ನೊವಾಕ್‌ ಜೊಕೊವಿಕ್‌ (Novak Djokovic)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Novak Đoković
Novak Djokovic Hopman Cup 2011.jpg
Djokovic at the 2011 Hopman Cup
ಅಡ್ಡಹೆಸರು Nole
ದೇಶ  Serbia and Montenegro
(2003–2006)
 Serbia (2006–present)
ವಾಸಸ್ಥಾನ Monte Carlo, Monaco
ಎತ್ತರ 1.88 m (6 ft 2 in)
Turned pro 2003
Plays Right-handed (two-handed backhand)
ವೃತ್ತಿಯ ಬಹುಮಾದನದ ಹಣ $22,362,956
ಸಿಂಗಲ್ಸ್
ವೃತ್ತಿಯ ದಾಖಲೆ 324–105 (75.72%)
Career titles 19
ಅತ್ಯುನ್ನತ ಶ್ರೇಣಿ No. 1 (4 July 2011)
ಈಗಿನ ಶ್ರೇಣಿ No. 1 (18 March 2013)[೧]
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್ W (2008, 2011, 2012, 2013)
ಫ್ರೆಂಚ್ ಓಪನ್ SF (2007, 2008)
ವಿಂಬಲ್ಡನ್ SF (2007, 2010)
ಯುಇಸ್ ಓಪನ್ (ಟೆನಿಸ್) F (2007, 2010)
ಇತರ ಪಂದ್ಯಾವಳಿಗಳು
Tour Finals W (2008)
ಒಲಂಪಿಕ್ ಆಟಗಳು Bronze medal.svg Bronze Medal (2008)
ಡಬಲ್ಸ್
ವೃತ್ತಿಯ ದಾಖಲೆ 28–38
Career titles 1
ಅತ್ಯುನ್ನತ ಶ್ರೇಣಿ No. 114 (November 30, 2009)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್ 1R (2006, 2007)
ಕಿರಿಯರ ಫ್ರೆಂಚ್ ಓಪನ್ 1R (2006)
ವಿಂಬಲ್ಡನ್ 2R (2006)
ಯುಇಸ್ ಓಪನ್ (ಟೆನಿಸ್) 1R (2006)
Last updated on: September 2, 2010.
ನೊವಾಕ್‌ ಜೊಕೊವಿಕ್‌
ಪದಕ ದಾಖಲೆ
Men's Tennis
Representing  Serbia
Olympic Games
Bronze medal – third place 2008 Beijing Singles

ನೊವಾಕ್ ಜೊಕೊವಿಕ್‌ (Serbian: Новак Ђоковић, Novak Đoković pronounced [ˈnɔvɑk ˈdʑɔːkɔvitɕ] ( ); ಜನನ 22 ಮೇ 1987) ಸರ್ಬಿಯಾ ಮೂಲದ ಒಬ್ಬ ವೃತ್ತಿಪರ ಟೆನಿಸ್‌ ಆಟಗಾರ. ವೃತ್ತಿಪರ ಟೆನಿಸ್‌ ಆಟಗಾರರ ಸಂಘ(ಎಟಿಪಿ)ದ ಶ್ರೇಯಾಂಕ ಪಟ್ಟಿಯಲ್ಲಿ ಸದ್ಯಕ್ಕೆ ಮೊದಲನೆ ಸ್ಥಾನದಲ್ಲಿದ್ದಾರೆ. [೧]

ಅವರು ಎರಡು ಗ್ರ್ಯಾನ್ ಸ್ಲ್ಯಾಮ್‌ ಸಿಂಗಲ್ಸ್‌ ಪಂದ್ಯಾವಳಿಗಳನ್ನು (2008 ಮತ್ತು 2011 ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಷಿಪ್‌‌) ಗೆದ್ದಿದ್ದಾರೆ. ಇದರೊಂದಿಗೆ ನೊವಾಕ್‌ ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಗೆಲ್ಲುವ ಮೊದಲ ಸರ್ಬಿಯನ್‌ ಹಾಗೂ ಓಪನ್‌ ಯುಗದಲ್ಲಿ, ವರ್ಷದ ನಾಲ್ಕೂ ಗ್ರ್ಯಾನ್‌ ಸ್ಲ್ಯಾಮ್‌ ಟೆನಿಸ್‌ ಪಂದ್ಯಾವಳಿಗಳ ಸೆಮಿಫೈನಲ್‌ ತನಕ ಮುನ್ನಡೆದ ಅತಿ ಕಿರಿ ವಯಸ್ಕ ಆಟಗಾರರಾದರು. [೨]

ಗ್ರ್ಯಾನ್ ಸ್ಲ್ಯಾಮ್‌ ಪಂದ್ಯಾವಳಿಗಳಲ್ಲಿ ಹಲವು ಬಾರಿ ರೋಜರ್‌ ಫೆಡರರ್‌ನ್ನು ಸೋಲಿಸಿದ ಐದು ಪ್ರಮುಖ ಆಟಗಾರರಲ್ಲಿ ನೊವಾಕ್‌ ಸಹ ಒಬ್ಬರು. ಅಲ್ಲದೆ, ಸತತ ಪಂದ್ಯಾವಳಿಗಳಲ್ಲಿ ಮೂರು ಬಾರಿ ಈ ರೀತಿಯ ಸಾಧನೆಗೈಯುವ ಮೂಲಕ ಎರಡನೆಯ ಆಟಗಾರರಾದರು.(ಇನ್ನೊಬ್ಬ ಆಟಗಾರ ರಫೆಲ್‌ ನಡಾಲ್) ಆಗ 2007 ಹಾಗೂ 2010ರ ಯುಎಸ್ ಓಪನ್‌ ಟೆನಿಸ್‌ ಪಂದ್ಯಾವಳಿಗಳಲ್ಲಿ ನೊವಾಕ್‌ ಕ್ರಮವಾಗಿ ರೋಜರ್‌‌ ಫೆಡರರ್‌ ಮತ್ತು ರಫಲ್‌ ನಡಾಲ್‌ರ ವಿರುದ್ಧ ರನ್ನರ್‌-ಅಪ್‌ ಆಗಿದ್ದರು. ಅಲ್ಲದೇ 2008ರ ಬೀಜಿಂಗ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸರ್ಬಿಯಾ ಪರವಾಗಿ ಆಡಿ, ಕಂಚಿನ ಪದಕ ಗಳಿಸಿದರು. ಇದಕ್ಕೂ ಹೆಚ್ಚಾಗಿ, ನೊವಾಕ್‌ 2008ರಲ್ಲಿ ಟೆನಿಸ್ ಮಾಸ್ಟರ್ಸ್‌ ಕಪ್‌ನಲ್ಲಿ ಜಯಗಳಿಸಿ, ಆರು ಮಾಸ್ಟರ್ಸ್‌ ಸೀರೀಸ್ ಟೆನಿಸ್‌ ಪಂದ್ಯಾವಳಿ ಗೆದ್ದಿದ್ದಾರೆ. ಅದರಲ್ಲೂ 2010ರ, ಸರ್ಬಿಯಾ ಡೇವಿಸ್‌ ಕಪ್‌ ಗೆಲ್ಲುವುದರಲ್ಲಿ ನೊವಾಕ್ ಪ್ರಮುಖ ಪಾತ್ರವಹಿಸಿದ್ದರು. ಸತತ ನಾಲ್ಕು ವರ್ಷಗಳ ಎಟಿಪಿ ಟೂರ್‌ ಅಂತ್ಯದಲ್ಲಿ (2007ರಿಂದ 2010ರ ವರೆಗೆ) ಮೊದಲೆರಡು ಶ್ರೇಯಾಂಕದ ರಫೆಲ್‌ ನಡಾಲ್‌ ಹಾಗೂ ಎರಡನೆಯ ಶ್ರೇಯಾಂಕದ ರೋಜರ್‌ ಫೆಡರರ್ ನಂತರ ನೊವಾಕ್‌ ಮೂರನೆಯ ಶ್ರೇಯಾಂಕದಲ್ಲಿದ್ದರು. ಅವರು 2010ರ ಫೆಬ್ರವರಿಯಲ್ಲಿ ಗಳಿಸಿದ ಎರಡನೆಯ ಶ್ರೇಯಾಂಕವು, ನೊವಾಕ್‌ರ ಇದುವರೆಗಿನ ಅತ್ಯುನ್ನತ ಶ್ರೇಯಾಂಕವೆನಿಸಿದೆ.

ಸರ್ಬಿಯಾದ ಅತ್ಯುತ್ತಮ ಕ್ರೀಡಾಪಟು ಮತ್ತು ಸರ್ಬಿಯಾ ಒಲಿಂಪಿಕ್‌ ಸಮಿತಿಯ ವತಿಯಿಂದ ಅತ್ಯುತ್ತಮ ಕ್ರೀಡಾಪಟು ಎಂಬ ಜೋಡಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ನೋವಾಕ್‌ ಇತಿಹಾಸದಲ್ಲೇ ಸರ್ಬಿಯಾದ ಅತ್ಯುತ್ತಮ ಟೆನಿಸ್‌ ಆಟಗಾರ, ಹಾಗೂ, ಹಿಂದೆ ಅಸ್ತಿತ್ವದಲ್ಲಿದ್ದ ರಾಷ್ಟ್ರ ಯುಗೊಸ್ಲಾವಿಯಾದಿಂದ ಬಂದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

ಜೀವನ ವೃತ್ತಾಂತ[ಬದಲಾಯಿಸಿ]

ನೊವಾಕ್‌ ನಿಖಿಲ್‌ ಜೊಕೊವಿಕ್‌ (Novak Nikhil Đoković), 1987ರ ಮೇ 22ರಂದು, ಅಂದಿನ SFR ಸೊಸಿಯಾಲಿಸ್ಟ್ ಫೆಡರಲ್ ರಿಪಬ್ಲಿಕ್ ಯುಗೊಸ್ಲಾವಿಯಾ, ಸಾಮಾಜಿಕ ಒಕ್ಕೂಟದ ಗಣರಾಜ್ಯದ ರಾಜಧಾನಿ ಬೆಲ್‌ಗ್ರೇಡ್‌ನಲ್ಲಿ, ಜಾನ್‌ (Srdjan) ಮತ್ತು ಡಯನಾ ಜೊಕೊವಿಕ್‌ (Dijana Đoković) ಅವರ ಪುತ್ರರಾಗಿ ಜನಿಸಿದರು.

ಇವರ ಕಿರಿಯ ಸಹೋದರರರಾದ ಜೊರ್ಡ್‌ ಮತ್ತು ಮಾರ್ಕೊ ಸಹ, ವೃತ್ತಿಪರರಾಗುವ ಆಕಾಂಕ್ಷೆಯ ಟೆನಿಸ್‌ ಆಟಗಾರರಾಗಿದ್ದಾರೆ. ನೋವಾಕ್‌ ಹಾಗೂ ತಮ್ಮದೇ ದೇಶದವರಾದ, ಬೆಲ್‌ಗ್ರೇಡ್‌ ಮೂಲದ ಜೆಲೆನಾ ರಿಸ್ಟಿಕ್‌ ನಡುವೆ ಕಳೆದ ಐದು ವರ್ಷಗಳಿಂದ ಪ್ರೇಮಸಂಬಂಧವಿದೆ. [೩][೪]

ನೊವಾಕ್ ತಮ್ಮ ನಾಲ್ಕನೆಯ ವಯಸ್ಸಿನಲ್ಲೇ ಟೆನಿಸ್‌ ಆಡಲಾರಂಭಿಸಿದರು. ಯುಗೊಸ್ಲಾವಿಯಾದ ಅಂದಿನ ಪ್ರಮುಖ ಟೆನಿಸ್‌ ಆಟಗಾರ್ತಿ ಜೆಲೆನಾ ಗೆನ್ಸಿಕ್, ಎಂಟು ವರ್ಷದ ಅತ್ಯಂತ ಕಿರಿಯ ಟೆನಿಸ್ ಪಟು ನೊವಾಕ್‌ರನ್ನು ಗಮನಿಸಿ, 'ಮೊನಿಕಾ ಸೆಲೆಸ್‌ ನಂತರ, ನಾನು ನೋಡಿರುವ ಮಹಾನ್‌ ಟೆನಿಸ್‌ ಪ್ರತಿಭೆ ಇರುವವನು' ಎಂದರು. [೩] ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ, ಜರ್ಮನಿಯ ಮ್ಯೂನಿಕ್ ‌ನಗರದಲ್ಲಿರುವ ನಿಕೊಲಾ ಪಿಲಿಕ್‌ರ ಟೆನಿಸ್‌ ಅಕಾಡೆಮಿಯಲ್ಲಿ ನೊವಾಕ್ ಮೂರು ತಿಂಗಳುಗಳ ಕಾಲ ತರಬೇತಿ ಪಡೆದರು. ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಅವರ ಅಂತರರಾಷ್ಟ್ರೀಯ ಟೆನಿಸ್‌ ವೃತ್ತಿ ಆರಂಭವಾಯಿತು. ಹೀಗೆ ಯುರೋಪಿಯನ್‌ ಚಾಂಪಿಯನ್ಷಿಪ್ಸ್‌ನ ಸಿಂಗಲ್ಸ್‌, ಡಬಲ್ಸ್‌ ಹಾಗೂ ತಂಡದ ಸ್ಪರ್ಧೆ - ಈ ಮೂರೂ ವಿಭಾಗಗಳಲ್ಲಿ ಜಯಗಳಿಸಿದರು. [೩] ನೊವಾಕ್‌ ಸದ್ಯಕ್ಕೆ ಮೊನಾಕೊದ ಮಾಂಟೆ ಕಾರ್ಲೊದ ನಿವಾಸಿ. ಸ್ಲೋವಾಕ್‌ ಗಣರಾಜ್ಯದ ಮಾಜಿ ಟೆನಿಸ್‌ ಪಟು ಮಾರಿಯಾನ್‌ ವಾಜ್ಡಾ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನಂತರ 2009ರ ಆಗಸ್ಟ್‌ ನಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಹಿಂದಿನ ಟೆನಿಸ್‌ ಪಟು ಟಾಡ್‌ ಮಾರ್ಟಿನ್‌ ಅವರಿಂದಲೂ ತರಬೇತಿ ಪಡೆಯಲಾರಂಭಿಸಿದರು. [೫]

ಟೆನಿಸ್‌ ಅಂಕಣದಾಚೆಗಿನ ಪ್ರಪಂಚದಲ್ಲಿಯೂ ನೊವಾಕ್‌ ಚಿರಪರಿಚಿತ ವ್ಯಕ್ತಿ. ಹಾಸ್ಯ,ವಿಡಂಬನಾತ್ಮಕ ವ್ಯಕ್ತಿತ್ವವುಳ್ಳ ನೊವಾಕ್‌, ತಮ್ಮ ಸ್ನೇಹಿತ,ಸಹ ಟೆನಿಸ್‌ ಪಟುಗಳನ್ನು ಆಗಾಗ್ಗೆ ಅಣಕು ಮತ್ತು ಅನುಕರಣ ಮಾಡುವ ಮೂಲಕ ಮಜಾ ತೆಗೆಯುವುದುಂಟು. ಅವರು 2007ರ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲೊಸ್‌ ಮೊಯಾ ವಿರುದ್ಧ ಗೆದ್ದ ನಂತರ, ರಫೆಲ್‌ ನಡಾಲ್‌ ಮತ್ತು ಮಾರಿಯಾ ಷರಪೊವಾ ಅವರನ್ನು ಅನುಕರಣೆ ಮಾಡಿದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ಘೊಳ್ಳೆಂದು ನಕ್ಕರಲ್ಲದೇ ಇದರಿಂದ ಮನರಂಜನೆ ಪಡೆದರು. [೬] ಅದಲ್ಲದೇ 2009ರ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ತಮ್ಮ ಅಂತಿಮ ಪ್ರಾಥಮಿಕ ಆಟದ ನಂತರ ನೊವಾಕ್ ಮಹಾ ಟೆನಿಸ್‌ ಆಟಗಾರ‌ ಜಾನ್‌ ಮೆಕೆನ್ರೊ ಅವರ ಅನುಕರಣ ಮಾಡಿದರು. ನಂತರ ಕೆಲ ಕಾಲ ಮೆಕೆನ್ರೊ ಅವರೊಂದಿಗೆ ಟೆನಿಸ್‌ ಆಟವಾಡುವ ಮುಂಚೆ ಈ ಅಣಕದ ಮೂಲಕ, ಅವರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು.

ಟೆನಿಸ್‌ ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ತಮ್ಮ ವೃತ್ತಿಯ ಆರಂಭದಲ್ಲಿ ಜೊಕೊವಿಕ್‌ ಮುಖ್ಯವಾಗಿ ಫ್ಯೂಚರ್ಸ್‌ ಮತ್ತು ಚಾಲೆಂಜರ್‌ ಪಂದ್ಯಾವಳಿಗಳಲ್ಲಿ ಸ್ಪರ್ಧಸಿದರಲ್ಲದೆ, ಆಗ 2003ರಿಂದ 2005ರ ತನಕ, ಪ್ರತಿಯೊಂದು ವರ್ಗದಲ್ಲಿ ಮೂರು ಪಂದ್ಯಾವಳಿಗಳಲ್ಲಿಯೂ ಜಯಗಳಿಸಿದರು. ಉಮಾಗ್‌ ಟೆನಿಸ್‌ ಪಂದ್ಯಾವಳಿ, 2004ರಲ್ಲಿನ ಅವರ ಮೊದಲ ಪ್ರವಾಸಿ ಪಂದ್ಯಾವಳಿಯಾಗಿತ್ತು.ಅಲ್ಲಿದ್ದ 32 ಸ್ಪರ್ಧಿಗಳ ಸುತ್ತಿನಲ್ಲಿ ಅವರು ಫಿಲಿಪೊ ವೊಲ್ಯಾಂಡ್ರಿ ವಿರುದ್ಧ 6-7(5), 1-6 ಅಂತರದಿಂದ ಸೋಲು ಅನುಭವಿಸಿದರು. ಅರ್ಹತಾ ಪಂದ್ಯಗಳಲ್ಲಿ ಗೆದ್ದು 2005ರ ಆಸ್ಟ್ರೇಲಿಯನ್‌ ಓಪನ್ ಪ್ರವೇಶಿಸುವುದರೊಂದಿಗೆ ನೊವಾಕ್‌ ತಮ್ಮ ಮೊಟ್ಟಮೊದಲ ಗ್ರ್ಯಾನ್ ಸ್ಲ್ಯಾಮ್‌ ಪಂದ್ಯಾವಳಿ ಪ್ರವೇಶಿಸಿದರು. ಆದರೆ ಮೊದಲ ಸುತ್ತಿನಲ್ಲಿ ಮರಾಟ್‌ ಸಫಿನ್‌ ವಿರುದ್ಧ 6–0, 6–2, 6–1 ಅಂತರದಿಂದ ಸೋತರು. ಸಫಿನ್ ಮುಂದೆ ಆ ಪಂದ್ಯಾವಳಿ ಗೆದ್ದುಕೊಂಡರು.

2006[ಬದಲಾಯಿಸಿ]

ಐದು ಸದಸ್ಯರುಳ್ಳ ತಮ್ಮ ಇಡೀ ಕುಟುಂಬವು ಸರ್ಬಿಯಾದಿಂದ ಬ್ರಿಟನ್‌ಗೆ ಹೋಗಿ ವಾಸಿಸಲು ಸಾಕಷ್ಟು ಛಲದ ಅಗತ್ಯವಿತ್ತು. [೭] ಇಂತವೆಲ್ಲಾ ವದಂತಿಗಳು ನೊವಾಕ್‌ನ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಒಮ್ಮೆ ಫ್ರೆಂಚ್‌ ಓಪನ್‌ ಕ್ವಾರ್ಟರ್‌ಫೈನಲ್‌ ಹಾಗೂ ವಿಂಬಲ್ಡನ್‌ ಪಂದ್ಯಾವಳಿಯ ನಾಲ್ಕನೆಯ ಸುತ್ತಿಗೆ ಮುನ್ನಡೆದ ಕಾರಣ ನೊವಾಕ್‌ 40 ಪ್ರಮುಖ ಟೆನಿಸ್‌ ಆಟಗಾರರ ಪಟ್ಟಿಯಲ್ಲಿ ಶ್ರೇಯಾಂಕ ಗಳಿಸಿಕೊಂಡರು.

