ಟಿಂಬಕ್ಟು
Timbuktu
Tombouctou | |
---|---|
City | |
transcription(s) | |
• Koyra Chiini: | Tumbutu |
Country | ಮಾಲಿ |
Region | Tombouctou Region |
Cercle | Timbuktu Cercle |
Settled | 10th century |
Elevation | ೨೬೧ m (೮೫೬ ft) |
Population (2009)[೧] | |
• Total | ೫೪,೪೫೩ |
ಟಿಂಬಕ್ಟು (ಟಿಂಬಕ್ಟೂ ) (ಕೊಯ್ರಾ ಚೀನಿ: ಟುಂಬಟು ; French: Tombouctou) ಟೌಂಬೌಕ್ಟೌ ಪ್ರದೇಶದ, ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರದ ಒಂದು ಮಹಾನಗರವಾಗಿದೆ. ಈ ನಗರವನ್ನು ಮಾಲಿ ಸಾಮ್ರಾಜ್ಯದ ಹತ್ತನೇ ಮಾನ್ಸಾ, ಮಾನ್ಸಾ ಮುಸಾರು ಪ್ರವರ್ಧಮಾನಕ್ಕೆ ತಂದರು. ನಗರವು ಸಂಕೋರ್ ವಿಶ್ವವಿದ್ಯಾಲಯ ಮತ್ತು ಇತರೆ ಮದ್ರಸಾಗಳಿಗೆ ನೆಲೆಯಾಗಿದ್ದುದಲ್ಲದೇ, ಆಫ್ರಿಕಾದುದ್ದಕ್ಕೂ 15ನೇ ಮತ್ತು 16ನೇ ಶತಮಾನಗಳಲ್ಲಿ ಇಸ್ಲಾಮ್/ಮಹಮ್ಮದೀಯ ಧರ್ಮದ ಪ್ರಸರಣದ ಕೇಂದ್ರಸ್ಥಳ ಹಾಗೂ ಬೌದ್ಧಿಕ ಮತ್ತು ಪಾರಮಾರ್ಥಿಕ ರಾಜಧಾನಿಯೂ ಆಗಿತ್ತು. ಅಲ್ಲಿನ ಮೂರು ಶ್ರೇಷ್ಠ ಮಸೀದಿಗಳಾದ, ಡ್ಜಿ/ಜಿಂಗಾರೆಬರ್, ಸಂಕೋರ್ ಮತ್ತು ಸಿಧಿ ಯಾಹ್ಯಾಗಳು, ಟಿಂಬಕ್ಟು'ನ ಸುವರ್ಣ ಯುಗವನ್ನು ನೆನಪಿಸುತ್ತವೆ. ಸತತವಾಗಿ ಪುನರುಜ್ಜೀವನಗೊಳ್ಳುತ್ತಿದ್ದರೂ, ಈ ಸ್ಮಾರಕಗಳು ಮರುಭೂಮೀಕರಣದ ಭೀತಿಯಲ್ಲಿವೆ.[೨]
ಸಾಂಘಾಯ್, ಟುವಾರೆಗ್, ಫುಲಾನಿ ಮತ್ತು ಮಂಡೆ ಜನರನ್ನು ಹೊಂದಿರುವ, ಟಿಂಬಕ್ಟು ನಗರವು ನೈಗರ್ ನದಿಯಿಂದ ಸುಮಾರು 15 km ಉತ್ತರಕ್ಕಿದೆ. ಸಹಾರಾದ ಮೂಲಕ ಅರೌವನೆಯವರೆಗಿನ ಪೂರ್ವದಿಂದ–ಪಶ್ಚಿಮದ ಮತ್ತು ಉತ್ತರದಿಂದ–ದಕ್ಷಿಣದ ದಿಕ್ಕುಗಳಲ್ಲಿ ಸಹಾರಾದಾಚಿನ ವ್ಯಾಪಾರ ಮಾರ್ಗಗಳ ಛೇದಕ ಸ್ಥಳದಲ್ಲಿದೆ ಕೂಡಾ. ಇದು ಪ್ರಮುಖ ಐತಿಹಾಸಿಕವಾಗಿ (ಈಗಲೂ ಕೂಡಾ) ಮೂಲತಃ ಟಘಾಜಾ ಮೂಲದ್ದಾಗಿದ್ದು, ಪ್ರಸ್ತುತ ಟಾವೊಡೆನ್ನಿ ಮೂಲದ ಕಲ್ಲುಪ್ಪಿನ ವ್ಯಾಪಾರದ ವಾಣಿಜ್ಯ ಕೇಂದ್ರ ವಾಗಿತ್ತು.
ಅದರ ಭೌಗೋಳೀಯ ಸನ್ನಿವೇಶವು ಅದನ್ನು ಸಮೀಪದ ಪಶ್ಚಿಮ ಆಫ್ರಿಕಾದ ಜನತೆ ಹಾಗೂ ಉತ್ತರದ ಅರಬ್ಬರು ಮತ್ತು ಅಲೆಮಾರಿ ಬರ್ಬರರುಗಳ ಸಹಜ ಭೇಟಿಯ ಕೇಂದ್ರವನ್ನಾಗಿ ಮಾಡಿತ್ತು. ದೂರದ ವ್ಯಾಪಾರ ಕೇಂದ್ರವಾಗಿ ಇದರ ದೀರ್ಘ ಇತಿಹಾಸವು ಉತ್ತರ ಆಫ್ರಿಕಾದುದ್ದಕ್ಕೂ ಇದ್ದ ಬರ್ಬರರು, ಅರಬ್ಬರು ಹಾಗೂ ಯಹೂದಿ ವ್ಯಾಪಾರಿಗಳೊಂದಿಗೆ ಪಶ್ಚಿಮ ಆಫ್ರಿಕಾವನ್ನು ಸಂಪರ್ಕಿಸುತ್ತಿದ್ದುದರಿಂದ, ಪರೋಕ್ಷವಾಗಿ ಯುರೋಪ್‌ನ ವ್ಯಾಪಾರಿಗಳೊಂದಿಗೆ ಹೊಂದಿದ್ದ ಸಂಪರ್ಕವು, ನಗರಕ್ಕೆ ದಂತಕಥಾ ನಗರದ ಸ್ಥಾನವನ್ನು ಮತ್ತು ಪಶ್ಚಿಮದಲ್ಲಿ ಇದು ದೀರ್ಘಕಾಲದವರೆಗೆ ಇಲ್ಲಿಂದ ಟಿಂಬಕ್ಟುವರೆಗೆ" ಎಂದು ಹೇಳುವಂತೆ ವಿಲಕ್ಷಣ ದೂರದ ನಾಡುಗಳಿಗೆ ರೂಪಕವಾಗಿ ಬಳಸುವ ಸ್ಥಾನವನ್ನು ಪಡೆದುಕೊಂಡಿತ್ತು.
ಟಿಂಬಕ್ಟು'ವಿನ ಮಹಮ್ಮದೀಯ ಮತ್ತು ವಿಶ್ವ ನಾಗರೀಕತೆಗೆ ಶಾಶ್ವತ ಕೊಡುಗೆಯೆಂದರೆ ವಿದ್ಯಾರ್ಥಿ/ಪಂಡಿತವೇತನ. ಟಿಂಬಕ್ಟು ನಗರವು ವಿಶ್ವದ ಪ್ರಥಮ ವಿಶ್ವವಿದ್ಯಾಲಯಗಳಲ್ಲಿ ಒಂದನ್ನು ಹೊಂದಿತ್ತೆಂದು ಭಾವಿಸಲಾಗಿದೆ. ಸ್ಥಳೀಯ ಪಂಡಿತೋತ್ತಮರು ಮತ್ತು ಜಿಲ್ಲಾಧಿಕಾರಿಗಳು ಈಗಲೂ ಆ ಯುಗದ ಪ್ರಾಚೀನ ಗ್ರೀಕ್ ಗ್ರಂಥಗಳ ಸಂಗ್ರಹ ತಮ್ಮಲ್ಲಿದೆಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.[೩] ಟಿಂಬಕ್ಟುವಿನಲ್ಲಿ 14ನೇ ಶತಮಾನದ ವೇಳೆಗೆ, ಪ್ರಮುಖ ಗ್ರಂಥಗಳನ್ನು ರಚಿಸುವ ಹಾಗೂ ಪ್ರತಿಗಳನ್ನು ಮಾಡಿಡುವ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ನಗರವನ್ನು ಆಫ್ರಿಕಾದ ಗಮನಾರ್ಹ ಲೇಖನ ಸಂಪ್ರದಾಯದ ಕೇಂದ್ರಸ್ಥಳವನ್ನಾಗಿಸಿತ್ತು.[೪]
ಇತಿಹಾಸ
[ಬದಲಾಯಿಸಿ]ಮೂಲಗಳು
[ಬದಲಾಯಿಸಿ]ಟಿಂಬಕ್ಟು ನಗರವನ್ನು ಅಲೆಮಾರಿ ಟುವಾರೆಗ್ ಜನರು 10ನೇ ಶತಮಾನದಷ್ಟು ಮುಂಚೆಯೇ ಸ್ಥಾಪಿಸಿದ್ದರು. ಟುವಾರೆಗ್ ಜನರು ಟಿಂಬಕ್ಟುವನ್ನು ಸ್ಥಾಪಿಸಿದ್ದರೂ ಅದು, ಕೇವಲ ನಿರ್ದಿಷ್ಟಾವಧಿಯ ವಾಸಸ್ಥಳವಾಗಿತ್ತು. ಮಳೆಗಾಲದ ಅವಧಿಯಲ್ಲಿ ಮರಳುಗಾಡಿನಲ್ಲಿ ಅಲೆಯುತ್ತಿದ್ದ ಅವರು ಬೇಸಿಗೆಯಲ್ಲಿ ಆಂತರಿಕ ನೈಗರ್ ನದೀಮುಖಜ ಭೂಮಿಯ ಪ್ರವಾಹಮುಖಿ ಮೈದಾನಪ್ರದೇಶಗಳ ಸಮೀಪ ವಾಸಿಸುತ್ತಿದ್ದರು. ನದಿಯ ಸಮೀಪದ ಪ್ರದೇಶವು ಸೊಳ್ಳೆಗಳಿಂದಾಗಿ ಸೂಕ್ತವಲ್ಲದುದರಿಂದ ನದಿಯಿಂದ ಕೆಲ ಮೈಲುಗಳಷ್ಟು ದೂರದಲ್ಲಿ ಬಾವಿಯೊಂದನ್ನು ತೋಡಲಾಗಿತ್ತು.[೫][೬]
ಶಾಶ್ವತ ವಾಸಸ್ಥಳಗಳು
[ಬದಲಾಯಿಸಿ]ಹನ್ನೊಂದನೇ ಶತಮಾನದಲ್ಲಿ ಡ್ಜೆ/ಜೆನ್ನೆಯ ವ್ಯಾಪಾರಿಗಳು ಅನೇಕ ಮಾರುಕಟ್ಟೆಗಳನ್ನು ಸ್ಥಾಪಿಸಿದರಲ್ಲದೇ ಪಟ್ಟಣದಲ್ಲಿ ಶಾಶ್ವತ ವಾಸಸ್ಥಾನಗಳನ್ನು ನಿರ್ಮಿಸಿದರು, ಇದು ಆ ಸ್ಥಳವು ಒಂಟೆಯ ಮೇಲೆ ಪಯಣಿಸುವವರಿಗೆ ಭೇಟಿಯ ಸ್ಥಳವಾಯಿತು. ಅವರು ಇಸ್ಲಾಮ್/ಮಹಮ್ಮದೀಯ ಧರ್ಮ ಮತ್ತು ಖುರಾನ್ ಪಠಣದ ಮೂಲಕ ಓದುವುದನ್ನೂ ಪರಿಚಯಿಸಿದರು. ಇಸ್ಲಾಮ್/ಮಹಮ್ಮದೀಯ ಧರ್ಮಕ್ಕಿಂತ ಮುನ್ನ, ಜನತೆಯು ನೈಗರ್ ನದಿಯ ಕಾಲ್ಪನಿಕ ಜಲ-ಸರ್ಪದೇವತೆಯಾದ ಔಗಾಡೌ-ಬಿಡಾವನ್ನು ಆರಾಧಿಸುತ್ತಿದ್ದರು.[೭] ಘಾನಾ ಸಾಮ್ರಾಜ್ಯದ ಪ್ರಗತಿಯೊಡನೆ ಅನೇಕ ಸಹಾರಾದಾಚಿನ ವ್ಯಾಪಾರ ಮಾರ್ಗಗಳನ್ನು ಸ್ಥಾಪಿಸಲಾಯಿತು. ಮೆಡಿಟರೇನಿಯನ್ ಆಫ್ರಿಕಾದ ಉಪ್ಪು ಮತ್ತು ಪಶ್ಚಿಮ-ಆಫ್ರಿಕಾದ ಚಿನ್ನ ಮತ್ತು ದಂತಕೃತಿಗಳು ಹಾಗೂ ಅಧಿಕ ಸಂಖ್ಯಾತ ಗುಲಾಮರುಗಳ ವ್ಯಾಪಾರವನ್ನು ಇವು ಒಳಗೊಂಡಿದ್ದವು. ಹನ್ನೊಂದನೇ ಶತಮಾನದ ಮಧ್ಯಭಾಗದಲ್ಲಿ, ಬ್ಯೂರ್ ನಗರದ ಸಮೀಪ ಪತ್ತೆಯಾದ ಹೊಸ ಚಿನ್ನದಗಣಿಗಳು ವ್ಯಾಪಾರಮಾರ್ಗವನ್ನು ಪೂರ್ವದೆಡೆಗೆ ಬದಲಿಸಿದವು. ಈ ಬೆಳವಣಿಗೆಯು ನೈಗರ್ ನದಿಯ ಮೇಲಿನ ದೋಣಿಗಳಿಗೆ ಒಂಟೆಗಳ ಮೇಲಿನ ಸರಕುಗಳನ್ನು ಹೇರಲಾಗುತ್ತಿದ್ದ ಟಿಂಬಕ್ಟುವನ್ನು ಸಮೃದ್ಧ ನಗರವನ್ನಾಗಿ ಮಾಡಿತು.
ಮಾಲಿ ಸಾಮ್ರಾಜ್ಯದ ಉಚ್ಛ್ರಾಯ
[ಬದಲಾಯಿಸಿ]ಹನ್ನೆರಡನೇ ಶತಮಾನದ ಅವಧಿಯಲ್ಲಿ, ಘಾನಾ ಸಾಮ್ರಾಜ್ಯದ ಅಳಿದುಳಿದ ಭಾಗದ ಮೇಲೆ ಸಾಸ್ಸೋ ಸಾಮ್ರಾಜ್ಯದ ಅರಸ ಸೌಮಾವ್‌ರೋ ಕಾಂಟೆ ಎಂಬಾತ ದಾಳಿಯಿಟ್ಟನು.[೯] ವಲಾಟಾದ ಮಹಮ್ಮದೀಯ ಪಂಡಿತೋತ್ತಮರು (ಔದಾಘೋಸ್ಟ್ ವ್ಯಾಪಾರ ಮಾರ್ಗದ ಎಲ್ಲೆಯಾಗಿದ್ದ ಸ್ಥಾನವನ್ನು ನಗರದ ತೆಕ್ಕೆಗೆ ತೆಗೆದುಕೊಳ್ಳುತ್ತಾ) ಟಿಂಬಕ್ಟುಗೆ ತೆರಳಿ ತಲೆತಪ್ಪಿಸಿಕೊಂಡರಲ್ಲದೇ ಇಸ್ಲಾಮ್/ಮಹಮ್ಮದೀಯ ಧರ್ಮದ ಸ್ಥಾನವನ್ನು ಅಲ್ಲಿ ಭದ್ರಪಡಿಸಿದರು. ಮಹಮ್ಮದೀಯ ಕಲಿಕೆಯ ಕೇಂದ್ರವಾಗಿ ಮಾರ್ಪಟ್ಟ ಟಿಂಬಕ್ಟು ನಗರವು ಸಂಕೋರ್ ವಿಶ್ವವಿದ್ಯಾಲಯ ಮತ್ತು 180 ಖುರಾನ್ ಬೋಧಕ ಶಾಲೆಗಳನ್ನು ಹೊಂದಿತ್ತು.[೫] 1324ನೇ ಇಸವಿಯಲ್ಲಿ ಮೆಕ್ಕಾದ ಯಾತ್ರೆಯಿಂದ ಮರಳುತ್ತಾ ಅರಸ ಮೂ/ಮುಸಾ I, ಟಿಂಬಕ್ಟುವನ್ನು ಶಾಂತಿಪೂರ್ವಕವಾಗಿ ವಶಪಡಿಸಿಕೊಂಡನು. ಆಗ ನಗರವು ಮಾಲಿ ಸಾಮ್ರಾಜ್ಯದ ಭಾಗವಾದ್ದರಿಂದ, ಅರಸನಾದ ಮೂ/ಮುಸಾ I ವೈಭವೋಪೇತ ಅರಮನೆಯನ್ನು ನಿರ್ಮಿಸಲು ಆದೇಶಿಸಿದುದಲ್ಲದೇ ತನ್ನ ಆಶ್ರಯದ ನೂರಾರು ಮಹಮ್ಮದೀಯ ಪಂಡಿತೋತ್ತಮರುಗಳೊಡನೆ, ಡ್ಜಿ/ಜಿಂಗರೇ ಬೆರ್ ಎಂಬ ಕಲಿಕಾ ಕೇಂದ್ರವನ್ನು 1327ರಲ್ಲಿ ನಿರ್ಮಿಸಿದನು.
