ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಭೂಕುಸಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನವರಿ 1997ರಲ್ಲಿ ಸ್ಯಾನ್ ಮಟೆಯೋ ಕೌಂಟಿ, ಕ್ಯಾಲಿಫೋರ್ನಿಯಾನಲ್ಲಿ(USA) ಸಂಭವಿಸಿದ "ತೀವ್ರ" ಭೂಕುಸಿತದ ಗಣಕೀಕೃತ ಅನುಕರಣೆ

ಭೂಕುಸಿತ ಅಥವಾ ಭೂಪಾತ ವೆಂಬುದು ಒಂದು ಭೂವೈಜ್ಞಾನಿಕ ಸಂಗತಿಯಾಗಿದ್ದು, ಇದರಲ್ಲಿ ವ್ಯಾಪಕವಾಗಿ ಭೂಮಿಯ ಚಲನೆಯು ಒಳಗೊಂಡಿರುತ್ತದೆ, ಉದಾಹರಣೆಗೆ ಬಂಡೆ ಉರುಳುವುದು, ಪ್ರಪಾತಗಳು ಮತ್ತಷ್ಟು ಆಳವಾಗುವುದು ಹಾಗು ಲಘುವಾಗಿ ಬಂಡೆಚೂರುಗಳ ರಾಶಿಗಳು ನುಗ್ಗುವುದು ನಡೆಯುತ್ತದೆ, ಇದು ಕಡಲಾಚೆಗೆ, ಸಮುದ್ರದಡಿಯಲ್ಲಿ ಹಾಗು ಸಮುದ್ರ ತೀರದ ಪರಿಸರಗಳಲ್ಲಿ ನಡೆಯುತ್ತದೆ. ಆದಾಗ್ಯೂ ಗುರುತ್ವ ಚಲನೆಯು ಮೂಲವಾಗಿ ಭೂಕುಸಿತ ಉಂಟುಮಾಡುವ ಕ್ರಿಯಾಶಕ್ತಿಯಾಗಿದ್ದರೂ, ಇತರ ಅಂಶಗಳೂ ಸಹ ಮೂಲ ಇಳಿಜಾರು ಸ್ಥಿರತೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಮಾದರಿಯಾಗಿ, ಪೂರ್ವಭಾವಿ ಅಂಶಗಳು ನಿರ್ದಿಷ್ಟವಾದ ಉಪ-ಮೇಲ್ಮೈ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುತ್ತವೆ, ಇದು ಪ್ರದೇಶದ/ಇಳಿಜಾರಿನ ಕುಸಿತಕ್ಕೆ ಗುರಿಯಾಗುವ ಸಂಭವವಿರುತ್ತದೆ, ಆದರೆ ಇದಕ್ಕೆ ವಿರುದ್ಧವಾಗಿ ವಾಸ್ತವವಾಗಿ ಭೂಕುಸಿತವು ಸಾಮಾನ್ಯವಾಗಿ ಉಂಟಾಗುವ ಮುಂಚೆ ಸರಣಿಕ್ರಿಯಾಕಾರಿಯಾಗಿರುವ ಅಗತ್ಯವಿರುತ್ತದೆ.

ಕಾರಣಗಳು

[ಬದಲಾಯಿಸಿ]
ಸ್ಪಾನಿಶ್ ಪ್ರಾಂತಗಳಾದ ಟಿಬೆಸ್, ಪೋನ್ಸ್, ಪೋರ್ಟೊ ರಿಕೊನಲ್ಲಿ ಸಂಭವಿಸಿದ ಮಮೆಯೆಸ್ ಭೂಕುಸಿತ, ಇದು 100ಕ್ಕೂ ಅಧಿಕ ಮನೆಗಳನ್ನು ನಾಶಪಡಿಸಿತು, ಇದು ಭಾರಿ ಮಳೆಯ ಕಾರಣದಿಂದಾಗಿ ಸಂಭವಿಸಿತು ಹಾಗು ಕೆಲವೊಂದು ಮೂಲಗಳ ಪ್ರಕಾರ ಮಿಂಚಿನಿಂದ ಸಂಭವಿಸಿರಬಹುದು.

ಸ್ಥಿರದಿಂದ ಅಸ್ಥಿರ ಪರಿಸ್ಥಿತಿಗೆ ಇಳಿಜಾರಿನ ಸ್ಥಿರತೆಯು ಬದಲಾವಣೆಯಾದಾಗ ಭೂಕುಸಿತಗಳು ಉಂಟಾಗುತ್ತದೆ. ಇಳಿಜಾರಿನ ಸ್ಥಿರತೆಯಲ್ಲಿನ ಬದಲಾವಣೆಯು ಹಲವಾರು ಅಂಶಗಳಿಂದ ಉಂಟಾಗಬಹುದು, ಇವುಗಳು ಒಟ್ಟಾರೆಯಾಗಿ ಅಥವಾ ಒಂದೇ ಒಂದು ಅಂಶವು ಭೂಕುಸಿತಕ್ಕೆ ಕಾರಣವಾಗಬಹುದು. ಭೂಕುಸಿತವು ಉಂಟಾಗುವ ಸ್ವಾಭಾವಿಕ ಕಾರಣಗಳಲ್ಲಿ ಈ ಕೆಳಕಂಡವುಗಳು ಸೇರಿವೆ:

  • ಅಂತರ್ಜಲದ (ಮಳೆನೀರು) ಒತ್ತಡವು ಇಳಿಜಾರಿನ ಅಸ್ಥಿರತೆಗೆ ಕಾರಣವಾಗುತ್ತದೆ
  • ಸಮಗ್ರ ಸಸ್ಯಕ ರಚನೆ, ಮಣ್ಣಿನ ಪೌಷ್ಟಿಕಗಳು, ಹಾಗು ಮಣ್ಣಿನ ರಚನೆಯ(ಉದಾಹರಣೆಗೆ ಕಾಳ್ಕಿಚ್ಚಿನ ನಂತರ ಉಂಟಾಗುವ ಪರಿಣಾಮ) ನಷ್ಟ ಅಥವಾ ಕೊರತೆ
  • ನದಿಗಳು ಅಥವಾ ಸಾಗರದ ಅಲೆಗಳಿಂದ ಇಳಿಜಾರಿನ ಕೆಳತುದಿಯಲ್ಲಿ ಉಂಟಾಗುವ ಸವೆತ
  • ಹಿಮಕರಗುವಿಕೆ, ಹಿಮನದಿಗಳ ದ್ರವೀಕರಣ, ಅಥವಾ ಭಾರಿ ಮಳೆಯಿಂದ ಆರ್ದ್ರೀಕರಣದ ಮೂಲಕ ಇಳಿಜಾರುಗಳು ದುರ್ಬಲಗೊಳ್ಳುತ್ತದೆ
  • ಸಾಕಷ್ಟು ಸ್ಥಿರತೆಯನ್ನು ಹೊಂದಿರದ ಇಳಿಜಾರುಗಳು ಭೂಕಂಪಗಳನ್ನು ಉಂಟುಮಾಡುತ್ತದೆ.
  • ಭೂಕಂಪಗಳು ದ್ರವೀಕರಣವನ್ನು ಉಂಟುಮಾಡುತ್ತದೆ ಇದು ಇಳಿಜಾರುಗಳ ಅಸ್ಥಿರತೆಗೆ ಕಾರಣವಾಗುತ್ತದೆ
  • ಜ್ವಾಲಾಮುಖಿ ಸ್ಫೋಟಗಳು

ಭೂಕುಸಿತಗಳು ಮಾನವನ ಕಾರ್ಯಚಟುವಟಿಕೆಗಳಿಂದ ಮತ್ತಷ್ಟು ಅಧಿಕಗೊಂಡಿವೆ, ಮನುಷ್ಯನು ಹುಟ್ಟು ಹಾಕುವ ಕಾರಣಗಳಲ್ಲಿ:ಅರಣ್ಯನಾಶ, ಕೃಷಿ ಹಾಗು ಕಟ್ಟಡ ನಿರ್ಮಾಣಗಳು ಸೇರಿವೆ, ಇವುಗಳು ಈಗಾಗಲೇ ದುರ್ಬಲವಾಗಿರುವ ಇಳಿಜಾರುಗಳನ್ನು ಮತ್ತಷ್ಟು ಅಸ್ಥಿರಗೊಳಿಸುತ್ತವೆ

  • ಯಂತ್ರೋಪಕರಣಗಳು ಅಥವಾ ವಾಹನ ದಟ್ಟಣೆಯಿಂದ ಉಂಟಾಗುವ ಕಂಪನಗಳು
  • ಸ್ಫೋಟ
  • ಮಣ್ಣುದಿಬ್ಬವು ಇಳಿಜಾರಿನ ಆಕಾರವನ್ನು ವಿಸ್ತರಿಸುತ್ತದೆ, ಅಥವಾ ಅಸ್ತಿತ್ವದಲ್ಲಿರುವ ಹೊಸ ಹೊರೆಗಳ ಮೇಲೆ ಹೇರುತ್ತದೆ
  • ಆಳ ಕಡಿಮೆಯಿರುವ ಮಣ್ಣುಗಳು, ಆಳವಾಗಿ-ಬೇರುಬಿಟ್ಟ ಸಸ್ಯಕಗಳನ್ನು ತೆಗೆದುಹಾಕುವುದರಿಂದ, ಇದು ಆಧಾರಶಿಲೆಗೆ ಕೊಲ್ಲುವಿಯಂ ಅನ್ನು ಬಂಧಿಸುತ್ತದೆ.
  • ನಿರ್ಮಾಣ, ಕೃಷಿ ಅಥವಾ ವನ್ಯಪ್ರದೇಶದಲ್ಲಿ ಚಟುವಟಿಕೆಗಳು(ಮರ ಕಡಿಯುವುದು) ಇದು ಮಣ್ಣು ಅಂತರ್ವ್ಯಾಪಿಸುವ ನೀರಿನ ಪ್ರಮಾಣವನ್ನು ಬದಲಾವಣೆ ಮಾಡುತ್ತದೆ.
ಸ್ವೀಡನ್ ನ ಸುರ್ಟೆಯಲ್ಲಿ ಸಂಭವಿಸಿದ ಭೂಕುಸಿತ, 1950.ಒಬ್ಬ ವ್ಯಕ್ತಿಯನ್ನು ಆಹುತಿ ತೆಗೆದುಕೊಂಡಂತಹ ಕೆಮ್ಮಣ್ಣು ಕುಸಿತ.