ವಿಂಬಲ್ಡನ್‌ ಪಂದ್ಯಾವಳಿ ಮುಗಿದು ಮೂರು ವಾರಗಳ ನಂತರ, ತಮ್ಮ ಮೊಟ್ಟಮೊದಲ ಪಂದ್ಯಾವಳಿಯಲ್ಲಿ ಜಯಗಳಿಸಿದರು. ಆಮ್ಸ್ಟರ್ಫೂರ್ಟ್‌ನಲ್ಲಿ ಡಚ್‌ ಓಪನ್‌ ಪಂದ್ಯಾವಳಿಯಲ್ಲಿ ಜಯಗಳಿಸಿದರು. ಈ ಪಂದ್ಯಾವಳಿಯುದ್ದಕ್ಕೂ ಒಂದು ಸೆಟ್‌ನಲ್ಲಿಯೂ ಸೋಲದೇ, ಫೈನಲ್‌ ಪಂದ್ಯದಲ್ಲಿ ನಿಕಾಲಸ್‌ ಮ್ಯಾಸ್ಸು ವಿರುದ್ಧ ಗೆದ್ದರು. ನೊವಾಕ್‌ ಮೆಟ್ಜ್‌ನ ಒಪೆನ್ ಡಿ ಮೊಸೆಲ್‌ನಲ್ಲಿ ತಮ್ಮ ವೃತ್ತಿ ಜೀವನದ ಎರಡನೆಯ ಪಂದ್ಯಾವಳಿಯಲ್ಲಿ ಜಯಗಳಿಸಿದರು. ಹೀಗೆ ತಮ್ಮ ವೃತ್ತಿಯಲ್ಲಿ ಮೊದಲ ಬಾರಿಗೆ 20 ಅತ್ಯುತ್ತಮ ಟೆನಿಸ್‌ ಆಟಗಾರರ ಪಟ್ಟಿಗೆ ಪ್ರವೇಶಿಸಿದರು.

2007[ಬದಲಾಯಿಸಿ]

ನೊವಾಕ್‌ ವರ್ಷದ ಆರಂಭದಲ್ಲಿ ಆಡಿಲೇಯ್ಡ್‌ನಲ್ಲಿನ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕ್ರಿಸ್‌ ಗುಕ್ಸಿಯೊನ್‌ ವಿರುದ್ಧ ಜಯಗಳಿಸಿದರು. ನಂತರ, ಆಸ್ಟ್ರೇಲಿಯನ್‌ ಓಪನ್‌ನ ನಾಲ್ಕನೆಯ ಸುತ್ತಿನಲ್ಲಿ, ಆನಂತರದ ಚಾಂಪಿಯನ್‌ ರೋಜರ್‌ ಫೆಡರರ್‌ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತರು. ನೊವಾಕ್‌ ಕ್ಯಾಲಿಫೊರ್ನಿಯಾದ ಇಂಡಿಯನ್ ವೆಲ್ಸ್‌ ಹಾಗೂ ಫ್ಲಾರಿಡಾದ ಕೀ ಬಿಸ್ಕೇಯ್ನ್‌ ಮಾಸ್ಟರ್ಸ್‌ ಸೀರೀಸ್‌ ಪಂದ್ಯಾವಳಿಗಳಲ್ಲಿ ಕ್ರಮವಾಗಿ ರನ್ನರ್-ಅಪ್‌ ಮತ್ತು ಚಾಂಪಿಯನ್‌ ಆದದ್ದು ವಿಶ್ವದಲ್ಲಿ 10 ಪ್ರಬಲ ಟೆನಿಸ್‌ ಪಟುಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಟ್ಟಿತು. ನೊವಾಕ್‌ ಇಂಡಿಯನ್‌ ವೆಲ್ಸ್‌ ಫೈನಲ್‌ನಲ್ಲಿ ರಫೆಲ್‌ ನಡಾಲ್‌ ವಿರುದ್ಧ ಸೋತು, ಕೀ ಬಿಸ್ಕೇಯ್ನ್‌ ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ ರಫೆಲ್‌ ವಿರುದ್ದ ಜಯಗಳಿಸಿ, ಫೈನಲ್‌ ಪಂದ್ಯದಲ್ಲಿ ಗಿಲರ್ಮೊ ಕೆನಾಸ್‌ ವಿರುದ್ಧ ಗೆದ್ದರು.

ಮಾಂಟೆ ಕಾರ್ಲೊ ಓಪನ್‌ ಮಾಸ್ಟರ್‌ ಸೀರೀಸ್‌ನಲ್ಲಿ ನೊವಾಕ್‌ ಆಡಿದರು. ಮೂರನೆಯ ಸುತ್ತಿನಲ್ಲಿ ಡೇವಿಡ್‌ ಫೆರರ್‌ ವಿರುದ್ಧ ಪರಾಭವಗೊಂಡರು. ಎಸ್ಟೊರಿಲ್‌ ಓಪನ್ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ರಿಚರ್ಡ್‌ ಗ್ಯಾಸ್ಕ್ವೆಟ್ ವಿರುದ್ದ ಜಯಗಳಿಸಿದರು. ನಂತರ, ರೋಮ್‌ನಲ್ಲಿನ ಇಂಟರ್ನ್ಯಾಷನಲಿ ಡಿ'ಇಟ್ಯಾಲಿಯಾ ಹಾಗೂ ಮಾಸ್ಟರ್ಸ್‌ ಸೀರೀಸ್‌ ಹಾಂಬರ್ಗ್‌ ಟೆನಿಸ್‌ ಪಂದ್ಯಾವಳಿಗಳ ಕ್ವಾರ್ಟರ್-‌ಫೈನಲ್ಸ್ ತನಕ ಮುನ್ನಡೆದರು. ಆದರೆ ಕ್ರಮವಾಗಿ ರಫೆಲ್‌ ನಡಾಲ್‌ ಹಾಗೂ ಕಾರ್ಲೊಸ್‌ ಮೊಯಾ ವಿರುದ್ಧ ಸೋತರು. ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ತಮ್ಮ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲ್ಯಾಮ್‌ ಸೆಮಿಫೈನಲ್‌ ತಲುಪಿದರು. ಈ ಪಂದ್ಯಾವಳಿಯಲ್ಲಿ ಸತತ ವಿಜೇತ ಎನಿಸಿದ್ದ ರಫೆಲ್‌ ನಡಾಲ್‌ ವಿರುದ್ಧ ಸೋತರು.

ವಿಂಬಲ್ಡನ್‌ ಪಂದ್ಯಾವಳಿಯ ಐದು ತಾಸುಗಳ ಕಾಲ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯನಲ್ಲಿ ಮಾರ್ಕೊಸ್ ಬಗ್ಡಾಟಿಸ್‌ ವಿರುದ್ಧ 7–6 (4), 7–6 (9), 6–7 (3), 4–6, 7–5 ಸೆಟ್‌ಗಳ ಜಯ ಸಾಧಿಸಿದರು. ರಫೆಲ್‌ ನಡಾಲ್‌ ವಿರುದ್ಧದ ಸೆಮಿಫೈನಲ್‌ ಪಂದ್ಯವಾಡುವಾಗ, ಬೆನ್ನು ಮತ್ತು ಕಾಲು ಸಮಸ್ಯೆಗಳಿಂದಾಗಿ ಆಟ ಬಿಟ್ಟುಕೊಡಬೇಕಾಯಿತು.

2007ರ ಯುಎಸ್‌ ಓಪನ್‌ನಲ್ಲಿ ಜೊಕೊವಿಕ್‌

ನೊವಾಕ್‌ ಮಾಂಟ್ರಿಯಾಲ್‌ನಲ್ಲಿ ನಡೆದ ಮಾಸ್ಟರ್ಸ್‌ ಸೀರೀಸ್‌ ರೋಜರ್ಸ್‌ ಕಪ್‌ ಪಂದ್ಯಾವಳಿ ಪ್ರಶಸ್ತಿ ಗೆದ್ದರು.

ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದಲ್ಲಿ ಮೂರನೆಯ ಶ್ರೇಯಾಂಕದ ಆಂಡಿ ರೊಡ್ಡಿಕ್‌, ಸೆಮಿಫೈನಲ್ಸ್‌ನಲ್ಲಿ ವಿಶ್ವದ ಎರಡನೆಯ ಶ್ರೇಯಾಂಕದ ರಫೆಲ್‌ ನಡಾಲ್‌ ಹಾಗೂ ಫೈನಲ್ಸ್‌ನಲ್ಲಿ ವಿಶ್ವದ ಅಗ್ರಸ್ಥಾನದಲ್ಲಿದ್ದ ರೋಜರ್‌ ಫೆಡರರ್‌ನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿಕೊಂಡರು. ಬೊರಿಸ್‌ ಬೆಕರ್‌ ನಂತರ, ಆಟಗಾರರೊಬ್ಬರು 1994ರ ನಂತರ ಒಂದೇ ಪಂದ್ಯಾವಳಿಯಲ್ಲಿ ವಿಶ್ವದ ಮೂರು ಅತ್ಯುತ್ತಮ ಆಟಗಾರರನ್ನು ಸೋಲಿಸಿದ್ದು ಇದೇ ಮೊದಲ ಬಾರಿಯಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಫೆಡರರ್‌ ಮತ್ತು ನಡಾಲ್‌ ವಿಶ್ವದಲ್ಲೆ ಮೊದಲೆರಡು ಶ್ರೇಯಾಂಕ ಗಳಿಸಿದ ನಂತರ ಅವರಿಬ್ಬರನ್ನು ಸೋಲಿಸಲು, ಟಾಮಸ್‌ ಬರ್ಡಿಚ್‌ ನಂತರ ನೊವಾಕ್‌ ಕೇವಲ ಎರಡನೆಯ ಆಟಗಾರರಾದರು. ಈ ಪಂದ್ಯಾವಳಿಯ ನಂತರ, "ನೊವಾಕ್‌ ಜೊಕೊವಿಕ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯಾವಳಿ ಪ್ರಶಸ್ತಿ ಗೆದ್ದೇ ಗೆಲ್ಲುವರು"ಎಂದು ಟೆನಿಸ್‌ ಕ್ರೀಡೆಯ ಮೇರು ಪಟು ಜಾರ್ನ್‌ ಬೊರ್ಗ್‌ ಹೇಳಿದರು. [೮] ಆದರೂ, ಅದರ ಮುಂದಿನ ವಾರ, ಒಹಾಯೊದ ಸಿನ್ಸಿನಟಿಯಲ್ಲಿ ನಡೆದ ವೆಸ್ಟರ್ನ್‌ ಅಂಡ್ ಸದರ್ನ್‌ ಫೈನಾನ್ಷಿಯಲ್‌ ಗ್ರೂಪ್‌ ಮಾಸ್ಟರ್ಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಕಾರ್ಲೊಸ್‌ ಮೊಯಾ ವಿರುದ್ಧ ಎರಡನೆಯ ಸುತ್ತಿನಲ್ಲಿ ನೇರ ಸೆಟ್‌ಗಳಲ್ಲಿ ಸೋತರು. ನಂತರದ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಫೈನಲ್‌ ತಲುಪಿದರು. ರೋಜರ್‌ ಫೆಡರರ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ, ಮೊದಲ ಸೆಟ್‌ನಲ್ಲಿ ಐದು ಹಾಗೂ ಎರಡನೆಯ ಸೆಟ್‌ನಲ್ಲಿ ಎರಡು ಸೆಟ್‌ ಪಾಯಿಂಟ್‌ಗಳಿದ್ದರೂ ಎಲ್ಲವನ್ನೂ ಕಳೆದುಕೊಂಡು, ಪಂದ್ಯವನ್ನೂ ನೇರ ಸೆಟ್‌ಗಳಲ್ಲಿ ಸೋತರು. ಆಗ 2007ರ ಪಂದ್ಯಾವಳಿಯಲ್ಲಿ, ನೊವಾಕ್‌ ಮೊದಲ ಬಾರಿಗೆ ಅಂಕಣದಲ್ಲಿ ರಫೆಲ್‌ ನಡಾಲ್‌, ಆಂಡಿ ರೊಡ್ಡಿಕ್‌ ಮತ್ತು ಮಾರಿಯಾ ಷರಪೋವಾ ಸೇರಿದಂತೆ ಇತರೆ ಆಟಗಾರರನ್ನು ಅಣಕವಾಡಲಾರಂಭಿಸಿ, ಪ್ರೇಕ್ಷಕರನ್ನು ರಂಜಿಸಿದರು.

ನೊವಾಕ್‌‌ ಆ ವರ್ಷದ ಐದನೆಯ ಪಂದ್ಯಾವಳಿ, ಅಂದರೆ ವಿಯನ್ನಾದಲ್ಲಿ ನಡೆದ ಬಿಎ-ಸಿಎ ಟೆನಿಸ್‌ಟ್ರೊಫಿ ಪಂದ್ಯಾವಳಿಯ ಫೈನಲ್‌ನಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ ಜಯಗಳಿಸಿ ಪ್ರಶಸ್ತಿ ಗೆದ್ದರು. ಮುಂದಿನ ಪಂದ್ಯಾವಳಿ, ಮಾಡ್ರಿಡ್‌ನಲ್ಲಿ ನಡೆದ ಮುಚುವಾ ಮಡ್ರಿಲೆನಾ ಮಾಸ್ಟರ್ಸ್‌ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್ಸ್‌ನಲ್ಲಿ ಡೇವಿಡ್‌ ನಲ್ಬಂಡಿಯನ್‌ ವಿರುದ್ಧ 6–4, 7–6 (4) ಸೆಟ್‌ಗಳಲ್ಲಿ ಪರಾಭವಗೊಂಡರು. ಆ ವರ್ಷ ವಿಶ್ವದ ಮೂರನೆಯ ಶ್ರೇಯಾಂಕ ಲಭಿಸುವುದು ಖಚಿತವಾದ ನಂತರ, ವರ್ಷಾಂತ್ಯದ ಟೆನಿಸ್‌ ಮಾಸ್ಟರ್ಸ್‌ ಕಪ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದರು. ಆದರೆ ರೌಂಡ್‌ ರಾಬಿನ್ ಪಂದ್ಯಗಳ ಮುಂದಿನ ಹಂತಕ್ಕೆ ಮುನ್ನಡೆಯಲಿಲ್ಲ.

ಸರ್ಬಿಯಾದ ಅತ್ಯುತ್ತಮ ಅಥ್ಲೀಟ್‌ ಪಟು ಎಂದು ಸ್ವರ್ಣ ಪದಕ ಹಾಗೂ ಸರ್ಬಿಯಾ ಒಲಿಂಪಿಕ್‌ ಸಮಿತಿ ಘೋಷಿಸಿದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪುರಸ್ಕೃತರಾದರು. [೯]

2008[ಬದಲಾಯಿಸಿ]

2008ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ ರಾಡ್‌ ಲೇವರ್‌ ಅಂಕಣದಲ್ಲಿ ಜೊಕೊವಿಕ್‌

ವರ್ಷಾರಂಭದಲ್ಲಿ ನೊವಾಕ್‌, ಸರ್ಬಿಯಾದ ಟೆನಿಸ್‌ ಆಟಗಾರ್ತಿ, ವಿಶ್ವದಲ್ಲಿ ಮೂರನೆಯ ಶ್ರೇಯಾಂಕದ ಜೆಲೆನಾ ಜಾಂಕೊವಿಕ್‌ ಒಂದಿಗೆ ಹಾಪ್ಮನ್ಸ್‌ ಕಪ್‌ ಮಿಶ್ರ ಡಬಲ್ಸ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದರು. ರೌಂಡ್‌-ರಾಬಿನ್‌ ಹಂತದಲ್ಲಿನ ತಮ್ಮ ಪಾಲಿನ ಎಲ್ಲ ಪಂದ್ಯಗಳಲ್ಲಿಯೂ ನೊವಾಕ್‌ ಜಯಗಳಿಸಿದರು. ಮೊದಲ ಶ್ರೇಯಾಂಕದಲ್ಲಿದ್ದ ತಮ್ಮ ಸರ್ಬಿಯಾ ತಂಡ, ಫೈನಲ್‌ ತಲುಪಿತು. ಫೈನಲ್‌ ಪಂದ್ಯದಲ್ಲಿ ಸರ್ಬಿಯಾ ಎರಡನೆಯ ಶ್ರೇಯಾಂಕದ ಅಮೆರಿಕಾ ಸಂಯುಕ್ತ ಸಂಸ್ಥಾನ ತಂಡದ (ಸೆರೆನಾ ವಿಲಿಯಮ್ಸ್‌ ಮತ್ತು ಮರಡಿ ಫಿಷ್‌) ವಿರುದ್ಧ 1-2 ಅಂತರದಿಂದ ಸೋತಿತು.

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ, ನೊವಾಕ್‌ ಒಂದು ಸೆಟ್‌ ಸೋಲದೆ ಫೈನಲ್‌ ತಲುಪಿದರು. ಸೆಮಿಫೈನಲ್ಸ್ ನಲ್ಲಿ ಹಿಂದಿನ ವರ್ಷದ ವಿಜೇತ ರೋಜರ್‌ ಫೆಡರರ್‌ ವಿರುದ್ಧ ಭಾರೀ ಗೆಲುವು ಸಾಧಿಸಿದರು. ಕಳೆದ ವರ್ಷದ ಯುಎಸ್‌ ಓಪನ್‌ ನಂತರ, ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯಾವಳಿಯ ಫೈನಲ್‌ ತಲುಪಿದ್ದು ಇದು ಸತತ ಎರಡನೆಯ ಬಾರಿ. ಸೆಮಿಫೈನಲ್ಸ್‌ ತಲುಪುವುದರ ಮೂಲಕ, ನೊವಾಕ್‌ ಎಲ್ಲಾ ನಾಲ್ಕೂ ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯಾವಳಿಗಳ ಸೆಮಿಫೈನಲ್ಸ್‌ ತಲುಪಿದ ಅತಿ ಕಿರಿಯ ಆಟಗಾರರಾದರು. ಫೈನಲ್‌ ಪಂದ್ಯದಲ್ಲಿ, ನೊವಾಕ್‌ ಶ್ರೇಯಾಂಕ-ರಹಿತ ಫ್ರೆಂಚ್‌ ಆಟಗಾರ ಜೊ-ವಿಲ್ಫ್ರೆಡ್‌ ಸೊಂಗಾ ವಿರುದ್ಧ ನಾಲ್ಕು ಸೆಟ್‌ಗಳ ಜಯ (4–6, 6–4, 6–3, 7–6(2)) ಸಾಧಿಸಿದರು. [೧೦] ಇದರ ಮೂಲಕ ಸರ್ಬಿಯಾಗೆ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಪ್ರಶಸ್ತಿಯೊಂದು ಲಭಿಸಿದಂತಾಯಿತು. ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಯೊಂದನ್ನು 2005ರ ಆಸ್ಟ್ರೇಲಿಯನ್‌ ಓಪನ್‌ ನಂತರ ರೋಜರ್‌ ಫೆಡರರ್‌ ಅಥವಾ ರಫೆಲ್‌ ನಡಾಲ್‌ ಗೆಲ್ಲದಿದ್ದುದು ಇದೇ ಮೊದಲ ಬಾರಿಯಾಗಿತ್ತು.

ನಂತರ, ಬಾರ್ಕ್ಲೇಯ್ಸ್‌‌ ದುಬೈ ಟೆನಿಸ್‌ ಚಾಂಪಿಯನ್ಷಿಪ್‌ ಪಂದ್ಯಾವಳಿಯ ಸೆಮಿ-ಫೈನಲ್ಸ್‌ ಪಂದ್ಯದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಆಂಡಿ ರೊಡ್ಡಿಕ್‌ ವಿರುದ್ಧ ಪರಾಭವಗೊಂಡರು.

2008ರ ಪೆಸಿಫಿಕ್‌ ಲೈಫ್‌ ಓಪನ್‌ನಲ್ಲಿ ಜೊಕೊವಿಕ್‌

ಕ್ಯಾಲಿಫೊರ್ನಿಯಾದ ಇಂಡಿಯನ್‌ ವೆಲ್ಸ್‌ನಲ್ಲಿ ನಡೆದ ಮಾಸ್ಟರ್ಸ್‌ ಸೀರೀಸ್‌ ಫೆಸಿಫಿಕ್‌ ಲೈಫ್‌ ಓಪನ್‌ ಪಂದ್ಯದಲ್ಲಿ ನೊವಾಕ್‌ ತಮ್ಮ ವೃತ್ತಿಯ ಒಂಬತ್ತನೆಯ ಸಿಂಗಲ್ಸ್‌ ಪ್ರಶಸ್ತಿ ಗಳಿಸಿದರು. ಮೂರು ಸೆಟ್‌ಗಳುಳ್ಳ ಫೈನಲ್‌ ಪಂದ್ಯದಲ್ಲಿ ಮರಡಿ ಫಿಷ್‌ ವಿರುದ್ಧ ಗೆಲುವು ಸಾಧಿಸಿದರು.