1375ರ ಹೊತ್ತಿಗೆ, ಕೆಟಾಲನ್ ಭೂಪಟದಲ್ಲಿ ಕಾಣಿಸಿಕೊಂಡಿದ್ದ ಟಿಂಬಕ್ಟು ನಗರವು ಉತ್ತರ-ಆಫ್ರಿಕಾದ ಮಹಾನಗರಗಳೊಂದಿಗೆ ಸಂಪರ್ಕವಿರುವ ವಾಣಿಜ್ಯ ಕೇಂದ್ರವೆನಿಸಿದ್ದು ಯುರೋಪ್'ನ ಗಮನವನ್ನೂ ಸೆಳೆದಿತ್ತು.[೧೦]
ಟುವಾರೆಗ್ ಆಳ್ವಿಕೆ & ಸಾಂಘಾಯ್‌ರವರುಗಳ ಸಾಮ್ರಾಜ್ಯ
[ಬದಲಾಯಿಸಿ]15ನೇ ಶತಮಾನದ ಪ್ರಥಮಾರ್ಧದಲ್ಲಿ ಮಾಲಿ ಸಾಮ್ರಾಜ್ಯದ ಶಕ್ತಿಯು ಕ್ಷೀಣಿಸುತ್ತಿದ್ದ ಹಾಗೆ, ಮಘ್‌ಷರಾನ್ ಟುವಾರೆಗ್ 1433-1434ರ ಅವಧಿಯಲ್ಲಿ ನಗರದ ನಿಯಂತ್ರಣ ತೆಗೆದುಕೊಂಡು ಸನ್‌ಹಜ ಪ್ರಾಂತಾಧಿಪತಿಯನ್ನು ನೇಮಿಸಿದರು.[೧೧] ಆದಾಗ್ಯೂ ಮೂವತ್ತು ವರ್ಷಗಳ ನಂತರ ಪ್ರಗತಿ ಹೊಂದುತ್ತಿದ್ದ ಸಾಂಘಾಯ್ ಸಾಮ್ರಾಜ್ಯವು, ಟಿಂಬಕ್ಟುವನ್ನು 1468-1469ರಲ್ಲಿ ವಶಪಡಿಸಿಕೊಂಡು ವಿಸ್ತರಣೆಯಾಯಿತು. ಸಾಂಘಾಯ್ ಸಾಮ್ರಾಜ್ಯ ಮತ್ತು ಟಿಂಬಕ್ಟುಗಳಲ್ಲಿ ಸುವರ್ಣ ಯುಗವು ಉಂಟಾಗಲು ಕಾರಣರಾದ ಅನುಕ್ರಮವಾಗಿ ಸುನ್ನಿ ಅಲಿ ಬೆರ್ (1468–1492), ಸುನ್ನಿ ಬರು (1492–1493) ಮತ್ತು ಅಸ್ಕಿಯಾ ಮೊಹಮ್ಮದ್ I (1493–1528)ರವರುಗಳ ನೇತೃತ್ವವನ್ನು ಹೊಂದಿತ್ತು. ಗಾವೊ ನಗರವು ಸಾಮ್ರಾಜ್ಯದ ರಾಜಧಾನಿಯಾಗಿದ್ದರೂ, ಟಿಂಬಕ್ಟು ಸಾಪೇಕ್ಷವಾಗಿ ಸ್ವಾಯತ್ತ ಸ್ಥಾನಮಾನ ಪಡೆದಿತ್ತು. ಘಾಡೇಮ್ಸ್, ಔಜಿಡಾ ಮತ್ತಿತರ ಅನೇಕ ಉತ್ತರ ಆಫ್ರಿಕಾದ ನಗರಗಳ ವ್ಯಾಪಾರಿಗಳು ಉತ್ತರ ಆಫ್ರಿಕಾದ ವಸ್ತ್ರಗಳು ಮತ್ತು ಕುದುರೆಗಳು ಮತ್ತು ಟಘಾಜಾದ ಸಹಾರಾದ ಉಪ್ಪುಗಳ ಬದಲಾಗಿ ಅಲ್ಲಿ ಚಿನ್ನ ಮತ್ತು ಗುಲಾಮರನ್ನು ಕೊಳ್ಳಲು ನೆರೆಯುತ್ತಿದ್ದರು.[೧೨] ಸಾಮ್ರಾಜ್ಯದ ನೇತೃತ್ವವು ನಗರದಲ್ಲಿನ ಆಂತರಿಕ ಹೋರಾಟಗಳು ಅಲ್ಲಿನ ಸಮೃದ್ಧಿಯ ಇಳಿಕೆಗೆ ಕಾರಣವಾದರೂ 1591ರವರೆಗೆ ಅಸ್ಕಿಯಾ ರಾಜಸಂತತಿಯವರದಾಗೇ ಉಳಿದಿತ್ತು.
ಮೊರೊಕ್ಕೋದವರ ಸ್ವಾಧೀನಪಡಿಸಿಕೊಳ್ಳುವಿಕೆ
[ಬದಲಾಯಿಸಿ]ಪಾಷಾ ಮಹ್‌ಮೂದ್ B. ಝರ್ಕೂನ್‌ನ ನೇತೃತ್ವದಲ್ಲಿ ಚಿನ್ನದ ಗಣಿಗಳನ್ನು ಹುಡುಕಿಕೊಂಡು ಮೊರೊಕ್ಕೋದ, ಸಾಡಿ/ದಿ ಅರಸನಾದ ಅಹ್ಮದ್ I ಅಲ್-ಮನ್ಸೂರ್ ಕಳಿಸಿದ ಸೈನ್ಯವು ಆಗಸ್ಟ್ 17, 1591ರಂದು ನಗರವನ್ನು ವಶಪಡಿಸಿಕೊಂಡಾಗ ಸಾಪೇಕ್ಷ ಸ್ವಾಯತ್ತತೆಯ ಒಂದು ಯುಗ ಅಂತ್ಯ ಕಂಡಿತು. ವೈಚಾರಿಕವಾಗಿ, ಹಾಗೂ ಬಹುಮಟ್ಟಿಗೆ ಆರ್ಥಿಕವಾಗಿ ಕೂಡಾ ಟಿಂಬಕ್ಟು ಈ ಸಮಯದಲ್ಲಿ ದೀರ್ಘಾವಧಿಯ ಅವನತಿ ಕಾಣಲಾರಂಭಿಸಿತು. 1593ರಲ್ಲಿ, ಅಹ್ಮದ್ ಬಾಬಾರೂ ಸೇರಿದಂತೆ ಅನೇಕ ಟಿಂಬಕ್ಟು'ನ ಪಂಡಿತೋತ್ತಮರನ್ನು ಬಂಧಿಸಿ, ತರುವಾಯ ಕೊಲ್ಲುವುದು ಅಥವಾ ಗಡೀಪಾರು ಮಾಡಿ ಅದಕ್ಕೆ ಅವರು 'ದೇಶದ್ರೋಹ'ವೆಸಗಿದ್ದರೆಂದು ಸಾಡಿ/ದಿ ಅರಸೊತ್ತಿಗೆಯು ಕಾರಣ ನೀಡಿತು.[೧೩] ನಗರದ ಶ್ರೇಷ್ಠ ಪಂಡಿತೋತ್ತಮರಾಗಿದ್ದ ಅವರು ನಗರದ ಮೊರೊಕ್ಕೋ ಜನಾಂಗದ ಪ್ರಾಂತಾಧಿಪತಿಯೊಡನೆ ಹೊಂದಿದ್ದ ತಾತ್ವಿಕ ಭಿನ್ನಾಭಿಪ್ರಾಯದ ಕಾರಣದಿಂದಾಗಿ ಪ್ರಾಯಶಃ ಅವರನ್ನು ಮರ್ರಾಕೇಷ್‌ಗೆ ಸ್ಥಳಾಂತರಗೊಳ್ಳುವಂತೆ ಮಾಡಲಾಯಿತು, ಅಲ್ಲಿ ಅವರ ಪಂಡಿತೋತ್ತಮ ವರ್ಗ/ವಿಶ್ವದ ಗಮನ ಸೆಳೆಯುವಿಕೆ ಮುಂದುವರೆಯಿತು.[೧೪] ಅಹ್ಮದ್ ಬಾಬಾರವರು ನಂತರ ಟಿಂಬಕ್ಟುಗೆ ಮರಳಿದರಲ್ಲದೇ 1608ರಲ್ಲಿ ಅಲ್ಲಿಯೇ ಕೊನೆಯುಸಿರೆಳೆದರು. ಟಿಂಬಕ್ಟು'ವಿನ ಮಹತ್ವ/ಪಾತ್ರವನ್ನು ಕಡೆಗಣಿಸುತ್ತಾ ಅಟ್ಲಾಂಟಿಕ್ ಆಚಿನ ವ್ಯಾಪಾರಮಾರ್ಗಗಳು (ಟಿಂಬಕ್ಟುವಿನ ಪಂಡಿತೋತ್ತಮರು ಹಾಗೂ ಪ್ರಮುಖರೂ ಸೇರಿದಂತೆ ಆಫ್ರಿಕಾದ ಗುಲಾಮರುಗಳ ಸಾಗಣೆಗೆಂದು) ಹೆಚ್ಚುತ್ತಾ ಹೋದಂತೆ ಚರಮ ಕುಸಿತವು ಮುಂದುವರೆಯಿತು. ಮೊರೊಕ್ಕೋ - ಟಿಂಬಕ್ಟು ವ್ಯಾಪಾರಮಾರ್ಗಗಳ ನಿಯಂತ್ರಣದೊಂದಿಗೆ, ನಗರದ ಮೇಲಿನ ಮೊರೊಕ್ಕೋದವರ ಹಿಡಿತವು 1780ರವರೆಗಿನ ಅವಧಿಯಲ್ಲಿ ತನ್ನ ಸಡಿಲವಾಗತೊಡಗಿತಲ್ಲದೇ, 19ನೇ ಶತಮಾನದ ಆದಿಯಲ್ಲಿ ಸಾಮ್ರಾಜ್ಯವು ಟುವಾರೆಗ್ (1800), ಫುಲಾ (1813) ಮತ್ತು ಟುಕುಲಾರ್‌ಗಳು 1840ರಲ್ಲಿ ನಡೆಸಿದ ನಗರದ ಮೇಲಿನ ಆಕ್ರಮಣಗಳು ಹಾಗೂ ತರುವಾಯದ ಅಲ್ಪಕಾಲೀನ ಸ್ವಾಧೀನಪಡಿಕೆಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.[೬][೧೩] ಫ್ರೆಂಚರು ಅಲ್ಲಿಗೆ ಆಗಮಿಸಿದಾಗ ಟುಕುಲಾರ್‌ಗಳೇ ತಮ್ಮ ಹಿಡಿತದಲ್ಲೇ ಇಟ್ಟುಕೊಂಡಿದ್ದರೇ,[೧೫] ಅಥವಾ ಟುವಾರೆಗ್‌ಗಳು ಮತ್ತೊಮ್ಮೆ ಅಧಿಕಾರವನ್ನು ಪಡೆದುಕೊಂಡಿದ್ದರೇ[೧೬], ಎಂಬುದು ಸ್ಪಷ್ಟವಿಲ್ಲ.
ಪಶ್ಚಿಮದವರಿಂದ ಶೋಧನೆ
[ಬದಲಾಯಿಸಿ]ಲಿಯೋ ಆಫ್ರಿಕಾನಸ್'ರು ಮಾಡಿದ್ದ ಪ್ರಸ್ತಾಪದ ಅವಧಿಯ ಸುಮಾರಿಗೆ ನಗರದ ಐತಿಹಾಸಿಕ ವಿವರಣೆಗಳು ಲಭ್ಯವಿದ್ದು 16ನೇ ಶತಮಾನದ ಪ್ರಥಮಾರ್ಧದಲ್ಲಿ, ಅವು ಅನೇಕ ಐರೋಪ್ಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಟಿಂಬಕ್ಟುವನ್ನು ಮತ್ತು ಅದರ ಪ್ರಖ್ಯಾತ ಐಶ್ವರ್ಯವನ್ನು ಶೋಧಿಸಲು ಅಸಾಧಾರಣ ಪ್ರಯತ್ನಗಳನ್ನು ಮಾಡುವಂತೆ ಪ್ರೇರೇಪಿಸಿತು. 1788ರಲ್ಲಿ ಬಿರುದಾಂಕಿತ ಆಂಗ್ಲರ ಗುಂಪೊಂದು ನಗರವನ್ನು ಪತ್ತೆಹಚ್ಚುವ ಹಾಗೂ ನೈಗರ್ ನದಿಯ ಪಥವನ್ನು ನಿಗದಿಪಡಿಸುವ ಉದ್ದೇಶದೊಂದಿಗೆ ಆಫ್ರಿಕನ್ ಸಂಘಟನೆಯೊಂದನ್ನು ರಚಿಸಿಕೊಂಡರು. ಅವರ ಪ್ರಾಯೋಜಕತ್ವದಡಿ ಹೊರಟ ತೀರ ಮುಂಚಿನ ಶೋಧಕನೆಂದರೆ ನೈಗರ್ ನದಿ ಮತ್ತು ಟಿಂಬಕ್ಟುಗಳ ಹುಡುಕಾಟದಲ್ಲಿ ಎರಡು ಪ್ರವಾಸಗಳನ್ನು ಕೈಗೊಂಡ (ಮೊದಲಿಗೆ 1795ರಲ್ಲಿ ಹೊರಟಿದ್ದು, ನಂತರ 1805ರಲ್ಲಿ) ಮುಂಗೋ ಪಾರ್ಕ್ ಎಂಬ ಯುವ ಸ್ಕಾಟಿಷ್ ಸಾಹಸಿ. ಪಾರ್ಕ್‌ರು ನಗರವನ್ನು ತಲುಪಿದ ಪ್ರಥಮ ಪಾಶ್ಚಿಮಾತ್ಯ ಎನ್ನಲಾದರೂ ಆಧುನಿಕ ಕಾಲದ ನೈಜೀರಿಯಾದಲ್ಲಿ ತಮ್ಮ ಶೋಧನೆಗಳನ್ನು ವರದಿ ಮಾಡುವ ಅವಕಾಶ ಸಿಗದೇ ಮರಣಿಸಿದ್ದರು.[೧೭] 1824ರಲ್ಲಿ ಪ್ಯಾರಿಸ್ ಮೂಲದ ಸೊಸೈಟೆ ಡೆ ಜಿಯೋಗ್ರಾಫೆ ಸಂಸ್ಥೆಯು ಆ ಪಟ್ಟಣವನ್ನು ತಲುಪಿ ಅಲ್ಲಿನ ಮಾಹಿತಿ ತೆಗೆದುಕೊಂಡು ಬರುವ ಪ್ರಥಮ ಮಹಮ್ಮದೀಯೇತರನಿಗೆ 10,000 ಫ್ರಾಂಕ್ ಮೊತ್ತದ ಬಹುಮಾನವನ್ನು ಘೋಷಿಸಿತ್ತು.[೧೮] ಬ್ರಿಟನ್‌ನ ಗಾರ್ಡನ್ ಲೈಯಂಗ್‌ರು ಸೆಪ್ಟೆಂಬರ್ 1826ರಲ್ಲಿ ಅಲ್ಲಿಗೆ ಆಗಮಿಸಿದರೂ ಕೆಲ ಸಮಯದಲ್ಲೇ ಐರೋಪ್ಯ ಶೋಧನೆ ಮತ್ತು ಹಸ್ತಕ್ಷೇಪದ ಬಗ್ಗೆ ಭೀತರಾಗಿದ್ದ ಸ್ಥಳೀಯ ಮಹಮ್ಮದೀಯರಿಂದ ಕೊಲ್ಲಲ್ಪಟ್ಟರು.[೧೯] ಮಹಮ್ಮದೀಯನ ವೇಷದಲ್ಲಿ ಏಕಾಂಗಿಯಾಗಿ ಪಯಣಿಸುತ್ತಾ ಫ್ರೆಂಚ್ ವ್ಯಕ್ತಿ ರೆನೆ ಕೈಲ್ಲಿಯೇ 1828ರಲ್ಲಿ ಆಗಮಿಸಿದರು; ಅವರು ಸುರಕ್ಷಿತವಾಗಿ ಹಿಂದಿರುಗಿ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು.[೨೦]
ರಾಬರ್ಟ್ ಆಡಮ್ಸ್, ಎಂಬ ಓರ್ವ ಆಫ್ರಿಕನ್-ಅಮೇರಿಕನ್ ನೌಕಾಯಾನಿ, ಆಫ್ರಿಕಾದ ತೀರದಲ್ಲಿ ಆತನ ಹಡಗು ಧ್ವಂಸಗೊಂಡಾಗ 1811ರಲ್ಲಿ ಗುಲಾಮನಾಗಿ ನಗರಕ್ಕೆ ಭೇಟಿ ನೀಡಿದ್ದೆನೆಂದು ಹೇಳಿಕೊಂಡಿದ್ದನು.[೨೧] 1813ರಲ್ಲಿ ಮೊರೊಕ್ಕೋದ ಟ್ಯಾಂಜಿಯೆರ್ನಲ್ಲಿನ ಬ್ರಿಟಿಷ್ ರಾಯಭಾರಿ ಕಚೇರಿಗೆ ವರದಿಯನ್ನು ಸಲ್ಲಿಸಿದ್ದರು. ಅವರು ತಮ್ಮ ಕಥನವನ್ನು 1816ರ ಪುಸ್ತಕ, ದ ನರೇಟಿವ್ ಆಫ್ ರಾಬರ್ಟ್ ಆಡಮ್ಸ್, ಎ ಬಾರ್ಬರಿ ಕ್ಯಾಪ್ಟಿವ್ (2006ರ ಮಟ್ಟಿಗೆ ಈಗಲೂ ಮುದ್ರಿತ ಪ್ರತಿ ಲಭ್ಯವಿದೆ)ನಲ್ಲಿ ಪ್ರಕಟಿಸಿದ್ದಾರೆ, ಆದರೆ ಅವರ ಕಥನದ ಬಗ್ಗೆ ಇನ್ನೂ ಅನುಮಾನಗಳಿವೆ.[೨೨] 1890ಕ್ಕೆ ಮುನ್ನ ನಗರಕ್ಕೆ ತಲುಪಿದ ಇತರೆ ಮೂವರು ಐರೋಪ್ಯರೆಂದರೆ : 1853ರಲ್ಲಿ ತಲುಪಿದ ಹೇನ್‌ರಿಚ್ ಬಾರ್ತ್ ಮತ್ತು ಸ್ಪೇನ್‌ವಾಸಿ ಕ್ರಿಸ್ಟೋಬಲ್ ಬೆನಿಟೆಜ್‌ರೊಡನೆ 1880ರಲ್ಲಿ ತಲುಪಿದ ಜರ್ಮನಿಯ ಆಸ್ಕರ್ ಲೆನ್ಜ್.[೨೩][೨೪]
ಫ್ರೆಂಚರ ವಸಾಹತು ಸಾಮ್ರಾಜ್ಯದ ಭಾಗವಾಗಿ
