಾರ್ಮಿಕ ವ್ಯತ್ಯಾಸದಿಂದಾದುದು) ಈ ಚಿತ್ರವು ಅರೆ ಐತಿಹಾಸಿಕ ಕಾದಂಬರಿ ಕ್ರ್ಯಾಕಿಂಗ್ ಇಂಡಿಯಾ (ಮೂಲ ಐಸ್ ಕ್ಯಾಂಡಿ ಮ್ಯಾನ್ )ಬಪ್ಸಿ ಸಿಧ್ವಾರಿಂದ ರಚಿತವಾದುದು.
- ಸಲ್ಮಾನ್ ರಶ್ದಿಯ ಕಾದಂಬರಿ ದಿ ಗ್ರೌಂಡ್ ಬಿನೀತ್ ಹರ್ ಫೀಟ್ ಭಾರತದ ಪ್ರಸಿದ್ದ ರಾಕ್ ಸ್ಟಾರ್ ಒರಮ್ ಕ್ಯಾಮಾ(ಇವರೊಬ್ಬ ಪಾರ್ಸಿ) ಕುರಿತು ಇದು ವಿವರಿಸುತ್ತದೆ .ರಶ್ದಿಯ ಎರಡು ಮಹತ್ವದ ಪುಸ್ತಕಗಳಲ್ಲಿ ಸಣ್ಣ ಪಾತ್ರಗಳೆಂದರೂ ಮಿಡ್ ನೈಟ್ಸ್ ಚಿಲ್ಡರನ್ ಸಿರಸ್ ದುಬಾಶ್ ಮತ್ತು ಹೊಮಿಕ್ಯಾಟ್ರಾಕ್ ಪಾತ್ರಗಳು ಪಾರ್ಸಿ ಕುಟುಂಬಕ್ಕೆ ಸೇರಿದವುಗಳು
- ಪಾರ್ಸಿ ಬರಹಗಾರ ರೊಹಿಂಟೊನ್ ಮಿಸ್ತ್ರಿಯ ಪುಸ್ತಕ ಮ್ಯಾನ್ ಬೂಕರ್ ಪ್ರೈಜ್ ಗೆ ಹೆಸರಿಸಿದ್ದು,ಭಾರತೀಯ ಸಮಾಜದ ಉತ್ತಮ ಕಾರ್ಯಗಳ ಬಗ್ಗೆ ಇದರಲ್ಲಿದೆ.ಅವರ ಕೃತಿಗಳಲ್ಲಿ;ಟೇಲ್ಸ್ ಫ್ರಾಮ್ ಫಿರೊಜ್ ಶಾ ಬಾಗ್ (೧೯೮೭), ಸಚ್ ಎ ಲಾಂಗ್ ಜರ್ನಿ (೧೯೯೧), ಎ ಫೈನ್ ಬ್ಯಾಲನ್ಸ್ (೧೯೯೫), ಮತ್ತು ಫೆಮಿಲಿ ಮ್ಯಾಟರ್ಸ್ (೨೦೦೨).
- ಜುಲ್ಸ್ ವರ್ನೆಯ ಕಾದಂಬರಿ ಅರೌಂಡ್ ದಿ ವರ್ಲ್ಡ್ ಇನ್ ಏಟಿ ಡೇಸ್ ,ನಲ್ಲಿ ಫಿಲೆಸ್ ಫಾಗ್ ಮತ್ತು ಪಾಸೆಪಾರರ್ಟ್ ಔಟ್ ಭಾರತೀಯ ಮಹಿಳೆ ಔದಾಳನ್ನು ಪಾರು ಮಾಡಿದ್ದು;ಆಕೆ ಸತಿ ಸಹಗಮನಕ್ಕೆ ತನ್ನ ಪತಿಯ ಚಿತೆಯ ಮೇಲೆ ಹೋದಾಗ (ಆತ ಮಹಾರಾಜಾ))ನಡೆಯುವ ಘಟನೆಯ ವಿವರ ಇದರಲ್ಲಿದೆ. ನಂತರ ಆ ಮಹಿಳೆ ಪಾರ್ಸಿ ಸಮುದಾಯಕ್ಕೆ ಸೇರಿದವಳು ಅವಳನ್ನು ಆಕೆ ವ್ಯಾಪಾರಿ ತಂದೆ ಮಹಾರಾಜನೇಗೆ ಕೊಟ್ಟು ಮದುವೆ ಮಾಡಿದ.