ರೋಮ್‌ನಲ್ಲಿ ನಡೆದ ಇಂಟರ್ನ್ಯಾಷನಲಿ ಡಿ'ಇಟ್ಯಾಲಿಯಾದಲ್ಲಿ ನಾಲ್ಕನೆಯ ಮಾಸ್ಟರ್‌ ಸೀರೀಸ್‌ ಪಂದ್ಯಾವಳಿಯ ಸಿಂಗಲ್ಸ್‌ ಪ್ರಶಸ್ತಿ ತಮ್ಮದಾಗಿಸಿಕೊಂಡರು. ತರುವಾಯ ವಾರ ಹಾಂಬರ್ಗ್‌ ಮಾಸ್ಟರ್ಸ್‌ ಸೆಮಿ-ಫೈನಲ್ಸ್ ನಲ್ಲಿ ನೊವಾಕ್‌ ರಫೆಲ್‌ ನಡಾಲ್‌ ವಿರುದ್ಧ ಸೋಲು ಅನುಭವಿಸಿದರು. ಪ್ಯಾರಿಸ್‌ನ ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ, ಫೆಡರರ್‌ ಮತ್ತು ನಡಾಲ್‌ ನಂತರ ನೊವಾಕ್‌ ಜೊಕೊವಿಕ್‌ ಮೂರನೆಯ ಶ್ರೇಯಾಂಕದ ಆಟಗಾರರಾಗಿದ್ದರು. ಈ ಪಂದ್ಯಾವಳಿ ಸೆಮಿಫೈನಲ್ಸ್ ‌ನಲ್ಲಿ ನೊವಾಕ್‌ ರಫೆಲ್‌ ನಡಾಲ್‌ ವಿರುದ್ಧ ನೇರ ಸೆಟ್‌ಗಳ ಸೋಲು ಅನುಭವಿಸಿದರು.

ಲಂಡನ್‌ನ ಕ್ವೀನ್ಸ್‌ ಕ್ಲಬ್‌ನಲ್ಲಿ ಆರ್ಟೊಯಿಸ್‌ ಚಾಂಪಿಯನ್ಷಿಪ್‌ ಪಂದ್ಯಾವಳಿಯನ್ನು ಹುಲ್ಲುಹಾಸಿನ ಟೆನಿಸ್ ಅಂಕಣದಲ್ಲಿ ಆಯೋಜಿಸಲಾಯಿತು. ಇದರ ಫೈನಲ್‌ ಪಂದ್ಯದಲ್ಲಿ ನೊವಾಕ್‌ ಜೊಕೊವಿಕ್‌-ರಫೆಲ್‌ ನಡಾಲ್‌ ವಿರುದ್ಧ ಪುನಃ ನೇರ ಸೆಟ್‌ಗಳಲ್ಲಿ (7–6(6), 7–5) ಸೋತರು. ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಕ್ ಮೂರನೆಯ ಶ್ರೇಯಾಂಕದ ಆಟಗಾರರಾಗಿದ್ದರು. ಆದರೆ, ಎರಡನೆಯ ಸುತ್ತಿನಲ್ಲೇ ಮರಾಟ್‌ ಸಫಿನ್‌ ವಿರುದ್ಧ ಸೋತರು. ಇದರೊಂದಿಗೆ ನೋವಕ್‌ ಸತತ ಐದು ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯಾವಳಿಗಳಲ್ಲಿ ಕನಿಷ್ಠ ಪಕ್ಷ ಸೆಮಿಫೈನಲ್ಸ್ ತಲುಪುವ ಅಭಿಯಾನವು ಅಂತ್ಯಗೊಂಡಿತು.

ಮಾಸ್ಟರ್ಸ್‌ ಕಪ್‌ ವಿಜೇತ

ನಂತರ, ಟೊರೊಂಟೊದಲ್ಲಿ ನಡೆದ ಮಾಸ್ಟರ್ಸ್‌ ಸೀರೀಸ್‌ ರೋಜರ್ಸ್‌ ಕಪ್‌ ಪಂದ್ಯಾವಳಿಯಲ್ಲಿ ಹಿಂದಿನ ವರ್ಷ ಗೆದ್ದ ಪ್ರಶಸ್ತಿಯನ್ನು ಈ ಸಲ ಉಳಿಸಿಕೊಳ್ಳುವಲ್ಲಿ ನೊವಾಕ್ ವಿಫಲರಾದರು. ‌ ಎಂಟನೆಯ ಶ್ರೇಯಾಂಕದ, ಬ್ರಿಟನ್‌ನ ಆಂಡಿ ಮರ್ರೆ ಕ್ವಾರ್ಟರ್‌ ಫೈನಲ್ಸ್ ನಲ್ಲಿ ನೊವಾಕ್‌ ಜೊಕೊವಿಕ್‌ ವಿರುದ್ಧ 6-3, 7-6(3) ಸೆಟ್‌ಗಳ ಗೆಲುವು ಸಾಧಿಸಿದರು. ಇದರ ಮುಂದಿನ ವಾರ ಒಹಿಯೊದ ಸಿನ್ಸಿನಟಿಯಲ್ಲಿ ನಡೆದ ವೆಸ್ಟರ್ನ್‌ & ಸದರ್ನ್‌ ಫೈನಾನ್ಷಿಯಲ್‌ ಗ್ರೂಪ್‌ ಮಾಸ್ಟರ್ಸ್‌ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಜೊಕೊವಿಕ್‌ ಫೈನಲ್‌ಗೆ ಮುನ್ನಡೆದರು. ಫೈನಲ್‌ ಪಂದ್ಯದಲ್ಲಿ ಅವರು ಪುನಃ ಆಂಡಿ ಮರ್ರೆ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತರು.

ಬೀಜಿಂಗ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿನ ಟೆನಿಸ್‌ ಪಂದ್ಯಾವಳಿಯು ನೊವಾಕ್‌ ಭಾಗವಹಿಸಿದ ಮುಂದಿನ ಪಂದ್ಯಾವಳಿಯಾಗಿತ್ತು. ಇದು ಅವರ ಮೊಟ್ಟಮೊದಲ ಬೇಸಿಗೆಯ ಒಲಿಂಪಿಕ್ಸ್‌ ಆಗಿತ್ತು. ಪುರುಷರ ಡಬಲ್ಸ್‌ ವಿಭಾಗದಲ್ಲಿ ಎರಡನೆಯ ಶ್ರೇಯಾಂಕದಲ್ಲಿದ್ದ ನೊವಾಕ್‌ ಜೊಕೊವಿಕ್-ನೆನಾದ್‌ ಜಿಮೊಂಜಿಕ್‌ ಜೋಡಿಯು, ಮೊದಲನೆಯ ಸುತ್ತಿನಲ್ಲೇ ನಿರ್ಗಮಿಸಿತು. ಜೆಕ್‌ ಜೋಡಿ ಮಾರ್ಟಿನ್‌ ಡ್ಯಾಮ್‌-ಪಾವೆಲ್‌ ವಿಝ್ನರ್‌ ಜೋಡಿಯು ನೊವಾಕ್‌-ನೆನಾದ್‌ ಜೋಡಿಯ ವಿರುದ್ಧ ಭಾರಿ ಗೆಲುವು ಸಾಧಿಸಿತು. ಸಿಂಗಲ್ಸ್‌ ವಿಭಾಗದಲ್ಲಿ ಮೂರನೆಯ ಶ್ರೇಯಾಂಕಿತ ನೊವಾಕ್‌, ಸೆಮಿಫೈನಲ್ಸ್ ‌ನಲ್ಲಿ ರಫೆಲ್‌ ನಡಾಲ್‌ ವಿರುದ್ಧ 6–4, 1–6, 6–4.ಅಂತರದಿಂದ ಸೋತರು. ನಂತರ, ಇನ್ನೊಂದು ಸೆಮಿಫೈನಲ್‌ ಸೋತ ಜೇಮ್ಸ್‌ ಬ್ಲೇಕ್‌ ವಿರುದ್ಧ 6–3, 7–6(4) ಸೆಟ್‌ಗಳ ಗೆಲುವು ಸಾಧಿಸಿ, ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಒಲಿಂಪಿಕ್ಸ್‌ ನಂತರ, ನೊವಾಕ್‌ ಜೊಕೊವಿಕ್‌ ಯುಎಸ್‌ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್‌ ಪಂದ್ಯಾವಳಿ ಪ್ರವೇಶಿಸಿ, ಮೂರನೆಯ ಶ್ರೇಯಾಂಕಿತರಾದರು. ಈ ಪಂದ್ಯಾವಳಿಯಲ್ಲಿ ತಾವಾಡುವ ಪಂದ್ಯಗಳ ಮಧ್ಯೆ ಹಲವು ಸಲ ಸಣ್ಣ-ಪುಟ್ಟ ಗಾಯಗಳಿಂದಾಗಿ ವಿರಾಮ ತೆಗೆದುಕೊಳ್ಳುತ್ತಿದ್ದರು. ಇದರಿಂದ ಆಂಡಿ ರೊಡ್ಡಿಕ್ 'ಎಸ್‌ಎಆರ್‌ಎಸ್‌, ಹಕ್ಕಿ ಜ್ವರ ಹಾಗೂ ನೆಗಡಿ ಸೇರಿದಂತೆ ನೊವಾಕ್‌ಗೆ 'ಹದಿನಾರು ಗಾಯಗಳಿವೆ' ಎಂಬ ತರಲೆ ಚಟಾಕಿ ಹಾರಿಸಿದರು. ಕ್ವಾರ್ಟರ್‌ಫೈನಲ್ಸ್‌ ಪಂದ್ಯದಲ್ಲಿ ನೊವಾಕ್‌ ಜೊಕೊವಿಕ್‌ ಆಂಡಿ ರೊಡ್ಡಿಕ್‌ ವಿರುದ್ಧ ಜಯಗಳಿಸಿದ ನಂತರ, ರೊಡ್ಡಿಕ್‌ರ ಚಟಾಕಿಗಳನ್ನು ಕೀಳು ಮಟ್ಟದ್ದು ಎಂದು ಅಭಿಪ್ರಾಯ ಪಟ್ಟರು. ಅಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ವಿಚಿತ್ರವಾಗಿ ಅರಚಿ ತಮ್ಮ ಅಸಹಮತದ ಧ್ವನಿಯೆತ್ತಿದ್ದರು. ಈ 2007ರ ಯುಎಸ್‌ ಓಪನ್ ಪಂದ್ಯಾವಳಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ರೋಜರ್‌ ಫೆಡರರ್‌ ವಿರುದ್ಧ 6–3, 5–7, 7–5, 6–2 ಸೆಟ್‌ಗಳಲ್ಲಿ ಸೋಲುವುದರೊಂದಿಗೆ ನೊವಾಕ್‌ರ ಅಭಿಯಾನ ಕೊನೆಗೊಂಡಿತು.

ಯುಎಸ್‌ ಓಪನ್‌ ನಂತರ ನೊವಾಕ್‌ ಜೊಕೊವಿಕ್‌ ನಾಲ್ಕು ಪಂದ್ಯಾವಳಿಗಳಲ್ಲಿ ಸ್ಪರ್ಧಿಸಿದರು. ನಂತರ 2008ರ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನ ಮರುಪಂದ್ಯದಂತೆ, ನೊವಾಕ್ ಥಾಯ್ಲೆಂಡ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಜೋ-ವಿಲ್ಫ್ರೆಡ್‌ ಸೊಂಗಾ ವಿರುದ್ಧ ನೇರ ಸೆಟ್‌ಗಳಲ್ಲಿ ಪರಾಭವಗೊಂಡರು. ನವೆಂಬರ್‌ನಲ್ಲಿ, ಷಾಂಘೈಯಲ್ಲಿ ವರ್ಷಾಂತ್ಯದ ಟೆನಿಸ್ ಮಾಸ್ಟರ್ಸ್‌ ಕಪ್‌ ಪಂದ್ಯಾವಳಿ ನಡೆಯಿತು. ರಫೆಲ್‌ ನಡಾಲ್‌ ಇದರಲ್ಲಿ ಸ್ಪರ್ಧಿಸಲಾಗದ ಕಾರಣ, ನೊವಾಕ್‌ ಎರಡನೆಯ ಶ್ರೇಯಾಂಕಿತರಾದರು. ತಮ್ಮ ಮೊದಲ ರೌಂಡ್‌ ರಾಬಿನ್‌ ಪಂದ್ಯದಲ್ಲಿ ಅವರು ಅರ್ಜೆಂಟೀನಾದ ಜುಯಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರು. ನಂತರ ಅವರು ನಿಕೊಲಾಯ್‌ ಡೆವಿಡೆಂಕೊರನ್ನು ಮೂರು ಸೆಟ್‌ಗಳಲ್ಲಿ ಮಣಿಸಿದರು. ತಮ್ಮ ಅಂತಿಮ ರೌಂಡ್‌ ರಾಬಿನ್ ಪಂದ್ಯದಲ್ಲಿ ಜೊ-ವಿಲ್ಫ್ರೆಡ್‌ ಸೊಂಗಾ ವಿರುದ್ಧ 1–6, 7–5, 6–1 ಸೆಟ್‌ಗಳಿಂದ ಪರಾಭವಗೊಂಡರು. ನೊವಾಕ್‌ ಜೊಕೊವಿಕ್‌ ಸೆಮಿಫೈನಲ್ಸ್‌ ಅರ್ಹತೆ ಪಡೆದು, ಜಿಲ್ಸ್‌ ಸೈಮನ್‌ ವಿರುದ್ಧ 4–6, 6–3, 7–5 ಸೆಟ್‌ಗಳ ಗೆಲುವು ಸಾಧಿಸಿದರು. ಫೈನಲ್‌ ಪಂದ್ಯದಲ್ಲಿ ಪುನಃ ನೊವಾಕ್‌ ಜೊಕೊವಿಕ್‌ ಡೆವಿಡೆಂಕೊ ವಿರುದ್ಧ ಗೆದ್ದು ತಮ್ಮ ಮೊಟ್ಟಮೊದಲ ಟೆನಿಸ್‌ ಮಾಸ್ಟರ್ಸ್‌ ಕಪ್‌ ಪ್ರಶಸ್ತಿ ಗಳಿಸಿಕೊಂಡರು.

2009[ಬದಲಾಯಿಸಿ]

ವರ್ಷಾರಂಭದಲ್ಲಿ ನೊವಾಕ್‌, ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ ರಾಜಧಾನಿ ಬ್ರಿಸ್ಬೇನ್‌ನಲ್ಲಿ ನಡೆದ ಬ್ರಿಸ್ಬೇನ್‌ ಇಂಟರ್ನ್ಯಾಷನಲ್‌ ಟೆನಿಸ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದರು. ಮೊದಲ ಸುತ್ತಿನಲ್ಲೇ ನೊವಾಕ್‌ ಅರ್ನೆಸ್ಟ್ಸ್‌ ಗುಲ್ಬಿಸ್‌ ವಿರುದ್ಧ ಅನಿರೀಕ್ಷಿತ ಸೋಲುಣ್ಣಬೇಕಾಯಿತು. ಸಿಡ್ನಿಯಲ್ಲಿ ಮೆಡಿಬ್ಯಾಂಕ್‌ ಇಂಟರ್ನ್ಯಾಷನಲ್‌ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್ಸ್ ನಲ್ಲಿ ನೊವಾಕ್ ಜಾರ್ಕೊ ನೀಮಿನೆನ್‌ ವಿರುದ್ಧ ಸೋತರು. ‌ ಈ ಪಂದ್ಯ ಗೆದ್ದಿದ್ದಲ್ಲಿ, ನೊವಾಕ್‌ ಜೊಕೊವಿಕ್‌ ವಿಶ್ವದ ಎರಡನೆಯ ಶ್ರೇಯಾಂಕಿತ ಆಟಗಾರರಾಗುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು]

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಹಾಲಿ ಚಾಂಪಿಯನ್‌ ಆದ ನೊವಾಕ್‌, ವಿಶ್ವದ ಮಾಜಿ ಪ್ರಥಮ ಶ್ರೇಯಾಂಕಿತ ಆಟಗಾರ ಆಂಡಿ ರೊಡ್ಡಿಕ್‌ ವಿರುದ್ಧ ಕ್ವಾರ್ಟರ್ ಫೈನಲ್‌ ಪಂದ್ಯದ ನಾಲ್ಕನೆಯ ಸೆಟ್‌ನಲ್ಲಿ 6–7(3), 6–4, 6–2, 2–1 ಹಿನ್ನಡೆ ಅನುಭವಿಸುತ್ತಿದ್ದಾಗ, ಬಿಸಿಲ ಕಾರಣ ಆಯಾಸ, ಸ್ನಾಯು ಸೆಟೆತ ಮತ್ತು ಮೈಕೈ ನೋವಿನಿಂದ ಬಳಲಿದಾಗ, ಪಂದ್ಯ ನಿಲ್ಲಿಸಬೇಕಾಯಿತು. [೧೧] ನೊವಾಕ್‌ ಜೊಕೊವಿಕ್‌ನ ನಿರ್ಗಮನವು, ಈ ಪಂದ್ಯಾವಳಿಯಲ್ಲಿ ಉಳಿದ ಹಲವು ಆಟಗಾರರ ಕಟು ಟೀಕೆಗೆ ಗುರಿಯಾಯಿತು. 'ನೊವಾಕ್‌ ನಾಲ್ಕು ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯಾವಳಿಗಳ ಪೈಕಿ ಮೂರರಲ್ಲಿ ನಿರ್ಗಮಿಸಿದ್ದಾರೆ' ಎಂದು ರೋಜರ್ ಫೆಡರರ್‌ ಅಭಿಪ್ರಾಯಪಟ್ಟರು.[ಸೂಕ್ತ ಉಲ್ಲೇಖನ ಬೇಕು]

ಮಾರ್ಸೇಲ್‌ನಲ್ಲಿ ಓಪನ್‌ 13 ಟೆನಿಸ್‌ ಪಂದ್ಯಾವಳಿಯಲ್ಲಿ ಜೊ-ವಿಲ್ಫ್ರೆಡ್‌ ಸೊಂಗಾ ವಿರುದ್ಧದ ಸೆಮಿಫೈನಲ್ಸ್‌ ಸೋತ ನಂತರ, ನೊವಾಕ್‌ ಬಾರ್ಕ್ಲೇಯ್ಸ್‌ ದುಬೈ ಟೆನಿಸ್‌ ಚಾಂಪಿಯನ್ಷಿಪ್‌ನ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ಡೇವಿಡ್‌ ಫೆರರ್‌ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ, ತಮ್ಮ ವೃತ್ತಿಯ ಹನ್ನೆರಡನೆಯ ಪ್ರಶಸ್ತಿ ಗಳಿಸಿಕೊಂಡರು. ಇದರ ಮುಂದಿನ ವಾರ, ಕೆಲಿಫೊರ್ನಿಯಾದ ಇಂಡಿಯನ್‌ ವೆಲ್ಸ್‌ನಲ್ಲಿ ನಡೆದ ಬಿಎನ್‌ಪಿ ಪರಿಬಾಸ್‌ ಓಪನ್‌ ಟೆನಿಸ್ ಪಂದ್ಯಾವಳಿಯಲ್ಲಿ ನೊವಾಕ್‌ ಹಾಲಿ ವಿಜೇತರಾಗಿ ಅಂಕಣಕ್ಕಿಳಿದರು. ಇದು ಎಟಿಪಿ ವರ್ಲ್ಡ್‌ ಟೂರ್‌ ಮಾಸ್ಟರ್ಸ್‌ 1000 ಪಂದ್ಯಾವಳಿಯಾಗಿತ್ತು. ಆದರೆ ಕ್ವಾರ್ಟರ್‌ಫೈನಲ್ಸ್ ನಲ್ಲಿ ರೊಡ್ಡಿಕ್‌ ವಿರುದ್ಧ 6-3, 6-2 ಸೆಟ್‌ಗಳ ಪರಾಭವ ಅನುಭವಿಸಿದರು. ಫ್ಲೊರಿಡಾದ ಕೀ ಬಿಸ್ಕೇಯ್ನ್‌ನಲ್ಲಿ ಸೋನಿ ಎರಿಕ್ಸನ್‌ ಓಪನ್‌ ಎಂಬ ಇನ್ನೊಂದು ಎಟಿಪಿ ವರ್ಲ್ಡ್‌ ಟೂರ್‌ ಮಾಸ್ಟರ್ಸ್‌ 1000 ಪಂದ್ಯಾವಳಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ನೊವಾಕ್‌ ಜೊಕೊವಿಕ್‌ ರೋಜರ್‌ ಫೆಡರರ್‌ ವಿರುದ್ಧ 3–6, 6–2, 6–3 ಸೆಟ್‌ಗಳಲ್ಲಿ ಜಯಗಳಿಸಿ, ಫೈನಲ್‌ ಪಂದ್ಯದಲ್ಲಿ ಬ್ರಿಟನ್‌ನ ಆಂಡಿ ಮರ್ರೆ ವಿರುದ್ಧ ಸೋಲು ಅನುಭವಿಸಿದರು.

