ವಿಷಯಕ್ಕೆ ಹೋಗು

ಬರ್ಮಿಂಗ್ಹ್ಯಾಮ್

ನಿರ್ದೇಶಾಂಕಗಳು: 52°29′1″N 1°54′23″W / 52.48361°N 1.90639°W / 52.48361; -1.90639
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Birmingham
City and Metropolitan borough
Birmingham's skyline with Holloway Circus Tower, The Rotunda and Selfridges Building visible.
Birmingham's skyline with Holloway Circus Tower, The Rotunda and Selfridges Building visible.
Nickname(s): 
"Brum", "Brummagem", "Second City", "City of a thousand trades", "Workshop of the World"
Motto: 
Forward
Birmingham shown within England and the West Midlands
Birmingham shown within England and the West Midlands
Sovereign stateಗ್ರೇಟ್ ಬ್ರಿಟನ್ United Kingdom
Constituent countryಇಂಗ್ಲೆಂಡ್ ಇಂಗ್ಲೆಂಡ್
RegionWest Midlands
Ceremonial countyWest Midlands
Admin HQThe Council House
Founded7th century
Municipal borough1838
City1889
Government
 • TypeMetropolitan borough
 • BodyBirmingham City Council
 • Lord MayorMichael Wilkes
 • Deputy Lord MayorChauhdry Abdul Rashid
 • Council LeaderMike Whitby (C)
 • Council ControlConservative / Liberal Democrat Progressive Partnership
Area
 • Total೨೬೭.೭೭ km (೧೦೩.೩೯ sq mi)
Elevation
೧೪೦ m (೪೬೦ ft)
Population
 (2008 est.)
 • Totalಟೆಂಪ್ಲೇಟು:EnglishDistrictPopulation ([[List of English districts by population|Ranked ಟೆಂಪ್ಲೇಟು:EnglishDistrictRank]])
 • Density೩,೭೩೯/km (೯,೬೮೦/sq mi)
 • Conurbation
೨೨,೮೪,೦೯೩
 • Ethnicity
(2007 estimates[])
೬೬.೭% White (೬೨.೧% White British)
೨೧.೦% South Asian
೬.೭% Black
೩.೨% Mixed Race
೧.೨% Chinese
೧.೨% Other
Time zoneUTC+0 (Greenwich Mean Time)
 • Summer (DST)UTC+1 (British Summer Time)
Postcode
Area code0121
ISO 3166 codeGB-BIR
ONS code00CN
OS grid referenceSP066868
NUTS 3UKG31
Websitebirmingham.gov.uk

ಬರ್ಮಿಂಗ್ಹ್ಯಾಮ್‌ (pronounced /ˈbɜːmɪŋəm/ ( listen), BUR-ming-əm, ಸ್ಥಳೀಯವಾಗಿ /ˈbɝːmɪŋɡəm/ BIIR-ming-gəm) ಇಂಗ್ಲೆಂಡ್‌ವೆಸ್ಟ್‌ ಮಿಡ್ಲೆಂಡ್ಸ್‌ ಕೌಂಟಿಯಲ್ಲಿರುವ ನಗರ ಹಾಗೂ ಮಹಾನಗರ ನಗರವಿಭಾಗವಾಗಿದೆ.

ಇಸವಿ 2008ರಲ್ಲಿನ ಅಂದಾಜಿನ ಪ್ರಕಾರ, 1,015,800ರಷ್ಟು ಜನಸಂಖ್ಯೆ ಹೊಂದಿರುವ ಬರ್ಮಿಂಗ್ಹ್ಯಾಮ್‌, ಲಂಡನ್‌ ಹೊರತುಪಡಿಸಿ ಅತಿಹೆಚ್ಚು ಜನಸಂಖ್ಯೆಯುಳ್ಳ ಬ್ರಿಟಿಷ್‌ ನಗರವಾಗಿದೆ.[] ಈ ನಗರವು ವೆಸ್ಟ್‌ ಮಿಡ್ಲೆಂಡ್ಸ್‌ ನಗರಕೂಟದ ಮಧ್ಯಭಾಗದಲ್ಲಿದೆ. ಇಸವಿ 2001ರ ಜನಗಣತಿಯ ಪ್ರಕಾರ 2,284,093ರಷ್ಟು ಜನಸಂಖ್ಯೆ ಹೊಂದಿರುವ ಈ ನಗರವು ಯುನೈಟೆಡ್‌ ಕಿಂಗ್ಡಮ್‌ನಲ್ಲೇ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಪ್ರದೇಶವಾಗಿದೆ.[] 3,683,000ದಷ್ಟು ಜನಸಂಖ್ಯೆ ಹೊಂದಿರುವ ಬರ್ಮಿಂಗ್ಹ್ಯಾಮ್‌ನ ಮಹಾನಗರ ಕ್ಷೇತ್ರವು, ಯುನೈಟೆಡ್‌ ಕಿಂಗ್ಡಮ್‌ನ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳದ್ದಾಗಿದೆ. ಈ ಮಹಾನಗರವು ಸುತ್ತಮುತ್ತಲ ಪಟ್ಟಣಗಳನ್ನು ವ್ಯಾಪಿಸಿಕೊಂಡು, ಪ್ರಯಾಣದ ಮೂಲಕ ಅವುಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ.[]

ಬರ್ಮಿಂಗ್ಹ್ಯಾಮ್‌ ಇಂಗ್ಲೆಂಡ್‌ನಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯ ಕೇಂದ್ರಬಿಂದುವಾಗಿತ್ತು. ಇದರ ಫಲವಾಗಿ, ಬರ್ಮಿಂಗ್ಹ್ಯಾಮ್‌ ನಗರವನ್ನು 'ವಿಶ್ವದ ಕಾರ್ಯಾಗಾರ' ಅಥವಾ 'ಸಾವಿರ ವಾಣಿಜ್ಯಗಳ ನಗರ' ಎನ್ನಲಾಗಿದೆ.[] ಬರ್ಮಿಂಗ್ಹ್ಯಾಮ್‌ನ ಕೈಗಾರಿಕಾ ಪ್ರಾಮುಖ್ಯತೆಯು ಕಡಿಮೆಯಾಗಿದೆಯಾದರೂ, ಅದು ರಾಷ್ಟ್ರೀಯ ಮಟ್ಟದ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಿದೆ. ವಾಣಿಜ್ಯ ಆರಂಭಿಸಲು ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಎರಡನೆಯ ಅತ್ಯುತ್ತಮ ಸ್ಥಳ ಎನ್ನಲಾಗಿದೆ.[] ಬರ್ಮಿಂಗ್ಹ್ಯಾಮ್‌ ಮಹಾಸಭೆಗಳು, ಸಮಾರಂಭಗಳು ಹಾಗೂ ನೆಲೆಗೊಂಡಿರುವ ಹೈಟೆಕ್‌, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಆಗರವಾಗಿದೆ. ಇಲ್ಲಿ ಮೂರು ವಿಶ್ವವಿದ್ಯಾನಿಲಯಗಳಿರುವುದರಿಂದ ಇದಕ್ಕೆ ಪೂರಕವಾಗಿದೆ. ವಿದೇಶೀ ಪ್ರವಾಸಿಗರ ದೃಷ್ಟಿಯಿಂದ ಬರ್ಮಿಂಗ್ಹ್ಯಾಮ್‌ UKಯಲ್ಲಿ ನಾಲ್ಕನೆ ಅತಿ ಹೆಚ್ಚು ಸಂದರ್ಶಿತ ನಗರವಾಗಿದೆ.[] ಈ ನಗರವು UKಯಲ್ಲಿ ಎರಡನೆಯ ಅತಿ ದೊಡ್ಡ ನಗರದ ಆರ್ಥಿಕತೆಯಾಗಿದೆ.[] ಇದನ್ನು ಆಗಾಗ್ಗೆ ಎರಡನೆಯ ನಗರ (Second City) ಎನ್ನಲಾಗಿದೆ.

ಮರ್ಸರ್‌ ಇಂಡೆಕ್ಸ್‌ ಆಫ್‌ ವರ್ಲ್ಡ್‌ವೈಡ್‌ ಸ್ಟಾಂಡರ್ಡ್ಸ್‌ ಆಫ್‌ ಲಿವಿಂಗ್‌ ಸಮೀಕ್ಷೆಯ ಪ್ರಕಾರ, 2010ರಲ್ಲಿ, ಬರ್ಮಿಂಗ್ಹ್ಯಾಮ್‌ ವಿಶ್ವದಲ್ಲಿ ವಾಸಿಸಲು ಯೋಗ್ಯ ನಗರಗಳ ಪಟ್ಟಿಯಲ್ಲಿ 55ನೆಯ ಸ್ಥಾನ ಗಳಿಸಿತು.[] ಬೃಹತ್‌ ನಗರ ಯೋಜನೆ (Big City Plan) ಎಂಬುದು ದೊಡ್ಡ ಪುನರಾಭಿವೃದ್ಧಿ ಯೋಜನೆಯಾಗಿದೆ. ಇದು ನಗರ ಕೇಂದ್ರದಲ್ಲಿ ನಡೆಯುತ್ತಿದೆ. ಇಪ್ಪತ್ತು ವರ್ಷಗಳೊಳಗೆ ಬರ್ಮಿಂಗ್ಹ್ಯಾಮ್‌ನ್ನು ವಿಶ್ವದಲ್ಲಿನ 20 ವಾಸಿಸಲು ಯೋಗ್ಯ ನಗರಗಳ ಪಟ್ಟಿಗೆ ಸೇರಿಸುವುದು ಇದರ ಧ್ಯೇಯವಾಗಿದೆ.[೧೦] ಬರ್ಮಿಂಗ್ಹ್ಯಾಮ್‌ನ ಜನರನ್ನು ಬ್ರಮ್ಮೀಸ್‌ ಎನ್ನಲಾಗುತ್ತದೆ. ನಗರದ ಅಡ್ಡಹೆಸರು 'ಬ್ರಮ್‌'ನಿಂದ ಬ್ರಮ್ಮೀಸ್‌ ಪದವು ಉದ್ಭವವಾಯಿತು. ನಗರದ ಸ್ಥಳೀಯ ಭಾಷೆ ಬ್ರಮಾಜೆಮ್‌ ಎಂಬುದರಿಂದ ಇದು ಉದ್ಭವಿಸಿರಬಹುದು.[೧೧] ಸರದಿಯಲ್ಲಿ ಇದು ನಗರದ ಇನ್ನೂ ಹಿಂದಿನಕಾಲದ ಹೆಸರಾದ 'ಬ್ರೊಮ್ವಿಕ್ಹ್ಯಾಮ್‌' ಇಂದ ಪಡೆದುಕೊಳ್ಳಲಾಗಿದೆ.[೧೨] ಬ್ರಮ್ಮೀ ಸ್ಥಳೀಯ ಭಾಷೆ ತನ್ನದೇ ಆದ ಉಚ್ಚಾರಣಾ ಶೈಲಿಯಿದೆ. ಇದು ಪಕ್ಕದ ಸ್ಥಳ ಬ್ಲ್ಯಾಕ್‌ ಕಂಟ್ರಿಯ ಭಾಷೆ ಮತ್ತು ಉಚ್ಚಾರಣಾ ಶೈಲಿಗಿಂತಲೂ ಭಿನ್ನವಾಗಿದೆ.

ಇತಿಹಾಸ

[ಬದಲಾಯಿಸಿ]

ಬರ್ಮಿಂಗ್ಹ್ಯಾಮ್‌ನಲ್ಲಿ ನೆಲೆಸುವಿಕೆಯ ಬಹಳ ಪುರಾತನ ಸಾಕ್ಷ್ಯಗಳಲ್ಲಿ ಕೆಲವು ಸುಮಾರು 14,400 ವರ್ಷಗಳಷ್ಟು ಹಳೆಯ ಮಾನವಕೃತ ವಸ್ತುಗಳಾಗಿವೆ. ನಗರದ ಮಧ್ಯಭಾಗದಲ್ಲಿರುವ ಕರ್ಜನ್‌ ಸ್ಟ್ರೀಟ್‌ಬಳಿ ಈ ವಸ್ತುಗಳನ್ನು ಪರಿಶೋಧಿಸಲಾಯಿತು.[೧೩]

ಏಳನೆಯ ಶತಮಾನದ ಆರಂಭದಲ್ಲಿ,[೧೪] ಬರ್ಮಿಂಗ್ಹ್ಯಾಮ್ ರಿಯಾ ನದಿಯ ದಂಡೆಯಲ್ಲಿ ಆಂಗ್ಲೊ-ಸ್ಯಾಕ್ಸಾನ್‌ ಜನರ ವ್ಯವಸಾಯದ ಸಣ್ಣ ಪಾಳೆಯವಾಗಿತ್ತು.[೧೫]‌ ಬರ್ಮಿಂಗ್ಹ್ಯಾಮ್‌ ಎಂಬುದು 'ಬಿಯೊರ್ಮಾ ಇಂಗಾ ಹ್ಯಾಮ್‌' ಎಂಬ ಉಕ್ತಿಯಿಂದ ಉದ್ಭವವಾಯಿತು ಎಂದು ನಂಬಲಾಗಿದೆ. ಇದರ ಅರ್ಥ 'ಬಿಯೊರ್ಮಾದ ಮಕ್ಕಳ (ಅಥವಾ ವಂಶಜರ) [೧೫] ಜಮೀನು' [೧೫] ಇಸವಿ 1086ರ ಡೋಮ್ಸ್‌ಡೇ ಬುಕ್‌ನಲ್ಲಿ ಕೇವಲ 20 ಷಿಲಿಂಗ್‌ಗಳ ಮೌಲ್ಯದ ಒಂದು ಸಣ್ಣ ಹಳ್ಳಿಯೆಂದು ದಾಖಲಿಸಲಾಯಿತು.[೧೫] ಈ ಹೆಸರಿನ ಕುರಿತು ಹಲವು ವ್ಯತ್ಯಾಸಗಳಿವೆ. ಬೆರ್ಮಿಂಗೆಹಮ್‌ ಎಂಬುದು ಇನ್ನೊಂದು ಆವೃತ್ತಿಯಾಗಿದೆ.

ವಿಲಿಯಮ್‌ ವೆಸ್ಟ್ಲೆ 1731ರಲ್ಲಿ ರಚಿಸಿದ ಬರ್ಮಿಂಗ್ಹ್ಯಾಮ್‌ ನಗರದ ನಕ್ಷೆ.ನಕ್ಷೆಯ ಮೇಲ್ಬದಿಯು ಪಶ್ಚಿಮದತ್ತ ವಾಲಿದೆ.

ಇಸವಿ 1166ರಲ್ಲಿ, ತಮ್ಮ ಕೋಟೆಯಲ್ಲಿ ಮಾರುಕಟ್ಟೆಯೊಂದನ್ನು ಆಯೋಜಿಸಲು ಬರ್ಮಿಂಗ್ಹ್ಯಾಮ್‌ ಜಹಗೀರಿನ ಧಾರಕ ಪೀಟರ್‌ ಡಿ ಬರ್ಮಿಂಗ್ಹ್ಯಾಮ್‌ರಿಗೆ ರಾಜಮನೆತನದ ಸನ್ನದು ದೊರೆಯಿತು.[೧೩][೧೬] ಕಾಲಾನಂತರದಲ್ಲಿ ಇದನ್ನು ಬುಲ್‌ ರಿಂಗ್‌ ಎನ್ನಲಾಗಿ, ಬರ್ಮಿಂಗ್ಹ್ಯಾಮ್‌ನ್ನು ಹಳ್ಳಿಯಿಂದ ಮಾರುಕಟ್ಟೆಯ ಪಟ್ಟಣವಾಗಿ ರೂಪಾಂತರಗೊಳಿಸಲಾಯಿತು.

ಡಿ ಬರ್ಮಿಂಗ್ಹ್ಯಾಮ್‌ ಕುಟುಂಬವು 1530ರ ದಶಕದ ತನಕ ಬರ್ಮಿಂಗ್ಹ್ಯಾಮ್‌ನ ಲಾರ್ಡ್‌ಗಳಾಗಿದ್ದರು. ಅನಂತರ ಜಾನ್‌ ಡಡ್ಲೆ ಎಂಬೊಬ್ಬರು ಎಡ್ವರ್ಡ್‌ ಡಿ ಬರ್ಮಿಂಗ್ಹ್ಯಾಮ್‌ರನ್ನು ತಮ್ಮ ಲಾರ್ಡ್‌ಷಿಪ್‌ ಹುದ್ದೆಯಿಂದ ವಂಚಿತಗೊಳಿಸಿದರು.[೧೭]

ಹದಿನಾರನೆಯ ಶತಮಾನದಷ್ಟು ಹಿಂದೆಯೇ, ಬರ್ಮಿಂಗ್ಹ್ಯಾಮ್‌ನಲ್ಲಿ ಕಬ್ಬಿಣದ ಅದಿರು ಮತ್ತು ಇದ್ದಿಲು ಲಭ್ಯವಾದದ್ದು, ಲೋಹ ಕೈಗಾರಿಕೆಗಳು ಅಲ್ಲಿ ಸ್ಥಾಪಿತವಾದುದಕ್ಕೆ ಸಾಕ್ಷಿಯಾಗಿದೆ.[೧೮] ಹದಿನೇಳನೆಯ ಶತಮಾನದಲ್ಲಿ ಇಂಗ್ಲಿಷ್‌ ಆಂತರ್ಯುದ್ಧದ ಸಂಭವಿಸುವ ಹೊತ್ತಿಗೆ, ಬರ್ಮಿಂಗ್ಹ್ಯಾಮ್ ಸಣ್ಣ ಪ್ರಮಾಣದ ಶಸ್ತ್ರಗಳನ್ನು ತಯಾರಿಸುವ ಖ್ಯಾತಿ ಹೊಂದಿದ‌ ಪ್ರಮುಖ ತಯಾರಿಕಾ ಪಟ್ಟಣವಾಗಿತ್ತು. ಬರ್ಮಿಂಗ್ಹ್ಯಾಮ್‌ನಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಯು ಮೂಲಭೂತ ವಹಿವಾಟಾಗಿ, ಗನ್‌ ಕ್ವಾರ್ಟರ್‌ ಎಂಬ ಕ್ಷೇತ್ರದಲ್ಲಿ ಕೇಂದ್ರೀಕೃತವಾಗಿತ್ತು. ಹದಿನೆಂಟನೆಯ ಶತಮಾನದ ಮಧ್ಯದಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಸಮಯ, ಬರ್ಮಿಂಗ್ಹ್ಯಾಮ್‌ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಬೆಳೆಯಿತು; ಪಟ್ಟಣವೂ ಸಹ ಏಳ್ಗೆ ಕಂಡಿತು. ಹದಿನೇಳನೆಯ ಶತಮಾನದ ಅಪರಾರ್ಧದಲ್ಲಿ ಬರ್ಮಿಂಗ್ಹ್ಯಾಮ್‌ನ ಜನಸಂಖ್ಯೆ 15,000 ಇದ್ದದ್ದು ಒಂದು ಶತಮಾನದ ನಮತರ 70,000ಕ್ಕೆ ಹೆಚ್ಚಿತು.[೧೯] ಹದಿನೆಂಟನೆಯ ಶತಮಾನದಲ್ಲಿ, ಸ್ಥಳೀಯ ಚಿಂತಕರು ಮತ್ತು ಕೈಗಾರಿಕಾ ಉದ್ಯಮಿಗಳ ಸಂಗಮವಾದ ಲುನಾರ್‌ ಸೊಸೈಟಿ ಬರ್ಮಿಂಗ್ಹ್ಯಾಮ್‌ನಲ್ಲಿತ್ತು.[೨೦]

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ರಾಜಕೀಯ ಸುಧಾರಣೆಗಾಗಿ ಆಭಿಯಾನವು ಆರಂಭವಾಯಿತು. ಈ ವೇಳೆ ಬರ್ಮಿಂಗ್ಹ್ಯಾಮ್‌ ರಾಷ್ಟ್ರೀಯ ರಾಜಕೀಯ ಪ್ರಮುಖತೆ ಪಡೆಯಿತು. ಇಸವಿ 1832ರಲ್ಲಿ ಗ್ರೇಟ್‌ ರಿಫಾರ್ಮ್‌ ಆಕ್ಟ್‌‌ ಮಂಜೂರಾಗುವ ಮುನ್ನ, ಡೇಯ್ಸ್‌ ಆಫ್‌ ಮೇ (Days of May) ಅವಧಿಯಲ್ಲಿ ಥಾಮಸ್‌ ಅಟ್ವುಡ್‌ ನಾಯಕತ್ವದ ಬರ್ಮಿಂಗ್ಹ್ಯಾಮ್‌ ರಾಜಕೀಯ ಒಕ್ಕೂಟ (Birmingham Political Union) ದೇಶದಲ್ಲಿ ಆಂತರ್ಯುದ್ಧದ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿತ್ತು.[೨೧] ಇಸವಿ 1831 ಮತ್ತು 1832ರಲ್ಲಿ ನ್ಯೂಹಾಲ್‌ ಹಿಲ್‌ನಲ್ಲಿ ನಡೆದ ಒಕ್ಕೂಟದ ಸಭೆಗಳು ಬ್ರಿಟನ್‌ ದೇಶದ ಅತಿ ದೊಡ್ಡ ರಾಜಕೀಯ ಸಭೆಗಳಾಗಿದ್ದವು.[೨೨] ಈ ಕಾಯಿದೆಯ ಕರಡನ್ನು ಸಿದ್ಧಪಡಿಸಿದ ಲಾರ್ಡ್‌ ಡರ್ಹಮ್‌, 'ಬ್ರಿಟನ್‌ಗೆ ಸುಧಾರಣೆ ಲಭಿಸಲು ಬರ್ಮಿಂಗ್ಹ್ಯಾಮ್‌ನ ಕ್ರಾಂತಿ ಹಾಗೂ ಉದ್ಧಾರವು ಸುಧಾರಣೆಗೆ ಪ್ರಮುಖ ಕಾರಣ' ಎಂದು ಬರೆದರು.[೨೩]

1820ರ ದಶಕದ ಹೊತ್ತಿಗೆ, ವಿಸ್ತಾರವಾದ ಕಾಲುವೆ ವ್ಯವಸ್ಥೆಯನ್ನು ನಿರ್ಮಿಸಲಾಗಿತ್ತು. ಇದರಿಂದಾಗಿ ಕೈಗಾರಿಕೆಗಳಲ್ಲಿ ಬಳಸಲು ನೈಸರ್ಗಿಕ ಸಂಪನ್ಮೂಲಗಳು ಇನ್ನೂ ಸುಲಭವಾಗಿ ದೊರೆಯತೊಡಗಿದವು. ಇಸವಿ 1837ರಲ್ಲಿ ಗ್ರ್ಯಾಂಡ್‌ ಜಂಕ್ಷನ್‌ ರೇಲ್ವೆ ಆಗಮನದೊಂದಿಗೆ ಬರ್ಮಿಂಗ್ಹ್ಯಾಮ್‌ನಲ್ಲಿ ಮೊದಲ ಬಾರಿಗೆ ರೇಲ್ವೆ ಸಂಪರ್ಕದ ಪದಾರ್ಪಣೆಯಾಯಿತು. ಒಂದು ವರ್ಷದ ನಂತರ, ಇದನ್ನು ಲಂಡನ್‌ ಅಂಡ್‌ ಬರ್ಮಿಂಗ್ಹ್ಯಾಮ್‌ ರೇಲ್ವೆ ಎಂದು ಮರುನಾಮಕರಣ ಮಾಡಲಾಯಿತು. ವಿಕ್ಟೊರಿಯನ್ ಯುಗದಲ್ಲಿ, ಬರ್ಮಿಂಗ್ಹ್ಯಾಮ್‌ನಲ್ಲಿ ಜನಸಂಖ್ಯೆಯು ತೀವ್ರವಾಗಿ ಹೆಚ್ಚಿ, ಅರ್ಧ ದಶಲಕ್ಷ ಅಂಕವನ್ನೂ ಮೀರಿತು.[೨೪] ಬರ್ಮಿಂಗ್ಹ್ಯಾಮ್‌ ಇಂಗ್ಲೆಂಡ್‌ನ ಎರಡನಯ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಗರವಾಯಿತು. ಇಸವಿ 1889ರಲ್ಲಿ ಮಹಾರಾಣಿ‌ ವಿಕ್ಟೋರಿಯಾ ಬರ್ಮಿಂಗ್ಹ್ಯಾಮ್‌ಗೆ 'ನಗರ' ಮನ್ನಣೆ ನೀಡಿದರು.[೨೫] ಇಸವಿ 1900ರಲ್ಲಿ ನಗರವು ತನ್ನದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿತು.[೨೬]

ಇಸವಿ 1886ರಲ್ಲಿ ಬರ್ಮಿಂಗ್ಹ್ಯಾಮ್‌.

ಎರಡನೆಯ ಮಹಾಯುದ್ಧದಲ್ಲಿ ಬರ್ಮಿಂಗ್ಹ್ಯಾಮ್‌ ನಗರದ ಮೇಲೆ ಬರ್ಮಿಂಗ್ಹ್ಯಾಮ್‌ ಬ್ಲಿಟ್ಜ್ ಎಂಬ ದಾಳಿಯಲ್ಲಿ ಬಾಂಬ್ ಗಳಿಂದ ಬಹಳಷ್ಟು ಹಾನಿಯಾಯಿತು. 1950 ಹಾಗು 1960ರ ದಶಕಗಳಲ್ಲಿ ನಗರದ ಪುನರ್ನಿರ್ಮಾಣ ಕಾರ್ಯ ವ್ಯಾಪಕವಾಗಿ ನಡೆಯಿತು.[೨೭] ಇದರಲ್ಲಿ ಕ್ಯಾಸ್ಲ್‌ ವೇಲ್‌ ಎನ್ನಲಾದ ದೊಡ್ಡ ಗೋಪುರ ತೋಡಗಳ ನಿರ್ಮಾಣವೂ ಸೇರಿತ್ತು. ಬುಲ್‌ ರಿಂಗ್‌ನ್ನು ಪುನರ್ನಿರ್ಮಿಸಲಾಯಿತು ಹಾಗೂ ನ್ಯೂ ಸ್ಟ್ರೀಟ್‌ ಸ್ಟೇಷನ್‌ನ್ನು ಪುನಃ ಅಭಿವೃದ್ಧಿಗೊಳಿಸಲಾಯಿತು. ಇತ್ತೀಚೆಗಿನ ವರ್ಷಗಳಲ್ಲಿ, ಸೆಂಟೆನರಿ ಸ್ಕ್ವೇರ್‌ ಹಾಗೂ ಮಿಲೆಯಿಯಮ್‌ ಪ್ಲೇಸ್‌ನಂತಹ ಚೌಕಗಳ ನಿರ್ಮಾಣದೊಂದಿಗೆ, ಬರ್ಮಿಂಗ್ಹ್ಯಾಮ್‌ನ ನೋಟವು ಬಹಳಷ್ಟು ಬದಲಾಗಿದೆ. ಹಳೆಯ ಬೀದಿಗಳು, ಕಟ್ಟಡಗಳು ಹಾಗೂ ಕಾಲುವೆಗಳನ್ನು ಮತ್ತೆ ಪೂರ್ವಸ್ಥಿತಿಗೆ ತರಲಾಗಿದೆ, ಪಾದಚಾರಿ ಸುರಂಗ ಮಾರ್ಗವನ್ನು ತೆಗೆಯಲಾಗಿದೆ; ಬುಲ್‌ ರಿಂಗ್‌ ವ್ಯಾಪಾರ ಮಳಿಗೆಯನ್ನು [೨೮] ಸಂಪೂರ್ಣವಾಗಿ ಪುನರಾಭಿವೃದ್ಧಿಗೊಳಿಸಲಾಗಿದೆ. ಬರ್ಮಿಂಗ್ಹ್ಯಾಮ್‌ ಪುನರಾಭಿವೃದ್ಧಿಗೊಳಿಸಲು ಮಹತ್ವಾಕಾಂಕ್ಷೀ ಯೋಜನೆ ಕೈಗೊಂಡ ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ನ ಮೊದಲ ಹೆಜ್ಜೆಗಳಾಗಿದ್ದವು. ಇದನ್ನು ಇಂದು ಬಿಗ್‌ ಸಿಟಿ ಪ್ಲ್ಯಾನ್‌ ಎನ್ನಲಾಗಿದೆ.[೨೯](ಬೃಹತ್ ನಗರ ಯೋಜನೆ)

ಎರಡನೆಯ ಮಹಾಯುದ್ಧದ ನಂತರದ ದಶಕಗಳಲ್ಲಿ, ಬರ್ಮಿಂಗ್ಹ್ಯಾಮ್‌ನ ಜನಾಂಗೀಯ ಅಂಶಗಳು ಗಮನಾರ್ಹವಾಗಿ ಬದಲಾದವು. ಕಾಮನ್ವೆಲ್ತ್‌ ದೇಶಗಳು ಹಾಗೂ ಇತರೆ ದೇಶಗಳಿಂದ ಬಹಳಷ್ಟು ಜನರು ಬರ್ಮಿಂಗ್ಹ್ಯಾಮ್‌ಗೆ ವಲಸೆ ಬಂದರು.[೩೦] ಇಸವಿ 1951ರಲ್ಲಿ ನಗರದ ಜನಸಂಖ್ಯೆಯು ಅತಿ ಹೆಚ್ಚಾಗಿದ್ದು, 1,113,000 ಜನಸಂಖ್ಯೆ ಇತ್ತು.[೨೪]

ಆಡಳಿತ

[ಬದಲಾಯಿಸಿ]
ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ನ ಪೀಠವಾದ ದಿ ಕೌನ್ಸಿಲ್‌ ಹೌಸ್‌.

ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ UKಯಲ್ಲೇ ಅತಿ ದೊಡ್ಡ ಸ್ಥಳೀಯ ಪ್ರಾಧಿಕಾರ ಹಾಗೂ ಯುರೋಪ್‌ನಲ್ಲೇ ಅತಿದೊಡ್ಡ ಪರಿಷತ್‌ ಅಗಿದೆ.[೩೧] ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ 40 ನಗರ ವಿಭಾಗಗಳನ್ನು ಪ್ರತಿನಿಧಿಸುವ 120 ಜನ ಸಭಾಸದಸ್ಯರನ್ನು ಹೊಂದಿದೆ.[೩೨] ಇದರ ಪ್ರಧಾನ ಕಾರ್ಯಸ್ಥಳವು ವಿಕ್ಟೊರಿಯಾ ಸ್ಕ್ವೇರ್‌ನಲ್ಲಿರುವ ಕೌನ್ಸಿಲ್‌ ಹೌಸ್‌ನಲ್ಲಿದೆ. ಯಾವುದೇ ಏಕ ಪಕ್ಷವು ಸಂಪೂರ್ಣ ಬಹುಮತ ಪಡೆದಿಲ್ಲ. ಕನ್ಸರ್ವೇಟಿವ್‌/ಲಿಬರಲ್‌ ಡೆಮೊಕ್ರ್ಯಾಟ್‌ ಸಮ್ಮಿಶ್ರ ಆಡಳಿತವು ಪರಿಷತ್ತಿನ ಅಧಿಕಾರದಲ್ಲಿದೆ.

ಇಂಗ್ಲೆಂಡ್‌ನ ವೆಸ್ಟ್ ಮಿಡ್ಲೆಂಡ್ಸ್‌ ವಲಯದ ಪ್ರಾಂತೀಯ ಸರ್ಕಾರದ ಪೀಠವಾಗಿದೆ. ಜೊತೆಗೆ, ಇದು ವಲಯದ ಸರ್ಕಾರ ಕಛೇರಿ,[೩೩] ಪ್ರಾದೇಶಿಕ ಅಭಿವೃದ್ಧಿ ಇಲಾಖೆ, ಅಡ್ವಾಂಟೇಜ್‌ ವೆಸ್ಟ್‌ ಮಿಡ್ಲೆಂಡ್ಸ್‌ [೩೪] ಹಾಗೂ ವೆಸ್ಟ್‌ ಮಿಡ್ಲೆಂಡ್ಸ್‌ ಪ್ರಾದೇಶಿಕ ಸಭೆಯ ಪೀಠವೂ ಹೌದು.[೩೫]

ಹೌಸ್‌ ಆಫ್‌ ಕಾಮನ್ಸ್‌ನಲ್ಲಿ ಬರ್ಮಿಂಗ್ಹ್ಯಾಮ್‌ನ ಹತ್ತು ಸಂಸದೀಯ ಕ್ಷೇತ್ರಗಳ ಪ್ರತಿನಿಧಿಗಳ ಪೈಕಿ ಒಬ್ಬ ಕನ್ಸರ್ವೇಟಿವ್‌, ಒಬ್ಬ ಲಿಬರಲ್‌ ಡೆಮೊಕ್ರ್ಯಾಟ್‌ ಹಾಗೂ ಎಂಟು ಜನ ಲೇಬರ್‌ ಸಂಸದರಿದ್ದಾರೆ.[೩೬] ಯುರೋಪಿಯನ್‌ ಸಂಸತ್‌ನಲ್ಲಿ ನಗರವು ವೆಸ್ಟ್‌ ಮಿಡ್ಲೆಂಡ್ಸ್‌ ಯುರೋಪಿಯನ್‌ ಸಂಸತ್‌ ಕ್ಷೇತ್ರದ ಅಂಗವಾಗಿದೆ. ಇಲ್ಲಿಂದ ಆರು ಮಂದಿ ಅಭ್ಯರ್ಥಿಗಳು ಯುರೋಪಿಯನ್‌ ಸಂಸತ್‌ ಸದಸ್ಯರಾಗಿ ಚುನಾಯಿತರಾಗುತ್ತಾರೆ.[೩೪]

ಬರ್ಮಿಂಗ್ಹ್ಯಾಮ್‌ ಮೂಲತಃ ವಾರ್ವಿಕ್ಷೈರ್‌ನ ಅಂಗವಾಗಿತ್ತು. ಆದರೆ, ಈ ನಗರವು 19ನೆಯ ಶತಮಾನ ಅಪರಾರ್ಧ ಹಾಗೂ 20ನೆಯ ಶತಮಾನದ ಆರಂಭದಲ್ಲಿ ವಿಸ್ತರಿಸಿ, ದಕ್ಷಿಣದಲ್ಲಿರುವ ವೊರ್ಸೆಸ್ಟರ್ಷೈರ್ ಹಾಗೂ ಉತ್ತರ ಮತ್ತು ಪಶ್ಚಿಮ ಗಡಿಯಲ್ಲಿರುವ ಸ್ಟ್ಯಾಫರ್ಡ್‌ಷೈರ್‌ನ ‌ನ ಕೆಲ ಭಾಗಗಳನ್ನು ಒಳಗೊಂಡಿತು. ಇಸವಿ 1974ರಲ್ಲಿ ಈ ನಗರವು ಸಟ್ಟನ್‌ ಕೋಲ್ಡ್‌ಫೀಲ್ಡ್‌ನ್ನೂ ಒಳಗೊಳ್ಳುವುದರೊಂದಿಗೆ, ಹೊಸದಾಗಿ ರಚನೆಯಾದ ವೆಸ್ಟ್‌ ಮಿಡ್ಲೆಂಡ್ಸ್‌ ಕೌಂಟಿಯ ಮಹಾನಗರ ನಗರವಿಭಾಗವಾಯಿತು. ಇಸವಿ 1986ರ ತನಕ, ವೆಸ್ಟ್‌ ಮಿಡ್ಲೆಂಡ್ಸ್‌ ಕೌಂಟಿ ಪರಿಷತ್ಬರ್ಮಿಂಗ್ಹ್ಯಾಮ್ ಸಿಟಿ ಸೆಂಟರ್‌ನಲ್ಲಿತ್ತು.

ಬರ್ಮಿಂಗ್ಹ್ಯಾಮ್‌ನಲ್ಲಿ ವೆಸ್ಟ್‌ ಮಿಡ್ಲೆಂಡ್ಸ್‌ ಪೊಲೀಸ್‌ ಕಾನೂನು ಜಾರಿಗೊಳಿಸುತ್ತದೆ, ವೆಸ್ಟ್‌ ಮಿಡ್ಲೆಂಡ್ಸ್‌ ಫಯರ್‌ ಸರ್ವಿಸ್‌ ಅಗ್ನಿಶಮನ ಹಾಗೂ ಸುರಕ್ಷಾ ಕಾರ್ಯ ನಡೆಸುತ್ತದೆ, ವೆಸ್ಟ್‌ ಮಿಡ್ಲೆಂಡ್ಸ್‌ ಆಂಬುಲೆನ್ಸ್ ಸರ್ವಿಸ್‌ ತುತ್ತು ಸಮಯದಲ್ಲಿ ವೈದ್ಯಕೀಯ ನೆರವು ನೀಡುತ್ತದೆ.

ಭೂಗೋಳ

[ಬದಲಾಯಿಸಿ]

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ ಪ್ರಸ್ಥಭೂಮಿಯಲ್ಲಿ ವೆಸ್ಟ್‌ ಮಿಡ್ಲೆಂಡ್ಸ್‌ ವಲಯದ ಮಧ್ಯಭಾಗದಲ್ಲಿ ಬರ್ಮಿಂಗ್ಹ್ಯಾಮ್‌ ನಗರವಿದೆ. ಈ ವಲಯದ ಭೂಪ್ರದೇಶವು ಸಮುದ್ರ ಮಟ್ಟಕ್ಕಿಂತ ಸುಮಾರು 500ರಿಮದ 1,000 ಅಡಿ (150-300 ಮೀಟರ್‌) ಎತ್ತರದಲ್ಲಿದೆ. ಸೆವರ್ನ್‌ ಹಾಗೂ ಟ್ರೆಂಟ್‌ ನದಿಗಳ ಪಾತ್ರಗಳ ನಡುವಣ ಉತ್ತರದಿಂದ ದಕ್ಷಿಣದ ವರೆಗೆ ಹರಿಯುವ ನದಿಯ ಜಲರೇಖೆಯಿದೆ. ನಗರದ ದಕ್ಷಿಣ ಹಾಗೂ ಪಶ್ಚಿಮ ಗಡಿಯಾಚೆ ಲಿಕಿ ಹಿಲ್ಸ್‌,[೩೭] ಕ್ಲೆಂಟ್‌ ಹಿಲ್ಸ್‌ ಹಾಗೂ ವಾಲ್ಟನ್‌ ಹಿಲ್‌ ಇವೆ. ಈ ಬೆಟ್ಟಗಳಿಂದ ಬರ್ಮಿಂಗ್ಹ್ಯಾಮ್‌ ನಗರದ ವಿಸ್ತಾರ ನೋಟ ಕಾಣಸಿಗುತ್ತದೆ.

ಅಗ್ನೇಯದಲ್ಲಿರುವ ಬಹುಮಟ್ಟಿಗೆ ಗೃಹವಾಸಿ ತಾಣ ಸೊಲಿಹಲ್‌ ನಗರ, ವಾಯವ್ಯದಲ್ಲಿ ವುಲ್ವರ್‌ಹ್ಯಾಂಪ್ಟನ್‌ ನಗರ ಹಾಗೂ ಬ್ಲ್ಯಾಕ್‌ ಕಂಟ್ರಿ ಕೈಗಾರಿಕಾ ಪಟ್ಟಣಗಳೊಂದಿಗೆ ಬರ್ಮಿಂಗ್ಹ್ಯಾಮ್‌ ನಗರವು ನಗರಕೂಟವನ್ನು ಹೊಂದಿದೆ. ಇವೆಲ್ಲವೂ ಸೇರಿ ವೆಸ್ಟ್‌ ಮಿಡ್ಲೆಂಡ್ಸ್‌ ನಗರವಲಯ ಕ್ಷೇತ್ರ ಎನ್ನಲಾಗಿದೆ. ಇದು 59,972 ha (600 km2; 232 sq mi) ವಿಸ್ತೀರ್ಣ ವ್ಯಾಪಿಸಿ, 2001 ಜನಗಣತಿಯ ಪ್ರಕಾರ 2,284,093ರಷ್ಟು ಜನಸಂಖ್ಯೆ ಹೊಂದಿದೆ.[]

ನಗರವು ಆವರಿಸಿಕೊಂಡಿರುವ ವಿಸ್ತೀರ್ಣದ ಬಹಳಷ್ಟು ಭಾಗವು ಮೂಲತಃ ಪುರಾತನ ಫಾರೆಸ್ಟ್‌ ಆಫ್‌ ಆರ್ಡೆನ್‌ನ ಉತ್ತರ ಬದಿಯಾಗಿತ್ತು. ನಗರದಲ್ಲಿ ಓಕ್‌ ಮರಗಳ ಸಮೂಹ ಹಾಗೂ ಮೋಸ್ಲೆ, ಸಾಲ್ಟ್‌ಲೆ, ಯಾರ್ಡ್ಲೆ, ಸ್ಟರ್ಚ್‌ಲೆ ಹಾಗೂ ಹಾಕ್ಲೆ (ಇದರಲ್ಲಿ ಹೆಸರುಗಳು -ley ಪ್ರತ್ಯಯದೊಂ ದಿಗೆ ಅಂತ್ಯಗೊಳ್ಳುತ್ತವೆ. ಪುರಾತನ ಇಂಗ್ಲಿಷ್‌ ಭಾಷೆಯಲ್ಲಿ -lēah ಎಂದರೆ 'ಕಾಡುಪ್ರದೇಶದ ಜಮೀನು'. (ಆದರೂ ಸ್ಟರ್ಚ್‌ಲೆ ವಿಚಾರದಲ್ಲಿ ಹೆಸರನ್ನು 'ಸ್ಟ್ರೀಟ್ಲಿ (Streetly)' ಎಂಬ ಪದದಿಂದ ಪಡೆಯಲಾಗಿದೆ. ಸುಮಾರು 200 ವರ್ಷದ ಹಿಂದಿನ ತನಕ ಈ ಸ್ಥಳವನ್ನು ಸ್ಟ್ರೀಟ್ಲಿ ಎನ್ನಲಾಗುತ್ತಿತ್ತು.[೩೮]

ಲಿಕಿ ಹಿಲ್ಸ್‌ನಿಂದ ನಗರದ ದೃಶ್ಯ. ಲಾಂಗ್‌ಬ್ರಿಡ್ಜ್‌ ಮುಂಭಾಗದಲ್ಲಿದೆ.

ಭೂವಿಜ್ಞಾನ

[ಬದಲಾಯಿಸಿ]

ಭೂವೈಜ್ಞಾನಿಕವಾಗಿ, ಬರ್ಮಿಂಗ್ಹ್ಯಾಮ್‌ ನಗರದ ಬಹಳಷ್ಟು ಭಾಗವು ಬರ್ಮಿಂಗ್ಹ್ಯಾಮ್‌ ಫಾಲ್ಟ್‌ ಎಂಬ ಸುಳಿವಿನ ಮೇಲಿದೆ. ಇದು ನೈಋತ್ಯದಲ್ಲಿರುವ ಲಿಕಿ ಬೆಟ್ಟಗಳಿಂದ ಆರಂಭಗೊಂಡು, ಎಡ್ಜ್‌ಬ್ಯಾಸ್ಟನ್‌, ಬುಲ್ ರಿಂಗ್, ಎರ್ಡಿಂಗ್ಟನ್‌ ಹಾಗೂ ಈಶಾನ್ಯದಲ್ಲಿರುವ ಸಟ್ಟನ್‌ ಕೊಲ್ಡ್‌ಫೀಲ್ಡ್‌ ತನಕ, ನಗರದುದ್ದಕ್ಕೂ ಓರೆಯಾಗಿ ಹಾದುಹೋಗುತ್ತದೆ.[೩೯] ಈ ಭಾಗವು ದಕ್ಷಿಣ ಹಾಗೂ ಪೂರ್ವದಲ್ಲಿನ ಭೂಪ್ರದೇಶವು ಬಹಳಷ್ಟು ಮೃದುವಾಗಿದ್ದು, ಇದಕ್ಕೆ ಮರ್ಸಿಯಾ ಮಡ್‌ಸ್ಟೋನ್‌ ಗ್ರೂಪ್‌ ಎನ್ನಲಾಗಿದೆ (ಮುಂಚೆ ಕೈಪರ್ಮಾರ್ಲ್‌) ಎನ್ನಲಾಗಿತ್ತು. ಇದರ ಮಧ್ಯ-ಮಧ್ಯದಲ್ಲಿ ಬಂಟರ್‌ ಪೆಬಲ್ಸ್‌ ಹಾಸು, ಹಾಗೂ, ಟೇಮ್‌, ರಿಯಾ ಹಾಗೂ ಕೋಲ್‌ ನದಿಗಳು ಹಾಗೂ ಅವುಗಳ ಉಪನದಿಗಳ ಕಣಿವೆಗಳಿವೆ.[೪೦] ಇವೆಲ್ಲವೂ ಪರ್ಮಿಯನ್‌ ಹಾಗೂ ಟ್ರಯಾಸಿಕ್‌ ಯುಗಗಳ ಸಮಯದಲ್ಲಿ ಸಂಭವಿಸಿರಬಹುದು.[೩೯] ಈ ಊನದ ಉತ್ತರ ಹಾಗೂ ಪಶ್ಚಿಮದಲ್ಲಿ, ಸುತ್ತಮುತ್ತಲ ಪರದೇಶದಿಂದ 150ರಿಂದ 600 ಅಡಿ ಎತ್ತರದ ತನಕ (ಅರ್ಥಾತ್‌ 45ರಿಂದ 180 ಮೀಟರ್‌ಗಳ ತನಕ) ನಗರ ಕೇಂದ್ರಭಾಗದ ಬಹಳಷ್ಟು ಭಾಗದ ಕೆಳಗೆ, ಇನ್ನಷ್ಟು ಗಟ್ಟಿಯಾದ ಕೈಪರ್ಮರಳುಗಲ್ಲಿನ ಉದ್ದದ ಉಬ್ಬು ಏಣು ಇದೆ.[೪೧][೪೨]

ಹವಾಗುಣ

[ಬದಲಾಯಿಸಿ]

ಬ್ರಿಟಿಷ್‌ ದ್ವೀಪಗಳ ಬಹಳಷ್ಟು ಭಾಗದಂತೆ, ಬರ್ಮಿಂಗ್ಹ್ಯಾಮ್‌ನ ಹವಾಗುಣವನ್ನು ಸಮಶೀತೋಷ್ಣ ಕಡಲ ಹವಾಗುಣ ಎಂದು ವರ್ಗಿಸಲಾಗಿದೆ. ಇಲ್ಲಿ ಬೇಸಿಗೆಯಲ್ಲಿ (ಜುಲೈ) ಸರಾಸರಿ ಉಷ್ಣಾಂಶವು ಸುಮಾರು 20 °C (68 °F); ಚಳಿಗಾಲದಲ್ಲಿ (ಜನವರಿ) ಸರಾಸರಿ ಉಷ್ಣಾಂಶವು ಸುಮಾರು 4.5 °C (40.1 °F). ತೀವ್ರ ಹವಾಮಾನವು ಬಹಳ ಅಪರೂಪ, ಆದರೆ ನಗರದಲ್ಲಿ ಕೆಲವೊಮ್ಮೆ ಸುಂಟರಗಾಳಿ ಸಂಭವಿಸಿದ್ದುಂಟು. ಇತ್ತೀಚೆಗೆ ಜುಲೈ 2005ರಲ್ಲಿ ನಗರದ ದಕ್ಷಿಣ ಭಾಗದಲ್ಲಿ ಸುಂಟರಗಾಳಿ ಬಡಿದು, ಹಲವು ಮನೆಗಳಿಗೆ ಹಾನಿಯಾಗಿ, ಆ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳು ಅಸ್ತವ್ಯಸ್ತಗೊಂಡಿದ್ದವು.[೪೩]

ಜುಲೈ 2006ರಲ್ಲಿ ಸಂಭವಿಸಿದಂತೆ, ಕೆಲವೊಮ್ಮೆ ಬೇಸಿಗೆಯ ಕಾವಿನ ಹವೆ ಸಂಭವಿಸಬಹುದು.ಇತ್ತೀಚೆಗಿನ ವರ್ಷಗಳಲ್ಲಿ ಇದು ಸರ್ವೇಸಾಮಾನ್ಯವಾಗಿದೆ. ಇಸವಿ 1990ರ ದಶಕದಲ್ಲಿ ಚಳಿಗಾಲಗಳು ಮೆದುವಾಗಿ, ಹಿಮಪಾತವು ಇನ್ನಷ್ಟು ಕಡಿಮೆಯಾಗುತ್ತಿದೆ. ಇತರೆ ದೊಡ್ಡ ನಗರಗಳಂತೆ ಬರ್ಮಿಂಗ್ಹ್ಯಾಮ್‌ನಲ್ಲಿ ಗಮನಾರ್ಹವಾದ ನಗರವಲಯ ತಾಪಮಾನವು ದ್ವೀಪ ದ ಪ್ರಭಾವ ಹೊಂದಿದೆ.[೪೪] ಉದಾಹರಣೆಗೆ, 14 ಜನವರಿ 1982ರ ರಾತ್ರಿಯಂದು ಬರ್ಮಿಂಗ್ಹ್ಯಾಮ್‌ನ ಪೂರ್ವ ಗಡಿಯಲ್ಲಿರುವ ಬರ್ಮಿಂಗ್ಹ್ಯಾಮ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ-ತಣ್ಣನೆಯ ಕಡಿಮೆ ಉಷ್ಣಾಂಶ −20.8 °C (−5.4 °F) ವರೆಗೂ ಕಡಿಮೆಯಾಯಿತು, ಆದರೆ ನಗರದ ಮಧ್ಯದಲ್ಲಿರುವ ಎಡ್ಜ್‌ಬ್ಯಾಸ್ಟನ್‌ನಲ್ಲಿ ಕೇವಲ −12.9 °C (8.8 °F) ಆಗಿತ್ತು.[೪೫] UKಯ ಇತರೆ ದೊಡ್ಡ ನಗರಕೂಟಗಳಿಗೆ ತುಲನಾತ್ಮಕವಾಗಿ, ಬರ್ಮಿಂಗ್ಹ್ಯಾಮ್‌ ಬಹಳಷ್ಟು ಹಿಮಪಾತ ಅನುಭವಿಸುವ ನಗರವಾಗಿದೆ. ನಗರವು ಒಳನಾಡಿನಲ್ಲಿರುವುದು ಹಾಗೂ ಬಹಳ ಎತ್ತರದಲ್ಲಿರುವುದು ಇದಕ್ಕೆ ಕಾರಣ.[೪೫] ಹಿಮವರ್ಷವು 'ನಾರ್ತ್‌ ವೆಸ್ಟರ್ಲಿ ಹವೆ'ಗಳೊಂದಿಗೆ ಆಗಾಗ್ಗೆ ಚೆಷೈರ್‌ ಗ್ಯಾಪ್‌ ನಗರದ ಮೂಲಕ ಹಾದುಹೋಗುತ್ತದೆ. ಆದರೂ, ಉತ್ತರ ಸಮುದ್ರದಿಂದ 'ನಾರ್ತ್‌ ಈಸ್ಟರ್ಲಿ ಹವೆ'ಯೊಂದಿಗೂ ಸಹ ಹಿಮವರ್ಷವು ಸಂಭವಿಸಬಹುದು.[೪೫]

Birminghamದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Source: United Nations World Meteorological Organization[೪೬]

ಹತ್ತಿರದ ಸ್ಥಳಗಳು

[ಬದಲಾಯಿಸಿ]

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]
ಧರ್ಮ ಶೇಕಡಾವಾರು
ಜನಸಂಖ್ಯೆ
ಬೌದ್ಧ ಧರ್ಮೀಯ 3-0
ಕ್ರೈಸ್ತ 59%
ಹಿಂದೂ 2%
ಜ್ಯೂಯಿಶ್ 0.2%
ಮುಸ್ಲಿಂ 14.3%
ಸಿಖ್ 2.9%
ಯಾವುದೇ ಧರ್ಮಕ್ಕೆ ಸೇರಿಲ್ಲದವರು 12.4%
ಯಾವುದೇ ಉತ್ತರವಿಲ್ಲ 8.4%

ಇಸವಿ 2007ರಲ್ಲಿ ONS ನಡೆಸಿದ ಅಂದಾಜಿನ ಪ್ರಕಾರ, ಜನಸಂಖ್ಯೆಯಲ್ಲಿ 67%ರಷ್ಟು ಬಿಳಿಯರು (ಇದರಲ್ಲಿ 2.4% ಐರಿಷ್‌ ಹಾಗೂ 2.2% ಇತರೆ ಬಿಳಿಯರು), 21% ಏಷ್ಯನ್‌, 6.7% ಅಥವಾ ಕರಿಯರು, 1.2% ಚೀನೀಯರು, 3.2% ಮಿಶ್ರಿತ ಜನಾಂಗದವರು ಹಾಗೂ 1.2% ಇತರೆ ಜನಾಂಗೀಯ ಸಂಪ್ರದಾಯದವರಿದ್ದಾರೆ.[೪೭] 57%ರಷ್ಟು ಪ್ರಾಥಮಿಕ ಶಾಲಾ ಹಾಗೂ 52%ರಷ್ಟಯ ಪ್ರೌಢಶಾಲಾ ವಿದ್ಯಾರ್ಥಿಗಳು ಬಿಳಿಯರಲ್ಲದ ಬ್ರಿಟಿಷ್‌ ಕುಟುಂಬದವರಾಗಿದ್ದಾರೆ.[೪೮] ಜನಸಂಖ್ಯೆಯಲ್ಲಿ 16.5%ರಷ್ಟು ಯುನೈಟೆಡ್‌ ಕಿಂಗ್ಡಮ್‌ನ ಆಚೆ ಜನಿಸಿದ್ದರು.

ಬರ್ಮಿಂಗ್ಹ್ಯಾಮ್‌ ಸಿಟಿ ಸೆಂಟರ್‌ನಲ್ಲಿರುವ ಕೆನಾಲ್‌ಸೈಡ್‌ ಅಪಾರ್ಟ್ಮೆಂಟ್‌ಗಳು

ಇಂಗ್ಲೆಂಡ್‌ನಲ್ಲಿ ಪ್ರತಿ ಚದರ ಮೈಲ್‌ಗೆ (377.2/km²) 976.9ರಷ್ಟು ಜನರ ಸಾಂದ್ರತೆಗೆ ಹೋಲಿಸಿದರೆ, ಬರ್ಮಿಂಗ್ಹ್ಯಾಮ್‌ನಲ್ಲಿ ಒಂದು ಚದರ ಮೈಲ್‌ಗೆ (3,649/km²) ಜನಸಂಖ್ಯೆಯ ಸಾಂದ್ರತೆಯು 9,451ರಷ್ಟಿದೆ. ಜನಸಂಖ್ಯೆಯಲ್ಲಿ ಮಹಿಳೆಯರ ಶೇಕಡಾವಾರು 51.6% ಹಾಗೂ ಪುರುಷರದ್ದು 48.4%. ಹೆಚ್ಚು ಮಹಿಳೆಯರು 70 ಅಥವಾ ಹೆಚ್ಚಿನ ವಯಸ್ಸಿನವರಾಗಿದ್ದರು.[೪೯] ಇಡೀ ಇಂಗ್ಲೆಂಡ್‌ನಲ್ಲಿ 66.7%ಕ್ಕೆ ಹೋಲಿಸಿದರೆ, ಬರ್ಮಿಂಗ್ಹ್ಯಾಮ್‌ನ ಜನಸಂಖ್ಯೆಯಲ್ಲಿ 60.4%ರಷ್ಟು 16ರಿಂದ 74ರ ವಯಸ್ಸಿನ ಶ್ರೇಣಿಯಲ್ಲಿದ್ದರು.[೫೦]

60.3%ರಷ್ಟು ಮನೆಮಂದಿಗಳಲ್ಲಿರುವವರು ಆ ಮನೆಗಳ ಮಾಲೀಕರೇ ಆಗಿದ್ದರು; 27.7%ರಷ್ಟು ನಗರ ಪರಿಷತ್‌, ಗೃಹನಿರ್ಮಾಣ ಸಂಘ ಅಥವಾ ಇನ್ಯಾರಾದರೂ ಸಾಮಾಜಿಕ ಜಮೀನುದಾರರಿಂದ ಬಾಡಿಗೆಯ ಮೇಲೆ ಪಡೆದಿದ್ದರು. ಉಳಿದ 11.8%ರಷ್ಟು ಖಾಸಗಿಯಾಗಿ ಅಥವಾ ಬಾಡಿಗೆಯಿಲ್ಲದೆ ವಾಸಿಸುತ್ತಿದ್ದರು.[೫೦]

ಸ್ಥಳೀಯ ಸರ್ಕಾರ ಜಿಲ್ಲೆಗಳಿಗೆ ಸರಿಹೊಂದಿಸಲಾದ ಯುರೊಸ್ಟಾಟ್‌ ಮಾನದಂಡದ ಪ್ರಕಾರ, ಇಸವಿ 2004ರಲ್ಲಿ ಬರ್ಮಿಂಗ್ಹ್ಯಾಮ್‌ ವಿಶಾಲ ನಗರವಲಯದಲ್ಲಿ 2,357,100 ಜನರು ವಾಸಿಸುತ್ತಿದ್ದರು.[೫೧] ಬರ್ಮಿಂಗ್ಹ್ಯಾಮ್‌ ಜೊತೆಗೆ, LUZ (ವಿಶಾಲ ನಗರ ವಲಯ)ನಲ್ಲಿ ಡಡ್ಲೆ, ಸ್ಯಾಂಡ್ವೆಲ್‌, ಸೊಲಿಹಲ್‌ ಹಾಗೂ ವಾಲ್ಸಾಲ್‌ನ ಮಹಾನಗರ ನಗರವಿಭಾಗಗಳಿವೆ. ಜೊತೆಗೆ ಲಿಚ್ಫೀಲ್ಡ್‌, ಟ್ಯಾಮ್ವರ್ತ್‌, ನಾರ್ತ್‌ ವಾರ್ವಿಕ್ಷೈರ್‌ ಹಾಗೂ ಬ್ರೊಮ್ಸ್‌ಗ್ರೂವ್‌ ಸಹ ಸೇರಿವೆ.[೫೨]

ಪ್ರಸಿದ್ಧ ಸ್ಥಳಗಳು

[ಬದಲಾಯಿಸಿ]
ಬಾರ್ಬರ್‌ ಇಂಸ್ಟಿಟ್ಯೂಟ್‌ ಆಫ್‌ ಫೈನ್‌ ಆರ್ಟ್ಸ್‌

ಬರ್ಮಿಂಗ್ಹ್ಯಾಮ್‌ ಮ್ಯೂಸಿಯಮ್‌ & ಆರ್ಟ್‌ ಗ್ಯಾಲರಿ ಬರ್ಮಿಂಗ್ಹ್ಯಾಮ್‌ನ ಪ್ರಮುಖ ಕಲಾ ಹಾಗೂ ವಸ್ತು ಪ್ರದರ್ಶನಾಲಯವಾಗಿದೆ.

ಇದರಲ್ಲಿ ಪ್ರಸಿದ್ಧ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಪ್ರಿ-ರಫೇಲೈಟ್‌ ಬ್ರದರ್ಹುಡ್‌ ಪ್ರಸಿದ್ಧಕೃತಿ ಸಂಗ್ರಹ ಮತ್ತು ಎಡ್ವರ್ಡ್‌ ಬರ್ನ್‌-ಜೋನ್ಸ್‌ರ ವಿಶ್ವದ ಅತಿದೊಡ್ಡ ಕೃತಿ ಸಂಗ್ರಹವನ್ನು ಹೊಂದಿದೆ. ಪರಿಷತ್‌ ನಗರದಲ್ಲಿ ಇನ್ನೂ ಇತರೆ ವಸ್ತು ಪ್ರದರ್ಶನಾಲಯಗಳನ್ನು ತನ್ನ ಸ್ವಾಮ್ಯದಲ್ಲಿಟ್ಟುಕೊಂಡಿದೆ. ಇವುಗಳಲ್ಲಿ ಆಸ್ಟನ್‌ ಹಾಲ್‌, ಬ್ಲೇಕ್ಸ್ಲೆ ಹಾಲ್‌, ಮ್ಯೂಸಿಯಮ್‌ ಆಫ್‌ ದಿ ಜ್ಯುಯಲರಿ ಕ್ವಾರ್ಟರ್‌, ಸೊಹೊ ಹೌಸ್‌ ಹಾಗೂ ಜೆ. ಆರ್‌. ಆರ್‌. ಟೊಲ್ಕಿಯನ್‌ರ ಅಭಿಮಾನಿಗಳಿಗಾಗಿ ಸರಹೊಲ್‌ ಮಿಲ್‌ ಎಂಬ ಜನಪ್ರಿಯ ವಸ್ತುಪ್ರದರ್ಶನಾಲಯವೂ ಸಹ ಸೇರಿವೆ. ಈಸ್ಟ್‌ಸೈಡ್‌ನಲ್ಲಿರುವ ಥಿಂಕ್‌ಟ್ಯಾಂಕ್‌ ನಗರದಲ್ಲಿರುವ ಅತಿ ಹೊಸ ವಸ್ತು ಪ್ರದರ್ಶನಾಲಯ. ನ್ಯೂಹಾಲ್‌ ಸ್ಟ್ರೀಟ್‌ನಲ್ಲಿರುವ ಸಯನ್ಸ್‌ & ಇಂಡಸ್ಟ್ರಿ ಮ್ಯೂಸಿಯಮ್‌ನ ಸ್ಥಾನದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಬರ್ಮಿಂಗ್ಹ್ಯಾಮ್‌ ಬ್ಯಾಕ್‌ ಟು ಬ್ಯಾಕ್ಸ್‌ ಎಂಬುದು ನಗರದಲ್ಲಿರುವ ಜೋಡಿ ಗೃಹಗಳ ಕೊನೆಯ ಸಮೂಹವಾಗಿದೆ.[೫೩]

ಬ್ರಿಂಡ್ಲೆಪ್ಲೇಸ್‌ನಲ್ಲಿರುವ ಬರ್ಮಿಂಗ್ಹ್ಯಾಮ್‌ ಕೆನಾಲ್‌ ನ್ಯಾವಿಗೇಷನ್ಸ್‌ನ BCN ಮೇಯ್ನ್‌ ಲೈನ್‌ ಕೆನಾಲ್‌.

ಬಾರ್ಬರ್‌ ಇಂಸ್ಟಿಟ್ಯೂಟ್‌ ಆಫ್‌ ಫೈನ್‌ ಆರ್ಟ್ಸ್‌ ವಸ್ತು ಪ್ರದರ್ಶನಾಲಯ ಹಾಗೂ ವಾದ್ಯಗೋಷ್ಠಿ ಸಭಾಂಗಣವೂ ಆಗಿದೆ.

ಇದರಲ್ಲಿ ವಿಶ್ವದ ಅತಿ ವಿಸ್ತೃತ ಹಾಗೂ ಅತಿ ದೊಡ್ಡ ನಾಣ್ಯ ಸಂಗ್ರಹವಿದೆ.[೫೪] ಕ್ಯಾಡ್ಬ್ಯೂರಿ ವರ್ಲ್ಡ್‌ ಎಂಬುದು, ಚಾಕಲೇಟ್‌ ತಯಾರಿಕೆಯ ಹಂತಗಳ ಜೊತೆಗೆ, ಚಾಕಲೇಟ್‌ ಹಾಗೂ ಉದ್ದಿಮೆಯ ಇತಿಹಾಸವನ್ನು ಭೇಟಿಯಾದವರಿಗೆ ಪ್ರದರ್ಶಿಸುತ್ತದೆ.

ಬರ್ಮಿಂಗ್ಯಾಮ್‌ನಲ್ಲಿ ಸುಮಾರು 8,000 acres (3,237 ha) ಕಿಂತಲೂ ಹೆಚ್ಚು ಉದ್ಯಾನ ಕ್ಷೇತ್ರಗಳಿವೆ.[೫೫] 2,400 acres (971 ha) ಹರಡಿರುವ ಸಟ್ಟನ್‌ ಪಾರ್ಕ್‌ ಇವುಗಳಲ್ಲಿ ಅತಿದೊಡ್ಡದು. ಇದು ಯುರೋಪ್‌ನಲ್ಲೆ ನಗರವಲಯದ ಅತಿ ದೊಡ್ಡ ನೈಸರ್ಗಿಕ ಸಂರಕ್ಷಣಾ ತಾಣವಾಗಿದೆ. ನಗರದ ಮಧ್ಯಭಾಗಕ್ಕೆ ಸನಿಹವಿರುವ ಬರ್ಮಿಂಗ್ಹ್ಯಾಮ್‌ ಬಾಟನಿಕಲ್‌ ಗಾರ್ಡನ್ಸ್‌ ವಿಕ್ಟೊರಿಯನ್‌ ನಿರ್ಮಾಣವಾಗಿದೆ. ಇದರಲ್ಲಿ ಸಸ್ಯರಕ್ಷಣಾಗೃಹ ಹಾಗೂ ವಾದ್ಯವೇದಿಕೆಯಿದೆ. ಬರ್ಮಿಂಗ್ಹ್ಯಾಮ್‌ ವಿಶ್ವವಿದ್ಯಾನಿಲಯವು ನಿರ್ವಹಿಸುತ್ತಿರುವ ವಿಂಟರ್ಬೊರ್ನ್‌ ಬಾಟನಿಕ್‌ ಗಾರ್ಡನ್‌ ಸಹ ನಗರದ ಮಧ್ಯಭಾಗಕ್ಕೆ ಸನಿಹದಲ್ಲಿದೆ. ಬಾರ್ಟ್ಲೆ ಗ್ರೇನ್‌ ಅಂಡ್‌ ಕ್ವಿನ್ಟನ್‌ನಲ್ಲಿ ವುಡ್ಗೇಟ್‌ ವ್ಯಾಲಿ ಕಂಟ್ರಿ ಪಾರ್ಕ್‌ ಇದೆ.

ನಗರ ಕೇಂದ್ರದಲ್ಲಿ ಸೆಂಟೆನರಿ ಸ್ಕ್ವೇರ್‌, ಚಾಂಬರ್ಲಿನ್‌ ಸ್ಕ್ವೇರ್‌ ಹಾಗೂ ವಿಕ್ಟೊರಿಯಾ ಸ್ಕ್ವೇರ್‌ ಸೇರಿದಂತೆ, ಹಲವು ಸಾರ್ವಜನಿಕ ಚೌಕಗಳಿವೆ. ಐತಿಹಾಸಿಕ ಓಲ್ಡ್‌ ಸ್ಕ್ವೇರ್ಕಾರ್ಪೊರೇಷನ್‌ ಸ್ಟ್ರೀಟ್‌ನಲ್ಲಿದೆ. ರೊಟಂಡಾ ಸ್ಕ್ವೇರ್‌ ಹಾಗೂ ಸೇಂಟ್‌ ಮಾರ್ಟಿನ್ಸ್‌ ಸ್ಕ್ವೇರ್‌ ಬರ್ಮಿಂಗ್ಹ್ಯಾಮ್‌ನ ಎರಡು ಹೊಸ ಚೌಕಗಳು. ಇವು ಬುಲ್‌ರಿಂಗ್‌ ಷಾಪಿಂಗ್‌ ಸೆಂಟರ್‌ನೊಳಗಿವೆ. ಬ್ರಿಂಡ್ಲೆಪ್ಲೇಸ್‌ನಲ್ಲಿಯೂ ಸಹ ಮೂರು ಚೌಕಗಳು ಹಾಗೂ ನ್ಯಾಷನಲ್‌ ಸೀ ಲೈಫ್‌ ಸೆಂಟರ್‌ ಇವೆ.

ಪೂಜಾ ಸ್ಥಳಗಳು

[ಬದಲಾಯಿಸಿ]
ಸೇಂಟ್ ಫಿಲಿಪ್‌ರ ಪ್ರಧಾನ ಇಗರ್ಜಿ (ಕತೀಡ್ರಲ್‌).

ವಿವಿಧ ಧರ್ಮಗಳನ್ನು ಅನುಸರಿಸುವ ಬರ್ಮಿಂಗ್ಹ್ಯಾಮ್‌‌ನ ಜನತೆಯು ವಿವಿಧ ಧಾರ್ಮಿಕ ಭವನಗಳನ್ನು ಬಳಸುತ್ತದೆ. ಸೇಂಟ್‌ ಫಿಲಿಪ್‌ ಇಗರ್ಜಿಯ ಸ್ಥಿತಿನ್ನು 'ಇಗರ್ಜಿ'ಯಿಂದ 'ಪ್ರಧಾನ ಇಗರ್ಜಿ'ಗೆ (ಕತೀಡ್ರಲ್‌) ಗೆ ಏರಿಸಲಾಯಿತು. ಬರ್ಮಿಂಗ್ಹ್ಯಾಮ್‌ನ ರೊಮನ್‌ ಕ್ಯಾತೊಲಿಕ್‌ ವಿಭಾಗದ ಪೀಠವಾದ ಸೇಂಟ್‌ ಚಾಡ್ಸ್ ಹಾಗೂ ಗ್ರೀಕ್‌ ಸಂಪ್ರದಾಯದ ಡಾರ್ಮಿಷನ್‌ ಆಫ್‌ ದಿ ಮದರ್‌ ಆಫ್‌ ಗಾಡ್‌ ಅಂಡ್‌ ಸೇಂಟ್‌ ಆಂಡ್ರ್ಯೂ ಎಂಬ ಇನ್ನೂ ಎರಡು ಪ್ರಧಾನ ಇಗರ್ಜಿಗಳಿವೆ. ಕಾಪ್ಟಿಕ್‌ ಆರ್ತೊಡಾಕ್ಸ್‌ ಡಯೊಸಿಸ್‌ ಆಫ್‌ ದಿ ಮಿಡ್ಲೆಂಡ್ಸ್‌ ಸಹ ಬರ್ಮಿಂಗ್ಹ್ಯಾಮ್‌ನಲ್ಲಿದೆ ಇದರ ಪ್ರಧಾನ ಇಗರ್ಜಿಯು ನಿರ್ಮಾಣ ಹಂತದಲ್ಲಿದೆ. ಸೇಂಟ್‌ ಮಾರ್ಟಿನ್‌ ಇನ್‌ ದಿ ಬುಲ್‌ ರಿಂಗ್ ಎಂಬ ಮೂಲತಃ ಬರ್ಮಿಂಗ್ಹ್ಯಾಮ್‌ ಪ್ಯಾರಿಷ್‌ ಚರ್ಚ್‌ ಗ್ರೇಡ್‌ II* ಪಟ್ಟಿಯಲ್ಲಿದೆ (ಅಂದರೆ, ಇಂಗ್ಲೆಂಡ್‌ & ವೇಲ್ಸ್‌ನಲ್ಲಿರುವ, ವಿಶೇಷಕ್ಕಿಂತಲೂ ಹೆಚ್ಚು ಪ್ರಮುಖತೆ ಹೊಂದಿರುವ ಸ್ಮಾರಕಗಳು). ಫೈವ್‌ ವೇಸ್‌ಗಿಂತಲೂ ಸ್ವಲ್ಪ ದೂರದಲ್ಲಿ, ಕಾರ್ಡಿನಲ್‌ ನ್ಯೂಮನ್‌ರ ಮೂಲ ಅಡಿಪಾಯದ ಮೇಲೆ ಬರ್ಮಿಂಗ್ಹ್ಯಾಮ್‌ ಆರೆಟರಿಯನ್ನು(ಕ್ಯಾಥೊಲಿಕ್ ಪಾದ್ರಿಗಳ ಸಂಘ) 1910ರಲ್ಲಿ ಪೂರ್ಣಗೊಳಿಸಲಾಯಿತು.

ಬೊರ್ನ್‌ವಿಲ್‌ನ ಸೇಂಟ್‌ ಲಾಜಾರ್‌ನಲ್ಲಿರುವ ಸರ್ಬಿಯನ್‌ ಸಾಂಪ್ರದಾಯಿಕ ಇಗರ್ಜಿ

ಇಸವಿ 1825ರಲ್ಲಿ ನಿರ್ಮಿಸಲಾದ ಗ್ರೀಕ್ ರಿವೈವಲ್ಸೆವರ್ನ್‌ ಸ್ಟ್ರೀಟ್‌ ಸಿನಗಾಗ್‌ (ಇಂದು ಫ್ರೀಮೇಸನ್ಸ್‌ ಲಾಡ್ಜ್‌ ಹಾಲ್‌ ಆಗಿದೆ) ಯೆಹೂದ್ಯರ ಅತಿ ಪುರಾತನ ಆರಾಧನ ಮಂದಿರ. ಇಸವಿ 1856ರಲ್ಲಿ ಇದರ ಸ್ಥಾನದಲ್ಲಿ ಗ್ರೇಡ್‌ II* ಪಟ್ಟಿಯಲ್ಲಿರುವ ಸಿಂಗರ್ಸ್‌ ಹಿಲ್‌ ಸಿನಗಾಗ್‌ನ್ನು ಸ್ಥಾಪಿಸಲಾಯಿತು. ಯುರೋಪ್‌ನಲ್ಲಿ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ಬರ್ಮಿಂಗ್ಹ್ಯಾಮ್‌ ಸೆಂಟ್ರಲ್‌ ಮಾಸ್ಕ್‌ನ್ನು 1960ರ ದಶಕದಲ್ಲಿ ನಿರ್ಮಿಸಲಾಯಿತು.[೫೬] ಆದರೂ, 1990ರ ದಶಕದಲ್ಲಿ, ಸ್ಮಾಲ್‌ ಹೀತ್‌ನಲ್ಲಿ ನಿರ್ಮಿಸಲಾದ ಗಮ್‌ಕೊಲ್‌ ಷರಿಫ್‌ ಮಸ್ಜೀದ್‌ ಪಶ್ಚಿಮ ಯುರೋಪ್‌ನ ಅತಿದೊಡ್ಡ ಮಸೀದಿ ಎನ್ನಲಾಗಿದೆ. [ಸೂಕ್ತ ಉಲ್ಲೇಖನ ಬೇಕು] ಇನ್ನೂ ಇತ್ತೀಚೆಗೆ, ಅಹ್ಮದಿಯಾ ಮುಸ್ಲಿಮ್‌ ಸಮುದಾಯದವರು ಬಾರ್ಡರ್‌ಸ್ಲೆ ಗ್ರೀನ್‌ನಲ್ಲಿ ದಾರುಲ್‌ ಬರಕಾತ್‌‌ ಮಸ್ಜೀದ್‌ ನಿರ್ಮಿಸಿದರು.[೫೭] 1970ರ ದಶಕದ ಅಪರಾರ್ಧದಲ್ಲಿ ಗುರು ನಾನಕ್‌ ನಿಷ್ಕಾಮ್‌ ಸೇವಕ್‌ ಜಾಥಾ ಸಿಖ್ಗುರುದ್ವಾರವನ್ನು ಹ್ಯಾಂಡ್ಸ್‌ವರ್ತ್‌ನ ಸೊಹೊ ರಸ್ತೆಯಲ್ಲಿ ನಿರ್ಮಿಸಲಾಯಿತು. 1990ರ ದಶಕದಲ್ಲಿ, ಎಡ್ಜ್‌ಬ್ಯಾಸ್ಟನ್‌ ಜಲಾಶಯದ ಬಳಿ ಬೌದ್ಧ ಧಮ್ಮತಲಕ ಶಾಂತಿ ಪಗೊಡಾವನ್ನು ನಿರ್ಮಿಸಲಾಯಿತು.

ಆರ್ಥಿಕ ಸ್ಥಿತಿ

[ಬದಲಾಯಿಸಿ]
ಬರ್ಮಿಂಗ್ಹ್ಯಾಮ್‌ನ ವಾಣಿಜ್ಯ ಜಿಲ್ಲೆಯಲ್ಲಿರುವ ಕೊಲ್ಮೋರ್‌ ರೋ.

ತಯಾರಿಕೆ ಹಾಗೂ ಇಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಬರ್ಮಿಂಗ್ಹ್ಯಾಮ್‌ ಪ್ರಾಬಲ್ಯ ಮೆರೆದಿದ್ದರೂ, ಇಂದು ಸೇವಾ ಕ್ಷೇತ್ರವು ಇದರ ಆರ್ಥಿಕತೆಯ ಅಗ್ರಸ್ಥಾನದಲ್ಲಿದೆ. ಇಸವಿ 2003ರಲ್ಲಿ ಇದು ಆರ್ಥಿಕ ಉತ್ಪಾದಕತೆಯ 78% ಹಾಗೂ ಆರ್ಥಿಕ ಅಭಿವೃದ್ಧಿಯ 97%ರಷ್ಟು ಪಾಲಿತ್ತು.[೫೮]

ಬ್ರಿಟನ್‌ನ ಅತಿ ದೊಡ್ಡ ಬ್ಯಾಂಕ್‌ಗಳಲ್ಲಿ ಎರಡು ಬರ್ಮಿಂಗ್ಹ್ಯಾಮ್‌ನಲ್ಲಿವೆ. ಲಾಯ್ಡ್ಸ್‌ ಬ್ಯಾಂಕ್‌ (ಈಗ ಲಾಯ್ಡ್ಸ್‌ ಬ್ಯಾಂಕಿಂಗ್‌ ಗ್ರೂಪ್‌) 1765ರಲ್ಲಿ,[೫೯] ಹಾಗೂ ಮಿಡ್ಲೆಂಡ್ಸ್‌ ಬ್ಯಾಂಕ್‌ (ಇಂದು ಹೆಚ್‌ಎಸ್‌ಬಿಸಿ ಬ್ಯಾಂಕ್‌) 1836ರಲ್ಲಿ ಸ್ಥಾಪಿತವಾದವು.[೬೦] ಇಸವಿ 2007ರಲ್ಲಿ, ನಗರದಲ್ಲಿ, ಬ್ಯಾಂಕಿಂಗ್‌, ಹಣಕಾಸು ಹಾಗೂ ವಿಮಾ ಕ್ಷೇತ್ರಗಳಲ್ಲಿ 108,300 ಜನರು ಸೇವೆ ಸಲ್ಲಿಸುತ್ತಿದ್ದರು.[೬೧] ಇಸವಿ 2009ರಲ್ಲಿ ಕುಷ್ಮನ್‌ & ವೇಕ್ಫೀಲ್ಡ್‌ ಸಮೀಕ್ಷೆಯ ಪ್ರಕಾರ, ಉದ್ದಿಮೆ ಸ್ಥಾಪಿಸಲು ಬರ್ಮಿಂಗ್ಹ್ಯಾಮ್‌ ಯುನೈಟೆಡ್ ಕಿಂಗ್ಡಮ್‌ನಲ್ಲಿ ಎರಡನೆಯ ಹಾಗೂ ಯುರೋಪ್‌ನಲ್ಲಿ 14ನೆಯ ಅತ್ಯುತ್ತಮ ನಗರ ಎಂದಿದೆ.[]

ಪ್ರವಾಸೋದ್ಯಮವೂ ಸಹ ಸ್ಥಳೀಯ ಆರ್ಥಿಕತೆಯ ಗಮನಾರ್ಹ ಅಂಶವಾಗಿ ಬೆಳೆಯುತ್ತಿದೆ. ಇಂಟರ್ನ್ಯಾಷನಲ್‌ ಕನ್ವೆಂಷನ್‌ ಸೆಂಟರ್‌ ಹಾಗೂ ನ್ಯಾಷನಲ್‌ ಎಕ್ಸಿಬಿಷನ್‌ ಸೆಂಟರ್‌ನಂತಹ ಪ್ರಮುಖ ಮಹಾಸಭೆ ಮತ್ತು ಪ್ರದರ್ಶನಾ ಕೇಂದ್ರಗಳು ಬರ್ಮಿಂಗ್ಹ್ಯಾಮ್‌ನಲ್ಲಿವೆ. UKಯಲ್ಲಿರುವ ಮಹಾಸಭೆ ಹಾಗೂ ಪ್ರದರ್ಶನಾ ಕೇಂದ್ರಗಳಲ್ಲಿ 42%ರಷ್ಟು ಪಾಲು ಬರ್ಮಿಂಗ್ಹ್ಯಾಮ್‌ನದ್ದಾಗಿದೆ.[೬೨] ಭೇಟಿಗಾರರು ನಗರದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವರು.

ನಗರದಲ್ಲಿ ಮೂರು ವಿಶ್ವವಿದ್ಯಾನಿಲಯಗಳು (ಆಸ್ಟನ್‌ ವಿಶ್ವವಿದ್ಯಾನಿಲಯ, ಬರ್ಮಿಂಗ್ಹ್ಯಾಮ್‌ ವಿಶ್ವವಿದ್ಯಾನಿಲಯ ಮತ್ತು ಬರ್ಮಿಂಗ್ಹ್ಯಾಮ್‌ ನಗರ ವಿಶ್ವವಿದ್ಯಾನಿಲಯ) ಹಾಗೂ ಎರಡು ವಿಶ್ವವಿದ್ಯಾನಿಲಯ ಕಾಲೇಜುಗಳಿವೆ. ಒಟ್ಟು 65,000ಕ್ಕಿಂತಲೂ ಹೆಚ್ಚು ಜನ ವಿದ್ಯಾರ್ಥಿಗಳು ಹಾಗೂ ಸುಮಾರು 15,000 ಜನ ಸಿಬ್ಬಂದಿಯಿದ್ದಾರೆ. ಇದರಿಂದಾಗಿ ನಗರದ ಆರ್ಥಿಕತೆ ಹಾಗೂ ಸಂಶೋಧನೆ ಮತ್ತು ನಾವೀನ್ಯ ಭಂಡಾರಗಳಿಗೆ ಕೊಡುಗೆ ಸಲ್ಲುತ್ತದೆ.

ಕ್ಯಾಸ್ಲ್‌ ಬ್ರೊಮ್ವಿಚ್‌ ಅಸೆಂಬ್ಲಿಯಲ್ಲಿ ಜಾಗರ್‌ ಕಾರ್ಸ್‌ ಉದ್ದಿಮೆಯಲ್ಲಿ ಸಿದ್ಧಪಡಿಸಲಾದ ಜಾಗರ್‌ XF ವಾಹನ.

£2.2 ಶತಕೋಟಿಯಷ್ಟು ವಾರ್ಷಿಕ ವಹಿವಾಟು ನಡೆಯುವ ಬರ್ಮಿಂಗ್ಹ್ಯಾಮ್‌ ನಗರ ಕೇಂದ್ರವು, UKಯ ಎರಡನೆಯ ಅತಿ ದೊಡ್ಡ ಚಿಲ್ಲರೆ ವ್ಯಾಪಾರ ಕೇಂದ್ರವಾಗಿದೆ.[೬೩] ಲಂಡನ್‌ ಹೊರತುಪಡಿಸಿ, ಬರ್ಮಿಂಗ್ಹ್ಯಾಮ್‌ನ ಬುಲ್‌ರಿಂಗ್ ದೇಶದ ಅತಿ ನಿಬಿಡ ವ್ಯಾಪಾರ ಕೇಂದ್ರವಾದ ವಾರ್ಷಿಕ ವ್ಯಾಪಾರ ಕೇಂದ್ರ,[೬೪] ಹಾಗೂ ಕಾರ್ಪೊರೇಷನ್‌ ಸ್ಟ್ರೀಟ್‌ನಲ್ಲಿರುವ ಹೌಸ್‌ ಆಫ್‌ ಫ್ರೇಸರ್‌ ಅತಿ ದೊಡ್ಡ ವಿವಿಧ ಸರಕಿನ ಮಳಿಗೆಯಾಗಿದೆ.[೬೫]

ದೇಶದಲ್ಲಿರುವ ಕೇವಲ ನಾಲ್ಕು ಸೆಲ್ಫ್ರಿಡ್ಜಸ್‌ ವಿವಿಧ ಸರಕಿನ ಮಳಿಗೆಗಳ ಪೈಕಿ ಒಂದು ನಗರದಲ್ಲಿದೆ. ದೇಶದಲ್ಲಿರುವ ಡೆಬೆನ್‌ಹ್ಯಾಮ್ಸ್‌ ಶಾಖೆಗಳಲ್ಲಿ ಎರಡನೆಯ ಅತಿ ದೊಡ್ಡ ಶಾಖೆ ನಗರದಲ್ಲಿದೆ.[೬೪] ಇಸವಿ 2004ರಲ್ಲಿ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ವ್ಯಾಪಾರ ಮಾಡಲು ಮೂರನೆಯ ಅತ್ಯುತ್ತಮ ನಗರ ಎನ್ನಲಾಯಿತು. ಲಂಡನ್‌ನ ವೆಸ್ಟ್ ಎಂಡ್‌ ಹಾಗೂ ಗ್ಲಾಸ್ಗೊ ನಗರಗಳಿಗೆ ಮೊದಲ ಎರಡು ಸ್ಥಾನ ಲಭಿಸಿದ್ದವು. ಇವನ್ನು ವಿಶ್ವದರ್ಜೆಯ ವ್ಯಾಪಾರ ಕೇಂದ್ರ ಎನ್ನಲಾಗಿತ್ತು.[೬೬]

ನಗರದಲ್ಲಿ ತಯಾರಿಕೆಯ ಕ್ಷೇತ್ರದ ಅವಸಾನವಾಗುತ್ತಿದ್ದರೂ, ಹಲವು ಪ್ರಮುಖ ಕೈಗಾರಿಕಾ ಘಟಕಗಳು ಉಳಿದುಕೊಂಡಿವೆ. ಇದರಲ್ಲಿ ಕ್ಯಾಸ್ಲ್‌ ಬ್ರೊಮ್ವಿಚ್‌‌ನಲ್ಲಿರುವ ಜಾಗರ್‌ ಕಾರ್ಸ್‌ ಹಾಗೂ ಬೊರ್ನ್ವಿಲ್‌ನಲ್ಲಿರುವ ಕ್ಯಾಡ್‌ಬ್ಯೂರಿ ಟ್ರೆಬೊರ್‌ ಬ್ಯಾಸೆಟ್‌ ಸಹ ಸೇರಿವೆ.

ಇಪ್ಪತ್ತೊಂದನೆಯ ಶತಮಾನದಲ್ಲಿ ನಗರವು ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚು ಆರ್ಥಿಕ ಅಭಿವೃದ್ಧಿ ಗಳಿಸಿದರೂ,[೬೭] ಇದರಿಂದ ಲಭ್ಯವಾದ ಅನುಕೂಲಗಳು ಸಮವಾಗಿಲ್ಲ. ನವೀನತೆಯನ್ನೊಳಗೊಂಡ ಹುದ್ದೆಗಳು ಸುತ್ತಮುತ್ತಲ ಪ್ರದೇಶಗಳಿಂದ ಅರಸಿ ಬರುವ ಅಭ್ಯರ್ಥಿಗಳ ಪಾಲಾಗುತ್ತಿರುವುದು ಇದಕ್ಕೆ ಕಾರಣ. UKಯಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವಿರುವ ಎರಡು ಸಂಸದೀಯ ಕ್ಷೇತ್ರಗಳಾದ ಲೇಡಿವುಡ್‌ ಮತ್ತು ಸ್ಪಾರ್ಕ್‌ಬ್ರೂಕ್‌ ಅಂಡ್‌ ಸ್ಮಾಲ್‌ ಹೀತ್ ಇವೆರಡೂ ಬರ್ಮಿಂಗ್ಹ್ಯಾಮ್‌ ಒಳನಗರ ವಿಭಾಗದಲ್ಲಿವೆ.[೬೮] ಬೆಳವಣಿಗೆಯೂ ಸಹ ನಗರದ ಸಾರಿಗೆಯ ಮೇಲೆ ಬಹಳಷ್ಟು ಒತ್ತಡಕ್ಕೆ ಕಾರಣವಾಗಿದೆ. ನಗರದ ಪ್ರಮುಖ ರಸ್ತೆಗಳು ಹಾಗೂ ಕೇಂದ್ರೀಯ ನ್ಯೂ ಸ್ಟ್ರೀಟ್‌ ರೈಲು ನಿಲ್ದಾಣವು ನಿಬಿಡ ಅವಧಿಗಳಲ್ಲಿ ತಮ್ಮ ಕ್ಷಮತೆಯನ್ನು ಮೀರಿರುತ್ತದೆ.

ಸಾರಿಗೆ

[ಬದಲಾಯಿಸಿ]
ಬರ್ಮಿಂಗ್ಹ್ಯಾಮ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.
ನ್ಯೂ ಸ್ಟ್ರೀಟ್‌ ರೈಲು ನಿಲ್ದಾಣದಲ್ಲಿ ಬರ್ಮಿಂಗ್ಹ್ಯಾಮ್‌ ಆಡಳಿತದಿಂದ ನಿರ್ಮಿತ ಪೆಂಡೊಲಿನೊ.

ಬರ್ಮಿಂಗ್ಹ್ಯಾಮ್‌ ಭಾಗಶಃ ಒಳನಾಡಿನ ಮಧ್ಯದಲ್ಲಿರುವ ಕಾರಣ, ಬರ್ಮಿಂಗ್ಹ್ಯಾಮ್‌ ಮೋಟಾರ್‌-ಹಾದಿ, ರೈಲು ಹಾಗೂ ಕಾಲುವೆ ಜಾಲಗಳಲ್ಲಿ ಪ್ರಮುಖ ನಿಲ್ದಾಣವಾಗಿದೆ.[೬೯] ಹಲವು ಪ್ರಮುಖ ಮೋಟಾರ್‌-ಹಾದಿಗಳು ನಗರದ ಮೂಲಕ ಹಾದುಹೋಗುತ್ತವೆ. ಸ್ಪಗೆಟಿ ಜಂಕ್ಷನ್‌ ಎಂಬುದು UKಯಲ್ಲಿರುವ ಅತಿ ಚಿರಪರಿಚಿತ ಮೊಟಾರ್‌-ಹಾದಿ ಜಂಕ್ಷನ್‌ ಆಗಿದೆ.

ನ್ಯಾಷನಲ್ ಎಕ್ಸ್‌ಪ್ರೆಸ್‌ನ UKಯ ಪ್ರಧಾನ ಕಾರ್ಯಸ್ಥಾನವು ಬರ್ಮಿಂಗ್ಹ್ಯಾಮ್‌ನ ಈಸ್ಟ್‌ಸೈಡ್‌ನಲ್ಲಿದೆ. ಇದರ ಪಕ್ಕದಲ್ಲಿಯೇ ಬರ್ಮಿಂಗ್ಹ್ಯಾಮ್‌ ಕೋಚ್‌ ಸ್ಟೇಷನ್‌ ನನ್ನು ಹೊಸದಾಗಿ ನಿರ್ಮಿಸಲಾಗಿದೆ.

ಬರ್ಮಿಂಗ್ಹ್ಯಾಮ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸೊಲಿಹಲ್ ನಗರವಿಭಾಗದಲ್ಲಿದೆ. ಇದು ಬರ್ಮಿಂಗ್ಹ್ಯಾಮ್‌ನ ಪೂರ್ವಭಾಗದಲ್ಲಿದೆ. ಇಸವಿ 2009ರಲ್ಲಿ, ಪ್ರಯಾಣಿಕ ಸಂಚಾರದ ವಿಚಾರದಲ್ಲಿ, ಈ ವಿಮಾನ ನಿಲ್ದಾಣವು ಯುನೈಟೆಡ್‌ ಕಿಂಗ್ಡಮ್‌ನ ಆರನೆಯ ಅತಿ ನಿಬಿಡ ವಿಮಾನ ನಿಲ್ದಾಣ ಎನ್ನಲಾಗಿತ್ತು.

ಸ್ಥಳೀಯ ಸಾರ್ವಜನಿಕ ಸಾರಿಗೆಯೆಂದರೆ ಬಸ್‌, ಸ್ಥಳೀಯ ರೈಲು ಅಥವಾ ಟ್ರ್ಯಾಮ್‌ ಸೌಲಭ್ಯಗಳಿವೆ. ಮಾರ್ಗ ಸಂಖ್ಯೆ 11A ಹಾಗೂ 11C ಯುರೋಪ್‌ ಖಂಡದಲ್ಲೇ ಅತಿ ದೀರ್ಘ ಸಮಯದ ನಗರವಲಯ ಬಸ್‌ ಮಾರ್ಗಗಳಾಗಿವೆ (ನಗರವನ್ನು ಸುತ್ತುವ ದಿಕ್ಕನ್ನು ಸೂಚಿಸುವಂತೆ, ಇದರಲ್ಲಿ 'A' ಎಂಬುದು 'ಅಪ್ರದಕ್ಷಿಣ anti-clockwise) ಹಾಗೂ 'C' ಎಂಬುದು 'ಪ್ರದಕ್ಷಿಣ (clockwise)' ಎಂದು ಉಲ್ಲೇಖಿಸಲಾಗಿದೆ). ಈ ಮಾರ್ಗವು 26 miles (42 km) ಉದ್ದವಿದೆ [೭೦] ಹಾಗೂ ಇದರಲ್ಲಿ 272 ಬಸ್‌ ನಿಲುಗಡೆಗಳಿವೆ.[೭೧] ಬಸ್‌ ಮಾರ್ಗಗಳನ್ನು ಪ್ರಮುಖವಾಗಿ ನ್ಯಾಷನಲ್‌ ಎಕ್ಸ್‌ಪ್ರೆಸ್‌ ವೆಸ್ಟ್‌ ಮಿಡ್ಲೆಂಡ್ಸ್‌ ಸಾರಿಗೆ ಸಂಸ್ಥೆಯು ನಿರ್ವಹಿಸುತ್ತದೆ. ಇದು ಬರ್ಮಿಂಗ್ಹ್ಯಾಮ್‌ನಲ್ಲಿ ಬಸ್‌ ಸಂಚಾರದ 80%ರಷ್ಟು ಪಾಲನ್ನು ಹೊಂದಿದೆ. ಆದರೂ ಇನ್ನು 50 ಇತರೆ ಸಣ್ಣ ಪ್ರಮಾಣದ, ನೋಂದಾಯಿತ ಬಸ್‌ ಸೇವಾ ಸಂಸ್ಥೆಗಳಿವೆ.[೭೨] ವಿಸ್ತಾರವಾದ ಬಸ್‌ ಸೇವಾ ಜಾಲದ ಮೂಲಕ ಪ್ರಯಾಣಿಕರು ನಗರದ ವಿವಿಧ ಜಿಲ್ಲೆಗಳ ನಡುವೆ ಪ್ರಯಣಿಸಬಹುದಾಗಿದೆ. ಇನ್ನೂ ಹೆಚ್ಚು ದೂರದ ಬಸ್ ಮಾರ್ಗಗಳಲ್ಲಿ ಪ್ರಯಾಣಿಕರು ವೊಲ್ವರ್‌ಹ್ಯಾಂಪ್ಟನ್‌, ಡಡ್ಲೆ, ವಾಲ್ಸಾಲ್‌, ವೆಸ್ಟ್‌ ಬ್ರೊಮ್ವಿಚ್‌, ಹಾಲ್ಸೊವೆನ್‌, ಸ್ಟೊರ್‌‌ಬ್ರಿಡ್ಜ್‌ ಹಾಗೂ ಮೆರ್ರಿ ಹಿಲ್ ಷಾಪಿಂಗ್‌ ಸೆಂಟರ್‌ನಂತಹ ಸ್ಥಳಗಳಿಗೆ ಹೋಗಬಹುದಾಗಿದೆ. ಬರ್ಮಿಂಗ್ಹ್ಯಾಮ್‌ನೊಂದಿಗೆ ಯಾವುದೇ ನೇರ ಸಾರ್ವಜನಿಕ ಸಾರಿಗೆ ಸಂಪರ್ಕ ಹೊಂದಿರದ ಪಟ್ಟಣಗಳೆಂದರೆ ಸೆಡ್ಜ್‌ಲೆ, ಕಿಂಗ್ಸ್‌ವಿನ್ಫರ್ಡ್‌, ವೆಡ್ನೆಸ್ಫೀಲ್ಡ್‌ ಹಾಗೂ ವಿಲೆನ್ಹಾಲ್‌.

'ಬರ್ಮಿಂಗ್ಹ್ಯಾಮ್‌ ನ್ಯೂ ಸ್ಟ್ರೀಟ್‌' ಎನ್ನಲಾದ ನಗರದ ಮುಖ್ಯ ರೈಲ್‌ ನಿಲ್ದಾಣ ರಾಷ್ಟ್ರೀಯ ರೈಲ್ವೆ ಜಾಲದ ಮಧ್ಯದಲ್ಲಿದೆ. ನಗರದ ಕೇಂದ್ರದಲ್ಲಿರುವ ಇನ್ನೊಂದು ಪ್ರಮುಖ ರೈಲ್ವೆ ನಿಲ್ದಾಣವಾದ 'ಬರ್ಮಿಂಗ್ಹ್ಯಾಮ್‌ ಸ್ನೊ ಹಿಲ್‌ ಸ್ಟೇಷನ್‌' ಮಿಡ್ಲೆಂಡ್‌ ಮೆಟ್ರೊ ಸೇವಾ ಸಂಸ್ಥೆಗೂ ನಿಲ್ದಾಣವಾಗಿದೆ. ಇದು ಬರ್ಮಿಂಗ್ಹ್ಯಾಮ್‌ ಸ್ನೊ ಹಿಲ್‌ ಸ್ಟೇಷನ್‌ ಹಾಗೂ ವುಲ್ವರ್‌ಹ್ಯಾಂಪ್ಟನ್ ನಡುವೆ ರೈಲು ಸೇವೆ ಒದಗಿಸುತ್ತದೆ. ಇದು ಸುತ್ತಮುತ್ತಲ ಪಟ್ಟಣಗಳಾದ ‌ಬಿಲ್‌ಸ್ಟನ್‌, ವೆಡ್ನೆಸ್‌ಬ್ಯೂರಿ ಮತ್ತು ವೆಸ್ಟ್‌ ಬ್ರೊಮ್ವಿಚ್‌ ಪಟ್ಟಣಗಳ ಮೂಲಕ ಹಾದುಹೋಗುತ್ತದೆ.[೭೩] ಮಿಡ್ಲೆಂಡ್‌ ಮೆಟ್ರೊ ಮಾರ್ಗವನ್ನು ಬರ್ಮಿಂಗ್ಹ್ಯಾಮ್‌ ನಗರ ಕೇಂದ್ರದ ತನಕ ವಿಸ್ತರಿಸುವ ಯೋಜನೆಯಿದೆ.[೭೪] ರೈಲು ಆಧಾರಿತ ನಿಲುಗಡೆ ಹಾಗೂ ಪ್ರಯಾಣ ಜಾಲವಿದೆ. (ಪಾರ್ಕ್‌ ಅಂಡ್‌ ರೈಡ್‌ ನೆಟ್ವರ್ಕ್‌). ಇದು ನಗರ ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ. ಬರ್ಮಿಂಗ್ಹ್ಯಾಮ್‌ ರೈಲ್‌ ನಿಲ್ದಾಣಗಳು ನೋಡಿ.

ಬರ್ಮಿಂಗ್ಹ್ಯಾಮ್‌ನಲ್ಲಿ ವಿಸ್ತಾರವಾದ ಕಾಲುವೆ ವ್ಯವಸ್ಥೆಯಿದೆ. ಇಲ್ಲಿನ ಕಾಲುವೆ ವ್ಯವಸ್ಥೆಯ ಉದ್ದವು ವೆನಿಸ್‌ನದಕ್ಕಿಂತಲೂ ಉದ್ದವಿದೆ.‌ ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಈ ಕಾಲುವೆಗಳು ನಗರದಲ್ಲಿರುವ ಕೈಗಾರಿಕಾ ಕ್ಷೇತ್ರಕ್ಕೆ ಆಧಾರವಾಗಿದ್ದವು. ಬ್ರಿಂಡ್ಲೆಪ್ಲೇಸ್‌ನಂತಹ ಕಾಲುವೆ-ಬದಿಗಳ ನವೀಕರಣಾ ಯೋಜನೆಯಿಂದಾಗಿ ಈ ಕಾಲುವೆಗಳು ಪ್ರವಾಸಿತಾಣಗಳಾಗಿವೆ.

ಶಿಕ್ಷಣ

[ಬದಲಾಯಿಸಿ]
ಬರ್ಮಿಂಗ್ಹ್ಯಾಮ್‌ ವಿಶ್ವವಿದ್ಯಾನಿಲಯ

ನಗರದ ಪರಿಷತ್ತು ಇಂಗ್ಲೆಂಡ್‌ನ ಅತಿ ದೊಡ್ಡ ಸ್ಥಳೀಯ ಶಿಕ್ಷಣ ಪ್ರಾಧಿಕಾರವಾಗಿದೆ. 25 ಶಿಶುವಿಹಾರಗಳು, 328 ಪ್ರಾಥಮಿಕ ಶಾಲೆಗಳು, 77 ಪ್ರೌಢಶಾಲೆಗಳು [೭೫] ಹಾಗೂ 29 ವಿಶೇಷ ಶಾಲೆಗಳು ಈ ಪ್ರಾಧಿಕಾರದ ನೇರ ಅಥವಾ ಪರೋಕ್ಷ ಆಡಳಿತ ವ್ಯಾಪ್ತಿದಲ್ಲಿದೆ.[೭೬] ಈ ಪ್ರಾಧಿಕಾರವು ಗ್ರಂಥಾಲಯ ಸೇವೆಯನ್ನೂ ಒದಗಿಸುತ್ತದೆ. ವಾರ್ಷಿಕ ನಾಲ್ಕು ದಶಲಕ್ಷ ಸಂದರ್ಶಕರು ಈ ಗ್ರಂಥಾಲಯದ ಸೌಲಭ್ಯ ಪಡೆಯುವರು.[೭೭] ಜೊತೆಗೆ, ವರ್ಷಪೂರ್ತಿ ಸುಮಾರು 3,500 ವಯಸ್ಕ-ಶಿಕ್ಷಣ ಪಠ್ಯಕ್ರಮವನ್ನೂ ಒದಗಿಸುತ್ತದೆ.[೭೮] ಕೇಂದ್ರ ಗ್ರಂಥಾಲಯ (ಸೆಂಟ್ರಲ್‌ ಲೈಬ್ರರಿ) ಪ್ರಮುಖ ಗ್ರಂಥಾಲಯವಾಗಿದೆ. ಬರ್ಮಿಂಗ್ಹ್ಯಾಮ್‌ನಲ್ಲಿ 41 ಸ್ಥಳೀಯ ಗ್ರಂಥಾಲಯಗಳು ಹಾಗೂ ನಿಯಮಿತ ಸಂಚಾರಿ ಗ್ರಂಥಾಲಯ ಸೇವೆಯೂ ಇದೆ.[೭೯]

ಬರ್ಮಿಂಗ್ಹ್ಯಾಮ್‌ನ ರಾಜ್ಯ ಶಾಲೆಗಳಲ್ಲಿ ಬಹಳಷ್ಟು, ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ ನಡೆಸುವ ಸಮುದಾಯ ಶಾಲೆಗಳಾಗಿವೆ. ಈ ಪರಿಷತ್‌ ಸ್ಥಳೀಯ ಶಿಕ್ಷಣ ಪ್ರಾಧಿಕಾರದ (LEA) ರೂಪದಲ್ಲಿ ಈ ಶಾಲೆಗಳನ್ನು ನಿರ್ವಹಿಸುತ್ತವೆ. ಆದರೂ, ಈ ರಾಜ್ಯ ವ್ಯವಸ್ಥೆಯೊಳಗೇ ಬಹಳಷ್ಟು voluntary aided (ಸ್ವಯಂ ನಿಧಿ ಹೂಡುವ)ಶಾಲೆಗಳೂ ಇವೆ (ಇವು ರಾಜ್ಯದ ಆರ್ಥಿಕ ನೆರವಿನಿಂದ ನಡೆಯುವ ಶಾಲೆಗಳಾಗಿವೆ, ಆದರೆ ಈ ಶಾಲೆಗಳ ಮಾಲಿಕ ಸಂಸ್ಥೆ (ಸಾಮಾನ್ಯವಾಗಿ ಧಾರ್ಮಿಕ ದತ್ತಿ) ಶಾಲೆಯ ಕಟ್ಟಡಗಳು ಹಾಗೂ ಅವುಗಳ ದುರಸ್ತಿ ಖರ್ಚನ್ನು ವಹಿಸಿಕೊಂಡು, ಶಾಲೆಗಳನ್ನು ನಡೆಸುವಲ್ಲಿ ಹೆಚ್ಚು ಪ್ರಾಬಲ್ಯ ಮೆರೆಯುತ್ತದೆ. ಈ ಶಾಲೆಗಳು ಸ್ವಯಂ ನಿಯಂತ್ರಿತ voluntary controlled ಶಾಲೆಗಳಿಗಿಂತಲೂ ಹೆಚ್ಚು ಪರಮಾಧಿಕಾರ ಹೊಂದಿವೆ). ಕಿಂಗ್‌ ಎಡ್ವರ್ಡ್ಸ್‌ ಶಾಲೆ ಬಹುಶಃ ನಗರದ ಅತಿ ಪ್ರತಿಷ್ಠಿತ ಸ್ವತಂತ್ರ ಶಾಲೆಯಾಗಿದೆ. ಕಿಂಗ್‌ ಎಡ್ವರ್ಡ್‌ VI ಸಂಸ್ಥಾನದ ಸ್ವಾಮ್ಯದಲ್ಲಿರುವ ಏಳು ಶಾಲೆಗಳು ಅತ್ಯುನ್ನತ ಶೈಕ್ಷಣಿಕ ಗುಣಮಟ್ಟಗಳನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿವೆ. ಈ ಎಲ್ಲಾ ಶಾಲೆಗಳು ರಾಷ್ಟ್ರೀಯ ಲೀಗ್‌ ಮಟ್ಟದಲ್ಲಿ ಸತತವಾಗಿ ಅಗ್ರಸ್ಥಾನಗಳನ್ನು ಗಳಿಸುತ್ತಲೇ ಬಂದಿದೆ.[೮೦]

ಬರ್ಮಿಂಗ್ಹ್ಯಾಮ್‌ ಕೇಂದ್ರ ಗ್ರಂಥಾಲಯ

ಮೂರು ವಿಶ್ವವಿದ್ಯಾನಿಲಯಗಳು ಬರ್ಮಿಂಗ್ಹ್ಯಾಮ್‌ನಲ್ಲಿವೆ: University of ಬರ್ಮಿಂಗ್ಹ್ಯಾಮ್‌ ವಿಶ್ವವಿದ್ಯಾನಿಲಯ, ಆಸ್ಟನ್‌ ವಿಶ್ವವಿದ್ಯಾನಿಲಯ, ಬರ್ಮಿಂಗ್ಹ್ಯಾಮ್‌ ನಗರ ವಿಶ್ವವಿದ್ಯಾನಿಲಯ ಹಾಗೂ ಎರಡು ವಿಶ್ವವಿದ್ಯಾನಿಲಯ ಕಾಲೇಜ್‌ಗಳು: ನ್ಯೂಮನ್‌ ಯುನಿವರ್ಸಿಟಿ ಕಾಲೇಜ್‌ [೮೧] ಹಾಗೂ ಬರ್ಮಿಂಗ್ಹ್ಯಾಮ್‌ ಯುನಿವರ್ಸಿಟಿ ಕಾಲೇಜ್‌.[೮೨] ಈಗ ಬರ್ಮಿಂಗ್ಹ್ಯಾಮ್‌ ನಗರ ವಿಶ್ವವಿದ್ಯಾನಿಲಯದ ಅಂಗವಾಗಿರುವ ಬರ್ಮಿಂಗ್ಹ್ಯಾಮ್‌ ಕನ್ಸರ್ವೇಟೊಯರ್‌ ಹಾಗೂ ಬರ್ಮಿಂಗ್ಹ್ಯಾಮ್‌ ಸ್ಕೂಲ್‌ ಆಫ್‌ ಆಕ್ಟಿಂಗ್‌ ವಿಶಿಷ್ಟ ಕಲಾ ವಿಷಯಗಳಲ್ಲಿ ಉನ್ನತ ಶಿಕ್ಷಣ ನೀಡುತ್ತದೆ. ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜ್‌ಗಳ ಶ್ರೇಣಿಯನ್ನು ಪರಿಗಣಿಸಿದಲ್ಲಿ, ಬರ್ಮಿಂಗ್ಹ್ಯಾಮ್‌ನಲ್ಲಿ ಸುಮಾರು 65,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿದ್ದಾರೆ ಎನ್ನಬಹುದು. ಲಂಡನ್‌ ನಂತರ ಬರ್ಮಿಂಗ್ಹ್ಯಾಮ್‌ UKಯ ಎರಡನೆಯ ಅತಿ ದೊಡ್ಡ ವಿದ್ಯಾರ್ಥಿ ನಗರ ಎನ್ನಲಾಗಿದೆ. ಬರ್ಮಿಂಗ್ಹ್ಯಾಮ್‌ ವಿಶ್ವವಿದ್ಯಾನಿಲಯದ ಚಾನ್ಸೆಲರ್ಸ್‌ ಕೋರ್ಟ್‌ನಲ್ಲಿರುವ ಜೊಸೆಫ್‌ ಚಾಂಬರ್ಲಿನ್‌ ಸ್ಮಾರಕ ಗಡಿಯಾರ ಗೋಪುರವು ಒಂದು ಗಂಟೆಗೋಪುರ ಆಗಿದೆ. ಇದು ವಿಶ್ವದಲ್ಲೇ ಅತ್ಯುನ್ನತ ಗಡಿಯಾರ ಗೋಪುರವಾಗಿದೆ.

ಬರ್ಮಿಂಗ್ಹ್ಯಾಮ್‌ ಮಹಾನಗರ ಕಾಲೇಜ್‌ ದೇಶದಲ್ಲಿಯೇ ಅತಿ ದೊಡ್ಡ ಉನ್ನತ ಶಿಕ್ಷಣ ಕಾಲೇಜ್‌ಗಳಲ್ಲೊಂದು.[೮೩] ಹಲವು ಸಣ್ಣ ಕಾಲೇಜ್‌ಗಳು ಸರಣಿಯಲ್ಲಿ ವಿಲೀನವಾಗಿ ರಚನೆಯಾದ ಕಾಲೇಜಿದು. ಜೋಸೆಫ್‌ ಚಾಂಬರ್ಲಿನ್‌ ಕಾಲೇಜ್‌ ಬೆಕಾನ್ ಸ್ಥಾನ-ಮಾನ Beacon Status ಹಾಗೂ ಸಮಗ್ರ OFSTED ಪ್ರಥಮ ದರ್ಜೆ (Outstanding) ಪ್ರಶಸ್ತಿ ಪಡೆದ ಬರ್ಮಿಂಗ್ಹ್ಯಾಮ್‌ ಮತ್ತು ಸೊಲಿಹಲ್‌ ಪ್ರದೇಶದ ಏಕೈಕ ಸಿಕ್ಸ್ತ್ ಫಾರ್ಮ್‌ ಕಾಲೇಜ್‌ ಆಗಿದೆ.[೮೪]

1970ರ ದಶಕದಿಂದಲೂ, ಬರ್ಮಿಂಗ್ಹ್ಯಾಮ್‌ನ ಪ್ರೌಢಶಾಲೆಗಳಲ್ಲಿ ಹಲವು 11-16/18 ವಿವಿಧೋದ್ದೇಶ ಪ್ರೌಢಶಾಲೆಗಳಾಗಿವೆ. GCSE-ಉತ್ತರ ವಿದ್ಯಾರ್ಥಿಗಳು ಶಾಲೆಯ ಸಿಕ್ಸ್ತ್‌ ಫಾರ್ಮ್‌ನಲ್ಲಿ ತಮ್ಮ ವ್ಯಾಸಂಗ ಮುಂದುವರೆಸಬಹುದು ಅಥವಾ ಉನ್ನತ ಶಿಕ್ಷಣದ ಕಾಲೇಜ್‌ನಲ್ಲಿ ವ್ಯಾಸಂಗ ಮುಂದುವರೆಸಬಹುದು. ಬರ್ಮಿಂಗ್ಹ್ಯಾಮ್‌ನಲ್ಲಿ ಪ್ರಾಥಮಿಕ ಶಾಲೆಗಳನ್ನು ಎಂದಿಗೂ 5-7 ಶಿಶುವಿಹಾರ ಹಾಗೂ 7-11 ಜೂನಿಯರ್‌ ಶಾಲೆಗಳಾಗಿ ನಡೆಸಲಾಗುತ್ತಿದೆ.

ಕ್ರೀಡೆ

[ಬದಲಾಯಿಸಿ]
ವಿಲ್ಲಾ ಪಾರ್ಕ್‌ನಲ್ಲಿ ಆಸ್ಟನ್‌ ವಿಲ್ಲಾ ಹಾಗೂ ಬರ್ಮಿಂಗ್ಹ್ಯಾಮ್‌ ಸಿಟಿ ನಡುವೆ ನಡೆಯುತ್ತಿರುವ ಸೆಕಂಡ್‌ ಸಿಟಿ ಡರ್ಬಿ ಪಂದ್ಯ.

ಬರ್ಮಿಂಗ್ಹ್ಯಾಮ್‌ ಕ್ರೀಡೆಯ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದೆ. ವಿಶ್ವದ ಮೊದಲ ಲೀಗ್‌ ಫುಟ್‌ಬಾಲ್‌ ಪಂದ್ಯಾವಳಿಯಾದ ಫುಟ್‌ಬಾಲ್‌ ಲೀಗ್‌ನ್ನು ಬರ್ಮಿಂಗ್ಹ್ಯಾಮ್‌ ನಿವಾಸಿ ಹಾಗೂ ಆಸ್ಟನ್‌ ವಿಲ್ಲಾ ನಿರ್ದೇಶಕ ವಿಲಿಯಮ್‌ ಮೆಕ್‌ಗ್ರೆಗೊರ್‌ ಸಂಸ್ಥಾಪಿಸಿದರು. ಇವರು 1888ರಲ್ಲಿ ತಮ್ಮ ಸಂಸ್ಥೆಯ ಸಹ-ನಿರ್ದೇಶಕರಿಗೆ ಬರೆದ ಪತ್ರವೊಂದರಲ್ಲಿ 'ಇಂಗ್ಲೆಂಡ್‌ನ ಹತ್ತು ಅಥವಾ ಹನ್ನೆರಡು ಪ್ರಮುಖ ಕ್ಲಬ್‌ಗಳು ಒಗ್ಗೂಡಿ ಪ್ರತಿ ಋತುವಿನಲ್ಲಿಯೂ ಸ್ವಸ್ಥಳ-ಪರಸ್ಥಳ ಪಂದ್ಯಗಳು ಆಡುವ' ಪ್ರಸ್ತಾಪವಿಟ್ಟರು.[೮೫] ಹ್ಯಾರಿ ಜೆಮ್‌ ಮತ್ತು ಅವರ ಸ್ನೇಹಿತ ಆಗರಿಯೊ ಪೆರೆರಾ ಎಡ್ಜ್‌ಬ್ಯಾಸ್ಟನ್‌ನಲ್ಲಿರುವ ಪೆರೆರಾ ಅವರ ಮನೆಯಲ್ಲಿ ಆಧುನಿಕ ಕ್ರೀಡೆಯಾದ ಟೆನಿಸ್‌ನ್ನು 1859 ಮತ್ತು 1865ರ ಅವಧಿಯಲ್ಲಿ ಅಭಿವೃದ್ಧಿಗೊಳಿಸಿದರು.[೮೬] ಇದರಿಂದಾಗಿ ಎಡ್ಜ್‌ಬ್ಯಾಸ್ಟನ್‌ ಆರ್ಚರಿ ಅಂಡ್‌ ಲಾನ್‌ ಟೆನಿಸ್‌ ಸೊಸೈಟಿ ವಿಶ್ವದಲ್ಲೇ ಅತಿ ಹಳೆಯ ಟೆನಿಸ್‌ ಸಂಘವಾಗಿದೆ.[೮೭] ಬರ್ಮಿಂಗ್ಹ್ಯಾಮ್‌ ಅಂಡ್‌ ಡಿಸ್ಟ್ರಿಕ್ಟ್‌ ಕ್ರಿಕೆಟ್‌ ಲೀಗ್‌ ವಿಶ್ವದಲ್ಲೇ ಅತಿ ಹಳೆಯ ಕ್ರಿಕೆಟ್ ಲೀಗ್‌.[೮೮] ಬರ್ಮಿಂಗ್ಹ್ಯಾಮ್‌ ವಿಶ್ವದ ಮೊಟ್ಟಮೊದಲ ಕ್ರಿಕೆಟ್‌ ವಿಶ್ವ ಕಪ್‌ ಪಂದ್ಯವೊಂದರ ಆತಿಥ್ಯ ವಹಿಸಿತ್ತು. ಅದು 1973ರಲ್ಲಿ ನಡೆದ ಮಹಿಳಾ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಾಗಿತ್ತು.[೮೯]

ಬರ್ಮಿಂಗ್ಹ್ಯಾಮ್‌ ನಗರಕ್ಕೆ ಕ್ರೀಡಾ ಪರಿಷತ್‌ (Sports Council) ಇಂದ ರಾಷ್ಟ್ರೀಯ ಕ್ರೀಡಾ ನಗರ ಎಂಬ ಬಿರುದು ಸಂದಿತು.[೯೦]
ಎಡ್ಜ್‌ಬ್ಯಾಸ್ಟನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಒಂದು ಟೆಸ್ಟ್‌ ಪಂದ್ಯ.

ಇಂದು ದೇಶದ ಅತಿ ಹಳೆಯ ವೃತ್ತಿ ಪರ ಫುಟ್‌ಬಾಲ್‌ ತಂಡಗಳು ಬರ್ಮಿಂಗ್ಹ್ಯಾಮ್‌ನಲ್ಲಿವೆ: 1874ರಲ್ಲಿ ಸ್ಥಾಪಿಸಲಾಗಿ, ವಿಲ್ಲಾ ಪಾರ್ಕ್‌ನಲ್ಲಿ ಅಭ್ಯಸಿಸುವ ಆಸ್ಟನ್‌ ವಿಲ್ಲಾ; ಅಲ್ಲದೇ, 1875ರಲ್ಲಿ ಸ್ಥಾಪಿಸಿದ್ದ, ಸೇಂಟ್‌ ಆಂಡ್ರ್ಯೂದಲ್ಲಿ ಅಭ್ಯಸಿಸುವ ಬರ್ಮಿಂಗ್ಹ್ಯಾಮ್‌ ಸಿಟಿ. ಈವೆರಡೂ ತಂಡಗಳ ನಡುವಿನ ಪೈಪೋಟಿಯು ತೀವ್ರವಾಗಿದ್ದು, ಇವೆರಡೂ ತಂಡಗಳ ನಡುವಣ ಪಂದ್ಯಗಳಿಗೆ ಸೆಕಂಡ್‌ ಸಿಟಿ ಡರ್ಬಿ ಎನ್ನಲಾಗಿದೆ.[೯೧] ಆಸ್ಟನ್‌ ವಿಲ್ಲಾ 50 ಸಲ ಗೆದ್ದಿದ್ದರೆ, ಬರ್ಮಿಂಗ್ಹ್ಯಾಮ್‌ ಸಿಟಿ 38 ಸಲ ಗೆದ್ದಿದೆ. ಎರಡೂ ತಂಡಗಳು ಪಂದ್ಯಾವಳಿಗಳಲ್ಲಿ ವಿಜಯಿಯಾಗಿವೆ. ವಿಲ್ಲಾ ಏಳು ಬಾರಿ ಲೀಗ್‌ ಚಾಂಪಿಯನ್‌ ಹಾಗು 1982ರಲ್ಲಿ ಯುರೋಪಿಯನ್‌ ಚಾಂಪಿಯನ್‌‌ ಆಗಿತ್ತು.

ಆರು ಸಲ ಕೌಂಟಿ ಚಾಂಪಿಯನ್ಷಿಪ್‌ ಪಂದ್ಯಾವಳಿ ವಿಜೇತ ತಂಡ ವಾರ್ವಿಕ್ಷೈರ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ತಂಡವು ಎಡ್ಜ್‌ಬ್ಯಾಸ್ಟನ್‌ ಕ್ರಿಕೆಟ್‌ ಮೈದಾನದಲ್ಲಿ ಆಡುತ್ತದೆ. ಇದು ಕ್ರಿಕೆಟ್‌ ಟೆಸ್ಟ್‌ ಹಾಗೂ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಆತಿಥ್ಯ ವಹಿಸುತ್ತದೆ. ಪ್ರಥಮ-ದರ್ಜೆ ಕ್ರಿಕೆಟ್‌ನಲ್ಲೇ ಅತ್ಯುನ್ನತ ಸ್ಕೋರ್‌ ಈ ಮೈದಾನದಲ್ಲಿ ದಾಖಲಾಯಿತು. ಇಸವಿ 1994ರಲ್ಲಿ, ಎಡಗೈ ಬ್ಯಾಟ್ಸ್‌ಮನ್‌ ಬ್ರಯನ್‌ ಲಾರಾ ವಾರ್ವಿಕ್ಷೈರ್‌ ಪರವಾಗಿ ಆಡಿ ಅಜೇಯ 501 ರನ್‌ ಗಳಿಸಿದ್ದರು.[೯೨]

ರಾಷ್ಟ್ರೀಯ ಒಳಾಂಗಣ ಅಂಕಣ

ಅಂತರರಾಷ್ಟ್ರೀಯ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಕೂಟಗಳು ಅಲೆಕ್ಸ್ಯಾಂಡರ್‌ ಕ್ರೀಡಾಂಗಣದಲ್ಲಿ ನಡೆಯುತ್ತವೆ. ಇದು ಬರ್ಚ್‌ಫೀಲ್ಡ್‌ ಹ್ಯಾರಿಯರ್ಸ್‌ ತಂಡವು ಅಭ್ಯಸಿಸುವ ತಾಣವಾಗಿದೆ. ಈ ತಂಡದ ಸದಸ್ಯರಲ್ಲಿ ಹಲವು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದರು. ಅಲೆಕ್ಸಾಂಡರ್‌ ಕ್ರೀಡಾಂಗಣದ ಪಕ್ಕದಲ್ಲಿರುವ GMAC ಜಿಮ್ನಾಸ್ಟಿಕ್ಸ್‌ ಅಂಡ್‌ ಮಾರ್ಷಲ್‌ ಆರ್ಟ್ಸ್‌ ಸೆಂಟರ್‌ ನ್ನು 2008ರಲ್ಲಿ ಸ್ಥಾಪಿಸಲಾಯಿತು. ಅಂತರರಾಷ್ಟ್ರೀಯ ಗುಣಮಟ್ಟದ ಜಿಮ್ನಾಸ್ಟಿಕ್ಸ್‌ ಅಂಕಣ ಹಾಗೂ ಮೂರು ಕದನ-ಕಲೆಗಳ 'ಡೋಜೋ'ಗಳು ಇಲ್ಲಿವೆ. ಐಕಿಡೊ ಫೆಲೊಷಿಪ್‌ ಆಫ್‌ ಗ್ರೇಟ್‌ ಬ್ರಿಟನ್ Archived 2010-11-22 ವೇಬ್ಯಾಕ್ ಮೆಷಿನ್ ನಲ್ಲಿ.‌ನ ಪ್ರಧಾನ ಕಾರ್ಯಸ್ಥಳವು ಈ ಕ್ರೀಡಾಂಗಣದಲ್ಲಿದೆ. ರಾಷ್ಟ್ರೀಯ ಒಳಾಂಗಣ ಅಂಕಣ (National Indoor Arena) (NIA) 1991ರಲ್ಲಿ ಸ್ಥಾಪಿತವಾಯಿತು.[೯೩] ಇದು ಪ್ರಮುಖ ಅಥ್ಲೆಟಿಕ್ಸ್‌ ಅಂಕಣವಾಗಿದೆ. ಇಸವಿ 2007ರಲ್ಲಿ ನಡೆದ ಯುರೋಪಿಯನ್‌ ಅಥ್ಲೆಟಿಕ್ಸ್‌ ಒಳಾಂಗಣ‌ ಚಾಂಪಿಯನ್ಷಿಪ್ಸ್‌ ಕೂಟ, 2003ರ IAAF ವಿಶ್ವ ಒಳಾಂಗಣ ಚಾಂಪಿಯನ್ಷಿಪ್ಸ್‌ ಹಾಗೂ ಹಲವು WWE ಕುಸ್ತಿ-ಹೊಡೆದಾಟದ ಕೂಟಗಳು ಇಲ್ಲಿ ಆಯೋಜಿತವಾಗಿದ್ದವು.

ಎಡ್ಜ್‌ಬ್ಯಾಸ್ಟನ್‌ನ ಪ್ರಯರಿ ಕ್ಲಬ್‌ನಲ್ಲಿ ATP ಅಂತರರಾಷ್ಟ್ರೀಯ ಟೆನಿಸ್‌ ಪಂದ್ಯಾವಳಿಗಳನ್ನು ಇಂದಿಗೂ ಸಹ ಆಡಲಾಗುತ್ತಿವೆ.[೯೪] ಬರ್ಮಿಂಗ್ಹ್ಯಾಮ್‌ also has a professional Rugby Union side, Moseley RFC, who play at Billesley Common, as well as professional boxing, hockey, skateboarding, stock-car racing, greyhound racing and speedway in the city.

ಬರ್ಮಿಂಗ್ಹ್ಯಾಮ್‌ನಲ್ಲಿ ಮೋಸ್ಲೆ RFC ವೃತ್ತಿಪರ ರಗ್ಬಿ ಯುನಿಯನ್‌ ತಂಡವಿದೆ. ಈ ತಂಡವು ಬಿಲ್ಲೆಸ್ಲೆ ಕಾಮನ್‌ನಲ್ಲಿ ಅಭ್ಯಸಿಸಿ ಆಡುತ್ತದೆ. ಇದರ ಜೊತೆಗೆ, ವೃತ್ತಿಪರ ಬಾಕ್ಸಿಂಗ್‌, ಹಾಕಿ, ಸ್ಕೇಟ್‌ಬೋರ್ಡಿಂಗ್‌, ಸ್ಟಾಕ್‌-ಕಾರ್‌ ರೇಸಿಂಗ್‌, ಗ್ರgreyhound racing and speedway

ಆಹಾರ ಹಾಗೂ ಪಾನೀಯಗಳು

[ಬದಲಾಯಿಸಿ]
ಬರ್ಮಿಂಗ್ಹ್ಯಾಮ್‌ ಸಗಟು ಮಾರುಕಟ್ಟೆಗಳ ಹಣ್ಣು ಮತ್ತು ತರಕಾರಿ ವಿಭಾಗ

ಬರ್ಮಿಂಗ್ಹ್ಯಾಮ್‌ ಒಂದು ವಾಣಿಜ್ಯ ಪಟ್ಟಣವಾಗಿ ಅಭಿವೃದ್ಧಿ ಹೊಂದಿದ್ದು, 1166ರಲ್ಲಿ ರಾಯಲ್‌ ಚಾರ್ಟರ್ ಸ್ಥಾಪಿಸಿದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಮೂಲತಃ ಆಧರಿಸಿತ್ತು.

ಅನಂತರದ ಶತಮಾನಗಳಲ್ಲಿ ಕೈಗಾರಿಕೀಕರಣವು ಮುನ್ನಡೆದರೂ, ಈ ಕೃಷಿ ಮಾರುಕಟ್ಟೆಯನ್ನು ಉಳಿಸಿಕೊಳ್ಳಾಗಿದೆ. ಬರ್ಮಿಂಗ್ಹ್ಯಾಮ್‌ ಸಗಟು ಮಾರುಕಟ್ಟೆಗಳು ಇಂದಿಗೂ ದೇಶದ ಅತಿ ದೊಡ್ಡ ಸಮ್ಮಿಶ್ರ ಸಗಟು ಆಹಾರ ಮಾರುಕಟ್ಟೆಯಾಗಿ ಉಳಿದಿವೆ.[೯೫] ಇಲ್ಲಿ ಮಾಂಸ, ಮೀನು, ಹಣ್ಣು, ತರಕಾರಿ ಹಾಗೂ ಹೂವುಗಳು ಮಾರಾಟವಾಗುತ್ತವೆ. ಜೊತೆಗೆ, ಸುಮಾರು 100 ಮೈಲ್‌ಗಳಷ್ಟು ದೂರದಲ್ಲಿರುವ ಭೋಜನಾ ಮಂದಿರಗಳು ಹಾಗೂ ಸ್ವತಂತ್ರ ಚಿಲ್ಲರೆ ವ್ಯಾಪಾರಿಗಳಿಗೆ ತಾಜಾ ಉತ್ಪನ್ನಗಳು ಪೂರೈಕೆಯಾಗುತ್ತವೆ.[೯೬]

ಲಂಡನ್‌ ಹೊರತುಪಡಿಸಿ, ಮೂರು ಮಿಷೆಲಿನ್‌-ಪ್ರಮಾಣಿತ ಭೋಜನಾಮಂದಿರಗಳನ್ನು ಹೊಂದಿರಲು ಬರ್ಮಿಂಗ್ಹ್ಯಾಮ್‌ ಏಕೈಕ ಇಂಗ್ಲಿಷ್ ನಗರವಾಗಿದೆ: ಎಡ್ಜ್‌ಬ್ಯಾಸ್ಟನ್‌ನಲ್ಲಿನ ಸಿಂಪ್ಸನ್ಸ್‌ , ಹಾರ್ಬೊರ್ನ್‌ನಲ್ಲಿನ ಟರ್ನರ್ಸ್‌ ಹಾಗೂ ನಗರ ಕೇಂದ್ರದಲ್ಲಿರುವ ಪರ್ನೆಲ್ಸ್‌ .[೯೭]

ಆನ್ಸೆಲ್ಸ್‌, ಡೆವೆನ್ಪೊರ್ಟ್ಸ್‌ ಹಾಗೂ ಮಿಚೆಲ್ಸ್‌ & ಬಟ್ಲರ್ಸ್‌ ಸೇರಿದಂತೆ ಹಲವು ಬಟ್ಟಿ ಕೇಂದ್ರಗಳು ಬರ್ಮಿಂಗ್ಹ್ಯಾಮ್‌ನಲ್ಲಿವೆ.[೯೮] ಆಸ್ಟನ್‌ ಮ್ಯಾನೊರ್‌ ಬ್ರೂಯರಿ ಯಾವುದೇ ಗಮನಾರ್ಹ ಗಾತ್ರದ ಏಕೈಕ ಬಟ್ಟಿ ಕೇಂದ್ರವಾಗಿದೆ. ಇಂದೂ ಸಹ, ನಗರದೆಲ್ಲೆಡೆ ಹಲವು ಉತ್ಕೃಷ್ಟ ವಿಕ್ಟೊರಿಯನ್‌ ಪಬ್‌ಗಳು ಮತ್ತು ಬಾರ್‌ಗಳಿವೆ. ಸುಮಾರು 1450ರಲ್ಲಿ ಡೆರಿಟೆಂಡ್‌ನಲ್ಲಿ ಸ್ಥಾಪಿತವಾದ ಓಲ್ಡ್‌ ಕ್ರೌನ್‌ ಬರ್ಮಿಂಗ್ಹ್ಯಾಮ್‌ನ ಅತಿ ಹಳೆಯ ತಂಗುದಾಣವಾಗಿದೆ. [ಸೂಕ್ತ ಉಲ್ಲೇಖನ ಬೇಕು] ನಗರದಲ್ಲಿ ಹಲವು ರಾತ್ರಿಯ ವಿಹಾರಾಲಯಗಳು ಹಾಗೂ ಬಾರ್‌ಗಳಿವೆ. ಇವುಗಳ ಪೈಕಿ ಬ್ರಾಡ್‌ ಸ್ಟ್ರೀಟ್‌ನಲ್ಲಿರುವವು ಹೆಚ್ಚು ಜನಪ್ರಿಯವಾಗಿವೆ.[೯೯]

ವಿಂಗ್‌ ಯಿಪ್‌ ಎಂಬ ಬೃಹತ್‌ ಆಹಾರ ಉದ್ದಿಮೆಯು ಮೊದಲು ಬರ್ಮಿಂಗ್ಹ್ಯಾಮ್‌ನಲ್ಲಿ ಆರಂಭಗೊಂಡಿತು. ಇಂದು ಇದರ ಪ್ರಧಾನ ಕಾರ್ಯಸ್ಥಾನವು ನೆಷೆಲ್ಸ್‌ನಲ್ಲಿದೆ.[೧೦೦] ಬಾಲ್ಟಿ ಎಂಬ ಒಂದು ರೀತಿಯ ಪಲ್ಯವನ್ನು ನಗರದಲ್ಲೆ ಮೊದಲ ಬಾರಿ ಸಿದ್ಧಪಡಿಸಲಾಯಿತು. ಇದಕ್ಕಾಗಿ ಈ ವಲಯಕ್ಕೆ 'ಬಾಲ್ಟಿ ಬೆಲ್ಟ್‌' ಅಥವಾ 'ಬಾಲ್ಟಿ ಟ್ರಯಾಂಗಲ್‌' ಎನ್ನಲಾಗಿದೆ.[೧೦೧] ಬರ್ಮಿಂಗ್ಹ್ಯಾಮ್‌ ಮೂಲದ ಆಹಾರ ಬ್ರ್ಯಾಂಡ್‌ಗಳ ಪೈಕಿ ಟೈಫೂ ಟೀ, ಬರ್ಡ್ಸ್‌ ಕಸ್ಟರ್ಡ್‌, ಕ್ಯಾಡ್ಬ್ಯೂರಿಸ್‌ ಚಾಕಲೇಟ್‌ ಹಾಗೂ HP ಸಾಸ್‌ ಚಿರಪರಿಚಿತವಾಗಿವೆ.