- ಜೊನ್ ಇರ್ವಿಂಗ್‌ನ ೧೯೯೪ ರಲ್ಲಿನ ಕಾದಂಬರಿಯಲ್ಲಿ ಎ ಸನ್ ಆಫ್ ದಿ ಸರ್ಕಸ್ , ಇದರಲ್ಲಿ ಪ್ರಮುಖ ಪಾತ್ರ ವೈದ್ಯ ಫಾರೂಕ್ ದಾರುವಾಲಾ ಒಬ್ಬ ಪಾರ್ಸಿ ಆಸ್ಟ್ರೇಲಿಯನ್ ಳನ್ನು ಮದುವೆಯಾಗುತ್ತದೆ.
- ಸುಮಾರು ೨೦೦೭ರಲ್ಲಿ ಬಂದ ಪರ್ಜೇನಿಯಾ ಚಿತ್ರದಲ್ಲಿ ೨೦೦೨ರ ಸಂದರ್ಭದಲ್ಲಿ ಅಹ್ಮದಾಬಾದನಲ್ಲಿನ ದಂಗೆ,ಹಿಂಸೆ ಕಾಳಗದಲ್ಲಿ ಸಿಕ್ಕಿಹಾಕಿಕೊಂಡ ಪಾರ್ಸಿ ಕುಟುಂಬದ ಸತ್ಯ ಕಥೆ ಇದಾಗಿದೆ. ಈ ಚಿತ್ರದಲ್ಲಿ ಆಧುನಿಕ ಜಗತ್ತಿನ ಆಡಂಬರಗಳು ಮತ್ತು ಅಲ್ಲಿನ ವಿವಿಧ ಪಾತ್ರಗಳ ನಡುವಿನ ಸಂವಾದ ಬಹಳಷ್ಟು ಮುಖ್ಯವಾಗಿದೆ,ಇಲ್ಲಿ ಕಥೆಯು ಕ್ರಿಕೆಟ್ ಮತ್ತು ಐಸ್ ಕ್ರೀಮ್ ನೊಡನೆ ತಳಕುಹಾಕಿಕೊಂಡಿದೆ.
- ಹಿಂದಿ ಚಿತ್ರ ಮುನ್ನಾಭಾಯಿ MBBS ೨೦೦೩ರಲ್ಲಿ ಬಂದಿದ್ದು,ಇದರಲ್ಲಿ ಕುರುಶ್ ದೆಬೂ ಒಬ್ಬ ವೈದ್ಯನಾಗಿ ಸಂಜಯ ದತ್ತ ವೈದ್ಯಕೀಯ ಪರೀಕ್ಷೆ ಪಾಸಾಗಲು ನೆರವಾಗುತ್ತಾನೆ. ಈ ಚಿತ್ರದಲ್ಲಿ ರುಸ್ತುಮ್ ಮತ್ತು ಆತನ ವೃದ್ಧ ತಂದೆ ಇವರನ್ನು ಪಾರ್ಸಿ ಹಿನ್ನಲೆಯಲ್ಲಿ ತೋರಿಸಲಾಗಿದೆ.
- ಖಟ್ಟಾ ಮೀಟಾದಲ್ಲಿ ಬಸು ಚಟರ್ಜೀ ಅವರು ಪಾರ್ಸಿ ಹಿನ್ನಲೆ ದೃಶ್ಯಗಳನ್ನು ಸಂಯೋಜಿಸಿದ್ದಾರೆ.