2009ರ ಯುಎಸ್ ಓಪನ್‌ ಆಡುತ್ತಿರುವ ಜೊಕೊವಿಕ್‌

ನೊವಾಕ್‌ ಜೊಕೊವಿಕ್‌, ಆವೆ ಮಣ್ಣಿನ ಅಂಕಣದಲ್ಲಿ ಆಡಲಾದ ಮಾಂಟೆ ಕಾರ್ಲೊ ರೊಲೆಕ್ಸ್‌ ಮಾಸ್ಟರ್ಸ್‌ ಎಂಬ ಮುಂದಿನ ಎಟಿಪಿ ವರ್ಲ್ಡ್‌ ಟೂರ್‌ ಮಾಸ್ಟರ್ಸ್‌ 1000 ಪಂದ್ಯಾವಳಿಯ ಫೈನಲ್‌ ತನಕ ಮುನ್ನಡೆದರು. ಫೈನಲ್‌ ಪಂದ್ಯದಲ್ಲಿ ರಫೆಲ್ ನಡಾಲ್‌ ವಿರುದ್ಧ ಸೋತರು. ರೋಮ್‌ನಲ್ಲಿ ನಡೆದ ಇಂಟರ್ನ್ಯಾಷನಲಿ ಬಿಎನ್‌ಎಲ್‌ ಡಿ'ಇಟ್ಯಾಲಿಯಾ ಎಂಬ ಇನ್ನೊಂದು ಎಟಿಪಿ ವರ್ಲ್ಡ್‌ ಟೂರ್‌ ಮಾಸ್ಟರ್ಸ್‌ 1000 ಪಂದ್ಯಾವಳಿಯಲ್ಲಿ ನೊವಾಕ್‌ ಜೊಕೊವಿಕ್ ಹಾಲಿ ಚಾಂಪಿಯನ್‌ ಆಗಿದ್ದರು. ರೋಜರ್‌ ಫೆಡರರ್‌ ವಿರುದ್ಧ ಗೆದ್ದ ಮುಂದಿನ ಫೈನಲ್‌ ಪಂದ್ಯದಲ್ಲಿ ಸೋತರು.‌ ಸುಮಾರು 81 ವಾರಗಳ ಕಾಲ ವಿಶ್ವದಲ್ಲಿ ಮೂರನೆಯ ಸ್ಥಾನದಲ್ಲಿದ್ದ ನಂತರ, ಈ ಸೋಲಿನಿಂದಾಗಿ, ಮೇ 11ರಂದು ಘೋಷಿಸಲಾದ ಶ್ರೇಯಾಂಕ ಪಟ್ಟಿಯಲ್ಲಿ ನೊವಾಕ್‌ ಜೊಕೊವಿಕ್‌ರ ವಿಶ್ವ ಶ್ರೇಯಾಂಕವು ನಾಲ್ಕಕ್ಕೆ ಇಳಿಯುವಂತಾಯಿತು. [೧೨]

ತಮ್ಮ ಸ್ವಸ್ಥಳ ಬೆಲ್‌ಗ್ರೇಡ್‌ನಲ್ಲಿ ನಡೆದ ಸರ್ಬಿಯಾ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಜೊಕೊವಿಕ್‌ ಅಗ್ರಶ್ರೇಯಾಂಕಿತರಾಗಿದ್ದರು. ಮೊದಲ ಬಾರಿ ಫೈನಲ್‌ ತಲುಪಿದ್ದ ಲುಕಾಸ್‌ ಕುಬೊಟ್‌ರನ್ನು ಸೋಲಿಸಿ, ವರ್ಷದ ಎರಡನೆಯ ಪ್ರಶಸ್ತಿ ಗೆದ್ದುಕೊಂಡರು. [೧೩] ಮ್ಯೂಚುವಾ ಮಾಡ್ರಿಲಿನಾ ಮಾಡ್ರಿಡ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಮೂರನೆಯ ಶ್ರೇಯಾಂಕಿತರಾಗಿ ನೊವಾಕ್‌ ಒಂದು ಸೆಟ್‌ನ್ನೂ ಬಿಟ್ಟುಕೊಡದೇ ಸೆಮಿಫೈನಲ್ಸ್ ಹಂತ ತಲುಪಿದರು. ಐದು ವಾರಗಳಲ್ಲಿ ಮೂರನೆಯ ಬಾರಿ ರಫೆಲ್‌ ನಡಾಲ್‌ರನ್ನು ಎದುರಿಸಿದರು. ಮೂರು ಮ್ಯಾಚ್‌ ಪಾಯಿಂಟ್‌ ಗೆ ಪಾತ್ರನಾಗಿದ್ದ ನೊವಾಕ್‌, 3–6, 7–6(5), 7–6(9) ಸೆಟ್‌ಗಳಿಂದ ಸೋತರು. ನಾಲ್ಕು ತಾಸು ಹಾಗೂ ಎರಡು ನಿಮಿಷಗಳ ಕಾಲ ನಡೆದ ಈ ಪಂದ್ಯವು, ಓಪನ್‌ ಯುಗದ ಎಟಿಪಿ ವರ್ಲ್ಡ್ ಟೂರ್‌ನಲ್ಲಿ ಅತ್ಯುದ್ದದ ಮೂರು ಸೆಟ್‌ಗಳುಳ್ಳ ಸಿಂಗಲ್ಸ್‌ ಪಂದ್ಯವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಫ್ರೆಂಚ್‌ ಓಪನ್‌ ಪಂದ್ಯಾವಳಿಯ ಮೂರನೆಯ ಸುತ್ತಿನ ಪಂದ್ಯದಲ್ಲಿ ನೊವಾಕ್ ಜರ್ಮನಿಯ ಫಿಲಿಪ್‌ ಕೊಹ್ಲ್‌ಷ್ರೇಬರ್‌ ವಿರುದ್ಧ ‌ 6–4, 6–4, 6–4 ಸೆಟ್‌ಗಳಲ್ಲಿ ಸೋತರು.

ಗೆರ್ರಿ ವೆಬರ್‌ ಓಪನ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸುವುದರೊಂದಿಗೆ ನೊವಾಕ್‌ ಜೊಕೊವಿಕ್‌ ಹುಲ್ಲುಹಾಸಿನ ಅಂಕಣದಲ್ಲಾಡುವ ಋತು ಆರಂಭಿಸಿದರು. ರೋಜರ್‌ ಫೆಡರರ್‌ ಈ ಪಂದ್ಯಾವಳಿಯಿಂದ ಹಿಂದೆ ಸರಿದ ಕಾರಣ, ನೊವಾಕ್‌ ಅಗ್ರಶ್ರೇಯಾಂಕಿತರಾಗಿ ಸ್ಪರ್ಧಿಸಿದರು. ಈ ಪಂದ್ಯಾವಳಿಯ ಫೈನಲ್‌ನಲ್ಲಿ ಜರ್ಮನಿಯ ಟಾಮಿ ಹಾಸ್‌ ವಿರುದ್ಧ ಸೋತರು. [೧೪] ವಿಂಬಲ್ಡನ್‌ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ಸ್ ‌ನಲ್ಲಿಯೂ ಸಹ ಜೊಕೊವಿಕ್‌ ಟಾಮಿ ಹಾಸ್‌ ವಿರುದ್ಧ 7–5, 7–6(6), 4–6, 6–3 ಸೆಟ್‌ಗಳಲ್ಲಿ ಸೋತರು. [೧೫]

ಯುಎಸ್‌ ಓಪನ್‌ ಸೀರೀಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಮಾಂಟ್ರಿಯಾಲ್‌ನ ರೋಜರ್ಸ್‌ ಕಪ್‌ ಕ್ವಾರ್ಟರ್‌ಫೈನಲ್ಸ್‌ ತನಕ ಮುನ್ನಡೆದರು. ನಂತರ ಆಂಡಿ ರೊಡ್ಡಿಕ್‌ ವಿರುದ್ಧ 6–4, 7–6(4) ಸೆಟ್‌ಗಳಲ್ಲಿ ಸೋತರು. ರೊಡ್ಡಿಕ್‌ ವಿರುದ್ಧದ ಈ ಸೋಲು ವರ್ಷದಲ್ಲಿ ಮೂರನೆಯದಾಗಿತ್ತು. ಸಿನ್ಸಿನಟಿಯ ವೆಸ್ಟರ್ನ್‌ & ಸದರ್ನ್‌ ಫೈನಾನ್ಷಿಯಲ್‌ ಗ್ರೂಪ್‌ ಮಾಸ್ಟರ್ಸ್‌ ಪಂದ್ಯಾವಳಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ನೊವಾಕ್ ವಿಶ್ವದ 3ನೆಯ ಶ್ರೇಯಾಂಕಿತ ರಫೆಲ್‌ ನಡಾಲ್‌ರ ವಿರುದ್ಧ 6–1, 6–4 ಸೆಟ್‌ಗಳಲ್ಲಿ ಗೆದ್ದು, ಸತತ ಎರಡನೆಯ ವರ್ಷದಲ್ಲಿಯೂ ಸಹ ಫೈನಲ್‌ ತಲುಪುವಂತಾದರು. ಫೈನಲ್‌ನಲ್ಲಿ ವಿಶ್ವದಲ್ಲಿ 1, ಅಗ್ರಶ್ರೇಯಾಂಕದ ರೋಜರ್ ಫೆಡರರ್‌ ವಿರುದ್ಧ 6–1, 7–5 ಸೆಟ್‌ಗಳಲ್ಲಿ ಸೋತರು. [೧೬]

ಹೀಗೆ 2009ರ ಯುಎಸ್‌ ಓಪನ್‌ ಪಂದ್ಯಾವಳಿಯಲ್ಲಿ, ನೊವಾಕ್‌ ಕೇವಲ ಎರಡೇ ಸೆಟ್‌ ಕೈಬಿಟ್ಟು ಸೆಮಿಫೈನಲ್ಸ್‌ ತನಕ ಮುನ್ನಡೆದರು. ತಮ್ಮದೇ ಹಾದಿಯಲ್ಲಿ ಅವರು ಇವಾನ್‌ ಲ್ಯುಬಿಸಿಕ್‌, 15ನೆಯ ಶ್ರೇಯಾಂಕದ ರಡೆಕ್‌ ಸ್ಟೆಫನೆಕ್‌ ಮತ್ತು 10ನೆಯ ಶ್ರೇಯಾಂಕದ ಫರ್ನಾಂಡೊ ವರ್ಡಾಸ್ಕೊರಂತಹ ಆಟಗಾರರನ್ನು ಸೋಲಿಸಿದ್ದರು. ಆದರೆ, ಸೆಮಿಫೈನಲ್ಸ್‌ಗಳಲ್ಲಿ ರೋಜರ್‌ ಫೆಡರರ್‌ ವಿರುದ್ಧ ಬಹಳಷ್ಟು ಸೆಣಸಾಟದ ಪಂದ್ಯದಲ್ಲಿ 7–6(3), 7–5, 7–5 ಸೆಟ್‌ಗಳಲ್ಲಿ ಸೋತರು. [೧೭]

ನಂತರ, ಬೀಜಿಂಗ್‌ನ ಚೀನಾ ಓಪನ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡರು. ವಿಕ್ಟರ್‌ ಹಾನೆಸ್ಕು, ವಿಕ್ಟರ್‌ ಟ್ರೊಯಿಕಿ, ಫರ್ನಾಂಡೊ ವರ್ಡಾಸ್ಕೊ ಹಾಗೂ ರಾಬಿನ್ ಸೊಡರ್ಲಿಂಗ್‌ ವಿರುದ್ಧ ಜಯಗಳಿಸಿ ಫೈನಲ್ ತಲುಪಿದ ನೊವಾಕ್‌, ಮಾರಿಯಾನ್‌ ಸಿಲಿಕ್‌ ವಿರುದ್ಧ 6–2, 7–6 ನೇರ ಸೆಟ್‌ಗಳ ಜಯ ಸಾಧಿಸಿ, ವರ್ಷದ ಮೂರನೆಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. [೧೮]. ಈ ಪಂದ್ಯಾವಳಿಯಲ್ಲಿನ ಉತ್ತಮ ಪ್ರದರ್ಶನ ಹಾಗೂ 2009ರ ಷಾಂಘೈ ಮಾಸ್ಟರ್ಸ್‌ನಿಂದ ಆಂಡಿ ಮರ್ರೆ ಹಿಂದೆ ಸರಿದ ಫಲವಾಗಿ, ಅಕ್ಟೋಬರ್‌ 19ರಂದು ನೊವಾಕ್‌ ವಿಶ್ವದ 3ನೆಯ ಶ್ರೇಯಾಂಕವನ್ನು ಪುನಃ ಪಡೆದರು. ಷಾಂಘೈ ಎಟಿಪಿ ಮಾಸ್ಟರ್ಸ್‌ 1000 ಪಂದ್ಯಾವಳಿಯ ಪ್ರಪ್ರಥಮ ಆವೃತ್ತಿಯ ಸೆಮಿಫೈನಲ್ಸ್‌ನಲ್ಲಿ, ಸಾಮಾನ್ಯ ಗೆಲುವು ಸಾಧಿಸುವ,ಮುಂದೆ ಪಂದ್ಯ ವಿಜೇತರಾಗಲಿದ್ದ ನಿಕೊಲಾಯ್ ಡೆವಿಡೆಂಕೊ ವಿರುದ್ಧ ಕೇವಲ 3 ತಾಸುಗಳ ಪಂದ್ಯವನ್ನು 6–4, 4–6, 6–7(1) ಸೆಟ್‌ಗಳಲ್ಲಿ ಸೋತರು.

ಸ್ವಿಟ್ಜರ್ಲೆಂಡ್‌ನ ಬಸೆಲ್‌ನಲ್ಲಿ ನಡೆದ ಡೆವಿಡೊಫ್‌ ಸ್ವಿಸ್‌ ಇಂಡೋರ್ಸ್‌ (ಒಳಾಂಗಣ) ಟೆನಿಸ್‌ ಪಂದ್ಯಾವಳಿಯಲ್ಲಿ ತಮ್ಮ ವೃತ್ತಿಯಲ್ಲಿ ಮೊತ್ತಮೊದಲ ಬಾರಿಗೆ ದುಪ್ಪಟ್ಟು ಸಾಧನೆಗೈದರು. ಜಾನ್‌ ಹರ್ನಿಷ್‌ ವಿರುದ್ಧ 6–0, 6–0 ನೇರ ಸೆಟ್‌ಗಳಲ್ಲಿ ಗೆದ್ದು ಕ್ವಾರ್ಟರ್‌ಫೈನಲ್ಸ್‌ ಪ್ರವೇಶಿಸಿದರು. [೧೯] ಒಂದು ಸೆಟ್‌ ಹಿಂದಿದ್ದು, ಬ್ರೇಕ್‌ ಹಿನ್ನಡೆಯಿಂದ ಚೇತರಿಸಿಕೊಂಡ ನೊವಾಕ್‌ ಸ್ಟಾನಿಸ್ಲಾಸ್‌ ವಾವ್ರಿಂಕಾ ವಿರುದ್ಧ 3–6, 7–6(5), 6–2 ಸೆಟ್‌ಗಳ ಜಯ ಸಾಧಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದರು. ಸೆಮಿ ಫೈನಲ್ಸ್ ನಲ್ಲಿ ರಡೆಕ್‌ ಸ್ಟೆಫನೆಕ್‌ ವಿರುದ್ಧದ ಪಂದ್ಯದಲ್ಲಿ ಮೂರು ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿ, 6–7(4), 7–5, 6–2 ಸೆಟ್‌ಗಳಲ್ಲಿ ಗೆದ್ದ ನೊವಾಕ್‌ ಫೈನಲ್‌ ಪ್ರವೇಶಿಸಿದರು. ಅಂತಿಮ ಪಂದ್ಯದಲ್ಲಿ ಅವರು ಮೂರು-ಬಾರಿ ಚಾಂಪಿಯನ್, ಆತಿಥೇಯ ರಾಷ್ಟ್ರದ ರೋಜರ್‌ ಫೆಡರರ್‌ ವಿರುದ್ಧ 6–4, 4–6, 6–2 ಸೆಟ್‌ಗಳ ಜಯ ಸಾಧಿಸಿ, ವರ್ಷದ ನಾಲ್ಕನೆಯ ಪ್ರಶಸ್ತಿ ಗಳಿಸಿದರು. [೨೦] ಈ ಗೆಲುವಿನೊಂದಿಗೆ, ನೊವಾಕ್‌ 2009ರಲ್ಲಿ ಎಟಿಪಿ ವರ್ಲ್ಡ್‌ 500,ಪಂದ್ಯಾವಳಿಯಲ್ಲಿ ಎಲ್ಲ 15-0 ಪಂದ್ಯಗಳನ್ನು ಗೆದ್ದಿದ್ದರು.

ವರ್ಷದ ಕೊನೆಯ ಮಾಸ್ಟರ್ಸ್‌ 1000 ಪಂದ್ಯಾವಳಿಯಲ್ಲಿ (ಪ್ಯಾರಿಸ್‌ನಲ್ಲಿನ ಮೊದಲ ಬಿಎನ್‌ಪಿ ಪರಿಬಾಸ್‌ ಮಾಸ್ಟರ್ಸ್‌) 1000, ನಲ್ಲಿ ನೊವಾಕ್‌ ಕೊನೆಗೂ ವರ್ಷದ ಪ್ರಶಸ್ತಿಯಲ್ಲಿ ಜಯಗಳಿಸಿಯಾಯಿತು. ಸೆಮಿಫೈನಲ್ಸ್ ನಲ್ಲಿ ರಫೆಲ್‌ ನಡಾಲ್‌ ವಿರುದ್ಧ 77 ನಿಮಿಷಗಳ ಪಂದ್ಯದಲ್ಲಿ 31 ವಿನ್ನರ್‌ ಹೊಡೆತ ಸಿಡಿಸಿ, 6-2, 6-3 ನೇರ ಸೆಟ್‌ಗಳಲ್ಲಿ ಜಯಗಳಿಸಿದರು. [೨೧] ಹಲವು ವಾಪಸಾತಿಗಳ ನಂತರ, ಫೈನಲ್‌ನಲ್ಲಿ ಗೇಯ್ಲ್‌ ಮೊನ್ಫಿಲ್ಸ್‌ ವಿರುದ್ಧ ನೊವಾಕ್‌ ಹೋರಾಟ ಸಾಧಿಸಿ ನಂತರದಲ್ಲಿ 6–2, 5–7, 7–6(3) ಸೆಟ್‌ಗಳಲ್ಲಿ ಜಯಗಳಿಸಿದರು. [೨೨]

ಲಂಡನ್‌ನಲ್ಲಿ ನಡೆದ ವರ್ಷಾಂತ್ಯದ ಎಟಿಪಿ ವರ್ಲ್ಡ್‌ ಟೂರ್‌ ಫೈನಲ್ಸ್‌ ಪಂದ್ಯಾವಳಿಯಲ್ಲಿ ಹಾಲಿ ವಿಜೇತರಾಗಿ ಪ್ರವೇಶಿಸಿದ ನೊವಾಕ್‌ ಜೊಕೊವಿಕ್‌, ತಮ್ಮ ಮೊದಲ ರೌಂಡ್‌ ರಾಬಿನ್‌ ಪಂದ್ಯದಲ್ಲಿ ನಿಕೊಲಾಯ್‌ ಡೆವಿಡೆಂಕೊ ವಿರುದ್ಧ 3–6, 6–4, 7–5 ಸೆಟ್‌ಗಳಲ್ಲಿ ಜಯಗಳಿಸಿದರು. ಇದರೊಂದಿಗೆ ಅವರ ವಿಜಯದ ಅಭಿಯಾನವು 11 ಪಂದ್ಯಗಳ ತನಕ ವಿಸ್ತರಿಸಿತು. [೨೩] ಅವರ ಎರಡನೆಯ ಪಂದ್ಯದಲ್ಲಿ ಅವರ ಅಭಿಯಾನಕ್ಕೆ ಕೊನೆ ಕಂಡಿತು. ಬಹಳ ಆಯಾಸವಾದಂತೆ ಕಂಡುಬಂದ ನೊವಾಕ್‌ ಮೊದಲ ಬಾರಿಗೆ ರಾಬಿನ್‌ ಸೊಡರ್ಲಿಂಗ್‌ ವಿರುದ್ಧ 7–6(5), 6–1 ಸೆಟ್‌ಗಳಲ್ಲಿ ಸೋತರು. [೨೪] ತಮ್ಮ ಕೊನೆಯ ಪಂದ್ಯದಲ್ಲಿ ರಫೆಲ್‌ ನಡಾಲ್‌ ವಿರುದ್ಧ 7–6(5), 6–3 ಸೆಟ್‌ಗಳಲ್ಲಿ ಗೆದ್ದರೂ ಸಹ ನೊವಾಕ್‌ ಸೆಮಿಫೈನಲ್ಸ್‌ಗೆ ಮುನ್ನಡೆಯಲಾಗಲಿಲ್ಲ, ಏಕೆಂದರೆ, ಸೊಡರ್ಲಿಂಗ್‌, ಡೆವಿಡೆಂಕೊ ಮತ್ತು ಜೊಕೊವಿಕ್‌ ಈ ಮೂವರೂ ಸಹ ತಲಾ ಎರಡು ಪಂದ್ಯ ಗೆದ್ದು ಒಂದರಲ್ಲಿ ಸೋತಿದ್ದರು. ಸೆಟ್‌ ವಿಜಯದ ಶೇಕಡಾವಾರನ್ನು ಹೋಲಿಸಿದಾಗ, ಡೆವಿಡೆಂಕೊರದ್ದು ಉಳಿದ ಇಬ್ಬರಿಗಿಂತಲೂ ಉತ್ತಮವಾಗಿದ್ದು, ಡೆವಿಡೆಂಕೊ ಸೆಮಿಫೈನಲ್ಸ್ ಪ್ರವೇಶಿಸಲು ಸುಲಭವಾಯಿತು. [೨೫]

ಸತತ ಮೂರನೆಯ ವರ್ಷದ ಅಂತ್ಯದಲ್ಲಿ ನೊವಾಕ್‌ ವಿಶ್ವದ 3ನೆಯ ಶ್ರೇಯಾಂಕಿತರಾಗಿ ಉಳಿದರು. ಈಡೀ ವರ್ಷದಲ್ಲಿ ನೊವಾಕ್‌ 97 ಪಂದ್ಯಗಳನ್ನಾಡಿದರು. ಎಟಿಪಿ ವರ್ಲ್ಡ್‌ ಟೂರ್‌ನಲ್ಲಿ ಆಟಗಾರನೊಬ್ಬ ಆಡಿದ ಅತಿಹೆಚ್ಚು ಪಂದ್ಯಗಳಿವು. ಇದರಲ್ಲಿ 78 ವಿಜಯ ಹಾಗೂ 19 ಪರಾಜಯಗಳಿದ್ದವು. ಹಲವು ಪಂದ್ಯಗಳನ್ನು ಗೆಲ್ಲುವ ಮೂಲಕ ಎಟಿಪಿ ವರ್ಲ್ಡ್‌ ಟೂರ್‌ನಲ್ಲಿ ಅಗ್ರಸ್ಥಾನದಲ್ಲಿದ್ದರಲ್ಲದೆ, 10 ಪಂದ್ಯಾವಳಿಗಳಲ್ಲಿ ಫೈನಲ್ಸ್‌ ತಲುಪಿ, 5ರಲ್ಲಿ ಜಯಗಳಿಸಿದ್ದು ಅಮೋಘ ಸಾಧನೆಯಾಗಿದೆ.

