ವಿಷಯಕ್ಕೆ ಹೋಗು

ಯುರೇಶಿಯನ್ ಟ್ರೀ ಸ್ಪ್ಯಾರೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Eurasian tree sparrow
Adult of subspecies P. m. saturatus in Japan
Original image reversed
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
P. montanus
Binomial name
Passer montanus
(Linnaeus, 1758)
Afro-Eurasian distribution

      Breeding summer visitor
      Resident breeder
      Non-breeding winter visitor

Synonyms
 • Fringilla montana Linnaeus 1758
 • Loxia scandens Hermann 1783
 • Passer arboreus Foster 1817

ಪಾಸರ್ ಮೊಂಟಾನಸ್ ಎಂಬುದು ಒಂದು ಜಾತಿಯ ಯುರೇಶಿಯನ್ ಟ್ರೀ ಸ್ಪ್ಯಾರೋ ಮರದಲ್ಲಿ ವಾಸಿಸುವ ಗುಬ್ಬಚ್ಚಿಯಾಗಿದ್ದು, ಇದು ಗುಬ್ಬಚ್ಚಿ ಸಮೂಹ ದಲ್ಲಿ ಸೇರ್ಪಡೆಯಾಗಿದೆಯಲ್ಲದೇ, ಇದರ ತಲೆಯ ಬಣ್ಣ ಮತ್ತು ಕುತ್ತಿಗೆಯ ಹಿಂಭಾಗ ಕಡು ಕಂದು ಬಣ್ಣದಿಂದ ಕೂಡಿದೆ ಹಾಗೆಯೇ, ಅದರ ಪ್ರತಿಯಾದ ಪರಿಶುದ್ಧವಾದ ಬಿಳಿ ಕದಪುಗಳಲ್ಲಿ ಕಪ್ಪು ಬಣ್ಣದ ಮಚ್ಚೆಗಳಿವೆ.

ಗಂಡು ಮತ್ತು ಹೆಣ್ಣು ಜಾತಿಯ ಎರಡೂ ಹಕ್ಕಿಗಳು ಏಕರೀತಿಯ ಗರಿಪುಕ್ಕಗಳನ್ನು ಹೊಂದಿದ್ದು, ಯುವಹಕ್ಕಿಗಳು ವಯಸ್ಕ ಹಕ್ಕಿಗಳಿಗಿಂತ ಮಂಕಾಗಿರುತ್ತವೆ. ಈ ಗುಬ್ಬಚ್ಚಿ ತಳಿಗಳು ಹೆಚ್ಚಾಗಿ ಸಮಶೀತೋಷ್ಣವಲಯದ ಯುರೇಶಿಯಾ ಮತ್ತು ಏಷ್ಯಾದ ಆಗ್ನೇಯಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಹಾಗೆಯೇ ಇವುಗಳನ್ನು ಟ್ರೀ ಸ್ಪ್ಯಾರೋ ಎಂದು ಕರೆಯಲಾಗುತ್ತದೆ. ಈ ಜಾತಿಯ ಗುಬ್ಬಚ್ಚಿಗಳು ಯುನೈಟೆಡ್ ಸ್ಟೇಟ್ಸ್(ಅಮೆರಿಕಾ)ನ್ನೊಳಗೊಂಡಂತೆ ಬೇರೆಕಡೆಗಳಲ್ಲಿಯೂ ಕಂಡುಬರುತ್ತವೆ. ಇವುಗಳನ್ನು ಯುರೇಶಿಯನ್ ಟ್ರೀ ಸ್ಪ್ಯಾರೋ ಅಥವಾ ಜರ್ಮನ್ ಸ್ಪ್ಯಾರೋ ಎನ್ನಲಾಗುತ್ತದೆಯಲ್ಲದೇ, ಇವುಗಳ ಸ್ಥಳೀಯತೆಯನ್ನು ಪ್ರತ್ಯೇಕಿಸುವ ಸಲುವಾಗಿ , ಯಾವುದೇ ಸಂಬಂಧವಿರದ ದೇಶದ ಹೆಸರಾದ ಅಮೆರಿಕನ್ ಟ್ರೀ ಸ್ಪ್ಯಾರೋ ಎಂದು ಕೂಡ ಕರೆಯಲಾಗುತ್ತದೆ.

ಇವುಗಳಲ್ಲಿ ಕೂಡ ಅನೇಕ ಉಪಜಾತಿಗಳನ್ನು ಗುರುತಿಸಲಾಗಿದ್ದು, ಈ ಜಾತಿಯ ಹಕ್ಕಿಗಳು ವೈವಿಧ್ಯಮಯವಾಗಿ ವಿಸ್ತೃತ ಪ್ರಮಾಣದಲ್ಲಿ ಎಲ್ಲೆಡೆ ಕಾಣಬರುತ್ತದೆ.

ಈ ಯುರೇಶಿಯನ್ ಟ್ರೀ ಸ್ಪ್ಯಾರೋ (ಮರಗುಬ್ಬಚ್ಚಿ)ವು ನೈಸರ್ಗಿಕವಾದ ಮರದ ಪೊಟರೆಗಳಲ್ಲಿ, ಕಟ್ಟಡಗಳಲ್ಲಿರುವ ರಂಧ್ರಗಳಲ್ಲಿ ಅಥವಾ ಮ್ಯಾಗ್ ಪೈ/ಮಡಿವಾಳ ಹಕ್ಕಿ ಅಥವಾ ಸ್ಟಾರ್ಕ್/ಕೊಕ್ಕರೆ ಜಾತಿಯ ಹಕ್ಕಿಗಳ ದೊಡ್ಡ ಗೂಡುಗಳಲ್ಲಿ ಅವ್ಯವಸ್ಥಿತವಾದ ಗೂಡುಗಳನ್ನು ಕಟ್ಟುತ್ತದೆ. ಈ ವಿಶಿಷ್ಠ ರೀತಿಯ ಗೂಡಿನಲ್ಲಿ ಐದು ಅಥವಾ ಆರು ಮೊಟ್ಟೆಗಳಿರುವುದಲ್ಲದೇ, ಅವುಗಳು ಎರಡು ವಾರಗಳೊಳಗಾಗಿ ಮೊಟ್ಟೆಯೊಡೆದು ಮರಿಗಳಾಗುತ್ತವೆ. ಈ ಗುಬ್ಬಚ್ಚಿಗಳು ಮುಖ್ಯವಾಗಿ ಕಾಳುಗಳನ್ನು ತಿನ್ನುತ್ತವೆಯಾದರೂ ಕೆಲವೊಮ್ಮೆ ವಿಶೇಷವಾಗಿ ಮರಿಗಳ ಸಾಕಣೆಯ(ವಂಶಾಭಿವೃದ್ಧಿ) ಸಂದರ್ಭದಲ್ಲಿ ಹುಳುಹುಪ್ಪಡಿಗಳನ್ನು ಕೂಡ ತಿನ್ನುತ್ತವೆ. ಇತರ ಸಣ್ಣ ಹಕ್ಕಿಗಳಿಂದ ಇವುಗಳಿಗೆ ಪರೋಪಜೀವಿಗಳಿಂದ ಮತ್ತು ವಿವಿಧ ರೋಗಗಳಿಂದ ಸೋಂಕುಗಳು ತಗಲುವುದಲ್ಲದೇ, ತನ್ನ ಆಹಾರಕ್ಕಾಗಿ ಪರಭಕ್ಷಕ ಹಕ್ಕಿಗಳು ಇವುಗಳನ್ನು ಕೆಲವೊಮ್ಮೆ ಕೊಲ್ಲುತ್ತವೆ. ಇದರ ಹೊರತಾಗಿ ಇವುಗಳ ವಿಶಿಷ್ಠ ಜೀವಿತಾವಧಿಯು ಸುಮಾರು ಎರಡು ವರ್ಷಗಳ ಅವಧಿಯಾಗಿರುತ್ತದೆ.

ಪೂರ್ವ ಏಷ್ಯಾದ ನಗರಗಳು ಮತ್ತು ಪಟ್ಟಣಗಳಲ್ಲಿ ಈ ಯುರೇಶಿಯನ್ ಮರಗುಬ್ಬಚ್ಚಿಗಳು ಹೆಚ್ಚು ವಿಸ್ತಾರವಾಗಿ ಹರಡಿಕೊಂಡಿವೆಯಾದರೂ ಕೂಡ, ಯುರೋಪಿನಲ್ಲಿ ಮಾತ್ರ ಸಣ್ಣ ಸಣ್ಣ ಮುಕ್ತ ನೆಡುತೋಪುಗಳಿರುವ ಕಡೆ ಇರುವುದಲ್ಲದೇ, ಹೌಸ್ ಸ್ಪ್ಯಾರೋವು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ತನ್ನ ತಳಿಪೋಷಣೆಯನ್ನು(ವಂಶಾಭಿವೃದ್ಧಿ) ಮಾಡುತ್ತದೆ. ಈ ಯುರೇಶಿಯನ್ ಟ್ರೀ ಸ್ಪ್ಯಾರೋ(ಮರಗುಬ್ಬಚ್ಚಿ) ವಿಸ್ತೃತ ಪ್ರಮಾಣದಲ್ಲಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿದ್ದು ಇದು ಜಾಗತಿಕವಾಗಿ ನಶಿಸಿಹೋಗುತ್ತಿಲ್ಲವೆಂಬುದು ಖಚಿತವಾಗಿದೆಯಾದರೂ, ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕಳೆನಾಶಕಗಳನ್ನು ಬಳಸುವುದರಿಂದ ಮತ್ತು ಚಳಿಗಾಲದಲ್ಲಿ ಗುಬ್ಬಚ್ಚಿಗಳ ಆಹಾರಕ್ಕೆ ಪೂರಕವಾಗಿ ಯಾವುದೇ ಕಟಾವು ಮಾಡುವ ಕಾಳುಗಳ ಬೆಳೆಗಳಿಲ್ಲದಿರುವುದರಿಂದಲೂ ಕೂಡ ಪಾಶ್ಚಿಮಾತ್ಯ ಯುರೋಪಿಯನ್ ಗುಬ್ಬಚ್ಚಿಗಳ ಸಂಖ್ಯೆಗಳಲ್ಲಿ ಹೆಚ್ಚಿನ ಪ್ರಮಾಣದ ಇಳಿಮುಖವನ್ನು ಕಾಣಬಹುದಾಗಿದೆ. ಪೂರ್ವ ಏಷ್ಯಾ ಮತ್ತು ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿ ಈ ಪ್ರಭೇದವನ್ನು ಕೆಲವೊಮ್ಮೆ ಕೀಟನಿಯಂತ್ರಕಗಳೆಂಬ ದೃಷ್ಟಿಕೋನದಲ್ಲಿ ನೋಡಲಾಗುತ್ತಿದೆಯಲ್ಲದೇ, ಇದನ್ನು ವಿಸ್ತಾರವಾಗಿ ಒಂದು ಹೊಸ ಹೊಂದಾಣಿಕೆ/ಮಾರ್ಗದರ್ಶಿ ಕಲೆಯಾಗಿ ಕೂಡ ಪರಿಗಣಿಸಲಾಗುತ್ತಿದೆ.

ವಿವರಣೆ[ಬದಲಾಯಿಸಿ]

ಈ ಯುರೇಶಿಯನ್ ಟ್ರೀ ಸ್ಪ್ಯಾರೋ ಸುಮಾರು ೧೨.೫–೧೪ ಸೆಂಟಿ ಮೀಟರ್ (೫–೫½ ) ಉದ್ದವಾಗಿದ್ದು ,[೨] ಸುಮಾರು ೨೧ ಸೆಂಟಿಮೀಟರ್ನಷ್ಟು (೮.೨೫ ) ಅಗಲದ ರೆಕ್ಕೆಯನ್ನು ಹೊಂದಿದೆ [೩] ಮತ್ತು ಇದು ೨೪ ಗ್ರಾಂನಷ್ಟು (೦.೮೬ oz),ಭಾರ(ತೂಕ)ವನ್ನು ಹೊಂದಿದ್ದು, ಇದು ಹೌಸ್ ಸ್ಪ್ಯಾರೋಗಿಂತ ಸುಮಾರಾಗಿ ೧೦% ರಷ್ಟು ಸಣ್ಣದಾಗಿದೆ.[೪]

ವಯಸ್ಕ ಗುಬ್ಬಚ್ಚಿಗಳ ತಲೆ ಮತ್ತು ಕುತ್ತಿಗೆಯ ಹಿಂಭಾಗವುಕಡು ಕಂದು ಬಣ್ಣ ವನ್ನು ಹೊಂದಿದ್ದು, ತನ್ನ ಪ್ರತಿ (ಎರಡು)ಬಿಳಿಯಾದ ಕದಪುಗಳಲ್ಲಿ ಕಿಡ್ನಿಯಾಕಾರದ ಕಪ್ಪು ಗುರುತಿನ ಕಿವಿರಂಧ್ರವನ್ನು ಹೊಂದಿರುವುದಲ್ಲದೇ, ಗಲ್ಲ, ಗಂಟಲು ಮತ್ತು ಕೊಕ್ಕು ಹಾಗೂ ಗಂಟಲ ನಡುವಿನ ಪ್ರದೇಶವು ಕಪ್ಪು ಬಣ್ಣದಲ್ಲಿರುತ್ತದೆ. ಗುಬ್ಬಚ್ಚಿಯ ಮೇಲ್ಭಾಗವು ತಿಳಿ ಕಂದುಬಣ್ಣವನ್ನು ಹೊಂದಿದ್ದು, ಅದರಲ್ಲಿ ಕಪ್ಪು ಬಣ್ಣದ ಗೆರೆಗಳಿರುತ್ತವೆ ಹಾಗೆಯೇ, ಕಂದು ಬಣ್ಣದ ರೆಕ್ಕೆಗಳಲ್ಲಿ ಎರಡು ವಿಭಿನ್ನ ಸ್ವರೂಪದ ಕಿರಿದಾದ ಬಿಳಿಯ ಗೆರೆಗಳಿರುತ್ತವೆ. ಕಾಲುಗಳು ಮಸುಕಾದ ಕಂದು ಬಣ್ಣದಲ್ಲಿದ್ದು, ಅದರ ಕೊಕ್ಕು ಬೇಸಿಗೆಯಲ್ಲಿ ನೀಲಿ ಬಣ್ಣಕ್ಕೆ ತಿರುಗುವುದಲ್ಲದೇ, ಚಳಿಗಾಲದಲ್ಲಿ ಅದು ಸುಮಾರಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.[೫]

ಈ ಗುಬ್ಬಚ್ಚಿಗಳು ವಿಭಿನ್ನವಾಗಿದ್ದರೂ ಕೂಡ ಇವುಗಳ ಪಂಗಡಗಳಲ್ಲಿ ಹೆಣ್ಣು ಮತ್ತು ಗಂಡು ಜಾತಿಯ ಹಕ್ಕಿಗಳ ರೆಕ್ಕೆಪುಕ್ಕಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ; ಯುವ ಹಕ್ಕಿಗಳು ವಯಸ್ಕ ಹಕ್ಕಿಗಳಂತೆ ಹೋಲುತ್ತವೆ, ಹಾಗೆಯೇ, ಕೆಲವೊಮ್ಮೆ ಮಸುಕಾದ ಬಣ್ಣಗಳನ್ನು ಕೂಡ ಹೋಲುತ್ತವೆ.[೬] ರೆಕ್ಕೆಪುಕ್ಕಗಳಿಂದ ತುಂಬಿಕೊಂಡಿರುವ ಎಲ್ಲಾ ಹಕ್ಕಿಗಳಿದ್ದರೂ ಕೂಡ ಇವುಗಳ ಮುಖ ಹೋಲಿಕೆಯ ಲಕ್ಷಣಗಳಿಂದ ಈ ಜಾತಿಯ ಹಕ್ಕಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ;[೪] ಇವುಗಳು ಗಾತ್ರದಲ್ಲಿ ಸಣ್ಣದಾಗಿದ್ದು, ಬೂದುಬಣ್ಣವಾಗಿರದೇ, ಕಂದು ಬಣ್ಣವನ್ನು ಹೊಂದಿದ್ದು, ಇವುಗಳ ತಲೆಯು ಗಂಡು ಜಾತಿಯ ಹೌಸ್ ಸ್ಪ್ಯಾರೋಗಳಿಗಿಂತ (ಅಂಗಡಿಹಕ್ಕಿಗಳು) ಪೂರಕವಾಗಿ ಭಿನ್ನವಾಗಿರುತ್ತದೆ.[೨] ವಯಸ್ಕ ಮತ್ತು ಯುವ ಯುರೇಶಿಯನ್ ಟ್ರೀ ಸ್ಪ್ಯಾರೋಗಳು ಶರಧೃತುವಿನಲ್ಲಿ ಸಂಪೂರ್ಣವಾಗಿ ತನ್ನ ಗರಿಗಳನ್ನು ಕಳೆದುಕೊಳ್ಳುತ್ತವೆ ಮತ್ತು ಸಂಗ್ರಹಿತ ಕೊಬ್ಬಿನಂಶವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ (ಶರೀರ ಗಾತ್ರ)ದೇಹಪ್ರಕೃತಿಯಲ್ಲಿನ ವೃದ್ಧಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಗರಿಗಳ ಬೆಳವಣಿಗೆಯಾಗಲು ಸಹಕರಿಸುವ ನಿಟ್ಟಿನಲ್ಲಿ, ರಕ್ತದ ಪ್ರಮಾಣವು ಹೆಚ್ಚುವುದರಿಂದ ಹಕ್ಕಿಗಳ ದೇಹಪ್ರಕೃತಿಯಲ್ಲಿ ಬದಲಾವಣೆಯಾಗುತ್ತದೆಯಲ್ಲದೇ, ಸಾಮಾನ್ಯವಾಗಿ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಂಶವಿರುತ್ತದೆ.[೭]

ಯುರೇಶಿಯನ್ ಟ್ರೀ ಸ್ಪ್ಯಾರೋಗೆ ನಿರ್ದಿಷ್ಟವಾದ ಯಾವುದೇ ಒಂದು ಇಂಪಾದ ಧ್ವನಿಯಿಲ್ಲ, ಆದರೆ ಇತರ ಗಂಡು ಹಕ್ಕಿಗಳ ಕೂಗಿನ ಧ್ವನಿಯು ಆಕರ್ಷಿಸಿದಾಗ ಅದು ತನ್ನದೇ ಆದ ಧ್ವನಿಯನ್ನು ವ್ಯಕ್ತಪಡಿಸುತ್ತದೆ. ಅವುಗಳು ತಮ್ಮ ಸಾಮಾಜಿಕ ಸಂಪರ್ಕಗಳಿಗಾಗಿ ಏಕಪ್ರಕಾರದ ಕೀರಲುಧ್ವನಿಗಳನ್ನು ಮತ್ತು ಕೆಲವೊಮ್ಮೆ ಹಾರಾಡುತ್ತಿರುವ ಸಂದರ್ಭದಲ್ಲಿ ಗಡುಸಾಗಿ ಕೂಗುವುದಕ್ಕಾಗಿ .[೪] ಬಳಸುತ್ತವೆ. ಮಿಸ್ಸೋರಿಯಲ್ಲಿ ನಡೆಸಿದ ಹಕ್ಕಿ ಸಮೂಹದ ಧ್ವನಿಗಳ ತುಲನಾತ್ಮಕ ಅಧ್ಯಯನದಲ್ಲಿ ಜರ್ಮನಿಯಿಂದ ಬಂದ ಹಕ್ಕಿಗಳು ಈ ಅಮೇರಿಕಾದಿಂದ ಬಂದ ಹಕ್ಕಿಗಳ ಸಮೂಹದೊಂದಿಗೆ ಕೇವಲ ಸೀಮಿತ ವಿಧದ ಮೇಮೆಗಳು (ಅನುಕರಣೆ)ಉಚ್ಚಾರಾಂಶಗಳನ್ನು ಹಂಚಿಕೊಂಡಿವೆಯಲ್ಲದೇ ಮತ್ತು ಅವುಗಳು ಯುರೋಪಿಯನ್ ಗುಬ್ಬಚ್ಚಿಗಳಿಗಿಂತ ವ್ಯವಸ್ಥಿತವಾಗಿ ಧ್ವನಿಯನ್ನು ಅನುಕರಿಸುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಉತ್ತರ ಅಮೆರಿಕಾದ ಸಣ್ಣ ಪ್ರಮಾಣದ ಸಮೂಹಗಳಿಂದಾಗಿ ಈ ಪರಿಣಾಮ ಉಂಟಾಗಿದೆಯಲ್ಲದೇ, ತಳಿವೈವಿಧ್ಯತೆಯ. ನಷ್ಟದಿಂದಲೂ ಉಂಟಾದ ಪರಿಣಾಮವೂ ಕೂಡ ಇದಕ್ಕೆ ಕಾರಣವಾಗಿದೆ.[೮]