[ಬದಲಾಯಿಸಿ]ಬರ್ಲಿನ್ ಸಮ್ಮೇಳನದಲ್ಲಿ ಆಫ್ರಿಕಾದ ಬಗ್ಗೆ ಹೋರಾಟವು ಅಧಿಕೃತಗೊಂಡಾಗ ದಕ್ಷಿಣಕ್ಕೆ ಉದಾಹರಣೆಗೆ ನೈಗರ್‌ನ ಸೇನಿಂದ ಬರೌವಾದೆಡೆಗೆ 14ನೇ ಖಗೋಳಮಧ್ಯರೇಖೆ ಮತ್ತು ಚಾಡ್‌ನ ಮಿಲ್‌ಟೌಗಳ ನಡುವಿನ ಭೂಮಿಯು ಫ್ರೆಂಚರ ವಸಾಹತುವೆನಿಸಿಕೊಂಡಿತು. ಟಿಂಬಕ್ಟು ಪ್ರದೇಶವು ಆಗ ಫ್ರೆಂಚರ ಹೆಸರಿನಲ್ಲೇ ಇದ್ದರೂ, ಕಾರ್ಯರೂಪಕ್ಕಿಳಿಸುವ ವಿಧಾನದ ಪ್ರಕಾರ ಫ್ರಾನ್ಸ್ ಹಾಗೆ ನಿಗದಿಪಡಿಸಲ್ಪಟ್ಟ ಪ್ರದೇಶಗಳಲ್ಲಿ ವಾಸ್ತವವಾಗಿ ಅಧಿಕಾರವನ್ನು ಹೊಂದಬೇಕಿತ್ತು e.g. ಸ್ವಾಮ್ಯವನ್ನು ಪ್ರಮಾಣೀಕರಿಸುವ ಮುನ್ನ ಸ್ಥಳೀಯ ಮುಖ್ಯಸ್ಥರೊಡನೆ ಒಪ್ಪಂದಗಳನ್ನು ಮಾಡಿಕೊಂಡು, ಸರ್ಕಾರ ರಚಿಸಿ ಆ ಪ್ರದೇಶವನ್ನು ಆರ್ಥಿಕವಾಗಿ ಬಳಸಿಕೊಳ್ಳಬೇಕಿರುತ್ತದೆ. ಡಿಸೆಂಬರ್ 28, 1893ರಂದು, ನಗರವು ತನ್ನ ಉಚ್ಛ್ರಾಯ ಮುಗಿದು ದೀರ್ಘಕಾಲದ ನಂತರ ಸೇನಾಧಿಕಾರಿ ಬಾಯ್ಟೆಯಕ್ಸ್‌ರ ನೇತೃತ್ವದಲ್ಲಿ ಫ್ರೆಂಚರ ಪುಟ್ಟ ಗುಂಪೊಂದು ವಶಪಡಿಸಿಕೊಂಡಿತು : ಟಿಂಬಕ್ಟು ಆಗ ಫ್ರಾನ್ಸ್‌ನ ವಸಾಹತುವಾಗಿದ್ದ ಫ್ರೆಂಚ್ ಸುಡಾನ್‌ನ ಭಾಗವೆನಿಸಿಕೊಂಡಿತು.[೨೫][೨೬] 1899ರಲ್ಲಿ ವಸಾಹತುವಿನ ಭಾಗವನ್ನು ವಿಭಜನೆಗೊಳಿಸಿದ ನಂತರ, ಉಳಿದ ಪ್ರದೇಶಗಳನ್ನು ಪುನಃಸ್ಸಂಘಟನೆಗೊಳಿಸಲಾಯಿತಲ್ಲದೇ ಅಲ್ಪಕಾಲದ ಮಟ್ಟಿಗೆ ಸೆನೆಗಾಂಬಿಯಾ ಮತ್ತು ನೈಗರ್ ಎಂದು ಅವುಗಳನ್ನು ಕರೆಯಲಾಯಿತು, 1902ರವರೆಗೆ ಇದೇ ಸ್ಥಿತಿಯು ಮುಂದುವರೆಯಿತು. ಎರಡೇ ವರ್ಷಗಳ ನಂತರ 1904ರಲ್ಲಿ, ಮತ್ತೊಂದು ಪುನಸ್ಸಂಘಟನೆ ನಡೆಯಿತಲ್ಲದೇ, 1920ರವರೆಗೆ ಟಿಂಬಕ್ಟು ನಗರವು ಮೇಲಿನ ಸೆನೆಗಲ್ ಮತ್ತು ನೈಗರ್‌ಗಳ ಭಾಗವಾಗಿತ್ತು, ಆ ನಂತರ ವಸಾಹತು ತನ್ನ ಹಳೆಯ ಹೆಸರಾದ ಫ್ರೆಂಚ್ ಸೂಡಾನ್ ಎಂಬ ಹೆಸರನ್ನು ಮತ್ತೆ ಪಡೆದುಕೊಂಡಿತು.[೧೫]
ವಿಶ್ವ ಸಮರ II
[ಬದಲಾಯಿಸಿ]ಜನರಲ್ ಚಾರ್ಲ್ಸ್ ಡಿ ಗಾಲೆಯವರಿಗೆ ನಾಝಿ-ಆಕ್ರಮಿತ ಫ್ರಾನ್ಸ್ ಹಾಗೂ ದಕ್ಷಿಣದ ವಿಚಿ ಫ್ರಾನ್ಸ್‌ನೊಂದಿಗೆ ಹೋರಾಡಲು ಸಹಾಯವಾಗುವಂತೆ ವಿಶ್ವ ಸಮರ IIರ ಅವಧಿಯಲ್ಲಿ, ಟಿಂಬಕ್ಟುವಿನಿಂದ ಬಂದಿದ್ದ ಕೆಲವು ಸೇರಿದಂತೆ ಅನೇಕ ತುಕಡಿಗಳನ್ನು ಫ್ರೆಂಚ್ ಸೌ/ಸೂಡಾನ್‌ನಲ್ಲಿ ನೇಮಿಸಿಕೊಳ್ಳಲಾಯಿತು.[೧೭]
ಸುಮಾರು 60 ಮಂದಿ ಬ್ರಿಟಿಷ್ ಸಮುದ್ರ ವ್ಯಾಪಾರಿಗಳು SS ಅಲ್ಲೆಂಡೆ (ಕಾರ್ಡಿಫ್)ನಿಂದ, 17ನೇ ಮಾರ್ಚ್ 1942ರಂದು ಪಶ್ಚಿಮ ಆಫ್ರಿಕಾದ ದಕ್ಷಿಣ ತೀರದಾಚೆಗೆ ಮುಳುಗಿದ್ದವರನ್ನು ದ್ವಿತೀಯ ವಿಶ್ವ ಸಮರದ ಅವಧಿಯಲ್ಲಿ ನಗರದಲ್ಲಿ ಸೆರೆಯಲ್ಲಿಡಲಾಗಿತ್ತು. ಎರಡು ತಿಂಗಳ ನಂತರ ಫ್ರೀಟೌನ್‌ನಿಂದ ಟಿಂಬಕ್ಟುವಿಗೆ ಸ್ಥಳಾಂತರಗೊಂಡ ನಂತರ, ಅವರಲ್ಲಿ ಈರ್ವರು, AB ಜಾನ್ ಟರ್ನ್‌ಬುಲ್ ಗ್ರಹಾಮ್ (2 ಮೇ 1942, ವಯಸ್ಸು 23) ಮತ್ತು ಮುಖ್ಯ ಅಭಿಯಂತರ ವಿಲಿಯಮ್ ಸೌಟ್ಟರ್ (28 ಮೇ 1942, ವಯಸ್ಸು 60)ರವರುಗಳು ಅಲ್ಲಿಯೇ 1942ರ ಮೇ ತಿಂಗಳಿನಲ್ಲಿ ಮರಣಿಸಿದರು. ಈರ್ವರನ್ನೂ ಐರೋಪ್ಯ ರುದ್ರಭೂಮಿಯಲ್ಲಿ ಹೂಳಲಾಯಿತು - ಬಹುಶಃ ಇದು ಕಾಮನ್‌ವೆಲ್ತ್ ವಾರ್ ಗ್ರೇವ್ಸ್ ಕಮಿಷನ್ ಸಂಸ್ಥೆಯ ಉಸ್ತುವಾರಿಯಲ್ಲಿರುವ ಅತ್ಯಧಿಕ ದೂರದ ಬ್ರಿಟಿಷ್ ಯುದ್ಧಸಮಾಧಿಯಾಗಿದೆ.[೨೭]
ಅವರುಗಳು ಮಾತ್ರವೇ ಟಿಂಬಕ್ಟುವಿನಲ್ಲಿ ಯುದ್ಧಕೈದಿಗಳಾಗಿರಲಿಲ್ಲ: 1942ರಲ್ಲಿ ಅವರ ಹಡಗು, SS ಕ್ರಿಟನ್ , ಎರಡು ವಿಚಿ ಫ್ರೆಂಚ್ ಯುದ್ಧನೌಕೆಗಳಿಂದ ಅಡ್ಡಗಟ್ಟಲ್ಪಟ್ಟಾಗ ಸೆರೆಯಾದ 52 ವ್ಯಕ್ತಿಗಳಲ್ಲಿ ಪೀಟರ್ ಡಿ ನ್ಯೂಮನ್‌ರೂ ಒಬ್ಬರಾಗಿದ್ದರು. ಡಿ ನ್ಯೂಮನ್ನರೂ ಸೇರಿದಂತೆ ಅನೇಕರು ತಪ್ಪಿಸಿಕೊಂಡು ಹೋದರೂ, ಅವರೆಲ್ಲರನ್ನೂ ಮತ್ತೆ ಸೆರೆಹಿಡಿದು ಸ್ಥಳೀಯರ ಕಾವಲಿನಲ್ಲಿ ಒಟ್ಟು ಹತ್ತು ತಿಂಗಳ ಕಾಲ ನಗರದಲ್ಲಿಡಲಾಗಿತ್ತು. ಅವರು ಇಂಗ್ಲೆಂಡ್‌ಗೆ ಮರಳಿದ ನಂತರ ಅವರು "ಟಿಂಬಕ್ಟೂವಿನಿಂದ ಬಂದ ವ್ಯಕ್ತಿ" ಎಂದೆನಿಸಿಕೊಂಡರು.[೨೮]
ಸ್ವಾತಂತ್ರ್ಯ & ಆನಂತರ
[ಬದಲಾಯಿಸಿ]ವಿಶ್ವ ಸಮರ II ಕೊನೆಯಾದ ನಂತರ, ಫ್ರೆಂಚ್ ಸರ್ಕಾರವು ಚಾರ್ಲ್ಸ್ ಡಿ ಗಾಲೆರ ನೇತೃತ್ವದಡಿಯಲ್ಲಿ ವಸಾಹತಿಗೆ ಹೆಚ್ಚು ಹೆಚ್ಚಾಗಿ ಸ್ವಾತಂತ್ರ್ಯವನ್ನು ನೀಡಿತು. ಅಲ್ಪಾವಧಿಯ ಮಾಲಿ ಒಕ್ಕೂಟದ ಭಾಗವಾಗಿದ್ದ ಸ್ವಲ್ಪ ಕಾಲದ ನಂತರ, ಮಾಲಿ ಗಣರಾಜ್ಯವನ್ನು ಸೆಪ್ಟೆಂಬರ್ 22, 1960ರಂದು ಘೋಷಿಸಲಾಯಿತು. ನವೆಂಬರ್ 19, 1968ರ ನಂತರ, 1974ರಲ್ಲಿ ನವೀನ ಸಂವಿಧಾನವೊಂದನ್ನು ರಚಿಸಿ, ಮಾಲಿಯನ್ನು ಏಕ-ಪಕ್ಷದ ರಾಷ್ಟ್ರವನ್ನಾಗಿ ಘೋಷಿಸಲಾಯಿತು.[೨೯] ಆ ಹೊತ್ತಿಗಾಗಲೇ, ನೈಗರ್ ನದಿಗೆ ನಗರವನ್ನು ಸಂಪರ್ಕಿಸುವ ನಾಲೆಯು ಆಕ್ರಮಿಸಿಕೊಳ್ಳುತ್ತಿರುವ ಮರಳುಗಾಡಿನ ಮರಳಿನಿಂದ ತುಂಬಿಹೋಗಿತ್ತು. ತೀವ್ರ ಅನಾವೃಷ್ಟಿಯು ಸಹೇಲ್ ಪ್ರದೇಶಕ್ಕೆ 1973 ಮತ್ತು 1985ರಲ್ಲಿ ಆಕ್ರಮಣ ಮಾಡಿ, ಟಿಂಬಕ್ಟು ಸುತ್ತಮುತ್ತಲಿನ ಮೇಕೆ ಸಾಕಾಣಿಕೆಯ ಮೇಲೆ ಆಧಾರಿತರಾಗಿದ್ದ ಟುವಾರೆಗ್ ಜನತೆಗೆ ವ್ಯಾಪಕ ಹಾನಿಯನ್ನುಂಟು ಮಾಡಿತು. ನೈಗರ್' ನದಿಯ ನೀರಿನ ಮಟ್ಟ ಇಳಿಕೆಯಾಗಿ ಆಹಾರಸಾಮಗ್ರಿ ಸರಬರಾಜು ಮತ್ತು ವ್ಯಾಪಾರಿ ಹಡಗುಗಳ ಆಗಮನವನ್ನು ವಿಳಂಬಗೊಳಿಸಿತು. ಈ ಬಿಕ್ಕಟ್ಟು ಟೌಂಬೌಕ್ಟೌ ವಲಯದ ಕೆಲ ನಿವಾಸಿಗಳನ್ನು ಅಲ್ಜೀರಿಯಾ ಮತ್ತು ಲಿಬಿಯಾಗಳಿಗೆ ವಲಸೆ ಹೋಗುವಂತೆ ಮಾಡಿತು. ಅಲ್ಲಿಯೇ ಉಳಿದವರು ಆಹಾರ ಮತ್ತು ನೀರಿನ ವಿಷಯಗಳಿಗೆ UNICEFನಂತಹಾ ಮಾನವಹಿತಕಾರಿ ಸಂಸ್ಥೆಗಳ ಮೇಲೆ ಅವಲಂಬಿಸಿದ್ದರು.[೩೦]
ವ್ಯುತ್ಪತ್ತಿಶಾಸ್ತ್ರ
[ಬದಲಾಯಿಸಿ]ಶತಮಾನಗಳವರೆಗೆ ಯಾತ್ರಿಕ ಆಂಟೋನಿಯಸ್ ಮಾಲ್‌ಫಾಂಟೆ’ರ 1447ರಲ್ಲಿ ಬರೆದ ಪತ್ರದಲ್ಲಿನ “ಥಾಂಬೆಟ್” ಎಂಬ ಬಳಕೆ ಮತ್ತು ಕಾ ಡಾ ಮಾಸ್ಟೋರಿಂದ ಅವರ “ವಾಯೇಜಸ್ ಆಫ್ ಕಾಡಾಮಾಸ್ಟೋ" ಕೃತಿಯಲ್ಲಿ ಬಳಕೆಯಿಂದ ಹಿಡಿದು ಹೇನ್‌ರಿಚ್ ಬಾರ್ತ್’ರ ಟಿಂಬಕ್ಟು ಮತ್ತು ಟಿಂಬ'ಕ್ಟುವರೆಗೆ ಟಿಂಬಕ್ಟುವಿನ ಕಾಗುಣಿತವು ಸಾಕಷ್ಟು ವ್ಯತ್ಯಾಸ ಕಂಡಿದೆ. ಟಿಂಬಕ್ಟು’ವಿನ ಕಾಗುಣಿತದೊಂದಿಗೆ ಅದರ ವ್ಯುತ್ಪತ್ತಿಶಾಸ್ತ್ರವೂ ಈಗಲೂ ಚರ್ಚೆಗೆ ಮುಕ್ತವಾಗಿದೆ.[೨೫]
ಟಿಂಬಕ್ಟು ಎಂಬ ಹೆಸರಿಗೆ ಕನಿಷ್ಠ ನಾಲ್ಕು ಸಂಭವನೀಯ ಮೂಲಗಳನ್ನು ವರ್ಣಿಸಲಾಗಿದೆ:
- ಸಾಂಘಾಯ್ ಮೂಲ: ಲಿಯೋ ಆಫ್ರಿಕಾನಸ್ ಮತ್ತು ಹೇನ್‌ರಿಚ್ ಬಾರ್ತ್ ಈರ್ವರೂ ಈ ಹೆಸರು ಎರಡು ಸಾಂಘೌ ಪದಗಳಿಂದ ವ್ಯುತ್ಪನ್ನವಾಗಿದೆ ಎಂದು ನಂಬಿದ್ದರು. ಲಿಯೋ ಆಫ್ರಿಕಾನಸ್ ಪ್ರತಿಪಾದಿಸುವ ಪ್ರಕಾರ: “ಈ ಹೆಸರು [ಟಿಂಬಕ್ಟು] ನಮ್ಮ ಕಾಲದಲ್ಲಿ (ಕೆಲವರು ಭಾವಿಸುವ ಹಾಗೆ) ಈ ಸಾಮ್ರಾಜ್ಯದ ಮೇಲೆ (ಅವರು ಹೇಳುವ ಹಾಗೆ) ಅರಸ ಮೆನ್ಸೆ ಸುಲೇಮಾನ್ ಹೆಜೀರಾ ಶಕೆಯ ವರ್ಷ 610 [1213-1214][೩೧] ರಲ್ಲಿ ಸ್ಥಾಪಿಸಿದ ಹಾಗೆ ಕರೆಯಲಾಗುತ್ತಿದ್ದ ನಿರ್ದಿಷ್ಟ ಪಟ್ಟಣದ ಹೆಸರನ್ನು ಹೇರಲಾಗಿದೆ ."[೩೨] ಈ ಪದವು ಎರಡು ಭಾಗಗಳನ್ನು ಹೊಂದಿದ್ದು, ಟಿನ್ (ಗೋಡೆ ) ಮತ್ತು ಬು/ಬಟು ("ಬು/ಬಟುವಿನ ಗೋಡೆ "), ಆಫ್ರಿಕಾನಸ್ ಇದರ ಅರ್ಥವೇನೆಂದು ವಿವರಿಸಿರಲಿಲ್ಲ. ಹೇನ್‌ರಿಚ್ ಬಾರ್ತ್ : "ಹೆಸರಿನ ಮೂಲ ರೂಪವು, ಇಮೋಷಾಘ್‌ರು ಟುಂಬಿಟ್ಕು ಪದವನ್ನು ವ್ಯುತ್ಪನ್ನಗೊಳಿಸಿದ ಸಾಂಘಾಯ್ ರೂಪ ಟುಂಬಟುವಾಗಿದ್ದು, ನಂತರ ಅದನ್ನು ಅರಬ್ಬರು ಟಾಂಬಕ್ಟು ಆಗಿ ಬದಲಾಯಿಸಿದ್ದಿರಬಹುದು ” (1965[1857]: 284) ಎಂದು ಸೂಚಿಸಿದ್ದರು. ಪದದ ಅರ್ಥದ ಬಗ್ಗೆ ಬಾರ್ಥ್‌ರು ಹೀಗೆಂದಿದ್ದರು : “ಪಟ್ಟಣವು ಪ್ರಾಯಶಃ ಸಾಂಘಾಯ್ ಭಾಷೆಯಲ್ಲಿ ಹಾಗೆಂದು ಕರೆಯಲ್ಪಟ್ಟಿರಬಹುದು : ಅದು ಟೇಮಾಷಿಗ್ಟ್ ಪದವಾಗಿದ್ದ ಪಕ್ಷದಲ್ಲಿ, ಅದನ್ನು ಟಿನ್‌ಬಕ್ಟು ಎಂದು ಬರೆದಿರಬೇಕಾಗಿತ್ತು ಈ ಹೆಸರನ್ನು ಐರೋಪ್ಯರು ಸಾಧಾರಣವಾಗಿ "ಬುಕ್ಟುವಿನ ಬಾವಿ"ಯಾಗಿ [ಎಂದು] ಅರ್ಥೈಸುತ್ತಾರೆ, ಆದರೆ "ಟಿನ್" ಪದಕ್ಕೂ ಬಾವಿಗೂ ಯಾವುದೇ ರೀತಿಯ ಸಂಬಂಧವಿಲ್ಲ”. (ಬಾರ್ಥ್ 1965:284-285 ಅಡಿಟಿಪ್ಪಣಿ)
- ಬರ್ಬರರ ಮೂಲ : ಸಿಸ್ಸೋಕೋ ಬೇರೆಯೇ ಆದ ವ್ಯುತ್ಪತ್ತಿಯನ್ನು ತೋರ್ಪಡಿಸುತ್ತಾರೆ: ನಗರದ ಟುವಾರೆಗ್ ಸ್ಥಾಪಕರು ಅದಕ್ಕೆ “ಇದರ ಸ್ಥಳ ” ಎಂಬರ್ಥದ ಇನ್ ಎಂಬುದರ ಸ್ತ್ರೀಲಿಂಗ ರೂಪ ಟಿಮ್ , ಮತ್ತು ಅರಬ್ ಪದ ನೆಕ್‌ಬಾ (ಮರಳಿನ ಸಣ್ಣ ದಿಬ್ಬ)ದ ಹ್ರಸ್ವರೂಪ “ಬೌಕ್ಟೌ ” ಎಂಬ ಎರಡು ಭಾಗಗಳನ್ನು ಹೊಂದಿರುವ ಬರ್ಬರರ ಹೆಸರನ್ನಿಟ್ಟಿದ್ದರು. ಆದ್ದರಿಂದ, ಟಿಂಬಕ್ಟು ಎಂಬುದರ ಅರ್ಥ “ಸಣ್ಣ ದಿಬ್ಬಗಳಿಂದ ಕೂಡಿದ ಸ್ಥಳ ” ಎಂಬುದಾಗಿತ್ತು.[೩೩]
- ಅಬ್ದ್ ಅಲ್-ಸಾದಿ ತಮ್ಮ ತಾರೀಖ್ ಅಲ್-ಸುಡಾನ್ (ca. 1655) ಕೃತಿಯಲ್ಲಿ ಹೆಸರಿನ ಮೂರನೇ ವಿವರಣೆ ಕೊಡುತ್ತಾರೆ: “ಮೊದಲಿಗೆ ಭೂಪ್ರದೇಶದ ಹಾಗೂ ಜಲಮಾರ್ಗಗಳ ಪ್ರಯಾಣಿಕರುಗಳು ಭೇಟಿಯಾಗುವ ಸ್ಥಳವಾಗಿತ್ತು. ಅವರು ಈ ಸ್ಥಳವನ್ನು ತಮ್ಮ ಸಾಮಗ್ರಿ ಹಾಗೂ ಧಾನ್ಯಗಳ ಉಗ್ರಾಣವನ್ನಾಗಿಸಿದ್ದರು. ಅಲ್ಪಕಾಲದಲ್ಲೇ ಈ ಸ್ಥಳವು ಆ ಮೂಲಕ ಹಾದುಹೋಗುವ ಯಾತ್ರಿಕರ ಕೂಡು-ಹಾದಿಯಾಗಿ ಮಾರ್ಪಟ್ಟಿತು. ಅವರು ವೃದ್ಧ ಎಂಬರ್ಥದ ಟಿಂಬಕ್ಟೂ ಎಂಬ ಹೆಸರಿನ [ಓರ್ವ] ನಂಬಿಕೆಯ ಗುಲಾಮನ ವಶಕ್ಕೆ ತಮ್ಮ ವಸ್ತು/ಸಾಮಗ್ರಿಗಳನ್ನೆಲ್ಲಾ ಒಪ್ಪಿಸಿರುತ್ತಿದ್ದರು” .