2010[ಬದಲಾಯಿಸಿ]

ನೊವಾಕ್‌ ಈ ವರ್ಷಾರಂಭದಲ್ಲಿ ಕೂಯಾಂಗ್‌ ಕ್ಲಾಸಿಕ್‌ ಟೆನಿಸ್‌ ಪ್ರದರ್ಶನಾತ್ಮಕ ಟೆನಿಸ್‌ ಪಂದ್ಯದಲ್ಲಿ ಆಡಿದರು. ತಮ್ಮ ಮೊದಲ ಪಂದ್ಯದಲ್ಲಿ ಅವರು ಟಾಮಿ ಹಾಸ್‌ ವಿರುದ್ಧ ಜಯಗಳಿಸಿ, ಎರಡನೆಯ ಪಂದ್ಯದಲ್ಲಿ ಫರ್ನಾಂಡೊ ವರ್ಡಾಸ್ಕೊ ವಿರುದ್ಧ ಪರಾಭವಗೊಂಡರು. [೨೬] ಆಸ್ಟ್ರೇಲಿಯಾದ ಟೆನಿಸ್‌ ಆಟಗಾರ (ವಿಶ್ವದಲ್ಲಿ 291ನೆಯ ಶ್ರೇಯಾಂಕದ) ಬರ್ನಾರ್ಡ್‌ ಟೊಮಿಕ್‌ ವಿರುದ್ಧ ನೊವಾಕ್‌ ಪ್ರದರ್ಶನಾತ್ಮಕ ಪಂದ್ಯವನ್ನಾಡಿ ಸೋತರು.

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ನೊವಾಕ್‌ ಜೊಕೊವಿಕ್‌ ಕ್ವಾರ್ಟರ್‌‌ಫೈನಲ್ಸ್‌ ಪಂದ್ಯದಲ್ಲಿ ಜೊ-ವಿಲ್ಫ್ರೆಡ್‌ ಸೊಂಗಾ ವಿರುದ್ಧ ಐದು ಸೆಟ್‌ಗಳಲ್ಲಿ (6–7(8), 7–6(5), 6–1, 3–6, 1–6) ಸೋಲು ಕಂಡರು. ಪಂದ್ಯದ ಮುಂಚೆ ಮತ್ತು ನಾಲ್ಕನೆಯ ಸೆಟ್‌ನಿಂದ ಮುಂದಕ್ಕೆ ಅವರಿಗೆ ಜ್ವರವಿದ್ದ ಕಾರಣ ಜಯ ಕಾಣಲಾಗಲಿಲ್ಲ. [೨೭] ಸೋತರೂ ಸಹ, ನೊವಾಕ್‌ ತಮ್ಮ ವೃತ್ತಿ ಜೀವನದ ಉನ್ನತ ಎನ್ನುವ ವಿಶ್ವದ 2ನೆಯ ಶ್ರೇಯಾಂಕ ಉಳಿಸಿಕೊಂಡರು.

2010 ರೋಜರ್ಸ್‌ ಕಪ್‌ ಪಂದ್ಯಾವಳಿಯಲ್ಲಿ ಜೊಕೊವಿಕ್‌

ರಾಟ್ಟರ್ಡಾಮ್‌ನಲ್ಲಿ ನಡೆದ ಎಬಿಎನ್‌ ಆಮ್ರೊ ವರ್ಲ್ಡ್‌ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್ಸ್‌ ತಲುಪಿದರು. ಈ ಪಂದ್ಯದಲ್ಲಿ ಮಿಕೈಲ್‌ ಯುಝ್ನಿ ವಿರುದ್ಧ ಎರಡನೆಯ ಸೆಟ್‌ನ ಟೈಬ್ರೇಕ್‌ನಲ್ಲಿ ಸೆಟ್‌ ಪಾಯಿಂಟ್‌ಗಳಿದ್ದರೂ ಸಹ 6–7(5), 6–7(6) ಅಂತರದಲ್ಲಿ ನೋವಾಕ್‌ ಸೋತರು. ಯುಎಇ (ಎಮಿರೇಟ್ಸ್‌ ದೇಶ)ದಲ್ಲಿ ನಡೆದ ದುಬೈ ಟೆನಿಸ್‌ ಚಾಂಪಿಯನ್ಷಿಪ್‌ ಪಂದ್ಯಾವಳಿಯಲ್ಲಿ ನೊವಾಕ್‌ ಮೊದಲ ಸುತ್ತಿನಿಂದಲೂ, ತಮ್ಮ ಎಲ್ಲ ಎದುರಾಳಿಗಳನ್ನು 3 ಸೆಟ್‌ಗಳಲ್ಲಿ ಸೋಲಿಸಿ,‌ ಸತತ ಎರಡನೆಯ ಬಾರಿ ಫೈನಲ್‌ ತಲುಪಿದರು. ಫೈನಲ್‌ ಪಂದ್ಯದಲ್ಲಿ ನೊವಾಕ್‌ ರಷ್ಯಾದ ಮಿಖೈಲ್‌ ಯುಝ್ನಿ ವಿರುದ್ಧ 7–5, 5–7, 6–3 ಸೆಟ್‌ಗಳ ಜಯ ಸಾಧಿಸಿ, ವರ್ಷದ ಮೊದಲ ಪ್ರಶಸ್ತಿ ತಮ್ಮದಾಗಿಸಿಕೊಂಡರು. ನೊವಾಕ್‌ ತಮ್ಮ ವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಉಳಿಸಿಕೊಂಡಂತಾಯಿತು. [೨೮]

ನಂತರ, ಬೆಲ್‌ಗ್ರೇಡ್‌ನ ಆವೆ ಮಣ್ಣಿನ ಅಂಕಣದಲ್ಲಿ ಡೇವಿಸ್‌ ಕಪ್‌ನ ಸಮ-ಸಮ ಪಂದ್ಯದಲ್ಲಿ ತಮ್ಮ ದೇಶ ಸರ್ಬಿಯಾ ತಂಡದ ಸದಸ್ಯರಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ವಿರುದ್ಧ ಆಡಿದರು. ಈ 3-2 ಅಂತರದಿಂದ ಜಯಗಳಿಸಿದ ಸರ್ಬಿಯಾ ಮೊಟ್ಟಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ ಹಂತ ತಲಪಲು ನೊವಾಕ್‌ ಕಾರಣರಾದರು. ಸ್ಯಾಮ್ ಕ್ವೆರಿ ಹಾಗೂ ಜಾನ್‌ ಇಸ್ನರ್‌ ವಿರುದ್ಧ ಕ್ರಮವಾಗಿ ನಾಲ್ಕು ಮತ್ತು ಐದು ಸೆಟ್‌ಗಳಲ್ಲಿ ಜಯಗಳಿಸಿದರು.

ಉತ್ತರ ಅಮೆರಿಕಾದಲ್ಲಿ ಈ ವರ್ಷದ ಮೊದಲ ಮಾಸ್ಟರ್ಸ್‌ 1000 ಪಂದ್ಯಾವಳಿಯಲ್ಲಿ ನೊವಾಕ್‌ ಸ್ಪರ್ಧಿಸಿದರು. ಇಂಡಿಯನ್‌ ವೆಲ್ಸ್‌ನಲ್ಲಿ ನಡೆದ ಬಿಎನ್‌ಪಿ ಪರಿಬಾಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ, ನೊವಾಕ್‌, ಆ ಪಂದ್ಯದ ವಿಜೇತರಾಗಲಿದ್ದ ಇವಾನ್‌ ಲ್ಯುಬಿಸಿಕ್‌ ವಿರುದ್ಧ ನಾಲ್ಕನೆಯ ಸುತ್ತಿನಲ್ಲಿ 5-7, 3-6 ಸೆಟ್‌ಗಳಲ್ಲಿ ಸೋತರು. ಮಿಯಾಮಿಯಲ್ಲಿ ನಡೆದ ಸೊನಿ ಎರಿಕ್ಸನ್‌ ಓಪನ್ ಟೆನಿಸ್‌ ಪಂದ್ಯಾವಳಿಯಲ್ಲಿ, ತಮ್ಮ ಮೊದಲ ಪಂದ್ಯದಲ್ಲಿ ಒಲಿವಿಯರ್‌ ರೊಚಸ್‌ ವಿರುದ್ಧ 2–6, 7–6(7), 4–6 ಸೆಟ್‌ಗಳ ಅಘಾತಕಾರಿ ಸೋಲುಂಡರು. ಈ 2007ರ ಬಿಎನ್‌ಪಿ ಪರಿಬಾಸ್‌ ಮಾಸ್ಟರ್ಸ್‌ ಪಂದ್ಯದಲ್ಲಿ ಫ್ಯಾಬ್ರಿಸ್‌ ಸಾಂಟೊರೊ ವಿರುದ್ಧದ ಸೋಲಿನ ನಂತರ, ನೊವಾಕ್‌ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದು ಮೊದಲ ಬಾರಿ ಆಗಿತ್ತು. ನಂತರ, ತರಬೇತುದಾರ ಟಾಡ್‌ ಮಾರ್ಟಿನ್‌ರೊಂದಿಗಿನ ತಮ್ಮ ಒಪ್ಪಂದವು ಕೊನೆಗೊಂಡಿದೆ ಎಂದು ನೊವಾಕ್‌ ಹೇಳಿಕೆ ನೀಡಿದರು. ಟಾಡ್‌ ಮಾರ್ಟಿನ್‌ ತಮ್ಮ ಸರ್ವಿಸ್‌ ಶೈಲಿಯಲ್ಲಿ ಪರಿವರ್ತನೆ ತರಲು ಯತ್ನಿಸಿದರು, ಇದರಿಂದಾಗಿ ತಮ್ಮ ಸರ್ವಿಸ್‌ನಲ್ಲಿ ಡಬಲ್‌ ಫಾಲ್ಟ್ಸಗಳ (ಅಸಮರ್ಪಕ ಸರ್ವಿಸ್‌) ಪ್ರಮಾಣ ಹೆಚ್ಚಾಯಿತಲ್ಲದೆ, ತಮ್ಮ ಸರ್ವಿಸ್‌ ಎದುರಾಳಿಗೆ ದುಸ್ತರಗೊಳಿಸುವ ಸಾಧ್ಯತೆ ಕಡಿಮೆಗೊಳಿಸಿತು ಎಂದು ನೊವಾಕ್‌ ಒಪ್ಪಿಕೊಂಡರು. [೨೯]

ವರ್ಷದ ಮೊಟ್ಟಮೊದಲ ಆವೆ-ಮಣ್ಣಿನ, ಮಾಂಟೆ-ಕಾರ್ಲೊ ರೊಲೆಕ್ಸ್‌ ಮಾಸ್ಟರ್ಸ್‌ ಟೆನಿಸ್‌ ಪಂದ್ಯಾವಳಿಯಲ್ಲಿ, ಅಗ್ರ ಶ್ರೇಯಾಂಕದ ನೊವಾಕ್‌ ಸ್ಟಾನಿಸ್ಲಾಸ್‌ ವಾವ್ರಿಂಕಾ ಹಾಗೂ ಆ ಸಮಯ ಬಹಳ ಚೆನ್ನಾಗಿ ಆಡುತ್ತಿದ್ದ ಡೇವಿಡ್‌ ನಲ್ಬಂಡಿಯನ್‌ ವಿರುದ್ಧ ಜಯಗಳಿಸಿ ಸೆಮಿಫೈನಲ್ಸ್‌ ಪ್ರವೇಶಿಸಿದರು. ನಂತರ, ಫರ್ನಾಂಡೊ ವರ್ಡಾಸ್ಕೊ ವಿರುದ್ಧ ಮೊದಲ ಬಾರಿಗೆ 2-6, 2-6 ಸೆಟ್‌ಗಳಲ್ಲಿ ಸೋತರು. ರೋಮ್‌ನ ಇಂಟರ್ನ್ಯಾಷನಲಿ ಬಿಎನ್‌ಎಲ್‌ ಡಿ'ಇಟ್ಯಾಲಿಯಾ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ಸ್ ನಲ್ಲಿ ಪುನಃ ವರ್ಡಾಸ್ಕೊ ವಿರುದ್ಧ 6–7(4), 6–3, 4–6 ಸೆಟ್‌ಗಳಲ್ಲಿ ಸೋತರು. ನಂತರ, ಕಡೆಯ ಎರಡು ತಿಂಗಳುಗಳಿಂದ 'ಅಲರ್ಜಿ' ಸಮಸ್ಯೆಗಳುಂಟಾಗುತ್ತಿದ್ದು, ಅವರ ಆಟಕ್ಕೆ ತೊಂದರೆಯಾಗುತ್ತಿತ್ತು ಎಂದು ನೊವಾಕ್‌ ಜೊಕೊವಿಕ್‌ ನಂತರ ತಿಳಿಸಿದರು. [೩೦]

ತಮ್ಮ ಸ್ವಸ್ಥಳ ಬೆಲ್‌ಗ್ರೇಡ್‌ನಲ್ಲಿ ನಡೆದ ಸರ್ಬಿಯಾ ಓಪನ್‌ ಟೆನಿಸ್ ಪಂದ್ಯಾವಳಿಯಲ್ಲಿ ಹಾಲಿ ವಿಜೇತರಾಗಿದ್ದ ನೊವಾಕ್‌, ಕ್ವಾರ್ಟರ್‌ಫೈನಲ್ಸ್ ನಲ್ಲಿ ವಿಶ್ವದ 330ನೆಯ ಶ್ರೇಯಾಂಕಿತ ಫಿಲಿಪ್‌ ಕ್ರಜಿನೊವಿಕ್‌ ವಿರುದ್ಧ 4-6 ಸೆಟ್‌ ಗಳ ಹಿನ್ನಡೆ ಸಂದರ್ಭದಲ್ಲಿ, ಪಂದ್ಯದಿಂದ ಹಿಂದೆ ಸರಿದರು. ಅನಾರೋಗ್ಯದ ಕಾರಣ ತಾವು ಮ್ಯೂಚುವಾ ಮಡ್ರಿಲೆನಾ ಮಾಡ್ರಿಡ್‌ ಓಪನ್‌ ಪಂದ್ಯಾವಳಿಯಿಂದ ಹಿಂದೆ ಸರಿಯುವರೆಂದು ನೊವಾಕ್‌ ಘೋಷಿಸಿದ್ದರು. [೩೧]

ಮೂರನೆಯ ಶ್ರೇಯಾಂಕದ ಆಟಗಾರರಾಗಿ ನೊವಾಕ್‌ ಜೊಕೊವಿಕ್‌ ಆಗ 2010ರ ಫ್ರೆಂಚ್‌ ಓಪನ್‌ ಪ್ರವೇಶಿಸಿದರು. ಎವ್ಗೆನಿ ಕೊರೊಲೆವ್‌, ಕೇಯ್‌ ನಿಷಿಕೊರಿ, ವಿಕ್ಟರ್‌ ಹನೆಸ್ಕು ಮತ್ತು ರೊಬ್ಬಿ ಜಿನೆಪ್ರಿ ವಿರುದ್ಧ ಜಯಗಳಿಸಿ, ಕ್ವಾರ್ಟರ್‌ಫೈನಲ್ಸ್ ತಲುಪಿದರು. ಜೊರ್ಗೆನ್‌ ಮೆಲ್ಜರ್‌ ವಿರುದ್ಧ ಐದು ಸೆಟ್‌ಗಳಲ್ಲಿ (3–6, 2–6, 6–2, 7–6(3), 6–4) ಸೋತರು. ಐದನೆಯ ಸೆಟ್‌ನಲ್ಲಿ 5-4ರ ಮುನ್ನಡೆಯಲ್ಲಿದ್ದು ಪಂದ್ಯ ಗೆಲ್ಲಲು ಕೊನೆಯ ಅಂಕಕ್ಕಾಗಿ ಜೊರ್ಗೆನ್‌ ಮೆಲ್ಜರ್‌ ಮಾಡಿದ ಸರ್ವ್‌‌ನ್ನು ರಿಟರ್ನ್‌ ಮಾಡಲು ನೊವಾಕ್‌ ಯತ್ನಿಸಿದಾಗ ಈ ಮುಂಗೈ ಹೊಡೆತವು ಅಂಕಣದಾಚೆ ಬಾಲ್ ನ್ನು ತಲುಪಿಸಿ 0-30 ಲೀಡ್ ಪಾಯಿಂಟ್ ಆಯಿತು. ಅಂಪೈರ್‌ ಕಾರ್ಲೊಸ್‌ ಬರ್ನಾರ್ಡ್ಸ್‌ ಖಚಿತಪಡಿಸಿದ ಲೇಟ್‌ ಕಾಲ್‌ ಇದನ್ನು 'ಔಟ್‌' (ಅಂಕಣದ ಆಚೆ) ಎಂದು ನಿರ್ಣಯಿಸಿತ್ತು. ನೊವಾಕ್‌ ಇದನ್ನು ಸ್ವೀಕರಿಸಲಿಲ್ಲ. ನೊವಾಕ್‌ ಈ ಅಂಕ ಕಳೆದುಕೊಂಡು, ಪಂದ್ಯದಲ್ಲೂ ಸೋತರು. ಆನಂತರ, ಹಾಕ್‌-ಐ ತಂತ್ರಜ್ಞಾನದ ಮೂಲಕ ನೊವಾಕ್‌ರ ನಿಲುವು ಸರಿಯಾಗಿಯೇ ಇತ್ತು ಎಂಬುದನ್ನು ಸಾಬೀತುಪಡಿಸಲಾಯಿತು. ಚೆಂಡು ಅಂಕಣದೊಳಗೇ ಬಿದ್ದಿತ್ತು. ಮೊದಲೆರಡು ಸೆಟ್‌ಗಳನ್ನು ಗೆದ್ದ ನಂತರ ನೊವಾಕ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯವೊಂದರಲ್ಲಿ ಸೋತದ್ದು ಇದೇ ಮೊದಲ ಬಾರಿ. [೩೨]

ನಂತರದ 2010ರ ವಿಂಬಲ್ಡನ್‌ ಚಾಂಪಿಯನ್ಷಿಪ್ಸ್‌ನಲ್ಲಿ ನೊವಾಕ್‌ ಜೊಕೊವಿಕ್‌ ಪುನಃ ಮೂರನೆಯ ಶ್ರೇಯಾಂಕದವರಾದರು. ಒಲಿವಿಯರ್‌ ರೊಚಸ್‌, ಟೇಯ್ಲರ್‌ ಡೆಂಟ್‌, ಅಲ್ಬರ್ಟೊ ಮಾಂಟೆನ್ಸ್‌, ಲೇಯ್ಟನ್‌ ಹ್ಯೂಯಿಟ್‌ ಮತ್ತು ಯೆನ್‌-ಹ್ಸು-ಲು ವಿರುದ್ಧ ಜಯಗಳಿಸಿ ಸೆಮಿಫೈನಲ್ಸ್‌ ತಲುಪಿ, ಟಾಮಸ್‌ ಬರ್ಡಿಚ್ ವಿರುದ್ಧ 6–3, 7–6, 6–3 ನೇರ ಸೆಟ್‌ಗಳಲ್ಲಿ ಸೋತರು.

