ಶಿಶುವಿಹಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

''

ಆಫ್ಘಾನಿಸ್ಥಾನದ ಒಂದು ಶಿಶುವಿಹಾರ ತರಗತಿ

About this sound Kindergarten  (ಜರ್ಮನ್, ಅಕ್ಷರಶಃ "ಮಕ್ಕಳ ತೋಟ" ಎಂಬ ಅರ್ಥವನ್ನು ನೀಡುತ್ತದೆ.)ಇದು ಚಿಕ್ಕ ಮಕ್ಕಳಿಗಾಗಿ ರೂಪಿಸಿರುವ ಶಿಕ್ಷಣದ ಒಂದು ಮಾದರಿ. ಇದು ಮನೆಯ ಕಲಿಕೆಯಿಂದ ಬದಲಾವಣೆಯನ್ನು ಹೊಂದಿ ಮಕ್ಕಳಿಗೆ ಇಲ್ಲಿ ವಿಧ್ಯುಕ್ತವಾದ ಕಲಿಕೆಯ ಆರಂಭವಾಗುತ್ತದೆ. ಮತ್ತೊಂದು ಅರ್ಥನಿರೂಪಣೆ ಎಂದರೆ, ಇದು ಆರಂಭಿಕ ಬಾಲ್ಯ ಶಿಕ್ಷಣ ಹಾಗು ಶಾಲಾಪೂರ್ವ ಶಿಕ್ಷಣವನ್ನು ಹೋಲುತ್ತದೆ, ಇದು ಆರು ಅಥವಾ ಏಳು ವರ್ಷದ ಪೂರ್ವ ಹಾಗು ಓದಲು ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರಬರುತ್ತಿರುವ ಪುಟಾಣಿಗಳಿಗೆ ನೀಡುವ ಶಿಕ್ಷಣವಾಗಿದೆ. ಮಕ್ಕಳಿಗೆ ಮೂಲಭೂತ ಸಾಮರ್ಥ್ಯ ಹಾಗು ಜ್ಞಾನವನ್ನು ಸೃಜನಾತ್ಮಕ ಆಟ ಹಾಗು ಸಾಮಾಜಿಕವಾಗಿ ಪರಸ್ಪರ ಮಾತುಕತೆ ಹಾಗು ಕೆಲವೊಂದು ಬಾರಿ ವಿಧ್ಯುಕ್ತ ಕಲಿಕೆಗಳ ಮೂಲಕ ಅಭಿವೃದ್ಧಿಪಡಿಸಿಕೊಳ್ಳಲು ಹೇಳಿಕೊಡಲಾಗುತ್ತದೆ.

ಹಲವು ರಾಷ್ಟ್ರಗಳಲ್ಲಿ ಶಿಶುವಿಹಾರವು ಆರಂಭಿಕ ಬಾಲ್ಯ ಶಿಕ್ಷಣ ಶಾಲಾಪೂರ್ವ ವ್ಯವಸ್ಥೆಯ ಒಂದು ಭಾಗವಾಗಿದೆ. ಸ್ಥಳೀಯ ರೂಢಿಯನ್ನು ಅವಲಂಬಿಸಿ ಎರಡರಿಂದ ಏಳು ವರ್ಷಗಳ ನಡುವಿನ ಯಾವುದೇ ಅವಧಿಯಲ್ಲಿ ಮಕ್ಕಳು ಶಿಶುವಿಹಾರಕ್ಕೆ ಹೋಗುತ್ತಾರೆ.

ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಕೆನಡಾದ ಆಂಗ್ಲೋಫೋನ, ಹಾಗು ಆಸ್ಟ್ರೇಲಿಯಾದ ಕೆಲವು ಭಾಗಗಳು, ನ್ಯೂ ಸೌತ್ ವೇಲ್ಸ್, ತಾಸ್ಮೇನಿಯ ಹಾಗು ಆಸ್ಟ್ರೇಲಿಯಾದ ರಾಜಧಾನಿ ಪ್ರದೇಶದಲ್ಲಿ ಶಿಶುವಿಹಾರ ಎಂಬ ಪದವು ಮೊದಲ ಎರಡು ವರ್ಷದ ಶಿಕ್ಷಣವನ್ನು ಅಥವಾ ಪ್ರಾಥಮಿಕ ಶಾಲೆಯನ್ನು ವಿವರಿಸಲು ಮಾತ್ರ ಸಾಮಾನ್ಯವಾಗಿ ಬಳಸಲಾಗುತ್ತದೆ, (ಕೆನಡಾದಲ್ಲಿ ಮೊದಲ ಎರಡು ವರ್ಷಗಳು). ಮೇಲೆ ಹೇಳಲಾಗಿರುವ ಕೆಲವು ರಾಷ್ಟ್ರಗಳಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಶಿಶುವಿಹಾರದ ತರಗತಿಗೆ ಕಡ್ಡಾಯವಾಗಿ ಕಳುಹಿಸಬೇಕು (ಸಾಮಾನ್ಯವಾಗಿ ಐದನೇ ವರ್ಷ). ಅಮೆರಿಕ ಸಂಯುಕ್ತ ಸಂಸ್ಥಾನದ ಹಲವು ರಾಜ್ಯಗಳು, ಐದರಿಂದ ಆರು ವರ್ಷಗಳ ನಡುವಿನ ಮಕ್ಕಳಿಗೆ ಶಿಶುವಿಹಾರ ತರಗತಿಯನ್ನು ಉಚಿತವಾಗಿ ನಡೆಸುತ್ತವೆ, ಅದಲ್ಲದೇ ಇದನ್ನು ಕಡ್ಡಾಯಗೊಳಿಸಿಲ್ಲ, ಆದರೆ ಇತರ ರಾಜ್ಯಗಳಲ್ಲಿ ಶಿಶುವಿಹಾರಕ್ಕೆ ದಾಖಲಿಸಿಕೊಳ್ಳಲು ಮಕ್ಕಳಿಗೆ ಐದು ವರ್ಷ ತುಂಬಿರಬೇಕು. ಶಾಲಾಪೂರ್ವ ಅಥವಾ ಬಹಳ ಕಡಿಮೆಯಾಗಿ ಬಳಕೆಯಾಗುವ "Pre-K"(ಹಿಂದಿನ ನರ್ಸರಿ ಶಾಲೆ) ಎಂಬ ಪದಗಳು U.S.ನಲ್ಲಿ ಬಾಲ್ಯದ ಆರಂಭಿಕ ಶಿಕ್ಷಣಕ್ಕೆ ಸೂಚಿತವಾಗುತ್ತಿತ್ತು.

ಬ್ರಿಟಿಶ್ ಇಂಗ್ಲಿಷ್ ನಲ್ಲಿ, ನರ್ಸರಿ ಅಥವಾ ಪ್ಲೇಗ್ರೂಪ್ (ಶಾಲಾಪೂರ್ವದ ಆಟದ ತಂಡ) ಎಂಬ ಪದವನ್ನು ಶಾಲಾಪೂರ್ವದ ಶಿಕ್ಷಣಕ್ಕೆ ಸಾಮಾನ್ಯವಾಗಿ ಬಳಕೆಯಾಗುತ್ತಿತ್ತು. ಅದಲ್ಲದೇ ಶಿಶುವಿಹಾರ ಎಂಬ ಪದವನ್ನು, ಶಿಕ್ಷಣದ ವಿಶೇಷ ಮಾದರಿಗಳಿಗೆ, ಉದಾಹರಣೆಗೆ ಸ್ಟೆಯಿನರ್-ವಾಲ್ಡಾರ್ಫ್ ಶಿಕ್ಷಣವನ್ನು (ರುಡೊಲ್ಫ್ ಸ್ಟೆಯಿನರ್ ಪ್ರತಿಪಾದಿಸಿದ ಶೈಕ್ಷಣಿಕ ಸಿದ್ಧಾಂತ) ಹೊರತುಪಡಿಸಿ ವಿರಳವಾಗಿ ಬಳಸಲಾಗುತ್ತಿತ್ತು.

ಉದ್ದೇಶ[ಮೂಲವನ್ನು ಸಂಪಾದಿಸು]

ಶಿಶುವಿಹಾರದಲ್ಲಿ ಮಕ್ಕಳು ಪರಸ್ಪರ ಬೆರೆಯಲು, ಆಟ ಆಡಲು ಹಾಗು ಇತರರ ಜೊತೆಗೆ ಸರಿಯಾದ ರೀತಿ ವ್ಯವಹರಿಸಲು ಕಲಿಯುತ್ತಾರೆ. ಶಿಕ್ಷಕರು ಈ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸಿ ಭಾಷೆಯ ಕಲಿಕೆ ಹಾಗು ಓದಿನ ಉಚ್ಚಾರಣೆ, ಗಣಿತ, ಹಾಗು ವಿಜ್ಞಾನ, ಜೊತೆಗೆ ಸಂಗೀತ, ಕಲೆ, ಹಾಗು ಸಾಮಾಜಿಕ ನಡವಳಿಕೆಗಳ ಬಗ್ಗೆ ಹಲವಾರು ವಸ್ತುಗಳು ಹಾಗು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ತಮ್ಮ ಮನೆಯಲ್ಲಿ ಹೆಚ್ಚಿನ ಸಮಯ ಕಳೆದ ಮಕ್ಕಳಿಗೆ, ಶಿಶುವಿಹಾರವು ಯಾವುದೇ ಆತಂಕವಿಲ್ಲದ ತಮ್ಮ ಪೋಷಕರಿಂದ ದೂರವಾಗಿ ಇಲ್ಲಿಗೆ ಹೊಂದಿಕೊಳ್ಳಲು ಸಹಕಾರಿಯಾಗಿದೆ. ಮಕ್ಕಳಿಗೆ ನಿಯಮಿತವಾಗಿ ಒಂದು ನಿರ್ದಿಷ್ಟ ಗುಂಪಿನೊಂದಿಗೆ ಪರಸ್ಪರ ವ್ಯವಹರಿಸಲು ಹಾಗು ಆಟ ಆಡಲು ಮೊದಲ ಬಾರಿಗೆ ಅವಕಾಶ ದೊರೆಯುತ್ತದೆ. ಶಿಶುವಿಹಾರವು ತಾಯಂದಿರಿಗೆ, ತಂದೆಯರಿಗೆ, ಅಥವಾ ಮಕ್ಕಳನ್ನು ಪಾಲನೆ ಮಾಡುವ ಇತರರಿಗೆ ಅರೆಕಾಲಿಕವಾಗಿ ಅಥವಾ ಪೂರ್ಣಕಾಲಿಕವಾಗಿ ನೌಕರಿ ಮಾಡಲು ಅವಕಾಶ ಮಾಡಿಕೊಡುತ್ತದೆ.

ಇತಿಹಾಸ[ಮೂಲವನ್ನು ಸಂಪಾದಿಸು]

ಫ್ರೆಡ್ರಿಚ್ ಫ್ರೋಬೇಲ್ ಜರ್ಮನಿಯಲ್ಲಿ ಮೊದಲ ಶಿಶುವಿಹಾರವನ್ನು 1840ರಲ್ಲಿ ಆರಂಭಿಸಿದರು.

ಮೊದಲ ಶಿಶುವಿಹಾರದ ಸ್ಥಾಪನೆಯು ತಮ್ಮದೆಂದು ಹಲವು ಮೂಲಗಳು ಸಮರ್ಥಿಸುತ್ತವೆ. ಇಸವಿ ೧೮೧೬ರಲ್ಲಿ ಸ್ಕಾಟ್ಲ್ಯಾಂಡ್ ನಲ್ಲಿ, ದಾರ್ಶನಿಕ ಹಾಗು ಬೋಧಕರಾಗಿದ್ದ ರಾಬರ್ಟ್ ಓವನ್, ನ್ಯೂ ಲನರ್ಕ್ ನಲ್ಲಿ ಒಂದು ಶಿಶುವಿಹಾರವನ್ನು ಆರಂಭಿಸುತ್ತಾರೆ.[೧][೨][೩] ಮತ್ತೊಂದು ಶಿಶುವಿಹಾರವನ್ನು ೧೮೧೯ರಲ್ಲಿ ಲಂಡನ್ ನಲ್ಲಿ ಸ್ಯಾಮ್ಯುಯೆಲ್ ವಿಲ್ಡರ್ ಸ್ಪಿನ್ ಆರಂಭಿಸಿದರು.[೪] ಹಂಗೇರಿಯಲ್ಲಿ ಮೊದಲ ಶಿಶುವಿಹಾರವನ್ನು ೨೭ ಮೇ ೧೮೨೮ರಲ್ಲಿ ಕೌನ್ಟೆಸ್ ಥೆರೆಸಾ ಬ್ರುನ್ಸ್ಜ್ ವಿಕ್ (೧೭೭೫–೧೮೬೧) ಬುಡಾದ ತಮ್ಮ ಮನೆಯಲ್ಲಿ ಅಂಗ್ಯಕೆರ್ಟ್ (ಏಂಜಲ್ ಗಾರ್ಡನ್) ಎಂಬ ಹೆಸರಿನಡಿ ಆರಂಭಿಸುತ್ತಾರೆ.[೧][೫] ಹಂಗೇರಿಯನ್ ಸಾಮ್ರಾಜ್ಯದಲ್ಲೆಲ್ಲಾ ಈ ಪರಿಕಲ್ಪನೆಯು ಬಹಳ ಬೇಗನೆ ಹುಟ್ಟಿಕೊಂಡಿತು, ಇದು ಶ್ರೀಮಂತರು ಹಾಗು ಮಧ್ಯಮ ವರ್ಗದವರಲ್ಲಿ ಒಂದು ಜನಪ್ರಿಯ ಶಿಕ್ಷಣ ಸಂಸ್ಥೆಯಾಯಿತು.

ನಂತರ, ಫ್ರೆಡ್ರಿಚ್ ಫ್ರೋಬೇಲ್ (1782-1852) ಹಂಗೇರಿಯಿಂದಾಚೆ ಶಾಲಾಪೂರ್ವ ಶಿಕ್ಷಣದ ಮೊದಲ ಸಂಸ್ಥೆಯನ್ನು ಜೂನ್ ೨೮, ೧೮೪೦ರಲ್ಲಿ ಆರಂಭಿಸಿದರು. ಇವರು ಗುಟೆನ್ಬರ್ಗ್ ನಲ್ಲಿ ಆರಂಭವಾಗಿದ್ದ ಸಂಚಾರಿ ಶಿಕ್ಷಣ ಮಾದರಿಯ ನಾನೂರನೇ ವಾರ್ಷಿಕೋತ್ಸವದ ಅಂಗವಾಗಿ ಆರಂಭಿಸಿದರು. ಫ್ರೋಬೇಲ್ ಶಿಶುವಿಹಾರ ಎಂಬ ಹೆಸರು ಹಾಗು ಪದವನ್ನು (ಮಕ್ಕಳ ಉದ್ಯಾನ) ಆಟ ಹಾಗು ಚಟುವಟಿಕೆಯ ಸಂಸ್ಥೆ ಗಾಗಿ ರೂಪಿಸಿದರು, ಇವರು ಇದನ್ನು 1837ರಲ್ಲಿ , ಜರ್ಮನಿ ಯಲ್ಲಿನ ತುರಿಂಗಿಯ ದ ಒಂದು ಸಣ್ಣ ಸಂಸ್ಥಾನದಲ್ಲಿದ್ದ ಸ್ಚ್ವಾರ್ಜ್ ಬರ್ಗ್-ರುಡೊಲ್ ಸ್ಟಡ್ಟ್ ನ ಬ್ಯಾಡ್ ಬ್ಲಾನ್ಕೆನ್ ಬರ್ಗ್ ಹಳ್ಳಿಯಲ್ಲಿ ಸ್ಥಾಪಿಸಿದರು. ಜರ್ಮನಿಯಲ್ಲಿ ಫ್ರೋಬೇಲ್ ರ ಶಾಲಾಪೂರ್ವ ಶಿಕ್ಷಣ ಸಂಸ್ಥೆಯು ಯಶಸ್ಸಿನೊಂದಿಗೆ ಈ ಮಾದರಿಯ ಶಿಶುವಿಹಾರ ಸಂಸ್ಥೆಗಳು ಒಂದು ಸಾರ್ವತ್ರಿಕ ಉಪಾದಿಯನ್ನು ಗಳಿಸುವುದರ ಜೊತೆಗೆ ಯೂರೋಪಿನ ಇತರ ಭಾಗಗಳು ಹಾಗು ವಿಶ್ವದೆಲ್ಲೆಡೆ ಜನಪ್ರಿಯವಾಯಿತು.

ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಶಿಶುವಿಹಾರವನ್ನು ವಾಟರ್ ಟೌನ್, ವಿಸ್ಕಾನ್ಸಿನ್ ನಲ್ಲಿ ಮಾರ್ಗರೆತೆ (ಮೆಯೇರ್) ಸ್ಚುರ್ಜ್(ಕ್ರಿಯಾವಾದಿ/ಮುತ್ಸದ್ದಿ ಕಾರ್ಲ್ ಸ್ಚುರ್ಜ್ರ ಪತ್ನಿ) ೧೮೫೬ನಲ್ಲಿ ಆರಂಭಿಸಿದರು. ಇದು ಆಕೆ ಯುರೋಪ್ ನಲ್ಲಿ ಕಲಿತ ಫ್ರೋಬೆಲೈಟ್ ನಿಯಮಗಳ ಮೇಲೆ ರೂಪಿಸಿದ್ದರು. ಸ್ಚುರ್ಜ್ ರ ಹಿರಿಯ ಸಹೋದರಿ, ಬರ್ತಾ ಮೆಯೇರ್ ರೊಂಗೆ, ಲಂಡನ್ (೧೮೫೧), ಮ್ಯಾಂಚೆಸ್ಟರ್ (೧೮೫೯), ಹಾಗು ಲೀಡ್ಸ್ (೧೮೬೦) ನಲ್ಲಿ "ಇನ್ಫ್ಯಾಂಟ್ ಗಾರ್ಡನ್ಸ್ ನ್ನು" ಆರಂಭಿಸಿದ್ದರು. ಮಾರ್ಗರೆಥೆ ಸ್ಚ್ರುಜ್ ಆರಂಭದಲ್ಲಿ ವಾಟರ್ ಟೌನ್, ವಿಸ್ಕಾನ್ಸಿನ್ ನ ತಮ್ಮ ಮನೆಯಲ್ಲಿ ಕೇವಲ ಐದು ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದರು (ಇದರಲ್ಲಿ ಅವರ ಮಗಳು ಅಗಾಥ ಸಹ ಸೇರಿದ್ದಳು). ಇದರ ಯಶಸ್ಸು ಹೆಚ್ಚಿನ ಇತರ ಮಕ್ಕಳಿಗೂ ಸಹ ಶಿಕ್ಷಣ ನೀಡಲು ಪ್ರೇರೇಪಿಸಿತು. ಸ್ಚುರ್ಜ್ ರ ಮೊದಲ ಶಿಶುವಿಹಾರವು ಜರ್ಮನ್ ಭಾಷೆಯಲ್ಲಿತ್ತು, ಇವರು ಇಂಗ್ಲಿಷ್ ಭಾಷೆಯ ಶಿಶುವಿಹಾರಗಳ ಸ್ಥಾಪನೆಗೆ ಸಮರ್ಥಿಸಿದರು. ಇವರು ೧೮೫೯ರಲ್ಲಿ ಬಾಸ್ಟನ್ ನಲ್ಲಿ ಸಂಧಿಸಿದ ಎಲಿಜಬಥ್ ಪೀಬಾಡಿಯೂ ಸಹ ಫ್ರೋಬೇಲ್ ತತ್ತ್ವವನ್ನು ಅಳವಡಿಕೊಳ್ಳುವಂತೆ ಮಾಡಿದ್ದರ ಕೀರ್ತಿ ಅವರಿಗೆ ಸಲ್ಲುತ್ತದೆ.

ನಂತರದಲ್ಲಿ ಅದೇ ವರ್ಷ, ಪೀಬಾಡಿ ಮೊದಲ ಇಂಗ್ಲಿಷ್ ಭಾಷೆಯ ಶಿಶುವಿಹಾರವನ್ನು ಅಮೇರಿಕಾದ ಬಾಸ್ಟನ್ ನಲ್ಲಿ ಸ್ಚುರ್ಜ್ ರ ಮಾದರಿಯನ್ನು ಅನುಸರಿಸಿದರು ಆರಂಭಿಸಿದರು. ಅಮೆರಿಕಾದಲ್ಲಿ ಮೊದಲ ಉಚಿತ ಶಿಶುವಿಹಾರವನ್ನು ಕಾನ್ರಾಡ್ ಪೋಪ್ಪೆನ್ ಹುಸೆನ್೧೮೭೦ರಲ್ಲಿ ಆರಂಭಿಸಿದರು, ಇವರೊಬ್ಬ ಉದ್ಯಮಿ ಹಾಗು ಲೋಕೋಪಕಾರಿಯಾಗಿದ್ದರು. ಇವರು ಕಾಲೇಜ್ ಪಾಯಿಂಟ್, NYನಲ್ಲಿ ನೆಲೆಗೊಂಡಿದ್ದರು. ಅದಲ್ಲದೇ ಇಂದಿಗೂ ಅಸ್ತಿತ್ವದಲ್ಲಿರುವ ಪೋಪ್ಪೆನ್ ಹುಸೆನ್ ಸಂಸ್ಥೆಯನ್ನು ಸ್ಥಾಪಿಸಿದರು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಸರ್ಕಾರಿ ಶಿಶುವಿಹಾರವನ್ನು St. ಲೂಯಿಸ್ ನಲ್ಲಿ ೧೮೭೩ರಲ್ಲಿ ಸುಸಾನ್ ಬ್ಲೌ. ಎಲಿಜಬೆಥ್ ಹ್ಯಾರಿಸನ್ ಆರಂಭಿಕ ಬಾಲ್ಯ ಶಿಕ್ಷಣದ ಸಿದ್ಧಾಂತದ ಬಗ್ಗೆ ವ್ಯಾಪಕವಾಗಿ ಬರೆದರು. ಮುಂದೆ ಶಿಶುವಿಹಾರದ ಶಿಕ್ಷಕರಿಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ೧೮೮೬ರಲ್ಲಿ ನ್ಯಾಷನಲ್ ಕಾಲೇಜ್ ಆಫ್ ಎಜುಕೇಶನ್ ನನ್ನು ಆರಂಭಿಸಿದರು.