ಸಂಸ್ಕೃತಿ ಮತ್ತು ಕಲೆ

[ಬದಲಾಯಿಸಿ]
ಹೆವಿ-ಮೆಟಲ್‌ ಶೈಲಿ ಸಂಗೀತದ ಹರಿಕಾರ ವಾದ್ಯತಂಡ ಬ್ಲ್ಯಾಕ್‌ ಸಬ್ಬತ್‌ ಬರ್ಮಿಂಗ್ಹ್ಯಾಮ್‌ನಲ್ಲಿ ಸಂಘಟಿತವಾಯಿತು.

ಕಳೆದ ಶತಮಾನಕ್ಕಿಂತ ಹಿಂದಿನಿಂದಲೂ ಬರ್ಮಿಂಗ್ಹ್ಯಾಮ್‌ನದು ವಿಜೃಂಭಣೆಯ ಹಾವು ವಿವಿಧತೆಯುಳ್ಳ ಸಂಗೀತದ ಇತಿಹಾಸವಿದೆ. ಯುನೈಟೆಡ್‌ ಕಿಂಗ್ಡಮ್‌ನ ಸಂಗೀತ ಸಂಸ್ಕೃತಿಗಾಗಿ ಬರ್ಮಿಂಗ್ಹ್ಯಾಮ್‌ ಮೂಲದ ವಾದ್ಯತಂಡಗಳು ಗಮನಾರ್ಹ ಕೊಡುಗೆ ನೀಡಿವೆ. ಬರ್ಮಿಂಗ್ಹ್ಯಾಮ್‌ ಮೂಲದ ವಾದ್ಯತಂಡಗಳು ತಮ್ಮ ಮೇಲೆ ಪ್ರಭಾವ ಬೀರಿವೆ ಎಂದು ಸಮಕಾಲೀನ ವಾದ್ಯತಂಡಗಳು ಉಲ್ಲೇಖಿಸಿವೆ. 1960ರ ದಶಕದಲ್ಲಿ, 'ಬ್ರಮ್‌ ಬೀಟ್‌' ಯುಗದಲ್ಲಿ ಬ್ಲೂಸ್‌ ಶೈಲಿಯ ಸಂಗೀತ ಹಾಗೂ ಅಂತಹ ಶೈಲಿಯ ಸಂಗೀತ ನುಡಿಸುವ ದಿ ಮೂಡಿ ಬ್ಲೂಸ್‌ನಂತಹ ಪ್ರಗತಿಪರ ರಾಕ್‌ ಸಂಗೀತ ಶೈಲಿಯ ಬ್ಯಾಂಡ್‌ ಪ್ರಾಮುಖ್ಯ ಹೊಂದಿತ್ತು. ನಗರವು ಹೆವಿ ಮೆಟಲ್‌ ಶೈಲಿಯ ಸಂಗೀತದ ಉಗಮಸ್ಥಾನ ಎನ್ನಲಾಗಿದೆ. ಜುಡಾಸ್‌ ಪ್ರಿಯೆಸ್ಟ್‌, ಬ್ಲ್ಯಾಕ್‌ ಸಬ್ಬತ್‌, ಮ್ಯಾಗ್ನಮ್‌ ಹಾಗೂ ಲೆಡ್‌ ಝೆಪೆಲಿನ್‌ ತಂಡದ ಇಬ್ಬರು ಸದಸ್ಯರು ಬರ್ಮಿಂಗ್ಹ್ಯಾಮ್ ಮೂಲದವರು. ಅನಂತರ, 1980ರ ದಶಕದಲ್ಲಿ, ನೇಪಾಮ್‌ ಡೆತ್‌ನಂತ ವಾದ್ಯತಂಡಗಳು ಬರ್ಮಿಂಗ್ಹ್ಯಾಮ್‌ನ ಹೆವಿ ಮೆಟಲ್‌ ಸಂಗೀತ ರಂಗ ಪ್ರವೇಶಿಸಿತು. 1970ರ ದಶಕದಲ್ಲಿ, ದಿ ಮೂವ್‌ ಹಾಗೂ ದಿ ಐಡ್ಲ್‌ ರೇಸ್‌ ತಂಡದ ಸದಸ್ಯರು ಎಲೆಕ್ಟ್ರಿಕ್‌ ಲೈಟ್‌ ಆರ್ಕೆಸ್ಟ್ರಾ ಹಾಗೂ ವಿಝರ್ಡ್‌ ತಂಡಗಳನ್ನು ರಚಿಸಿದರು. 1970ರ ದಶಕದಲ್ಲಿ ನಗರದಲ್ಲಿ ರೆಗೇ ಮತ್ತು ಸ್ಕಾ ಶೈಲಿಯ ಸಂಗೀತವು ಪ್ರಾಬಲ್ಯದತ್ತ ಸಾಗಿತು. ಇಂತಹ ಶೈಲಿಯ ವಾದ್ಯತಂಡಗಳಲ್ಲಿ ಸ್ಟೀಲ್‌ ಪಲ್ಸ್‌, UB40, ಮ್ಯೂಸಿಕಲ್‌ ಯೂತ್‌ ಹಾಗೂ ದಿ ಬೀಟ್‌ ಚಿರಪರಿಚಿತವಾಗಿದ್ದವು. ವಾಮಪಂಥೀಯತೆಯನ್ನು ಸೂಚಿಸುವ ಹಾಡುಗಳು ಹಾಗೂ ವಿವಿಧ ಜನಾಂಗದವರಾದ ಸದಸ್ಯನ್ನು ಒಳಗೊಳ್ಳುವ ಮೂಲಕ, ಈ ತಂಡಗಳು ಆ ಸಮಯದಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಉಂಟಾಗುತ್ತಿದ್ದ ಸಾಮಾಜಿಕ ಸಂಚಲನಗಳನ್ನು ಪ್ರತಿಬಿಂಬಿಸುತ್ತಿದ್ದವು. 1980ರ ದಶಕದ ಪಾಪ್‌ ಬ್ಯಾಂಡ್ ಡುರಾನ್‌ ಡುರಾನ್‌ ಸಹ ಬರ್ಮಿಂಗ್ಹ್ಯಾಮ್‌ ಮೂಲದ್ದಾಗಿದೆ.

ಬರ್ಮಿಂಗ್ಹ್ಯಾಮ್‌ ಪುರಭವನದಲ್ಲಿ ಪ್ರದರ್ಶನ ನೀಡುತ್ತಿರುವ ಎಕ್ಸ್‌ ಕತೀಡ್ರಾ

ನಗರದಲ್ಲಿ ಜ್ಯಾಝ್‌ ಶೈಲಿಯ ಸಂಗೀತವು ಬಹಳ ಜನಪ್ರಿಯವಾಗಿದೆ. ವಾರ್ಷಿಕವಾಗಿ ಇಲ್ಲಿ ನಡೆಯುವ ಬರ್ಮಿಂಗ್ಹ್ಯಾಮ್‌ ಅಂತರರಾಷ್ಟ್ರೀಯ ಜ್ಯಾಝ್‌ ಉತ್ಸವವು UKಯ ಅತಿದೊಡ್ಡ ಜ್ಯಾಝ್‌ ಉತ್ಸವ.[೧೦೨] ಈ ಉತ್ಸವವನ್ನು ಬರ್ಮಿಂಗ್ಹ್ಯಾಮ್‌ನ ಹೊರಗಿರುವ ಸೊಲಿಹಲ್‌ನಲ್ಲಿಯೂ ಆಯೋಜಿಸಲಾಗುತ್ತದೆ. ಇದನ್ನು ಮೊದಲ ಬಾರಿಗೆ 1984ರಲ್ಲಿ ನಡೆಸಲಾಯಿತು.[೧೦೩]

ನಗರದಲ್ಲಿರುವ ಸಿಂಫನಿ ಹಾಲ್‌, ಅಂತರರಾಷ್ಟ್ರೀಯ ಖ್ಯಾತಿಯ ಸಿಟಿ ಆಫ್‌ ಬಿರ್ಮಿಂಗ್ಹ್ಯಾಮ್‌ ಸಿಂಫನಿ ಆರ್ಕೆಸ್ಟ್ರಾ ವಾದ್ಯತಂಡಕ್ಕೆ ತಾಣವಾಗಿದೆ. ಇಸವಿ 1834ರಿಂದಲೂ, ಸಿಟಿ ಆರ್ಗನಿಸ್ಟ್‌ ಎಂಬ (ಆರ್ಗನ್‌ ವಾದ್ಯ ಕಲಾವಿದ) ಹುದ್ದೆಯನ್ನು ಕೇವಲ ಏಳು ಜನರು ಹೊಂದಿದ್ದುಂಟು. ಸದ್ಯಕ್ಕೆ, ಥಾಮಸ್‌ ಟ್ರಾಟರ್‌ 1983ರಿಂದಲೂ ಸಿಟಿ ಆರ್ಗನಿಸ್ಟ್‌ ಆಗಿದ್ದಾರೆ.[೧೦೪] ಬರ್ಮಿಂಗ್ಹ್ಯಾಮ್‌ ಪುರಭವನದಲ್ಲಿ ಆರ್ಗನ್‌ ತೆರೆದಾಗಿನಿಂದಲೂ ವಾರಕ್ಕೊಮ್ಮೆ ವಾದ್ಯಗೋಷ್ಠಿ ನಡೆಯುತ್ತಿತ್ತು.[೧೦೫] ಆದರೆ, ಪುರಭವನದ ದುರಸ್ತಿ ಹಾಗೂ ಜೀರ್ಣೋದ್ಧಾರವು ಅಕ್ಟೋಬರ್‌ 2007ರ ತನಕ ನಡೆದ ಕಾರಣ, ಈ ವಾದ್ಯಗೋಷ್ಠಿಯನ್ನು ಸೇಂಟ್‌ ಫಿಲಿಪ್‌ ಪ್ರಧಾನ ಇಗರ್ಜಿಯಲ್ಲಿ ನಡೆಸಲಾಗುತ್ತಿತ್ತು. ಬರ್ಮಿಂಗ್ಹ್ಯಾಮ್‌ ರಾಯಲ್‌ ಬ್ಯಾಲೆ [೧೦೬] ಹಾಗೂ ವಿಶ್ವದ ಅತಿ ಹಳೆಯ ವೃತ್ತಿಪರ ನೃತ್ಯಶಾಲೆಯಾದ ಎಲ್ಮ್‌ಹರ್ಸ್ಟ್‌ ಸ್ಕೂಲ್‌ ಫಾರ್‌ ಡ್ಯಾನ್ಸ್‌ ಬರ್ಮಿಂಗ್ಹ್ಯಾಮ್‌ನಲ್ಲಿವೆ.[೧೦೭]

ಬರ್ಮಿಂಗ್ಹ್ಯಾಮ್‌ ತ್ರೈವಾರ್ಷಿಕ ಸಂಗೀತ ಉತ್ಸವಗಳು 1784ರಿಂದ 1912ರ ತನಕ ನಡೆದವು. ಮೆಂಡೆಲ್ಸಾನ್‌, ಗೊನೋಡ್‌, ಸಲ್ಲಿವನ್‌, ಡ್ವೊರ್ಯಾಕ್‌ , ಬ್ಯಾಂಟಾಕ್‌ ಹಾಗೂ ಎಡ್ವರ್ಡ್‌ ಎಲ್ಗರ್‌ ಇದಕ್ಕಾಗಿ ಸಂಗೀತ ಸಂಯೋಜನೆ, ನಿರ್ವಹಣೆ ಅಥವಾ ಪ್ರದರ್ಶನ ನೀಡಿದ್ದರು. ಇದರಲ್ಲಿ ಎಲ್ಗರ್ ತಮ್ಮ ಅತಿಖ್ಯಾತ ಇಗರ್ಜಿ ಗಾನಮೇಳದ ಹಾಡುಗಳ ಪೈಕಿ‌ ಬರ್ಮಿಂಗ್ಹ್ಯಾಮ್‌ಗಾಗಿ ನಾಲ್ಕನ್ನು ಬರ್ಮಿಂಗ್ಹ್ಯಾಮ್‌ಗಾಗಿ ಬರೆದರು. ಎಲ್ಗರ್‌ರ ಮೊದಲ ಸಂಯೋಜನೆ ದಿ ಡ್ರೀಮ್‌ ಆಫ್‌ ಜೆರಾಂಟಿಯಸ್‌ 1900ರಲ್ಲಿ ಪ್ರಥಮ ಪ್ರದರ್ಶನ ಕಂಡಿತು. ನಗರದಲ್ಲಿ ಜನಿಸಿದ ಪ್ರಸಿದ್ಧ ಸಂಯೋಜಕರ ಪೈಕಿ ಆಲ್ಬರ್ಟ್‌ ವಿಲಿಯಮ್‌ ಕೆಟೆಲ್ಬೆ ಹಾಗೂ ಆಂಡ್ರ್ಯೂ ಗ್ಲೊವರ್‌ ಸೇರಿದಂತೆ ಹಲವು ಪ್ರಸಿದ್ಧ ಸಂಯೋಜಕರು ನಗರದಲ್ಲಿ ಜನಿಸಿದ್ದರು.

ಬರ್ಮಿಂಗ್ಹ್ಯಾಮ್‌ನ ನಂತರದ ನಗರ ಕೇಂದ್ರೀಯ ಸಂಗೀತ ಸಭಾಂಗಣಗಳ ಪೈಕಿ, 1991ರಲ್ಲಿ ತೆರೆಯಲಾದ ನ್ಯಾಷನಲ್‌ ಇಂಡೊರ್‌ ಅರೆನಾ, ಡೇಲ್‌ ಎಂಡ್‌ನಲ್ಲಿದ್ದ 02 ಅಕ್ಯಾಡೆಮಿಯ ಸ್ಥಾನದಲ್ಲಿ, ಸೆಪ್ಟೆಂಬರ್‌ 2009ರಲ್ಲಿ ಬ್ರಿಸ್ಟಲ್‌ ಸ್ಟ್ರೀಟ್‌ನಲ್ಲಿ ತೆರೆಯಲಾದ 02 ಅಕ್ಯಾಡೆಮಿ, 1997ರಲ್ಲಿ ತೆರೆಯಲಾದ CBSO ಸೆಂಟರ್‌, ಡಿಗ್ಬೆತ್‌ನಲ್ಲಿರುವ ಬಾರ್ಫ್ಲೈ ಹಾಗೂ, ಪ್ಯಾರಡೈಸ್ ಫೊರಮ್‌ ಹಾಗೂ ಬರ್ಮಿಂಗ್ಹ್ಯಾಮ್‌ ಕನ್ಸರ್ವೆಟೊಯಿರ್‌ನಲ್ಲಿರುವ ಬರ್ಮಿಂಗ್ಹ್ಯಾಮ್‌ ಕೇಂದ್ರೀಯ ಗ್ರಂಥಾಲಯದೊಂದಿಗೆ ನಿರ್ಮಿಸಲಾದ ಅಡ್ರಿಯನ್‌ ಬೌಲ್ಟ್ ಹಾಲ್‌ ಸಹ ಸೇರಿವೆ.

ಬರ್ಮಿಂಗ್ಹ್ಯಾಮ್‌ನಲ್ಲಿರುವ ಹಲವು ರಂಗಮಂದಿರದಲ್ಲಿ, ಅಲೆಕ್ಸಾಂಡ್ರಾ ("ದಿ ಅಲೆಕ್ಸ್‌"), ದಿ ರೆಪ್‌, ಹಿಪ್ಪೊಡ್ರೊಮ್‌ ಹಾಗೂ ಓಲ್ಡ್‌ ರೆಪ್‌ ರಂಗಮಂದಿರಗಳು ಅತಿ ದೊಡ್ಡವು. ಕ್ರೆಸೆಂಟ್‌ ಥಿಯೆಟರ್‌ ಅಂಡ್‌ ಒಲ್ಡ್‌ ಜಾಯಿಂಟ್‌ ಸ್ಟಾಕ್‌ ಥಿಯೆಟರ್‌, ನಗರ ಕೇಂದ್ರದಲ್ಲಿರುವ ಇತರೆ ರಂಗಮಂದಿರಗಳು. ನಗರ ಕೇಂದ್ರದಾಚೆ, ಹಿಂದೆ ಆಸ್ಟನ್‌ ಹಿಪ್ಪೊಡ್ರೊಮ್‌ ಇದ್ದ ಸ್ಥಳದಲ್ಲಿ ಡ್ರಮ್‌ ಆರ್ಟ್ಸ್‌ ಸೆಂಟರ್‌ ಹಾಗೂ ಮ್ಯಾಕ್ ‌ ಇವೆ.[೧೦೮] ದಿ ರೆಪ್‌ ರಂಗಮಂದಿರದ ಸಹಯೋಗದೊಂದಿಗೆ, ಫಿಯರ್ಸ್‌! (Fierce!) ಉತ್ಸವವು, ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ ಕಲಾ ಸಂಸ್ಥೆಗಳ ಪ್ರದರ್ಶನಗಳನ್ನು ಒಳಗೊಂಡ ವಾರ್ಷಿಕ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಬರ್ಮಿಂಗ್ಹ್ಯಾಮ್‌ ಮ್ಯೂಸಿಯಮ್‌ ಮತ್ತು ಆರ್ಟ್‌ ಗ್ಯಾಲರಿ

ಹತ್ತಿರದ ಲಿಚ್ಫೀಲ್ಡ್‌ನಲ್ಲಿ ಜನಿಸಿ, ಕೆಲ ದಿನಗಳ ಕಾಲ ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸಿದ ಸ್ಯಾಮ್ಯುಯಲ್‌ ಜಾನ್ಸನ್‌ ಸೇರಿದಂತೆ, ಬರ್ಮಿಂಗ್ಹ್ಯಾಮ್‌ ಹಲವು ಸಾಹಿತಿಗಳೊಂದಿಗೆ ನಂಟು ಹೊಂದಿದೆ.

ಸ್ಯಾಮ್ಯುಯಲ್‌ ಜಾನ್ಸನ್‌ರದು ಸುಮಾರು ಎರಡು ಸಾವಿರ ಸಂಪುಟಗಳು ಬರ್ಮಿಂಗ್ಹ್ಯಾಮ್‌ ಕೇಂದ್ರ ಗ್ರಂಥಾಲಯದಲ್ಲಿವೆ. ಆರ್ಥರ್ ಕೊನಾನ್‌ ಡಾಯ್ಲ್‌ ಬರ್ಮಿಂಗ್ಹ್ಯಾಮ್‌ನ ಆಸ್ಟನ್‌ ಕ್ಷೇತ್ರದಲ್ಲಿ ತಮ್ಮ ಕೃತಿ ರಚಿಸಿದರು. ಲೂಯಿಸ್‌ ಮೆಕ್ನೀಸ್‌ ಆರು ವರ್ಷಗಳ ಕಾಲ ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸುತ್ತಿದ್ದರು. ಅಮೆರಿಕಾ ಮೂಲದ ಲೇಖಕ ವಾಷಿಂಗ್ಟನ್‌ ಇರ್ವಿಂಗ್‌ ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸುತ್ತಿರುವಾಗ ತಮ್ಮ ಖ್ಯಾತ ಕೃತಿಗಳನ್ನು ರಚಿಸಿದ್ದರು. ಇದರಲ್ಲಿ ಬ್ರೇಸ್‌ಬ್ರಿಡ್ಜ್ ಹಾಲ್‌ ಹಾಗೂ ದಿ ಹ್ಯೂಮರಿಸ್ಟ್ಸ್‌, ಎ ಮೆಡ್ಲೇ ಕೃತಿಗಳು ಆಸ್ಟನ್‌ ಹಾಲ್‌ನ್ನು ಆಧರಿಸಿತ್ತು. ಬರ್ಮಿಂಗ್ಹ್ಯಾಮ್‌ನಲ್ಲಿ ಹುಟ್ಟಿದ್ದ ಅಥವಾ ವಾಸಿಸುತ್ತಿದ್ದ ಲೇಖಕರಲ್ಲಿ ಡೇವಿಡ್‌ ಲಾಡ್ಜ್‌, ಜೊನಥನ್‌ ಕೋ ಹಾಗೂ ಜೆ. ಆರ್‌. ಆರ್. ಟೊಲ್ಕಿಯನ್‌ ಸಹ ಸೇರಿದ್ದಾರೆ. ಇವರಲ್ಲಿ ಟೋಲ್ಕಿಯನ್‌ ನಗರದ ಕ್ಷೇತ್ರಗಳು ಹಾಗೂ ಕಟ್ಟಡಗಳಿಂದ ಸ್ಫೂರ್ತಿ ಪಡೆದಿದ್ದರು ಎನ್ನಲಾಗಿದೆ. ಬರ್ಮಿಂಗ್ಹ್ಯಾಮ್‌ನೊಂದಿಗೆ ಸಂಬಂಧವಿಟ್ಟುಕೊಂಡಿದ್ದ ಪ್ರಭಾವೀ ಕವಿಗಳ ಪೈಕಿ ಆರನೆಯ ಗೌರವಯೋಗ್ಯ ಕವಿ ರೊಯಿ ಕ್ವಾಬೆನಾ,[೧೦೯] ಹಾಗೂ, ಇದೇ ನಗರದಲ್ಲಿ ಜನಿಸಿದ ಬೆಂಜಾಮಿನ್‌ ಝೆಫಾನಿಯಾ ಸೇರಿದ್ದಾರೆ.

UKಯಲ್ಲಿ ಬಹಳ ಹಿಂದಿನಿಂದಲೂ ಸ್ಥಾಪಿತವಾಗಿದ್ದ ಸ್ಥಳೀಯ ವಿಜ್ಞಾನ ಕಾಲ್ಪನಿಕ ಕಥಾ ಸಮುದಾಯದ ಬರ್ಮಿಂಗ್ಹ್ಯಾಮ್ ಶಾಖೆಯು 1971ರಲ್ಲಿ ಆರಂಭಗೊಂಡಿತು.(ಆದರೂ 1940 ಹಾಗೂ 1960ರ ದಶಕಗಳಲ್ಲಿ ಇದರ ಮುಂಚಿನ ನಿರೂಪಣೆಗಳಿದ್ದವು). ಈ ಸಮುದಾಯವು ನೊವಾಕಾನ್‌ ಎಂಬ ವಾರ್ಷಿಕ ವೈಜ್ಞಾನಿಕ ಕಾಲ್ಪನಿಕ ಕಥೆಗಳ ಸಮಾರಂಭವನ್ನು ಆಯೋಜಿಸುತ್ತದೆ.

ಬರ್ಮಿಂಗ್ಹ್ಯಾಮ್‌ ಮ್ಯೂಸಿಯಮ್‌ & ಅರ್ಟ್‌ ಗ್ಯಾಲರಿಯಲ್ಲಿ ವಿಶ್ವದಲ್ಲೇ ಅತಿ ದೊಡ್ಡ ರಫೆಲೈಟ್‌-ಪೂರ್ವ ಕಲಾಕೃತಿಗಳ ಸಂಗ್ರಹವಿದೆ. ಎಡ್ವರ್ಡ್‌ ಬರ್ನ್ಸ್‌-ಜೋನ್ಸ್‌ ಬರ್ಮಿಂಗ್ಹ್ಯಾಮ್‌ನಲ್ಲಿ ಜನಿಸಿದ್ದರು. ತಮ್ಮ ಜೀವನದ ಮೊದಲ ಇಪ್ಪತ್ತು ವರ್ಷಗಳನ್ನು ಇಲ್ಲೇ ಕಳೆದು, ಅನಂತರ ರಾಯಲ್‌ ಬರ್ಮಿಂಗ್ಹ್ಯಾಮ್‌ ಸೊಸೈಟಿ ಆಫ್‌ ಆರ್ಟಿಸ್ಟ್ಸ್‌ ಸಮುದಾಯದ ಅಧ್ಯಕ್ಷರಾದರು. ಗುಡ್‌ ಬ್ರಿಟನ್‌ ಗೈಡ್‌ ಪ್ರಕಾರ, 2004ರಲ್ಲಿ ಬಾರ್ಬರ್‌ ಇಂಸ್ಟಿಟ್ಯೂಟ್‌ ಆಫ್‌ ಫೈನ್‌ ಆರ್ಟ್ಸ್‌ಗೆ 'ಗ್ಯಾಲರಿ ಆಫ್‌ ದಿ ಇಯರ್‌' ಎನ್ನಲಾಯಿತು.[೧೧೦] ಐಕಾನ್‌ ಗ್ಯಾಲರಿ ಹಾಗೂ ಈಸ್ಟ್‌ಸೈಡ್‌ ಪ್ರಾಜೆಕ್ಟ್ಸ್‌ನಲ್ಲಿ ಸಮಕಾಲೀನ ಕಲಾ ಪ್ರದರ್ಶನ ನಡೆಯುತ್ತದೆ. ಖ್ಯಾತ ಸ್ಥಳೀಯ ಕಲಾವಿದರಲ್ಲಿ ಡೇವಿಡ್‌ ಕಾಕ್ಸ್‌, ಡೇವಿಡ್‌ ಬಾಂಬರ್ಗ್‌, ಪೊಗಸ್‌ ಸೀಸರ್‌, ಕೀತ್‌ ಪೈಪರ್‌ ಹಾಗೂ ಡೊನಾಲ್ಡ್‌ ರಾಡ್ನಿ ಸೇರಿದ್ದಾರೆ. ಛಾಯಾಚಿತ್ರಣ ಸಂಕಲನ OOM ಗ್ಯಾಲರಿ ಫೇಜ್ಲೆ ಸ್ಟುಡಿಯೊಸ್‌ ಥ್ರೀ ವ್ಹೈಟ್‌ ವಾಲ್ಸ್‌ ಹಾಗೂ ಕೈನೆಟಿಕ್‌ AIUನಂತಹ ಸಂಘಟನೆಗಳೊಂದಿಗೆ ಸಹಕಾರ ನಡೆಸಿದೆ.