ಟೊರೊಂಟೊದಲ್ಲಿ ನಡೆದ ರೊಜರ್ಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಜೊಕೊವಿಕ್‌ ಸ್ಪರ್ಧಿಸಿದರು. ಸೆಮಿಫೈನಲ್ಸ್ ನಲ್ಲಿ ರೋಜರ್‌ ಫೆಡರರ್‌ ವಿರುದ್ಧ 6–1, 3–6, 7–5 ಸೆಟ್‌ಗಳಲ್ಲಿ ಸೋತರು. ರಫೆಲ್‌ ನಡಾಲ್‌ ಒಂದಿಗೆ ನೊವಾಕ್‌ ಡಬಲ್ಸ್‌ ಜೋಡಿಯಾದರು. ಇದು ಒಂದು ಕಾಲದಲ್ಲಿ ಅತಿ ಗಮನ ಸೆಳೆವ ಜೊತೆಯಾಟದ ಜೋಡಿಯಾಗಿತ್ತು. ಆಗ 1976ರಲ್ಲಿ ಜಿಮ್ಮಿ ಕಾನರ್ಸ್‌ ಮತ್ತು ಆರ್ಥರ್‌ ಆಷ್‌ ಜೋಡಿಯಾಗಿ ಡಬಲ್ಸ್‌ ಪಂದ್ಯವಾಡಿದ ನಂತರ ನೊವಾಕ್‌ ಮತ್ತು ರಫೆಲ್‌ ನಡಾಲ್‌ ವಿಶ್ವದ ಕ್ರಮಾಂಕ 1 ಮತ್ತು 2 ರ ಜೋಡಿಯಾಗಿ ಆಡಿದ್ದು ಇದೇ ಮೊದಲ ಬಾರಿ. [೩೩] ಆದರೆ ಮೊದಲ ಸುತ್ತಿನಲ್ಲೇ ಕೆನಡಾ ದೇಶದವರಾದ ಮಿಲೊಸ್‌ ರವೊನಿಕ್‌ ಮತ್ತು ವಾಸೆಕ್‌ ಪೊಸ್ಪಿಸಿಲ್‌ ವಿರುದ್ಧ ನೊವಾಕ್‌-ರಫೆಲ್ ಜೋಡಿ ಸೋತಿತು. ಸಿನ್ಸಿನಟಿಯಲ್ಲಿ ನಡೆದ 2010 ವೆಸ್ಟರ್ನ್‌ & ಸದರ್ನ್‌ ಫೈನಾನ್ಷಿಯಲ್‌ ಗ್ರೂಪ್‌ ಮಾಸ್ಟರ್ಸ್‌ ಟೆನಿಸ್‌ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ಸ್ ಪಂದ್ಯದಲ್ಲಿ ಆಂಡಿ ರೊಡ್ಡಿಕ್ ವಿರುದ್ಧ ಸೋತರು.

ಜೆಕ್‌ ಗಣರಾಜ್ಯದ ವಿರುದ್ಧದ ಡೇವಿಸ್‌ ಕಪ್‌ ಪಂದ್ಯಾವಳಿಯಲ್ಲಿ ಜೊಕೊವಿಕ್‌

ಯುಎಸ್ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ 3ನೆಯ ಶ್ರೇಯಾಂಕಿತರಾದ ನೊವಾಕ್ ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಅಪಾಯದಲ್ಲಿದ್ದರು. ಭಾರೀ ತಾಪಮಾನದ ವಾತಾವರಣದಲ್ಲಿ, ತಮ್ಮ ದೇಶದವರೇ ಆದ ವಿಕ್ಟರ್‌ ಟ್ರೊಯಿಕಿ ವಿರುದ್ಧ ಎರಡು ಸೆಟ್‌ ಸೋತು, ಒಂದು ಸೆಟ್‌ ಗೆದ್ದು, ನಾಲ್ಕನೆಯ ಸೆಟ್‌ನಲ್ಲಿ ಬ್ರೇಕ್‌ ಅಂಕಗಳನ್ನು ನಿಭಾಯಿಸಿ ಪ್ರಯಾಸದಿಂದ ಗೆದ್ದರು. ಕಡೆಗೆ, ನೊವಾಕ್‌ 6–3, 3–6, 2–6, 7–5, 6–3 ಸೆಟ್‌ಗಳಲ್ಲಿ ಗೆದ್ದರು. ನಂತರ ಫಿಲಿಪ್ ಪೆಟ್ಜ್‌ಷ್ನರ್‌, ಅಮೆರಿಕಾ ದೇಶದ ಜೇಮ್ಸ್‌ ಬ್ಲೇಕ್‌ ಮತ್ತು ಮರಡಿ ಫಿಷ್‌ ಹಾಗೂ 17ನೆಯ ಶ್ರೇಯಾಂಕದ ಗೇಯ್ಲ್‌ ಮೊನ್ಫಿಲ್ಸ್‌ ವಿರುದ್ಧ ನೇರ ಸೆಟ್‌ಗಳಲ್ಲಿ ವಿಜಯ ಸಾಧಿಸಿ, ಸತತ ನಾಲ್ಕನೆಯ ಸಲ ಯುಎಸ್‌ ಓಪನ್‌ ಸೆಮಿಫೈನಲ್ಸ್‌ ತಲುಪಿದರು. ನೊವಾಕ್‌ರನ್ನು 2007ರ ಫೈನಲ್‌ ಹಾಗೂ 2008 ಮತ್ತು 2009ರ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ ಮಣಿಸಿದ್ದ ರೋಜರ್‌ ಫೆಡರರ್,‌ ಸೆಮಿಫೈನಲ್ಸ್ ನಲ್ಲಿ ಎದುರಾಳಿಯಾದರು. ಸೆಮಿಫೈನಲ್ಸ್ ಪಂದ್ಯ ಸೋಲಿನ ಅಂಚಿನಲ್ಲಿದ್ದ ನೊವಾಕ್‌, ಹೋರಾಡಿ, ಕೊನೆಯ ಸೆಟ್‌ನಲ್ಲಿ ಅವರು ಸರ್ವ್‌ ಮಾಡುತ್ತಿದ್ದು, 4-5 ಅಂಕಗಳಲ್ಲಿ ಹಿಂದಿದ್ದರು. ಹೋರಾಟದ ಫಲವಾಗಿ 5–7, 6–1, 5–7, 6–2, 7–5 ಸೆಟ್‌ಗಳಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿದರು. ಈ ಗೆಲುವಿನೊಂದಿಗೆ ಗ್ರ್ಯಾಂಡ್‌ ಸ್ಲ್ಯಾಮ್‌ ಸೆಮಿಫೈನಲ್ಸ್‌ ಹಂತದಲ್ಲಿ ಸತತ ನಾಲ್ಕು ಬಾರಿ ಸೋಲುವುದಕ್ಕೆ ಕಡಿವಾಣ ಹಾಕಿದಂತಾಯಿತು. ಯುಎಸ್‌ ಓಪನ್‌ ಇತಿಹಾಸದಲ್ಲಿ ನಾಲ್ಕು ಯತ್ನಗಳಲ್ಲಿ ಫೆಡರರ್‌ ವಿರುದ್ಧದ ಮೊದಲ ಗೆಲುವು ಹಾಗೂ 2008ರ ಆಸ್ಟ್ರೇಲಿಯನ್‌ ಓಪನ್‌ ನಂತರ ಫೆಡರರ್‌ ವಿರುದ್ಧದ ಮೊದಲ ಗ್ರ್ಯಾಂಡ್‌ ಸ್ಲ್ಯಾಮ್‌ ಗೆಲುವಾಗಿದೆ. ಫೆಡರರ್‌ ವಿಶ್ವದ ಅಗ್ರಸ್ಥಾನಕ್ಕೇರಿದ ಮೇಲೆ ಅವರ ವಿರುದ್ಧ ಒಂದಕ್ಕಿಂತಲೂ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್‌ ಪಂದ್ಯ ಗೆದ್ದ ಹೆಗ್ಗಳಿಕೆ ನೊವಾಕ್‌ ಜೊಕೊವಿಕ್‌ದು (ಇನ್ನ್ನೊಬ್ಬ ರಫೆಲ್‌ ನಡಾಲ್). ಫೈನಲ್‌ ಪಂದ್ಯದಲ್ಲಿ ನೊವಾಕ್ ರಫೆಲ್‌ ನಡಾಲ್‌ ವಿರುದ್ಧ 4–6 7–5 4–6 2–6 ಸೆಟ್‌ಗಳಲ್ಲಿ ಸೋತರು. ಈ ಗೆಲುವಿನೊಂದಿಗೆ ರಫೆಲ್ ನಡಾಲ್‌ ತಮ್ಮ ವೃತ್ತಿಯ ಗ್ರ್ಯಾಂಡ್‌ ಸ್ಲ್ಯಾಮ್‌ನ ಎಲ್ಲಾ ನಾಲ್ಕೂ ಪಂದ್ಯಾವಳಿಗಳನ್ನು ಗೆದ್ದಂತಾಯಿತು.

ಸರ್ಬಿಯಾ ಜೆಕ್‌ ಗಣರಾಜ್ಯವನ್ನು 3-2 ಅಂತರದಿಂದ ಸೋಲಿಸಿ ಡೇವಿಸ್ ಕಪ್‌ ಫೈನಲ್‌ ತಲುಪಲು ನೆರವಾದ ನಂತರ, ನೊವಾಕ್‌ ಅಗ್ರ ಶ್ರೇಯಾಂಕದ ಆಟಗಾರ ಹಾಗೂ ಹಾಲಿ ವಿಜೇತರಾಗಿ ಚೀನಾ ಓಪನ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದರು. ಮಾವೊಕ್ಷಿನ್‌ ಗಾಂಗ್‌, ಮರಡಿ ಫಿಷ್‌ (ಹಿಂದೆಸರಿದ ಫಿಷ್‌), ಗಿಲ್ಸ್‌ ಸೈಮನ್‌ ಮತ್ತು ಜಾನ್‌ ಇಸ್ನರ್‌ ವಿರುದ್ಧ ಜಯಗಳಿಸಿದ ನೊವಾಕ್‌, ಫೈನಲ್‌ ತಲುಪಿದರು. ಸತತ ಎರಡನೆಯ ವರ್ಷ ಈ ಪ್ರಶಸ್ತಿ ಗೆದ್ದರು. ಫೈನಲ್ ಪಂದ್ಯದಲ್ಲಿ ನೊವಾಕ್‌ ಎಂಟನೆಯ ಶ್ರೇಯಾಂಕದ ಆಟಗಾರ, ಸ್ಪೇಯ್ನ್‌ನ ಡೇವಿಡ್‌ ಫೆರರ್‌ ವಿರುದ್ಧ 6-2, 6-4 ಸೆಟ್‌ಗಳ ವಿಜಯ ಸಾಧಿಸಿದರು.

ಷಾಂಘೈ ಮಾಸ್ಟರ್ಸ್‌ ಪಂದ್ಯಾವಳಿಯಲ್ಲಿ ನೊವಾಕ್‌ ಸೆಮಿಫೈನಲ್‌ ತಲುಪಿ, ರೋಜರ್‌ ಫೆಡರರ್‌ ವಿರುದ್ಧ 4–6, 5–7 ಸೆಟ್‌ಗಳಲ್ಲಿ ಸೋತರು.

ವರ್ಷದಲ್ಲಿ ತಮ್ಮ ಕಟ್ಟಕಡೆಯ ಪಂದ್ಯಾವಳಿಯನ್ನು ಲಂಡನ್‌ನ ಬಾರ್ಕ್ಲೇಸ್‌ ಎಟಿಪಿ ವರ್ಲ್ಡ್‌ ಟೂರ್‌ ಫೈನಲ್ಸ್‌ನಲ್ಲಿ ಆಡಿದರು. ನೊವಾಕ್‌ ರಫೆಲ್‌ ನಡಾಲ್‌, ಟಾಮಸ್‌ ಬರ್ಡಿಚ್‌ ಹಾಗೂ ಆಂಡಿ ರೊಡ್ಡಿಕ್‌ ಒಂದಿಗೆ 'ಗ್ರೂಪ್‌ ಎ'ನಲ್ಲಿದ್ದರು. ನೊವಾಕ್‌ ಜೊಕೊವಿಕ್‌ ತಮ್ಮ ಮೊದಲ ರೌಂಡ್‌ ರಾಬಿನ್‌ ಪಂದ್ಯವನ್ನು ಬರ್ಡಿಚ್ ವಿರುದ್ಧ 6–3, 6–3 ಸೆಟ್‌ಗಳಲ್ಲಿ ಜಯಗಳಿಸಿದರು. ಮುಂದಿನ ಪಂದ್ಯದಲ್ಲಿ ರಫೆಲ್‌ ನಡಾಲ್‌ ವಿರುದ್ಧ 5–7, 2–6 ಸೆಟ್‌ಗಳಲ್ಲಿ ಸೋತರು. ಈ ಸಂದರ್ಭದಲ್ಲಿ ತಮ್ಮ ಬಲಗಣ್ಣು ದೃಷ್ಟಿಯು ಅಲ್ಪಮಟ್ಟಕ್ಕಿತ್ತು, ಹಾಗೂ ಮೊದಲ ಸೆಟ್‌ 4-4 ಅಂಕ ಸ್ಥಿತಿಯಲ್ಲಿದ್ದಾಗ ತಾವು‌ ತಮ್ಮ ಕಾಂಟ್ಯಾಕ್ಟ್‌ ಲೆನ್ಸ್‌ಗಳನ್ನು ಬದಲಾಯಿಸಬೇಕಾಯಿತು ಎಂದು ಪಂದ್ಯದ ನಂತರ ನೊವಾಕ್‌ ತಿಳಿಸಿದರು. ಈ ಪಂದ್ಯದುದ್ದಕ್ಕೂ, ಈ ಸಮಸ್ಯೆ ಪರಿಹರಿಸಲು ನೊವಾಕ್‌ ಮೂರು ವಿವಿಧ ರೀತಿಗಳ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸಬೇಕಾಯಿತು. ತಮ್ಮ ಅಂತಿಮ ರೌಂಡ್‌-ರಾಬಿನ್‌ ಪಂದ್ಯದಲ್ಲಿ ಆಂಡಿ ರೊಡ್ಡಿಕ್‌ ವಿರುದ್ಧ 6–2, 6–3 ಸೆಟ್‌ಗಳಲ್ಲಿ ಜಯಗಳಿಸಿ ತಮ್ಮ ಗುಂಪಿನಲ್ಲಿ ಎರಡನೆಯ ಸ್ಥಾನ ಗಳಿಸಿದರು. ಇದರಿಂದಾಗಿ ಸೆಮಿಫೈನಲ್ಸ್‌ ಪಂದ್ಯದಲ್ಲಿ ರೋಜರ್‌ ಫೆಡರರ್‌ ವಿರುದ್ಧ ನೊವಾಕ್‌ ಆಡಬೇಕಿತ್ತು. ಮುಂದೆ ವಿಜೇತರಾಗಲಿದ್ದ ಫೆಡರರ್‌ ವಿರುದ್ಧ ಸೆಮಿಫೈನಲ್ಸ್‌ ಪಂದ್ಯದಲ್ಲಿ ನೊವಾಕ್‌ 1–6, 4–6 ಸೆಟ್‌ಗಳಲ್ಲಿ ಸೋತರು. ಈ ವರ್ಷದ ಅಂತ್ಯದಲ್ಲಿ ನೊವಾಕ್‌ ವಿಶ್ವದ 3 ನೆಯ ಅತಿಶ್ರೇಷ್ಠ ಟೆನಿಸ್‌ ಆಟಗಾರರಾದರು. ಸತತ ನಾಲ್ಕನೆಯ ಬಾರಿ ವರ್ಷಾಂತ್ಯದಲ್ಲಿ ಅವರು ಈ ಸ್ಥಾನವನ್ನು ಕಾಯ್ದುಕೊಂಡರು.

ಸರ್ಬಿಯನ್‌ ಒಲಿಂಪಿಕ್‌ ಸಮಿತಿ[೩೪]ಯಿಂದ 'ವರ್ಷದ ಸರ್ಬಿಯನ್‌ ಕ್ರೀಡಾಪಟು ' ಹಾಗೂ ಡಿಎಸ್‌ಎಲ್‌ ಸ್ಪೋರ್ಟ್‌ನಿಂದ 'ವರ್ಷದ ಸರ್ಬಿಯನ್‌ ಅಥ್ಲೀಟ್' ಪ್ರಶಸ್ತಿಗಳು ನೊವಾಕ್‌ಗೆ ಸಂದವು.‌ [೩೫]

2011[ಬದಲಾಯಿಸಿ]

ಹೀಗೆ 2011ರಲ್ಲಿ ನೊವಾಕ್‌ ಜೊಕೊವಿಕ್‌ ಆಸ್ಟ್ರೇಲಿಯಾದಲ್ಲಿ ನಡೆದ ಹಾಪ್ಮನ್ಸ್‌ ಕಪ್‌ ಮಿಶ್ರ ಡಬಲ್ಸ್‌ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದರು. ನಂತರ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್‌ ಪಂದ್ಯಾವಳಿಯಲ್ಲಿಯೂ ಸ್ಪರ್ಧಿಸಿದರು. ಮೊದಲ ಹಂತದಲ್ಲಿ ಮಾರ್ಸೆಲ್‌ ಗ್ರಾನೊಲರ್ಸ್ ವಿರುದ್ಧ ‌6–1, 6–3, 6–1, ಎರಡನೆಯ ಸುತ್ತಿನಲ್ಲಿ ಇವಾನ್‌ ಡೊಡಿಗ್‌ ವಿರುದ್ಧ 7–5, 6–7(8), 6–0, 6–2 (ನಾಲ್ಕು) ಸೆಟ್‌‌ಗಳಲ್ಲಿ ಗೆದ್ದರು. ಮುಂದೆ, ತಮ್ಮ ದೇಶದವರೇ ಆದ ವಿಕ್ಟರ್‌ ಟ್ರೊಯಿಕಿ ವಿರುದ್ಧದ ಪಂದ್ಯದಲ್ಲಿ ನೊವಾಕ್‌ 6-2 ಮುನ್ನಡೆ ಸಾಧಿಸಿದ್ದಾಗ ವಿಕ್ಟರ್‌ ಪಂದ್ಯ ತೊರೆದರು. ನಾಲ್ಕನೆಯ ಸುತ್ತಿನ ಪಂದ್ಯದಲ್ಲಿ ಅವರು ಸ್ಪೇಯ್ನ್‌ನ ನಿಕಾಲಸ್‌ ಅಲ್ಮಾಗ್ರೊ ವಿರುದ್ಧ ಲೀಲಾಜಾಲವಾದ 6–3, 6–4, 6–0 ಸೆಟ್‌ಗಳ ಜಯ ಸಂಪಾದಿಸಿದರು. ವಿಂಬಲ್ಡನ್‌ ಸೆಮಿಫೈನಲ್ಸ್ ‌ನಲ್ಲಿ ಟಾಮಸ್‌ ಬರ್ಡಿಚ್‌ ವಿರುದ್ಧದ ಸೋಲಿಗೆ ಪ್ರತೀಕಾರವೆಂಬಂತೆ, ಅವರ ವಿರುದ್ಧ ನೊವಾಕ್‌ 6–1, 7–6(5), 6–1 ಸೆಟ್‌ಗಳ ಜಯ ಸಾಧಿಸಿದರು. ನಂತರ ಸೆಮಿಫೈನಲ್‌ ಪಂದ್ಯದಲ್ಲಿ ರೋಜರ್‌ ಫೆಡರರ್‌ ವಿರುದ್ಧ 7–6(3), 7–5, 6–4 ಸೆಟ್‌ಗಳಲ್ಲಿ ಗೆದ್ದು ಫೈನಲ್‌ ತಲುಪಿದರು. ಬ್ರಿಟನ್‌ನ ಆಂಡಿ ಮರ್ರೆ ವಿರುದ್ಧ 6–4, 6–2, 6–3 ನೇರ ಸೆಟ್‌ಗಳಲ್ಲಿ ಗೆದ್ದು ಎರಡನೆಯ ಸಲ ಆಸ್ಟ್ರೇಲಿಯನ್‌ ಓಪನ್‌ ವಿಜೇತರಾದರು. ಅಲ್ಲದೆ, ಎರಡೂ ವಿಜಯಗಳಲ್ಲಿ, ಇಡೀ ಪಂದ್ಯಾವಳಿಯಲ್ಲಿ ನೊವಾಕ್‌ ಕೇವಲ ಒಂದು ಸೆಟ್‌ ಮಾತ್ರ ಸೋತದ್ದುಂಟು. ಆಸ್ಟ್ರೇಲಿಯನ್‌ ಓಪನ್ ಗೆದ್ದು, ಯುಎಸ್‌ ಓಪನ್‌ ಪಂದ್ಯಾವಳಿಯಲ್ಲಿ ರನ್ನರ್‌-ಅಪ್‌ ಆಗಿದ್ದರೂ, ರಫೆಲ್‌ ನಡಾಲ್‌ ಮತ್ತು ರೋಜರ್‌ ಫೆಡರರ್‌ ನಂತರ ನೊವಾಕ್‌ ಜೊಕೊವಿಕ್‌ ಮೂರನೆಯ ಸ್ಥಾನದಲ್ಲಿಯೇ ಇರುವರು.