ಜೀವಿವರ್ಗೀಕರಣಶಾಸ್ತ್ರ[ಬದಲಾಯಿಸಿ]

ಒಂದು ಹಳೇ ಪುಸ್ತಕದ ಹಾಳೆ
ಯುರೇಶಿಯನ್ ಟ್ರೀ ಸ್ಪ್ಯಾರೋದ ಗೂಡಿನ ವಿವರ[೯]

ಜಗತ್ತಿನ ಅತೀ ಪ್ರಾಚೀನ ವರ್ಗದ ಗುಬ್ಬಚ್ಚಿಯೆಂದರೆ ಪ್ಯಾಸರ್ , ಇದು (ಪ್ಯಾಸರೀನ್)ಸಣ್ಣ ಗುಬ್ಬಚ್ಚಿ ಜಾತಿಯ ಹಕ್ಕಿಗಳ ಗುಂಪಾಗಿದ್ದು, ಇವುಗಳ ಮೂಲ ಆಫ್ರಿಕಾ ಎಂದು ನಂಬಲಾಗಿದೆ ಹಾಗೆಯೇ ಅಧಿಕೃತವಾಗಿ ಇವುಗಳಲ್ಲಿ ೧೫–೨೫ ಪ್ರಭೇದ(ಜಾತಿ)ಗಳಿವೆ ಎಂದು ನಂಬಲಾಗಿದೆ.[೧೦] ಈ ಹಕ್ಕಿ ಪ್ರಭೇದದ ಸದಸ್ಯರು ವಿಶೇಷವಾಗಿ , ಮಂದವಾದ ಮರಮಟ್ಟುಗಳು, ವಸತಿ ಪ್ರದೇಶಗಳು ಮಂದವಾಗಿ ಇರುವಂತಹ ಮುಕ್ತ ವಾತಾವರಣದಲ್ಲಿ ಕಂಡುಬರುತ್ತವೆ. ಇನ್ನು ಅನೇಕ ಪ್ರಭೇದಗಳು ಅದರಲ್ಲೂ ವಿಶೇಷವಾಗಿ ಹೌಸ್ ಸ್ಪ್ಯಾರೋ(ಅಂಗಡಿಹಕ್ಕಿ) (ಪಿ ಡೊಮೆಸ್ಟಿಕಸ್ ) ಇದು ಮಾನವ ವಸತಿ ವ್ಯವಸ್ಥೆಗೆ ಹೊಂದಿಕೊಳ್ಳುತ್ತದೆ. ಈ ತಳಿಜಾತಿಯಲ್ಲಿರುವ ಹೆಚ್ಚಿನ ಪ್ರಭೇದಗಳು ವಿಶೇಷವಾಗಿ ೧೦–೨೦ ಸೆಂಟಿಮೀಟರ್(೪–೮ )ನಷ್ಟು ಉದ್ದವಿರುತ್ತದೆಯಲ್ಲದೇ, ಅಧಿಕವಾಗಿ ಇವುಗಳು ಕಂದು ಅಥವಾ ಬೂದುಬಣ್ಣದ ಹಕ್ಕಿಗಳಾಗಿರುವುದಲ್ಲದೇ ಗಿಡ್ಡನೆಯ ಚೌಕಾಕೃತಿಯ ಬಾಲವನ್ನು ಮತ್ತು ದಪ್ಪನೆಯ ಶಂಕುವಿನಾಕಾರದ ಕೊಕ್ಕನ್ನು ಹೊಂದಿರುತ್ತದೆ. ಅವುಗಳು ಮುಖ್ಯವಾಗಿ ನೆಲದಲ್ಲಿ ಬಿದ್ದಿರುವಂತಹ ಕಾಳುಗಳನ್ನು ತಿನ್ನುವಂತಹ ಜಾತಿಯ ಹಕ್ಕಿಗಳಾಗಿವೆಯಲ್ಲದೇ, (ವಂಶಾಭಿವೃದ್ಧಿ)ತಳಿಪೋಷಣೆಯ ಅವಧಿಯಲ್ಲಿ ವಿಶೇಷವಾಗಿ ಇವುಗಳು ಕೆಲವೊಮ್ಮೆ ಹುಳು ಹುಪ್ಪಡಿಗಳನ್ನು ಕೂಡ ತಿನ್ನುತ್ತವೆ.[೧೧] ತಳಿ ಅಧ್ಯಯನವು ಹೌಸ್ ಪೆಗು ಮತ್ತು ಸ್ಪಾನಿಷ್ ಸ್ಪ್ಯಾರೋಗಳ ತಳಿ ರಚನೆಗಿಂತ ಮೊದಲಿನಲ್ಲಿಯೇ ಈ ಯುರೇಶಿಯನ್ ಟ್ರೀ ಸ್ಪ್ಯಾರೋ (ಮರಗುಬ್ಬಚ್ಚಿ) ತಳಿಯು ಆರಂಭದಲ್ಲಿಯೇ ಇತರ ಯುರೇಶಿಯನ್ ತಳಿಯ ಹಕ್ಕಿಗಳ ಸದಸ್ಯರಿಂದ ವಿಭಿನ್ನವಾಗಿರುವುದನ್ನು ತಿಳಿಸುತ್ತದೆ.[೧೨] ಅಮೆರಿಕನ್ ಸ್ಪ್ಯಾರೋ ಈ ಯುರೇಶಿಯನ್ ಪ್ರಭೇದವು ಅಮೆರಿಕನ್ ಟ್ರೀ ಸ್ಪ್ಯಾರೋ (ಮರಗುಬ್ಬಚ್ಚಿಗೆ) (ಸ್ಪಿಝೆಲ್ಲಾ ಅರ್ಬೋರಿಯಾ )ಗೆ ನಿಕಟ ಸಂಬಂಧಿಯಾಗಿಲ್ಲ.[೧೩]

ಯುರೇಶಿಯನ್ ಟ್ರೀ ಸ್ಪ್ಯಾರೋವಿನ ವೈಜ್ಞಾನಿಕ ಹೆಸರು ಎರಡು ಲ್ಯಾಟೀನ್ ಶಬ್ದಗಳಿಂದ ವ್ಯುತ್ಪತ್ತಿಗೊಂಡಿದೆ: ಅವುಗಳೆಂದರೆ, ಪಾಸರ್ , “ಸ್ಪ್ಯಾರೋ” ಮತ್ತು ಮೊಂಟ್ಯಾನಸ್ , “ ಆಫ್ ದಿ ಮೌಂಟೇನ್ಸ್” (ಮಾನ್ಸ್ “ಮೌಂಟೇನ್” ನಿಂದ) [೩] ಯುರೇಶಿಯನ್ ಟ್ರೀ ಸ್ಪ್ಯಾರೋವನ್ನು ಮೊದಲಿಗೆ ಕಾರ್ಲ್ ಲಿನ್ನಾಯಿಸ್ ಅವರು ೧೭೫೮ ರಲ್ಲಿ ಸಿಸ್ಟೆಮಾ ನ್ಯಾಚುರಾ ಎಂಬ ಪುಸ್ತಕದಲ್ಲಿ ಫ್ರಿಂಜಿಲ್ಲಾ ಮೊಂಟಾನಾ ಎಂದು ವಿವರಿಸಿದ್ದರು,[೧೪] ಆದರೆ ಹೌಸ್ ಸ್ಪ್ಯಾರೋದ ಜತೆಗೆ ಅದು ಕೆಲಸಮಯದಲ್ಲಿಯೇ ಫಿಂಚೀಗಳ (ಫ್ಯಾಮಿಲಿ ಫ್ರಿಂಜಿಲ್ಲಿಡಾ) ದಿಂದ ಕಳಚಲ್ಪಟ್ಟು ೧೭೬೦ ರಲ್ಲಿ ಫ್ರೆಂಚ್ ಪ್ರಾಣಿಶಾಸ್ತ್ರಜ್ಞ ಮಾಥುರಿನ್ ಜಾಕ್ಸ್ ಬ್ರಿಸ್ಸನ್ನಿಂದ ಹೊಸದಾಗಿ ರಚನೆಗೊಂಡ ತಳಿಯಾದ ಪ್ಯಾಸರ್ ತಳಿಗೆ ಸೇರಿಸಲ್ಪಟ್ಟಿತು.[೧೫] ಯುರೇಶಿಯನ್ ಟ್ರೀ ಸ್ಪ್ಯಾರೋ ಎಂಬ ಈ ಸಾಮಾನ್ಯ ಹೆಸರು ಬರಲು ಕಾರಣವೆಂದರೆ ಈ ಗುಬ್ಬಚ್ಚಿಯು ಮರದ ಪೊಟರೆಗಳಲ್ಲಿ ಗೂಡು ಕಟ್ಟಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಹೆಸರು ಮತ್ತು ಮೊಂಟಾನಸ್ ವೈಜ್ಞಾನಿಕ ಹೆಸರು ಪ್ರಭೇದದ ವಸತಿಯ ಆದ್ಯತೆಯನ್ನು ಎಲ್ಲಿಯೂ ಕೂಡ ಸೂಕ್ತವಾಗಿ ವಿವರಿಸುವುದಿಲ್ಲ: ಜರ್ಮನ್ ಹೆಸರು ಫೆಲ್ಡ್ಸ್ಪರ್ಲಿಂಗ್ (“ಫೀಲ್ಡ್ ಸ್ಪ್ಯಾರೋ”) ಎಂಬುದು ಮಾತ್ರ ಸೂಕ್ತವಾಗಿ ಅದಕ್ಕೆ ಹೊಂದುತ್ತದೆ[೧೬].

ಉಪಜಾತಿಗಳು[ಬದಲಾಯಿಸಿ]

ಪಿ.ಎಮ್ ಮೊಂಟಾನಸ್ ಮೂಲ ಚಿತ್ರ ತಿರುವು ಮುರುವಾಗಿದೆ

ಈ ಪ್ರಭೇದಗಳು ಹೆಚ್ಚಿನ ವ್ಯಾಪ್ತಿಯಲ್ಲಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಭಿನ್ನವಾಗಿರುವುದು ಮಾತ್ರ ನಮಗೆ ಗೋಚರಿಸುತ್ತದೆ ಹಾಗೆಯೇ ವಿಸ್ತೃತವಾದ ಎಂಟು ಉಪಪ್ರಭೇದಗಳ ನಡುವಿನ ವ್ಯತ್ಯಾಸಗಳು ಕೂಡ ಸ್ವಲ್ಪ ಸೌಮ್ಯ ವಾಗಿ ಗುರುತಿಸಲ್ಪಟ್ಟಿವೆ. ಕನಿಷ್ಠವಾಗಿ ಇತರ ೧೫ ಉಪಪ್ರಭೇದಗಳನ್ನು ಪ್ರಸ್ತಾವಿಸಲಾಗಿದ್ದರೂ ಕೂಡ ಅವುಗಳಲ್ಲಿ ಕೆಲವೊಂದು ಸೀಮಿತ ಪಂಗಡವನ್ನು ಮಾತ್ರ ಮಾಧ್ಯಮಿಕವಾಗಿ ಪರಿಗಣಿಸಲಾಗುತ್ತದೆ.[೫][೧೭]

 • ಪಿ. ಎಮ್. ಮೊಂಟಾನಸ್ , ಇದು ಉಪ ಪ್ರಭೇದವಾಗಿದ್ದು , ನೈಋತ್ಯದ ಐಬಿರಿಯಾ, ದಕ್ಷಿಣ ಗ್ರೀಸ್, ಹಾಗೂ ಮೊದಲಿನ ಯುಗೋಸ್ಲೇವಿಯಾ ಭಾಗಗಳನ್ನು ಹೊರತುಪಡಿಸಿ ಯೂರೋಪ್‌ನುದ್ದಕ್ಕೂ ಇದೆ. ಏಷ್ಯಾದ ಲಿನಾ ನದಿಯ ಪೂರ್ವಕ್ಕೆ ಹಾಗೂ ಟರ್ಕಿಯ ಉತ್ತರ ಪ್ರದೇಶಗಳ ದಕ್ಷಿಣದಲ್ಲಿ, ಕಾಕೇಸಸ್, ಕಝಕಸ್ತಾನ್, ಮಂಗೋಲಿಯಾ ಹಾಗೂ ಕೊರಿಯಾ ಭಾಗಗಳಲ್ಲಿ ಕೂಡಾ ಇದರ ತಳಿ ಇದೆ.
 • ೧೯೦೬ ರಲ್ಲಿ ಸೆರ್ಗೀ ಅಲೆಕ್ಸಾಂಡ್ರೋವಿಚ್ ಬಟರ್ಲಿನ್ ಅವರು ವಿವರಿಸುವ ಹಾಗೆ ಪಿ. ಎಮ್. ಟ್ರಾನ್ಸ್‌ಕಾಕೇಸಿಯಸ್ ತಳಿಯು ದಕ್ಷಿಣದ ಕಾಕೇಸಸ್‌ನಿಂದ ಉತ್ತರ ಇರಾನ್ವರೆಗೆ ಇದೆ. ಇದು ನಾಮಿನೇಟ್ ರೇಸ್‌ಗಿಂತ ಮಂಕಾದ ಹಾಗೂ ಬೂದು ಬಣ್ಣದ್ದಾಗಿದೆ.[೫]
 • ೧೮೫೬ ರಲ್ಲಿ ಚಾರ್ಲ್ಸ್ ವ್ಯಾಲೇಸ್ ರಿಚ್ಮಂಡ್ ಅವರು ವಿವರಿಸಿರುವ ಹಾಗೆ ಪಿ. ಎಮ್. ಡಿಲುಟಸ್ ತಳಿಯು ಇರಾನ್‌ನ ಈಶಾನ್ಯ ಭಾಗದಲ್ಲಿ, ಉತ್ತರ ಪಾಕೀಸ್ತಾನ ಹಾಗೂ ಭಾರತದ ವಾಯುವ್ಯಭಾಗದಲ್ಲಿ ಕಂಡುಬರುತ್ತದೆ. ಉಝ್ಬೆಕಿಸ್ತಾನ್ನ ಉತ್ತರಕ್ಕೆ ಹಾಗೂ ತಜಿಕಿಸ್ತಾನ್ ಹಾಗೂ ಚೈನಾದ ಪೂರ್ವ ಭಾಗಗಳಲ್ಲಿಯೂ ಇದರ ಸಂತತಿ ಇದೆ. ಪಿ. ಎಮ್. ಮೊಂಟಾನಸ್ ಗೆ ಹೋಲಿಸಿದರೆ, ಇದು ಮಂಕಾದ ಬಣ್ಣ ಹೊಂದಿದ್ದು ಮರಳು ಕಂದು ಬಣ್ಣವನ್ನು ತನ್ನ ಮೇಲ್ಭಾಗದಲ್ಲಿ ಹೊಂದಿದೆ.[೫]
 • ಪಿ. ಎಮ್. ಟಿಬೆಟೇನಸ್ , ಇದು ಗಾತ್ರದಲ್ಲಿ ದೊಡ್ಡದಾಗಿದ್ದು, ೧೯೨೫ ರಲ್ಲಿ ಸ್ಟುವರ್ಟ್ ಬೇಕರ್ ಅವರಿಂದ ವಿವರಿಸಲಾಗಿದೆ. ಇದು ಉತ್ತರ ಹಿಮಾಲಯಗಳಾದ, ನೇಪಾಳದ ಪೂರ್ವದಿಂದ ಟಿಬೆಟ್ ಮೂಲಕ ಚೈನಾದ ವಾಯುವ್ಯ ಭಾಗಗಳಲ್ಲಿ ಕಂಡುಬರುತ್ತದೆ. ಇದು ಪಿ. ಎಮ್. ಡೈಲ್ಯುಟಸ್ ತಳಿಯನ್ನು ಹೋಲುತ್ತದೆ, ಆದರೆ ಇದು ಗಾಢವಾದ ಬಣ್ಣವನ್ನು ಹೊಂದಿದೆ.[೫]
 • ಪಿ. ಎಮ್. ಸ್ಯಾಚುರೇಟಸ್ ತಳಿಯು ೧೮೮೫ ರಲ್ಲಿ ಲಿಯೊನಾರ್ಡ್ ಹೆಸ್ ಸ್ಟೆಜ್ನೆಗರ್ ಅವರಿಂದ ವಿವರಿಸಲ್ಪಟ್ಟಿದೆ, ಇದು ಸಖಲಿನ್, ಕುರಿಲ್ ದ್ವೀಪಗಳು, ಜಪಾನ್, ತೈವಾನ್ ಹಾಗೂ ದಕ್ಷಿಣ ಕೊರಿಯಾದ ಭಾಗಗಳಲ್ಲಿ ಕಂಡುಬರುತ್ತದೆ. ಉಪ ತಳಿಗಳಿಗಿಂದ ಗಾಢ ಕಂದು ಬಣ್ಣವನ್ನು ಹೊಂದಿದ್ದು ದೊಡ್ಡ ಗಾತ್ರದ ಕೊಕ್ಕನ್ನು ಹೊಂದಿರುತ್ತದೆ.[೫]
 • ಪಿ. ಎಮ್. ಮಲೇಸ್ಸೆನ್ಸಿಸ್ ತಳಿಯನ್ನು ೧೮೮೫ ರಲ್ಲಿ ಅಲ್ಫೋನ್ಸ್ ದುಬೋಯ್ಸ್ ಅವರು ವಿವರಿಸಿದ್ದಾರೆ, ಇದು ದಕ್ಷಿಣ ಹಿಮಾಲಯಗಳ ಪೂರ್ವಭಾಗದಿಂದ ಹೇನನ್ ಹಾಗೂ ಇಂಡೊನೇಶಿಯಾದ ವರೆಗೆ ಕಂಡುಬರುತ್ತದೆ. ಇದು ಕೂಡಾ ಪಿ. ಎಮ್. ಸ್ಯಾಚುರೇಟಸ್ ನಂತೆ ಗಾಢ ಬಣ್ಣ ಹೊಂದಿದೆ, ಆದರೆ ಇದು ಚಿಕ್ಕದಾಗಿದ್ದು ಮೇಲ್ಭಾಗದಲ್ಲಿ ಪಟ್ಟೆಗಳನ್ನು ಹೊಂದಿದೆ.[೫]
 • ಪಿ. ಎಮ್. ಹೆಪೇಟಿಕಸ್ , ೧೯೪೮ ರಲ್ಲಿ ಸಿಡ್ನೀ ದಿಲ್ಲನ್ ರಿಪ್ಲೇಯವರಿಂದ ವಿವರಿಸಲ್ಪಟ್ಟಿದೆ, ಇದು ಅಸ್ಸಾಂನ ಈಶಾನ್ಯ ಭಾಗ ಹಾಗೂ ಬರ್ಮಾದ ವಾಯುವ್ಯ ಭಾಗಗಳಲ್ಲಿ ಕಂಡು ಬರುತ್ತದೆ. ಇದು ಪಿ. ಎಮ್. ಸ್ಯಾಚುರೇಟಸ್ ತಳಿಯನ್ನು ಹೋಲುತ್ತದೆ, ಇದು ತಲೆಯ ಮೇಲೆ ಹಾಗೂ ಮೇಲ್ಭಾಗದಲ್ಲಿ ಕೆಂಪು ಬಣ್ಣ ಹೊಂದಿದೆ.[೫]

ಹರಡುವಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಮರದ ಕೊಂಬೆಗಳನ್ನು ಹಕ್ಕಿಗಳು ಕುಳಿತುಕೊಳ್ಳಲು ಹಾಕುವ ಅಡ್ಡಕಂಬಿಗಳಾಗಿ ಬಳಸಲಾಗುತ್ತದೆ

ಯುರೇಶಿಯನ್ ಟ್ರೀ ಸ್ಪ್ಯಾರೋವಿನ ನೈಸರ್ಗಿಕ ತಳಿ ಪೋಷಣಾ ವ್ಯಾಪ್ತಿಯು ಹೆಚ್ಚಾಗಿ ಸಮಶೀತೋಷ್ಣವಲಯ ಪ್ರದೇಶವಾದ ಯುರೋಪ್ ಮತ್ತು ೬೮°N ಉತ್ತರ ಅಕ್ಷಾಂಶ ರೇಖೆಯಲ್ಲಿರುವ ದಕ್ಷಿಣ ಏಷ್ಯಾ ವನ್ನು ಒಳಗೊಂಡಿರುತ್ತದೆ. (ಬೇಸಿಗೆಯಲ್ಲಿ ಉತ್ತರದ ಈ ಭಾಗವು ತುಂಬಾ ಚಳಿಯಿಂದ ಕೂಡಿರುತ್ತದೆಯಲ್ಲದೇ, ಜುಲೈ ತಿಂಗಳಿನಲ್ಲಿ ಇಲ್ಲಿನ ಸರಾಸರಿ ತಾಪಮಾನ ೧೨°C ಗಿಂತ ಕಡಿಮೆಯಿರುತ್ತದೆ) ಮತ್ತು ದಕ್ಷಿಣ ಏಷ್ಯಾದಿಂದ ಜಾವಾ ಮತ್ತು ಬಾಲಿಯವರೆಗೂ ಇವುಗಳು ವ್ಯಾಪಿಸುತ್ತವೆ.

ಹಿಂದಿನ ಕಾಲದಲ್ಲಿ ಇವುಗಳು ಫಾರೋಸ್, ಮಾಲ್ಟಾ ಮತ್ತು ಗೋಝೋದಲ್ಲಿ ತಳಿವೃದ್ಧಿಯನ್ನು ಮಾಡುತ್ತಿದ್ದವು[೪][೫]. ದಕ್ಷಿಣ ಏಷ್ಯಾದಲ್ಲಿ ಇದು ಮುಖ್ಯವಾಗಿ ಸಮಶೀತೋಷ್ಣವಲಯದಲ್ಲಿ ಕಂಡುಬರುತ್ತದೆ.[೧೮][೧೯] ಇದು ತನ್ನ ತಳಿವೃದ್ಧಿಯ ಅವಧಿಯಲ್ಲಿ ಇದು ಹೆಚ್ಚಿನ ಅವಧಿಯಲ್ಲಿ ಗೂಡಿನಲ್ಲಿ ಕುಳಿತೇ ಇರುತ್ತದೆ. ಆದರೆ ಉತ್ತರದ ತುತ್ತತುದಿಯಲ್ಲಿ ಜೀವಿಸುವ ಈ ತಳಿಜಾತಿಗಳು ಚಳಿಗಾಲದಲ್ಲಿ ದಕ್ಷಿಣದ ಕಡೆಗೆ ವಲಸೆ ಬರುತ್ತವೆ,[೨೦] ಮತ್ತು ಕೆಲವೇ ಪ್ರಮಾಣದ ತಳಿಜಾತಿಗಳು ಯುರೋಪಿನ ದಕ್ಷಿಣ ಭಾಗದಿಂದ ಉತ್ತರ ಆಫ್ರಿಕಾ ಮತ್ತು ಮಧ್ಯ ಪೂರ್ವ ದೇಶಗಳಿಗೆ ವಲಸೆಹೋಗುತ್ತವೆ.[೪]

ಪೂರ್ವ ಭಾಗದ ಉಪಪ್ರಭೇದಗಳಾದ ಪಿ ಎಮ್ ಡಿಲುಟಸ್ ಜಾತಿಯ ಹಕ್ಕಿಗಳು ಚಳಿಗಾಲದಲ್ಲಿ ಪಾಕಿಸ್ತಾನದ ಕರಾವಳಿ ಪ್ರದೇಶಕ್ಕೆ ಬಂದರೆ, ಈ ಗುಂಪಿನ ಸಾವಿರಾರು ಹಕ್ಕಿಗಳು ಶರಧೃತುವಿನಲ್ಲಿ ಚೀನಾದ ಪೂರ್ವ ಭಾಗಕ್ಕೆ ಸಂಚರಿಸುತ್ತವೆ.[೫]

ಯುರೇಶಿಯನ್ ಟ್ರೀ ಸ್ಪ್ಯಾರೋ ವು ತನ್ನ ಜನ್ಮಜಾತ ಪ್ರದೇಶಕ್ಕಿಂತ ಹೊರಭಾಗದಲ್ಲಿ ಪರಿಚಯಿಸಲ್ಪಟ್ಟರೂ ಕೂಡ ಹೌಸ್ ಸ್ಪ್ಯಾರೋ(ಅಂಗಡಿ ಹಕ್ಕಿ) ನೊಂದಿಗೆ ಸಂಭವನೀಯ ಸ್ಪರ್ಧೆಯನ್ನು ನೀಡುವ ಮೂಲಕ, ಅದು ಯಾವಾಗಲೂ ಒಂದು ಸ್ಥಿರ ಸ್ಥಾನವನ್ನು ಹೊಂದಿದೆ. ಇದನ್ನು ಪೂರ್ವ ಇಂಡೋನೇಶಿಯಾದ ಸಾರ್ಡೀನಿಯಾ ಪಿಲಿಪ್ಪೈನ್ಸ್ ಮತ್ತುಮೈಕ್ರೋನೇಶಿಯಾದಲ್ಲಿ ಯಶಸ್ವೀಯಾಗಿ ಪರಿಚಯಿಸಲ್ಪಟ್ಟಿದೆಯಾದರೂ, ನ್ಯೂಜಿಲ್ಯಾಂಡ್ ಮತ್ತು ಬರ್ಮುಡಾದಲ್ಲಿ ಇದನ್ನು ಪರಿಚಯಿಸಿರುವುದರಿಂದ ಅದು ಅಷ್ಟೊಂದು ಮಹತ್ವದ ನೆಲೆಯನ್ನು ಕಂಡುಕೊಂಡಿಲ್ಲ. ಹಡಗಿನ ಮೂಲಕ ವಲಸೆ ಬಂದ ಹಕ್ಕಿಗಳು ಬೋರ್ನಿಯೋದಲ್ಲಿ ತಮ್ಮ ವಾಸದ ನೆಲೆಯನ್ನು ಹೂಡಿದವು. ಈ ಗುಬ್ಬಚ್ಚಿಯು ವಾಗ್ರಂಟ್ನಿಂದ ಜೀಬ್ರಾಲ್ಟರ್, ತುನಿಶಿಯಾ, ಅಲ್ಜೀರಿಯಾ, ಈಜಿಪ್ಟ್ ಇಸ್ರೇಲ್ ಹಾಗೂ ದುಬೈ ಪ್ರದೇಶಗಳಲ್ಲಿ ಕಂಡುಬರುತ್ತದೆ.[೫]

ಉತ್ತರ ಅಮೆರಿಕಾದಲ್ಲಿ ಸುಮಾರು ೧೫,೦೦೦ ಸಂಖ್ಯೆಯಷ್ಟು ಹಕ್ಕಿಗಳು, ಸೈಂಟ್ ಲೂಯಿಸ್ ದ್ವೀಪದ ಸುತ್ತಮುತ್ತಲಿನ ಪ್ರದೇಶವಾದ ಇಲ್ಲಿನೋಯಿಸ್ ಮತ್ತು ಐವಾದ ಆಗ್ನೇಯ ಭಾಗದ ಅಕ್ಕಪಕ್ಕದ ಸ್ಥಳಗಳಲ್ಲಿ ತಮ್ಮ ವಾಸದ ನೆಲೆಯನ್ನು ಸ್ಥಾಪಿಸಿದವು.[೨೧] ಈ ಗುಬ್ಬಚ್ಚಿಗಳು ಜರ್ಮನಿಯಿಂದ ಆಮದುಮಾಡಿಕೊಂಡ ಒಟ್ಟು ೧೨ ಜಾತಿಯ ತಳಿಗಳಿಂದ ವಂಶೋತ್ಪತ್ತಿಗೊಂಡು ಸ್ಥಳೀಯ ಉತ್ತರ ಅಮೆರಿಕಾದ ನಿರ್ದಿಷ್ಟ ಪ್ರದೇಶವೊಂದರಲ್ಲಿ ಒಂದು ಯೋಜನೆಯನ್ನು ವಿಸ್ತರಿಸುವ ಸಲುವಾಗಿ, ೧೮೭೦ ರ ಅಂತ್ಯದ ಏಪ್ರಿಲ್ ತಿಂಗಳಿನಲ್ಲಿ ಇವುಗಳ ತಳಿಗಳನ್ನು ಪ್ರಕಟಿಸಲಾಯಿತು. ಯುನೈಟೆಡ್ ಸ್ಟೇಟ್ಸ್ನ ಸೀಮಿತ ವ್ಯಾಪ್ತಿಯೊಳಗೆ ನಗರ ಪ್ರದೇಶದಲ್ಲಿ ಯುರೇಶಿಯನ್ ಟ್ರೀ ಸ್ಪ್ಯಾರೋವು ಹೌಸ್ ಸ್ಪ್ಯಾರೋ (ಅಂಗಡಿ ಹಕ್ಕಿ/ಮನೆ ಗುಬ್ಬಚ್ಚಿಯೊಂದಿಗೆ ಸ್ಪರ್ಧೆಯನ್ನು ನೀಡಬೇಕಾಗುತ್ತದೆಯಲ್ಲದೇ, ಹಾಗಾಗಿ ಅವುಗಳನ್ನು ನಾವು ಮುಖ್ಯವಾಗಿ ಉದ್ಯಾನವನಗಳಲ್ಲಿ, ಹೊಲಗದ್ದೆಗಳಲ್ಲಿ ಮತ್ತು ಗ್ರಾಮೀಣ ಕಾಡುಗಳಲ್ಲಿ ವಾಸಿಸುತ್ತವೆ.[೮][೨೨] ಅಮೆರಿಕಾದಲ್ಲಿರುವ ಸ್ವದೇಶಿ ಅಮೆರಿಕನ್ ಟ್ರೀ ಸ್ಪ್ಯಾರೋ ಪ್ರಭೇದ ಮತ್ತು ಹೆಚ್ಚು ಪ್ರಚಲಿತವಾಗಿರುವ “ಇಂಗ್ಲೀಷ್” ಹೌಸ್ ಸ್ಪ್ಯಾರೋವಿನಿಂದ ಇವುಗಳನ್ನು ಪ್ರತ್ಯೇಕಿಸುವ ಸಲುವಾಗಿ ಗುಬ್ಬಚ್ಚಿಗಳ ಈ ಸಮೂಹವನ್ನು ಕೆಲವೊಮ್ಮೆ “ಜರ್ಮನ್ ಗುಬ್ಬಚ್ಚಿ” ಎಂದು ಕರೆಯಲಾಗುತ್ತದೆ.[೨೩]

ಜಪಾನ್‌ನ ಮರದ ಮನೆಯ ಮೇಲ್ಛಾವಣಿಯ ಕೆಳಗಿರುವ ನಗರ ಪ್ರದೇಶದ ಗೂಡು

ಆಸ್ಟ್ರೇಲಿಯಾದಲ್ಲಿ ಈ ಯುರೇಶಿಯನ್ ಟ್ರೀ ಸ್ಪ್ಯಾರೋವು ಈಗ ಪ್ರಸ್ತುತ ಮೆಲ್ಬೋರ್ನ್ ನಗರಗಳಲ್ಲಿರುವುದಲ್ಲದೇ, ಉತ್ತರ ಮತ್ತು ಮಧ್ಯ ವಿಕ್ಟೋರಿಯಾ ದ ಪ್ರದೇಶಗಳಲ್ಲಿ ಮತ್ತು ನ್ಯೂ ಸೌತ್ ವೇಲ್ಸ್ನ ರಿವರೈನಾ ಪ್ರಾಂತದ ಪ್ರದೇಶಗಳಲ್ಲಿಯೂ ಈ ಜಾತಿಯ ಗುಬ್ಬಚ್ಚಿಗಳನ್ನು ಕಾಣಬಹುದಾಗಿದೆ. ಈ ಜಾತಿಯ ಪ್ರಭೇದಗಳನ್ನು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ನಿರ್ಬಂಧಿಸಲಾಗಿದ್ದು ಇವುಗಳು ಆಗಾಗ ಆಗ್ನೇಯ ಏಷಿಯಾದಿಂದ ಹಡಗುಗಳ ಮೂಲಕ ಆಸ್ಟ್ರೇಲಿಯಾಕ್ಕೆ ಆಗಮಿಸುತ್ತವೆ.[೨೪]

ಪ್ಯಾಸರ್ ಮೊಂಟಾನಸ್ ಎಂಬ ತನ್ನ ವೈಜ್ಞಾನಿಕ ಹೆಸರಿನ ಹೊರತಾಗಿ, ವಿಶೇಷವಾಗಿ ಇದು ಪರ್ವತ ಪ್ರದೇಶದ ಪ್ರಭೇದವಾಗಿಲ್ಲ ಮತ್ತು ಸ್ವಿಟ್ಜರ್ಲ್ಯಾಂಡ್ನಲ್ಲಿದ್ದು ಇದು ಕೇವಲ ೭೦೦ ಮೀಟರ್ಗಳಷ್ಟು ಎತ್ತರಕ್ಕೆ ಹಾರಬಲ್ಲುದಲ್ಲದೇ, ಇದು ತನ್ನ ತಳಿಪೋಷಣೆಯನ್ನು ೧,೭೦೦ ಮೀಟರ್ ಎತ್ತರದ (೫,೬೦೦ ಅಡಿ) ಉತ್ತರದ ಕ್ಯಾಕಸಸ್ ಮಾಡುವುದಲ್ಲದೇ, ಅದಕ್ಕಿಂತಲೂ ೪,೨೭೦( ೧೪,೦೦೦ ಅಡಿ) ಎತ್ತರದಲ್ಲಿರುವ ನೇಪಾಳದಲ್ಲಿನ ಪರ್ವತದಲ್ಲಿಯೂ ತಳಿಪೋಷಣೆಯನ್ನು ಮಾಡುತ್ತದೆ.[೪][೫]

ಯುರೋಪಿನಲ್ಲಿ ಇದು ಆಗಾಗ ಕರಾವಳಿಯ ಕಡಿದಾದ ಭಾಗದಲ್ಲಿ, ಖಾಲಿ ಕಟ್ಟಡಗಳಲ್ಲಿ ಮತ್ತು ಹೆಚ್ಚಾಗಿ ನಿಧಾನವಾಗಿ ನೀರು ಹರಿದು ಹೋಗುವ ಜಾಗದಲ್ಲಿ ಕಂಡುಬರುವ ಮೋಟು ಮರಗಳಿರುವಲ್ಲಿ ಕೂಡ ಕಂಡುಬರುತ್ತದೆ ಅಥವಾ ಅಲ್ಲಲ್ಲಿ ಒಟ್ಟಾಗಿ ಕೇಂದ್ರೀಕೃತಗೊಂಡಿರುವ ಮುಕ್ತ ಅರಣ್ಯಪ್ರದೇಶಗಳಲ್ಲಿಯೂ ಕೂಡ ಕಂಡು ಬರುತ್ತದೆ.[೪] ಯುರೇಶಿಯನ್ ಟ್ರೀ ಸ್ಪ್ಯಾರೋ (ಮರಗುಬ್ಬಚ್ಚಿಗಳು) ಹೆಚ್ಚಾಗಿ ಆರ್ದ್ರತೆ ಇರುವ ವಸತಿ ಪ್ರದೇಶದಲ್ಲಿ ಗೂಡುಕಟ್ಟಲು ಆದ್ಯತೆಯನ್ನು ನೀಡುತ್ತವೆಯಲ್ಲದೇ, ಮಿಶ್ರ ಸಾಂದ್ರತೆಯಿರುವ ಕೃಷಿ ಪ್ರದೇಶದಲ್ಲಿ ತಳಿವೃದ್ಧಿ ನಡೆಸುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತದೆ.[೨೫]