ಆಫ್ಘಾನಿಸ್ಥಾನ[ಮೂಲವನ್ನು ಸಂಪಾದಿಸು]

ಆಫ್ಘಾನಿಸ್ಥಾನದಲ್ಲಿ, ಶಿಶುವಿಹಾರಕ್ಕಿರುವ ಸಮಾನಂತರ ಪದವೆಂದರೆ کودکستان, ಎಂದರೆ ಕುಡಾಕಿಸ್ತಾನ್ (ಕುಡಕ್ ಎಂದರೆ ಮಗು ಹಾಗು ಸ್ತಾನ್ ಎಂದರೆ ಸ್ಥಳ) ಜೊತೆಗೆ ಇದು ವಾಸ್ತವದ ಶಾಲಾ ವ್ಯವಸ್ಥೆಯ ಭಾಗವಾಗಿಲ್ಲ. ಸಾಮಾನ್ಯವಾಗಿ ಸರ್ಕಾರವು ನಡೆಸುವ ಶಿಶುವಿಹಾರಗಳಿಗೆ ಮೂರರಿಂದ ಆರುವರ್ಷದ ಮಕ್ಕಳು ದಾಖಲಾಗುತ್ತಾರೆ. ಕಾನೂನಿನ ಪ್ರಕಾರ, ಪ್ರತಿಯೊಂದು ಸರ್ಕಾರಿ ಕಚೇರಿಯು ತಮ್ಮ ಪ್ರದೇಶದಲ್ಲಿ ಒಂದು ಶಿಶುವಿಹಾರವನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ.

ಆಫ್ಘಾನಿಸ್ಥಾನದಲ್ಲಿನ ಆರಂಭಿಕ ಬಾಲ್ಯ ಶಿಕ್ಷಣ[ಮೂಲವನ್ನು ಸಂಪಾದಿಸು]

ಆರಂಭಿಕ ಬಾಲ್ಯದ ಬೆಳವಣಿಗೆ (ECD) ಯೋಜನೆಗಳು ಹುಟ್ಟಿದಂದಿನಿಂದ ಆರು ವರ್ಷ ವಯಸ್ಸಿನ ಮಕ್ಕಳ ಬೆಳವಣಿಗೆ ಹಾಗು ಅಗತ್ಯಗಳಿಗೆ, ಅವರ ಕುಟುಂಬಗಳು, ಹಾಗು ಅವರ ಸಮುದಾಯಗಳ ಅಗತ್ಯಕ್ಕೆ ಒತ್ತು ನೀಡುತ್ತಿವೆ. ಇವುಗಳು ವಿವಿಧ ಆಯಾಮಗಳನ್ನು ಹೊಂದಿರುವುದರ ಜೊತೆಗೆ ಮಕ್ಕಳ ಆರೋಗ್ಯ, ಪೌಷ್ಟಿಕತೆ, ಅರಿವು, ಸಮಾಜ, ಹಾಗು ಭಾವನಾತ್ಮಕ ಸಾಮರ್ಥ್ಯಗಳನ್ನು ರೂಪಿಸುವುದರ ಜೊತೆಗೆ ನಂತರದ ವರ್ಷಗಳಲ್ಲಿ ಅವರ ಅಸ್ತಿತ್ವ ಹಾಗು ಏಳಿಗೆಗೆ ಸಹಾಯಕವಾಗಿದೆ. ಸಾಂಸ್ಕೃತಿಕ ಮೌಲ್ಯಗಳು ಬಿಂಬಿತವಾಗುವುದಕ್ಕೆ, ಅದು ಅವರ ಕುಟುಂಬ ಹಾಗು ಸಮುದಾಯಗಳಲ್ಲಿ ಆಳವಾಗಿ ಬೇರೂರಿರಬೇಕು, ಇದರ ಜೊತೆಯಲ್ಲಿ ಅನುಕೂಲಕರವಾಗಿ ಮಗುವಿನ ಬೆಳವಣಿಗೆಯನ್ನು ವರ್ಧಿಸುವ ಪರಿಸರಗಳು ಸೃಷ್ಟಿಯಾಗಬೇಕು ಜೊತೆಗೆ ಮಕ್ಕಳನ್ನು ಪಾಲನೆ ಮಾಡುವ ಸಾಂಪ್ರದಾಯಿಕ ರೂಢಿಗಳನ್ನು ಅರ್ಥ ಮಾಡಿಕೊಳ್ಳಬೇಕು ಹಾಗು/ಅಥವಾ ಮಗುವಿನ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ. ECD ಯೋಜನೆಯ ಮುಖ್ಯ ಉದ್ದೇಶವೆಂದರೆ ಕುಟುಂಬಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನು ಉತ್ತೇಜಿಸುವುದು, ಕೇವಲ ಆರೋಗ್ಯ ಹಾಗು ಉತ್ತಮ ಪೌಷ್ಟಿಕತೆಯೊಂದಿಗೆ ಮಾತ್ರವಲ್ಲದೆ ಬೌದ್ಧಿಕವಾಗಿಯೂ ಕುತೂಹಲಕಾರಿಯಾಗುವಂತೆ ಮಾಡುವುದು, ಸಮಾಜದಲ್ಲಿ ದಿಟ್ಟವಾಗಿರುವುದು, ಹಾಗು ಜೀವನಪರ್ಯಂತದ ಕಲಿಕೆಗೆ ಒಂದು ಗಟ್ಟಿಯಾದ ಅಡಿಪಾಯವನ್ನು ಹಾಕಿಕೊಡುವುದೇ ಆಗಿದೆ. ತಮ್ಮ ಶಾಲಾ ಅವಧಿಗೆ ಮುಂಚಿತವಾಗಿ (ಶಿಶುವಿಹಾರಗಳಲ್ಲಿ) ಚಿಕ್ಕ ಮಕ್ಕಳಿಗೆ ಒಂದು ಉತ್ತಮವಾದ ಅಡಿಪಾಯವನ್ನು ಹಾಕಿಕೊಡುವ ಯೋಜನೆಗಳನ್ನು ಅಭಿವೃದ್ಧಿಪಡಿಸಿ,ಜಾರಿಗೆ ತರುವುದರ ಜೊತೆಗೆ ಶಾಲೆ ಕಲಿಯದ ಮಕ್ಕಳಿಗೆ(ವಾಡಿಕೆಯಲ್ಲದ) ವಿಧ್ಯುಕ್ತವಲ್ಲದ ಶಿಕ್ಷಣ ಹಾಗು ವೃತ್ತಿಪರ ತರಬೇತಿ ನೀಡುವುದು.

ಹಿನ್ನೆಲೆ[ಮೂಲವನ್ನು ಸಂಪಾದಿಸು]

ECD ಶೈಕ್ಷಣಿಕ ಕಾರ್ಯಕ್ರಮಗಳು ಆಫ್ಘಾನಿಸ್ಥಾನದ ಇತಿಹಾಸದಲ್ಲಿ ಕಡಿಮೆ ಸ್ಥಾನ-ಮಾನ ಗಳಿಸಿವೆ. ಇದನ್ನು ಮೊದಲ ಬಾರಿಗೆ ೧೯೮೦ರಲ್ಲಿ ನಗರದಲ್ಲಿ ೨೭ ಪ್ರಿಸ್ಕೂಲ್ ಗಳು, ಅಥವಾ ಕೊಡಕಿಸ್ಥಾನ್ ನವನ್ನು ಸೋವಿಯತ್ ಆಕ್ರಮಣದ ಸಮಯದಲ್ಲಿ ಪರಿಚಯಿಸಲಾಯಿತು. ಪ್ರಿಸ್ಕೂಲ್ ಗಳ ಸಂಖ್ಯೆಯು ನಿರಂತರವಾಗಿ ೧೯೮೦ರ ಅವಧಿಯಲ್ಲಿ ಅಭಿವೃದ್ದಿ ಹೊಂದಿತು, ಇದರ ಸಂಖ್ಯೆ ೧೯೯೦ರಲ್ಲಿ ೨೭೦ರಷ್ಟಾಗುವುದರ ಜೊತೆಗೆ ಶಿಕ್ಷಕರು ೨೧,೦೦೦ಕ್ಕೂ ಅಧಿಕ ಮಕ್ಕಳ ಪಾಲನೆ ಮಾಡುತ್ತಿದ್ದರು. ಈ ಸೌಲಭ್ಯಗಳು ನಗರದ ವಿದ್ಯಮಾನಗಳಾಗಿದ್ದವು, ಬಹುತೇಕ ಇವು ಕಾಬುಲ್ ನಲ್ಲಿ ನೆಲೆಗೊಂಡಿದ್ದವು, ಜೊತೆಗೆ ಇವುಗಳನ್ನು ಶಾಲೆಗಳು, ಸರ್ಕಾರಿ ಕಛೇರಿಗಳು, ಅಥವಾ ಕಾರ್ಖಾನೆಗಳ ಜೊತೆ ಸಂಯೋಗ ಹೊಂದಿದ್ದವು. ಸೋವಿಯತ್ ನ ಮಾದರಿಯನ್ನು ಅನುಸರಿಸಿ, ಮಕ್ಕಳಿಗೆ ಪಾಲನೆ, ಪ್ರಿಸ್ಕೂಲ್, ಹಾಗು ಮೂರು ತಿಂಗಳಿಂದ ಆರು ವರ್ಷದ ಮಕ್ಕಳವರೆಗೂ ಶಿಶುವಿಹಾರವನ್ನು ಕಾರ್ಮಿಕ ಹಾಗು ಸಮಾಜ ಕಲ್ಯಾಣ ಇಲಾಖೆಯ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿತ್ತು. ವ್ಯಾಪಕವಾಗಿ ಆಫ್ಘಾನ್ ಕುಟುಂಬಗಳು ಈ ವ್ಯವಸ್ಥೆಗೆ ಎಂದಿಗೂ ತೆರೆದುಕೊಂಡಿರಲಿಲ್ಲ, ಜೊತೆಗೆ ಹೆಚ್ಚಿನವು ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರಲಿಲ್ಲ ಏಕೆಂದರೆ ಇದು ಕುಟುಂಬದ ಮುಖ್ಯ ಪಾತ್ರವನ್ನು ನಶಿಸಿಹಾಕುವುದರ ಜೊತೆಗೆ ಇಲ್ಲಿ ಸೋವಿಯತ್ ನ ಮೌಲ್ಯಗಳನ್ನು ಮಕ್ಕಳಿಗೆ ಬೋಧಿಸಲಾಗುತ್ತಿತ್ತು. ಸೋವಿಯತ್ ನ ವಾಪಸಾತಿ ನಂತರ ಆರಂಭವಾದ ಅಂತರ್ಯುದ್ಧದಿಂದಾಗಿ, ಶಿಶುವಿಹಾರದ ಸಂಖ್ಯೆಯಲ್ಲಿ ತ್ವರಿತವಾಗಿ ಇಳಿಯಿತು. ೧೯೯೫ರ ಸುಮಾರಿಗೆ, ಕೇವಲ ೨,೧೧೦ ಮಕ್ಕಳಿಂದ ಕೂಡಿದ್ದ ೮೮ ಶಿಶುವಿಹಾರಗಳು ಅಸ್ತಿತ್ವದಲ್ಲಿದ್ದವು, ಜೊತೆಗೆ ಮಹಿಳೆಯರು ನೌಕರಿ ಮಾಡುವುದಕ್ಕೆ ತಾಲಿಬಾನ್ ಹೇರಿದ್ದ ನಿಷೇಧದಿಂದಾಗಿ ಅವರ ಆಡಳಿತದ ಅಡಿಯಲ್ಲಿ ಆ ಪ್ರದೇಶದಲ್ಲಿದ್ದ ಉಳಿದ ಎಲ್ಲ ಶಿಶುವಿಹಾರ ಕೇಂದ್ರಗಳನ್ನು ಮುಚ್ಚಲಾಯಿತು. ಪ್ರಸಕ್ತದಲ್ಲಿ, ಯಾವುದೇ ರೂಪದ ಯಾವುದೇ ಯೋಜನೆಗಳು ಅಸ್ತಿತ್ವದಲ್ಲಿಲ್ಲ, ಸೌಲಭ್ಯಗಳನ್ನು ಭಂಗಗೊಳಿಸುವುದರ ಜೊತೆಗೆ ತರಬೇತಿ ಹೊಂದಿದ ಶಿಕ್ಷಕರ ಕೊರತೆಯಿದೆ. ಕಳೆದ ೨೦೦೭ರಲ್ಲಿ, ಅದರ ಹಿಂದಿನ ವರ್ಷವನ್ನು ಉತ್ತೇಜನಗೊಳಿಸುವಂತೆ ಸುಮಾರು ೨೬೦ ಶಿಶುವಿಹಾರಗಳು ೨೫೦೦೦ಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಿದವು.

ಸುಮಾರು ೨.೫ ದಶಲಕ್ಷ ಆಫ್ಘಾನ್ ಮಕ್ಕಳು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಂದು ಅಂದಾಜಿಸಲಾಗಿದೆ. ಜೀವವಿಜ್ಞಾನ ಹಾಗು ಪರಿಸರದ ಅಪಾಯದ ಅಂಶಗಳ ಒಂದು ಶ್ರೇಣಿಯು ಆಫ್ಘಾನ್ ಮಕ್ಕಳ ಬೆಳವಣಿಗೆ ಹಾಗು ಅವರ ಅಭಿವೃದ್ಧಿಗೆ ಒಂದು ಬಲವಾದ ನಕಾರಾತ್ಮಕ ಪ್ರಭಾವವು ಸಮಷ್ಟಿ ಪರಿಣಾಮವಾಗಿ ಹೊರಬಂದಿದೆ. ಧಾರ್ಮಿಕ ಹಾಗು ಬುಡಕಟ್ಟಿನ ಸಂಪ್ರದಾಯಗಳು ಹಾಗು ನಂಬುಗೆಗಳ ಮಿಶ್ರಣವು ಆಫ್ಘಾನ್ ಸಮಾಜದ ಒಳವ್ಯಾಪಿಸಿದೆ, ಜೊತೆಗೆ ಹೆಚ್ಚಿನ ಪ್ರದೇಶಗಳಲ್ಲಿ ಸರ್ಕಾರಕ್ಕೆ ಬದಲಿಯಾಗಿ ಕುಟುಂಬ ರಾಜಕಾರಣಗಳು ಆರಂಭವಾಗುತ್ತಿವೆ. ಸಮುದಾಯಗಳು ಸಾಂಪ್ರದಾಯಿಕವಾಗಿ ಒಟ್ಟಾಗಿ ಬಂಧಿಸಲ್ಪತ್ತಿವೆ ಜೊತೆಗೆ ವಿಸ್ತರಿಸಿದ ಕುಟುಂಬಕ್ಕೆ ಬಲವಾದ ಒತ್ತು ನೀಡಲಾಗುತ್ತಿದೆ. ಪಾತ್ರಗಳನ್ನು ಸ್ಪಷ್ಟವಾಗಿ ನಿರೂಪಿಸುವುದರ ಜೊತೆಗೆ ಸಮಾಜ ವ್ಯವಸ್ಥೆಗೆ ಮುಖ್ಯವಾಗಿದೆ. ದಶಕಗಳ ಯುದ್ಧ, ತೀವ್ರತರವಾದ ಸ್ಥಳಾಂತರಣ, ಹಾಗು ಬದಾಲಾಗುತ್ತಿದ್ದ ಆಡಳಿತ ರಚನೆಗಳು ಸಮುದಾಯ ನೆರವಿನ ಜಾಲಗಳ ಕುಸಿತಕ್ಕೆ ಕಾರಣವಾಯಿತು ಜೊತೆಗೆ ವಿಸ್ತರಿಸಿದ ಕುಟುಂಬದ ಸವೆತ-ಇದು ಅತ್ಯಂತ ಮೂಲಭೂತವಾದ ಸಾಂಪ್ರದಾಯಿಕತೆಯು ಕುಟುಂಬವನ್ನು ಸಮರ್ಥವಾಗಿ ನಿರ್ವಹಿಸುವ ವಿಧಾನವಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರಿಗೆ ವೈಧವ್ಯ ಪ್ರಾಪ್ತವಾಯಿತು ಜೊತೆಗೆ ಅವರುಗಳು ಕುಟುಂಬದ ನಿರ್ವಹಣೆಗಾಗಿ ರೂಢಿಯಲ್ಲಿಲ್ಲದ ಹಾಗು ಅಸಾಂಪ್ರದಾಯಿಕ ಪಾತ್ರಗಳನ್ನು ನಿರ್ವಹಿಸಬೇಕಾಯಿತು. ಕಾಲು ಭಾಗದಷ್ಟು ಎಲ್ಲ ಮಕ್ಕಳು ಐದು ವರ್ಷಕ್ಕೆ ಮುಂಚೆ ಸಾವನ್ನು ಅಪ್ಪುತ್ತಿದ್ದರು, ಇದು ಹೆರಿಗೆಯ ಸಮಸ್ಯೆ, ನವಜಾತ ಶಿಶುವಿನ ಧನುರ್ವಾಯುವಿನ ಸೆಳೆತದಿಂದ ಉಂಟಾದ ಅತಿಸಾರ, ನ್ಯುಮೋನಿಯ, ಹಾಗು ಚುಚ್ಚುಮದ್ದಿನಿಂದ ತಡೆಗಟ್ಟಬಹುದಾದ ಕಾಯಿಲೆಗಳಿಂದ ಉಂಟಾದ ಪರಿಣಾಮವಾಗಿತ್ತು. ಕಬ್ಬಿಣಾಂಶ ಕೊರತೆಯಿಂದ ಉಂಟಾದ ರಕ್ತಹೀನತೆಯು ವ್ಯಾಪಕವಾಗಿತ್ತು, ಇದಕ್ಕೆ ಐದು ವರ್ಷ ಕೆಳಗಿನ ಮೂರರಲ್ಲಿ ಎರಡು ಭಾಗದಷ್ಟು ಮಕ್ಕಳು ಬಲಿಯಾಗುತ್ತಿದ್ದರು. ದೊಡ್ಡ ಪ್ರಮಾಣದಲ್ಲಿ ಮಕ್ಕಳು ದೀರ್ಘ ಕಾಲದ ಅಪೌಷ್ಟಿಕತೆಗೆ ಒಳಗಾಗಿದ್ದರು; ೪೫–೫೯% ನಷ್ಟು ಅಧಿಕ ಮಟ್ಟದಲ್ಲಿ ಬೆಳವಣಿಗೆಯು ಕುಂಠಿತಗೊಂಡಿತ್ತು. ಅಪೌಷ್ಟಿಕತೆಯಿಂದ ಕೂಡಿದ ೧೮ ವರ್ಷ ವಯಸ್ಸಿನ ಎಲ್ಲ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದರು, ಹಾಗು ಮತ್ತೆ ಕೆಲವರು ತಾವು ಪ್ರಾಯಕ್ಕೆ ಬಂದ ತಕ್ಷಣವೇ ಮದುವೆ ಮಾಡಿಕೊಳ್ಳುತ್ತಿದ್ದರು. ಬೆಳವಣಿಗೆಗೆ ಸಂಬಂಧಿಸಿದಂತೆ ಇಂತಹ ಅಪಾಯಗಳನ್ನು ಎದುರಿಸಿ, ಮಕ್ಕಳು ಶಾಲೆಗೇ ಹಾಜರಾದರೂ ಕಲಿಕೆಯ ಅವಕಾಶದಿಂದ ವಂಚಿತರಾಗುವರು. ಶಾಲೆಯಿಂದ ಹೊರಬಿದ್ದ ಮಕ್ಕಳ ಸಂಖ್ಯೆಯು ಅಧಿಕವಾಗುವುದರಲ್ಲಿ ಆಶ್ಚರ್ಯವೇನಿಲ್ಲ. ಇಸವಿ ೧೯೯೯ರಲ್ಲಿ ಅಂದಾಜಿಸಲಾದಂತೆ ನಾಲ್ಕರಲ್ಲಿ ಒಂದು ಮಗುವು ಎರಡನೇ ಗ್ರೇಡ್ ನಲ್ಲಿ ಶಾಲೆಯಿಂದ ಹೊರಬಿದ್ದರೆ ಬಹುತೇಕವಾಗಿ ಒಂದು ಮಗುವು ಮೂರು ಹಾಗು ನಾಲ್ಕನೇ ಗ್ರೇಡ್ ನಲ್ಲಿ ಶಾಲೆಯಿಂದ ಹೊರಬೀಳುತ್ತದೆ. ಮಗುವಿನ ಮಾನಸಿಕ ಹಾಗು ಆರೋಗ್ಯ ಸ್ಥಿತಿಗತಿಯ ಜೊತೆಯಲ್ಲಿ ಮಕ್ಕಳು ಶಾಲೆಯಿಂದ ಹೊರಬೀಳಲು ಉಂಟಾಗುವ ಇತರ ಅಂಶಗಳೆಂದರೆ ಕೌಟುಂಬಿಕ ಸಮಸ್ಯೆಗಳು ಹಾಗು ಮಗುವಿನ ಸಮಯಕ್ಕೆ ಒದಗುವ ಸ್ಪರ್ಧಾತ್ಮಕ ಆದ್ಯತೆ, ಅನಿಯಮಿತವಾದ ಶಿಕ್ಷಕರ ಹಾಜರಾತಿ, ವಿಷಯದ ಅಸಂಬದ್ಧತೆ,ಹಾಗು ಕಲಿಸುವ ಕಳಪೆ ವಿಧಾನ.

ಪ್ರಸಕ್ತದಲ್ಲಿ, ಆರಂಭಿಕ ಬಾಲ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ. ಅಲ್ಲಿ ಯಾವುದೇ ಶೈಕ್ಷಣಿಕ ಸಂಸ್ಥೆಗಳು ಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ ಅಥವಾ ಅಂತಹ ಸೇವೆಗಳನ್ನು ಒದಗಿಸುವ ಸಾಮರ್ಥ್ಯಗಳಿರುವುದಿಲ್ಲ. ಹಿಂದೆಲ್ಲ, ಕಾರ್ಮಿಕ ಹಾಗು ಸಮಾಜ ಕಲ್ಯಾಣ ಇಲಾಖೆಯು ಶಿಶುವಿಹಾರಗಳು, ನರ್ಸರಿಗಳು, ಹಾಗು ಶಿಶುಧಾಮಗಳ ನಿರ್ವಹಣೆ ಮಾಡುತ್ತಿದ್ದವು, ಅನಾಥಾಶ್ರಮಗಳು MOEನ ಮೇಲ್ವಿಚಾರಣೆಯಲ್ಲಿತ್ತು. ಪ್ರಸಕ್ತದಲ್ಲಿ ಶಿಕ್ಷಣ, ಕಾರ್ಮಿಕ ಹಾಗು ಸಮಾಜ ಕಲ್ಯಾಣ ಹಾಗು ಮಹಿಳಾ ಕಲ್ಯಾಣ ಇಲಾಖೆಗಳು ಬಾಲ್ಯ ಶಿಕ್ಷಣ ಕ್ಷೇತ್ರದ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಆಸಕ್ತಿ ವಹಿಸಿತು. ಆಡಳಿತ ಪಕ್ಷವನ್ನು ಮರುರೂಪಿಸುವ ಹಾಗು ಅದರ ಮಿತಿಯನ್ನು ನಿರೂಪಿಸಲು ಸರ್ಕಾರವು ಮುಂದುವರೆಯುತ್ತಿದ್ದಂತೆ, ವಿವಿಧ ಆಯ್ಕೆಗಳ ಬಲ ಹಾಗು ಪರಿಮಿತಿಗಳು, ಅಂತರ ಪಕ್ಷೀಯ ಸಹಯೋಗ ಏಜೆನ್ಸಿಯನ್ನು ಒಳಗೊಂಡಂತೆ, ಎಚ್ಚರಿಕೆಯಿಂದ ಪರಿಗಣಿಸಬೇಕಾಗುತ್ತದೆ. ವಿಧ್ಯುಕ್ತವಾದ ರಚನೆಗೆ ಅಸ್ತಿತ್ವದಲ್ಲಿಲ್ಲದಿದ್ದರೂ, ವಿಧ್ಯುಕ್ತವಲ್ಲದ ಯಾವುದೇ ಶಿಶುಪಾಲನಾ ವ್ಯವಸ್ಥೆಗಳು ಕುಟುಂಬದ ಸದಸ್ಯರು ಒದಗಿಸಿದ ಸೌಲಭ್ಯಗಳನ್ನು ಹೊರತುಪಡಿಸಿ ಸಮುದಾಯ ಮಟ್ಟದಲ್ಲಿ ಅಸ್ತಿತ್ವದಲ್ಲಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಮಹಿಳೆಯರು ವೃತ್ತಿನಿರತರಾಗುತ್ತಿದ್ದಂತೆ, ಖಾಸಗಿ ಪ್ರಿಸ್ಕೂಲ್ ಸೇವೆಗಳು ನಗರ ಪ್ರದೇಶಗಳಲ್ಲಿ ಆರಂಭವಾಗುವ ಸಂಭವವಿದೆ.

