ವಿದ್ಯಾಧರ ಮುತಾಲಿಕ ದೇಸಾಯಿ

ವಿಕಿಪೀಡಿಯ ಇಂದ
Jump to navigation Jump to search

ಮುಂಬಯಿನ ಬಳಿಯ ಥಾಣೆ ಜಿಲ್ಲೆಯ ಡೊಂಬಿವಲಿಯ ಮುಂಬೆಳಗು ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿರುವ ಖಾಸಗೀ ಪ್ರಸಾರಕ್ಕೆಂದೇ ಮೀಸಲಾದ ಪತ್ರಿಕೆ,'ಮುಂಬೆಳಗು', ಈಗ ಅದರ ವಿಶೇಷ ಸಂಚಿಕೆಯನ್ನು ಬಿಡುಗಡೆಮಾಡಲಾಗುತ್ತಿದೆ. 'ದೇಸಾಯಿ'ಯವರು, ಥಾಣೆಜಿಲ್ಲೆಯ ಸಾಂಸ್ಕೃತಿಕ ಕೇಂದ್ರವೆಂದೇ ಕರಯಲ್ಪಡುವ ಡೊಂಬಿವಲಿ-ಕಲ್ಯಾಣ್ ನಲ್ಲಿ ನಿರಂತರ ಸಕ್ರಿಯವಾಗಿ ಪರಿಶ್ರಮಿಸುತ್ತಿರುವ ಸೇವಾ ನಿವೃತ್ತರಾಗಿದ್ದರೂ ಕನ್ನಡಪರ ಚಟುವಟಿಕೆಗಳಲ್ಲಿ ಅವರು ಎತ್ತಿದ ಕೈ. ನಿವೃತ್ತಿಯ ಬಳಿಕ ಅವರ ಕಾರ್ಯ ಚಟುವಟಿಕೆಗಳು ಇಮ್ಮಡಿಸಿವೆ. ಅವರು ಹೊರತರುತ್ತಿರುವ ಪತ್ರಿಕೆ,'ಮುಂಬೆಳಗು' ಇದನ್ನು ಕನಿಷ್ಟ ಪಕ್ಷ 'ದೈಮಾಸಿಕ'ವನ್ನಾಗಿಯಾದರೂ ಪ್ರಕಟಿಸಿ ಓದುಗರಿಗೆ ಕೊಡುವಾಸೆ ಅವರದು. (ಮುತಾಲಿಕ ದೇಸಾಯಿಯವರ ಅಂದಾಜಿನ ಪ್ರಕಾರ,೧೨ ಪುಟಗಳ ಮಾಸಿಕ ಪ್ರಾಯೋಜಕತ್ವಕ್ಕೆ, ತಗಲುವ ಖರ್ಚು, ೩,೫೦೦ ರುಪಾಯಿಗಳು) ಸಾಹಿತ್ಯ, ಸಂಸ್ಕೃತಿಗಳಿಗೇ ಮೀಸಲಾದ 'ಮುಂಬೆಳಗು ಪತ್ರಿಕೆ'ಯನ್ನು ನಡೆಸಿಕೊಂಡು ಬರುವ ಕೆಲಸ ಸವಾಲೇ ಸರಿ. ದೇಸಾಯಿಯವರ ಇನ್ನೊಂದು ಆಸೆಯೆಂದರೆ ತಮ್ಮ ತರುವಾಯವೂ ಪತ್ರಿಕೆ ಮುಂದುವರೆದು ಕಾರ್ಯನಿರತವಾಗಬೇಕೆನ್ನುವ ಆಸೆ.

'ಮುಂಬೆಳಗು ವಿಶೇಷ ಸಂಚಿಕೆ'[ಬದಲಾಯಿಸಿ]

೨೮ ಪುಟಗಳ ಸಂಚಿಕೆ. ಪ್ರಾಯೋಜಕರ ಸಹಾಯದಿಂದ ಮಾಸಿಕವಾಗಿ ಪ್ರಕಟಿಸುವ ಯೋಚನೆ. ಇಂತಹ ಸಹಜ ಮಹದಾಶೆಗಳನ್ನು 'ಮುತಾಲಿಕರು 'ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ. 'ಡೊಂಬಿವಲಿ'ಯಲ್ಲಿ ಹಮ್ಮಿಕೊಂಡ ಹಲವಾರುಕನ್ನಡೋತ್ಸವಗಳಲ್ಲಿ ಅವರು ಬಹಳ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಆದರೆ, ವಯಸ್ಸು ಅವರಿಗೆ ಸಹಕರಿಸುತ್ತಿಲ್ಲ.