- ರೆನೆ ಬ್ಯಾಸ್ಸೆಟ್ ಎಂಬ ಫ್ರೆಂಚ್ ಪೌರಸ್ತ್ಯ ಪಂಡಿತ ಮತ್ತೊಂದು ಸಿದ್ದಾಂತವನ್ನು ಮುಂದಿಟ್ಟರು: ಈ ಹೆಸರು “ದೂರವಿರುವಿಕೆ” ಅಥವಾ “ಮರೆಯಾಗಿರುವಿಕೆ” ಎಂಬರ್ಥದ ಝೆನಾಗಾ ಮೂಲ ಪದ b-k-t ಮತ್ತು ಸ್ತ್ರೀಲಿಂಗ ಷಷ್ಟೀ ವಿಭಕ್ತಿ ಅವ್ಯಯ ಪದ ಟಿನ್ ಗಳಿಂದ ವ್ಯುತ್ಪನ್ನವಾಗಿದೆ. “ಮರೆಯಾಗಿರುವಿಕೆ” ಎಂಬರ್ಥವು ನಗರವು ಸಣ್ಣಗೆ ಒಳಬಾಗಿದಂತಹಾ ಪ್ರದೇಶದಲ್ಲಿರುವುದನ್ನು ಸೂಚಿಸಲಿರಬಹುದು.[೧೦]
ಈ ಸಿದ್ದಾಂತಗಳ ಅಂಗೀಕಾರಾರ್ಹತೆಯು ನಗರದ ಮೂಲ ಸ್ಥಾಪಕರ ವ್ಯಕ್ತಿತ್ವದ ಮೇಲೆ ಆಧರಿಸಿರುತ್ತದೆ: ಸಾಂಘಾಯ್ ಸಾಮ್ರಾಜ್ಯದ ಅಸ್ತಿತ್ವಕ್ಕೆ ಹಿಂದಿನ ಅವಶೇಷಗಳು ಮತ್ತು ಅದಕ್ಕೂ ಹಿಂದಿನ ಇತಿಹಾಸದ ಬಗೆಗಿನ ಕಥೆಗಳು ಟುವಾರೆಗ್‌ಗಳೆಡೆಗೆ ಬೊಟ್ಟು ಮಾಡುತ್ತವೆ.[೫][೬] ಆದರೆ 2000ನೇ ಇಸವಿಯಷ್ಟು ಇತ್ತೀಚಿನದಾದ, ಪುರಾತತ್ವಶಾಸ್ತ್ರೀಯ ಸಂಶೋಧನೆಗಳಲ್ಲಿಯೂ ಹಿಂದಿನ ಶತಮಾನಗಳ ಕಾಲದಲ್ಲಿ ಮೀಟರ್‌ಗಟ್ಟಲೆ ಮರಳು ಅವಶೇಷಗಳ ಮೇಲೆ ಆವರಿಸಿರುವುದರಿಂದ 11ನೇ/12ನೇ ಶತಮಾನದಷ್ಟು ಹಳೆಯದಾದ ಯಾವ ಅವಶೇಷಗಳೂ ಕಂಡುಬಂದಿಲ್ಲ.[೩೪] ಒಮ್ಮತವಿಲ್ಲದ ಕಾರಣ, ಟಿಂಬಕ್ಟುವಿನ ವ್ಯುತ್ಪತ್ತಿಯು ಅಸ್ಪಷ್ಟವಾಗಿಯೇ ಉಳಿದಿದೆ.
ಐತಿಹ್ಯ ಕಥೆಗಳು
[ಬದಲಾಯಿಸಿ]ಟಿಂಬಕ್ಟು'ವಿನ ಅಸಾಧಾರಣ ಐಶ್ವರ್ಯದ ಬಗೆಗಿನ ಕಥೆಗಳು ಆಫ್ರಿಕಾದ ಪಶ್ಚಿಮ ಕರಾವಳಿಯ ಐರೋಪ್ಯ ಶೋಧನೆಗೆ ಕಾರಣವಾದವು. ಟಿಂಬಕ್ಟುವಿನ ಅತಿ ಜನಪ್ರಿಯ ವಿವರಣೆಗಳೆಂದರೆ ಇಬ್ನ್ ಬಟ್ಟೂಟಾ, ಲಿಯೋ ಆಫ್ರಿಕಾನಸ್ ಮತ್ತು ಷಬೇನಿಯವರುಗಳದ್ದು.
ಇಬ್ನ್ ಬಟ್ಟೂಟಾ
[ಬದಲಾಯಿಸಿ]ಟಿಂಬಕ್ಟುವಿನ ಅತಿ ಹಳೆಯ ಕಥನಗಳೆಂದರೆ ಪ್ರಸಿದ್ಧ ಯಾತ್ರಿಕ ಮತ್ತು ಪಂಡಿತೋತ್ತಮ ಇಬ್ನ್ ಬಟ್ಟೂಟಾರದ್ದು. ಇಬ್ನ್ ಬಟ್ಟೂಟಾ'ರ ಫೆಬ್ರವರಿ 1352ರಿಂದ ಡಿಸೆಂಬರ್ 1353ರವರೆಗಿನ ಪಶ್ಚಿಮ ಆಫ್ರಿಕಾದ ಭೇಟಿಯ ಅವಧಿಯಲ್ಲಿ ಟಿಂಬಕ್ಟು ನಗರವು ಮಾಲಿ ಸಾಮ್ರಾಜ್ಯದ ಭಾಗವಾಗಿಯೇ ಇದ್ದರೂ ನೆರೆಯ ರಾಜ್ಯಗಳು ಹಾಗೂ ಅದುವರೆಗೆ ಸಾಮಂತ ರಾಜ್ಯವಾಗಿದ್ದ ಸಾಂಘಾಯ್ ಸಾಮ್ರಾಜ್ಯದ ಹೆಚ್ಚಿದ ಬಲವು ಸಾಮ್ರಾಜ್ಯಕ್ಕೆ ಅಪಾಯವಾಗಿ ಪರಿಣಮಿಸಿದ್ದವು. ಆ ಹೊತ್ತಿಗಾಗಲೇ ವಾಣಿಜ್ಯಕೇಂದ್ರವಾಗಿದ್ದ, ಟಿಂಬಕ್ಟು ನಗರವು ಆಧುನಿಕ-ದಿನಮಾನದ ಬುರ್ಕಿನಾ ಫಾಸೊದಲ್ಲಿದ್ದ ಮಾಸ್ಸಿ ಸಾಮ್ರಾಜ್ಯಕ್ಕೆ ಆಕರ್ಷಕ ಗುರಿಯಾಗಿ ಪರಿಣಮಿಸಿತ್ತು - ಇಬ್ನ್ ಬಟ್ಟೂಟಾ ಹಾಗೆ ಅವರು ನಗರವನ್ನ ಕೊಳ್ಳೆಹೊಡೆದಿದ್ದನ್ನೇ ವಿವರಣೆ ನೀಡಿದ್ದಾಗಿತ್ತು :[೧೦]
- Ibn Battuta's Rihla according to the Tarikh al-Sudan
ಲಿಯೋ ಆಫ್ರಿಕಾನಸ್
[ಬದಲಾಯಿಸಿ]ಟಿಂಬಕ್ಟುವಿನ ಬಗ್ಗೆ ಬರೆದ ಕಥನಗಳಲ್ಲಿ ಬಹುಶಃ ಅತಿ ಪ್ರಖ್ಯಾತವಾದದ್ದೆಂದರೆ ಲಿಯೋ ಆಫ್ರಿಕಾನಸ್‌ರದ್ದು. ಗ್ರನಡಾದಲ್ಲಿ 1485ರಲ್ಲಿ ಎಲ್ ಹಸನ್ ಬೆನ್ ಮುಹಮ್ಮದ್ ಎಲ್-ವಾಜ್ಜನ್-ಎಜ್-ಝಯ್ಯಟಿ ಎಂಬ ಹೆಸರಿನೊಂದಿಗೆ ಜನಿಸಿದ ಆತ, ಅರಸ ಫರ್ಡಿನೆಂಡ್ ಮತ್ತು ರಾಣಿ ಇಸಾಬೆಲ್ಲಾರ 1492ರ ಸ್ಪೇನ್‌ಅನ್ನು ಪುನಃವಶಪಡಿಕೆಯ ನಂತರ ಆತನ ಪೋಷಕರು ಮತ್ತು ಸಾವಿರಾರು ಇತರೆ ಮಹಮ್ಮದೀಯರೊಂದಿಗೆ ದೇಶಭ್ರಷ್ಟರಾದರು. ಮೊರೊಕ್ಕೋದಲ್ಲಿ ನೆಲೆಯಾಗಿ, ಫೆಸ್‌ನಲ್ಲಿ ಅಧ್ಯಯನ ನಡೆಸಿ ಆತ ತನ್ನ ಚಿಕ್ಕಪ್ಪ/ಮಾವನೊಡನೆ ಉತ್ತರ ಆಫ್ರಿಕಾದುದ್ದಕ್ಕೂ ನಡೆಸಿದ ರಾಜತಾಂತ್ರಿಕ ಕಾರ್ಯಭಾರಗಳಲ್ಲಿ ಪಾಲ್ಗೊಂಡಿದ್ದರು. ಈ ಪರ್ಯಟನೆಯ ಅವಧಿಯಲ್ಲಿ, ಆತ ಟಿಂಬಕ್ಟುವಿಗೆ ಭೇಟಿ ನೀಡಿದ್ದರು. ಯುವಕನಾಗಿದ್ದುದರಿಂದ ಆತನನ್ನು ಕಡಲ್ಗಳ್ಳರು ಸೆರೆಯಾಗಿಸಿ ಅಪವಾದವೆನಿಸುವಂತಹಾ ಸುಶಿಕ್ಷಿತ ಗುಲಾಮನನ್ನಾಗಿ ಪೋಪ್ ಲಿಯೋ Xರಿಗೆ ಕಾಣಿಕೆಯನ್ನಾಗಿ ನೀಡಿದರು, ಆತನನ್ನು ಮುಕ್ತಗೊಳಿಸಿದ ಅವರು “ಜೋಹಾನ್ನಿಸ್ ಲಿಯೋ ಡಿ ಮೆಡಿಸಿ” ಎಂಬ ಹೆಸರಿನಲ್ಲಿ ದೀಕ್ಷಾಸ್ನಾನ ನೀಡಿ ಆತನಿಗೆ ಇಟಾಲಿಯನ್ ಭಾಷೆಯಲ್ಲಿ ಆಫ್ರಿಕಾದ ವಿವರಣಾತ್ಮಕ ಅವಲೋಕನ/ಸಮೀಕ್ಷೆಯನ್ನು ಬರೆಯುವ ಕೆಲಸ ವಹಿಸಿದರು. ಮುಂದಿನ ಅನೇಕ ಶತಮಾನಗಳ ಕಾಲದಲ್ಲಿ ಐರೋಪ್ಯರು ಆ ಖಂಡದ ಬಗ್ಗೆ ಮಾಹಿತಿಗಾಗಿ ಬಹುತೇಕ ಆತನ ಕಥನಗಳನ್ನೇ ಆಧರಿಸಿದ್ದರು.[೩೫] ಸಾಂಘಾಯ್ ಸಾಮ್ರಾಜ್ಯವು ತನ್ನ ಉಚ್ಛ್ರಾಯದಲ್ಲಿದ್ದಾಗಿನ ಟಿಂಬಕ್ಟು ನಗರದ ಸ್ಥಿತಿಯನ್ನು ವಿವರಿಸಿದ ಅವರ ಪುಸ್ತಕದ ಆಂಗ್ಲ ಆವೃತ್ತಿಯ ಈ ವಿವರಣೆಯನ್ನು ಒಳಗೊಂಡಿದೆ:
Leo Africanus, Descrittione dell’ Africa, Volume 3 pp. 824-825[೩೬]
ಲಿಯೋ ಆಫ್ರಿಕಾನಸ್‌ರ ಪ್ರಕಾರ, ನಗರದ ಸುತ್ತಮುತ್ತ ಯಾವುದೇ ತೋಟಗಳಾಗಲೀ ಅಥವಾ ಫಲೋದ್ಯಾನಗಳಾಗಲಿ ಇರದಿದ್ದರೂ ಸ್ಥಳೀಯವಾಗಿ ಬೆಳೆಯಲಾದ ಮುಸುಕಿನ ಜೋಳ, ಜಾನುವಾರು, ಹಾಲು ಮತ್ತು ಬೆಣ್ಣೆಗಳ ವಿಪುಲ ಸರಬರಾಜು ಲಭ್ಯವಿತ್ತು.[೩೭] ಅರಸ ಮತ್ತು ಪರಿಸರದ ಸಮೃದ್ಧಿಯನ್ನು ವಿವರಿಸಲು ಮೀಸಲಿಟ್ಟ ಮತ್ತೊಂದು ವಾಕ್ಯವೃಂದದಲ್ಲಿ, ಆಫ್ರಿಕಾನಸ್‌ರು ಟಿಂಬಕ್ಟು'ವಿನ ಮಾರಾಟ ಸರಕುಗಳ ಅಪರೂಪತ್ವದ ಬಗ್ಗೆ ಪ್ರಸ್ತಾಪಿಸುತ್ತಾರೆ: ಉದಾಹರಣೆಗೆ ಉಪ್ಪು.
