ವಿಷಯಕ್ಕೆ ಹೋಗು

ಹಿಂಸ್ರ ಪಕ್ಷಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂಸ್ರ ಪಕ್ಷಿಗಳು
ಅಸ್ತಿತ್ವದಲ್ಲಿರುವ ಹಿಂಸ್ರ ಪಕ್ಷಿಗಳ ಸಂಕಲನ. ಮೇಲೆ ಎಡದಿಂದ ಬಲಕ್ಕೆ: ಕೊಂಬಿನ ಗೂಬೆ, ಕಿಂಗ್ ವಲ್ಚರ್, ಬೇಟೆಗಿಡುಗ, ಚಿನ್ನದ ಗರುಡ ಮತ್ತು ಬಿಯರ್ಡಡ್ ವಲ್ಚರ್
ಅಸ್ತಿತ್ವದಲ್ಲಿರುವ ಹಿಂಸ್ರ ಪಕ್ಷಿಗಳ ಸಂಕಲನ. ಮೇಲೆ ಎಡದಿಂದ ಬಲಕ್ಕೆ: ಕೊಂಬಿನ ಗೂಬೆ, ಕಿಂಗ್ ವಲ್ಚರ್, ಬೇಟೆಗಿಡುಗ, ಚಿನ್ನದ ಗರುಡ ಮತ್ತು ಬಿಯರ್ಡಡ್ ವಲ್ಚರ್
Scientific classification
Included groups
  • ಸ್ಟ್ರಿಗಿಫ಼ಾರ್ಮೀಸ್
  • ಕಥಾರ್ಟಿಫ಼ಾರ್ಮೀಸ್
  • ಅಕಿಪಿಟ್ರಿಫ಼ಾರ್ಮೀಸ್
  • ಫ಼ಾಲ್ಕೊನಿಫ಼ಾರ್ಮೀಸ್
  • ಕಾರಿಯಾಮಿಫ಼ಾರ್ಮೀಸ್
Excluded groups
  • ಕೊರ್‍ಯಾಸಿಮಾರ್ಫೇ
  • ಸಿಟಾಕೊಪಾಸರೇ

ಹಿಂಸ್ರ ಪಕ್ಷಿಗಳು ಎಂದರೆ ಆಹಾರಕ್ಕಾಗಿ ಇತರ ಪಕ್ಷಿ, ಪ್ರಾಣಿಗಳನ್ನು ಕೊಂದು ತಿನ್ನುವ ಹಕ್ಕಿಗಳು (ರ‍್ಯಾಪ್ಟರ್ಸ್). ಇವುಗಳಲ್ಲಿ ಕೆಲವು ಸತ್ತ ಪ್ರಾಣಿಗಳನ್ನು ತಿಂದು ಪರಿಸರದ ಜಾಡಮಾಲಿಗಳಾಗಿ ಕೆಲಸ ಮಾಡುತ್ತವೆ. ಈ ಪಕ್ಷಿಗಳ ವಿಶೇಷತೆಯೆಂದರೆ, ಇವುಗಳ ಬೇಟೆ ಕಾರ್ಯಕ್ಕೆ ಅನುಕೂಲವಾಗುವಂತೆ ಇವುಗಳಿಗೆ ಕಣ್ಣಿನ ದೃಷ್ಟಿ ತೀಕ್ಷ್ಣ, ಸೂಕ್ಷ್ಮ ಕಿವಿ, ಬಲಿಷ್ಠ ಕಾಲುಗಳಿದ್ದು, ಅದ್ಭುತ ಹಾರಾಟ ಸಾಮರ್ಥ್ಯವಿರುತ್ತದೆ.[೧][೨][೩] ಗರುಡ, ಗಿಡುಗ, ಈಗಲ್‌ಗಳು, ಗೂಬೆ ಹಾಗೂ ರಣಹದ್ದುಗಳು ಈ ಹಿಂಸ್ರ ಪಕ್ಷಿಗಳ ಪಟ್ಟಿಯಲ್ಲಿ ಬರುತ್ತವೆ.

ಹಿಂಸ್ರ ಪಕ್ಷಿಗಳಲ್ಲೊಂದಾದ ಇದು ಪುರಾಣ ಪ್ರಸಿದ್ಧವಾದ ಹಕ್ಕಿ. ಆಂಗ್ಲಭಾಷೆಯ ಬ್ರಾಹ್ಮಿನಿ ಕೈಟ್. ವೈಜ್ಞಾನಿಕ ಹೆಸರು ಹಾಲಿಯಾಸ್ಟರ್ ಇಂಡಸ್. ಬಿಳಿ ಎದೆ, ತಲೆ ಇದ್ದು, ಕಂದು ಮೈಬಣ್ಣ ಹೊಂದಿದೆ. ಬಾಲದ ತುದಿಯ ಕೆಲವು ಗರಿಗಳು ಕಪ್ಪಾಗಿರುತ್ತದೆ. ಸಾಮಾನ್ಯವಾಗಿ ನೀರಿನ ಬಳಿ ಕಂಡುಬರುವ ಇದು ಏಡಿ, ಮೀನು, ಕಪ್ಪೆ ಮತ್ತು ಹಾವುಗಳನ್ನು ಹಿಡಿದು ತಿನ್ನುತ್ತದೆ. ಮರದ ಕವಲಿನಲ್ಲಿ ಡಿಸೆಂಬರ್‌ನಿಂದ ಏಪ್ರಿಲ್ ಸಮಯದಲ್ಲಿ ಗೂಡು ಕಟ್ಟಿ ಮರಿಮಾಡುತ್ತದೆ. 2-3ಮೊಟ್ಟೆಗಳು. ಕಂದು ಮಿಶ್ರಿತ ಬಿಳಿ ಬಣ್ಣ. 26 ದಿನಗಳ ಕಾಲ ಕಾವು ಕೊಡುತ್ತವೆ.