- ದಿ ರಾಯ್ ಆಪ್ಸ್ ಬರೆದ 'ಕೊನಾನ್ ಡೊಯಲ್ ಮತ್ತು ದಿ ಎಡಲ್ಜಿ ಕೇಸ್ ಒಂದು BBC ರೇಡಿಯೊದ ಪ್ರಸಾರದಲ್ಲಿ ಜಾರ್ಜ್ ಎಡಲ್ಜಿಯ ಒಬ್ಬ ಪಾರ್ಸಿ ಸಾಲಿಸಿಟರ್ ತಪ್ಪಾಗಿ' ಕ್ಯಾಟಲ್ ರಿಪ್ಪಿಂಗ್ 'ನಲ್ಲಿಸಿಕ್ಕಿಹಾಕಿಕೊಂಡಿದ್ದು.
ಉಲ್ಲೇಖಗಳು
[ಬದಲಾಯಿಸಿ]- ↑ Hodivala 1920, p. 88
- ↑ Boyce 2001, p. 148
- ↑ Lambton 1981, p. 205
- ↑ Nigosian 1993, p. 42
- ↑ Eliade, Couliano & Wiesner 1991, p. 254.
- ↑ Palsetia 2001, p. 1,n.1.
- ↑ Hinnells 2005, p. 6.
- ↑ Palsetia 2001, p. 1, n1.
- ↑ ಡಾ. (Mrs.) ಹಿಲ್ಲಾ ಮಿನೂ ವಾಡಿಯಾ (೨೦೦೩), ದಿ.ಎರ್ವರ್ಡ್ ನಾದರ್ ಶಾ ನವರೊಜಿ ಐಬರಾ ಸತ್ನ್ ದಸ್ತುರ್ಜಿ ಕುಕದಾರು ಸಾಹೇಬ್ ,ಅವರಿಂದ ಆಶೀರ್ವಾದ ಕುಕದಾರು ಟ್ರಸ್ಟ್
ಆಕರಗಳು
[ಬದಲಾಯಿಸಿ]- Boyce, M. (1970), "On the Calendar of the Zoroastrian Feasts", Bulletin of the School of Oriental and African Studies, 33 (3): 513–539
- Boyce, M. (July 2002), "The Parthians", in Godrej, P.J. (ed.), A Zoroastrian Tapestry, New York: Mapin, ISBN 1890206229
- Darukhanawala, H.; Jeejeebhoy, J (1938), Parsi Lustre on Indian Soil, Vol. I, Bombay: G. Claridge
- Dhalla, M. (1938), History of Zoroastrianism, New York: Oxford University Press, ISBN 0404128068
- Dobbin, C. (1970), "The Parsi Panchayat in Bombay City in the Nineteenth Century", Modern Asian Studies, 4 (2): 149–164
- Eliade, M.; Couliano, I.; Wiesner, H. (1991), The Eliade Guide to World Religions, New York: Harper Collins, ISBN 0060621451
- Hinnells, John R. (2005), The Zoroastrian Diaspora: Religion and Migration, Oxford University Press, ISBN 0-19-826759-2
- Hodivala, S. (1920), Studies in Parsi History, Bombay
{{citation}}
: CS1 maint: location missing publisher (link) - Hull, E. (1913), "Parsis", Catholic Encyclopedia, New York: Robert Appleton Company
- Jamshed Irani v. Banu Irani (1966), 68 BLR 794, Justice Mody
- Karaka, D. F. (1884), History of the Parsis: Including Their Manners, Customs, Religion, and Present Position, vol. 1, London: Macmillan and Co
- Kulke, E. (1978), The Parsees in India: A Minority as Agent of Social Change (2nd ed.), New Delhi: Vikas Pub. House
- Luhrmann, T.M. (1994, June), "The Good Parsi: The Postcolonial 'Feminization' of a Colonial Elite", Man, 29 (2): 333–357, doi:10.2307/2804477
{{citation}}
: Check date values in:|date=
(help) - Luhrmann, Tanya M. (2002, August), "Evil in the Sands of Time: Theology and Identity Politics among the Zoroastrian Parsis", The Journal of Asian Studies, 61 (3): 861–889, doi:10.2307/3096349
{{citation}}
: Check date values in:|date=
(help) - Maneck, Susan Stiles (1997), The Death of Ahriman: Culture, Identity, and Theological Change Among the Parsis of India, Bombay: K.R. Cama Oriental Institute
- Nanavutty, P. (1970), The Parsis, New Delhi: National Book Trust
- Ovington, J. (1929), Rawlinson, H.G. (ed.), A Voyage to Surat in the Year 1689, London: Humphrey Milford, ISBN 812060945X
- Palsetia, Jesse S. (2001), The Parsis of India, Leiden: Brill, ISBN 90-04-12114-5.