Leo Africanus, Descrittione dell’ Africa in Paul Brians' Reading About the World, Volume 2[೩೭]
ಈ ವಿವರಣೆಗಳು ಹಾಗೂ ವಾಕ್ಯವೃಂದಗಳು ಒಟ್ಟಾಗಿಯೇ ಐರೋಪ್ಯ ಶೋಧಕರುಗಳ ಗಮನ ಸೆಳೆದಿತ್ತು. ಆಫ್ರಿಕಾನಸ್‌ರು "ಸುಣ್ಣದಕಲ್ಲಿನಿಂದ ನಿರ್ಮಿಸಿ ಹುಲ್ಲಿನ ಹೊದಿಕೆಯ ಗುಡಿಸಿಲುಗಳು"ನಂತಹಾ ನಗರದ ಇತರೆ ವಾಡಿಕೆಯ ಅಂಶಗಳ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದರೂ ಅವೆಲ್ಲವನ್ನು ನಿರ್ಲಕ್ಷಿಸಲಾಗಿತ್ತು.[೩೮]
ಷಬೇನಿ
[ಬದಲಾಯಿಸಿ]ಸ್ಥೂಲವಾಗಿ ಲಿಯೋ ಆಫ್ರಿಕಾನಸ್‌ರ' ಟಿಂಬಕ್ಟು ಭೇಟಿಯ 250 ವರ್ಷಗಳ ನಂತರದ ಅವಧಿಯೊಳಗೆ, ನಗರವು ಅನೇಕ ಅರಸರನ್ನು ಕಂಡಿತ್ತು. 18ನೇ ಶತಮಾನದ ಕೊನೆಗೆ ಮೊರೊಕ್ಕೋದ ಅರಸರುಗಳ ನಗರದ ಮೇಲಿನ ಹಿಡಿತ ಸಡಿಲಗೊಂಡು, ಆಗ್ಗಾಗ್ಗೆ ಬದಲಾದ ವಿವಿಧ ವಂಶ/ಜನಾಂಗಗಳ ಅಸ್ಥಿರ ಸರ್ಕಾರದ ಅವಧಿಯಾಗಿ ಪರಿಣಮಿಸಿತ್ತು. ಅಂತಹಾ ವಂಶ/ಜನಾಂಗಗಳಲ್ಲಿ ಒಂದರ ಆಳ್ವಿಕೆಯ ಸಮಯದಲ್ಲಿ, ಹೌಸಾ ಎಂಬ ಟೆಟೌವನ್‌ನ 14ರ ಬಾಲಕನೊಬ್ಬನು ತನ್ನ ತಂದೆಯ ಜೊತೆಗೆ ಟಿಂಬಕ್ಟುವಿಗೆ ಭೇಟಿ ನೀಡಿದ್ದನು. ಅಲ್ಲಿಯೇ ಬೆಳೆದು ವ್ಯಾಪಾರಿಯಾಗಿ ಮಾರ್ಪಟ್ಟ ಆತನನ್ನು ಸೆರೆಹಿಡಿದು ಅಂತಿಮವಾಗಿ ಇಂಗ್ಲೆಂಡ್‌ಗೆ ಕರೆತರಲಾಯಿತು.[೩೯]
- Shabeni in James Grey Jackson's An Account of Timbuctoo and Hausa, 1820
ಹೌಸಾಗೆ ಸ್ಥಳಾಂತರಗೊಳ್ಳುವ ಮುನ್ನಾ ಷಬೇನಿ, ಅಥವಾ ಅಸೀದ್ ಎಲ್ ಹಗೆ ಅಬ್ದ್ ಸಲಾಮ್ ಷಬೀನಿಯು ಟಿಂಬಕ್ಟುವಿನಲ್ಲಿ ಮೂರು ವರ್ಷ ಕಾಲ ಕಳೆದನು. ಎರಡು ವರ್ಷಗಳ ನಂತರ, ಟಿಂಬಕ್ಟೂಗೆ ಹಿಂದಿರುಗಿದ ಆತ ಅಲ್ಲಿಯೇ ಮತ್ತೆ ಏಳು ವರ್ಷಗಳ ಕಾಲ ವಾಸಿಸಿದನು - ಉಚ್ಛ್ರಾಯದ ಶತಮಾನಗಳ ನಂತರವೂ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದ ಗುಲಾಮರುಗಳನ್ನು ಹೊರತುಪಡಿಸಿ, ಈತ 21ನೇ ಶತಮಾನದ ಪಟ್ಟಣದ ಗಾತ್ರದ ಎರಡರಷ್ಟು ಜನಸಂಖ್ಯೆಯನ್ನು ಹೊಂದಿದ್ದ ಜನಾಂಗದ ಭಾಗವಾಗಿದ್ದ:
ಷಬೇನಿಯು 27 ವರ್ಷದವನಾಗುವ ಹೊತ್ತಿಗೆ, ಆತ ತನ್ನ ತವರುನಗರದಲ್ಲಿ ವ್ಯಾಪಾರಿಯಾಗಿ ನೆಲೆ ಕಂಡುಕೊಂಡಿದ್ದ. ಡಿಸೆಂಬರ್, 1789ರಲ್ಲಿ ಹ್ಯಾಮ್‌ಬರ್ಗ್‌ನಲ್ಲಿನ ವ್ಯಾಪಾರೋದ್ದೇಶದ ಯಾನದಿಂದ ಮರಳುತ್ತಿದ್ದ ಆತನ ಆಂಗ್ಲ ಹಡಗನ್ನು ವಶಪಡಿಸಿಕೊಂಡು ರಷ್ಯನ್ ಸೇನಾನೌಕೆಯೊಂದು ಆಸ್ಟೆಂಡೆಗೆ ಕರೆತಂದಿತು.
ತರುವಾಯ ಬ್ರಿಟಿಷ್ ರಾಯಭಾರ ಕಛೇರಿಯು ಆತನನ್ನು ಮುಕ್ತಗೊಳಿಸಿದರೂ, ಆತನ ಹಡಗಿನವರು ಮತ್ತೆ ಸೆರೆಗೊಳಗಾಗುವ ಭಯದಿಂದ ಡೋವರ್ ತೀರದಲ್ಲಿ ಇಳಿಸಿದರು. ಇಲ್ಲಿ ಆತನ ಕಥನವನ್ನು ದಾಖಲಿಸಲಾಯಿತು. ಷಬೀನಿ 18ನೇ ಶತಮಾನದ ದ್ವಿತೀಯಾರ್ಧದಲ್ಲಿ ನಗರದ ಗಾತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾನೆ. ಹಿಂದಿನ ವಾಕ್ಯವೃಂದವೊಂದರಲ್ಲಿ, ಆತ ಟಿಂಬಕ್ಟು'ವಿನ ಶುಷ್ಕ ಪರಿಸರಕ್ಕಿಂತ ತಕ್ಕ ಮಟ್ಟಿಗೆ ಭಿನ್ನವಾದ ಪರಿಸರವನ್ನು ಚಿತ್ರಿಸಿದ್ದಾನೆ:
- Shabeni in James Grey Jackson's An Account of Timbuctoo and Hausa, 1820
ಶಿಕ್ಷಣದ ಕೇಂದ್ರ
[ಬದಲಾಯಿಸಿ]Timbuktu | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | ii, iv, v |
ಉಲ್ಲೇಖ | 119 |
ಯುನೆಸ್ಕೊ ಪ್ರದೇಶ | Africa |
ದಾಖಲೆಯ ಇತಿಹಾಸ | |
Inscription | 1988 (12th ಸಮಾವೇಶ) |
Endangered | 1990-2005 |
15ನೇ ಶತಮಾನದ ಆದಿಯಲ್ಲಿ, ಅನೇಕ ಮಹಮ್ಮದೀಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಇವುಗಳಲ್ಲಿ ಅತಿ ಪ್ರಸಿದ್ಧವಾದುದೆಂದರೆ ಸಂಕೋರ್ ಮಸೀದಿ, ಇದನ್ನು ಸಂಕೋರ್ ವಿಶ್ವವಿದ್ಯಾಲಯವೆಂದೂ ಕರೆಯಲಾಗುತ್ತದೆ.
ಈ ನಗರಗಳಲ್ಲಿ ಇಸ್ಲಾಮ್/ಮಹಮ್ಮದೀಯ ಧರ್ಮವನ್ನು ಆಚರಿಸುತ್ತಿದ್ದರೂ ಸ್ಥಳೀಯ ಗ್ರಾಮೀಣ ಬಹುಸಂಖ್ಯಾತ ಜನರು ಮಹಮ್ಮದೀಯವಲ್ಲದ ಸಂಪ್ರದಾಯದವರಾಗಿದ್ದರು. ಅನೇಕವೇಳೆ ಅಲ್ಲಿನ ನಾಯಕರೆನಿಸಿಕೊಂಡವರು ಆರ್ಥಿಕ ಉನ್ನತಿಗೆಂದು ಸಾಂಕೇತಿಕವಾಗಿ ಮಹಮ್ಮದೀಯರಾಗಿದ್ದು, ಜನಸಾಮಾನ್ಯರು ಇತರೆ ಸಂಪ್ರದಾಯದವರಾಗಿದ್ದರು.
ಸಂಕೋರ್ ವಿಶ್ವವಿದ್ಯಾಲಯ
[ಬದಲಾಯಿಸಿ]ಸಂಕೋರ್ ಎಂದು ಈಗ ಕರೆಯಲ್ಪಡುತ್ತಿರುವುದನ್ನು, 1581 ADಯಲ್ಲಿ (= 989 A. H.) (ಬಹುಶಃ 13ನೇ ಅಥವಾ 14ನೇ ಶತಮಾನದ) ಮತ್ತೂ ಹಳೆಯದಾದ ಪ್ರದೇಶದಲ್ಲಿ ಕಟ್ಟಿಸಲಾಯಿತು, ಹಾಗೂ ಇದು ಟಿಂಬಕ್ಟುವಿನ ಮಹಮ್ಮದೀಯ ಪಂಡಿತೋತ್ತಮ ಸಮುದಾಯದ ಕೇಂದ್ರವಾಗಿ ಮಾರ್ಪಟ್ಟಿತು. "ಸಂಕೋರ್ ವಿಶ್ವವಿದ್ಯಾಲಯ"ವು ಮಧ್ಯಯುಗೀಯ ಯುರೋಪ್‌ನ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ಸಂಘಟಿತಗೊಂಡಿದ್ದ ಮದ್ರಸಾವಾಗಿತ್ತು. ಸಂಪೂರ್ಣವಾಗಿ ಸ್ವಾಯತ್ತ ಶಾಲೆಗಳು ಅಥವಾ ಮಹಾವಿದ್ಯಾಲಯಗಳ ಸಂಯೋಜನೆಯಾಗಿದ್ದು, ಅವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಓರ್ವ ಬೋಧಕ ಅಥವಾ ಇಮಾಮರ ನೇತೃತ್ವದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳು ನಿರ್ದಿಷ್ಟ ಬೋಧಕರೊಂದಿಗೆ ಗುರುತಿಸಿಕೊಳ್ಳುತ್ತಿದ್ದರಲ್ಲದೇ, ತರಗತಿಗಳನ್ನು ಮಸೀದಿ ಕಟ್ಟಡಗಳ ಅಥವಾ ಖಾಸಗಿ ಗೃಹಗಳ ಮುಕ್ತ ಪ್ರಾಂಗಣಗಳಲ್ಲಿ ನಡೆಸಲಾಗುತ್ತಿತ್ತು. ವ್ಯಾಪಕ ಬೋಧನೆಯಲ್ಲಿ ತರ್ಕ, ಖಗೋಳಶಾಸ್ತ್ರ ಮತ್ತು ಇತಿಹಾಸಗಳೆಲ್ಲವೂ ಒಳಗೊಂಡಿತ್ತಾದರೂ ಈ ಶಾಲೆಗಳ ಪ್ರಮುಖ ಧ್ಯೇಯವು ಖುರಾನ್‌ಅನ್ನು ಬೋಧಿಸುವುದಾಗಿತ್ತು. ಪಂಡಿತೋತ್ತಮರು ಪಾಂಡಿತ್ಯವೇತನ/ಗೌರವಧನದ ಮೇಲೆ ಆಧಾರಿತವಾಗಿದ್ದ ಸಾಮಾಜಿಕ ಅರ್ಥಶಾಸ್ತ್ರದ ಚೌಕಟ್ಟಿನ ಭಾಗವಾಗಿ ತಮ್ಮದೇ ಆದ ಗ್ರಂಥಗಳನ್ನು ಬರೆಯುತ್ತಿದ್ದರು. ಗ್ರಂಥಗಳನ್ನು ಕೊಂಡು ಮಾರುವುದರಿಂದ ಬರುತ್ತಿದ್ದ ಲಾಭವು ಚಿನ್ನ-ಉಪ್ಪಿನ ಮಾರಾಟದ ನಂತರದ ಮಟ್ಟದ್ದಾಗಿತ್ತು. ಅಗಾಧ ಪಾಂಡಿತ್ಯದ ಪಂಡಿತೋತ್ತಮರು, ಪ್ರಾಧ್ಯಾಪಕರು ಮತ್ತು ಬೋಧಕರುಗಳಲ್ಲಿ ಹೆಚ್ಚು ಪ್ರಖ್ಯಾತನೆಂದರೆ ಅಹ್ಮದ್ ಬಾಬಾ ಆಗಿದ್ದರು, ಆತ ತಾರೀಖ್ ಅಲ್-ಸುಡಾನ್ ಮತ್ತಿತರ ಕೃತಿಗಳಲ್ಲಿ ಅನೇಕ ಬಾರಿ ಹೆಸರಿಸಲಾದ ಐತಿಹಾಸಿಕ ವ್ಯಕ್ತಿಯೂ ಹೌದು.
ಟಿಂಬಕ್ಟುವಿನ ಹಸ್ತಪ್ರತಿಗಳು ಮತ್ತು ಗ್ರಂಥಾಲಯಗಳು
[ಬದಲಾಯಿಸಿ]ಟಿಂಬಕ್ಟುವಿನ ಪ್ರಧಾನ ಮೌಲ್ಯಯುತ ನಿಧಿಯೆಂದರೆ ಪಟ್ಟಣದ ಶ್ರೇಷ್ಠ ಕುಟುಂಬಗಳು ಸಂರಕ್ಷಿಸಿಟ್ಟುಕೊಂಡಿರುವ 100,000 ಹಸ್ತಪ್ರತಿಗಳು.[೪೦]. ಮಹಮ್ಮದೀಯಪೂರ್ವ ಕಾಲದ ಮತ್ತು 12ನೇ ಶತಮಾನದ ಅವಧಿಯ ಈ ಹಸ್ತಪ್ರತಿಗಳಲ್ಲಿ ಕೆಲವನ್ನು, ಪಟ್ಟಣ ಹಾಗೂ ಸಮೀಪದ ಇತರೆ ಹಳ್ಳಿಗಳಲ್ಲಿ ಕೌಟುಂಬಿಕ ರಹಸ್ಯವಾಗಿ ರಕ್ಷಿಸಿಡಲಾಗಿದೆ. ಅವುಗಳಲ್ಲಿ ಬಹುತೇಕವನ್ನು ಅರೇಬಿಕ್ ಅಥವಾ ಫುಲಾನಿ ಭಾಷೆಗಳಲ್ಲಿ ಮಾಲಿ ಸಾಮ್ರಾಜ್ಯದಿಂದ ಬಂದಿದ್ದ ಪ್ರಾಜ್ಞರು ಬರೆದಿದ್ದರು. ಅವುಗಳಲ್ಲಿರುವ ಅಂಶಗಳು ವಿಶೇಷವಾಗಿ ಖಗೋಳಶಾಸ್ತ್ರ, ಸಂಗೀತ ಮತ್ತು ಸಸ್ಯಶಾಸ್ತ್ರಗಳ ಕ್ಷೇತ್ರಗಳಲ್ಲಿ ಶಿಕ್ಷಣಾತ್ಮಕವಾಗಿತ್ತು. ತೀರ ಇತ್ತೀಚಿನ ಹಸ್ತಪ್ರತಿಗಳು ಕಾನೂನು, ವಿಜ್ಞಾನ ಕ್ಷೇತ್ರ ಮತ್ತು ಇತಿಹಾಸ (ಪ್ರಮುಖ 17ನೇ ಶತಮಾನದ ಆಖ್ಯಾನಗಳಾದ, ತಾರೀಖ್ ಅಲ್-ಫಟ್ಟಾಷ್ ಮತ್ತು ತಾರೀಖ್ ಅಲ್-ಸುಡಾನ್), ಧರ್ಮ, ವ್ಯಾಪಾರ, etc. ಗಳನ್ನು ಒಳಗೊಂಡಿವೆ.
ಯುನೆಸ್ಕೋದ ಸಹಯೋಗದಲ್ಲಿ ಮಾಲಿಯ ಸರ್ಕಾರದಿಂದ 1970ರಲ್ಲಿ ಸ್ಥಾಪಿಸಲ್ಪಟ್ಟ ಅಹ್ಮದ್ ಬಾಬಾ ಇನ್‌ಸ್ಟಿಟ್ಯೂಟ್/ಸಂಸ್ಥೆ (ಸೆಡ್ರಾಬ್)ಯು ಈ ಹಸ್ತಪ್ರತಿಗಳಲ್ಲಿ ಕೆಲವನ್ನು ಪುನರುಜ್ಜೀವನಗೊಳಿಸಲು ಹಾಗೂ ಅಂಕೀಕೃತಗೊಳಿಸುವ ಉದ್ದೇಶದಿಂದ ತನ್ನ ವಶದಲ್ಲಿಟ್ಟುಕೊಂಡಿದೆ. 18,000ಕ್ಕೂ ಮೀರಿದ ಸಂಖ್ಯೆಯ ಹಸ್ತಪ್ರತಿಗಳನ್ನು ಅಹ್ಮದ್ ಬಾಬಾ ಕೇಂದ್ರವು ಸಂಗ್ರಹಿಸಿದ್ದರೂ, ಆ ಪ್ರದೇಶದಲ್ಲಿ 300,000-700,000 ಹಸ್ತಪ್ರತಿಗಳು ಲಭ್ಯವಿವೆ ಎಂದು ಅಂದಾಜಿಸಲಾಗಿದೆ.[೪೧]
ಸಂಕೋರ್ ವಿಶ್ವವಿದ್ಯಾಲಯದ ಹಾಗೂ ಟಿಂಬಕ್ಟುವಿನ ಸುತ್ತಮುತ್ತಲಿನ ಇತರೆ ಪ್ರದೇಶಗಳಲ್ಲಿರುವ ಪ್ರಾಚೀನ ಹಸ್ತಪ್ರತಿಗಳ ಸಂಗ್ರಹವು ಸಂಸ್ಥೆಯ, ತನ್ಮೂಲಕ ನಗರದ ಭವ್ಯತೆಗಳನ್ನು ದಾಖಲಿಸುತ್ತವಲ್ಲದೇ ಪಂಡಿತೋತ್ತಮರುಗಳಿಗೆ ಇತಿಹಾಸವನ್ನು ಸಾಕಷ್ಟು ವಿವರವಾಗಿಯೇ ಮರುಸೃಷ್ಟಿಸಲು ಅವಕಾಶ ನೀಡಿವೆ. 16ರಿಂದ 18ನೇ ಶತಮಾನಗಳವರೆಗಿನ, ಈ ಹಸ್ತಪ್ರತಿಗಳು ಮಾನವ ಪ್ರಯತ್ನಗಳ ಪ್ರತಿ ಮಜಲನ್ನೂ ಮಹತ್ವ ಕೊಟ್ಟಿದೆಯಲ್ಲದೇ ಆ ಸಮಯದಲ್ಲಿನ ಪಶ್ಚಿಮ ಆಫ್ರಿಕಾದವರು ಹೊಂದಿದ್ದ ನಾಗರೀಕತೆಯ ಉನ್ನತಮಟ್ಟವನ್ನು ಸೂಚಿಸುತ್ತವೆ. ಟಿಂಬಕ್ಟುವಿನ ಘನತೆಯ ಅಭಿವ್ಯಕ್ತಿಯಾಗಿ ಉದಾಹರಣೆಗೆ, ಪಶ್ಚಿಮ ಆಫ್ರಿಕಾದ ಮಹಮ್ಮದೀಯ ನಾಣ್ಣುಡಿಯು "ಉಪ್ಪು ಉತ್ತರದಿಂದ, ಚಿನ್ನ ದಕ್ಷಿಣದಿಂದ ಬಂದರೆ ದೇವರ ಉಪದೇಶಗಳು ಮತ್ತು ಜ್ಞಾನದ ಸಂಪತ್ತು ಟಿಂಬಕ್ಟುವಿನಿಂದ ಬರುತ್ತವೆ" ಎನ್ನುತ್ತದೆ.
ಪಟ್ಟಣದ ಸುಮಾರು 60ರಿಂದ 80 ಖಾಸಗಿ ಗ್ರಂಥಾಲಯಗಳು ಈ ಹಸ್ತಪ್ರತಿಗಳನ್ನು ಸಂರಕ್ಷಿಸಿಡುತ್ತಾ ಬರುತ್ತಿವೆ : ಮಮ್ಮಾ ಹೈದರಾ/ದಾರಾ ಗ್ರಂಥಾಲಯ; ಫಾಂಡೋ ಕಟಿ ಗ್ರಂಥಾಲಯ (ಸರಿಸುಮಾರು 3,000 ದಾಖಲೆಗಳು ಆಂಡಾಲೂಸಿಯ ಮೂಲದ್ದಾಗಿದ್ದು, ಅತ್ಯಂತ ಹಳೆಯದು 14ನೇ ಮತ್ತು 15ನೇ ಶತಮಾನಗಳ ಅವಧಿಯದ್ದಾಗಿದೆ); ಅಲ್-ವಾಂಗರಿ ಗ್ರಂಥಾಲಯ; ಮತ್ತು ಮೊಹಮ್ಮದ್ ಟಾಹರ್ ಗ್ರಂಥಾಲಯಗಳು ಅವುಗಳಲ್ಲಿ ಸೇರಿವೆ. ಈ ಗ್ರಂಥಾಲಯಗಳನ್ನು ಪಶ್ಚಿಮ ಆಫ್ರಿಕಾದಿಂದ ವ್ಯಾಪಿಸಿ ಉತ್ತರ ಆಫ್ರಿಕಾ ಮತ್ತು ಪೂರ್ವ ಆಫ್ರಿಕಾಗಳನ್ನು ಸಂಪರ್ಕಿಸುವ "ಆಫ್ರಿಕಾದ ಶಾಯಿ/ಸಾಹಿತ್ಯ ಹಾದಿ"ಯ ಭಾಗವೆಂದು ಪರಿಗಣಿಸಲಾಗುತ್ತದೆ. ಒಂದು ಕಾಲದಲ್ಲಿ ಟಿಂಬಕ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸ್ತಪ್ರತಿಗಳಿರುವ 120 ಗ್ರಂಥಾಲಯಗಳಿದ್ದವು. ಹಸ್ತಪ್ರತಿಗಳ ಒಟ್ಟಾರೆ ವ್ಯಾಪ್ತಿಯು ಗೊತ್ತಿಲ್ಲದೇ ಹೋದರೂ ಸುಮಾರು ಒಂದು ದಶಲಕ್ಷಕ್ಕೂ ಮೀರಿದ ಸಾಮಗ್ರಿಗಳು ಮಾಲಿಯಲ್ಲಿ ಸಂರಕ್ಷಿಸಲಾಗಿದ್ದು ಹೆಚ್ಚುವರಿ 20 ದಶಲಕ್ಷ ವಸ್ತುಗಳನ್ನು ಆಫ್ರಿಕಾದ ಇತರೆ ಭಾಗಗಳಲ್ಲಿ ಸಂಗ್ರಹಿಸಿದ್ದು, ಅವುಗಳಲ್ಲಿ ದೊಡ್ಡ ಸಂಗ್ರಹವು ನೈಜೀರಿಯಾದ, ಸೊಕೋಟೋದಲ್ಲಿವೆ. ವಸಾಹತು ಯುಗದ ಅವಧಿಯಲ್ಲಿ ಪ್ಯಾರಿಸ್, ಲಂಡನ್ ಮತ್ತು ಯುರೋಪ್‌ನ ಇನ್ನಿತರ ಭಾಗಗಳಿಗೆ ಅನೇಕ ಇಡೀ ಗ್ರಂಥಾಲಯಗಳನ್ನು ಕೊಂಡೊಯ್ದಾಗ ದಾಖಲೆಗಳನ್ನು ಬೈತಿಡುವ/ಕದ್ದೊಯ್ಯುವ ಪ್ರಯತ್ನಗಳೂ ನಡೆದಿದ್ದವು. ಕೆಲ ಹಸ್ತಪ್ರತಿಗಳನ್ನು ಭೂಮಿಯೊಳಗೆ ಹೂತಿಟ್ಟಿದ್ದರೆ, ಇನ್ನೂ ಅನೇಕವನ್ನು ಮರಳುಗಾಡು ಅಥವಾ ಗುಹೆಗಳಲ್ಲಿ ಬಚ್ಚಿಡಲಾಗಿತ್ತು. ಅವುಗಳಲ್ಲಿ ಕೆಲವು ಇನ್ನೂ ಬಚ್ಚಿಟ್ಟಲ್ಲೇ ಉಳಿದುಕೊಂಡಿವೆ. ಯುನೈಟೆಡ್ ಸ್ಟೇಟ್ಸ್‌ನ ಲೈಬ್ರರಿ ಆಫ್ ಕಾಂಗ್ರೆಸ್ ಸಂಸ್ಥೆಯು ಹಸ್ತಪ್ರತಿಗಳ ಕೆಲ ಮಾದರಿಗಳನ್ನು ಜೂನ್ 2003ರಲ್ಲಿ ಅಲ್ಲಿ ಇವುಗಳ ಪ್ರದರ್ಶನ ನಡೆದಾಗ ಮೈಕ್ರೋಫಿಲ್ಮ್ ರೂಪದಲ್ಲಿ ಸಂರಕ್ಷಿಸಿಟ್ಟುಕೊಂಡಿತು. ಫೆಬ್ರವರಿ 2006ರಲ್ಲಿ ದಕ್ಷಿಣ ಆಫ್ರಿಕಾ/ಮಾಲಿ ರಾಷ್ಟ್ರಗಳು ಟಿಂಬಕ್ಟು ಮತ್ತು ಪಶ್ಚಿಮ ಆಫ್ರಿಕಾದ ಇತರೆ ಪ್ರದೇಶಗಳ ವೈಜ್ಞಾನಿಕ ಜ್ಞಾನಗಳ ಮಟ್ಟವನ್ನು ಅಳೆಯಲು ಟಿಂಬಕ್ಟುವಿನ ಹಸ್ತಪ್ರತಿಗಳನ್ನು ಪರಿಶೀಲಿಸುವ ಜಂಟಿ ಪ್ರಯತ್ನವನ್ನು ಕೈಗೊಂಡಿವೆ.[೪೨]
ಇಂದಿನ ಟಿಂಬಕ್ಟು
[ಬದಲಾಯಿಸಿ]ಇಂದು, ಅದರ ಖ್ಯಾತಿಯು ಅದನ್ನು ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು (ಟಿಂಬಕ್ಟು ವಿಮಾನನಿಲ್ದಾಣ) ಹೊಂದುವ ಮಟ್ಟಿಗೆ ಪ್ರವಾಸಿ ಆಕರ್ಷಣೆಯನ್ನಾಗಿಸಿದರೂ ಟಿಂಬಕ್ಟು ಒಂದು ಬಡತನಕ್ಕಿಳಿದ ಪಟ್ಟಣವಾಗಿದೆ. ಇದು ಮಾಲಿ ರಾಷ್ಟ್ರದ ಎಂಟು ವಲಯಗಳಲ್ಲಿ ಒಂದಾಗಿದ್ದು, ವಲಯದ ಸ್ಥಳೀಯ ಪ್ರಾಂತಾಧಿಪತಿಯ ನೆಲೆ ಕೂಡಾ ಆಗಿದೆ. ಇದು ಮಾಲಿಯಲ್ಲಿಯೇ ಇರುವ ಡ್ಜೆ/ಜೆನ್ನೆ ನಗರದ ಅವಳಿ ನಗರವೂ ಆಗಿದೆ. 1998ರ ಜನಗಣತಿಯು ಅಲ್ಲಿನ ಜನಸಂಖ್ಯೆಯನ್ನು 1987ರ ಜನಗಣತಿಯ 31,962ರಿಂದ ಏರಿಕೆಯಾದ 31,973ಕ್ಕೆ ದಾಖಲಿಸಿದೆ.[೪೩]
ಟಿಂಬಕ್ಟು ನಗರವು ಒಂದು UNESCO ವಿಶ್ವ ಪರಂಪರೆಯ ತಾಣವಾಗಿದ್ದು, 1988ರಿಂದ ಆ ಪಟ್ಟಿಯಲ್ಲಿದೆ. 1990ರಲ್ಲಿ, ಅದನ್ನು ಮರಳುಗಾಡಿನ ಮರಳಿನಿಂದಾವೃತವಾಗುವ ಅಪಾಯಕ್ಕೊಳಗಾಗಿರುವ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಯಿತು. ಈ ಪ್ರದೇಶವನ್ನು ಸಂರಕ್ಷಿಸಿಕೊಳ್ಳಲು ಯೋಜನೆಯೊಂದನ್ನು ಕೈಗೊಳ್ಳಲಾಯಿತು ಹಾಗೂ 2005ರಲ್ಲಿ, ಇದನ್ನು ಅಪಾಯದಲ್ಲಿರುವ ತಾಣಗಳ ಪಟ್ಟಿಯಿಂದ ತೆರವುಗೊಳಿಸಲಾಯಿತು. UNESCOನ ಸಮಿತಿಯೊಂದು ನೀಡಿದ ಎಚ್ಚರಿಕೆಯ ಪ್ರಕಾರ ನವೀನ ಕಟ್ಟಡಗಳ ನಿರ್ಮಾಣವು ಪ್ರಾಚೀನ ಮಸೀದಿಗಳಿಗೆ ಅಪಾಯವನ್ನುಂಟು ಮಾಡುತ್ತಿವೆ.[೪೪]
ಟಿಂಬಕ್ಟು ನಗರವು ಹೆನ್ರಿ ಲೂಯಿಸ್ ಗೇಟ್ಸ್'ರ PBS ವಿಶೇಷ "ಆಫ್ರಿಕನ್ ಜಗತ್ತಿನ ಅಚ್ಚರಿಗಳು" ಯಾನದಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿತ್ತು. ಮಾಲಿಯ ಸಾಂಸ್ಕೃತಿಕ ನಿಯೋಗದ ಅಲಿ ಔಲ್ಡ್ ಸಿದಿಯವರೊಡನೆ ಗೇಟ್ಸ್‌ರು ಮಮ್ಮಾ ಹೈದರಾ/ದಾರಾ ಗ್ರಂಥಾಲಯದ ಮೇಲ್ವಿಚಾರಕರಾದ ಅಬ್ದೆಲ್ ಖಾದಿರ್ ಹೈದರಾರನ್ನು ಭೇಟಿ ಮಾಡಿದ್ದರು. ಗೇಟ್ಸ್‌ರ ಕೃಪೆಯಿಂದಾಗಿ ಆಂಡ್ರ್ಯೂ ಮೆಲ್ಲನ್ ಪ್ರತಿಷ್ಠಾನದ ವತಿಯಿಂದ ಗ್ರಂಥಾಲಯ'ದ ಸೌಲಭ್ಯ/ಕಚೇರಿಗಳನ್ನು ಕಟ್ಟಲು ಅನುದಾನ ಒದಗಿತು, ನಂತರ ಇದು ಟಿಂಬಕ್ಟು ಹಸ್ತಪ್ರತಿಗಳು ಯೋಜನೆಗೆ ಪ್ರೋತ್ಸಾಹ ನೀಡಿತು. ಗ್ರಂಥಕರ್ತೃಗಳ ಸಾಂಸ್ಕೃತಿಕ ನೆನಪು ಇನ್ನೂ ಉಳಿದಿದ್ದರೂ ಟಿಂಬಕ್ಟುವಿನಲ್ಲಿ ಪ್ರವಾಸೀ ವ್ಯಾಪಾರೀ ಉದ್ದೇಶಕ್ಕೆ ಸಹಾಯವಾಗುವಂತೆ ದುರದೃಷ್ಟವಶಾತ್ ಪ್ರಸ್ತುತ ಪುಸ್ತಕ ರಚನಾಕಾರರು ಲಭ್ಯವಿಲ್ಲ. ಪಟ್ಟಣವು ಪ್ರದೇಶದ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸುವ ಉದ್ದೇಶಕ್ಕೆ ಮೀಸಲಾದ ಸಂಸ್ಥೆಯೊಂದಕ್ಕೆ ನೆಲೆಯಾಗಿರುವುದಲ್ಲದೇ ಎರಡು ಪುಟ್ಟ ವಸ್ತುಸಂಗ್ರಹಾಲಯಗಳು (1853-54ರ ಅವಧಿಯಲ್ಲಿ ಜರ್ಮನ್ ಶೋಧಕ ಹೇನ್‌ರಿಚ್ ಬಾರ್ತ್ ಆರು ತಿಂಗಳು ಕಳೆದಿದ್ದ ಮನೆಯೂ ಇದರಲ್ಲಿ ಸೇರಿದೆ), ಮತ್ತು ಟುವಾರೆಗ್‌ಗಳು ಮತ್ತು ಮಾಲಿ ಸರ್ಕಾರದ ನಡುವಣ ರಾಜಿಯ ನೆನಪಿಗೆ ತರುವ ಸಾಂಕೇತಿಕ ಶಾಂತಿಜ್ಯೋತಿ/ಫ್ಲೇಮ್ ಆಫ್ ಪೀಸ್ ಸ್ಮಾರಕಗಳನ್ನು ಹೊಂದಿದೆ.
ಆಕರ್ಷಣೆಗಳು
[ಬದಲಾಯಿಸಿ]ಅಂತೋಣಿ/ನಿ ಗೌಡಿಗೆ ಸ್ಫೂರ್ತಿ ನೀಡಿತೆನ್ನಲಾದ ಟಿಂಬಕ್ಟು'ವಿನ ಹಸಿಮಣ್ಣಿನ ಮಸೀದಿಗಳು ದೇಶೀಯ ವಾಸ್ತುಶೈಲಿಯ ಲಕ್ಷಣಗಳಾಗಿವೆ. ಅವುಗಳಲ್ಲಿ ಕೆಳಕಂಡವು ಸೇರಿವೆ
- 1327ರಲ್ಲಿ ಎಲ್ ಸಹೇಲಿಯಿಂದ ನಿರ್ಮಿಸಲ್ಪಟ್ಟ ಡ್ಜಿ/ಜಿಂಗ್ಯೂರೆಬೆರ್ ಮಸೀದಿ[೪೬]
- ಹದಿನೈದನೇ ಶತಮಾನದ ಆದಿಯಲ್ಲಿ ನಿರ್ಮಿತವಾದ ಸಂಕೋರ್ ವಿಶ್ವವಿದ್ಯಾಲಯವೆಂದೂ ಹೆಸರಾದ ಸಂಕೋರ್ ಮಸೀದಿ
- 1441ರಲ್ಲಿ ಮೊಹಮ್ಮದ್ ನಾಡ್ಡಾಹ್ನಿಂದ ನಿರ್ಮಿಸಲ್ಪಟ್ಟ ಸಿಧಿ ಯಾಹ್ಯಾ ಮಸೀದಿ.
ಇತರೆ ಆಕರ್ಷಣೆಗಳಲ್ಲಿ ವಸ್ತುಸಂಗ್ರಹಾಲಯ, ಎತ್ತರದ/ಮೇಲ್ಛಾವಣಿಯಿರುವ ಉದ್ಯಾನಗಳು ಹಾಗೂ ನೀರಿನ ಗೋಪುರಗಳು ಸೇರಿವೆ.
ಭಾಷೆ
[ಬದಲಾಯಿಸಿ]ಟಿಂಬಕ್ಟು ನಗರದ ಪ್ರಮುಖ ಭಾಷೆಯೆಂದರೆ 80%ಕ್ಕೂ ಹೆಚ್ಚಿನ ನಿವಾಸಿಗಳು ಮಾತನಾಡುವ ಕೊಯ್ರಾ ಚೀನಿ ಎಂದು ಕರೆಯಲಾಗುವ ಸಾಂಘಾಯ್ ಭಾಷೆ. 1990-1994ರ ಟುವಾರೆಗ್/ಅರಬ್ ದಂಗೆಯ ಸಮಯದಲ್ಲಿ ದೇಶಭ್ರಷ್ಟಗೊಳಿಸಲ್ಪಡುವುದಕ್ಕಿಂತ ಮುನ್ನ ಪ್ರತಿಯೊಂದೂ 10%ರಷ್ಟಿದ್ದ ಸಣ್ಣ ಗುಂಪುಗಳು ಹಸ್ಸಾನಿಯಾ ಅರೇಬಿಕ್ ಮತ್ತು ತಮಾಷೆಕ್ ಭಾಷೆಗಳಲ್ಲಿ ಮಾತಾಡುತ್ತವೆ.
ಹವಾಗುಣ
[ಬದಲಾಯಿಸಿ]ಇಲ್ಲಿನ ಹವಾಗುಣವು ವರ್ಷದ ಬಹುತೇಕ ಸಮಯದಲ್ಲಿ ಉಷ್ಣದಿಂದ ಕೂಡಿದ್ದು ಒಣದಾಗಿರುತ್ತದಲ್ಲದೇ ಬಿರು ಬಿಸಿಲಿನಿಂದ ಕೂಡಿರುತ್ತದೆ. ವರ್ಷದ ತೀವ್ರತಾಪದ ತಿಂಗಳುಗಳಾದ ಮೇ ಮತ್ತು ಜೂನ್‌ಗಳಲ್ಲಿ ದೈನಂದಿನ ಸರಾಸರಿ ಗರಿಷ್ಠ ತಾಪಮಾನವು 40°Cಯನ್ನೂ ಮೀರಿರುತ್ತದೆ. ತುಂಬಾ ಬಿಸಿಲಿದ್ದರೂ ಕಾರ್ಯತಃ ವಾರ್ಷಿಕ ಅಲ್ಪ ಪ್ರಮಾಣದ ಮಳೆಯೆಲ್ಲವೂ ಸುರಿಯುವ ಜುಲೈನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಚಳಿಗಾಲದ ತಿಂಗಳುಗಳಾದ ಡಿಸೆಂಬರ್ ಮತ್ತು ಜನವರಿಗಳಲ್ಲಿ ಮಾತ್ರವೇ ಸರಾಸರಿ ದೈನಂದಿನ ಗರಿಷ್ಠ ತಾಪಮಾನವು 32°Cಗಿಂತ ಕಡಿಮೆಯಿರುತ್ತದೆ.
Timbuktuದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Source: World Meteorological Organization [೪೭] |
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ರಹಸ್ಯಾತ್ಮಕ ಅಥವಾ ಕಾಲ್ಪನಿಕವೆಂಬ ನಗರದ ಕಲ್ಪನೆಯು ಇತರೆ ರಾಷ್ಟ್ರಗಳಲ್ಲಿ ಇಂದಿನ ದಿನದವರೆಗೂ ಉಳಿದುಕೊಂಡು ಬಂದಿದೆ: 2006ರಲ್ಲಿ 150 ಬ್ರಿಟನ್ ಯುವಕರೊಂದಿಗೆ ನಡೆಸಿದ ಸಮೀಕ್ಷೆಯ ಪ್ರಕಾರ 34%ರಷ್ಟು ಮಂದಿ ಪಟ್ಟಣವು ಅಸ್ತಿತ್ವದಲ್ಲಿದೆ ಎಂದು ನಂಬಿರಲಿಲ್ಲವಾದರೆ, ಉಳಿದ 66% ಮಂದಿಯು ಅದನ್ನು "ಕಾಲ್ಪನಿಕ ಸ್ಥಳ"ವೆಂದು ಭಾವಿಸಿದ್ದರು.[೪೮]
ತಮ್ಮ ಸಿಂಗಲ್ ಗೀತೆ "ದ ಫ್ಯೂಚರ್ ಈಸ್ ಸೋ ಬ್ರೈಟ್, I ಗಾಟ್ಟ ವೇರ್ ಷೇಡ್ಸ್"ನಿಂದ ಪ್ರಸಿದ್ಧರಾದ ಅಮೇರಿಕನ್ ಪರ್ಯಾಯ ಪಾಪ್ ತಂಡ "ಟಿಂಬಕ್3"ದವರು ತಮ್ಮ ತಂಡದ ಹೆಸರನ್ನು ಟಿಂಬಕ್ಟುವಿನ ಉಚ್ಚಾರದ ಪದಚಮತ್ಕಾರದ ಮೂಲಕ ಮೂಡಿಸಿಕೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಂದೇಶವಾಹಕ ಬ್ಯಾಗ್/ಚೀಲ ತಯಾರಕ ಸಂಸ್ಥೆ ಟಿಂಬಕ್2 ತಮ್ಮ ಸಂಸ್ಥೆಯ ಹೆಸರನ್ನು ಅದೇ ರೀತಿಯ ಪದಚಮತ್ಕಾರದಿಂದಲೇ ಮೂಡಿಸಿದ್ದಾರೆ.[೪೯]
ಡೊನಾಲ್ಡ್ ಡಕ್ ಟಿಂಬಕ್ಟುವನ್ನು ಸುರಕ್ಷಿತ ಸ್ವರ್ಗವನ್ನಾಗಿ ಭಾವಿಸುತ್ತದಲ್ಲದೇ, ನಗರದಲ್ಲಿ ಡೊನಾಲ್ಡ್ ಡಕ್ ಹಾಸ್ಯಚಿತ್ರ ಉಪಸರಣಿಯು ಅಸ್ತಿತ್ವದಲ್ಲಿದೆ.[೫೦] ದ ಅರಿಸ್ಟ್ರೋಕ್ರಾಟ್ಸ್ ಎಂಬ 1970ರ ಡಿಸ್ನಿಯ ಸಜೀವಚಿತ್ರಿಕೆಯಲ್ಲಿ ಎಡ್ಗರ್ ಎಂಬ ಅಡಿಗೆಯವ ಬೆಕ್ಕುಗಳನ್ನು ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟು ಟಿಂಬಕ್ಟುಗೆ ಕಳಿಸಲು ಯೋಜಿಸಿರುತ್ತಾನೆ. ಫ್ರೆಂಚ್ ಪಶ್ಚಿಮ ಆಫ್ರಿಕಾದ ಬದಲಿಗೆ ತಪ್ಪಾಗಿ ಫ್ರೆಂಚ್ ವಿಷುವದ್ವೃತ್ತೀಯ ಆಫ್ರಿಕಾದಲ್ಲಿ ಬರುತ್ತದೆ ಎಂದು ತಪ್ಪಾಗಿ ಭಾವಿಸಿರಲಾಗುತ್ತದೆ.[೫೧]
ಟಿಂಬಕ್ಟು ನಗರವು ಬ್ರಿಟಿಷ್ ಗೀತಚಿತ್ರ ಆಲಿವರ್! ನಲ್ಲಿ ಕೂಡಾ ಕಾಣಿಸಿಕೊಂಡಿದ್ದು ಅದರಲ್ಲಿ ಠಕ್ಕಿನ ತಂತ್ರಿ ನ್ಯಾನ್ಸಿಗೆ ಹಾಡಿನ ಮೂಲಕ, "ಪ್ರಿಯೆ, ನಾನು ನಿನಗೋಸ್ಕರ ಏನು ಬೇಕಾದರೂ ಮಾಡಬಲ್ಲೆ, ನಿನಗೋಸ್ಕರ ಏನು ಬೇಕಾದರೂ" ಎನ್ನುತ್ತಾನೆ ಆಗ ನ್ಯಾನ್ಸಿ ಮಾರುತ್ತರವಾಗಿ, "ಪ್ರಖರ ನೀಲಿ ಬಣ್ಣ ಬಳಿದುಕೊಳ್ಳುತ್ತೀಯಾ?" ಎಂದು ಕೇಳುತ್ತಾಳೆ "ಏನು ಬೇಕಾದರೂ", ಎಂದು ತಂತ್ರಿ ಉತ್ತರಿಸುತ್ತಾನೆ. "ಟಿಂಬಕ್ಟುಗೆ ಹೋಗುತ್ತೀಯಾ?" ಎಂದು ನ್ಯಾನ್ಸಿ ಕೇಳಿದಾಗ. "ಹೋಗಿ ಮರಳಿ ಬರುತ್ತೀನಿ", ಎಂದು ತಂತ್ರಿ ಮಾರುತ್ತರಿಸುತ್ತಾನೆ, ಹೀಗೆ ಹಾಡು ಮುಂದುವರೆಯುತ್ತದೆ.
ಟಾಮ್ ರಾಬಿನ್‌ರ ಕಾದಂಬರಿ ಹಾಫ್ ಅಸ್ಲೀಪ್ ಇನ್ ಫ್ರಾಗ್ ಪಜಾಮಾಸ್ ನಲ್ಲಿ, ಟಿಂಬಕ್ಟು ನಗರವು ಕೇಂದ್ರ ವಿಷಯವಸ್ತುವನ್ನು ಕೊಡುತ್ತದೆ. ಬಹುತೇಕ ಅದರ ಶ್ರೀಮಂತ ಇತಿಹಾಸ ಮತ್ತು ಅಪ್ರಾಕೃತ/ಅತಿಮಾನುಷ ಪ್ರಾಮುಖ್ಯತೆಯಿಂದಾಗಿ ಲ್ಯಾರಿ ಡೈಮಂಡ್ ಎಂಬ ಪ್ರಮುಖ ಪಾತ್ರ ನಗರದ ಬಗ್ಗೆ ಸ್ತಂಭೀಭೂತನಾಗುತ್ತಾನೆ.
ಅವಳಿ ನಗರಗಳು
[ಬದಲಾಯಿಸಿ]ಟಿಂಬಕ್ಟು ನಗರವು ಕೆಳಕಂಡ ನಗರಗಳ ಜೊತೆಗೆ ಅವಳಿ ನಗರದ ಸಂಬಂಧವನ್ನು ಹೊಂದಿದೆ:[೫೨]
ಜರ್ಮನಿಯ, ಕೆಮ್ನಿಟ್ಜ್
- - ಯುನೈಟೆಡ್ ಕಿಂಗ್ಡಮ್ನ ವೇಲ್ಸ್ನ ಹೇ-ಆನ್-ವೆ
- - ಮೊರೊಕ್ಕೋದ ಮರ್ರಾಕೇಚ್/ಷ್
- - ಫ್ರಾನ್ಸ್‌ನ ಸೈಂಟೆಸ್
- - ಯುನೈಟೆಡ್ ಸ್ಟೇಟ್ಸ್‌ನ, ಅರಿಝೋನಾದ ಟೆಂಪೆ
ಇವನ್ನೂ ನೋಡಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ Resultats Provisoires RGPH 2009 (Région de Tombouctou), République de Mali: Institut National de la Statistique, archived from the original on 2010-05-13, retrieved 2010-07-21
- ↑ ಟಿಂಬಕ್ಟು — ವರ್ಲ್ಡ್ ಹೆರಿಟೇಜ್ (Unesco.org)
- ↑ ಟಿಂಬಕ್ಟು. (2007). ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ. ಷಿಕಾಗೋ: ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ.
- ↑ ಒಕೋಲೋ ರಷೀದ್. ಲೆಗಸಿ ಆಫ್ ಟಿಂಬಕ್ಟು: ವಂಡರ್ಸ್ ಆಫ್ ದ ರಿಟನ್ ವರ್ಡ್ ಎಕ್ಸಿಬಿಟ್ - ಮಹಮ್ಮದೀಯ ಸಂಸ್ಕೃತಿಗಳ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ [೧] Archived 2009-02-09 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೫.೦ ೫.೧ ೫.೨ ಹಿಸ್ಟರಿ ಆಫ್ ಟಿಂಬಕ್ಟು, ಮಾಲಿ - ಟಿಂಬಕ್ಟು ಶೈಕ್ಷಣಿಕ ಪ್ರತಿಷ್ಠಾನ
- ↑ ೬.೦ ೬.೧ ೬.೨ ಟಿಂಬಕ್ಟುವಿನ ಪ್ರಾಚೀನ ಇತಿಹಾಸ- ಇತಿಹಾಸ ವಾಹಿನಿ ತರಗತಿ ಕಾರ್ಯಕ್ರಮ
- ↑ Homer, Curry. Snatched from the Serpent. Berrien Springs, Michigan: Frontiers Adventist. Archived from the original on 2011-07-07. Retrieved 2010-07-21.
{{cite book}}
: Cite has empty unknown parameter:|coauthors=
(help) - ↑ [11]
- ↑ Mann, Kenny (1996). hana Mali Songhay: The Western Sudan. (African Kingdoms of the Past Series). South Orange, New Jersey: Dillon Press.
{{cite book}}
: Cite has empty unknown parameter:|coauthors=
(help) - ↑ ೧೦.೦ ೧೦.೧ ೧೦.೨ Hunwick 1999, p. 444
- ↑ Bosworth, Edmund C. (2007). Historic Cities of the Islamic World. Leiden: Brill Academic Publishers. pp. 521–522. ISBN 9004153888.
{{cite book}}
: Cite has empty unknown parameter:|coauthors=
(help) - ↑ "Timbuktu". Encyclopædia Britannica Online. Encyclopædia Britannica, Inc. Retrieved 9 Januari 2010.
{{cite web}}
: Check date values in:|accessdate=
(help); Cite has empty unknown parameter:|coauthors=
(help) - ↑ ೧೩.೦ ೧೩.೧ Boddy-Evans, Alistair. "Timbuktu: The El Dorado of Africa". About.com Guide. Retrieved 7 Februari 2010.
{{cite web}}
: Check date values in:|accessdate=
(help); Cite has empty unknown parameter:|coauthors=
(help) - ↑ "Timbuktu Hopes Ancient Texts Spark a Revival". New York Times. August 7, 2007.
The government created an institute named after Ahmed Baba, Timbuktu's greatest scholar, to collect, preserve and interpret the manuscripts.
{{cite news}}
:|access-date=
requires|url=
(help); Cite has empty unknown parameter:|coauthors=
(help) - ↑ ೧೫.೦ ೧೫.೧ Entry on Timbuktu at [[Archnet|Archnet.com]], archived from the original on 5 ಮೇ 2008, retrieved 12 February 2010
{{citation}}
: URL–wikilink conflict (help) - ↑ "TIMBUKTU (French spelling Tombouctou)". Encyclopædia Britannica. Vol. V26. Encyclopædia Britannica, Inc. 1911. p. 983. Archived from the original on 25 ಫೆಬ್ರವರಿ 2010. Retrieved 12 February 2010.
- ↑ ೧೭.೦ ೧೭.೧ ಲ್ಯಾರ್ರಿ ಬ್ರೂಕ್, ರೇ ವೆಬ್ (1999) ಡೈಲಿ ಲೈಫ್ ಇನ್ ಏನ್‌ಷಿಯೆಂಟ್ ಅಂಡ್ ಮಾಡರ್ನ್ ಟಿಂಬಕ್ಟು . ಪಡೆದಿದ್ದು d.d. ಸೆಪ್ಟೆಂಬರ್ 22, 2009.
- ↑ de Vries, Fred (7 Januari 2006). "Randje woestijn". de Volkskrant (in Dutch). ಆಂಸ್ಟರ್ಡ್ಯಾಮ್: PCM Uitgevers. Retrieved 7 Februari 2010.
{{cite news}}
: Check date values in:|accessdate=
and|date=
(help); Cite has empty unknown parameter:|coauthors=
(help)CS1 maint: unrecognized language (link) - ↑ Fleming F. Off the Map. Atlantic Monthly Press, 2004. pp. 245–249. ISBN 0-87113-899-9.
- ↑ Caillié 1830
- ↑ ಕಾಲ್ಹೌನ್, ವಾರ್ರೆನ್ ಗ್ಲೆನ್; ಫ್ರಂ ಹಿಯರ್ ಟು ಟಿಂಬಕ್ಟು, , p. 273 ISBN 0-7388-4222-2
- ↑ Sandford, Charles Adams (2005). The Narrative of Robert Adams, a Barbary Captive: Critical Edition. New York, New York: Cambridge University Press. pp. XVIII (preface). ISBN 978-0-521-84284-6.
{{cite book}}
: Unknown parameter|coauthors=
ignored (|author=
suggested) (help) - ↑ Barth 1857, p. 534 Vol. 1
- ↑ Buisseret, David (2007), "Oskar Lenz", The Oxford companion to world exploration, vol. 1, Oxford: Oxford University Press, pp. 465–466
- ↑ ೨೫.೦ ೨೫.೧ Pelizzo, Riccardo (2001). "Timbuktu: A Lesson in Underdevelopment" (PDF). Journal of World-Systems Research. 7 (2): 265–283. Archived from the original (PDF) on 18 ಜುಲೈ 2010. Retrieved 25 March 2010.
{{cite journal}}
: Cite has empty unknown parameter:|coauthors=
(help) - ↑ Maugham, Reginal Charles Fulke (Januari 1924). "NATIVE LAND TENURE IN THE TIMBUKTU DISTRICTS". Journal of the Royal African Society. 23 (90). London: Oxford University Press on behalf of The Royal African Society: 125–130. Retrieved 11 February 2010.
{{cite journal}}
: Check date values in:|date=
(help); Cite has empty unknown parameter:|coauthors=
(help) - ↑ Neumann, Bernard de (1 November 2008), British Merchant Navy Graves in Timbuktu, archived from the original on 11 ಜುಲೈ 2011, retrieved 17 February 2010
{{citation}}
: CS1 maint: date and year (link) - ↑ Lacey, Montague (10 February 1943). "The Man from Timbuctoo". Daily Express. London: Northern and Shell Media. p. 1. Retrieved 18 May 2010.
{{cite news}}
: Cite has empty unknown parameter:|coauthors=
(help) - ↑ Arts & Life in Africa, 15 October 1998, retrieved 20 February 2010
{{citation}}
: CS1 maint: date and year (link) - ↑
Brooke, James (23 March 1988). "Timbuktu Journal; Sadly, Desert Nomads Cultivate Their Garden". New York Times. New York City, NY: Arthur Ochs Sulzberger, Jr. Retrieved 20 February 2010.
{{cite news}}
: Cite has empty unknown parameter:|coauthors=
(help) - ↑ ಕಾಲಿನ್ಸ್, ರಾಬರ್ಟ್ O. (1990) ವೆಸ್ಟರ್ನ್ ಆಫ್ರಿಕನ್ ಹಿಸ್ಟರಿ, ಲಂಡನ್ : ಮಾರ್ಕಸ್ ವೀನೆರ್ ಪಬ್ಲಿಷರ್ಸ್.
- ↑ Leo Africanus 1896, p. 3
- ↑ ಸಿಸ್ಸೋಕೋ, S.M (1996). ಟೌಂಬಕ್ಟೌ ಎಟ್ ಎಲ್’ ಸಾಮ್ರಾಜ್ಯ ಸಾಂಘಾಯ್ . ಪ್ಯಾರಿಸ್ : L’ ಹರ್ಮಾಟ್ಟನ್
- ↑ ಬೊವಿಲ್, E. W. (1921). ದ ಎನ್‌ಕ್ರೋಚ್‌ಮೆಂಟ್ ಆಫ್ ದ ಸಹಾರ ಆನ್ ದ ಸುಡಾನ್, ಜರ್ನಲ್ ಆಫ್ ದ ಆಫ್ರಿಕನ್ ಸೊಸೈಟಿ 20 : p. 174-185
- ↑ Freeman, Shane (2008). "Leo Africanus Describes Timbuktu". North Carolina Digital History. University of North Carolina. Retrieved 25 april 2010.