ಒಂದೊಮ್ಮೆ ಯುರೇಶಿಯನ್ ಟ್ರೀ ಸ್ಪ್ಯಾರೋ ಮತ್ತು ದೊಡ್ಡದಾದ ಹೌಸ್ ಸ್ಪ್ಯಾರೋ ಒಂದೇ ಕಡೆಯಲ್ಲಿ ಕಂಡುಬಂದಲ್ಲಿ, ಹೌಸ್ ಸ್ಪ್ಯಾರೋಗಳು ಸಾಮಾನ್ಯವಾಗಿ ನಗರಪ್ರದೇಶಗಳಲ್ಲಿ ತಮ್ಮ (ಸಂತಾನೋತ್ಪತ್ತಿ)ಸಂತಾನಾಭಿವೃದ್ಧಿಯನ್ನು ಮಾಡಿದರೆ, ಸಣ್ಣದಾಗಿರುವ ಯುರೇಶಿಯನ್ ಟ್ರೀ ಸ್ಪ್ಯಾರೋಗಳು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಗೂಡುಗಳನ್ನು ಕಟ್ಟುತ್ತವೆ.[೫] ಮಂಗೋಲಿಯಾದಂತೆ ಮರಗಳು ಕಡಿಮೆ ಪ್ರಮಾಣದಲ್ಲಿರುವಲ್ಲಿ ಈ ಎರಡೂ ಪ್ರಭೇದಗಳೂ ಕೂಡ ಮಾನವ ನಿರ್ಮಿತ ರಚನಾತ್ಮಕ ವಸ್ತುಗಳಲ್ಲಿ ಗೂಡುಗಳನ್ನು ನಿರ್ಮಿಸುತ್ತವೆ.[೨೬] ಯುರೋಪಿನಲ್ಲಿ ಈ ಯುರೇಶಿಯನ್ ಟ್ರೀ ಸ್ಪ್ಯಾರೋವು ಗ್ರಾಮೀಣ ಭಾಗದ ಗುಬ್ಬಚ್ಚಿಯಾದರೆ, ಪೂರ್ವ ಏಷಿಯಾದಲ್ಲಿ ಇದು ನಗರ ಪ್ರದೇಶದ ಗುಬ್ಬಚ್ಚಿಯಾಗಿರುತ್ತದೆ: ದಕ್ಷಿಣ ಏಷಿಯಾ ಮತ್ತು ಮಧ್ಯ ಏಷಿಯಾದಲ್ಲಿ ಈ ಪ್ಯಾಸರ್ ಪ್ರಭೇದಗಳು ನಗರಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಕೂಡ ಕಂಡುಬರುತ್ತವೆ.[೫] ಇಟಲಿಯಂತಹ ಮೆಡಿಟರೇನಿಯನ್ ಭಾಗದ ಪ್ರದೇಶದಲ್ಲಿ ಈ ಎರಡು ಪ್ರಭೇದಗಳಾದ ಟ್ರೀ ಸ್ಪ್ಯಾರೋ ಮತ್ತು ಇಟಾಲಿಯನ್ ಅಥವಾ ಸ್ಪಾನಿಶ್ ಗುಬ್ಬಚ್ಚಿಗಳು ವಾಸ್ತವ್ಯದ ನೆಲೆಗಟ್ಟುಗಳಲ್ಲಿ ಕಂಡುಬರುತ್ತವೆ.[೨೭] ಆಸ್ಟ್ರೇಲಿಯಾದಲ್ಲಿ ಯುರೇಶಿಯನ್ ಟ್ರೀ ಸ್ಪ್ಯಾರೋ ಹೆಚ್ಚಾಗಿ ನಗರ ಪ್ರದೇಶದ ಗುಬ್ಬಚ್ಚಿಯಾಗಿ ಕಂಡುಕೊಂಡರೆ, ಈ ಹೌಸ್ ಸ್ಪ್ಯಾರೋವು ಹೆಚ್ಚಾಗಿ ನೈಸರ್ಗಿಕ ವಾಸಯೋಗ್ಯ ಸ್ಥಳಗಳನ್ನು ಆಶ್ರಯಿಸುತ್ತದೆ.[೨೪]

ನಡಾವಳಿ ಮತ್ತು ಪರಿಸರವಿಜ್ಞಾನ[ಬದಲಾಯಿಸಿ]

ಸಂತಾನವೃದ್ಧಿ[ಬದಲಾಯಿಸಿ]

ಗೂಡಿನ ಮರಿ
Passer montanus

ಯುರೇಶಿಯನ್ ಟ್ರೀ ಸ್ಪ್ಯಾರೋವು ಮೊಟ್ಟೆಯೊಡೆದು,[೨೮] ಒಂದು ವರ್ಷದೊಳಗಾಗಿ ವಂಶಾಭಿವೃದ್ಧಿಗಾಗಿ ಪ್ರಬುದ್ಧಗೊಳ್ಳುತ್ತದೆಯಲ್ಲದೇ, ಇದು ವಿಶಿಷ್ಠವಾಗಿ ತನ್ನ ಗೂಡುಗಳನ್ನು ಹಳೆಯ ಮರದ ಪೊಟರೆಗಳಲ್ಲಿ ಅಥವಾ ಬಂಡೆಗಲ್ಲುಗಳ ಸಂದು (ಗುಹೆ)ಗಳಲ್ಲಿ ನಿರ್ಮಿಸುತ್ತದೆ. ಕೆಲವು ಗೂಡುಗಳು (ಆಳವಾದ)ರಂಧ್ರಗಳಂತಹ ಸ್ಥಳದಲ್ಲಿರುವುದಿಲ್ಲ, ಆದರೆ, ಅವುಗಳು ಮೇಲೆ ತೂಗಾಡುತ್ತಿರುವಂತಹ ಗೋರ್ಸ್/ಬೇರುಗಳ ಮುಳ್ಳುಕಂಟಿಗಳಲ್ಲಿ ಅಥವಾ ಅಂತಹುದೇ ಪೊದೆಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ.[೨೯] ಕೆಲವೊಮ್ಮೆ ಚಾವಣಿಗಳ ಟೊಳ್ಳಾದ ಸಂದುಗಳನ್ನು ಕೂಡ ಗೂಡು ಕಟ್ಟಲು ಈ ಗುಬ್ಬಚ್ಚಿಗಳು ಬಳಸುತ್ತವೆ[೨೯]. ಹಾಗೆಯೇ ಅತೀ ಉಷ್ಣವಲಯದ ಪ್ರದೇಶದಲ್ಲಿ ತಾಳೆಮರದ ತುದಿಯಲ್ಲಿ ಅಥವಾ ಮೊಗಸಾಲೆಯ ಛಾವಣಿಯನ್ನು ಕೂಡ ಗೂಡು ಕಟ್ಟುವ ಸ್ಥಳವನ್ನಾಗಿ ಕೂಡ ಆಯ್ಕೆ ಮಾಡಿಕೊಳ್ಳುತ್ತದೆ.[೩೦] ಈ ಗುಬ್ಬಚ್ಚಿ ಪ್ರಭೇದಗಳು ಮ್ಯಾಗ್ಪೈ /ಮಡಿವಾಳ ಹಕ್ಕಿಯು ಬಳಸದೇ ಇರುವ ಗುಮ್ಮಟದಂತಹ ಗೂಡುಗಳಲ್ಲಿ [೨೯] ತನ್ನ ಸಂತಾನಾಭಿವೃದ್ಧಿಯನ್ನು ಮಾಡುತ್ತದೆ. ಇಲ್ಲವೇ ಕೆಲವೊಮ್ಮೆ ಈ ಗುಬ್ಬಚ್ಚಿಗಳು ಬಿಳಿಕೊಕ್ಕರೆ,[೩೧] ಬಿಳಿ ಬಾಲವಿರುವ ಹದ್ದು, ಆಸ್ಪ್ರೇ , ಕಪ್ಪು ಬಣ್ಣದ ಗಿಡುಗ ಅಥವಾ ಬೂದು ಬಣ್ಣದ ಕೊಕ್ಕರೆಯಂತಹ ದೊಡ್ಡ ಹಕ್ಕಿಗಳ ಒಳ್ಳೆಯ ಗೂಡುಗಳು ಅಥವಾ ಬಳಸದೇ ಇರುವಂತಹ ಗೂಡುಗಳಲ್ಲಿ ಮೊಟ್ಟೆಯನ್ನು ಇಡುವ ಮೂಲಕ ಸಂತಾನಾಭಿವೃದ್ಧಿಯನ್ನು ಮಾಡುತ್ತದೆ.

ಅದು ಕೆಲವೊಮ್ಮೆ ಬಾರ್ನ್ ಸ್ವಾಲೋ/ಕಣಜ ಹಕ್ಕಿ, ಹೌಸ್ ಮಾರ್ಟಿನ್, ಸ್ಯಾಂಡ್ ಮಾರ್ಟಿನ್ ಹಕ್ಕಿ ಅಥವಾ ಯುರೋಪಿಯನ್ ಬೀ ಈಟರ್ ಹಕ್ಕಿಗಳಂತಹ ಇತರ ಹಕ್ಕಿಗಳು ತಮ್ಮ ಸಂತಾನಾಭಿವೃದ್ಧಿಗಾಗಿ ನಿರ್ಮಿಸಿದ ಬಿಲ ಅಥವಾ ಮುಚ್ಚಿದ ಆವರಣಗಳಂತಹ ಗೂಡುಗಳಲ್ಲಿ ಕೂಡ ಸಂತಾನಾಭಿವೃದ್ಧಿಯನ್ನು ನಡೆಸಲು ಪ್ರಯತ್ನಿಸುತ್ತದೆ. .[೩೨]

ಜೋಡಿಹಕ್ಕಿಗಳು ಸಂತಾನಾಭಿವೃದ್ಧಿಗಾಗಿರುವ ಪ್ರತ್ಯೇಕ ಸ್ಥಳದಲ್ಲಿ ಮಾಡಬಹುದು ಅಥವಾ ಕೆಲವೊಮ್ಮೆ [೩೩] ವಾಸಯೋಗ್ಯ ಸ್ಥಳಗಳಲ್ಲಿಯೂ ಪೆಟ್ಟಿಗೆಯಂತಹ ಗೂಡುಗಳನ್ನು ನಿರ್ಮಿಸಿ ಸಂತಾನಾಭಿವೃದ್ಧಿಯನ್ನು ಮಾಡಬಹುದು. ಸ್ಪಾನಿಷ್ ಅಧ್ಯಯನದ ಪ್ರಕಾರ, ಮರ ಮತ್ತು ಕಾಂಕ್ರೀಟ್(ವುಡ್ಕ್ರೀಟ್) ಗಳಿಂದ ನಿರ್ಮಿಸಲ್ಪಟ್ಟ ಈ ಗೂಡು ಪೆಟ್ಟಿಗೆಗಳು ಮರದ ಗೂಡುಪೆಟ್ಟಿಗೆಗಳಿಗಿಂತ ಹೆಚ್ಚು ಬಳಸಲ್ಪಡುತ್ತಿದ್ದವು, ಅಂದರೆ,ವುಡ್ಕ್ರೀಟ್ಗಳು (೭೬.೫% ಬಳಸಲ್ಪಟ್ಟರೆ ಅದಕ್ಕೆ ಪ್ರತಿಯಾಗಿ ಮರದ ಗೂಡುಪೆಟ್ಟಿಗೆಗಳು ೩೩.೫%)ರಷ್ಟು ಬಳಸಲ್ಪಡುತ್ತಿದ್ದವು. ಹಾಗೆಯೇ ಆರಂಭದಲ್ಲಿ ಹಕ್ಕಿಗಳು, ಈ ವುಡ್ಕ್ರೀಟ್ ಸ್ಥಳಗಳನ್ನು ಮೊಟ್ಟೆ ಇಡಲು ಆಶ್ರಯಿಸಿದರೆ, ಅವುಗಳನ್ನು ಕೆಲವೊಮ್ಮೆ ಕಾವು ನೀಡುವ ಅವಧಿಗಾಗಿ ಕೂಡ ಆಶ್ರಯಿಸುತ್ತಿದ್ದವಲ್ಲದೇ, ಇದಕ್ಕಿಂತ ಹೆಚ್ಚಾಗಿ ಪ್ರತಿ ಋತುಕಾಲದಲ್ಲಿಯೂ ವಂಶಾಭಿವೃದ್ಧಿಯನ್ನು ಮಾಡಲು ಕೂಡ ಈ ಗೂಡುಗಳನ್ನುಬಳಸಿಕೊಳ್ಳುತ್ತಿದ್ದವು. ಮೊಟ್ಟೆ ಗಾತ್ರ ಮತ್ತು ಮರಿಗಳ ಸ್ಥಿತಿಗತಿಗಳು ಗೂಡು ಪೆಟ್ಟಿಗೆಗಳ ವಿಧಗಳ ಮೇಲೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಆದರೆ ವುಡ್ಕ್ರೀಟ್ ಗೂಡಿನಲ್ಲಿ ವಂಶಾಭಿವೃದ್ಧಿ ಹೆಚ್ಚು ಯಶಸ್ವೀಯಾಗುತ್ತದೆ ಯಾಕೆಂದರೆ ಈ ಕೃತಕ ಗೂಡುಗಳು ತಮ್ಮ ಮರದ ಗೂಡುಗಳಿಗಿಂತ ಭಿನ್ನವಾಗಿದ್ದು ಅವುಗಳು ೧.೫ °C ನಷ್ಟು ಬೆಚ್ಚಗಿರುತ್ತವೆ.[೩೪]

ವಸಂತ ಋತುವಿನಲ್ಲಿ ಗಂಡು ಹಕ್ಕಿಗಳು ಗುಬ್ಬಚ್ಚಿಗಳ ಗೂಡಿನ ಹತ್ತಿರ ತನ್ನ ಹೆಣ್ಣು ಗುಬ್ಬಚ್ಚಿ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ಮತ್ತು ತನ್ನ ಒಡೆತನವನ್ನು ಚಲಾಯಿಸುವುದಕ್ಕಾಗಿ ಕೂಗುತ್ತವೆ. ಈ ಗಂಡು ಹಕ್ಕಿ ಕೆಲವೊಮ್ಮೆ ಗೂಡಿಗೆ ಬೇಕಾಗುವ ಸಾಮಾನುಗಳನ್ನು (ಕಸಕಡ್ಡಿಗಳು) ಗೂಡು ಕಟ್ಟುವ ಸ್ಥಳಕ್ಕೆ ಒಯ್ಯುತ್ತದೆ.[೫] ಈ ಗೂಡುಕಟ್ಟುವ ಚಿತ್ರಣಗಳನ್ನು ನಾವು ಶರತ್ಕಾಲದಲ್ಲಿ ಹೆಚ್ಚು ಆವರ್ತಿಸುವುದನ್ನು ನಾವು ಕಾಣಬಹುದು. ಶರತ್ಕಾಲದಲ್ಲಿ ಹೆಚ್ಚಾಗಿ ಆಯಕಟ್ಟಿನ ಸ್ಥಳಗಳಲ್ಲಿ ಈ ಯುರೇಶಿಯನ್ ಟ್ರೀ ಸ್ಪ್ಯಾರೋಗಳ ಹಳೆಯ ಗೂಡುಗಳಿಗೆ ಹಕ್ಕಿಗಳು ಆದ್ಯತೆಯನ್ನು ನೀಡುವುದಲ್ಲದೇ, ವಿಶೇಷವಾಗಿ ಕಾವೊಡೆದ ಮರಿಗಳು ಬೆಚ್ಚಗೆ ಮಲಗುವುದಕ್ಕಾಗಿ ಈ ಗೂಡುಗಳಿಗೆ ಆದ್ಯತೆಯನ್ನು ಅವು ನೀಡುತ್ತವೆ. ಖಾಲಿಯಾದ ಈ ಗೂಡುಪೆಟ್ಟಿಗೆಗಳು ಮತ್ತು ಅಂತಹ ಸ್ಥಳಗಳನ್ನು ಈ ಹೌಸ್ ಸ್ಪ್ಯಾರೋ(ಅಂಗಡಿ/ಮನೆಗುಬ್ಬಚ್ಚಿಗಳು) ಅಥವಾ ಟಿಟ್ಸ್(ಗುಬ್ಬಚ್ಚಿಯ ಇನ್ನೊಂದು ಪ್ರಭೇದ) , ಪೈಡ್ ಫ್ಲೈ ಕ್ಯಾಚರ್ಸ್ ಅಥವಾ ಕಾಮನ್ ರೆಡ್ಸ್ಟಾರ್ಟ್ಗಳಂತಹ ಇತರ ರಂಧ್ರಗಳಲ್ಲಿ ಗೂಡು ಕಟ್ಟುವ ಹಕ್ಕಿಗಳು ಈ ಶರತ್ಕಾಲದಲ್ಲಿ ತುಂಬಾ ಕಡಿಮೆಯಾಗಿ ಕಂಡುಬರುತ್ತವೆ.[೩೫]

ಗೂಡಿನ ಡಬ್ಬ

ಅವ್ಯಸ್ಥಿತವಾದ ಈ ಗೂಡುಗಳನ್ನು ಹುಲ್ಲುಕಡ್ಡಿ, ಒಣಹುಲ್ಲು , ಉಣ್ಣೆ ಅಥವಾ ಗರಿಗಳೊಂದಿಗೆ ಇತರ ಸಾಮಾನುಗಳಿಂದ ನಿರ್ಮಿಸಲ್ಪಡುವುದಲ್ಲದೇ,[೨೯] ಇದು ಉಷ್ಣತೆಯ ಮಟ್ಟವನ್ನು ಹೆಚ್ಚಾಗಿರುವಂತೆ ಮಾಡುತ್ತದೆ.[೩೬] ಸಂಪೂರ್ಣವಾದ ಒಂದು ಗೂಡು ಮೂರು ಪದರಗಳನ್ನು ಹೊಂದಿರುತ್ತದೆ; ಅವೆಂದರೆ, ತಳಪಾಯ, ಒಳಾವರಣ ಮತ್ತು ಕಮಾನಿನಂತಹ ಆಕಾರ[೩೫]. ಈ ವಿಶಿಷ್ಠ ಗೂಡಿನಲ್ಲಿ ಐದು ಅಥವಾ ಆರು ಮೊಟ್ಟೆಗಳನ್ನು ಇಡಬಹುದಾಗಿದ್ದು, (ಮಲೇಶಿಯಾದಲ್ಲಿ ಅಪರೂಪಕ್ಕೆ ನಾಲ್ಕು ಮೊಟ್ಟೆಗಳಿಗಿಂತ ಹೆಚ್ಚು ಇರುತ್ತವೆ) ಈ ಮೊಟ್ಟೆಗಳು [೩೦] ಬಿಳಿ ಬಣ್ಣ ಇಲ್ಲವೇ ಮಸುಕಾದ ಬೂದು ಬಣ್ಣದಿಂದ ಕೂಡಿರುತ್ತವೆ ಹಾಗೂ ಈ ಮೊಟ್ಟೆಗಳಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ಚುಕ್ಕಿಗಳು, ಸಣ್ಣ ಸಣ್ಣ ಬಣ್ಣದ ಮಚ್ಚೆಗಳು ಅಥವಾ ಸಣ್ಣ ಗುರುತುಗಳು ಇರುತ್ತವೆ; ಅವುಗಳ ಗಾತ್ರ ೨೦ x ೧೪ ಮಿಲಿ ಮೀಟರ್ (೦.೮ x ೦.೬ )ಗಳಿದ್ದು ಅವುಗಳ ತೂಕ ೨.೧ ಗ್ರಾಂ(೦.೦೮ oz )ಗಳಿದ್ದು, ಅದರಲ್ಲಿ ೭% ರಷ್ಟು ಚಿಪ್ಪುಗಳನ್ನು ಹೊಂದಿದೆ.[೩] ಕಾವೊಡೆದು ಬರಿಮೈಯ ಮರಿಗಳಾಗಿ ಹೊರಬರುವ ಮೊದಲು ಈ ಮೊಟ್ಟೆಗಳಿಗೆ ಎರಡು ಪೋಷಕ ಹಕ್ಕಿಗಳು ಸುಮಾರು ೧೨–೧೩ ದಿನಗಳವರೆಗೆ ಕಾವುಕೊಡುತ್ತವೆಯಲ್ಲದೇ, ಮುಂದೆ ಅವುಗಳು ಹಾರಿ ಹೋಗುವುದಕ್ಕಿಂತ ಮುಂಚೆ ೧೫–೧೮ ದಿನಗಳ ಕಾಲ ಅವುಗಳ ಲಾಲನೆ ಪಾಲನೆ ಮಾಡುತ್ತಾ ಅವುಗಳೊಂದಿಗೆ ದಿನ ಕಳೆಯುತ್ತದೆ.[೩] ಪ್ರತಿ ವರ್ಷವೂ ಕೂಡ ಎರಡು ಅಥವಾ ಮೂರು ಹಕ್ಕಿ ಮರಿಗಳ ಗುಂಪುಗಳ ರಚನೆಯಾಗುತ್ತದೆ. ಪ್ರತ್ಯೇಕವಾದ ಜೋಡಿ ಹಕ್ಕಿಗಳು ಇಡುವ ಮೊಟ್ಟೆಗಳಿಗಿಂತ ಕಾಲೋನಿ(ವಾಸ್ತವ್ಯವಿರುವ ಪ್ರದೇಶದಲ್ಲಿ ನಿರ್ಮಿಸಿದ ಗೂಡು)ಗಳಲ್ಲಿ ವಂಶಾಭಿವೃದ್ಧಿ(ಸಂತಾನೋತ್ಪತ್ತಿ) ನಡೆಸುವ ಹಕ್ಕಿಗಳು ಹೆಚ್ಚು ಮೊಟ್ಟೆಗಳನ್ನಿಡುವುದಲ್ಲದೇ, ಹೆಚ್ಚು ಮರಿಗಳ ಗುಂಪನ್ನು ಕೂಡ ರಚಿಸುತ್ತದೆ. ಆದರೆ ಎರಡು ಮತ್ತು ಮೂರನೇ ಸಲಕ್ಕೆ ಇದು ತದ್ವಿರುದ್ಧವಾಗಿರುತ್ತದೆ.[೩೭] ಆಗಾಗ ಜೊತೆಗಾರ ಹಕ್ಕಿಯನ್ನು ಸೇರುವ ಹೆಣ್ಣು ಹಕ್ಕಿಗಳು ಹೆಚ್ಚು ಮೊಟ್ಟೆಗಳನ್ನಿಡುವುದಲ್ಲದೇ, ಮೊಟ್ಟೆಗಳಿಗೆ ಕಡಿಮೆ ಅವಧಿಯ ಕಾವು ನೀಡುತ್ತದೆ, ಹಾಗಾಗಿ, ಜೋಡಿಗಳ ಸೇರುವಿಕೆಯು, ಕೆಲವೊಮ್ಮೆ ಜೋಡಿಗಳ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕೂಡ ಸೂಚಿಸಬಹುದಾಗಿದೆ.[೩೮] ಹಂಗೇರಿಯನ್ ಅಧ್ಯಯನದ ಪ್ರಕಾರ ಈ ಸಂಯೋಗ ಕ್ರಿಯೆಯು(ಸೇರುವ ಕ್ರಿಯೆಯು) ಪ್ರಮುಖ ಹಂತವೊಂದನ್ನೊಳಗೊಂಡಿದ್ದು, ಶೇಕಡಾ ೯% ಕ್ಕಿಂತಲೂ ಅಧಿಕ ಪ್ರಮಾಣದ ಮರಿಗಳ ಹುಟ್ಟಿಗೆ ಇತರೆ ಹೆಚ್ಚುವರಿ ಗಂಡು ಹಕ್ಕಿಗಳು ಕಾರಣವಾಗುತ್ತದೆ, ಮತ್ತು ೨೦% ರಷ್ಟು ಮರಿಗಳ ಗುಂಪಿನಲ್ಲಿ ಕನಿಷ್ಠ ಒಂದು ಜೋಡಿ ಹಕ್ಕಿಗಳ ಹುಟ್ಟಿಗೆ ಈ ಹೆಚ್ಚುವರಿ ಗಂಡು ಹಕ್ಕಿಗಳು ಕಾರಣವಾಗಿರುತ್ತದೆ.[೩೯]