ಭಿನ್ನ ಪರಿಣಾಮಗಳು[ಮೂಲವನ್ನು ಸಂಪಾದಿಸು]

ಆರೋಗ್ಯ ಹಾಗು ಪೌಷ್ಟಿಕತೆಯ ಸಂಯೋಜನೆಗಳ ಜೊತೆಯಲ್ಲಿ, ಆರಂಭಿಕ ಬಾಲ್ಯವು ಹಲವಾರು ಭಿನ್ನ ಪರಿಣಾಮಗಳನ್ನು ಎದುರಿಸುತ್ತದೆ, ಇದರಲ್ಲಿ ಲಿಂಗ ತಾರತಮ್ಯ ಹಾಗು ವೈಕಲ್ಯದಿಂದ ಬಳಲುವ ಮಕ್ಕಳು ಸೇರಿವೆ. ಹೆಚ್ಚು ಮಕ್ಕಳ ವಿರುದ್ಧ ಪಕ್ಷಪಾತ, ಗಂಡು ಹಾಗು ಹೆಣ್ಣು ಮಕ್ಕಳ ನಡವಳಿಕೆಯನ್ನು ಮಾದರಿಗೊಳಿಸುವುದು, ಹಾಗು ಗಂಡಿನ ಪ್ರಾಬಲ್ಯವನ್ನು ಸ್ವೀಕರಿಸುವುದು. ಹೀಗಾಗಿ ಮಹಿಳೆಯರ ವಿರುದ್ಧ ಹಿಂಸಾಚಾರವು ಕುಟುಂಬಗಳಲ್ಲಿ ಬಹಳ ಬೇಗನೆ ಆರಂಭವಾಗುತ್ತದೆ. ಈ ಮೌಲ್ಯಗಳನ್ನು ಮಕ್ಕಳು ಹಾಗು ಅವರ ಕುಟುಂಬಗಳಿಗೆ ನೆರವಾಗುವ ಶಾಲೆ, ಸಮುದಾಯ, ಹಾಗು ಸಂಸ್ಥೆಗಳಲ್ಲಿ ಬಲಪಡಿಸಲಾಗುತ್ತದೆ. ಬಾಲ್ಯದಲ್ಲೇ ಲಿಂಗ-ಸಮಾನಾಂತರ ಸಂಗತಿಗಳನ್ನು ಕಲಿಕೆಯಲ್ಲಿ ಆರಂಭಿಸಲಾಗುತ್ತದೆ, ಈ ನಿಟ್ಟಿನಲ್ಲಿ ಸೂಚಿಸಲಾದ ಕಾರ್ಯವಿಧಾನವೆಂದರೆ ವಿಧ್ಯುಕ್ತವಲ್ಲದ ಸಮುದಾಯ ಆಧಾರಿತ ಯೋಜನೆಗಳು ಕುಟುಂಬಗಳು ಹಾಗು ಸಮುದಾಯಗಳ ಸಾಮರ್ಥ್ಯಕ್ಕೆ ನೆರವಾಗಿ ಹೆಣ್ಣು ಮಕ್ಕಳು ಹಾಗು ಗಂಡು ಮಕ್ಕಳಿಬ್ಬರಿಗೂ ಒಂದು ಉತ್ತಮವಾದ ಅಡಿಪಾಯವನ್ನು ಹಾಕಿಕೊಡುತ್ತವೆ; ಜೊತೆಗೆ ಹೆಣ್ಣು ಮಗುವಿನ ಸಾಮರ್ಥ್ಯವನ್ನು ಪೋಷಕರು ಗ್ರಹಿಸಲು ನೆರವಾಗುತ್ತದೆ, ಈ ರೀತಿಯಾಗಿ ದೀರ್ಘಾವಧಿಯ ಶಿಕ್ಷಣಕ್ಕೆ ನಾಂದಿಯಾಗುತ್ತದೆ. ಜೊತೆಗೆ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಗೇ ಪ್ರವೇಶಿಸಿ ಅಲ್ಲೇ ಉಳಿಯುವ ಸಂಭವವನ್ನು ಹೆಚ್ಚಿಸುತ್ತದೆ. "ವೈಕಲ್ಯವನ್ನು ಹೊಂದಿರುವ ಮಕ್ಕಳು" ಎಂಬ ಪದವು ಒಂದು ವ್ಯಾಪಕ ಶ್ರೇಣಿಯ ಅಸಾಮಾನ್ಯ ಬೇನೆಗಳು, ಅಲ್ಪಕಾಲಿಕ ನಡವಳಿಕೆಯ ಸಮಸ್ಯೆಗಳಿಂದ ಹಿಡಿದು ದೀರ್ಘಾವಧಿಯ ದೈಹಿಕ, ಮಾನಸಿಕ, ಹಾಗು ಭಾವನಾತ್ಮಕ ಅಸಾಮರ್ಥ್ಯಗಳಿಗೆ ಒಳಗೊಳ್ಳುತ್ತದೆ. ಈ ನಿಟ್ಟಿನಲ್ಲಿ, ಈ ವೈಕಲ್ಯಗಳನ್ನು ಹೊಂದಿರುವ ಮಕ್ಕಳಿಗೆ ತ್ವರಿತ ಗಮನ ಹರಿಸುವ ಅವಶ್ಯವಿರುತ್ತದೆ. ಒಂದು ಸಾಧಾರಣ ಮಗುವಿನ ಬೆಳವಣಿಗೆಗೆ ಸಮಗ್ರತಾ ಸಿದ್ಧಾಂತದ ಮಾರ್ಗವು ಒಂದು ವಿಶಿಷ್ಟವಾದ ಅವಕಾಶವನ್ನು ಒದಗಿಸುತ್ತದೆ. ಇದರಂತೆ ಇಂತಹ ಮಕ್ಕಳನ್ನು ಆರಂಭದಲ್ಲೇ ಗುರುತಿಸುವುದು ಹಾಗು ಆರಂಭಿಕ ಚಿಕಿತ್ಸೆಯ ಒದಗಿಸುವ ಮೂಲಕ ನೆರವಾಗುವುದು. ಸೂಚಿಸಲಾದ ಕಾರ್ಯವಿಧಾನವೆಂದರೆ ವೈಕಲ್ಯಗಳನ್ನು ಆರಂಭದಲ್ಲಿ ಗುರುತಿಸುವ ಕೌಶಲವನ್ನು ಹಾಗು ಹಸುಳೆಯರು ಹಾಗು ಚಿಕ್ಕ ಮಕ್ಕಳ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ ಕುಟುಂಬಗಳಿಗೆ ಹಾಗು ಸಹಾಯಕ ವೃತ್ತಿಪರರಿಗೆ ಅನುಕೂಲಕರ ಸಾಧನ ಒದಗಿಸುವುದೇ ಆಗಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್[ಮೂಲವನ್ನು ಸಂಪಾದಿಸು]

ಬಳಕೆ[ಮೂಲವನ್ನು ಸಂಪಾದಿಸು]

{{See also|page1|page2|page3|...}}

ಉದಾಹರಣೆ[ಮೂಲವನ್ನು ಸಂಪಾದಿಸು]

{{See also|ಭಾರತ|ದೆಹಲಿ}} ಆಸ್ಟ್ರೇಲಿಯಾದ ಪ್ರತಿ ರಾಜ್ಯದಲ್ಲಿ, ಶಿಶುವಿಹಾರ(ಸಂಕ್ಷಿಪ್ತವಾಗಿ 'ಕಿಂಡರ್' ಅಥವಾ 'ಕಿಂಡಿ') ಎಂಬ ಪದವು ಸ್ವಲ್ಪಮಟ್ಟಿಗೆ ಬೇರೆ ಅರ್ಥವನ್ನು ಪಡೆದಿದೆ. ನ್ಯೂ ಸೌತ್ ವೇಲ್ಸ್ ಹಾಗು ಆಸ್ಟ್ರೇಲಿಯಾದ ರಾಜಧಾನಿ ಪ್ರದೇಶದಲ್ಲಿ ಪ್ರಾಥಮಿಕ ಶಾಲೆಯ ಮೊದಲ ವರ್ಷಕ್ಕೆ ಕರೆಯಲಾಗುತ್ತದೆ. ವಿಕ್ಟೋರಿಯಾದಲ್ಲಿ, ಶಿಶುವಿಹಾರ ವು ಪ್ರಿಸ್ಕೂಲ್ ನ ಒಂದು ಮಾದರಿಯಾಗಿದೆ ಜೊತೆಗೆ ಇದನ್ನು ಪ್ರಿಸ್ಕೂಲ್ ಅಥವಾ ಶಿಶುವಿಹಾರ ಎಂದು ಎರಡೂ ರೀತಿಯಾಗಿ ಕರೆಯಬಹುದಾಗಿದೆ. ವಿಕ್ಟೋರಿಯಾದಲ್ಲಿ ಮೊದಲ ವರ್ಷದ ಪ್ರಾಥಮಿಕ ಶಾಲೆಯನ್ನು ಪ್ರೆಪ್ ಎಂದು ಕರೆಯಲಾಗುತ್ತದೆ (ಪ್ರಿಪರೆಟರಿಯ ಸಂಕ್ಷಿಪ್ತ ರೂಪ), ಇದೆ ರೀತಿಯಾಗಿ ತಾಸ್ಮೇನಿಯಾ ಹಾಗು ಕ್ವೀನ್ಸ್ ಲ್ಯಾಂಡ್ ನಲ್ಲೂ ಸಹ ಕರೆಯಲಾಗುತ್ತದೆ. ಕ್ವೀನ್ಸ್ ಲ್ಯಾಂಡ್ ನಲ್ಲಿ, ಶಿಶುವಿಹಾರವೆಂಬುದು ಸಾಮಾನ್ಯವಾಗಿ ನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೆ ನೀಡುವ ಶಿಕ್ಷಣವಾಗಿದೆ ಹಾಗು ಈ ರೀತಿಯಾಗಿ ಇದು ಪ್ರಿಸ್ಕೂಲ್ ಹಾಗು ಪ್ರಾಥಮಿಕ ಶಿಕ್ಷಣದ ಪೂರ್ವಭಾವಿ ಶಿಕ್ಷಣವಾಗಿದೆ. ಪಶ್ಚಿಮ ಆಸ್ಟ್ರೇಲಿಯ, ದಕ್ಷಿಣ ಆಸ್ಟ್ರೇಲಿಯ ಅಥವಾ ಅದರ ಉತ್ತರ ಭಾಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದ ಮೊದಲ ವರ್ಷವನ್ನು ಕ್ರಮವಾಗಿ ಪ್ರಾಥಮಿಕ ಪೂರ್ವ , ರಿಸೆಪ್ಶನ್ ಅಥವಾ ಟ್ರಾನ್ಸಿಶನ್ ಎಂದು ಕರೆಯಲಾಗುತ್ತದೆ.

ನ್ಯೂಜಿಲೆಂಡ್ ನಲ್ಲಿ, ಶಿಶುವಿಹಾರವೆಂದರೆ ಪ್ರಾಥಮಿಕ ಶಾಲೆಗೆ ಮುಂಚಿತವಾಗಿ ನಡೆಯುವ ಎರಡು ವರ್ಷದ ತರಬೇತಿ, ಇದರಲ್ಲಿ ಮಕ್ಕಳು ಮೂರರಿಂದ ನಾಲ್ಕು ವರ್ಷ ವಯಸ್ಸಿನವರಾಗಿರುತ್ತಾರೆ. ಪ್ರಾಥಮಿಕ ಶಿಕ್ಷಣವು ಐದನೇ ವಯಸ್ಸಿನಲ್ಲಿ ಆರಂಭವಾಗುತ್ತದೆ.

ಬಲ್ಗೇರಿಯ[ಮೂಲವನ್ನು ಸಂಪಾದಿಸು]

ಬಲ್ಗೇರಿಯದಲ್ಲಿ, ಡೆಟ್ಸ್ಕಾ ಗ್ರಾಡಿನ (деτска градина) ಎಂಬ ಪದವು ಮೂರರಿಂದ ಆರು ವರ್ಷ ವಯಸ್ಸಿನ ಮಕ್ಕಳ ಶಾಲಾಶಿಕ್ಷಣಕ್ಕೆ ಸೂಚಿತವಾಗುತ್ತದೆ. ಇದರ ನಂತರ ಶಾಲಾಪೂರ್ವದ ತರಗತಿಗಳು ನಡೆಯುತ್ತವೆ, ಇದು ಪ್ರಾಥಮಿಕ ಶಾಲೆಗೇ ಒಂದು ವರ್ಷ ಮುಂಚಿತವಾಗಿ ನಡೆಯುತ್ತವೆ.

ಕೆನಡಾ[ಮೂಲವನ್ನು ಸಂಪಾದಿಸು]

1898ರಲ್ಲಿ ಟೊರೊಂಟೊ, ಕೆನಡಾದ ಒಂದು ಶಿಶುವಿಹಾರ ತರಗತಿಯಲ್ಲಿ ಮಕ್ಕಳು ಶಿಕ್ಷಕರಿಗೆ ನೀಡಲಾದ ತರಬೇತಿ ಕಾರ್ಯಕ್ರಮ.

ಒಂಟಾರಿಯೋನಲ್ಲಿ ಶಿಶುವಿಹಾರದ ಎರಡು ಗ್ರೇಡ್ ಗಳಿವೆ: ಜೂನಿಯರ್ ಕಿಂಡರ್ ಗಾರ್ಟನ್ (ಶಿಶುವಿಹಾರ) ಹಾಗು ಸೀನಿಯರ್ ಕಿಂಡರ್ ಗಾರ್ಟನ್ (JK ಹಾಗು SK ಎಂದು ಸೂಚಿತವಾಗುತ್ತದೆ). ಮಕ್ಕಳಿಗೆ ನಾಲ್ಕು ವರ್ಷ ತುಂಬಿದಾಗ ಜೂನಿಯರ್ ಕಿಂಡರ್ ಗಾರ್ಟನ್ ಶಿಕ್ಷಣ ಆರಂಭವಾಗುತ್ತದೆ.[೬] ಶಿಶುವಿಹಾರದ ಎರಡೂ ಗ್ರೇಡ್ ಗಳು ಮಾದರಿಯಾಗಿ ಅರ್ಧ ದಿವಸ ಅಥವಾ ದಿನ ಬಿಟ್ಟು ದಿನ ತರಗತಿಯನ್ನು ನಡೆಸುತ್ತವೆ ಆದರೆ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ನಡೆಯುವ ಶಿಶುವಿಹಾರಗಳನ್ನೂ ಸಹ ಪರಿಚಯಿಸಲಾಗಿದೆ. ಒಂಟಾರಿಯೋನಲ್ಲಿ, ಸೀನಿಯರ್ ಹಾಗು ಜೂನಿಯರ್ ಕಿಂಡರ್ ಗಾರ್ಟನ್ ಶಿಕ್ಷಣವನ್ನು "ಆರಂಭಿಕ ವರ್ಷಗಳು" ಎಂದು ಕರೆಯಲಾಗುತ್ತದೆ, ಇದರ ಆಯ್ಕೆಯು ಐಚ್ಚಿಕವಾಗಿದೆ. ಕಡ್ಡಾಯವಾದ ಶಿಕ್ಷಣವು ಒಂದನೇ ಗ್ರೇಡ್ ನಿಂದ ಆರಂಭವಾಗುತ್ತದೆ.

ಕ್ಯೂಬೆಕ್ನ ಪ್ರಾಂತ್ಯದಲ್ಲಿ, ಜೂನಿಯರ್ ಕಿಂಡರ್ ಗಾರ್ಟನ್ ನನ್ನು ಪ್ರಿಮಾರ್ಟೆನೆಲ್ಲೆ ಎಂದು ಕರೆಯಲಾಗುತ್ತದೆ. (ಇದು ಕಡ್ಡಾಯ ಶಿಕ್ಷಣವಲ್ಲ), ಇದಕ್ಕೆ ನಾಲ್ಕು ವರ್ಷ ವಯಸ್ಸಿನ ಮಕ್ಕಳು ದಾಖಲಾಗುತ್ತಾರೆ, ಇಲ್ಲಿನ ಸೀನಿಯರ್ ಕಿಂಡರ್ ಗಾರ್ಟನ್ ನನ್ನು ಮಾರ್ಟೆನೆಲ್ಲೆ ಎಂದು ಕರೆಯಲಾಗುತ್ತದೆ, ಐದು ವರ್ಷ ವಯಸ್ಸಿನ ಮಕ್ಕಳಿಗೆ ಇದರ ಶಿಕ್ಷಣವು ಕಡ್ಡಾಯವಾಗಿರುತ್ತದೆ, ಇದನ್ನು ಪ್ರಾಥಮಿಕ ಶಾಲೆಯೊಂದಿಗೆ ಒಂದುಗೂಡಿಸಲಾಗುತ್ತದೆ. ಒಂಟಾರಿಯೋ ಪ್ರಾಂತ್ಯದ ಫ್ರೆಂಚ್ ಶಾಲಾ ವ್ಯವಸ್ಥೆಯಲ್ಲಿ, ಜೂನಿಯರ್ ಕಿಂಡರ್ ಗಾರ್ಟನ್ ಹಾಗು ಸೀನಿಯರ್ ಕಿಂಡರ್ ಗಾರ್ಟನ್ ನನ್ನು ಮಾರ್ಟೆನೆಲ್ಲೆ ಎಂದು ಕರೆಯಲಾಗುತ್ತದೆ. ಜೊತೆಗೆ ಸೀನಿಯರ್ ಕಿಂಡರ್ ಗಾರ್ಟನ್ ನನ್ನು ಕೆಲವೊಂದು ಬಾರಿ ಜಾರ್ಡಿನ್ ಡ' ಎನ್ಫ್ಯಾಂಟ್ಸ್ ಎಂದು ಕರೆಯಲಾಗುತ್ತದೆ, ಇದು ಜರ್ಮನ್ ಪದ ಕಿಂಡರ್ ಗಾರ್ಟನ್ ನ ಒಂದು ಅನುವಾದಿತ ಸ್ವೀಕೃತಪದವಾಗಿದೆ.

ಪಶ್ಚಿಮ ಕೆನಡಾ ಹಾಗು ನ್ಯೂ ಫೌಂಡ್ ಲ್ಯಾಂಡ್ ಹಾಗು ಲಾಬ್ರಡಾರ್ ನಲ್ಲಿ, ಶಿಶುವಿಹಾರವು ಒಂದೇ ವರ್ಷದ ಅವಧಿಗಿರುತ್ತದೆ. ಆ ವರ್ಷದ ನಂತರ, ಮಗುವು ಒಂದನೇ ಗ್ರೇಡ್ ಗೆ ಕಾಲಿಡುತ್ತದೆ.

ನೋವ ಸ್ಕಾಟಿಯ ಪ್ರಾಂತ್ಯವು ಶಿಶುವಿಹಾರವನ್ನು ಪ್ರೈಮರಿ ಎಂದು ಸೂಚಿಸುತ್ತದೆ.

ಚೀನಾ[ಮೂಲವನ್ನು ಸಂಪಾದಿಸು]

ಚೀನಾದಲ್ಲಿ, ಶಿಶುವಿಹಾರಕ್ಕಿರುವ ಸಮಾನಾಂತರ ಪದವೆಂದರೆ 幼儿园 (ಯು ಎರ್ ಯೂಆನ್). ಇಲ್ಲಿನ ಮಕ್ಕಳು ಎರಡು ವರ್ಷದಲ್ಲಿ ಆರು ವರ್ಷ ತುಂಬುವವರೆಗೂ ಶಿಶುವಿಹಾರಕ್ಕೆ ಹೋಗುತ್ತಾರೆ. ಚೀನಾದ ಶಿಶುವಿಹಾರಗಳು ಸಾಮಾನ್ಯವಾಗಿ ಈ ಕೆಳಕಂಡ ಗ್ರೇಡ್ ಗಳನ್ನು ಹೊಂದಿರುತ್ತವೆ: ೧. ನರ್ಸರಿ/ಪ್ಲೇಗ್ರೂಪ್ (小班/ಜಿಯೊ ಬಾನ್): ೨-೩ ವರ್ಷ ವಯಸ್ಸಿನ ಮಕ್ಕಳಿಗೆ ೨. ಲೋಯರ್ ಕಿಂಡರ್ ಗಾರ್ಟನ್/LKG (中班/ಜ್ಹೊಂಗ್ ಬಾನ್): ೩-೪ ವರ್ಷ ವಯಸ್ಸಿನ ಮಕ್ಕಳಿಗೆ ೩. ಅಪ್ಪರ್ ಕಿಂಡರ್ ಗಾರ್ಟನ್/ ಉಕ್ಗ್ (大班/ಡಾ ಬಾನ್): ೪-೫ ವರ್ಷ ವಯಸ್ಸಿನ ಮಕ್ಕಳಿಗೆ ೪. ಶಾಲಾಪೂರ್ವ ಶಿಕ್ಷಣ (学前班/ಜುಯೆ ಕಿಯಾನ್ ಬಾನ್ ): ೫-೬ ವರ್ಷ ವಯಸ್ಸಿನ ಮಕ್ಕಳಿಗೆ

ಆದರೆ, ಕೆಲವು ಶಿಶುವಿಹಾರಗಳಲ್ಲಿ ಪ್ರಿಸ್ಕೂಲ್ ಗಳಿರುವುದಿಲ್ಲ (学前班/ಜುಯೆ ಕಿಯಾನ್ ಬಾನ್). ಮಕ್ಕಳಿಗೆ ನೀಡಲಾಗುವ ತರಬೇತಿಯನ್ನು ಪರಿಗಣಿಸಿ ಚೀನಾದ ಶಿಶುವಿಹಾರ ಶಿಕ್ಷಣವನ್ನು ವಿಶ್ವದಲ್ಲೇ ಅತ್ಯುತ್ತಮವೆಂದು ಹೇಳಲಾಗುತ್ತದೆ.