ವಿಧಗಳು

[ಬದಲಾಯಿಸಿ]

ಶಿಲಾಖಂಡರಾಶಿಗಳ ಚಲನೆ

[ಬದಲಾಯಿಸಿ]

ನೀರಿನೊಂದಿಗೆ ಸಂಪೂರಿತವಾಗುವ ಇಳಿಜಾರಿನ ವಸ್ತುಗಳು ಶಿಲಾಖಂಡರಾಶಿಗಳ ಚಲನೆ ಅಥವಾ ಮಣ್ಣಿನ ಹರಿವನ್ನು ಅಭಿವೃದ್ಧಿಪಡಿಸಬಹುದು. ಇದರ ಪರಿಣಾಮವಾಗಿ ಉಂಟಾಗುವ ಬಂಡೆಯ ತಿಳಿ ಕೆಸರು ಹಾಗು ಮಣ್ಣು, ಮರಗಳು, ಮನೆಗಳು ಹಾಗು ಕಾರ್ ಗಳನ್ನು ಬೇರ್ಪಡಿಸಬಹುದು, ಈ ರೀತಿಯಾಗಿ ಸೇತುವೆಗಳು ಹಾಗು ಉಪನದಿಗಳಿಗೆ ನಿರ್ಬಂಧವನ್ನು ಒಡ್ಡುವುದರ ಮೂಲಕ ಮಾರ್ಗದುದ್ದಕ್ಕೂ ಪ್ರವಾಹವನ್ನು ಉಂಟುಮಾಡುತ್ತದೆ.

ಶಿಲಾಖಂಡರಾಶಿಗಳ ಚಲನೆಯನ್ನು ಸಾಮಾನ್ಯವಾಗಿ ಹಠಾತ್ ಪ್ರವಾಹವೆಂದು ತಪ್ಪಾಗಿ ಗ್ರಹಿಸಲಾಗುತ್ತದೆ, ಇದು ಸಂಪೂರ್ಣವಾಗಿ ವಿವಿಧ ಪ್ರಕ್ರಿಯೆಯಾಗಿದೆ.

ಮಣ್ಣಿನಿಂದ ಕೂಡಿದ ಶಿಲಾಖಂಡರಾಶಿಗಳ ಚಲನೆಯು ಆಲ್ಪೈನ್ ಪ್ರದೇಶಗಳಲ್ಲಿ ಕಟ್ಟಡಗಳು ಹಾಗು ಅಡಿವ್ಯವಸ್ಥೆಗಳಿಗೆ ತೀವ್ರತರವಾದ ಹಾನಿಯನ್ನು ಉಂಟುಮಾಡುವುದರ ಜೊತೆಗೆ ಸಾಮಾನ್ಯವಾಗಿ ಮಾನುಶ್ಯರ ಜೀವಕ್ಕೆ ಕುತ್ತು ತರಬಹುದು. ಮಣ್ಣಿನಿಂದ ಕೂಡಿದ ಶಿಲಾಖಂಡ ರಚನೆಗಳ ಹರಿವು ಇಳಿಜಾರು-ಸಂಬಂಧಿ ಅಂಶಗಳ ಪರಿಣಾಮವಾಗಿರುತ್ತದೆ ಹಾಗು ಅಷ್ಟೇನೂ ಆಳವಿಲ್ಲದ ಭೂಕುಸಿತಗಳು ಹಳ್ಳದ ಆಧಾರಗಳಿಗೆ ಹಾನಿಯನ್ನು ಉಂಟುಮಾಡಬಹುದು, ಇದು ತಾತ್ಕಾಲಿಕವಾಗಿ ನೀರಿನ ತಡೆಯನ್ನು ಉಂಟು ಮಾಡುತ್ತದೆ. ಶೇಖರಣೆಯಾದ ನೀರಿಗೆ ಪೋಲಾದರೆ, "ಡಾಮಿನೊ ಪರಿಣಾಮ"ವು ಸೃಷ್ಟಿಯಾಗಬಹುದು, ಜೊತೆಗೆ ಹರಿಯುವ ನೀರಿನ ರಾಶಿಯ ಪ್ರಮಾಣದಲ್ಲಿ ಗಮನಾರ್ಹವಾಗಿ ಬೆಳವಣಿಗೆಯಾಗಬಹುದು, ಇದು ಹಳ್ಳದಲ್ಲಿರುವ ಶಿಲಾಖಂಡರಾಶಿಗಳನ್ನು ಹೀರಿಕೊಳ್ಳುತ್ತದೆ. ಘನ-ದ್ರವದ ಮಿಶ್ರಣವು 2 ಟನ್ ಗಳಷ್ಟು/m³ ಸಾಂದ್ರತೆಯನ್ನು ಹಾಗು 14 m/sನಷ್ಟು ವೇಗವನ್ನು ತಲುಪಬಹುದು (ಚಿಯರ್ಲೆ ಹಾಗು ಲುಯಿನೊ, 1998; ಅರಟ್ಟನೋ, 2003). ಈ ಪ್ರಕ್ರಿಯೆಗಳು ಸಾಧಾರಣವಾಗಿ ಮೊದಲು ತೀವ್ರತರವಾಗಿ ರಸ್ತೆಯ ತಡೆಯನ್ನು ಉಂಟುಮಾಡುತ್ತದೆ, ಇದಕ್ಕೆ ರಸ್ತೆಯ ಮೇಲೆ ಸಂಗ್ರಹವಾದ ಸಂಚಯವಷ್ಟೇ ಅಲ್ಲ(ಹಲವಾರು ಕ್ಯೂಬಿಕ್ ಮೀಟರ್ ಗಳಿಂದ ಹಿಡಿದು ನೂರಾರು ಕ್ಯೂಬಿಕ್ ಮೀಟರ್ ಗಳವರೆಗೆ), ಆದರೆ ಕೆಲವೊಂದು ಸಂದರ್ಭಗಳಲ್ಲಿ ಹೊಳೆಯ ಮೇಲೆ ನಿರ್ಮಾಣಗೊಂಡಿರುವ ಸೇತುವೆಗಳು ಅಥವಾ ರಸ್ತೆಮಾರ್ಗಗಳು ಅಥವಾ ರೈಲ್ವೆ ಕ್ರಾಸಿಂಗ್ ನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಹಾನಿಯು, ಮಣ್ಣಿನಿಂದ ಕೂಡಿದ-ಶಿಲಾಖಂಡರಾಶಿಗಳ ಚಲನೆಯ ಸಾಮಾನ್ಯ ಕೀಳಂದಾಜಿನಿಂದ ಉಂಟಾಗುತ್ತದೆ: ಉದಾಹರಣೆಗೆ, ಆಲ್ಪೈನ್ ಕಣಿವೆಗಳಲ್ಲಿ, ಸೇತುವೆಗಳು ಸಾಮಾನ್ಯವಾಗಿ ಚಲನೆಯ ಅಪ್ಪಳಿಕೆಯ ಬಲದಿಂದ ನಾಶವಾಗುತ್ತದೆ ಏಕೆಂದರೆ ಇವುಗಳನ್ನು ಕೇವಲ ನೀರಿನ ಹರಿವನ್ನು ಪರಿಗಣಿಸಿ ನಿರ್ಮಿಸಲಾಗಿರುತ್ತದೆ. ಇಟಾಲಿಯನ್ ಆಲ್ಪ್ಸ್ ನಲ್ಲಿರುವ ಒಂದು ಸಣ್ಣ ಬೋಗುಣಿಗೆ ಶಿಲಾಖಂಡರಾಶಿಗಳ ಚಲನೆಯಿಂದ ಪರಿಣಾಮ ಉಂಟಾಗಿದೆ, ಚಿಯರ್ಲೆ ಹಾಗು ಲುಯಿನೊ (1998)[ಸೂಕ್ತ ಉಲ್ಲೇಖನ ಬೇಕು] ಮುಖ್ಯ ಕಾಲುವೆಯ ಮಧ್ಯದ ವಿಸ್ತರಣೆಯಲ್ಲಿ ಸ್ಥಿತವಾಗಿದ್ದ ವಿಭಾಗದಲ್ಲಿ 750 m3/ಗಳಷ್ಟು ಅತ್ಯಧಿಕ ವಿಸರ್ಜನೆಯು ಉಂಟಾಗಿದೆಯೆಂದು ಅಂದಾಜಿಸಲಾಗಿದೆ. ಅದರದೇ ಅಡ್ಡ ವಿಭಾಗದಲ್ಲಿ, ನಿರೀಕ್ಷಿತ ನೀರಿನ ಗರಿಷ್ಠ ಹರಿವು (HEC-1ನಿಂದ) 19 m³/ಗಳಷ್ಟಿತ್ತು, ಉಂಟಾದ ಶಿಲಾಖಂಡರಾಶಿಗಳ ಚಲನೆಗೆ ಹೋಲಿಸಿದರೆ ಇದರ ಪ್ರಮಾಣವು 40 ಬಾರಿ ಕಡಿಮೆಯಾಗಿತ್ತು.

ಭೂಮಿಯ ಚಲನೆ

[ಬದಲಾಯಿಸಿ]
ಗುಯೆರ್ರೆರೋ, ಮೆಕ್ಸಿಕೋನಲ್ಲಿ ಸಂಭವಿಸಿದ ಬಂಡೆ ಕುಸಿತ

ಭೂಮಿಯಚಲನೆಗಳು ಇಳಿಜಾರಿನ ಕೆಳಭಾಗದಲ್ಲಿ ನಡೆಯುತ್ತದೆ, ಸಂಪೂರಿತವಾದ, ನುಣುಪಾದ ಪದಾರ್ಥಗಳ ಅರೆದ್ರವಗಳು ಚಲಿಸುತ್ತವೆ, ಇದು ಯಾವುದೇ ವೇಗದಲ್ಲಿ ನಿಧಾನವಾಗಿ ಹಿಡಿದು ರಭಸವಾಗಿ ಚಲಿಸುತ್ತವೆ. ಮಾದರಿಯಾಗಿ, ಇವುಗಳು 0.17ರಿಂದ ಹಿಡಿದು 20 km/hನ ವೇಗದವರೆಗೂ ಚಲಿಸಬಹುದು. ಆದಾಗ್ಯೂ ಇವುಗಳು ಮಣ್ಣಿನಚಲನೆಗಳನ್ನು ಹೆಚ್ಚಾಗಿ ಹೊಳುತ್ತವಾದರೂ, ಒಟ್ಟಾರೆಯಾಗಿ ಇವುಗಳು ನಿಧಾನವಾಗಿ ಚಲಿಸುತ್ತವೆ ಹಾಗು ಇವುಗಳನ್ನು ಒಳಭಾಗದಿಂದ ಚಲಿಸುವ ಘನ ಪದಾರ್ಥಗಳು ಆವರಿಸಿರುತ್ತವೆ. ಇವುಗಳು ದ್ರವದ ಚಲನೆಗಿಂತ ಭಿನ್ನವಾಗಿದ್ದರೂ ಇವುಗಳು ರಭಸವಾಗಿ ಚಲಿಸುತ್ತವೆ. ಕೆಮ್ಮಣ್ಣು, ನಯವಾದ ಮರುಳು ಹಾಗು ಮೆಕ್ಕಲು, ಹಾಗು ನುಣುಪಾಗಿರುವ, ಉಷ್ಣರೂಪಿತ ಪದರ್ಥಗಳೆಲ್ಲವೂ ಸಹ ಭೂಮಿಯಚಲನೆಯ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಭೂಮಿಚಲನೆಯ ವೇಗವು, ಸ್ವತಃ ಚಲನೆಯಲ್ಲಿ ಎಷ್ಟು ನೀರಿನ ಅಂಶವಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ: ಚಲನೆಯಲ್ಲಿ ಹೆಚ್ಚು ನೀರಿನ ಅಂಶವಿದ್ದರೆ, ವೇಗವು ಅಧಿಕವಾಗಿರುತ್ತದೆ.

ಈ ಚಲನೆಗಳು ಸಾಮಾನ್ಯವಾಗಿ ನುಣುಪಾದ ಪದಾರ್ಥದ ರಾಶಿಯಲ್ಲಿರುವ ಸೂಕ್ಷ್ಮ ರಂಧ್ರದ ಒತ್ತಡಗಳು, ಸೂಕ್ಷ್ಮ ರಂಧ್ರದ ನೀರಿನಿಂದ ಆಧರಿಸಿದ ಪದಾರ್ಥದ ತೂಕವು ತಡೆಯುವಷ್ಟು ಅಧಿಕಗೊಂಡಾಗ, ಇದು ಮಹತ್ವವಾಗಿ ಪದಾರ್ಥದ ಆಂತರಿಕ ವ್ಯತ್ಯಾಸದ ಬಲವನ್ನು ತಗ್ಗಿಸುತ್ತದೆ. ಇದು ಈ ಮೂಲಕವಾಗಿ ಒಂದು ಹಿಗ್ಗುದ ಹಾಲೆಯನ್ನು ಸೃಷ್ಟಿಸುತ್ತದೆ, ಇದು ನಿಧಾನವಾಗಿ, ಉರುಳುವುದರೊಂದಿಗೆ ಮುಂದೆ ಸಾಗುತ್ತದೆ. ಈ ಹಾಳೆಗಳು ಹರಡುತ್ತಿದ್ದಂತೆ, ಸಂಚಯದ ಜಲನಿರ್ಗಮನವು ಅಧಿಕಗೊಳ್ಳುತ್ತದೆ ಹಾಗು ಅಧಿಕಾಂಶವು ಒಣಗಿ ಹೋಗುತ್ತದೆ, ಆ ಮೂಲಕ ಚಲನೆಯ ಒಟ್ಟಾರೆ ವೇಗವು ತಗ್ಗುತ್ತದೆ. ಈ ಪ್ರಕ್ರಿಯೆಯು ಹರಿವನ್ನು ಮತ್ತಷ್ಟು ಸಾಂದ್ರಗೊಳಿಸುತ್ತದೆ. ಭೂಮಿಚಲನೆಗಳ ಗೆಡ್ಡೆಯಾಕಾರದ ವಿಧವು ಪ್ರೇಕ್ಷಣೀಯವಾಗಿರುವುದಿಲ್ಲ, ಆದರೆ ವೇಗವಾಗಿ ಚಲಿಸುವ ತಮ್ಮ ಪ್ರತಿರೂಪಕ್ಕಿಂತ ಹೆಚ್ಚು ಸಾಮಾನ್ಯವಾಗಿರುತ್ತವೆ. ಇವುಗಳ ಮೇಲ್ಭಾಗದಲ್ಲಿ ಒಂದು ಕುಸಿತವು ಬೆಳವಣಿಗೆಯಾಗಿರುತ್ತದೆ ಹಾಗು ಇವುಗಳು ಸಾಮಾನ್ಯವಾಗಿ ಮೂಲದಲ್ಲಿರುವ ಕುಸಿತದಿಂದ ಹುಟ್ಟಿಕೊಂಡಿರುತ್ತವೆ.

ಭೂಮಿಯಚಲನೆಗಳು ಅಧಿಕ ಅವಕ್ಷೇಪನದ ಅವಧಿಗಳಲ್ಲಿ ಹೆಚ್ಚು ಸಂಭವಿಸುತ್ತವೆ, ಇದು ಕೆಳಭಾಗವನ್ನು ಸಂಪೂರಣಗೊಳಿಸುವುದರ ಜೊತೆಗೆ ಇಳಿಜಾರಿನ ಅಂಶಕ್ಕೆ ನೀರನ್ನು ಸೇರ್ಪಡೆ ಮಾಡುತ್ತದೆ. ಕೆಮ್ಮಣ್ಣು-ಮಾದರಿಯ ಪದಾರ್ಥವು ನೀರಿನೊಂದಿಗೆ ಭೂಮಿಯಚಲನೆಯಲ್ಲಿ ಒಳನುಗ್ಗಿದ ಸಂದರ್ಭದಲ್ಲಿ ಬಿರುಕುಗಳು ಉಂಟಾಗುತ್ತವೆ. ನಂತರದಲ್ಲಿ ನೀರು ಸೂಕ್ಷ್ಮರಂಧ್ರದ ಒತ್ತಡವನ್ನು ಹೆಚ್ಚಿಸುವುದರ ಜೊತೆಗೆ ಪದಾರ್ಥದ ವ್ಯತ್ಯಾಸ ಬಲವನ್ನು ತಗ್ಗಿಸುತ್ತದೆ.[]

ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತ

[ಬದಲಾಯಿಸಿ]
ಗೂಡೆಲ್ ಕ್ರೀಕ್ ಡೆಬ್ರಿಸ್ ಅವಲಾಂಚೆ, ವಾಶಿಂಗ್ಟನ್

ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು, ಕುಸಿತದ ಒಂದು ಮಾದರಿಯಾಗಿದ್ದು ಬಂಡೆಗಳ ಮಣ್ಣಿನ ಅಸ್ತವ್ಯಸ್ತ ಚಲನೆಯಿಂದ ವಿಶಿಷ್ಟವಾಗಿರುತ್ತದೆ ಹಾಗು ನೀರು ಅಥವಾ ಐಸ್ ನೊಂದಿಗೆ(ಅಥವಾ ಎರಡೂ) ಶಿಲಾಖಂಡರಾಶಿಗಳು ಮಿಶ್ರಣಗೊಂಡಿರುತ್ತವೆ. ಇವುಗಳು ಸಾಮಾನ್ಯವಾಗಿ ದಟ್ಟವಾದ ಸಸ್ಯಕ ಇಳಿಜಾರುಗಳ ಸಂಪೂರತೆಯಿಂದ ಸರಣಿಕ್ರಿಯಾಕಾರಿಯಾಗಿರುತ್ತದೆ, ಇದು ಮರದ ತುಂಡುಗಳು, ಸಣ್ಣ ಸಸ್ಯಕಗಳು ಹಾಗು ಇತರ ಶಿಲಾಖಂಡರಾಶಿಗಳ ಅಸಂಬದ್ಧ ಮಿಶ್ರಣವನ್ನು ಉಂಟುಮಾಡುತ್ತದೆ.[] ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು ಶಿಲಾಖಂಡರಾಶಿಗಳ ಕುಸಿತಕ್ಕಿಂತ ಭಿನ್ನವಾಗಿರುತ್ತದೆ ಏಕೆಂದರೆ ಇವುಗಳ ಚಲನೆಯು ಹೆಚ್ಚು ವೇಗವಾಗಿರುತ್ತದೆ. ಇದು ಸಾಮಾನ್ಯವಾಗಿ ಅಂಟಿಕೆಯ ಪರಿನಾಮವಾಗಿರುತ್ತದೆ ಅಥವಾ ಅಧಿಕ ನೀರಿನ ಅಂಶದ ಪರಿಣಾಮವಾಗಿರುತ್ತದೆ ಹಾಗು ಸಾಮಾನ್ಯವಾಗಿ ಕಡಿದಾದ ಇಳಿಜಾರುಗಳನ್ನು ಹೊಂದಿರುತ್ತದೆ.

ಚಲನೆ

ಶಿಲಾಖಂಡರಾಶಿಗಳ ಕುಸಿತವು ಸಾಧಾರಣವಾಗಿ ದೊಡ್ಡ ಬಂಡೆಗಳ ಉರುಳುವಿಕೆಯಿಂದ ಆರಂಭವಾಗುತ್ತದೆ, ಇದು ಕುಸಿತದ ಮೇಲ್ಭಾಗದಿಂದ ಆರಂಭಗೊಳ್ಳುತ್ತದೆ ಹಾಗು ಕೆಳಭಾಗಕ್ಕೆ ಕುಸಿವಾಗ ಬೇರೆ ಬೇರೆಯಾಗಿ ಛಿದ್ರಗೊಳ್ಳುತ್ತದೆ. ಇದು ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತಕ್ಕಿಂತ ನಿಧಾನವಾಗಿರುತ್ತದೆ. ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು ಬಹಳ ವೇಗವಾಗಿರುತ್ತದೆ ಹಾಗು ಸಂಪೂರ್ಣ ರಾಶಿಯು ಇಳಿಜಾರಿನಲ್ಲಿ ಕೆಳಕ್ಕೆ ಕುಸಿಯುವಾಗ ದ್ರವೀಕರಿಸುವಂತೆ ಕಂಡುಬರುತ್ತದೆ. ಇದು ಸಂಪೂರಿತ ಪದಾರ್ಥ, ಹಾಗು ಕಡಿದಾದ ಇಳಿಜಾರುಗಳ ಸಂಯೋಜನೆಯಿಂದ ಉಂಟಾಗುತ್ತದೆ. ಶಿಲಾಖಂಡರಾಶಿಗಳು ಇಳಿಜಾರಿನಿಂದ ಕೆಳಕ್ಕೆ ಚಲಿಸುವಾಗಿ ಇದು ಸಾಧಾರಣವಾಗಿ ಹಳ್ಳದ ಹರಿವನ್ನು ಅನುಸರಿಸುತ್ತದೆ, ಬೆಟ್ಟದಿಂದ ಕೆಳಕ್ಕೆ ಚಲಿಸುವಾಗ v-ಆಕಾರದ ಗುರುತನ್ನು ಉಳಿಸಿ ಹೋಗುತ್ತದೆ. ಇದು ಕುಸಿತದ ಹೆಚ್ಚು U-ಆಕಾರದ ಗುರುತಿನಿಂದ ಹೆಚ್ಚು ಭಿನ್ನವಾಗಿದೆ. ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು ಅವುಗಳ ರಭಸದ ಕಾರಣದಿಂದಾಗಿ ಇಳಿಜಾರಿನ ತಪ್ಪಲಿಗೆ ಬಹಳ ಬೇಗನೆ ಚಲಿಸಬಹುದು.[]

ಹುನ್ಜ ನದಿಯ ತಡೆಗಟ್ಟುವಿಕೆ

ಸ್ಟುರ್ಜ್ ಸ್ಟ್ರಾಮ್

[ಬದಲಾಯಿಸಿ]

ಒಂದು ಸ್ಟುರ್ಜ್ ಸ್ಟ್ರಾಮ್ ಬಹಳ ವಿರಳವಾಗಿ ಜರುಗುತ್ತದೆ, ಇದನ್ನು ಭೂಕುಸಿತದ ಅತ್ಯಲ್ಪವಾಗಿ ಗ್ರಹಿಸಲ್ಪಡುವ ವಿಧವಾಗಿದೆ, ಮಾದರಿಯಾಗಿ ದೀರ್ಘಾವಧಿಗೊಮ್ಮೆ ಕ್ರಮೇಣವಾಗಿ ಚಲಿಸುತ್ತದೆ. ಸಾಮಾನ್ಯವಾಗಿ ಬಹಳ ದೊಡ್ಡದಾದ ಈ ಇಳಿಜಾರುಗಳು ಅಪಸಾಮಾನ್ಯವಾಗಿ ಚಲನೀಯವಾಗಿರುತ್ತದೆ, ಕಡಿಮೆ ಕೋನದಲ್ಲಿ, ಚಪ್ಪಟ್ಟೆಯಾಗಿ, ಅಥವಾ ಸ್ವಲ್ಪಮಟ್ಟಿಗಿನ ಚಡಾವು ಕ್ಷೇತ್ರಗಳಲ್ಲಿ ಬಹಳ ದೂರಕ್ಕೆ ಚಲಿಸುತ್ತದೆ.

ಆಳ ಕಡಿಮೆಯಿರುವ ಭೂಕುಸಿತ

[ಬದಲಾಯಿಸಿ]
ಗಾರ್ಡ ಸರೋವರದಲ್ಲಿರುವ ಹೋಟೆಲ್ ಲಿಮೋನ್.ದೆವೋನಿಯನ್ ಪರ್ವತದ ಜೇಡಿ ಪದರುಗಲ್ಲುಗಳ ಭಾಗವನ್ನು ರಸ್ತೆಯ ನಿರ್ಮಾಣಕ್ಕಾಗಿ ತೆಗೆದುಹಾಕಲಾಗಿದೆ, ಇದು ಆಳವಾದ-ಇಳಿಜಾರನ್ನು ರೂಪಿಸುತ್ತದೆ.ಮೇಲ್ಭಾಗದ ದೊಡ್ಡ-ತುಂಡುಗಳು ಸ್ತರವಿನ್ಯಾಸದ ಸಮತಲದುದ್ದಕ್ಕೂ ಪ್ರತ್ಯೇಕಗೊಳ್ಳುತ್ತದೆ ಹಾಗು ಇದು ಬೆಟ್ಟದ ಕೆಳಭಾಗಕ್ಕೆ ಕುಸಿಯುತ್ತದೆ, ಇದು ಭೂಕುಸಿತದ ಕೆಳಭಾಗದಲ್ಲಿ ಬಂಡೆಯ ಅವ್ಯವಸ್ಥಿತವಾದ ಒಡ್ದನ್ನು ರೂಪಿಸುತ್ತದೆ.

ಭೂಕುಸಿತದಲ್ಲಿ ಕುಸಿತದ ಮೇಲ್ಮೈ ಮಣ್ಣಿನ ಹೊದಿಕೆ ಅಥವಾ ಹವಾಮಾನ ಆಧಾರಿತ ಆಧಾರಶಿಲೆಯೊಳಗೆ ಸ್ಥಿತವಾಗಿರುತ್ತದೆ (ಮಾದರಿಯಾಗಿ ಕೆಲವು ಡೆಸಿಮೀಟರ್ ಗಳಿಂದ ಹಿಡಿದು ಕೆಲವು ಮೀಟರ್ ಗಳ ಆಳಕ್ಕಿರುತ್ತದೆ). ಇವುಗಳು ಸಾಮಾನ್ಯವಾಗಿ ಶಿಲಾಖಂಡರಾಶಿಗಳ ಕುಸಿತಗಳು, ಶಿಲಾಖಂಡರಾಶಿಗಳ ಹರಿವು, ಹಾಗು ರಸ್ತೆಯ ವಿಭಜಿತ-ಇಳಿಜಾರುಗಳ ವಿಫಲತೆಗಳನ್ನು ಒಳಗೊಂಡಿರುತ್ತದೆ. ಇಳಿಜಾರಿನ ಕೆಳಗೆ ನಿಧಾನವಾಗಿ ಚಲಿಸುವ ಬಂಡೆಯ ಏಕೈಕ ದೊಡ್ಡ ಚೂರುಗಳಾಗಿ ಉಂಟಾಗುವ ಭೂಕುಸಿತಗಳನ್ನು ಕೆಲವೊಂದು ಬಾರಿ ಕಲ್ಲುಬಂಡೆಗಳ ಜಾರಿಕೆ ಎಂದು ಕರೆಯಲಾಗುತ್ತದೆ.

ಆಳವಿಲ್ಲದ ಭೂಕುಸಿತಗಳು ಸಾಮಾನ್ಯವಾಗಿ ಕಡಿಮೆ ಅಂತರ್ವ್ಯಾಪ್ಯವಾಗಿರುವ ಕೆಳಗಿನ ಮಣ್ಣುಗಳ ಮೇಲೆ ಅಧಿಕ ಅಂತರ್ವ್ಯಾಪ್ಯತೆಯನ್ನು ಹೊಂದಿರುವ ಇಳಿಜಾರು ಪ್ರದೇಶಗಳಲ್ಲಿ ಉಂಟಾಗುತ್ತದೆ. ಕಡಿಮೆ ಅಂತರ್ವ್ಯಾಪ್ಯತೆಯುಳ್ಳ, ಕೆಳಗಿನ ಮಣ್ಣು ತೀರ ಆಳವಾಗಿ ಅಲ್ಲದೆ ನೀರನ್ನು ತಡೆಯುತ್ತದೆ, ಅಧಿಕ ಅಂತರ್ವ್ಯಾಪ್ಯತೆಯುಳ್ಳ ಮಣ್ಣುಗಳು ಮೇಲ್ಭಾಗದ ಮಣ್ಣಿನಲ್ಲಿ ಅಧಿಕ ನೀರಿನ ಒತ್ತಡವನ್ನು ಉಂಟುಮಾಡುತ್ತದೆ. ಮೇಲ್ಭಾಗದ ಮಣ್ಣು ನೀರಿನಿಂದ ಭರ್ತಿಯಾಗಿ, ಭಾರವಾದರೆ, ಇಳಿಜಾರುಗಳು ಬಹಳ ಅಸ್ಥಿರವಾಗಿ ಪರಿಣಮಿಸುತ್ತದೆ ಹಾಗು ಕಡಿಮೆ ಅಂತರ್ವ್ಯಾಪ್ಯತೆಯುಳ್ಳ ಕೆಳಭಾಗ ಮಣ್ಣಿನ ಕುಸಿತಕ್ಕೆ ಕಾರಣವಾಗುತ್ತದೆ. ಬಿರುಕಿನೊಂದಿಗೆ ಕೂಡಿದ ಇಳಿಜಾರಿದ್ದು, ಮೇಲ್ಭಾಗದಲ್ಲಿ ಮರಳು ಅದರ ಮಣ್ಣಾಗಿದ್ದು, ಆಧಾರಶಿಲೆಯು ಇದರ ಕೆಳಭಾಗದ ಮಣ್ಣು ಎಂದು ಪರಿಗಣಿಸೋಣ. ತೀವ್ರತರವಾದ ಗಾಳಿಮಳೆಯ ಸಮಯದಲ್ಲಿ, ಆಧಾರಶಿಲೆಯು ಮಳೆ ನೀರನ್ನು ಬಿರುಕಿನ ಮೇಲ್ಭಾಗದ ಮಣ್ಣುಗಳು ಹಾಗು ಮರುಳಿನ ಮೇಲೆ ಬೀಳದಂತೆ ತಡೆಯುತ್ತದೆ. ಮೇಲ್ಭಾಗದ ಮಣ್ಣು ಸಂಪೂರಣಗೊಂಡು, ಭಾರವಾಗುವಾಗ, ಇದು ಅಧಾರಶಿಲೆಯ ಮೇಲೆ ಕುಸಿಯಲು ಆರಂಭಿಸುತ್ತದೆ ಹಾಗು ಇದು ತೀರ ಆಳವಿಲ್ಲದ ಭೂಕುಸಿತಕ್ಕೆ ಕಾರಣವಾಗುತ್ತದೆ. R. H. ಕ್ಯಾಂಪ್ಬೆಲ್, ಕ್ಯಾಲಿಫೋರ್ನಿಯಾದ ಸಾಂಟ ಕ್ರೂಜ್ ದ್ವೀಪದಲ್ಲಿ ಉಂಟಾಗುವ ತೀರ ಆಳವಿಲ್ಲದ ಭೂಕುಸಿತಗಳ ಬಗ್ಗೆ ಅಧ್ಯಯನ ನಡೆಸಿದರು. ಆಳದೊಂದಿಗೆ ವ್ಯಾಪ್ಯತೆಯು ಕಡಿಮೆಯಾಗುತ್ತಿದ್ದಂತೆ, ಎತ್ತರದಲ್ಲಿರುವ ನೀರಿನ ಚಪ್ಪಟ್ಟೆ ಮೇಲ್ಮೈ ಮಣ್ಣುಗಳಲ್ಲಿ ತೀವ್ರತರವಾದ ಅವಕ್ಷೇಪನದಲ್ಲಿ ಬೆಳವಣಿಗೆಯಾಗಬಹುದು. ಸೂಕ್ಷ್ಮರಂಧ್ರದ ಒತ್ತಡಗಳು ಪರಿಣಾಮಕಾರಿಯಾಗಿ ಸಾಮಾನ್ಯ ಒತ್ತಡವನ್ನು ತೀವ್ರತರ ಮಟ್ಟಕ್ಕೆ ತಗ್ಗಿಸಲು ಸಾಕಾದಾಗ, ವಿಫಲತೆಯು ಉಂಟಾಗುತ್ತದೆ.[]