ಈ ಯುರೇಶಿಯನ್ ಟ್ರೀ ಸ್ಪ್ಯಾರೋ ಮತ್ತು ಹೌಸ್ ಸ್ಪ್ಯಾರೋಗಳ ನಡುವಿನ ಮಿಶ್ರತಳಿಯ ಬಗ್ಗೆ ಜಗತ್ತಿನ ವಿವಿಧೆಡೆಯಲ್ಲಿ ಮಾಹಿತಿಗಳು ದಾಖಲಾಗಿದ್ದು, ಇವುಗಳ ಪೈಕಿ ಮಿಶ್ರತಳಿಯ ಗಂಡು ಹಕ್ಕಿಗಳಲ್ಲಿ ಯುರೇಶಿಯನ್ ಟ್ರೀ ಸ್ಪ್ಯಾರೋವಿನ ಹೋಲಿಕೆ ಕಂಡು ಬಂದರೆ, ಮಿಶ್ರತಳಿಯ ಹೆಣ್ಣು ಹಕ್ಕಿಗಳಲ್ಲಿ ಹೆಚ್ಚಾಗಿ ಹೌಸ್ ಸ್ಪ್ಯಾರೋವಿನ ಸಾಮ್ಯತೆಗಳು ಕಂಡು ಬರುತ್ತವೆ.[೪೦] ಭಾರತದ ಪೂರ್ವ ಘಟ್ಟಗಳಲ್ಲಿ ತಳಿಸಂಖ್ಯೆಗಳನ್ನು ಪರಿಚಯಿಸಲಾಗುತ್ತಿದ್ದು[೫], ಇವುಗಳು ಹೌಸ್ ಸ್ಪ್ಯಾರೋಗಳ ತಳಿಸಂತತಿಯನ್ನು ಹೊಂದಬಹುದಾಗಿದೆ.[೧೯] ಒಂದೊಮ್ಮೆ ಕನಿಷ್ಠ ಒಂದು ಮಿಶ್ರ ಜೋಡಿಗಳು ಒಂದು ಸೂಕ್ತ ಜೋಡಿಯ ಸಂತಾನಕ್ಕೆ ಕಾರಣವಾಗುತ್ತದೆ.[೪೧][೪೨][೪೩] ೧೯೭೫ ರಲ್ಲಿ ಮಾಲ್ಟದಲ್ಲಿ ಸ್ಪ್ಯಾನಿಶ್ ಸ್ಪ್ಯಾರೋ , ಪಿ ಹಿಸ್ಪೇನಿಯೋಲೆನ್ಸಿಸ್ ನೊಂದಿಗೆ ಕಾಡು ಜಾತಿಯ ಒಂದು ಮಿಶ್ರತಳಿ (ಸೇರಿರುವುದು)ಸಂಯೋಗಗೊಂಡಿರುವುದು ದಾಖಲಾಗಿದೆ.[೫]

ಆಹಾರ ಸೇವನೆ[ಬದಲಾಯಿಸಿ]

ಆಹಾರ ಒದಗಿಸುವುದರ ಬಳಿ

ಈ ಟ್ರೀ ಸ್ಪ್ಯಾರೋವು ಮುಖ್ಯವಾಗಿ ಕಾಳುಗಳು ಮತ್ತು ಧವಸಧಾನ್ಯಗಳನ್ನು ತಿನ್ನುವ ಗುಬ್ಬಚ್ಚಿಯಾಗಿದ್ದು, ಇವುಗಳು ಹಿಂಡಾಗಿ ಆಹಾರವನ್ನು ತಿನ್ನುತ್ತವೆ ಹಾಗೆಯೇ ಕೆಲವೊಮ್ಮೆ ಹೌಸ್ ಸ್ಪ್ಯಾರೋಗಳು ಕೂಡ ತಮ್ಮ ಗುಂಪಿನ ಸದಸ್ಯರೊಂದಿಗೆ ಅಥವಾ ಮರಿಗಳೊಂದಿಗೆ ಆಹಾರವನ್ನು ತಿನ್ನುತ್ತವೆ. ಅವುಗಳು ಮೂಲಿಕೆಗಿಡಗಳ ಕಳೆಗಳು (ಚಿಕ್ ವೀಡ್ಸ್), ಕಳೆಗಿಡಗಳು ಗೂಸ್ ಫೂಟ್ , ಚೆಲ್ಲಿದ ಧಾನ್ಯಗಳನ್ನು[೫] ತಿನ್ನುವುದಲ್ಲದೇ, ಕೆಲವೊಮ್ಮೆ ಅವುಗಳು ಧಾನ್ಯಗಳನ್ನು ಸಂಗ್ರಹಿಸಿಡುವ ಉಗ್ರಾಣಗಳಿಗೆ ವಿಶೇಷವಾಗಿ ಶೇಂಗಾ ತಿನ್ನುವುದಕ್ಕಾಗಿ ಹೋಗುತ್ತವೆ.

ವಯಸ್ಕ ಗುಬ್ಬಚ್ಚಿಗಳು ಬೇರೆ ಬೇರೆ ತೇವಾಂಶವಿರುವ ಭೂಪ್ರದೇಶಗಳಿಗೆ ಹೋಗಿ ಆಹಾರ ಸಂಗ್ರಹಣೆಗಾಗಿ ಅಲ್ಲಿರುವ ಹುಳುಹುಪ್ಪಡಿಗಳನ್ನು ಹೆಕ್ಕಿ ಸಣ್ಣ ಎಳೆಯ ಮರಿಗಳಿಗೆ ಆಹಾರ ನೀಡುತ್ತದೆ ಹಾಗೆಯೇ ಈ ಜಲ ಪ್ರದೇಶಗಳು ಈ ಗುಬ್ಬಚ್ಚಿಗಳಿಗೆ ಅನೇಕ ಜಾತಿಯ ಹುಳುಹುಪ್ಪಡಿಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುವುದಲ್ಲದೇ, ವಂಶಾಭಿವೃದ್ಧಿಯಂತಹ ದೀರ್ಘಾವಧಿಯ ಸಮಯದಲ್ಲೆಲ್ಲಾ ಈ ಬಹು ಗುಂಪಿನ ಪ್ರಭೇದಗಳ ಮರಿಗಳನ್ನು ಪೋಷಣೆ ಮಾಡಲು ಕೂಡ ಸಹಕಾರಿಯಾಗುತ್ತದೆ.

ಹಿಂದಿನಿಂದಲೇ ಹೆಚ್ಚಿನ ಭೂಭಾಗವನ್ನು ಕೃಷಿಪ್ರದೇಶಕ್ಕಾಗಿ ಬಳಸಲಾಗಿತ್ತಲ್ಲದೇ, ಸಾಂದ್ರ ಕೃಷಿ ಪದ್ಧತಿಯಿಂದಾಗಿ ಈ ಹುಳುಹುಪ್ಪಡಿಗಳು ಹೆಚ್ಚು ಸಮಯದವರೆಗೆ ದೊರೆಯುವುದಿಲ್ಲ ಮತ್ತು ಈ ಕಾರಣದಿಂದಾಗಿ ಗೂಡಿನ ಸುತ್ತಮುತ್ತಲಿನ ೧ ಕಿಲೋಮೀಟರ್(೧,೨೦೦ ಯಾರ್ಡ್) ವ್ಯಾಪ್ತಿಯಲ್ಲಿ ಕೂಡ ಪೂರಕ ಕಾಳುಗಳು ಈ ಗುಬ್ಬಚ್ಚಿಗಳಿಗೆ ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಅವುಗಳು ಗೂಡು ಕಟ್ಟುವ ಸ್ಥಳಗಳನ್ನು ಆಯ್ಕೆ ಮಾಡುವುದಿಲ್ಲ. ಅಥವಾ ಅನೇಕ ವಯಸ್ಕ ಹಕ್ಕಿಗಳ ಮೇಲೆ ಇದರಿಂದ ಕೆಟ್ಟ ಪರಿಣಾಮ ಕೂಡ ಉಂಟಾಗುತ್ತದೆ.[೨೫]

ಚಳಿಗಾಲದಲ್ಲಿ ಹೆಚ್ಚಾಗಿ ಈ ಬೀಜಮೂಲಗಳು ಮುಖ್ಯ ನಿರ್ಣಾಯಕ ಅಂಶಗಳಾಗಿರುತ್ತವೆ.[೨೫] ವರ್ಷದ ಈ ಅವಧಿಯಲ್ಲಿ ಗುಂಪಿನಲ್ಲಿನ ಹಕ್ಕಿಗಳು ಪ್ರತ್ಯೇಕವಾಗಿ ತಮ್ಮ ಡಾಮಿನೆನ್ಸ್ ಹೈರಾರ್ಕಿಯಲ್ಲಿ(ಮುಖ್ಯ ಅನುಕ್ರಮ) ಜೀವಿಸುವುದಲ್ಲದೇ, ಈ ಥ್ರೋಟ್ ಪ್ಯಾಚ್ನ ಅನುಕ್ರಮತೆಯಲ್ಲಿನ ಗುಂಪಿನ ಗಾತ್ರ ಮತ್ತು ಅಂತಸ್ತಿನ ನಡುವೆ ಯಾವುದೇ ಗಾಢ ಸಂಬಂಧವಿರುವುದಿಲ್ಲ. ಈ ಹೌಸ್ ಸ್ಪ್ಯಾರೋ ಪ್ರಭೇದದ ಗುಬ್ಬಚ್ಚಿ ಜಾತಿಯಲ್ಲಿ ಈ ಸಾಮ್ಯತೆಯನ್ನು ಕಾಣಬಹುದಾಗಿದ್ದು, ತಮ್ಮ ಅನುಕ್ರಮತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟದಲ್ಲಿ ಥ್ರೋಟ್ ಪ್ಯಾಚ್ಗಳಲ್ಲಿ ಇಳಿಮುಖವಾಗಿರುತ್ತದೆ, ಗಾತ್ರವು ಫಿಟ್ನೆಸ್ ಬಗೆಗಿನ ಸಿಗ್ನಲಿಂಗ್ ಬ್ಯಾಜ್ನಂತೆ ಕೆಲಸ ನಿರ್ವಹಿಸುತ್ತದೆ. .[೪೪]

ಪರಭಕ್ಷಕತೆಯ ಅಪಾಯವು ಪೋಷಣಾ ಕೌಶಲ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ಅಧ್ಯಯನದ ಪ್ರಕಾರ, ವಾಸದ ಸ್ಥಳ ಮತ್ತು ಆಹಾರ ಪೂರೈಕೆಯ ಸ್ಥಳದ ನಡುವಿನ ಅಂತರವು ಹೆಚ್ಚಿದಾಗ ಆಹಾರವಿರುವ ಸ್ಥಳಗಳಿಗೆ ಹಕ್ಕಿಗಳು ಸಣ್ಣ ಗುಂಪಿನಲ್ಲಿ ಹೋಗುತ್ತವೆ ಮತ್ತು ಅಲ್ಲಿ ಸ್ವಲ್ಪ ಸಮಯವನ್ನು ಕಳೆಯುತ್ತವೆ ಮತ್ತು ಹೆಚ್ಚು ಸಮಯ ಅವು ಜಾಗೃತವಾಗಿರುತ್ತವೆ ಎಂದು ತಿಳಿದುಬರುತ್ತದೆ. ಗುಬ್ಬಚ್ಚಿಗಳು ಆಹಾರವನ್ನು ನೇರವಾಗಿ ಹುಡುಕಿ ತೆಗೆಯುವ ಮೂಲಕ ಅಥವಾ “ ಎತ್ತಿತೆಗೆಯುವ” ಮೂಲಕ “ಉತ್ಪಾದಕ”ರಾಗಿ ತಮ್ಮ ಮರಿಗಳಿಗೆ ಆಹಾರವನ್ನು ನೀಡುತ್ತವೆಯಲ್ಲದೇ, ಈಗಾಗಲೇ ಆಹಾರವನ್ನು ಹುಡುಕಿರುವ ತಮ್ಮ ಗುಂಪಿನ ಇತರ ಸದಸ್ಯರನ್ನು ಸೇರಿಕೊಳ್ಳುತ್ತವೆ. ಈ ಗುಬ್ಬಚ್ಚಿಗಳು ಪರಭಕ್ಷಕ ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದುಕೊಂಡು ಆಹಾರಗಳು ದೊರೆಯುವ ಸ್ಥಳಗಳಲ್ಲಿ ಶೇಕಡಾ ೩೦% ನಷ್ಟು ಪ್ರಮಾಣದಲ್ಲಿ ಆಹಾರವನ್ನು ಹುಡುಕಿ ತೆಗೆಯುತ್ತವೆ. ಅಪಾಯಕಾರಿಯಾದ ಸ್ಥಳಗಳಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನಂಶ ಸಂಗ್ರಹಣೆಯಾಗಿರುವ ಹಕ್ಕಿಗಳು ಪ್ರತ್ಯೇಕವಾಗಿ ಜೀವಿಸುತ್ತಾ ಇರುತ್ತವೆ ಎಂದು ನಾವು ಹೇಳಬಹುದು.[೪೫]

ಉಳಿಯುವಿಕೆ[ಬದಲಾಯಿಸಿ]

ಸ್ಪ್ಯಾರೋಹಾಕ್

ಈ ಮರಗುಬ್ಬಚ್ಚಿಗಳನ್ನು ಕೊಂದು ಭಕ್ಷಿಸುವ ಹಕ್ಕಿಗಳೆಂದರೆ, ಗಿಡುಗ , ಹದ್ದು , ಗೂಬೆಯಂತಹ ಭಕ್ಷಕ ಪಕ್ಷಿಗಳು ಒಳಗೊಂಡಿವೆಯಲ್ಲದೇ, ಯುರೇಶಿಯನ್ ಸ್ಪ್ಯಾರೋ ಹಾರ್ಕ್,[೪೬] ಕಾಮನ್ ಕೆಸ್ಟ್ರೆಲ್,[೪೭] ಸಣ್ಣ ಗೂಬೆ [೪೮][೪೯] ಮತ್ತು ಕೆಲವೊಮ್ಮೆ ದೊಡ್ಡ ಕಿವಿಯನ್ನೊಳಗೊಂಡ ಗೂಬೆಗಳು ಮತ್ತು ಬಿಳಿ ಕೊಕ್ಕರೆಗಳು ಕೂಡ ಗುಬ್ಬಚ್ಚಿಗಳನ್ನು ಕೊಂದು ಭಕ್ಷಿಸುತ್ತವೆ.[೫೦][೫೧]

ಈ ಗುಬ್ಬಚ್ಚಿಗಳು ಶರಧೃತುವಿನಲ್ಲಿ ತಮ್ಮ ಗರಿಗಳನ್ನು ಉದುರಿಸುವುದರಿಂದಾಗಿ, ಈ ಅವಧಿಯಲ್ಲಿ ಇವುಗಳು ಕೇವಲ ಕೆಲವೇ ಹಾರುವ ಗರಿಗಳನ್ನು ಹೊಂದಿರುವುದರಿಂದ ಇವುಗಳ ಮೇಲೆ ಭಕ್ಷಕ ಜೀವಿಗಳ ದಾಳಿ ಹೆಚ್ಚಿನ ಪ್ರಮಾಣದಲ್ಲಿ ಆಗುವುದಿಲ್ಲ.[೫೨] ಗುಬ್ಬಚ್ಚಿಗಳ ಗೂಡಿನ ಮೇಲೆ ಯುರೇಶಿಯನ್ ಮ್ಯಾಗ್ಪೈಗಳು (ಮಡಿವಾಳ ಹಕ್ಕಿ), ಜೇಯ್ಸ್, ಲೀಸ್ಟ್ ವೀಸೆಲ್ಗಳು, ಇಲಿಗಳು, ಬೆಕ್ಕುಗಳು ಮತ್ತು ಹಾರ್ಸ್ಶೂ ವಿಪ್ ಸ್ನೇಕ್ ಗಳಂತಹ ಕೆಲವೊಂದು ಹಾವುಗಳು ಕೂಡ ದಾಳಿ ನಡೆಸುವ ಸಾಧ್ಯತೆಗಳಿರುತ್ತವೆ.[೫೩][೫೪][೫೫]