ಡೆನ್ಮಾರ್ಕ್‌[ಮೂಲವನ್ನು ಸಂಪಾದಿಸು]

ಡೆನ್ಮಾರ್ಕ್ ನಲ್ಲಿ ಸ್ಥಾಪಿತವಾಗಿರುವ ಮೂರರಲ್ಲಿ ಎರಡು ಭಾಗದಷ್ಟು ಶಿಶುಪಾಲನಾ ಸಂಸ್ಥೆಗಳು ಪುರಸಭೆಯ ಶಿಶುಪಾಲನ ಕೇಂದ್ರಗಳಾಗಿದ್ದರೆ ಮೂರನೇ ಒಂದು ಭಾಗದಷ್ಟು ಖಾಸಗಿ ಸಂಸ್ಥೆಗಳು ನಡೆಸುತ್ತವೆ. ಜೊತೆಗೆ ಇವುಗಳನ್ನು ಸಂಘಗಳು, ಪೋಷಕರು, ಅಥವಾ ಸ್ಥಳೀಯ ಆಡಳಿತ ವ್ಯವಸ್ಥೆಯೊಂದಿಗಿನ ವ್ಯಾಪಾರಿ ಒಪ್ಪಂದದೊಂದಿಗೆ ನಡೆಸಲಾಗುತ್ತದೆ. ಹಣಕಾಸು ಹಾಗು ವಿಷಯ ವಸ್ತು ಎರಡನ್ನೂ ಆಧರಿಸಿ, ಪುರಸಭೆ ಹಾಗು ಖಾಸಗಿ ಸಂಸ್ಥೆಗಳು ಒಂದೇ ರೀತಿಯಾದ ನಿಯಮಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸುತ್ತವೆ.

ಡೆನ್ಮಾರ್ಕ್ ವನದಲ್ಲಿ ಶಿಶುವಿಹಾರಗಳನ್ನು(ಆದಾಗ್ಯೂ ಇದು ಹೊಸತೇನೂ ಅಲ್ಲ) ನಡೆಸುವುದರಲ್ಲಿ ಪ್ರವರ್ತಕವೆಂದು ಪ್ರಶಂಸೆಗೆ ಪಾತ್ರವಾಗಿದೆ, ಇದರಲ್ಲಿ ಮಕ್ಕಳು ದಿನದ ಹೆಚ್ಚಿನ ಭಾಗ ನಿಸರ್ಗದೊಂದಿಗೆ ಕಾಲ ಕಳೆಯುತ್ತಾರೆ.

ಈಜಿಪ್ಟ್[ಮೂಲವನ್ನು ಸಂಪಾದಿಸು]

ಈಜಿಪ್ಟ್ ನಲ್ಲಿ, ನಾಲ್ಕರಿಂದ ಆರುವರ್ಷಗಳ ನಡುವಿನ ಮಕ್ಕಳು ಎರಡು ವರ್ಷಗಳ ಕಾಲ ಶಿಶುವಿಹಾರಕ್ಕೆ ಹೋಗಬಹುದು. (KG ೧ ಹಾಗು KG ೨).

ಫ್ರಾನ್ಸ್‌‌[ಮೂಲವನ್ನು ಸಂಪಾದಿಸು]

ಫ್ರಾನ್ಸ್ ನಲ್ಲಿ, ಪ್ರಿಸ್ಕೂಲ್ ನ್ನು ಎಕೊಲೆ ಮಾಟೆರ್ನೆಲ್ಲೆ ಎಂದು ಕರೆಯಲಾಗುತ್ತದೆ; (ಫ್ರೆಂಚ್ ಭಾಷೆಯಲ್ಲಿ "ನರ್ಸರಿ ಶಾಲೆ"). ಸರ್ಕಾರವು ನಡೆಸುವ ಉಚಿತ ಮಾಟೆರ್ನೆಲ್ಲೆ ಶಾಲೆಗಳು ರಾಷ್ಟ್ರಾದ್ಯಂತ ಕಂಡು ಬರುತ್ತವೆ, ಇದರಲ್ಲಿ ಎರಡರಿಂದ ಐದು ವರ್ಷದ ಮಕ್ಕಳು ಕಲಿಯುತ್ತಾರೆ (ಆದಾಗ್ಯೂ ಹಲವು ಸ್ಥಳಗಳಲ್ಲಿ, ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದಾಖಲಾತಿ ದೊರೆಯದಿರಬಹುದು). ವಯಸ್ಸಿನ ಆಧಾರದ ಮೇಲೆ ಗ್ರಾಂಡೆ ವಿಭಾಗ (GS: ಐದು ವರ್ಷ ವಯಸ್ಸಿನವರು), ಮೊಯೇನ್ನೇ ವಿಭಾಗ (MS: ನಾಲ್ಕು ವರ್ಷ ವಯಸ್ಸಿನವರು), ಪಟೀಟ್ ವಿಭಾಗ (PS: ಮೂರು ವರ್ಷ ವಯಸ್ಸಿನವರು) ಹಾಗು ಟೌಟೆ ಪಟೀಟ್ ವಿಭಾಗ (TPS: ಎರಡು ವರ್ಷದ ವಯಸ್ಸಿನವರು). ಇದು ಕಡ್ಡಾಯವಾಗಿರದಿದ್ದರೂ, ಮೂರರಿಂದ ಐದು ವರ್ಷದ ಹೆಚ್ಚುಕಡಿಮೆ ೧೦೦%ನಷ್ಟು ಮಕ್ಕಳು ಇಲ್ಲಿಗೆ ದಾಖಲಾಗುತ್ತಾರೆ. ಇದು ಪುರಸಭೆಗಳ ನಿಯಂತ್ರಣದಲ್ಲಿರುತ್ತವೆ. (ಪ್ರಾಥಮಿಕ ಶಾಲೆಯ ಮಾದರಿ).

ಜರ್ಮನಿ[ಮೂಲವನ್ನು ಸಂಪಾದಿಸು]

ಚಿತ್ರ:Kindergartenfrankfurt.jpg
ಒಂದು ಜರ್ಮನ್ ಶಿಶುವಿಹಾರ ತರಗತಿ.

ಜರ್ಮನಿಯ ಪ್ರಿಸ್ಕೂಲನ್ನು ಒಂದು ಕಿಂಡರ್ ಗಾರ್ಟನ್ (ಶಿಶುವಿಹಾರ)ಎಂದು ಕರೆಯಲಾಗುತ್ತದೆ. (ಬಹುವಚನ Kindergärten ) ಅಥವಾ ಕಿಟ) (ಕಿ ನ್ಡರ್ ಗೆಸ್ಸ್ಟಟ್ಟೆ ಯ ಸಂಕ್ಷಿಪ್ತ ರೂಪ), ಇದು 'ಮಕ್ಕಳ ಶಿಶುಪಾಲನಾ ಕೇಂದ್ರ' ಎಂಬ ಅರ್ಥವನ್ನು ನೀಡುತ್ತದೆ. ಮೂರರಿಂದ ಆರು ವರ್ಷಗಳ ನಡುವಿನ ಮಕ್ಕಳು ಕಿಂಡರ್ ಗಾರ್ಟನ್ ಗೆ ದಾಖಲಾಗುತ್ತವೆ, ಇದು ಶಾಲಾ ವ್ಯವಸ್ಥೆಯ ಭಾಗವಾಗಿಲ್ಲ. ಇದನ್ನು ಸಾಮಾನ್ಯವಾಗಿ ನಗರ ಅಥವಾ ಪೌರಾಡಳಿತ, ಚರ್ಚುಗಳು, ಅಥವಾ ನೊಂದಾಯಿತ ಸಂಘಗಳು ನಡೆಸುತ್ತವೆ, ಇದರಲ್ಲಿ ಹಲವು ಸಂಸ್ಥೆಗಳು ಪ್ರಾತಿನಿಧಿಕವಾಗಿ ಕೆಲವು ನಿರ್ದಿಷ್ಟ ಶೈಕ್ಷಣಿಕ ಮಾದರಿಯನ್ನು ಅನುಸರಿಸುತ್ತವೆ, ಉದಾಹರಣೆಗೆ ಮಾಂಟೆಸ್ಸರಿ ಮಾದರಿ ಅಥವಾ ರೆಗ್ಗಿಯೋ ಎಮೀಲಿಯಾ. ವನದಲ್ಲಿ ಶಿಶುವಿಹಾರದ ಮಾದರಿಗಳೂ ಸಹ ಉತ್ತಮವಾಗಿ ಸ್ಥಾಪಿತವಾಗಿವೆ. ಶಿಶುವಿಹಾರಕ್ಕೆ ಹಾಜರಾಗುವುದು ಕಡ್ದಾಯವೂ ಅಲ್ಲ ಉಚಿತವಾಗಿ ಅವಕಾಶವನ್ನು ಕಲ್ಪಿಸಲಾಗಿರುವುದಿಲ್ಲ, ಆದರೆ ಇದು ಪಾರ್ಶ್ವವಾಗಿ ಅಥವಾ ಪೂರ್ತಿಯಾಗಿ ಸ್ಥಳೀಯ ಆಡಳಿತ ಹಾಗು ಪೋಷಕರ ಆದಾಯವನ್ನು ಅವಲಂಬಿಸಿ ಅನುದಾನಿತವಾಗಿರುತ್ತದೆ.

ಕಿಂಡರ್ ಗಾರ್ಟನ್ ಬೆಳಿಗ್ಗೆ ಏಳು ಗಂಟೆಯಿಂದ ಸಾಯಂಕಾಲ ಐದು ಗಂಟೆಯವರೆಗೆ ಅಥವಾ ಅದಕ್ಕೂ ಹೆಚ್ಚಿನ ಅವಧಿ ತೆರೆದಿರುತ್ತದೆ. ಆರು ತಿಂಗಳು(ಅಥವಾ ಅದಕ್ಕೂ ಕಡಿಮೆ ವಯಸ್ಸಿನ ಮಕ್ಕಳು) ಹಾಗು ಮೂರು ವರ್ಷದ ಮಕ್ಕಳಿಗೆ ಶಿಶುಧಾಮ ಎಂಬ ಅರ್ಥವನ್ನು ನೀಡುವ ಕಿಂಡರ್ ಕ್ರಿಪ್ಪೆ ಯನ್ನೂ ಸಹ ನಡೆಸುತ್ತದೆ, ಹಾಗು ಮಧ್ಯಾಹ್ನದ ಹೊರ್ಟ್ ನ್ನು ಆರರಿಂದ ಹತ್ತು ವರ್ಷ ವಯಸ್ಸಿನ ಶಾಲಾ ಮಕ್ಕಳಿಗೆ ಅವರ ಶಾಲೆಯ ನಂತರ ನಡೆಸುತ್ತದೆ. (ಸಾಮಾನ್ಯವಾಗಿ ಇದು ಪ್ರಾಥಮಿಕ ಶಾಲಾ ಮಕ್ಕಳಿಗೆ ಅನ್ವಯಿಸುತ್ತದೆ). ನರ್ಸರಿ ತರಗತಿಗಳಲ್ಲಿ ಶಿಶುಪಾಲನಾ ದಾದಿಯರಿರುತ್ತಾರೆ. (ಇವರನ್ನು ತಗೆಸ್ಮುಟ್ಟೆರ್, ಬಹುವಚನTagesmütter - ವಿಧ್ಯುಕ್ತವಾಗಿ, ಇದರ ನಿರ್ಲಿಂಗಿ ರೂಪವೆಂದರೆ ತಗೆಸ್ಪ್ ಫ್ಲೆಗೆ ಪರ್ಸನ್(ಎನ್)' . ಇವರುಗಳು ಯಾವುದೇ ಶಾಲಾ ಪೂರ್ವದ ಸಂಸ್ಥೆಯಿಂದ ಪ್ರತ್ಯೇಕವಾಗಿ ಮನೆಗಳಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ ಹಾಗು ಮೂರರಿಂದ ಐದು ವರ್ಷದ ಮಕ್ಕಳನ್ನು ಅದರಲ್ಲೂ ವಿಶೇಷವಾಗಿ ಮೂರು ವರ್ಷ ವಯಸ್ಸಿನ ಮಕ್ಕಳ ಪಾಲನೆ ಮಾಡುತ್ತಾರೆ. ಈ ದಾದಿಯರಿಗೆ ಸ್ಥಳೀಯ ಆಡಳಿತದ ನೆರವೂ ದೊರಕುತ್ತದೆ; ಹೀಗಾಗಿ ಅವರು ಆಡಳಿತದ ಮೇಲ್ವಿಚಾರಣೆಯಲ್ಲಿರುತ್ತಾರೆ.

ಪ್ರಿಸ್ಕೂಲ್ ಎಂಬ ಅರ್ಥವನ್ನು ನೀಡುವ ವೊರ್ಸ್ಚುಲೆ ಎಂಬ ಪದವು ಶಿಶುವಿಹಾರ ದ ಶಿಕ್ಷಣ ಹಾಗು ಸಾಮಾನ್ಯವಾಗಿ ಪ್ರಾಥಮಿಕ ಶಾಲೆಯೊಂದಿಗೆ ಸಂಬಂಧಿಸಿದ ಕಡ್ಡಾಯ ತರಗತಿಗೆ ಬಳಕೆಯಾಗುತ್ತದೆ. ಎರಡೂ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಪ್ರತಿ ಜರ್ಮನ್ ರಾಜ್ಯನಿರ್ವಹಿಸುತ್ತವೆ. ಸ್ಚುಲ್ ಕಿಂಡರ್ ಗಾರ್ಟನ್ ಎಂಬುದು ವೊರ್ ಸ್ಕುಲೆಯ ಒಂದು ಮಾದರಿಯಾಗಿದೆ.

ಹಾಂಗ್ ಕಾಂಗ್[ಮೂಲವನ್ನು ಸಂಪಾದಿಸು]

ಹಾಂಗ್ ಕಾಂಗ್ ನಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ವದ ಸೇವೆಗಳನ್ನು ಹಾಗು ಚಿಕ್ಕ ಮಕ್ಕಳ ಪಾಲನೆಯನ್ನು ಶಿಶುವಿಹಾರಗಳು ಹಾಗು ಶಿಶು ಪಾಲನಾ ಕೇಂದ್ರಗಳು ಮಾಡುತ್ತವೆ. ಶೈಕ್ಷಣಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಶಿಶುವಿಹಾರಗಳು, ಮೂರರಿಂದ ಆರು ವರ್ಷಗಳ ಮಕ್ಕಳಿಗೆ ತಮ್ಮ ಸೇವೆಯನ್ನು ಒದಗಿಸುತ್ತವೆ. ಮತ್ತೊಂದು ಕಡೆಯಲ್ಲಿ ಶಿಶುಪಾಲನಾ ಕೇಂದ್ರಗಳು ಸಾರ್ವಜನಿಕ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುತ್ತವೆ. ಜೊತೆಗೆ ನರ್ಸರಿಗಳು, ಎರಡರಿಂದ ಮೂರು ವರ್ಷದ ಮಕ್ಕಳಿಗೆ ಆಹಾರ ಒದಗಿಸುವುದು, ಹಾಗು ಶಿಶುಧಾಮಗಳು ಆಗತಾನೆ ಹುಟ್ಟಿದ ಮಕ್ಕಳಿಂದ ಹಿಡಿದು ಎರಡು ವರ್ಷದ ತನಕ ಪಾಲನೆ ಮಾಡುತ್ತವೆ.

ಪ್ರಸಕ್ತದಲ್ಲಿ, ಹೆಚ್ಚಿನ ಶಿಶುವಿಹಾರಗಳು ಅಪ್ಪರ್, ಲೋಯರ್ ಕಿಂಡರ್ ಗಾರ್ಟನ್ ತರಗತಿಗಳು ಹಾಗು ನರ್ಸರಿ ತರಗತಿಗಳನ್ನು ಅರ್ಧ ದಿವಸ ನಡೆಸುತ್ತವೆ. ಕೆಲವು ಶಿಶುವಿಹಾರಗಳು ಪೂರ್ಣಕಾಲಿಕ ತರಗತಿಗಳನ್ನೂ ಸಹ ನಡೆಸುತ್ತವೆ. ಶಿಶುಪಾಲನಾ ಕೇಂದ್ರಗಳೂ ಸಹ ಪೂರ್ತಿ ದಿವಸ ಹಾಗು ಅರ್ಧ ದಿವಸದ ತಮ್ಮ ಸೇವೆಯನ್ನು ಒದಗಿಸುತ್ತವೆ ಜೊತೆಗೆ ಹೆಚ್ಚಿನ ಕೇಂದ್ರಗಳು ಪೂರ್ಣ ದಿವಸದ ಸೇವೆಯನ್ನು ಒದಗಿಸುತ್ತದೆ.

ಹಾಂಗ್ ಕಾಂಗ್ ನ ಪ್ರಾಥಮಿಕ ಪೂರ್ವ ಶಿಕ್ಷಣದ ಮುಖ್ಯ ಉದ್ದೇಶವೆಂದರೆ ಮಕ್ಕಳಿಗೆ ಒಂದು ವಿನೋದ ಹಾಗು ಸಂತೋಷಕರ ಕಲಿಕೆಯ ವಾತಾವರಣವನ್ನು ಒದಗಿಸಿ ಮಗುವಿನ ಸಮತೋಲನದ ಬೆಳವಣಿಗೆಗೆ ಬೇಕಾದ ವಿವಿಧ ಅಂಶಗಳಿಗೆ ಉತ್ತೇಜನ ನೀಡುವುದು; ಉದಾಹರಣೆಗೆ ಅವರ ದೈಹಿಕ, ಬೌದ್ಧಿಕ, ಭಾಷೆ, ಸಮಾಜ, ಭಾವನಾತ್ಮಕ ಹಾಗು ಸದಭಿರುಚಿಯ ಅಂಶಗಳಿಗೆ ಒತ್ತು ನೀಡುವುದೇ ಆಗಿದೆ.

ಶಿಶುವಿಹಾರಗಳಲ್ಲಿ ಅರ್ಹತೆ ನಿರ್ಧಾರದ ಸಂಸ್ಕಾರ ಬೆಳೆಸಲು ಹಾಗು ಸಾರ್ವಜನಿಕರು ಪ್ರಾಥಮಿಕ ಪೂರ್ವ ಶಿಕ್ಷಣದ ಗುಣಮಟ್ಟ ಹಾಗು ದರ್ಜೆಯನ್ನು ನಿರ್ಣಯಿಸಲು ಮಾಹಿತಿಯನ್ನು ಒದಗಿಸಲು ಶೈಕ್ಷಣಿಕ ಇಲಾಖೆಯು ಹಾಂಗ್ ಕಾಂಗ್ ನಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ ಸಂಸ್ಥೆಗಳಿಗೆ ಸಾಧನಾ ಸೂಚಕಗಳನ್ನು ಅಭಿವೃದ್ಧಿಪಡಿಸಿದೆ. ೨೦೦೦/೦೧ರ ಶೈಕ್ಷಣಿಕ ವರ್ಷದಿಂದ ಆರಂಭಗೊಂಡ, ಕ್ವಾಲಿಟಿ ಅಶುರೆನ್ಸ್ ಇನ್ಸ್ಪೆಕ್ಷನ್ ನ್ನು ಆರಂಭಿಕ ಬಾಲ್ಯ ಶಿಕ್ಷಣದ ಬೆಳವಣಿಗೆಯನ್ನು ಉತ್ತೇಜಿಸಲು ಜಾರಿಗೆ ತರಲಾಯಿತು.

ಹಂಗೇರಿ[ಮೂಲವನ್ನು ಸಂಪಾದಿಸು]

ಹೊರಾಂಗಣ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಒಂದು ಹಂಗೇರಿಯನ್ ಶಾಲಾಪೂರ್ವ ತರಗತಿ.

ಆರಂಭಿಕ ಬಾಲ್ಯ ಶಿಕ್ಷಣದ ಸಂಸ್ಥೆಗಳನ್ನು ಆರಂಭಿಸಿದ ಮೊದಲ ರಾಷ್ಟ್ರವಾದ ಹಂಗೇರಿ ಯಲ್ಲಿ, ಶೈಕ್ಷಣಿಕ ಸಂಸ್ಥೆಗಳು ಮಕ್ಕಳು ಹಾಗು ಶಿಕ್ಷಕರು ಇಬ್ಬರಿಗೂ ಬಹಳ ಪ್ರಯೋಜನಕಾರಿಯಾಗಿದೆ. ಈ ವೃತ್ತಿಯು ಕೇವಲ ಮಹಿಳೆಯರಿಗೆ ಮೀಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ನರ್ಸರಿ ಶಿಕ್ಷಕರೆಂಬ ಮನ್ನಣೆ ದೊರೆತ ಮೇಲೆ ಮಹಿಳೆಯರು ಅಸಾಧಾರಣವಾದ ಗಾಯನ ಸಾಮರ್ಥ್ಯ ಹಾಗು ಪದ್ಯಗಳನ್ನು ಸ್ಮರಿಸಿ ಹೇಳುವ ಸಾಮರ್ಥ್ಯಗಳನ್ನು ಪ್ರದರ್ಶಿಸಬೇಕು.[ಸೂಕ್ತ ಉಲ್ಲೇಖನ ಬೇಕು] ಇದರ ಪರಿಣಾಮವಾಗಿ, ಈ ವೃತ್ತಿಯು ಬಹಳ ಸ್ಪರ್ಧಾತ್ಮಕವಾಗಿರುತ್ತದೆ.

ಮೂರರಿಂದ ಆರು ವರ್ಷ ವಯಸ್ಸಿನ ಮಕ್ಕಳು ಪ್ರಿಸ್ಕೂಲ್ ಗೆ ಹೋಗುತ್ತಾರೆ (ಇದನ್ನು ಹಂಗೇರಿಯನ್ ಭಾಷೆಯಲ್ಲಿ ಒವೋಡ ಎಂದು ಕರೆಯಲಾಗುತ್ತದೆ, ಅಥವಾ ಪಾಲನಾ ಸ್ಥಳ ಎಂಬ ಅರ್ಥವನ್ನು ನೀಡುತ್ತದೆ). ಒವೋಡಕ್ಕೆ ಮಕ್ಕಳು ಬೆಳಗ್ಗೆ ಏಳು ಗಂಟೆಗೆ ಬರುತ್ತಾರೆ. ನಂತರ ಅವರ ಪೋಷಕರು ಅವರನ್ನು ಮಧ್ಯಾಹ್ನ ಮೂರು ಗಂಟೆಗೆ ವಾಪಸ್ಸು ಕರೆದುಕೊಂಡು ಹೋಗುತ್ತಾರೆ, ಆದಾಗ್ಯೂ ಪೋಷಕರು ಆ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಬೇಕಿದ್ದರೆ ಅವರು ಮಧ್ಯಾಹ್ನ ಮೂರು ಗಂಟೆ ನಂತರವೂ ತಮ್ಮ ಮಕ್ಕಳನ್ನು ಅಲ್ಲೇ ಬಿಡಬಹುದು.