ಆಳವಾದ ಭೂಕುಸಿತ

[ಬದಲಾಯಿಸಿ]
ಪಾಕಿಸ್ತಾನದಲ್ಲಿ ಮಣ್ಣಿನ ಕುಸಿತ ಹಾಗು ರೆಗಲಿತ್

ಭೂಕುಸಿತಗಳು, ಮರಗಳ ಗರಿಷ್ಠ ಆಳದ ಕೆಳಗೂ ಇಳಿಜಾರಿನ ಮೇಲ್ಮೈ ಸ್ಥಿತವಾಗಿರುತ್ತದೆ (ಮಾದರಿಯಾಗಿ ಹತ್ತು ಮೀಟರ್ ಗಳಿಗಿಂತಲೂ ಅಧಿಕ ಆಳ). ಆಳವಾದ ಭೂಕುಸಿತಗಳು ಸಾಮಾನ್ಯವಾಗಿ ಆಳವಾದ ರೆಗಲಿತ್ (ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನ ಪದಾರ್ಥ), ಆಧಾರಿತ ಬಂಡೆ, ಹಾಗು/ಅಥವಾ ಆಧಾರಶಿಲೆ ಹಾಗು ಬದಲಾವಣೆಯಾಗುವ, ಕ್ರಮಾವರ್ತನದ, ಅಥವಾ ಸಂಕೀರ್ಣ ಚಲನೆಯೊಂದಿಗೆ ಸಂಯೋಜನೆಯನ್ನು ಹೊಂದಿರುವ ದೊಡ್ಡದಾದ ಇಳಿಜಾರು ವಿಫಲತೆಯನ್ನು ಒಳಗೊಂಡಿರುತ್ತದೆ. ಇವುಗಳು ಮಾದರಿಯಾಗಿ ಬಹಳ ನಿಧಾನವಾಗಿ ಚಲಿಸುತ್ತವೆ, ಪ್ರತಿ ವರ್ಷ ಕೇವಲ ಹಲವಾರು ಮೀಟರ್ ಗಳಷ್ಟು ಚಲಿಸುತ್ತದೆ, ಆದರೆ ಸಾಂದರ್ಭಿಕವಾಗಿ ಬಹಳ ವೇಗವಾಗಿ ಚಲಿಸುತ್ತದೆ. ಇವುಗಳು ಆಳವಿಲ್ಲದ ಭೂಕುಸಿತಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ ಹಾಗು ದೋಷ ಅಥವಾ ಸ್ತರವಿನ್ಯಾಸದ ಸಮತಲಗಳಂತಹ ಸಮತಲಗಳ ನ್ಯೂನ್ಯತೆಗಳೊಂದಿಗೆ ರೂಪುಗೊಂಡಿರುತ್ತದೆ. ಇದನ್ನು ಮೇಲ್ಭಾಗದಲ್ಲಿರುವ ಒಳಬಾಗಿದ ತುಂಡುಗಳು ಹಾಗು ಕೆಳಭಾಗದ ಆಳವಾದ ಪ್ರದೇಶಗಳ ಮೂಲಕ ಗುರುತಿಸಬಹುದಾಗಿದೆ.[]

ಸುನಾಮಿಗಳನ್ನು ಉಂಟುಮಾಡುವುದು

[ಬದಲಾಯಿಸಿ]

ಸಮುದ್ರದ ಕೆಳಭಾಗದಲ್ಲಿ ಉಂಟಾಗುವ ಭೂಕುಸಿತಗಳು, ಅಥವಾ ನೀರಿನ ಮೇಲೆ ಪ್ರಭಾವವನ್ನು ಬೀರುವ ಭೂಕುಸಿತಗಳು ಸುನಾಮಿಗಳನ್ನು ಉಂಟುಮಾಡಬಹುದು. ಭಾರಿ ಭೂಕುಸಿತಗಳೂ ಸಹ ಮೆಗಾಸುನಾಮಿಗಳನ್ನು ಉಂಟುಮಾಡಬಹುದು, ಇವುಗಳು ಸಾಮಾನ್ಯವಾಗಿ ನೂರಾರು ಮೀಟರ್ ಗಳಷ್ಟು ಎತ್ತರದಲ್ಲಿರುತ್ತವೆ. 1958ರಲ್ಲಿ, ಇಂತಹ ಒಂದು ಸುನಾಮಿಯು ಅಲಾಸ್ಕಾದ ಲಿಟುಯ ಕೊಲ್ಲಿಯಲ್ಲಿ ಸಂಭವಿಸಿತ್ತು.

ಸಂಬಂಧಿತ ಘಟನೆ

[ಬದಲಾಯಿಸಿ]
  • ಆಕಸ್ಮಿಕ ಭೂಕುಸಿತದಲ್ಲಿ, ಭೂಕುಸಿತಕ್ಕೆ ಸಮನಾದ ಪ್ರಕ್ರಿಯೆಯು, ಒಂದು ದೊಡ್ಡ ಪ್ರಮಾಣದ ಐಸ್, ಹಿಮ ಹಾಗು ಬಂಡೆಯು ಪರ್ವತದ ಬದಿಯಿಂದ ಬೇಗನೆ ಬೀಳುತ್ತದೆ.
  • ಒಂದು ಉಷ್ಣರೂಪಿತ ಚಲನೆಯು, ಒಂದು ಸ್ಫೋಟಗೊಳ್ಳುವ ಜ್ವಾಲಾಮುಖಿಯ ಕೆಳಗೆ ವೇಗವಾಗಿ ಚಲಿಸುವ ಬಿಸಿಯಾದ ಬೂದಿ, ಅನಿಲ ಹಾಗು ಬಂಡೆಗಳ ಒಂದು ಕುಸಿದು ಬೀಳುವ ಧೂಮರಾಶಿಯಿಂದ ಉಂಟಾಗುತ್ತದೆ.

ಸಂಭವನೀಯ ಭೂಕುಸಿತದ ನಕ್ಷೆ ತಯಾರಿಕೆ

[ಬದಲಾಯಿಸಿ]
ಜಾಗತಿಕವಾಗಿ ಭೂಕುಸಿತಗಳು ಉಂಟುಮಾಡುವ ಅಪಾಯಗಳು
ಜೂನ್ 2006ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ರೂಟ್ 140ಯಲ್ಲಿ ಸಂಭವಿಸಿದ ಫೆರ್ಗುಸನ್ ಕುಸಿತ

ಭೂಕುಸಿತವು ಉಂಟುಮಾಡುವ ಅಪಾಯದ ವಿಶ್ಲೇಷಣೆ ಹಾಗು ನಕ್ಷೆಯು, ದುರಂತವು ಉಂಟುಮಾಡುವ ನಷ್ಟವನ್ನು ತಗ್ಗಿಸಲು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ, ಹಾಗು ಸಮರ್ಥನೀಯವಾಗಿ ಭೂಮಿಯ ಬಳಕೆಯ ಯೋಜನೆಗೆ ಮಾರ್ಗದರ್ಶನಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ಭೂಕುಸಿತಗಳಿಗೆ ಸಂಬಂಧಿಸಿದ ಅಂಶಗಳನ್ನು ಗುರುತಿಸಲು ವಿಶ್ಲೇಷಣೆಯನ್ನು ಬಳಸಲಾಗುತ್ತದೆ, ಭೂಕುಸಿತಗಳನ್ನು ಉಂಟು ಮಾಡುವ ಅಂಶಗಳ ಸಂಬಂಧಿತ ಕೊಡುಗೆಗಳನ್ನು ಅಂದಾಜಿಸುತ್ತದೆ, ಅಂಶಗಳು ಹಾಗು ಭೂಕುಸಿತಗಳ ನಡುವೆ ಸಂಬಂಧವನ್ನು ಸ್ಥಾಪಿಸುತ್ತದೆ, ಹಾಗು ಇಂತಹ ಸಂಬಂಧದ ಮೇಲೆ ಆಧಾರಿತವಾದ ಭೂಕುಸಿತದ ಅಪಾಯವನ್ನು ಊಹಿಸುತ್ತದೆ.[] ಭೂಕುಸಿತವು ಉಂಟುಮಾಡುವ ಅಪಾಯದ ವಿಶ್ಲೇಷಣೆಗೆ ಬಳಸಲಾಗುವ ಅಂಶಗಳನ್ನು ಸಾಮಾನ್ಯವಾಗಿ ಭೂರೂಪಶಾಸ್ತ್ರ, ಭೂವಿಜ್ಞಾನ, ಭೂಮಿಯ ಬಳಕೆ/ಭೂಮಿಯ ವ್ಯಾಪನೆ, ಹಾಗು ಹೈಡ್ರೋಜಿಯಾಲಜಿ ಎಂದು ವಿಭಾಗಿಸಲಾಗಿರುತ್ತದೆ. ಭೂಕುಸಿತವು ಉಂಟು ಮಾಡುವ ಅಪಾಯದ ಬಗೆಗಿನ ನಕ್ಷೆ ತಯಾರಿಕೆಗೆ ಹಲವು ಅಂಶಗಳನ್ನು ಪರಿಗಣಿಸಿರುವ ಕಾರಣ, GIS ಒಂದು ಸೂಕ್ತ ಸಾಧನವಾಗಿದೆ ಏಕೆಂದರೆ ಇದು ಸಂಗ್ರಹಣೆ, ಶೇಖರಣೆ, ಕುಶಲ ಬಳಕೆ, ಪ್ರದರ್ಶನ, ಹಾಗು ದೈಶಿಕವಾಗಿ ಸೂಚಿತವಾಗುವ ದತ್ತಾಂಶದ ದೊಡ್ಡ ಪ್ರಮಾಣಗಳ ವಿಶ್ಲೇಷಣೆಯಂತಹ ಅಂಶಗಳನ್ನು ಹೊಂದಿದೆ, ಇದರಿಂದ ಭೂಕುಸಿತವನ್ನು ತಗ್ಗಿಸಲು ಬೇಗನೆ ಹಾಗು ಪರಿಣಾಮಕಾರಿಯಾಗಿ ಕ್ರಮವನ್ನು ಕೈಗೊಳ್ಳಬಹುದು.[] ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳು, ಭೂಕುಸಿತವು ಉಂಟುಮಾಡುವ ಅಪಾಯದ ನಿರ್ಧಾರಣೆ ಹಾಗು ವಿಶ್ಲೇಷಣೆಗೆ ಅಧಿಕ ಉಪಯುಕ್ತವಾಗಿರುತ್ತದೆ. ಮುಂಚೆ ಹಾಗು ನಂತರದ ವೈಮಾನಿಕ ಚಿತ್ರಗಳು ಹಾಗು ಉಪಗ್ರಹಗಳು ಒದಗಿಸುತ್ತಿದ್ದ ಚಿತ್ರಣಗಳನ್ನು ಭೂಕುಸಿತದ ಲಕ್ಷಣಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು, ಉದಾಹರಣೆಗೆ ಹಂಚಿಕೆ ಹಾಗು ವರ್ಗಾವಣೆ, ಹಾಗು ಇಳಿಜಾರು, ಶಿಲಾವಿಜ್ಞಾನ, ಹಾಗು ಭೂಮಿಯ ಬಳಕೆ/ಭೂಮಿಯ ವ್ಯಾಪನೆಯಂತಹ ಅಂಶಗಳು ಭವಿಷ್ಯದ ಘಟನೆಗಳನ್ನು ಊಹಿಸಲು ಸಹಕಾರಿಯಾಗಿದ್ದವು.[] ಮುಂಚಿನ ಹಾಗು ನಂತರದ ಚಿತ್ರಣಗಳು, ಘಟನೆಯ ನಂತರ ಹೇಗೆ ಭೂದೃಶ್ಯವು ಬದಲಾವಣೆಯಾಗಿದೆಯೆಂದು ತಿಳಿಸುವಲ್ಲಿ ಸಹಕಾರಿಯಾಗಿದೆ, ಇದು ಭೂಕುಸಿತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ತಿಳಿಸುತ್ತದೆ, ಹಾಗು ಪುನರುಜ್ಜೀವನ ಹಾಗು ಸುಧಾರಣೆ ಪ್ರಕ್ರಿಯೆಯನ್ನು ಪ್ರಕಟಿಸುತ್ತದೆ.[]