ಬರ್ಡ್ಲೈಸ್ (ಹಕ್ಕಿಗಳ ಮೇಲಿರುವ ಹುಳು/ಹೇನುಗಳು)ಗಳ ಅನೇಕ ಪ್ರಭೇದಗಳು ಹಕ್ಕಿಗಳ ಮೇಲೆ ಮತ್ತು ಅವುಗಳ ಗೂಡುಗಳಲ್ಲಿ [೫೬][೫೭] ಕಂಡುಬರುತ್ತವಲ್ಲದೇ, ಈ ಸಣ್ಣ ಹುಳು/ಹೇನುಗಳ ಮುಖ್ಯ ಪ್ರಭೇದವೆಂದರೆ ನೆಮಿಡೊಕಾಪ್ಟರ್ಸ್ ಆಗಿದೆ ಇದು ಹಕ್ಕಿಗಳಲ್ಲಿರುವುದರಿಂದ ಕಾಲು ಮತ್ತು ಕಾಲ್ಬೆರಳುಗಳಲ್ಲಿ ಯಾವುದೇ ಗಾಯಗಳುಂಟಾಗಲು ಕಾರಣವಾಗುತ್ತದೆ.[೫೮] ಪ್ರೊಟೋಕ್ಯಾಲಿಫೋರಾ , ಬ್ಲೋ ಫ್ಲೈ ಲಾರ್ವಾ ಗಳಂತಹ ಪರಾವಲಂಬಿ ಜೀವಿಗಳು ಗೂಡುಗಳಲ್ಲಿ ಸೇರಿಕೊಳ್ಳುವುದರಿಂದ ಗೂಡಿನಲ್ಲಿ ಮರಿಗಳ ಸಾವಿಗೆ ಇದು ಪ್ರಮುಖ ಕಾರಣವಾಗಿದೆ.[೫೯] ಎಳೆಯ ಮರಿಗಳ ಸಾವಿಗೆ ಮೊಟ್ಟೆಯ ಗಾತ್ರದಿಂದ ಯಾವುದೇ ಪ್ರಭಾವುಂಟಾಗುವುದಿಲ್ಲವಾದರೂ , ದೊಡ್ಡ ಮೊಟ್ಟೆಯಿಂದ ಹೊರಬಂದ ಹಕ್ಕಿಯ ಮರಿಗಳು ಬೇಗನೆ ಬೆಳವಣಿಗೆಯಾಗುತ್ತವೆ.[೬೦]

ಈ ಗುಬ್ಬಚ್ಚಿಗಳು ಬ್ಯಾಕ್ಟೀರಿಯಲ್ ಮತ್ತು ವೈರಲ್ ರೋಗಾಣುಗಳಿಗೆ ಕೂಡ ಕಾರಣವಾಗುತ್ತದೆ. ಮೊಟ್ಟೆಗಳು ಒಡೆಯದೆ ಇರಲು ಈ ಬ್ಯಾಕ್ಟೀರಿಯಾಗಳು ಪ್ರಮುಖ ಕಾರಣವೆಂದು ಸೂಚಿಸಲಾಗಿದೆಯಲ್ಲದೇ ಮರಿಗಳ ಸಾವಿಗೂ[೬೧] ಕೂಡ ಇದು ಕಾರಣವಾಗುತ್ತದೆ ಮತ್ತು ಜಪಾನಿನಲ್ಲಿ ಸಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ತಾಯಿ ಹಕ್ಕಿ ಮರಿಹಕ್ಕಿಗಳ ಸಾವು ಕೂಡ ಸಂಭವಿಸಿರುವುದನ್ನು ಪತ್ತೆಹಚ್ಚಲಾಗಿದೆ.[೬೨] ಚೀನಾದಲ್ಲಿ [೬೩] ಅನೇಕ ಗುಬ್ಬಚ್ಚಿಗಳ ಮತ್ತು ಇತರ ಹಕ್ಕಿಗಳ ರಕ್ತದಲ್ಲಿ ಏವಿಯನ್ ಮಲಾರಿಯಾ ಪರಾವಲಂಬಿ ಜೀವಿಗಳಿರುವುದು ಕಂಡುಬಂದಿದ್ದು,ಇದರಿಂದ ಅದು H೫N೧ ನೋವಿಗೆ ಎಡೆಮಾಡಿಕೊಡುವುದಲ್ಲದೇ ಅದು ಸಣ್ಣ ಗುಬ್ಬಚ್ಚಿಯ ಮರಿಗಳಿಗೆ ತೀಕ್ಷ್ಣ ಸ್ವರೂಪದ ನೋವುಂಟುಮಾಡಲು ಕಾರಣವಾಗುತ್ತದೆ.[೬೪]

ಈ ಟ್ರೀ ಸ್ಪ್ಯಾರೋಗಳಲ್ಲಿರುವ ರೋಗನಿರೋಧಕ ಪ್ರತಿಕ್ರಿಯೆಯು ಹೌಸ್ ಸ್ಪ್ಯಾರೋಗಳಲ್ಲಿರುವ ರೋಗ ನಿರೋಧಕ ಪ್ರತಿಕ್ರಿಯೆಗಿಂತ ಕಡಿಮೆಯಾಗಿದ್ದು, ನಂತರದಲ್ಲಿ ಹೆಚ್ಚು ದಾಳಿಯನ್ನು ನಡೆಸುವ ಸಂಭವನೀಯತೆಯನ್ನು ಹೊಂದಿದೆಯೆಂದು ಪ್ರಸ್ತಾವಿಸಲಾಗಿದೆ.[೬೫] ಮಧ್ಯ, ಪೂರ್ವ ಮತ್ತು ದಕ್ಷಿಣ ಯುರೋಪ್ನ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಹೌಸ್ ಸ್ಪ್ಯಾರೋಗಳು ಮತ್ತು ಟ್ರೀ ಸ್ಪ್ಯಾರೋಗಳು ರಸ್ತೆ ಅಪಘಾತದಲ್ಲಿ ಆಗಾಗ್ಗೆ ಬಲಿಯಾಗುತ್ತವೆ.[೬೬] ಇವುಗಳು ಗರಿಷ್ಠವೆಂದರೆ ೧೩.೧ ವರ್ಷಗಳವರೆಗೆ ಜೀವಿಸಿರುವುದು ದಾಖಲಾಗಿದೆ [೨೮] ಆದರೆ ಕೆಲವೊಮ್ಮೆ ವಿಶೇಷ ಜೀವಿತಾವಧಿಯೆಂದರೆ ಮೂರು ವರ್ಷಗಳಾಗಿವೆ.[೩]

ಸ್ಥಾನಮಾನ[ಬದಲಾಯಿಸಿ]

ಚಳಿಗಾಲದ ಕೊಯ್ದ ಪೈರಿನ ಕೊಳೆಯು ಒಂದು ಕಾಲಿಕ ಆಹಾರವಾಗಿದೆಉಲ್ಲೇಖ ದೋಷ: The opening <ref> tag is malformed or has a bad name

ಪ್ರಸ್ತುತವಾಗಿ ಈ ಟ್ರೀ ಸ್ಪ್ಯಾರೋಗಳು ಅಗಣಿತ ಪ್ರಮಾಣದಲ್ಲಿದ್ದು, ವಿಶ್ವಾದ್ಯಂತ ಇರುವ ಇದರ ಒಟ್ಟು ಸಂಖ್ಯೆ ಕೂಡ ಯಾರಿಗೂ ತಿಳಿದಿಲ್ಲವಾದರೂ ಕೂಡ ಯುರೋಪ್ನಲ್ಲಿ ೫೨–೯೬ ಮಿಲಿಯನ್ ಹಕ್ಕಿಗಳಿವೆ ಎಂದು ಅಂದಾಜಿಸಲಾಗಿದೆ. ಸಂಖ್ಯಾಪ್ರಮಾಣವನ್ನು ಮುಟ್ಟುವ ನಿಟ್ಟಿನಲ್ಲಿ ಇವುಗಳ ಸಂಖ್ಯಾ ಪ್ರಮಾಣದ ಬದಲಾವಣೆಯನ್ನು ನಿರ್ದಿಷ್ಟವಾಗಿ ಮೌಲ್ಯೀಕರಿಸಲಾಗದಿದ್ದರೂ ಕೂಡ ಈ ಪ್ರಭೇದಗಳ ಸಂಖ್ಯೆಯು ಸೀಮಿತ ಮಿತಿಯಲ್ಲಿ ಇಳಿಮುಖವಾಗಿದ್ದು ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.(ಅಂದರೆ, ಹತ್ತು ವರ್ಷಗಳಲ್ಲಿ ಅಥವಾ ಮೂರು ಪೀಳಿಗೆಗಳ ಅವಧಿಯಲ್ಲಿ ಶೇಕಡಾ ೩೦%ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ.) ಈ ಕಾರಣಗಳಿಗಾಗಿ ಈ ಪ್ರಭೇದಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಅದನ್ನು “ ಅಲ್ಪ ಕಳವಳಕಾರಿ” ಪ್ರಭೇದಗಳೆಂದು ಮೌಲ್ಯೀಕರಿಸಲಾಗಿದೆ.[೧]

ಈ ಟ್ರೀ ಸ್ಪ್ಯಾರೋವು ಫೆನ್ನೋಸ್ಕಾಂಡಿಯಾ ಮತ್ತು ಪಶ್ಚಿಮ ಯುರೋಪಿನಲ್ಲಿ [೪][೬೭] ತನ್ನ ಸಂಖ್ಯಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದರೂ ಕೂಡ ಪೂರ್ವ ಯೂರೋಪಿನಲ್ಲಿ ಇವುಗಳ ಸಂಖ್ಯೆಯು ಕ್ಷಿಣಿಸುತ್ತಿದೆಯಾದರೂ, ಅದರ ಬದಲಾಗಿ ಇತರ ಜಾತಿಯ ಸ್ಕೈಲಾರ್ಕ್, ಕಾರ್ನ್ ಬಂಟಿಂಗ್ ಮತ್ತು ನಾರ್ಥರ್ನ್ ಲ್ಯಾಪ್ವಿಂಗ್ ಹಕ್ಕಿಗಳು ಕೃಷಿಭೂಮಿಯಲ್ಲಿ ಕಾಣಸಿಗುತ್ತವೆ. ೧೯೮೦ ರಿಂದ ೨೦೦೩ ರವರೆಗೆ ಸಾಮಾನ್ಯ ಕೃಷಿ ಭೂಮಿಯಲ್ಲಿ ಕ್ಷೀಣಿಸಿದ ಹಕ್ಕಿಗಳ ಸಂಖ್ಯಾ ಪ್ರಮಾಣ ಸುಮಾರು ೨೮% ರಷ್ಟಾಗಿದೆ.[೬೮] ಇಳಿಮುಖವಾಗುತ್ತಿರುವ ಸಂಖ್ಯಾ ಪ್ರಮಾಣ ಗ್ರೇಟ್ ಬ್ರಿಟನ್ನಲ್ಲಿ ಗಂಭೀರವಾಗಿದ್ದು, ಇದು ೧೯೭೦ ಮತ್ತು ೧೯೯೮ [೬೯] ರ ಅವಧಿಯಲ್ಲಿ ಸುಮಾರು ೯೫%ದಷ್ಟು ಕ್ಷೀಣಿಸಿದ್ದರೆ, ಐರ್ಲೆಂಡ್ನಲ್ಲಿ ಒಟ್ಟು ೧,೦೦೦–೧,೫೦೦ ಜೊತೆ ಹಕ್ಕಿಗಳು ಮಾತ್ರ ಇರುವ ವರದಿಯಾಗಿದೆ.[೪] ನೈಸರ್ಗಿಕ ಏರಿಳಿತಗಳ ಕಾರಣದಿಂದಾಗಿ ಬ್ರಿಟಿಷ್ ದ್ವೀಪಗಳಲ್ಲಿ ಈ ಟ್ರೀ ಸ್ಪ್ಯಾರೋಗಳ ಸಂಖ್ಯಾ ಪ್ರಮಾಣ ಕೂಡ ಇಳಿಮುಖವಾಗಿದೆ[೨೭]. ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಸುಧಾರಣೆಗೊಂಡಿದ್ದರೂ ಕೂಡ, ಅವುಗಳ ಸಂಖ್ಯಾ ಪ್ರಮಾಣದ ಗಾತ್ರವು ಕುಗ್ಗಿದೆ, ಸಂತಾನೋತ್ಪತ್ತಿಯ ಸಾಮರ್ಥ್ಯವು ಕುಗ್ಗಿರುವುದು ಈ ಸಂಖ್ಯಾ ಪ್ರಮಾಣ ಕುಗ್ಗುವಿಕೆಗೆ ಕಾರಣವಲ್ಲ ಎಂದು ಸೂಚಿಸಲ್ಪಟ್ಟರೂ ಕೂಡ ಈ ಪ್ರಭೇದಗಳು ಬದುಕುಳಿಯುವುದು ಒಂದು ಗಂಭೀರ ಅಂಶವಾಗಿದೆ[೭೦]. ಈ ಟ್ರೀ ಸ್ಪ್ಯಾರೋಗಳ ಸಂಖ್ಯೆಯಲ್ಲಿ ಹೆಚ್ಚಿನ ಇಳಿಮುಖ ಕಂಡುಬರಲು ಬಹುಶಃ ಕೃಷಿಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಮತ್ತು ಹೆಚ್ಚಿನ ವೈವಿಧ್ಯ ರೀತಿಯ ಕೃಷಿ ಚಟುವಟಿಕೆಗಳು ಹೆಚ್ಚಿರುವುದು ಕೂಡ ಕಾರಣವಾಗಿದೆ. ಶರಧೃತುವಿನಲ್ಲಿ ಬಿತ್ತನೆ ಮಾಡುವ ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕಗಳನ್ನು ಬಳಸುವುದರಿಂದ (ಚಳಿಗಾಲದಲ್ಲಿ ಗದ್ದೆಗಳಲ್ಲಿ ಕಟಾವಾಗಿ ಉಳಿದ ಎಳೆಯ ಬೆಳೆಗಳಿಗೆ ಹೆಚ್ಚು ಔಷಧಿ ಸಿಂಪರಣೆ ಮಾಡುವುದರಿಂದ) ಕೂಡ ಈ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಮಿಶ್ರ ಕೃಷಿ ವಿಧಾನದಿಂದ ಸುಧಾರಿತ ಕೃಷಿ ವಿಧಾನಕ್ಕೆ ಬದಲಾವಣೆಯಾಗುವ ಮೂಲಕ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುವ ಮೂಲಕ, ಗುಬ್ಬಚ್ಚಿ ಮರಿಗಳಿಗೆ ದೊರೆಯುವ ಕೀಟಗಳು ಮತ್ತು ಹುಳು ಹುಪ್ಪಡಿಗಳಂತಹ ಆಹಾರಗಳ ಪ್ರಮಾಣ ಕೂಡ ಕಡಿಮೆಯಾಯಿತು.[೬೮]

ಮಾನವನೊಂದಿಗೆ ಸಂಬಂಧ[ಬದಲಾಯಿಸಿ]

ತೋಟಗಾರಿಕೆಯ ಕೀಟ, ಸಾಮಾನ್ಯ ಜೀರುಂಡೆಯು ತಿನ್ನುವ ಕೀಟವಾಗಿದೆ.

ಕೆಲವು ಪ್ರದೇಶಗಳಲ್ಲಿ ಟ್ರೀ ಸ್ಪ್ಯಾರೋವು ತೊಂದರೆ ಕೊಡುವ ಕೀಟಗಳಂತೆ ಕಾಣಿಸಿಕೊಳ್ಳುತ್ತವೆ. ಆಸ್ಟ್ರೇಲಿಯಾದಲ್ಲಿ ಈ ಗುಬ್ಬಚ್ಚಿಗಳು ಅನೇಕ ಧವಸ ಧಾನ್ಯಗಳು ಮತ್ತು ಹಣ್ಣಿನ ಬೆಳೆಗಳಿಗೆ ಹಾನಿಯನ್ನುಂಟುಮಾಡುವುದಲ್ಲದೇ ಪ್ರಾಣಿಗಳ ಆಹಾರ ಮತ್ತು ಸಂಗ್ರಹಿಸಲ್ಪಟ್ಟ ಧಾನ್ಯಗಳು ಮತ್ತು ಅಲ್ಲಿ ಬಿದ್ದಂತಹ ಧಾನ್ಯಗಳನ್ನು ಕೂಡ ಹಾಳುಮಾಡುತ್ತವೆ. ಕ್ವಾರಂಟೈನ್ ನ ನಿಯಮಗಳು ಈ ಗುಬ್ಬಚ್ಚಿಯ ಪ್ರಭೇದಗಳನ್ನು ಆಸ್ಟ್ರೇಲಿಯಾದ ಪಶ್ಚಿಮ ಭಾಗಕ್ಕೆ ಸಾಗಿಸುವುದನ್ನು ನಿರ್ಬಂಧಿಸಿದೆ.[೨೪]

೧೯೫೮ ರ ಏಪ್ರಿಲ್ನಲ್ಲಿ ಚೀನಾದ ಅಧ್ಯಕ್ಷ ಮಾವೋ ಝೆಡಾಂಗ್ ಅವರು ಟ್ರೀ ಸ್ಪ್ಯಾರೋಗಳಿಂದ ಆಗುವ ಬೆಳೆ ಹಾನಿಯನ್ನು ಇಳಿಮುಖಗೊಳಿಸಲು ಪ್ರಯತ್ನಿಸಿದ್ದರಲ್ಲದೇ ಅವರ ಪ್ರಕಾರ, ಪ್ರತಿ ವರ್ಷಕ್ಕೆ ಪ್ರತಿ ಹಕ್ಕಿಗೆ ೪.೫ (೯.೯ lb) ಕೆ ಜಿಯಷ್ಟು ಧಾನ್ಯ/ಕಾಳುಗಳು ಬೇಕಾಗುತ್ತದೆ ಎಂದು ಅಂದಾಜು ಮಾಡಿದ್ದು, ಮೂರು ಮಿಲಿಯನ್ ಹಕ್ಕಿಗಳನ್ನು ಮತ್ತು ಅನೇಕ ಬೆದರುಗೊಂಬೆಗಳನ್ನು ಸ್ಥಳಾಂತರಿಸುವ ಮೂಲಕ ಹಕ್ಕಿಗಳು ಹಸಿವಿನಿಂದ ಬಳಲಿ ಸಾಯುವ ಬದಲು ಬೇರೆಡೆಗೆ ವಲಸೆ ಹೋಗಲು ವ್ಯವಸ್ಥೆ ಮಾಡಿದರು. ಪ್ರಾರಂಭದಲ್ಲಿ ಇದು ಯಶಸ್ವೀಯಾದರೂ ಕೂಡ ಈ ಗ್ರೇಟ್ ಸ್ಪ್ಯಾರೋ ಕ್ಯಾಂಪೇನ್/ಗುಬ್ಬಚ್ಚಿಗಳ ಮಹಾ ಚಳವಳಿಯು ಅನೇಕ ಮಿಡತೆಗಳು ಮತ್ತು ಇತರ ಕೀಟ ಜಾತಿಯ ಹುಳುಗಳನ್ನು ಮತ್ತು ಅಳಿದುಳಿದ ಬೆಳೆಯ ಕಾಳುಗಳನ್ನು ಹಕ್ಕಿಗಳು ತಿನ್ನುವುದನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತಲ್ಲದೇ, ಅಧಿಕ ಬರಗಾಲ ಸಂಭವಿಸಿದ್ದರಿಂದ ೧೯೫೯ ಮತ್ತು ೧೯೬೧ರ ಸುಮಾರಿಗೆ ೩೦ ಮಿಲಿಯನ್ ಪ್ರಮಾಣದ ಹಕ್ಕಿಗಳ ಸಾವಿಗೆ ಕೂಡ ಅದು ಕಾರಣವಾಯಿತು.[೨೧][೭೧] ಈ ಟ್ರೀ ಸ್ಪ್ಯಾರೋಗಳು ಕೀಟಗಳನ್ನು ತಿನ್ನುವುದರಿಂದಾಗಿ ಇವುಗಳನ್ನು ಹಣ್ಣಿನ ಬೆಳೆಯ ಕೃಷಿಯಲ್ಲಿ ಹಣ್ಣಿಗೆ ಬರುವ ಕೀಟಗಳು ಮತ್ತು ಕಾಮನ್ ಆಸ್ಪಾರಾಗಸ್ ಬೀಟಲ್, ಕ್ರಿಯೋಸೆರಿಸ್ ಆಸ್ಪಾರ್ಜಿ ಎಂಬ ಕೀಟಗಳನ್ನು ನಿಯಂತ್ರಿಸಲು ಈ ಹಕ್ಕಿಗಳನ್ನು ಬಳಸಲು ಕಾರಣವಾಯಿತು.[೭೨]

