ವಿಷಯಕ್ಕೆ ಹೋಗು

ಪ್ರಾಥಮಿಕ ಶಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಪಾನ್‍ನಲ್ಲಿ ಒಂದು ಪ್ರಾಥಮಿಕ ಶಾಲಾ ತರಗತಿ

ಪ್ರಾಥಮಿಕ ಶಾಲೆಯು ಸುಮಾರು ನಾಲ್ಕರಿಂದ ಹನ್ನೊಂದು ವರ್ಷ ವಯಸ್ಸಿನ ಮಕ್ಕಳಿಗಾಗಿ ಇರುವ ಶಾಲೆ. ಇಲ್ಲಿ ಅವರು ಪ್ರಾಥಮಿಕ ಶಿಕ್ಷಣ ಅಥವಾ ಮೂಲಶಿಕ್ಷಣವನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಇದು ಶಾಲಾಪೂರ್ವದ ನಂತರ ಮತ್ತು ಪ್ರೌಢ ಶಾಲೆಗೆ ಮೊದಲು ಬರುತ್ತದೆ.

ಶಿಕ್ಷಣದ ಅಂತರರಾಷ್ಟ್ರೀಯ ಸಾಮಾನ್ಯ ವರ್ಗೀಕರಣವ್ಯ್ ಪ್ರಾಥಮಿಕ ಶಿಕ್ಷಣವನ್ನು ಒಂಟಿ ಹಂತವೆಂದು ಪರಿಗಣಿಸುತ್ತದೆ. ಇದರಲ್ಲಿನ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ಓದು, ಬರಹ ಹಾಗೂ ಗಣಿತದಲ್ಲಿ ಮೂಲಭೂತ ಕೌಶಲಗಳನ್ನು ಒದಗಿಸಲು ಮತ್ತು ಕಲಿಕೆಗೆ ದೃಢವಾದ ಅಡಿಪಾಯವನ್ನು ಸ್ಥಾಪಿಸಲು ವಿನ್ಯಾಸಗೊಳಿಸಲಾಗಿರುತ್ತದೆ.

ಆಡಳಿತ ಮತ್ತು ಹಣ ಒದಗಣೆ[ಬದಲಾಯಿಸಿ]

ಒಂದು ಶಾಲೆಗೆ ಹಣ ಒದಗಿಸುವ ಮೂರು ಮುಖ್ಯ ಮಾರ್ಗಗಳಿವೆ: ಇದನ್ನು ಸಾಮಾನ್ಯ ತೆರಿಗೆ ಸಂದಾಯದ ಮೂಲಕ ರಾಜ್ಯವು ಒದಗಿಸಬಹುದು, ಇದನ್ನು ಮಸೀದಿ ಅಥವಾ ಚರ್ಚ್‌ನಂತಹ ಒತ್ತಡ ಗುಂಪು ಒದಗಿಸಬಹುದು, ಇದನ್ನು ಒಂದು ಧನಸಹಾಯ ನೀಡುವ ಸಂಸ್ಥೆಯು ಒದಗಿಸಬಹುದು ಅಥವಾ ತಂದೆತಾಯಿಗಳು ನೀಡುವ ಕೊಡುಗೆಗಳಿಂದ ಹಣ ಒದಗಿಸಬಹುದು ಅಥವಾ ಈ ವಿಧಾನಗಳ ಸಂಯೋಜನೆಯಿಂದ. ಶಾಲೆಯ ದೈನಂದಿನ ಮೇಲ್ವಿಚಾರಣೆಯು ಆಡಳಿತ ಮಂಡಳಿ, ಒತ್ತಡ ಗುಂಪು ಅಥವಾ ಶಾಲೆಯ ಮಾಲೀಕನ ಮೂಲಕ ಇರಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]