GISನ ಸಂಯೋಜನೆಯೊಂದಿಗೆ ಉಪಗ್ರಹದ ಚಿತ್ರಣಗಳ ಬಳಕೆ ಹಾಗು ಘಟನಾ ಸ್ಥಳದ ಅಧ್ಯಯನಗಳನ್ನು ಬಳಸಿಕೊಂಡು, ಭವಿಷ್ಯದಲ್ಲಿ ಉಂಟಾಗುವ ಭೂಕುಸಿತಗಳ ಬಗ್ಗೆ ನಕ್ಷೆಯನ್ನು ತಯಾರಿಸಲು ಸಾಧ್ಯವಾಗುತ್ತದೆ.[] ಇಂತಹ ನಕ್ಷೆಗಳು ಹಿಂದಿನ ಘಟನೆಗಳು ನಡೆದ ಸ್ಥಳವನ್ನು ತೊರಿಸುವುದರ ಜೊತೆಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಭೂಕುಸಿತಗಳ ಸ್ಥಳಗಳನ್ನು ಸ್ಪಷ್ಟವಾಗಿ ಸೂಚಿಸಬೇಕು. ಒಟ್ಟಾರೆಯಾಗಿ, ಭೂಕುಸಿತಗಳ ಬಗ್ಗೆ ಊಹಿಸಬೇಕಾದರೆ, ಇದಕ್ಕೆ ಕಾರಣವು ಕೆಲವು ಭೂವೈಜ್ಞಾನಿಕ ಅಂಶಗಳಿಂದ ನಿರ್ಧಾರವಾಗುತ್ತವೆಂದು ಭಾವಿಸಬೇಕು, ಹಾಗು ಭವಿಷ್ಯದಲ್ಲಿ ಉಂಟಾಗುವ ಭೂಕುಸಿತಗಳು ಹಿಂದಿನ ಘಟನೆಗಳು ಸಂಭವಿಸಿದಂತಹ ಪರಿಸ್ಥಿತಿಗಳಲ್ಲೇ ಸಂಭವಿಸುತ್ತದೆ.[೧೦] ಈ ರೀತಿಯಾಗಿ, ಈ ಹಿಂದೆ ಘಟಿಸಿದ ಭೂಕುಸಿತಗಳ ಭೂರೂಪಶಾಸ್ತ್ರೀಯ ಪರಿಸ್ಥಿತಿಗಳು ಹಾಗು ನಿರೀಕ್ಷಿತ ಪರಿಸ್ಥಿತಿಗಳ ನಡುವೆ ಸಂಬಂಧವನ್ನು ಸ್ಥಾಪಿಸುವ ಅಗತ್ಯವಿರುತ್ತದೆ.[೧೧]

ನೈಸರ್ಗಿಕ ಪ್ರಕೋಪಗಳು, ನಿಸರ್ಗದೊಂದಿಗೆ ಘರ್ಷಣೆ ನಡೆಸುತ್ತಿರುವ ಜನರ ಒಂದು ನಾಟಕೀಯ ಉದಾಹರಣೆಯಾಗಿದೆ. ಆಸ್ತಿ ಹಾನಿ ಹಾಗು ಜೀವಕ್ಕೆ ಉಂಟಾಗುವ ಹಾನಿಯನ್ನು ತಗ್ಗಿಸಲು ಮುಂಚೆಯೇ ತಿಳಿದುಬರುವ ಮಾಹಿತಿಗಳು ಹಾಗು ಎಚ್ಚರಿಕೆಗಳ ಅಗತ್ಯವಿರುತ್ತದೆ. ಏಕೆಂದರೆ ಭೂಕುಸಿತಗಳು ಸತತವಾಗಿ ಸಂಭವಿಸುವುದರಿಂದ ಹಾಗು ಭೂಮಿಯ ಮೇಲಿನ ಅತ್ಯಂತ ವಿನಾಶಕಾರಿ ಬಲಗಳನ್ನು ಪ್ರತಿನಿಧಿಸುವುದರಿಂದ, ಇದು ಉಂಟಾಗುವ ಕಾರಣಗಳ ಬಗ್ಗೆ ಒಂದು ಉತ್ತಮ ಗ್ರಹಣವನ್ನು ಪಡೆಯುವುದು ಅನಿವಾರ್ಯವಾಗಿರುತ್ತದೆ ಹಾಗು ಜನರು ಹೇಗೆ ಇದನ್ನು ತಡೆಗಟ್ಟಲು ಸಹಕರಿಸಬಹುದು ಅಥವಾ ಅವುಗಳು ಸಂಭವಿಸಿದಾಗ ಹೇಗೆ ಎದುರಿಸಬೇಕು ಎಂಬುದನ್ನು ತಿಳಿದಿರಬೇಕು. ಸಮರ್ಥನೀಯ ಭೂಮಿ ನಿರ್ವಹಣೆ ಹಾಗು ಅಭಿವೃದ್ಧಿಯು ಭೂಕುಸಿತಗಳು ಉಂಟುಮಾಡುವ ಋಣಾತ್ಮಕ ಪ್ರಭಾವಗಳನ್ನು ತಗ್ಗಿಸಲು ಒಂದು ಪ್ರಮುಖ ಅಂಶವಾಗಿರುತ್ತದೆ.

GIS, ಭೂಕುಸಿತ ವಿಶ್ಲೇಷಣೆಗೆ ಒಂದು ಉತ್ತಮ ವಿಧಾನವನ್ನು ಒದಗಿಸುತ್ತದೆ ಏಕೆಂದರೆ ಇದು ದೊಡ್ಡ ಪ್ರಮಾಣದ ದತ್ತಾಂಶವನ್ನು ಬೇಗನೆ ಹಾಗು ಪರಿಣಾಮಕಾರಿಯಾಗಿ ಸೆರೆಹಿಡಿದು, ಸಂಗ್ರಹಿಸಿ, ಕುಶಲ ನಿರ್ವಹಣೆ ಮಾಡಿ, ವಿಶ್ಲೇಷಿಸಲು ಅವಕಾಶ ಮಾಡಿಕೊಡುತ್ತದೆ. ಹಲವು ವ್ಯತ್ಯಾಸಸಾಧ್ಯಗಳು ಒಳಗೊಂಡ ಕಾರಣದಿಂದ, ಭೂಮಿಯ ಮೇಲ್ಮೈನಲ್ಲಿ ಎಂದು ನಡೆಯುತ್ತಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಹಾಗು ನಿಖರವಾದ ಚಿತ್ರಣವನ್ನು ನೀಡುವ ಹಲವು ಸ್ತರಗಳ ದತ್ತಾಂಶವನ್ನು ವರ್ಗಾಯಿಸುವ ಪ್ರಕ್ರಿಯೆ ಮುಖ್ಯವಾಗುತ್ತದೆ. ಸಂಶೋಧಕರು, ಯಾವುದೇ ಒಂದು ಪ್ರದೇಶದಲ್ಲಿ ಸಂಭವಿಸಬಹುದಾದ ಭೂಕುಸಿತಗಳಿಗೆ ಯಾವ ವ್ಯತ್ಯಾಸಸಾಧ್ಯಗಳು ಅತ್ಯಂತ ಪ್ರಮುಖ ಅಂಶವಾಗುತ್ತವೆಂಬುದನ್ನು ತಿಳಿಯುವ ಅಗತ್ಯವಿರುತ್ತದೆ. GISನ್ನು ಬಳಸಿಕೊಂಡು, ಹೆಚ್ಚಿನ ವಿವರಣೆಯನ್ನು ನೀಡುವ ನಕ್ಷೆಗಳನ್ನು ತಯಾರಿಸಲು ಸಾಧ್ಯ, ಇದರಿಂದ ಹಿಂದೆ ಸಂಭವಿಸಿದ ಘಟನೆಗಳು ಹಾಗು ಭವಿಷ್ಯದ ನಿರೀಕ್ಷಿತ ಘಟನೆಗಳ ಬಗ್ಗೆ ಅರಿಯಲು ಸಹಕಾರಿ, ಇವುಗಳು ಸಂಭವನೀಯವಾಗಿ ಜೀವಗಳನ್ನು, ಆಸ್ತಿಯನ್ನು, ಹಾಗು ಹಣವನ್ನು ಉಳಿಸುತ್ತದೆ.

