ಪ್ರಶಸ್ತಿಗಳು
ಗೋಚರ
ಸಮಾಜದಲ್ಲಿ ವ್ಯಕ್ತಿ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗಳನ್ನು ಮಾಡಿದಾಗ, ಅಂತಹವರನ್ನು ಗುರುತಿಸಿ ಗೌರವಿಸುವ ಕೆಲಸ ಆಯಾ ಕ್ಷೇತ್ರದ ಅನುಭವಿಗಳಿಗೆ ತಿಳಿದಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಅವರ ಸೇವೆಗನುಗುಣವಾಗಿ ನೀಡುವ ಪುರಸ್ಕಾರವನ್ನು ಪ್ರಶಸ್ತಿಗಳೆಂದು ಕರೆಯಲಾಗುತ್ತದೆ. ಇಂತಹ ಪ್ರಶಸ್ತಿಗಳನ್ನು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲೂ ಕೊಡುತ್ತಾರೆ.
ಪ್ರಶಸ್ತಿಗಳು
[ಬದಲಾಯಿಸಿ]ಈ ಪುಟದಲ್ಲಿ ಕನ್ನಡಿಗರಿಗೆ ಸಂಬಂಧಿಸಿ ಸಂದ ಪ್ರಶಸ್ತಿಗಳನ್ನು ಪರಿಚಯ ಮಾಡಲಾಗಿದೆ.
ಅಂತಾರಾಷ್ಟ್ರೀಯ ಪ್ರಶಸ್ತಿಗಳು
[ಬದಲಾಯಿಸಿ]- ಸ್ಟೀಡಿಷ್ ಅಕಾಡೆಮಿ ಪ್ರಶಸ್ತಿ
- ಅಂತರ ರಾಷ್ಟೀಯ ಮಟ್ಟದಲ್ಲಿ ಕಲಾ ಕ್ಷೇತ್ರದಲ್ಲಿ ಹೆಸರು ಮಾಡಿದ ವ್ಯಕ್ತಿಗಳಿಗೆ ಸ್ಟೀಡಿಷ್ ಅಕಾಡೆಮಿಯು ನೀಡುವ ಪ್ರಶಸ್ತಿ. ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರಿಗೆ ಈ ಗೌರವ ಲಭಿಸಿರುತ್ತದೆ. ಅವರು ಬರೆದ ಕೃತಿ; ಯಕ್ಷಗಾನ-ಬಯಲಾಟ
- ಮ್ಯಾಗಸಸೆ ಪ್ರಶಸ್ತಿ
- ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ಪ್ರಶಸ್ತಿ. ಕರ್ನಾಟಕದ ೩ ಜನರಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆದಿರುವ ಕನ್ನಡ ಸಾಹಿತಿ; ಕೆ.ವಿ.ಸುಬ್ಬಣ್ಣ
- ಬೂಕರ್ ಪ್ರಶಸ್ತಿ
- ಅರವಿಂದ್ ಅಡಿಗ ಬರೆದ Tiger The White Tiger ಪುಸ್ತಕಕ್ಕೆ ಮ್ಯಾನ್ ಬೂಕರ್ ಪ್ರಶಸ್ತಿ ಬಂದಿದೆ.
ರಾಷ್ಟ್ರೀಯ ಪ್ರಶಸ್ತಿ
[ಬದಲಾಯಿಸಿ]- ಎಸ್. ವಿ. ಪರಮೇಶ್ವರ ಭಟ್ಟ ಪ್ರಶಸ್ತಿ]]
- ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಕರ್ನಾಟಕ ರತ್ನ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಕಬೀರ ಪ್ರಶಸ್ತಿ
- ಕನಕ-ಪುರಂದರ ಪ್ರಶಸ್ತಿ
- ಕನಕಶ್ರೀ ಪ್ರಶಸ್ತಿ
- ಕು.ಶಿ. ಜಾನಪದ ಪ್ರಶಸ್ತಿ
- ಕುಮಾರನ್ ಆಶಾನ್ ಪ್ರಶಸ್ತಿ
- ಕೇಶವ ಪ್ರಶಸ್ತಿ
- ಕಾವ್ಯ ಪ್ರಶಸ್ತಿ
- ಕೇಂದ್ರ ಸಾಹಿತ್ಯ ಅಕಾಡೆಮಿ
- ಕ್ರೀಡಾ ಪ್ರಶಸ್ತಿಗಳು
- ಗುಬ್ಬಿ ವೀರಣ್ಣ ಪ್ರಶಸ್ತಿ
- ಚಲನಚಿತ್ರ ಪ್ರಶಸ್ತಿಗಳು
- ಜ್ಞಾನಪೀಠ ಪ್ರಶಸ್ತಿ
- ಕನ್ನಡದ ಜ್ಞಾನಪೀಠ ಪುರಸ್ಕೃತ ಮಹನೀಯರು ೮ ಜನ. ೧. ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ.
