ನೀಲಗಿರಿ
ನೀಲಗಿರಿ | |
---|---|
Buds, capsules and foliage of E. terticornis | |
Scientific classification | |
ಸಾಮ್ರಾಜ್ಯ: | plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Eucalyptus |
Species | |
About ೭೦೦; see the List of Eucalyptus species | |
Natural range | |
Synonyms | |
Aromadendron Andrews ex Steud. |
ನೀಲಗಿರಿಯು (pronounced /ˌjuːkəˈlɪptəs/[೨] ) ಮಿರ್ಟ್‌ಲ್ ಕುಟುಂಬವಾದ ಮಿರ್ಟೇಸಿಯಲ್ಲಿನ ಹೂಬಿಡುವ ಮರಗಳ (ಮತ್ತು ಕೆಲವೊಂದು ಪೊದೆಸಸ್ಯಗಳ) ಒಂದು ಬಹುವಿಧದ ಕುಲವಾಗಿದೆ. ಈ ಕುಲದ ಸದಸ್ಯ ಮರಗಳನ್ನು ಆಸ್ಟ್ರೇಲಿಯಾದ ಮರದ ಸಸ್ಯಸಂಪತ್ತು ವ್ಯಾಪಿಸಿದೆ. ಬಹುತೇಕವಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿರುವ ನೀಲಗಿರಿ ಯ ೭೦೦ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ, ಮತ್ತು ಅತ್ಯಂತ ಚಿಕ್ಕ ಸಂಖ್ಯೆಯಲ್ಲಿ ಇವು ನ್ಯೂಗಿನಿಯಾ ಮತ್ತು ಇಂಡೋನೇಷ್ಯಾದ ಮಗ್ಗುಲಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಫಿಲಿಪ್ಪೀನ್ ದ್ವೀಪಸಮೂಹದಷ್ಟು ದೂರದ ಉತ್ತರ ಭಾಗದಲ್ಲಿ ಒಂದು ಜಾತಿಯು ಕಾಣಿಸಿಕೊಳ್ಳುತ್ತದೆ. ಕೇವಲ ೧೫ ಜಾತಿಗಳು ಆಸ್ಟ್ರೇಲಿಯಾದಿಂದ ಆಚೆಗೆ ಕಾಣಿಸಿಕೊಳ್ಳುತ್ತವೆ, ಮತ್ತು ಕೇವಲ ೯ ಜಾತಿಗಳು ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಮೆರಿಕಾ ಖಂಡಗಳು, ಯುರೋಪ್, ಆಫ್ರಿಕಾ, ಮೆಡಿಟರೇನಿಯನ್ ನೆಲಸುತ್ತು ರೇವು, ಮಧ್ಯಪ್ರಾಚ್ಯ, ಚೀನಾ ಹಾಗೂ ಭಾರತದ ಉಪಖಂಡವನ್ನು ಒಳಗೊಂಡಂತೆ ಉಷ್ಣವಲಯ ಹಾಗೂ ಉಪೋಷ್ಣವಲಯದಾದ್ಯಂತ ನೀಲಗಿರಿ ಯ ಜಾತಿಗಳನ್ನು ಬೆಳೆಸಲಾಗುತ್ತದೆ.
"ನೀಲಗಿರಿ ಮರಗಳು" ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಮೂರು ಒಂದೇ ರೀತಿಯ ಕುಲಗಳಲ್ಲಿ ನೀಲಗಿರಿ ಯು ಒಂದಾಗಿದ್ದು, ಕೊರಿಂಬಿಯಾ ಹಾಗೂ ಆಂಗೊಫೋರಾ ಗಳು ಉಳಿದ ಎರಡು ಕುಲಗಳಾಗಿವೆ. ಅನೇಕ ಜಾತಿಗಳು, ಇತರವುಗಳಿಗಿಂತ ಭಿನ್ನವಾಗಿ, ಅಂಟು ಮರಗಳು ಎಂದು ಚಿರಪರಿಚಿತವಾಗಿವೆ. ಏಕೆಂದರೆ, ಅನೇಕ ಜಾತಿಗಳು ತೊಗಟೆಯಲ್ಲಿನ ಯಾವುದೇ ಮುರಿತದಿಂದ ಹೇರಳವಾದ ಸಸ್ಯರಸವನ್ನು ಹೊರಸೂಸುತ್ತವೆ (ಉದಾಹರಣೆಗೆ ಗೀಚಿದಂಥ ಅಂಟು). ಈ ಕುಲದ 'ಯೂಕಲಿಪ್ಟಸ್' ಎಂಬ ಸಾರ್ವತ್ರಿಕ ನಾಮವನ್ನು ಗ್ರೀಕ್ ಪದಗಳಿಂದ ಪಡೆಯಲಾಗಿದೆ. ಗ್ರೀಕ್ ಭಾಷೆಯಲ್ಲಿ ευ (ಯೂ ) ಎಂದರೆ "ಚೆನ್ನಾಗಿ" ಎಂಬ ಅರ್ಥ ಹಾಗೂ καλυπτος (ಕಲಿಪ್ಟಸ್ ) ಎಂದರೆ ಚೆನ್ನಾಗಿ "ಆವರಿಸಲ್ಪಟ್ಟಿರುವ" ಎಂಬ ಅರ್ಥವಿದ್ದು, ಇದು ಹೂವನ್ನು ಆರಂಭದಲ್ಲಿ ಅವಿಸಿಟ್ಟುಕೊಂಡಿರುವ ಪುಷ್ಪಪಾತ್ರೆಯ ಮೇಲಿನ ಬೀಜಕಣಕೋಶದ ಮುಚ್ಚಳಕ್ಕೆ ಉಲ್ಲೇಖಿಸಲ್ಪಡುತ್ತದೆ.[೩]
ನೀಲಗಿರಿ ಯು ಜಾಗತಿಕ ಅಭಿವೃದ್ಧಿಯ ಸಂಶೋಧಕರು ಹಾಗೂ ಪರಿಸರವಾದಿಗಳ ಗಮನವನ್ನು ಸೆಳೆದಿದೆ. ಇದೊಂದು ವೇಗವಾಗಿ-ಬೆಳೆಯುವ ಕಾಡಿನ ಮೂಲವಾಗಿದ್ದು, ಇದರ ತೈಲವನ್ನು ಶುದ್ಧೀಕರಣಕ್ಕಾಗಿ ಬಳಸಬಹುದಾಗಿದೆ ಹಾಗೂ ಇದು ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹೆಚ್ಚು ನೀರನ್ನು ಹೀರುವ ಗುಣವನ್ನು ಕೆಲವೊಮ್ಮೆ ಜೌಗುನೆಲಗಳನ್ನು ಒಣಗಿಸಲು, ತನ್ಮೂಲಕ ಮಲೇರಿಯಾದ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ. ಅವುಗಳ ಸ್ವಾಭಾವಿಕ ವ್ಯಾಪ್ತಿಯಿಂದ ಆಚೆಗೆ ನೀಲಗಿರಿಯ ಮರಗಳನ್ನು, ಬಡಜನತೆಯ[೪][೫]: 22 ಮೇಲೆ ಅವು ಬೀರುವ ಪ್ರಯೋಜನಕಾರಿ ಪ್ರಭಾವಕ್ಕಾಗಿ ಶ್ಲಾಘಿಸುವುದೂ ಉಂಟು ಮತ್ತು ಆಕ್ರಮಣಶೀಲ ನೀರು-ಚೂಷಕಗಳಾಗಿರುವ[೬] ಕಾರಣಕ್ಕಾಗಿ ಅವುಗಳನ್ನು ತಿರಸ್ಕಾರದಿಂದ ಕಾಣುವುದೂ ಉಂಟು. ಇದು ಅವುಗಳ ಒಟ್ಟಾರೆ ಪ್ರಭಾವದ ಕುರಿತಾದ ವಿವಾದಕ್ಕೆ ಕಾರಣವಾಗಿದೆ.[೭]
ವಿವರಣೆ
[ಬದಲಾಯಿಸಿ]ಗಾತ್ರ ಮತ್ತು ಆವಾಸಸ್ಥಾನ
[ಬದಲಾಯಿಸಿ]ಬಲಿತಿರುವ ಒಂದು ನೀಲಗಿರಿ ಯು ಒಂದು ಕೆಳಮಟ್ಟದ ಪೊದೆಸಸ್ಯದ ಅಥವಾ ಒಂದು ಅತ್ಯಂತ ದೊಡ್ಡ ಮರದ ಸ್ವರೂಪವನ್ನು ತಾಳಬಹುದು. ಜಾತಿಗಳನ್ನು ವಿಭಜಿಸಲು ಅನುವಾಗುವಂಥ ಮುಖ್ಯವಾದ ಮೂರು ಬೆಳೆಯುವ ಸ್ವಭಾವ ರೀತಿಗಳು ಹಾಗೂ ನಾಲ್ಕು ಗಾತ್ರದ ವರ್ಗಗಳು ಕಂಡುಬರುತ್ತವೆ.
ಒಂದು ಸಾಮಾನ್ಯೀಕರಣವಾಗಿ "ಕಾಡು ಮರಗಳು" ಏಕ-ಕಾಂಡದವಾಗಿರುತ್ತವೆ ಮತ್ತು ಒಂದು ಕಿರೀಟವನ್ನು ಹೊಂದುವ ಮೂಲಕ ಸಂಪೂರ್ಣ ಮರದ ಎತ್ತರದ ಒಂದು ಕಿರುಭಾಗವನ್ನು ರೂಪಿಸುತ್ತವೆ. "ಕಾಡುಪ್ರದೇಶದ ಮರಗಳು" ಏಕ-ಕಾಂಡದವಾಗಿದ್ದರೂ ಸಹ ನೆಲದ ಮಟ್ಟದಿಂದ ಒಂದು ಕಿರು ಅಂತರದಷ್ಟು ಮೇಲಕ್ಕೆ ಅವು ಕವಲೊಡೆಯಬಹುದು.
"ಮ್ಯಾಲಿಗಳು" ನೆಲದ ಮಟ್ಟದಿಂದಲೇ ಬಹು-ಕಾಂಡದವಾಗಿರುವ ವಿಶಿಷ್ಟತೆಯನ್ನು ಹೊಂದಿದ್ದು, ಸಾಮಾನ್ಯವಾಗಿ ...10 m (33 ft)ಗಿಂತ ಕಡಿಮೆಯ ಎತ್ತರವನ್ನು ಹೊಂದಿರುತ್ತವೆ. ಹಲವು ವೇಳೆ ಅವು ಸಣ್ಣರೆಂಬೆಗಳ ತುದಿಗಳಲ್ಲಿ ಉಳಿದವಕ್ಕಿಂತ ಅಧಿಕವಾಗಿ ಕಿರೀಟವನ್ನು ಹೊಂದಿರುತ್ತವೆ ಮತ್ತು ಬಿಡಿಯಾದ ಅಥವಾ ಪ್ರತ್ಯೇಕವಾದ ಸಸ್ಯಗಳು ಸೇರಿಕೊಂಡು ಒಂದು ತೆರೆದಿರುವ ಇಲ್ಲವೇ ಮುಚ್ಚಲ್ಪಟ್ಟಿರುವ ರಚನೆಯನ್ನು ಸೃಷ್ಟಿಸಬಹುದು. ಅನೇಕ ಮ್ಯಾಲಿ ಮರಗಳು ತುಂಬಾ ಕೆಳಮಟ್ಟದಲ್ಲಿ-ಬೆಳೆಯುವ ಸ್ವಭಾವವನ್ನು ಹೊಂದಿರಲು ಸಾಧ್ಯವಿದ್ದು, ಅಂಥವುಗಳನ್ನು ಒಂದು ಪೊದೆಸಸ್ಯವಾಗಿ ಪರಿಗಣಿಸಲಾಗುತ್ತದೆ.
ಮರದ ಇತರ ಎರಡು ಸ್ವರೂಪಗಳು ಪಶ್ಚಿಮದ ಆಸ್ಟ್ರೇಲಿಯಾದಲ್ಲಿ ಗಮನಾರ್ಹವಾಗಿದ್ದು, "ಮ್ಯಾಲೆಟ್" ಹಾಗೂ "ಮಾರ್ಲಾಕ್" ಎಂಬ ಸ್ಥಳೀಯ ಹೆಸರುಗಳನ್ನು ಬಳಸಿಕೊಂಡು ಅವುಗಳನ್ನು ವಿವರಿಸಲಾಗುತ್ತದೆ. "ಮ್ಯಾಲೆಟ್" ಸ್ವರೂಪವು ಚಿಕ್ಕದರಿಂದ ಮಧ್ಯಮ-ಗಾತ್ರದವರೆಗಿನ ಒಂದು ಮರವಾಗಿದ್ದು, ಅದು ಲಿಗ್ನೋಟ್ಯೂಬರ್ ಎಂದು ಕರೆಯಲ್ಪಡುವ ಗಡ್ಡೆಗಳನ್ನು ಬಿಡುವುದಿಲ್ಲ ಮತ್ತು ಒಂದು ಸಾಕಷ್ಟು ಉದ್ದವಾದ ಕಾಂಡವನ್ನು ಹೊಂದಿರುತ್ತದೆ. ಲಂಬಾಕಾರವಾಗಿ ಕವಲೊಡೆಯುವ ಲಕ್ಷಣ ಮತ್ತು ಅನೇಕವೇಳೆ ಎದ್ದುಕಾಣುವಂತಿರುವ ಒಂದು ದಟ್ಟವಾದ ತುದಿಯ ಕಿರೀಟದ ವಿಶಿಷ್ಟತೆಯನ್ನು ಇದು ಹೊಂದಿರುತ್ತದೆ. ಇದು ಯೂಕಲಿಪ್ಟಸ್ ಆಕ್ಸಿಡೆಂಟಾಲಿಸ್ , E. ಆಸ್ಟ್ರಿಂಜೆನ್ಸ್ , E. ಸ್ಪಾಥುಲೇಟಾ , E. ಗಾರ್ಡ್‌ನೆರಿ , E. ಡಯೆಲ್ಸೀ , E. ಫಾರೆಸ್ಟಿಯಾನಾ , E. ಸಾಲ್ಯೂಬ್ರಿಸ್ , E. ಕ್ಲಿವಿಕೋಲಾ ಮತ್ತು E. ಓರ್ನಾಟಾ ಮೊದಲಾದವುಗಳ ಬಲಿತ ಆರೋಗ್ಯಕರ ಮಾದರಿಗಳ ಸಾಮಾನ್ಯ ಬೆಳೆಯುವ ಸ್ವಭಾವವಾಗಿರುತ್ತದೆ. ಮ್ಯಾಲೆಟ್‌ಗಳ ನಯವಾದ ತೊಗಟೆಯು ಅನೇಕ ಬಾರಿ ಒಂದು ಸ್ಯಾಟಿನ್ನಿನಂಥ ನವಿರು ಮತ್ತು ಹೊಳಪನ್ನು ಹೊಂದಿರುತ್ತದೆ ಹಾಗೂ ಅದು ಬಿಳಿ, ಕೆನೆ, ಬೂದು, ಹಸಿರು ಅಥವಾ ತಾಮ್ರದ ಬಣ್ಣದಲ್ಲಿರಲು ಸಾಧ್ಯವಿದೆ.
ಮಾರ್ಲಾಕ್ ಎಂಬ ಪದವು ಹಲವಾರು ರೀತಿಯಲ್ಲಿ ಬಳಸಲ್ಪಟ್ಟಿದೆ; ಆಸ್ಟ್ರೇಲಿಯಾದ ಕಾಡು ಮರಗಳಲ್ಲಿ ಇದನ್ನು ಲಿಗ್ನೋಟ್ಯೂಬರ್‌ಗಳಿಲ್ಲದ, ಆದರೆ ಒಂದು ಮ್ಯಾಲೆಟ್‌ಗಿಂತ ಕುಳ್ಳಗಿನ, ಕೆಳಮಟ್ಟದಲ್ಲಿ-ಕವಲೊಡೆಯುವ ಕಾಂಡವನ್ನು ಹೊಂದಿರುವ ಒಂದು ಸಣ್ಣ ಮರವಾಗಿ ವ್ಯಾಖ್ಯಾನಿಸಲಾಗಿದೆ. ಹೆಚ್ಚೂ-ಕಮ್ಮಿ ಅಪ್ಪಟವಾದ ಗುಂಪುಗಳು ಅಥವಾ ತೋಪುಗಳಲ್ಲಿ ಅವು ಸಾಮಾನ್ಯವಾಗಿ ಬೆಳೆಯುತ್ತವೆ. E. ಪ್ಲಾಟಿಪಸ್, E. ವೆಸಿಕ್ಯುಲೋಸಾ ಮತ್ತು ಇದರೊಂದಿಗೆ ಸಂಬಂಧವಿರದ E. ಸ್ಟೊಯೇಟೀ ಮೊದಲಾದವುಗಳ ತೋಪುಗಳು ನಿಚ್ಚಳವಾಗಿ ಗುರುತಿಸಬಹುದಾದ ಉದಾಹರಣೆಗಳಾಗಿವೆ.
"ಮೋರೆಲ್" ಎಂಬ ಪದವು ಹುಟ್ಟಿನಲ್ಲಿ ಅಥವಾ ವ್ಯತ್ಪತ್ತಿಯಲ್ಲಿ ಕೊಂಚಮಟ್ಟಿಗೆ ಅಸ್ಪಷ್ಟವಾಗಿದ್ದು, ಪಶ್ಚಿಮದ ಆಸ್ಟ್ರೇಲಿಯಾದ ಹೆಚ್ಚಾಗಿ ಗೋಧಿ ಬೆಳೆಯುವ ಪ್ರದೇಶ ಹಾಗೂ ಚಿನ್ನ ದೊರೆಯುವ ಪ್ರದೇಶಗಳ ಮರಗಳಿಗೆ ಅನ್ವಯವಾಗುವಂತೆ ಕಾಣುತ್ತದೆ. ಈ ಪ್ರದೇಶಗಳಲ್ಲಿ ಬೆಳೆಯುವ ಮರಗಳು ಒಂದು ಉದ್ದವಾದ, ನೆಟ್ಟಗಿನ ಕಾಂಡವನ್ನು ಹೊಂದಿದ್ದು ಅದರ ತೊಗಟೆಯು ಸಂಪೂರ್ಣವಾಗಿ ಒರಟಾಗಿರುತ್ತದೆ. ಈಗ ಇದನ್ನು ಮುಖ್ಯವಾಗಿ E. ಲಾಂಗಿಕಾರ್ನಿಸ್ (ಕೆಂಪು ಮೋರೆಲ್) ಮತ್ತು E. ಮೆಲನೊಕ್ಸೈಲಾನ್‌ಗಳಿಗಾಗಿ (ಕಪ್ಪು ಮೋರೆಲ್) ಬಳಸಲಾಗುತ್ತದೆ.
ಮರದ ಗಾತ್ರಗಳು ಈ ಕೆಳಗೆ ನೀಡಿರುವುದರ ರೂಢಿಯನ್ನು ಅನುಸರಿಸುತ್ತವೆ:
- ಸಣ್ಣದು — ..10 m (33 ft)ರವರೆಗಿನ ಎತ್ತರವನ್ನು ಹೊಂದಿರುವುದು
- ಮಧ್ಯಮ-ಗಾತ್ರದ್ದು — ...10–30 m (33–98 ft)ನಷ್ಟಿರುವುದು
- ಎತ್ತರದ್ದು — ...30–60 m (98–197 ft)ನಷ್ಟಿರುವುದು
- ಅತ್ಯಂತ ಎತ್ತರದ್ದು — ...60 m (200 ft)ಗಿಂತ ಮೀರಿದ್ದು
ಎಲೆಗಳು
[ಬದಲಾಯಿಸಿ]ಹೆಚ್ಚೂಕಡಿಮೆ ಎಲ್ಲಾ ನೀಲಗಿರಿ ಗಳು ನಿತ್ಯಹರಿದ್ವರ್ಣವಾಗಿದ್ದರೂ ಕೆಲವೊಂದು ಉಷ್ಣವಲಯದ ಜಾತಿಗಳು ಶುಷ್ಕ ಋತುವಿನ ಅಂತ್ಯದಲ್ಲಿ ತಮ್ಮ ಎಲೆಗಳನ್ನು ಕಳೆದುಕೊಳ್ಳುತ್ತವೆ. ಮಿರ್ಟ್‌ಲ್ ಕುಟುಂಬದ ಇತರ ಸದಸ್ಯರಲ್ಲಿರುವಂತೆ, ನೀಲಗಿರಿ ಎಲೆಗಳು ತೈಲ ಗ್ರಂಥಿಗಳಿಂದ ಆವರಿಸಲ್ಪಟ್ಟಿರುತ್ತವೆ. ಹೇರಳವಾಗಿ ತಯಾರಿಸಲ್ಪಡುವ ತೈಲಗಳು ಈ ಕುಲದ ಒಂದು ಪ್ರಮುಖ ಗುಣಲಕ್ಷಣವಾಗಿದೆ. ಪೂರ್ತಿಯಾಗಿ ಬೆಳೆದಿರುವ ನೀಲಗಿರಿ ಮರಗಳು ಸಾಮಾನ್ಯವಾಗಿ ಅತ್ಯಂತ ಎತ್ತರವಾಗಿರುತ್ತವೆ ಮತ್ತು ಸಂಪೂರ್ಣವಾಗಿ ಎಲೆಯಿಂದ ತುಂಬಿಕೊಂಡಿರುತ್ತವೆ. ಎಲೆಗಳು ಸಾಮಾನ್ಯವಾಗಿ ಕೆಳಮುಖವಾಗಿ ತೂಗುವುದರಿಂದ, ಅವುಗಳ ನೆರಳು ವಿಶಿಷ್ಟವಾದ ರೀತಿಯಲ್ಲಿ ತೇಪೆಹಾಕಿದಂತಿರುತ್ತದೆ.