ಹಂಗೇರಿಯ ಒವೋಡದಲ್ಲಿ ಮಕ್ಕಳ ಕಲಾತ್ಮಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ, ಮಕ್ಕಳನ್ನು ೧೯ನೇ ಶತಮಾನದ ಪದ್ಯಗಳಿಂದ ಆಯ್ದ ಭಾಗಗಳನ್ನು, ಜಾನಪದ ಹಾಡುಗಳನ್ನು ಹಾಗು ಎಲ್ಲ ರೀತಿಯ ಸಂಗೀತ ವಾದ್ಯಗಳನ್ನು ಹೇಳಿಕೊಡಲಾಗುತ್ತದೆ. ಹಂಗೇರಿಯನ್ ಒವೋಡ ಶಿಕ್ಷಣದ ಮಾದರಿಯನ್ನು ವಿಶ್ವದ ಎಲ್ಲೆಡೆ ಇರುವ ಹಂಗೇರಿಯನ್ ಸಮುದಾಯಗಳು ಅಳವಡಿಸಿಕೊಂಡಿವೆ. ಭಾಷೆ ಹಾಗು ಜಾನಪದ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಅಮೆರಿಕ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯ, ಕೆನಡಾ, ಅರ್ಜೆಂಟೀನ, ಬ್ರೆಜಿಲ್ ಹಾಗು ವೆನಿಜುವೆಲದಂತಹ ರಾಷ್ಟ್ರಗಳಲ್ಲಿ ಒಂದು ಗಮನಾರ್ಹ ಸ್ಥಾನ-ಮಾನ ಗಳಿಸಿದೆ.

ಭಾರತ[ಮೂಲವನ್ನು ಸಂಪಾದಿಸು]

ಭಾರತದಲ್ಲಿ, ಪ್ರಿಸ್ಕೂಲ್ ನ್ನು ಮೂರು ಹಂತಗಳಲ್ಲಿ ವಿಭಾಗಿಸಲಾಗಿದೆ - ಪ್ಲೇಗ್ರೂಪ್, ಜೂನಿಯರ್ ಕಿಂಡರ್ ಗಾರ್ಟನ್ (Jr. KG) ಅಥವಾ ಲೋಯರ್ ಕಿಂಡರ್ ಗಾರ್ಟನ್ (LKG) ಹಾಗು ಸೀನಿಯರ್ ಕಿಂಡರ್ ಗಾರ್ಟನ್ (Sr. KG) ಅಥವಾ ಅಪ್ಪರ್ ಕಿಂಡರ್ ಗಾರ್ಟನ್ (UKG). ಮಾದರಿಯಾಗಿ, ಪ್ಲೇಗ್ರೂಪ್ ನಲ್ಲಿ ಒಂದೂವರೆ ವರ್ಷ ವಯಸ್ಸಿನಿಂದ ಹಿಡಿದು ಎರಡೂವರೆ ವರ್ಷ ವಯಸ್ಸಿನ ಮಕ್ಕಳಿರುತ್ತಾರೆ. Jr. KG ತರಗತಿಯು ಮೂರೂವರೆ ವರ್ಷ ವಯಸ್ಸಿನಿಂದ ನಾಲ್ಕೂವರೆ ವರ್ಷ ವಯಸ್ಸಿನ ಮಕ್ಕಳನ್ನು ಒಳಗೊಂಡಿರುತ್ತದೆ, ಹಾಗು Sr. KG ತರಗತಿಯು ನಾಲ್ಕೂವರೆ ವರ್ಷ ವಯಸ್ಸಿನಿಂದ ಹಿಡಿದು ಐದೂವರೆ ವರ್ಷ ವಯಸ್ಸಿನ ಮಕ್ಕಳನ್ನು ಒಳಗೊಂಡಿರುತ್ತದೆ.

ಶಿಶುವಿಹಾರದಲ್ಲಿ ಚಿಕ್ಕ ಮಕ್ಕಳು ಆಡುವುದರೊಂದಿಗೆ ಪಾಠವನ್ನು ಕಲಿಯುತ್ತಾರೆ ಜೊತೆಗೆ ಇತರ ಮಕ್ಕಳು ಹಾಗು ಶಿಕ್ಷಕರೊಂದಿಗೆ ಬೆರೆಯುವುದನ್ನೂ ಸಹ ಕಲಿಯುತ್ತಾರೆ. ಈ ತರಗತಿಯಲ್ಲಿ ದೊಡ್ಡವರೂ ಸಹ ಕಲಿಯಬಹುದಾಗಿದೆ; ಅವರು ಮಕ್ಕಳನ್ನು ಗಮನಿಸುವುದರ ಜೊತೆಗೆ ಅವರ ಚಟುವಟಿಕೆಯಲ್ಲಿ ಭಾಗಿಯಾಗಬಹುದು. ಮಾನವ ಸಂಬಂಧಗಳ ಅಧ್ಯಯನಕ್ಕೆ ಒಂದು ಪ್ರಯೋಗಶಾಲೆಯಾಗಿಯೂ ಸಹ ಇದು ಕಾರ್ಯ ನಿರ್ವಹಿಸುತ್ತದೆ.

ಮಾನವ ಸಂಬಂಧಗಳ ಅಧ್ಯಯನಕ್ಕೆ ಒಂದು ಪ್ರಯೋಗಶಾಲೆಯಾಗಿ ಕಾರ್ಯ ನಿರ್ವಹಿಸುವ ಶಿಶುವಿಹಾರದ ಮೌಲ್ಯಗಳು ಪಾರ್ಶ್ವವಾಗಿ, ಮಕ್ಕಳಿಗೆ ಅಲ್ಲಿ ಆಡುವ ಹಾಗು ಇತರರೊಂದಿಗೆ ಬೆರೆಯುವ ಅವಕಾಶಗಳೊಂದಿಗೆ ಅವಲಂಬಿತವಾಗಿದೆ.

ಶಿಶುವಿಹಾರ ಶಾಲೆಯ ಮುಖ್ಯ ಧ್ಯೇಯಗಳೆಂದರೆ:

 • ಸ್ನಾಯುಗಳ ಸಾಕಷ್ಟು ಹೊಂದಾಣಿಕೆ ಹಾಗು ಮಗುವಿನ ಮೂಲ ಚಲನಾ ಸಾಮರ್ಥ್ಯದೊಂದಿಗೆ ಒಂದು ಆರೋಗ್ಯಪೂರ್ಣ ದೈಹಿಕತೆ ಬೆಳೆಸಿಕೊಳ್ಳುವುದು.
 • ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು; ಹಾಗು ವೈಯಕ್ತಿಕವಾಗಿ ಬೇಕಾದ ಅವಶ್ಯಕ ಮೂಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಉದಾಹರಣೆಗೆ ಮಕ್ಕಳು ತಮ್ಮನ್ನು ತಾವೇ ದಿನನಿತ್ಯದ ಕೆಲಸಗಳಿಗೆ ಅಣಿಗೊಳಿಸಿಕೊಳ್ಳುವುದು, ಶೌಚಕ್ಕೆ ಹೋಗುವುದು ಹಾಗು ಆಹಾರದ ಹವ್ಯಾಸಗಳು.
 • ಮಗುವಿಗೆ ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು, ಅರ್ಥಮಾಡಿಕೊಳ್ಳಲು ಹಾಗು ತಮ್ಮ ಭಾವನೆ ಹಾಗು ಭಾವಗಳಿಗೆ ಮಾರ್ಗದರ್ಶನ ನೀಡುವುದರ ಮೂಲಕ ಭಾವನಾತ್ಮಕ ಪರಿಪಕ್ವತೆಯನ್ನು ಬೆಳಸುವುದು.
 • ಉತ್ತಮವಾದ ಸಾಮಾಜಿಕ ವರ್ತನೆಗಳನ್ನು ಬೆಳೆಸುವುದರ ಜೊತೆಗೆ ಆರೋಗ್ಯಕರ ವಾತಾವರಣದಲ್ಲಿ ಭಾಗಿಯಾಗುವುದನ್ನು ಉತ್ತೇಜಿಸುವುದು.
 • ರಸಾಭಿಜ್ಞತೆಯ ಆಸ್ವಾದನೆಗೆ ಉತ್ತೇಜನ (ಕಲೆ, ಸಂಗೀತ, ಸೌಂದರ್ಯ, ಮುಂತಾದವು)
 • ತನ್ನ ಪ್ರಸಕ್ತ ವಾತಾವರಣಕ್ಕೆ ಸಂಬಂಧಿಸಿದಂತೆ ಮಗುವಿನ ಬೌದ್ಧಿಕ ಕುತೂಹಲಗಳನ್ನು ಉತ್ತೇಜಿಸುವುದು.
 • ಮಗುವಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುವ ಮೂಲಕ ಮಗುವಿನ ಸ್ವಾತಂತ್ರ್ಯ ಹಾಗು ಸೃಜನಾತ್ಮಕತೆಯನ್ನು ಉತ್ತೇಜಿಸುವುದು.'

"ಶಾಲೆಯೆಂಬುದು ಮಗುವಿನ ಅಭಿವೃದ್ಧಿಗೆ ಇರುವ ಒಂದು ಅವಕಾಶ. ಪ್ರತಿಯೊಂದು ಮಗುವಿಗೂ ಮುಕ್ತವಾಗಿ ಬೆಳವಣಿಗೆ ಹೊಂದುವ ಸ್ವಾತಂತ್ರ್ಯವಿದೆ."

ಹಲವು ಸಂದರ್ಭಗಳಲ್ಲಿ ಪ್ರಿಸ್ಕೂಲ್ ಒಂದು ಖಾಸಗಿ ಶಾಲೆಯಾಗಿ ಕಾರ್ಯ ನಿರ್ವಹಿಸುತ್ತವೆ. ಎರಡು ವರ್ಷ ವಯಸ್ಸಿನ ಮಕ್ಕಳನ್ನೂ ಸಹ ಒಂದು ವಿಶೇಷವಾದ ಟಾಡ್ಲರ್/ನರ್ಸರಿ ಗುಂಪಿಗೆ ಸೇರಿಸಬಹುದು. ಇದನ್ನು ಶಿಶುವಿಹಾರದ ಒಂದು ಭಾಗವಾಗಿ ನಡೆಸಲಾಗುತ್ತದೆ.

ಸೀನಿಯರ್ ಕಿಂಡರ್ ಗಾರ್ಟನ್ ನ ನಂತರ, ಮಗುವು ಪ್ರಾಥಮಿಕ ಶಾಲೆಯ ಮೊದಲನೇ ತರಗತಿ ಅಥವಾ ಮೊದಲನೇ ಸ್ಟ್ಯಾಂಡರ್ಡ್ ಗೆ ಕಾಲಿಡುತ್ತದೆ. ಸಾಮಾನ್ಯವಾಗಿ ಶಿಶುವಿಹಾರಗಳು ನಿಯಮಿತ ಶಾಲೆಗಳ ಒಂದು ಅವಿಭಾಜ್ಯ ಅಂಗವಾಗಿರುತ್ತದೆ, ಆದಾಗ್ಯೂ ಕೆಲವೊಂದು ಬಾರಿ ಒಂದು ಸ್ವತಂತ್ರ ಅಂಗವಾಗಿರುತ್ತದೆ. ಅದು ಸಾಮಾನ್ಯವಾಗಿ ದೊಡ್ಡ ಶ್ರೇಣಿಯ ಒಂದು ವಿಭಾಗವಾಗಿರುತ್ತದೆ.

ಇಸ್ರೇಲ್‌[ಮೂಲವನ್ನು ಸಂಪಾದಿಸು]

ಇಸ್ರೇಲ್ ನಲ್ಲಿ, ಎರಡು ವರ್ಗಗಳಿವೆ, ಖಾಸಗಿ ಶಿಕ್ಷಣ ಹಾಗು ಸರ್ಕಾರ ಅನುದಾನಿತ ಶಿಕ್ಷಣ. ಐದು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಶಿಶುವಿಹಾರದ ಹಾಜರಾತಿಯೂ ಕಡ್ಡಾಯವಾಗಿದೆ. ಖಾಸಗಿ ಶಿಶುವಿಹಾರಗಳನ್ನು ಶಿಕ್ಷಣ ಇಲಾಖೆಯು ಮೇಲ್ವಿಚಾರಣೆ ಮಾಡುತ್ತದೆ ಹಾಗು ಮೂರು ತಿಂಗಳಿಂದ ಹಿಡಿದು ಐದು ವರ್ಷ ವಯಸ್ಸಿನ ತನಕವೂ ಮಕ್ಕಳಿಗೆ ಆಹಾರವನ್ನು ಪೂರೈಸುತ್ತದೆ. ಸರ್ಕಾರಿ ಶಿಶುವಿಹಾರಗಳನ್ನು ನಾಲ್ಕು ವರ್ಷ ತರಬೇತಿ ಪಡೆದ ಶಿಕ್ಷಕರು ನಡೆಸುತ್ತಾರೆ. ಮೂರರಿಂದ ಆರು ವರ್ಷ ವಯಸ್ಸಿನ ಮಕ್ಕಳಿಗೆ ಆಹಾರವನ್ನು ಒದಗಿಸಿ ಪಾಲನೆ ಮಾಡುತ್ತಾರೆ; ೩–೪ (ಟ್ರೋಮ್ ಟ್ರೋಮ್ ಹೊವ - ಪ್ರಿ ಪ್ರಿ ಮ್ಯಾನ್ಡೇಟರಿ), ೪-೫ (ಟ್ರೋಮ್ ಹೊವ - ಪ್ರಿ ಮ್ಯಾಂಡೆಟರಿ), ೫-೬ (ಹೊವ - ಮ್ಯಾಂಡೆಟರಿ). ಹೊವ ವರ್ಷ (೫-೬) ಮುಗಿದ ನಂತರ ಮಗುವು ಪ್ರಾಥಮಿಕ ಶಾಲೆಯೆಡೆಗೆ ತನ್ನ ಪಯಣ ಆರಂಭಿಸುತ್ತದೆ ಅಥವಾ ಮಾನಸಿಕವಾಗಿ ಹಾಗು ಪ್ರಾಥಮಿಕ ಶಾಲೆಯ ಪಾಠವನ್ನು ಗ್ರಹಿಸಲು ಸಾಕಷ್ಟು ತಯಾರಾಗಿರದಿದ್ದಾಗ ಮತ್ತೊಂದು ಹೊಸ ವರ್ಷ ಕಲಿಯಬೇಕಾಗುತ್ತದೆ.

ಜಪಾನ್‌[ಮೂಲವನ್ನು ಸಂಪಾದಿಸು]

ವಾರ್ಷಿಕ ಕ್ರೀಡಾ ದಿನಾಚರಣೆಯಲ್ಲಿ ಪಾಲ್ಗೊಂಡಿರುವ ಜಪಾನಿನ ಶಿಶುವಿಹಾರದ ಮಕ್ಕಳು.

ಬಾಲ್ಯ ಶಿಕ್ಷಣವು ಮನೆಯಲ್ಲಿ ಆರಂಭವಾಗುತ್ತದೆ, ಜೊತೆಗೆ ತಾಯಂದಿರು & ತಂದೆಯರಿಗೆ ತಮ್ಮ ಮಕ್ಕಳಿಗೆ ಪ್ರಿಸ್ಕೂಲ್ ನ ಪಾಠಗಳನ್ನು ಹೇಳಿಕೊಡಲು ಹಲವಾರು ಪುಸ್ತಕಗಳು ಹಾಗು ದೂರದರ್ಶನ ಕಾರ್ಯಕ್ರಮಗಳಿವೆ, ಇದರ ಮೂಲಕ ಮಗು ಹಾಗು ಪೋಷಕರು ಪರಿಣಾಮಕಾರಿಯಾಗಿ ಕಲಿಯುತ್ತಾರೆ. ಮನೆಯಲ್ಲಿನ ತರಬೇತಿಯಲ್ಲಿ ಪಾಠ ಹೇಳಿಕೊಡುವ ವಿಧಾನ, ಸರಿಯಾದ ಸಾಮಾಜಿಕ ನಡವಳಿಕೆ, ಹಾಗು ವ್ಯವಸ್ಥಿತ ಆಟ, ಆದಾಗ್ಯೂ ಮಾತನಾಡುವ ಹಾಗು ಸಂಖ್ಯಾ ಪರಿಣತಿಯು ಸಹ ಜನಪ್ರಿಯವಾಗಿದೆ. ಪೋಷಕರು ಮಕ್ಕಳ ಆರಂಭಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಹಾಗು ತಮ್ಮ ಮಕ್ಕಳನ್ನು ಪ್ರಿಸ್ಕೂಲ್ ಗಳಲ್ಲಿ ಸಾಧಾರಣವಾಗಿ ದಾಖಲು ಮಾಡುತ್ತಾರೆ.

ಶಿಶುವಿಹಾರಗಳಲ್ಲಿ (ಯೋಚಿಯೆನ್ 幼稚園), ಮುಖ್ಯವಾಗಿ ಜೂನಿಯರ್ ಕಾಲೇಜಿನಿಂದ ಪದವಿ ಪಡೆದ ವಿದ್ಯಾರ್ಥಿನಿಯರು ಶಿಕ್ಷಕಿಯಾಗಿರುತ್ತಾರೆ, ಇವರು ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿರುತ್ತಾರೆ, ಆದರೆ ಇವರು ಅಧಿಕೃತವಾದ ಶಿಕ್ಷಣ ವ್ಯವಸ್ಥೆಯ ಭಾಗವಾಗಿರುವುದಿಲ್ಲ. ಶೇಖಡಾ ೭೭ರಷ್ಟು ಮಕ್ಕಳು ದಾಖಲಾದ ಶಿಶುವಿಹಾರಗಳಲ್ಲಿ ಶೇಖಡಾ ೫೮ರಷ್ಟು ಖಾಸಗಿ ಸ್ವಾಮ್ಯವಾಗಿರುತ್ತದೆ. ಶಿಶುವಿಹಾರಗಳ ಜೊತೆಯಲ್ಲಿ ಸರ್ಕಾರದ ಮೇಲ್ವಿಚಾರಣೆಯಲ್ಲಿ ಉತ್ತಮ ನಿರ್ವಹಣೆಯಲ್ಲಿರುವ ಶಿಶುಪಾಲನಾ ಕೇಂದ್ರಗಳಿರುತ್ತವೆ (ಹೊಇಕುಯೇನ್ 保育園), ಇದು ಕಾರ್ಮಿಕ ಇಲಾಖೆಯ ಅಡಿಯಲ್ಲಿದೆ. ಶಿಶುವಿಹಾರಗಳು ಶೈಕ್ಷಣಿಕ ಉದ್ದೇಶಗಳನ್ನು ಅನುಸರಿಸಿದರೆ, ಪ್ರಿಸ್ಕೂಲ್ ಗಳು ಮುಖ್ಯವಾಗಿ ಹಸುಗೂಸುಗಳಿಗೆ ಹಾಗು ಪುಟ್ಟ ಮಕ್ಕಳ ಪಾಲನೆಯ ಬಗ್ಗೆ ಕಾಳಜಿ ವಹಿಸುತ್ತದೆ. ಶಿಶುವಿಹಾರಗಳ ಮಾದರಿಯಲ್ಲಿ ಸರ್ಕಾರಿ ಅಥವಾ ಖಾಸಗಿ ಚಾಲಿತ ಪ್ರಿಸ್ಕೂಲ್ ಗಳಿವೆ. ಒಟ್ಟಾರೆಯಾಗಿ, ಈ ಎರಡೂ ಶೈಕ್ಷಣಿಕ ಸಂಸ್ಥೆಗಳು ಪ್ರಿಸ್ಕೂಲ್ ವಯಸ್ಸಿನ ಶೇಖಡಾ ೯೦ರಷ್ಟು ಎಲ್ಲ ಮಕ್ಕಳನ್ನು ವಿಧ್ಯುಕ್ತವಾದ ಅವರ ಮೊದಲನೇ ಗ್ರೇಡ್ ತರಗತಿಗೆ ಮುಂಚೆ ದಾಖಲು ಮಾಡಿಕೊಳ್ಳುತ್ತದೆ. ಶೈಕ್ಷಣಿಕ ಇಲಾಖೆಯ ೧೯೯೦ರ ಪ್ರಿಸ್ಕೂಲ್ ಗಳಿಗಾಗಿ ಒದಗಿಸಿದ ಪಾಠ ಕ್ರಮವು, ಎರಡೂ ಬಗೆಯ ಶೈಕ್ಷಣಿಕ ಸಂಸ್ಥೆಗಳಿಗೆ ಅನ್ವಯಿಸುತ್ತದೆ, ಇದು ಮಾನವ ಸಂಬಂಧಗಳು, ಆರೋಗ್ಯದ ವಿಚಾರಗಳು, ಪರಿಸರ, ಪದಗಳು (ಭಾಷೆ), ಹಾಗು ಮಾತಿನ ಜೋಡಣೆಯಂತಹ ವಿಷಯಗಳನ್ನು ಒಳಗೊಂಡಿದೆ. ಮಾರ್ಚ್ ೨೦೦೮ರಲ್ಲಿ ಆರಂಭಗೊಂಡು ಶಿಶುವಿಹಾರಗಳು ಹಾಗು ಪ್ರಿಸ್ಕೂಲ್ ಗಳಿಗೆ ಹೊಸ ಪಾಠ ಕ್ರಮದ ಮಾರ್ಗಸೂಚಿಗಳು ಜಾರಿಗೆ ಬಂದವು.

ದಕ್ಷಿಣ ಕೊರಿಯ[ಮೂಲವನ್ನು ಸಂಪಾದಿಸು]

ದಕ್ಷಿಣ ಕೊರಿಯದಲ್ಲಿ, ಪಾಶ್ಚಿಮಾತ್ಯ ವ್ಯವಸ್ಥೆಯಂತೆ ಸಾಧಾರಣವಾಗಿ ಮೂರರಿಂದ ಆರು ವರ್ಷ ವಯಸ್ಸಿನ ಮಕ್ಕಳು ಶಿಶುವಿಹಾರಕ್ಕೆ ಹೋಗುತ್ತಾರೆ. (ಕೊರಿಯನ್ ಮಕ್ಕಳ ವಯಸ್ಸನ್ನು ಪಾಶಿಮಾತ್ಯ ಮಕ್ಕಳ ವಯಸ್ಸಿಗಿಂತ ವಿಭಿನ್ನವಾಗಿ ಲೆಕ್ಕ ಹಾಕಲಾಗುತ್ತದೆ: ಮಗುವು ಹುಟ್ಟಿದಾಗ ಅದು ಒಂದು ದಿವಸದ್ದೆಂದು ಪರಿಗಣಿಸುವ ಬದಲಾಗಿ ಒಂದು ವರ್ಷದ್ದೆಂದು ಹೇಳಲಾಗುತ್ತದೆ. ಅಲ್ಲದೆ, ಪ್ರತಿ ವರ್ಷ ಜನವರಿ ಒಂದರಂದು, ಅವರ ಹುಟ್ಟಿದ ದಿನಾಂಕ ಯಾವುದಿದ್ದರೂ ಪ್ರತಿಯೊಬ್ಬರ ವಯಸ್ಸು ಒಂದು ವರ್ಷ ಹೆಚ್ಚುತ್ತದೆ. ಈ ರೀತಿಯಾಗಿ ಕೊರಿಯಾದಲ್ಲಿ, ಶಿಶುವಿಹಾರದ ಮಕ್ಕಳು "ಐದು, ಆರು ಹಾಗು ಏಳು" ವರ್ಷ ವಯಸ್ಸಿನವರೆಂದು ಹೇಳಲಾಗುತ್ತದೆ.). ಶೈಕ್ಷಣಿಕ ವರ್ಷವೂ ಮಾರ್ಚ್ ನಲ್ಲಿ ಆರಂಭವಾಗುತ್ತದೆ. ಇದರ ನಂತರ ಪ್ರಾಥಮಿಕ ಶಿಕ್ಷಣವು ಆರಂಭವಾಗುತ್ತದೆ. ಸಾಧಾರಣವಾಗಿ ಶಿಶುವಿಹಾರಗಳನ್ನು ಮೂರು ಶ್ರೇಣಿಗಳನ್ನು ಆಧರಿಸಿ ವಿಭಾಗಿಸಲಾಗುತ್ತದೆ. ಇದನ್ನು "ಯುಚಿ ವಾನ್" ಎಂದು ಕರೆಯಲಾಗುತ್ತದೆ (Korean: 유치원).

