ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
ಗೋಚರ
ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯನ್ನು ಆಯೋಜಿಸಿದ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್(ರಿ)ಬೆಂಗಳೂರು. ಪ್ರಕಟಿತ ಕೃತಿಗಳನ್ನು ೨೦೧೩ ರಲ್ಲಿ ಆಹ್ವಾನಿಸಿದ್ದರು. ೨೦೧೪ ರಲ್ಲಿ ಫಲಿತಾಂಶಗಳು ಪ್ರಕಟವಾಗಿವೆ. ಮುಂಬೈನಗರದ ೭ ಸಾಹಿತಿಗಳ ಕೃತಿಗಳು ಪ್ರಶಸ್ತಿಗೆ ಪಾತ್ರವಾಗಿವೆ. ೨೦೧೦-೧೧-೧೨ ಮತ್ತು ೧೩ ಹೀಗೆ ೪ ವರ್ಷಗಳ ಕೃತಿಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. ಈ ಪ್ರಶಸ್ತಿಯು ೩ ಸಾವಿರ ನಗದು ಬಹುಮಾನವನ್ನು ಹೊಂದಿದೆ.
ಬಹುಮಾನಿತರೆಂದು ಘೋಷಿತರಾದ ಸಾಹಿತಿಗಳ ಹೆಸರುಗಳು
[ಬದಲಾಯಿಸಿ]- . ಶ್ರೀ ಶ್ರೀನಿವಾಸ ಜೋಕಟ್ಟೆಯವರ 'ಅಂಡರ್ ವರ್ಲ್ಡ್' (ತನಿಖಾ ವಿಭಾಗದಲ್ಲಿ)
- . ಡಾ. ಜಿ. ಎನ್. ಉಪಾಧ್ಯ-'ಕರ್ನಾಟಕ ಸಂಸ್ಕೃತಿ ಚಿಂತನೆ'(ಶೋಧನಾ ವಿಭಾಗ)
- . ಡಾ. ವಿಶ್ವನಾಥ ಕಾರ್ನಾಡ್- ’ಯಾಜ್ಞ ಸೇನಿ’ ಕಾದಂಬರಿ ವಿಭಾಗ)
- . ರತ್ನಾಕರ ಶೆಟ್ಟಿ-’ಮರಾಠಿ ಕಥಾ ಸಂಹಿತ’(ಅನುವಾದ ವಿಭಾಗ)
- . ಡಾ. ಜಿ .ಡಿ. ಜೋಶಿ ’ಕನ್ನಡ ಕುಲ ರಸಿಕರು' (ಪರಿಚಯ ವಿಭಾಗ)
- . ಡಾ. ಕರುಣಾಕರ ಶೆಟ್ಟಿ-'ವಿಚಾರ ವಿಮರ್ಶೆ'(ವಿಚಾರ ವಿಭಾಗ)
- . ಶ್ರೀ ವಿದ್ಯಾಧರ ಮುತಾಲಿಕ ದೇಸಾಯಿ-’ದಾಸಾಮೃತವಾಣಿ-ಒಂದು ಒಳನೋಟ'(ದಾಸ ಸಾಹಿತ್ಯ ವಿಭಾಗದಲ್ಲಿ)
'ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ'ಗೆ ಸುಮಾರು ೪೦೦ ರಷ್ಟು ಕೃತಿಗಳನ್ನು ಪರಿಗಣಿಸಲಾಗಿತ್ತು. ಅವುಗಳಲ್ಲಿ ಚುನಾಯಿತ ೭೫ ಕೃತಿಗಳನ್ನು ತೀರ್ಪುಗಾರರ ಆಯ್ಕೆಗಾಗಿ ನೀಡಲಾಗಿತ್ತು.
ತೀರ್ಪುಗಾರರು
[ಬದಲಾಯಿಸಿ]೧. ಕಂ.ನಾಡಿಗ ನಾರಾಯಣ್, ೨. ಡಾ.ವೀರೇಶ್ ಬಳ್ಳಾರಿ, ೩. ನಾಗಲಕ್ಷ್ಮೀ ವೀರೇಶ್, ೪. ಪದ್ಮಾ ಕೃಷ್ಣ ಮೂರ್ತಿ, ೫. ಡಾ. ರಾಜೇಂದ್ರ ಗಡಾದ್, ೬. ಜ್ಯೋತಿ ಲೋನಿ
ಕೃಪೆ :
-’ಕರ್ನಾಟಕ ಮಲ್ಲ’-೧೮-೦೩-೨೦೧೪, ಪು.೪