ಇತಿಹಾಸಪೂರ್ವ ಯುಗದ ಭೂಕುಸಿತಗಳು

[ಬದಲಾಯಿಸಿ]
ಫ್ಲಿಮ್ಸ್ ರಾಕ್ ಸ್ಲೈಡ್ ನ ಶಿಲಾಖಂಡರಾಶಿಗಳ ಮೂಲಕ ರೈನ್ ಕತ್ತರಿಸುವಿಕೆ, ಸ್ವಿಟ್ಜರ್ಲ್ಯಾಂಡ್
  • ಹಾರ್ಟ್ ಮೌಂಟೈನ್ ಇರುವ ಪ್ರಸಕ್ತದ ಸ್ಥಳಕ್ಕೆ ಅದು ಚಲಿಸಲು ಭೂಕುಸಿತವು ಕಾರಣವಾಯಿತು, ಇದು ಭೂಮಿಯ ಮೇಲೆ ಹಿಂದೆಂದೂ ಕಂಡಿರದ ಅತ್ಯಂತ ದೊಡ್ಡ ಭೂಪ್ರದೇಶವಾಗಿತ್ತು. ಭೂಕುಸಿತವು ಸಂಭವಿಸಿ 48 ದಶಲಕ್ಷ ವರ್ಷಗಳಿಂದೀಚೆಗೆ, ಭೂಸವೆತವು ಭೂಕುಸಿತದ ಹೆಚ್ಚಿನ ಭಾಗವನ್ನು ಅಳಿಸಿ ಹಾಕಿದೆ.
  • ಫ್ಲಿಮ್ಸ್ ರಾಕ್ ಸ್ಲೈಡ್, ಸುಮಾರು. 13,000 km3 (3,100 cu mi), ಸ್ವಿಟ್ಜರ್ಲ್ಯಾಂಡ್, ಸುಮಾರು 10000 ವರ್ಷಗಳ ಹಿಂದೆ ಹಿಮಶಿಲೆಯ ನಂತರದ ಪ್ಲೇಸ್ಟಸೀನ್ ಹಾಲಸೀನ್, ಆಲ್ಪ್ಸ್ ನಲ್ಲಿ ಈವರೆಗೂ ಕಂಡುಬಂದ ಅತ್ಯಂತ ದೊಡ್ಡ ಭೂಕುಸಿತವೆನಿಸಿದೆ ಹಾಗು ಒಣ ಭೂಮಿಯ ಮೇಲೆ ಇದನ್ನು ಅತಿಶಯವಿಲ್ಲದ ಭೂಸವೆತವಾದ ಪ್ರದೇಶವನ್ನು ಸುಲಭವಾಗಿ ಗುರುತಿಸಬಹುದು.[೧೨]
  • ಸುಮಾರು 200 BCಯಲ್ಲಿ ನ್ಯೂಜಿಲೆಂಡ್ ನ ನಾರ್ತ್ ಐಲೆಂಡ್ ನ ಮೇಲೆ ವೈಕರೆಮೊಯನ ಸರೋವರವನ್ನು ಭೂಕುಸಿತವು ಸೃಷ್ಟಿಸಿತು, ಇಲ್ಲಿ ನ್ಗಮೊಕೋ ಪರ್ವತ ಶ್ರೇಣಿಯ ಕುಸಿತ ಹಾಗು ವೈಕರೆತಹೇಕೆ ನದಿಯ ಅಡಚಿತು, ಇದು 248 ಮೀಟರ್ ಆಳದ ನೈಸರ್ಗಿಕ ಜಲಾಶವನ್ನು ರೂಪಿಸಿತು.
  • ಚೀಕ್ಯೇ ಫ್ಯಾನ್, ಬ್ರಿಟಿಶ್ ಕೊಲಂಬಿಯಾ, ಕೆನಡಾ, ಸುಮಾರು. 25 km2 (9.7 sq mi), ಪ್ಲೇಸ್ಟಸೀನ್ ನಂತರದ ಯುಗ.

ಇತಿಹಾಸಪೂರ್ವ ಯುಗದ ಜಲಾಂತರ್ಗಾಮಿ ಭೂಕುಸಿತಗಳು

[ಬದಲಾಯಿಸಿ]
  • ಸ್ಟಾರೆಗ್ಗ ಕುಸಿತ, ನಾರ್ವೆ, ಸುಮಾರು. 3,500 km3 (840 cu mi), ಸುಮಾರು. 8,000 ವರ್ಷಗಳ ಹಿಂದೆ, ಕರಾವಳಿ ತೀರದ ಸಮಕಾಲೀನ ಮೆಸೋಲಿಥಿಕ್ ಜನಸಂಖ್ಯೆಯ ಮೇಲೆ ದುರಂತ ಪರಿಣಾಮ
  • ಅಗುಲ್ಹಾಸ್ ಕುಸಿತ, ಸುಮಾರು. 20,000 km3 (4,800 cu mi), ದಕ್ಷಿಣ ಆಫ್ರಿಕಾದಿನದ್ದ ಸ್ವಲ್ಪ ದೂರಕ್ಕೆ, ಪ್ಲಿಯೋಸೀನ್ ಯುಗದ ನಂತರ, ವಿವರಿಸಲಾದಂತೆ ಅತ್ಯಂತ ದೊಡ್ಡ ಭೂಕುಸಿತ ಇದಾಗಿದೆ[೧೩]
  • ರುವಟೋರಿಯಾ ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತ, ನಾರ್ತ್ ಐಲೆಂಡ್ ನ ಸ್ವಲ್ಪ ದೂರಕ್ಕೆ ನ್ಯೂಜಿಲೆಂಡ್, ಗಾತ್ರದಲ್ಲಿ ಸುಮಾರು 3,000 km³, 170,000 ವರ್ಷಗಳ ಹಿಂದೆ.[೧೪]

ಐತಿಹಾಸಿಕ ಭೂಕುಸಿತಗಳು

[ಬದಲಾಯಿಸಿ]
  • ಸೆಪ್ಟೆಂಬರ್ 2, 1806ರಲ್ಲಿ ಸಂಭವಿಸಿದ ಗೋಲ್ಡು


  • ಸೆಪ್ಟೆಂಬರ್ 19, 1889ರಲ್ಲಿ ಸಂಭವಿಸಿದ ಕ್ಯಾಪ್ ಡಿಯಮಾಂಟ್ ಕ್ಯೂಬೆಕ್ ಬಂಡೆಕುಸಿತ
  • 29 ಏಪ್ರಿಲ್ 1903ರಲ್ಲಿ ಸಂಭವಿಸಿದ ಫ್ರಾಂಕ್ ಸ್ಲೈಡ್, ಟರ್ಟಲ್ ಮೌಂಟನ್, ಆಲ್ಬರ್ಟ, ಕೆನಡಾ
  • ಜುಲೈ 10, 1949ರಲ್ಲಿ ಖೈತ್ ಭೂಕುಸಿತ, ಖೈತ್, ತಜಿಕಿಸ್ತಾನ್, ಸೋವಿಯತ್ ಒಕ್ಕೂಟ
  • ಅಕ್ಟೋಬರ್ 9, 1963ರಲ್ಲಿ ಸಂಭವಿಸಿದ ಮೊಂಟೆ ಟಾಕ್ ಭೂಕುಸಿತ (260 ದಶಲಕ್ಷ ಕ್ಯೂಬಿಕ್ ಮೀಟರ್ ಗಳು), ಇದು ಇಟಲಿಯ ವಜೋಂಟ್ ಆಣೆಕಟ್ಟು ಜಲಾನಯನ ಪ್ರದೇಶಕ್ಕೆ ಬಿದ್ದಿತು, ಇದು ಮೆಗಾಸುನಾಮಿಯನ್ನು ಉಂಟುಮಾಡುವುದರ ಜೊತೆಗೆ ಸುಮಾರು 2000 ಜನರ ಸಾವಿಗೆ ಕಾರಣವಾಯಿತು
  • ಜನವರಿ 9, 1965ರಲ್ಲಿ ಸಂಭವಿಸಿದ ಹೋಪ್ ಸ್ಲೈಡ್ ಭೂಕುಸಿತ (46 ದಶಲಕ್ಷ ಕ್ಯೂಬಿಕ್ ಮೀಟರ್ ಗಳು), ಹೋಪ್, ಬ್ರಿಟಿಶ್ ಕೊಲಂಬಿಯಾ ಸಮೀಪ.[೧೫]
  • 1966ರ ಅಬೇರ್ಫಾನ್ ವಿಪತ್ತು
  • ನವೆಂಬರ್ 30, 1977ರಲ್ಲಿ ಸಂಭವಿಸಿದ ತುವೆ ಭೂಕುಸಿತ, ಗೋಥೆನ್ಬರ್ಗ್, ಸ್ವೀಡನ್.
  • ಆಗಸ್ಟ್ 8, 1979ರಲ್ಲಿ ಸಂಭವಿಸಿದ 1979ರ ಅಬೋಟ್ಸ್ಫೋರ್ಡ್ ಭೂಕುಸಿತ, ಡುನೆಡಿನ್, ನ್ಯೂಜಿಲೆಂಡ್.
  • ವಲ್ಟೆಲ್ಲಿನ ವಿಪತ್ತಿನ ಸಂದರ್ಭದಲ್ಲಿ ಸಂಭವಿಸಿದ ವಾಲ್ ಪೋಲ ಭೂಕುಸಿತ (1987) ಇಟಲಿ
  • 30 ಜುಲೈ 1997ರಲ್ಲಿ ಸಂಭವಿಸಿದ ಥ್ರೆಡ್ಬೊ ಭೂಕುಸಿತ, ಆಸ್ಟ್ರೇಲಿಯಾ, ಇದು ವಸತಿನಿಲಯವನ್ನು ನಾಶಪಡಿಸಿತು.
  • ಡಿಸೆಂಬರ್ 1999ರಲ್ಲಿ ಸಂಭವಿಸಿದ ವರ್ಗಾಸ್ ಮಣ್ಣುಕುಸಿತಗಳು, ಇದು ವೆನೆಜುವೆಲಾದ ವರ್ಗಾಸ್ ರಾಜ್ಯದಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ ಉಂಟಾಯಿತು, ಇದು ಸಾವಿರಾರು ಜನರ ಸಾವಿಗೆ ಕಾರಣವಾಯಿತು.
  • ಜೂನ್ 11, 2007ರಲ್ಲಿ ಸಂಭವಿಸಿದ 2007 ಚಿತ್ತಗಾಂಗ್ ಮಣ್ಣುಕುಸಿತ, ಚಿತ್ತಗಾಂಗ್, ಬಾಂಗ್ಲಾದೇಶ.
  • ಸೆಪ್ಟೆಂಬರ್ 6, 2008ರಲ್ಲಿ ಸಂಭವಿಸಿದ 2008ರ ಕೈರೋ ಭೂಕುಸಿತ.
  • 2010ರ ಉಗಾಂಡ ಭೂಕುಸಿತ, ಇದು ಬುಡುಡ ಪ್ರದೇಶದಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ 100 ಜನರ ಸಾವಿಗೆ ಕಾರಣವಾಯಿತು.
  • ಆಗಸ್ಟ್ 8, 2010ರಲ್ಲಿ ಸಂಭವಿಸಿದ ಜ್ಹೌಗು ಕೌಂಟಿ ಮಣ್ಣುಕುಸಿತ, ಗಾನ್ಸು, ಚೀನಾ.[೧೬]
  • ಡೆವಿಲ್'ಸ್ ಸ್ಲೈಡ್, ಸ್ಯಾನ್ ಮಟೆಯೋ ಕೌಂಟಿ, ಕ್ಯಾಲಿಫೋರ್ನಿಯಾದಲ್ಲಿ ಇಂದಿಗೂ ಸಂಭವಿಸುತ್ತಿರುವ ಭೂಕುಸಿತ.
  • ಜನವರಿ 11, 2011ರಲ್ಲಿ ಸಂಭವಿಸಿದ 2011 ರಿಯೋ ಡಿ ಜನೈರೊ ಭೂಕುಸಿತ, ರಿಯೋ ಡಿ ಜನೈರೊ, ಬ್ರೆಜಿಲ್, ಇದು ಇಲ್ಲಿಯವರೆಗೆ 610 ಜನರ ಸಾವಿಗೆ ಕಾರಣವಾಗಿದೆ.[೧೭]