ಹಿರಿಯ ಸಾಹಿತಿ 'ಮುತಾಲಿಕ್' ರವರಿಗೆ 'ಷಷ್ಠಬ್ದಿ ಸಮಾರಂಭ'[ಬದಲಾಯಿಸಿ]

ಧಾರವಾಡದಲ್ಲಿ ವಿದ್ಯಾಧರ್ ಮುತಾಲಿಕರವರಿಗೆ, ಸಮಾರಂಭ ನೆರವೇರಿತು. 'ಅಭಿನಂದನಾಗ್ರಂಥ'ದ ಬಿಡುಗಡೆಯಾಗಲಿದೆ. ಅವರ ಕನ್ನಡ ಪರ ಚಟುವಟಿಕೆಗಳು, ಶಿಕ್ಷಣ ಸೇವೆ, ಯಾವ ಆಡಂಬರ ಸದ್ದು ಗದ್ದಲವಿಲ್ಲದೆ ನಡೆಸಿಕೊಂಡು ಬರುತ್ತಿರುವ ಸಮಾಜಸೇವೆಯನ್ನು ಮುಂಬಯಿ ಕನ್ನಡಿಗರು ಬಲ್ಲರು. ದೇಸಾಯಿಯವರು ಕತೆ, ಕವನಗಳ ಜೊತೆಗೆ ಸಾಹಿತ್ಯದ ಹಲವು ಮಗ್ಗಲುಗಳನ್ನು ತಮ್ಮ ಪತ್ರಿಕೆಯಲ್ಲಿ ತರಲು ಪ್ರಯತ್ನಿಸುತ್ತಾರೆ. ಅಧ್ಯಾತ್ಮಕ ಬರಣಿಗೆಯಲ್ಲಿ ಅವರಿಗೆ ತೀವ್ರ ಆಸಕ್ತಿಯಿದೆ. ತಮ್ಮ ಪತ್ರಿಕೆ, 'ಮುಂಬೆಳಗು' ಪತ್ರಿಕೆಯಲ್ಲಿ, ಕನ್ನಡನಾಡಿನ ಅತ್ಯುತ್ತಮ ಬರಹಗಾರರಿಗೆ ಬರೆಯಲು ಸದಾ ಪ್ರೋತ್ಸಾಹನೀಡುತ್ತಿದ್ದಾರೆ. ಮುಂದಿನ ಪೀಳಿಗೆ ಒಳ್ಳೆಯ ಆರೋಗ್ಯವಂತರ, ಹಾಗೂ ಸಾಹಿತ್ಯಾಸಕ್ತರಿಗೆ ಮೀಸಲಾಗಿರಬೇಕೆಂಬುದೇ ಅವರ ಜೀವನದ ಗುರಿಯಾಗಿದೆ. ಅದಕ್ಕಾಗಿ ಇಳಿವಯಸ್ಸಿನಲ್ಲಿಯೂ ಅವರು ಸದಾ ಶ್ರಮಿಸುತ್ತಿದ್ದಾರೆ.

ಪ್ರಶಸ್ತಿ, ಬಹುಮಾನಗಳು[ಬದಲಾಯಿಸಿ]

  1. 'ದಾಸಾಮೃತವಾಣಿ-ಒಂದು ಒಳನೋಟ'(ದಾಸ ಸಾಹಿತ್ಯ ವಿಭಾಗದಲ್ಲಿ)ಎಂಬ ಕೃತಿಗೆ,'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ' ಯನ್ನು ಪ್ರದಾನಿಸಲು ಆಯ್ಕೆಯ ಸುದ್ದಿ ಬಂದಿದೆ.

ಸಂಪರ್ಕಿಸಿ[ಬದಲಾಯಿಸಿ]

'ಸಂಪಾದಕ' : 'ವಿದ್ಯಾಧರ ಮುತಾಲಿಕ ದೇಸಾಯಿ', ಹೌಸ್ ನಂ. ೧೦, ದುರ್ಗಾ ನಿಕೇತನ್, ರೈಲ್ವೆ ನಿಲ್ದಾಣದ ಸಮೀಪ, ರೈಲ್ವೆ ಆಸ್ಪತ್ರೆಯ ಎದುರು, ಠಾಕೂರ್ಲಿ (ಪೂ) ಮೊ : ೯೯೨೦೮೩೬೦೭೧