ಪೂರ್ತಿಯಾಗಿ ಬೆಳೆದ ನೀಲಗಿರಿ ಸಸ್ಯವೊಂದರ ಮೇಲಿನ ಎಲೆಗಳು ಸಾಮಾನ್ಯವಾಗಿ ಶೂಲಶಿರದ ರೀತಿಯಲ್ಲಿದ್ದು ಎಲೆಯ ತೊಟ್ಟನ್ನು ಒಳಗೊಂಡಿರುತ್ತವೆ. ಸ್ಪಷ್ಟವಾಗಿ ಕಾಣುವಂತೆ ಒಂದರ ನಂತರ ಇನ್ನೊಂದು ಬರುವ ರೀತಿಯಲ್ಲಿ ಜೋಡಣೆಗೊಂಡಿರುವ ಎಲೆಗಳು, ಮೇಣದಂಥ ಅಥವಾ ಹೊಳಪು ಹಸಿರು ಮೇಲ್ಮೈಯನ್ನು ಹೊಂದಿರುತ್ತವೆ. ಇದಕ್ಕೆ ಪ್ರತಿಯಾಗಿ, ಎಳೆಸಸಿಗಳ ಎಲೆಗಳು ಅನೇಕ ವೇಳೆ ಅಭಿಮುಖವಾಗಿರುವ, ಆಸನ್ನ ಸ್ಥಿತಿಯಲ್ಲಿರುತ್ತವೆ ಮತ್ತು ಮಾಸಲು ಬೂದು ಹಸುರಿನ ಬಣ್ಣವನ್ನು ಹೊಂದಿರುತ್ತವೆ. ಆದರೆ ಈ ಮಾದರಿಯ ನಿಯಮಕ್ಕೆ ಒಳಪಡದ ಅನೇಕ ನಿದರ್ಶನಗಳೂ ಇವೆ. E. ಮೆಲನೊಫ್ಲೋಯಿಯಾ ಹಾಗೂ E. ಸೆಟೊಸಾ ದಂಥ ಅನೇಕ ಜಾತಿಗಳು, ಸಸ್ಯವು ಸಂತಾನೋತ್ಪತ್ತಿ ಮಾಡುವಂತೆ ಪೂರ್ತಿಯಾಗಿ ಬೆಳೆದ ಮೇಲೂ ತಾರುಣ್ಯದ ಎಲೆಯ ಸ್ವರೂಪವನ್ನು ಉಳಿಸಿಕೊಳ್ಳುತ್ತವೆ. E. ಮ್ಯಾಕ್ರೊಕಾರ್ಪಾ , E. ರೋಡಾಂಥಾ ಮತ್ತು E. ಕ್ರೂಸಿಸ್ ನಂಥ ಕೆಲವೊಂದು ಜಾತಿಗಳು ಈ ಆಜೀವ-ಪರ್ಯಂತದ ತಾರುಣ್ಯದ ಎಲೆಯ ಸ್ವರೂಪದಿಂದಾಗಿ ಅಲಂಕಾರಿಕ ಸಸ್ಯಗಳಾಗಿ ಬಹುಜನರಿಂದ ಬಯಸಲ್ಪಡುತ್ತವೆ. E. ಪೆಟ್ರಿಯಾ , E. ಡಂಡಾಸೀ ಮತ್ತು E. ಲ್ಯಾನ್ಸ್‌ಡೌನಿಯಾನಾ ದಂಥ ಕೆಲವೊಂದು ಜಾತಿಗಳು ತಮ್ಮ ಚೀವನಚಕ್ರದಾದ್ಯಂತ ಹೊಳೆಯುವ ಹಸಿರು ಎಲೆಗಳನ್ನು ಹೊಂದಿರುತ್ತವೆ. ಬಹುಪಾಲು ನೀಲಗಿರಿ ಗಳಲ್ಲಿ ಕಂಡುಬರುವ, ಅಭಿಮುಖವಾಗಿರುವ ಮಾದರಿಯ ಎಲೆಯ ಬೆಳವಣಿಗೆಯಯನ್ನು E. ಕೇಸಿಯಾ ಪ್ರದರ್ಶಿಸುತ್ತದೆ. ಈ ಪ್ರಬೇಧವು ಎಳೆಸಸಿಯ ಹಂತದಲ್ಲಿ ಹೊಳೆಯುವ ಹಸಿರು ಎಲೆಗಳನ್ನು ಹೊಂದಿದ್ದರೆ, ಪೂರ್ತಿಯಾಗಿ ಬೆಳೆದ ಕಿರೀಟಗಳಲ್ಲಿ ಕಳೆಗುಂದಿದ ಮಾಸಲು ಬೂದು ಹಸಿರಿನ ಎಲೆಗಳನ್ನು ಹೊಂದಿರುತ್ತದೆ. ತಾರುಣ್ಯದ ಮತ್ತು ವಯಸ್ಕ ಎಲೆಯ ಹಂತಗಳ ನಡುವಿನ ವೈದೃಶ್ಯದರ್ಶನವು ಕ್ಷೇತ್ರದ ಗುರುತಿಸುವಿಕೆಯಲ್ಲಿ ಬೆಲೆಬಾಳುವಂಥದ್ದಾಗಿದೆ.
ನೀಲಗಿರಿ ಸಸ್ಯವೊಂದರ ಬೆಳವಣಿಗೆಯಲ್ಲಿ ಎಲೆಯ ನಾಲ್ಕು ಹಂತಗಳು ಗುರುತಿಸಲ್ಪಟ್ಟಿವೆ. ಅವೆಂದರೆ: ‘ಎಳೆಸಸಿ’, ‘ತಾರುಣ್ಯದ’, ‘ನಡುವಿನ’ ಮತ್ತು ‘ವಯಸ್ಕ’ ಹಂತಗಳು. ಆದಾಗ್ಯೂ, ಹಂತಗಳ ನಡುವೆ ಯಾವುದೇ ನಿರ್ದಿಷ್ಟ ಪರಿವರ್ತನೆಯ ಬಿಂದುವು ಕಂಡುಬಂದಿಲ್ಲ. ದೊಡ್ಡದಾಗಿರುವ ಎಲೆಗಳು ಅನೇಕವೇಳೆ ರೂಪುಗೊಂಡಾಗಿನ ನಡುವಿನ ಹಂತವು, ತಾರುಣ್ಯದ ಮತ್ತು ವಯಸ್ಕ ಹಂತಗಳನ್ನು ಜೋಡಿಸುತ್ತದೆ.[೮]
ಕೆಲವೇ ಜಾತಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಜಾತಿಗಳಲ್ಲೂ, ಚಚ್ಚೌಕವಾಗಿರುವ ಕಾಂಡವೊಂದರ ಅಭಿಮುಖವಾಗಿರುವ ಪಾರ್ಶ್ವಗಳ ಮೇಲೆ ಎಲೆಗಳು ಜೋಡಿಯಾಗಿರುವ ಸ್ವರೂಪದಲ್ಲಿ ರೂಪುಗೊಳ್ಳುತ್ತವೆ ಹಾಗೂ ಅನುಕ್ರಮಿಕ ಜೋಡಿಗಳು ಪರಸ್ಪರ ಲಂಬಕೋನದಲ್ಲಿ (ಕತ್ತರಿ ಮಾದರಿಯಲ್ಲಿ) ಸ್ಥಿತವಾಗಿರುತ್ತವೆ. ಕಿರಿದಾದ-ಎಲೆಯನ್ನು ಹೊಂದಿರುವ ಕೆಲವೊಂದು ಜಾತಿಗಳಲ್ಲಿ, ಉದಾಹರಣೆಗೆ E. ಓಲಿಯೋಸಾ ದಲ್ಲಿ, ಎರಡನೇ ಎಲೆ ಜೋಡಿಯ ನಂತರದ ಎಳೆಸಸಿ ಎಲೆಗಳು ಪತ್ತೆಮಾಡಬಹುದಾದ ಒಂದು ಸುರುಳಿಯ ವ್ಯವಸ್ಥೆಯಲ್ಲಿ ಒಂದು ಐದು-ಪಾರ್ಶ್ವದ ಕಾಂಡದ ಸುತ್ತಲೂ ಅನೇಕವೇಳೆ ಗೊಂಚಲುಗೊಂಚಲಾಗಿ ಬೆಳೆದಿರುತ್ತವೆ. ಹಲವು ಗೆಣ್ಣುಗಳಿಂದ ಅನೇಕ ಗೆಣ್ಣುಗಳವರೆಗೆ ಮುಂದುವರಿಯಬಹುದಾದ ಸುರುಳಿಯ ಹಂತದ ನಂತರ, ಕಾಂಡದ ಕೆಲವೊಂದು ಎಲೆ-ಬಿಡುವ ಮೇಲ್ಮೈಗಳ ಲೀನವಾಗುವಿಕೆಯ ಅಥವಾ ಹೀರಿಕೆಯ ಮೂಲಕ ಎಲೆಯ ಜೋಡಣೆಯು ಕತ್ತರಿ ಮಾದರಿಗೆ ಮರಳುತ್ತದೆ. ಅಭಿಮುಖವಾಗಿರುವ ವಯಸ್ಕ ಎಲೆಗೊಂಚಲನ್ನು ಹೊಂದಿರುವ ಜಾತಿಗಳಲ್ಲಿ ಕಾಂಡದ ತುದಿಯಲ್ಲಿ ಅಭಿಮುಖವಾಗಿ ರೂಪುಗೊಂಡಿರುವ ಎಲೆಯ ಜೋಡಿಗಳು, ಕಾಂಡದ ಅಸಮನಾದ ಉದ್ದವಾಗುವಿಕೆಯಿಂದಾಗಿ ತಮ್ಮ ತಳಭಾಗಗಳಲ್ಲಿ ಪ್ರತ್ಯೇಕಿಸಲ್ಪಟ್ಟು, ಸ್ಪಷ್ಟವಾಗಿ ಗೋಚರಿಸುವ ಒಂದರ ನಂತರ ಇನ್ನೊಂದು ಬರುವ ವಯಸ್ಕ ಎಲೆಗಳನ್ನು ಹೊಮ್ಮಿಸುತ್ತವೆ.
ಹೂವುಗಳು
[ಬದಲಾಯಿಸಿ]ನೀಲಗಿರಿ ಜಾತಿಗಳ ಅತ್ಯಂತ ಅನಾಯಾಸವಾಗಿ ಗುರುತಿಸಬಹುದಾದ ವಿಶಿಷ್ಟ ಲಕ್ಷಣಗಳೆಂದರೆ ಅವುಗಳ ವಿಶೇಷ ಲಕ್ಷಣಗಳಾದ ಹೂವುಗಳು ಮತ್ತು ಹಣ್ಣು (ಬೀಜಕೋಶಗಳು ಅಥವಾ "ಅಂಟುಕಾಯಿಗಳು"). ಹೂವುಗಳು ತುಪ್ಪುಳಿನಂತಿರುವ ಅನೇಕ ಕೇಸರಗಳನ್ನು ಹೊಂದಿದ್ದು ಅವು ಬಿಳಿ, ಕೆನೆ, ಹಳದಿ, ನಸುಗೆಂಪು ಅಥವಾ ಕೆಂಪು ಬಣ್ಣದಲ್ಲಿರಬಹುದು; ಮೊಗ್ಗಿನಲ್ಲಿ ಕೇಸರಗಳು ಒಂದು ಬೀಜಕಣಕೋಶದ ಮುಚ್ಚಳ ಎಂದು ಹೇಳಲಾಗುವ ಮುಚ್ಚಿಕೆಯೊಂದರಲ್ಲಿ ಮುಚ್ಚಿಡಲ್ಪಟ್ಟಿರುತ್ತವೆ. ಬೀಜಕಣಕೋಶದ ಮುಚ್ಚಳವು ಬೆಸೆಯಲ್ಪಟ್ಟ ಪುಷ್ಪಪಾತ್ರದ ದಳಗಳು ಅಥವಾ ಪುಷ್ಪದಳಗಳು ಅಥವಾ ಎರಡರಿಂದಲೂ ಮಾಡಲ್ಪಟ್ಟಿರುತ್ತದೆ. ಈ ರೀತಿಯಲ್ಲಿ, ಹೂವುಗಳು ಪುಷ್ಪದಳಗಳನ್ನು ಹೊಂದಿರುವುದಿಲ್ಲವಾದರೂ, ಅದರ ಬದಲಿಗೆ ಅನೇಕ ಆಕರ್ಷಕ ಕೇಸರಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳುತ್ತವೆ. ಕೇಸರಗಳು ವಿಸ್ತರಿಸಿದಂತೆ, ಬೀಜಕಣಕೋಶದ ಮುಚ್ಚಳವು ಬಲಪ್ರಯೋಗಕ್ಕೆ ಈಡಾಗಿ, ಹೂವಿನ ಬಟ್ಟಲಿನ-ರೀತಿಯ ತಳಭಾಗದಿಂದ ಸೀಳಿಕೊಂಡು ಆಚೆಗೆ ಬರುತ್ತದೆ; ಇದು ಕುಲವನ್ನು ಒಂದುಗೂಡಿಸುವ ಲಕ್ಷಣಗಳ ಪೈಕಿ ಒಂದಾಗಿದೆ. ಗ್ರೀಕ್ ಭಾಷೆಯ ಯೂ- ಅಂದರೆ ಚೆನ್ನಾಗಿ, ಮತ್ತು ಕಲುಪ್ಟೋಸ್ ಅಂದರೆ ಆವರಿಸು, ಒಟ್ಟಾರೆಯಾಗಿ "ಚೆನ್ನಾಗಿ ಆವರಿಸಲ್ಪಟ್ಟಿರುವ" ಎಂಬ ಅರ್ಥವನ್ನು ಕೊಡುವ ಪದಗಳಿಂದ ಯೂಕಲಿಪ್ಟಸ್ ಎಂಬ ಹೆಸರು ಬಂದಿದ್ದು, ಬೀಜಕಣಕೋಶದ ಮುಚ್ಚಳವನ್ನು ಅದು ವಿವರಿಸುತ್ತದೆ. ದಾರುವಿನಂಥ ಹಣ್ಣುಗಳು ಅಥವಾ ಬೀಜಕೋಶಗಳು ಸ್ಥೂಲವಾಗಿ ಶಂಕುವಿನಾಕಾರದಲ್ಲಿದ್ದು, ತುದಿಯಲ್ಲಿ ಕವಾಟಗಳನ್ನು ಹೊಂದಿದ್ದು ಅವು ಬೀಜಗಳನ್ನು ಬಿಡುಗಡೆ ಮಾಡಲು ತೆರೆದುಕೊಳ್ಳುತ್ತವೆ. ಅನೇಕ ಜಾತಿಗಳು ವಯಸ್ಕ ಎಲೆಗೊಂಚಲು ಕಾಣಿಸಿಕೊಳ್ಳಲು ಶುರುಮಾಡುವವರೆಗೂ ಹೂಬಿಡುವುದಿಲ್ಲ; ಯೂಕಲಿಪ್ಟಸ್ ಸಿನೆರಿಯಾ ಹಾಗೂ ಯೂಕಲಿಪ್ಟಸ್ ಪೆರಿನಿಯಾನಾ ಇದಕ್ಕೆ ಗಮನಾರ್ಹವಾದ ಅಪವಾದಗಳಾಗಿವೆ.
ತೊಗಟೆ
[ಬದಲಾಯಿಸಿ]ನೀಲಗಿರಿ ತೊಗಟೆಯ ಕಾಣಿಸುವಿಕೆಯು ಸಸ್ಯದ ವಯಸ್ಸು, ತೊಗಟೆಯು ಉದುರಿದ ರೀತಿ, ತೊಗಟೆಯ ನಾರುಗಳ ಉದ್ದ, ಸುಕ್ಕುಬೀಳಿಸುವಿಕೆಯ ಮಟ್ಟ, ದಪ್ಪನಾಗಿರುವಿಕೆ, ಗಡಸುತನ ಮತ್ತು ಬಣ್ಣದೊಂದಿಗೆ ಬದಲಾಗುತ್ತಾ ಹೋಗುತ್ತದೆ. ಪೂರ್ತಿಯಾಗಿ ಬೆಳೆದ ಎಲ್ಲಾ ನೀಲಗಿರಿ ಮರಗಳೂ ತೊಗಟೆಯ ಒಂದು ವಾರ್ಷಿಕ ಪದರವನ್ನು ಸೇರಿಸಿಕೊಳ್ಳುತ್ತಾ ಹೋಗುತ್ತವೆ. ಇದು ಹೆಚ್ಚುತ್ತಲೇ ಹೋಗುವ ಕಾಂಡಗಳ ವ್ಯಾಸಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಕೆಲವೊಂದು ಜಾತಿಗಳಲ್ಲಿ ಅತ್ಯಂತ ಹೊರಗಿನ ಪದರವು ಸಾಯುತ್ತದೆ. ವಾರ್ಷಿಕವಾಗಿ ಪತನಶೀಲವಾಗಿರುವ ಇದು, ಉದ್ದನೆಯ ಪಟ್ಟಿಗಳ ರೂಪದಲ್ಲಿ (ಯೂಕಲಿಪ್ಟಸ್ ಷೀಥಿಯಾನಾ ದಲ್ಲಿರುವಂತೆ) ಅಥವಾ ಬದಲಾಯಿಸಬಹುದಾದ ಗಾತ್ರದ ತೆಳುವಾದ ಬಿಲ್ಲೆಗಳ ರೂಪದಲ್ಲಿ (E. ಡೈವರ್ಸಿಕಲರ್ , E. ಕಾಸ್ಮೋಫಿಲ್ಲಾ ಅಥವಾ E. ಕ್ಲಾಡೊಕ್ಯಾಲಿಕ್ಸ್ ) ಇರಬಹುದು. ಇವು ಅಂಟುಗಳು ಅಥವಾ ನುಣುಪಾದ-ತೊಗಟೆಯಿಂದ ಕೂಡಿದ ಜಾತಿಗಳಾಗಿವೆ. ಅಂಟಿನ ತೊಗಟೆಯು ಕಳೆಗುಂದಿದ್ದಾಗಿರಬಹುದು, ಹೊಳಪಿನಿಂದ ಅಥವಾ ಸ್ಯಾಟಿನ್ನಿನಂತೆ ಇರಬಹುದು (E. ಓರ್ನಾಟಾ ದಲ್ಲಿರುವಂತೆ) ಅಥವಾ ಮಬ್ಬಾಗಿರಬಹುದು (E. ಕಾಸ್ಮೋಫಿಲ್ಲಾ ). ಅನೇಕ ಜಾತಿಗಳಲ್ಲಿ, ಸತ್ತ ತೊಗಟೆಯು ಉಳಿಸಿಕೊಳ್ಳಲ್ಪಟ್ಟಿರುತ್ತದೆ. ಹವಾಗುಣಕ್ಕೆ ಒಡ್ಡಿಕೊಂಡಿರುವುದರ ಪರಿಣಾಮವಾಗಿ ಅತ್ಯಂತ ಹೊರಗಿನ ಪದರವು ಕ್ರಮೇಣ ಚೂರುಚೂರಾಗುತ್ತಾ ಹೋಗುತ್ತದೆ ಮತ್ತು ಮರದ ತಾಳುಗಳ ಅಥವಾ ಕಾಂಡಗಳ ಮೂಲಭೂತವಾಗಿ ಒರಟಾಗಿರುವ-ತೊಗಟೆಯನ್ನುಳ್ಳ ಸ್ವಭಾವವನ್ನು ಬದಲಾಯಿಸದೆಯೇ ಉದುರುತ್ತದೆ - ಇದಕ್ಕೆ ಉದಾಹರಣೆಯಾಗಿ E. ಮಾರ್ಜಿನೇಟಾ , E. ಜ್ಯಾಕ್ಸೋನೀ , E. ಆಬ್ಲಿಕಾ ಮತ್ತು E. ಪೊರೋಸಾ ಇವೇ ಮೊದಲಾದವುಗಳನ್ನು ನೋಡಬಹುದು.
ಅನೇಕ ಜಾತಿಗಳು ‘ಅರ್ಧ-ತೊಗಟೆಗಳು’ ಅಥವಾ ‘ಕಪ್ಪುಬೊಡ್ಡೆಗಳು’ ಆಗಿದ್ದು, ಇವುಗಳಲ್ಲಿ ಸತ್ತ ತೊಗಟೆಯು ಕಾಂಡಗಳ ಅಥವಾ ದಿಂಡುಗಳ ಕೆಳಗಿನ ಅರ್ಧಭಾಗದಲ್ಲಿ ಉಳಿದುಕೊಂಡಿರುತ್ತವೆ - ಉದಾಹರಣೆಗೆ, E. ಬ್ರಾಕಿಕ್ಯಾಲಿಕ್ಸ್ , E. ಓಕ್ರೋಫ್ಲೋಯಿಯಾ ಮತ್ತು E. ಆಕ್ಸಿಡೆಂಟಾಲಿಸ್ — ಅಥವಾ ಕೇವಲ ತಳಭಾಗದಲ್ಲಿನ ಒಂದು ಕಪ್ಪಾದ ಶೇಖರಣೆಯಾಗಿರುತ್ತವೆ; E. ಕ್ಲೆಲಾಂಡೀ ಯಲ್ಲಿ ಇದನ್ನು ಕಾಣಬಹುದು. ಈ ವರ್ಗದಲ್ಲಿನ ಕೆಲವೊಂದು ಜಾತಿಗಳಲ್ಲಿ, ಉದಾಹರಣೆಗಾಗಿ E. ಯಂಗಿಯಾನಾ ಮತ್ತು E. ವಿಮಿನಾಲಿಸ್ ಗಳಲ್ಲಿ, ಬುಡದ ಒರಟಾಗಿರುವ ತೊಗಟೆಯು ತುದಿಯಲ್ಲಿ ಅತ್ಯಂತ ತೆಳುವಾದ ಪಟ್ಟಿಯಂತಿದ್ದು, ಅಲ್ಲಿಂದ ಅದು ನಯವಾದ ಮೇಲ್ಭಾಗದ ದಿಂಡುಗಳಿಗೆ ಅವಕಾಶ ಮಾಡಿಕೊಟ್ಟಿರುತ್ತದೆ. ಅರ್ಧ-ತೊಗಟೆಗಳ ಮತ್ತು ಸಂಪೂರ್ಣವಾಗಿ ನಯವಾದ-ತೊಗಟೆಯನ್ನು ಹೊಂದಿರುವ ಮರಗಳು ಮತ್ತು ಮ್ಯಾಲಿಗಳ ನಯವಾದ ಮೇಲ್ಭಾಗದ ತೊಗಟೆಯು, ಗಮನಾರ್ಹವಾದ ಬಣ್ಣ ಹಾಗೂ ಆಸಕ್ತಿಯನ್ನು ಉಂಟುಮಾಡಬಹುದು, ಉದಾಹರಣೆಗೆ E. ಡೆಗ್ಲುಪ್ಟಾ .[೮]
ತೊಗಟೆಯ ವಿಶಿಷ್ಟ ಲಕ್ಷಣಗಳು
[ಬದಲಾಯಿಸಿ]- ನಾರುನಾರಾದ ತೊಗಟೆ — ಇದ್ದು ಉದ್ದನೆಯ ನಾರುಗಳನ್ನು ಒಳಗೊಂಡಿರುತ್ತದೆ ಮತ್ತು ಉದ್ದನೆಯ ತುಣುಕುಗಳಲ್ಲಿ ಇದನ್ನು ಜಗ್ಗಿ ಕಿತ್ತುಹಾಕಬಹುದಾಗಿದೆ. ಸಾಮಾನ್ಯವಾಗಿ ಇದು ದಪ್ಪಗಿದ್ದು ಒಂದು ಸ್ಪಂಜಿನಂಥ ವಿನ್ಯಾಸದಿಂದ ಕೂಡಿರುತ್ತದೆ.
- ಕಬ್ಬಿಣದಂಥ ತೊಗಟೆ — ಇದು ಗಟ್ಟಿಯಾಗಿ, ಒರಟಾಗಿ ಮತ್ತು ಆಳವಾಗಿ ಸುಕ್ಕುಸುಕ್ಕುಮಾಡಲ್ಪಟ್ಟಿರುತ್ತದೆ. ಒಣಗಿದ ರಾಳವು (ಮರದಿಂದ ಹೊರಸೂಸಲ್ಪಟ್ಟ ಒಂದು ಸಸ್ಯರಸ) ಇದರ ಮೇಲೆ ಹರಡಿಕೊಂಡಿರುತ್ತದೆಯಾದ್ದರಿಂದ ಅದು ಒಂದು ಗಾಢ ಕೆಂಪು ಅಥವಾ ಕೆಲವೊಮ್ಮೆ ಕಪ್ಪು ಬಣ್ದವನ್ನು ನೀಡುತ್ತದೆ.
- ಚೌಕುಳಿಯಾಗಿಸಿದ ತೊಗಟೆ — ಇದು ಭಿನ್ನವಾಗಿರುವ ಅನೇಕ ತೆಳುವಾದ ಬಿಲ್ಲೆಗಳಾಗಿ ಒಡೆದುಕೊಂಡಿರುವ ತೊಗಟೆಯಾಗಿದೆ. ಅವು ಕಾರ್ಕಿನಂಥ ಸ್ವರೂಪವನ್ನು ಹೊಂದಿದ್ದು, ತೆಳುವಾದ ಬಿಲ್ಲೆಯನ್ನು ಉದುರಿಸಬಲ್ಲವಾಗಿರುತ್ತವೆ.
- ಪೆಟ್ಟಿಗೆ ತೊಗಟೆ— ಇದು ಗಿಡ್ಡನೆಯ ನಾರುಗಳನ್ನು ಹೊಂದಿರುತ್ತದೆ. ಕೆಲವೊಂದು ತೊಗಟೆಗಳು ಶಬಲ ರಚನೆಯನ್ನೂ ತೋರಿಸುತ್ತವೆ.
- ತೆಳುಪಟ್ಟಿಯಂಥ ತೊಗಟೆ — ಉದ್ದನೆಯ ತೆಳುವಾದ ತುಣುಕುಗಳಲ್ಲಿ ಹೊರಬರುವ ತೊಗಟೆಗಳನ್ನು ಇದು ಹೊಂದಿರುತ್ತದೆಯಾದರೂ, ಕೆಲವೊಂದು ಜಾಗಗಳಲ್ಲಿ ಅದು ವಿರಳವಾಗಿ ಅಂಟಿಕೊಂಡಿರುತ್ತದೆ. ಅವು ಉದ್ದನೆಯ ತೆಳುವಾದ ಪಟ್ಟಿಗಳು, ದೃಢವಾದ ಪಟ್ಟಿಗಳು ಅಥವಾ ತಿರುಚಿದ ಸುರುಳಿಗಳಾಗಿರಲು ಸಾಧ್ಯವಿದೆ.
ಜಾತಿಗಳು ಮತ್ತು ಮಿಶ್ರಜಾತಿತ್ವ
[ಬದಲಾಯಿಸಿ]ನೀಲಗಿರಿ ಯ ೭೦೦ಕ್ಕೂ ಹೆಚ್ಚಿನ ಜಾತಿಗಳು ಅಸ್ತಿತ್ವದಲ್ಲಿವೆ; ಜಾತಿಗಳ ಒಂದು ಸಮಗ್ರಪಟ್ಟಿಗಾಗಿ ನೀಲಗಿರಿ ಜಾತಿಗಳ ಪಟ್ಟಿ ಯನ್ನು ಪರಾಮರ್ಶಿಸಿ. ಕೆಲವೊಂದು ಜಾತಿಗಳು ತಳೀಯವಾಗಿ ಕೊಂಚಮಟ್ಟಿಗೆ ಪ್ರತ್ಯೇಕಿಸಲ್ಪಡುವಷ್ಟರ ಮಟ್ಟಿಗೆ ಕುಲದ ಮುಖ್ಯವಾಹಿನಿಯಿಂದ ಬೇರೆ ದಿಕ್ಕುಗಳಿಗೆ ಹೋಗಿವೆ ಮತ್ತು ಕೆಲವೊಂದು ಪರಸ್ಪರ ಬದಲಾಯಿಸಲಾಗದ ವಿಶಿಷ್ಟ ಲಕ್ಷಣಗಳಿಂದ ಮಾತ್ರವೇ ಅವುಗಳು ಗುರುತಿಸಲ್ಪಡಲು ಸಾಧ್ಯವಿದೆ. ಆದಾಗ್ಯೂ, ಅನೇಕವನ್ನು ಸಂಬಂಧಿತ ಜಾತಿಗಳ ದೊಡ್ಡ ಅಥವಾ ಸಣ್ಣ ಗುಂಪುಗಳಿಗೆ ಸೇರಿದವುಗಳೆಂದು ಪರಿಗಣಿಸಬಹುದಾಗಿದ್ದು, ಅವು ಅನೇಕವೇಳೆ ಪರಸ್ಪರರೊಂದಿಗೆ ಭೌಗೋಳಿಕ ಸಂಪರ್ಕದಲ್ಲಿರುತ್ತವೆ ಹಾಗೂ ಅವುಗಳ ನಡುವೆ ಜೀನು ವಿನಿಮಯವು ಇನ್ನೂ ಸಂಭವಿಸುತ್ತದೆ. ಈ ಸನ್ನಿವೇಶಗಳಲ್ಲಿ ಅನೇಕ ಜಾತಿಗಳು ಒಂದು ಮತ್ತೊಂದಾಗಿ ವರ್ಗೀಕರಿಸಲ್ಪಡುವಂತೆ ತೋರುತ್ತದೆ, ಮತ್ತು ನಡುವಿನ ನಮೂನೆಗಳು ಸಾಮಾನ್ಯವಾಗಿರುತ್ತದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಕೆಲವೊಂದು ಜಾತಿಗಳು ತಮ್ಮ ಸ್ವರೂಪದಲ್ಲಿ ವ್ಯಕ್ತವಾದಂತೆ ಹೋಲಿಕೆಯಲ್ಲಿ ತಳೀಯವಾಗಿ ಸ್ಥಿರೀಕರಿಸಲ್ಪಟ್ಟಿದ್ದರೆ, ಇತರ ಜಾತಿಗಳು ತಮ್ಮ ಹತ್ತಿರದ ಸಂಬಂಧಿಗಳಿಂದ ಸಂಪೂರ್ಣವಾಗಿ ಬೇರೆ ದಿಕ್ಕುಗಳಿಗೆ ಹೋಗಿರುವುದಿಲ್ಲ.
ಮಿಶ್ರತಳಿಯ ಸೃಷ್ಟಿಗಳು ಎಲ್ಲ ಸಮಯಗಳಲ್ಲೂ ಮೊದಲ ಸಂಗ್ರಹದಂತೆ ಗುರುತಿಸಲ್ಪಡುವುದಿಲ್ಲ ಮತ್ತು ಕೆಲವೊಂದು ಸೃಷ್ಟಿಗಳು ಹೊಸ ಜಾತಿಗಳಾಗಿ ಹೆಸರಿಸಲ್ಪಟ್ಟಿವೆ. ಇದಕ್ಕೆ ಉದಾಹರಣೆಯಾಗಿ E. ಕ್ರೈಸಾಂಥಾ (E. ಪ್ರೆಸ್ಸಿಯಾನಾ × E. ಸೆಪ್ಯುಕ್ರಾಲಿಸ್ ) ಮತ್ತು E. "ರಿವ್ಯಾಲಿಸ್" (E. ಮಾರ್ಜಿನೇಟಾ × E. ಮೆಗಾಕಾರ್ಪಾ ) ಇವನ್ನು ನೋಡಬಹುದು. ಈ ಕ್ಷೇತ್ರದಲ್ಲಿ ಮಿಶ್ರತಳಿಯ ಸಂಯೋಜನೆಗಳು ನಿರ್ದಿಷ್ಟವಾಗಿ ಸಾಮಾನ್ಯವೆನಿಸಿಕೊಂಡಿಲ್ಲ, ಆದರೆ ಆಸ್ಟ್ರೇಲಿಯಾದಲ್ಲಿ ಆಗಿಂದಾಗ್ಗೆ ಕಂಡುಬರುವ ಇತರ ಕೆಲವೊಂದು ಪ್ರಕಟಿತ ಜಾತಿಗಳು ಮಿಶ್ರತಳಿಯ ಸಂಯೋಜನೆಗಳಾಗಿರಬಹುದೆಂದು ಸೂಚಿಸಲಾಗಿದೆ. ಉದಾಹರಣೆಗೆ, E. ಎರಿಥ್ರಾಂಡ್ರಾ ವು E. ಆಂಗ್ಯುಲೋಸಾ × E. ಟೆರಾಪ್ಟೆರಾ ದ ಸಂಕರೀಕರಣದ ಫಲವಾಗಿದೆಯೆಂದು ನಂಬಲಾಗಿದೆ ಮತ್ತು ಇದರ ವ್ಯಾಪಕ ಹರಡಿಕೆಯ ಕಾರಣದಿಂದಾಗಿ ಪಠ್ಯಗಳಲ್ಲಿ ಅನೇಕಬಾರಿ ಉಲ್ಲೇಖಿಸಲ್ಪಡುತ್ತದೆ.[೮]
ಸಂಬಂಧಿತ ಕುಲಗಳು
[ಬದಲಾಯಿಸಿ]ಇದೇ ರೀತಿಯ ಮರಗಳ ಒಂದು ಸಣ್ಣ ಕುಲವಾದ ಆಂಗೊಫೋರಾ ಕೂಡಾ ೧೮ನೇ ಶತಮಾನದಿಂದಲೂ ಚಿರಪರಿಚಿತವಾಗಿದೆ. ಬೃಹತ್ತಾದ ರೀತಿಯಲ್ಲಿ ಆನುವಂಶಿಕವಾಗಿದ್ದ ಹೊಸ ಪುರಾವೆಯು ೧೯೯೫ರ ಸೂಚಿಸಿದ ಪ್ರಕಾರ, ಕೆಲವೊಂದು ಎದ್ದುಕಾಣುವ ನೀಲಗಿರಿ ಜಾತಿಗಳು ವಾಸ್ತವವಾಗಿ ಇತರ ನೀಲಗಿರಿ ಮರಗಳಿಗಿಂತ ಹೆಚ್ಚಾಗಿ ಆಂಗೊಫೋರಾ ದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದವು; ಕೊರಿಂಬಿಯಾ ಎಂಬ ಹೊಸ ಕುಲದೊಳಗೆ ಅವು ವಿಭಾಗಿಸಲ್ಪಟ್ಟಿದ್ದವು. ಪ್ರತ್ಯೇಕವಾಗಿದ್ದರೂ ಸಹ, ಈ ಮೂರು ಗುಂಪುಗಳೂ ಸಜಾತೀಯವಾಗಿವೆ ಅಥವಾ ಒಕ್ಕೂಟದಲ್ಲಿವೆ ಮತ್ತು ಆಂಗೊಫೋರಾ , ಕೊರಿಂಬಿಯಾ ಮತ್ತು ಯೂಕಲಿಪ್ಟಸ್ ಈ ಮೂರು ಕುಲಗಳ ಸದಸ್ಯರು "ನೀಲಗಿರಿ ಮರಗಳು" ಎಂದು ಎಂದು ಉಲ್ಲೇಖಿಸಲ್ಪಡುವಂತೆ ಈ ಒಕ್ಕೂಟವು ಸ್ವೀಕಾರಾರ್ಹವಾಗಿ ಉಳಿದುಕೊಂಡಿದೆ.
ಎತ್ತರದ ಮರದ ದಿಮ್ಮಿ
[ಬದಲಾಯಿಸಿ]ಹಲವಾರು ನೀಲಗಿರಿ ಮರಗಳು ವಿಶ್ವದಲ್ಲಿನ ಅತ್ಯಂತ ಎತ್ತರದ ಮರಗಳಲ್ಲಿ ಸೇರಿವೆ. ಆಸ್ಟ್ರೇಲಿಯಾದ ಬೆಟ್ಟದ ನೀಲಗಿರಿ ಮರವಾದ ಯೂಕಲಿಪ್ಟಸ್ ರೆಗ್ನಾನ್ಸ್ , ಎಲ್ಲಾ ಹೂಬಿಡುವ ಸಸ್ಯಗಳ (ಆವೃತಬೀಜಿಗಳು) ಪೈಕಿ ಅತ್ಯಂತ ಎತ್ತರದ್ದಾಗಿದೆ; ಇಂದು, ಸೆಂಚುರಿಯನ್ ಎಂದು ಹೆಸರಿಸಲಾಗಿರುವ, ಅಳೆಯಲ್ಪಟ್ಟಿರುವುದರ ಪೈಕಿ ಅತ್ಯಂತ ಎತ್ತರದ್ದಾಗಿರುವ ಮಾದರಿಯು ...99.6 m (327 ft)ನಷ್ಟು ಎತ್ತರವಿದೆ. [೯] ಕೇವಲ ಕರಾವಳಿ ಮಂಜತ್ತಿಮರವು ಎತ್ತರದ್ದಾಗಿದೆ ಮತ್ತು ಕರಾವಳಿ ಡಗ್ಲಸ್-ಫರ್ ಹೆಚ್ಚೂಕಮ್ಮಿ ಅದೇ ರೀತಿಯಲ್ಲಿದೆ; ಅವು ಶಂಕುಮರಗಳಾಗಿವೆ (ಅನಾವೃತ ಬೀಜಿ). ನೀಲಗಿರಿ ಮರದ ಇತರ ಆರು ಜಾತಿಗಳು ಎತ್ತರದಲ್ಲಿ ೮೦ ಮೀಟರುಗಳನ್ನು ಮೀರುತ್ತವೆ. ಅವುಗಳೆಂದರೆ: ಯೂಕಲಿಪ್ಟಸ್ ಆಬ್ಲಿಕಾ , ಯೂಕಲಿಪ್ಟಸ್ ಡೆಲಿಗೇಟೆನ್ಸಿಸ್ , ಯೂಕಲಿಪ್ಟಸ್ ಡೈವರ್ಸಿಕಲರ್ , ಯೂಕಲಿಪ್ಟಸ್ ನಿಟೆನ್ಸ್ , ಯೂಕಲಿಪ್ಟಸ್ ಗ್ಲಾಬ್ಯುಲಸ್ ಮತ್ತು ಯೂಕಲಿಪ್ಟಸ್ ವಿಮಿನಾಲಿಸ್ .
ಸಹಿಷ್ಣುತೆ
[ಬದಲಾಯಿಸಿ]ಬಹುತೇಕ ನೀಲಗಿರಿ ಮರಗಳು ಹಿಮವನ್ನು ಸಹಿಸುವುದಿಲ್ಲ, ಅಥವಾ –೩ °Cನಿಂದ –೫ °Cನಷ್ಟರವರೆಗೆ ಕೆಳಗಿರುವ ಲಘುವಾದ ಹಿಮವನ್ನು ಮಾತ್ರವೇ ಅವು ಸಹಿಸುತ್ತವೆ; ಯೂಕಲಿಪ್ಟಸ್ ಪಾಸಿಫ್ಲೋರಾ ದಂಥ ಸುಲಭವಾಗಿ ಬಗ್ಗದ ಮರಗಳು ಹಿಮದ ಅಂಟುಗಳು ಎಂದೂ ಕರೆಯಲ್ಪಟ್ಟಿದ್ದು, ಇವು ಸುಮಾರು –೨೦ °Cವರೆಗಿನ ಶೀತ ಮತ್ತು ಹಿಮವನ್ನು ತಾಳಿಕೊಳ್ಳುವಷ್ಟು ಸಮರ್ಥವಾಗಿರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, E. ಪಾಸಿಫ್ಲೋರಾ ಉಪಜಾತಿ. ನಿಫೊಫಿಲಾ ಹಾಗೂ E. ಪಾಸಿಫ್ಲೋರಾ ಉಪಜಾತಿ. ಡೆಬ್ಯೂಝೆವಿಲ್ಲೆ ಎಂಬ ಎರಡು ಉಪಜಾತಿಗಳು ಇನ್ನೂ ಹೆಚ್ಚು ಬಗ್ಗದಿರುವ ಮರಗಳಾಗಿದ್ದು, ತೀರಾ ತೀವ್ರವಾಗಿರುವ ಚಳಿಗಾಲವನ್ನೂ ಅವು ತಡೆದುಕೊಳ್ಳಬಲ್ಲವುಗಳಾಗಿವೆ. ಹಲವಾರು ಇತರ ಜಾತಿಗಳು, ಅದರಲ್ಲೂ ವಿಶೇಷವಾಗಿ ಮಧ್ಯ ಟಾಸ್ಮೇನಿಯಾದ ಉನ್ನತ ಪ್ರಸ್ಥಭೂಮಿ ಹಾಗೂ ಪರ್ವತಗಳಿಗೆ ಸೇರಿದ ಯೂಕಲಿಪ್ಟಸ್ ಕಾಕ್ಸಿಫೆರಾ , ಯೂಕಲಿಪ್ಟಸ್ ಸಬ್‌ಕ್ರೇನ್ಯುಲೇಟಾ , ಮತ್ತು ಯೂಕಲಿಪ್ಟಸ್ ಗನ್ನೀ ಯಂಥವು ಪರಮಾವಧಿಯ ಶೀತ-ಸಹಿಷ್ಣು ನಮೂನೆಗಳನ್ನು ಸೃಷ್ಟಿಸಿವೆ ಮತ್ತು ವಿಶ್ವದ ಶೀತಕರ ಭಾಗಗಳಲ್ಲಿ ಅಲಂಕಾರಿಕ ಉದ್ದೇಶಗಳಿಗಾಗಿ ನೆಡಲ್ಪಟ್ಟ ತಳೀಯವಾಗಿ ಸಹಿಷ್ಣುವಾಗಿರುವ ತಳಿಗಳಿಂದ ಇವನ್ನು ಬೀಜಗಳ ರೂಪದಲ್ಲಿ ಸಂಗ್ರಹಿಸಲಾಗಿದೆ.
ಪ್ರಾಣಿಯೊಂದಿಗಿನ ಸಂಬಂಧಗಳು
[ಬದಲಾಯಿಸಿ]ನೀಲಗಿರಿ ಎಲೆಗಳಿಂದ ಸಾರತೆಗೆಯಲ್ಪಟ್ಟ ಒಂದು ಸಾರತೈಲವು ಶಕ್ತಿಯುತ ನೈಸರ್ಗಿಕ ಸೋಂಕುನಿವಾರಕಗಳಾಗಿರುವ ಸಂಯುಕ್ತಗಳನ್ನು ಒಳಗೊಂಡಿರುತ್ತದೆ ಮತ್ತು ಬೃಹತ್ ಪ್ರಮಾಣಗಳಲ್ಲಿ ತೆಗೆದುಕೊಂಡರೆ ಇದು ವಿಷಮಯವಾಗಬಲ್ಲದು. ಹಲವಾರು ಹೊಟ್ಟೆಚೀಲ ಹೊಂದಿರುವ ಸಸ್ಯಾಹಾರಿಗಳು, ಅದರಲ್ಲೂ ಗಮನಾರ್ಹವಾಗಿ ಕೋಲಾ ಕರಡಿಗಳು ಮತ್ತು ಕೆಲವೊಂದು ಶಿಶುಕೋಶಿಗಳು, ಇದರೊಂದಿಗೆ ಪರಸ್ಪರ ಸಹಿಷ್ಣುಗಳಾಗಿವೆ. ಫಾರ್ಮೈಲೀಕೃತ ಫ್ಲೋರೋಗ್ಲುಸಿನಾಲ್ ಸಂಯುಕ್ತಗಳು ಎಂದು ಕರೆಯಲ್ಪಡುವ, ಇತರ ಹೆಚ್ಚು ತೀಕ್ಷ್ಣವಾದ ವಿಷಗಳೊಂದಿಗಿನ ಈ ತೈಲಗಳ ನಿಕಟವಾದ ಪರಸ್ಪರ ಸಂಬಂಧವು, ಎಲೆಗಳ ವಾಸನೆಯ ಆಧಾರದ ಮೇಲೆ ಆಹಾರದ ಆಯ್ಕೆಗಳನ್ನು ಮಾಡುವಲ್ಲಿ ಕೋಲಾ ಕರಡಿಗಳು ಮತ್ತು ಹೊಟ್ಟೆಚೀಲದ ಪ್ರಾಣಿಗಳ ಜಾತಿಗಳಿಗೆ ಅವಕಾಶಮಾಡಿಕೊಡುತ್ತದೆ. ಕೋಲಾ ಕರಡಿಗಳಿಗೆ ಈ ಸಂಯುಕ್ತಗಳು ಎಲೆಯ ಆಯ್ಕೆಯಲ್ಲಿನ ಅತ್ಯಂತ ಪ್ರಮುಖ ಅಂಶವಾಗಿದೆ.
ನೀಲಗಿರಿ ಹೂವುಗಳು ಒಂದು ಮಹಾನ್ ಯಥೇಷ್ಟ ಪ್ರಮಾಣದಲ್ಲಿ ಮಕರಂದವನ್ನು ಉತ್ಪಾದಿಸುತ್ತವೆ. ಕೀಟಗಳು, ಪಕ್ಷಿಗಳು, ಬಾವಲಿಗಳು ಮತ್ತು ಶಿಶುಕೋಶಿಗಳನ್ನು ಒಳಗೊಂಡಂತೆ ಅನೇಕ ಪರಾಗಸ್ಪರ್ಶಕಗಳಿಗಾಗಿ ಈ ಮಕರಂದವು ಆಹಾರವಾಗಿ ಪರಿಣಮಿಸುತ್ತದೆ. ತೈಲಗಳು ಹಾಗೂ ಫೀನಾಲಿಕ್ ರಾಸಾಯನಿಕ ಸಂಯುಕ್ತಗಳನ್ನು ಒಳಗೊಳ್ಳುವುದರ ಮೂಲಕ ನೀಲಗಿರಿ ಮರಗಳು ಸಸ್ಯಾಹಾರಿಗಳಿಂದ ಚೆನ್ನಾಗಿ-ರಕ್ಷಿಸಲ್ಪಟ್ಟಂತೆ ಕಾಣುತ್ತವೆಯಾದರೂ, ಅವು ಕೀಟದ ಪಿಡುಗನ್ನೂ ಹೊಂದಿವೆ. ಇವುಗಳಲ್ಲಿ ನೀಲಗಿರಿ ಉದ್ದಮೀಸೆ ಕೊರೆಗ ಜೀರುಂಡೆಯಾದ ಫೋರಾಕ್ಯಾಂಥಾ ಸೆಮಿಪಂಕ್ಟೇಟಾ ಮತ್ತು "ಗಂಟೆ ತಿಗಣೆಗಳು ಎಂದು ಚಿರಪರಿಚಿತವಾಗಿರುವ ಗಿಡಹೇನಿನ-ರೀತಿಯ ಸೈಲಿಡ್‌ಗಳು ಸೇರಿಕೊಂಡಿವೆ. ಈ ಎರಡೂ ಬಗೆಯ ಕೀಟಗಳು ವಿಶ್ವದಾದ್ಯಂತ ನೀಲಗಿರಿ ಮರಗಳನ್ನು ಬೆಳೆಸಿದ ಕಡೆಯಲ್ಲೆಲ್ಲಾ ಕೀಟದ ಪಿಡುಗಗಳ ರೂಪದಲ್ಲಿ ನೆಲೆಗೊಂಡಿವೆ.
ಬೆಂಕಿ
[ಬದಲಾಯಿಸಿ]ಬೆಚ್ಚನೆಯ ದಿನಗಳಲ್ಲಿ ಬಾಷ್ಪೀಕರಿಸಲ್ಪಟ್ಟ ನೀಲಗಿರಿ ತೈಲವು ಪೊದೆಯಿಂದ ಮೇಲಕ್ಕೆ ಎದ್ದು, ಆಸ್ಟ್ರೇಲಿಯಾದ ಭೂಪ್ರದೇಶದ ಮೇಲ್ಮೈನ ದೂರದ ವಿಶಿಷ್ಟ ಲಕ್ಷಣದ ನೀಲಿ ಹೊಗೆಯನ್ನು ಸೃಷ್ಟಿಸುತ್ತದೆ. ನೀಲಗಿರಿ ತೈಲವು ಅತೀವವಾಗಿ ದಹ್ಯವಾಗಿದೆ (ಸುಲಭವಾಗಿ ಉರಿಹೊತ್ತಿಕೊಳ್ಳುವ ಸ್ವಭಾವ) (ಮರಗಳು ಸ್ಫೋಟಗೊಳ್ಳುವುದಕ್ಕೆ ಹೆಸರಾಗಿವೆ[೭][೧೦]) ಮತ್ತು ಪೊದೆ ಬೆಂಕಿಗಳು ಮರದ ಕಿರೀಟಗಳ ತೈಲ-ಭರಿತ ಗಾಳಿಯ ಮೂಲಕ ಸುಲಭವಾಗಿ ಹಬ್ಬಿ ಸಾಗಬಲ್ಲವು. ಸತ್ತ ತೊಗಟೆ ಹಾಗೂ ಬಿದ್ದ ಕೊಂಬೆಗಳು ಕೂಡಾ ದಹ್ಯ ಸ್ವಭಾವವನ್ನು ಹೊಂದಿವೆ. ತೊಗಟೆಯ ಅಡಿಯಲ್ಲಿರುವ ಕುರುಚಲು ಎಳೆಕೊಂಬೆಗಳು ಮತ್ತು ಲಿಗ್ನೋಟ್ಯೂಬರ್‌ಗಳ ಮೂಲಕ ನೀಲಗಿರಿ ಮರಗಳು ಮರುಕಳಿಸುವ ಬೆಂಕಿಗಳಿಗೆ ಚೆನ್ನಾಗಿ ಹೊಂದಿಕೊಂಡಿವೆ.
೩೫ರಿಂದ ೫೦ ದಶಲಕ್ಷ ವರ್ಷಗಳ ಹಿಂದೆ ನೀಲಗಿರಿ ಮರಗಳು ಹುಟ್ಟಿಕೊಂಡವೇ ಹೊರತು, ಗೋಂಡ್ವಾನಾದಿಂದ ಆಸ್ಟ್ರೇಲಿಯಾ-ನ್ಯೂಗಿನಿಯಾಗಳು ಬೇರ್ಪಡಿಸಲ್ಪಟ್ಟ ಬಹಳ ಕಾಲದ ನಂತರ ಅಲ್ಲ. ಪಳೆಯುಳಿಕೆ ಇದ್ದಿಲಿನ ಸಂಚಯನಗಳಲ್ಲಿನ (ಆ ಕಾಲದಲ್ಲೂ ಸಹ ಬೆಂಕಿಯು ಒಂದು ಅಂಶವಾಗಿತ್ತು ಎಂಬುದನ್ನು ಸೂಚಿಸುತ್ತಾ) ಒಂದು ಹೆಚ್ಚಳದೊಂದಿಗೆ ಅವುಗಳ ಉಗಮ ಮತ್ತು ವರ್ಧಿಸುವಿಕೆಯು ಏಕಕಾಲಿಕವಾಗಿ ಸಂಭವಿಸಿತಾದರೂ, ಸುಮಾರು ೨೦ ದಶಲಕ್ಷ ವರ್ಷಗಳ ಹಿಂದಿನವರೆಗೂ ತೃತೀಯಕ ಮಳೆಕಾಡಿನ ಒಂದು ಕಿರುಭಾಗವಾಗಿಯೇ ಅವು ಉಳಿದುಕೊಂಡವು. ಈ ಅವಧಿಯಲ್ಲಿ ಖಂಡದ ಅನುಕ್ರಮವಾದ ಒಣಗುವಿಕೆ ಮತ್ತು ಮಣ್ಣಿನ ಪೋಷಕಾಂಶಗಳ ಬರಿದಾಗುವಿಕೆಯಿಂದಾಗಿ ಒಂದು ಹೆಚ್ಚು ಮುಕ್ತವಾದ ಕಾಡಿನ ಬಗೆಯ, ಅದರಲ್ಲೂ ಪ್ರಧಾನವಾಗಿ ಸರ್ವೆಮರ ಮತ್ತು ಜಾಲಿಮರ ದ ಜಾತಿಗಳ ಬೆಳವಣಿಗೆಯು ಕಂಡುಬಂತು. ಸುಮಾರು ೫೦ ಸಾವಿರ ವರ್ಷಗಳ ಹಿಂದೆ ಮೊದಲ ಮಾನವರ ಆಗಮನವಾಗುವುದರೊಂದಿಗೆ, ಬೆಂಕಿಗಳು ಹೆಚ್ಚುಹೆಚ್ಚು ಪುನರಾವರ್ತಿಸಲ್ಪಡುವಂತಾಯಿತು ಹಾಗೂ ಬೆಂಕಿಯನ್ನು-ಪ್ರೀತಿಸುವ ನೀಲಗಿರಿ ಮರಗಳು ಆಸ್ಟ್ರೇಲಿಯಾದ ಒಟ್ಟಾರೆ ಕಾಡುಪ್ರದೇಶದ ಪೈಕಿ ಸ್ಥೂಲವಾಗಿ ೭೦%ನಷ್ಟು ಭಾಗವನ್ನು ಆವರಿಸಿಕೊಂಡಿತು.
ಎರಡು ಬೆಲೆಬಾಳುವ ಮರದ ದಿಮ್ಮಿಯ ಮರಗಳಾದ, ಆಲ್ಪೈನ್ ಆಷ್ ಎಂದು ಕರೆಯಲ್ಪಡುವ E. ಡೆಲಿಗೇಟೆನ್ಸಿಸ್ ಹಾಗೂ ಆಸ್ಟ್ರೇಲಿಯಾದ ಬೆಟ್ಟದ ನೀಲಗಿರಿ ಮರವಾದ E. ರೆಗ್ನಾನ್ಸ್ - ಇವು ಬೆಂಕಿಯಿಂದ ನಾಶಗೊಳಿಸಲ್ಪಡುತ್ತವೆ ಮತ್ತು ಬೀಜದಿಂದ ಮಾತ್ರವೇ ಮತ್ತೆ ಹುಟ್ಟಿಕೊಳ್ಳುತ್ತವೆ. ಕ್ಯಾನ್‌ಬೆರಾದ ಸುತ್ತಮುತ್ತಲಿನ ಕಾಡುಗಳ ಮೇಲೆ ಸಣ್ಣ ಪ್ರಮಾಣದ ಪರಿಣಾಮ ಬೀರಿದ ೨೦೦೩ರ ಅದೇ ಪೊದೆಬೆಂಕಿಯು ಸಾವಿರಾರು ಹೆಕ್ಟೇರುಗಳಷ್ಟು ನಾಶಗೊಂಡ ಆಷ್ ಕಾಡುಗಳಿಗೆ ಕಾರಣವಾಯಿತು.
ಆದಾಗ್ಯೂ, ಒಂದು ಸಣ್ಣ ಪ್ರಮಾಣದಲ್ಲಿ ಆಷ್ ಕಾಡು ಉಳಿದುಕೊಂಡಿತು ಮತ್ತು ಹೊಸ ಆಷ್ ಮರಗಳನ್ನು ಕೂಡಾ ಅದು ಹುಟ್ಟುಹಾಕಿತು. ಸಸ್ಯದ ತೋಪುಗಳನ್ನು ಹಾಗೆಯೇ ಬಿಡಬೇಕೇ ಅಥವಾ ಒಂದು ಹಾನಿಕಾರಕ ಪರಿಪಾಠವಾಗಿ ಹೆಚ್ಚುಹೆಚ್ಚು ಗುರುತಿಸಲ್ಪಡುತ್ತಿರುವ ಬಹುಪಾಲು ಹಾನಿಗೊಳಗಾಗದ ಮರದ ದಿಮ್ಮಿಯನ್ನು ರಕ್ಷಿಸಿ ಬೆಳೆಸಲು ಪ್ರಯತ್ನಿಸಬೇಕೇ ಎಂಬ ವಿಷಯದ ಕುರಿತು ಕೆಲವೊಂದು ಚರ್ಚೆಗಳು ನಡೆಯುತ್ತಿವೆ.
ಸಾಗುವಳಿ, ಉಪಯೋಗಗಳು, ಮತ್ತು ಪರಿಸರೀಯ ಪರಿಣಾಮಗಳು
[ಬದಲಾಯಿಸಿ]ನೀಲಗಿರಿ ಮರಗಳು ಅನೇಕ ಉಪಯೋಗಗಳನ್ನು ಹೊಂದಿದ್ದು, ಈ ಉಪಯೋಗಗಳ ದೆಸೆಯಿಂದಾಗಿ ಅವು ಆರ್ಥಿಕವಾಗಿ ಮುಖ್ಯವಾದ ಮರಗಳಾಗಿ ಮಾರ್ಪಟ್ಟಿವೆ. ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದಂಥ ಕೆಲವೊಂದು ದೇಶಗಳಲ್ಲಿ ಈ ಮರಗಳು ಆಕ್ರಮಣಶೀಲವಾಗಿವೆ ಎಂಬ ಕಳವಳಗಳ ಹೊರತಾಗಿಯೂ, ಆಫ್ರಿಕಾದ[೫]: 22 ಟಿಂಬಕ್ಟು, ಮತ್ತು ಪೆರು ದೇಶದ ಆಂಡೀಸ್‌ನಂಥ[೪] ಬಡ ಪ್ರದೇಶಗಳಲ್ಲಿ ಇವು ಒಂದು ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿವೆ.[೬] ಕ್ಯಾರಿ ಮರ ಮತ್ತು ಹಳದಿ ಪೆಟ್ಟಿಗೆಯ ಪ್ರಭೇದಗಳು ಪ್ರಾಯಶಃ ಅತ್ಯಂತ ಚಿರಪರಿಚಿತವಾಗಿವೆ. ಅವುಗಳ ವೇಗದ ಬೆಳವಣಿಗೆಯ ಕಾರಣದಿಂದಾಗಿ, ಈ ಮರಗಳ ಅತಿಮುಖ್ಯವಾದ ಪ್ರಯೋಜನವೆಂದರೆ ಅವುಗಳ ಕಟ್ಟಿಗೆ ಅಥವಾ ದಾರು ಆಗಿದೆ. ಬೇರಿನ ಭಾಗದಲ್ಲಿ ಅವುಗಳನ್ನು ಕೊಚ್ಚಬಹುದು ಮತ್ತು ಅಲ್ಲಿಂದ ಅವು ಮತ್ತೆ ಬೆಳೆಯುತ್ತವೆ. ಅಲಂಕಾರಿಕ ಮರ, ಮರದ ದಿಮ್ಮಿ, ಉರುವಲು ಹಾಗೂ ತಿರುಳುಮರದ ರೂಪದಲ್ಲಿ ಅವುಗಳನ್ನು ಬಳಸುವುದಕ್ಕೆ ಅಗತ್ಯವಾಗಿರುವ ಅನೇಕ ಅಪೇಕ್ಷಣೀಯ ವಿಶಿಷ್ಟ ಲಕ್ಷಣಗಳನ್ನು ಅವು ಒದಗಿಸುತ್ತವೆ. ನೀಲಗಿರಿ ಯ ಅಧಿಕ ಪ್ರಮಾಣದ ನಾರಿನ ಇಳುವರಿಯ ಕಾರಣದಿಂದಾಗಿ, ವಿಶ್ವದ ಉನ್ನತ ಗುಣಮಟ್ಟದ ತಿರುಳು ಒದಗಿಸುವ ಜಾತಿಯಾಗಿ ಅದು ಪರಿಗಣಿಸಲ್ಪಟ್ಟಿದೆ. ಬೇಲಿಯ ಕಂಬಗಳಿಂದ ಮತ್ತು ಇದ್ದಿಲಿನಿಂದ ಮೊದಲ್ಗೊಂಡು ಜೈವಿಕ ಇಂಧನಗಳಿಗಾಗಿರುವ ಸೆಲ್ಯುಲೋಸಿನ ಸಾರತೆಗೆಯುವಿಕೆಯವರೆಗಿನ ಅನೇಕ ಉದ್ಯಮಗಳಲ್ಲಿಯೂ ಇದು ಬಳಕೆಯಾಗುತ್ತದೆ. ನೀಲಗಿರಿ ಮರಗಳ ವೇಗದ ಬೆಳವಣಿಗೆಯಿಂದಾಗಿ ಅವು ಗಾಳಿತಡೆಕಾರಕಗಳಾಗಿ ಬಳಕೆಯಾಗಲು ಸೂಕ್ತವಾಗಿವೆ ಮತ್ತು ಸವಕಳಿಯ ಪ್ರಮಾಣವನ್ನು ತಗ್ಗಿಸಲು ನೀಲಗಿರಿ ಮರಗಳು ಬಳಕೆಯಾಗುತ್ತದೆ.
ಬಾಷ್ಪ ವಿಸರ್ಜನೆಯ ಪ್ರಕ್ರಿಯೆಯ ಮೂಲಕ ನೀಲಗಿರಿ ಮರಗಳು ಮಣ್ಣಿನಿಂದ ಒಂದು ಮಹತ್ತರವಾದ ಪ್ರಮಾಣದಲ್ಲಿ ನೀರನ್ನು ಎಳೆದುಕೊಳ್ಳುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಜಲಸ್ತರವನ್ನು ಕಡಿಮೆಮಾಡಲು ಹಾಗೂ ಮಣ್ಣಿನ ಉಪ್ಪುಗೂಡಿಕೆಯನ್ನು ತಗ್ಗಿಸಲು ಅವುಗಳನ್ನು ನೆಡಲಾಗಿದೆ (ಅಥವಾ ಮರು-ನೆಡಲಾಗಿದೆ). ಆಲ್ಜೀರಿಯಾ, ಲೆಬನಾನ್, ಸಿಸಿಲಿ[೧೧] ಮೊದಲಾದ ಕಡೆಗಳಲ್ಲಿ, ಮತ್ತೊಂದೆಡೆ ಯುರೋಪ್, ಮತ್ತು ಕ್ಯಾಲಿಫೋರ್ನಿಯಾದಲ್ಲಿ ಮಣ್ಣನ್ನು ಒಣಗಿಸುವ ಮೂಲಕ ಮಲೇರಿಯಾವನ್ನು ತಗ್ಗಿಸುವ ಒಂದು ವಿಧಾನವಾಗಿಯೂ ನೀಲಗಿರಿ ಮರಗಳನ್ನು ಬಳಸಿಕೊಂಡು ಬರಲಾಗಿದೆ.[೧೨] ಬಸಿಯುವಿಕೆ ಅಥವಾ ಒಣಗಿಸುವಿಕೆಯು ಸೊಳ್ಳೆಯ ಬಾಲದ ಮರಿಗಳಿಗೆ ಒಂದು ಆವಾಸಸ್ಥಾನವನ್ನು ಒದಗಿಸುವ ಜೌಗುನೆಲಗಳನ್ನು ನಿರ್ಮೂಲನಗೊಳಿಸುತ್ತದೆಯಾದರೂ, ಪರಿಸರ ವಿಜ್ಞಾನದ ರೀತಿಯಲ್ಲಿ ಉತ್ಪನ್ನಕಾರಕವಾಗಿರುವ ಪ್ರದೇಶಗಳನ್ನೂ ಇದು ನಾಶಪಡಿಸಬಲ್ಲುದಾಗಿದೆ. ಈ ಒಣಗಿಸುವಿಕೆಯು ಕೇವಲ ಮಣ್ಣಿನ ಮೇಲ್ಮೈಗೆ ಮಾತ್ರವೇ ಸೀಮಿತಗೊಂಡಿದೆ. ಏಕೆಂದರೆ, ನೀಲಗಿರಿ ಬೇರುಗಳು ...2.5 m (8.2 ft)ನಷ್ಟು ಉದ್ದದವರೆಗಿನ ಬೇರುಗಳನ್ನು ಹೊಂದಿದ್ದು, ಅವು ಭೂಮಿಯಡಿ ಇರುವ ವಲಯವನ್ನು ತಲುಪುವುದಿಲ್ಲ; ಹೀಗಾಗಿ ಮಳೆನೀರು ಅಥವಾ ನೀರಾವರಿ ವ್ಯವಸ್ಥೆಯು ಮಣ್ಣನ್ನು ಮತ್ತೆ ತೇವಗೊಳಿಸಬಲ್ಲವು.
ನೀಲಗಿರಿ ತೈಲವನ್ನು ಅದರ ಎಲೆಗಳಿಂದ ಅನಾಯಾಸವಾಗಿ ಆವಿ ಬಟ್ಟಿ ಇಳಿಸಲಾಗುತ್ತದೆ ಮತ್ತು ಈ ತೈಲವನ್ನು ಶುದ್ಧೀಕರಣ, ವಾಸನೆಯನ್ನು ಕಳೆಯುವಿಕೆ ಮೊದಲಾದವುಗಳಿಗಾಗಿ ಬಳಸಬಹುದಾಗಿದೆ. ಅಷ್ಟೇ ಅಲ್ಲ, ಆಹಾರದ ಪೂರಕಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಿಹಿತಿಂಡಿಗಳು, ಕೆಮ್ಮಿನ ಪೆಪ್ಪರ್‌ಮೆಂಟುಗಳಲ್ಲಿ ಹಾಗೂ ರಕ್ತ/ಮೂಗು ಕಟ್ಟಿರುವಿಕೆಯನ್ನು ನಿವಾರಿಸುವ ಔಷಧಿಗಳಲ್ಲಿ ಅತ್ಯಂತ ಅಲ್ಪ ಪ್ರಮಾಣದಲ್ಲಿ ನೀಲಗಿರಿ ತೈಲವನ್ನು ಬಳಸಲಾಗುತ್ತದೆ. ಇದು ಕೀಟ ನಿವಾರಕ ಗುಣಗಳನ್ನೂ (ಜಾನ್ ೧೯೯೧ a, b; ೧೯೯೨) ಹೊಂದಿದೆ, ಮತ್ತು ಕೆಲವೊಂದು ವಾಣಿಜ್ಯೋದ್ದೇಶದ ಸೊಳ್ಳೆ ನಿವಾರಕಗಳಲ್ಲಿ ಇದೊಂದು ಕ್ರಿಯಾಶೀಲ ಘಟಕವಾಗಿದೆ (ಫ್ರಾಡಿನ್ & ಡೇ ೨೦೦೨).[೧೩]
ಕೆಲವೊಂದು ನೀಲಗಿರಿ ಮರಗಳ ಮಕರಂದವು ಉನ್ನತ-ಗುಣಮಟ್ಟದ ಏಕಪುಷ್ಪೀಯ ಜೇನನ್ನು ಉತ್ಪಾದಿಸುತ್ತದೆ. ನೀಲಗಿರಿ ಮರದ ಕಟ್ಟಿಗೆಯನ್ನು ಆಸ್ಟ್ರೇಲಿಯಾದ ಮೂಲನಿವಾಸಿಗಳ ಒಂದು ಸಾಂಪ್ರದಾಯಿಕ ಗಾಳಿವಾದ್ಯವಾದ ಡಿಗೆರಿಡೂಗಳನ್ನು ತಯಾರಿಸಲೂ ಸಹ ಸಾಮಾನ್ಯವಾಗಿ ಬಳಸಲಾಗುತ್ತದೆ. ಮರದ ಕಾಂಡವನ್ನು ಗೆದ್ದಲುಗಳಿಂದ ಹಳ್ಳವಾಗಿಸಿ, ಒಂದು ವೇಳೆ ಈ ರೀತಿ ಕೊರೆಯಲ್ಪಟ್ಟದ್ದು ಸರಿಯಾದ ಗಾತ್ರ ಹಾಗೂ ಆಕಾರದಲ್ಲಿದ್ದರೆ, ಆಮೇಲೆ ಅದನ್ನು ಕತ್ತರಿಸಲಾಗುತ್ತದೆ.
ರೇಷ್ಮೆ ಮತ್ತು ಉಣ್ಣೆಯಂಥ ಪ್ರೋಟೀನು ನಾರುಗಳ ಮೇಲೆ ಗಟ್ಟಿಯಾಗಿ ನಿಲ್ಲುವ ವರ್ಣದ್ರವ್ಯಗಳನ್ನು ತಯಾರಿಸಲು ನೀಲಗಿರಿ ಯ ಎಲ್ಲಾ ಭಾಗಗಳನ್ನೂ ಬಳಸಿಕೊಳ್ಳಬಹುದು. ಸಸ್ಯದ ಭಾಗವನ್ನು ನೀರಿನ ಜೊತೆಯಲ್ಲಿ ಸಂಸ್ಕರಿಸುವುದರ ಮೂಲಕ ಅತ್ಯಂತ ಸರಳ ವಿಧಾನದಲ್ಲಿ ವರ್ಣದ್ರವ್ಯವನ್ನು ತಯಾರಿಸುವುದನ್ನು ಈ ಪ್ರಕ್ರಿಯೆಯು ಒಳಗೊಳ್ಳುತ್ತದೆ. ಹೀಗೆ ಸಾಧಿಸಲ್ಪಡುವ ಬಣ್ಣಗಳ ಶ್ರೇಣಿಯು ಹಳದಿ ಮತ್ತು ಕಿತ್ತಳೆಯಿಂದ ಮೊದಲ್ಗೊಂಡು ಹಸಿರು, ಕಂದುಬಣ್ಣ, ಚಾಕೊಲೇಟ್ ಮತ್ತು ಗಾಢವಾದ ತುಕ್ಕು ಕೆಂಪಿನ ಬಣ್ಣದಾದ್ಯಂತ ಇರುತ್ತದೆ.[೧೪] ಸಂಸ್ಕರಣದ ನಂತರ ಉಳಿಯುವ ಸಾಮಗ್ರಿಯನ್ನು ಹಸಿಗೊಬ್ಬರವಾಗಿ ಅಥವಾ ರಸಗೊಬ್ಬರವಾಗಿ ಕ್ಷೇಮಕರವಾಗಿ ಬಳಸಬಹುದು.[ಸೂಕ್ತ ಉಲ್ಲೇಖನ ಬೇಕು]
ನೆಡುತೋಪು ಮತ್ತು ಪರಿಸರ ವಿಜ್ಞಾನದ ಸಮಸ್ಯೆಗಳು
[ಬದಲಾಯಿಸಿ]ಸರ್ ಜೋಸೆಫ್ ಬ್ಯಾಂಕ್ಸ್ ಎಂಬ ಸಸ್ಯವಿಜ್ಞಾನಿಯೊಬ್ಬ ೧೭೭೦ರಲ್ಲಿ ಕೈಗೊಂಡ ಕುಕ್ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ನೀಲಗಿರಿ ಯನ್ನು ಆಸ್ಟ್ರೇಲಿಯಾದಿಂದ ವಿಶ್ವದ ಇತರ ಭಾಗಗಳಿಗೆ ಮೊದಲು ಪರಿಚಯಿಸಿದ. ತರುವಾಯ ಇದು ವಿಶ್ವದ ಅನೇಕ ಭಾಗಗಳಿಗೆ ಪರಿಚಯಿಸಲ್ಪಟ್ಟಿತು. ಅವುಗಳಲ್ಲಿ ಗಮನಾರ್ಹವಾದ ಪ್ರದೇಶಗಳೆಂದರೆ: ಕ್ಯಾಲಿಫೋರ್ನಿಯಾ, ಬ್ರೆಝಿಲ್, ಈಕ್ವೆಡಾರ್, ಕೊಲಂಬಿಯಾ, ಎಥಿಯೋಪಿಯಾ, ಮೊರೊಕೋ, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ಉಗಾಂಡಾ, ಇಸ್ರೇಲ್, ಗ್ಯಾಲೀಷಿಯಾ ಮತ್ತು ಚಿಲಿ. ಸ್ಪೇನ್ ದೇಶದಲ್ಲಿ, ನೀಲಗಿರಿ ಮರಗಳು ತಿರುಳುಮರದ ನೆಡುತೋಪುಗಳಲ್ಲಿ ನೆಡಲ್ಪಟ್ಟಿವೆ. ಗರಗಸದ ಕಾರ್ಖಾನೆಯ ಕೆಲಸಗಾರಿಕೆ, ತಿರುಳು, ಇದ್ದಿಲು ಸಂಬಂಧಿ ಕೆಲಸಗಳು ಮತ್ತು ಇತರ ಕೆಲಸಗಳಂಥ ಹಲವಾರು ಉದ್ಯಮಗಳಿಗೆ ನೀಲಗಿರಿ ಗಳು ಆಧಾರವಾಗಿವೆ. ಹಲವಾರು ಜಾತಿಗಳು ಆಕ್ರಮಣಶೀಲವಾಗಿ ಮಾರ್ಪಟ್ಟಿವೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ವನ್ಯಜೀವಿಕುಲದ ಮುಚ್ಚುದಾರಿಗಳು ಹಾಗೂ ಬೆಳೆಗಳ ಸರದಿಯ ನಿರ್ವಹಣೆಯ ಗೈರುಹಾಜರಿಯು ಇದಕ್ಕೆ ಪ್ರಮುಖ ಕಾರಣವಾಗಿದೆ.
ಇದೇ ರೀತಿಯ ಅನುಕೂಲಕರ ವಾತಾವರಣದ ಸ್ಥಿತಿಗತಿಗಳಿಂದಾಗಿ, ನೀಲಗಿರಿ ನೆಡುತೋಪುಗಳು ಅನೇಕ ವೇಳೆ ಓಕ್ ಕಾಡುಪ್ರದೇಶಗಳನ್ನು ಸ್ಥಾನಪಲ್ಲಟಗೊಳಿಸಿವೆ. ಕ್ಯಾಲಿಫೋರ್ನಿಯಾ ಮತ್ತು ಪೋರ್ಚುಗಲ್‌ಗಳಲ್ಲಿ ಕಂಡುಬಂದಿರುವ ಸ್ಥಿತಿ ಇದಕ್ಕೊಂದು ನಿದರ್ಶನವಾಗಿದೆ. ಇದರ ಫಲವಾಗಿ ಹೊರಹೊಮ್ಮಿದ ಏಕಫಸಲಿನ ಕೃಷಿಗಳಿಂದಾಗಿ ಸಸ್ತನಿಗಳು ಹಾಗೂ ಪಕ್ಷಿಗಳು ಆಹಾರಕ್ಕಾಗಿ ಅವಲಂಬಿಸಿರುವ ಓಕ್ ಮರದ ಹಣ್ಣುಗಳು ಇಲ್ಲದಂತಾಗಿರುವುದರಿಂದ, ಜೀವ ವೈವಿಧ್ಯತೆಯ ನಷ್ಟವಾಗಿದ್ದು ಅದು ಕಳವಳಗಳನ್ನು ಸೃಷ್ಟಿಸಿದೆ. ಓಕ್ ಮರಗಳಲ್ಲಿನ ಪೊಟರೆಗಳು ಪಕ್ಷಿಗಳಿಗೆ ಹಾಗೂ ಸಣ್ಣ-ಪುಟ್ಟ ಸಸ್ತನಿಗಳಿಗೆ ಮತ್ತು ಜೇನು ಸಮುದಾಯಗಳಿಗೆ ಆಶ್ರಯ ಮತ್ತು ಗೂಡುಕಟ್ಟುವ ತಾಣಗಳನ್ನು ಒದಗಿಸುತ್ತಿದ್ದು, ಏಕಫಸಲಿನ ಕೃಷಿಯ ಕಾರಣದಿಂದಾಗಿ ಅದೂ ಇಲ್ಲದಂತಾಗಿದ್ದು ಜೀವವೈವಿಧ್ಯತೆಯ ನಷ್ಟಕ್ಕೆ ಕಾರಣವಾಗಿ ಕಳವಳಗಳನ್ನು ಸೃಷ್ಟಿಸಿದೆ. ಅಷ್ಟೇ ಅಲ್ಲ, ನಿರ್ವಹಿಸಲ್ಪಟ್ಟ ನೆಡುತೋಪುಗಳಲ್ಲಿ ಕಡಿದು ಉರುಳಿಸಲಾದ ಮರಗಳು ಇಲ್ಲದಿರುವುದೂ ಸಹ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ.
ಆಯಾ ಋತುವಿಗೆ ತಕ್ಕಂತಿರುವ ಶುಷ್ಕ ಹವಾಮಾನಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ತೆರೆದ ಹುಲ್ಲುಗಾವಲುಗಳಲ್ಲಿ, ಅಲ್ಲೊಂದು-ಇಲ್ಲೊಂದು ಎಂಬಂತೆ ವಿರಳವಾಗಿರುವ ಮರಗಳಿಗೆ ಬೆಂಕಿಯನ್ನು ಹಚ್ಚಲು ಹುಲ್ಲಿನ ಬೆಂಕಿಯೊಂದು ಸಾಕಾಗುವುದಿಲ್ಲವಾದ್ದರಿಂದ, ಓಕ್ ಮರಗಳು ಹಲವು ವೇಳೆ ಬೆಂಕಿ-ನಿರೋಧಕವಾಗಿರುತ್ತವೆ. ಇದಕ್ಕೆ ಪ್ರತಿಯಾಗಿ ಒಂದು ನೀಲಗಿರಿಯ ಕಾಡು ಬೆಂಕಿಯನ್ನು ಉತ್ತೇಜಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಏಕೆಂದರೆ ಅದರ ಎಲೆಗಳು ತಯಾರಿಸುವ ತೈಲಗಳು ಬಾಷ್ಪಶೀಲವಷ್ಟೇ ಅಲ್ಲದೇ ಅಧಿಕವಾಗಿ ದಹನಶೀಲ ಸ್ವಭಾವವನ್ನು ಹೊಂದಿರುತ್ತವೆ. ಮೇಲಾಗಿ, ದೊಡ್ಡ ಪ್ರಮಾಣಗಳಲ್ಲಿ ಉತ್ಪಾದನೆಯಾಗುವ ಕಸದಲ್ಲಿ ಫೀನಾಲಿಕ್ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವು ಶಿಲೀಂಧ್ರಗಳಿಂದ ತಮ್ಮ ವಿಘಟನೆಯಾಗದಂತೆ ತಡೆಯುವುದರಿಂದ, ಬೃಹತ್ ಪ್ರಮಾಣಗಳಲ್ಲಿನ ಶುಷ್ಕ, ದಹನಶೀಲ ಇಂಧನವಾಗಿ ಕಸವು ಸಂಚಯನಗೊಳ್ಳುತ್ತದೆ.[೧೫] ಇದರ ಪರಿಣಾಮವಾಗಿ, ನೀಲಗಿರಿ ಮರಗಳ ದಟ್ಟವಾದ ನೆಡುವಿಕೆಗಳು ಮಹಾಕ್ಷೋಭೆಯ ಬೆಂಕಿಯ ಬಿರುಗಾಳಿಗಳಿಗೆ ಈಡಾಗಬಹುದು. ನೀಲಗಿರಿ ಮರಗಳು ದೀರ್ಘಾವಧಿಯವರೆಗೆ ಬೆಂಕಿಯಿಂದ ತಪ್ಪಿಸಿಕೊಂಡು ಬದುಕುಳಿಯುವ ತಮ್ಮ ಸಾಮರ್ಥ್ಯವನ್ನು, ಕುರುಚಲು ಎಳೆಕೊಂಬೆಗಳು ಮತ್ತು ಲಿಗ್ನೋಟ್ಯೂಬರ್‌ಗಳಿಂದ[೧೫] ಮತ್ತೆಹುಟ್ಟುವ ತಮ್ಮ ಸಾಮರ್ಥ್ಯದಿಂದ ಅಥವಾ ಸೆರೋಟಿನ್‌ಯುಕ್ತ ಹಣ್ಣುಗಳನ್ನು ಉತ್ಪಾದಿಸುವುದರಿಂದ ಪಡೆದುಕೊಳ್ಳುತ್ತವೆ.
ಉತ್ತರ ಅಮೆರಿಕ
[ಬದಲಾಯಿಸಿ]ಕ್ಯಾಲಿಫೋರ್ನಿಯಾ ೧೮೫೦ರ ದಶಕದಲ್ಲಿ, ಕ್ಯಾಲಿಫೋರ್ನಿಯಾದ ಹೊನ್ನುಗ್ಗಲಿನ ಅವಧಿಯಲ್ಲಿ ಆಸ್ಟ್ರೇಲಿಯಾದ ಜನರಿಂದ ನೀಲಗಿರಿ ಮರಗಳು ಕ್ಯಾಲಿಫೋರ್ನಿಯಾಕ್ಕೆ ಪರಿಚಯಿಸಲ್ಪಟ್ಟವು. ಕ್ಯಾಲಿಫೋರ್ನಿಯಾದ ಬಹುಭಾಗವು ಆಸ್ಟ್ರೇಲಿಯಾದ ಭಾಗಗಳಿಗೆ ಹೋಲುವ ರೀತಿಯಲ್ಲಿರುವ ಒಂದು ಹವಾಮಾನವನ್ನು ಹೊಂದಿದೆ. ೧೯೦೦ರ ದಶಕದ ಆರಂಭದ ವೇಳೆಗೆ, ಸಂಸ್ಥಾನದ ಸರ್ಕಾರದ ಉತ್ತೇಜನದೊಂದಿಗೆ ಸಾವಿರಾರು ಎಕರೆಗಳಷ್ಟು ನೀಲಗಿರಿ ಮರಗಳು ನೆಡಲ್ಪಟ್ಟವು. ಗೃಹನಿರ್ಮಾಣ, ಪೀಠೋಪಕರಣಗಳ ತಯಾರಿಕೆ ಮತ್ತು ರೈಲುಹಾದಿಯ ಅಡ್ಡಮರಗಳಿಗೆ ಬೇಕಾಗುವ ಮರದ ದಿಮ್ಮಿಯ ಒಂದು ನವೀಕರಿಸಬಹುದಾದ ಮೂಲವನ್ನು ಅವು ಒದಗಿಸಬಲ್ಲವು ಎಂಬ ಭರವಸೆಯನ್ನು ಈ ಹಂತದಲ್ಲಿ ಇಟ್ಟುಕೊಳ್ಳಲಾಯಿತು. ರೈಲುಹಾದಿಯ ಅಡ್ಡಮರದ ಬಳಕೆಯ ಉದ್ದೇಶಕ್ಕಾಗಿ ನೀಲಗಿರಿಯು ನಿರ್ದಿಷ್ಟವಾಗಿ ಸೂಕ್ತವಾಗುವುದಿಲ್ಲ ಎಂಬುದನ್ನು ಕೆಲವೇ ದಿನಗಳಲ್ಲಿ ಕಂಡುಕೊಳ್ಳಲಾಯಿತು. ಏಕೆಂದರೆ, ನೀಲಗಿರಿ ಮರದಿಂದ ಮಾಡಲ್ಪಟ್ಟ ಅಡಿದಿಮ್ಮಿಗಳು ಒಣಗುವಾಗ ಸುರುಳಿಸುತ್ತಿಕೊಳ್ಳುವ ಒಂದು ಪ್ರವೃತ್ತಿಯನ್ನು ಹೊಂದಿದ್ದವು, ಮತ್ತು ಒಣಗಿದ ಅಡಿದಿಮ್ಮಿಗಳು ಎಷ್ಟೊಂದು ಕಠಿಣವಾಗಿದ್ದವೆಂದರೆ, ಅವುಗಳಿಗೆ ರೈಲುಹಾದಿಯ ಗುಬ್ಬಿಮೊಳೆಗಳನ್ನು ಹೊಡೆಯುವುದು ಹೆಚ್ಚೂಕಮ್ಮಿ ಅಸಾಧ್ಯವಾಗಿಬಿಡುತ್ತಿತ್ತು.
"ಕ್ಯಾಲಿಫೋರ್ನಿಯಾದಲ್ಲಿನ ನೀಲಗಿರಿಯ ಭರವಸೆಯು ಆಸ್ಟ್ರೇಲಿಯಾದ ಹಳೆಯ ಸಹಜಾರಣ್ಯಗಳ ಮೇಲೆ ಅವಲಂಬಿತವಾಗಿತ್ತು ಎಂಬುದನ್ನು ಅವು ಸೂಚಿಸುತ್ತಾ ಹೋದವು. ಕ್ಯಾಲಿಫೋರ್ನಿಯಾದಲ್ಲಿ ಬೆಳೆಲಾಗುತ್ತಿದ್ದ ಸಣ್ಣ ಮರಗಳನ್ನು ಆಸ್ಟ್ರೇಲಿಯಾದ, ಶತಮಾನಗಳಷ್ಟು-ಹಳತಾದ ನೀಲಗಿರಿ ಮರದ ದಿಮ್ಮಿಗೆ ಗುಣಮಟ್ಟದಲ್ಲಿ ಹೋಲಿಸಲು ಸಾಧ್ಯವಾಗದಿದ್ದುದುರಿಂದ ಇದೊಂದು ತಪ್ಪಾಗಿತ್ತು. ಕಟಾವಿಗೆ ಇದು ವಿಭಿನ್ನವಾಗಿ ಪ್ರತಿಕ್ರಿಯಿಸಿತು. ಕ್ಯಾಲಿಫೋರ್ನಿಯಾದ ಕಿರಿಯ ಬೆಳೆಯು ಮಾಡಿದಂತೆ ಹಳೆಯದಾದ ಮರಗಳು ಸೀಳಲಿಲ್ಲ ಅಥವಾ ಸುರುಟಿಕೊಂಡು ಡೊಂಕಾಗಲಿಲ್ಲ. ಎರಡೂ ಬಗೆಗಳ ನಡುವೆ ಒಂದು ಅಗಾಧವಾದ ವ್ಯತ್ಯಾಸವಿತ್ತು, ಮತ್ತು ಇದು ಕ್ಯಾಲಿಫೋರ್ನಿಯಾದ ನೀಲಗಿರಿ ಉದ್ಯಮವನ್ನು ದುರವಸ್ಥೆಗೀಡುಮಾಡಿತು"[೧೬]
ನೀಲಗಿರಿಯನ್ನು, ಅದರಲ್ಲೂ ಮುಖ್ಯವಾಗಿ ನೀಲಿ ಅಂಟು ಎಂದು ಕರೆಯಲಾಗುವ E. ಗ್ಲಾಬ್ಯುಲಸ್ ಪ್ರಭೇದವನ್ನು ಬಹುತೇಕವಾಗಿ ಮರಗಳಿಲ್ಲದ ಕ್ಯಾಲಿಫೋರ್ನಿಯಾ ಸಂಸ್ಥಾನದ ಕೇಂದ್ರಭಾಗದಲ್ಲಿನ ಹೆದ್ದಾರಿಗಳಿಗೆ, ಕಿತ್ತಳೆಯ ತೋಪುಗಳಿಗೆ ಮತ್ತು ಇತರ ತೋಟಗಳಿಗೆ ಗಾಳಿತಡೆಗಳನ್ನು ಒದಗಿಸುವಲ್ಲಿ ಬಳಸಿದಾಗ, ಅವು ಬೆಲೆಬಾಳುವಂಥಾದ್ದು ಅಥವಾ ಪ್ರಯೋಜನಕಾರಿ ಎಂದು ಕ್ಯಾಲಿಫೋರ್ನಿಯಾದಲ್ಲಿ ಸಾಬೀತಾದ ಒಂದು ವಿಧಾನವಾಗಿತ್ತು. ಅನೇಕ ನಗರಗಳು ಹಾಗೂ ಉದ್ಯಾನವನಗಳಲ್ಲಿ ನೆರಳು ನೀಡುವ ಮತ್ತು ಅಲಂಕಾರಿಕ ಮರಗಳಾಗಿಯೂ ಅವು ಮೆಚ್ಚುಗೆಯನ್ನು ಪಡೆದಿವೆ.
ಕ್ಯಾಲಿಫೋರ್ನಿಯಾದಲ್ಲಿನ ನೀಲಗಿರಿ ಕಾಡುಗಳು ಸ್ಥಳೀಕ ಸಸ್ಯಗಳೊಂದಿಗೆ ಪೈಪೋಟಿ ನಡೆಸುವ ಮತ್ತು ಸ್ಥಳೀಕ ಪ್ರಾಣಿಗಳನ್ನು ಬೆಂಬಲಿಸದಿರುವ ಕಾರಣದಿಂದಾಗಿ ಅವು ಟೀಕೆಗೊಳಗಾಗಿವೆ. ಬೆಂಕಿಯು ಕೂಡಾ ಒಂದು ಸಮಸ್ಯೆಯಾಗಿದೆ. ಹೆಚ್ಚೂಕಮ್ಮಿ ೩,೦೦೦ ಮನೆಗಳನ್ನು ನಾಶಪಡಿಸಿ ೨೫ ಜನರ ಸಾವಿಗೆ ಕಾರಣವಾದ ೧೯೯೧ರ ಓಕ್‌ಲೆಂಡ್ ಬೆಟ್ಟಗಳ ಬೆಂಕಿಯ ಬಿರುಗಾಳಿಗೆ, ಮನೆಗಳಿಗೆ ನಿಕಟವಾಗಿದ್ದ ಬೃಹತ್ ಸಂಖ್ಯೆಯ ನೀಲಗಿರಿ ಮರಗಳು ಭಾಗಶಃ ಪ್ರಚೋದಕ ಕಾರಣವಾಗಿದ್ದವು.[೧೭]
ಕ್ಯಾಲಿಫೋರ್ನಿಯಾದ ಕೆಲವೊಂದು ಭಾಗಗಳಲ್ಲಿ, ನೀಲಗಿರಿ ಮರದ ಕಾಡುಗಳನ್ನು ನಿರ್ಮೂಲನಗೊಳಿಸಲಾಗುತ್ತಿದೆ, ಮತ್ತು ಸ್ಥಳೀಕ ಮರಗಳು ಹಾಗೂ ಸಸ್ಯಗಳನ್ನು ಪುನರ್‌ರೂಪಿಸಲಾಗುತ್ತಿದೆ.
ವ್ಯಕ್ತಿಗಳೂ ಸಹ ಅಕ್ರಮವಾಗಿ ಕೆಲವೊಂದು ಮರಗಳನ್ನು ನಾಶಪಡಿಸಿದ್ದಾರೆ ಮತ್ತು ಮರಗಳ ಮೇಲೆ ದಾಳಿಮಾಡುವ ಕೀಟದ ಪಿಡುಗುಗಳನ್ನು ಆಸ್ಟ್ರೇಲಿಯಾದಿಂದ ಪರಿಚಯಿಸಿರುವುದರ ಕುರಿತಾದ ಶಂಕೆಗೂ ಅವರು ಒಳಗಾಗಿದ್ದಾರೆ.[೧೮]
ಪೆಸಿಫಿಕ್ ವಾಯವ್ಯ ಪ್ರದೇಶಗಳಲ್ಲಿ ನೀಲಗಿರಿ ಮರಗಳು ಅಸಾಧಾರಣವಾದ ರೀತಿಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಮೆರೆಯುತ್ತವೆ. ವಾಷಿಂಗ್ಟನ್, ಓರೆಗಾಂವ್ ಮತ್ತು ಬ್ರಿಟಿಷ್ ಕೊಲಂಬಿಯಾದ ಭಾಗಗಳು ಇದಕ್ಕೆ ನಿರ್ದಶನಗಳಾಗಿವೆ.
ದಕ್ಷಿಣ ಅಮೆರಿಕಾ
[ಬದಲಾಯಿಸಿ]ಉರುಗ್ವೆ ಸರಿಸುಮಾರು ೧೮೯೬ರಲ್ಲಿ, ಆಂಟೋನಿಯೋ ಲ್ಯೂಸಿಚ್ ಎಂಬಾತ ನೀಲಗಿರಿ ಯನ್ನು ಉರುಗ್ವೆ ದೇಶದೊಳಗೆ, ಈಗ ಮಾಲ್ಡೊನ್ಯಾಡೊ ವಿಭಾಗ ಎಂದು ಕರೆಯಲಾಗುವ ಪ್ರದೇಶದಾದ್ಯಂತ ಪರಿಚಯಿಸಿದ, ಮತ್ತು ಅದು ಈಗ ಆಗ್ನೇಯ ದಿಕ್ಕಿನ ಮತ್ತು ಪೂರ್ವ ಭಾಗದ ಕರಾವಳಿಯಾದ್ಯಂತ ಹಬ್ಬಿಕೊಂಡಿದೆ. ಈ ಪ್ರದೇಶವು ಶುಷ್ಕ ಮರಳಿನ ದಿನ್ನೆಗಳು ಹಾಗೂ ಕಲ್ಲುಗಳಿಂದ ಆವೃತವಾಗಿದ್ದರಿಂದ, ಈ ಪ್ರದೇಶದಲ್ಲಿ ಯಾವುದೇ ಮರಗಳೂ ಇರಲಿಲ್ಲ. (ಇತರ ಅನೇಕ ಮರಗಳನ್ನೂ ಸಹ, ನಿರ್ದಿಷ್ಟವಾಗಿ ಹೇಳುವುದಾದರೆ, ಜಾಲಿಮರ ಮತ್ತು ಪೈನ್ ಮರಗಳನ್ನು ಲ್ಯೂಸಿಚ್ ಪರಿಚಯಿಸಿದ. ಆದರೆ ಅವು ಅಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಬ್ಬಿ ವಿಸ್ತರಣೆಗೊಳ್ಳಲಿಲ್ಲ.)
ಬ್ರೆಜಿಲ್ ಮರದ ದಿಮ್ಮಿಗೆ ಪರ್ಯಾಯವಾಗಿ ಮತ್ತು ಇದ್ದಿಲು ಉದ್ಯಮಕ್ಕಾಗಿ ನೀಲಗಿರಿ ಯು ೧೯೧೦ರಲ್ಲಿ ಬ್ರೆಝಿಲ್‌ಗೆ ಪರಿಚಯಿಸಲ್ಪಟ್ಟಿತು. ಇದು ಇಲ್ಲಿನ ಸ್ಥಳೀಯ ಪರಿಸರದಲ್ಲಿ ಹುಲುಸಾಗಿ ಬೆಳೆದಿದೆ, ಮತ್ತು ಇಂದು ಸುಮಾರು ೫ ದಶಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಗಿಡಗಳು ನೆಡಲ್ಪಟ್ಟಿವೆ. ಮರದ ಕಟ್ಟಿಗೆಯು ಇದ್ದಿಲು ಹಾಗೂ ತಿರುಳು ಮತ್ತು ಕಾಗದದ ಉದ್ಯಮಗಳಿಂದ ಅತೀವವಾಗಿ ಮೆಚ್ಚುಗೆಯನ್ನು ಪಡೆದಿದೆ. ಅಲ್ಪಮಟ್ಟದಲ್ಲಿರುವ ಬೆಳೆಗಳ ಸರದಿಯು ಒಂದು ಬೃಹತ್ ಪ್ರಮಾಣದಲ್ಲಿ ಕಟ್ಟಿಗೆಯು ಉತ್ಪಾದನೆಯಾಗಲು ಅನುವುಮಾಡಿಕೊಟ್ಟಿದೆ ಮತ್ತು ಇತರ ಹಲವಾರು ಚಟುವಟಿಕೆಗಳಿಗೆ ಕಟ್ಟಿಗೆಯನ್ನು ಪೂರೈಕೆ ಮಾಡುವುದರ ಮೂಲಕ, ಸ್ಥಳೀಯ ಕಾಡುಗಳು ದಿಮ್ಮಿಗಳಾಗಿ ಕಡಿಯಲ್ಪಡದಂತೆ ಸಂರಕ್ಷಿಸುವಲ್ಲಿ ನೆರವಾಗಿದೆ. ಉತ್ತಮ ರೀತಿಯಲ್ಲಿ ನಿರ್ವಹಿಸಿದಾಗ, ನೆಡುತೋಪುಗಳು ಊರ್ಜಿತವಾಗಬಲ್ಲ ರೀತಿಯಲ್ಲಿರುತ್ತವೆ ಮತ್ತು ಕೊನೆಯಿಲ್ಲದ ಮರುನೆಡುವಿಕೆಯನ್ನು ಮಣ್ಣು ತಾಳಿಕೊಳ್ಳಬಲ್ಲುದಾಗಿರುತ್ತದೆ. ನೀಲಗಿರಿ ನೆಡುತೋಪುಗಳು ಗಾಳಿತಡೆಗಳ ರೀತಿಯಲ್ಲಿಯೂ ಬಳಸಲ್ಪಡುತ್ತವೆ. ಪ್ರತಿ ವರ್ಷಕ್ಕೆ[೧೯] ಪ್ರತಿ ಹೆಕ್ಟೇರಿಗೆ ೪೦ ಘನ ಮೀಟರುಗಳಿಗೂ ಹೆಚ್ಚಿನ ಪ್ರಮಾಣದಲ್ಲಿರುವ ಬೆಳವಣಿಗೆಯ ಮಟ್ಟಗಳ ವಿಶ್ವ-ದಾಖಲೆಯನ್ನು ಬ್ರೆಝಿಲ್‌ನ ನೆಡುತೋಪುಗಳು ಹೊಂದಿವೆ ಮತ್ತು ವಾಣಿಜ್ಯ ಸ್ವರೂಪದ ಕಟಾವು ಕಾರ್ಯವು ೫ ವರ್ಷಗಳ ನಂತರ ನಡೆಯುತ್ತದೆ. ನಿರಂತರವಾಗಿ ನಡೆಯುವ ಅಭಿವೃದ್ಧಿ ಮತ್ತು ಸರ್ಕಾರದ ವತಿಯಿಂದ ಸಿಗುವ ಹಣಕಾಸಿನ ನೆರವಿನಿಂದಾಗಿ, ವರ್ಷದಿಂದ-ವರ್ಷಕ್ಕೆ ಬೆಳವಣಿಗೆಯು ಸುಸಂಗತವಾಗಿ ಸುಧಾರಣೆಗೊಳ್ಳುತ್ತಿದೆ. ನೀಲಗಿರಿ ಯು ಪ್ರತಿ ವರ್ಷ ಪ್ರತಿ ಹೆಕ್ಟೇರಿಗೆ ೧೦೦ ಘನ ಮೀಟರುಗಳಷ್ಟು ಉತ್ಪಾದಿಸಬಲ್ಲದು. ಬ್ರೆಝಿಲ್ ದೇಶವು ನೀಲಗಿರಿ ಯ ದುಂಡನೆಯ ಕಟ್ಟಿಗೆ ಮತ್ತು ತಿರುಳಿನ ಅಗ್ರಗಣ್ಯ ರಫ್ತುದಾರನಾಗಿ ಮತ್ತು ಉತ್ಪಾದಕನಾಗಿ ಮಾರ್ಪಟ್ಟಿದೆ, ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. ದೇಶದ[clarification needed] ಈ ಕ್ಷೇತ್ರದಲ್ಲಿನ ಬದ್ಧತೆಯಿಂದ ಕೂಡಿದ ಸಂಶೋಧನೆಯ ಮೂಲಕ ಸದರಿ ಪಾತ್ರವನ್ನು ಅದು ವಹಿಸಿದೆ ಎಂದು ಹೇಳಬಹುದು. ಬ್ರೆಝಿಲ್‌ನಲ್ಲಿನ ಸ್ಥಳೀಕ ಕಬ್ಬಿಣದ ತಯಾರಕರು ಇದ್ದಿಲು ಮೂಲಕ್ಕಾಗಿ ಸಮರ್ಥನೀಯವಾಗಿರುವ ರೀತಿಯಲ್ಲಿ ಬೆಳೆದ ನೀಲಗಿರಿ ಯ ಮೇಲೆ ಅತೀವವಾದ ನೆಚ್ಚಿಕೆಯನ್ನು ಇಟ್ಟುಕೊಂಡಿದ್ದಾರೆ; ಇದು ಇತ್ತೀಚಿನ ವರ್ಷಗಳಲ್ಲಿ ಇದ್ದಿಲಿನ ಬೆಲೆಯು ಮಹತ್ತರವಾಗಿ ಮೇಲೇರಲು ಕಾರಣವಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉದ್ಯಮಕ್ಕೆ ಸಂಬಂಧಿಸಿದಂತೆ, ನೆಡುತೋಪುಗಳ ಮಾಲೀಕತ್ವ ಹಾಗೂ ನಿರ್ವಹಣೆಯನ್ನು ಥಾಮ್ಸನ್ ಫಾರೆಸ್ಟ್ರಿಯಂಥ ಮರದ ದಿಮ್ಮಿಯ ಸ್ವತ್ತಿನ ಕಂಪನಿಗಳು ಅಥವಾ ಅರಾಕ್ರುಝ್ ಸೆಲ್ಯುಲೋಸ್ ಮತ್ತು ಸ್ಟೋರಾ ಎನ್ಸೋನಂಥ ಸೆಲ್ಯುಲೋಸ್ ತಯಾರಕ ಕಂಪನಿಗಳು ಸಾಮಾನ್ಯವಾಗಿ ವಹಿಸಿಕೊಂಡಿವೆ. ೧೯೯೦ರ ದಶಕದಲ್ಲಿ, ಸರಿಸುಮಾರು ೧ ಶತಕೋಟಿ $ನಷ್ಟು, ಹಾಗೂ ೨೦೦೫ರ ವೇಳೆಗೆ ೩.೫ ಶತಕೋಟಿ $ನಷ್ಟು ಪ್ರಮಾಣದಲ್ಲಿ ಬ್ರೆಝಿಲ್ ದೇಶವು ರಫ್ತುಕಾರ್ಯವನ್ನು ನಡೆಸಿದೆ.[clarification needed] ವ್ಯಾಪಾರದಲ್ಲಿನ ಈ ಹೆಚ್ಚಳವು ಕೃಷಿವಲಯಕ್ಕೆ ಬೃಹತ್ ಮೊತ್ತಗಳ ವಿದೇಶೀ ಹೂಡಿಕೆಗಳನ್ನು ಸೆಳೆದು ತಂದಿದೆ. ಬ್ರೆಝಿಲ್‌ನ ತಿರುಳು ಮತ್ತು ಕಾಗದದ ಉದ್ಯಮ ಹಾಗೂ ಸೆಲ್ಯುಲೋಸು ಸಂಸ್ಕರಣಾ ಘಟಕಗಳಲ್ಲಿನ ವಿದೇಶೀ ಹೂಡಿಕೆಗೆ ಸಂಬಂಧಿಸಿದಂತೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕು ಹಾಗೂ ವಿಶ್ವ ಬ್ಯಾಂಕುಗಳು ಬಹಿರಂಗವಾಗಿ ಸಂಪೂರ್ಣ ಬೆಂಬಲವನ್ನು ನೀಡಿವೆ. ಬ್ರೆಝಿಲ್‌ನಲ್ಲಿನ ಖಾಸಗಿ ಉದ್ಯಮವು ತಿರುಳು ಮತ್ತು ಕಾಗದದ ಉದ್ಯಮದಲ್ಲಿ ೧೯೯೩ರಿಂದ ಇದುವರೆಗೂ ೧೨ ಶತಕೋಟಿ $ನಷ್ಟು ಹಣವನ್ನು ಹೂಡಿಕೆ ಮಾಡಿದೆ ಮತ್ತು ಮುಂಬರುವ ದಶಕದೊಳಗಾಗಿ ಈ ವಲಯದೊಳಗೆ ಹೆಚ್ಚುವರಿಯಾಗಿ ೧೪ ಶತಕೋಟಿ $ನಷ್ಟು ಮೊತ್ತವನ್ನು ಹೂಡಿಕೆ ಮಾಡುವುದಾಗಿ ಇತ್ತೀಚೆಗೆ ವಾಗ್ದಾನ ಮಾಡಿದೆ.[when?] ಪ್ರತಿ ವರ್ಷವೂ ೨೦೦ ಶತಕೋಟಿ USDಗಿಂತಲೂ ಹೆಚ್ಚಿನ ವಹಿವಾಟಿಗೆ ಕಾರಣವಾಗಿರುವ ಎಲ್ಲಾ ಜಾಗತಿಕ ವ್ಯಾಪಾರಗಳ ಪೈಕಿ ಅರಣ್ಯ ಉತ್ಪನ್ನಗಳ ಉದ್ಯಮವು ೩%ನಷ್ಟು ಪಾಲನ್ನು ಹೊಂದಿದೆ. ಅನೇಕ ವಿದೇಶೀ TIMOಗಳ (ಟಿಂಬರ್‌ಲ್ಯಾಂಡ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಆರ್ಗನೈಸೇಷನ್ಸ್) ಇತ್ತೀಚಿನ ಹಾಜರಿ ಅಥವಾ ಅಸ್ತಿತ್ವವು, ಅರಣ್ಯ ಪ್ರದೇಶದ ಕಾರ್ಯಚಟುವಟಿಕೆಯ ಆರ್ಥಿಕ ಸಾಮರ್ಥ್ಯದ ಒಂದು ಮರುಭರವಸೆಯ ಸ್ವರೂಪವನ್ನು ಪಡೆದಿದೆ. TIMOನ ವಿಶ್ವವ್ಯಾಪಿ ನಿರ್ವಹಣಾ ಸ್ವತ್ತುಗಳು ೨ ದಶಲಕ್ಷ $ನಷ್ಟು ಮೊತ್ತಕ್ಕಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಅದರ ಪೈಕಿ ೮ ಶತಕೋಟಿ $ನಷ್ಟು ಮೊತ್ತವು ೨೦೧೨ಕ್ಕೆ ಮುಂಚಿತವಾಗಿ ಬ್ರೆಝಿಲ್‌ನ ಅಭಿವೃದ್ಧಿಗಳಲ್ಲಿ ಹೂಡಿಕೆಯಾಗಬೇಕಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ದಕ್ಷಿಣ ಅಮೆರಿಕಾವು ೨೦೧೦ರ ವೇಳೆಗೆ ವಿಶ್ವದ ನೀಲಗಿರಿ ದುಂಡು-ಕಟ್ಟಿಗೆಯ ಪೈಕಿ ೫೫%ನಷ್ಟು ಭಾಗವನ್ನು ಉತ್ಪಾದಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಆಫ್ರಿಕಾ
[ಬದಲಾಯಿಸಿ]ಎಥಿಯೋಪಿಯ ನೀಲಗಿರಿ ಯು ೧೮೯೪ ಅಥವಾ ೧೮೯೫ರಲ್ಲಿ ಚಕ್ರವರ್ತಿ IIನೇ ಮೆನೆಲಿಕ್‌ನ ಫ್ರೆಂಚ್ ಸಲಹೆಗಾರ ಮಾಂಡಾನ್-ವಿಡೈಲ್‌ಹೆಟ್‌ನಿಂದ ಅಥವಾ ಇಂಗ್ಲಿಷ್‌ನವನಾದ ಕ್ಯಾಪ್ಟನ್ ಓ'ಬ್ರಿಯಾನ್‌ನಿಂದ ಎಥಿಯೋಪಿಯಾದಲ್ಲಿ ಪರಿಚಯಿಸಲ್ಪಟ್ಟಿತು. ತನ್ನ ಹೊಸ ರಾಜಧಾನಿ ನಗರವಾದ ಆಡಿಸ್ ಅಬಾಬಾದ ಸುತ್ತಲೂ ಉರುವಲಿಗಾಗಿ ಬೃಹತ್ ಪ್ರಮಾಣದಲ್ಲಿ ಅರಣ್ಯನಾಶವಾಗಿದ್ದರಿಂದ, ಈ ರಾಜಧಾನಿ ನಗರದ ಸುತ್ತಲೂ ನೀಲಗಿರಿಯ ನೆಡುವಿಕೆಗೆ IIನೇ ಮೆನೆಲಿಕ್ ಸಮ್ಮತಿಸಿದ. ರಿಚರ್ಡ್ R.K. ಪ್ಯಾನ್‌ಖರ್ಸ್ಟ್ ಎಂಬಾತನ ಪ್ರಕಾರ, "ಅತ್ಯಂತ ವೇಗವಾಗಿ ಬೆಳೆಯುತ್ತಿದ್ದುದು, ಅಲ್ಪ ಪ್ರಮಾಣದ ಗಮನವನ್ನು ಬಯಸುತ್ತಿದ್ದುದು ಮತ್ತು ಕತ್ತರಿಸಿ ಕೆಡವಿದಾಗ ಬೇರುಗಳಿಂದ ಮತ್ತೆ ಬೆಳೆಯುತ್ತಿದ್ದುದು ನೀಲಗಿರಿ ಮರಗಳು ಹೊಂದಿದ್ದ ಒಂದು ಅತಿದೊಡ್ಡ ಪ್ರಯೋಜನವಾಗಿತ್ತು; ಪ್ರತಿ ಹತ್ತು ವರ್ಷಗಳಿಗೊಮ್ಮೆ ಇದನ್ನು ಕಟಾವು ಮಾಡಬಹುದಾಗಿತ್ತು. ಬಿರುಸಾದ ಪ್ರಾರಂಭದಿಂದಲೇ ಈ ಮರವು ತನ್ನ ಯಶಸ್ಸನ್ನು ಸಾಬೀತುಪಡಿಸಿತು".[೨೦] ನೀಲಗಿರಿ ಮರಗಳ ನೆಡುತೋಪುಗಳು ರಾಜಧಾನಿ ಪ್ರದೇಶದಿಂದ ಡೆಬ್ರೆ ಮಾರ್ಕೋಸ್‌ನಂಥ, ಮರಗಳನ್ನು ಬೆಳೆಯುವ ಇತರ ನಗರ ಪ್ರದೇಶಗಳಿಗೂ ಹಬ್ಬಿದವು. ೧೯೬೦ರ ದಶಕದ ಮಧ್ಯಭಾಗದಲ್ಲಿ ಆಡಿಸ್ ಅಬಾಬಾದಲ್ಲಿ ಕಂಡುಬಂದ ಅತ್ಯಂತ ಸಾಮಾನ್ಯವಾದ ಜಾತಿಯೆಂದರೆ E. ಗ್ಲಾಬ್ಯುಲಸ್ ಆಗಿತ್ತು. ಆದರೂ, E. ಮೆಲ್ಲಿಯೋಡೋರಾ ಹಾಗೂ E. ರೋಸ್ಟ್ರೇಟಾ ಜಾತಿಗಳೂ ಸಹ ಗಮನಾರ್ಹ ಸಂಖ್ಯೆಗಳಲ್ಲಿ ಕಂಡುಬಂದವು ಎಂದು ಪ್ಯಾನ್‌ಖರ್ಸ್ಟ್ ವರದಿ ಮಾಡುತ್ತಾನೆ. ೧೯೪೦ರ ದಶಕದಲ್ಲಿ ಮಧ್ಯಭಾಗದ ಎಥಿಯೋಪಿಯಾ ಕುರಿತು ಬರೆಯುತ್ತಿದ್ದ ಡೇವಿಡ್ ಬಕ್ಸ್‌ಟನ್ ಎಂಬಾತ ತನ್ನ ವೀಕ್ಷಣೆಯನ್ನು ಹೀಗೆ ಉಲ್ಲೇಖಿಸಿದ್ದಾನೆ, "ನೀಲಗಿರಿ ಮರಗಳು ಷೋವಾನ್ ಭೂಮೇಲ್ಮೈನಲ್ಲಿನ ಒಂದು ಅವಿಭಾಜ್ಯ -- ಮತ್ತು ಒಂದು ಆಹ್ಲಾದಕರ -- ಅಂಶವಾಗಿವೆ ಮತ್ತು ನಿಧಾನವಾಗಿ ಬೆಳೆಯುವ ಸ್ಥಳೀಕ 'ಸೀಡರ್' ಜ್ಯೂನಿಪೆರಸ್ ಪ್ರೊಸೆರಾ ) ಮರಗಳನ್ನು ದೊಡ್ಡದಾದ ರೀತಿಯಲ್ಲಿ ಸ್ಥಾನಪಲ್ಲಟಗೊಳಿಸಿವೆ."[೨೧]
ನೀಲಗಿರಿ ಯು ತೋರಿಸುವ ದಾಹದ ಲಕ್ಷಣವು "ನದಿಗಳು ಮತ್ತು ಬಾವಿಗಳು ಒಣಗುವಂತೆ ಮಾಡುತ್ತದೆ" ಎಂಬ ಸಾಮಾನ್ಯ ನಂಬಿಕೆಯಿದ್ದುದರಿಂದ ಈ ಜಾತಿಗಳಿಗೆ ವಿರೋಧವು ವ್ಯಕ್ತವಾಯಿತು ಹಾಗೂ ೧೯೧೩ರಲ್ಲಿ ಒಂದು ಪ್ರಕಟಣೆಯು ನೀಡಲ್ಪಟ್ಟು, ನೆಟ್ಟಗೆ ನಿಂತಿರುವ ಎಲ್ಲಾ ಮರಗಳನ್ನು ಆಂಶಿಕವಾಗಿ ಕಡಿದು, ಅವುಗಳ ಸ್ಥಾನವನ್ನು ಉಪ್ಪುನೇರಳೆ ಮರಗಳಿಂದ ತುಂಬಿಸಲು ಆದೇಶಿಸಲಾಯಿತು. ಈ ಕುರಿತು ಪ್ಯಾನ್‌ಖರ್ಸ್ಟ್ ವರದಿ ಮಾಡುತ್ತಾ, "ಅದೇನೇ ಆದರೂ ಆ ಪ್ರಕಟಣೆಯು ಒಂದು ಸತ್ತ ಪತ್ರವಾಗಿ ಅಥವಾ ಆಚರಣೆಯಲ್ಲಿಲ್ಲದ ನಿಯಮವಾಗಿ ಉಳಿದುಕೊಂಡಿತು; ನೀಲಗಿರಿ ಮರಗಳನ್ನು ಬುಡಮೇಲು ಮಾಡುತ್ತಿರುವುದರ ಕುರಿತಾಗಿ ಯಾವುದೇ ಪುರಾವೆಯು ಇಲ್ಲವಾದರೂ, ಸಣ್ಣ ಪ್ರಮಾಣದಲ್ಲಿ ಉಪ್ಪುನೇರಳೆ ಮರಗಳನ್ನು ನೆಡಲಾಗುತ್ತಿದೆ" ಎಂದು ಹೇಳುತ್ತಾನೆ.[೨೨] ನೀಲಗಿರಿ ಮರಗಳು ಆಡಿಸ್ ಅಬಾಬಾದ ಒಂದು ಲಕ್ಷಣ ನಿರೂಪಕ ವೈಶಿಷ್ಟ್ಯತೆಯಂತೆ ಉಳಿದುಕೊಂಡಿವೆ.
ಮಡಗಾಸ್ಕರ್ ಮಡಗಾಸ್ಕರ್‌ನ ಮೂಲ ಸ್ಥಳೀಕ ಕಾಡಿನ ಬಹುತೇಕ ಭಾಗವು ನೀಲಗಿರಿ ಯೊಂದಿಗೆ ಬದಲಾಯಿಸಲ್ಪಟ್ಟಿದ್ದು, ಆಂಡಾಸಿಬೆ-ಮಂಟಾಡಿಯಾ ನ್ಯಾಷನಲ್ ಪಾರ್ಕ್‌ನಂಥ ಉಳಿದ ಸ್ವಾಭಾವಿಕ ಪ್ರದೇಶಗಳನ್ನು ಪ್ರತ್ಯೇಕಿಸುವ ಮೂಲಕ ಅದು ಜೀವವೈವಿಧ್ಯತೆಗೆ ಬೆದರಿಕೆಯೊಡ್ಡುತ್ತಿದೆ.
ದಕ್ಷಿಣ ಆಫ್ರಿಕಾ ಮುಖ್ಯವಾಗಿ ಮರದ ದಿಮ್ಮಿ ಹಾಗೂ ಉರುವಲಿಗಾಗಿ, ಆದರೆ ಅಲಂಕಾರಿಕ ಉದ್ದೇಶಗಳಿಗಾಗಿಯೂ ಸಹ ಹಲವಾರು ನೀಲಗಿರಿ ಜಾತಿಗಳು ದಕ್ಷಿಣ ಆಫ್ರಿಕಾದೊಳಗೆ ಪರಿಚಯಿಸಲ್ಪಟ್ಟಿವೆ. ಈ ಮರಗಳು ಒದಗಿಸುವ ಜೇನುತುಪ್ಪದ ಕಾರಣದಿಂದಾಗಿ ಅವು ಜೇನುಸಾಕಣೆಗಾರರ ವಲಯದಲ್ಲೂ ಜನಪ್ರಿಯವಾಗಿವೆ.[೨೩] ಆದಾಗ್ಯೂ, ದಕ್ಷಿಣ ಆಫ್ರಿಕಾದಲ್ಲಿ ಅವುಗಳ ನೀರು-ಹೀರುವ ಸಾಮರ್ಥ್ಯಗಳು ನೀರಿನ ಪೂರೈಕೆಗಳಿಗೆ ಬೆದರಿಕೆಯನ್ನು ಒಡ್ಡಿರುವುದರಿಂದಾಗಿ, ಅಲ್ಲಿ ಅವು ಆಕ್ರಮಣಶೀಲ ಮರಗಳೆಂದು ಪರಿಗಣಿಸಲ್ಪಟ್ಟಿವೆ. ಸುತ್ತಮುತ್ತಲ ಮಣ್ಣಿನೊಳಗೆ ಒಂದು ರಾಸಾಯನಿಕವನ್ನೂ ಅವು ಬಿಡುಗಡೆ ಮಾಡುತ್ತವೆ ಹಾಗೂ ಅದು ಸ್ಥಳೀಕ ಪ್ರತಿಸ್ಪರ್ಧಿ ಸಸ್ಯಗಳನ್ನು ಕೊಲ್ಲುತ್ತದೆ.[೬]
ನೀಲಗಿರಿ ಯ ಎಳೆಸಸಿಗಳು ಸಾಮಾನ್ಯವಾಗಿ ಸ್ಥಳಜನ್ಯ ಹುಲ್ಲುಗಳೊಂದಿಗೆ ಸ್ಪರ್ಧಿಸಲು ಅಸಮರ್ಥವಾಗಿರುತ್ತವೆಯಾದರೂ, ಬೆಂಕಿಯೊಂದರ ನಂತರ ಹುಲ್ಲಿನ ಹೊದಿಕೆಯು ತೆಗೆಯಲ್ಪಟ್ಟಾಗ, ಒಂದು ಬೀಜದ-ಪಾತಿಯು ಸೃಷ್ಟಿಯಾಗಬಹುದು. ಈ ಕೆಳಗಿನ ನೀಲಗಿರಿ ಜಾತಿಗಳು ದಕ್ಷಿಣ ಆಫ್ರಿಕಾದಲ್ಲಿ ದೇಶೀಯವಾಗಿಸಲ್ಪಡುವಲ್ಲಿ ಸಮರ್ಥವಾಗಿವೆ: E. ಕ್ಯಾಮಲ್ಡ್ಯುಲೆನ್ಸಿಸ್ , E. ಕ್ಲಾಡೊಕ್ಯಾಲಿಕ್ಸ್ , E. ಡೈವರ್ಸಿಕಲರ್ , E. ಗ್ರಾಂಡಿಸ್ ಮತ್ತು E. ಲೆಹ್‌ಮನ್ನೀ .[೨೩]
ಜಿಂಬಾಬ್ವೆ ದಕ್ಷಿಣ ಆಫ್ರಿಕಾದಲ್ಲಿರುವಂತೆ, ನೀಲಗಿರಿ ಯ ಅನೇಕ ಜಾತಿಗಳು, ಮುಖ್ಯವಾಗಿ ಮರದ ದಿಮ್ಮಿ ಹಾಗೂ ಉರುವಲಿಗಾಗಿ ಜಿಂಬಾಬ್ವೆಯೊಳಗೆ ಪರಿಚಯಿಸಲ್ಪಟ್ಟವು, ಮತ್ತು E. ರೋಬಸ್ಟಾ ಹಾಗೂ E. ಟೆರೆಟಿಕಾರ್ನಿಸ್ ಜಾತಿಗಳು ಅಲ್ಲಿಯೇ ದೇಶೀಯವಾಗಿಸಲ್ಪಟ್ಟವು ಎಂದು ದಾಖಲಿಸಲ್ಪಟ್ಟಿವೆ.[೨೩]
ಯುರೋಪ್
[ಬದಲಾಯಿಸಿ]ಯುರೋಪಿಗೆ ಸೇರಿದ ಪೋರ್ಚುಗಲ್, ಅಝೋರ್ಸ್ ಮತ್ತು ಗ್ಯಾಲೀಷಿಯಾಗಳಲ್ಲಿ, ಅನೇಕ ಓಕ್ ಕಾಡುಗಳು ನೀಲಗಿರಿ ಮರಗಳಿಂದ ಪಲ್ಲಟಗೊಳಿಸಲ್ಪಟ್ಟವು. ಇವು ತಿರುಳುಮರಕ್ಕಾಗಿ ಬೆಳೆಸಲ್ಪಟ್ಟಿದ್ದು, ವನ್ಯಜೀವಿಕುಲದ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಉಂಟುಮಾಡಿದವು.
ಇಟಲಿಯಲ್ಲಿ, ಕೇವಲ ೧೯ನೇ ಶತಮಾನದ ಅಂತ್ಯದ ವೇಳೆಗೆ ನೀಲಗಿರಿಯ ಆಗಮನವಾಯಿತು ಮತ್ತು ಮಲೇರಿಯಾವನ್ನು ಕಿತ್ತೊಗೆಯುವ ಸಲುವಾಗಿ ಜೌಗಾದ ನೆಲವನ್ನು ಒಣಗಿಸುವ ಗುರಿಯೊಂದಿಗೆ, ಬೃಹತ್ ಪ್ರಮಾಣದ ನೆಡುತೋಪುಗಳು ೨೦ನೇ ಶತಮಾನದ ಶುರುವಿನಲ್ಲಿ ಪ್ರಾರಂಭವಾದವು. ಇಟಲಿಯ ಹವಾಮಾನದಲ್ಲಿನ ಅವುಗಳ ಕ್ಷಿಪ್ರ ಬೆಳವಣಿಗೆ ಹಾಗೂ ಗಾಳಿತಡೆಗಳಾಗಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಮೆರೆದಿದ್ದ ಇದು, ಸಾರ್ಡಿನಿಯಾ ಮತ್ತು ಸಿಸಿಲಿ ದ್ವೀಪಗಳೂ ಸೇರಿದಂತೆ ದೇಶದ ಮಧ್ಯಭಾಗ ಹಾಗೂ ದಕ್ಷಿಣ ಭಾಗದಲ್ಲಿ ಅವು ಒಂದು ಸಾಮಾನ್ಯ ದೃಶ್ಯವಾಗುವಂತೆ ಮಾಡಿತು. ಅವುಗಳಿಂದ ಉತ್ಪಾದಿಸಲ್ಪಡುವ ವಿಶಿಷ್ಟ ರೀತಿಯ ವಾಸನೆಯನ್ನು ಬೀರುವ ಹಾಗೂ ರುಚಿಯನ್ನು ಹೊಂದಿರುವ ಜೇನುತುಪ್ಪಕ್ಕಾಗಿಯೂ ಅವುಗಳಿಗೆ ಮಹತ್ವ, ಬೆಲೆ ಸಿಕ್ಕಿದೆ. ಇಟಲಿಯಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ನೀಲಗಿರಿಯ ಪ್ರಭೇದವೆಣದರೆ ಯೂಕಲಿಪ್ಟಸ್ ಕ್ಯಾಮಲ್ಡ್ಯುಲೆನ್ಸಿಸ್.[೨೪]
ಇತಿಹಾಸ
[ಬದಲಾಯಿಸಿ]ಯುರೋಪನ್ ಆರಂಭಿಕ ಪರಿಶೋಧಕರು ಹಾಗೂ ಸಂಗ್ರಾಹಕರಿಂದ ನೀಲಗಿರಿ ಮರಗಳು ಕಾಣಲ್ಪಟ್ಟಿರಬಹುದಾದರೂ, ಸಸ್ಯವಿಜ್ಞಾನದ ಅವುಗಳ ಯಾವುದೇ ಸಂಗ್ರಹಗಳೂ ೧೭೭೦ರವರೆಗೂ ಆದಂತೆ ಕಂಡುಬಂದಿಲ್ಲ. ಈ ಸಮಯದಲ್ಲಿ ಜೋಸೆಫ್ ಬ್ಯಾಂಕ್ಸ್ ಮತ್ತು ಡೇನಿಯೆಲ್ ಸೊಲ್ಯಾಂಡರ್ ಎಂಬಿಬ್ಬರು ಕ್ಯಾಪ್ಟನ್ ಜೇಮ್ಸ್ ಕುಕ್ ಎಂಬಾತನೊಂದಿಗೆ ಬಾಟನಿ ಕೊಲ್ಲಿಯಲ್ಲಿ ಬಂದಿಳಿದರು. ಅಲ್ಲಿ ಅವರು E. ಗಮ್ಮಿಫೆರಾ ದ ಮಾದರಿಗಳನ್ನು ಸಂಗ್ರಹಿಸಿದರು ಮತ್ತು ನಂತರದಲ್ಲಿ, ಕ್ವೀನ್ಸ್‌ಲೆಂಡ್ ನ ಉತ್ತರ ಭಾಗದಲ್ಲಿನ ಎಂಡೀವರ್ ನದಿಯ ಸಮೀಪ E. ಪ್ಲಾಟಿಫಿಲ್ಲಾ ವನ್ನು ಸಂಗ್ರಹಿಸಿದರು; ಈ ಎರಡು ಜಾತಿಗಳ ಪೈಕಿ ಯಾವುದಕ್ಕೂ ಆ ಸಮಯದಲ್ಲಿ ಈ ರೀತಿಯ ಹೆಸರನ್ನಿಡಲಿಲ್ಲ.
೧೭೭೭ರಲ್ಲಿ, ಕುಕ್‌ನ ಮೂರನೇ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ, ದಕ್ಷಿಣ ಭಾಗದ ಟಾಸ್ಮೇನಿಯಾದಲ್ಲಿನ ಬ್ರೂನಿ ದ್ವೀಪದಲ್ಲಿ ಡೇವಿಡ್ ನೆಲ್ಸನ್ ಎಂಬಾತ ಒಂದು ನೀಲಗಿರಿಯನ್ನು ಸಂಗ್ರಹಿಸಿದ. ಈ ಮಾದರಿಯನ್ನು ಲಂಡನ್‌ನಲ್ಲಿನ ಬ್ರಿಟಿಷ್ ವಸ್ತುಸಂಗ್ರಹಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು, ಮತ್ತು ಆ ಸಮಯದಲ್ಲಿ ಲಂಡನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್'ಹೆರಿಟಿಯರ್ ಎಂಬ ಫ್ರೆಂಚ್ ಸಸ್ಯವಿಜ್ಞಾನಿ ಇದಕ್ಕೆ ಯೂಕಲಿಪ್ಟಸ್ ಆಬ್ಲಿಕಾ ಎಂಬ ಹೆಸರಿಟ್ಟ. ಹೂವು ಬೆಳೆಯುತ್ತಾ ಹೋದಂತೆ ಬೆಳೆಯುತ್ತಿರುವ ಹೂವಿನ ಭಾಗಗಳನ್ನು ರಕ್ಷಿಸುವ ಮತ್ತು ಹೂಬಿಡುವ ಘಟ್ಟದಲ್ಲಿ ಹೊರಹೊಮ್ಮುವ ಕೇಸರಗಳ ಒತ್ತಡದಿಂದಾಗಿ ಉದುರುವ, ಹೂವಿನ ಮೊಗ್ಗಿನ ಬೀಜಕಣಕೋಶದ ಮುಚ್ಚಳಕ್ಕೆ ಉಲ್ಲೇಖಿಸಲ್ಪಡುವ, "ಚೆನ್ನಾಗಿ" ಮತ್ತು "ಆವರಿಸಲ್ಪಟ್ಟಿರುವ" ಎಂಬ ಅರ್ಥವನ್ನು ಕೊಡುವ ಯೂ ಮತ್ತು ಕಲಿಪ್ಟಸ್ ಎಂಬ ಗ್ರೀಕ್ ಮೂಲಪದಗಳಿಂದ ಅವನು ಸಾರ್ವತ್ರಿಕ ಹೆಸರನ್ನು ರಚಿಸಿದ. ಎಲ್ಲಾ ನೀಲಗಿರಿಗಳಿಗೂ ಸಾಮಾನ್ಯವಾಗಿರುವ ಒಂದು ಲಕ್ಷಣವನ್ನು ಎಲ್'ಹೆರಿಟಿಯರ್ ಆರಿಸಿದ ಎಂಬುದು ಒಂದು ಹೆಚ್ಚೂಕಮ್ಮಿ ಆಕಸ್ಮಿಕ ಘಟನೆಯಂತಿತ್ತು.
ಆಬ್ಲಿಕಾ ಎಂಬ ಹೆಸರು "ಆಬ್ಲಿಕ್" (ಓರೆಯಾದ) ಎಂಬ ಅರ್ಥವನ್ನು ಕೊಡುವ ಆಬ್ಲಿಕಸ್ ಎಂಬ ಲ್ಯಾಟಿನ್ ಭಾಷೆಯ ಪದದಿಂದ ಜನ್ಯವಾಯಿತು. ಆಬ್ಲಿಕ್ ಎಂಬ ಪದವು ಒಂದು ಎಲೆಯ ತಳಭಾಗವನ್ನು ವಿವರಿಸುವ ಸಸ್ಯವಿಜ್ಞಾನದ ಪದವಾಗಿದ್ದು, ಇದರಲ್ಲಿ ಎಲೆಯ ಅಲುಗಿನ ಎರಡು ಪಾರ್ಶ್ವಗಳು ಅಸಮನಾದ ಉದ್ದವನ್ನು ಹೊಂದಿರುತ್ತವೆ ಮತ್ತು ಒಂದೇ ಜಾಗದಲ್ಲಿ ಎಲೆಯ ತೊಟ್ಟನ್ನು ಅವು ಸಂಧಿಸುವುದಿಲ್ಲ.
E. ಆಬ್ಲಿಕಾ ೧೭೮೮-೮೯ರಲ್ಲಿ ಪ್ರಕಟಿಸಲ್ಪಟ್ಟಿತು ಮತ್ತು ಇದು ಆಸ್ಟ್ರೇಲಿಯಾದ ಮೊದಲ ಅಧಿಕೃತ ಐರೋಪ್ಯ ವಸಾಹತೀಕರಣದೊಂದಿಗೆ ಏಕಕಾಲಿಕವಾಗಿ ಸಂಭವಿಸಿತು. ಆಗಿನ ಮತ್ತು ೧೯ನೇ ಶತಮಾನದ ಅಂತ್ಯದ ನಡುವಣ ನೀಲಗಿರಿ ಯ ಮತ್ತಷ್ಟು ಹೆಚ್ಚಿನ ಜಾತಿಗಳು ಹೆಸರಿಸಲ್ಪಟ್ಟವು ಮತ್ತು ಪ್ರಕಟಿಸಲ್ಪಟ್ಟವು. ಇವುಗಳ ಪೈಕಿ ಬಹುಪಾಲು ಜೇಮ್ಸ್ ಎಡ್ವರ್ಡ್ ಸ್ಮಿತ್ ಎಂಬ ಇಂಗ್ಲಿಷ್ ಸಸ್ಯವಿಜ್ಞಾನಿಯಿಂದ ಮಾಡಲ್ಪಟ್ಟವು ಮತ್ತು ಬಹುಪಾಲು ಜಾತಿಗಳು ನಿರೀಕ್ಷಿಸಲ್ಪಟ್ಟಂತೆ ಸಿಡ್ನಿ ವಲಯದ ಮರಗಳಾಗಿದ್ದವು. ಇವುಗಳಲ್ಲಿ, ಆರ್ಥಿಕವಾಗಿ ಬೆಲೆಬಾಳುವ ಅಥವಾ ಮಹತ್ವವುಳ್ಳ E. ಪಿಲ್ಯುಲ್ಯಾರಿಸ್ , E. ಸ್ಯಾಲಿಗ್ನಾ ಮತ್ತು E. ಟೆರೆಟಿಕಾರ್ನಿಸ್ ಮೊದಲಾದವು ಸೇರಿವೆ.
ಜಾಕ್ವೆಸ್ ಲ್ಯಾಬಿಲ್ಲಾರ್ಡಿಯೇರ್ ಎಂಬ ಫ್ರೆಂಚ್ ಸಸ್ಯವಿಜ್ಞಾನಿಯಿಂದ ಮೊದಲಿಗೆ ಸಂಗ್ರಹಿಸಲ್ಪಟ್ಟ ಮತ್ತು ತರುವಾಯ ಹೆಸರಿಸಲ್ಪಟ್ಟ ಪಶ್ಚಿಮದ ಆಸ್ಟ್ರೇಲಿಯಾದ ಸ್ಥಳೀಯ ನೀಲಗಿರಿ ಯು ಯೇಟ್ (E. ಕಾರ್ನುಟಾ ) ಆಗಿತ್ತು. ಇದನ್ನು ಆತ ಈಗ ಎಸ್ಪೆರಾನ್ಸ್ ಎಂದು ಹೆಸರಾಗಿರುವ ಪ್ರದೇಶದಲ್ಲಿ ೧೭೯೨ರಲ್ಲಿ ಸಂಗ್ರಹಿಸಿದ.[೮]
ಆಸ್ಟ್ರೇಲಿಯಾದ ಹಲವಾರು ಮಹಾನ್ ಸಸ್ಯವಿಜ್ಞಾನಿಗಳು, ಅದರಲ್ಲೂ ನಿರ್ದಿಷ್ಟವಾಗಿ ಹೇಳುವುದಾದರೆ ಫರ್ಡಿನೆಂಡ್ ವಾನ್ ಮ್ಯೂಯೆಲ್ಲರ್, ೧೯ನೇ ಶತಮಾನದ ಅವಧಿಯಲ್ಲಿ ಸಕ್ರಿಯರಾಗಿದ್ದರು. ನೀಲಗಿರಿ ಮರಗಳ ಕುರಿತಾದ ಇವರ ಕೆಲಸವು, ೧೮೬೭ರಲ್ಲಿ ಬಂದ ಜಾರ್ಜ್ ಬೆಂಥಾಮ್‌ನ ಫ್ಲೋರಾ ಆಸ್ಟ್ರೇಲಿಯೆನ್ಸಿಸ್ ಎಂಬ ಕೃತಿಯಲ್ಲಿನ ಕುಲದ ಮೊಟ್ಟಮೊದಲ ಸಮಗ್ರ ದಾಖಲೀಕರಣಕ್ಕೆ ಮಹತ್ವದ ಕಾಣಿಕೆಯನ್ನು ನೀಡಿದವು. ಈ ಕೃತಿಯು ಇಂದು ಆಸ್ಟ್ರೇಲಿಯಾದ ಸಂಪೂರ್ಣ ಸಸ್ಯಸಂಪತ್ತಿನ ಕುರಿತಾದ ಏಕೈಕ ಗ್ರಂಥವಾಗಿ ಉಳಿದುಕೊಂಡಿದೆ. ಈ ದಾಖಲೆಯು ಸದರಿ ಕುಲಕ್ಕೆ ಸಂಬಂಧಿಸಿದ ಅತ್ಯಂತ ಮುಖ್ಯವಾದ ಹಾಗೂ ಮುಂಚಿನ ವ್ಯವಸ್ಥಿತ ನಿರೂಪಣೆಯಾಗಿದೆ. ಇದನ್ನು ಬೆಂಥಾಮ್ ಐದು ಸರಣಿಗಳಾಗಿ ವಿಂಗಡಿಸಿದ್ದು, ಅವನ ವೈಲಕ್ಷಣ್ಯಗಳು ಕೇಸರಗಳ ವಿಶಿಷ್ಟ ಲಕ್ಷಣಗಳನ್ನು ಆಧರಿಸಿದ್ದವು, ನಿರ್ದಿಷ್ಟವಾಗಿ ಪರಾಗಕೋಶಗಳು (ಮ್ಯೂಯೆಲ್ಲರ್, ೧೮೭೯-೮೪), ಜೋಸೆಫ್ ಹೆನ್ರಿ ಮೇಡನ್‌ನಿಂದ (೧೯೦೩-೩೩) ವಿಸ್ತರಿಸಲ್ಪಟ್ಟ ಕಾರ್ಯ ಹಾಗೂ ವಿಲಿಯಂ ಫಾರಿಸ್ ಬ್ಲೇಕೆಲಿಯಿಂದ (೧೯೩೪) ನಡೆದ ಮತ್ತಷ್ಟು ವಿಸ್ತರಣೆಯನ್ನು ಇದು ಆಧರಿಸಿದೆ. ಪರಾಗಕೋಶದ ವ್ಯವಸ್ಥೆಯು ಕಾರ್ಯಸಾಧ್ಯವಾಗುವಲ್ಲಿ ತೀರಾ ಸಂಕೀರ್ಣವಾಗಿತ್ತು ಮತ್ತು ತೀರಾ ಇತ್ತೀಚಿನ ವ್ಯವಸ್ಥಿತ ಕೆಲಸವು ಮೊಗ್ಗುಗಳು, ಹಣ್ಣುಗಳು, ಎಲೆಗಳು ಹಾಗೂ ತೊಗಟೆಯ ವಿಶಿಷ್ಟ ಲಕ್ಷಣಗಳ ಮೇಲೆ ಗಮನಹರಿಸಿದೆ.
ಇವನ್ನೂ ನೋಡಿ
[ಬದಲಾಯಿಸಿ]ಛಾಯಾಚಿತ್ರ ಸಂಪುಟ
[ಬದಲಾಯಿಸಿ]-
ಬೀಜಕಣಕೋಶದ ಮುಚ್ಚಳದ ಇರುವಿಕೆಯೊಂದಿಗೆ ಹಣ್ಣು (ಕೋಶಗಳು) & ಮೊಗ್ಗುಗಳನ್ನು ತೋರಿಸುತ್ತಿರುವ ಯೂಕಲಿಪ್ಟಸ್ ಸೈಡೆರ್ಗ್ಸೈಲಾನ್ ಜಾತಿ.
-
ವಿಕ್ಟೋರಿಯಾದ ಪೂರ್ವ ಜಿಪ್ಸ್ಲೆಂಡ್ನಲ್ಲಿರುವ ನೀಲಗಿರಿ ಕಾಡು. ಬಹುತೇಕವಾಗಿ ಯೂಕಲಿಪ್ಟಸ್ ಆಲ್ಬೆನ್ಸ್ (ಬಿಳಿಯ ಪೆಟ್ಟಿಗೆ).
-
ವಿಕ್ಟೋರಿಯಾದ ಪೂರ್ವ ಜಿಪ್ಸ್ಲೆಂಡ್ನಲ್ಲಿರುವ ನೀಲಗಿರಿ ಕಾಡು. ಬಹುತೇಕವಾಗಿ ಯೂಕಲಿಪ್ಟಸ್ ಆಲ್ಬೆನ್ಸ್ (ಬಿಳಿಯ ಪೆಟ್ಟಿಗೆ).
-
ವಿಕ್ಟೋರಿಯಾದ ಪೂರ್ವ ಜಿಪ್ಸ್ಲೆಂಡ್ನಲ್ಲಿರುವ ನೀಲಗಿರಿ ಕಾಡು. ಬಹುತೇಕವಾಗಿ ಯೂಕಲಿಪ್ಟಸ್ ಆಲ್ಬೆನ್ಸ್ (ಬಿಳಿಯ ಪೆಟ್ಟಿಗೆ).
-
ತನ್ನ ಕೊಂಬೆಗಳ ಮೂಲಕ ಸೂರ್ಯನ ಬೆಳಕು ನುಸುಳಿಕೊಂಡು ಬರುತ್ತಿರುವುದನ್ನು ತೋರಿಸುತ್ತಿರುವ ಒಂದು ನೀಲಗಿರಿ ಮರ.
-
ಆಸ್ಟ್ರೇಲಿಯಾದ ರಾಜಧಾನಿಯ ಭೂಪ್ರದೇಶದಲ್ಲಿನ ರೆಡ್ ಹಿಲ್ನಲ್ಲಿರುವ ಯೂಕಲಿಪ್ಟಸ್ ಬ್ರಿಜ್ಸಿಯಾನಾ (ಸೇಬಿನ ಪೆಟ್ಟಿಗೆ).
-
ದಕ್ಷಿಣ ಇಂಗ್ಲೆಂಡ್ನಲ್ಲಿ ನೆಡಲಾಗಿರುವ ಯೂಕಲಿಪ್ಟಸ್ ಗನ್ನೀ ಜಾತಿ. ಕಾಂಡದ ಕೆಳಗಿನ ಭಾಗವು ಐವಿ ಬಳ್ಳಿಯಲ್ಲಿ ಮುಚ್ಚಲ್ಪಟ್ಟಿದೆ.
-
ಯೂಕಲಿಪ್ಟಸ್ ಸಿನೆರಿಯಾ x ಪಲ್ವೆರುಲೆಂಟಾ - ರಾಷ್ಟ್ರೀಯ ಸಸ್ಯವಿಜ್ಞಾನದ ತೋಟ, ಕ್ಯಾನ್ಬೆರಾ
-
ಯೂಕಲಿಪ್ಟಸ್ ಗಾಲ್
-
ಯೂಕಲಿಪ್ಟಸ್ ಗ್ರಾಂಡಿಸ್ ಅಜೆಂಟೀನಾದ ಬ್ಯೂನೋಸ್ ಐರೆಸ್ ಪ್ರಾಂತ್ಯ.
-
ವಾಯವ್ಯ ಸ್ಪೇನ್ನಲ್ಲಿನ ಗ್ಯಾಲೀಷಿಯಾದಲ್ಲಿರುವ ವಿವೆರಿಯೋ ಸಮೀಪದಲ್ಲಿರುವ ನೀಲಗಿರಿ ನೆಡುತೋಪು. ಬಹುತೇಕವಾಗಿ ಯೂಕಲಿಪ್ಟಸ್ ಗ್ಲಾಬ್ಯುಲಸ್
-
ಆಸ್ಟ್ರೇಲಿಯಾದ ಆಲ್ಪ್ಸ್ನಲ್ಲಿ ಚಳಿಗಾಲದಲ್ಲಿ ಕಂಡುಬರುವ ಒಂದು ಹಿಮದ ಅಂಟು (E. ಪಾಸಿಫ್ಲೋರಾ)
-
ನ್ಯೂ ಸೌತ್ ವೇಲ್ಸ್‌ನ ಬುರ್ರಾದಲ್ಲಿರುವ ಯೂಕಲಿಪ್ಟಸ್ ರುಬಿಡಾ (ಮೋಂಬತ್ತಿ ತೊಗಟೆಯ ಅಂಟು).
-
ಹೀತ್ಕೋಟ್ ನ್ಯಾಷನಲ್ ಪಾರ್ಕ್ನಲ್ಲಿರುವ ಈ ಮರವು ಒಂದು ಗಂಭೀರವಾದ ಸಮಸ್ಯೆಯನ್ನು ಹೊಂದಿದೆ.
-
ನ್ಯೂ ಸೌತ್ ವೇಲ್ಸ್‌ನ ದಕ್ಷಿಣದ ತೀರಪ್ರದೇಶದಲ್ಲಿರುವ
-
ಲಂಡನ್ನ ಕ್ಯೂ ಗಾರ್ಡನ್ಸ್ನಲ್ಲಿನ ಯೂಕಲಿಪ್ಟಸ್ ಚಾಪ್ಮಾನಿಯಾನಾ (ಬೊಗೊಂಗ್ ಅಂಟು)
-
ವಿಕ್ಟೋರಿಯಾದ ಷೇರ್ಬ್ರೂಕ್ ಕಾಡಿನಲ್ಲಿರುವ ಯೂಕಲಿಪ್ಟಸ್ ರೆಗ್ನಾನ್ಸ್ ಮರಗಳು
ಟಿಪ್ಪಣಿಗಳು
[ಬದಲಾಯಿಸಿ]- ↑ "Eucalyptus L'Hér". Germplasm Resources Information Network. United States Department of Agriculture. 2009-01-27. Retrieved 2010-02-28.
- ↑ ಸನ್‌ಸೆಟ್ ವೆಸ್ಟರ್ನ್ ಗಾರ್ಡನ್ ಬುಕ್, ೧೯೯೫:೬೦೬–೬೦೭
- ↑ Gledhill, D. (2008). The Names of Plants (4 ed.). Cambridge University Press. p. 158. ISBN 9780521866453.
- ↑ ೪.೦ ೪.೧ ಲುಝಾರ್ J. (೨೦೦೭). ದಿ ಪೊಲಿಟಿಕಲ್ ಇಕಾಲಜಿ ಆಫ್ ಎ "ಫಾರೆಸ್ಟ್ ಟ್ರಾನ್ಸಿಷನ್": ಯೂಕಲಿಪ್ಟಸ್ ಫಾರೆಸ್ಟ್ರಿ ಇನ್ ದಿ ಸದರ್ನ್ ಪೆರುವಿಯನ್. ಎಥ್ನೊಬಾಟನಿ ರಿಸರ್ಚ್ & ಅಪ್ಲಿಕೇಷನ್ಸ್ .
- ↑ ೫.೦ ೫.೧ ವರ್ಲ್ಡ್‌ವಾಚ್ ಇನ್‌ಸ್ಟಿಟ್ಯೂಟ್. (೨೦೦೭) ಸ್ಟೇಟ್ ಆಫ್ ದಿ ವರ್ಲ್ಡ್: ಅವರ್ ಅರ್ಬನ್ ಫ್ಯೂಚರ್ .
- ↑ ೬.೦ ೬.೧ ೬.೨ VOA. (೨೦೦೫) ಸೌತ್ ಆಫ್ರಿಕಾ ವಾಟರ್ ಪ್ರಾಜೆಕ್ಟ್ ಕ್ಲಿಯರ್ಸ್ ವಾಟರ್-ಗಜ್ಲಿಂಗ್ ಏಲಿಯನ್ ಪ್ಲ್ಯಾಂಟ್ ಇನ್‌ಫೆಸ್ಟೇಷನ್ಸ್.
- ↑ ೭.೦ ೭.೧ Santos, Robert L. (1997). "Section Three: Problems, Cares, Economics, and Species". The Eucalyptus of California. California State University. Archived from the original on 2010-06-02. Retrieved 2010-05-06.
- ↑ ೮.೦ ೮.೧ ೮.೨ ೮.೩ ಬ್ರೂಕರ್ & ಕ್ಲೀನಿಗ್ (೨೦೦೧)
- ↑ "Tasmania's Ten Tallest Giants". Tasmanian Giant Trees Consultative Committee. Retrieved 2009-01-07.
- ↑ "Eucalytus Roulette (con't)". Robert Sward: Poet, Novelist and Workshop Leader. Archived from the original on 2007-07-26. Retrieved 2010-05-06.
- ↑ Mrs. M. Grieve. "A Modern Herbal:Eucalyptus". Retrieved 2005-01-27.
- ↑ Santos, Robert L (1997). "Section Two: Physical Properties and Uses". The Eucalyptus of California. California State University. Archived from the original on 2011-07-16. Retrieved 2010-05-06.
- ↑ http://www.cdc.gov/od/oc/media/pressrel.r050428.htm
- ↑ ಇಂಡಿಯಾ ಫ್ಲಿಂಟ್, ಬಟಾನಿಕಲ್ ಆಲ್‌ಕೆಮಿಸ್ಟ್. "ದಿ ಸೆಂಟ್ ಆಫ್ ಯೂಕಲಿಪ್ಟಸ್." http://www.indiaflint.com/page6.htm Archived 2010-06-14 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೧೫.೦ ೧೫.೧ ರೀಡ್, J.B. & ಪಾಟ್ಸ್, B.M. (೨೦೦೫). ಯೂಕಲಿಪ್ಟ್ ಬಯಾಲಜಿ. ರೀಡ್ ಮತ್ತು ಇತರರು (ಸಂಪಾದಿತ) ಕೃತಿಯಾದ ವೆಜಿಟೇಷನ್ ಆಫ್ ಟಾಸ್ಮೇನಿಯಾದಲ್ಲಿರುವುದು, ಪುಟಗಳು ೧೯೮-೨೨೩. ಆಸ್ಟ್ರೇಲಿಯಾದ ಸರ್ಕಾರ.
- ↑ Santos, Robert L. (1997). "Seeds of Good or Seeds of Evil?". The Eucalyptus of California. California State University. Archived from the original on 2006-09-10. Retrieved 2010-05-06.
- ↑ Williams, Ted (2002). "America's Largest Weed". Audubon Magazine. Archived from the original on 2006-07-08. Retrieved 2010-05-06.
{{cite web}}
: Unknown parameter|month=
ignored (help) - ↑ Henter, Heather (2005). "Tree Wars: The Secret Life of Eucalyptus". Alumni. University of California, San Diego. Archived from the original on 2009-03-17. Retrieved 2010-05-06.
{{cite web}}
: Unknown parameter|month=
ignored (help) - ↑ "Brazil Eucalyptus Potential Productivity". Colorado State University. Archived from the original on 2012-12-12. Retrieved 2010-05-06.
- ↑ ಪ್ಯಾನ್‌ಖರ್ಸ್ಟ್ ಪುಟ ೨೪೬
- ↑ ಡೇವಿಡ್ ಬಕ್ಸ್‌ಟನ್, ಟ್ರಾವೆಲ್ಸ್ ಇನ್ ಎಥಿಯೋಪಿಯಾ , ಎರಡನೇ ಆವೃತ್ತಿ (ಲಂಡನ್: ಬೆನ್, ೧೯೫೭), ಪುಟ ೪೮
- ↑ ಪ್ಯಾನ್‌ಖರ್ಸ್ಟ್ ಪುಟ ೨೪೭
- ↑ ೨೩.೦ ೨೩.೧ ೨೩.೨ ಪಾಲ್‌ಗ್ರೇವ್, K. C. ೨೦೦೨: ಟ್ರೀಸ್ ಆಫ್ ಸದರ್ನ್ ಆಫ್ರಿಕಾ . ಸ್ಟ್ರೂಯಿಕ್ ಪಬ್ಲಿಷರ್ಸ್, ಕೇಪ್‌ಟೌನ್.
- ↑ http://www.europaoggi.it/content/view/791/114/
ಆಕರಗಳು
[ಬದಲಾಯಿಸಿ]- Boland, D.J. (2006). Forest Trees of Australia. Collingwood, Victoria: CSIRO Publishing.
{{cite book}}
: Unknown parameter|coauthors=
ignored (|author=
suggested) (help) ೫ನೇ ಆವೃತ್ತಿ. ISBN ೦-೬೪೩-೦೬೯೬೯-೦ - Brooker, M.I.H. (2006). Field Guide to Eucalyptus. Melbourne: Bloomings.
{{cite book}}
: Unknown parameter|coauthors=
ignored (|author=
suggested) (help) ಮೂರನೇ ಆವೃತ್ತಿ. ISBN ೧-೮೭೬೪೭೩-೫೨-೫ ಸಂಪುಟ ೧. ಸೌತ್-ಈಸ್ಟರ್ನ್ ಆಸ್ಟ್ರೇಲಿಯಾ. - Pankhurst, Richard (1968). Economic History of Ethiopia. Addis Ababa: Haile Selassie I University.
ಬಾಹ್ಯ ಕೊಂಡಿಗಳು
[ಬದಲಾಯಿಸಿ]Find more about ನೀಲಗಿರಿ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
- EUCLID ಸ್ಯಾಂಪಲ್ Archived 2009-10-13 ವೇಬ್ಯಾಕ್ ಮೆಷಿನ್ ನಲ್ಲಿ., CSIRO
- ದಿ ಯೂಕಲಿಪ್ಟ್ ಪೇಜ್ Archived 2009-04-24 ವೇಬ್ಯಾಕ್ ಮೆಷಿನ್ ನಲ್ಲಿ.
- ಯೂಕಲಿಂಕ್ Archived 2010-06-09 ವೇಬ್ಯಾಕ್ ಮೆಷಿನ್ ನಲ್ಲಿ.
- ಕರೆನ್ಸಿ ಕ್ರೀಕ್ ಅರ್ಬೊರೇಟಂ - ಯೂಕಲಿಪ್ಟ್ ರಿಸರ್ಚ್
- ಯೂಕಲಿಪ್ಟಸ್ ಆನ್ಲೈನ್ ಬುಕ್ & ನ್ಯೂಸ್ಲೆಟರ್ ಬೈ ಸೆಲ್ಸೋ ಫೋಲ್ಕೆಲ್ (೨೦೦೫ರಿಂದ ಇಂದಿನವರೆಗೆ)
- ಯೂಕಲಿಪ್ಟಸ್ ಗ್ಲಾಬ್ಯುಲಸ್ ವರ್ಗೀಕರಣದ ಛಾಯಾಚಿತ್ರಗಳು: ಮರ, ಎಲೆಗಳು, ತೊಗಟೆ
- ಹ್ಯಾಂಡ್ಬುಕ್ ಆಫ್ ಎನರ್ಜಿ ಕ್ರಾಪ್ಸ್[೧] ಡ್ಯೂಕ್, ಜೇಮ್ಸ್ A. ೧೯೮೩.
- ದಿ ಯೂಕಲಿಪ್ಟಸ್ ಆಫ್ ಕ್ಯಾಲಿಫೋರ್ನಿಯಾ: ಸೀಡ್ಸ್ ಆಫ್ ಗುಡ್ ಆರ್ ಸೀಡ್ಸ್ ಆಫ್ ಇವಿಲ್? Archived 2006-09-10 ವೇಬ್ಯಾಕ್ ಮೆಷಿನ್ ನಲ್ಲಿ. ಸ್ಯಾಂಟೋಸ್, ರಾಬರ್ಟ್. ೧೯೯೭ ಡೆನೇರ್, CA : ಆಲಿ-ಕೇಸ್ ಪಬ್ಲಿಕೇಷನ್ಸ್
- ಇಂಪ್ಯಾಕ್ಟ್ಸ್ ಆಫ್ ಮಾನೋಕಲ್ಚರ್: ದಿ ಕೇಸ್ ಆಫ್ ಯೂಕಲಿಪ್ಟಸ್ ಪ್ಲಾಂಟೇಷನ್ಸ್ ಇನ್ ಥೈಲೆಂಡ್ Archived 2010-06-03 ವೇಬ್ಯಾಕ್ ಮೆಷಿನ್ ನಲ್ಲಿ. ಎ ಪೇಪರ್ ಫಾರ್ ದಿ ಮಾನೋಕಲ್ಚರ್ಸ್: ಎನ್ವಿರಾನ್ಮೆಂಟಲ್ ಅಂಡ್ ಸೋಷಿಯಲ್ ಎಫೆಕ್ಟ್ಸ್ ಅಂಡ್ ಸಸ್ಟೇನಬಲ್ ಆಲ್ಟರ್ನೇಟಿವ್ಸ್ ಕಾನ್ಫರೆನ್ಸ್, ಜೂನ್ ೨-೬ ೧೯೯೬, ಸಾಂಗ್ಖ್ಲಾ, ಥೈಲೆಂಡ್, ಪ್ರಿಪೇರ್ಡ್ ಬೈ ಅರೀರಾಟ್ ಕಿಟ್ಟಿಸಿರಿ, ರೂರಲ್ ರೀಕನ್ಸ್ಟ್ರಕ್ಷನ್ ಅಂಡ್ ಫ್ರೆಂಡ್ಸ್ ಅಸೋಸಿಯೇಷನ್ (RRAFA), ಬ್ಯಾಂಗ್ಕಾಕ್, ಥೈಲೆಂಡ್
- EUCALYPTOLOGICS: ಇನ್ಫರ್ಮೇಷನ್ ರಿಸೋರ್ಸಸ್ ಆನ್ ಯೂಕಲಿಪ್ಟಸ್ ಕಲ್ಟಿವೇಷನ್ ಅರೌಂಡ್ ದಿ ವರ್ಲ್ಡ್ ಇಗ್ಲೇಷಿಯಸ್ ಟ್ರಾಬ್ಯಾಡೊ, ಗುಸ್ಟಾವೊ (೨೦೦೭ರಿಂದ ಇಂದಿನವರೆಗೆ)
- ಅಮೆರಿಕನ್ ಬಟಾನಿಕಲ್ ಕೌನ್ಸಿಲ್ ವೆಬ್ಸೈಟ್ Archived 2008-02-19 ವೇಬ್ಯಾಕ್ ಮೆಷಿನ್ ನಲ್ಲಿ. ಯೂಕಲಿಪ್ಟಸ್, ಯೂಕಲಿಪ್ಟಸ್ ಎಸೆನ್ಷಿಯಲ್ ಆಯಿಲ್ ಇನ್ಫರ್ಮೇಷನ್ ಫ್ರಂ ದಿ ಅಮೆರಿಕನ್ ಬಟಾನಿಕಲ್ ಕೌನ್ಸಿಲ್
- ಇಸ್ರೇಲ್ ಪ್ರೆಸೆಂಟ್ಸ್ ಯೂಕಲಿಪ್ಟಸ್ ರಿಸರ್ಚರ್ಸ್ ವಿತ್ ಟ್ರೀ-ಸೇವಿಂಗ್ ಸಲೂಷನ್
ಔಷಧೀಯ ಸಂಪನ್ಮೂಲಗಳು, ನೀಲಗಿರಿ ಸಾರತೈಲ
[ಬದಲಾಯಿಸಿ]- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- Pages with unresolved properties
- Articles with 'species' microformats
- Taxobox articles missing a taxonbar
- Articles with unsourced statements from August 2007
- Articles with invalid date parameter in template
- Wikipedia articles needing clarification from May 2009
- Wikipedia articles needing clarification from June 2009
- Vague or ambiguous time from May 2009
- ನೀಲಗಿರಿ
- ಸಸ್ಯಗಳು
- ಮರಗಳು