ತಯಾರಿಕೆ ಹಾಗು ಮುದ್ರಣಾ ಕೇಂದ್ರವಾಗಿ ಬರ್ಮಿಂಗ್ಹ್ಯಾಮ್‌, ಉತ್ಪನ್ನ ವಿನ್ಯಾಸ ಹಾಗೂ ಚಿತ್ರಕ ವಿನ್ಯಾಸಗಳೆಂಬ ಸದೃಢ ಸ್ಥಳೀಯ ಸಂಪ್ರದಾಯವನ್ನು ಬೆಂಬಲಿಸಿದೆ. ಬರ್ಮಿಂಗ್ಹ್ಯಾಮ್‌ ವಿನ್ಯಾಸಕರ, ಬಹಳಷ್ಟು ಮನ್ನಣೆ ಪಡೆದ ಕೃತಿಗಳಲ್ಲಿ ಬ್ಯಾಸ್ಕರ್ವಿಲ್‌ ಫಾಂಟ್‌,[೧೧೧] ರಸ್ಕಿನ್‌ ಪಾಟರಿ,[೧೧೨] ಆಕ್ಮೆ ಥಂಡರರ್‌ ಸಿಳ್ಳೆ,[೧೧೩] ಓಡ್‌-ಆನ್‌ ಸಿನೆಮಾಸ್‌ನ ಆರ್ಟ್‌ ಡೆಕೊ ಬ್ರ್ಯಾಂಡಿಂಗ್‌ [೧೧೪] ಹಾಗೂ ಮಿನಿ ಸೇರಿವೆ.[೧೧೫]

ಉತ್ಸವಗಳು ಹಾಗೂ ಪ್ರದರ್ಶನಗಳು

[ಬದಲಾಯಿಸಿ]

ಬರ್ಮಿಂಗ್ಹ್ಯಾಮ್‌ನಲ್ಲಿ ಹಲವು ರಾಷ್ಟ್ರೀಯ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ಉತ್ಸವಗಳು ನಡೆಯುತ್ತವೆ. ಇದರಲ್ಲಿ ಸೇಂಟ್‌ ಜಾರ್ಜ್ಸ್‌ ಡೇ ಔತಣವೂ ಒಂದು. ಬರ್ಮಿಂಗ್ಹ್ಯಾಮ್‌ ಟ್ಯಾಟೂ ಎಂಬುದು ಬಹಳ ವರ್ಷಗಳಿಂದಲೂ ಆಯೋಜಿವಾಗಿರುವ ಸೇನಾ ಪ್ರದರ್ಶನ. ಇದು ಪ್ರತಿ ವರ್ಷವೂ ನ್ಯಾಷನಲ್‌ ಇಂಡೊರ್‌ ಅರೆನಾದಲ್ಲಿ ನಡೆಯುತ್ತದೆ. ಕೆರಿಬಿಯನ್ ಶೈಲಿಯ ಬರ್ಮಿಂಗ್ಹ್ಯಾಮ್‌ ಅಂತರರಾಷ್ಟ್ರೀಯ ಕಾರ್ನಿವಲ್‌ ವಿಷಮ ಸಂಖ್ಯೆಯ ವರ್ಷಗಳಂದು ನಡೆಯುತ್ತವೆ. ಬರ್ಮಿಂಗ್ಹ್ಯಾಮ್‌ ಪ್ರೈಡ್‌ ಎಂಬುದು ಗೇ ವಿಲೇಜ್‌ನಲ್ಲಿ ನಡೆಯುತ್ತದೆ. ಪ್ರತಿ ವರ್ಷ ಸುಮಾರು 100,000 ಸಂದರ್ಶಕರು ಬರುತ್ತಾರೆ. ಇಸವಿ 1997ರಿಂದ, ನಗರದಲ್ಲಿ ಆರ್ಟ್ಸ್‌ಫೆಸ್ಟ್ ‌ ವಾರ್ಷಿಕ ಕಲಾ ಉತ್ಸವ ನಡೆಯುತ್ತಿತ್ತು. ಇದು UKಯಲ್ಲೆ ಅತಿ ದೊಡ್ಡ ಮುಕ್ತ ಕಲಾ ಉತ್ಸವವಾಗಿದೆ. ತಾನು ಇನ್ನು ಮುಂದೆ ಆರ್ಟ್ಸ್‌ಫೆಸ್ಟ್‌ ಉತ್ಸವದ ಆತಿಥ್ಯ ವಹಿಸಲಾರದು ಎಂದು ನಗರ ಪರಿಷತ್‌ ಡಿಸೆಂಬರ್‌ 2006ರಲ್ಲಿ ಘೋಷಿಸಿತು.[೧೧೬] ಸೇಂಟ್‌ ಪ್ಯಾಟ್ರಿಕ್ಸ್‌ ಡೇ ಪ್ರದರ್ಶನವು ನಗರದಲ್ಲಿನ ಅತಿ ದೊಡ್ಡ, ಏಕದಿನದ ಉತ್ಸವವಾಗಿದೆ. ಡಬ್ಲಿನ್‌ನ ನಂತರ ಇಲ್ಲಿ ನಡೆಯುವ ಉತ್ಸವವು ಯುರೋಪ್‌ನ ಎರಡನೆಯ ಅತಿ ದೊಡ್ಡ ಉತ್ಸವವಾಗಿದೆ.[೧೧೭] ಇತರೆ ವಿವಿಧ ಸಾಂಪ್ರದಾಯಿಕ ಉತ್ಸವಗಳಲ್ಲಿ ಬಾಂಗ್ಲಾ ಮೇಲಾ ಹಾಗೂ ವೈಶಾಖಿ ಮೇಲಾ ಸಹ ಸೇರಿವೆ. ಪ್ರತಿ ವರ್ಷ ಆಗಸ್ಟ್‌ ತಿಂಗಳಲ್ಲಿ ನಡೆಯುವ ಬರ್ಮಿಂಗ್ಹ್ಯಾಮ್‌ ಹೆರಿಟೇಜ್‌ ಫೆಸ್ಟಿವಲ್‌ ಮರ್ಡಿ ಗ್ರಾಸ್‌ ಶೈಲಿಯ ಉತ್ಸವವಾಗಿದೆ. ಕೆರಿಬಿಯನ್‌ ಮತ್ತು ಆಫ್ರಿಕನ್‌ ಸಂಪ್ರದಾಯ ಉತ್ಸವಗಳನ್ನು ಪ್ರದರ್ಶನಗಳು ಹಾಗೂ ಸಂಚಾರಿ ನಟರಿಂದ ಬೀದಿ ನಾಟಕಗಳೊಂದಿಗೆ ಆಚರಿಸಲಾಗುತ್ತದೆ. ನಗರದಲ್ಲಿ ನಡೆಯುವ ಇತರೆ ಉತ್ಸವಗಳಲ್ಲಿ, 2006ರಿಂದ ಮೋಸ್ಲೆ ಖಾಸಗಿ ಉದ್ಯಾನದಲ್ಲಿ ನಡೆಯುತ್ತಿರುವ ಮೋಸ್ಲೆ ಜನಪದ ಉತ್ಸವ - ಇದು ಮೊದಲೇ ಸ್ಥಾಪಿತ ಜನಪದ ನಾಟಕಗಳೊಂದಿಗೆ ನೂತನ ಉತ್ಸವಗಳನ್ನು ಮಿಶ್ರಿಸುತ್ತದೆ. ಬರ್ಮಿಂಗ್ಹ್ಯಾಮ್‌ ಜ್ಯಾಝ್‌ ಉತ್ಸವ, ಇಸವಿ 2001ರಿಂದಲೂ ನಡೆಯುತ್ತಿರುವ ಬರ್ಮಿಂಗ್ಹ್ಯಾಮ್‌ ಕಾಮೆಡಿ ಉತ್ಸವದಲ್ಲಿ ಪೀಟರ್‌ ಕೇ, ದಿ ಫಾಸ್‌‌ ಷೋ, ಜಿಮ್ಮಿ ಕ್ಯಾರ್‌, ಲೀ ಇವಾನ್ಸ್‌ ಹಾಗೂ ಲೆನ್ನಿ ಹೆನ್ರಿ ಪ್ರದರ್ಶನಗಳಿದ್ದವು, ಹಾಗೂ, 2009ರಲ್ಲಿ ಆರಂಭಗೊಂಡ ಆಫ್‌ ದಿ ಕಫ್‌ ಉತ್ಸವಗಳೂ ಸೇರಿವೆ. ನಗರಗಳಲ್ಲಿ ನಡೆಸಲಾಗುವ ಉತ್ಸವಗಳು, ಪ್ರದರ್ಶನಗಳು ಹಾಗೂ ಇತರೆ ಚಟುವಟಿಕೆಗಳು ಬರ್ಮಿಂಗ್ಹ್ಯಾಮ್‌ 2026 ಯೋಜನೆಯ ಅಂಗಗಳಾಗಿವೆ. ಇವೆಲ್ಲವೂ ಸಹ, ನಗರದಲ್ಲಿ ಸಾರ್ವಜನಿಕ ಉತ್ಸವಗಳು ಹಾಗೂ ಚಟುವಟಿಕೆಗಳನ್ನು ಉತ್ತಮಗೊಳಿಸಲು ಬಿ ಬರ್ಮಿಂಗ್ಹ್ಯಾಮ್‌ (ನಗರದ ಸ್ಥಳೀಯ ಪಾಲುದಾರಿಕೆ) ಸಂಘಟನೆಯ ಧ್ಯೇಯದ ಅಂಗವಾಗಿವೆ. [ಸೂಕ್ತ ಉಲ್ಲೇಖನ ಬೇಕು] ಬರ್ಮಿಂಗ್ಹ್ಯಾಮ್‌ ಸಂಸ್ಕೃತಿಯ ನಗರ ಎಂದು ಆಯ್ಕೆಯಾಗುವ ಯತ್ನವನ್ನು ಖ್ಯಾತನಾಮರಾದ ಕ್ರಿಸ್‌ ಅಕಬ್ಯುಸಿ, ಡೆನಿಸ್‌ ಲೂಯಿಸ್‌ ಹಾಗೂ ಜೇಮ್ಸ್‌ ಫೆಲ್ಪ್ಸ್‌ ಮತ್ತು ಆಲಿವರ್‌ ಫೆಲ್ಪ್ಸ್‌ ಅವಳಿಗಳು (ಹ್ಯಾರಿ ಪಾಟರ್‌ ಚಲನಚಿತ್ರ ಸರಣಿಯಲ್ಲಿ ವೀಸ್ಲೆ ಅವಳಿಗಳ ಪಾತ್ರ ನಿರ್ವಹಿಸಿದ್ದರು). ಬರ್ಮಿಂಗ್ಹ್ಯಾಮ್‌ ದ್ವೈವಾರ್ಷಿಕ ಅಂತರರಾಷ್ಟ್ರೀಯ ನೃತ್ಯ ಉತ್ಸವವು 2008ರಲ್ಲಿ ಆರಂಭವಾಯಿತು. ಇದನ್ನು ಡ್ಯಾನ್ಸ್‌ಎಕ್ಸ್‌ಚೇಂಚ್‌ ಅಯೋಜಿಸಿತ್ತು. ನಗರದೆಲ್ಲೆಡೆ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಪ್ರದರ್ಶನಗಳು ನಡೆಯುವವು.

ಮಾಧ್ಯಮ

[ಬದಲಾಯಿಸಿ]
BBC ಬರ್ಮಿಂಗ್ಹ್ಯಾಮ್‌ನ ಪ್ರಧಾನ ಕಾರ್ಯಸ್ಥಳವಾದ ದಿ ಮೇಲ್‌ಬಾಕ್ಸ್‌.

ಬರ್ಮಿಂಗ್ಹ್ಯಾಮ್‌ನಲ್ಲಿ ಹಲವು ಪ್ರಮುಖ ಸ್ಥಳೀಯ ಪತ್ರಿಕೆಗಳಿವೆ - ದೈನಿಕ ಬರ್ಮಿಂಗ್ಹ್ಯಾಮ್‌ ಮೇಲ್ ‌ ಹಾಗೂ ವಾರಕ್ಕೊಮ್ಮೆ ಪ್ರಕಟವಾಗುವ ಬರ್ಮಿಂಗ್ಹ್ಯಾಮ್‌ ಪೋಸ್ಟ್‌ ಮತ್ತು ಸಂಡೇ ಮರ್ಕ್ಯೂರಿ . ಇವೆರಡೂ ಸಹ ಟ್ರಿನಿಟಿ ಮಿರರ್‌ ಸ್ವಾಮ್ಯದಲ್ಲಿದೆ. ಇದು ವ್ಹಾಟ್ಸ್‌ ಆನ್ ‌ ಎಂಬ ಪಾಕ್ಷಿಕ ಪತ್ರಿಕೆಯನ್ನೂ ಸಹ ಸ್ವಾಮ್ಯದಲ್ಲಿಟ್ಟುಕೊಂಡಿದೆ. ಇದು ಸುಮಾರು 30 ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ ಫಾರ್ವರ್ಡ್ (ಹಿಂದೆ ಬರ್ಮಿಂಗ್ಹ್ಯಾಮ್‌ ವಾಯ್ಸ್ ‌)‌ ಎಂಬ ಉಚಿತ ಪತ್ರಿಕೆಯನ್ನು ಪ್ರಕಟಿಸುತ್ತದೆ. ಇದನ್ನು ನಗರದಲ್ಲಿನ ಮನೆಗಳಿಗೆ ಹಂಚಲಾಗುತ್ತದೆ. ಬರ್ಮಿಂಗ್ಹ್ಯಾಮ್‌ ಹಲವು ವಿವಿಧ ರಾಷ್ಟ್ರೀಯ ಜನಾಂಗೀಯ ಮಾಧ್ಯಮಗಳು ಹಾಗೂ ಎರಡು ಪ್ರಾದೇಶಿಕ ಮಹಾನಗರ ಸಂಚಿಕೆಗಳ (ಪೂರ್ವ ಹಾಗೂ ಪಶ್ಚಿಮ ಮಿಡ್ಲೆಂಡ್ಸ್‌) ಕಾರ್ಯಸ್ಥಳಗಳು ಬರ್ಮಿಂಗ್ಹ್ಯಾಮ್‌ನಲ್ಲಿವೆ. ಬರ್ಮಿಂಗ್ಹ್ಯಾಮ್‌ಗೆ ಚಲನಚಿತ್ರರಂಗ ಸಂಬಂಧಿಸಿ ದೀರ್ಘ ಇತಿಹಾಸವಿದೆ. ಸ್ಟೇಷನ್‌ ಸ್ಟ್ರೀಟ್‌ನಲ್ಲಿರುವ ಎಲೆಕ್ಟ್ರಿಕ್‌ ಸಿನೆಮಾ UKಯ ಅತಿ ಹಳೆಯ ಸಕ್ರಿಯ ಚಿತ್ರಮಂದಿರವಾಗಿದೆ.[೧೧೮] 1920ರ ದಶಕದಲ್ಲಿ ಆಸ್ಕರ್‌ ಡಾಯಿಚ್‌ ತಮ್ಮ ಮೊದಲ ಓಡ್‌ಆನ್ ಸಿನೆಮಾವನ್ನು ಪೆರ್ರಿ ಬಾರ್‌ನಲ್ಲಿ ಆರಂಭಿಸಿದರು. ಬರ್ಮಿಂಗ್ಹ್ಯಾಮ್‌-ಸಂಜಾತ ವಾಸ್ತುಶಿಲ್ಪಿ ಹ್ಯಾರಿ ವೀಡನ್‌ ಆಸ್ಕರ್‌ ಡಾಯಿಚ್‌ರೊಂದಿಗೆ ಸಹಯೋಗ ನೀಡಿ, ದೇಶದೆಲ್ಲಡೆ 300ಕ್ಕೂ ಹೆಚ್ಚು ಸಿನೆಮಾಗಳನ್ನು ವಿನ್ಯಾಸ ಮಾಡಿದರು. ಇವುಗಳಲ್ಲಿ ಬಹಳಷ್ಟು ಆರ್ಟ್‌ ಡೆಕೊ ಶೈಲಿಯಲ್ಲಿವೆ.[೧೧೯] ಸ್ಟಾರ್‌ ಸಿಟಿ ಯುರೋಪ್‌ನ ಅತಿ ದೊಡ್ಡ ವಿರಾಮಕಾಲಿಕ ಕೇಂದ್ರ ಹಾಗೂ ಸಿನೆಮಾ ಮಳಿಗೆಗಳಲ್ಲೊಂದು ಎನ್ನಲಾಗಿದೆ. [weasel words] ಈಸ್ಟ್‌ಸೈಡ್‌ನಲ್ಲಿರುವ ಮಿಲೆನಿಯಮ್‌ ಪಾಯಿಂಟ್‌ನಲ್ಲಿ ಒಂದು IMAX ಚಲನಚಿತ್ರಮಂದಿರವಿದೆ.[೧೨೦]

ಫೆಲಿಷಿಯಾಸ್‌ ಜರ್ನಿ ಸೇರಿದಂತೆ, 1999ರಲ್ಲಿ ಬಿಡುಗಡೆಯಾದ ಚಲನಚಿತ್ರಗಳನ್ನು ಬರ್ಮಿಂಗ್ಹ್ಯಾಮ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಮುಂಚೆ, 1973ರಲ್ಲಿ ಬಿಡುಗಡೆಯಾದ ಟೇಕ್‌ ಮಿ ಹೈ ಚಲನಚಿತ್ರದಲ್ಲಿ ಇದೇ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಫೆಲಿಷಿಯಾಸ್‌ ಜರ್ನಿ ಚಲನಚಿತ್ರದ ಮೂಲಕ ನಗರದಲ್ಲಾದ ಬದಲಾವಣೆಗಳನ್ನು ನಿರೂಪಿಸಲಾಯಿತು.[೧೨೧]

ದಿ ಇಲೆಕ್ಟ್ರಿಕ್‌ ಸಿನೆಮಾ

ಕಿರುತೆರೆ ನಾಟಕಗಳಿಗಾಗಿ ನೆಚ್ಚಿನ ಸ್ಥಳವಾಗುವುದರ ಜೊತೆಗೆ, ದೂರದರ್ಶನ ಪ್ರಸಾರಕ್ಕೂ ಸಹ ಬರ್ಮಿಂಗ್ಹ್ಯಾಮ್‌ ರಾಷ್ಟ್ರಮಟ್ಟದಲ್ಲಿ ಕೇಂದ್ರಬಿಂದುವಾಗಿದೆ. ನಗರದಲ್ಲಿ BBC ವಾಹಿನಿಯ ಎರಡು ಘಟಕಗಳಿವೆ. ನಗರ ಕೇಂದ್ರದಲ್ಲಿರುವ ದಿ ಮೇಲ್‌ಬಾಕ್ಸ್‌ನಲ್ಲಿ BBC ಇಂಗ್ಲಿಷ್‌ ರೀಜನ್‌ನ ರಾಷ್ಟ್ರೀಯ ಪ್ರಧಾನ ಕಾರ್ಯಸ್ಥಾನ,[೧೨೨] BBC ವೆಸ್ಟ್‌ ಮಿಡ್ಲೆಂಡ್ಸ್‌ ಹಾಗೂ BBC ಬರ್ಮಿಂಗ್ಹ್ಯಾಮ್‌ ನೆಟ್ವರ್ಕ್‌ ನಿರ್ಮಾಣ ಕೇಂದ್ರಗಳ ಪ್ರಧಾನ ಕಾರ್ಯಸ್ಥಾನಗಳಿವೆ. ಇವು ಮುಂಚೆ ಎಡ್ಜ್‌ಬ್ಯಾಸ್ಟನ್‌ಪೆಬಲ್‌ ಮಿಲ್‌ ಸ್ಟುಡಿಯೊದಲ್ಲಿದ್ದವು. ಸೆಲ್ಲಿ ಓಕ್‌ನಲ್ಲಿರುವ BBC ಡ್ರಾಮಾ ವಿಲೇಜ್‌ ಕಾರ್ಯಕ್ರಮ ನಿರ್ಮಾಣ ಕೇಂದ್ರವಾಗಿದೆ. ಇಲ್ಲಿ ವಿಶೇಷವಾಗಿ ಕಿರುತೆರೆ ನಾಟಕಗಳ ನಿರ್ಮಾಣ ಚಟುವಟಿಕೆಗಳು ನಡೆಯುತ್ತವೆ. ಸದ್ಯಕ್ಕೆ ಪ್ರಸಾರವಾಗುತ್ತಿರುವ 'ಡಾಕ್ಟರ್ಸ್' ಅತಿ-ಹೊಸದಾದ UK ದೈನಿಕ ಧಾರಾವಾಹಿ, ವೆಸ್ಟ್‌ ಮಿಡ್ಲೆಂಡ್ಸ್‌ ವಲಯದ ಏಕೈಕ ದೈನಿಕ ಧಾರಾವಾಹಿ, ಹಾಗೂ, ಹಗಲಿನ ವೇಳೆ ಪ್ರಸಾರವಾಗುವ ಏಕೈಕ ದೈನಿಕ ಧಾರಾವಾಹಿಯಾಗಿದೆ.[೧೨೩] BBC ಬರ್ಮಿಂಗ್ಹ್ಯಾಮ್‌ನಲ್ಲಿರುವ 2,500 ಹುದ್ದೆಗಳ ಪೈಕಿ 43ರನ್ನು ಕಡಿತಗೊಳಿಸಲಾಗುವುದೆಂದು ಅಕ್ಟೋಬರ್ 2007ರಲ್ಲಿ ಘೋಷಿಸಲಾಗಿತ್ತು.

ಟಿಸ್ವಸ್‌ ಹಾಗೂ ಕ್ರಾಸ್‌ರೋಡ್ಸ್‌ ಸೇರಿದಂತೆ, ITVಗಾಗಿ ಹಲವು ಕಾರ್ಯಕ್ರಮಗಳ ಚಿತ್ರೀಕರಣವನ್ನು ಬರ್ಮಿಂಗ್ಹ್ಯಾಮ್‌ನಲ್ಲಿರುವ ಸೆಂಟ್ರಲ್‌/ATV ಸ್ಟುಡಿಯೋಗಳಲ್ಲಿ ನಡೆಸಲಾಯಿತು. ಅಂತಿಮವಾಗಿ ಈ ಸ್ಟುಡಿಯೊವನ್ನು ಮುಚ್ಚಲಾಯಿತು.[೧೨೪] ಸೆಂಟ್ರಲ್‌ TV ಸದ್ಯದ ಗ್ಯಾಸ್‌ ಸ್ಟ್ರೀಟ್‌ ಸ್ಟುಡಿಯೊಗೆ ಸ್ಥಳಾಂತರಗೊಂಡಾಗ, ಇದು CITVಯ ಪ್ರಮುಖ ಕೇಂದ್ರವಾಗಿತ್ತು. ಅನಂತರ CITV 2004ರಲ್ಲಿ ಮ್ಯಾಂಚೆಸ್ಟರ್‌ಗೆ ಸ್ಥಳಾಂತರಗೊಂಡಿತು. ಬರ್ಮಿಂಗ್ಹ್ಯಾಮ್‌ನಿಂದ ಮೂಡಿಬರುವ ITV ಸೆಂಟ್ರಲ್‌ನ ಕಾರ್ಯಕ್ರಮಗಳಲ್ಲಿ ಸೆಂಟ್ರಲ್‌ ಟುನೈಟ್‌ ಎಂಬ ಪ್ರದೇಶವಾರು ವಾರ್ತಾ ಕಾರ್ಯಕ್ರಮದ ಪಶ್ಚಿಮ ಹಾಗೂ ಪೂರ್ವ ಸಂಚಿಕೆಗಳನ್ನು ಹೊಂದಿವೆ.

ಹಲವು ರಾಷ್ಟ್ರೀಯ ಹಾಗೂ ಪ್ರಾದೇಶಿಕ ರೇಡಿಯೊ ವಾಹಿನಿಗಳು ನಗರದಲ್ಲಿವೆ. ಜೊತೆಗೆ ಸ್ಥಳೀಯ ರೇಡಿಯೊ ಪ್ರಸಾರ ಕೇಂದ್ರಗಳೂ ಇವೆ. ಇವುಗಳಲ್ಲಿ 96.4 BRMB, ಗೆಲೆಕ್ಸಿ, ಹಾರ್ಟ್‌ FM, ಕೆರಾಂಗ್‌!, 105.2, ನ್ಯೂ ಸ್ಟೈಲ್‌ ರೇಡಿಯೊ 98.7FM, ಸ್ಮೂತ್‌ ರೇಡಿಯೊ 105.7FM ಹಾಗೂ BBC WM ಸೇರಿವೆ.[೧೨೫] ವಿಶ್ವದಲ್ಲಿ ಬಹಳ ವರ್ಷಗಳಿಂದ ಪ್ರಸಾರವಾಗುತ್ತಿರುವ ರೇಡಿಯೊ ಕಾರ್ಯಕ್ರಮ ದಿ ಆರ್ಚರ್ಸ್‌ ನ ಧ್ವನಿಮುದ್ರಣವನ್ನು BBC ರೇಡಿಯೊ 4ಗಾಗಿ ಬರ್ಮಿಂಗ್ಹ್ಯಾಮ್‌ನಲ್ಲಿ ಮಾಡಲಾಯಿತು.[೧೨೬]

ಬಿಡುವಿನ ಸಮಯ

[ಬದಲಾಯಿಸಿ]
ಚಿತ್ರ:Vtp200.jpg
ಪ್ರಸ್ತಾಪಿತ VTP200

ಎರಡು ಪ್ರಮುಖ ಬೆಳವಣಿಗೆಗಳು ಇತ್ತೀಚೆಗಿನ ವರ್ಷಗಳಲ್ಲಿ ನಗರದ ಎರಡು ಭಾಗಗಳನ್ನು ಪುನಃ ನಿರ್ಮಿಸಿವೆ. ನ್ಯಾಷನಲ್‌ ಸೀ ಲೈಫ್‌ ಸೆಂಟರ್‌ನೊಂದಿಗೆ, ಭೋಜನಾ ಮಂದಿರಗಳು ಹಾಗೂ ಕಾರ್ಯಸ್ಥಳ ಕಟ್ಟಡಗಳುಳ್ಳ ಬ್ರಿಂಡ್ಲೆಪ್ಲೇಸ್‌ ಪ್ರಮುಖ ಕಾಲುವೆ-ತೀರದ, ಅಭಿವೃದ್ಧಿ ಪಡೆದ ಜಾಗವಾಗಿದೆ. ಮುಂಚೆ ಇದ್ದ ವ್ಯಾಪಾರಿ ಮಳಿಗೆಯ ಸ್ಥಾನದಲ್ಲಿ ನಿರ್ಮಿಸಲಾದ ಬುಲ್‌ ರಿಂಗ್‌ ಷಾಪಿಂಗ್‌ ಸೆಂಟರ್‌ ಇನ್ನೊಂದು ಬೆಳವಣಿಗೆಯಾಗಿದೆ. ಕಾಲುವೆ ದಂಡೆಯಲ್ಲಿರುವ ಇನ್ನೊಂದು ನಿರ್ಮಾಣವಾದ ದಿ ಮೇಲ್‌ಬಾಕ್ಸ್‌ನಲ್ಲಿ ವಿನ್ಯಾಸಕಾರ ಮಳಿಗೆಗಳು ಹಾಗೂ ಕಾರ್ಯಸ್ಥಳಗಳು ಮತ್ತು ವಠಾರದ ಮನೆಗಳಿವೆ. MAKE ಆರ್ಕಿಟೆಕ್ಟ್‌ಸ್‌ ವಿನ್ಯಾಸ ಮಾಡಿದ ದಿ ಕ್ಯೂಬ್‌ ಹದಿನೇಳು ಅಂತಸ್ತುಗಳುಳ್ಳ, ವಿವಿಧ-ಬಳಕೆಯ ಕಟ್ಟಡವಾಗಿದ್ದು, ಮೇಲ್‌ಬಾಕ್ಸ್‌ ಪ್ರಮುಖ ಯೋಜನೆಯಡಿ ಇದು ಇನ್ನು ನಿರ್ಮಾಣ ಹಂತದಲ್ಲಿದೆ. ನ್ಯಾಷನಲ್‌ ಇಂಡೊರ್‌ ಅರೆನಾ ಯುರೋಪ್‌ನ ಅತಿ ನಿಬಿಡ, ಬೃಹತ್‌ ಪ್ರಮಾಣದ ಕ್ರೀಡಾ ಹಾಗೂ ಮನರಂಜನಾ ಸ್ಥಳಗಳಾಗಿವೆ. ನಗರ ಕೇಂದ್ರದಾಚೆ ಸ್ಟಾರ್‌ ಸಿಟಿ ಮನರಂಜನಾ ಮಳಿಗೆಯಿದೆ. ಮುಂಚೆ, ನೆಚೆಲ್ಸ್‌ ಪಾವರ್‌ ಸ್ಟೇಷನ್‌ ಈ ಸ್ಥಳದಲ್ಲಿತ್ತು.[೧೨೭]

ಬರ್ಮಿಂಗ್ಹ್ಯಾಮ್‌ನಲ್ಲಿನ ರಾತ್ರಿ-ಜೀವನವು ಪ್ರಮುಖವಾಗಿ ಬ್ರಾಡ್‌ ಸ್ಟ್ರೀಟ್‌ ಹಾಗೂ ಬ್ರಿಂಡ್ಲೆಪ್ಲೇಸ್‌ನಲ್ಲಿ ಕೇಂದ್ರೀಕೃತವಾಗಿದೆ. ಆದರೂ, ಇತ್ತೀಚೆಗಿನ ವರ್ಷಗಳಲ್ಲಿ, ಬ್ರಾಡ್‌ ಸ್ಟ್ರೀಟ್‌ ಕ್ಷೇತ್ರದ ಆಚೆ, ಸೊಗಸಾದ ಕ್ಲಬ್‌ ಹಾಗೂ ಬಾರ್‌ಗಳು ಸ್ಥಾಪಿತವಾಗಿ, ಅಲ್ಲಿ ವ್ಯವಹಾರಗಳೂ ಸಹ ನಡೆಯುತ್ತಿವೆ. The ಕಸ್ಟರ್ಡ್‌ ಫ್ಯಾಕ್ಟರಿಯಲ್ಲಿರುವ ಮೆಡಿಸಿನ್‌ ಬಾರ್, ದಿ ಸ್ಯಾಂಕ್ಚುಯರಿ, ರೇನ್ಬೊ ಪಬ್‌ ಹಾಗೂ ಏರ್‌, ಡಿಗ್ಬೆತ್‌ನಲ್ಲಿರುವ ದೊಡ್ಡ ಕ್ಲಬ್‌ ಹಾಗೂ ಬಾರ್‌ಗಳು.

ಡಿಗ್ಬೆತ್‌ ಸಮೀಪ, ಅರ್ಕಾಡಿಯನ್‌ ಹಾಗೂ ಚೈನೀಸ್‌ ಕ್ವಾರ್ಟರ್‌ ಸಮೀಪ ಹರ್ಸ್ಟ್ ಸ್ಟ್ರೀಟ್‌ ಗೇ ವಿಲೇಜ್‌ಗಳಲ್ಲಿ ಬಾರ್‌ಗಳು ಮತ್ತು ರಾತ್ರಿಯ ಮನರಂಜನಾಲಯಗಳಿವೆ. ಸಮ್ಮರ್‌ ರೋ, ದಿ ಮೇಲ್‌ಬಾಕ್ಸ್‌, ಜುಯಲ್ಲರಿ ಕ್ವಾರ್ಟರ್‌ ಸಹ ಕ್ಲಬ್‌ಗಳನ್ನು ಹೊಂದಿವೆ. ಇವಲ್ಲದೆ, ಸೇಂಟ್‌ ಫಿಲಿಪ್ಸ್‌/ಕೊಲ್ಮೊರ್‌ ರೋ ಎಂಬ ಕ್ಲಬ್‌ನಲ್ಲಿ, ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸುವ ಎಲ್ಲಾ ಪೋಲಿಷ್‌ ಮೂಲದ ನಿವಾಸಿಗಳಿಗಾಗಿ ಪ್ರತಿ ತಿಂಗಳಲ್ಲೊಮ್ಮೆ ರಾತ್ರಿಯ ಔತಣ ಏರ್ಪಡಿಸಲಾಗುತ್ತದೆ. ಐರಿಷ್‌ ಕ್ವಾರ್ಟರ್‌ನಲ್ಲಿ ಹಲವು ರಾತ್ರಿ ಮನರಂಜನಾ ಗೃಹಗಳಿವೆ.[೧೨೮]

ಲೇಡಿವುಡ್‌ನಲ್ಲಿ, NIA ಪಕ್ಕ ಐವತ್ತು ಮೀಟರ್‌ ಉದ್ದದ ಒಲಿಂಪಿಕ್‌ ಪ್ರಮಾಣದ ಈಜುಕೊಳ ನಿರ್ಮಿಸಲು ಯೋಜನಾ ಅನುಮತಿ ದೊರೆತಿದೆ. ಬರ್ಮಿಂಗ್ಹ್ಯಾಮ್‌ ಅಕ್ವಾಟಿಕ್ಸ್‌ ಅಂಡ್‌ ಲೀಜರ್‌ ಸೆಂಟರ್ ‌ ಅಥವಾ 'BALC ' ನಿರ್ಮಿಸಲು £58 ದಶಲಕ್ಷದಷ್ಟು ವೆಚ್ಚವಾಗಲಿದೆ. ಲಂಡನ್‌ನಲ್ಲಿ ನಡೆಯಲಿರುವ 2012 ಒಲಿಂಪಿಕ್‌ ಕ್ರೀಡಾಕೂಟದ ಹೊತ್ತಿಗೆ ಪೂರ್ಣಗೊಳಿಸುವ ಮೂಲ ಯೋಜನೆಯಿತ್ತು. ಇದರಿಂದಾಗಿ ಚೀನೀ ಈಜು ತಂಡದವರು ಇಲ್ಲಿ ಅಭ್ಯಸಿಸಲು ಅನುಕೂಲವಾಗುವುದಿತ್ತು. ಆದರೆ ಬಜೆಟ್‌ ತೊಂದರೆಯ ಕಾರಣ ಸಕಾಲಕ್ಕೆ ಪೂರ್ಣಗೊಳ್ಳುವುದಿಲ್ಲ.[೧೨೯] ಯೋಜನಾ ಅನುಮತಿ ದೊರೆತಿದ್ದರೂ ಕೂಡ, ನಿರ್ಮಾಣ ಕಾಮಗಾರಿಯು ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆ ಕಡಿಮೆ. ಈ ಈಜುಕೊಳವು ಆ ಬಡಾವಣೆಯ ನಿವಾಸಿಗಳೊಂದಿಗೆ ವಿವಾದ ಹಾಗೂ ಮಾತಿನ ಚಕಮಕಿಗೆ ಕಾರಣವಾಗಿದೆ. ಇದು ಇತರೆ ದೊಡ್ಡ ಕ್ರೀಡಾಂಗಣಗಳಿಗೆ ಹತ್ತಿರವಿರುವುದು ಇದಕ್ಕೆ ಕಾರಣ.[೧೩೦]

ವಾಸ್ತುಶೈಲಿ

[ಬದಲಾಯಿಸಿ]
17 & 19 ನ್ಯೂಹಾಲ್‌ ಸ್ಟ್ರೀಟ್‌ನಲ್ಲಿ ಬರ್ಮಿಂಗ್ಹ್ಯಾಮ್‌ನ ಪ್ರಮುಖ ಲಕ್ಷಣ ಎನ್ನಲಾದ ವಿಕ್ಟೊರಿಯನ್‌ ಕೆಂಪು ಇಟ್ಟಿಗೆ ಮತ್ತು ಟೆರಾಕೊಟಾ ಬಳಸಿ ನಿರ್ಮಿಸಲಾದ ಮನೆಗಳು

ಬರ್ಮಿಂಗ್ಹ್ಯಾಮ್‌ ಪ್ರಮುಖವಾಗಿ 18, 19 ಹಾಗೂ 20ನೆಯ ಶತಮಾನಗಳಲ್ಲಿ ಗಮನಕ್ಕೆ ಬಂದಿತು. ಕೈಗಾರಿಕಾ ಕ್ರಾಂತಿಯ ಸಮಯ ಬರ್ಮಿಂಗ್ಹ್ಯಾಮ್‌ ಅಭಿವೃದ್ಧಿ ಕಂಡಿತು. ಇದರ ಫಲವಾಗಿ, ತನ್ನ ಮುಂಚಿನ ಇತಿಹಾಸದ ಕಟ್ಟಡಗಳಲ್ಲಿ ಕೆಲವೇ ಕೆಲವು ಮಾತ್ರ ಉಳಿದುಕೊಂಡಿವೆ. ಉಳಿದುಕೊಂಡವುಗಳನ್ನು ಶಾಸನಬದ್ಧವಾಗಿ ರಕ್ಷಿಸಲಾಗಿದೆ. ಬರ್ಮಿಂಗ್ಹ್ಯಾಮ್‌ನಲ್ಲಿ 1,946 ಐತಿಹಾಸಿಕವಾಗಿ ಪ್ರಮುಖ ಎಂದು ಗುರತಿಸಲಾದ ಕಟ್ಟಡಗಳು ಹಾಗೂ ಹದಿಮೂರು ರಾಷ್ಟ್ರೀಯವಾಗಿ ಪ್ರಮುಖ (ಯಾವುದೇ ಮಾರ್ಪಾಡಿನ ವಿರುದ್ಧ ರಕ್ಷಿತ) ಸ್ಮಾರಕಗಳಿವೆ.[೧೩೧] ಶಾಸನಬದ್ಧವಾಗಿ ಪಟ್ಟಿಯಾಗಲು ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸದ ಕಟ್ಟಡಗಳಿಗೆ, ಸ್ಥಳೀಯ ಯೋಜನೆಯನ್ನು ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ ನಡೆಸುತ್ತದೆ.