- ಭಾರತೀಯ ಜ್ಞಾನಪೀಠ ಪ್ರಶಸ್ತಿಯು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಮಹನೀಯರಿಗೆ ಕೊಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.[೧]
- ಭಾರತದ ಪ್ರಶಸ್ತಿ-ಭಾರತದ ಪ್ರಶಸ್ತಿ ಕೈಗಾರಿಕೋದ್ಯಮಿಗಳೂ, ಭಾರತೀಯ ಭಾಷೆಗಳು ಕಲೆ ಸಂಸ್ಕೃತಿ ಕುರಿತು ಅಪಾರ ಶ್ರದ್ಧೆಯುಳ್ಳವರೂ ಆಗದ್ದ ಶ್ರೀ ಸಹು ಶಾಂತಿ ಪ್ರಸಾದ್ ಜೈನ್ ಅವರು ೧೯೪೪ ಭಾರತೀಯ ಜ್ಞಾನಪೀಠ ಪ್ರತಿಷ್ಠಾನವನ್ನು ಸ್ಧಾಪಸಿದರು. ಸಂಸ್ದೆಯ ಮೊತ್ತಮೊದಲ ಅದ್ಯಕ್ಷರು ಶ್ರೀಮತಿ ರಮಾ ಜೈನ್ ಅವರು. ಭಾರತೀಯ ಜ್ಞಾನಪೀಠವು ತನ್ನ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮಾಡಿದ ಮೊದಲ ಕಾರ್ಯ. ಎರಡನೆಯ ಶತಮಾನದ ಪ್ರಾಕೃ್ತ ಭಾಷೆಯ 'ಷಟ್ ಖಂಡಾಗಮ' ಕೃತಿಯ ಪ್ರಕಟನೆ. ಈ ಗ್ರಂಥ ಮೂಡುಬಿದರೆಯ ಜೈನ ಗ್ರಂಥ ಭಂಡಾರದಲ್ಲಿ ದೊರೆತಿರುವುದು.
- ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿನ ಯಾವುದೇ ಭಾರತೀಯ ಭಾಷೆಯ ಅತ್ಯುತ್ತಮ ಸೃಜನಶೀಲ ಕೃತಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ೧೯೬೫ರಿಂದ ಆರಂಭಿಸಿತು.
- ೧೯೮೨ರಿಂದೀಚೆಗೆ ಲೇಖಕರ ಒಟ್ಟಾರೆ ಕೊಡುಗೆಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
- ಕನ್ನಡ ಭಾಷೆಯು ಒಟ್ಟು ಎಂಟು ಜನ ಲೇಖಕರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿಯು ದೊರಕಿರುವುದು ಒಂದು ದಾಖಲೆಯಾಗಿದೆ. ಭಾರತೀಯ ಭಾಷೆಗಳಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದವರು ಕನ್ನಡಿಗರು ಎಂಬುದು ಅತ್ಯಂತ ಹೆಮ್ಮೆಯ ಸಂಗತಿ.[೨]
- ನಾಡೋಜ ಪ್ರಶಸ್ತಿ
- ನೊಬೆಲ್ ಪ್ರಶಸ್ತಿ
- ಪಂಪ ಪ್ರಶಸ್ತಿ
- ಪತ್ರಿಕೋದ್ಯಮ ಪ್ರಶಸ್ತಿ
- ಪದ್ಮಭೂಷಣ ಪ್ರಶಸ್ತಿ
- ಪದ್ಮವಿಭೂಷಣ ಪ್ರಶಸ್ತಿ
- ಪದ್ಮಶ್ರೀ ಪ್ರಶಸ್ತಿ
- ಭಿಲ್ವಾರ ಪ್ರಶಸ್ತಿ
- ಮುಳಿಯ ತಿಮ್ಮಪ್ಪಯ ಪ್ರಶಸ್ತಿ
- ಮೂರ್ತಿದೇವಿ ಪ್ರಶಸ್ತಿ
- ರಾಜಾಜಿ ಪ್ರಶಸ್ತಿ
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
- ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ
- ರಾಷ್ಟ್ರಕವಿ
- ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ
- ರಾಷ್ಟ್ರೀಯ ಮಕ್ಕಳ ಪ್ರಶಸ್ತಿ
- ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ
- ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ
- ವಿಜ್ಞಾನ ಶಿಕ್ಷಕರಿಗೆ, ಸಂವಹಕರಿಗೆ ಕರ್ನಾಟಕ ಸರ್ಕಾರದ ವಾರ್ಷಿಕ ಪ್ರಶಸ್ತಿ
- ವಿಶಿಷ್ಟ ಸೇವಾ ಪದಕ
- ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
- ವೀಣೆ ರಾಜಾರಾವ್ ಪ್ರಶಸ್ತಿ
- ವೈದ್ಯಕೀಯ ಪ್ರಶಸ್ತಿಗಳು
- ಶಾಂತಿ ಪ್ರಶಸ್ತಿಗಳು
- ಸಂದೇಶ ಪ್ರಶಸ್ತಿ
- ಸರಸ್ವತಿ ಸಮ್ಮಾನ್ ಪ್ರಶಸ್ತಿ
- ಸಾಹಿತ್ಯ ಪ್ರಶಸ್ತಿ
- ಸೇನಾ ಪ್ರಶಸ್ತಿ
- ಸೇವಾ ಪ್ರಶಸ್ತಿಗಳು
ಉಲ್ಲೇಖ
[ಬದಲಾಯಿಸಿ]