ಕೊರಿಯನ್ ಶಿಶುವಿಹಾರಗಳು ಖಾಸಗಿ ಶಾಲೆಗಳಾಗಿರುತ್ತವೆ. ತಿಂಗಳಿಂದ ತಿಂಗಳಿಗೆ ಶುಲ್ಕವು ವ್ಯತ್ಯಾಸವಾಗುತ್ತದೆ. ಕೊರಿಯದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಭಾಷೆಯ ಶಿಶುವಿಹಾರಕ್ಕೆ ಕಳುಹಿಸಿ ಆಂಗ್ಲ ಭಾಷೆಯ ಆರಂಭಿಕ ಶಿಕ್ಷಣಕ್ಕೆ ನಾಂದಿ ಹಾಡುತ್ತಾರೆ. ಇಂತಹ ವಿಶೇಷ ಶಿಶುವಿಹಾರಗಳು ಸ್ವಲ್ಪ ಮಟ್ಟಿಗಿನ ಇಂಗ್ಲಿಷ್ ಕಲಿಕೆಯೊಂದಿಗೆ ಕೊರಿಯನ್ ಭಾಷೆಯಲ್ಲಿ ಕಲಿಸುತ್ತವೆ, ಕೊರಿಯನ್ ಭಾಷೆಯ ಕಲಿಕೆಯೊಂದಿಗೆ ಇಂಗ್ಲಿಷ್ ಭಾಷೆಯಲ್ಲಿ ಕಲಿಸುತ್ತವೆ, ಅಥವಾ ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಲ್ಲಿ ಕಲಿಸುತ್ತವೆ. ಬಹುತೇಕ ಎಲ್ಲ ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳನ್ನು ಶಿಶುವಿಹಾರಕ್ಕೆ ಕಳುಹಿಸುತ್ತಾರೆ.

ದಕ್ಷಿಣ ಕೊರಿಯಾದ ಶಿಶುವಿಹಾರದ ಶಿಕ್ಷಣವು ಆಟದೊಂದಿಗೆ ಹೆಚ್ಚಿನ ಶೈಕ್ಷಣಿಕ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತದೆ. ಕೊರಿಯಾದ ಶಿಶುವಿಹಾರದಲ್ಲಿನ ಮಕ್ಕಳು ಓದಲು, ಬರೆಯಲು (ಸಾಮಾನ್ಯವಾಗಿ ಇಂಗ್ಲಿಷ್ ಹಾಗು ಕೊರಿಯನ್ ಎರಡೂ ಭಾಷೆಯಲ್ಲಿ) ಹಾಗು ಗಣಿತದ ಸರಳ ಲೆಕ್ಕಗಳನ್ನು ಬಿಡಿಸುವಷ್ಟು ಸಮರ್ಥರಾಗಿರುತ್ತಾರೆ. ತರಗತಿಗಳನ್ನು ಸಾಂಪ್ರದಾಯಿಕ ಹಿನ್ನೆಲೆಯಿರುವ ಕೋಣೆಗಳಲ್ಲಿ ನಡೆಸಲಾಗುತ್ತದೆ. ಜೊತೆಗೆ ಒಂದು ಬಾರಿಗೆ ಮಕ್ಕಳು ಒಬ್ಬ ಶಿಕ್ಷಕರು ಹಾಗು ಒಂದು ಪಾಠ ಅಥವಾ ಚಟುವಟಿಕೆಯ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ. ಶಿಕ್ಷಕರ ಮುಖ್ಯ ಉದ್ದೇಶವೆಂದರೆ ಪ್ರತಿ ಮಕ್ಕಳ ಜ್ಞಾನ ಅಥವಾ ಕೌಶಲದಲ್ಲಿರುವ ದುರ್ಬಲ ಅಂಶಗಳನ್ನು ಕಂಡು ಹಿಡಿದು ಅದನ್ನು ತೊಡೆದು ಹಾಕುವುದೇ ಆಗಿದೆ.

ಕೊರಿಯಾದಲ್ಲಿ ಶಿಕ್ಷಣ ವ್ಯವಸ್ಥೆಯು ಬಹಳ ಸ್ಪರ್ಧಾತ್ಮಕವಾಗಿರುವ ಕಾರಣದಿಂದಾಗಿ, ಶಿಶುವಿಹಾರಗಳು ಇತ್ತೀಚಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತವೆ. ಬಹಳ ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಓದಲು ಹಾಗು ಬರೆಯಲು ಕಲಿಸಲಾಗುತ್ತದೆ. ಮಕ್ಕಳು ನಿಯಮಿತವಾದ ಹಾಗು ಗಣನೀಯ ಪ್ರಮಾಣದಲ್ಲಿ ಹೋಂವರ್ಕ್ ಗಳನ್ನು ಮಾಡಲು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಂತಹ ಚಿಕ್ಕ ಮಕ್ಕಳು ವಿಶೇಷವಾದ ಮಧ್ಯಾಹ್ನದ ತರಬೇತಿಗಳಿಗೂ ಸಹ ಹಾಜರಾಗಬಹುದು, ಕಲೆ, ಪಿಯಾನೋ ಅಥವಾ ವಯೊಲಿನ್, ಟೆಕ್ವಾನ್ಡೊ, ಬ್ಯಾಲೆ, ಸಾಕರ್ ಅಥವಾ ಗಣಿತದ ತರಗತಿಗಳಿಗೆ ಹೋಗುತ್ತಾರೆ.

ಉತ್ತರ ಕೊರಿಯಾದಲ್ಲಿ, ಮಕ್ಕಳು ತಮ್ಮ ನಾಲ್ಕರಿಂದ ಐದನೇ ವಯಸ್ಸಿನ ನಡುವೆ ಶಿಶುವಿಹಾರಕ್ಕೆ ಹೋಗುತ್ತಾರೆ. ಶಿಶುವಿಹಾರಗಳನ್ನು ಮೇಲ್ದರ್ಜೆ (ಶ್ರೀಮಂತರು) ಹಾಗು ಕೆಳ ದರ್ಜೆ(ಕಾರ್ಮಿಕ ವರ್ಗ)ಗಳ ನಡುವೆ ವಿಭಾಗವಾಗಿರುತ್ತದೆ, ಮೇಲ್ದರ್ಜೆಯ ಶಿಶುವಿಹಾರಗಳು ಸಂಪೂರ್ಣವಾಗಿ ಶೈಕ್ಷಣಿಕವಾಗಿದ್ದರೆ ಕೆಳ ದರ್ಜೆಯ ಶಿಶುವಿಹಾರಗಳು ಸ್ವಲ್ಪಮಟ್ಟದ ಕಡಿಮೆ ಶೈಕ್ಷಣಿಕವಾಗಿರುತ್ತದೆ.

ಕುವೈತ್[ಮೂಲವನ್ನು ಸಂಪಾದಿಸು]

ಕುವೈತ್‌ನಲ್ಲಿ, ನಾಲ್ಕರಿಂದ ಆರು ವರ್ಷಗಳ ನಡುವಿನ ಕುವೈತ್ ನ ಮಕ್ಕಳು ಎರಡು ವರ್ಷಗಳ ಕಾಲ (K೧ ಹಾಗು K೨) ಉಚಿತವಾಗಿ ಶಿಶುವಿಹಾರಕ್ಕೆ ಹೋಗಬಹುದು.

ಮಲಾವಿ[ಮೂಲವನ್ನು ಸಂಪಾದಿಸು]

ಮಲಾವಿಯಲ್ಲಿ, ಸಿಯವೋ ಮಾತನಾಡುವ ಪ್ರದೇಶದಲ್ಲಿ ಶಿಶುವಿಹಾರವನ್ನು "ಒಬುಕೋ" ಎಂದು ಕರೆಯುತ್ತಾರೆ ಜೊತೆಗೆ ನಾಲ್ಕು ಹಾಗು ಐದು ವರ್ಷದ ಮಕ್ಕಳು ಸಾಮಾನ್ಯವಾಗಿ ಶಿಶುವಿಹಾರಕ್ಕೆ ಹೋಗಬಹುದಾಗಿದೆ. ದೇಶದುದ್ದಕ್ಕೂ ಇಂಗ್ಲಿಷ್ ಭಾಷೆಯಲ್ಲಿ ಕಲಿಸುವ ಹಲವು ಶಿಶುವಿಹಾರಗಳಿವೆ.

ಮೆಕ್ಸಿಕೋ[ಮೂಲವನ್ನು ಸಂಪಾದಿಸು]

ಮೆಕ್ಸಿಕೋನಲ್ಲಿ, ಶಿಶುವಿಹಾರವನ್ನು "ಕಿಂಡರ್ ಗಾರ್ಡನ್" ಅಥವಾ "ಕಿಂಡರ್" ಎಂದು ಕರೆಯಲಾಗುತ್ತದೆ, ಜೊತೆಗೆ ಕಡೆಯ ವರ್ಷವನ್ನು ಕೆಲವೊಂದು ಬಾರಿ "ಪ್ರಿಪ್ರೈಮರಿಯ" ಎಂದು ಸೂಚಿಸಲಾಗುತ್ತದೆ. (ಪ್ರೈಮರಿಯ ಎಂಬ ಪದವು ಒಂದರಿಂದ ಆರು ಗ್ರೇಡ್ ಗಳವರೆಗೆ ಸೂಚಿತವಾಗುತ್ತದೆ, ಈ ರೀತಿಯಾಗಿ ಈ ಹೆಸರು ಅಕ್ಷರಶಃ "ಪ್ರಾಥಮಿಕ ಶಾಲೆಗೇ ಮುಂಚೆ" ಎಂಬ ಅರ್ಥವನ್ನು ನೀಡುತ್ತದೆ). ಇದು ಶಾಲಾಪೂರ್ವ ಶಿಕ್ಷಣದ ಮೂರು ವರ್ಷಗಳನ್ನು ಒಳಗೊಂಡಿರುತ್ತದೆ, ಇದು ಪ್ರಾಥಮಿಕ ಶಾಲಾಶಿಕ್ಷಣಕ್ಕೆ ಮುಂಚೆ ಕಡ್ಡಾಯವಾಗಿರುತ್ತದೆ. ಇದಕ್ಕೆ ಮುಂಚೆ ನರ್ಸರಿ ತರಗತಿಗೆ ಹೋಗುವುದು ಐಚ್ಚಿಕವಾಗಿದೆ, ಜೊತೆಗೆ ಇದನ್ನು ಖಾಸಗಿ ಶಾಲೆಗಳು ಅಥವಾ ಸರ್ಕಾರಿ ಶಾಲೆಗಳಲ್ಲಿ ನಡೆಸಲಾಗುತ್ತದೆ.

ಖಾಸಗಿ ಶಾಲೆಗಳಲ್ಲಿ, ಸಾಮಾನ್ಯವಾಗಿ ಕಿಂಡರ್ ಗಳು ಮೂರು ಗ್ರೇಡ್ ಗಳನ್ನೂ ಒಳಗೊಂಡಿರುತ್ತವೆ, ಜೊತೆಗೆ ನಾಲ್ಕನೆಯದನ್ನು ನರ್ಸರಿಗೆ ಸೇರಿಸಿಕೊಳ್ಳಬಹುದಾಗಿದೆ. ಮೊದಲನೇ ಗ್ರೇಡ್ ಒಂದು ಪ್ಲೇಗ್ರೂಪ್ ಆಗಿದ್ದರೆ, ಮತ್ತೆರಡು ತರಗತಿಯ ಶಿಕ್ಷಣವಾಗಿದೆ.

ಮೆಕ್ಸಿಕೋದಲ್ಲಿನ ಶಿಶುವಿಹಾರ ವ್ಯವಸ್ಥೆಯನ್ನು ಪ್ರಾಧ್ಯಾಪಕ ರೋಸುರ ಜಪಾಟ ಅಭಿವೃದ್ಧಿಪಡಿಸಿದರು (೧೮೭೬–೧೯೬೩), ಇವರ ಈ ಸಾಧನೆಗೆ ರಾಷ್ಟ್ರದ ಅತ್ಯುನ್ನತ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಳೆದ ೨೦೦೨ರಲ್ಲಿ, ಕಾಂಗ್ರೆಸ್ಸ್ ಆಫ್ ದಿ ಯೂನಿಯನ್ಲಾ ಆಫ್ ಆಬ್ಲಿಗೆಟರಿ ಪ್ರಿ-ಸ್ಕೂಲಿಂಗ್ ಗೆ ಅನುಮೋದನೆ ನೀಡಿತು, ಇದರಂತೆ ಮೂರರಿಂದ ಆರು ವರ್ಷದ ಮಕ್ಕಳಿ ಶಾಲಾ ಪೂರ್ವ ಶಿಕ್ಷಣವು ಕಡ್ಡಾಯ ಮಾಡಿತು, ಜೊತೆಗೆ ಇದು ಫೆಡರಲ್ ಹಾಗು ಶೈಕ್ಷಣಿಕ ರಾಜ್ಯ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು..[೨][೩]

ಮೊರಾಕೊ[ಮೂಲವನ್ನು ಸಂಪಾದಿಸು]

ಮೊರಾಕೊ ನಲ್ಲಿ, ಪೂರ್ವ ಶಾಲೆಯನ್ನು ಎಕೋಲೆ ಮಾಟೆರ್ನೆಲ್ಲೆ, ಕುತ್ತಬ್ ಅಥವಾ ಅರ್-ರಾವ್ದ್ ಎಂದು ಕರೆಯಲಾಗುತ್ತದೆ. ದೇಶಾದ್ಯಂತ, ಸರ್ಕಾರ ನಡೆಸುವ ಉಚಿತ ಮಾಟೆರ್ನೆಲ್ಲೆ ಶಾಲೆಗಳಿವೆ, ಇದಕ್ಕೆ ಎರಡರಿಂದ ಐದು ವರ್ಷದ ಮಕ್ಕಳು ದಾಖಲಾಗಬಹುದು. (ಆದಾಗ್ಯೂ ಹಲವು ಸ್ಥಳಗಳಲ್ಲಿ, ಮೂರು ವರ್ಷದ ಕೆಳಗಿನ ಮಕ್ಕಳಿಗೆ ದಾಖಲಾತಿ ದೊರೆಯುವುದಿಲ್ಲ). ಶಾಲೆಗೆ ದಾಖಲಾತಿಯು ಕಡ್ಡಾಯವಾಗಿರದಿದ್ದರೂ, ಮೂರರಿಂದ ಐದು ವರ್ಷ ವಯಸ್ಸಿನ ೮೦%ನಷ್ಟು ಮಕ್ಕಳು ಶಾಲೆಗೆ ಹೋಗುತ್ತಾರೆ. ಇದು ಮೊರಾಕನ್ ಶಿಕ್ಷಣ ಇಲಾಖೆಯ ನಿಯಂತ್ರಣದಲ್ಲಿದೆ.

ನೇಪಾಳ[ಮೂಲವನ್ನು ಸಂಪಾದಿಸು]

ನೇಪಾಳದಲ್ಲಿ, ಶಿಶುವಿಹಾರವನ್ನು "ಶಿಶುವಿಹಾರ"ವೆಂದೆ ಕರೆಯಲಾಗುತ್ತದೆ. ಇಲ್ಲಿ ಶಿಶುವಿಹಾರವನ್ನು ಒಂದು ಖಾಸಗಿ ಶೈಕ್ಷಣಿಕ ಸಂಸ್ಥೆ ನಡೆಸುತ್ತದೆ. ಜೊತೆಗೆ ಎಲ್ಲ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಆಂಗ್ಲ ಮಾಧ್ಯಮದಲ್ಲಿವೆ. ಈ ರೀತಿಯಾಗಿ, ನೇಪಾಳದಲ್ಲಿ ಶಿಶುವಿಹಾದ ಶಿಕ್ಷಣವೂ ಸಹ ಆಂಗ್ಲ ಮಾಧ್ಯಮದಲ್ಲಿದೆ. ಶಿಶುವಿಹಾರಕ್ಕೆ ಮಕ್ಕಳು ತಮ್ಮ ಎರಡರಿಂದ ಕಡೇಪಕ್ಷ ಐದನೇ ವಯಸ್ಸಿನವರೆಗೂ ಹೋಗುತ್ತಾರೆ. ನೇಪಾಳದಲ್ಲಿನ ಶಿಶುವಿಹಾರಗಳು ಈ ಕೆಳಕಂಡ ಗ್ರೇಡ್ ಗಳನ್ನು ಹೊಂದಿವೆ: ೧. ನರ್ಸರಿ/ಪ್ಲೇಗ್ರೂಪ್: ೨-೩ ವರ್ಷ ವಯಸ್ಸಿನ ಮಕ್ಕಳಿಗೆ ೨. ಲೋಯರ್ ಕಿಂಡರ್ ಗಾರ್ಟನ್(ಶಿಶುವಿಹಾರ)/LKG: ೩-೪ ವರ್ಷ ವಯಸ್ಸಿನ ಮಕ್ಕಳಿಗೆ ೩. ಅಪ್ಪರ್ ಕಿಂಡರ್ ಗಾರ್ಟನ್(ಶಿಶುವಿಹಾರ)/UKG: ೪-೫ ವರ್ಷದ ಮಕ್ಕಳಿಗೆ

ನೇಪಾಳದಲ್ಲಿನ ಶಿಶುವಿಹಾರ ಶಿಕ್ಷಣವು ಹೆಚ್ಚುಕಡಿಮೆ ಹಾಂಗ್ಕಾಂಗ್ ಹಾಗು ಭಾರತದ ಶಿಶುವಿಹಾರ ಶಿಕ್ಷಣ ಪದ್ದತಿಯನ್ನು ಹೋಲುತ್ತದೆ. ಕಡ್ದಾಯವಾಗಿರುವ ನೇಪಾಳಿ ಭಾಷೆಯನ್ನೂ ಹೊರತುಪಡಿಸಿ ಖಾಸಗಿ ಶಿಕ್ಷಣ ಸಂಸ್ಥೆಯ ಪುಸ್ತಕಗಳು ಆಂಗ್ಲ ಭಾಷೆಯಲ್ಲಿ ಅಚ್ಚಾಗಿರುತ್ತವೆ. nepaalada ಶಿಶುವಿಹಾರಗಳಲ್ಲಿ ಮಕ್ಕಳಿಗೆ ಸಂಪೂರ್ಣವಾದ ತರಬೇತಿ ನೀಡಲಾಗುತ್ತದೆ.

ನೆದರ್ಲೆಂಡ್ಸ್[ಮೂಲವನ್ನು ಸಂಪಾದಿಸು]

ನೆದರ್ಲೆಂಡ್ಸ್ ನಲ್ಲಿ, ಶಿಶುವಿಹಾರಕ್ಕಿರುವ ಸಮನಾದ ಪದವೆಂದರೆ ಕ್ಲಯುತೆರ್ ಸ್ಕೂಲ್ . ೧೯ನೇ ಶತಮಾನದ ಮಧ್ಯಭಾಗದಿಂದ ೨೦ನೇ ಶತಮಾನದವರೆಗೂ, ಫ್ರೆಡ್ರಿಚ್ ಫ್ರೋಬೇಲ್ ರ ನಂತರ ಫ್ರೋಬೇಲ್ ಸ್ಕೂಲ್ ಎಂಬ ಪದವೂ ಸಾಮಾನ್ಯವಾಗಿ ಬಳಕೆಯಾಗುತ್ತಿತ್ತು. ಆದಾಗ್ಯೂ ಈ ಪದದ ಬಳಕೆಯೂ ಕ್ರಮೇಣವಾಗಿ ಕಡಿಮೆಯಾಯಿತು ಏಕೆಂದರೆ ಫ್ರೋಬೇಲೆನ್ ಎಂಬ ಆಖ್ಯಾತ ಪದವು ನಿತ್ಯದ ಬಳಕೆಯಲ್ಲಿ ಸ್ವಲ್ಪ ಮಟ್ಟಿಗಿನ ಅನುಚಿತ ಅರ್ಥವನ್ನು ಗಳಿಸಿತು. ಕಳೆದ ೧೯೮೫ರ ತನಕ, ಇದನ್ನು ಪ್ರತ್ಯೇಕವಾದ ಕಡ್ಡಾಯವಲ್ಲದ ಶಿಕ್ಷಣದ ಮಾದರಿಯಾಗಿತ್ತು (ನಾಲ್ಕರಿಂದ ಆರು ವರ್ಷದ ಮಕ್ಕಳು), ಇದರ ನಂತರ ಮಕ್ಕಳು (ಆರರಿಂದ ಹನ್ನೆರಡು ವರ್ಷದ ಮಕ್ಕಳು) ಪ್ರಾಥಮಿಕ ಶಾಲೆಗೆ ದಾಖಲಾಗುತ್ತಾರೆ (ಲಾಗೆರೆ ಶಾಲೆ ) ಇಸವಿ ೧೯೮೫ರ ನಂತರ, ಈ ಎರಡು ಶಿಕ್ಷಣದ ಮಾದರಿಗಳನ್ನು ಒಟ್ಟುಗೂಡಿಸಲಾಯಿತು, ಇದನ್ನು ಬಸಿಸೋನ್ಡರ್ ವಿಜ್ಸ್ ಎಂದು ಕರೆಯಲಾಗುತ್ತದೆ. (ಡಚ್ ನ ಪ್ರಾಥಮಿಕ ಶಾಲಾ ಮಾದರಿ). ಸರ್ಕಾರವು ಖಾಸಗಿ ಹಾಗು ಅನುದಾನಿತ ಶಿಶುಪಾಲನಾ ಕೇಂದ್ರಗಳನ್ನು ನಡೆಸುತ್ತದೆ, ಇದು ಕಡ್ಡಾಯವಾಗಿರದಿದ್ದರೂ ಬಹಳ ಜನಪ್ರಿಯವಾಗಿದೆ.