ಡೇವಿಸ್ ಕಪ್[ಬದಲಾಯಿಸಿ]

ನಂತರ 2006ರ ಏಪ್ರಿಲ್ 9ರಂದು, ಗ್ರೇಟ್‌ ಬ್ರಿಟನ್‌ ವಿರುದ್ಧ ನಡೆದ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಕ್‌, ನಾಲ್ಕನೆಯ ಪಂದ್ಯದಲ್ಲಿ ಗ್ರೆಗ್‌ ರುಸೆಡ್‌ಸ್ಕಿ ವಿರುದ್ಧ ನಾಲ್ಕು ಸೆಟ್‌ಗಳ ಜಯ ಸಾಧಿಸಿದರು. ಇದರಿಂದ, ಸರ್ಬಿಯಾಗೆ ಉತ್ತಮ ಆಟದ 5 ರ ಸರಣಿಯ 3-1ರ ಜಯ ಲಭಿಸಿತು. ಸರ್ಬಿಯಾ ಮತ್ತು ಮಾಂಟಿನೆಗ್ರೊ ಡೇವಿಸ್‌ ಕಪ್‌ನ ಗ್ರೂಪ್‌ ಒನ್‌ ಯುರೋ/ಆಫ್ರಿಕನ್‌ ವಲಯದಲ್ಲಿರಲು ನೆರವಾಯಿತು. ಇದಾದ ನಂತರ, ನೊವಾಕ್‌ ಜೊಕೊವಿಕ್‌ ತನ್ನ ರಾಷ್ಟ್ರೀಯತೆಯನ್ನು ಬದಲಿಸಿ, ಬ್ರಿಟಿಷರೊಂದಿಗೆ ಸೇರಲು ಇಚ್ಛಿಸುವ ಪ್ರಸ್ತಾಪದ ಕುರಿತು ನೊವಾಕ್‌ರ ನಿಕಟವರ್ತಿಗಳು, ಲಾನ್‌ ಟೆನಿಸ್ ಅಸೊಸಿಯೇಷನ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು ಎಂಬ ವದಂತಿ ವ್ಯಾಪಿಸಿತ್ತು. [೭] ಆ ಸಮಯದಲ್ಲಿ ಹತ್ತೊಂಬತ್ತರ ಹರೆಯದ ನೊವಾಕ್‌ ಎಟಿಪಿ ಪಟ್ಟಿಯಲ್ಲಿ 63ನೆಯ ಸ್ಥಾನದಲ್ಲಿದ್ದರು. ಅವರು ಈ ವದಂತಿಯನ್ನು ತಳ್ಳಿಹಾಕಿದರು. 'ಈ ಮಾತುಕತೆ ಅಷ್ಟು ಗಂಭೀರವಾದದ್ದಲ್ಲ, ಡೇವಿಸ್‌ ಕಪ್‌ ಪಂದ್ಯದ ನಂತರ ಬ್ರಿಟಿಷರು ನಮ್ಮೊಂದಿಗೆ ಸೌಜನ್ಯದಿಂದ ವರ್ತಿಸಿದರು,' ಎಂದರು. ಆದರೂ, ಇದಾದ ಮೂರು ವರ್ಷಗಳ ನಂತರ, ಆಗ 2006ರ ಏಪ್ರಿಲ್‌ ಮತ್ತು ಮೇ ತಿಂಗಳುಗಳುದ್ದಕ್ಕೂ, ತಮ್ಮ ಕುಟುಂಬ ಹಾಗೂ ಎಲ್‌ಟಿಎ ಅಧಿಕಾರಿಗಳ ನಡುವಿನ ಮಾತುಕತೆಗಳು ನಿಜಕ್ಕೂ ಗಂಭೀರವಾಗಿದ್ದವು ಎಂದು ನೊವಾಕ್‌ 2009ರ ಅಕ್ಟೋಬರ್‌ ತಿಂಗಳಲ್ಲಿ ಬಹಿರಂಗಗೊಳಿಸಿದರು.[೩೬]

Britain was offering me a lot of opportunities and they needed someone because Andy [Murray] was the only one, and still is. That had to be a disappointment for all the money they invest. But I didn’t need the money as much as I had done. I had begun to make some for myself, enough to afford to travel with a coach, and I said, ‘Why the heck?’ I am Serbian, I am proud of being a Serbian, I didn’t want to spoil that just because another country had better conditions. If I had played for Great Britain, of course I would have played exactly as I do for my country but deep inside, I would never have felt that I belonged. I was the one who took the decision.[೩೭]

ಜೂನ್‌ 2006ರಲ್ಲಿ ಸರ್ಬಿಯಾದಿಂದ ಮಾಂಟಿನಿಗ್ರೊ ಸ್ವಾತಂತ್ರ್ಯ ಪಡೆಯಿತು. ತಮ್ಮ ಎಲ್ಲಾ ಮೂರು ಪಂದ್ಯಗಳಲ್ಲಿಯೂ ನೊವಾಕ್‌ ಗೆಲ್ಲುವುದರ ಮೂಲಕ, ನೊವಾಕ್‌ 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ಲೇ-ಆಫ್‌ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನಿಂದಾಗಿ, ಸರ್ಬಿಯಾ 2008ರಲ್ಲಿ ವಿಶ್ವ ಗುಂಪಿಗೆ ಸೇರಲು ಅರ್ಹತೆ ಪಡೆಯಿತು. ನಂತರ 2008ರ ಆರಂಭದಲ್ಲಿ ರಷ್ಯಾದ ರಾಜಧಾನಿ ಮಾಸ್ಕೊದಲ್ಲಿ ಆತಿಥೇಯರ ವಿರುದ್ಧ, ಸರ್ಬಿಯಾದ ನೊವಾಕ್‌ ಫ್ಲೂ ಜ್ವರದಿಂದಾಗಿ ತಮ್ಮ ಮೊದಲ ಸಿಂಗಲ್ಸ್‌ ಪಂದ್ಯವನ್ನು ಆಡಲಾಗದೆ ಹೊರಗುಳಿಯಬೇಕಾಯಿತು. ನೆನಾದ್‌ ಜಿಮೊನ್ಜಿಕ್‌ ಒಂದಿಗೆ ಸೇರಿ, ತಮ್ಮ ಡಬಲ್ಸ್‌ ಪಂದ್ಯದಲ್ಲಿ ಜಯಗಳಿಸಿದರು. ನಂತರ ನಿಕೊಲಾಯ್ ಡೇವಿಡೆಂಕೊ ವಿರುದ್ಧದ ಸಿಂಗಲ್ಸ್‌ ಪಂದ್ಯವಾಡುತ್ತಿದ್ದಾಗ ಅನಾರೋಗ್ಯದ ಕಾರಣ ನಿರ್ಗಮಿಸಬೇಕಾಯಿತು. ಸರ್ಬಿಯಾ 2009ರಲ್ಲಿ ವಿಶ್ವ ಗುಂಪಿಗೆ ಸೇರುವುದರಲ್ಲಿ ನೊವಾಕ್‌ ಜೊಕೊವಿಕ್‌ ಮಹತ್ವದ ಪಾತ್ರ ವಹಿಸಿದ್ದರು. ಹೀಗೆ 2010ರ ಮಾರ್ಚ್‌ ತಿಂಗಳ 6ರಿಂದ 8ರ ದಿನಾಂಕದ ವರೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ನಡೆದ ಡೇವಿಸ್‌ ಕಪ್‌ ಪಂದ್ಯದಲ್ಲಿ ನೊವಾಕ್, ‌ ಸ್ಯಾಮ್‌ ಕ್ವೆರಿ ಹಾಗೂ ಜಾನ್‌ ಇಸ್ನರ್‌ ವಿರುದ್ಧ ತಮ್ಮ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಜಯಗಳಿಸಿದರು. ಇದರಿಂದಾಗಿ ಸರ್ಬಿಯಾ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ವಿಶ್ವ ಗುಂಪಿನ ಕ್ವಾರ್ಟರ್‌ಫೈನಲ್ಸ್ ತಲುಪಿತು. ಆನಂತರ, ಕ್ರೊಯೇಷಿಯಾ ವಿರುದ್ಧ 4-1 ಹಾಗೂ ಜೆಕ್‌ ಗಣರಾಜ್ಯದ ವಿರುದ್ಧ 3-2 ಅಂತರ ಜಯಗಳಿಸಿದ ಸರ್ಬಿಯಾ ಡೇವಿಸ್‌ ಕಪ್‌ ಫೈನಲ್‌ಗೆ ಮುನ್ನಡೆಯಿತು. ಬೆಲ್‌ಗ್ರೇಡ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ 1-2 ಅಂತರದಲ್ಲಿ ಹಿಂದಿದ್ದ ಸರ್ಬಿಯಾ, 3-2 ಅಂತರದಲ್ಲಿ ಗೆದ್ದು ಡೇವಿಸ್‌ ಕಪ್‌ ತನ್ನದಾಗಿಸಿಕೊಂಡಿತು. ಫೈನಲ್‌ ಪಂದ್ಯದಲ್ಲಿ ನೊವಾಕ್‌ ಗಿಲ್ಸ್‌ ಸೈಮನ್‌ ಮತ್ತು ಗೇಲ್‌ ಮಾನ್ಫಿಲ್ಸ್‌ ವಿರುದ್ದ ಸಿಂಗಲ್ಸ್‌ ಪಂದ್ಯಗಳಲ್ಲಿ ಗೆದ್ದು, ಸರ್ಬಿಯಾಗಾಗಿ ಎರಡು ಅಂಕಗಳನ್ನು ಸಂಪಾದಿಸಿದರು. [೩೮] ನೊವಾಕ್‌ ಸರ್ಬಿಯಾ ಟೆನಿಸ್ ತಂಡದ ಪ್ರಮುಖ ಸದಸ್ಯರಾಗಿದ್ದರು. ಡೇವಿಸ್ ಕಪ್‌ ಸಿಂಗಲ್ಸ್‌ನಲ್ಲಿ ತಾವಾಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಸರ್ಬಿಯಾದ ಜಯಕ್ಕೆ ಕಾರಣರಾಗಿದ್ದರು. ಆದರೆ ಫೈನಲ್‌ನಲ್ಲಿ, ತಮ್ಮ ದೇಶದವರೇ ಆದ ವಿಕ್ಟರ್‌ ಟ್ರೊಯ್ಕಿ ನಿರ್ಣಾಯಕ ಪಂದ್ಯ ಗೆದ್ದರು.

ಆಡುವ ಶೈಲಿ ಮತ್ತು ಉಪಕರಣ[ಬದಲಾಯಿಸಿ]

ನೊವಾಕ್‌ ಜೊಕೊವಿಕ್‌ ಎಲ್ಲ ತರಹದ ಅಂಕಣಗಳಲ್ಲಿಯೂ ಆಡಬಲ್ಲರು. ಅವರು ರಕ್ಷಣಾತ್ಮಕ ಬೇಸ್‌ಲೈನ್‌ (ಅಂಕಣದ ತುದಿಯಲ್ಲೇ ನಿಂತು) ಆಟವಾಡಲು ಬಯಸುತ್ತಾರೆ. ತಮ್ಮ ವೃತ್ತಿಯ ಆರಂಭಿಕ ವರ್ಷಗಳಲ್ಲಿ ಅವರು ಬಹಳಷ್ಟು ಅಕ್ರಮಣಕಾರಿ ಆಟವಾಡುತ್ತಿದ್ದರು. [೩೯] ಅವರು ಸತತವಾಗಿ ಅಂಗೈಯಿಂದ ಟೆನಿಸ್‌ ಚೆಂಡನ್ನು ಎದುರಾಳಿಯ ಅಂಕಣಕ್ಕೆ ಹೊಡೆದುಕಳಿಸುವುದು ಅವರ ಅತ್ಯುತ್ತಮ ಕ್ಷಮತೆಯಾಗಿದೆ. ಜೊತೆಗೆ ಅವರ ಸರ್ವ್‌ ಮತ್ತು ರಕ್ಷಣಾತ್ಮಕ ಆಟಗಳೂ ತಕ್ಕಮಟ್ಟಿಗಿವೆ.[೪೦]. ಚೆಂಡು ತಮ್ಮ ಎಡ ಅಥವಾ ಬಲಪಕ್ಕ ಬಂದರೂ ಹೊಡೆಯಬಲ್ಲರಾದರೂ ಅವರು ಆಗಾಗ್ಗೆ ಎಡಪಕ್ಕ ಬರುವ ಚೆಂಡು ಹೊಡೆಯಲು ರಾಕೇಟನ್ನು ತಮ್ಮ ಎರಡೂ ಕೈಗಳಲ್ಲಿ ಹಿಡಿಯುವರು. [೪೦] ಅವರ ಅತಿವೇಗದ ಸರ್ವ್‌ ಅವರ ಪ್ರಮುಖ ಶಸ್ತ್ರ. ಇದರ ಮೂಲಕವೇ ಅವರು ಬಹಳಷ್ಟು ಪಾಯಿಂಟ್‌ ಗಳಿಸಿದ್ದುಂಟು. ಅವರ ಮೊದಲ ಸರ್ವ್‌ನ್ನು ನೇರವಾಗಿ ಹೊಡೆದರೆ, ತಮ್ಮ ಎರಡನೆಯ ಸರ್ವ್‌ನ್ನು ಸ್ಲೈಸ್‌ ಮಾಡುವ ತಂತ್ರ ಬಳಸುತ್ತಿದ್ದರು. [೩೯] ಇದಾದ ನಂತರ 2009ರಲ್ಲಿ ಅವರು ತಮ್ಮ ತರಬೇತುದಾರರ ತಂಡದಲ್ಲಿ ಟಾಡ್‌ ಮಾರ್ಟಿನ್‌ರನ್ನು ಸೇರಿಸಿಕೊಂಡರು. ಟಾಡ್‌ ಮಾರ್ಟಿನ್‌ ನೊವಾಕ್‌ರ ಸರ್ವಿಸ್‌ ಶೈಲಿಯನ್ನು ಬದಲಾಯಿಸಲು ಯತ್ನಿಸಿದರು. ಇದರಿಂದಾಗಿ, ವಿಶ್ವದ 50 ಶ್ರೇಷ್ಠ ಆಟಗಾರರ ಪೈಕಿ ಏಸ್‌ಗಳಿಗಿಂತಲೂ ಹೆಚ್ಚಾಗಿ ಡಬಲ್‌ ಫಾಲ್ಟ್ಸ್ ದೋಷವೆಸಗಲು ನೊವಾಕ್‌ ಏಕೈಕ ಆಟಗಾರರಾದರು. ಟಾಡ್‌ ಮಾರ್ಟಿನ್‌ರೊಂದಿಗಿನ ಒಪ್ಪಂದ ಅಂತ್ಯಗೊಂಡಾಗಿಂದಲೂ ತಮ್ಮ ಹಳೆಯ ಸರ್ವಿಸ್‌ ಶೈಲಿಯು ಪುನಃ ಪ್ರಾಪ್ತಿಯಾದಂತಿದೆ. ನೊವಾಕ್‌ ಜೊಕೊವಿಕ್‌ ಮತ್ತು ಡೆವಿಡ್‌ ಫೆರರ್‌ ಪುರುಷರಲ್ಲಿ ಅತ್ಯುತ್ತಮ ಸರ್ವಿಸ್‌ ರಿಟರ್ನ್ ಆಟ ಹೊಂದಿದ್ದಾರೆಂದು ಡ್ಯಾರೆನ್‌ ಕೆಹಿಲ್‌ ತಿಳಿಸಿದರು. ಅವರು ತಮ್ಮ ಅಂಕಣದಲ್ಲಿ ಹೊಡೆದ ಚೆಂಡಿಗಾಗಿ ಚಾಚುವ ಯತ್ನ ಹಾಗೂ ನಿರೀಕ್ಷಿಸುವ ಕ್ಷಮತೆಯಿಂದಾಗಿ, ನೊವಾಕ್‌ ಜೊಕೊವಿಕ್‌ ಯಾವುದೇ ಆಟಗಾರ ತಡೆಯಾಗದ ವೇಗದ ಸರ್ವ್‌ಗಳನ್ನು ವಾಪಸ್‌ ಹೊಡೆಯುವ ಕ್ಷಮತೆ ಹೊಂದಿದ್ದಾರೆ. ನೊವಾಕ್‌ ಅತ್ಯುತ್ತಮವಾಗಿ ಸರ್ವ್‌ ರಿಟರ್ನ್‌ ಮಾಡುವರು, ತಮ್ಮ ಬ್ಯಾಕ್‌ಹ್ಯಾಂಡ್‌ ಹೊಡೆತದಿಂದಲೂ ಸಹ, ಎದುರಾಳಿಯ ಸರ್ವಿಸ್‌ನ್ನು ವಾಪಸ್‌ ಹೊಡೆಯುತ್ತಾರೆ. ನೊವಾಕ್‌ ತಾವು ಸರ್ವಿಸ್‌ ಮಾಡುವ ಮುಂಚೆ ಚೆಂಡನ್ನು ಕೆಲ ಬಾರಿ ಪುಟಿಸುವುದಲ್ಲದೆ, ಚೆಂಡು ಬುಗುರಿಯಂತೆ ತಿರುಗಿಸುವಂತಹ ಹಿಂಗೈ ಹೊಡೆತ (ಡ್ರಾಪ್‌ಷಾಟ್‌) ಹೊಡೆಯಬಲ್ಲರು. ಆದರೆ ಅವರು ಈ ಹೊಡೆತವನ್ನು ಪದೇ-ಪದೇ ಬಳಸಿದಲ್ಲಿ ದೋಷಗಳುಂಟಾಗಬಹುದು. [೪೧]

ನೊವಾಕ್‌ ಹೆಡ್‌ ರಾಕೆಟ್‌ ಗಳನ್ನು ಬಳಸುತ್ತಾರೆ. ಹೀಗೆ 2008ರ ಅಂತ್ಯದ ತನಕ ವಿಲ್ಸನ್‌ ರಾಕೆಟ್‌ ಬಳಸಿದ ನಂತರ, ಮೊಟ್ಟಮೊದಲ ಹೆಡ್‌ ಯುಟೆಕ್‌™ ಸ್ಪೀಡ್‌ಪ್ರೊ ರಾಕೆಟ್‌ ಬಳಸುತ್ತಿದ್ದಾರೆ. ಇತ್ತೀಚಿನ 2011ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ, ಇಂಟೆಗ್ರಾ™ ಫೈಬರ್‌ ತಂತ್ರಜ್ಞಾನ ಬಳಸಿ ತಯಾರಿಸಲಾದ ಯುಟೆಕ್‌™ ಐಜಿ ಸ್ಪೀಡ್‌ ಎಂಪಿ 18/20 ರಾಕೆಟ್‌ ಬಳಸಿದರು. ನೊವಾಕ್‌ ತಮ್ಮ ರಾಕೆಟ್‌ಗಳಲ್ಲಿ ಟೆಕ್ನಿಫೈಬರ್‌ ಎಕ್ಷ್‌-ಒನ್‌ ಬೈಫೇಸ್‌ ಸಂಶ್ಲೇಷಿತ ದಾರಗಳನ್ನು(ಒಂದು ತೆರನಾದ ಕೃತಕ ಹುರಿಯಿಂದ ಚೆಂಡು ಹಾಗು ರಾಕೆಟ್ ಮಾಡಲಾಗುತ್ತದೆ.) ಹೆಣೆದು, ಅಡ್ಡಲಾದ ಹೆಣಿಗೆಗೆ ನೈಸರ್ಗಿಕ ದಾರಗಳನ್ನು ಬಳಸುತ್ತಾರೆ. ನಂತರದ 2009ರ ಅಂತ್ಯದಲ್ಲಿ ಅಡಿಡಾಸ್‌ ತೊರೆದು, ಇಟ್ಯಾಲಿಯ ವಸ್ತ್ರ ತಯಾರಿಕೆಯ ಉದ್ದಿಮೆ ಸರ್ಜಿಯೊ ಟಕಿನಿಯೊಂದಿಗೆ ಹತ್ತು ವರ್ಷ ಅವಧಿಯ ಒಪ್ಪಂದ ಮಾಡಿಕೊಂಡರು. ಆದರೂ ಅವರು ಅಡಿಡಾಸ್‌ ಕ್ಲೈಮಾಕೂಲ್‌ ಷೂಗಳನ್ನು ಈಗಲೂ ಬಳಸುವರು. ನೊವಾಕ್‌ ಇತ್ತೀಚೆಗೆ ಅಡಿಡಾಸ್‌ ಬ್ಯಾರಿಕೇಡ್‌ 6.0 ಶ್ರೇಣಿಯ ಬ್ಲ್ಯಾಕ್‌/ವೈಟ್‌ ಷೂ ಧರಿಸಲಾರಂಭಿಸಿದ್ದಾರೆ.