ಭೂಮ್ಯತೀತ ಭೂಕುಸಿತಗಳು

[ಬದಲಾಯಿಸಿ]
ಶುಕ್ರನ ಮೇಲೆ ಸಂಭವಿಸಿದ ಭೂಕುಸಿತಗಳಿಗೆ ಮುನ್ನ ಹಾಗು ನಂತರದ ರೇಡಾರ್ ಚಿತ್ರಣಗಳು.ಚಿತ್ರದ ಬಲಬದಿಯಲ್ಲಿ ಮಧ್ಯಭಾಗಕ್ಕೆ, ಹೊಸ ಭೂಕುಸಿತ ಸಂಭವಿಸಿರುವುದು ಕಂಡುಬರುತ್ತಿದೆ, ಒಂದು ಪ್ರಕಾಶಮಾನವಾದ, ಚಲಿಸುವ-ಮಾದರಿಯ ಪ್ರದೇಶವನ್ನು ಹೊಂದಿರುತ್ತದೆ, ಇದು ಪ್ರಕಾಶಮಾನವಾದ ಬಿರಿತದ ಎಡಭಾಗಕ್ಕೆ ವಿಸ್ತರಿಸುವಂತೆ ಕಂಡುಬರುತ್ತಿದೆ. 1990ರ ಚಿತ್ರ.
2008-02-19ರಲ್ಲಿ ಮಂಗಳಗ್ರಹದ ಮೇಲೆ ಪ್ರಗತಿಯಲ್ಲಿರುವ ಭೂಕುಸಿತ

ಈ ಹಿಂದೆ ಸಂಭವಿಸಿದ ಹಲವು ಭೂಕುಸಿತಗಳ ಬಗೆಗಿನ ಸಾಕ್ಷ್ಯಗಳು ಸೌರ ಮನ್ಡಲ ಹಲವು ಕಾಯಗಳಲ್ಲೂ ಸಹ ಪತ್ತೆಯಾಗಿರುವುದಕ್ಕೆ ಪುಷ್ಟಿ ನೀಡುತ್ತವೆ, ಆದರೆ ಶೋಧನೆಗಳು ಕೇವಲ ಸೀಮಿತ ಅವಧಿಯಲ್ಲಿ ವೀಕ್ಷಣೆಗಳನ್ನು ನಡೆಸುವುದರ ಜೊತೆಗೆ ಸೌರ ಮಂಡಲದ ಹಲವು ಕಾಯಗಳು ಭೂವೈಜ್ಞಾನಿಕವಾಗಿ ನಿಷ್ಕ್ರಿಯವೆಂದು ಕಂಡು ಬಂದ ಕಾರಣಕ್ಕೆ ಹಲವು ಭೂಕುಸಿತಗಳು ಇತ್ತೀಚಿನ ಸಮಯಗಳಲ್ಲಿ ಸಂಭವಿಸಿಲ್ಲವೆಂದು ಕಂಡುಬರುತ್ತದೆ. ಪರಿಭ್ರಮಿಸುವ ಉಪಗ್ರಹಗಳು ದೀರ್ಘಕಾಲಿಕವಾಗಿ ಶುಕ್ರ ಹಾಗು ಮಂಗಳದ ನಕ್ಷೆ ತಯಾರಿಕೆಯಲ್ಲಿ ತೊಡಗಿವೆ, ಹಾಗು ಎರಡೂ ಗ್ರಹಗಲ್ ಮೇಲೆ ಭೂಕುಸಿತಗಳು ಉಂಟಾದ ಉದಾಹರಣೆಗಳು ದೊರೆತಿವೆ.

ಇವನ್ನೂ ಗಮನಿಸಿ‌

[ಬದಲಾಯಿಸಿ]
ಗೆಯ್ಸರ್ಸ್ ಕಣಿವೆಯಲ್ಲಿ ಸಂಭವಿಸಿದ ಭೂಕುಸಿತದ ಒಂದು ಅವರೊಹಿತ ದೃಶ್ಯಾವಳಿ
  • ಆಟೋಮ್ಯಾಟಿಕ್ ಡಿಫಾರ್ಮೇಶನ್ ಮಾನಿಟರಿಂಗ್ ಸಿಸ್ಟಂ
  • ಡಿಫಾರ್ಮೇಶನ್ ಮಾನಿಟರಿಂಗ್
  • ಭೂಕಂಪ ಎಂಜಿನಿಯರಿಂಗ್
  • ಭೂಗರ್ಭಶಾಸ್ತ್ರದ ತಂತ್ರಜ್ಞಾನ
  • ಭೂತಂತ್ರಗಾರಿಕೆ ಎಂಜಿನೀಯರಿಂಗ್
  • ಭೂಕುಸಿತದ ಅಣೆಕಟ್ಟು
  • ಭೂಕುಸಿತ
  • ಸಂಚಯದ ನಿರುಪಯುಕ್ತತೆ
  • ಇಳಿಜಾರಿನ ಸ್ಥಿರತೆ
  • ಸ್ಟುರ್ಜ್ ಸ್ಟ್ರಾಮ್
  • ಜಲಾಂತರ್ಗಾಮಿ ಭೂಕುಸಿತ
  • ಕೊಚ್ಚಿಕೊಂಡುಹೋಗುವುದು
  • ಮಣ್ಣುಕುಸಿತ
  • ಕ್ಯಾಲಿಫೋರ್ನಿಯಾದ ಭೂಕುಸಿತಗಳು

ಉಲ್ಲೇಖಗಳು‌‌

[ಬದಲಾಯಿಸಿ]
  1. Jump up to: ೧.೦ ೧.೧ Easterbrook, Don J. (1999). Surface Processes and Landforms. Upper Saddle River: Prentice-Hall. ISBN 0138609586.
  2. ಸ್ಚುಸ್ಟರ್, R.L. & ಕ್ರಿಜೆಕ್, R.J. (1978). ಲ್ಯಾಂಡ್ ಸ್ಲೈಡ್ಸ್: ಅನಾಲಿಸಿಸ್ ಅಂಡ್ ಕಂಟ್ರೋಲ್. ವಾಶಿಂಗ್ಟನ್, D.C.: ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್.
  3. Renwick,W., Brumbaugh, R. and Loeher, L (1982). "Landslide Morphology and Processes on Santa Cruz Island California". Geografiska Annaler. Series A, Physical Geography. 64 (3/4): 149–159. doi:10.2307/520642.{{cite journal}}: CS1 maint: multiple names: authors list (link)
  4. ಜಾನ್ಸನ್, B.F. ಸ್ಲಿಪರಿ ಸ್ಲೋಪ್ಸ್. ಅರ್ಥ್ ನಿಯತಕಾಲಿಕ. June 2010. ಪುಟಗಳು 48–55.
  5. Chen, Zhaohua; Wang, Jinfei (2007). "Landslide hazard mapping using logistic regression model in Mackenzie Valley, Canada". Natural Hazards. 42: 75. doi:10.1007/s11069-006-9061-6.
  6. Clerici, A; Perego, S; Tellini, C; Vescovi, P (2002). "A procedure for landslide susceptibility zonation by the conditional analysis method1". Geomorphology. 48: 349. doi:10.1016/S0169-555X(02)00079-X.
  7. Metternicht, G; Hurni, L; Gogu, R (2005). "Remote sensing of landslides: An analysis of the potential contribution to geo-spatial systems for hazard assessment in mountainous environments". Remote Sensing of Environment. 98: 284. doi:10.1016/j.rse.2005.08.004.
  8. De La Ville, Noemi; Chumaceiro Diaz, Alejandro; Ramirez, Denisse (2002). Environment, Development and Sustainability. 4: 221. doi:10.1023/A:1020835932757. {{cite journal}}: Missing or empty |title= (help)
  9. Fabbri, Andrea G.; Chung, Chang-Jo F.; Cendrero, Antonio; Remondo, Juan (2003). "Is Prediction of Future Landslides Possible with a GIS?". Natural Hazards. 30: 487. doi:10.1023/B:NHAZ.0000007282.62071.75.
  10. Lee, S; Talib, Jasmi Abdul (2005). "Probabilistic landslide susceptibility and factor effect analysis". Environmental Geology. 47: 982. doi:10.1007/s00254-005-1228-z.
  11. Ohlmacher, G (2003). "Using multiple logistic regression and GIS technology to predict landslide hazard in northeast Kansas, USA". Engineering Geology. 69: 331. doi:10.1016/S0013-7952(03)00069-3.
  12. Weitere Erkenntnisse und weitere Fragen zum Flimser Bergsturz Archived 2011-07-06 ವೇಬ್ಯಾಕ್ ಮೆಷಿನ್ ನಲ್ಲಿ. A.v. Poschinger, Angewandte Geologie, Vol. 11/2, 2006
  13. Dingle, R. V. (1977). "The anatomy of a large submarine slump on a sheared continental margin (SE Africa)". Journal of the Geological Society. 134: 293. doi:10.1144/gsjgs.134.3.0293.
  14. ದಿ ಜೈಂಟ್ ರುವಟೋರಿಯಾ ಡೆಬ್ರಿಸ್ ಅವಲಾಂಚೆ ಆನ್ ದಿ ನಾರ್ದರ್ನ್ ಹಿಕುರಂಗಿ ಮಾರ್ಜಿನ್, ನ್ಯೂಜಿಲೆಂಡ್: ರಿಸಲ್ಟ್ ಆಫ್ ಆಬ್ಲೀಕ್ ಸೀಮೌಂಟ್ ಸಬ್ಡಕ್ಶನ್ Archived 2010-07-16 ವೇಬ್ಯಾಕ್ ಮೆಷಿನ್ ನಲ್ಲಿ.. Agu.org. 2010-12-16ರಂದು ಮರುಸಂಪಾದಿಸಲಾಗಿದೆ.
  15. "Hope Slide". BC Geographical Names. http://apps.gov.bc.ca/pub/bcgnws/names/53154.html. 
  16. ಲಾರ್ಜ್ ಲ್ಯಾಂಡ್ ಸ್ಲೈಡ್ ಇನ್ ಗಾನ್ಸು ಜ್ಹೌಗು ಆಗಸ್ಟ್ 7 Archived 2010-08-24 ವೇಬ್ಯಾಕ್ ಮೆಷಿನ್ ನಲ್ಲಿ. ಆಗಸ್ಟ್ 19, 2010. 2010ರ ಅಗಸ್ಟ್ 19ರಂದು ಮರುಸಂಪಾದಿಸಲಾಗಿದೆ.
  17. [೧] ಜನವರಿ 13, 2011. ಜನವರಿ 13, 20011ರಲ್ಲಿ ಮರುಸಂಪಾದಿಸಲಾಗಿದೆ.


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]
"https://kn.wikipedia.org/w/index.php?title=ಭೂಕುಸಿತ&oldid=1171061" ಇಂದ ಪಡೆಯಲ್ಪಟ್ಟಿದೆ