ಹೊಕುಸಾಯಿ ಅವರ ಸುಝುಮ್ ಒಡೊರಿಯ ವಿವರ

ಪ್ರಾಚೀನ ಕಾಲದಿಂದಲೂ ಚೀನಾ ಮತ್ತು ಜಪಾನಿನ ಕಲೆಗಳಲ್ಲಿ ಈ ಟ್ರೀ ಸ್ಪ್ಯಾರೋಗಳನ್ನು ಚಿತ್ರಿಸಲಾಗುತ್ತಿತ್ತಲ್ಲದೇ, ಕೆಲವೊಮ್ಮೆ ಗಿಡಗಳಲ್ಲಿನ ಸಿಂಪಡಿಕೆ ಅಥವಾ ಹಾರುವ ಹಕ್ಕಿಗಳ(ಫ್ಲೈಯಿಂಗ್ ಫ್ಲಾಕ್) [೭೧] ಸಮೂಹದ ಚಿತ್ರಗಳನ್ನು ಚಿತ್ರಿಸಲಾಗುತ್ತಿತ್ತಲ್ಲದೇ, ಹಿರೋಶಿಗೆ ಯನ್ನೊಳಗೊಂಡ ಮಾರ್ಗದರ್ಶಿ ಚಿತ್ರಕಲಾವಿದರುಗಳು ಆಂಟಿಗ್ವಾ ಮತ್ತು ಬಾರ್ಬುಡಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್ , ಚೀನಾ ಮತ್ತು ದಿ ಗಾಂಬಿಯಾದ ಪೋಸ್ಟೇಜ್ ಸ್ಟಾಂಪ್(ಅಂಚೆ ಚೀಟಿ)ಗಳಲ್ಲಿ ಈ ಚಿತ್ರಗಳನ್ನು ಚಿತ್ರಿಸಿದ್ದರು. ಬೆಲಾರಸ್, ಬೆಲ್ಜಿಯಂ, ಕಾಂಬೋಡಿಯಾ, ಎಸ್ಟೋನಿಯಾ ಮತ್ತು ತೈವಾನ್ನಈ ಅಂಚೆ ಚೀಟಿಗಳಲ್ಲಿ ಸರಾಗವಾದ ಸಚಿತ್ರಗಳನ್ನು ಬಳಸಲಾಯಿತು..[೭೩] ಗುಬ್ಬಚ್ಚಿಗಳ ರೆಕ್ಕೆಬಡಿಯುವ ವಿಧಾನವು, ಸುಝುಮೆ ಒಡೊರಿ ಎಂಬ ಜಪಾನಿನ ಸಾಂಪ್ರದಾಯಿಕ ನೃತ್ಯದ ಉಗಮಕ್ಕೆ ಕಾರಣವಾಯಿತಲ್ಲದೇ, ನಂತರ ಹೋಕುಸಾಯಿ ಎಂಬ ಚಿತ್ರ ಕಲಾವಿದರಿಂದ ಇದನ್ನು ಚಿತ್ರಿಸಲಾಯಿತು.[೭೪]