ಪೆರು[ಮೂಲವನ್ನು ಸಂಪಾದಿಸು]

ಪೆರುವಿನಲ್ಲಿ, ಮೂರರಿಂದ ಆರು ವರ್ಷ ವಯಸ್ಸಿನ ನಡುವಿನ ಮಕ್ಕಳ ಶಾಲಾಶಿಕ್ಷಣಕ್ಕೆ ನಿಡೋ ಎಂದು ಸೂಚಿಸಲಾಗುತ್ತದೆ. ಇದರ ನಂತರ ನಾಲ್ಕು ವರ್ಷದ ಪ್ರಾಥಮಿಕ ಶಿಕ್ಷಣ ತರಗತಿಗಳು ನಡೆಯುತ್ತವೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಆರನೇ ವರ್ಷದಲ್ಲಿ ಪ್ರಾಥಮಿಕ ಶಾಲೆಗೆ ದಾಖಲು ಮಾಡುತ್ತಾರೆ. ಇಸವಿ ೧೯೦೨ರಲ್ಲಿ, ಶಿಕ್ಷಕಿ ಎಲ್ವಿರ ಗಾರ್ಸಿಯ ಹಾಗು ಗಾರ್ಸಿಯಾ ಎಂಬ ಸಂಸ್ಥೆಯ ಸಹ ಸ್ಥಾಪಕಿ, ಎರಡರಿಂದ ಎಂಟು ವರ್ಷದ ಮಕ್ಕಳಿಗಾಗಿ ಮೊದಲ ಬಾರಿಗೆ ಶಿಶುವಿಹಾರ ಪ್ರಾರಂಭಿಸುತ್ತಾರೆ, ಜೊತೆಗೆ ಮಹಿಳೆಯರಿಗೆ ವಿಶೇಷ ಶಿಕ್ಷಣ-ತರಬೇತಿಗಾಗಿ ಒಂದು ಉಪವಿಭಾಗವನ್ನು ಆಕೆ ಈ ಸಂದರ್ಭದಲ್ಲಿ ಸೃಷ್ಟಿಸಿದರು. ಆಕೆಯ ಅಧ್ಯಯನಗಳು ಹಾಗು ಮಕ್ಕಳ ಬಗೆಗಿನ ಕಾಳಜಿಯನ್ನು ಸಮಾಲೋಚನೆಗಳು ಹಾಗು ಹಲವಾರು ಆಧಾರಗಳ ಮೂಲಕ ಪ್ರಸಾರ ಮಾಡುವ ಅವಕಾಶ ದೊರೆಯಿತು, ಬಾಲ್ಯದಲ್ಲೇ ಮಕ್ಕಳ ರಕ್ಷಣೆಯ ಪ್ರಾಮುಖ್ಯತೆ ಹಾಗು ನ್ಯಾಯ ಹಾಗು ತಿಳಿವಳಿಕೆಯಿಂದ ವ್ಯಕ್ತಿತ್ವವನ್ನು ರೂಪಿಸಲು ಸ್ಪಂದಿಸಬೇಕು, ಜೊತೆಗೆ ಫ್ರೋಬೇಲ್ ವಿಧಾನಗಳ ಬಳಕೆ ಹಾಗು ಮಾಂಟೆಸ್ಸರಿ ಪದ್ಧತಿ ಹಾಗು ಈ ಶೈಕ್ಷಣಿಕ ಕಾರ್ಯಗಾರದಲ್ಲಿ ಪೋಷಕರ ಪಾಲ್ಗೊಳ್ಳುವಿಕೆ.

ಫಿಲಿಪ್ಪೀನ್ಸ್‌‌[ಮೂಲವನ್ನು ಸಂಪಾದಿಸು]

ಫಿಲಿಪ್ಪೀನ್ಸ್ ನಲ್ಲಿ, ಶಿಕ್ಷಣವು ಅಧಿಕೃತವಾಗಿ ಪ್ರಾಥಮಿಕ ಹಂತದಲ್ಲಿ ಆರಂಭವಾಗುತ್ತದೆ. ಅದಲ್ಲದೇ ಶಿಶುವಿಹಾರದ ಮೂಲಕ ಆರಂಭಿಕ ಬಾಲ್ಯ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡುವ ಆಯ್ಕೆ ಪೋಷಕರದ್ದಾಗಿರುತ್ತದೆ. ಫಿಲಿಪ್ಪೀನ್ಸ್ ನ ಆರಂಭಿಕ ಬಾಲ್ಯ ಶಿಕ್ಷಣವನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ:

 • ಸರ್ಕಾರ-ಆಧಾರಿತ ಯೋಜನೆಗಳು , ಉದಾಹರಣೆಗೆ ಬರಂಗೆ ಶಿಶುಪಾಲನಾ ಸೇವೆ, ಸಾರ್ವಜನಿಕ ಹಾಗು ಖಾಸಗಿ ಪೂರ್ವ ಶಾಲೆಗಳು, ಶಿಶುವಿಹಾರ ಅಥವಾ ಶಾಲಾಧಾರಿತ ಕಾರ್ಯಕ್ರಮಗಳು, ಸಮುದಾಯ ಅಥವಾ ಚರ್ಚ್ ಆಧಾರಿತ ಆರಂಭಿಕ ಬಾಲ್ಯ ಶಿಕ್ಷಣ ಯೋಜನೆಗಳು. ಇದನ್ನು ಸರ್ಕಾರೇತರ ಸಂಸ್ಥೆಗಳು ಅಥವಾ ಸಾರ್ವಜನಿಕ ಸಂಸ್ಥೆಗಳು ಆರಂಭಿಸುತ್ತವೆ, ನೌಕರಿ(ಉದ್ಯೋಗ) ಮಾಡುವ ಸ್ಥಳದಲ್ಲಿರುವ ಶಿಶುಪಾಲನಾ ಕೇಂದ್ರ ಹಾಗು ಶೈಕ್ಷಣಿಕ ಯೋಜನೆಗಳು, ಮಕ್ಕಳ ಮಾನಸಿಕ ಕೇಂದ್ರಗಳು, ಆರೋಗ್ಯಕೇಂದ್ರಗಳು ಹಾಗು ಶಾಖೆಗಳು; ಹಾಗು
 • ಗೃಹ ಆಧಾರಿತ ಯೋಜನೆಗಳು , ಉದಾಹರಣೆಗೆ ನೆರೆಹೊರೆಯನ್ನು ಆಧರಿಸಿದ ಪ್ಲೇಗ್ರೂಪ್ಸ್, ಕೌಟುಂಬಿಕ ಶಿಶುಪಾಲನಾ ಯೋಜನೆಗಳು, ಪೋಷಕರಿಗೆ ಶಿಕ್ಷಣ ಹಾಗು ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮಗಳು.

ಆರಂಭಿಕ ಬಾಲ್ಯ ಶಿಕ್ಷಣವನ್ನು ರಿಪಬ್ಲಿಕ್ ಆಕ್ಟ್ ನಂ. 8980 ಅಥವಾ ೨೦೦೦ದ ಅರ್ಲಿ ಚೈಲ್ಡ್ ಹುಡ್ ಕೇರ್ ಅಂಡ್ ಡೆವಲಪ್ಮೆಂಟ್ ಆಕ್ಟ್ ನ್ನು ಸೃಷ್ಟಿಸುವುದರ ಮೂಲಕ ಬಲಪಡಿಸಲಾಗಿದೆ.

ರೊಮೇನಿಯ[ಮೂಲವನ್ನು ಸಂಪಾದಿಸು]

ರೊಮೇನಿಯನಲ್ಲಿ, "ಸಣ್ಣ ತೋಟ" ಎಂಬ ಅರ್ಥವನ್ನು ನೀಡುವ ಗ್ರಾಡಿನಿತ ಎಂಬ ಪದವು ಮಕ್ಕಳ ಶಾಲಾಪೂರ್ವ ಶಿಕ್ಷಣಕ್ಕೆ(ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು) ಬಳಕೆಯಾಗುತ್ತದೆ. ಮಕ್ಕಳನ್ನು "ಸಣ್ಣ ಗುಂಪು" (ಗ್ರುಪ ಮಿಕಾ ಮೂರರಿಂದ ನಾಲ್ಕು ವರ್ಷದ ಮಕ್ಕಳು), "ಮಧ್ಯಮ ಗುಂಪು" (ಗ್ರುಪ ಮಿಜ್ಲೋಸಿ ಐದು ವರ್ಷ ವಯಸ್ಸಿನ ಮಕ್ಕಳು) ಹಾಗು "ದೊಡ್ಡ ಗುಂಪು" (ಗ್ರುಪ ಮಾರೆ ಆರು ಅಥವಾ ಏಳು ವಯಸ್ಸಿನ ಮಕ್ಕಳು) ಎಂದು ವಿಭಾಗಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಿಂದ, ಖಾಸಗಿ ಶಿಶುವಿಹಾರಗಳು ಬಹಳ ಜನಪ್ರಿಯವಾಗಿದೆ, ಇದು ಸರ್ಕಾರದ ಶಾಲಾಪೂರ್ವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿದೆ.

ರಷ್ಯಾ[ಮೂಲವನ್ನು ಸಂಪಾದಿಸು]

ರಷ್ಯನ್ ಫೆಡರೇಶನ್ ನಲ್ಲಿ Детский сад (ಮಕ್ಕಳ ಉದ್ಯಾನ ಅಥವಾ ತೋಟದ ಎಂಬುದರ ಅಕ್ಷರಶಃ ಭಾಷಾಂತರ), ಶಿಶುವಿಹಾರವೆಂಬುದು ಮೂರರಿಂದ ಏಳು ವರ್ಷದ ನಡುವಿನ ಮಕ್ಕಳಿಗಾಗಿ ಇರುವ ಶೈಕ್ಷಣಿಕ ಸಂಸ್ಥೆ. ಇದೊಂದು Детское дошкольное учреждение (ಮಕ್ಕಳ ಶಾಲಾಶಿಕ್ಷಣಪೂರ್ವದ ಸಂಸ್ಥೆ).

ಸಿಂಗಾಪುರ[ಮೂಲವನ್ನು ಸಂಪಾದಿಸು]

ಸಿಂಗಾಪುರದಲ್ಲಿನ ಶಿಶುವಿಹಾರಗಳು ಮೂರರಿಂದ ಆರು ವರ್ಷದ ನಡುವಿನ ಮಕ್ಕಳಿಗೆ ಮೂರು ವರ್ಷದ ಶಾಲಾಪೂರ್ವ ಶಿಕ್ಷಣವನ್ನು ಒದಗಿಸುತ್ತದೆ. ನರ್ಸರಿ , ಶಿಶುವಿಹಾರ ೧ (K೧) ಹಾಗು ಶಿಶುವಿಹಾರ ೨ (K೨) ಎಂದು ಕರೆಯಲ್ಪಡುವ ಮೂರು ವರ್ಷದ ಶೈಕ್ಷಣಿಕ ಕಾರ್ಯಕ್ರಮವು ಮಕ್ಕಳಿಗೆ ತಮ್ಮ ಮೊದಲ ವರ್ಷದ ಪ್ರಾಥಮಿಕ ಶಾಲಾ ಶಿಕ್ಷಣ ಕ್ಕೆ ತಯಾರು ಮಾಡುತ್ತದೆ . ಕೆಲವು ಶಿಶುವಿಹಾರಗಳು ನರ್ಸರಿಯನ್ನು N೧ ಹಾಗು N೨ ಎಂದು ವಿಭಾಗಿಸುತ್ತವೆ.

ಯುನೈಟೆಡ್‌ ಕಿಂಗ್ಡಂ[ಮೂಲವನ್ನು ಸಂಪಾದಿಸು]

ಶಿಶುವಿಹಾರ ಎಂಬ ಪದವು ಶಾಲಾಪೂರ್ವ ಶಿಕ್ಷಣಕ್ಕೆ ಬ್ರಿಟನ್ ನಲ್ಲಿ ಬಹಳ ವಿರಳವಾಗಿ ಬಳಕೆಯಾಗುತ್ತದೆ; ಪ್ರಿಸ್ಕೂಲ್ ಗಳನ್ನು ಸಾಮಾನ್ಯವಾಗಿ ನರ್ಸರಿ ಶಾಲೆಗಳು ಅಥವಾ ಪ್ಲೇಗ್ರೂಪ್ ಗಳಿಗೆ ಸೂಚಿಸಲಾಗುತ್ತದೆ. ಆದಾಗ್ಯೂ, "ಶಿಶುವಿಹಾರ" ಎಂಬ ಪದವನ್ನು ವಿಶೇಷ ಶೈಕ್ಷಣಿಕ ಸಂಸ್ಥೆಗಳಾದ ವನ ಶಿಶುವಿಹಾರಗಳಿಗೆ ಬಳಸಲಾಗುತ್ತದೆ, ಜೊತೆಗೆ ಕೆಲವೊಂದು ಬಾರಿ ಖಾಸಗಿ ನರ್ಸರಿಗಳನ್ನು ಹೆಸರಿಸಲು ಬಳಸಲಾಗುತ್ತದೆ. ಇವುಗಳು ನೌಕರಿಯಲ್ಲಿರುವ ಪೋಷಕರಿಗೆ ಪೂರ್ತಿ ದಿನದ ಶಿಶು ಪಾಲನಾ ಸೇವೆಯನ್ನು ಒದಗಿಸುತ್ತದೆ.

UKಯಲ್ಲಿ ಮೂರರಿಂದ ಐದು ವರ್ಷ ವಯಸ್ಸಿನ ಮಕ್ಕಳು ಕಡ್ಡಾಯ ಶಿಕ್ಷಣದ ಆರಂಭಕ್ಕೆ ಮುಂಚೆ ನರ್ಸರಿ ತರಗತಿಗಳಿಗೆ ಹೋಗುವುದು ಕಡ್ಡಾಯವಾಗಿರುವುದಿಲ್ಲ. ಅದಕ್ಕೂ ಮುಂಚೆ, ಕಡಿಮೆ ರಚನಾವ್ಯವಸ್ಥೆ ಹೊಂದಿರುವ ಶಿಶುಪಾಲನಾ ಕೇಂದ್ರಗಳು ಖಾಸಗಿಯಾಗಿ ಲಭ್ಯವಿರುತ್ತವೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳು ಸ್ಕಾಟ್ ಲ್ಯಾಂಡ್, ಇಂಗ್ಲೆಂಡ್, ವೇಲ್ಸ್ ಹಾಗು ಉತ್ತರ ಐರ್ಲೆಂಡ್ ಗಳಲ್ಲಿ ಭಿನ್ನವಾಗಿರುತ್ತವೆ.

ಕೆಲವು ನರ್ಸರಿಗಳು ಸರ್ಕಾರದ ಇನ್ಫ್ಯಾಂಟ್ ಅಥವಾ ಪ್ರಾಥಮಿಕ ಶಾಲೆಗಳೊಂದಿಗೆ ಲೀನವಾಗಿರುತ್ತವೆ, ಆದರೆ ಹಲವನ್ನು ಖಾಸಗಿ ಸಂಸ್ಥೆಗಳು ನಡೆಸುತ್ತವೆ. ಸರ್ಕಾರವು ಅನುದಾನ ನೀಡುತ್ತದೆ. ಹೀಗಾಗಿ ಮೂರು ವರ್ಷದ ಎಲ್ಲ ಮಕ್ಕಳು ಕಡ್ಡಾಯವಾಗಿ ತರಗತಿಗೆ ಹೋಗುತ್ತಾರೆ, ಸರ್ಕಾರಿಯಾಗಲಿ ಅಥವಾ ಖಾಸಗಿ ನರ್ಸರಿಯಾಗಲಿ ವಾರದಲ್ಲಿ ಐದು ದಿನ ಎರಡೂವರೆ ಗಂಟೆಗಳ ಕಾಲ ತರಗತಿ ನಡೆಸುತ್ತವೆ. ನೌಕರಿಯಲ್ಲಿರುವ ಪೋಷಕರು ಆದಾಯ ತೆರಿಗೆ ರಹಿತ [೭] £೫೫ರಷ್ಟು ಹಣವನ್ನು ಪ್ರತಿ ವಾರವೂ ಪಾವತಿಸಬೇಕಾಗುತ್ತದೆ, ಇದು ಪ್ರತಿ ವಾರದ ಒಂದು ಅಥವಾ ಎರಡು ದಿನಗಳಿಗೆ ಪಾವತಿಸಲು ಸಾಕಾಗುತ್ತದೆ.

ಸ್ಕಾಟಿಷ್ ಸರ್ಕಾರವು ನರ್ಸರಿ ಶಾಲೆಗಳ ಅಗತ್ಯವನ್ನು ಅರ್ಲಿ ಇಯರ್ಸ್ ಫ್ರೇಮ್ ವರ್ಕ್[೮] ನಲ್ಲಿ ಹಾಗು ಕರಿಕ್ಯುಲಂ ಫಾರ್ ಎಕ್ಸಲೆನ್ಸ್ ನಲ್ಲಿ ವಿವರಿಸುತ್ತದೆ. ಪ್ರತಿ ಶಾಲೆಯು ಇದನ್ನು ಹೆಚ್ಚು ಕಡಿಮೆ ಮುಕ್ತವಾಗಿ ವ್ಯಾಖ್ಯಾನಿಸುತ್ತವೆ (ಅವರ ಆಡಳಿತ ವ್ಯವಸ್ಥೆಯನ್ನು ಅವಲಂಬಿಸಿ), ಆದರೆ ಶಿಶುವಿಹಾರವನ್ನು ನಡೆಸಲು ದೊರೆತಿರುವ ಪರವಾನಗಿಯನ್ನು ಉಳಿಸಿಕೊಳ್ಳಲು ಕೇರ್ ಕಮಿಷನ್ ನ ನಿಯಮಗಳಿಗೆ ಬದ್ಧವಾಗಿರಬೇಕು. ವ್ಯಾಸಂಗ ಕ್ರಮವು ಈ ಕೆಳಕಂಡ ಅಂಶಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ:

 • ಯಶಸ್ವಿ ವಿದ್ಯಾರ್ಥಿಗಳು
 • ದಿಟ್ಟ ವ್ಯಕ್ತಿಗಳು
 • ಜವಾಬ್ದಾರಿಯುತ ನಾಗರೀಕರು
 • ಪರಿಣಾಮಕಾರಿ ಕೊಡುಗೆದಾರರು


ಶಿಕ್ಷಣದ ಮೂಲಭೂತ ಹಂತದ ಭಾಗವಾಗಿ ನರ್ಸರಿಯು ರೂಪುಗೊಳ್ಳುತ್ತದೆ. ಇಸವಿ ೧೯೮೦ರಲ್ಲಿ ಇಂಗ್ಲೆಂಡ್ ಹಾಗು ವೇಲ್ಸ್ ಅಧಿಕೃತವಾಗಿ ಉತ್ತರ ಐರಿಶ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು, ಇದರಂತೆ ಸ್ಥಳೀಯ ಶಿಕ್ಷಣ ಆಡಳಿತದ ನಿಯಮಗಳನ್ನು ಅವಲಂಬಿಸಿ ಮಕ್ಕಳು ಐದು ವರ್ಷದವರಾಗುತ್ತಿದ್ದಂತೆ ಆ ಶೈಕ್ಷಣಿಕ ವರ್ಷ ಅಥವಾ ಅವಧಿಯಲ್ಲಿ ಶಾಲೆಗೇ ಹೋಗಲು ಆರಂಭಿಸುತ್ತಾರೆ. ಸ್ಕಾಟ್ ಲ್ಯಾಂಡ್ ನಲ್ಲಿ ನಾಲ್ಕೂವರೆ ವರ್ಷದಿಂದ ಐದೂವರೆ ವರ್ಷದ ನಡುವಿನ ಮಕ್ಕಳಿಗೆ ಅವರ ಹುಟ್ಟಿದ ದಿನವನ್ನು ಆಧರಿಸಿ ಶಿಕ್ಷಣವು ಕಡ್ಡಾಯವಾಗಿರುತ್ತದೆ. (ಬರುವ ವರ್ಷದ ಫೆಬ್ರವರಿಗೆ ನಾಲ್ಕು ವರ್ಷ ತುಂಬುವ ಮಕ್ಕಳಿಗೆ ಈ ವರ್ಷದ ಆಗಸ್ಟ್ ನಿಂದ ಶಾಲೆಯು ಆರಂಭಗೊಳ್ಳುತ್ತದೆ). ಇಂಗ್ಲೆಂಡ್ ನಲ್ಲಿ ಮೊದಲ ವರ್ಷದ ಕಡ್ಡಾಯ ಶಿಕ್ಷಣವನ್ನು ರಿಸೆಪ್ಶನ್ ಎಂದು, ವೆಲ್ಷ್ ನಲ್ಲಿ ಡೋಸ್ಬರ್ತ್ ಡರ್ಬಿನ್ ಎಂದು ಹಾಗು ಸ್ಕಾಟ್ ಲ್ಯಾಂಡ್ ಹಾಗು ಉತ್ತರ ಐರ್ಲೆಂಡ್ ನಲ್ಲಿ ಪ್ರೈಮರಿ ಒನ್ ಎಂದು ಕರೆಯಲಾಗುತ್ತದೆ.