ಹಳೆಯ ಇಗರ್ಜಿಗಳಲ್ಲಿ ಬರ್ಮಿಂಗ್ಹ್ಯಾಮ್‌ನ ಮಧ್ಯಯುಗೀಯ ಲಕ್ಷಣಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ ಸೇಂಟ್‌ ಮಾರ್ಟಿನ್‌ ಇನ್‌ ದಿ ಬುಲ್‌ರಿಂಗ್‌ ಎಂಬ ಮೂಲ ಪ್ಯಾರಿಷ್‌ ಇಗರ್ಜಿ ಪ್ರಮುಖವಾಗಿವೆ. ಮಧ್ಯಯುಗದ ಮತ್ತು ಟುಡಾರ್‌ ಕಾಲದ ಇನ್ನೂ ಕೆಲವು ಕಟ್ಟಡಗಳು ಉಳಿದುಕೊಂಡಿವೆ. ಇವುಗಳಲ್ಲಿ ಲ್ಯಾಡ್‌ ಇನ್‌ ದಿ ಲೇನ್‌ [೧೩೨] ಹಾಗೂ ದಿ ಓಲ್ಡ್‌ ಕ್ರೌನ್‌ , ಹದಿನೈದನೆಯ ಶತಮಾನದ ಸಾರಾಸೆನ್ಸ್‌ ಹೆಡ್‌ ತಂಗುಮನೆ (ಮದ್ಯದ ಹೋಟೆಲ್‌?) ಕಿಂಗ್ಸ್‌ ನಾರ್ಟನ್‌ನಲ್ಲಿರುವ ಓಲ್ಡ್‌ ಗ್ರ್ಯಾಮರ್‌ ಸ್ಕೂಲ್‌ [೧೩೩] ಹಾಗೂ ಬ್ಲೇಕ್ಸ್‌ಲೆ ಹಾಲ್‌ ಪ್ರಖ್ಯಾತವಾಗಿವೆ.

ಫ್ಯೂಚರ್‌ ಸಿಸ್ಟಮ್ಸ್‌ ವಾಸ್ತುವಿನ್ಯಾಸಕರಿಂದ ಸೆಲ್ಫ್‌ರಿಡ್ಜಸ್‌.

ಜಾರ್ಜಿಯನ್‌ ಕಟ್ಟಡಗಳಲ್ಲಿ ಹಲವು ಉಳಿದುಕೊಂಡಿವೆ. ಇವುಗಳಲ್ಲಿ ಸೇಂಟ್ ಫಿಲಿಪ್ಸ್‌ ಕತೀಡ್ರಲ್‌, ಸೊಹೊ ಹೌಸ್‌, ಪೆರ್ರಾಟ್ಸ್ ಫೋಲ್ಲಿ, ಟೌನ್‌ ಹಾಲ್‌ (ಪುರಭವನ) ಹಾಗೂ ಸೇಂಟ್‌ ಪಾಲ್ಸ್‌ ಸ್ಕ್ವೇರ್‌ ಸೇರಿವೆ.

ವಿಕ್ಟೋರಿಯನ್‌ ಯುಗದಲ್ಲಿ ನಗರದಲ್ಲಿ ವಿಸ್ತಾರಿತ ಪ್ರಮಾಣದಲ್ಲಿ ಕಟ್ಟಡಗಳ ನಿರ್ಮಾಣವಾಯಿತು. ಪ್ರಮುಖ ಪಟ್ಟಣದ ಕಟ್ಟಡಗಳ ಪೈಕಿ ವಿಕ್ಟೊರಿಯನ್‌ ಕಾನೂನು ನ್ಯಾಯಾಲಯಗಳು ವೈಶಿಷ್ಟ್ಯದ ಕೆಂಪು ಇಟ್ಟಿಗೆ ಮತ್ತು ಟೆರ್ರಾ ಕೊಟ್ಟಾ ಬಳಸಿ ನಿರ್ಮಿಸಲಾಗಿವೆ. ಜೊತೆಗೆ ಪರಿಷತ್‌ ಭವನ ಹಾಗೂ ಮ್ಯೂಸಿಯಮ್‌ & ಆರ್ಟ್‌ ಗ್ಯಾಲರಿ ಸಹ ನಿರ್ಮಿಸಲಾದವು.[೧೩೪] ಸೇಂಟ್‌ ಚಾಡ್ಸ್‌ ಕತೀಡ್ರಲ್‌ ಮತ ಸುಧಾರಣಾ ಯುಗದಲ್ಲಿ ನಿರ್ಮಿಸಲಾದ ಮೊದಲ ರೋಮನ್‌ ಕ್ಯಾತೊಲಿಕ್‌ ಪ್ರಧಾನ ಇಗರ್ಜಿಯಾಗಿತ್ತು.[೧೩೫] ಕೈಗಾರಿಕಾ ಕಾರ್ಮಿಕರಿಗಾಗಿ ವಸತಿಯ ಅಗತ್ಯವೆದ್ದಿತು. ಇದರ ಫಲವಾಗಿ, ನಗರದುದ್ದಗಲಕ್ಕೂ ಕೆಂಪು ಇಟ್ಟಿಗೆ ನಿವಾಸಗಳ ಮನೆಗಳು ಛಾವಣಿಗಳು, ಜೋಡಿ ಮನೆಗಳು ನಿರ್ಮಿತವಾದವು. ಇವುಗಳಲ್ಲಿ ಕೆಲವು ಅನಂತರ ಕಾಲದಲ್ಲಿ ನಗರದ ಒಳಪ್ರದೇಶದ ಕೊಳಚೆ ಕ್ಷೇತ್ರಗಳಾದವು.[೧೩೬]

ಯುದ್ಧ ನಂತರದ ಪುನರಾಭಿವೃದ್ಧಿ ಹಾಗೂ ವಿಕ್ಟೊರಿಯಾವಾದ-ವಿರೋಧದ ಫಲವಾಗಿ, ಬರ್ಮಿಂಗ್ಹ್ಯಾಮ್‌ ನ್ಯೂ ಸ್ಟ್ರೀಟ್‌ ಸ್ಟೇಷನ್‌ ಹಾಗೂ ಹಳೆಯ ಸೆಂಟ್ರಲ್‌ ಲೈಬ್ರರಿ ಸೇರಿದಂತೆ, ವಿಕ್ಟೊರಿಯಾ ಯುಗದ ಹಲವು ಕಟ್ಟಡಗಳನ್ನು ಕೆಡವಲಾಯಿತು.[೧೩೭] ನಗರದ ಒಳಭಾಗದಲ್ಲಿಯೂ ಸಹ, ಬಹಳಷ್ಟು ವಿಕ್ಟೊರಿಯಾ ಯುಗದ ಮನೆಗಳನ್ನು ಪುನರಾಭಿವೃದ್ಧಿಗೊಳಿಸಲಾಯಿತು. ಅಲ್ಲಿದ್ದ ಸಮುದಾಯಗಳನ್ನು ಕ್ಯಾಸ್ಲ್‌ ವೇಲ್‌ನಂತಹ ಅತ್ಯೆತ್ತರದ ವಠಾರದ ಮನೆಗಳುಳ್ಳ ತೋಟಗಳಿಗೆ ಸ್ಥಳಾಂತರಗೊಳಿಸಲಾಯಿತು.[೧೩೮]

ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ ಈಗ ಬೃಹತ್‌ ಪ್ರಮಾಣದ ಅತ್ಯೆತ್ತರದ ವಠಾರದ ಮನೆ ನೆಲಸಮ ಹಾಗೂ ನವೀಕರಣ ಯೋಜನೆ ಹಮ್ಮಿಕೊಂಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ನಗರದ ಮಧ್ಯಭಾಗದಲ್ಲಿ ಬಹಳಷ್ಟು ನಿರ್ಮಾಣ ಚಟುವಟಿಕೆಗಳು ನಡೆಯುತ್ತಿವೆ. ಇವುಗಳಲ್ಲಿ ಬುಲ್‌ರಿಂಗ್‌ ಷಾಪಿಂಗ್‌ ಸೆಂಟರ್‌ನಲ್ಲಿ ಪ್ರಶಸ್ತಿ-ವಿಜೇತ [೧೩೯] ಫ್ಯೂಚರ್‌ ಸಿಸ್ಟಮ್ಸ್‌ರವರ ಸಂಸ್ಥೆಯ ಸೆಲ್ಫ್‌ರಿಡ್ಜಸ್‌ ಕಟ್ಟಡ, ಬ್ರಿಂಡ್ಲೇಪ್ಲೇಸ್‌ ಪುನರಾಭಿವೃದ್ಧಿ ಯೋಜನೆ, ಮಿಲೆನಿಯಮ್‌ ಪಾಯಿಂಟ್‌ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ನಿರ್ಮಾಣವೂ ಸೇರಿವೆ. ಈ ಯೋಜನೆಗಳಿಗೆ ಧನಬೆಂಬಲವು ಯುರೋಪಿಯನ್‌ ಯುನಿಯನ್‌ನಿಂದ ದೊರೆತಿದೆ. ಉದಾಹರಣೆಗೆ, ಪುರಭವನಕ್ಕಾಗಿ ಯುರೋಪಿಯನ್‌ ರೀಜನಲ್‌ ಡೆವೆಲಪ್ಮೆಂಟ್ ಫಂಡ್‌ನಿಂದ £3 ಹಣಕಾಸಿನ ನೆರವು ದೊರೆಯಿತು.[೧೪೦]

1970ರ ದಶಕದಿಂದಲೂ, ಪ್ರಮುಖವಾಗಿ ಇತ್ತೀಚೆಗಿನ ವರ್ಷಗಳಲ್ಲಿ ಅತ್ಯೆತ್ತರದ ಕಟ್ಟಡಗಳ ನಿರ್ಮಾಣವು ಹೆಚ್ಚಾಗಿ ಕಂಡುಬರುತ್ತಿಲ್ಲ. ಏಕೆಂದರೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಹೋಗುವ ವಿಮಾನಗಳಿಗೆ ತೊಂದರೆ ನಾಗರಿಕ ವಿಮಾನಯಾನ ಪ್ರಾಧಿಕಾರವು, ಬೀಟ್‌ಹ್ಯಾಮ್‌ ಟಾವರ್‌ನಂತಹ ಕಟ್ಟಡಗಳ ಗರಿಷ್ಠ ಎತ್ತರದ ಕುರಿತು ನಿರ್ಬಂಧ ಹೇರಿದೆ.[೧೪೧]

ಪರಿಸರ

[ಬದಲಾಯಿಸಿ]

ಬರ್ಮಿಂಗ್ಹ್ಯಾಮ್‌ನಲ್ಲಿ ಸಂರಕ್ಷಿತ ವನ್ಯಜೀವಿಕುಲದ ಹಲವು ತಂಗುದಾಣಗಳಿವೆ. ಇವು ಪ್ರಾಜೆಕ್ಟ್‌ ಕಿಂಗ್ಫಿಷರ್‌ ಮತ್ತು ವುಡ್ಗೇಟ್‌ ವ್ಯಾಲಿ ಕಂಟ್ರಿ ಪಾರ್ಕ್‌ನಂತಹ ಅನೌಪಚಾರಿಕ ಸಂದರ್ಭಗಳು ಹಾಗೂ ಹ್ಯಾಂಡ್ಸ್‌ವರ್ತ್‌ ಪಾರ್ಕ್ ಮತ್ತು ಸ್ಮಾಲ್‌ ಹೀತ್‌ ಪಾರ್ಕ್‌ನಂತಹ ಉದ್ಯಾನಗಳ ಸಮೂಹವೂ ಅಗಬಹುದು. ಕಿಂಗ್ಸ್‌ ಹೀತ್‌ ಪಾರ್ಕ್‌ನಲ್ಲಿರುವ ನಗರದ ತೋಟಗಾರಿಕ ತರಬೇತಿ ಘಟಕವು ಪರ್ಷೋರ್‌ ಕಾಲೇಜ್‌ನೊಂದಿಗೆ ಸಹಭಾಗಿತ್ವ ಹೊಂದಿದೆ. 'ಬರ್ಮಿಂಗ್ಹ್ಯಾಮ್‌ ಫ್ರೆಂಡ್ಸ್‌ ಆಫ್‌ ದಿ ಅರ್ಥ್'‌ ಎಂಬ ಒತ್ತಾಯದ ತಂಡವು ಇನ್ನಷ್ಟು ಸಾಂಪ್ರದಾಯಿಕ ಪರಿಸರೀಯ ವಿಚಾರಗಳನ್ನು ಸತತವಾಗಿ ಪ್ರಸ್ತಾಪಿಸುತ್ತಿದೆ. ದೀರ್ಘಕಾಲ ಉಳಿದುಕೊಳ್ಳುವಂತಹ ಸಾರಿಗೆಗಳಾದ ಸ್ಥಳೀಯ ರೈಲು, ಕಾಲ್ನಡಿಗೆ, ಸೈಕಲ್‌, ಇಂಧನದ ಬೇಡಿಕೆ ಹಾಗು ತ್ಯಾಜ್ಯ ಉತ್ಪಾದನೆಯಲ್ಲಿ ಇಳಿತ, ಹಾಗೂ ಪರಿಸರ-ಸ್ನೇಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಆ ಸಮುದಾಯ ಸಾರಿದೆ. ಬರ್ಮಿಂಗ್ಹ್ಯಾಮ್‌ನ ದಕ್ಷಿಣದಲ್ಲಿ, ಕಾಫ್ಟನ್‌ ಪಾರ್ಕ್‌, ಲಿಕಿ ಹಿಲ್ಸ್‌ ಹಾಗೂ ವೇಸ್ಲೆ ಹಿಲ್ಸ್‌ ಇವೆ. ಈ ಬೆಟ್ಟಗಳಿಂದ ನಗರದ ಕೇಂದ್ರದತ್ತ ವಿಹಂಗಮ ದೃಷ್ಟಿ ಹಾಯಿಸಬಹುದು. ರಾತ್ರಿಯವೇಳೆ ನಗರದ ಬಾನರೇಖೆಯ ಸೊಗಸಾದ ದೃಶ್ಯ ಕಾಣಬಹುದು.

ಅಪರಾಧ ಮತ್ತು ಪೊಲೀಸ್‌

[ಬದಲಾಯಿಸಿ]
ಡಿಗ್ಬೆತ್‌ ಪೊಲೀಸ್‌ ಠಾಣೆ.

ಬರ್ಮಿಂಗ್ಹ್ಯಾಮ್‌ ಹಾಗೂ ವೆಸ್ಟ್‌ ಮಿಡ್ಲೆಂಡ್ಸ್‌ ಕೌಂಟಿಯು ವೆಸ್ಟ್ ಮಿಡ್ಲೆಂಡ್ಸ್‌ ಪೊಲೀಸ್‌ ಸೇವಾ ವಾಪ್ತಿಯಲ್ಲಿದೆ. ಪೊಲೀಸ್‌ ಪ್ರಧಾನ ಕಾರ್ಯಸ್ಥಳವು ಬರ್ಮಿಂಗ್ಹ್ಯಾಮ್‌ನ ನಗರ ಕೇಂದ್ರದಲ್ಲಿರುವ ಲಾಯ್ಡ್‌ ಹೌಸ್‌ನಲ್ಲಿದೆ. ಬರ್ಮಿಂಗ್ಹ್ಯಾಮ್‌ನಲ್ಲಿ ಹಲವು ಗಮನ-ಸೆಳೆಯುವ ಘಟನೆಗಳು ಸಂಭವಿಸಿದ್ದುಂಟು: 31 ಜನವರಿ 2007ರಂದು ಸಂಭವಿಸಿದ ಬರ್ಮಿಂಗ್ಹ್ಯಾಮ್‌ ದಾಳಿ, ಹೊಸವರ್ಷಾರಂಭದಂದು ಸಂಭವಿಸಿದ ಕೊಲೆಗಳು, 2005 ಬರ್ಮಿಂಗ್ಹ್ಯಾಮ್‌ ಜನಾಂಗೀಯ ಗಲಭೆಗಳು ಹಾಗೂ 1974ರಲ್ಲಿ ಸಂಭವಿಸಿದ ಬರ್ಮಿಂಗ್ಹ್ಯಾಮ್‌ ಪಬ್‌ ಬಾಂಬ್ ವಿಸ್ಫೋಟಗಳು.

ಕೆಳಗೆ ತಿಳಿಸಿದಂತೆ, 2008/2009 ಅವಧಿಯಲ್ಲಿ ಅಪರಾಧಗಳ ಅಂಕಿ-ಅಂಶಗಳ ಪ್ರಕಾರ, ಬಹಳಷ್ಟು ಪ್ರಕರಣಗಳಲ್ಲಿ ಇಂಗ್ಲಿಷ್‌ ಸರಾಸರಿಗಿಂತಲೂ ಹೆಚ್ಚು ಅಪರಾಧಗಳು ನಡೆದದ್ದುಂಟು. ಇಂಗ್ಲೆಂಡ್‌ನ 'ಮೂಲ ನಗರ'ಗಳಲ್ಲಿ (ಬರ್ಮಿಂಗ್ಹ್ಯಾಮ್‌, ಬ್ರಿಸ್ಟಲ್‌, ಲೀಡ್ಸ್‌, ಲಿವರ್ಪೂಲ್‌, ಮ್ಯಾಂಚೆಸ್ಟರ್‌, ನ್ಯೂಕ್ಯಾಸ್ಲ್‌, ನಾಟಿಂಗ್ಹ್ಯಾಮ್‌ ಮತ್ತು ಷೆಫೀಲ್ಡ್‌), ಬರ್ಮಿಂಗ್ಹ್ಯಾಮ್‌ನಲ್ಲಿ ಅಪರಾಧದ ಪ್ರಮಾಣ ಅತಿ ಕಡಿಮೆ.[೧೪೨]

ನಗರದಲ್ಲಿ ಅಪರಾಧದ ಪ್ರಮಾಣವನ್ನು ಕಡಿಮೆಗೊಳಿಸಲು, ಅಪರಾಧ ಹಾಗೂ ಅವ್ಯವಸ್ಥೆ ನಿಗ್ರಹ ಸಹಯೋಗಿತ್ವವನ್ನು ರಚಿಸಲಾಗಿದೆ. ಇದು ದೇಶದಲ್ಲೇ ಅತಿ ದೊಡ್ಡ ಪ್ರಮಾಣದ ಸಹಯೋಗವಾಗಿದೆ.[೧೪೩] ಬರ್ಮಿಂಗ್ಹ್ಯಾಮ್‌ನಲ್ಲಿ ಐದು ನೆರೆಹೊರೆ-ಆಧಾರಿತ ಸಮುದಾಯ ರಕ್ಷಣಾ ಯೋಜನೆಗಳಲ್ಲಿ ಈ ಸಹಯೋಗಿತ್ವಗಳ ಕೊಡುಗೆಗೆ ಮನ್ನಣೆ ದೊರೆಯಿತು. ಡಿಸೆಂಬರ್‌ 2004ರಲ್ಲಿ ನಡೆದ ಯುರೋಪಿಯನ್‌ ಕಮ್ಯೂನಿಟಿ ಸೇಫ್ಟಿ ಅವಾರ್ಡ್ಸ್‌ ಸಮಾರಂಭದಲ್ಲಿ ಮೊದಲ ಬಹುಮಾನ ಲಭಿಸಿತು.[೧೪೩] ಆಸ್ಟನ್‌, ಹ್ಯಾಂಡ್ಸ್‌ವರ್ತ್‌, ಸ್ಮಾಲ್‌ ಹೀತ್‌ ಹಾಗೂ ಬಾರ್ಡರ್ಸ್ಲೆ ಗ್ರೀನ್‌ ಕ್ಷೇತ್ರಗಳಲ್ಲಿ ಅಪರಾಧಗಳ ಪ್ರಮಾಣವು ಹೆಚ್ಚು.[೧೪೩]

ಬರ್ಮಿಂಗ್ಹ್ಯಾಮ್‌ನಲ್ಲಿ 2008/2009 ಅವಧಿಯಲ್ಲಿ ಅಪರಾಧ ಅಂಕಿ-ಅಂಶಗಳು
[೧೪೪][೧೪೫]
ಅಪರಾಧ ಬರ್ಮಿಂಗ್ಹ್ಯಾಮ್‌ ಸರಾಸರಿ
(ಜನಸಂಖ್ಯೆಯ ಪ್ರತಿ 1,000ದ ಸರಾಸರಿ)
ಇಂಗ್ಲಿಷ್‌ ಸರಾಸರಿ
(ಜನಸಂಖ್ಯೆಯ ಪ್ರತಿ 1,000ದ ಸರಾಸರಿ)
ದಾಖಲಾದ ಒಟ್ಟು ಅಪರಾಧಗಳು 94.92 86
ವ್ಯಕ್ತಿಯೊಬ್ಬರ ವಿರುದ್ಧದ ಹಿಂಸೆ 21.55 16
ಲೈಂಗಿಕ ಅಪರಾಧಗಳು 1.24 1
ದರೋಡೆ ಅಪರಾಧಗಳು 3.88 2
ಕಳ್ಳತನ 12.19 11
ವಾಹನದ ಕುರಿತು ಅಪರಾಧಗಳು 14.34 11
ಇತರೆ ಕಳ್ಳತನದ ಅಪರಾಧಗಳು 15.24 20
ದಂಡಾರ್ಹ ಹಾನಿ 15.9 17
ಮಾದಕ ದ್ರವ್ಯ ಒಳಗೊಂಡ ಅಪರಾಧಗಳು 5.22 4

ಪ್ರಮುಖ ನಿವಾಸಿಗಳು

[ಬದಲಾಯಿಸಿ]
ಜೊಸೆಫ್‌ ಚ್ಯಾಂಬರ್ಲಿನ್‌

ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ವ್ಯಕ್ತಿಗಳು ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸಿದ್ದುಂಟು. ಜೋಸೆಫ್‌ ಚೇಂಬರ್ಲಿನ್‌ ಒಮ್ಮೆ ಬರ್ಮಿಂಗ್ಹ್ಯಾಮ್‌ನ ಮಹಾಪೌರರಾಗಿದ್ದರು. ಅನಂತರ ಅವರು ಸಂಸದ್‌ ಸದಸ್ಯರಾದರು. ಅವರ ಪುತ್ರ ನೆವಿಲ್‌ ಚೇಂಬರ್ಲಿನ್‌ ಬರ್ಮಿಂಗ್ಹ್ಯಾಮ್‌ನ ಲಾರ್ಡ್‌ ಮೇಯರ್‌ ಆಗಿ, ಬ್ರಿಟಿಷ್‌ ಪ್ರಧಾನ ಮಂತ್ರಿಯಾದರು. ಇವರಿಬ್ಬರೂ ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸಿದ್ದ ಅತಿ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲಿಬ್ಬರು.

ರಾಜಕಾರಣಿ ಇನಾಕ್‌ ಪೊವೆಲ್‌ ಬರ್ಮಿಂಗ್ಹ್ಯಾಮ್‌ನಲ್ಲಿ ಜನಿಸಿದ್ದರು. ಕಿಂಗ್ ಎಡ್ವರ್ಡ್ಸ್‌ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಲೇಖಕ ಜೆ. ಅರ್. ಆರ್‌. ಟೊಲ್ಕಿಯನ್‌ ತಮ್ಮ ಬಾಲ್ಯ ವರ್ಷಗಳನ್ನು ಬರ್ಮಿಂಗ್ಹ್ಯಾಮ್‌ನ ಹಲವು ಕ್ಷೇತ್ರಗಳಲ್ಲಿ ಕೆಲವಾದ ಮೋಸ್ಲೆ ಬಾಗ್‌, ಸೇರ್‌ಹೋಲ್‌ ಮಿಲ್ ಹಾಗು ಪೆರಾಟ್ಸ್‌ ಫೋಲ್ಲಿಯಲ್ಲಿ ಕಳೆದರು.‌ ಲಾರ್ಡ್‌ ಆಫ್‌ ದಿ ರಿಂಗ್ಸ್‌ನಲ್ಲಿ ಹಲವು ದೃಶ್ಯಗಳಿಗೆ ಪೆರಾಟ್ಸ್‌ ಫೋಲ್ಲಿ ಮೂಲ ಸ್ಫೂರ್ತಿಯಾಗಿತ್ತು.

ಲೇಖಕ ಡಬ್ಲ್ಯೂ ಹೆಚ್‌ ಆಡೆನ್‌ ನಗರದ ಹಾರ್ಬೊರ್ನ್‌ ಕ್ಷೇತ್ರದಲ್ಲಿ ತಮ್ಮ ಬಾಲ್ಯವರ್ಷಗಳನ್ನು ಕಳೆದರು. ಅಮೆರಿಕಾ ಮೂಲದ ಲೇಖಕ ವಾಷಿಂಗ್ಟನ್‌ ಇರ್ವಿಂಗ್‌ 1820ರ ದಶಕದಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲೇ ಅವರು ರಿಪ್‌ ವ್ಯಾನ್‌ ವಿಂಕ್ಲ್‌ ಹಾಗೂ ದಿ ಲೆಜೆಂಡ್‌ ಆಫ್‌ ಸ್ಲೀಪಿ ಹಾಲೊ ಕೃತಿಗಳನ್ನು ಬರೆದರು. ಬರ್ಮಿಂಗ್ಹ್ಯಾಮ್‌ನಲ್ಲಿ ಜನಿಸಿದ ಅಥವಾ ವಾಸಿಸುತ್ತಿದ್ದ ಮನರಂಜನಾ ಕ್ಷೇತ್ರದ ಗಣ್ಯ ವ್ಯಕ್ತಿಗಳ ಪೈಕಿ ಹಾಸ್ಯನಟರಾದ ಸಿಡ್‌ ಫೀಲ್ಡ್‌, ಟೊನಿ ಹ್ಯಾನ್ಕಾಕ್‌ ಮತ್ತು ಜಸ್ಪರ್‌ ಕ್ಯಾರಟ್‌; ನಟರಾದ ಟ್ರೆವರ್‌ ಇವ್‌, ಅಡ್ರಿಯನ್‌ ಲೆಸ್ಟರ್‌, ಜೂಲೀ ವಾಲ್ಟರ್ಸ್‌ ಮತ್ತು ಮಾರ್ಟಿನ್‌ ಷಾ.

ಲೆಡ್‌ ಝೆಪೆಲಿನ್‌, ಎಲೆಕ್ಟ್ರಿಕ್‌ ಲೈಟ್‌ ಆರ್ಕೆಸ್ಟ್ರಾ, UB40, ಡ್ಯುರಾನ್‌ ಡ್ಯುರಾನ್‌, ಸ್ಟೀಲ್‌ ಪಲ್ಸ್‌, ಒಷಿಯನ್‌ ಕಲರ್‌ ಸೀನ್‌, ಮೂಡಿ ಬ್ಲೂಸ್‌, ದಿ ಮೂವ್‌, ಜುಡಾಸ್‌ ಪ್ರಿಯೆಸ್ಟ್‌, ಬ್ಲ್ಯಾಕ್‌ ಸಬ್ಬತ್‌, ನೆಪಾಮ್‌ ಡೆತ್‌, ಮ್ಯೂಸಿಕಲ್‌ ಯುತ್‌ ಹಾಗೂ ದಿ ಸ್ಟ್ರೀಟ್ಸ್‌ ಸೇರಿದಂತೆ, ಹಲವು ಜನಪ್ರಿಯ ಸಂಗೀತ ವಾದ್ಯತಂಡಗಳು ಮತ್ತು ಸಂಗೀತಗಾರರು ಬರ್ಮಿಂಗ್ಹ್ಯಾಮ್‌ ಮೂಲದವರಾಗಿದ್ದಾರೆ.

ಸಂಗೀತಗಾರರಾದ ಜೆಫ್‌ ಲಿನ್‌, ಒಝಿ ಆಸ್ಬೊರ್ನ್‌, ಕಾರ್ಲ್‌ ಪಾಲ್ಮರ್‌, ಜಾನ್‌ ಲಾಡ್ಜ್‌, ರಾಯ್‌ ವುಡ್‌, ಜೋನ್‌ ಆರ್ಮಾಟ್ರೇಡಿಂಗ್‌, ರೂಬಿ ಟರ್ನರ್‌, ಟೊಯಾ ವಿಲ್ಕಾಕ್ಸ್‌, ಡೆನ್ನಿ ಲೇಯ್ನ್‌ ಹಾಗೂ ಸ್ಟೀವ್‌ ವಿನ್ವುಡ್‌, ಈ ನಗರದಲ್ಲೇ ಬೆಳೆದರು. ಇತರೆ ಗಣ್ಯ ನಿವಾಸಿಗಳ ಪೈಕಿ ಇಂಜಿನಿಯರ್‌ ಜೇಮ್ಸ್‌ ವಾಟ್‌; ಪ್ರಶಸ್ತಿ ಪುರಸ್ಕೃತ ರಾಜಕೀಯ ನಾಟಕಕಾರ ಡೇವಿಡ್‌ ಎಡ್ಗರ್‌ ಹಾಗೂ ಬುಕರ್‌ ಪ್ರೈಝ್‌-ವಿಜೇತ ಕಾದಂಬರಿಕಾರ ಡೇವಿಡ್‌ ಲಾಡ್ಜ್‌ ಸೇರಿದ್ದಾರೆ.

ಬರ್ಮಿಂಗ್ಹ್ಯಾಮ್‌ನ ಪ್ರಸಿದ್ಧ ನಿವಾಸಿಗಳನ್ನು ಸನ್ಮಾನಿಸಲು, ಜುಲೈ 2007ರಲ್ಲಿ ಬ್ರಾಡ್‌ ಸ್ಟ್ರೀಟ್‌ನಲ್ಲಿ ವಾಕ್‌ ಅಫ್‌ ಸ್ಟಾರ್ಸ್‌ ಎಂಬುದನ್ನು ಅನಾವರಣಗೊಳಿಸಲಾಯಿತು.[೧೪೬]

ಇವನ್ನು ನೋಡಿ : ಬರ್ಮಿಂಗ್ಹ್ಯಾಮ್‌ ನಗರ ಸಮಾಜವು ಸ್ಥಾಪಿಸಿದ ಬ್ಲೂ ಪ್ಲಾಕ್‌ಗಳು Archived 2006-10-13 ವೇಬ್ಯಾಕ್ ಮೆಷಿನ್ ನಲ್ಲಿ..

ವಿಜ್ಞಾನ ಹಾಗೂ ಆವಿಷ್ಕಾರ

[ಬದಲಾಯಿಸಿ]
ಮ್ಯಾಥ್ಯೂ ಬೌಲ್ಟನ್‌

ಅತಿ ಪ್ರಮುಖ ಆವಿಷ್ಕಾರಗಳು ಹಾಗೂ ವೈಜ್ಞಾನಿಕ ಪ್ರಮುಖ ಹಂತಗಳನ್ನು ಪಡೆಯಲಾದದ್ದು ಬರ್ಮಿಂಗ್ಹ್ಯಾಮ್‌ನಲ್ಲೇ. ಸ್ಥಳೀಯ ಆವಿಷ್ಕಾರಗಳು ಹಾಗೂ ಗಮನಾರ್ಹ ಪ್ರಥಮಗಳ ಪೈಕಿ: ಗ್ಯಾಸ್‌ ಲೈಟಿಂಗ್‌, ಮುಸುಕಿನ ಜೋಳದ ಪುಡಿ, ಬ್ರಿಲ್ಕ್ರೀಮ್‌, ಮ್ಯಾಗ್ನೆಟ್ರಾನ್‌, ಶಸ್ತ್ರಚಿಕಿತ್ಸೆಯಲ್ಲಿ ಮೊದಲ ಬಾರಿಗೆ ರೇಡಿಯೊಗ್ರಫಿಯ ಬಳಕೆ,[೧೪೭] ಲೂಯಿಸ್‌ ಪಾಲ್‌ ಮತ್ತು ಜಾನ್‌ ವ್ಯಾಟ್‌ರ ಮೊದಲ ಹತ್ತಿ ನೂಲು ಮಾಡುವ ಯಂತ್ರ ಹಾಗೂ UKಯ ಮೊಟ್ಟಮೊದಲ ಹೃದಯದಲ್ಲಿ ರಂಧ್ರ ಶಸ್ತ್ರಚಿಕಿತ್ಸೆಯನ್ನು ಬರ್ಮಿಂಗ್ಹ್ಯಾಮ್‌ ಮಕ್ಕಳ ಆಸ್ಪತ್ರೆಯಲ್ಲಿ ನಡೆಸಲಾಯಿತು.[೧೪೮]

ಸೊಹೊ ಇಂಜಿನಿಯರಿಂಗ್‌ ವರ್ಕ್ಸ್‌ನ ಮಾಲೀಕ ಮ್ಯಾಥ್ಯೂ ಬೌಲ್ಟನ್‌, ಸುಜನನಶಾಸ್ತ್ರ ಹಾಗೂ ಅಂಕಿಅಂಶ ಶಾಸ್ತ್ರದಲ್ಲಿ ಪ್ರಮುಖ ತಂತ್ರಗಳ ಹರಿಕಾರ ಸರ್‌ ಫ್ರಾನ್ಸಿಸ್‌ ಗ್ಯಾಲ್ಟನ್‌, ರಸಾಯನಶಾಸ್ತ್ರ ವಿಜ್ಞಾನಿ ಜೋಸೆಫ್‌ ಪ್ರಿಯೆಸ್ಟೆ, ಇಂಜಿನಿಯರ್ ಹಾಗೂ ರೇಲ್ವೆ ಸ್ಟೀಮ್‌ ಇಂಜಿನ್‌ನ ಆವಿಷ್ಕಾರಕ ಜೇಮ್ಸ್‌ ವ್ಯಾಟ್‌ ಸಹ ಸೇರಿದ್ದಾರೆ.

ಈ ವಿಜ್ಞಾನಿಗಳಲ್ಲಿ ಹಲವರು, ನಗರದಲ್ಲಿದ್ದ ಲುನಾರ್‌ ಸೊಸೈಟಿಯ ಸದಸ್ಯರಾಗಿದ್ದರು.[೧೪೯]

ಅವಳಿ ನಗರಗಳು

[ಬದಲಾಯಿಸಿ]

ಬರ್ಮಿಂಗ್ಹ್ಯಾಮ್‌ಗೆ ಆರು ಅವಳಿ ನಗರಗಳಿವೆ. ಬರ್ಮಿಂಗ್ಹ್ಯಾಮ್‌ ನಗರ ಪರಿಷತ್‌ ಇವುಗಳನ್ನು 'ಅಂತರರಾಷ್ಟ್ರೀಯ ಸಹಯೋಗಿ ನಗರಗಳು' ಎಂದು ಉಲ್ಲೇಖಿಸಿವೆ.[೧೫೦] ಇವುಗಳು ಯಾವುವೆಂದರೆ:

ಬರ್ಮಿಂಗ್ಹ್ಯಾಮ್‌ ಚೀನಾಗ್ವಾಂಗ್ಝೌ ಹಾಗೂ 'ಅಜಾದ್‌ ಕಾಶ್ಮೀರ್'‌ನ ಮಿರ್‌ಪುರ್‌ ನಗರಗಳೊಂದಿಗೆ ಮಿತ್ರತ್ವ ಒಪ್ಪಂದ ಮಾಡಿಕೊಂಡಿದೆ. ಬರ್ಮಿಂಗ್ಹ್ಯಾಮ್‌ ನಿವಾಸಿಗಳ ಪೈಕಿ 90,000 ಜನರು ಮಿರ್‌ಪುರ್‌ ಮೂಲದವರಾಗಿದ್ದಾರೆ.[೧೫೫] ಇಂಗ್ಲೆಂಡ್‌ನ ಈ ನಗರದ ಹೆಸರಿನಂತೆ USAನ ಅಲಬಾಮಾ ರಾಜ್ಯದ ಬರ್ಮಿಂಗ್ಹಾಮ್‌ ನಗರವಿದೆ. ಇದರೊಂದಿಗೆ ಕೈಗಾರಿಕಾ ಬಾಂಧ್ಯವ್ಯ ಹೊಂದಿದೆ.[೧೫೬]

ಉಲ್ಲೇಖಗಳು

[ಬದಲಾಯಿಸಿ]

ಗ್ರಂಥಸೂಚಿ

[ಬದಲಾಯಿಸಿ]
  • An History of Birmingham (1783) by William Hutton at Project Gutenberg
  • Gordon E. Cherry (1994). Birmingham A Study in Geography, History and Planning. ISBN 0-471-94900-0.
  • Canon Doctor Terry Slater (1981). A History of Warwickshire. ISBN 0-85033-416-0.
  • Johnathan Berg (1994). Positively Birmingham. ISBN 0-9523179-0-7.
  • A. J. Gerard (1996). Managing a Conurbation: Birmingham and its Region. ISBN 1-85858-083-8. {{cite book}}: Unknown parameter |coauthors= ignored (|author= suggested) (help)

ಟಿಪ್ಪಣಿಗಳು

[ಬದಲಾಯಿಸಿ]
  1. "Resident Population Estimates by Ethnic Group (Percentages)". Neighbourhood Statistics. 2006. Archived from the original on 19 ಸೆಪ್ಟೆಂಬರ್ 2011. Retrieved 23 October 2008. {{cite web}}: Unknown parameter |month= ignored (help)
  2. "Local Authority Profile – Birmingham". Nomis – Official Labour Market Statistics. Office for National Statistics. 2009. Archived from the original on 28 ಸೆಪ್ಟೆಂಬರ್ 2011. Retrieved 9 January 2010.
  3. ೩.೦ ೩.೧ "Usual resident population: Census 2001, Key Statistics for urban areas". Office for National Statistics. Retrieved 9 June 2007.
  4. "British urban pattern: population data" (pdf). ESPON project 1.4.3 Study on Urban Functions. European Union – European Spatial Planning Observation Network. 2007. Retrieved 14 March 2009. {{cite web}}: Unknown parameter |month= ignored (help)
  5. "Decline of the city of a thousand trades". Birmingham Mail. 17 April 2006. Retrieved 2 August 2006.
  6. ೬.೦ ೬.೧ Anna Blackaby (6 October 2009). "Birmingham, biggest mover in European league table, second to London for UK business". Archived from the original on 27 ಆಗಸ್ಟ್ 2011. Retrieved 22 ಜುಲೈ 2010.
  7. "National Statistics Online – International Visits". ONS. Retrieved 19 July 2009.
  8. UKmediacentre.pwc.com
  9. "Quality of Living worldwide city rankings 2010 – Mercer survey". Mercer. 26 May 2010. Retrieved 27 May 2010.
  10. "Big City Plan Website". Birmingham City Council. Archived from the original on 31 ಜನವರಿ 2010. Retrieved 27 January 2010.
  11. "Brummagem". Worldwidewords.com. 13 December 2003. Retrieved 7 June 2008.
  12. William Hutton (1783). An History of Birmingham.
  13. ೧೩.೦ ೧೩.೧ "Evidence of Stone Age man found in Digbeth". Birmingham Post. Archived from the original on 8 ಅಕ್ಟೋಬರ್ 2009. Retrieved 28 July 2009.
  14. "ಬ್ಯಾಸೆಟ್‌, ಆಂಗ್ಲೊ-ಸ್ಯಾಕ್ಸಾನ್‌ ಬರ್ಮಿಂಗ್ಹ್ಯಾಮ್‌, 2000" (PDF). Archived from the original (PDF) on 2009-03-16. Retrieved 2010-07-22.
  15. ೧೫.೦ ೧೫.೧ ೧೫.೨ ೧೫.೩ "Birmingham or Brummagem?". Birmingham City Council. Archived from the original on 29 ಜೂನ್ 2011. Retrieved 13 january 2010. {{cite web}}: Check date values in: |accessdate= (help)
  16. "Historic Birmingham". Birminghamuk.com. Retrieved 30 May 2009.
  17. "IONA – Birmingham". Project-iona.co.uk. Archived from the original on October 20, 2007. Retrieved 30 May 2009. {{cite web}}: Unknown parameter |deadurl= ignored (help)
  18. Hugh Miller (1851). First Impressions of England and Its People. Gould and Lincoln.
  19. "ಬರ್ಮಿಂಗ್ಹ್ಯಾಮ್‌ (ಇಂಗ್ಲೆಂಡ್‌, ಯುನೈಟೆಡ್‌ ಕಿಂಗ್ಡಮ್)". ಬ್ರಿಟಾನಿಕಾ ವಿಶ್ವಕೋಶ
  20. "History of Birmingham 2". BirminghamUK. Retrieved 7 June 2008.
  21. Hilton, Boyd (2006). A Mad, Bad, and Dangerous People?: England, 1783–1846. Oxford University Press. pp. 426–427. ISBN 0-19-822830-9. Retrieved 7 January 2009.
  22. Flick, Carlos T. (1971). "Thomas Attwood, Francis Place, and the Agitation for British Parliamentary Reform". The Huntington Library Quarterly. 34 (4). University of California Press: 359. Retrieved 10 January 2009. {{cite journal}}: Unknown parameter |month= ignored (help)
  23. Briggs, Asa (1948). "Thomas Attwood and the Economic Background of the Birmingham Political Union". Cambridge Historical Journal. 9 (2). Cambridge University Press: 190. Retrieved 6 January 2009. {{cite journal}}: Cite has empty unknown parameter: |month= (help)
  24. ೨೪.೦ ೨೪.೧ "Historic Population Of Birmingham". Birmingham City Council. Archived from the original on 29 ಜೂನ್ 2011. Retrieved 13 January 2010.
  25. "History of Mayoralty". Birmingham.gov.uk. Archived from the original on June 9, 2008. Retrieved 7 June 2008. {{cite web}}: Unknown parameter |deadurl= ignored (help)
  26. "Inside the university". University of Birmingham. Archived from the original on 2 January 2008. Retrieved 7 June 2008.
  27. "1960s Architecture in Birmingham" (PDF). Birmingham City Council Planning Department. Retrieved 13 January 2010.
  28. "Major Developments". Birmingham City Council. Archived from the original on 10 ಅಕ್ಟೋಬರ್ 2008. Retrieved 7 June 2008.
  29. Bayley, Stephen (30 June 2008). "Article reviewing the Architectural regeneration of Birmingham City Centre". London: Guardian. Retrieved 25 January 2010.
  30. "Birmingham's Post War Black Immigrants". Birmingham City Council. Archived from the original on 9 ಜೂನ್ 2008. Retrieved 22 July 2009.{{cite web}}: CS1 maint: bot: original URL status unknown (link)
  31. "Corporate Marketing and Promotions Team: Sponsorship". Birmingham City Council. Archived from the original on 10 ಮಾರ್ಚ್ 2010. Retrieved 12 September 2009.
  32. "Wards". Birmingham City Council. Retrieved 13 January 2010.
  33. "Contact Us". Government Office for the West Midlands. Archived from the original on 1 ಮಾರ್ಚ್ 2009. Retrieved 3 February 2009.
  34. ೩೪.೦ ೩೪.೧ "Contact us". Advantage West Midlands. Archived from the original on 25 ಜನವರಿ 2009. Retrieved 3 February 2009.
  35. "Contact Us". West Midlands Regional Assembly. Archived from the original on 26 ಡಿಸೆಂಬರ್ 2008. Retrieved 3 February 2009.
  36. "Members of Parliament". Birmingham City Council. Retrieved 13 January 2010.
  37. "Lickey Hills Country Park". Birmingham City Council. Retrieved 13 January 2010.
  38. Hooke, Della (2005). "Mercia: Landscape and Environment". In Brown, Michelle P.; Farr, Carol Ann (ed.). Mercia: an Anglo-Saxon kingdom in Europe. Continuum. p. 167. ISBN 0826477658. {{cite book}}: |access-date= requires |url= (help); Unknown parameter |chapterurl= ignored (help)CS1 maint: multiple names: editors list (link)
  39. ೩೯.೦ ೩೯.೧ Susan Ashby (10 December 2007). "The Geography of Birmingham". JPServicez Search Articles. Archived from the original on 12 February 2008. Retrieved 24 December 2007.
  40. Victor Skipp (1987). The History of Greater Birmingham – down to 1830. Yardley, Birmingham: V. H. T. Skipp. p. 15. ISBN 0-9506998-0-2.
  41. "The Growth of the City, A History of the County of Warwick: Volume 7: The City of Birmingham (1964), pp. 4–25". British History Online. Retrieved 22 July 2009.
  42. "Solid Geology – 1:250,000 scale (Source: British Geological Survey, NERC)". Department for Environment Food and Rural Affairs. Archived from the original (gif) on 1 ನವೆಂಬರ್ 2002. Retrieved 7 June 2008.
  43. "Birmingham Tornado 2005". Birmingham City Council. Retrieved 13 January 2010.
  44. "Inside Out: Living with global warming". BBC. 27 March 2007. Retrieved 7 June 2008.
  45. ೪೫.೦ ೪೫.೧ ೪೫.೨ Dennis Wheeler (1997). Regional Climates of the British Isles. Routledge. ISBN 0-415-13930-9. {{cite book}}: Unknown parameter |coauthors= ignored (|author= suggested) (help)
  46. "Weather Information for Birmingham". UN World Meteorological Organization. Archived from the original on 2011-11-16. Retrieved , 2007. {{cite web}}: Check date values in: |accessdate= (help)
  47. "Regional Population Estimates by Ethnic Group". ONS. Archived from the original on 24 ಡಿಸೆಂಬರ್ 2008. Retrieved 22 July 2009.
  48. Graeme Paton (1 October 2007). "One fifth of children from ethnic minorities". London: The Daily Telegraph. Archived from the original on 17 ಏಪ್ರಿಲ್ 2008. Retrieved 28 March 2008.
  49. "2001 Population Census: Gender Profiles". Birmingham City Council. Archived from the original (PDF) on June 9, 2008. Retrieved 7 June 2008. {{cite web}}: Unknown parameter |deadurl= ignored (help)
  50. ೫೦.೦ ೫೦.೧ "2001 Census of Population: Key Findings". Birmingham City Council. Archived from the original on June 9, 2008. Retrieved 7 June 2008. {{cite web}}: Unknown parameter |deadurl= ignored (help)
  51. "Urban Audit – City Profiles: Birmingham". Urban Audit. Archived from the original on 19 ಆಗಸ್ಟ್ 2013. Retrieved 5 October 2008.
  52. "Towards a Common Standard" (PDF). Greater London Authority. p. 28. Archived (PDF) from the original on 4 ಜೂನ್ 2011. Retrieved 5 October 2008.
  53. "Back to back in Birmingham". Birmingham City Council. Archived from the original (PDF) on 30 ಸೆಪ್ಟೆಂಬರ್ 2007. Retrieved 7 June 2008.
  54. "The Coin Room". Barber Institute. Archived from the original on 17 ಏಪ್ರಿಲ್ 2008. Retrieved 7 June 2008.
  55. "Parks and Nature Conservation". Birmingham City Council. Retrieved 7 June 2008.
  56. "Birmingham Central Mosque". BBC Birmingham Faith. Retrieved 7 June 2008.
  57. icBirmingham‌ ವಾರ್ತಾ ವಿಷಯ: ನ್ಯೂ ಸಿಟಿ ಮಾಸ್ಕ್‌ ಅ ಸಿಂಬಲ್‌ ಆಫ್‌ ಪೀಸ್‌
  58. "NUTS3 Gross Value Added (GVA) (1995–2003) Tables". Office for National Statistics. Archived from the original (xls) on 3 March 2005. Retrieved 7 June 2008.
    Data on sheet NUTS34 ಹಾಳೆಯ ಮೇಲಿನ ದತ್ತಾಂಶ, 339ನೆಯ ಸಾಲು
  59. "Lloyds Bank". Lloyd's TSB. Retrieved 7 June 2008.
  60. "The HSBC Group in Europe" (PDF). HSBC. Archived from the original (PDF) on June 26, 2008. Retrieved 7 June 2008. {{cite web}}: Unknown parameter |deadurl= ignored (help)
  61. "Employment in Birmingham and the West Midlands 2007". Birmingham City Council. Archived from the original on 30 ಆಗಸ್ಟ್ 2011. Retrieved 13 September 2009.
  62. "NEC Group – Conference City". Locate Birmingham. Archived from the original on 1 ಏಪ್ರಿಲ್ 2008. Retrieved 7 June 2008.
  63. "Comparison Expenditure CACI Retail Footprint 2005". CACI. Archived from the original on 20 ಅಕ್ಟೋಬರ್ 2007. Retrieved 22 July 2009.
  64. ೬೪.೦ ೬೪.೧ "UK's busiest shopping centre". icBirmingham. 3 September 2004. Retrieved 3 February 2008.
  65. "The 10 largest UK Stores, 1998". Corporate Intelligence on Retailing – Other – Tesco Overtakes Sainsburys Overall. propertymall.com. 5 May 1998. Retrieved 3 February 2008.
  66. Seenan, Gerard (3 March 2004). "Birmingham soars up the shopping list | UK news". London: The Guardian. Retrieved 30 May 2009.
  67. "NUTS3 Gross Value Added (GVA) (1995–2003) Tables". Office for National Statistics. Archived from the original (xls) on 3 March 2005. Retrieved 7 June 2008.
    NUTS33 ಹಾಳೆಯಲ್ಲಿನ ಮಾಹಿತಿ, 102ನೆಯ ಸಾಲು
  68. "Local area labour markets: statistical indicators – Parliamentary Constituency tables (Unemployment Rate January 2005 to December 2005)". Office for National Statistics. Archived from the original (xls) on 8 January 2007. Retrieved 7 June 2008.
  69. "Canals in Birmingham". Birmingham City Council. Archived from the original on June 9, 2008. Retrieved 7 June 2008. {{cite web}}: Unknown parameter |deadurl= ignored (help)
  70. "The amazing number 11 bus". BBC Birmingham. 27 June 2005. Retrieved 7 June 2008.
  71. Barbara Elsom (21 June 2005). "Route 11 Bus Showcase". Birmingham City Council. Archived from the original on 8 ಡಿಸೆಂಬರ್ 2008. Retrieved 7 June 2008. Since 2001 231 bus stops out of 272 have been upgraded to Showcase standards...
  72. "Bus Services". Centro. Archived from the original on May 22, 2008. Retrieved 7 June 2008. {{cite web}}: Unknown parameter |deadurl= ignored (help)
  73. "Travelmetro.co.uk". Centro. Retrieved 7 June 2008.
  74. "The Midland Metro (Birmingham City Centre Extension, etc.) Order 2005". Office of Public Sector Information. 2005. Retrieved 7 June 2008.
  75. "Birmingham City Council Primary and Secondary". Birmingham Grid for Learning (BGfL). Archived from the original on 28 September 2007. Retrieved 7 June 2008.
  76. "Birmingham City Council Special Needs Schools". Birmingham Grid for Learning (BGfL). Archived from the original on 28 September 2007. Retrieved 7 June 2008.
  77. "Facts about Birmingham Library Service". Birmingham City Council. Archived from the original on June 9, 2008. Retrieved 7 June 2008. {{cite web}}: Unknown parameter |deadurl= ignored (help)
  78. "Birmingham Adult Education Service". Birmingham City Council. Archived from the original on 10 ಅಕ್ಟೋಬರ್ 2008. Retrieved 7 June 2008.
  79. "Birmingham Mobile Library Service". Birmingham City Council. Archived from the original on 24 ಮಾರ್ಚ್ 2010. Retrieved 7 June 2008.
  80. "Grammar Schools of King Edward the Sixth". The Grammar Schools of King Edward the Sixth in Birmingham. Archived from the original on 13 February 2008. Retrieved 7 June 2008.
  81. Naqvi, Shahid (7 September 2007). "City college wins right to grant degrees". Birmingham Post. Retrieved 7 June 2008.
  82. "A New Year and a new name for the College". University College Birmingham. Archived from the original on 10 ಜನವರಿ 2008. Retrieved 7 January 2008.
  83. "Sutton Coldfield College". Archived from the original on 22 ಮಾರ್ಚ್ 2009. Retrieved 7 June 2008.
  84. "Joseph Chamberlain College". Archived from the original on 5 February 2008. Retrieved 7 June 2008.
  85. "History of the Football League". The Football League. Retrieved 30 December 2009.
  86. "Lawn Tennis and Major T. H. Gem". Birmingham Civic Society. Archived from the original on 18 ಆಗಸ್ಟ್ 2011. Retrieved 7 June 2008.
  87. Tyzack, Anna (22 June 2005). "The True Home of Tennis". Country Life. IPC Media. Retrieved 17 January 2009.
  88. Davis, Alex E (1988). First in the field: the history of the world's first cricket league: the Birmingham and District Cricket League, formed 1888. Brewin Books. ISBN 0947731342.
  89. "ICC Women's World Cup Qualifier schedule". International Cricket Council. Archived from the original on 2 ಏಪ್ರಿಲ್ 2008. Retrieved 14 September 2009.
  90. "Birmingham – We love our sport". Marketing Birmingham. Archived from the original on 8 ಜೂನ್ 2008. Retrieved 7 June 2008.
  91. ದಿ ಸೆಕೆಂಡ್‌ ಸಿಟಿ ಡರ್ಬಿ, footballderbies.com, 30 ಡಿಸೆಂಬರ್‌ 2009ರಂದು ವೀಕ್ಷಿಸಲಾಯಿತು.
  92. "Alumni – Brian Lara". Warwickshire County Cricket Club. Archived from the original on 4 December 2007. Retrieved 7 June 2008.
  93. "The NIA". Archived from the original on 2 ಡಿಸೆಂಬರ್ 2008. Retrieved 7 June 2008.
  94. Steve Beauchampe (2006). Played in Birmingham. Malavan Media. ISBN 0-9547445-1-9.
    "Birmingham's Sporting Heritage". Birmingham City Council. Archived from the original on 30 ಜೂನ್ 2006. Retrieved 7 June 2008.
  95. Dale, Paul (3 March 2009). "Birmingham Council set to give green light to Digbeth market scheme". Birmingham Post. Archived from the original on 5 ಜನವರಿ 2012. Retrieved 29 October 2009.
  96. Mark, Shepherd (3 July 2009). "The Wholesale shebang: traders at Birmingham's Wholesale Market may have a new home at Prupim's Hub by 2012. But that will happen to the existing site?". Property Week. United Business Media. Retrieved 30 October 2009.
  97. "Michelin stars 2009". Michelin Group. Archived from the original on 12 ಫೆಬ್ರವರಿ 2009. Retrieved 18 January 2009.
  98. "Birmingham Breweries". Midlands Pubs.co.uk. Archived from the original on 17 ಮೇ 2008. Retrieved 7 June 2008.
  99. "BID Broad Street". Archived from the original on 30 September 2007. Retrieved 7 June 2008.
  100. "Taste of the Orient sweet for Wing Yip". The Birmingham Post Midland Rich List 2006. 6 January 2006. Archived from the original on 9 ಮಾರ್ಚ್ 2008. Retrieved 7 June 2008.
  101. "The Balti Experience". Birmingham City Council. Archived from the original on 29 ಸೆಪ್ಟೆಂಬರ್ 2011. Retrieved 19 December 2006.
  102. "Birmingham Local Events". BBC. Retrieved 7 June 2008.
  103. "Birmingham International Jazz Festival venues". Birmingham Jazz Festival. Archived from the original on 21 ಆಗಸ್ಟ್ 2008. Retrieved 7 June 2008.
  104. "Thomas Trotter – Organ". Patrick Garvey Management. Retrieved 7 June 2008.
  105. "Birmingham Town Hall: The Organ". Birmingham City Council. Archived from the original on June 11, 2008. Retrieved 7 June 2008. {{cite web}}: Unknown parameter |deadurl= ignored (help)
  106. "Birmingham Royal Ballet". Birmingham City Council. Archived from the original on June 5, 2008. Retrieved 7 June 2008. {{cite web}}: Unknown parameter |deadurl= ignored (help)
  107. "Elmhurst School for Dance". MADE. Archived from the original on 21 ಜುಲೈ 2009. Retrieved 3 July 2009.
  108. "Theatres in Birmingham". Birmingham City Council. Archived from the original on 24 ಮಾರ್ಚ್ 2010. Retrieved 7 June 2008.
  109. "About the Birmingham Poet Laureate". Birmingham City Council. Archived from the original on June 9, 2008. Retrieved 7 June 2008. {{cite web}}: Unknown parameter |deadurl= ignored (help)
  110. "Barber Institute is 'Gallery of the Year'". Barber Institute of Fine Arts. 8 December 2003. Archived from the original on 8 ಸೆಪ್ಟೆಂಬರ್ 2005. Retrieved 7 June 2008.
  111. "John Baskerville of Birmingham". Birmingham City Council. Archived from the original on October 12, 2007. Retrieved 29 September 2007. {{cite web}}: Unknown parameter |deadurl= ignored (help)
  112. "Ruskin pottery centenary exhibition" (PDF). The Geffrye Museum, London. Retrieved 29 September 2007.
  113. "History of the Whistle". District Referee Coordinator – Durham. Archived from the original on 12 ಅಕ್ಟೋಬರ್ 2007. Retrieved 29 September 2007.
  114. Jonathan Glancey (18 May 2002). "The mogul's monuments – How Oscar Deutsch's Odeon cinemas taught Britain to love modern architecture". London: Guardian. Retrieved 29 September 2007.
  115. "Alec Issigonis, Automotive Designer (1906–1988)". Design Museum, London. Archived from the original on 13 ಸೆಪ್ಟೆಂಬರ್ 2007. Retrieved 29 September 2007.
  116. "Will a fest by any other name smell as sweet?". Birmingham Mail. 1 December 2006. Archived from the original on 9 ಮಾರ್ಚ್ 2008. Retrieved 7 June 2008.
  117. "History of St. Patrick's Day". AnySubject. Archived from the original on 27 ಮಾರ್ಚ್ 2008. Retrieved 7 June 2008.
  118. "The Electric Cinema website". Archived from the original on 16 ಜೂನ್ 2008. Retrieved 7 June 2008.
  119. Thom Gorst (1995). The Buildings Around Us. Taylor & Francis. p. 93. ISBN 0-419-19330-8.
  120. "Birmingham IMAX". Thinktank. Archived from the original on 28 ನವೆಂಬರ್ 2007. Retrieved 28 November 2007.
  121. Liam Kennedy (2004). Remaking Birmingham: The Visual Culture of Urban Regeneration. Routledge. p. 115. ISBN 0-415-28838-X.
  122. "About Us – Information about BBC English Regions". BBC. Retrieved 7 June 2008.
  123. "Lights, campus, action for BBC Birmingham's Television Drama Village". BBC Press Release. 9 May 2005. Retrieved 7 June 2008.
  124. Lee Carey (1 February 2003). "Ever Decreasing Circles". Studio One. Archived from the original on 6 ಮೇ 2008. Retrieved 10 May 2008.
  125. "Radio stations in the West Midlands". Radio Now. Archived from the original on 10 ಏಪ್ರಿಲ್ 2009. Retrieved 22 July 2009.
  126. "The Archers airs 15,000th episode". BBC News. 7 November 2006. Retrieved 28 November 2007.
  127. "Birmingham's New Leisure Complex". MEM Online News. Archived from the original on December 12, 2007. Retrieved 7 June 2008. {{cite web}}: Unknown parameter |deadurl= ignored (help)
  128. "Nightlife in the City Centre". Birmingham City Council. Archived from the original on June 10, 2008. Retrieved 7 June 2008. {{cite web}}: Unknown parameter |deadurl= ignored (help)
  129. "Birmingham will not have Olympic swimming pool by 2012". Birmingham Mail. 8 October 2009. Archived from the original on 16 ಸೆಪ್ಟೆಂಬರ್ 2011. Retrieved 8 January 2010.
  130. "New £58 million pool will create parking chaos say Ladywood residents". Birmingham Mail. 19 December 2009. Retrieved 8 January 2010.
  131. "Schedule of Nationally Listed Buildings of Historic Interest in Birmingham". Birmingham City Council Planning Department. Archived from the original (PDF) on 30 ಸೆಪ್ಟೆಂಬರ್ 2007. Retrieved 7 June 2008.
  132. "The Lad In The Lane, Erdington". pub-explorer.com. Archived from the original on 22 December 2007.
  133. "History of Kings Norton". Birmingham City Council. Archived from the original on May 21, 2008. Retrieved 7 June 2008. {{cite web}}: Unknown parameter |deadurl= ignored (help)
  134. Anne Baltz Rodrick (2004). Self-Help and Civic Culture: Citizenship in Victorian Birmingham. Ashgate Publishing. ISBN 0-7546-3307-1.
  135. "Birmingham's hidden jewel". BBC Birmingham. Retrieved 7 June 2008.
  136. Phil Jones. "Tower Block Modernism vs. Urban Morphology: An analysis of Lee Bank, Birmingham" (PDF). Archived from the original (PDF) on 27 February 2008. Retrieved 7 June 2008.
  137. "Aerial View of New Street Station 1963". Birmingham City Council. Archived from the original on May 11, 2008. Retrieved 7 June 2008. {{cite web}}: Unknown parameter |deadurl= ignored (help)
  138. "Castle Vale". Birmingham City Council. Archived from the original on October 12, 2007. Retrieved 7 June 2008. {{cite web}}: Unknown parameter |deadurl= ignored (help)
  139. "Awards". Future Systems. Archived from the original on 31 ಮೇ 2008. Retrieved 7 June 2008.
  140. "Town Hall, Birmingham". Birmingham City Council. Archived from the original on 17 ಡಿಸೆಂಬರ್ 2009. Retrieved 21 June 2010.
  141. "Birmingham High Places document". Birmingham City Council. Archived from the original on June 9, 2008. Retrieved 7 June 2008. {{cite web}}: Unknown parameter |deadurl= ignored (help)
  142. "Crime in Birmingham". United Streets of Birmingham. Archived from the original on 8 January 2008. Retrieved 5 August 2009.
  143. ೧೪೩.೦ ೧೪೩.೧ ೧೪೩.೨ "Birmingham's Crime & Disorder Audit – Summary for Consultation 2005" (PDF). Birmingham Crime Safety Partnership. Archived from the original (PDF) on 27 ನವೆಂಬರ್ 2007. Retrieved 18 November 2007.
  144. "Interactive maps of recorded crime data at local authority level". Home Office. Archived from the original on 17 ಸೆಪ್ಟೆಂಬರ್ 2008. Retrieved 6 September 2009.
  145. "Findings form the British Crime Survey and police recorded crime" (PDF). Home Office. Archived from the original (PDF) on 17 ಡಿಸೆಂಬರ್ 2009. Retrieved 6 September 2009.
  146. "Ozzy Osbourne to be the first star on the Birmingham Walk of Stars" (PDF). Broad Street Business Improvement District. 17 May 2007. Retrieved 7 June 2008.
  147. "Major John Hall-Edwards". Archived from the original on 2012-09-28. Retrieved 2010-07-22.
  148. "Facts about Birmingham". BirminghamNet. {{cite web}}: |access-date= requires |url= (help); Missing or empty |url= (help)
  149. "Lunar Society". BirminghamUK. Retrieved 7 June 2008.
  150. "International Links". Birmingham City Council. Archived from the original on 17 ಜುಲೈ 2015. Retrieved 31 May 2010.
  151. "Frankfurt -Partner Cities". © 2008 Stadt Frankfurt am Main. Archived from the original on November 7, 2007. Retrieved 17 July 2009. {{cite web}}: External link in |publisher= (help); Unknown parameter |deadurl= ignored (help)
  152. "Brno – Partnerská města" (in Czech). © 2006–2009 City of Brno. Retrieved 17 July 2009. {{cite web}}: External link in |publisher= (help)CS1 maint: unrecognized language (link)
  153. "Partner Cities of Lyon and Greater Lyon". © 2008 Mairie de Lyon. Archived from the original on 19 ಜುಲೈ 2009. Retrieved 17 July 2009.
  154. "Milano – Città Gemellate". © 2008 Municipality of Milan (Comune di Milano). Archived from the original on 10 ಏಪ್ರಿಲ್ 2014. Retrieved 17 July 2009.
  155. "Partner Cities". Birmingham City Council. Archived from the original on 18 ಸೆಪ್ಟೆಂಬರ್ 2010. Retrieved 31 May 2010.
  156. "Birmingham, Alabama". BirminghamNet. Retrieved 7 June 2008.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:LargestUKCities 52°29′1″N 1°54′23″W / 52.48361°N 1.90639°W / 52.48361; -1.90639Invalid arguments have been passed to the {{#coordinates:}} function