- Parsiana (February 2006), "How trust-worthy?", Parsiana, no. 48
- Paymaster, R. (1954), Early History of the Parsees in India, Bombay: Zarthoshti Dharam Sambandhi
- Roy, T.K.; Unisa, S.; Bhatt, M. (2004), Growth of the Parsi population in India, Mumbai: National Commission for Minorities, archived from the original on 2006-11-08, retrieved 2010-06-10
{{citation}}
: Missing|author3=
(help) - Sir Dinsha Manekji Petit v. Sir Jamsetji Jijibhai (1909), 33 ILR 509 and 11 BLR 85, Justices Dinshaw Davar and Frank Beaman
- Qamar, R.; Ayub, Q.; Mohyuddin, A.; Helgason, A. (2002), "Y-chromosomal DNA variation in Pakistan." (PDF), American Journal of Human Genetics, 70: 1107–1124, PMID 11898125
- Quintana-Murci, L. (May 2004), "Where West Meets East: The Complex mtDNA Landscape of the Southwest and Central Asian Corridor", American Journal of Human Genetics, 74 (5): 827–845, PMID 15077202, archived from the original on 2008-05-09, retrieved 2010-06-10
- Ralhan, Om Prakash (2002), "Indian National Congress", Encyclopaedia of Political Parties, New Delhi: Anmol Publications, ISBN 81-7488-865-9.
- Random House (1993), "Parsi", Random House Unabridged Dictionary (2nd ed.), New York: Random House
- Rivetna, Roshan, ed. (2002), The Legacy of Zarathushtra: An Introduction to the Religion, History and Culture of the Zarathushtis, Hinsdale: Federation of the Zoroastrian Associations of North America
- Stausberg, M. (2002), Die Religion Zarathushtras [The religion Zarathushtras], Stuttgart: Kohlhammer
- Taraporevala, S. (2000), Zoroastrians of India. Parsis: A Photographic Journey, Bombay: Good Books, ISBN 819012160X, archived from the original on 2006-02-14, retrieved 2010-06-10
- White, D. (1991, May), "From Crisis to Community Definition:The Dynamics of Eighteenth-Century Parsi Philanthropy", Modern Asian Studies, 25 (2): 303–320
{{citation}}
: Check date values in:|date=
(help) - Sarwar Merwan Yezdiar v. Merwan Rashid Yezdiar (1948), Parsi Matrimonial Court, Justice Coyaji
- Merwan Rashid Yezdiar v. Sarwar Merwan Yezdiar (1950), 52 BLR 876, Justices Chagla and Gajendragadkar
ಬಾಹ್ಯ ಕೊಂಡಿಗಳು
[ಬದಲಾಯಿಸಿ]Media related to Parsi at Wikimedia Commons Media related to Zoroastrianism in Iran at Wikimedia Commons
- ಪಾರ್ಸಿ ಜನಾಂಗ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Harv and Sfn no-target errors
- Pages using infobox ethnic group with unsupported parameters
- Articles using infobox ethnic group with image parameters
- Articles with hatnote templates targeting a nonexistent page
- Articles with unsourced statements from March 2008
- Articles with invalid date parameter in template
- All pages needing factual verification
- Wikipedia articles needing factual verification from February 2008
- All articles with specifically marked weasel-worded phrases
- Articles with specifically marked weasel-worded phrases from August 2009
- CS1 maint: location missing publisher
- CS1 errors: dates
- CS1 errors: missing name
- Articles with Open Directory Project links
- ಪಾರ್ಸಿ ಜನರು
- ಝೋರೊಸ್ಟ್ರಿಯನ್ಸ್
- ಗುಜರಾತ್ ದ ಸಾಮಾಜಿಕ ಗುಂಪುಗಳು
- ಮಹಾರಾಷ್ಟ್ರದ ಸಾಮಾಜಿಕ ಗುಂಪುಗಳು