{{cite web}}
: Check date values in:|accessdate=
(help); Cite has empty unknown parameter:|coauthors=
(help) - ↑ Leo Africanus 1896, pp. Vol. 3
- ↑ ೩೭.೦ ೩೭.೧ Brians, Paul (1998). Reading About the World. Fort Worth, TX, USA: Harcourt Brace College Publishing. pp. vol. II.
{{cite book}}
: Cite has empty unknown parameter:|coauthors=
(help) - ↑ Insoll 2004
- ↑ Jackson, James Grey (1820). An Account of Timbuctoo and Housa, Territories in the Interior of Africa By El Hage Abd Salam Shabeeny. London: Longman, Hurst, Rees, Orme, and Brown.
{{cite book}}
: Cite has empty unknown parameter:|coauthors=
(help) - ↑ Un patrimoine inestimable en danger : les manuscrits trouvés à Tombouctou , par Jean-Michel Djian dans Le Monde diplomatique d'août 2004.
- ↑ ಟಿಂಬಕ್ಟುವಿನ ಪ್ರಾಚೀನ ಹಸ್ತಪ್ರತಿಗಳು ಮರುಸ್ವಾಧೀನಗೊಳ್ಳುವಿಕೆ
- ↑ ಕರ್ಟಿಸ್ ಅಬ್ರಹಾಂ, "ಸ್ಟಾರ್ಸ್ ಆಫ್ ದ ಸಹಾರಾ", ನ್ಯೂ ಸೈಂಟಿಸ್ಟ್ , 18 ಆಗಸ್ಟ್ 2007: 37-39
- ↑ 2007
- ↑ UNESCO ಜುಲೈ 10, 2008.
- ↑ [90]
- ↑ Salak, Kira. "Photos from "KAYAKING TO TIMBUKTU"". National
Geographic Adventure.
{{cite web}}
: line feed character in|publisher=
at position 10 (help) - ↑ World Weather Information Service - Tombouctou, World Meteorological Organization, retrieved 2009-10-19
- ↑ "ಸರ್ಚ್ ಆನ್ ಫಾರ್ ಟಿಂಬಕ್ಟು'ಸ್ ಟ್ವಿನ್ " BBC ನ್ಯೂಸ್, 18 ಅಕ್ಟೋಬರ್ 2006. ಪಡೆದಿದ್ದು 28 ಮಾರ್ಚ್ 2007
- ↑ "Timbuk2 corporate website". Retrieved 20 April 2010.
- ↑ [http://coa.inducks.org/ C.O.A. ಸರ್ಚ್ ಎಂಜಿನ್]ನಲ್ಲಿ (I.N.D.U.C.K.S.) ಡೊನಾಲ್ಡ್ ಡಕ್ ಟಿಂಬೊಕ್ಟೋ ಉಪಸರಣಿ (ಡಚ್ ಭಾಷೆಯ) ಯ ಹುಡುಕಾಟ. ಪಡೆದಿದ್ದು d.d. ಅಕ್ಟೋಬರ್ 24, 2009.
- ↑ ಅಂತರಜಾಲದ ಚಲನಚಿತ್ರ ದತ್ತಸಂಚಯದಲ್ಲಿ ದ ಅರಿಸ್ಟ್ರೋಕ್ರಾಟ್ಸ್ ಬಗ್ಗೆ ಟಿಪ್ಪಣಿಗಳು. ಪಡೆದಿದ್ದು ಅಕ್ಟೋಬರ್ 24, 2009
- ↑ "Timbuktu 'twins' make first visit". BBC News. British Broadcasting Corporation. 24 October 2007. Retrieved 24 May 2010.
{{cite web}}
: Cite has empty unknown parameter:|coauthors=
(help)
ಉಲ್ಲೇಖಗಳು
[ಬದಲಾಯಿಸಿ]- Barth, Heinrich (1857), Travels and discoveries in North and Central Africa: Being a journal of an expedition undertaken under the auspices of H. B. M.'s government, in the years 1849-1855. (3 Vols), New York: Harper & Brothers. Google ಬುಕ್ಸ್: ಸಂಪುಟ 1, ಸಂಪುಟ 2, ಸಂಪುಟ 3.
- Caillié, Réné (1830), Travels through Central Africa to Timbuctoo; and across the Great Desert, to Morocco, performed in the years 1824-1828 (2 Vols), London: Colburn & Bentley. Google ಬುಕ್ಸ್: ಸಂಪುಟ 1, ಸಂಪುಟ 2.
- Dubois, Felix; White, Diana (trans.) (1896), Timbuctoo the mysterious, New York: Longmans.
- Dunn, Ross E. (2005), The Adventures of Ibn Battuta, University of California Press, ISBN 0-520-24385-4. 1986ರಲ್ಲಿ ಮೂಲ ಪ್ರಕಟಣೆಯಾಗಿತ್ತು, ISBN 0-520-05771-6.
- Hacquard, Augustin (1900), Monographie de Tombouctou, Paris: Société des études coloniales & maritimes.
- Hunwick, John O. (1999), Timbuktu and the Songhay Empire: Al-Sadi's Tarikh al-Sudan down to 1613 and other contemporary documents, Leiden: Brill, ISBN 9004112073. 272-291ವರೆಗಿನ ಪುಟಗಳು ಮಧ್ಯ ನೈಗರ್, ಹೌಸಾಲ್ಯಾಂಡ್ ಮತ್ತು ಬಾರ್ನುಗಳ ಬಗ್ಗೆ ಲಿಯೋ ಆಫ್ರಿಕಾನಸ್'ರ ಕಥನಗಳ ಆಂಗ್ಲ ಭಾಷಾಂತರವನ್ನು ಒಳಗೊಂಡಿದೆ.
- Hunwick, John O.; Boye, Alida Jay; Hunwick, Joseph (2008), The Hidden Treasures of Timbuktu: Historic city of Islamic Africa, London: Thames and Hudson, ISBN 978-0-500-51421-4.
- Insoll, Timothy (2001–2002), "The archaeology of post-medieval Timbuktu" (PDF), Sahara, 13: 7–11, archived from the original (PDF) on 2012-03-08, retrieved 2010-07-21
{{citation}}
: CS1 maint: date format (link). - Insoll, Timothy (2004), "Timbuktu the less Mysterious?" (PDF), in Mitchell, P.; Haour, A.; Hobart, J. (eds.), Researching Africa's Past. New Contributions from British Archaeologists, Oxford: Oxbow, pp. 81–88, archived from the original (PDF) on 2012-03-08, retrieved 2010-07-21.
- Leo Africanus (1896), The History and Description of Africa (3 Vols), Brown, Robert, editor, London: Hakluyt Society. ಪೋರಿ'ಯ ಸಂಪಾದಕರ ಮುನ್ನುಡಿ/ಪರಿಚಯದ ಮತ್ತು ಟಿಪ್ಪಣಿಗಳ ಜೊತೆಗೆ 1600ರ ಆಂಗ್ಲ ಭಾಷಾಂತರ ಫ್ಯಾಕ್ಸ್/ಫ್ಯಾಸಿಮಿಲಿ ಪ್ರತಿ. ಅಂತರಜಾಲ ಸಂಗ್ರಹ: ಸಂಪುಟ 1, ಸಂಪುಟ 2, ಸಂಪುಟ 3
- Levtzion, Nehemia (1973), Ancient Ghana and Mali, London: Methuen, ISBN 0841904316. ಅಲೂಕದ ಚಂದಾದಾರಿಕೆಯು ಈ ಕೊಂಡಿಯನ್ನು ವೀಕ್ಷಿಸಲು ಅಗತ್ಯವಿದೆ.
- Miner, Horace (1953), The primitive city of Timbuctoo, Princeton University Press. ಅಲೂಕದ ಚಂದಾದಾರಿಕೆಯು ಈ ಕೊಂಡಿಯನ್ನು ವೀಕ್ಷಿಸಲು ಅಗತ್ಯವಿದೆ. 1965ರಲ್ಲಿ ನ್ಯೂಯಾರ್ಕ್‌ನ ಆಂಕರ್ ಪುಸ್ತಕಗಳ ವತಿಯಿಂದ ಮರುಮುದ್ರಣ.
- Saad, Elias N. (1983), Social History of Timbuktu: The Role of Muslim Scholars and Notables 1400–1900, Cambridge University Press, ISBN 0-5212-4603-2.
- Trimingham, John Spencer (1962), A History of Islam in West Africa, Oxford University Press, ISBN 0-1928-50385.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಬ್ರಾಡೆಲ್, ಫರ್ನ್ಯಾಂಡ್, 1979 (ಆಂಗ್ಲಭಾಷೆಯಲ್ಲಿ 1984). ದ ಪರ್ಸ್‌ಪೆಕ್ಟೀವ್ಸ್ ಆಫ್ ದ ವರ್ಲ್ಡ್, ಸಿವಿಲೈಜೇಷನ್ ಮತ್ತು ಕ್ಯಾಪಿಟಲಿಮ್‌ನ vol. III
- Houdas, Octave (ed. and trans.) (1901), Tedzkiret en-nisiān fi Akhbar molouk es-Soudān, Paris: E. Laroux. ಅನಾಮಿಕ 18ನೇ ಶತಮಾನದ ತದ್‌ಖೀರತ್ ಅಲ್-ನಿಸ್ಯಾನ್ ಎಂಬುದು ಮೊರೊಕ್ಕೋದವರ ಆಕ್ರಮಣದಿಂದ 1750ರವರೆಗಿನ ಟಿಂಬಕ್ಟುವಿನ ಪಾಷಾಗಳ ಜೀವನಚಾರಿತ್ರಿಕ ನಿಘಂಟು.
- ಜೆಂಕಿನ್ಸ್, ಮಾರ್ಕ್, (ಜೂನ್ 1997) ಟು ಟಿಂಬಕ್ಟು, ISBN 978-0-688-11585-2 ವಿಲಿಯಮ್ ಮಾರ್ರೋ & Co. ನೈಗರ್‌ನಿಂದ ಟಿಂಬಕ್ಟುವರೆಗಿನ ವಿವರಣಾತ್ಮಕ ಪ್ರವಾಸ ದಿನಚರಿ
- ಪೆಲಿಜ್ಜೋ, ರಿಕ್ಕಾರ್ಡೋ, ಟಿಂಬಕ್ಟು: A ಲೆಸನ್ ಇನ್ ಅಂಡರ್‌ಡೆವೆಲಪ್‌ಮೆಂಟ್, ಜರ್ನಲ್ ಆಫ್ ವರ್ಲ್ಡ್ ಸಿಸ್ಟಮ್ ರಿಸರ್ಚ್, vol. 7, n.2, 2001, pp. 265–283, jwsr.ucr.edu/archive/vol7/number2/pdf/jwsr-v7n2-pelizzo.pdf
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸಹಾರನ್ ಆರ್ಕಿಯೋಲಾಜಿಕಲ್ ರಿಸರ್ಚ್ ಅಸೋಸಿಯೇಷನ್/ಸಹಾರಾದ ಪುರಾತತ್ವಶಾಸ್ತ್ರದ ಸಂಶೋಧನಾ ಸಂಘಟನೆ Archived 2016-10-21 ವೇಬ್ಯಾಕ್ ಮೆಷಿನ್ ನಲ್ಲಿ. - ಯೇಲ್ ವಿಶ್ವವಿದ್ಯಾಲಯದ ಡಗ್ಲಾಸ್ ಪೋಸ್ಟ್ ಪಾರ್ಕ್, ಮತ್ತು ಪೀಟರ್ ಕೌಟ್ರೋಸ್ರ ನಿರ್ದೇಶಕತ್ವದಲ್ಲಿ.
- ಲಿಯೋ ಆಫ್ರಿಕಾನಸ್, ಟಿಂಬಕ್ಟುವಿನ ವಿವರಣೆ, 1526
- ಟಿಂಬಕ್ಟುವಿನ ಷಬೇನಿ'ರ ಕಥನ
- "ಟ್ರೆಕ್ಕಿಂಗ್ ಟು ಟಿಂಬಕ್ಟು", 6-8ರವರೆಗಿನ ಇಯತ್ತೆ/ತರಗತಿಗಳ ಮಾನವಕುಲ ಕಲಿಕಾ ಯೋಜನೆಗೆ ರಾಷ್ಟ್ರೀಯ ದತ್ತಿ ಯೋಜನೆ Archived 2008-03-14 ವೇಬ್ಯಾಕ್ ಮೆಷಿನ್ ನಲ್ಲಿ.
- ಆಫ್ರಿಕನ್ ಜಗತ್ತಿನ ಅಚ್ಚರಿಗಳು
- ಟಿಂಬಕ್ಟುವಿನಲ್ಲಿರುವ ಸಂಕೋರ್ ವಿಶ್ವವಿದ್ಯಾಲಯ
- ಟಿಂಬಕ್ಟುವಿನ ಗ್ರಂಥಾಲಯಗಳು Archived 2005-03-19 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಂಬಕ್ಟುವಿನ ಬಗೆಗಿರುವ ಪ್ರಕಟಣೆಗಳ ಪಟ್ಟಿ. Archived 2011-05-16 ವೇಬ್ಯಾಕ್ ಮೆಷಿನ್ ನಲ್ಲಿ.ಅಭಿವೃದ್ಧಿ ಮತ್ತು ಪರಿಸರ ಕೇಂದ್ರ/ಸೆಂಟರ್ ಫಾರ್ ಡೆವಲಪ್ಮೆಂಟ್ ಅಂಡ್ ದ ಎನ್ವಿರಾನ್ಮೆಂಟ್, ಓಸ್ಲೋ ವಿಶ್ವವಿದ್ಯಾಲಯ Archived 2011-05-16 ವೇಬ್ಯಾಕ್ ಮೆಷಿನ್ ನಲ್ಲಿ.
- ಮಾಲಿ'ಯ ಸಾಹಿತ್ಯ ಸಂಪತ್ತನ್ನು ರಕ್ಷಿಸುವಿಕೆ
- ಟಿಂಬಕ್ಟುವಿನ ಮರಳುಗಾಡು ಗ್ರಂಥಾಲಯ/ಡೆಸೆರ್ಟ್ ಲೈಬ್ರರೀಸ್ಗಳಲ್ಲಿನ ಪ್ರಾಚೀನ ಹಸ್ತಪ್ರತಿಗಳು, ಲೈಬ್ರರಿ ಆಫ್ ಕಾಂಗ್ರೆಸ್ ಸಂಸ್ಥೆ — ಮಮ್ಮಾ ಹೈದರಾ/ದಾರಾ ಸ್ಮಾರಕ ಗ್ರಂಥಾಲಯದ ಹಸ್ತಪ್ರತಿಗಳ ಪ್ರದರ್ಶನ
- ಮಾಲಿಯ ಮಹಮ್ಮದೀಯ ಹಸ್ತಪ್ರತಿಗಳು, ಲೈಬ್ರರಿ ಆಫ್ ಕಾಂಗ್ರೆಸ್ ಸಂಸ್ಥೆ — ಮಮ್ಮಾ ಹೈದರಾ/ದಾರಾ ಸ್ಮಾರಕ ಗ್ರಂಥಾಲಯದಲ್ಲಿನ ಅದೇ ಹಸ್ತಪ್ರತಿಗಳ ಫುಲ್ಲರ್ ಪ್ರತಿಪಾದನೆ
- "ಆಫ್ರಿಕಾದ ಒಂದು ಸಣ್ಣ ಮರಳುಗಾಡು ಪಟ್ಟಣವು ಪೂರ್ವರಾಷ್ಟ್ರಗಳ ಕಾಣ್ಕೆಯನ್ನು ಹೇಗೆ ಬದಲಿಸಬಹುದು Archived 2008-09-24 ವೇಬ್ಯಾಕ್ ಮೆಷಿನ್ ನಲ್ಲಿ.", ಟಾಪ್ಲಮ್ ಪೊಸ್ಟಾಸಿ ನಿಂದ, 11 ಜುಲೈ 2007
- ಅಲೂಕ ಅಂಕಿಕ ಗ್ರಂಥಾಲಯದಲ್ಲಿನ ಟಿಂಬಕ್ಟು ಬಗೆಗಿನ ಸಾಮಗ್ರಿ Archived 2012-12-20 at Archive.is
ಪ್ರವಾಸೋದ್ಯಮ
[ಬದಲಾಯಿಸಿ]- ಟಿಂಬಕ್ಟುವಿನ ಭೂಪಟ (ಫ್ರೆಂಚ್ ಭಾಷೆಯಲ್ಲಿ ನಾರ್ವೆಯಿಂದ) Archived 2008-01-22 ವೇಬ್ಯಾಕ್ ಮೆಷಿನ್ ನಲ್ಲಿ.
- ಟಿಂಬಕ್ಟು ವಿನ ಛಾಯಾಚಿತ್ರಗಳು
- Pages with non-numeric formatnum arguments
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- CS1 errors: dates
- CS1 errors: access-date without URL
- CS1 errors: URL–wikilink conflict
- CS1 maint: unrecognized language
- CS1 errors: unsupported parameter
- CS1 maint: date and year
- CS1 errors: invisible characters
- Pages using ISBN magic links
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- Articles containing French-language text
- Pages using Lang-xx templates
- CS1 maint: date format
- Commons category link from Wikidata
- Webarchive template archiveis links
- ಟಿಂಬಕ್ಟು
- ಟೌಂಬೌಕ್ಟೌ ಪ್ರದೇಶದಲ್ಲಿನ ಜನಭರಿತ ಸ್ಥಳಗಳು
- ಮಾಲಿಯಲ್ಲಿನ ಪ್ರಾಂತೀಯ ರಾಜಧಾನಿಗಳು
- ಮಾಲಿಯ ಪ್ರಾಂತ್ಯಗಳು
- ನೈಗರ್ ನದಿ ಆಶ್ರಿತ ಸಮುದಾಯಗಳು
- ಮಹಮ್ಮದೀಯ ಇತಿಹಾಸ
- ಮಾಲಿಯಲ್ಲಿನ ವಿಶ್ವ ಪರಂಪರೆ ತಾಣಗಳು
- ಪ್ರಾಚೀನ ನಗರಗಳು
- ಮಸ್ಸಿನಾ ಸಾಮ್ರಾಜ್ಯ