ಅಮೆರಿಕ ಸಂಯುಕ್ತ ಸಂಸ್ಥಾನ[ಮೂಲವನ್ನು ಸಂಪಾದಿಸು]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಶಿಶುವಿಹಾರಗಳು ಸಾಮಾನ್ಯವಾಗಿ K-೧೨ ಶಿಕ್ಷಣ ವ್ಯವಸ್ಥೆಯ ಭಾಗವಾಗಿರುತ್ತದೆ. ಇದು ಕೇವಲ ಒಂದು ವರ್ಷದ ಅವಧಿಯದ್ದಾಗಿರುತ್ತದೆ. ಸಾಮಾನ್ಯವಾಗಿ ಮಕ್ಕಳು ಐದರಿಂದ ಆರನೇ ವಯಸ್ಸಿನಲ್ಲಿ ಶಿಶುವಿಹಾರಕ್ಕೆ ಹೋಗುತ್ತಾರೆ. ಶಿಶುವಿಹಾರವನ್ನು ವಿಧ್ಯುಕ್ತ ಶಿಕ್ಷಣದ ಮೊದಲ ವರ್ಷವೆಂದು ಪರಿಗಣಿಸಲಾಗುತ್ತದೆ, ಆದಾಗ್ಯೂ ಮಕ್ಕಳು ಪ್ರಿಸ್ಕೂಲ್ ಅಥವಾ ಪ್ರಿ-K ತರಗತಿಗೆ ಇದಕ್ಕೂ ಮುಂಚೆ ಹೋಗಬಹುದು, (ಹಿಂದಿನ ನರ್ಸರಿ ಶಾಲೆ). ಶಿಶುವಿಹಾರವನ್ನು ಪ್ರಾಥಮಿಕ ಶಿಕ್ಷಣದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗುತ್ತದೆ, ಇದೀಗ ಇದನ್ನು ಶಾಲಾ ವ್ಯವಸ್ಥೆಯ ಒಂದು ಅಂಗವಾಗಿ ಸಂಪೂರ್ಣ ಏಕೀಕರಿಸಲಾಗಿದೆ ಜೊತೆಗೆ ಶಾಲೆಯು ಪೂರ್ಣಾವಧಿಯದಾಗಿದ್ದು ಕೆಲವೊಂದು ಪ್ರದೇಶದಲ್ಲಿ ಕೇವಲ ಅರ್ಧ ದಿವಸಕ್ಕೆ ಮಾತ್ರ ತರಗತಿಗಳು ನಡೆಯುತ್ತವೆ. ರಾಜ್ಯದ ಕಾನೂನನ್ನು ಆಧರಿಸಿ, ಮಕ್ಕಳು ತಮ್ಮ ಶಿಶುವಿಹಾರದ ತರಗತಿಗಳಿಗೆ ಹೋಗಬೇಕಾಗುತ್ತದೆ; ಏಕೆಂದರೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಡ್ಡಾಯವಾದ ಕಾನೂನುಗಳು ಹಲವು ರಾಜ್ಯಗಳಲ್ಲಿ ಐದನೇ ವರ್ಷದಲ್ಲಿ ಆರಂಭವಾಗುತ್ತವೆ. ಇತರ ರಾಜ್ಯಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಡ್ಡಾಯವಾದ ಕಾನೂನುಗಳು ಆರು ಅಥವಾ ಏಳನೇ ವರ್ಷದಲ್ಲಿ ಆರಂಭವಾಗುತ್ತದೆ, ಆದಾಗ್ಯೂ ಈ ರಾಜ್ಯಗಳು ಉಚಿತ ಶಿಶುವಿಹಾರಗಳನ್ನು ನಡೆಸುತ್ತವೆ. ರೂಢಿಯಲ್ಲಿ, ಬಹುತೇಕ ಎಲ್ಲ ಮಕ್ಕಳು ತಮ್ಮ ಶಿಶುವಿಹಾರದ ವರ್ಷವನ್ನು ಪೂರ್ಣಗೊಳಿಸುತ್ತಾರೆ.

ಶಿಶುವಿಹಾರದ ಶಿಕ್ಷಣದಲ್ಲಿ ಮಕ್ಕಳಿಗೆ ಸಕ್ರಿಯ ಕಲಿಕೆ ಹಾಗು ಸಾಮಾಜಿಕ/ನಡವಳಿಕೆಯನ್ನು ಕಲಿಯುವ ಅವಕಾಶದ ಪ್ರಯೋಜನವಿರುತ್ತದೆ. ಅದೇ ಸಮಯದಲ್ಲಿ, ಶಾಲೆಯ ಅವಧಿಗಿಂತ ಮಕ್ಕಳು ಶಿಶುವಿಹಾರದ ಅವಧಿಯಲ್ಲಿ ಏನನ್ನು ಕಲಿಯುತ್ತಾರೆ ಎಂಬುದು ಮುಖ್ಯವಾಗುತ್ತದೆ.

"ಹೈ/ಸ್ಕೋಪ್ ಲರ್ನಿಂಗ್" ಎಂಬುದು ಕಲಿಕೆಯ ಒಂದು ಮಾದರಿಯಾಗಿದೆ, ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಹಲವು ಶಿಶುವಿಹಾರಗಳು ಬಳಸಿಕೊಳ್ಳುತ್ತವೆ.[ಸೂಕ್ತ ಉಲ್ಲೇಖನ ಬೇಕು] ಕಲಿಕೆಯ ಮಾದರಿಯು ಬಹಳ ಪರಿಣಾಮಕಾರಿಯಾಗಿರುವುದರ ಜೊತೆಗೆ ಮಕ್ಕಳು ಹಾಗು ಶಿಕ್ಷಕರಿಗೆ ಬಹಳ ಉಪಯುಕ್ತವಾಗಿರುತ್ತದೆ. ಇದು "ಯೋಜನೆ, ನಿರ್ವಹಣೆ, ವಿಮರ್ಶೆ" ಎಂಬ ಮಾರ್ಗವನ್ನು ಅಳವಡಿಸಿಕೊಂಡಿದೆ. ಇದು ಮಕ್ಕಳಿಗೆ ತಮ್ಮ ಕಲಿಕೆಯ ಬಗ್ಗೆ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮೊದಲಿಗೆ ಮಕ್ಕಳು ತಮ್ಮ ಚಟುವಟಿಕೆಯ ಬಗ್ಗೆ "ಯೋಜನೆ"ಯನ್ನು ರೂಪಿಸುತ್ತಾರೆ. ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಶಿಕ್ಷಕರು ಚಟುವಟಿಕೆಗಳನ್ನು ಆಯ್ಕೆ ಮಾಡುವುದರ ಜೊತೆಗೆ ಕಲಿಕೆಯನ್ನು ಆರಂಭಿಸುತ್ತಾರೆ, ಸಮಸ್ಯೆಗಳನ್ನು ಬಿಡಿಸುವುದು, ಓದು, ಭಾಷೆ, ಗಣಿತ, ಕುಶಲತೆ ಮುಂತಾದವು ಯಾವುದೇ ಆಗಿರಬಹುದು. ಈ ಯೋಜನೆಯು ಸಾಮಾನ್ಯವಾಗಿ ಮಕ್ಕಳು ತರಗತಿಗೆ ಕಾಲಿಟ್ಟ ಕೂಡಲೇ ಆರಂಭವಾಗುತ್ತದೆ. ನಂತರ ಮಕ್ಕಳು ತಮ್ಮ ಚಟುವಟಿಕೆಯನ್ನು "ಆರಂಭಿಸುತ್ತಾರೆ". ಇಂತಹ ಕೆಲವು ಚಟುವಟಿಕೆಗಳಲ್ಲಿ ವಾಟರ್ ಟೇಬಲ್, ಬಿಲ್ಡಿಂಗ್ ಬ್ಲಾಕ್ ಗಳು, ಒಂದು ಕ್ರಿಯಾತ್ಮಕ ನೃತ್ಯ ಕ್ಷೇತ್ರ, "ಪ್ರಸಾಧನ ಕ್ಷೇತ್ರ", ವಾಚನ ಕ್ಷೇತ್ರ, ಹಾಗು ಒಂದು ಚಿತ್ರಕಲಾ ಟೇಬಲ್ ನ್ನು ಒಳಗೊಂಡಿರುತ್ತದೆ. ಮಕ್ಕಳಲ್ಲಿ ಬಹುತೇಕರು ಈ ರೀತಿಯಾದ ಸಕ್ರಿಯ "ಚಟುವಟಿಕೆ" ಕಾರ್ಯದಲ್ಲಿ ಸಮಯವನ್ನು ಕಳೆಯುತ್ತಾರೆ. ಈ ಮಾರ್ಗದ ಕಡೆಯ ಭಾಗವೆಂದರೆ ವಿಮರ್ಶೆ ಮಾಡುವುದು. ಆ ದಿನದಲ್ಲಿ ಮಕ್ಕಳು ಹಾಗು ಶಿಕ್ಷಕರು ಏನು ಮಾಡಿದ್ದರೆಂಬುದನ್ನು ವಿಮರ್ಶೆ ಮಾಡಲಾಗುತ್ತದೆ. ಇದನ್ನು ಒಂದು ದೊಡ್ಡ ಗುಂಪಿನಲ್ಲಿ ಮಾಡಬಹುದು, ವಿಶೇಷವಾಗಿ ಆ ದಿನಕ್ಕೆ ಇದ್ದ ಒಂದು ವಿಷಯವನ್ನು ಎಲ್ಲ ಚಟುವಟಿಕೆಗಳಲ್ಲಿ ಬಳಸಿಕೊಂಡಿರಬಹುದು, ಅಥವಾ ವೈಯಕ್ತಿಕವಾಗಿ ಬಳಸಿಕೊಂಡಿರಬಹುದು. ಮಕ್ಕಳು ಏನು ಮಾಡಿದರು ಹಾಗು ಎಷ್ಟು ಇಷ್ಟ ಪಟ್ಟರು ಹಾಗು ಅದರಿಂದ ಏನು ಕಲಿತರು ಎಂಬುದನ್ನು ಚರ್ಚಿಸುತ್ತಾರೆ. ಈ ಹೈ/ಸ್ಕೋಪ್ ಲರ್ನಿಂಗ್ ಮಾದರಿಯು ಜನಪ್ರಿಯವಾಗಿರುವುದರ ಜೊತೆಗೆ ಇದನ್ನು ವ್ಯಾಪಕವಾಗಿ ಸ್ವೀಕರಿಸಲಾಗಿದೆ; ಏಕೆಂದರೆ ಇದು ಮಕ್ಕಳಿಗೆ ತಮ್ಮದೇ ಕಲಿಕೆಯ ಬಗ್ಗೆ ಜವಾಬ್ದಾರಿಯನ್ನು ಹೊಂದಿರುವುದಕ್ಕೆ ಅವಕಾಶ ಮಾಡಿಕೊಡುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಡ್ಡಾಯ ಕಾನೂನುಗಳು ಶಿಶುವಿಹಾರ ಅಥವಾ ಪ್ರಿಸ್ಕೂಲ್ ನ ವ್ಯಾಪಕವಾದ ವ್ಯವಸ್ಥೆಗೆ ಮುಂಚೆ ಅಳವಡಿಸಿಕೊಳ್ಳಲಾಗಿತ್ತು. ಕೆಲವು ರಾಜ್ಯಗಳಲ್ಲಿ, ಮಕ್ಕಳು ಶಿಶುವಿಹಾರಕ್ಕೆ ಹೋಗುವುದು ಕಡ್ಡಾಯವಲ್ಲ.[೯] ದಾಖಲಾತಿಗೆ ಕಡ್ಡಾಯ ವಯಸ್ಸು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿ ಐದರಿಂದ ಏಳು ವರ್ಷಗಳ ನಡುವೆ ಇರುತ್ತದೆ. ಸಾಮಾನ್ಯವಾಗಿ ಎಲ್ಲ ರಾಜ್ಯಗಳಲ್ಲಿ, ರಾಜ್ಯವು ನಿಗದಿ ಪಡಿಸಿದ ದಿನಾಂಕದ ಪ್ರಕಾರ ಶರತ್ಕಾಲದ ಅವಧಿಯಲ್ಲಿ ಶಿಶುವಿಹಾರವು ಆರಂಭವಾಗುತ್ತದೆ, ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಥವಾ ಶರತ್ಕಾಲದಲ್ಲಿ. ಶಿಶುವಿಹಾರವು ಕಡ್ಡಾಯವಾಗಿರದ ರಾಜ್ಯದಲ್ಲಿ ಮಕ್ಕಳು ಐದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಅವರು ಶಿಶುವಿಹಾರಕ್ಕೆ ಹೋಗದಿದ್ದರೂ ಅವರನ್ನು ನೇರವಾಗಿ ಮೊದಲ ಗ್ರೇಡ್ ನ ಕಡ್ಡಾಯ ಶಿಕ್ಷಣಕ್ಕೆ ದಾಖಲಿಸಿಕೊಳ್ಳಲಾಗುತ್ತದೆ.

ಇವನ್ನೂ ಗಮನಿಸಿ[ಮೂಲವನ್ನು ಸಂಪಾದಿಸು]

 • ಹಗಲು ಪಾಲನೆ
 • ನರ್ಸರಿ ಶಾಲೆ
 • ಶಾಲಾಪೂರ್ವದ ಗಣಿತ ಕೌಶಲಗಳು
 • ಶಾಲಾಪೂರ್ವದ ಶಿಶುವಿಹಾರ
 • ಶಾಲಾಪೂರ್ವ ಶಿಕ್ಷಣ
 • ಅರಣ್ಯ ಶಿಶುವಿಹಾರ
 • ಶಾಲಾಪೂರ್ವದ ಪ್ಲೇಗ್ರೂಪ್
 • ಆರಂಭಿಕ ಬಾಲ್ಯ ಶಿಕ್ಷಣ
 • ಸಾರ್ವತ್ರಿಕ ಪೂರ್ವಶಾಲೆ
 • ಮೊದಲನೇ ಗ್ರೇಡ್
 • ಮಾಂಟೆಸ್ಸೊರಿ

ಆಕರಗಳು[ಮೂಲವನ್ನು ಸಂಪಾದಿಸು]

 1. ೧.೦ ೧.೧ Vag, Otto (March 1975). "The Influence of the English Infant School in Hungary". International Journal of Early Childhood. Springer. 7 (1): 132–136. 
 2. ನ್ಯೂ ಲನರ್ಕ್ ಕಿಡ್ಸ್: ರಾಬರ್ಟ್ ಓವೆನ್
 3. ಎಜುಕೇಶನ್ ಇನ್ ರಾಬರ್ಟ್ ಓವೆನ್'ಸ್ ನ್ಯೂ ಸೊಸೈಟಿ: ದಿ ನ್ಯೂ ಲನರ್ಕ್ ಇನ್ಸ್ಟಿಟ್ಯೂಟ್ ಅಂಡ್ ಸ್ಕೂಲ್ಸ್
 4. Wilderspin, Samuel (1823). The Importance of Educating the Infant Poor. London. 
 5. ಬುಡಾಪೆಸ್ಟ್ ಲೆಕ್ಸಿಕನ್, ೧೯೯೩
 6. ಒಂಟಾರಿಯೋ'ಸ್ ಸ್ಕೂಲ್ ಸಿಸ್ಟಂ, ಮಾರ್ಚ್ ೫,೨೦೦೮ರಲ್ಲಿ ಸಂಕಲನಗೊಂಡಿದೆ
 7. ಟ್ಯಾಕ್ಸ್ ಫ್ರೀ ಚೈಲ್ಡ್ ಕೇರ್ ರೆಗ್ಯುಲೇಶನ್ಸ್, UK ಗವರ್ನಮೆಂಟ್ HMRC
 8. ಅರ್ಲಿ ಇಯರ್ಸ್ ಫ್ರೇಮ್ ವರ್ಕ್, ಸ್ಕಾಟಿಷ್ ಗವರ್ನಮೆಂಟ್, ಜನವರಿ ೨೦೦೯
 9. [೧]ಡಿಸೆಂಬರ್ ೨೩, ೨೦೦೮ರಲ್ಲಿ ಸಂಕಲನಗೊಂಡಿದೆ

ಹೆಚ್ಚಿನ ಓದಿಗಾಗಿ[ಮೂಲವನ್ನು ಸಂಪಾದಿಸು]

ಕೆಳಗೆ ಕಂಡುಬರುವ ಪಟ್ಟಿಯು ನಿರ್ದಿಷ್ಟವಾಗಿ ಉತ್ತರ ಅಮೆರಿಕಾದ ಶಿಶುವಿಹಾರಕ್ಕೆ ಸಂಬಂಧಿಸಿದೆ, ಇದರಂತೆ ಇದು ವಿಧ್ಯುಕ್ತ ಶಿಕ್ಷಣದ ಮೊದಲ ವರ್ಷವಾಗಿದೆ ಹಾಗು ಇದು ವಿಶ್ವದ ಇತರ ಎಡೆಗಳಲ್ಲಿ ಇದುವ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯ ಭಾಗವಾಗಿಲ್ಲ:

 • ಕ್ರಯನ್, J. R., ಶೀಹನ್, R., ವಿಯೇಚೆಲ್, J., & ಬ್ಯಾಂಡಿ-ಹೆಡ್ಡೆನ್, I. G.(೧೯೯೨). ಪೂರ್ಣ ದಿವಸದ ಶಿಶುವಿಹಾರದಿಂದ ಯಶಸ್ಸು ಸಿಗುತ್ತದೆ: ಹೆಚ್ಚಿನ ಸಕಾರಾತ್ಮಕ ನಡವಳಿಕೆ ಹಾಗು ಹೆಚ್ಚಿದ ಸಾಧನೆ ಮುಂದಿನ ವರ್ಷಗಳಲ್ಲಿ ದೊರೆಯುತ್ತದೆ." ಅರ್ಲಿ ಚೈಲ್ಡ್ ಹುಡ್ ರಿಸರ್ಚ್ ಕ್ವಾರ್ಟರ್ಲಿ, ೭(೨), ೧೮೭-೨೦೩. EJ ೪೫೦ ೫೨೫.
 • ಎಲಿಕರ್, J., & ಮಾಥುರ್, S.(೧೯೯೭). "ಅವರು ಅಲ್ಲಿ ದಿನಪೂರ್ತಿ ಏನು ಮಾಡುತ್ತಾರೆ? ಪೂರ್ತಿ ದಿವಸದ ಶಿಶುವಿಹಾರದ ಒಂದು ವ್ಯಾಪಕವಾದ ಅರ್ಹತೆ ನಿರ್ಧಾರ." ಅರ್ಲಿ ಚೈಲ್ಡ್ ಹುಡ್ ರಿಸರ್ಚ್ ಕ್ವಾರ್ಟರ್ಲಿ, ೧೨(೪), ೪೫೯-೪೮೦. EJ ೫೬೩ ೦೭೩
 • ಫುಸರೋ, J. A.(೧೯೯೭). ವಿದ್ಯಾರ್ಥಿಯ ಸಾಧನೆಯಲ್ಲಿ ಪೂರ್ಣ ದಿವಸದ ಶಿಶುವಿಹಾರದ ಪ್ರಭಾವ: ಒಂದು ಮೆಟಾ ವಿಶ್ಲೇಷಣೆ." ಚೈಲ್ಡ್ ಸ್ಟಡಿ ಜರ್ನಲ್, ೨೭(೪), ೨೬೯-೨೭೭. EJ ೫೬೧ ೬೯೭
 • ಗುಲ್ಲೋ, D. F.(೧೯೯೦). ಕೌಟುಂಬಿಕ ಪರಿಸ್ಥಿಗಳಲ್ಲಿ ಬದಲಾವಣೆ: ಪೂರ್ತಿ ದಿವಸದ ಶಿಶುವಿಹಾರದ ಅಭಿವೃದ್ಧಿಯ ಪ್ರಭಾವ." ಯಂಗ್ ಚಿಲ್ಡ್ರನ್, ೪೫(೪), ೩೫-೩೯. EJ ೪೦೯ ೧೧೦
 • ಹೌಸ್ಡೆನ್, T., & ಕಾಮ್, R. (೧೯೯೨). "ಪೂರ್ಣ ದಿವಸದ ಶಿಶುವಿಹಾರ : ಸಂಶೋಧನೆಯ ಸಾರಾಂಶ." ಕಾರ್ಮೈಕಲ್, CA: ಸ್ಯಾನ್ ಜುವಾನ್ ಯೂನಿಫೈಡ್ ಸ್ಕೂಲ್ ಡಿಸ್ಟ್ರಿಕ್ಟ್. ED ೩೪೫ ೮೬೮.
 • ಕಾರ್ವೆಯಿಟ್, N.(೧೯೯೨). "ದಿ ಕಿಂಡರ್ ಗಾರ್ಟನ್ ಎಕ್ಸ್ಪೀರಿಯನ್ಸ್." ಎಜುಕೇಶನಲ್ ಲೀಡರ್ ಶಿಪ್, ೪೯(೬), ೮೨-೮೬. EJ ೪೪೧ ೧೮೨.
 • ಕೂಪ್ಮನ್ಸ್, M.(೧೯೯೧). "ಸಾಧನೆಯಲ್ಲಿ ಪೂರ್ಣಾವಧಿಯ ಶಿಶುವಿಹಾರ ಹಾಜರಾತಿಯ ರೇಖಾಂಶೀಯ ಪರಿಣಾಮಗಳ ಒಂದು ಅಧ್ಯಯನ." ನೆವಾರ್ಕ್, NJ: ನೆವಾರ್ಕ್ ಬೋರ್ಡ್ ಆಫ್ ಎಜುಕೇಶನ್. ED ೩೩೬ ೪೯೪..
 • ಮೊರ್ರೌ, L. M., ಸ್ಟ್ರಿಕ್ ಲ್ಯಾಂಡ್, D. S., & ವೂ, D. G.(೧೯೯೮). "ಅರ್ಧ ದಿವಸದ ಹಾಗು ಪೂರ್ಣ ದಿವಸದ ಶಿಶುವಿಹಾರದ ಸಾಕ್ಷರತಾ ಮಾಹಿತಿ." ನೆವಾರ್ಕ್, DE: ಇಂಟರ್ನ್ಯಾಷನಲ್ ರೀಡಿಂಗ್ ಅಸೋಸಿಯೇಶನ್. ED ೪೩೬ ೭೫೬.
 • ಒಲ್ಸೇನ್, D., & ಜಿಗ್ಲರ್, E.(೧೯೮೯). "ಪೂರ್ಣ ದಿವಸದ ಶಿಶುವಿಹಾರ ಚಟುವಟಿಕೆಯ ಒಂದು ಅಂದಾಜು." ಅರ್ಲಿ ಚೈಲ್ಡ್ ಹುಡ್ ರಿಸರ್ಚ್ ಕ್ವಾರ್ಟರ್ಲಿ, ೪(೨), ೧೬೭-೧೮೬. EJ ೩೯೪ ೦೮೫
 • ಪುಲೆಯೋ, V.T.((೧೯೮೮) ಪೂರ್ಣ ದಿವಸದ ಶಿಶುವಿಹಾರ ಬಗೆಗಿನ ವಿಮರ್ಶೆ ಹಾಗು ಸಂಶೋಧನೆಯ ವಿಮರ್ಶಾತ್ಮಕ ಲೇಖನ." ಎಲಿಮೆಂಟರಿ ಸ್ಕೂಲ್ ಜರ್ನಲ್, ೮೮(೪), ೪೨೭-೪೩೯. EJ ೩೬೭ ೯೩೪
 • ಟವರ್ಸ್, J. M.(೧೯೯೧). "ಪೂರ್ಣ ದಿವಸದ, ಪ್ರತಿ ನಿತ್ಯದ ಶಿಶುವಿಹಾರದ ಎಡೆಗಿನ ಅಭಿಪ್ರಾಯ." ಚಿಲ್ಡ್ರನ್ ಟುಡೆ, ೨೦(೧), ೨೫-೨೮. EJ ೪೩೧ ೭೨೦
 • ವೆಸ್ಟ್, J., ಡೆನ್ಟನ್, K., & ಜರ್ಮಿನೋ-ಹೌಸ್ಕೆನ್, E.(೨೦೦೦). "ಅಮೇರಿಕಾ'ಸ್ ಕಿಂಡರ್ ಗಾರ್ಟನರ್ಸ್." ವಾಶಿಂಗ್ಟನ್, DC: ನ್ಯಾಷನಲ್ ಸೆಂಟರ್ ಫಾರ್ ಎಜುಕೇಶನಲ್ ಸ್ಟ್ಯಾಟಿಸ್ಟಿಕ್ಸ್..[http://nces.ed.gov/pubs2000/2000070

ನೋಡಿ[ಮೂಲವನ್ನು ಸಂಪಾದಿಸು]


ಬಾಹ್ಯ ಕೊಂಡಿಗಳು[ಮೂಲವನ್ನು ಸಂಪಾದಿಸು]