ಪಿಲಿಪ್ಪೈನ್ಸ್ ನ ನಗರದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಟ್ರೀ ಸ್ಪ್ಯಾರೋವನ್ನು ಮಯಾ ಎಂದು ಕರೆಯಲ್ಪಟ್ಟರೆ, ಫಿಲಿಪಿನೋಸ್ ನ ನಗರ ಪ್ರದೇಶದಲ್ಲಿ ಈ ಹಕ್ಕಿಯನ್ನು ಅಲ್ಲಿಯ ರಾಷ್ಟ್ರೀಯ ಹಕ್ಕಿಯೆಂದು ಪರಿಗಣಿಸಲಾಯಿತು. ಪಿಲಿಪ್ಪೈನ್ಸ್ನ ಹಿಂದಿನ ರಾಷ್ಟ್ರೀಯ ಹಕ್ಕಿ [೭೫](೧೯೯೫ ರವರೆಗೆ ಅದು ಪಿಲಿಪ್ಪೈನ್ ಈಗಲ್) ಬ್ಲಾಕ್ ಹೆಡೆಡ್ ಮ್ಯುನಿಯಾ ಆಗಿದ್ದು, ಇದರ ಇನ್ನೊಂದು ಪ್ರಭೇದವನ್ನು ಮಯಾ ಎಂದು ಕರೆಯಲಾಗುತ್ತದೆ.[೭೬]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ BirdLife International (2008). Passer montanus. In: IUCN 2008. IUCN Red List of Threatened Species. Retrieved 29 January 2009.
 2. ೨.೦ ೨.೧ Mullarney et al. 1999, p. 342
 3. ೩.೦ ೩.೧ ೩.೨ ೩.೩ ೩.೪ "Tree Sparrow Passer montanus [Linnaeus, 1758]". Bird facts. British Trust for Ornithology. Retrieved ೩೦ January ೨೦೦೯. {{cite web}}: Check date values in: |accessdate= (help)
 4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ ೪.೮ Snow & Perrins 1998, pp. 1513–1515
 5. ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ೫.೧೦ ೫.೧೧ ೫.೧೨ ೫.೧೩ ೫.೧೪ ೫.೧೫ ೫.೧೬ ೫.೧೭ Clement, Harris & Davis 1993, pp. 463–465
 6. Mullarney et al. 1999, p. 343
 7. Lind, Johan (2004). "Compensatory bodily changes during moult in Tree Sparrows Passer montanus in Italy" (PDF). Ornis Fennica. 81: 1–9. Archived from the original (PDF) on 2015-11-07. Retrieved 2011-03-20. {{cite journal}}: Unknown parameter |coauthors= ignored (|author= suggested) (help)
 8. ೮.೦ ೮.೧ Lang, A. L. (1997). "Cultural evolution in the Eurasian Tree Sparrow : Divergence between introduced and ancestral populations". The Condor. ೯೯ (೨): ೪೧೩–೪೨೩. doi:10.2307/1369948. {{cite journal}}: Unknown parameter |coauthors= ignored (|author= suggested) (help)
 9. "F[inch]. ಮಬ್ಬು ಬಣ್ಣದ ರೆಕ್ಕೆಗಳು ಮತ್ತು ಬಾಲ, ಕಪ್ಪು ಮತ್ತು ಬೂದು ಬಣ್ಣದ ರೆಕ್ಕೆಗಳು
 10. Anderson 2006, p. 5
 11. Clement, Harris & Davis 1993, pp. 442–467
 12. Allende, Luis M. (2001). "The Old World sparrows (genus Passer) phylogeography and their relative abundance of nuclear mtDNA pseudogenes" (PDF). Journal of Molecular Evolution. 53 (2): 144–154. doi:10.1007/s002390010202. PMID 11479685. Archived from the original (PDF) on 2011-07-21. Retrieved 2011-03-20. {{cite journal}}: Unknown parameter |coauthors= ignored (|author= suggested) (help)
 13. Byers, Curson & Olsson 1995, pp. 267–268
 14. Linnaeus 1758, p. 183 F. remigibus rectricibusque fuscis, corpore griseo nigroque, alarum fascia alba gemina
 15. Brisson 1760, p. 36
 16. Summers-Smith 1988, p. 217
 17. Vaurie, Charles (1949). "Notes on some Ploceidae from western Asia". American Museum Novitates. 1406: 22–26.
 18. ರಾಜು, ಕೆ.; ಕೃಷ್ಣ, ಎಸ್. ಆರ್.; ಪ್ರೈಸ್, ಟ್ರೆವರ್ ಡಿ. (೧೯೭೩) "ಪೂರ್ವ ಘಟ್ಟಗಳಲ್ಲಿ ಟ್ರೀ ಸ್ಪ್ಯಾರೋ ಪಾಸರ್ ಮಾಂಟೇನಸ್ (ಎಲ್) ." ಜರ್ನಲ್ ಆಫ್ ದಿ ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ ೭೦ (೩): ೫೫೭–೫೫೮.
 19. ೧೯.೦ ೧೯.೧ Rasmussen & Anderton 2005
 20. Arlott 2007, p. 222
 21. ೨೧.೦ ೨೧.೧ Cocker & Mabey 2005, pp. 442–443
 22. Barlow, Jon C; Leckie, Sheridan N. "Eurasian Tree Sparrow (Passer montanus)". The Birds of North America Online (A. Poole, Ed.). Ithaca: Cornell Laboratory of Ornithology. Retrieved 30 January 2009.{{cite web}}: CS1 maint: multiple names: authors list (link)
 23. Forbush 1907, p. 306
 24. ೨೪.೦ ೨೪.೧ ೨೪.೨ Massam, Marion. "Sparrows" (PDF). Farmnote No. 117/99. Agriculture Western Australia. Archived from the original (PDF) on 12 August 2008. Retrieved 1 February 2009.
 25. ೨೫.೦ ೨೫.೧ ೨೫.೨ Field, Rob H. (2004). "Habitat use by breeding Tree Sparrows Passer montanus". Ibis. ೧೪೬ (೨): ೬೦–೬೮. doi:೧೦.೧೧೧೧/j.೧೪೭೪-೯೧೯X.೨೦೦೪.೦೦೩೫೬.x. {{cite journal}}: Check |doi= value (help); Unknown parameter |coauthors= ignored (|author= suggested) (help)
 26. Melville, David S. (1998). "Syntopy of Eurasian Tree Sparrow Passer montanus and House Sparrow P. domesticus in Inner Mongolia, China" (PDF). Forktail. ೧೩: ೧೨೫. {{cite journal}}: Unknown parameter |coauthors= ignored (|author= suggested) (help)[ಶಾಶ್ವತವಾಗಿ ಮಡಿದ ಕೊಂಡಿ]
 27. ೨೭.೦ ೨೭.೧ Summers-Smith 1988, p. 220
 28. ೨೮.೦ ೨೮.೧ "An Age entry for Passer montanus". AnAge, the animal ageing and longevity database. Retrieved 30 January 2009.
 29. ೨೯.೦ ೨೯.೧ ೨೯.೨ ೨೯.೩ Coward 1930, pp. 56–58
 30. ೩೦.೦ ೩೦.೧ Robinson & Chasen 1927–1939, Chapter 55 (PDF) 284–285
 31. ಬೊಚೆನ್‌ಸ್ಕಿ, ಮಾರ್ಸಿನ್ ”ನೆಸ್ಟಿಂಗ್ ಆಫ್ ದಿ ಸ್ಪ್ಯಾರೋಸ್ ಪಾಸರ್ ಇನ್ ದಿ ವೈಟ್ ಸ್ಟಾರ್ಕ್ ಸಿಕೊನಿಯಾ ಸಿಕೊನಿಯಾ ನೆಸ್ಟ್ಸ್ ಇನ್ ಎ ಸ್ಟಾರ್ಕ್ ಕಾಲೋನಿ ಇನ್ ಕ್ಲೊಪಾಟ್ (ಡಬ್ಲು ಪೋಲ್ಯಾಂಡ್) Archived 2011-09-24 ವೇಬ್ಯಾಕ್ ಮೆಷಿನ್ ನಲ್ಲಿ. (ಪಿಡಿಎಫ್) ಇನ್ Pinowski, Jan (ed.) (2005). "International Studies on Sparrows". 30: 39–41. {{cite journal}}: |first= has generic name (help); Cite journal requires |journal= (help)
 32. ಶ್ಜೆಚೊವ್‌ಸ್ಕಿ, ಪಾವೆಲ್. ”ನೆಸ್ಟಿಂಗ್ ಆಫ್ ಟ್ರೀ ಸ್ಪ್ಯಾರೋ ಪಾಸರ್ ಮೊಂಟಾನಸ್ ಇನ್ ದಿ ನೆಸ್ಟ್ ಆಫ್ ಬಾರ್ನ್ ಸ್ವ್ಯಾಲೋ ಹಿರುಂಡೊ ರಸ್ಟಿಕಾ ಇನ್ Pinowski, Jan (ed.) (2007). "International Studies on Sparrows" (PDF). 32: 33–35. {{cite journal}}: |first= has generic name (help); Cite journal requires |journal= (help)[ಶಾಶ್ವತವಾಗಿ ಮಡಿದ ಕೊಂಡಿ]
 33. ಹೆಗಿ, ಝಡ್.; ಸಾಸ್ವರಿ, ಎಲ್. (೧೯೯೪) "ಆಲ್ಟರ್ನೇಟೀವ್ ರೀಪ್ರೊಡಕ್ಟೀವ್ ಟ್ಯಾಕ್ಟಿಕ್ಸ್ ಅಸ್ ವಯಬಲ್ ಸ್ಟ್ರ್ಯಾಟಜೀಸ್ ಇನ್ ದಿ ಟ್ರೀ ಸ್ಪ್ಯಾರೋ (ಪಾಸರ್ ಮೊಂಟಾನಸ್ ). Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ." (ಪಿಡಿಎಫ್) ಆರ್ನಿಸ್ ಹಂಗೇರಿಯಾ  : ೯–೧೮
 34. García-Navas, Vicente (2008). "Effect of nestbox type on occupancy and breeding biology of tree sparrows Passer montanus in central Spain" (PDF). Ibis. ೧೫೦: ೩೫೬–೩೬೪. doi:೧೦.೧೧೧೧/j.೧೪೭೪-೯೧೯X.೨೦೦೮.೦೦೭೯೯.x. {{cite journal}}: Check |doi= value (help); Unknown parameter |coauthors= ignored (|author= suggested) (help)[ಶಾಶ್ವತವಾಗಿ ಮಡಿದ ಕೊಂಡಿ]
 35. ೩೫.೦ ೩೫.೧ Pinowski, Jan (2006). "Significance of the breeding season for autumnal nest-site selection by Tree Sparrows Passer montanus". Acta Ornithologica. 41 (1): 83–87. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
 36. ಪಿನೋವ್‌ಸ್ಕಿ, ಜಾನ್; ಹ್ಯಾಮನ್, ಆಡ್ರೆಝ್; ಜೆರ್ಝಕ್, ಲೆಸ್ಝೆಕ್; ಪಿನೋವ್‌ಸ್ಕ, ಬಾರ್ಬರಾ; ಬಾರ್ಕೊವ್‌ಸ್ಕಾ, ಮಿಲೊಸ್ಲೇವಾ; ಗ್ರೋಡ್ಝ್‌ಕಿ, ಆಂಡ್ರೆಝ್; ಹ್ಯಾಮನ್, ಕ್ರಿಸ್ಝೊಫ್ (೨೦೦೬) "ದಿ ಥರ್ಮಲ್ ಪ್ರಾಪರ್ಟೀಸ್ ಆಫ್ ಸಮ್ ನೆಸ್ಟ್ಸ್ ಆಫ್ ದಿ ಯುರೇಶಿಯನ್ ಟ್ರೀ ಸ್ಪ್ಯಾರೋ ಪಾಸರ್ ಮೊಂಟೇನಸ್ [ಶಾಶ್ವತವಾಗಿ ಮಡಿದ ಕೊಂಡಿ]". (ಪಿಡಿಎಫ್) ಜರ್ನಲ್ ಆಫ್ ಥರ್ಮಲ್ ಬಯಾಲಜಿ ೩೧ : ೫೭೩–೫೮೧
 37. Sasvari, L. (1994). "Colonial and solitary nesting choice as alternative breeding tactics in tree sparrow Passer montanus". Journal of animal ecology. 63 (2): 265–274. doi:10.2307/5545. {{cite journal}}: Cite has empty unknown parameters: |quotes= and |month= (help); Unknown parameter |coauthors= ignored (|author= suggested) (help)
 38. Heeb, P. (2001). "Pair copulation frequency correlates with female reproductive performance in Tree Sparrows Passer montanus". Journal of Avian Biology. ೩೨ (೨): ೧೨೦–೧೨೬. doi:೧೦.೧೦೩೪/j.೧೬೦೦-೦೪೮X.೨೦೦೧.೩೨೦೨೦೪.x. {{cite journal}}: Check |doi= value (help); Unknown parameter |month= ignored (help)
 39. Seress, G. (2007). "Extra-pair paternity of tree sparrow (Passer montanus) in a semi-urban population" (PDF). TISCIA. 36: 17–21. Archived from the original (PDF) on 2008-12-09. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)
 40. Cordero, P. (1991). "Phenotypes of adult hybrids between House Sparrows Passer domesticus and Tree Sparrow Passer montanus". Bulletin of the British Ornithologists' Club. ೧೧೧: ೪೪–೪೬.
 41. Solberg, Erling Johan (2000). "Fertile House Sparrow X Tree Sparrow (Passer domesticus X Passer montanus) hybrids?" (PDF). Journal of Ornithology. ೧೪೧ (೧): ೧೦–೧೦೪. doi:೧೦.೧೦೦೭/BF೦೧೬೫೧೭೭೭. Archived from the original (PDF) on 2012-02-15. Retrieved 2011-03-20. {{cite journal}}: Check |doi= value (help); Cite has empty unknown parameter: |quotes= (help); Unknown parameter |coauthors= ignored (|author= suggested) (help); Unknown parameter |month= ignored (help)
 42. ಸೋಲ್ಬರ್ಗ್, ಇ. ಜೆ.; ಜೆನ್ಸೆನ್, ಎಚ್.; ರಿಂಗ್‌ಸ್ಬಿ, ಟಿ. ಎಚ್; ಸೇದರ್, ಬಿ.-ಇ. (೨೦೦೬) "ಫಿಟ್ನೆಸ್ ಕಾನ್ಸೀಕ್ವೆನ್ಸಸ್ ಆಫ್ ಹೈಬ್ರಿಡೈಸೇಶನ್ ಬಿಟ್ವೀನ್ ಹೌಸ್ ಸ್ಪ್ಯಾರೋಸ್ (ಪಾಸರ್ ಡೊಮೊಸ್ಟಿಕಸ್ ) ಅಂಡ್ ಟ್ರೀ ಸ್ಪ್ಯಾರೋಸ್ (ಪಿ. ಮೊಂಟಾನಸ್ ) Archived 2012-02-15 ವೇಬ್ಯಾಕ್ ಮೆಷಿನ್ ನಲ್ಲಿ.". (ಪಿಡಿಎಫ್) ಜರ್ನಲ್ ಆಫ್ ಆರ್ನಿಥಾಲಜಿ ೧೪೭ : ೫೦೪–೫೦೬.
 43. ಸೋಲ್ಬರ್ಗ್, ಇ. ಜೆ.; ರಿಂಗ್‌ಸ್ಬಿ, ಟಿ. ಎಚ್. (೧೯೯೬). "ಹೈಬ್ರಿಡೈಸೇಶನ್ ಬಿಟ್ವೀನ್ ಹೌಸ್ ಸ್ಪ್ಯಾರೋ ಪಾಸರ್ ಡೊಮೆಸ್ಟಿಕಸ್ ಅಂಡ್ ಟ್ರೀ ಸ್ಪ್ಯಾರೋ ಪಾಸರ್ ಮೊಂಟಾನಸ್ Archived 2012-02-15 ವೇಬ್ಯಾಕ್ ಮೆಷಿನ್ ನಲ್ಲಿ.". (ಪಿಡಿಎಫ್) ಜರ್ನಲ್ ಫರ್ ಆರ್ನಿಥಾಲಜಿ ೧೩೭ (೪): ೫೨೫–೫೨೮.
 44. ತೊರ್ಡಾ, ಜಿ.; ಲೈಕರ್, ಎ.; ಬರ್ತಾ, ಝಡ್. (೨೦೦೪) ಡಾಮಿನೆನ್ಸ್ ಹೈರಾರ್ಕಿ ಅಂಡ್ ಸ್ಟೇಟಸ್ ಸಿಗ್ನಲಿಂಗ್ ಇನ್ ಕ್ಯಾಪ್ಟೀವ್ ಟ್ರೀ ಸ್ಪ್ಯಾರೋ (ಪಾಸರ್ ಮೊಂಟಾನಸ್ ) ಫ್ಲಾಕ್ಸ್. (ಪಿಡಿಎಫ್) ಆಕ್ಟಾ ಝುವಲಾಜಿಕಾ ಅಕಾಡೆಮಿಯೇ ಸೈನ್ಟಿಯರಮ್ ಹಂಗೇರಿಸೇ ೫೦ (೧): ೩೫–೪೪
 45. Barta, Zoltán (200). "The effects of predation risk on the use of social foraging tactics". Animal Behaviour. 67, (2): 301–308. doi:10.1016/j.anbehav.2003.06.012. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)CS1 maint: extra punctuation (link)
 46. ಉಲ್ಲೇಖ ದೋಷ: Invalid <ref> tag; no text was provided for refs named naturalengland
 47. ಕಾಸ್ಟಾಂಟಿನಿ, ಡೇವಿಡ್; ಕ್ಯಾಸಾ ಗ್ರಾಂಡೆ, ಸ್ಟಿಫಾನಿಯಾ; ಡಿ ಲಿಯೆಟೊ, ಜಿಯುಸೆಪ್ಪೆ; ಫರ್ಫನಿ, ಆಲ್ಬರ್ಟೊ; ಡೆಲ್’ಒಮೊ, ಜಿಯಾಕೊಮೊ (೨೦೦೫) "ಕನ್ಸಿಸ್ಟೆಂಡ್ ಡಿಫರೆನ್ಸಸ್ ಇನ್ ಫೀಡಿಂಗ್ ಹ್ಯಾಬಿಟ್ಸ್ ಬಿಟ್ವೀನ್ ನೈಬರಿಂಗ್ ಬ್ರೀಡಿಂಗ್ ಕೆಸ್ಟ್ರೆಲ್ಸ್" (ಪಿಡಿಎಫ್) ಬಿಹೇವಿಯರ್ ೧೪೨ : ೧೪೦೯–೧೪೨೧
 48. ಶಾವ್, ಎಮ್.; ಹೌನ್ಸಮ್, ಟಿ.; ಲಿಯು, ಎನ್. (೨೦೦೭) "ವಾಯುವ್ಯ ಚೈನಾದ ಮರುಭೂಮಿಯಲ್ಲಿನ ಚಿಕ್ಕ ಗೂಬೆ (ಅಥೆನೆ ನೊಕ್ಟುವಾ ) ಯ ಬೇಸಿಗೆ ಆಹಾರ." ಜರ್ನಲ್ ಆಫ್ ಆರಿಡ್ ಎನ್ವಿರಾನ್ಮೆಂಟ್ಸ್ ೬೮ (೪): ೬೮೩–೬೮೭
 49. ಒಬಚ್, ಜಾನ್; ಕ್ರಿಸ್ಟಿನ್, ಆಂಟನ್ (೨೦೦೪) "ಪ್ರೆ ಕಾಂಪೊಸಿಶನ್ ಆಫ್ ದಿ ಲಿಟಲ್ ಔಲ್ ಅಥೆನೆ ನೊಕ್ಟುವಾ ಇನ್ ಅನ್ ಆರಿಡ್ ಝೋನ್ (ಈಜಿಪ್ಟ್, ಸಿರಿಯಾ, ಇರಾನ್) Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ.". ಫೋಲಿಯ ಝುವಾಲಜಿಕಲ್ ೫೩ (೧): ೬೫–೭೯
 50. ಬರ್ತೋಲ್ಡ್, ಪೀಟರ್ (೨೦೦೪) "ಏರಿಯಲ್ “ಫ್ಲೈಕ್ಯಾಚಿಂಗ್”: ನಾನ್-ಪ್ರಿಡೇಟರಿ ಬರ್ಡ್ಸ್ ಕ್ಯಾನ್ ಕ್ಯಾಚ್ ಸ್ಮಾಲ್ ಬರ್ಡ್ಸ್ ಇನ್ ಫ್ಲೈಟ್". ಜರ್ನಲ್ ಆಫ್ ಆರ್ನಿಥಾಲಜಿ ೧೪೫ (೩): ೨೭೧–೨೭೨
 51. ಬರ್ಟೊಲಿನೊ, ಸ್ಯಾಂಡ್ರೊ; ಗಿಬರ್ಟಿ, ಎಲೆನಾ; ಪೆರ್ರೋನ್, ಆರೆಲಿಯೊ (೨೦೦೧) "ಫೀಡಿಂಗ್ ಎಕಾಲಜಿ ಆಫ್ ದಿ ಲಾಂಗ್ ಇಯರ್ಡ್ ಔಲ್ (ಏಷಿಯೊ ಓಟಸ್ ) ಇನ್ ನಾರ್ಥರ್ನ್ ಇಟಲಿ: ಈಸ್ ಇಟ್ ಅ ಡಯಟರಿ ಸ್ಪೆಷಲಿಸ್ಟ್? ಕೆನೆಡಿಯನ್ ಜರ್ನಲ್ ಆಫ್ ಝುವಾಲಜಿ ೭೯ (೧೨): ೨೧೯೨–೨೧೯೮
 52. Lind, J. (2001). "Escape flight in moulting Eurasian Tree Sparrows (Passer montanus)" (PDF). Functional Ecology. 15: 29–35. doi:10.1046/j.1365-2435.2001.00497.x. Archived from the original (PDF) on 2016-03-03. Retrieved 2011-03-20.
 53. Veiga, J. P. (1990). "A comparative study of reproductive adaptations in house and tree sparrows". The Auk. ೧೦೭: ೪೫–೫೯.
 54. ಕಾರ್ಡೆರೊ, ಪಿ. ಜೆ.; ಸ್ಯಾಲೆಟ್, ಎಮ್. "ಬ್ರೀಡಿಂಗ್ ಸೀಸನ್, ಪಾಪ್ಯುಲೇಶನ್ ಅಂಡ್ ರೀಪ್ರೊಡಕ್ಷನ್ ರೇಟ್ ಆಫ್ ದಿ ಟ್ರೀ ಸ್ಪ್ಯಾರೋ (ಪಾಸರ್ ಮೊಂಟಾನಸ್ , ಎಲ್.) ಇನ್ ಬಾರ್ಸಿಲೋನಾ, ಎನ್‌ಇ ಸ್ಪೇನ್." Pinowski & Summers-Smith 1990, pp. 169–177ರಲ್ಲಿ
 55. ಕಾರ್ಡಿರೊ, ಪಿ. ಜೆ. "ಪ್ರಿಡೇಶನ್ ಇನ್ ಹೌಸ್ ಸ್ಪ್ಯಾರೋ ಅಂಡ್ ಟ್ರೀ ಸ್ಪ್ಯಾರೋ (ಪಾಸರ್ ಎಸ್‌ಪಿ.) ನೆಸ್ಟ್ಸ್" ಇನ್ ಪಿನೊವ್‌ಸ್ಕಿ. (೧೯೯೧) ಪುಟಗಳು.೧೧೧–೧೨೦.
 56. ಸ್ಕೊರಾಕಿ, ಮಸಿಯೆಜ್ (೨೦೦೨) "ಥ್ರೀ ನ್ಯೂ ಸ್ಪೀಷೀಸ್ ಆಫ್ ದಿ ಎಕ್ಟೋಪ್ಯಾರಾಸಿಟಿಕ್ ಮೈಟ್ಸ್ ಆಫ್ ದಿ ಜಿನಸ್ ಸಿರಿಂಗೋಫಿಲಾಯ್ಡಸ್ ಕೆಥ್ಲೇ, 1970 (ಅಕರಿ: ಸಿರಿಂಗೊಫಿಲಿಡೇ) ಫ್ರಂ ಪಾಸರಿಫಾರ್ಮ್ ಬರ್ಡ್ಸ್ ಫ್ರಂ ಸ್ಲೊವೇಕಿಯಾ. (ಪಿಡಿಎಫ್) ಫೋಲಿಯಾ ಪ್ಯಾರಸೈಟೊಲಾಜಿಕಾ ೪೯ : ೩೦೫–೩೧೩
 57. ಸುಥಾಸನೀ ಬೋಂಕಾಂಗ್; ವಿನಾ ಮೆಕ್ವಿಚಯ್ (೧೯೮೭) "ಆರ್ತ್ರೋಪಾಡ್ ಪ್ಯಾರಾಸೈಟ್ಸ್ ಆಫ್ ದಿ ಟ್ರೀ ಸ್ಪ್ಯಾರೋ (ಪಾಸರ್ ಮೊಂಟಾನಸ್ ಲಿನ್ನೇಯಸ್, 1758) ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ. (ಪಿಡಿಎಫ್) ಜರ್ನಲ್ ಆಫ್ ದಿ ಸೈಂಟಿಫಿಕ್ ಸೊಸೈಟಿ ಆಫ್ ಥೈಲ್ಯಾಂಡ್ ೧೩ : ೨೩೧–೨೩೭
 58. ಮೈಂಕಾ, ಎಸ್.ಎ.; ಮೆಲ್ವಿಲ್ಲೇ ಡಿ. ಎಸ್.; ಗಲ್ಸೊವರ್ತಿ ಎ.; ಬ್ಲ್ಯಾಕ್, ಎಸ್. ಆರ್‍. (೧೯೯೪) "ನೆಮಿಡೊಕೊಪ್ಟೆಸ್ ಎಸ್‌ಪಿ. ಆನ್ ವೈಲ್ಡ್ ಪಾಸರಿನ್ಸ್ ಅಟ್ ದಿ ಮೈ ಪೊ ನೇಚರ್ ರಿಸರ್ವ್, ಹಾಂಗ್ ಕಾಂಗ್ Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ.".(ಪಿಡಿಎಫ್) ಜರ್ನಲ್ ಆಫ್ ವೈಲ್ಡ್ ಲೈಫ್ ಡಿಸೀಸಸ್ ೩೦ (೨): ೨೫೪–೨೫೬
 59. ಪುಚಲ, ಪೀಟರ್ (೨೦೦೪) "ಡೆಟ್ರಿಮೆಂಟಲ್ ಎಫೆಕ್ಟ್ಸ್ ಆಫ್ ಲಾರ್ವಲ್ ಬ್ಲೋ ಫ್ಲೈಸ್ (ಪ್ರೋಟೊಕ್ಯಾಲಿಫೊರಾ ಅಝುರಿಯ ) ಆನ್ ನೆಸ್ಟ್ಲಿಂಗ್ಸ್ ಅಂಡ್ ಬ್ರೀಡಿಂಗ್ ಸಕ್ಸೆಸ್ ಆಫ್ ಟ್ರೀ ಸ್ಪ್ಯಾರೋಸ್ (ಪಾಸರ್ ಮೊಂಟಾನಸ್)". ಕೆನೆಡಿಯನ್ ಜರ್ನಲ್ ಆಫ್ ಝುವಾಲಜಿ ೮೨ (೮): ೧೨೮೫–೧೨೯೦ doi:10.1139/z04-111
 60. Pinowska, Barbara (2004). "The effect of egg size on growth and survival of the Tree Sparrow Passer montanus nestlings". Acta Ornithologica. 39 (2): 121–135. {{cite journal}}: Cite has empty unknown parameter: |quotes= (help); Unknown parameter |coauthors= ignored (|author= suggested) (help)
 61. ಪಿನೊವ್‌ಸ್ಕಿ, ಜೆ.; ಬಾರ್ಕೊವ್‌ಸ್ಕಾ ಎಮ್.; ಕ್ರುಸ್ಝೆವಿಸ್ಝ್ ಎ.ಎಚ್.; ಕ್ರುಸ್ಝೆವಿಸ್ಝ್ ಎ.ಜಿ. (೧೯೯೪) ದಿ ಕಾಸಸ್ ಆಫ್ ದಿ ಮಾರ್ಟಾಲಿಟಿ ಆಫ್ ಎಗ್ಸ್ ಅಂಡ್ ನೆಸ್ಟ್‌ಲಿಂಗ್ಸ್ ಆಫ್ ಪಾಸರ್ ಎಸ್‌ಪಿಪಿ. (ಪಿಡಿಎಫ್) ಜರ್ನಲ್ ಆಫ್ ಬಯೋಸೈನ್ಸ್ . ೧೯ : ೪೪೧–೪೫೧
 62. ಯುಮಿ ಉನೆ; ಅಸುಕಾ ಸಾನ್ಬೆ; ಸತೊರು ಸುಝುಕಿ; ತಕೆಶಿ ನಿವ; ಕಝುಟೊ ಕವಾಕಮಿ; ರೀಕೊ ಕುರೊಸವಾ, (ಪಿಡಿಎಫ್) ಜಪಾನ್ ಜರ್ನಲ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ೬೧ : ೧೬೬–೧೬೭
 63. ಶುರುಲಿಂಕೊವ್, ಪೀಟರ್; ಗೋಲೆಮ್ಯಾನ್‌ಸ್ಕಿ, ವ್ಯಾಸಿಲ್ (೨೦೦೩) "ಬಲ್ದೇರಿಯಾದ ಕಾಡು ಪಕ್ಷಿಗಳ ಪ್ಲಾಸ್ಮೋಡಿಯಂ ಮತ್ತು ಲ್ಯೂಕೊಸೈಟೊಝೂನ್ (ಸ್ಪೋರೋಝುವಾ: ಹೀಮೊಸ್ಪೊರಿಡಾ). (ಪಿಡಿಎಫ್) ಆಕ್ಟಾ ಪ್ರೋಟೋಝೂವಾಲಿಕಾ ೪೨ : ೨೦೫–೨೧೪
 64. ಝಡ್. ಕೊವು; ಎಫ್. ಎಮ್, ಲೀ; ಜೆ. ಯು; ಝಡ್. ಜೆ. ಫ್ಯಾನ್; ಝಡ್. ಎಚ್. ಯಿನ್; ಸಿ. ಎಕ್ಸ್. ಜಿಯ; ಕೆ. ಜೆ. ಕ್ಸಿಯಾಂಗ್; ವೈ. ಎಚ್. ಸನ್; ಎಕ್ಸ್. ಡಬ್ಲು. ಝಾಂಗ್; ಎಕ್ಸ್. ಎಮ್. ಡಬ್ಲುಯು; ಎಕ್ಸ್. ಬಿ. ಗಾಒ; ಟಿ. ಎಕ್ಸ್. ಲಿ (೨೦೦೫) "ಚೈನಾದಲ್ಲಿ ಟ್ರೀ ಸ್ಪ್ಯಾರೋಗಳಿಂದ ಹರಡಿದ H5N1 ವೈರಸ್‌ಗಳು ಏವಿಯನ್ ಇನ್‌ಫ್ಲುಯೆಂಝಾದ ಹೊಸ ಜಿನೋಟೈಪ್[ಶಾಶ್ವತವಾಗಿ ಮಡಿದ ಕೊಂಡಿ]. (ಪಿಡಿಎಫ್) ಜರ್ನಲ್ ಆಫ್ ವಿರೊಲಜಿ ೭೯ (೨೪): ೧೫೪೬೦–೧೫೪೬೬
 65. Lee, Kelly A. (2005). "Responding to inflammatory challenges is less costly for a successful avian invader, the house sparrow (Passer domesticus), than its less-invasive congener" (PDF). Oecologia. 145 (2): 244–251. doi:10.1007/s00442-005-0113-5. PMID 15965757. Archived from the original (PDF) on 2006-09-21. Retrieved 2011-03-20. {{cite journal}}: Unknown parameter |coauthors= ignored (|author= suggested) (help)
 66. Erritzoe J.; Mazgajski T. D.; Rejt L. (2003). "Bird casualties on European roads — a review" (PDF). Acta Ornithologica. 38 (2): 77–93.{{cite journal}}: CS1 maint: multiple names: authors list (link)
 67. "Eurasian Tree Sparrow Passer montanus" (PDF). Birds in Europe. BirdLife International. Archived from the original (PDF) on 2008-12-01. Retrieved ೩೧ January ೨೦೦೯. {{cite web}}: Check date values in: |accessdate= (help)
 68. ೬೮.೦ ೬೮.೧ "Research highlights decline of farm and forest birds". News, 8 June 2005. BirdLife International. Archived from the original on 7 ಜೂನ್ 2007. Retrieved ೩ February ೨೦೦೯. {{cite web}}: Check date values in: |accessdate= (help)
 69. "Tree sparrow". Conservation case studies. Royal Society for the Protection of Birds. Archived from the original on 2010-01-15. Retrieved ೩ February ೨೦೦೯. {{cite web}}: Check date values in: |accessdate= (help)
 70. "Tree Sparrow Passer montanus". Breeding Birds in the Wider Countryside. British Trust for Ornithology. Archived from the original on 2008-02-27. Retrieved ೩ February ೨೦೦೯. {{cite web}}: Check date values in: |accessdate= (help)
 71. ೭೧.೦ ೭೧.೧ McCarthy, Michael (2 August 2006). "The secret life of sparrows". The Independent. Archived from the original on 20 ಡಿಸೆಂಬರ್ 2010. Retrieved 30 January 2009.
 72. Dix, M. E. (1995). "Influences of trees on abundance of natural enemies of insect pests: a review". Agroforestry Systems. 29 (3): 303–311. doi:10.1007/BF00704876. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
 73. "Stamps showing Eurasian Tree Sparrow Passer montanus". Birdtheme.org. Retrieved 18 February 2009.
 74. "Sketches by Hokusai (Hokusai Manga)". Nipponia No.27 December 15, 2003. Retrieved 6 February 2009.
 75. Labro, Vicente (19 July 2007). "2 Philippine eagles spotted in Leyte forest". Philippine Daily Inquirer. Archived from the original on 10 ಮೇ 2012. Retrieved ೨೧ November ೨೦೦೮. {{cite news}}: Check date values in: |accessdate= (help)
 76. Kennedy et al. 2000, p. 343

ಉಲ್ಲೇಖಿಸಲ್ಪಟ್ಟ ಕೃತಿಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು‌[ಬದಲಾಯಿಸಿ]