ಹಾವು ಗಿಡುಗ

[ಬದಲಾಯಿಸಿ]

ಸಾಮಾನ್ಯವಾಗಿ ಕಾಡುಗಳಲ್ಲಿ ಕಂಡುಬರುವ ಪಕ್ಷಿ.  ಆಂಗ್ಲಭಾಷೆಯ ಕ್ರೆಸ್ಟೆಡ್ ಸರ್ಪೆಂಟ್ ಈಗಲ್. ವೈಜ್ಞಾನಿಕ ಹೆಸರು ಸ್ಪಿಲರ‍್ನಿಸ್ ಚೀಲಾ. ಗಾಢ ಕಂದು ಬಣ್ಣದ ಹಕ್ಕಿ. ಮೊನಚಾದ ಬೂದು-ಕಪ್ಪು ಕೊಕ್ಕು. ಕಣ್ಣಿನ ಸುತ್ತ ಹಳದಿಬಣ್ಣವಿರುತ್ತದೆ. ತಲೆಯ ಹಿಂದೆ ಕಪ್ಪು-ಬಿಳಿ ಜುಟ್ಟಿದೆ. ಕುಳಿತಾಗ ಅಥವಾ ಕೂಗುವಾಗ ಇದು ಎದ್ದು ನಿಲ್ಲುತ್ತದೆ. ಬಾಲದ ಮೇಲೆ ಕಪ್ಪು ಬಿಳಿ ಪಟ್ಟಿ ಇರುತ್ತದೆ. ಹೊಟ್ಟೆಯ ಮೇಲೆ ಕಪ್ಪು-ಬಿಳಿ ಚುಕ್ಕಿಗಳಿರುತ್ತವೆ. ಕಪ್ಪೆ, ಹಾವು ಮತ್ತು ಮೂಷಿಕಗಳನ್ನು ಹಿಡಿದು ತಿನ್ನುತ್ತದೆ. ಮರದ ಕವಲಿನಲ್ಲಿ ಡಿಸೆಂಬರ್‌ನಿಂದ ಮಾರ್ಚ್ ಸಮಯದಲ್ಲಿ ಗೂಡುಕಟ್ಟಿ ಒಂದು ಕೆನೆ ಬಣ್ಣದ ಮೊಟ್ಟೆ ಇಡುತ್ತದೆ. ಕಾವು ಕೊಡುವ ಕಾಲ 35 ದಿನಗಳು.

ಚೊಟ್ಟಿಗರುಡ

[ಬದಲಾಯಿಸಿ]

ಆಂಗ್ಲಭಾಷೆಯ ಚೇಂಜಬಲ್ ಹಾಕ್ ಈಗಲ್. ಇದರ ಬಣ್ಣ ಬದಲಾಗುತ್ತದೆಯಾದ್ದರಿಂದ ಚೇಂಜಬಲ್ ಎಂಬ ಹೆಸರು ಬಂದಿದೆ. ವೈಜ್ಞಾನಿಕ ಹೆಸರು ಸ್ಪೈಸಿಯೇಟಸ್ ಸರ‍್ಹೆಟಸ್. ಹದ್ದಿನ ಗಾತ್ರದ ಬೂದು ಮಿಶ್ರಿತ ಕಂದು ಪಕ್ಷಿಗೆ ಕಪ್ಪು ಜುಟ್ಟಿರುತ್ತದೆ. ತಿಳಿಬಿಳಿಯ ಹುಬ್ಬಿರುವ ಇದಕ್ಕೆ, ಹಳದಿ ಕಣ್ಣಿರುತ್ತದೆ. ಕಪ್ಪು ಜುಟ್ಟು ಎದ್ದು ನಿಲ್ಲುತ್ತದೆ. ಅಪ್ರಬುದ್ಧ ಪಕ್ಷಿಗಳು ತಿಳಿ ಕಂದಾಗಿದ್ದು, ಬಿಳಿ ಜುಟ್ಟಿರುತ್ತದೆ. ಮರದ ಕವಲಿನಲ್ಲಿ ಡಿಸೆಂಬರ್ ಏಪ್ರಲ್ ಸಮಯದಲ್ಲಿ ಗೂಡುಕಟ್ಟಿ ಒಂದು ಬಿಳಿ ಬೂದು ಮಿಶ್ರಿತ ಬಿಳಿ ಮೊಟ್ಟೆ ಇಟ್ಟು ಮರಿಮಾಡುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Perrins, Christopher, M; Middleton, Alex, L. A., eds. (1984). The Encyclopaedia of Birds. Guild Publishing. p. 102.{{cite book}}: CS1 maint: multiple names: editors list (link)
  2. Fowler, Denver W.; Freedman, Elizabeth A.; Scannella, John B.; Pizzari, Tom (25 November 2009). "Predatory Functional Morphology in Raptors: Interdigital Variation in Talon Size Is Related to Prey Restraint and Immobilisation Technique". PLOS ONE. 4 (11): e7999. Bibcode:2009PLoSO...4.7999F. doi:10.1371/journal.pone.0007999. PMC 2776979. PMID 19946365.
  3. Burton, Philip (1989). Birds of Prey. illustrated by Boyer, Trevor; Ellis, Malcolm; Thelwell, David. Gallery Books. p. 8. ISBN 978-0-8317-6381-7.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: