ವಿಷಯಕ್ಕೆ ಹೋಗು

ವಿಂಬಲ್ಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಂಬಲ್ಡನ್

ವಿಂಬಲ್ಡನ್ ಪ್ರತಿಷ್ಟಿತ ಟೆನಿಸ್ ಟೂರ್ನಮೆಂಟ್. ಪ್ರತಿ ವರ್ಷ ನಡೆಯುವ ಈ ಚ್ಯಾಂಪಿಯನ್ಶಿಪ್ ಲಂಡನ್ನಿನ ವಿಂಬಲ್ಡನ್ನಿನಲ್ಲಿ ನಡೆಯುತ್ತದೆ; ನಡೆಯುವ ಊರಿನಿಂದಲೇ ಟೂರ್ನಿಗೆ ಈ ಹೆಸರು. ಹುಲ್ಲು ಹಾಸಿನ ಮೇಲೆ ನಡೆಯುವ ಏಕೈಕ ಟೆನ್ನಿಸ್ ಟೂರ್ನಮೆಂಟ್ ಇದು.

ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಟೂರ್ನಿ 2016

[ಬದಲಾಯಿಸಿ]
  • ಆಲ್‌ ಇಂಗ್ಲೆಂಡ್ ಕ್ಲಬ್‌ನ ಹುಲ್ಲಿನ ಅಂಕಣದಲ್ಲಿ 9-7-2016 ಶನಿವಾರ ರಾತ್ರಿ ವಿಂಬಲ್ಡನ್ ಟ್ರೋಫಿ ಗೆದ್ದ ಅವರು, 22ನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ ದಾಖಲೆಯನ್ನು ಮಾಡಿದರು. ಇದರೊಂದಿಗೆ 17 ವರ್ಷಗಳ ಹಿಂದೆ ಜರ್ಮನಿಯ ಸ್ಟೆಫಿ ಗ್ರಾಫ್ ಅವರು ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು.
  • ಎರಡು ತಿಂಗಳ ಹಿಂದೆಯಷ್ಟೆ ಆಸ್ಟ್ರೇಲಿಯಾ ಓಪನ್ ಟೂರ್ನಿ ಫೈನಲ್‌ ನಲ್ಲಿಯೂ ಅವರು ಕೆರ್ಬರ್‍ಗೆ ಸೋತಿದ್ದರು. ಆ ಪಂದ್ಯದಲ್ಲಿ ಗೆದ್ದಿದ್ದ ಜರ್ಮನಿಯ ಏಂಜೆಲಿಕ್ ಕೆರ್ಬರ್ ಅವರನ್ನು ಶನಿವಾರ ವಿಂಬಲ್ಡನ್‌ ಫೈನಲ್‌ನಲ್ಲಿ ಸೆರೆನಾ ಮಣಿಸಿದರು. ವಿಜಯ ಸಾಧಿಸಿದ ಸೆರೆನಾ ಸೆಂಟರ್ ಕೋರ್ಟ್‌ನಲ್ಲಿ ಅಂಗಾತವಾಗಿ ಬಿದ್ದು ಸಂಭ್ರಮ ವ್ಯಕ್ತಪಡಿಸಿದರು. ಕೆಲ ಕ್ಷಣಗಳ ನಂತರ ಎದ್ದು ನಿಂತು ಅಭಿಮಾನಿಗಳತ್ತ ಕೈಬೀಸಿದರು. ಎದುರಾಳಿ ಕೆರ್ಬರ್ ಅವರನ್ನು ಬಿಗಿದಪ್ಪಿಕೊಂಡರು.
  • ಅಮೆರಿಕದ 34 ವರ್ಷದ ಆಟಗಾರ್ತಿ ಸೆರೆನಾ ನಡೆದಿದ್ದ 81 ನಿಮಿಷಗಳ ಹಣಾಹಣಿಯಲ್ಲಿ 7–5, 6–3ರಲ್ಲಿ ಏಂಜೆಲಿಕ್ ವಿರುದ್ಧ ಜಯಿಸಿದರು. ಸೆರೆನಾ ಅವರ ಬಲಶಾಲಿ ಸರ್ವ್‌ಗಳನ್ನು ಮೊದಲ ಸೆಟ್‌ನಲ್ಲಿ ಕೆರ್ಬರ್ ದಿಟ್ಟತನದಿಂದ ಎದುರಿಸಿದ್ದರು. ಈ ಸೆಟ್‌ನಲ್ಲಿ ಹೆಚ್ಚುಕಮ್ಮಿ ಸಮಬಲದ ಹೋರಾಟ ನಡೆಯಿತು. ಆದರೆ ಟೈಬ್ರೇಕರ್‌ನಲ್ಲಿ ಸೆರೆನಾ ತಪ್ಪು ಮಾಡಲಿಲ್ಲ. ನಿಖರ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಸೆಟ್‌ ಅನ್ನು ತಮ್ಮದಾಗಿಸಿಕೊಂಡರು. ನಂತರ ಎರಡನೇ ಸೆಟ್‌ನಲ್ಲಿ 34 ವರ್ಷದ ಸೆರೆನಾ ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿದರು. ಅವರು ಹಾಕಿದ ಡ್ರಾಪ್‌ಗಳ ಅಂದಾಜು ಸಿಗದೇ ಕೆರ್ಬರ್ ಹತಾಶರಾದರು. ಸೆರೆನಾ ಮಾಡಿದ ನಿಖರ ಸರ್ವ್‌ಗಳಿಗೆ ಉತ್ತರ ಕೊಡುವಲ್ಲಿಯೂ ಎಡವಿದರು
  • ಇದರಿಂದಾಗಿ ಕೆರ್ಬರ್‌ ಅವರಿಗೆ ಮೂರು ಅಂಕಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು. ಪಂದ್ಯದಲ್ಲಿ ಒಟ್ಟು 13 ಏಸ್‌ ಸಿಡಿಸಿದ ಸೆರೆನಾ, 39 ವಿನ್ನರ್‌ಗಳನ್ನು ಹೊಡೆದು ವಿಜೃಂಭಿಸಿದರು. ನಾಲ್ಕನೇ ಶ್ರೇಯಾಂಕದ ಕೆರ್ಬರ್ ಸೆಮಿಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿದ್ದರು.
  • ಗೆಲವಿನ ಸಂಭ್ರಮ-ಫೋಟೊ:[[https://web.archive.org/web/20160807153326/http://www.prajavani.net/sites/default/files/article_images/2016/07/10/pvec10xserena.jpg Archived 2016-08-07 ವೇಬ್ಯಾಕ್ ಮೆಷಿನ್ ನಲ್ಲಿ.]]
ಮುಖ್ಯಾಂಶಗಳು
  • ತಮ್ಮ ವೃತ್ತಿ ಜೀವನದ 50ನೇ ಪ್ರಶಸ್ತಿ ಗೆದ್ದ ಸೆರೆನಾ
  • ₹17.40 ಕೋಟಿ ಬಹುಮಾನ ಪಡೆದ 34 ವರ್ಷದ ಸೆರೆನಾ
ಸೆರೆನಾ ಗ್ರ್ಯಾಂಡ್‌ಸ್ಲಾಮ್ ಸಾಧನೆ (ಸಿಂಗಲ್ಸ್)
  • ಆಸ್ಟ್ರೇಲಿಯಾ ಓಪನ್ – 2003, 2005, 2007, 2009, 2010, 2015
  • ಫ್ರೆಂಚ್ ಓಪನ್ : 2002, 2013, 2015
  • ವಿಂಬಲ್ಡನ್: 2002, 2003, 2009, 2010, 2012, 2015, 2016
  • ಅಮೆರಿಕ ಓಪನ್: 1999, 2002, 2008, 2012, 2013, 2014

[]

ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್

[ಬದಲಾಯಿಸಿ]
10-7-2016
  • ಬ್ರಿಟನ್‌ನ ಆ್ಯಂಡಿ ಮರ್ರೆ X ಕೆನಡಾದ ಮಿಲೊಸ್‌ ರಾಯೊನಿಕ್‌
  • ಅಂಕಗಳು:6–4, 7–6, 7–6;

