ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ:-
ಬೆಂಗಳೂರಿನ ಶ್ರೀ ಟಿ. ವಿ. ಮೋಹನದಾಸ ಪೈ ಅವರು ತಮ್ಮ ಮಾತೃಶ್ರೀ ಶ್ರೀಮತಿ ವಿಮಲಾ ವಿ. ಪೈ ಅವರ ಹೆಸರಿನಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ವಾಹಕತ್ವದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿಯನ್ನು ವರ್ಷಂಪ್ರತಿ ರಾಷ್ಟ್ರೀಯ ಅಂತಾರಾಷ್ಟ್ರೀಯ ನೆಲೆಯಲ್ಲಿ ವಿದ್ವ ತ್ರ್ಪ ಪಂಚದಲ್ಲಿ ಗಣನೀಯ ಸಾಧನೆಯನ್ನು ಮಾಡಿದ ವಿದ್ವಾಂಸರೊಬ್ಬರಿಗೆ ನೀಡಿ ಅವರನ್ನು ಗೌರವಿಸುವ ಸಲುವಾಗಿ ರೂಪಾಯಿ ಹತ್ತು ಲಕ್ಷದ ದತ್ತಿ ನಿಧಿಯನ್ನು ಸಂಶೋಧನ ಕೇಂದ್ರದಲ್ಲಿ ನ್ಯಾಸವಾಗಿರಿಸಿದ್ದಾರೆ.
ಕನ್ನಡ ಸಾಹಿತ್ಯ, ಇತಿಹಾಸ, ಭಾಷಾಶಾಸ್ತ್ರ, ಸಂಶೋಧನೆ ಇತ್ಯಾದಿ ಕ್ಷೇತ್ರಗಳಲ್ಲಿ ಖ್ಯಾತನಾಮರಾದ ತಜ್ಞರಿಗೆ ನೀಡಿವ ಈ ಪ್ರಶಸ್ತಿಯ ಮೊತ್ತವು ರೂಪಾಯಿ ಒಂದು ಲಕ್ಷ.
೨೦೧೩ರ ಪ್ರಥಮ ಪ್ರಶಸ್ತಿಗೆ ಆಯ್ಕೆಯಾದವರು ಧಾರವಾಡದ ಹಿರಿಯ ಖ್ಯಾತ ವಿದ್ವಾಂಸರಾದ ಡಾ. ಶ್ರೀನಿವಾಸ ಹೆಚ್. ರಿತ್ತಿಯವರು. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ ೬ ಸೆಪ್ಟಂಬರ್ ೨೦೧೩ರಂದು ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವುದು.