ಕಸ

ವಿಕಿಪೀಡಿಯ ಇಂದ
Jump to navigation Jump to search
ಕಸದ ಬುಟ್ಟಿಯಲ್ಲಿರುವ ಕಸ

ಕಸ ಎಂದರೆ ಮಾನವರು ಎಸೆಯುವ ತ್ಯಾಜ್ಯ ವಸ್ತು, ಸಾಮಾನ್ಯವಾಗಿ ಉಪಯುಕ್ತವಾಗಿಲ್ಲ ಎಂದು ಗ್ರಹಿಸಿ ಎಸೆಯಲಾಗುತ್ತದೆ. ಈ ಪದವು ಸಾಮಾನ್ಯವಾಗಿ ಶಾರೀರಿಕ ತ್ಯಾಜ್ಯ ಉತ್ಪನ್ನಗಳು, ಸಂಪೂರ್ಣವಾಗಿ ದ್ರವ ಅಥವಾ ಅನಿಲ ತ್ಯಾಜ್ಯಗಳು, ಮತ್ತು ವಿಷಕಾರಿ ತ್ಯಾಜ್ಯ ಉತ್ಪನ್ನಗಳನ್ನು ಒಳಗೊಳ್ಳುವುದಿಲ್ಲ. ಕಸವನ್ನು ಸಾಮಾನ್ಯವಾಗಿ ವಿಂಗಡಿಸಿ ನಿರ್ದಿಷ್ಟ ಬಗೆಗಳ ವಿಲೇವಾರಿಗೆ ಸೂಕ್ತವಾದ ವಸ್ತುಗಳ ಪ್ರಕಾರಗಳಾಗಿ ವರ್ಗೀಕರಿಸಲಾಗುತ್ತದೆ.[೧]

ನಗರ ಪ್ರದೇಶಗಳಲ್ಲಿ, ಎಲ್ಲ ಬಗೆಯ ಕಸವನ್ನು ಸಂಗ್ರಹಿಸಿ ಪೌರ ಘನತ್ಯಾಜ್ಯವಾಗಿ ಸಂಸ್ಕರಿಸಲಾಗುತ್ತದೆ; ಕಸವನ್ನು ಸ್ವೀಕರಿಸಲು ವಿನ್ಯಾಸಗೊಳಿಸಲಾದ ಸೌಕರ್ಯಗಳಲ್ಲಿ ಕಸವನ್ನು ಸಂಸ್ಕರಿಸಲಾಗುತ್ತದೆ, ಆದರೆ ಸ್ವಲ್ಪ ಕಸವು ವಿಲೇವಾರಿಯಾಗದೆ ಪರಿಸರದಲ್ಲಿ ಸೇರಿಬಿಡುತ್ತದೆ. ತಪ್ಪಾಗಿ ವಿಲೇವಾರಿಯಾಗುವ ಪೌರ ಘನತ್ಯಾಜ್ಯವು ಪರಿಸರವನ್ನು ಪ್ರವೇಶಿಸುತ್ತದೆ. ಆದರೆ, ಗಮನಾರ್ಹವಾಗಿ, ಉತ್ಪತ್ತಿಯಾದ ಕಸದಲ್ಲಿ ಕೇವಲ ಸಣ್ಣ ಪ್ರಮಾಣವು ಪರಿಸರವನ್ನು ಸೇರುತ್ತದೆ. ಬಹುಪಾಲು ಕಸವನ್ನು ಪರಿಸರವನ್ನು ಪ್ರವೇಶಮಾಡದಂತೆ ಬಂದೋಬಸ್ತು ಮಾಡಲು ಉದ್ದೇಶಿಸಿರುವ ರೀತಿಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಪ್ರಾಣಿಯ ಭಾಗಗಳನ್ನು ಬಳಸಿ ಉಳಿದುಕೊಂಡ ಮೂಳೆ ತುಣುಕುಗಳು ಮತ್ತು ಸಲಕರಣೆ ತಯಾರಿಕೆಯಲ್ಲಿ ಬಿಸಾಡಿದ ಕಲ್ಲಿನ ತುಣುಕಗಳಿಂದ ಆರಂಭಗೊಂಡು, ಮಾನವನು ಇತಿಹಾಸದಾದ್ಯಂತ ಕಸವನ್ನು ಸೃಷ್ಟಿಸುತ್ತಿದ್ದಾನೆ. ಮುಂಚಿನ ಮಾನವರ ಗುಂಪುಗಳು ಕೃಷಿಯಲ್ಲಿ ತೊಡಗಿಕೊಳ್ಳಲು ಆರಂಭಿಸಿದ ಪ್ರಮಾಣವನ್ನು ಅವರ ಕಸದಲ್ಲಿನ ಪ್ರಾಣಿ ಮೂಳೆಗಳ ಬಗೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿ ಅಂದಾಜಿಸಬಹುದು. ಪ್ರಾಗೈತಿಹಾಸಿಕ ಅಥವಾ ನಾಗರಿಕತೆ ಪೂರ್ವದ ಮಾನವರಿಂದ ಕಸವನ್ನು ಹಲವುವೇಳೆ ತಿಪ್ಪೆಗಳಲ್ಲಿ ಸಂಗ್ರಹಿಸಲಾಗುತ್ತಿತ್ತು. ಇವು ಎಸೆದ ಆಹಾರ, ಇದ್ದಲು, ಚಿಪ್ಪಿನ ಉಪಕರಣಗಳು, ಅಥವಾ ಒಡೆದ ಮಣ್ಣಿನ ವಸ್ತುಗಳ ಮಿಶ್ರಣದಂತಹ ವಸ್ತುಗಳನ್ನು ಹೊಂದಿರಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Susan Strasser, Waste and Want: A Social History of Trash (2014), p. 6-7.
"https://kn.wikipedia.org/w/index.php?title=ಕಸ&oldid=885029" ಇಂದ ಪಡೆಯಲ್ಪಟ್ಟಿದೆ