ನೊವಾಕ್‌ ಜೊಕೊವಿಕ್‌-ರಫೆಲ್‌ ನಡಾಲ್‌ ಪೈಪೋಟಿ[ಬದಲಾಯಿಸಿ]

ನೊವಾಕ್‌ ಮತ್ತು ರಫೆಲ್‌ 22 ಬಾರಿ ಸ್ಪರ್ಧಿಸಿದ್ದಾರೆ. ರಫೆಲ್‌ 15-7 (15)ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ಆದರೆ, ನೊವಾಕ್‌ ಹಾರ್ಡ್‌ಕೋರ್ಟ್‌ ಅಂಕಣದಲ್ಲಿ ರಫೆಲ್‌ ವಿರುದ್ಧ ಬಹಳಷ್ಟು ಪಂದ್ಯಗಳಲ್ಲಿ ಗೆದ್ದಿದ್ದಾರೆ. ಆದರೆ 2009ರ ಮಾಡ್ರಿಡ್‌ ಮಾಸ್ಟರ್ಸ್‌ ಪಂದ್ಯಾವಳಿಯಲ್ಲಿ ನಾಲ್ಕು ತಾಸು ನಡೆದ, ಬಹಳಷ್ಟು ಸೆಣೆಸಾಟದ ಪಂದ್ಯವನ್ನು ರಫೆಲ್‌ ನಡಾಲ್‌ ಅಲ್ಪ ಅಂತರದಿಂದ ಗೆದ್ದದ್ದು ಈ ಪೈಪೋಟಿಯ ಮುಖ್ಯಾಂಶವಾಗಿದೆ. ಗ್ರ್ಯಾಂಡ್‌ ಸ್ಲ್ಯಾಮ್‌ ಒಂದರಲ್ಲಿ ರಫೆಲ್‌ ನಡಾಲ್‌ರೊಂದಿಗೆ ನೊವಾಕ್‌ ಜೊಕೊವಿಕ್‌ರ ಇತ್ತೀಚಿನ ಪೈಪೋಟಿಯೆಂದರೆ, ಇತ್ತೀಚಿನ 2010ರ ಯುಎಸ್‌ ಓಪನ್‌ ಪಂದ್ಯವೊಂದರಲ್ಲಿ ನೊವಾಕ್‌ ನಾಲ್ಕು ಸೆಟ್‌ಗಳಲ್ಲಿ ಸೋಲುಂಡರು. ಗ್ರ್ಯಾಂಡ್‌ ಸ್ಲ್ಯಾಮ್‌ ಪಂದ್ಯಾವಳಿಗಳಲ್ಲಿ ಮುಂಚಿನ ಮೂರು ಸ್ಪರ್ಧೆಗಳಲ್ಲಿಯೂ ಸಹ ನೊವಾಕ್‌, ರಫೆಲ್‌ ವಿರುದ್ಧ ಸೋತಿದ್ದರು - 2007 ಮತ್ತು 2008 ಫ್ರೆಂಚ್‌ ಓಪನ್‌ ಸೆಮಿಫೈನಲ್ಸ್‌ ಹಾಗೂ 2007 ವಿಂಬಲ್ಡನ್‌ ಸೆಮಿಫೈನಲ್ಸ್ ಪಂದ್ಯಗಳಲ್ಲಿಯೂ ಸೋತಿದ್ದರು. ಇತ್ತೀಚಿಗಿನ 2010 ವರ್ಲ್ಡ್‌ ಟೂರ್‌ ಫೈನಲ್ ಪಂದ್ಯವು ಇವರಿಬ್ಬರ ಸನಿಹದ ಪೈಪೋಟಿಯಾಗಿತ್ತು.ಅವರು ಪುನಃ ರಫೆಲ್‌ ನೊವಾಕ್‌ರನ್ನು ಸೋಲಿಸಿದರು.

ನೊವಾಕ್‌ ಜೊಕೊವಿಕ್‌-ರೋಜರ್‌ ಫೆಡರರ್‌ ಪೈಪೋಟಿ[ಬದಲಾಯಿಸಿ]

ನಾಲ್ಕು ವರ್ಷಗಳಲ್ಲಿ ಇವರಿಬ್ಬರೂ 20 ಬಾರಿ ಸ್ಪರ್ಧಿಸಿದ್ದಾರೆ. ಇವುಗಳಲ್ಲಿ ರೋಜರ್ 13-7 ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ‌ ಅಲ್ಲದೇ 2008ರಲ್ಲಿ ನೊವಾಕ್‌ ರೋಜರ್‌ ಫೆಡರರ್‌ ವಿರುದ್ಧ ಮೊದಲ ಬಾರಿಗೆ ಗ್ರ್ಯಾಂಡ್‌ ಸ್ಲ್ಯಾಮ್‌ನಲ್ಲಿ ಜಯಗಳಿಸಿದರು. ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್ಸ್ ನಲ್ಲಿ ನೊವಾಕ್‌ ನೇರ ಸೆಟ್‌ಗಳಲ್ಲಿ ಜಯಗಳಿಸಿದರು. ಆ ವರ್ಷ ಅವರು ಪಂದ್ಯಾವಳಿಯ ವಿಜೇತರಾದರು. ರೋಜರ್‌ ಸೋಲಿನೊಂದಿಗೆ ಸತತ ಹತ್ತು ಬಾರಿ ಗ್ರ್ಯಾಂಡ್‌ ಸ್ಲ್ಯಾಮ್‌ ಪೈನಲ್ಸ್‌ಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಕಡಿವಾಣವಾಯಿತು. ಇತ್ತೀಚಿಗೆ 2011ರ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್ಸ್‌ನಲ್ಲಿ ರೋಜರ್‌ ವಿರುದ್ಧ ನೇರ ಸೆಟ್‌ ಗೆಲುವು ನೊವಕ್‌ರ ಇತ್ತೀಚಿನ ಗೆಲುವಾಗಿತ್ತು. ನೊವಾಕ್‌ ಈ ಪಂದ್ಯದಲ್ಲಿ ವಿಜೇತರಾದರು. ಆದಾಗ್ಯೂ 2010ರ ಯುಎಸ್‌ ಓಪನ್‌ ಪಂದ್ಯವೊಂದರಲ್ಲಿಯೂ ಸಹ ದೀರ್ಘ ಕಾಲದ ಐದು ಸೆಟ್‌ ಸೆಣಸಾಟದಲ್ಲಿ ನೊವಾಕ್‌ ರೋಜರ್‌ ವಿರುದ್ಧ 5–7, 6–1, 5–7, 6–2, 7–5 ಸೆಟ್‌ಗಳಲ್ಲಿ ಗೆದ್ದರು. ಕೊನೆಯ ಸೆಟ್‌ನಲ್ಲಿ ಎರಡು ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿಕೊಂಡರು. ಹೀಗೆ 2007 ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಫೆಡರರ್ ಸೆಮಿ‌ಫೈನಲ್ಸ್ ನಲ್ಲಿ ಜೊಕೊವಿಕ್ ರನ್ನು ಸೋಲಿಸಿದರು, 2007 ಯುಎಸ್‌ ಓಪನ್‌ ಫೈನಲ್‌ ಹಾಗೂ 2008 ಯುಎಸ್‌ ಓಪನ್‌ ಮತ್ತು 2009 ಯುಎಸ್‌ ಓಪನ್‌ ಸೆಮಿಫೈನಲ್ಸ್‌ ಪಂದ್ಯಗಳಲ್ಲಿ ರೋಜರ್‌,ನೊವಾಕ್‌ ವಿರುದ್ಧ ಜಯ ಸಾಧಿಸಿದ್ದರು.

ಗ್ರ್ಯಾಂಡ್ ಸ್ಲ್ಯಾಮ್‌ಗಳು[ಬದಲಾಯಿಸಿ]

ಗ್ರ್ಯಾಂಡ್ ಸ್ಲ್ಯಾಮ್ ಪ್ರದರ್ಶನಗಳ ಕಾಲಾನುಕ್ರಮ[ಬದಲಾಯಿಸಿ]

ಗೊಂದಲ ಮತ್ತು ದ್ವಿಗುಣ ಎಣಿಕೆಗಳನ್ನು ತಪ್ಪಿಸುವುದಕ್ಕಾಗಿ, ಈ ಕೆಳಗಿನ ಪಟ್ಟಿಯಲ್ಲಿ ಒಂದು ಪಂದ್ಯಾವಳಿ ಅಥವಾ ಅಟಗಾರನ ಭಾಗವಹಿಸುವಿಕೆ ಪೂರ್ಣಗೊಂಡ ನಂತರ ಒಮ್ಮೆ ಮಾತ್ರ ನವೀಕರಿಸಲಾಗುತ್ತದೆ. ಈ ಪಟ್ಟಿಯಲ್ಲಿನ ಮಾಹಿತಿಯು 2011ರ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯನ್ನು ಒಳಗೊಂಡಿದೆ.

ಪಂದ್ಯಾವಳಿ 2003 2004 2005 2006 2007 2008 2009 2010 2011 ವೃತ್ತಿಜೀವನದ ಗೆಲುವಿನ ಪ್ರಮಾಣದ ಶೇಕಡಾವಾರು ವೃತ್ತಿಜೀವನದ ಗೆಲುವು-ಸೋಲಿನ ಶೇಕಡಾವಾರು ವೃತ್ತಿಜೀವನದ ಗೆಲುವಿನ ಶೇಕಡಾವಾರು
ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳು
ಆಸ್ಟ್ರೇಲಿಯನ್ ಓಪನ್ 1ನೆಯ ಸುತ್ತು 1ನೆಯ ಸುತ್ತು 4ನೆಯ ಸುತ್ತು ವಿಜೇತ ಕ್ವಾರ್ಟರ್‌ಫೈನಲ್ಸ್ ಕ್ವಾರ್ಟರ್‌ಫೈನಲ್ಸ್ ವಿಜೇತ 2/7 25-5 83.33
ಫ್ರೆಂಚ್ ಓಪನ್ 2ನೆಯ ಸುತ್ತು ಕ್ವಾರ್ಟರ್‌ಫೈನಲ್ಸ್ ಸೆಮಿ‌ಫೈನಲ್ಸ್ ಸೆಮಿ‌ಫೈನಲ್ಸ್ 3ನೆಯ ಸುತ್ತು ಕ್ವಾರ್ಟರ್‌ಫೈನಲ್ಸ್ 0/6 21–6 77.78
ವಿಂಬಲ್ಡನ್ 3ನೆಯ ಸುತ್ತು 4ನೆಯ ಸುತ್ತು ಸೆಮಿ‌ಫೈನಲ್ಸ್ 2ನೆಯ ಸುತ್ತು ಕ್ವಾರ್ಟರ್‌ಫೈನಲ್ಸ್ ಸೆಮಿ‌ಫೈನಲ್ಸ್ 0/6 20–6 76.92
ಯುಎಸ್ ಓಪನ್ 3ನೆಯ ಸುತ್ತು 3ನೆಯ ಸುತ್ತು ಫೈನಲ್‌ ಸೆಮಿ‌ಫೈನಲ್ಸ್ ಸೆಮಿ‌ಫೈನಲ್ಸ್ ಫೈನಲ್‌ 0/6 26–6 81.25
ಗೆಲುವು-ಸೋಲು 0–0 0–0 5-4 9–4 19–4 18–3 15–4 19–4 7-0 2/25 92-23 80.00

ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯಗಳು[ಬದಲಾಯಿಸಿ]

ಸಿಂಗಲ್ಸ್: 2 (0 ಟೈಟಲ್ಸ್, 2 ರನ್ನರ್-ಅಪ್ಸ್)[ಬದಲಾಯಿಸಿ]

ಫಲಿತಾಂಶ ವರ್ಷಗಳು ಚಾಂಪಿಯನ್ ಷಿಪ್ ಮೇಲ್ಮೈ ಅಂತಿಮ ಪಂದ್ಯದಲ್ಲಿನ ಎದುರಾಳಿ ಅಂತಿಮ ಪಂದ್ಯದಲ್ಲಿನ ಅಂಕ
ಫೈನಲ್‌ ಸೋಲು 2007 ಯುಎಸ್ ಓಪನ್ ಗಡಸು ಅಂಕಣ ಟೆಂಪ್ಲೇಟು:Country data SWI ರೋಜರ್ ಫೆಡರರ್ 6–7(4), 6–7(2), 4–6
ವಿಜೇತ 2008 ಆಸ್ಟ್ರೇಲಿಯನ್ ಓಪನ್ ಗಡಸು ಅಂಕಣ France ಜೊ-ವಿಲ್ಫ್ರೆಡ್‌ ಸೋಂಗಾ 4–6, 6–4, 6–3, 7–6(2)
ಫೈನಲ್‌ ಸೋಲು 2010 U.S. ಓಪನ್ (2) ಗಡಸು ಅಂಕಣ Spain ರಫೆಲ್‌ ನಡಾಲ್‌ 4–6, 7–5, 4–6, 2–6
ವಿಜೇತ 2011 ಆಸ್ಟ್ರೇಲಿಯನ್‌ ಓಪನ್‌ (2) ಗಡಸು ಅಂಕಣ ಗ್ರೇಟ್ ಬ್ರಿಟನ್ ಆಂಡಿ ಮರ್ರೆ 6–4, 6–2, 6–3

ವೃತ್ತಿಜೀವನದ ಅಂಕಿಅಂಶಗಳು[ಬದಲಾಯಿಸಿ]

ಜನಪ್ರಿಯ ಸಂಸ್ಕೃತಿಯಲ್ಲಿ[ಬದಲಾಯಿಸಿ]

ಬೆಲ್‌ಗ್ರೇಡ್‌ನಲ್ಲಿ ನಡೆದ ಯುರೋವಿಷನ್‌ ಸಾಂಗ್‌ ಕಾಂಟೆಸ್ಟ್‌ 2008ರ ಮೊದಲ ಸೆಮಿಫೈನಲ್‌ ನಲ್ಲಿ ನೊವಾಕ್‌ ವಿಶೇಷ ಅತಿಥಿಯಾಗಿದ್ದರು. ಮತದಾನದ ಆರಂಭವನ್ನು ಸೂಚಿಸಲು ಅವರು ದೊಡ್ಡ ಗಾತ್ರದ ಟೆನಿಸ್‌ ಚೆಂಡೊಂದನ್ನು ಪ್ರೇಕ್ಷಕರತ್ತ ಎಸೆದರು. ಈ ಕಾರ್ಯಕ್ರಮದ ನಿರೂಪಕ ಝೆಲ್ಕೊ ಜೊಕ್ಸಿಮೊವಿಕ್‌ರೊಂದಿಗೆ ಬೆಲ್‌ಗ್ರೇಡ್‌ ಬಗೆಗಿನ ಹಾಡೊಂದನ್ನು ಹಾಡಲಾಯಿತು. [೪೨]

ಮಾರ್ಟಿನ್‌ ಸೊಲ್ವೇಗ್‌ ಮತ್ತು ಡ್ರ್ಯಾಗೊನೆಟ್‌ ರಚಿಸಿದ ಹೆಲೊ ಎಂಬ ಹಾಡಿನಲ್ಲಿ ನೊವಾಕ್‌ರನ್ನು ನಿರೂಪಿಸಲಾಗಿದೆ. ಸ್ಟೇಡ್‌ ರೊಲೆಂಡ್‌ ಗೆರೊದಲ್ಲಿ ಚಿತ್ರೀಕರಿಸಲಾದ ವೀಡಿಯೊದಲ್ಲಿ ಸೊಲ್ವೆಗ್‌ ಮತ್ತು ಇನ್ನೊಬ್ಬ ಡಿಜೆ ಬಾಬ್‌ ಸಿಂಕ್ಲೇರ್‌ ಟೆನಿಸ್‌ ಪಂದ್ಯವಾಡುವುದನ್ನು ನಿರೂಪಿಸಲಾಗಿದೆ. ಪಂದ್ಯದ ಮೇಲ್ವಿಚಾರಕ (ರೆಫರಿ) ನಿರ್ಣಾಯಕ ಚೆಂಡಿನ ಹೊಡೆತವನ್ನು ಔಟ್‌ ಎಂದು ಘೋಷಿಸಿದಲ್ಲಿ, ನೊವಾಕ್ ಜೊಕೊವಿಕ್ ಅಂಕಣ ಪ್ರವೇಶಿಸಿ ತಮ್ಮ ನಿರ್ಣಯವನ್ನು ಹಿಂದೆಗೆಯುವಂತೆ ಮನವೊಲಿಸುತ್ತಾರೆ. [೪೩]

ಇವನ್ನೂ ಗಮನಿಸಿ[ಬದಲಾಯಿಸಿ]

 • ಟೆನಿಸ್‌ ಪ್ರದರ್ಶನ ಕಾಲಾನುಕ್ರಮ ಹೋಲಿಕೆ (ಪುರುಷರು)
 • ಸರ್ಬಿಯಾ ಡೇವಿಸ್‌ ಕಪ್‌ ತಂಡ

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ "Current ATP Rankings (singles)". Association of Tennis Professionals.  Cite error: Invalid <ref> tag; name "ATPSinglesRankingsCurrent" defined multiple times with different content
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ ೩.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 7. ೭.೦ ೭.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Olimpijski komitet Srbije
 10. Hodgkinson, Mark (2008-01-27). "Novak Djokovic wins Australian Open". The Daily Telegraph. London. 
 11. ಒಬ್ಬ ಕರ್ತವ್ಯಭ್ರಷ್ಟ ಎನಿಸಿಕೊಳ್ಳಲು ಸಿದ್ಧನಿಲ್ಲ - ಜೊಕೊವಿಕ್‌
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. http://www.atpworldtour.com/News/Tennis/2010/02/4th-Week/Dubai-Saturday-Djokovic-Leads-Final.aspx
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. ಮಾಡ್ರಿಡ್‌ ಮಾಸ್ಟರ್ಸ್‌ ಪಂದ್ಯಾವಳಿಯಿಂದ ಹಿಂದೆ ಸರಿದ ನೊವಾಕ್‌ ಜೊಕೊವಿಕ್‌
 32. ಅಲ್ಪ ಅಂತರದಿಂದ ಹಿಂದೆ ಸರಿದ ಸೆರೆನಾ ಮತ್ತು ಜೊಕೊವಿಕ್‌
 33. [೧]
 34. http://www.oks.org.rs/2010/12/proglaseni-najuspesniji-u-2010-oj/
 35. http://www.novosti.rs/vesti/sport.72.html:312746-Sport-Najbolji-Djokovic-i-sestre-Moldovan
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. ೩೯.೦ ೩೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. ೪೦.೦ ೪೦.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. [೨]
 43. [೩]

ಬಾಹ್ಯ ಕೊಂಡಿಗಳು[ಬದಲಾಯಿಸಿ]

 1. REDIRECT Template:DavisCup player
Awards
ಪೂರ್ವಾಧಿಕಾರಿ
Rafael Nadal Spain
ATP Most Improved Player
2006

2007

ಉತ್ತರಾಧಿಕಾರಿ
Jo-Wilfried Tsonga France
ಪೂರ್ವಾಧಿಕಾರಿ
Olivera Jevtić
The best athlete of Serbiaಸೆರ್ಬಿಯ
2007
ಉತ್ತರಾಧಿಕಾರಿ
Milorad Čavić
ಪೂರ್ವಾಧಿಕಾರಿ
Nađa Higl
The best athlete of Serbiaಸೆರ್ಬಿಯ
2010
ಉತ್ತರಾಧಿಕಾರಿ
Incumbent

ಟೆಂಪ್ಲೇಟು:WebSlice-begin

ಟೆಂಪ್ಲೇಟು:WebSlice-end

 1. REDIRECT Template:Top ten male singles tennis players of countries belonging to Tennis Europe
 2. REDIRECT Template:Top ten Serbian male singles tennis players