ಕಠಿಣ ಸವಾಲನ್ನು ಎದುರಿಸಿ ಅತ್ಯುತ್ತಮ ಹೋರಾಟ ತೋರಿದ ಬ್ರಿಟನ್‌ನ ಆ್ಯಂಡಿ ಮರ್ರೆ ವಿಂಬಲ್ಡನ್ ಗ್ರ್ಯಾಂಡ್‌ ಸ್ಲಾಮ್ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ. ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಆ್ಯಂಡಿ ಮರ್ರೆ 6–4, 7–6, 7–6ರಲ್ಲಿ ಕೆನಡಾದ ಮಿಲೊಸ್‌ ರಾಯೊನಿಕ್‌ ಅವರನ್ನು ಮಣಿಸಿ ಮೂರನೇ ಗ್ರ್ಯಾಂಡ್‌ ಸ್ಲಾಮ್ ಟ್ರೋಫಿ ಎತ್ತಿ ಹಿಡಿದರು. ಮರ್ರೆ ವಿಂಬಲ್ಡನ್‌ನಲ್ಲಿ ಜಯಿಸಿದ ಎರಡನೇ ಪ್ರಶಸ್ತಿ ಇದಾಗಿದೆ. 2013ರಲ್ಲಿ ಇಲ್ಲಿ ಮೊದಲ ಬಾರಿ ಚಾಂಪಿಯನ್‌ ಆಗಿದ್ದರು. 2012ರ ಅಮೆರಿಕ ಓಪನ್‌ ಟೂರ್ನಿಯಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು. 29 ವರ್ಷದ ಮರ್ರೆ ಇತ್ತೀಚಿನ ಒಂದು ವರ್ಷದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೋದ ವರ್ಷ ಮತ್ತು ಈ ವರ್ಷ ಆಸ್ಟ್ರೇಲಿಯಾ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದರು. ಅಷ್ಟೇ ಏಕೆ ಈ ಟೂರ್ನಿಯಲ್ಲಿ ಐದು ಬಾರಿ ಫೈನಲ್‌ ತಲುಪಿ ನಿರಾಸೆ ಕಂಡಿದ್ದರು. ಆದ್ದರಿಂದ ಅವರು ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಹಾಕಿದರು.

  • ಮರ್ರೆಗೆ ರೂ.17.8 ಕೋಟಿ ಪ್ರಶಸ್ತಿ
  • ಚಾಂಪಿಯನ್‌ ಮರ್ರೆ ಅವರಿಗೆ 20 ಲಕ್ಷ ಬ್ರಿಟನ್‌ ಪೌಂಡ್‌ (ಸುಮಾರು ರೂ.17.8 ಕೋಟಿ) ಲಭಿಸಿತು. ರನ್ನರ್ ಅಪ್‌ ಆದ ರಾಯೊನಿಕ್‌ 10 ಲಕ್ಷ ಪೌಂಡ್‌ (ಸುಮಾರು ರೂ.8.9 ಕೋಟಿ) ಪಡೆದುಕೊಂಡರು.[]

ಉಲ್ಲೇಖ

[ಬದಲಾಯಿಸಿ]
  1. ಕ್ರೀಡೆ;prajavani.[[https://web.archive.org/web/20160705003324/http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0 Archived 2016-07-05 ವೇಬ್ಯಾಕ್ ಮೆಷಿನ್ ನಲ್ಲಿ.]]
  2. ಮರ್ರೆ ಚಾಂಪಿಯನ್Mon, 11th Jul, 2016[[https://web.archive.org/web/20160705003324/http://www.prajavani.net/categories/%E0%B2%95%E0%B3%8D%E0%B2%B0%E0%B3%80%E0%B2%A1%E0%B3%86-0 Archived 2016-07-05 ವೇಬ್ಯಾಕ್ ಮೆಷಿನ್ ನಲ್ಲಿ.]]